hariyana – Peepal Media

ಅತ್ಯಾಚಾರಿ ಆರೋಪಿ, ಸ್ವಯಂಘೋಷಿತ ದೇವಮಾನವ ರಾಮ್ ರಹೀಂ ಗುರ್ಮೀತ್‌ ಸಿಂಗ್ ಕೊಲೆ ಕೇಸಿನಿಂದ ಬಚಾವ್‌
ತನ್ನ ಮ್ಯಾನೇಜರ್‌ ರಂಜಿತ್ ಸಿಂಗನ ಕೊಲೆ ಮಾಡಿದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖುಲಾಸೆಗೊಳಿಸಿದೆ.

ತನ್ಮ ಮಹಿಳಾ ಅನುಯಾಯಿಗಳ ಮೇಲೆ ಗುರ್ಮೀತ್ ಸಿಂಗ್ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿದ್ದ ಪತ್ರವೊಂದು 2001ರಲ್ಲಿ ಬಯಲಾಗಿತ್ತು. ಇದರ ಹಿಂದೆ ರಂಜಿತ್ ಸಿಂಗ್ ಪಾತ್ರವಿದೆ ಎಂದು ಶಂಕಿಸಿ, ಆತನನ್ನು ಜುಲೈ 10,2002ರಂದು ರಾಮ್‌ ರಹೀಮ್‌ ಗುರ್ಮೀತ್‌ ಸಿಂಗ್‌ ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಿ ಗುರ್ಮೀತ್ ವಿರುದ್ದ ಸಿಬಿಐ ಚಾರ್ಜ್‌ ಶೀಟ್‌ನಲ್ಲಿ ದಾಖಲಿಸಿತ್ತು. ಪಂಚಕುಲದ ಸಿಬಿಐ ನ್ಯಾಯಾಲಯ ಕೂಡ ಆತನನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ಪ್ರಕಟಿಸಿತ್ತು.

ಇದರ ವಿರುದ್ದ ಗುರ್ಮೀತ್ ಸಿಂಗ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸುರೇಶ್ ಠಾಕೂರ್ ಮತ್ತು ನ್ಯಾಯಮೂರ್ತಿ ಲಲಿತ್ ಬಾತ್ರಾ ಅವರ ಹೈಕೋರ್ಟ್ ವಿಭಾಗೀಯ ಪೀಠ ಐಪಿಸಿ ಸೆಕ್ಷನ್ 120-ಬಿ, 302, 506 ರ ಅಡಿಯಲ್ಲಿ ಅಂಗೀಕರಿಸಿತ್ತು. ಹರಿಯಾಣದ ಪಂಚಕುಲದ ಸಿಬಿಐ ನ್ಯಾಯಾಲಯವು 2022ರಲ್ಲಿ ಗುರ್ಮೀತ್ ಸಿಂಗ್ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

40 ವರ್ಷಗಳವರೆಗೆ ಜೀವವಾದಿ ಶಿಕ್ಷೆ

ತನ್ನ ಇಬ್ಬರು ಶಿಷ್ಯಂದಿರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಈಗಾಗಲೇ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಪತ್ರಕರ್ತ ರಾಮ್ ಚಂದರ್ ಛತ್ರಪತಿಯನ್ನು ಹತ್ಯೆ ಮಾಡಿದ ಮತ್ತೊಂದು ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಈ 20 ವರ್ಷಗಳ ಅವಧಿ ಮುಗಿದ ನಂತರ ಇದು ಜಾರಿಯಾಗಲಿದೆ.

ಇತ್ತೀಚೆಗೆ ಹೈಕೋರ್ಟ್‌ನ ಅನುಮತಿಯಿಲ್ಲದೆ ಪೆರೋಲ್ ಮಂಜೂರು ಮಾಡದಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶವನ್ನು ತೆರವು ಮಾಡಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

ಹರಿಯಾಣ ಕೋಮು ಗಲಭೆ ; ನಿಷೇಧಾಜ್ಞೆ ಜಾರಿ : ಯಾರಿದು ಮೋನು ಮಾನೇಸರ್?
ದೇಶದಲ್ಲಿ ಮಣಿಪುರದ ಹಿಂಸಾಚಾರ ಇನ್ನೂ ಬಿಸಿ ಇರುವಾಗಲೇ ಹರಿಯಾಣದಲ್ಲಿ ಕೋಮು ಗಲಭೆಯಿಂದ 4 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮೆರವಣಿಗೆಯಲ್ಲಿ ಈ ಹಿಂಸಾಚಾರ ನಡೆದಿದ್ದು ಕೋಮು ಪ್ರಚೋದನೆಯೇ ಈ ಗಲಭೆಗೆ ಕಾರಣ ಎನ್ನಲಾಗಿದೆ.

ಹರಿಯಾಣದ ನುಹ್ ಜಿಲ್ಲೆಯಲ್ಲಿ ಗುಂಪೊಂದು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಬಂದಾಗ, ಕಲ್ಲು ತೂರಾಟ ಮತ್ತು ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಸೋಮವಾರ ಮಧ್ಯಾಹ್ನದ ನಂತರ ನಡೆದ ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಜೊತೆಗೆ ಪೊಲೀಸರು ಸೇರಿದಂತೆ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನುಹ್‌ ಜಿಲ್ಲೆಯಲ್ಲಿ ನಡೆದ ಘರ್ಷಣೆಯ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ, ಹರಿಯಾಣದ ಸೊಹ್ನಾದಲ್ಲಿ ಹಲವು ಗುಂಪುಗಳು ಕಲ್ಲು ತೂರಾಟ ನಡೆಸಿದ್ದಾರೆ. ನಿರ್ದಿಷ್ಟ ಸಮುದಾಯದ ಜನರಿಗೆ ಸೇರಿದ ನಾಲ್ಕು ವಾಹನಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಸೋಹ್ನಾದಲ್ಲೂ ಸಹ ಪ್ರತಿಭಟನಾಕಾರರು ಗಂಟೆಗಟ್ಟಲೆ ರಸ್ತೆ ತಡೆ ನಡೆಸಿದ್ದಾರೆ.

ರಾತ್ರೋರಾತ್ರಿ ನಡೆದ ಹಿಂಸಾಚಾರದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದರೆ, ಗುರುಗ್ರಾಮ್‌ನ ಮಸೀದಿಯ ಮೇಲೆ ಗುಂಪೊಂದು ದಾಳಿ ಮಾಡಿದ ನಂತರ ನಾಲ್ಕನೇ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಸಧ್ಯಕ್ಕೆ ವಿಶ್ವ ಹಿಂದೂ ಪರಿಷತ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ಪೀಡಿತ ನುಹ್ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಕರ್ಫ್ಯೂ ವಿಧಿಸಲಾಗಿದೆ. ನುಹ್ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹರಿಯಾಣ ಸರ್ಕಾರವು ಒಂದು ವಾರದವರೆಗೆ ಕೇಂದ್ರದಿಂದ ಕ್ಷಿಪ್ರ ಕಾರ್ಯಪಡೆಯ 20 ತಂಡಗಳನ್ನು ಹರಿಯಾಣಕ್ಕೆ ಕಳುಹಿಸಲು ಕೋರಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 20 ಮಂದಿಯ ಮೇಲೆ FIR ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲಿನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಆಗಸ್ಟ್ 1 ರ ಮಂಗಳವಾರದಂದು ಬಂದ್ ಮಾಡಲು ಸರ್ಕಾರ ಆದೇಶಿಸಿದೆ. ಜೊತೆಗೆ 3 ದಿನಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಘಟನೆಗೆ ಕಾರಣ
ಘಟನೆ ನಡೆಯುವ ಕೆಲವು ದಿನಗಳ ಹಿಂದೆ ಹರಿಯಾಣದ ವಿವಾದಿತ ವ್ಯಕ್ತಿ, ಹಲವಷ್ಟು ಅನೈತಿಕ ಪೊಲೀಸಗಿರಿ, ಅಕ್ರಮ ಗೋರಕ್ಷಣೆ ಹಾಗೂ ಮುಸ್ಲಿಂ ಯುವಕರು ಸಾವಿನ ಹಿನ್ನೆಲೆಯಲ್ಲಿ ಆರೋಪಿಯಾಗಿದ್ದ ಮೋನು ಮಾನೇಸರ್, VHP ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸುತ್ತೇನೆ ಎಂದು ಕರೆ ನೀಡಿದ್ದ.

ಈ ವರ್ಷದ ಪ್ರಾರಂಭದಲ್ಲಿ ಹರಿಯಾಣದ ಭಿವಾನಿ ಜಿಲ್ಲೆಯ ಬೊಲೆರೋದಲ್ಲಿ ನಾಸಿರ್ ಮತ್ತು ಜುನೈದ್ ಎಂಬ ಇಬ್ಬರು ಮುಸ್ಲಿಂ ಯುವಕರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವಿನ ಪ್ರಕರಣದ ತನಿಖೆಯ ನಂತರ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಗೋರಕ್ಷಣೆ, ಧರ್ಮ ರಕ್ಷಣೆ ಹೆಸರಲ್ಲಿ ಹೆಸರಾಗಿದ್ದ ಮೋನು ಮಾನೇಸರ್ ಹೆಸರನ್ನು ಉಲ್ಲೇಖಿಸಲಾಗಿತ್ತು.

ಅಂದಿನಿಂದಲೇ ಮೋನು ಮಾನೇಸರ್ ವಿರುದ್ಧ ಗುಂಪೊಂದು ಪ್ರತಿಕಾರಕ್ಕೆ ಅವಕಾಶ ಹುಡುಕುತ್ತಿತ್ತು. ಆ ಹಿನ್ನೆಲೆಯಲ್ಲಿ ಸೋಮವಾರದ ವಿಶ್ವ ಹಿಂದೂ ಪರಿಷತ್ ನ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಘಟನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.

ತ್ರಿವರ್ಣ ಧ್ವಜ ಖರೀದಿಮಾಡುವಂತೆ ಒತ್ತಾಯ-ಇಲ್ಲದಿದ್ದರೆ ಪಡಿತರ ಬಂದ್!
ಹರಿಯಾಣ: ಕರ್ನಾಲ್ ಜಿಲ್ಲೆಯ ಹೆಮ್ಡಾ ಗ್ರಾಮದ ನ್ಯಾಯ ಬೆಲೆ ಅಂಗಡಿಯೊಂದರಲ್ಲಿ ಜನರು 20 ರೂಪಾಯಿ ಮೌಲ್ಯದ ತ್ರಿವರ್ಣ ಧ್ವಜಗಳನ್ನು ಖರೀದಿಸಲು ಒತ್ತಾಯಿಸಿದ್ದು, ಖರೀದಿಮಾಡದೇ ಇರುವವರಿಗೆ ಪಡಿತರ ಸಿಗುವುದಿಲ್ಲ ಎಂದು ಬೆದರಿಕೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿಲ್ಲಾ ಕಮಿಷನರ್ ಅನೀಶ್ ಯಾದವ್, ತಿರಂಗವನ್ನು ಖರೀದಿಸಲು ಇಚ್ಛಿಸುವ ಜನರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ 20 ರೂ.ಗೆ ಧ್ವಜಗಳನ್ನು ನೀಡಲಾಗುತ್ತಿದೆ. ಆದರೆ ನ್ಯಾಯಬೆಲೆಯ ನಿರ್ವಾಹಕರೊಬ್ಬರು ಸಾರ್ವಜನಿಕರಿಗೆ ಬಲವಂತವಾಗಿ ಧ್ವಜಗಳನ್ನು ಖರೀದಿಸುವಂತೆ ಒತ್ತಾಯ ಮಾಡಿದ್ದು, ಖರೀದಿಮಾಡದೆ ಇರುವವರಿಗೆ ಪಡಿತರ ಸಿಗುವುದಿಲ್ಲ ಎಂದು ಬೆದರಿಕೆ ನೀಡಿರುವ ಘಟನೆ ತಿಳಿದು ಬಂದಿದೆ, ಈ ಹಿನ್ನಲೆಯಲ್ಲಿ ನಿರ್ವಾಹಕರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದ್ದು, ನಿರ್ವಾಹಕರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

‘ಧ್ವಜ ಖರೀದಿಸದಿದ್ದರೆ ಪಡಿತರ ಕೊಡಲ್ಲ’ : ಹರಿಯಾಣದಲ್ಲಿ ಬಡವರ ಮೇಲೆ ಪ್ರಹಾರ
ಬಿಜೆಪಿ ಪಕ್ಷದ ಆಡಳಿತ ಇರುವ ಹರಿಯಾಣ ರಾಜ್ಯದ ಪಡಿತರ ಅಂಗಡಿಗಳಲ್ಲಿ ಅಂಗಡಿ ಮಾಲಿಕರು ಗ್ರಾಹಕರಿಗೆ 20 ರೂಪಾಯಿಯ ರಾಷ್ಟ್ರಧ್ವಜ ಖರೀದಿಸಲು ತಾಕೀತು ಮಾಡಿದೆ. ಅಕಸ್ಮಾತ್ ಗ್ರಾಹಕರು ರಾಷ್ಟ್ರಧ್ವಜ ಖರೀದಿ ಮಾಡದೇ ಇದ್ದರೆ ಪಡಿತರ ನೀಡಲಾಗುವುದಿಲ್ಲ, ಇದು ಸರ್ಕಾರದ ಕಡ್ಡಾಯ ಆದೇಶ ಎಂಬುದಾಗಿ ತಿಳಿಸಿದ್ದಾರೆ.

In BJP-ruled Haryana, Ration shops (PDS shops) owners are refusing rations to the poor if they don't buy the national flag and pay Rs 20 as the cost for Modi's har ghat tiranga drama.
The shop owner is saying he has orders from the govt.pic.twitter.com/I8yFsKRNMH
— Ravi Nair (@t_d_h_nair) August 10, 2022

ಅಂಗಡಿ ಮಾಲಿಕರ ಒತ್ತಾಯಪೂರ್ವಕ ಧ್ವಜ ವಿತರಣೆ ಬಗ್ಗೆ ಸ್ಥಳೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದು, ಹಣವಿಲ್ಲದವರು ಧ್ವಜ ಖರೀದಿಸಲು ಶಕ್ತರಿರುವುದಿಲ್ಲ, ಅವರು ಬರಿಗೈಯಲ್ಲಿ ವಾಪಸಾದರೆ ಹೊಟ್ಟೆಗೆ ಏನು ತಿನ್ನಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಬೆಲೆಯೇರಿಕೆಯಿಂದ ಸಾಮಾನ್ಯ ಜನರು ಕಂಗೆಟ್ಟಿದ್ದು ಅಗತ್ಯ ವಸ್ತುಗಳೂ ಸಹ ಬಡವನಿಗೆ ಕೈಗೆಟುಕದಂತಾಗಿವೆ. ಗ್ಯಾಸ್, ಪೆಟ್ರೋಲ್ ಡೀಸೆಲ್, ಆಹಾರ ಪದಾರ್ಥಗಳಂತಹ ಮೂಲಭೂತ ವಸ್ತುಗಳೂ ಇಂದು ಸಾಮಾನ್ಯ ಜನರ ಕೈಸುಡುವಂತಹ ದಿನದಲ್ಲಿ ಸರ್ಕಾರ ಈ ರೀತಿಯಾಗಿ ಧ್ವಜ ಖರೀದಿಯನ್ನು ಕಡ್ಡಾಯಗೊಳಿಸಿದರ ಬಗ್ಗೆ ಮತ್ತು ಪಡಿತರ ಕೊಡಲು ನಿರಾಕರಿಸಿದ್ದು ಅಕ್ಷರಶಃ ತಪ್ಪು ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.