hassan news update – Peepal Media

ಸ್ವಚ್ಛತಾ ಟೆಂಡರ್ ಬಿಲ್ ಪಡೆಯಲು ಲಂಚ: ನಗರಸಭೆ ಅಧಿಕಾರಿಗಳು ಲೋಕಾ ಬಲೆಗೆ
ಹಾಸನ : ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ನೀಡಿದ ಸ್ವಚ್ಛತಾ ಟೆಂಡರ್ ಬಿಲ್ ಪಡೆಯಲು ನಗರಸಭೆಗೆ ಬಂದಾಗ ಲಂಚ ಪಡೆಯುವಾಗ ನಗರಸಭೆ ಆಯುಕ್ತ ನರಸಿಂಹಮೂರ್ತಿ ಮತ್ತು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಆರ್. ವೆಂಕಟೇಶ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ ಗುರುವಾರ ಮದ್ಯಾಹ್ನ ನಡೆದಿದೆ. ಬೇಕಾದರೇ ನಗರಸಭೆ ಆಯುಕ್ತರನ್ನ ಬಂಧಿಸಿ, ಎ.ಆರ್.ವೆಂಕಟೇಶ್ ಅವರನ್ನು ಬಿಟ್ಟು ಬಿಡಿ ಎಂದು ಈ ವೇಳೆ ನಗರಸಭೆ ಸದಸ್ಯರು ಲೋಕಾಯುಕ್ತರಲ್ಲಿ ಮನವಿ ಮಾಡಿದ ಘಟನೆ ನಡೆಯಿತು.

ಹಾಸನಾಂಬ ಜಾತ್ರಾ ಮಹೋತ್ಸವದ ಸ್ವಚ್ಚತಾ ಟೆಂಡರ್ ಬಿಲ್ ನೀಡಲು ಒಂದುವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು. ಒಟ್ಟು ೧೦ ಲಕ್ಷದ ೫೦ ಸಾವಿರ ಬಿಲ್ ಹಣ ನೀಡಲು ಒಂದುವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ನಗರಸಭೆ ಆಯುಕ್ತ ನರಸಿಂಹಮೂರ್ತಿ ಹಾಗೂ ಕೆ.ಆರ್. ವೆಂಕಟೇಶ್. ಗುರುವಾರದಂದು ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು ಹಾಗೂ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ನಗರಸಭೆಯ ಕೆ.ಆರ್.ವೆಂಕಟೇಶ್ ಕಚೇರಿಯಲ್ಲಿ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.

ಹಣದ ಸಮೇತ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಗರಸಭೆ ಆಯುಕ್ತ ನರಸಿಂಹಮೂರ್ತಿ ಕಛೇರಿಯಲ್ಲಿ ತನಿಖೆ ನಡೆಸಿ ನಂತರ ಜೊತೆಯಲ್ಲಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಆರ್. ವೆಂಕಟೇಶ್ ಅವರನ್ನು ಅವರು ಕೆಲಸ ಮಾಡುವ ಕಛೇರಿಗೆ ಕರೆದುಕೊಂಡು ಹೋದರು. ಈ ವೇಳೆ ನಗರಸಭೆಯಲ್ಲಿದ್ದ ನಗರಸಭೆ ಸದಸ್ಯರು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಆರ್. ವೆಂಕಟೇಶ್ ಪರ ಬ್ಯಾಟಿಂಗ್ ಆರಂಬಿಸಿದರು. ಕೆ.ಆರ್.ವೆಂಕಟೇಶ್ ತುಂಬಾ ಒಳ್ಳೆಯವರು. ಅವರನ್ನು ಬಿಟ್ಟು ಬಿಡಿ, ಆಯುಕ್ತರನ್ನು ಕರೆದುಕೊಂಡು ಹೋಗುವಂತೆ ಒತ್ತಾಯ ಮಾಡಿ ಘಟನೆ ನಗರಸಭೆ ಆವರಣದಲ್ಲಿ ನಡೆಯಿತು.

ಲಂಚ ಪಡೆಯುವುದರಲ್ಲಿ ವೆಂಕಟೇಶ್ ಪಾತ್ರವಿಲ್ಲ. ನಗರಸಭೆ ಆಯುಕ್ತರು ಹೇಳಿದಂತೆ ಮಾಡಿದ್ದಾರೆ. ಬೇಕಾದರೇ ನಗರಸಭೆ ಆಯುಕ್ತರನ್ನು ಕರೆದುಕೊಂಡು ಹೋಗಿ. ಎ.ಆರ್.ವೆಂಕಟೇಶ್ ಅವರನ್ನು ಬಿಟ್ಟು ಬಿಡಿ ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ಮುಂದೆ ಒತ್ತಾಯ ಮಾಡುತ್ತಿರುವುದು ಕಂಡು ಬಂದಿತು. ಈ ವೇಳೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು ಗರಂ ಆಗಿ ಮಾತನಾಡುತ್ತಾ, ಲಂಚದ ಹಣ ಪಡೆಯುತ್ತಿರುವ ವೇಳೆ ದಾಳಿ ಮಾಡಿದ್ದೇವೆ. ಯಾವ ಅಮಾಯಕ ಅಧಿಕಾರಿಗಳು ಮೇಲೂ ದಾಳಿ ಮಾಡಿಲ್ಲ. ಹಿರಿಯ ಅಧಿಕಾರಿಗಳ ಮಾತು ಕೇಳುವುದನ್ನು ಮೊದಲು ಬಿಡಲಿ. ಲೋಕಾಯುಕ್ತ ನಿಯಮ, ಕಾನೂನಿನಂತೆ ದಾಳಿ ಮಾಡಿದ್ದೇವೆ. ಇನ್ಸ್‌ಪೆಕ್ಟರ್ ಬಾಲು ಗರಂ ಆಗುತ್ತಿದ್ದಂತೆ ಸ್ಥಳದಲ್ಲಿದ್ದ ನಗರಸಭೆ ಸದಸ್ಯರು ಅಲ್ಲಿಂದ ಕಾಲ್ಕಿತ್ತ ಘಟನೆ ನಡೆಯಿತು.

ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದಿಂದ ನ್ಯಾಯ ಸಿಕ್ಕಿದೆ ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ
ಹಾಸನ : ಸಂವಿಧಾನದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದು, ಇನ್ನು ಮಹಿಳೆಯರು ಕೂಡ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ಥಾನಮಾನಗಳಿಸಬಹುದು ಎಂಬುದಕ್ಕೆ ನಾವೇ ಉದಾಹರಣೆಯಾಗಿದ್ದು, ನಮ್ಮ ಸ್ಥಾನಮಾನಗಳು ಕೂಡ ಸಂವಿಧಾನದ ಕೊಡುಗೆಯ ಫಲವಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಆರ್ ಪೂರ್ಣಿಮಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ರವರ ೬೮ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಆಗಲಿ ಅವರ ಪ್ರತಿಯೊಂದು ಹೆಜ್ಜೆಯಲ್ಲಿಯೂ ಇರುತ್ತದೆ. ನಾವು ಇಲ್ಲಿ ನಿಂತಿದ್ದೇವೆ ಎಂದರೆ ಅವರು ನೀಡಿದ ಸಂವಿಧಾನ. ಪ್ರತಿದಿನ ಅವರ ನೆನಪು ನಮ್ಮ ಮನಸ್ಸಿನಲ್ಲಿ ಕಣ್ಮುಂದೆ ಇರಬೇಕು. ದೀನ ದಲಿತರು ಸಹೋದರರು ಕೆಳಮಟ್ಟದಲ್ಲಿ ಇದ್ದರೂ ಅವರಿಗೆ  ನ್ಯಾಯ ಒದಗಿಸಿದಂತಹ ಕೆಲಸವನ್ನು ಮಾಡಿದ್ದಾರೆ. ಅದಕ್ಕೆ ಅವರ ಪ್ರತಿರೂಪವಾಗಿ ಸಮಾಜಮುಖಿಯಾಗಿ ನಿಂತಿದ್ದರು ಅವರಿಗೆ ಎಲ್ಲಾ ಯಶಸ್ಸು ಅಂಬೇಡ್ಕರ್ ಸಲ್ಲುತ್ತದೆ. ಅವರ ಆಶಯವನ್ನು ಈಡೇರಿಸಬೇಕು ನಮ್ಮ ಕೃತಜ್ಞತೆಗಳನ್ನು ತಿಳಿಸಬೇಕು ಅವರ ಆಶಯ ದೀನದಲಿತರನ್ನು ಮುಂದೆ ತರುವಂತಹದ್ದು ನಮ್ಮ ಭಾರತವನ್ನು ಅತ್ಯಂತ ಬಲಿಷ್ಟವಾಗಿ ರಾಷ್ಟ್ರವಾಗಿ ಮುನ್ನಡೆಸುವುದೇ ನಮ್ಮ ಕರ್ತವ್ಯ ಆಗಿಯೇ ಅವರ ಆಶಯವನ್ನು ಈಡೇರಿಸುವ  ಹಾಗೆ ಕೆಲಸ ಮಾಡೋಣ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತ ಅವರು ಮಾತನಾಡಿ, ಯಾವುದೇ ಸಮುದಾಯ ಅಥವಾ ಹೆಣ್ಣು ಮಕ್ಕಳು ಕೂಡ ಇಂತಹ ದೊಡ್ಡ ಹುದ್ದೆಯನ್ನಾದರೂ ಅಲಂಕರಿಸಬಹುದು ಎಂಬುದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವೇ ಸಾಕ್ಷಿಯಾಗಿದೆ. ವಿವಿಧ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿರುವ ಅವರ ತತ್ವಗಳನ್ನು ಎಲ್ಲರೂ ಅಳವಾಡಿಕೊಳ್ಳಬೇಕು ಜೊತೆಗೆ ಅದನ್ನು ಆಚರಣೆ ಮಾಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುವ ಕೆಲಸ ಆಗಬೇಕಿದೆ ಎಲ್ಲರೂ ಒಂದೇ ಎಂಬುದನ್ನು ಸಂವಿಧಾನದಲ್ಲಿ ತಿಳಿಸಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿಗಳಾದ ಕೆ.ಟಿ. ಶಾಂತಲಾ ಅವರು ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿ ತಮ್ಮ ವ್ಯಕ್ತಿತ್ವದಿಂದ ಇಡೀ ದೇಶವನ್ನು ಬದಲಾಯಿಸಿದ್ದಾರೆ ಎಂದರೆ ಈ ವ್ಯಕ್ತಿ ಮುಂಚೂಣಿಯಲ್ಲಿದ್ದಾರೆ. ಆದರಿಂದ ಇವತ್ತು ಎಲ್ಲರೂ ಸಮನಾಗಿ ಸಂಭ್ರಮಿಸುತ್ತಿದ್ದೇವೆ. ಆ ವ್ಯಕ್ತಿ ಇಲ್ಲದೆ ಇರುವಾಗ ನೆನಪಿಸಿಕೊಳ್ಳುತ್ತೇವೆ. ಅವರ ಕೃತಿ ಅವರ ಕಾರ್ಯ ಅವರು ಮಾಡಿರುವಂತಹ ಕೆಲಸ ಹೆಣ್ಣು ಮಕ್ಕಳು ಹೆಚ್ಚಾಗಿ ಅವರು ಬರೆದಿರುವಂತಹ ಪುಸ್ತಕಗಳನ್ನು ಓದಿ ಹೆಣ್ಣು ಮಕ್ಕಳಿಗೂ ಸಮಾನವಾಗಿ ಮುಂದೆ ಯಾವ ರೀತಿಯಲ್ಲಿ ಮುಂದೆ ಬರುತ್ತಾರೆ ಎಂಬುದನ್ನು ತಿಳಿಸಿರುತ್ತಾರೆ. ದಯವಿಟ್ಟು ನಿಮ್ಮ ಮನಸ್ಸಿನಲ್ಲಿ ಕೆಲಸ ಕಾರ್ಯಗಳಲ್ಲಿ ಎಲ್ಲರೂ ತೋರಿಸಬೇಕು ನಮಗೆ ಕೊಟ್ಟಿರುವಂತಹ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ ಎಂದರೆ ಅದು ಅಂಬೇಡ್ಕರ್ ಅವರು ಕೊಟ್ಟಿರುವಂತಹ ಸಮಾನದ ಸಂವಿಧಾನ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್ ಪೀರ್, ನಾಗರಾಜು ಹೆತ್ತೂರ್, ಪ್ರಕಾಶ್, ಕೃಷ್ಣದಾಸ್, ಹೆಚ್.ಕೆ. ಸಂದೇಶ್ ಹಾಗೂ ದಲಿತ ಮತ್ತು ಬೌದ್ಧ ಧರ್ಮದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆ.ಎಂ. ಶ್ರೀನಿವಾಸ್ ನಾಮಪತ್ರ ಸಲ್ಲಿಕೆ
ಹಾಸನ: ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿದ್ದು, ಈ ನಡುವೆ ಹೆಚ್ಚಿನ ನಿರ್ದೇಶಕರ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಬುಧವಾರದಂದು ಸಂಘದ ಭವನದಲ್ಲಿ ಕೆ.ಎಂ. ಶ್ರೀನಿವಾಸ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಖಜಾಂಚಿ ಸ್ಥಾನಕ್ಕೆ ಎಸ್. ಮಧು, ರಾಜ್ಯ ಪರಿಷತ್ತು ಸ್ಥಾನಕ್ಕೆ ಟಿ. ರಾಜು ಅವರು ನಾಮಪತ್ರ ಸಲ್ಲಿಕೆ ಮಾಡಿದರು.

ಸರಕಾರಿ ನೌಕರರ ಸಂಘದ ಚುನಾವಣೆ ಅಧ್ಯಕ್ಷ ಆಕಾಂಕ್ಷಿ ಕೆ.ಎಂ. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ೨೦೨೪-೨೯ನೇ ಸಾಲಿನ ನೌಕರರ ಸಂಘದ ಚುನಾವಣೆಯಲ್ಲಿ ಆಯ್ಕೆ ಆಗಿರುವ ಎಲ್ಲಾ ನಿರ್ದೇಶಕರಿಗೆ ಅಭಿನಂದನೆ ತಿಳಿಸುತ್ತೇವೆ. ಡಿಸೆಂಬರ್ ೪ ರಂದು ನಡೆಯುವ ಪದಾಧಿಕಾರಿಗಳ ಚುನಾವಣೆಯಲ್ಲಿ ನಾನು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಜೊತೆಯಲ್ಲಿ ನನ್ನ ಆತ್ಮಿಯರು ಆದ ಎಸ್. ಮಧು ಖಜಾಂಚಿ ಸ್ಥಾನಕ್ಕೆ, ಟಿ. ರಾಜು ಅವರು ರಾಜ್ಯ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಈ ತಂಡವನ್ನು ಎಲ್ಲಾ ನಿದೇಶಕರು ಸ್ವಾಭೀಮಾನದ ತಂಡ ಎಂದು ಆಯ್ಕೆ ಮಾಡಿ ಸಂಘವನ್ನು ಸಂಘಟನೆ ಮಾಡುವುದಕ್ಕೆ ಶಕ್ತಿ ತುಂಬುವಂತೆ ಎಲ್ಲಾ ಆತ್ಮಿಯರಲ್ಲಿ ನಿರ್ದೇಶಕರಿಗೆ ಮನವಿ ಮಾಡುವುದಾಗಿ ಹೇಳಿದರು. ಸರಕಾರಿ ನೌಕರರ ಚುನಾವಣೆಯು ಬಂಡವಾಳ ಶಾಹಿಗಳ ಹಣಬಲ - ಜನಬಲದ ನಡುವೆ ಸ್ಪರ್ದೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಸಮಸ್ತ ನೌಕರರ ಅಭಿಪ್ರಾಯ ಸಂಗ್ರಹಿಸಿ ಎಲ್ಲಾರ ಸಹಕಾರದಲ್ಲಿ ಇಲಾಖೆಯ ಎಲ್ಲಾ ಸರಕಾರಿ ನೌಕರರು ನಮ್ಮ ತಂಡಕ್ಕೆ ಮತ ನೀಡುವಂತೆ ನಿರ್ದೇಶಕರು ಯಾವ ಆಮಿಷಕ್ಕೆ ಒಳಗಾಗದೇ ಇರಲು ತಿಳಿ ಮಾತು ಹೇಳಿ ಮನವೊಲಿಸುವಂತೆ ಮನವಿ ಮಾಡಿದರು. ೬೦ ರಿಂದ ೬೫ ನಿರ್ದೇಶಕರು ದೃತಿಗೆಡದೆ ಯಾವ ಒತ್ತಡಕ್ಕೆ ಮಣಿಯದೆ ಎಲ್ಲಾ ನಿರ್ದೇಶಕರು ನಮ್ಮ ತಂಡಕ್ಕೆ ಮತ ನೀಡಿ ಹೆಚ್ಚುನ ಮತಗಳಲ್ಲಿ ಜಯಶೀಲರನ್ನಾಗಿ ಮಾಡಿ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಇದೆ ವೇಳೆ ಜಿಲ್ಲಾ ಸರಕಾರಿ ನೌಕರರ ಸಂಘದ ಮಧು, ರಘು, ಪ್ರದೀಪ್, ರಾಜು, ವಿಶ್ವನಾಥ್, ಯಶೋಧರ್, ಗಿರೀಶ್ ಇತರರು ಉಪಸ್ಥಿತರಿದ್ದರು.

ಕನಕ ದಾಸರು ನಾನು ಸಾವಿರಾರು ವರ್ಷಗಳ ಕಾಲ ಫೇಮಸ್ ಆಗಬೇಕೆಂದು ಭೂಮಿ ಉದ್ದಲಕ್ಕೂ ಸಾರಲಿಲ್ಲ – ಕೆ.ಟಿ. ಶಾಂತಲಾ
ಹಾಸನ : ನಾವು ಮಾಡುವ ಕೆಲಸವನ್ನು ಶ್ರದ್ಧೆ ಭಕ್ತಿಯಿಂದ ಮಾಡಿದರೇ ದೇವರು ಒಲಿಯುತ್ತಾನೆ. ಯಾವ ಸಂತರು ಕೂಡ ತನಗೊಬ್ಬನಿಗಾಗಿ ಯೋಚನೆ ಮಾಡಲಿಲ್ಲ. ಪ್ರತಿಯೊಬ್ಬರಿಗೂ ಕೂಡ ದೇವರು ಒಲಿಯಲಿ ಎಂದು ಎಲ್ಲೆಡೆ ತಮ್ಮ ಸಾಹಿತ್ಯ, ವಚನ ಹಾಗೂ ಹಾಡಿನ ಮೂಲಕ ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರದಂದು ಆಯೋಜಿಸಿದ್ದ ಕನಕದಾಸರ ಜಯಂತಿ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಕದಾಸರು ಉತ್ತಮವಾದ ತತ್ವ ಸಿದ್ಧಾಂತವನ್ನು ಹೊಂದಿದ್ದರು. ಗುರು ಪರಂಪರೆ ಎಂದರೇ ಯಾರಾದರೂ ಆಗಲಿ ಒಬ್ಬ ಯೋಗ್ಯ ಶಿಷ್ಯ ಬಂದರೆ ಅವರನ್ನು ಗುರುತಿಸಿ ಅಂತವರಿಗೆ ತಮ್ಮ ಒಳ್ಳೆಯ ಸಂದೇಶ ಹಾಗೂ ಎಲ್ಲಾ ಅಭ್ಯಾಸಗಳನ್ನು ದಾರಿ ಎರೆಯುತ್ತಿದ್ದರು. ೧೫ನೇ ಶತಮಾನದಲ್ಲಿ ಎಲ್ಲರೂ ಒಂದೇ ಎಂಬ ಭಾವದಿಂದ ಹೋರಾಡಿದವರು. ಅದರ ಬಗ್ಗೆ ಸ್ಪಷ್ಟವಾಗಿ ಸರಳವಾಗಿ ಪ್ರತಿಯೊಂದು ಜನರಿಗೂ ಮನಮುಟ್ಟುವಂತೆ ತಿಳಿಸಿದವರು. ನನಗೆ ಯಾವ ಕೀಳಿರಿಮೆ ಇಲ್ಲ ಎಂದು ಹೇಳಿದವರಲ್ಲಿ ಕನಕದಾಸರೇ ನಮಗೆ ನಿದರ್ಶನ ಎಂದು ನೀವು ಮಾಡುವ ಪ್ರತಿ ಸಣ್ಣ ಸಣ್ಣ ಕೆಲಸವೇ ದೇವರು. ಕನಕ ದಾಸರು ನಾನು ಸಾವಿರಾರು ವರ್ಷಗಳ ಕಾಲ ಫೇಮಸ್ ಆಗಬೇಕೆಂದು ಭೂಮಿ ಉದ್ದಲಕ್ಕೂ ಸಾರಲಿಲ್ಲ. ಎಲ್ಲಾ ಸಂತರನ್ನು ತೆಗೆದುಕೊಂಡರೂ ಎಲ್ಲಾರೂ ಕೂಡ ಸಮಾಜದ ಒಳಿತಿಗಾಗಿ ತಮ್ಮ ವಚನ ಹಾಗೂ ಹಾಡುಗಳ ಮೂಲಕ ಸಾರಿದ್ದಾರೆ ಎಂದರು. ಯಾವುದೇ ಕೀಳರಿಮೆ ಇರಲಿಲ್ಲ ಕನಕದಾಸರು ದೇವರು ಸಿಕ್ತಾನ ಎಂಬ ಪ್ರಶ್ನೆ ಮಾಡಬಹುದಿತ್ತು ಆದರೆ ಹುಡುಕಿದರೆ ದೇವರು ಸಿಗುತ್ತಾರೆ ಇದಕ್ಕೆ ಕನಕದಾಸರು ನಿದರ್ಶನ ಇದಕ್ಕೆ ಎಂದು ತಿಳಿಸಿದರು. ನಾವು ಮಾಡುವ ಕೆಲಸವನ್ನು ಭಕ್ತಿಯಿಂದ ಮಾಡುವುದರಿಂದ ದೇವರು ಒಲಿಯುತ್ತಾನೆ. ಸಂತರು ಎಲ್ಲರೂ ದೇವರ ಅಮಲಿನಲ್ಲಿ ಇರುತ್ತಿದ್ದರು. ಅವರು ಯೋಚನೆ ಮಾಡುತ್ತಿದ್ದ ರೀತಿ ದೇವರು ಒಬ್ಬನಿಗೆ ಮಾತ್ರ ಒಲಿಯಲ್ಲಿ ಎಂದು ಯೋಚನೆ ಮಾಡುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ದೇವರು ಒಲಿಯಲಿ ಎಂದು ಪ್ರಾರ್ಥಿಸುತ್ತಿದ್ದರು. ತಮ್ಮಲ್ಲಿ ಇದ್ದುದ್ದನ್ನು ಬಿಟ್ಟು ಹೋಗಿ ಅವರು ದೇವರನ್ನು ಹುಡುಕುವಂತ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು. ಪುರಂದ ದಾಸರು, ಕನಕ ದಾಸರು ಇವರೆಲ್ಲಾ ತನಗಾಗಿ ಏನನ್ನು ಕೇಳದೇ ಇತರರಿಗಾಗಿ ಬೇಡಿದ್ದಾರೆ ಎಂದು ಹೇಳಿದರು.

ನಗರ ಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ ಅವರು ಮಾತನಾಡಿ, ಕನಕದಾಸರು ಬಹಳ ಸರಳ ವ್ಯಕ್ತಿತ್ವದವರು. ಸರಳತೆಯಿಂದ ಹೇಗೆ ಜೀವನವನ್ನು ಮಾಡಬಹುದು ಎಂದು ತಿಳಿಸಿದವರು. ಆದರೆ ನಾವು ಆ ನಿಟ್ಟಿನಲ್ಲಿ ಸಾಗುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ಕನಕದಾಸರು ಒಂದು ಜಾತಿಗೆ ಸೀಮಿತವಾಗಿಲ್ಲ. ನಾವು ಎಲ್ಲರೂ ಒಂದೇ ಎಂಬ ಭಾವನೆ ಹೊಂದಿದ್ದು, ಯೋಗ ವ್ಯಕ್ತಿಯನ್ನು ಆಯ್ಕೆ ಮಾಡುವವರೆಗೂ ನಾವು ಉದ್ದಾರ ಆಗುವುದಿಲ್ಲ ಇದನ್ನೇ ಕನಕದಾಸರು ಹೇಳಿಕೊಟ್ಟಿದ್ದರು. ಕನಕದಾಸರು ಸಮಸ್ತ ಕುಲ ಕೋಟಿ ಜನಾಂಗಕ್ಕೆ ಅವರ ಜಯಂತಿ ಹೆಚ್ಚು ಪ್ರಚಾರ ಆಗಬೇಕು ಕನಕದಾಸರು ತೋರಿಸಿಕೊಟ್ಟ ಹಾದಿಯಲ್ಲಿ ಬಹಳ ಸರಳ, ಸುಂದರ ಜೀವನ ಮಾರ್ಗದರ್ಶನ ಮಾಡಿಕೊಟ್ಟಿದ್ದಾರೆ ಅವರ ಆದರ್ಶದಲ್ಲಿ ಸಮಾಜ ನಿರ್ಮಾಣ ಮಾಡುವುದರಲ್ಲಿ ಕೈಜೋಡಿಸೋಣ ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಎಚ್.ಎಲ್. ಮಲ್ಲೇಶ್ ಗೌಡ ಅವರು ಮಾತನಾಡಿ, ಕುವೆಂಪು ಅವರು ಒಂದು ಮಾತು ಹೇಳಿರುವುದು ಇಂದಿಗೂ ಕೂಡ ಎಲ್ಲಾರ ಬಾಯಿಯಲ್ಲಿ ಹರಿದಾಡುತ್ತಿರುವ ಸರ್ವ ಜನಾಂಗದ ಶಾಂತಿಯ ತೋಟ, ನಾಡು ಕನ್ನಡ ನಾಡು ಸರ್ವಜನಾಗದ ಶಾಂತಿಯ ತೋಟ ಒಂದೇ ಅಲ್ಲ ಸರ್ವ ಜನಾಂಗದ ಕಾಂತಿಯ ತೋಟ ಇದು. ನೆಲಕ್ಕೆ ಈ ನಾಡಿಗೆ ಕೊಡುಗೆ ಒಂದು ಸಮುದಾಯದವರಿಂದ ಬಂದಿದ್ದಲ್ಲ. ಈ ನಾಡಿನ ಸಂಸ್ಕೃತಿ ಇತಿಹಾಸಕ್ಕೆ ಸಾಹಿತ್ಯಕ್ಕೆ ಸಾಂಸ್ಕೃತಿಕಕ್ಕೆ, ಕಲೆಗೆ ದರ್ಶನಕ್ಕೆ ತತ್ವಕ್ಕೆ ಒಂದು ಜನಾಂಗದ ಕೊಡುಗೆ ಅಲ್ಲ ಕುರ್ಮಾ ಕೊರಚಿಗರಿಂದ ಹಿಡಿದು ಬ್ರಾಹ್ಮಣರವರೆಗೂ ಈ ಎಲ್ಲಾ ಸಮುದಾಯಗಳು ಈ ಸಮುದಾಯಗಳ ಮೂಲೆಗಳಿಂದ ನೆಲಗಳಿಂದ ದಾಸನಿಕರು ಬಂದು ನೆಲವನ್ನು ಗಟ್ಟಿಗೊಳಿಸಿದ್ದಾರೆ ಎಂದು ಹೇಳಿದರು. ಈ ನೆಲಕ್ಕೆ ಎಲ್ಲಾ ಜನಾಂಗದವರ ಕೊಡುಗೆ ಇದೆ. ಎಲ್ಲರೂ ಈ ನಾಡನ್ನು ಸಮೃದ್ಧಿಗೊಳಿಸಿದ್ದಾರೆ. ಕನ್ನಡ ಬರೀ ಭಾಷೆಯಲ್ಲ ನೆಲವಾಗಿ ನಾಡಾಗಿ, ಜಗತ್ತಿಗೆ ಒಂದು ಮಾದರಿ ನೆಲ. ಕನ್ನಡ ಭಾಷೆ ಹೇಗೆ ಮಾದರಿ ನೆಲವನ್ನು ಮಾದರಿ ನೆಲ ಘಟ್ಟ ಪ್ರದೇಶಗಳು ಬಟ್ಟ ಬಯಲು ಪ್ರದೇಶ ಅಚ್ಚ ಹಸಿರಿನಿಂದ ಕೂಡಿರುವಂತಹ ಈ ಜಗತ್ತಿನ ಎಲ್ಲಾ ಆಯಾಮಗಳು ಈ ಕನ್ನಡ ನೆಲದಲ್ಲಿ ಇವೆ ಎಂದು ಹೇಳಿದರು. ಜಗತ್ತಿನ ಎಲ್ಲ ಬೇರು ಸಂಗತಿಗಳು ಈ ನೆಲದಲ್ಲಿ ಸಹಜವಾಗಿ ಅರಳುತ್ತವೆ ಕನ್ನಡ ಸಾಹಿತ್ಯ ಜಗತ್ತಿಗೆ ಒಂದು ಕಿರೀಟ ಈ ಕಿರೀಟಕ್ಕೆ ಎರಡು ಗರಿಮೆಗಳು ದಾಸ ಸಾಹಿತ್ಯ, ವಚನ ಸಾಹಿತ್ಯ  ಕನ್ನಡ ಸಾಹಿತ್ಯಕ್ಕೆ ಮುಖಕ್ಕೆ ವಿಶೇಷವಾಗಿ ಗರಿಗಳು ವಚನ ಸಾಹಿತ್ಯ ದಾಸ ಸಾಹಿತ್ಯ. ವಚನ ಸಾಹಿತ್ಯ ಜನಸಾಮಾನ್ಯರ ಬಳಿ ವಿವೇಚನೆಯನ್ನು ತೆಗೆದುಕೊಂಡು ಹೋಗುತ್ತದೆ. ದಾಸ ಸಾಹಿತ್ಯ ಅತ್ಯಂತ ಸರಳವಾದ ಭಾಷೆಯಲ್ಲಿ ಇಬ್ಬರಿಗೂ ಭಕ್ತಿಯ ನೆಲವನ್ನು ಬಿತ್ತುವಂತಹ ಉದ್ದೇಶ ಇತ್ತು. ಭಕ್ತಿಯನ್ನು ಜನರ ಮನಸ್ಸಿನಲ್ಲಿ ಬಿತ್ತಬೇಕು ಎಂದರು. ಒಬ್ಬರಿಗೆ ಶಿವ ತತ್ವವನ್ನು ಬಿತ್ತಬೇಕು ಎಂಬ ಹಂಬಲ ಇದ್ದರೆ ಇನ್ನೊಬ್ಬರಿಗೆ ಹರಿತತ್ವ ಬಿತ್ತಬೇಕು ಎಂಬ ಹಂಬಲ ಇತ್ತು. ವಚನಕಾರರು ಶಿವ ತತ್ವವನ್ನು ಬಿಂಬಿಸುತ್ತಾರೆ ದಾಸರು ಅರಿತತ್ವವನ್ನು ಬಿಂಬಿಸುತ್ತಾರೆ. ಎರಡು ಕಾಲದಲ್ಲಿ ಸಮಾಜದಲ್ಲಿ ಅತ್ಯಂತ ಕೆಳ ವರ್ಗದಲ್ಲಿ ಬಂದಂತಹ ಚಿಂತಕರು ಸಿಗುತ್ತಾರೆ. ಕೆಳ ವರ್ಗದಲ್ಲಿ ಜನಿಸಿ ದಾಸರಲ್ಲಿ ಶ್ರೇಷ್ಠ ದಾಸರಾಗುತ್ತಾರೆ ಅದು ಸಾಧಾರಣವಾದ ಸಂಗತಿಯಲ್ಲ. ಅದು ಒಬ್ಬ ದಾಸ ಪರಂಪರೆಗೆ ಶ್ರೇಷ್ಠ ನೆಲವನ್ನು ತಂದುಕೊಂಡಂತಹ ಕನಕದಾಸರು ಎಂದು ತಿಳಿಸಿದರು.

ಬಿ.ಆರ್.ಸಿ. ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಂ.ಜಿ. ಪರಮೇಶ್ ಮಡಬಲು ಅವರು ಮಾತನಾಡಿ, ಕನಕದಾಸರು ನಡೆದು ಬಂದ ದಾರಿ, ಅವರು ಸಾರಿದ ಹಿತಾವಚನ ದೇರಿದಂತೆ ಜೀವನ ಚರಿತ್ರೆಯನ್ನು ಇದೆ ವೇಳೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮೊಹಮ್ಮದ್ ಸುಜೀತ, ಜಿಲ್ಲಾ ಸರಕಾರಿ ನೌಕರರ ಸಂಘದ ಈ. ಕೃಷ್ಣೇಗೌಡ, ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಲಿಂಗೇಗೌಡ, ಬಿ.ಟಿ. ಸತೀಶ್, ಸಮಾಜದ ಮುಖಂಡರಾದ ನವಿಲೇ ಅಣ್ಣಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಎಂ. ಮಹಾಲಿಂಗಯ್ಯ, ಮುಖಂಡರಾದ ಸಣ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾಕ್ಟರ್ ಎಚ್.ಪಿ. ತಾರನಾಥ್ ಇತರರು ಉಪಸ್ಥಿತರಿದ್ದರು.

ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸು ದಾಖಲಿಸಿ; ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಆಗ್ರಹ
ಹಾಸನ : ಗೌರಿ ಲಂಕೇಶ್‌ ಹತ್ಯೆ ಮಾಡಿದವ್ರಿಗೆ ಸನ್ಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹಾಸನ ಜನಪರ ಚಳುವಳಿಗಳ ಒಕ್ಕೂಟದ ಸದಸ್ಯರು ಗೃಹ ಮಂತ್ರಿಗಳಾದ ಜಿ.ಪರಮೇಶ್ವರ್‌ ಅವರಿಗೆ ಪತ್ರ ಬರೆದು ಸನ್ಮಾನ ಮಾಡಿದವ್ರನ್ನು ಈ ಕೂಡಲೆ ಬಂಧಿಸುವಂತೆ ಆಗ್ರಹಿಸಿದ್ದಾರೆ. ಇಡೀ ರಾಜ್ಯ ತಲೆ ತಗ್ಗಿಸುವಂತಹ ಕೆಲಸ ಇದಾಗಿದ್ದು ಇದರಿಂದ ಸಮಾಜಕ್ಕೆ ಯಾವ ರೀತಿಯ ಸಂದೇಶ ಕೊಡುವುದಕ್ಕೆ ಇವರು ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿಪತ್ರದ ಮೂಲಕ ಗೃಹ ಸಚಿವರಿಗೆ “ಇಂತಹ ಶಕ್ತಿಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವಂತೆ” ತಿಳೀಸಿದ್ದಾರೆ. ಪತ್ರದ ಸಾರಾಂಶವನ್ನು ಇಲ್ಲಿ ಹಾಕಲಾಗಿದೆ.

ಮಾನ್ಯ ಗೃಹ ಸಚಿವರೇ,

ಕೊಲೆ ಪಾತಕರಿಗೆ ಸನ್ಮಾನ ಕರ್ನಾಟಕಕ್ಕಾದ ಅವಮಾನ ಹಿಂಸೆಗೆ ನೀಡಿರುವ ಬಹಿರಂಗ ಪ್ರಚೋದನೆ

ಅತ್ಯಾಚಾರಿಗಳಿಗೆ, ಕೊಲೆಪಾತಕರಿಗೆ ಸನ್ಮಾನ ಮಾಡುವುದನ್ನು ಗುಜರಾತು, ಉತ್ತರ ಪ್ರದೇಶಗಳಲ್ಲಿ ಕಂಡಿದ್ದೆವು. ಛೆ, ಎಂತಹ ಸ್ಥಿತಿಗೆ ಈ ರಾಜ್ಯಗಳು ತಲುಪಿದವಲ್ಲಾ ಎಂದು ಮರುಗಿದ್ದೆವು, ಈ ರೀತಿಯಲ್ಲಿ ಅಪರಾಧಿಗಳನ್ನು ಸನ್ಮಾನಿಸಿ ಅಪರಾಧಕ್ಕೆ ಸಾಮಾಜಿಕ ಮನ್ನಣೆ ನೀಡುವುದನ್ನು ನಾವು ಪ್ರತಿಭಟಿಸಿದ್ದೆವು. ಆದರೆ ನಮ್ಮದೇ ರಾಜ್ಯದಲ್ಲಿ, ಕರ್ನಾಟಕದ ಹೆಮ್ಮೆಯ ದನಿ ಗೌರಿ ಲಂಕೇಶ್‌ ಅವರನ್ನು ಕೊಲೆಗೈದ ಆರೋಪಿಗಳನ್ನು ಸನ್ಮಾನಿಸಿರುವುದ ಕಂಡು ನಾವು ದಂಗಾಗಿದ್ದೇವೆ. ಇದು ಕರ್ನಾಟಕದ ಪರಂಪರೆಗೆ, ಈ ನೆಲ ಪೋಷಿಸಿಕೊಂಡು ಬರುತ್ತಿರುವ ಮಾನವೀಯ ಮೌಲ್ಯಗಳಿಗೆ ಆದ ದೊಡ್ಡ ಕಳಂಕ ಎಂದು ನಾವು ಭಾವಿಸುತ್ತೇವೆ. ಏನೂ ಆಗಿಲ್ಲವೆಂಬಂತೆ ಗೃಹ ಇಲಾಖೆ ಇರುವುದನ್ನು ಕಂಡು ಮನಸ್ಸಿಗೆ ಬಹಳ ಬೇಸರವೂ ಆಗಿದೆ.

ಕೋಮುಸೌಹಾರ್ಧತೆ ಹಾಗು ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಗೌರಿ ಲಂಕೇಶ ಹಾಗು ಡಾ. ಎಂ.ಎಂ. ಕಲಬುರಗಿಯವರ ಕೊಲೆ ಗಡುಕ ಆರೋಪಿಗಳು ಬಿಡುಗಡೆಯ ಸಂದರ್ಭದಲ್ಲಿ ಹಿಂದು ಮತಾಂದ ಶಕ್ತಿಗಳು ಇಂತಹ ದುಷ್ಕೃತ್ಯ ನಡೆಸಿವೆ ಮತ್ತು ಈ ಹಿಂದೆ ಗುಜರಾತಿನ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆ ಕುಟುಂಬದ ಸದಸ್ಯರ ಕೊಲೆಗೈದ ಅಪರಾಧಿಗಳು ಬಿಡುಗೊಂಡಾಗ ಹಿಂದುತ್ವ ಕೋಮುವಾದಿ ಶಕ್ತಿಗಳು ಅಂತಹ ಅಪರಾಧಿಗಳ ಪರ ನಿಂತು ಅಪರಾದಿ ದುಷ್ಕೃತ್ಯ ಬೆಂಬಲಿಸಿದ್ದಿದೆ.

ಇದು, ಇಂತಹ ಸಮಾಜ ಘಾತುಕ ಶಕ್ತಿಗಳು ನಾಚಿಕೆ ಇಲ್ಲದೆ ತಮ್ಮ ದುಷ್ಕೃತ್ಯ ಮುಂದುವರೆಸಲು ನೈತಿಕ ಶಕ್ತಿಯನ್ನು ಒದಗಿಸುವ ಮೂಲಕ ಸಮಾಜದ ಶಾಂತಿ ಸೌಹಾರ್ಧತೆಗೆ ಗಂಡಂತಾರವಾಗಿ ಪರಿಣಮಿಸಲಿದೆ. ದುಡಿಯುವ ಜನರು ಹಾಗು ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯಕ್ಕೆ ಇಂಬು ನೀಡಲಿದೆ. ಆದ್ದರಿಂದ, ಇಂತಹ ವೈಭವೀಕರಣದ ನಿಗ್ರಹಕ್ಕೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗೆ ಅಗತ್ಯ ಕಾನೂನು ರೂಪಿಸಲು ಮತ್ತು ಕಾನೂನು ಕ್ರಮಕ್ಕೆ ಮುಂದಾಗುವಂತೆ ಕೇಂದ್ರ ಹಾಗು ರಾಜ್ಯ ಸರಕಾರಗಳನ್ನು ನಾವು ಆಗ್ರಹಿಸುತ್ತಿದ್ದೇವೆ. ಎಲ್ಲ ಪ್ರಜಾಪ್ರಭುತ್ವ ಹಾಗು ಸಾಮಾಜಿಕ ಸೌಹಾರ್ಧತೆಗಾಗಿ ಕಾರ್ಯ ನಿರ್ವಹಿಸುವ ಶಕ್ತಿಗಳು ಈ ದಿಕ್ಕಿನಲ್ಲಿ ಸರಕಾರಗಳ ಮೇಲೆ ಒತ್ತಡ ಹೇರಲು ಮನವಿ ಮಾಡುತ್ತಿದ್ದೇವೆ.

ಕೊಲೆಪಾತಕರಿಗೆ ಮಾಡಿರುವ ಸನ್ಮಾನ, ಕೊಲೆಗೆ ನೀಡಿರುವ ಪ್ರಚೋದನೆಯಾಗಿದೆ, ಹಿಂಸೆಗೆ ಒದಗಿಸಿರುವ ಸಾಮಾಜಿಕ ಮನ್ನಣೆಯಾಗಿದೆ. ಕರ್ನಾಟಕದ ಪ್ರಜ್ಞಾವಂತ ಜನರೆಲ್ಲರೂ ಈ ಪ್ರಚೋದನಕಾರಿ ನಡತೆಯನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ ಹಾಗೂ ಗೃಹ ಸಚಿವರ ಮುಂದೆ ಈ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇವೆ.

ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸು ದಾಖಲಿಸಬೇಕು.

ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು.

ಗೌರಿ ಕೊಲೆಯ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

ಮೇಲ್ಕಂಡ ಹಕ್ಕೊತ್ತಾಯಗಳೊಂದಿಗೆ ಸರ್ಕಾರದ ಮತ್ತು ಸಮಾಜದ ಗಮನ ಸೆಳೆಯಲು ಅಕ್ಟೋಬರ್‌ 23 ರಂದು ಹಾಸನದಲ್ಲಿ ನಾಗರಿಕರ ಪ್ರತಿರೋಧ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಿಗೆ ಮನವಿ ನೀಡುತ್ತಿದ್ದೇವೆ.. ಸರ್ಕಾರ ನಾಗರೀಕರ ಈ ಒತ್ತಾಯಕ್ಕೆ ಕೂಡಲೇ ಸ್ಪಂದಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಧನ್ಯವಾದಗಳು

ಹಾಸನ ಜಿಲ್ಲಾಧಿಕಾರಿಗಳ ಮುಖಾಂತರ ಈ ಪತ್ರವನ್ನು ಗೌಹ ಮಂತ್ರಿಗಳಿಗೆ ತಲುಪಿಸುವಂತೆ ಹಾಸನ ಜಿಲ್ಲೆಯ ಜನಪರ ಸಂಘಟನೆಗಳು ಮನವಿಯನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಧರ್ಮೇಶ್
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ, ಎಚ್.ಕೆ. ಸಂದೇಶ್ ಹಿರಿಯ ದಲಿತ ಮುಂಖಂಡರು, ಎಂ. ಸೋಮಶೇಖರ್ ರಾಜ್ಯ ಸಂಚಾಲಕರು ಕ.ದ.ಸಂ.ಸ, ಹುಲಿಕಲ್ ರಾಜಶೇಖರ್ ಹಿರಿಯ ದಲಿತ ಮುಖಂಡರು, ಇರ್ಷಾದ್ ಅಹಮದ್ ದೇಸಾಯಿ ಸಾಮಾಜಿಕ ಕಾರ್ಯಕರ್ತರು, ಈರೇಶ್ ಹಿರೇಹಳ್ಳಿ ದಸಂಸ ಅಂಬೇಡ್ಕರ್‌ವಾದ , ಎಂ.ಜಿ. ಪೃಥ್ವಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ, ರಮೇಶ್ಎ ಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ, ಅಂಬುಗ ಮಲ್ಲೇಶ್ ದಸಂಸ ಅಂಬೇಡ್ಕರ್‌ವಾದ ಮತ್ತಿತರರು ಇದ್ದರು.