hassan – Peepal Media

ವೇತನ ಹೆಚ್ಚಳ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿಸಿಐಟಿಯು ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ
ಹಾಸನ: ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತ್ ಗೆ ಮನವಿ ಸಲ್ಲಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾ ಪಂಚಾಯತ್ ಆವರಣಕ್ಕೆ ಬಂದ ಅವರು, ಇದೆ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ್ ಮಾತನಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭವಾಗಿ ೨೪ ವರ್ಷಗಳು ಕಳೆಯುತ್ತಿದೆ. ಲಕ್ಷಾಂತರ ಮಕ್ಕಳಿಗೆ ಹಾಲು ನೀಡಿ, ಶಾಲಾ ಸ್ವಚ್ಛತೆ ಮಾಡಿ, ಬಿಸಿ ಬಿಸಿ ಆಹಾರ ನೀಡಿ, ಶಾಲೆಯಲ್ಲಿ ನೀಡುವ ದಿನನಿತ್ಯದ ಎಲ್ಲಾ ಕೆಲಸ ಮಾಡಿ, ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ತಾಯ್ತತನದ ಪ್ರೀತಿ ನೀಡುವ ಪರಿಶ್ರಮ ಕೆಲಸವಾಗಿದೆ. ಪ್ರತಿಯೊಂದು ಮಗುವು ಶಿಕ್ಷಣ ಕಲಿಯಬೇಕೆಂಬ ಮಹತ್ವದ ಉದ್ದೇಶದಿಂದ ೧೯೬೮ ರಲ್ಲಿ ಮೊದಲ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಇದರ ಕರ್ತವ್ಯದ ಭಾಗವಾಗಿ ಬಿಸಿಯೂಟ ನೀಡುವ ಮೂಲಕ ಜಾರಿಯಲ್ಲಿದೆ. ದೇಶದ ಅಭಿವೃದ್ದಿಗೆ ಪೂರಕವಾದ ಮಕ್ಕಳ ಅಪೌಷ್ಟಿಕತೆಯಿಂದ ಹೊಗಲಾಡಿಸಿ, ಏಕಾಗ್ರತೆಯಿಂದ ಶಿಕ್ಷಣ ಪಡೆಯಲು, ಅರ್ಧದಲ್ಲಿ ಶಾಲೆಯನ್ನು ಬಿಡುವ ಕ್ರಮ ನಿಲ್ಲಿಸಲು ಮಧ್ಯಾಹ್ನದ ಉಪಾಹಾರ ಯೋಜನೆಯನ್ನು ಅಂದಿನಿAದ ಇಂದಿನವರೆಗೆ ಸಮಗ್ರವಾಗಿ ನಡೆಸಿಕೊಂಡು ಬಂದಿದೆ ಎಂದರು. ಈ ಯೋಜನೆ ದೇಶದ ಮಹತ್ವದ ಯೊಜನೆಯಾಗಿ ದೇಶದಾದ್ಯಂತ ಮುಂದುವರಿದಿದೆ. ಈ ಯೋಜನೆಯ ಮಹತ್ವವನ್ನು ಅರಿತು ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯದಲ್ಲಿ ಮಾನ್ಯ ಹೈಕೊರ್ಟ ವರ್ಷದ ೧೨ ತಿಂಗಳು ಕೆಲಸ ಹಾಗೂ ಕನಿಷ್ಟಕೂಲಿ ನೀಡಲು ಆದೇಶಿಸಿದೆ. ೨೦೧೪ ರ ನಂತರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಪರಿಕಲ್ಪನೆ ಬದಲಾಗಿ ನೀತಿ ಆಯೋಗದ ಶಿಪಾರಸ್ಸುಗಳಂತೆ ೬೦:೪೦ ರ ಅನುಪಾತದ ಆಧಾರದಲ್ಲಿ ಕೇಂದ್ರ ಸರ್ಕಾರ ತನ್ನ ಮೂಲ ಜವಾಬ್ದಾರಿಯಿಂದ ನುಣುಚಿಕೊಂಡು ಬಜೆಟ್‌ನಲ್ಲಿ ಅನುದಾನಗಳನ್ನು ನಿರಂತರವಾಗಿ ಕಡಿಮೆ ಮಾಡುತ್ತಿದೆ. ಬಿಸಿಯೂಟ ಯೋಜನೆ ಕೊಡಲಾದ ಸಾದಿಲ್ವಾರು ವೆಚ್ಛ, ಅಡುಗೆ ಗುಣಮಟ್ಟದ ವೆಚ್ಛ, ೨೦೧೪ ರಿಂದಲೂ ಹೆಚ್ಚಳ ಮಾಡದೇ ಅನುದಾನದಲ್ಲಿ ವರ್ಷದಿಂದ ವರ್ಷಕ್ಕೆ ಕಡಿತ ಮಾಡುತ್ತಿದೆ. ಮಾತ್ರವಲ್ಲದೇ ಈ ಯೋಜನೆಯ ಹೆಸರನ್ನು ಬದಲಾಯಿಸಿದೆ. ತನ್ನ ಪಾಲಿನ ನಿಧಿಯನ್ನು ಕಡಿತಗೊಳಿಸಿ ರಾಜ್ಯದ ಪಾಲನ್ನು ಕೊಡಬೇಕು ಎಂಬ ನೀತಿಯನ್ನು ಅನುಸರಿಸಿದ್ದರಿಂದ ಯೋಜನೆಯನ್ನು ಬಲಿಷ್ಠ ಪಡಿಸುವ ಜವಾಬ್ದಾರಿ ನನ್ನದು ಅಷ್ಟೇ ಅಲ್ಲ ಎಂದು ಹೇಳುತ್ತಿದೆ. ಕಳೆದ ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದಿದ ಬಿಸಿಯೂಟ ನೌಕರರಿಗೆ ಇಡಿಗಂಟು ಜಾರಿ ಮಾಡಲು ನಮ್ಮ ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಸೇವೆಯ ಆಧಾರಿತವಾಗಿ ನೀಡಲು ಶಿಫಾರಸ್ಸು ಮಾಡಿದೆ. ಆದರೆ ಇದುವರೆಗೆ ಜಾರಿ ಆಗಿರುವುದಿಲ್ಲ. ತಕ್ಷಣ ಇದನ್ನು ಜಾರಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬಿಸಿಯೂಟ ಯೋಜನೆಗಳನ್ನು ಬಲಹೀನಗೊಳಿಸಲು ಇಸ್ಕಾನ ಹಾಗೂ ಧರ್ಮಾದಾರಿತ ಕೆಲ ಸಂಘ ಈ ಯೋಜನೆ ನಿಡಲು ಕೆಲ ಜಿಲ್ಲೆಗಳಲ್ಲಿ ಆಗಾಗ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಶಾಲೆಗಳಲ್ಲಿ ಕೆಲಸ ಮಾಡುವ ಬಿಸಿಯೂಟ ನೌಕರರು ಭೀತಿಯಲ್ಲಿಯೇ ಕೆಲಸ ಮಾಡಬೇಕೆಂಬ ಪರಿಸ್ಥಿತಿ ಇದ್ದೆ ಇದೆ. ಕೇಂದ್ರ ಸರ್ಕಾರವು ಇದಕ್ಕೆ ಬೇಕಾದಂತಹ ಹಣಕಾಸು ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಒತ್ತಡ ಹಾಕಬೇಕಿದೆ. ಎಂಡಿಎ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಮಾಡಿದರೆ ಮಾತ್ರವೇ ಈ ಯೋಜನೆಯನ್ನು ಇನ್ನಷ್ಡು ಬಲಪಡಿಸಲು ಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಸರ್ಕಾರದ ಸುತ್ತೋಲೆಯಲ್ಲಿ ೪ ಗಂಟೆ ಕೆಲಸವೆಂದು ನಿಗದಿಯಾಗಿದೆ. ಆದರೆ ಪ್ರತಿಶಾಲೆಯಲ್ಲಿಯೂ ದಿನಕ್ಕೆ ೬ ಗಂಟೆ ಕೆಲಸವಾಗುತ್ತದೆ. ೧೯೪೮ರ ಕನಿಷ್ಟ ವೇತನ ಕಾಯ್ದೆಯಡಿಯಲ್ಲಿ ತಿಳಿಸಿದಂತೆ ೪ ಗಂಟೆಗಿಂತ ಹೆಚ್ಚು ಕೆಲಸ ಮಾಡುವವವರಿಗೆ ಕನಿಷ್ಟ ವೇತನ ನೀಡಬೇಕು. ಆದ್ದರಿಂದ ಸುತ್ತೋಲೆಯಲ್ಲಿ ಕೆಲಸದ ಅವಧಿಯನ್ನು ಬದಲಾಯಿಸಿ ೬ ಗಂಟೆ ಕೆಲಸ ಎಂದು ನಮೂದಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ಭರವಸೆ ನೀಡಿದಂತೆ ೬೦೦೦ ರೂ ಹೆಚ್ಚಳ ಕೂಡಲೇ ಜಾರಿ ಆಗಬೇಕು ಎಂದು ಒತ್ತಾಯಿಸಿದರು. ಜನಪರವಾಗಿ ಈ ರಾಜ್ಯದ ಅಭಿವೃದ್ದಿಗಾಗಿ ಎಲ್ಲಾ ವರ್ಗದ ಜನರಿಗೆ ನ್ಯಾಯ ನೀಡುವ ಹೊಸ ಭರವಸೆ ನೀಡಲು ಬಂದಿರುವ ಮಾನ್ಯ ಸಿದ್ದರಾಮಯ್ಯನವರ ಸರ್ಕಾರವು ರಾಜ್ಯದಲ್ಲಿ ಈ ಯೋಜನೆಯ ಅಭಿವೃದ್ಧಿಗೆ ದುಡಿಯುತ್ತಿರುವ ೧ ಲಕ್ಷದ ೧೮ ಸಾವಿರ ಬಡಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಕೂಡಲೇ ವೇತನ ಹೆಚ್ಚಳ ಮಾಡಲು ಮುಂದಾಗಬೇಕೆಂದು ಕೋರಿದರು.
ಇದೆ ವೇಳೆ ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಅಧ್ಯಕ್ಷೆ ಎಂ.ಬಿ. ಪುಷ್ಪ, ಕಾಯಾಧ್ಯಕ್ಷೆ ಜಿ.ವಿ. ಉಷಾ, ಜಿಲ್ಲಾ ಉಪಾಧ್ಯಕ್ಷರಾದ ಯಶೋಧ, ಮೀನಾಕ್ಷಿ , ಕಾರ್ಯದರ್ಶಿ ಗಳಾದ ಚನ್ನಮ್ಮ, ಸೌಮ್ಯ ಜಿಲ್ಲಾ ಮುಖಂಡರಾದ ಕಸ್ತೂರಿ, ಲೋಲಾಕ್ಷಿ, ಉಷಾ ,ಮಂಜುಳಾ , ಸಾವಿತ್ರಿ , ಸುಮಿತ್ರಾ, ಕಮಲ, ಜಿಕೆ. ಶೋಬಾ, ನಾಸೀರಾಬಾನು, ಜ್ಯೋತಿ, ಯಶೋಧ, ಸುಮಾಬಾಯಿ, ಹೇಮಾವತಿ ಇನ್ನಿತರರು ಭಾಗವಹಿಸಿದ್ದರು.

ಎಲ್ಲಾ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಿ: ಬಿ.ಪಿ. ಕೃಷ್ಣೇಗೌಡ ಮನವಿ
ಹಾಸನ: ಜಿಲ್ಲಾ ಸರಕಾರಿ ನೌಕರರ ಅಧ್ಯಕ್ಷರ ಚುನಾವಣೆಗೆ ಕೆಲ ದಿವಸ ಇರುವಂತೆ ನಿರ್ದೇಶಕರ ಮನೆಗಳಿಗೆ ನಾಲ್ಕು ಬಾರಿ ತೆರಳಿ ಮತಯಾಚನೆ ಮಾಡಿದ ಪರಿಣಾಮ ನಮ್ಮ ತಂಡವು ಗೆಲುವು ಸಾಧಿಸಿದೆ ಎಂದು ಸಂಘದ ನೂತನ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಚುನಾವಣೆ ಮುಗಿದ ಬಳಿಕ ಯಾರನ್ನು ಯಾರೂ ದೂಷಿಸುವುದು ಬೇಡ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕೊಂಡು ಹೋಗೋಣ ಎಂದು ಮನವಿ ಮಾಡಿದರು. ಚುನಾವಣೆಯಲ್ಲಿ ರಾಜಕೀಯ ಪ್ರವೇಶ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, ಕೆಲವರು ಪರೋಕ್ಷವಾಗಿ ಸಹಕಾರ ನೀಡಿದರು. ಅವರಿಗೂ ಬೆಂಬಲ ನೀಡಿದರು. ರಾಜಕೀಯ ಧ್ರುವೀಕರಣ ಆದಾಗ ಅವರ ಬೆಂಬಲಿಗರು ಬರುವುದು ಸಹಜ. ನಮ್ಮ ತಂಡದ ಸದಸ್ಯರು ಯಾವುದೇ ಮತದಾರರಿಗೆ ಆಮಿಷವನ್ನು ಒಡ್ಡಲಿಲ್ಲ. ಬದಲಿಗೆ ನಿರ್ದೇಶಕರ ಮನೆಗೆ ನಾಲ್ಕು ಬಾರಿ ತೆರಳಿ ಮತಯಾಚನೆ ಮತ್ತು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗೆಲುವು ನಮ್ಮದಾಯಿತು ಎಂದರು. ಮುಂದಿನ ದಿನಗಳಲ್ಲಿ

ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಲ್ಲಾ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದರು. ಸರ್ಕಾರಿ ನೌಕರರ ಚುನಾವಣೆ ಪೂರ್ವ ಎಲ್ಲಾ ರಾಜಕೀಯ ನಾಯಕರನ್ನು ಭೇಟಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಲು ಕೋರಲಾಗಿದೆ. ಆದರೆ ಚುನಾವಣೆಯಲ್ಲಿ ಸೋತವರು ರಾಜಕೀಯ ಮೇಲಾಟದ ಕಾರಣ ನಮಗೆ ಸೋಲುಂಟಾಯಿತು ಎಂದು ಆರೋಪ ಮಾಡುವುದು ಸರಿಯಲ್ಲ ಎಂದರು. ಮುಂದಿನ ದಿನಗಳಲ್ಲಿ ನಾವು ಸಂಘದ ಕೆಲಸ ಮಾಡಬೇಕು ಎಂದು ಎಲ್ಲ ಪಕ್ಷಗಳ ರಾಜಕಾರಣಿಗಳ ಸಹಕಾರ ಬೇಕು. ಅವರು ಅನುದಾನ ನೀಡಿದರೆ ಅಭಿವೃದ್ಧಿ ಮಾಡಬಹುದು. ಇನ್ನು ಶಾಸಕರ ನಿಧಿಯಿಂದ ಅಭಿವೃದ್ಧಿಗೆ ೫ ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಸಮುದಾಯ ಭವನ, ಹಾಲ್, ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡುವುದಾಗಿ ವಿಶ್ವಾಸವ್ಯಕ್ತಪಡಿಸಿದರು. ಬಾರಿಯ ಚುನಾವಣೆಯಲ್ಲಿ ಎರಡು ಕಡೆಯಿಂದಲೂ ರಾಜಕೀಯ ಪ್ರವೇಶ ಆಗಿರುವುದು ದುರದೃಷ್ಟಕರ ಎಂದು ಹೇಳಿದ ಅವರು ರಾಜಕೀಯ ಹೊರತಾಗಿ ಸಂಘದ ಅಭಿವೃದ್ಧಿಗೆ ಎಲ್ಲರೂ ಕೆಲಸ ಮಾಡುವುದಾಗಿ ಮತ್ತು ಗೆಲುವಿಗೆ ಸಹಕರಿಸಿದ ಸರ್ಕಾರಿ ನೌಕರರು ನಿರ್ದೇಶಕರು ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಮುಂದೆ ಎಲ್ಲರ ಸಲಹೆ ಸಹಕಾರ ಪಡೆದು ಕೆಲಸ ಮಾಡುತ್ತೇವೆ. ಆದರೆ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ರಾಜಕೀಯ ಹೆಚ್ಚು ಸದ್ದು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಈ. ಕೃಷ್ಣೇಗೌಡ, ಖಜಾಂಚಿ ಹೇಮಂತ್ ಕುಮಾರ್, ಆಶಾ, ಗೋಪಾಲಕೃಷ್ಣ, ಕುಮಾರ್, ಲಕ್ಷ್ಮೀಕಾಂತ್, ವಿಷ್ಣು ಪ್ರಕಾಶ್ ಇತರರು ಉಪಸ್ಥಿತರಿದ್ರು.

ಕಾಂಗ್ರೆಸ್ ಜನಕಲ್ಯಾಣ ಸಮಾವೇಶಕ್ಕೆ ಸಕಲ ಸಿದ್ಧತೆ ಸಿಎಂ, ಡಿಸಿಎಂ, ವಿವಿಧ ಖಾತೆಯ ಸಚಿವರು, ಶಾಸಕರು ಬಾಗಿ
ಕಾಂಗ್ರೆಸ್ ಜನಕಲ್ಯಾಣ ಸಮಾವೇಶಕ್ಕೆ ಸಕಲ ಸಿದ್ಧತೆ ಸಿಎಂ, ಡಿಸಿಎಂ, ವಿವಿಧ ಖಾತೆಯ ಸಚಿವರು, ಶಾಸಕರು ಬಾಗಿ

ಹಾಸನ: ನಗರದ ಸಮೀಪ ಅರಸೀಕೆರೆ ರಸ್ತೆಯಲ್ಲಿರುವ ಎಸ್.ಎಂ. ಕೃಷ್ಣ ನಗರದಲ್ಲಿ ಇಂದು ಗುರುವಾರ ಹಮ್ಮಿಕೊಂಡಿರುವ ಕಾಂಗ್ರೆಸ್ ಜನಕಲ್ಯಾಣ ಸಮಾವೇಶಕ್ಕೆ ಈಗಾಗಲೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಖುದ್ಧಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ವೀಕ್ಷಣೆ ಮಾಡಿದಲ್ಲದೇ ಹಾಸನದಲ್ಲೆ ವಾಸ್ತವ ಮಾಡಿ ಗಮನಹರಿಸಿದ್ದಾರೆ.

ಬದಲಾದ ಹೆಸರಿನಡಿಯಲ್ಲಿ ನಡೆಯಲಿರೊ ಕೈ ಸಮಾವೇಶದ ಸಭಾಂಗಣದ ಮುಂದೆ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಜನಕಲ್ಯಾಣ ಸಮಾವೇಶ ಎಂದು ಬೃಹತಕಾರವಾಗಿ ಬ್ಯಾನರ್ ಹಾಕಲಾಗಿದೆ. ಸಮಾವೇಶ ನಡೆಸುವ ಆರಂಭದಲ್ಲಿ ಕಾಂಗ್ರೆಸ್ ಪಕ್ಷ ಹಾಗು ಸರ್ಕಾರದ ಹೊರತಾಗಿ ಸಮಾವೇಶ ನಡೆಸಲು ಸಿದ್ದು ಆಪ್ತರು ಪ್ಲಾನ್ ಮಾಡಿದ್ದರು. ಸಿದ್ದು ಹೆಸರಿನಲ್ಲಿ ಪಕ್ಷದ ಹೊರತಾಗಿ ಕಾರ್ಯಕ್ರಮ ನಡೆಸಲು ಕೆಪಿಸಿಸಿ ಸಮ್ಮತಿಸಿದೆ. ಕೆಪಿಸಿಸಿ ಅಡಿಯಲ್ಲಿ ಇತರೆ ಸಂಘಟನೆ ಸೇರಿಸಿ ಜಂಟಿ ಕಾರ್ಯಕ್ರಮಕ್ಕೆ ಅಸ್ತು ನೀಡಿದೆ. ಇದು ಕಾಂಗ್ರೆಸ್ ಪಕ್ಷದ ಜನ ಕಲ್ಯಾಣ ಸಮಾವೇಶ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದೆ. ಇದು ದಾವಣಗೆರೆ ಯ ಸಿದ್ದರಾಮೋತ್ಸವ ಮಾದರಿಯ ಕಾರ್ಯಕ್ರಮ ಎಂದ ಸಿದ್ದು ಆಪ್ತ ಕೆ.ಎನ್. ರಾಜಣ್ಣ ಹಾಸನಕ್ಕಷ್ಟೇ ಈ ಸಮಾವೇಶ ಸೀಮಿತ ಎಂದು ಇಂತಹ ಕಾರ್ಯಕ್ರಮ ಎಲ್ಲಾ ಕಡೆ ನಡೆಯಲಿದೆ ಎಂದಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳ ಕೆಲವರು ಬರ್ತಾರೆ ಎಂದಿದ್ದ ಡಿ.ಕೆ. ಶಿವಕುಮಾರ್, ಹಳೆ ಮೈಸೂರು ಭಾಗದ ಆರು ಜಿಲ್ಲೆ ಅಷ್ಟೆ ಅಲ್ಲ ತುಮಕೂರು ಸೇರಿ ರಾಜ್ಯದ ಎಲ್ಲಾ ಕಡೆಯಿಂದಲೂ ಜನ ಬರ್ತಾರೆ ಎಂದು ಹೇಳಿದ ಹಾಸನ ಉಸ್ತುವಾರಿ ಸಚಿವ ರಾಜಣ್ಣ. ನೆನ್ನೆ ಸಮಾವೇಶದ ಅಂತಿಮ ಹಂತದ ತಯಾರಿ ಬಗ್ಗೆ ಪರಿಶೀಲನೆಯನ್ನು ರಾಜಣ್ಣ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಎಲ್ಲೆಡೆ ಇರ್ತಾರೆ. ನಾಳೆ ಹಾಸನದ ಅರಸೀಕೆರೆ ರಸ್ತೆಯ ಎಸ್ ಎಂ ಕೃಷ್ಣ ಬಡಾವಣೆಯ ಬೃಹತ್ ಮೈದಾನದಲ್ಲಿ ನಡೆಯಲಿರೊ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಿದ್ದತೆ ಪೂರ್ಣಗೊಂಡಿದೆ. ಎಲ್ಲೆಡೆ ಕೈ ನಾಯಕರ ಫ್ಲೆಕ್ಸ್ ಹಾಗು ಬ್ಯಾನರ್ ಗಳು ರಾರಾಜಿಸುತ್ತಿದೆ. ಸ್ವಾಭಿಮಾನಿ ಸಮಾವೇಶ ಎಂಬ ಹೆಸರಿನಲ್ಲೇ ಬಹುತೇಕ ಫ್ಲೆಕ್ಸ್ ಬ್ಯಾನರ್ ಪ್ರಿಂಟ್ ಮಾಡಲಾಗಿದೆ. ಆರಂಭದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಹಾಗು ಅಭಿಮಾನಿಗಳ ಸ್ವಾಭಿಮಾನಿ ಸಮಾವೇಶ ಎಂದೇ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಆಪ್ತ ಸಚಿವರು, ನಂತರ ಕಾರ್ಯಕ್ರಮವನ್ನು ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಜನ ಕಲ್ಯಾಣ ಸಮಾವೇಶ ಎಂದು ನಾಮಕರಣ ಮಾಡಲಾಗಿದೆ.

ಹಾಸನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಸಮಾವೇಶಕ್ಕೆ ಶುಭಕೋರಿ ಕೈ ನಾಯಕರಿಂದ ನಾನಾ ರೀತಿಯ ಫ್ಲೆಕ್ಸ್ ಹಾಕಲಾಗಿದೆ. ಇನ್ನು ಬಿ.ಎಂ. ರಸ್ತೆ ಉದ್ದಲಕ್ಕೂ ಕಾಂಗ್ರೆಸ್ ನಾಯಕರ ಮುಖಂಡರ ಪ್ರಕ್ಸ್ ಮತ್ತು ಬ್ಯಾನರ್ ಹಾಗೂ ಪಕ್ಷದ ಬಾವುಟ ರಾರಾಜಿಸುತಿತ್ತು. ನಗರದ ಅರಸೀಕೆರೆ ರಸ್ತೆ ತುಂಬೆಲ್ಲಾ ಆವರಿಸಿಕೊಂಡಿರೊ ಫ್ಲೆಕ್ಸ್ ಗಳು. ಸಮಾವೇಶ ಹೆಸರಿನ ಗೊಂದಲ ಹಿನ್ನೆಲೆಯಲ್ಲಿ ನಾನಾ ಹೆಸರಿನ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಇಂದು ಗುರುವಾರದಂದು ಹಾಸನಕ್ಕೆ ಆಗಮಿಸಲಿರೊ ಕಾಂಗ್ರೆಸ್ ನ ಹಲವು ನಾಯಕರು, ಸಿಎಂ ,ಡಿಸಿಎಂ, ಗೃಹ ಸಚಿವ ಸೇರಿ ಸಚಿವರ ದಂಡು ಆಗಮಿಸಲಿದೆ. ಎರಡು ಲಕ್ಷ ಜನರ ನಿರೀಕ್ಷೆಯಲ್ಲಿ ತಯಾರಿಯನ್ನು ಕೈ ನಾಯಕರು ನಡೆಸಿದ್ದಾರೆ. ಸಮಾವೇಶ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲಾಗಿದ್ದು,

ಐವರು ಎಸ್ಪಿ, ಆರು ಎಎಸ್ಪಿ, ೧೨ ಡಿವೈಎಸ್ಪಿ, ೩೦ಕ್ಕು ಹೆಚ್ಚು ಇನ್ಸ್ಪೆಕ್ಟರ್, ೮೦ಕ್ಕೂ ಹೆಚ್ಚು ಪಿಎಸ್ ಐ ಹಾಗೂ ಸುಮಾರು ೨೦೦೦ ಕ್ಕೂ ಅದಿಕ ಪೊಲೀಸರ ನಿಯೋಜನೆ ಮಾಡಿ ಭದ್ರತೆ ವ್ಯವಸ್ಥೆ ಕೊಡಲಾಗಿದೆ.

ಜನಕಲ್ಯಾಣ ಎನ್ನುವ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶ ಖಂಡಿಸುತ್ತೇವೆ: ಶಾಸಕ ಹೆಚ್.ಪಿ. ಸ್ವರೂಪ್ ಹೇಳಿಕೆ
ಹಾಸನ: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರವರ ಕಾಂಗ್ರೆಸ್ ಸರಕಾರ ದಿವಾಳಿ ಆಗಿಹೋಗಿದ್ದರೂ ಕೂಡ ನಮ್ಮ ಸರಕಾರದಲ್ಲಿ ಜನಕಲ್ಯಾಣ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಹಾಸನದಲ್ಲಿ ಮಾಡಲಾಗುತ್ತಿರುವ ಸ್ವಾಭಿಮಾನಿ ಸಮಾವೇಶವನ್ನು ಜೆಡಿಎಸ್ ಪಕ್ಷದಿಂದ ಖಂಡಿಸುತ್ತೇವೆ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಮೂರು ಉಪಚುನಾವಣೆ ಗೆದ್ದಿದ್ದೇವೆ. ಮಂಡ್ಯದಲ್ಲಿ ಕೂಡ ಒಬ್ಬರೂ ಮಾತ್ರ ಜೆಡಿಎಸ್ ಶಾಸಕರು ಬಿಟ್ಟರೇ ಉಳಿದ ಎಲ್ಲಾರು ಕಾಂಗ್ರೆಸ್ ಶಾಸಕರು ಇದ್ದೇವೆ. ಹಳೆ ಮೈಸೂರಿನಲ್ಲಿಯೂ ಕೂಡ ಕಾಂಗ್ರೆಸ್ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ. ಹಾಸನದಲ್ಲಿ ಒಬ್ಬರೂ ಕಾಂಗ್ರೆಸ್ ಶಾಸಕರು ಮತ್ತು ಸಂಸದರು ಇದ್ದು, ಇಲ್ಲಿ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾಂಗ್ರೆಸ್ ಸಮಾವೇಶ ಇಲ್ಲೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಇದೊಂದು ಹಾಸ್ಯಸ್ಪದ ಹೇಳಿಕೆಯಾಗಿದ್ದು, ಹಾಸನ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅನುಧಾನ ಬಿಡುಗಡೆ ಮಾಡಿದ್ದಾರ ಬಗ್ಗೆ ಡಿಸೆಂಬರ್ ೫ರ ಸಮಾವೇಶದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಹೇಳಬೇಕೆಂದು ಸವಾಲು ಹಾಕಿದರು. ನಗರದ ವಿಮಾನ ನಿಲ್ದಾಣ, ಪ್ರೈ ಓವರ್, ಹೈಟೆಕ್ ಆಸ್ಪತ್ರೆ ಕಟ್ಟಡಗಳು, ರಸ್ತೆ ದುರಸ್ತಿ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ಅಗತ್ಯ  ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಹೀಗಿರುವಾಗ ಸಮಾವೇಶ ಮಾಡುವ ಮುನ್ನ ಸರ್ಕಾರ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಯಾವುದೇ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಅನುದಾನವನ್ನೂ ಸಮರ್ಪಕವಾಗಿ ಬಿಡುಗಡೆ ಮಾಡುತ್ತಿಲ್ಲ. ಈ ವ? ಕೇವಲ ಒಂದು ಕೋಟಿ ರೂ. ನೀಡಿದ್ದಾರೆ. ಅದು ಸಹ ಅಸಮಾರ್ಪವಾಗಿದೆ. ಅಯಾ ಕ್ಷೇತ್ರದಲ್ಲಿ ಶಾಸಕರೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗದೇ ತೊಂದರೆ ಅನುಭಿಸುತ್ತಿದ್ದಾರೆ. ಇವರಲ್ಲಿ ಕಾಂಗ್ರೆಸ್ ಶಾಸಕರು ಸಹ ಒರತಾಗಿಲ್ಲ ಸರ್ಕಾರ ಮೊದಲು ಜಿಲ್ಲೆಯ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಿ ಈ ಕುರಿತು ಮುಂದಿನ ಚಳಿಗಾಲದ ಅಧಿವೇಶನದಲ್ಲಿಯೂ ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು. ಕಾಂಗ್ರೆಸ್ ಪಕ್ಷ ಜನಕಲ್ಯಾಣ ಸಮಾವೇಶ ಎಂದು ಹೆಸರಿಟ್ಟಿದೆ ಆದರೆ ಜನರ ಕಲ್ಯಾಣಕ್ಕಾಗಿ ಯಾವುದೇ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಕೇವಲ ತಮ್ಮ ಪಕ್ಷದ ಪ್ರಚಾರಕ್ಕೋಸ್ಕರ ಈ ಸಮಾವೇಶವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಈ ಸಮಾವೇಶವನ್ನು ಮಾಡಲಾಗುತ್ತಿದೆ. ಇದರಲ್ಲಿ ಜಿಲ್ಲಾಡಳಿತ ಹಾಗೂ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದ ಅವರು ಇತ್ತೀಚಿಗೆ ನಡೆದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ ಆದರೆ ಸರ್ಕಾರ ಆಡಳಿತದಲ್ಲಿ ಇರುವಾಗ ಆಯಾ

ಪಕ್ಷಗಳು ಗೆಲ್ಲುವುದು ಸಾಮಾನ್ಯ ಜನರ ಆದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು ಮೂರು ಚುನಾವಣೆಗಳಲ್ಲಿ ಗೆದ್ದ ಮಾತ್ರಕ್ಕೆ ರಾಜ್ಯದ ಜನ ತಮ್ಮ ಪರ ಇದ್ದಾರೆ ಎಂದು ಹೇಳಿಕೊಳ್ಳುವುದು ತರವಲ್ಲ. ಜೆಡಿಎಸ್ ನ ಯಾವುದೇ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕ ಸ್ವರೂಪ್, ನಾನಾಗಲಿ ಸಮೃದ್ಧಿ ಮಂಜುನಾಥ್ ಆಗಲಿ ಶರಣ ಗೌಡ ಕುಂದಾಪುರ ಆಗಲಿ ನಾವೆಲ್ಲರೂ ಯುವ ಶಾಸಕರು ಸ್ನೇಹಿತರು ಆಗಿದ್ದೇವೆ ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷವನ್ನು ತೊರೆಯುವುದಿಲ್ಲ ಎಂದು ವಿಶ್ವಾಸವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾ ವಕ್ತಾರ ಹೊಂಗೆರೆ ರಘು, ನಗರಸಭೆ ಮಾಜಿ ಸದಸ್ಯ ಶ್ರೇಯಸ್ ಇತರರು ಉಪಸ್ಥಿತರಿದ್ದರು.

ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆ.ಎಂ. ಶ್ರೀನಿವಾಸ್ ನಾಮಪತ್ರ ಸಲ್ಲಿಕೆ
ಹಾಸನ: ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿದ್ದು, ಈ ನಡುವೆ ಹೆಚ್ಚಿನ ನಿರ್ದೇಶಕರ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಬುಧವಾರದಂದು ಸಂಘದ ಭವನದಲ್ಲಿ ಕೆ.ಎಂ. ಶ್ರೀನಿವಾಸ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಖಜಾಂಚಿ ಸ್ಥಾನಕ್ಕೆ ಎಸ್. ಮಧು, ರಾಜ್ಯ ಪರಿಷತ್ತು ಸ್ಥಾನಕ್ಕೆ ಟಿ. ರಾಜು ಅವರು ನಾಮಪತ್ರ ಸಲ್ಲಿಕೆ ಮಾಡಿದರು.

ಸರಕಾರಿ ನೌಕರರ ಸಂಘದ ಚುನಾವಣೆ ಅಧ್ಯಕ್ಷ ಆಕಾಂಕ್ಷಿ ಕೆ.ಎಂ. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ೨೦೨೪-೨೯ನೇ ಸಾಲಿನ ನೌಕರರ ಸಂಘದ ಚುನಾವಣೆಯಲ್ಲಿ ಆಯ್ಕೆ ಆಗಿರುವ ಎಲ್ಲಾ ನಿರ್ದೇಶಕರಿಗೆ ಅಭಿನಂದನೆ ತಿಳಿಸುತ್ತೇವೆ. ಡಿಸೆಂಬರ್ ೪ ರಂದು ನಡೆಯುವ ಪದಾಧಿಕಾರಿಗಳ ಚುನಾವಣೆಯಲ್ಲಿ ನಾನು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಜೊತೆಯಲ್ಲಿ ನನ್ನ ಆತ್ಮಿಯರು ಆದ ಎಸ್. ಮಧು ಖಜಾಂಚಿ ಸ್ಥಾನಕ್ಕೆ, ಟಿ. ರಾಜು ಅವರು ರಾಜ್ಯ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಈ ತಂಡವನ್ನು ಎಲ್ಲಾ ನಿದೇಶಕರು ಸ್ವಾಭೀಮಾನದ ತಂಡ ಎಂದು ಆಯ್ಕೆ ಮಾಡಿ ಸಂಘವನ್ನು ಸಂಘಟನೆ ಮಾಡುವುದಕ್ಕೆ ಶಕ್ತಿ ತುಂಬುವಂತೆ ಎಲ್ಲಾ ಆತ್ಮಿಯರಲ್ಲಿ ನಿರ್ದೇಶಕರಿಗೆ ಮನವಿ ಮಾಡುವುದಾಗಿ ಹೇಳಿದರು. ಸರಕಾರಿ ನೌಕರರ ಚುನಾವಣೆಯು ಬಂಡವಾಳ ಶಾಹಿಗಳ ಹಣಬಲ - ಜನಬಲದ ನಡುವೆ ಸ್ಪರ್ದೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಸಮಸ್ತ ನೌಕರರ ಅಭಿಪ್ರಾಯ ಸಂಗ್ರಹಿಸಿ ಎಲ್ಲಾರ ಸಹಕಾರದಲ್ಲಿ ಇಲಾಖೆಯ ಎಲ್ಲಾ ಸರಕಾರಿ ನೌಕರರು ನಮ್ಮ ತಂಡಕ್ಕೆ ಮತ ನೀಡುವಂತೆ ನಿರ್ದೇಶಕರು ಯಾವ ಆಮಿಷಕ್ಕೆ ಒಳಗಾಗದೇ ಇರಲು ತಿಳಿ ಮಾತು ಹೇಳಿ ಮನವೊಲಿಸುವಂತೆ ಮನವಿ ಮಾಡಿದರು. ೬೦ ರಿಂದ ೬೫ ನಿರ್ದೇಶಕರು ದೃತಿಗೆಡದೆ ಯಾವ ಒತ್ತಡಕ್ಕೆ ಮಣಿಯದೆ ಎಲ್ಲಾ ನಿರ್ದೇಶಕರು ನಮ್ಮ ತಂಡಕ್ಕೆ ಮತ ನೀಡಿ ಹೆಚ್ಚುನ ಮತಗಳಲ್ಲಿ ಜಯಶೀಲರನ್ನಾಗಿ ಮಾಡಿ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಇದೆ ವೇಳೆ ಜಿಲ್ಲಾ ಸರಕಾರಿ ನೌಕರರ ಸಂಘದ ಮಧು, ರಘು, ಪ್ರದೀಪ್, ರಾಜು, ವಿಶ್ವನಾಥ್, ಯಶೋಧರ್, ಗಿರೀಶ್ ಇತರರು ಉಪಸ್ಥಿತರಿದ್ದರು.

ಹಾಸನ: ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡ ಆನ್‌ಲೈನ್‌ ರಮ್ಮಿ ಚಟ
ಹಾಸನ: ಎರಡೆರಡು ಯೆಲ್ಲೋ ಬೋರ್ಡ್‌ ಕಾರಿನೊಂದಿಗೆ ಒಳ್ಳೆಯ ಸಂಪಾದನೆ, ಟೀಚರ್‌ ಕೆಲಸಕ್ಕೆ ಹೋಗಿ ಸಂಪಾದನೆ ಮಾಡಿ ತರುವ ಪತ್ನಿ ಇದ್ದೂ ಸಾಲಗಾರರ ಕಾಟ ತಡೆಯಲಾರದೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಗಳೊಂದಿಗೆ ಸೇರಿ ಕೆರೆಗೆ ಹಾರಿ ಜೀವ ಬಿಟ್ಟಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ, ಕೆರೆಬೀದಿಯಲ್ಲಿ ನಡೆದಿದೆ.

ಈ ಸಾವಿಗೆ ನೇರವಾಗಿ ಕಾರಣವಾಗಿದ್ದು ಮೊಬೈಲ್‌ ತೆರೆದರೆ ಕಾಣಿಸಿಕೊಳ್ಳುವ ಆನ್ಲೈನ್‌ ರಮ್ಮಿ ಅಪ್ಲಿಕೇಷನ್‌ ಎನ್ನುವುದು ದುರಂತ. ಆನ್ಲೈನ್‌ ಗೇಮ್‌ಗಳ ಹಾವಳಿಗೆ ಈಗಾಗಲೇ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ಜಾಗೃತಿಗಳೂ ನಡೆಯುತ್ತಿವೆ. ಆದರೆ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ನಡುವೆ ಇಂತಹ ಪ್ರಾಣಕಂಟಕ ಜುಗಾರಿ ಆಟಗಳ ಜಾಹೀರಾತು ರೂಪದರ್ಶಿಗಳಾಗಿ ಕಾಣಿಸಿಕೊಳ್ಳುತ್ತಿರುವವರಿಗೂ ಕಡಿಮೆಯಿಲ್ಲ.

ಇನ್ನು ಘಟನೆಯತ್ತ ಗಮನಹರಿಸುವುದಾದರೆ ಶ್ರೀನಿವಾಸ್ (43), ಪತ್ನಿ ಶ್ವೇತಾ (36) ಹಾಗೂ ಪುತ್ರಿ ನಾಗಶ್ರೀ (13) ಮೃತ ದುರ್ದೈವಿಗಳು. ಶ್ರೀನಿವಾಸ್ ಕಾರು ಚಾಲಕರಾಗಿದ್ದು, ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪುತ್ರಿ ನಾಗಶ್ರೀ ಏಳನೇ ತರಗತಿ ಓದುತ್ತಿದ್ದಳು.

ಬೆಂಗಳೂರಿನಲ್ಲಿ ಕಾರು ಓಡಿಸಿಕೊಂಡಿದ್ದ ಶ್ರೀನಿವಾಸ್‌ ಕೊರೋನಾ ಸಮಯದಲ್ಲಿ ಊರಿಗೆ ಬಂದವರು ಮತ್ತೆ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದಿದ್ದರು. ಹೀಗೆ ಮನೆಯಲ್ಲೇ ಇದ್ದ ಶ್ರೀನಿವಾಸ್‌ ಆನ್ಲೈನ್‌ ರಮ್ಮಿ ಚಟಕ್ಕೆ ಬಿದ್ದಿದ್ದರು. ಆಟದ ಸಲುವಾಗಿ ಊರೆಲ್ಲ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಒತ್ತಡ ಹೆಚ್ಚಾದ ಕಾರಣ ಪತ್ನಿ ಹಾಗೂ ಮಗಳೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರದಂದು ದಂಪತಿ ಮಗಳೊಂದಿಗೆ ಹೊರಗೆ ಹೋದವರು ರಾತ್ರಿಯಾದರೂ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಪೊಲೀಸ್‌ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ಸಲ್ಲಿಸಿದ್ದರು.

ಪೊಲೀಸರು ಹುಡುಕಾಟ ನಡೆಸಿದ್ದು ಬುಧವಾರ ಸಂಜೆ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ಹೇಮಾವತಿ ನಾಲೆಯಲ್ಲಿ ಶ್ರೀನಿವಾಸ್, ಶ್ವೇತಾ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳದ‌ ಸಿಬ್ಬಂದಿ ಹಾಗೂ ಪೊಲೀಸರು ಎರಡು ಮೃತದೇಹಗಳನ್ನು ಹೊರತೆಗೆದಿದ್ದು, ಬಾಲಕಿ ನಾಗಶ್ರೀ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 – 25497777.

ಹಾಸನ : ಪತ್ರಕರ್ತರ ಮೇಲೆ ದಬ್ಬಾಳಿಕೆ : ಪಿಎಸ್ಐ ದರ್ಪಕ್ಕೆ ಆಕ್ರೋಶ
ಹಾಸನ : ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸುವ ವೇಳೆಯಲ್ಲಿ ಫೋಟೊ ಕ್ಲಿಕ್ಕಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತ, ದಿನಪತ್ರಿಕೆ ಸಂಪಾದಕ ಬ್ಯಾಕರವಳ್ಳಿ ವೆಂಕಟೇಶ್ ಅವರಿಗೆ ಪಿಎಸ್ಐ ಅಧಿಕಾರಿಯೊಬ್ಬರು ಬೆದರಿಕೆ ಹಾಕಿರುವ ಘಟನೆ ಹಾಸನದ ವಾರ್ತಾ ಇಲಾಖೆ ಮುಂಭಾಗ ನಡೆದಿದೆ.

ಹಾಸನದ ವಾರ್ತಾ ಇಲಾಖೆ ಮುಂಭಾಗ ಹಣ್ಣು ಮಾರಾಟ ಮಾಡುತ್ತಿದ್ದ ಆಟೋವೊಂದನ್ನು ಪೊಲೀಸರು ತೆರವುಗೊಳಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆಗ ಅಲ್ಲಿಯೇ ಇದ್ದ ವೈಚಾರಿಕ ದಿನಪತ್ರಿಕೆ ಸಂಪಾದಕ ಬ್ಯಾಕರವಳ್ಳಿ ವೆಂಕಟೇಶ್ ಫೋಟೋ ಕ್ಲಿಕ್ಕಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್ಐ ಮಣಿ ವೆಂಕಟೇಶ್ ಅವರನ್ನು ಕಟುವಾಗಿ ನಿಂದಿಸಿದ್ದಾರೆ.

ಪತ್ರಕರ್ತ ಎಂದು ಗುರುತಿನ ಕಾರ್ಡ್ ತೋರಿಸಿದರೆ ಅದನ್ನೂ ಕಿತ್ತುಕೊಂಡಿದ್ದಾರೆ. ನಿಮಗೆ ಫೋಟೋ ತೆಗೆಯುವುದಕ್ಕೆ ಪರ್ಮೀಷನ್ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ್ದಾರೆ. ಅಲ್ಲಿದ್ದ ಇತರ ಪತ್ರಕರ್ತರನ್ನೂ ಬೆದರಿಸಿದ್ದಾರೆ. ಇದರಿಂದ ವಿಚಲಿತರಾದ ವೆಂಕಟೇಶ್ ಸಮಾಧಾನದಿಂದ ಉತ್ತರಿಸಿದರೂ ಯಾವುದೇ ಉಪಯೋಗ ಆಗಿಲ್ಲ.

ಪತ್ರಕರ್ತರು ಫೋಟೋ ಕ್ಲಿಕ್ಕಿಸಲು ಯಾರಿಂದ ಮತ್ತು ಎಲ್ಲಿಂದ ಅನುಮತಿ ಪಡೆಯಬೇಕು? ಯಾವ ಯಾವ ಸ್ಥಳದಲ್ಲಿ ಮಾತ್ರ ಫೋಟೋ ತೆಗೆಯಬಹುದು? ನಮ್ಮ ಕೆಲಸ ನಾವು ಮಾಡಲು ಪಿಎಸ್ಐ ಮಣಿ ಅವರ ಅನುಮತಿ ಕಡ್ಡಾಯವೇ? ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಇಂತಹ ಸರ್ವಾಧಿಕಾರಿ ಧೋರಣೆಯ ಅಧಿಕಾರಿಗಳಿಂದ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರು ಬರಲು ಸಾಧ್ಯವಿಲ್ಲ. ತಕ್ಷಣವೇ PSI ಮಣಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಪತ್ರಕರ್ತರು ಆಗ್ರಹಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ (ಅದರಲ್ಲೂ ಯಾವ ನಿರ್ಬಂಧವೂ ಇಲ್ಲದ ಜಾಗದಲ್ಲಿ) ಫೋಟೋ ತೆಗೆಯಲು ಯಾರು ಪರ್ಮಿಷನ್ ಕೊಟ್ಟಿದ್ದಾರೆ? ಎಂದು ಪ್ರಶ್ನಿಸುವಷ್ಟು ದಡ್ಡತನ ಪ್ರದರ್ಶಿಸುವವರು ಹೇಗೆ ಪೊಲೀಸ್ ಇಲಾಖೆಯಲ್ಲಿ ಆ ಹುದ್ದೆ ಯಲ್ಲಿರಲು ಸಾಧ್ಯ ಎನ್ನುವ ಮೂಲಕ ಹಾಸನ ಪತ್ರಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಮೂಲತಃ ಮಂಡ್ಯದಲ್ಲಿ ಕರ್ತವ್ಯ ನಿರತರಾಗಿರುವ ಪಿಎಸ್ಐ ಮಣಿ, ಹಾಸನಾಂಬ ಜಾತ್ರೆಯ ಉತ್ಸವದ ಭದ್ರತಾ ಜವಾಬ್ದಾರಿಯ ಹಿನ್ನೆಲೆಯಲ್ಲಿ ನಿಯೋಜನೆಗೊಂಡವರಾಗಿದ್ದಾರೆ. ಪಿಎಸ್ಐ ಮಣಿ ಅವರ ವರ್ತನೆಗೆ ಹಾಸನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರಿಗೆ ಘಟನೆ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ನ್ಯಾಯ ಕೊಡಿಸುವ ಬಗ್ಗೆ ಒತ್ತಡ ಬಿದ್ದಿದೆ.

ಹಾಸನ : ಬಿಜೆಪಿ ಜೆಡಿಎಸ್ ಮೈತ್ರಿ; ಕಾಂಗ್ರೆಸ್ ಕಡೆ ಮುಖ ಮಾಡ್ತಾರಾ ಪ್ರೀತಂ ಗೌಡ!
ಲೋಕಸಭಾ ಚುನಾವಣೆ ಎದುರಾಗುತ್ತಿದ್ದಂತೆ ಬಲಿಷ್ಠ ಪಕ್ಷವಾದ ಕಾಂಗ್ರೆಸ್ಸನ್ನು ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಬಗ್ಗೆ ಒಂದೊಂದೇ ನಾಯಕರು ತಮ್ಮ ತಮ್ಮ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಆದರೆ ಜೆಡಿಎಸ್ ತವರುಮನೆಯಂತಿರುವ ಹಾಸನದಲ್ಲಿ ಮಾತ್ರ ಬಿಜೆಪಿ ಕಟ್ಟಿ ಬೆಳೆಸುತ್ತಿರುವ ಪ್ರೀತಂ ಗೌಡ ಮೈತ್ರಿಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ.

ಒಂದು ಕಡೆ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರಂತರವಾಗಿ ದೆಹಲಿಗೆ ತೆರಳಿ, ಬಿಜೆಪಿ ನಾಯಕರ ಭೇಟಿ ಮಾಡುತ್ತಿದ್ದಾರೆ. ಇತ್ತ ರಾಜ್ಯದ ಹೆಚ್ಚಿನ ನಾಯಕರು ಜೆಡಿಎಸ್ ಪಕ್ಷಕ್ಕೆ ಒಂದಷ್ಟು ಕ್ಷೇತ್ರ ಬಿಟ್ಟು ಕಾಂಗ್ರೆಸ್ ಎದುರಿಸಲು ಮುಂದಾಗು ಇಂಗಿತ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮೈತ್ರಿ ಆಗೇ ಬಿಟ್ಟಿತು, ಕ್ಷೇತ್ರಗಳ ಚರ್ಚೆ ನಡೆಯುತ್ತಿದೆ ಎನ್ನುವ ಬಗ್ಗೆಯೂ ಬಿಸಿಬಿಸಿ ಚರ್ಚೆ ಮುಂದಾಗಿದೆ.

ಈ ನಡುವೆ ಮೂಲದಿಂದಲೂ ಜೆಡಿಎಸ್ ಪಕ್ಷಕ್ಕೆ ಸಡ್ಡು ಹೊಡೆದೇ ತನ್ನ (ಬಿಜೆಪಿ) ಅಸ್ತಿತ್ವ ಸ್ಥಾಪಿಸಿಕೊಂಡು ಬಂದ, ಹಾಗೆಯೇ ಜೆಡಿಎಸ್ ಭದ್ರಕೋಟೆಯಂತಿದ್ದ ಹಾಸನದಲ್ಲೇ ಬಿಜೆಪಿ ಸ್ಥಾನ ಗಿಟ್ಟಿಸಲು ಯಶಸ್ವಿಯಾದ ಪ್ರೀತಂ ಗೌಡ ಮಾತ್ರ ತಮ್ಮ ರಾಜ್ಯ ಮತ್ತು ರಾಷ್ಟ್ರ ನಾಯಕರ ವಿರುದ್ಧ ತಿರುಗಿ ನಿಂತಿದ್ದಾರೆ. ಆ ಮೂಲಕ ಜೆಡಿಎಸ್ ಬಿಜೆಪಿ ಮೈತ್ರಿಗೆ ನನ್ನ ಸಮ್ಮತಿ ಇಲ್ಲ ಎಂದು ತಮ್ಮ ನಿಲುವು ಹೊರಹಾಕಿದ್ದಾರೆ.

‘ಮೈತ್ರಿ ಬಗ್ಗೆ ನಿರ್ಧಾರ ತಗೆದುಕೊಳ್ಳುವ ನಾಯಕರು ಯಾರೂ ಸಹ ನನ್ನ ಬಳಿ ಈ ವರೆಗೆ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಈ ನಡುವೆ ಮೈತ್ರಿ ಬಗ್ಗೆ ಯಾರು ಪ್ರಸ್ತಾಪಿಸಿದ್ದಾರೆ ಎಂಬುದು ಸ್ಪಷ್ಟಪಡಿಸಬೇಕು. ಯಾರಿಗೋ ಕಷ್ಟ ಇದೆ ಎಂದ ಮಾತ್ರಕ್ಕೆ ಮೈತ್ರಿ ಮಾಡಿಕೊಳ್ಳುವುದು ಸೂಕ್ತ ಅಲ್ಲ’ ಎಂದು ತಮ್ಮ ನಿರ್ಧಾರ ತಿಳಿಸಿದ್ದಾರೆ.

‘ನಾವು ಕುಟುಂಬ ರಾಜಕಾರಣದ ವಿರುದ್ಧ ಹೋರಾಡುತ್ತಾ ಬಂದವರು. ಜೆಡಿಎಸ್ ಕುಟುಂಬ ರಾಜಕಾರಣವನ್ನು ಜಿಲ್ಲೆಯಾದ್ಯಂತ ಮಾಡುತ್ತಾ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಕೈ ಜೋಡಿಸಿ ಅವರ ಪಕ್ಷ ಬೆಳೆಸುವುದಾದರೆ ನಾನ್ಯಾಕೆ ಇಲ್ಲಿ ರಾಜಕಾರಣ ಮಾಡ್ಕೊಂಡು ಬರಬೇಕು. ಇದನ್ನು ನಾನು ಒಪ್ಪುವುದಿಲ್ಲ’ ಎಂದು ಜೆಡಿಎಸ್ ಜೊತೆಗಿನ ಮೈತ್ರಿಗೆ ಬಿಜೆಪಿ ಮಾಜಿ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ ಬಿಜೆಪಿ ಪಕ್ಷದ ದ್ವಂದ್ವ ನಿಲುವುಗಳು, ಹಾಸನ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಬಿಜೆಪಿ ನಾಯಕರು ತೋರುತ್ತಿರುವ ಅಸಹಕಾರದ ಬಗ್ಗೆ ಪ್ರೀತಂ ಗೌಡ ತಮ್ಮ ಆಪ್ತರೊಂದಿಗೆ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪ್ರಸ್ತುತ ಸನ್ನಿವೇಶ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಯಾವುದೇ ಪೂರಕ ವಾತಾವರಣ ಇಲ್ಲದ ಹಿನ್ನೆಲೆಯಲ್ಲಿ, ಜೊತೆಗೆ ಮೈತ್ರಿ ಮಾತುಕತೆ ಬಗ್ಗೆ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರುವ ಬಗ್ಗೆಯೂ ಪ್ರೀತಂ ಗೌಡ ಆಸಕ್ತಿ ತೋರಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹಾಗೊಂದು ವೇಳೆ ಪ್ರೀತಂ ಗೌಡ ಕಾಂಗ್ರೆಸ್ ಸೇರ್ಪಡೆಯಾದರೆ ತನ್ನ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್ ಪಕ್ಷವನ್ನು ಸಮರ್ಥವಾಗಿ ಎದುರಿಸಲು ತಂಡ ಕಟ್ಟಲು ಪ್ರೀತಂ ಗೌಡಗೆ ಒಂದೊಳ್ಳೆ ವಾತಾವರಣ ಸೃಷ್ಟಿಯಾಗಬಹುದು. ಇತ್ತ ಅರಸೀಕೆರೆ ಶಿವಲಿಂಗೇಗೌಡ, ಹೊಳೆನರಸೀಪುರದ ಶ್ರೇಯಸ್ ಪಟೇಲ್, ಹಾಸನದ ಬನವಾಸೆ ರಂಗಸ್ವಾಮಿ ಸೇರಿದಂತೆ ಘಟಾನುಘಟಿಗಳ ಜೊತೆಗೆ ಕೈಜೋಡಿಸಿದರೆ ಜೆಡಿಎಸ್ ಪಕ್ಷಕ್ಕೆ ಸರಿಯಾಗಿ ಠಕ್ಕರ್ ಕೊಡಬಹುದು ಎಂಬ ನಿರೀಕ್ಷೆ ಕೂಡಾ ಪ್ರೀತಂ ಗೌಡ ಅವರಿಗೆ ಇದ್ದಂತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹಾಸನ| ದೇವಸ್ಥಾನದಲ್ಲಿ ಪರಿಶಿಷ್ಟ ಸಮುದಾಯದ ವ್ಯಕ್ತಿಯ ಮೇಲೆ ಹಲ್ಲೆ, ಜಾತಿನಿಂದನೆ: ದೂರು ದಾಖಲು
ಹಾಸನ: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕುರಗುಂದ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದ ಪರಿಶಿಷ್ಟ ಸಮುದಾಯದ ರವಿಸಿದ್ದಯ್ಯ ಎಂಬುವವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಕುರಿತು ಜಾವಗಲ್‌ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಆ.5 ರಂದು ಅವರು ದರ್ಶನಕ್ಕೆಂದು ಹೋದಾಗ, ಅದೇ ಗ್ರಾಮದ ಹೇಮಂತ, ಪ್ರವೀಣ, ರಮೇಶರೆಡ್ಡಿ, ಪ್ರತಾಪ್, ಮಹದೇವಪ್ಪ, ಮನೋಜ, ಸುನಿಲ್, ಅಮಿತ್, ಸಂಜು, ರವಿಕುಮಾರ, ರೇಣುಕ ಎಂಬುವವರು ತಡೆಯೊಡ್ಡಿದ್ದರು.

‘ಟವೆಲ್‍ನಿಂದ ಕುತ್ತಿಗೆ ಬಿಗಿದು, ಕೆಳಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದು, ರಸ್ತೆಯ ಮೇಲೆ ಎಳೆದು, ಊಟ ಮಾಡಿ ಬಿಸಾಕಿದ ಎಲೆಗಳನ್ನು ಮೈಮೇಲೆ ಹಾಕಿದರು. ಬಟ್ಟೆಗಳನ್ನು ಹರಿದು, ಅರೆಬೆತ್ತಲೆ ಮಾಡಿ, ದೊಣ್ಣೆಗಳಿಂದ ಹಲ್ಲೆ ಮಾಡಿದರು. ಜಾತಿ ನಿಂದನೆ ಮಾಡಿದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ದೇವಾಲಯಕ್ಕೆ ಬಂದರೆ ಮನೆಗೆ ಬೆಂಕಿ ಹಾಕಿ ಕುಟುಂಬವನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಯಾರೂ ಅವನಿಗೆ ಅನ್ನ, ನೀರು ಕೊಡಬೇಡಿ ಎಂದು ಬಹಿಷ್ಕಾರ ಹಾಕಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸ್ಥಳಾಂತರಕ್ಕೆ ಸೇಡು ತೀರಿಸಿಕೊಂಡ ಆನೆ ; ಸಕಲೇಶಪುರದಲ್ಲಿ ಆಶ್ಚರ್ಯ ಮತ್ತು ಅಪರೂಪದ ಘಟನೆ
ಆನೆಯೊಂದು ತನಗೆ ತೊಂದರೆ ಕೊಟ್ಟವರ ಗುರುತು ಹಿಡಿದು, ಸ್ಥಳಾಂತರಗೊಂಡ 6 ತಿಂಗಳ ನಂತರವೂ ಬಂದು ಮನೆ ಮೇಲೆ ದಾಳಿ ನಡೆಸಿದ ಅಪರೂಪದ ಮತ್ತು ಆಶ್ಚರ್ಯಕರ ಘಟನೆಯೊಂದು ಸಕಲೇಶಪುರದ ಹಳ್ಳಿಯೊಂದರಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ತೀವ್ರವಾಗಿದೆ. ಕಳೆದ ಒಂದೂವರೆ ವರ್ಷಗಳ ವ್ಯಾಪ್ತಿಯಲ್ಲಿ ಮೂಡಿಗೆರೆ ಭಾಗದಲ್ಲಿ ಆನೆ ದಾಳಿಗೆ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಕ್ರಮ ತಗೆದುಕೊಳ್ಳದ ಕಾರಣಕ್ಕೆ ಮೂಡಿಗೆರೆ ಶಾಸಕರನ್ನು ಆ ಭಾಗದ ಜನ ಅಟ್ಟಾಡಿಸಿದ್ದು ಸಹ ಇಲ್ಲಿ ನೆನೆಸಿಕೊಳ್ಳಬೇಕು.

ಸಕಲೇಶಪುರದ ಕೆಸಗುಲಿ ಗ್ರಾಮ ಕೂಡಾ ಇಂತಹದ್ದೇ ನಿರಂತರ ಆನೆ ದಾಳಿಗೆ ತುತ್ತಾದ ಊರಾಗಿದೆ. ಕೆಸಗುಲಿ ಗ್ರಾಮದಲ್ಲಿ ಆನೆ ಹಾವಳಿ ವಿಪರೀತವಾಗಿದ್ದು, ಜಮೀನು ಮಾತ್ರವಲ್ಲ ಮನೆಗಳ ಮೇಲೂ ದಾಳಿ ಇಡುವ ಗುಣವನ್ನು ಆನೆಗಳು ಬೆಳೆಸಿಕೊಂಡಿವೆ. ಹಾಗಾಗಿ ನಿರಂತರವಾಗಿ ಇಲ್ಲಿನ ಮನೆಗಳಿಗೆ ಆನೆಯೊಂದು ಪದೇಪದೆ ದಾಳಿ ಮಾಡುತ್ತಿತ್ತು. ಇದರಿಂದ ಬೇಸತ್ತ ಮನೆಯವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿ ಆನೆ ಸ್ಥಳಾಂತರಕ್ಕೆ ಮನವಿಯನ್ನೂ ಮಾಡಿದ್ದರು.

ನಂತರ ಅರಣ್ಯಾಧಿಕಾರಿಗಳ ಸಹಕಾರದಿಂದ ಈ ರೀತಿ ದಾಳಿ ಇಡುವ ಮಕ್ನ ಎಂಬ ಕಾಡಾನೆಯನ್ನು 6 ತಿಂಗಳ ಹಿಂದೆ ಇಲ್ಲಿಂದ ಸ್ಥಳಾಂತರ ಮಾಡಲಾಗಿತ್ತು. ಸಕಲೇಶಪುರದಿಂದ ನೂರಾರು ಕಿಲೋಮೀಟರ್ ದೂರದ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಆನೆಯನ್ನು ಸ್ಥಳಾಂತರ ಮಾಡಲಾಗಿತ್ತು.

ಆ ನಂತರ ಸ್ವಲ್ಪ ಮಟ್ಟಿಗೆ ಆನೆಗಳ ಹಾವಳಿ ತಗ್ಗಿತ್ತು. ಆದರೆ ಮೊನ್ನೆಯ ದಿನ ಬುಧವಾರ ರಾತ್ರಿ ಕೆಸಗುಲಿ ಗ್ರಾಮದ ಕುಮಾರ್ ಎಂಬುವರ ಮನೆ ಮೇಲೆ ದಾಳಿ ನಡೆಸಿದ ಒಂಟಿ ಸಲಗವೊಂದು ಕಿಟಕಿ ಗಾಜುಗಳನ್ನು ಧ್ವಂಸ ಮಾಡಿದೆ. ಕಳೆದ 6 ತಿಂಗಳ ಹಿಂದೆ ಇದೇ ಮನೆಯ ಪಕ್ಕದಲ್ಲಿರುವ ಅವರ ಅಣ್ಣ ಗಿರೀಶ್ ಎಂಬುವರ ಮನೆಯ ಮೇಳೆ ದಾಳಿ ನಡೆಸಿತ್ತು. ಒಂಟಿ ಸಲಗದ ಆರ್ಭಟಕ್ಕೆ ಮನೆಯ ಬಾಗಿಲು ಕಿಟಕಿಗಳೆಲ್ಲಾ ಪುಡಿ ಪುಡಿಯಾಗಿವೆ.

ಮುಂಜಾನೆ ಎರಡು ಗಂಟೆಯ ಹೊತ್ತಿಗೆ ಆನೆ ಏಕಾಏಕಿಯಾಗಿ ದಾಳಿ ಮಾಡಿದೆ. ಮನೆ ಮಂದಿಯೆಲ್ಲ ನಿದ್ರೆಯಲ್ಲಿದ್ದಾಗ ಬಂದಿದ್ದ ಆನೆ ದಾಳಿ ಮಾಡುತ್ತಿದ್ದಂತೆಯೇ ಮನೆಯವರು ಎಚ್ಚೆತ್ತು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಂತರ ತಿಳಿದ ವಿಷಯ ಏನೆಂದರೆ, 6 ತಿಂಗಳ ಹಿಂದೆ ಹಿಡಿದ ಮಕ್ನ ಎಂಬ ಕಾಡಾನೆಯೇ ಈಗ ದಾಳಿ ನಡೆಸಿದ್ದು ಎಂಬುದು ಅದಕ್ಕೆ ಹಾಕಿರುವ ರೇಡಿಯೋ ಕಾಲರ್ ನಿಂದ ಗೊತ್ತಾಗಿದೆ. ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ತಾತ್ಕಾಲಿಕ ಕ್ರಮ ತಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ಅಷ್ಟರ ಮಟ್ಟಿಗೆ ನೂರಾರು ಕಿಲೋಮೀಟರ್ ದೂರದಿಂದ ಮನೆಯನ್ನೂ ಹುಡುಕಿ ಬಂದು ದಾಳಿ ಮಾಡುವಷ್ಟು ಆನೆಗಳು ಸೇಡಿನ ಗುಣವನ್ನು ಹೊಂದಿವೆಯಾ ಎಂಬ ಆಶ್ಚರ್ಯ ಎಲ್ಲರಲ್ಲೂ ಮನೆ ಮಾಡಿದೆ. ಆನೆಗಳು ತನ್ನ ಪಾಡಿಗೆ ತಾನು ಓಡಾಡಿಕೊಂಡಿರುವಾಗ ಅವಕ್ಕೆ ಪಟಾಕಿ ಸಿಡಿಸುವುದು, ಕಲ್ಲು ಹೊಡೆಯುವುದು, ಗುಂಡು ಹಾರಿಸಿಯೋ ಅಥವಾ ವಿಚಿತ್ರವಾಗಿ ಶಬ್ದ ಮಾಡಿ ಹೆದರಿಸುವುದು ಇಂತಹ ಪ್ರಕ್ರಿಯೆಗಳನ್ನು ಮಾಡಿದಾಗ ಅವುಗಳು ರೊಚ್ಚಿಗೆದ್ದು ತಿರುಗಿ ಬೀಳುವುದು ಸರ್ವೇಸಾಮಾನ್ಯ, ಸಾಧ್ಯವಾದಷ್ಟು ಅವುಗಳಿಗೆ ಈ ರೀತಿಯ ತೊಂದರೆಯಾಗದಂತೆ ನೋಡಿಕೊಂಡರೆ ಇಂತಹ ದಾಳಿಯಿಂದ ದೂರ ಇರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.