HD Revanna – Peepal Media

ಈ ರೀತಿ ಹತ್ತು ಸಮಾವೇಶ ಮಾಡಿದ್ರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ: ಕಾಂಗ್ರೇಸ್‌ಗೆ ರೇವಣ್ಣ ತಿರುಗೇಟು
ಈ ರೀತಿ ಹತ್ತು ಸಮಾವೇಶ ಮಾಡಿದ್ರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಈಗ ಇರುವುದು ನಕಲಿ ಕಾಂಗ್ರೆಸ್ ಎಂದು ಕಾಂಗ್ರೇಸ್‌ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಹೆಚ್.ಡಿ. ರೇವಣ್ಣ

ಹಾಸನ: ಈತರ ಹತ್ತು ಸಮಾವೇಶ ಮಾಡಿ ಹೇಳಿಕೆ ನೀಡಿದರೂ ಏನು ಆಗಲ್ಲ. ನಾನು ತಲೆ ಕೆಡಿಸಿಕೊಳ್ಳಲ್ಲ. ಕೇಳಿದ ಸಾಕ್ಷಿಗುಡ್ಡೆ ಬಗ್ಗೆ ಪ್ರಸ್ತಾಪಿಸಿದಲ್ಲದೇ ಈಗ ಕಾಂಗ್ರೆಸ್ ಪಕ್ಷ ಇಲ್ಲಾ. ಇರೋದು ನಕಲಿ ಕಾಂಗ್ರೆಸ್ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ, “ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ 28 ಸಾವಿರ ಕೋಟಿ ಸಾಲಾಮನ್ನಾ ಮಾಡಿದ್ರು. ಯಾವ ಆಂದೋಲನ ಇದು? ಈಗ ಜನರು ಸಂಕಷ್ಟದಲ್ಲಿ ಇದಾಗೆ ಒಮ್ಮೆ ರೈತರ ಸಾಲಾ ಮನ್ನಾ ಮಾಡಲಿ! ಐದು ಗ್ಯಾರಂಟಿ ಕೊಟ್ಟಿದಾರೆ ಇನ್ನೊಂದು ಗ್ಯಾರಂಟಿ ಕೊಡಿ. ಹಾಸನದಲ್ಲಿ ಆರು ಜಿಲ್ಲೆ ಜನ ಕರೆತಂದು ಸಮಾವೇಶ ಮಾಡಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಏನಿದೆ? ಸ್ವಾಭಿಮಾನಿ ಅಂತೆ, ಜನ ಕಲ್ಯಾಣ ಅಂತೆ. ದೇವೇಗೌಡರು ಪ್ರಧಾನಮಂತ್ರಿ ಇದ್ದಾಗ ಕೇಂದ್ರ ಸರ್ಕಾರದ ನಬಾರ್ಡ್‌ನಿಂದ ರೈತರಿಗೆ ಕಾರ್ಯಕ್ರಮ ರೂಪದಲ್ಲಿ ಸಾಲ ಕೊಡುವಂತೆ ಮಾಡಿದ್ರು. ನಬಾರ್ಡ್ ಮೂಲಕ ರೈತರಿಗೆ ಲೋನ್ ಕೊಡುವುದು, ರಸ್ತೆಗೆ ಹಣ ಕೊಡುವುದು ಮಾಡಿದ್ದು, ದೇವೇಗೌಡರು ಏನು ಪ್ರಸ್ತಾವನೆ ಮಾಡಲ್ಲ ಅಂತ ಇವತ್ತು ರಾಜ್ಯ ಸರ್ಕಾರದವರು ಹೇಳುತ್ತಿದ್ದಾರೆ. ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕ್‌ಗೆ 70% ಹಣ ಕೊಡುತ್ತಿದ್ದರು. ಕೇಂದ್ರದಿಂದ ಸಿಗುವ ಸೌಲಭ್ಯವನ್ನು ರಾಜ್ಯಕ್ಕೆ ದೊರಕುವಂತೆ ಮಾಡಿದ್ದೇ ದೇವೇಗೌಡರು. ಕುಮಾರಸ್ವಾಮಿ ಸಾಲಮನ್ನಾ ಮಾಡದಿದ್ದರೆ 21 ಬ್ಯಾಂಕ್‌ಗಳು ಮುಳುಗಿ ಹೋಗುತ್ತಿದ್ದವು. ದೇವೇಗೌಡರನ್ನ ಸಾಕ್ಷಿ ಗುಡ್ಡೆ ಕೇಳ್ತಾರೆ. ಅಪೆಕ್ಸ್ ಬ್ಯಾಂಕ್‌ಗೆ 9162 ಕೋಟಿ ಕೊಡಿ ಎಂದು ಕೇಂದ್ರ, ಆರ್‌ಬಿಐ, ನಬಾರ್ಡ್‌ಗೆ ದೇವೇಗೌಡರು ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ಇಟ್ಟುಕೊಳ್ಳಬೇಕು. ಆದರೇ ಬೆಳಿಗ್ಗೆ ಎದ್ದರೆ ಪ್ರಧಾನಮಂತ್ರಿಯನ್ನು ಬೈತಾರೆ. ವಿಶ್ವಾಸ ಇಟ್ಟುಕೊಂಡರೆ ಮಾತ್ರ ಏನಾದರೂ ಕೊಡ್ತಾರೆ ಎಂದು ಟಾಂಗ್ ನೀಡಿದರು. ಕುಮಾರಸ್ವಾಮಿ ಹಾಸನ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ಗಳ 531 ಕೋಟಿ ಸಾಲಮನ್ನ ಮಾಡಿದ್ದು, 9600 ಕೋಟಿ ರಾಷ್ಟ್ರೀಯ ಬ್ಯಾಂಕ್‌ಗಳ ಸಾಲಮನ್ನ ಆಗಿದೆ. ಕಾಂಗ್ರೆಸ್‌ನವರೇ ರೈತರ ಬಗ್ಗೆ ಮಾತನಾಡುತ್ತಿರಲ್ಲಾ ಮೊದಲು ರೈತರ ಸಾಲಮನ್ನ ಮಾಡಿ. ದೇವೇಗೌಡರ ರಾಜಕೀಯ ಮುಗಿದು ಹೋಯ್ತು ಅಂತ ಬಾಷಣ ಮಾಡ್ತಾರೆ. ಈ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಏನು ಕೊಡುಗೆ ಕೊಟ್ಟಿದೆ ಎಂಬುದನ್ನು ಹೇಳಲಿ. ಬ್ರಿಟಿಷರ ಕಾಲದಲ್ಲಿ ಆಗಿದ್ದ ರೈಲ್ವೆ ಮಾರ್ಗ ಕಿತ್ತುಕೊಂಡು ಹೋದರವರು ಕಾಂಗ್ರೆಸ್‌ನವರು,” ಎಂದು ಕಾಂಗ್ರೇಸಿನ ಮೇಲೆ ಹರಿಹಾಯ್ದರು.

“ದೇವೇಗೌಡರು ಪ್ರಧಾನಮಂತ್ರಿಯಾಗಿ ಹತ್ತುವರೆ ತಿಂಗಳಿನಲ್ಲಿ ರೈಲ್ವೆ ಮಾರ್ಗ ಮಾಡಿದ್ರು. ಡಿಸಿಎಂ ಈ ಜಿಲ್ಲೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ರೈಲ್ವೆ ಮಾರ್ಗ, ಕೋರ್ಟ್, ಬಸ್ಟಾಂಡ್ ಕಟ್ಟಿದ್ದು ಯಾರು? ಇವೆಲ್ಲಾ ಸಾಕ್ಷಿ ಗುಡ್ಡೆಗಳಲ್ಲವಾ! ಗಿರಾಕಿಗಳೇ ಆಸ್ಪತ್ರೆ, ಇಂಜಿನಿಯರ್, ಮೆಡಿಕಲ್ ಕಾಲೇಜು, ಪಶುವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜುಗಳನ್ನು ನೋಡಿ.”

“ಈ ಜಿಲ್ಲೆಯ ಜನ ದೇವೇಗೌಡರಿಗೆ, ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಅವರ ಋಣ ನಮ್ಮ ಮೇಲೆ ಇದೆ, ಅದನ್ನು ತೀರಿಸುತ್ತೇವೆ. ನನ್ನ ಕೈಲಾದ ಕೆಲಸವನ್ನು ಈ ಜಿಲ್ಲೆಗೆ ಮಾಡುತ್ತೇನೆ. ಇಂತಹ ಹತ್ತು ಸಮಾವೇಶ ಮಾಡಿದ್ರೆ ನಾನೇನು ತಲೆ ಕೆಡಿಸಿಕೊಡಲ್ಲ. ಇವರಿಗೆ ತಾಕತ್ ಇದ್ದರೆ ಕಾಂಗ್ರೆಸ್ ಬಿಟ್ಟು ಬಂದು ನಮ್ಮ ರೀತಿ ಪಕ್ಷ ಕಟ್ಟಲಿ,” ಎಂದು ಸವಾಲು ಎಸೆದರು.

“ಹಿಂದಿನ ಕಾಂಗ್ರೆಸ್ ಈಗ ಇಲ್ಲ, ಈಗ ಇರುವುದು ನಕಲಿ ಕಾಂಗ್ರೆಸ್. ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ ಅಂತಾರೆ, ಇವರು ಬಿಎಲ್ ಶಂಕರ್ ಕರೆದೊಯ್ದು ಏನು ಮಾಡಿದ್ರು. ನಮ್ಮಿಂದ ವಲಸೆ ಹೋದವರು ಅಲ್ಲಿ ಇರುವವರು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಜೇನುಕಲ್ಲು ಸಿದ್ದೇಶ್ವರನೇ ಇದಕ್ಕೆ ಸಾಕ್ಷಿ ಎಂದರು. ಮೂರು ಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡಿಸದೆ ಎಲೆಕ್ಷನ್ ಮಾಡಿ ಗೆಲ್ಲಿಸಿಕೊಂಡು ಬಂದಿದ್ದೇನೆ. ಇವರೆಲ್ಲ ಜೆಡಿಎಸ್ ಮುಗಿದುಹೋಯ್ತು ಅಂತಾರೆ. ೨೦೨೮ ಕ್ಕೆ ಜೆಡಿಎಸ್ ಏನು ಎಂದು ಗೊತ್ತಾಗುತ್ತದೆ ಎಂದು ಪಕ್ಷ ಬಿಟ್ಟವರಿಗೆ ಬಿಸಿ ಮುಟ್ಟಿಸಿದರು. ಹಾಸನದಲ್ಲಿ ಯಾವಾಗ ಸಮಾವೇಶ ಮಾಡಬೇಕು ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ. ದೇವೇಗೌಡರು ಮೇಕೆದಾಟು ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡಿದ್ದಾರೆ. ಹಾಸನದ ಔಟರ್ ರಿಂಗ್ ರೋಡ್ ಗೆ ೭೫೦ ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ,” ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಗಿರೀಶ್ ಚನ್ನವೀರಪ್ಪ, ಬಿದರಿಕೆರೆ ಜಯರಾಂ, ಜಗದೀಶ್, ನಾಗರಾಜು ಇತರರು ಉಪಸ್ಥಿತರಿದ್ದರು.

ಅದರಲ್ಲಿ ನನ್ನದೂ ಸಹ ವಿಡಿಯೋ ಇತ್ತು: ಸಂತ್ರಸ್ತೆಯೊಬ್ಬಳ ನಿವೇದನೆ (ಕಾಲ್ಪನಿಕ)
ಪ್ರಿಯ ಗೆಳತಿ…

ನಾನಿನ್ನು ಹೊರಡುತ್ತೇನೆ. ಹೊರಡಬೇಕೆಂದು ನಿರ್ಧರಿಸಿದ್ದೇನೆ. ಇನ್ನು ಯಾವುದೇ ಆತಂಕವಿಲ್ಲದೇ ನಿನ್ನ ಮನೆ ಬಾಗಿಲನ್ನು ತೆರದಿಡು.! ಮಕ್ಕಳು ಇನ್ನೆಂದೂ ಬಂದು ‘ದೊಡ್ಡಮ್ಮ ಬಾಗಿಲ ತಗೆ’ ಎಂದು ಹಿಂಸಿಸುವುದಿಲ್ಲ.! ಈ ಪತ್ರ ನಿನ್ನ ಕೈ ಸೇರುವುದರೊಳಗೆ ನಿನ್ನನ್ನು ಈಗಾಗಲೇ ಹಲವಾರು ಮಂದಿ ಬಂದು ಕೇಳಿರಬಹುದು. ‘ಎಲ್ಲಿ ಹೋದಳು ಎಳೆ ಮಕ್ಕಳೊಂದಿಗೆ’ ಎಂದು. ‘ಜನುಮದ ಜೋಡಿಗಳಿದ್ದಂಗೆ ಇದ್ದವರು ನೀವು , ನಿನಗೆ ಹೇಳದೆ ಹೋಗಿರುತ್ತಾಳೆಯೇ? ಎಂದು ಕೊಂಕೂ ಆಡಿರಬಹುದು. ನೀನು ಉತ್ತರಕ್ಕಾಗಿ ತಡಕಾಡುತ್ತಿರುವೆ ಅಲ್ಲವೇ ಗೆಳತಿ. ಅದಕ್ಕಾಗೆ ಈ ಪತ್ರ‌.

ಒಂದು ವಾರದಿಂದ ನಿನ್ನಿಂದ ಒಂದೂ ಮಾತಿಲ್ಲ.‌ ನೀನು ಪಕ್ಕದ ಮನೆಯಲ್ಲೇ ಇದ್ದರೂ, ನಾನೆಲ್ಲೋ ದೇಶದ ಗಡಿಯಾಚೆ ಇರುವಂತಿದೆ.. ಮಕ್ಕಳಿಬ್ಬರೂ ಅದೆಷ್ಟು ಬಾರಿ ಕೇಳಿದರೋ, ದೊಡ್ಡಮ್ಮ ಏಕೆ ಮಾತಾಡುತ್ತಿಲ್ಲ, ಬಾಗಿಲೇಕೆ ತೆಗೆಯುತ್ತಿಲ್ಲವೆಂದು. ದೊಡ್ಡವಳಿಗೆ ಏನೋ ಹೇಳಿ ಸಮಾಧಾನ ಮಾಡುತ್ತಿದ್ದೆ. ಆದರೆ ಚಿಕ್ಕವನಿಗೆ ಹೇಳಲು ನನ್ನಿಂದ ಸಾಧ್ಯವಾಗದೆ ಹೊಯಿತು…. ನಿನಗೇ ಗೊತ್ತಿದೆ , ನಿನ್ನನ್ನು ಅವನು ಎಷ್ಟು ಹಚ್ಚಿಕೊಂಡಿದ್ದನೆಂದು. ನೆಲಕ್ಕೆ ಬಿದ್ದು ಒದ್ದಾಡಿ ರಂಪ ಮಾಡುತ್ತಿದ್ದ. . ‘ದೊಡ್ಡು… ದೊಡ್ಡಮ್ಮ’ಎಂಬ ಅವನ ತೊದಲು ನುಡಿಯ ಅಲೆಗಳು ನೀನು ಮುಚ್ಚಿದ ಎಲ್ಲಾ ಕಿಟಕಿ ಬಾಗಿಲುಗಳನ್ನು ಭೇದಿಸಿ ನಿನ್ನ ಕಿವಿಗಳನ್ನೂ ಅಪ್ಪಳಿಸಿರುತ್ತವೆ.‌..ಇಲ್ಲವೆನ್ನಬೇಡ.!

ನೆನಪಿದೆಯಾ ಗೆಳತಿ, ಅಂದು ಇಂದಿನಂತೆ ಗಾಡ ಕತ್ತಲು ನನ್ನ ಸುತ್ತ. ನಾನು ಕತ್ತಲಾಗಿ ಕುಳಿತ್ತಿದ್ದೆ.‌‌ ಮಡಿಲಲ್ಲಿ ವರುಷದ ಕೂಸು. ಪುಟ್ಟಿಗೆ ಮೂರು ವರ್ಷ. ಕೋವಿಡ್ ಮಹಾಮಾರಿ ಗಂಡನನ್ನು ಬಲಿ ತೆಗೆದುಕೊಂಡಿತ್ತು.. ಆ ಕತ್ತಲಲ್ಲಿ ಕೋಲ್ಮಿಂಚಂತೆ ಬಂದೆ ನೀನು. ನಿನ್ನ ಕಣ್ಣುಗಳಲ್ಲಿದ್ದ ಆ ಪ್ರೀತಿ, ವಾತ್ಸಲ್ಯ, ಆತ್ಮೀಯ ಭಾವ ಇನ್ನೂ ಅಚ್ಚಳಿಯದೆ ನನ್ನ ಕಣ್ಣಕಟ್ಟಿವೆ. ನೀನು ಚಾಚಿದ ಆ ಸ್ನೇಹದ ಹಸ್ತ , ನನ್ನೆಲ್ಲಾ ರಕ್ತ ಸಂಬಂಧವನ್ನು ನಾಚಿಸಿದ್ದವು. ‘ಮುಳುಗಿದ ಸೂರ್ಯ ನಾಳೆ ಬಂದೆ ಬರುತ್ತಾನೆ. ನೆನ್ನೆಯ ಬಿಟ್ಟು, ಮುಂಬರುವ ನಾಳೆಗಳ ನೋಡೆಂದೆ.’ ಅದೆಂತ ಜೀವನದ ಚೈತನ್ಯವನ್ನು ತುಂಬಿದವು ನಿನ್ನ ಮಾತುಗಳು ನನಗೆ. ಅಂದು ಮಾತ್ರವಲ್ಲ ಇಂದು ಸಹ… ಕಗ್ಗತ್ತಲೆಯ ದಾರಿಯಲ್ಲಿ ದೀಪಗಳಾಗಿವೆ ..

ದುಡಿಮೆಗಾಗಿ ಮನೆಕೆಲಸದ ದಾರಿ ತೋರಿಸಿದೆ.. ವರುಷಗಳು ಉರಳಿದವು.‌ ನೀನು ಹೇಳಿದಂತೆ ಕತ್ತಲು ಕ್ರಮೇಣ ಸರಿಯಿತು. ಮಕ್ಕಳು ದೊಡ್ಡದಾದವು. ಮನೆಯ ಖರ್ಚು ದೊಡ್ಡದಾಯಿತು. ಆಗಲೇ ಅದ್ಯಾರಿಂದಲೊ ಗೊತ್ತಾಯಿತು ದೊಡ್ಡಮನೆಯಲ್ಲಿ ಮನೆಗೆಲಸಕ್ಕೆ ಹೆಣ್ಣಾಳು ಬೇಕಿದ್ದಾರೆ ಎಂದು. ನಿನ್ನ ಬಳಿ ಹೇಳಿದೆ. ನನ್ನ ಮಾತಿನ್ನೂ ಮುಗಿದೆ ಇರಲಿಲ್ಲಾ,… ನೀನು ಮಾತು ಮುಂದುವರಿಸಿದೆ, ‘ಒಪ್ಪಿಕೋ. ಇನ್ನೇನು ಯೋಚಿಸುತ್ತಿರುವೆ. ಒಂದೆರಡು ಕಾಸು ಉಳಿಸು. ಪಾಪು ಹಾಗೂ ಪುಟ್ಟಿಯ ಚಿಂತೆಯನ್ನು ಬಿಡು. ಪುಟ್ಟಿ ಶಾಲೆಯಿಂದ ನೇರ ಬಂದು ನಮ್ಮ ಮನೆಯಲ್ಲಿರುತ್ತಾಳೆ. ನನ್ನ ಗಂಡ ಬರುವುದು ಸಂಜೆಯ ಮೇಲೆ. ಅಲ್ಲಿಯವರೆಗೂ ಮನೆಯಲ್ಲಿ ನಾನು ಒಂಟಿ ಪಿಶಾಚಿಯೇ. ಮಕ್ಕಳಿಬ್ಬರು ಅಂಗಳದಲ್ಲಿ ಆಡಿಕೊಂಡಿರಲಿ ಬಿಡುಎಂದೇ… ನಾನು ಏನು ಹೇಳದೇ ಹೋದರು ಅಂದು ನೀನು ಎಲ್ಲವನ್ನು ಅರ್ಥಮಾಡಿಕೊಂಡು ಆಡಿದ ಮಾತುಗಳು‌ ನನ್ನೆಲ್ಲಾ ಆತಂಕವನ್ನು ದೂರ ಮಾಡಿದವು. ನಿಶ್ಚಿಂತೆಯಿಂದ ನಿಟ್ಟುಸಿರು ಬಿಟ್ಟೆ.

ದೊಡ್ಡ ಮನೆಯ ಕೆಲಸ ದಿನ ಕಳೆದಂತೆ ಉಸಿರುಗಟ್ಟಿಸಿತು. ದಿನಪೂರ ಮಾಡಿದರೂ ಮುಗಿಯಲಾರದ ಕೆಲಸ. ಮಕ್ಕಳ ಭವಿಷ್ಯಕ್ಕೆಂದು ಎಲ್ಲವನ್ನು ಸಹಿಸಿಕೊಂಡೆ. ಅದೊಂದು ದಿನ ಮನೆಯ ಮಾಲಿಕನ ಕಾಮದ ಕೂಪದ ಬಾಯಿಗೆ ಆಹಾರವಾಗಿ ನಾನು ಬಲಿಯಾದೆ. ಪ್ರತಿಭಟಿಸಿದ್ದೆ ಗೆಳೆತಿ. ನನ್ನ ಪ್ರತಿಭಟನೆಯ ಧ್ವನಿಯನ್ನು ಮುಗಿಲೆತ್ತರದ ಮನೆಯ ನಾಲ್ಕು ಗೋಡೆಗಳು ಹೊಸಕಿ ಹಾಕಿದವು.. ಪ್ರತಿಭಟಿಸಿದ್ದ ಫಲವಾಗಿ ಮೈತುಂಬ ಗಾಯಗಳಾದವು. ಮಕ್ಕಳು ಕೇಳಿದವು. ಅದೇಗಾಯಿತು ಇದೇಗಾಯ್ತು ಎಂದು. ಹೇಳಿದೆ ಮೊದಲ ಬಾರಿ ಪುಂಕಾನು ಪುಂಕ ಸುಳ್ಳುಗಳ. ಅಲ್ಲಿ ಬಿದ್ದೆ, ಇಲ್ಲಿ ಬಿದ್ದೆ ಎಂದು.‌ ಮಕ್ಕಳು ನಂಬಿದವು. ಅದೆಷ್ಟು ಬಲವಾದ ನಂಬಿಕೆ ಅಲ್ಲವೇ ಮಕ್ಕಳಿಗೆ ತಾಯಿಯ ಮೇಲೆ.! ಆ ನಂಬಿಕೆಯನ್ನು ಯಾವ ತಾಯಿ ತಾನೇ ಕಳೆದುಕೊಳ್ಳಲು ಇಚ್ಚಿಸುತ್ತಾಳೆ. ಮರುದಿನ ನಿನ್ನ ಬಳಿಯು ಮಕ್ಕಳಿಗೆ ಕೊಟ್ಟ ಉತ್ತರವನ್ನೇ ಕೊಟ್ಟೆ. ಅದೇಕೋ ಧೈರ್ಯವೇ ಬರಲಿಲ್ಲ ಗೆಳತಿ ನಿನ್ನ ಬಳಿಯೂ ಸಹ. ಅದ್ಯಾವ ಭಯ ನನ್ನ ಬಾಯಿ ಕಟ್ಟಿಹಾಕಿತ್ತೊ ಗೊತ್ತಿಲ್ಲ .. ಇನ್ನೂ ಹುಡುಕುತ್ತಿರುವೇ.‌

ಕೆಲಸವನ್ನು ಬಿಡುತ್ತೇನೆ ಎಂದೆ. ನೀನು ಕಾರಣವನ್ನು ಕೇಳಿದೆ, ನಾನು ತುಂಬ ಕೆಲಸವೆಂದು ಮಾತ್ರ ಉತ್ತರಿಸಿದೆ. ಬಿಡುವುದಾದರೆ ಮತ್ತೊಂದು ಕೆಲಸವನ್ನು ಕೈಯಲ್ಲಿ ಹಿಡಿದುಕೊಂಡು ಬಿಡು ಇಲ್ಲದಿದ್ದರೆ ಮಕ್ಕಳ‌ ಕಥೆ ಏನು? ಎಂದು ಎಚ್ಚರಿಸಿದೆ. ಮಕ್ಕಳ ಹಸಿವು ನೆನಪಾಯಿತು. ಮತ್ತೆ ಹೋದೆ ಆ ಮನೆಯ ಅಂಗಳಕ್ಕೆ. ಬೆಂಕಿಯನ್ನು ಸೆರಗಲ್ಲೇ ಕಟ್ಟಿಕೊಂಡಂತೆ, ಜೀವವಿಡಿದೆ ಕೆಲಸ ಮಾಡಿದೆ. ಅದೆಷ್ಟುಸಲ ನಿದ್ದೆಯಲ್ಲಿ ಬೆಚ್ಚಿಬಿದ್ದಿದ್ದೇನೋ… ಮಕ್ಕಳು ಸಹ ಎಚ್ಚರಗೊಳ್ಳುತ್ತಿದ್ದವು.. ತಡೆಯಲಾರದೆ ಹೋದೆ ಆ ಉಸಿರು ಗಟ್ಟಿಸಿದ ಮನೆಯ.. ನಿರ್ಧರಿಸಿಬಿಟ್ಟೆ. ನಾಳೆಯಿಂದ ನಾನು ಹೋಗುವುದಿಲ್ಲವೆಂದು. ಬಿಟ್ಟೆ ಕೆಲಸವನ್ನು. ಸ್ವಲ್ಪ ದಿನಗಳು ಕಷ್ಟವಾದವು. ಆಗಲೂ ನೆರವಾದದ್ದು ನಿನ್ನ ಕೈಗಳೇ. ಅದೇಗೋ ಮತ್ತೆ ಮೂರು ಮನೆಗಳಲ್ಲಿ ಚಿಕ್ಕ ಪುಟ್ಟ ಕೆಲಸ ಗಿಟ್ಟಿಸಿಕೊಂಡೆ.

ಎಲ್ಲವು ಸರಿ ಹೋಗುತ್ತಿದೆ ಎನ್ನುವಷ್ಟರಲ್ಲೇ, ನನ್ನನ್ನು ಅದ್ಯಾರೋ ಬೆಂಕಿಯ ಕೆನ್ನಾಲಿಗೆಗೆ ದಬ್ಬಿದಂತೆ ಅನ್ನಿಸಿತು ಗೆಳತಿ. ಅಂದು ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದೆ. ಮಕ್ಕಳಿಗೆ ತಿಂಡಿ ತೆಗೆದುಕೊಳ್ಳಲು ಅಂಗಡಿಗೆ ಹೋದಾಗ, ನನ್ನ ನೋಡಿ ಅಲ್ಲಿದ್ದವರಲ್ಲಿ ಅದೇನೋ ಗುಸು ಗುಸು. ‘ಇವಳೇ ಇವಳೇ’ ಎಂಬ ಶಬ್ದ ಮಾತ್ರ ಸ್ಪಷ್ಟವಾಗಿ ಕೇಳಿಸಿತು. ಮತ್ತೆಲ್ಲವು ಗುಸುಗುಸು. ದಾರಿ ಉದ್ದಕ್ಕೂ ಅದೆಂಥಾ ಮುಜುಗರ.! ಎಲ್ಲರ ಕಂಗಳು ನನ್ನ ಮೈಮೇಲೆ , ಹರಿದಾಡಿದಂತಾಯಿತು.! ನನ್ನ ಬಟ್ಟೆ ಎಲ್ಲಾದರೂ ಹರಿದಿದೆಯೋ ಎಂದು ನೋಡಿಕೊಂಡೆ. ಕೈಗಳನ್ನು ಬೆನ್ನ ಮೇಲೆ ಹಾಯಿಸಿದೆ.‌ ಎಲ್ಲವೂ ಸರಿಯಿತ್ತು. ಆದರೂ ಜನರ ವಿಚಿತ್ರ ನೋಟ ನನ್ನೆಡೆಗೆ!. ದಾರಿ ಉದ್ದಕ್ಕೂ ಅದೇ ನೋಟ, ಬಿಡಲಾರದ ನೋಟ.!

ಅಲ್ಲಿಂದ ಕಾಲ್ ಕಿತ್ತವಳಂತೆ ನೇರ ನಿನ್ನ ಮನೆಗೆ ಬಂದೆ. ನಿನ್ನ ಬಳಿ ಏನೋ ಹೇಳಲಿದ್ದೇ ಅಷ್ಟರಲ್ಲಿ ನೀನು ‘ನಿನ್ನಂತ ನೀತಿಗೆಟ್ಟವಳಿಗೆ ನನ್ನ ಮನೆಯಲ್ಲಿ ಪ್ರವೇಶವಿಲ್ಲವೆಂದೆ.’ ಅದೆಷ್ಟು ಹರಿತವಾಗಿದ್ದವು ಆ ಮಾತುಗಳು. ಮನಸ್ಸು ಬಾಣಕ್ಕೆ ಸಿಕ್ಕ ಬೇಟೆಯು ವಿಲವಿಲನೆ ಒದ್ದಾಡುವಂತೆ ಆಡಿತು. ಏನಾಯಿತು ಎನ್ನುವಷ್ಟರಲ್ಲೇ ‘ಹೊರಡು ಇಲ್ಲಿಂದ, ನನ್ನ ಗಂಡ ಬರುವ ಸಮಯವಾಯಿತೆಂದೆ.’ ಬೆಚ್ಚಿದೆ ಒಮ್ಮೆ ನಿನ್ನ ಕೋಪಕ್ಕೆ. ದುಃಖ, ಕೋಪ ಒಟ್ಟೊಟ್ಟಿಗೆ ಬಂದವು.‌ ಬರಲಾರದ ಮಕ್ಕಳನ್ನು ಅಂಗಳದಿಂದ ಎಳೆದುಕೊಂಡು ಮನೆಗೆ ಬಂದೆ.

ಮಕ್ಕಳ ಮುಂದೆ ಎಂದು ಅಳಲಾರದವಳು ಅಂದು ಸಹಿಸಲಾರದೇ ಹೋದೆ. ನನ್ನ ಕಣ್ಣೀರ ಕಟ್ಟೆ ಒಡೆಯಿತು. ನನ್ನ ನೋಡಿ ಮಕ್ಕಳು ಅಳಲಾರಂಭಿಸಿದವು.‌ ಮಕ್ಕಳಿಗಾಗಿ ಕಣ್ಣಿರ ಮರೆಮಾಚಿದೆ. ಏನಾಗಿದೆ ಎಂದು ತಿಳಿಯಲು ಹರಸಾಹಸ ಮಾಡಿದೆ. ಎಲ್ಲವೂ ಕಗ್ಗಂಟಾಗಿತ್ತು. ರಾತ್ರಿ ಪೂರ ನಿದ್ದೆ ಇಲ್ಲದೆ ಒದ್ದಾಡಿದೆ..

ಮರುದಿನ ದೊಡ್ಡಮನೆಯಲ್ಲಿ ನನ್ನೊಟ್ಟಿಗೆ ಕೆಲಸ ಮಾಡುತ್ತಿದ್ದ ಒಬ್ಬಾಕೆ ಮನೆಗೆ ಬಂದಳು. ಅವಳ ಮೂಲಕವೇ ವಿಷಯ ಗೊತ್ತಾಯ್ತು. ದೊಡ್ಡಮನೆಯ ಕಾಮುಕನು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸದ ವಿಡಿಯೋಗಳು ಸಾವಿರಾರು ಸಂಖ್ಯೆಯ ಪೆನ್ ಡ್ರೈವ್ ಗಳ ಮೂಲಕ ಊರಿನ ಹಾದಿ ಬೀದಿಯಲ್ಲಿ ಬಹಿರಂಗವಾಗಿವೆ. ಈ ವಿಡಿಯೋಗಳನ್ನು ಸ್ವತಃ ಆ ಕಾಮುಕನೇ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದು, ಈ ಚುನಾವಣಾ ಸಮಯದಲ್ಲಿ ಅವು ಹೊರಬಿದ್ದಿವೆ. ಅದರಲ್ಲಿ ನನ್ನದೂ ಇದೆ ಎಂದು! ಕೇಳಿದೊಡನೆ, ಅದೇಕೋ ಮೈಮೇಲೆ ಮೈತುಂಬ ಬಟ್ಟೆ ಇದ್ದರು, ಒಮ್ಮೆಲೆ ಇಡೀ ಜಗತ್ತೆ ನನ್ನನು ನಗ್ನಗೊಳಿಸಿತು ಎಂದೆನಿಸಿತು. ನಿಂತಲ್ಲೇ ಕುಸಿದೆ. ಕುಸಿದಲ್ಲೇ ಮುದುಡಿದೆ…..!!

ನಿನ್ನ ಮೇಲೆ ಯಾವ ಬೇಸರವೂ ಇಲ್ಲ ಗೆಳತಿ. ನಿನ್ನ ಕೋಪ ಯಾರ ಮೇಲೆಂದು ತಿಳಿಯಲು ಅಸಮರ್ಥಳಾದೆ. ಅಷ್ಟೇ! ನನ್ನಿಂದಾಗಲಿ, ಮಕ್ಕಳಿಂದಾಗಲಿ ನೀನೆಂದು ಅವಮಾನಕ್ಕೊಳಗಾಗ ಬಾರದು. ಆದರಿಂದಲೇ ಹೊರಡುತ್ತಿದ್ದೇನೆ. ಊರ ತೊರೆದು. ಜೀವ ತೊರೆದಲ್ಲ.! ಮಕ್ಕಳಿಗೆ ಹೊಸ ಊರೆಂದು ಇನ್ನು ತಿಳಿದಿಲ್ಲ. ನನ್ನ ಕರುಳಿನ ಋಣಕ್ಕಿಂತ , ನಿನ್ನ ಮಡಿಲಲ್ಲಿ ಕುಳಿತು ತಿಂದ ಕೈತುತ್ತಿನ ಋಣ ಮಕ್ಕಳ ಮೇಲೆ ಹೆಚ್ಚಿದೆ. ಕೆಲ ಕಾಲ ಸಮಾಧಾನ ಮಾಡಲು ನನ್ನೊಬ್ಬಳಿಗೆ ಕಷ್ಟವಾಗಬಹುದು, ಹೊಂದಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ . ಯಾವುದೋ ಭಯ ಬಹುಕಾಲ ನನ್ನನ್ನು ಮೂಕಳಾಗಿಸಿದಂತೆ, ನಿನ್ನನ್ನು ಇಂದು ಬಂದಿಸಿಟ್ಟಿರಬಹುದು. ಚಿಂತೆಯಿಲ್ಲ. ನಿನ್ನಲ್ಲಿ ಒಂದೇ ಒಂದು ಮನವಿ , ಮುಂದೆ ಎಂದಾದರೂ ಎಲ್ಲಿಯಾದರೂ ನಾವು ನಿನಗೆ ಎದುರಾದರೇ ಒಮ್ಮೆ, ಒಮ್ಮೆ ನಕ್ಕು ಬಿಡು ಗೆಳತಿ, ನಮ್ಮೆಡೆಗೆ ಮೊದಲಿನಂತೆಯೇ,…ಸಾಕು. ನಿನ್ನ ಪ್ರೀತಿ ಕಂಗಳ ಮತ್ತೂಮ್ಮೆ ನೋಡುವ ಬಯಕೆ …… ಅಷ್ಟೇ . ಕಾಯುತ್ತಿರುತ್ತೇನೆ ಆ‌ ದಿನಕ್ಕಾಗಿ..

.‌..ಇಂತಿ
ಸಂತ್ರಸ್ತೆಯಲ್ಲೊಬ್ಬಳು.

ನಿರ್ಮಲಾ ಎಚ್. ಎಲ್.‌

Written by-ನಿರ್ಮಲಾ ಎಚ್ ಎಲ್

ಹೆಚ್.ಡಿ. ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ: ಮೇ.20ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್!
ಇಂದು ಎಚ್.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ರೇವಣ್ಣ ಪರ ಹಿರಿಯ ವಕೀಲ ನಾಗೇಶ್ ಅವರ ವಾದವನ್ನು ಆಲಿಸಿದ ಬಳಿಕ ಇದೀಗ ಸೋಮವಾರದವರೆಗೂ ಮಧ್ಯಂತರ ಜಾಮೀನು ಮುಂದುವರೆಯಲಿದೆ ಎಂದು ತಿಳಿಸಿ, ಮೇ.20ಕ್ಕೆ ಆದೇಶ ಕಾಯ್ದಿರಿಸಿದೆ.

ಮಾಜಿ ಸಚಿವ ಎಚ್‌ ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ   ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನಡೆಯಿತು. ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಜೆ ಪ್ರೀತ್‌ರಿಂದ ಅರ್ಜಿ ವಿಚಾರಣೆ ನಡೆಯಿತು.

ರೇವಣ್ಣ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ಮತ್ತು  ಎಸ್‌ಐಟಿ ಪರವಾಗಿ ಹಿರಿಯ ವಕೀಲರಾದ ಅಶೋಕ್‌ ನಾಯ್ಕ್‌ ಮತ್ತು ಜಯ್ನಾ ಕೊಠಾರಿಯಿಂದ ವಾದ ಪ್ರತಿವಾದ ನಡೆಯಿತು.ರೇವಣ್ಣ ವಿರುದ್ಧವು ಅತ್ಯಾಚಾರದ ಆರೋಪ ಇದೆ. ಇದು ಜಾಮೀನು ರಹಿತ ಅಪರಾಧ ಎಂದು ವಾದಿಸುವ ಮೂಲಕ ಜಾಮೀನಿಗೆ ಎಸ್ಐಟಿ ಎಸ್ ಪಿ ಪಿ ಯಿಂದ ಪ್ರಬಲ ವಿರೋಧ ವ್ಯಕ್ತಪಡಿಸಿತು.

ರೇವಣ್ಢ ಪರ ವಕೀಲ ಸಿ ವಿ ನಾಗೇಶ್‌, ಪ್ರಕರಣದಲ್ಲಿ ದೂರನ್ನು ಹೇಗೆ ದಾಖಿಸಲಾಗಿದೆ ಎಂಬುದರ ವಿವರಣೆ ನೀಡಿ, ಇದೊಂದು ರೀತಿಯಲ್ಲಿ ಅರೇಬಿಯನ್‌ ನೈಟ್‌ ಕಥೆಯ ರೀತಿಯಲ್ಲಿದೆ, ಸಿಆರ್‌ಪಿಸಿ 154ರ ಅಡಿ ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕು. ಸಂತ್ರಸ್ತೆಯ ಹೇಳಿಕೆಯನ್ನು ವಿಡಿಯೊ ಮಾಡಬೇಕಿತ್ತು. ಮಹಿಳೆಯ ಘನತೆ ಕಾಪಾಡುವ ನಿಟ್ಟಿನಲ್ಲಿ ಕಾಯಿದೆಗೆ 2013ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ, ಇದನ್ನು ಪಾಲಿಸಲಾಗಿಲ್ಲ. ಆದರೆ ಇಲ್ಲಿ ಪುರುಷ ಅಧಿಕಾರಿ ದೂರು ದಾಖಲಿಸಿದ್ದಾರೆ. ಎಫ್‌ಐಆರ್‌ ಅನ್ನು ಕಾನೂನುಬಾಹಿರವಾಗಿ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು.

“ಟೈಪ್‌ ಮಾಡಿರುವ ದೂರಿನ ಪ್ರತಿಗೆ ಸಂತ್ರಸ್ತೆ ಸಹಿ ಮಾಡಿ ನೀಡಿದ್ದಾರೆ. ಪ್ರಕರಣದಲ್ಲಿ ಐಪಿಸಿ 376 (ಅತ್ಯಾಚಾರ ಆರೋಪ) ಅನ್ವಯವಾಗುವುದಿಲ್ಲ. ಮೊದಲಿಗೆ ಜಾಮೀನುಸಹಿತ ಆರೋಪಗಳನ್ನು ಒಳಗೊಂಡ ಎಫ್‌ಐಆರ್‌ ದಾಖಲಿಸಲಾಗಿತ್ತು. ಆನಂತರ ಅತ್ಯಾಚಾರ ಆರೋಪ ಮಾಡಲಾಗಿದೆ. ಲೋಕಸಭೆ ಎರಡನೇ ಹಂತದ ಮತದಾನ ಇರುವ ಸಂದರ್ಭದಲ್ಲಿ ಹೀಗೆಲ್ಲಾ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ.” ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿ ಮೇ 20ಕ್ಕೆ ಜಾಮೀನಿನ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಅಲ್ಲಿಯವರೆಗೆ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು ಕೋರ್ಟ್ ತಿಳಿಸಿದೆ‌.

Big breaking : ಕಿಡ್ನಾಪ್ ಪ್ರಕರಣದಲ್ಲಿ ಹೆಚ್.ಡಿ.ರೇವಣ್ಣ ಅರೆಸ್ಟ್
ಮಾಜಿ ಸಚಿವ ಹೆಚ್‌ ಡಿ ರೇವಣ್ಣನವರನ್ನು ಎಸ್‌ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು ಬಂಧಿಸಿರುವುದಾಗಿ ಎನ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ರೇವಣ್ಣ ಅವರ ‘ನಿರೀಕ್ಷಣಾ ಜಾಮೀನು’ ಅರ್ಜಿ ವಜಾ ಮಾಡಲಾಗಿದೆ. ಇದರ ಬೆನ್ನಲೇ ಎಸ್‌ಐಟಿ ಅಧಿಕಾರಿಗಳು ರೇವಣ್ಣವರನ್ನು ಹುಡುಕಾಟ ಮಾಡುವುದಕ್ಕೆ ಮುಂದಾಗಿದ್ದರು. ಇದಲ್ಲದೇ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗಿದ್ದರು.

ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆ ಆರಂಭಿಸಿತು. ಈ ವೇಳೆ ಎಸ್‌ಐಟಿಯ ಎಸ್ ಪಿಪಿ ಲಿಖಿತ ಆಕ್ಷೇಪಣೆ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ ನಾಯಕ್ ಅವರು, ಇಲ್ಲಿ ಅತ್ಯಾಚಾರ ಪ್ರಕರಮ ಸಾಕ್ಷ್ಯ ವಿಚಾರಣೆ ನಡೆಯುತ್ತಿಲ್ಲ. ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು. ಇದರಲ್ಲಿ ನಿರಾಧಾರವಾದ ಕಿಡ್ನಾಪ್ ಆರೋಪ ಮಾತ್ರವಿದೆ ಎಂಬುದಾಗಿ ಮನವಿ ಮಾಡಿದರು. ಅಲ್ಲದೇ ಸಂತ್ರಸ್ತೆ ನೀಡಿದಂತ ದೂರಿನ ಹಿನ್ನಲೆಯಲ್ಲಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಎಫ್‌ಐಆರ್ ಪ್ರತಿಯನ್ನು ನ್ಯಾಯಪೀಠದ ಮುಂದೆ ಓದಿದರು.

ಹಲವಷ್ಟು ವಾದ ವಿವಾದಗಳ ನಂತರ ರೇವಣ್ಣ ಅವರ ‘ನಿರೀಕ್ಷಣಾ ಜಾಮೀನು’ ಅರ್ಜಿ ವಜಾ ಆಗಿದೆ. ಆ ನಂತರ ವಾದ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಹೆಚ್.ಡಿ ರೇವಣ್ಣ ಅವರು ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕೆಲ ಕಾಲ ಮುಂದೂಡಿತು. ಇದೇ ವೇಳೆ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

ಅದಾದ ನಂತರ ದೇವೇಗೌಡರ ನಿವಾಸದ ಬಳಿಯೇ ಅಧಿಕಾರಿಗಳು ಬಂದು ರೇವಣ್ಣ ಅವರನ್ನು ಅರೆಸ್ಟ್ ಮಾಡಿದ್ದಾರೆ.

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ: ಎಚ್‌ಡಿ ರೇವಣ್ಣನಿಂದ ಸಂತ್ರಸ್ತೆಯ ಅಪಹರಣ
ಹಾಸನ ಅಶ್ಲೀಲ ವಿಡಿಯೋ ವೈರಲ್‌ ಪ್ರಕರಣಕ್ಕೆ ಕೊನೆಗೂ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದೂರು ಕೊಟ್ಟ ಮೇಲೆ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಈ ಮಧ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು, ಎಚ್‌ ಡಿ ರೇವಣ್ಣ ಹಾಗೂ ಸತೀಶ್‌ ಬಾಬಣ್ಣ ಮೇಲೆ ಸಂತ್ರಸ್ತೆಯನ್ನು ಅಪಹರಿಸಿದ ದೂರು ದಾಖಲಾಗಿದೆ. ಎಪ್ರಿಲ್‌ 29 ರಂದು ಈ ಕೃತ್ಯ ನಡೆದಿದ್ದು, ಕೆಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಕೆಆರ್‌ ನಗರದ ಹೆಬ್ಬಾಲುವಿನಲ್ಲಿ ಈ ಕೃತ್ಯ ನಡೆದಿದ್ದು, ರಾಜು ಎಂಬವರು ದೂರು ದಾಖಲಿಸಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯನ್ನು ಅಪಹರಿಸಲಾಗಿದೆ. ಈ ಮೂಲಕ ಇಡೀ ಪ್ರಕರಣಕ್ಕೆ ಸಿನಿಮೀಯ ತಿರುವ ಸಿಕ್ಕಿದೆ.

ಸಂತ್ರಸ್ತೆ ದೂರು, ಸೆಕ್ಷನ್ 376 ದಾಖಲು ; ಪ್ರಜ್ವಲ್ ಗೆ ಜೈಲು ಫಿಕ್ಸ್, ಹೆಚ್.ಡಿ.ರೇವಣ್ಣ ಕಥೆ ಏನು?
ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಎ.1 ಆರೋಪಿಯಾಗಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತಂತ ಪುತ್ರ ಹಾಗೂ ತಂದೆ ಇಬ್ಬರೂ ನಿರೀಕ್ಷಣಾ ಜಾಮೀನು ಕೋರಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮೇಲೆ ನಾನ್ ಬೇಲೆಬಲ್ ಕೇಸ್ ಬುಕ್ ಆಗೋ ಸಾಧ್ಯತೆ ಇದೆ. ಹೀಗಾಗಿ ಅವರು ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಇಂದು ಬಂಧನಕ್ಕೆ ಒಳಗಾಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ನಡುವೆ ನಿನ್ನೆಯ ದಿನ ಪ್ರಜ್ವಲ್ ರಾಸಲೀಲೆ ಕೇಸ್ ತನಿಖೆ ನಡೆಸುತ್ತಿರುವಂತ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತೆಯನ್ನು ಹೊಳೆನರಸೀಪುರ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಸಂತ್ರಸ್ತ ಮಹಿಳೆಯಿಂದ ಜಡ್ಜ್ ಮುಂದೆ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ತಡರಾತ್ರಿ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ   ಸೆಕ್ಷನ್ 376 ದಾಖಲಾಗಿದೆ.

ಕ್ರೈಮ್​ ಇನ್​ವೆಸ್ಟಿಗೇಷನ್​​​ ಡಿಪಾರ್ಟ್​ಮೆಂಟ್​ ಪೊಲೀಸ್​ ಠಾಣೆಯಲ್ಲಿ ಪ್ರಜ್ವಲ್​ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್​​ 376(2), 506, 354(A) , 354(B), 354(C) ಅಡಿಯಲ್ಲಿ ಎಫ್​ಐಆರ್​ ಮಾಡಲಾಗಿದೆ. ಹೀಗಾಗಿ ಪ್ರಜ್ವಲ್​ ರೇವಣ್ಣ ವಿದೇಶದಿಂದ ಬರುತ್ತಿದ್ದಂತೆ ಜೈಲು ಸೇರುವ ಎಲ್ಲಾ ಸಾಧ್ಯತೆ ಮುಂದಿದೆ.

ಇಂದು ಹೊಳೆನರಸೀಪುರ ಜೆ ಎಂ ಎಫ್ ಸಿ ಕೋರ್ಟ್ ಹಾಗೂ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ನೀಡುವ ಆದೇಶದ ಮೇಲೆ ಆರೋಪಿಗಳಾದಂತ ಪ್ರಜ್ವಲ್, ರೇವಣ್ಣ ಭವಿಷ್ಯ ನಿರ್ಧಾರವಾಗಿದೆ. ನಾಳೆ ನಿರೀಕ್ಷಣಾ ಜಾಮೀನು ಸಿಗದೇ ಇದ್ರೇ, ಹೆಚ್.ಡಿ ರೇವಣ್ಣ ಕೂಡ ಬಂಧನವಾಗೋ ಸಾಧ್ಯತೆ ಇದೆ. ಅಲ್ಲದೇ ಹೊಳೆನರಸೀಪುರ ನ್ಯಾಯಾಲಯವು ಹೆಚ್.ಡಿ ರೇವಣ್ಣ ವಿರುದ್ಧವೂ 376 ಸೇರಿಸಲು ಅನುಮತಿಸಿದ್ದೇ ಆದ್ರೇ, ಇಬ್ಬರು ಆರೋಪಿಗಳೂ ಜೈಲು ಸೇರಲಿದ್ದಾರೆ.

ಚುನಾವಣಾ ಅಕ್ರಮ : ಹೆಚ್.ಡಿ.ರೇವಣ್ಣಗೆ ಸಮನ್ಸ್ ಜಾರಿ ಮಾಡುವಂತೆ ಹೈಕೋರ್ಟ್ ಆದೇಶ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಗೆದ್ದ ಶಾಸಕ ಹೆಚ್.ಡಿ.ರೇವಣ್ಣ ವಿರುದ್ಧ ಚುನಾವಣಾ ಅಕ್ರಮದ ದೂರು ಕೇಳಿ ಬಂದಿದೆ‌. ಈ ಹಿನ್ನೆಲೆಯಲ್ಲಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂಬ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತೊಮ್ಮೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ರೇವಣ್ಣ ಅವರು ಅಕ್ರಮಗಳನ್ನು ನಡೆಸುವ ಮೂಲಕ ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಪರಾಜಿತ ಅಭ್ಯರ್ಥಿ ವಕೀಲ ದೇವರಾಜೇಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರೇವಣ್ಣ ವಿರುದ್ಧ ಮತ್ತೆ ಸಮನ್ಸ್ ಗೆ ಆದೇಶಿಸಿದೆ.

ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಶಾಸಕ ಎಚ್ ಡಿ ರೇವಣ್ಣಗೆ ಸಮನ್ಸ್ ಜಾರಿಯಾಗದ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಸಮನ್ಸ್ ಜಾರಿಗೆ ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು ಮನವಿ ಮಾಡಿದ್ದಾರೆ.

ರೇವಣ್ಣ ಅವರ ಬೆಂಬಲಿಗರು ಮತದಾರರಿಗೆ ಹಣ ಹಂಚುವ ಮೂಲಕ ಮತದರಾರನ್ನು ಓಲೈಸಿದ್ದಾರೆ ಎಂಬ ಆರೋಪವೂ ಸೇರಿದಂತೆ ವಿವಿಧ ಅಕ್ರಮ ನಡೆಸಿ ಗೆದ್ದಿರುವ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಜಿ.ದೇವರಾಜೇಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.