HEAD BUSH – Peepal Media

ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ?: ಸುನಿಲ್‌ ಕುಮಾರ್‌ ಕಾರ್ಕಳ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ
ಬೆಂಗಳೂರು: ಡಾಲಿ ಧನಂಜಯ ಅಭಿನಯದ ಹೆಡ್‌ ಬುಷ್‌ ಸಿನಿಮಾದಲ್ಲಿ ಕನ್ನಡದ ಜನಪದ ನೃತ್ಯ ವೀರಗಾಸೆಗೆ ಅವಮಾನವಾಗಿದ್ದರೆ ಅಂತಹ ಆಂಶಗಳನ್ನು ಮರುಪರಿಶೀಲನೆ ಮಾಡಬೇಕು ಎಂಬ ಇಂಧನ ಸಚಿವ ಸುನಿಲ್‌ ಕುಮಾರ್‌ ಕಾರ್ಕಳ ಅವರ ಹೇಳಿಕೆಗೆ, ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದೆ.

ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ಟೀಟ್‌ ಮಾಡಿದ್ದು, ಹೆಡ್ ಬುಷ್ ಚಿತ್ರದಲ್ಲಿ ಇಲ್ಲದ ವಿವಾದ ಕಣ್ಣಿಗೆ ಬೀಳುತ್ತಲೇ ಹೆಡೆ ಎತ್ತಿ ಬುಸ್ ಬುಸ್ ಎನ್ನಲು ಹೊರಟಿರುವ ಸುನಿಲ್ ಕುಮಾರ್ ಕಾರ್ಕಳ ಅವರೇ, ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ? ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ? ಎಂದು ಟೀಕಿಸಿದೆ.

ಹೆಡ್ ಬುಷ್ ಚಿತ್ರದಲ್ಲಿ ಇಲ್ಲದ ವಿವಾದ ಕಣ್ಣಿಗೆ ಬೀಳುತ್ತಲೇ ಹೆಡೆ ಎತ್ತಿ ಬುಸ್ ಬುಸ್ ಎನ್ನಲು ಹೊರಟಿರುವ @karkalasunil ಅವರೇ,

ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ?

ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ?
— Karnataka Congress (@INCKarnataka) October 28, 2022

ಕಾಂಗ್ರೆಸ್‌ ಟೀಕೆಗೆ ಕಾರಣವಾದ ಸುನಿಲ್ ಕುಮಾರ್ ಕಾರ್ಕಳರವರ ಟ್ವೀಟ್‌

ಹೆಡ್‌ ಬುಷ್‌ ಸಿನಿಮಾದ ವಾದ-ವಿವಾದದ ಬಗ್ಗೆ ಟ್ವೀಟ್‌ ಮಾಡಿದ್ದ ಸುನಿಲ್ ಕುಮಾರ್ ಕಾರ್ಕಳರವರು, ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.

ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ, ಈ ಕುರಿತು ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ ಎಂದು ತಿಳಿಸಿದ್ದರು.

ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ. (2/2)
— Sunil Kumar Karkala (@karkalasunil) October 26, 2022

ಕರ್ನಾಟಕದ ಸುಂದರವಾದ ಮನಸ್ಸುಗಳಲ್ಲಿ ʼಡಾಲಿʼ ಧನಂಜಯ್ ಒಬ್ಬರು: ರಹಮತ್ ತರೀಕೆರೆ
ಬೆಂಗಳೂರು: ಹೆಡ್‌ ಬುಷ್‌ ಸಿನಿಮಾ ಕೆಲವರ ಷಡ್ಯಂತ್ರದಿಂದ ವಿವಾದಕ್ಕೆ ಸಿಲುಕಿ ನಾಯಕ ನಟ ಡಾಲಿ ಧನಂಜಯ ಅವರ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ನಾಡಿನ ಹಿರಿಯ ಸಂಸ್ಕೃತಿ ಚಿಂತಕ ಡಾ.ರಹಮತ್‌ ತರೀಕೆರೆ ನಟನ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ.

ತಮ್ಮ ಫೇಸ್ಬುಕ್‌ ಗೋಡೆಯ ಮೇಲೆ ಈ ಕುರಿತು ಬರೆದಿರುವ ರಹಮತ್‌ ತರೀಕೆರೆ, ʼಹೆಡ್‌ ಬುಷ್‌ ಸಿನಿಮಾದ ವಾದ ವಿವಾದಗಳಿಗೆ ಉತ್ತರ ನೀಡುವ ಸಂಧರ್ಭದಲ್ಲಿ ನಟ ಡಾಲಿ ಧನಂಜಯ ಅವರು ಪ್ರಾಸಂಗಿಕವಾಗಿ‌ ಆಡಿರುವ ಮಾತು, ಕೊಟ್ಟಿರುವ ಹೇಳಿಕೆಗಳನ್ನು ನೋಡಿದರೆ, ಕರ್ನಾಟಕದ ಸುಂದರವಾದ ಮನಸ್ಸುಗಳಲ್ಲಿ ʼಡಾಲಿʼ ಕೂಡ ಒಬ್ಬರುʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಾ.ರಹಮತ್‌ ತರೀಕೆರೆ

ಡಾಲಿ ಧನಂಜಯ್‌ ನಾಯಕ ನಟನಾಗಿ ಅಭಿನಯಿಸಿರುವ ಹೆಡ್‌ ಬುಷ್‌ ಸಿನಿಮಾದಲ್ಲಿನ ದೃಶ್ಯವೊಂದರಲ್ಲಿ ಕನ್ನಡದ ಸಂಸ್ಕೃತಿಯ ಭಾಗವಾಗಿರುವ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಕೆಲವರು ದಾಳಿ ನಡೆಸಿದ್ದರು. ಈ ಹಿನ್ನಲೆಯಲ್ಲಿ ಮಾಧ್ಯಮದಲ್ಲಿ ನಡೆದ ಸಂದರ್ಶನವೊಂದರಲ್ಲಿ ನಟ ಧನಂಜಯರವರು, ಈ ವಾದ-ವಿವಾದಗಳಿಗೆ ಉತ್ತರ ನೀಡಿದ್ದರು.

ಡಾಲಿ ಧನಂಜಯ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲದ ಮಹಾಪೂರವೇ ಹರಿದು ಬಂದಿದ್ದು ʼಬಡವ್ರ ಮಕ್ಕಳು ಬೆಳೀಬೇಕು ಕಣ್ರಯ್ಯʼ ಎಂಬ ಹ್ಯಾಶ್‌ಟ್ಯಾಗ್‌ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಚಿಂತಕ ರಹಮತ್ ತರೀಕೆರೆಯವರು ತಮ್ಮ ಪೇಸ್ಬುಕ್‌ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ʼನನಗೆ ನಟ ಡಾಲಿ ಧನಂಜಯ್ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ಮೊನ್ನೆಯಿಂದ ಅವರು ಪ್ರಾಸಂಗಿಕವಾಗಿ‌ ಆಡಿರುವ ಮಾತು, ಕೊಟ್ಟಿರುವ ಹೇಳಿಕೆಗಳನ್ನು ನೋಡಿದೆ. ‘ಇದು ಕರ್ನಾಟಕದ ಸುಂದರವಾದ ಮನಸ್ಸುಗಳಲ್ಲಿ ಒಂದು. ನನಗೆ ನಟ ಡಾಲಿ ಧನಂಜಯ್, ಬಸವಣ್ಣ ಕುವೆಂಪು ಅಂಬೇಡ್ಕರ್ ಚಿಂತನೆಗಳ ಬಿಸಿಲು-ಬೆಳಕು ಗಾಳಿ-ಮಳೆಯನುಂಡು ಚಿಗುರಿದ ಗಿಡ’ ಅನಿಸಿತುʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕನ್ನಡದ ವಿದ್ವತ್‌ ವಲಯವು ಸಹ ಸಿನಿಮಾ ನಟ ಡಾಲಿಯವರ ಕುರಿತು ಸದಭಿಪ್ರಾಯ ತಳೆಯುವ ಸೂಚನೆ ದೊರೆತಿದೆ.

ರಹಮತ್ ತರೀಕೆರೆ ಅವರ ಫೇಸ್‌ಬುಕ್‌  ಗೋಡೆಯ ಮೇಲಿನ ಬರಹ

ಹೆಡ್‌ ಬುಷ್: ಗೆಳೆಯನ ಬೆನ್ನಿಗೆ ನಿಂತ “ಕ್ವಾಟ್ಲೆ ಸತೀಶ”
ನಿನ್ನೆಯಿಂದ ಕಾವು ಪಡೆದುಕೊಂಡಿದ್ದ ಹೆಡ್‌ ಬುಷ್‌ ಸಿನೆಮಾದ ವಿವಾದವು ಸಿನೆಮಾ ಇಂದು ತುಂಬಿದ ಗೃಹಗಳಿಗೆ ಪ್ರದರ್ಶಗೊಳ್ಳುವುದರ ಜೊತೆ ಜೊತೆಗೆ ವಿವಾದವೆಬ್ಬಿಸಿದ್ದ ಕಿಡಿಗೇಡಿ ದನಿಗಳೂ ಉಡುಗಿ ಹೋಗಿವೆ. ಆದರೆ “ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ” ಎಂದು ತನ್ನ ಮುಗ್ಧ ನಗುವಿನೊಡನೆ ಜನರ ಮನಸ್ಸು ಗೆದ್ದಿದ್ದ ಧನಂಜಯ ಅವರಿಗೆ ಹರಿದು ಬರುತ್ತಿರುವ ಬೆಂಬಲದ ಮಹಾಪೂರ ಇನ್ನೂ ನಿಂತಿಲ್ಲ.

ಬೆಂಬಲದ ಪ್ರವಾಹದಲ್ಲಿ ಮುಳುಗೇಳುತ್ತಿರುವ ಧನಂಜಯ ಅವರಿಗೆ ಈಗ ಅವರ ಗೆಳೆಯ ನೀನಾಸಂ ಸತೀಶ್‌ ಅವರು ಸಾಥ್‌ ನೀಡಿದ್ದು, ಗೆಳೆಯನ ಜೊತೆ ನಾನಿದ್ದೇನೆ ಎಂದು ಸಾರಿದ್ದಾರೆ. ಈ ಕುರಿತು ತನ್ನ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಸತೀಶ್‌, “ಧನು ನನ್ನ ಗೆಳೆಯ,ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವಿಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು,ಸುಮ್ಮನೆ ಸಣ್ಣ ಕಾರಣ ಹಿಡಿದು ಅವನ ತೇಜೊ ವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ,” ಎಂದಿದ್ದಾರೆ.

ಧನು ನನ್ನ ಗೆಳೆಯ,ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವಿಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು,ಸುಮ್ಮನೆ ಸಣ್ಣ ಕಾರಣ ಹಿಡಿದು ಅವನ ತೇಜೊ ವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ. @Dhananjayaka #WeStandWithDhananjaya pic.twitter.com/tuR9mko5tF
— Sathish Ninasam (@SathishNinasam) October 27, 2022

ನೀನಾಸಂ ಸತೀಶ ಅವರ ಟ್ವೀಟ್

ನಿನ್ನೆ ವಿವಾದ ಆರಂಭಗೊಂಡಾಗಿನಿಂದ ಧನಂಜಯ ಅವರ ಚಿತ್ರಕ್ಕೆ ವಿದೇಶದಲ್ಲಿರುವವರು ಕೂಡಾ ಟಿಕೆಟ್‌ ಬುಕ್ ಮಾಡಿ ಬೆಂಬಲ ತೋರಿದ್ದರು. ಇಂದು ಬಹಳಷ್ಟು ಜನರು ಟಾಕೀಸಿಗೆ ಹೋಗಿ ಸಿನೆಮಾ ನೋಡಿ ತಮ್ಮ ಫೇಸ್ಬುಕ್‌ ಟ್ವಿಟರ್‌ ಖಾತೆಗಳಲ್ಲಿ ಫೋಟೊ ಹಾಕುತ್ತಿದ್ದಾರೆ. ಎಲ್ಲದಕ್ಕೂ ಧಾರ್ಮಿಕ ತಿರುವು ನೀಡುತ್ತಿದ್ದ ಕಿಡಿಗೇಡಿಗಳಿಗೆ ಜನರೇ ಸರಿಯಾಗಿ ಉತ್ತರಿಸುತ್ತಿದ್ದಾರೆನ್ನುವುದು ಜನರ ಅಂಬೋಣ.

ಅಭಿಮಾನಿಗಳ “ಡಾಲಿಗೆ” ಬೆಂಬಲದ ಮಹಾಪೂರ
ಡಾಲಿ ಧನಂಜಯ ಅಭಿನಯದ ಹೆಡ್‌ ಬುಶ್‌ ಚಿತ್ರದ ವಿವಾದದ ಹಿನ್ನೆಲೆಯಲ್ಲಿ ಅವರಿಗೆ ಅಭಿಮಾನಿಗಳ ಬೆಂಬಲದ ಮಹಾಪೂರವೇ ಹರಿದುಬರುತ್ತಿದ್ದು. ಸೋಷಿಯಲ್‌ ಮೀಡಿಯಾದ ತುಂಬಾ #westandwithdhananjay ಎನ್ನುವ ಹೆಸರಿನ ಹ್ಯಾಷ್‌ ಟ್ಯಾಗ್‌ ಟ್ರೆಂಡ್‌ ಮಾಡಲಾಗಿದೆ. ಜೊತೆಗೆ “ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ” ಎನ್ನುವ ಡಯಲಾಗ್‌ ಕೂಡಾ ವೈರಲ್‌ ಆಗುತ್ತಿದೆ.

ಚಲನಚಿತ್ರಗಳನ್ನು ಧಾರ್ಮಿಕ ಆಯಾಮದಿಂದ ನೋಡುತ್ತಾ ಚಿತ್ರಗಳಿಗೆ ಬಹಿಷ್ಕಾರ ಹಾಕುವ ಕೆಟ್ಟ ಸಂಪ್ರದಾಯ ಆರಂಭಗೊಂಡಿರುವ ಕುರಿತು ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಹಿದೆಯೂ ಸಾಕಷ್ಟು ಚಿತ್ರಗಳಲ್ಲಿ ಇಂತಹ ದೃಶ್ಯಗಳಿದ್ದರೂ ಆಗ ಆಗಿರದ ವಿವಾದಗಳು ಈಗ ತಲೆಯೆತ್ತುತ್ತಿರುವುದು ನಾವು ಸಾಮಾಜಿಕವಾಗಿ ಹಿಮ್ಮುಖ ಚಲನೆಗೆ ತೊಡಗಿರುವುದರ ಸಂಕೇತವಾಗಿದೆ ಎನ್ನುವುದು ಬಹುತೇಕ ಜನರ ಅಭಿಪ್ರಾಯವಾಗಿದೆ.

ಸೋಷಿಯಲ್‌ ಮೀಡಿಯಾಗಳಲ್ಲಿ ಇಂತಹ ಟ್ರೆಂಡುಗಳು ಸರ್ವೇ ಸಾಮಾನ್ಯವಾಗಿದ್ದರೂ ಇದುವರೆಗೆ ಚಿತ್ರಗಳ ಮೇಲೆ ಅದರ ಪರಿಣಾಮ ಶೂನ್ಯವೆಂದೇ ಹೇಳಬೇಕಾಗುತ್ತದೆ. ಯಾಕೆಂದರೆ ಇಂತಹ ಬಾಯ್ಕಾಟ್‌ ಕಲ್ಚರ್‌ ಎದುರಿಸಿದ ಸಿನೆಮಾಗಳು ಈ ಹಿಂದೆ ಸಾಕಷ್ಟು ಗೆದ್ದಿವೆ. ಕೆಲವು ಚಿತ್ರಗಳು ಸೋತಿವೆಯಾದರೂ ಅದರ ಹಿಂದಿನ ಕಾರಣಗಳು ಬೇರೆಯವೇ ಇವೆ. ವಿಚಾರವಂತಿಕೆಯನ್ನು ಮರೆತ ಸಮಾಜ ಮಾತ್ರವೇ ಹೀಗೆ ಬಹಿಷ್ಕಾರದ ಸಂಸ್ಕೃತಿಯನ್ನು ಪೋಷಿಸಲು ಸಾಧ್ಯ, ಪ್ರಸ್ತುತ ಇನ್ನೂ ನಮ್ಮ ಸಮಾಜ ಆ ಮಟ್ಟಕ್ಕಿಳಿದಿಲ್ಲದಿರುವುದು ಸಮಧಾನಕರ ವಿಷಯ ಎಂದು ಸಿನೆಮಾ ಕರ್ಮಿಯೊಬ್ಬರು ಪೀಪಲ್‌ ಮೀಡಿಯಾಕ್ಕೆ ತಿಳಿಸಿದ್ದಾರೆ.

ಹೆಡ್‌ ಬುಶ್‌ ಚಿತ್ರಕ್ಕೆ ಬಂದಿರುವ ವಿರೋಧವೂ ಆ ಚಿತ್ರಕ್ಕೆ ಬೆಂಬಲವಾಗಲಿದೆ ಎನ್ನುವುದು ಕೆಲವು ತಜ್ಞರ ಅಭಿಪ್ರಾಯವಾಗಿದೆ. ಏಕೆಂದರೆ ಇದರಿಂದ ಚಿತ್ರವು ಚರ್ಚೆಯಾಗಿ ಒಂದಷ್ಟು ಪ್ರಚಾರದಲ್ಲಿರಲು ಸಹಾಯವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಇದು ಕೆಲವು ಚಿತ್ರಗಳ ವಿಷಯದಲ್ಲಿ ನಿಜವಾಗಿದೆ ಕೂಡ.

ಇನ್ನು ಚಿತ್ರ ನಿರ್ದೇಶಕ, ಕವಿ, ಗೀತರಚನೆಕಾರ ಕವಿರಾಜ್‌ ಅವರು ಧನಂಜಯ್‌ ಮತ್ತು ಚಿತ್ರ ತಂಡವನ್ನು ಬೆಂಬಲಿಸಿ ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದು, “ಯಶ್ , ರಿಷಭ್ ಶೆಟ್ಟಿ ಅವರಂತೆ ಡಾಲಿ ಧನಂಜಯ್ ಕೂಡಾ ಇಡೀ ಸಿನಿಮಾ ಉದ್ಯಮಕ್ಕೆ ತಿರುವು ಕೊಡಬಲ್ಲ ತುಡಿತ ಮತ್ತು ಸಾಮರ್ಥ್ಯವಿರುವ ಕ್ರಿಯಾಶೀಲ , ಸೃಜನಶೀಲ ಯುವ ನಟ . ಈಗಾಗಲೇ ಉದ್ಯಮಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಅವಕಾಶ ನೀಡುವ ಹೆಜ್ಜೆಯಿಟ್ಟಿದ್ದಾರೆ. ಇದೀಗ ಪ್ರದರ್ಶನ ಗೊಳ್ಳುತ್ತಿರುವ ಅವರ ಹೆಡ್ ಬುಷ್ ಚಿತ್ರವು ಉತ್ತಮವಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಸಿನಿಮಾ ಒಂದು ಕಲೆ. ನಿರ್ದೇಶಕನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮ‌.

ಬಣ , ಪಂಥಗಳ ಆಧಾರದ ದ್ವೇಷದಲ್ಲಿ

ಭಾವನೆಗೆ ಧಕ್ಕೆ ಎಂಬ ಹುಸಿ ಆರೋಪದಡಿ ಸಿನಿಮಾವನ್ನು ವಿರೋಧಿಸುವುದು ತಪ್ಪು. ಜನರಲ್ ಆಗಿ‌, ಗೈಡ್ ಲೈನ್ಸ್ ಅನುಸಾರ ಅಸಮ್ಮತ ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸದಂತೆ ತಡೆಯಲು ಸರ್ಕಾರವೇ ನೇಮಿಸಿರುವ ಸೆನ್ಸಾರ್ ಮಂಡಳಿ ಇದೆ.

ವೀರಗಾಸೆ ಕುಣಿತದವರ ಮಾರುವೇಷದಲ್ಲಿ ಬಂದವರನ್ನು ಥಳಿಸುವ ದೃಶ್ಯಗಳ ಕುರಿತು ಧನಂಜಯ್ ಅವರ ವಿವರಣೆಯು ಸಮಂಜಸವಾಗಿದೆ. ಯಾವುದೋ ಪರಭಾಷಾ‌ ಹಾಡಿನ ಟ್ಯೂನಿಗೆ ಹೋಲಿಕೆ ಇರುವ ಕಾರಣಕ್ಕೆ ಕಾಂತಾರ ಚಿತ್ರದ ಹಾಡಿಗೆ ಅಪಪ್ರಚಾರ ಮಾಡುತ್ತಿರುವವರಿಗೂ ಇದೇ ಮಾತು ಅನ್ವಯಿಸುತ್ತೆ . ಆ ಹಾಡುಗಳಲ್ಲಿ ಕೆಲವು ಸಾಮ್ಯತೆ ಇರಬಹುದೇ ಹೊರತು , ಇದು ಅದರ ನಕಲು ಖಂಡಿತಾ ಅಲ್ಲ ಎಂಬುದು ಎರಡು ದಶಕಕ್ಕು ಹೆಚ್ಚು ಕಾಲ ಗೀತರಚನೆಯ ಅನುಭವವಿರುವ ನನ್ನ ಖಚಿತ ನಿಲುವು.

ಧನಂಜಯ್ ಕನ್ನಡ ಚಿತ್ರರಂಗದ ಆಸ್ತಿ. ಧನಂಜಯ್ ಸೂಕ್ಷ್ಮ ಸಂವೇದನೆಯುಳ್ಳ ವಿಚಾರಶೀಲ ,ಕಲಾ ಪ್ರೇಮಿ. ಅವರಿಂದ ಯಾವ ಕಲೆಗೂ ಅಪಚಾರ ಆಗಿಲ್ಲ ,ಆಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಅವರ ಮತ್ತು ಹೆಡ್ ಬುಷ್ ನಿರ್ದೇಶಕರ ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಸದಾ ಬೆಂಬಲಿಸುತ್ತೇನೆ.” ಎಂದು ಹೇಳಿದ್ದಾರೆ.

ಸಾಮಾಜಿಕ ಚಿಂತಕರಾದ ನಾಗೇಗೌಡ ಕೀಲಾರ ಅವರೂ ಈ ಕುರಿತು ಪೋಸ್ಟ್‌ ಮಾಡಿದ್ದು ಒಂದು ಪೋಸ್ಟಿನಲ್ಲಿ “ಹಲ್ಕಾಗಳನ್ನು ನಿಜವಾಗಿಯೂ ಚಾಲೆಂಜ್ ಮಾಡುವ ಸಮಯ ಬಂದಿದೆ.ಇವರುಗಳ ಸಾಂಸ್ಕ್ರತಿಕ ಗೋಂಡಾಗಿರಿಗೆ ತಕ್ಕ ಉತ್ತರ ನೀಡಬೇಕು….” ಎಂದಿದ್ದಾರೆ

ಅವರು ಈ ಕುರಿತು ವ್ಯಂಗ್ಯವಾದ ಆದರೆ ಮೊನಚಾದ ಪೋಸ್ಟರ್‌ ಒಂದನ್ನು ಶೇರ್‌ ಮಾಡಿದ್ದು ಅದರ ಲಿಂಕ್‌ ಕೆಳಗಿದೆ

https://www.facebook.com/plugins/post.php?href=https%3A%2F%2Fwww.facebook.com%2Fpermalink.php%3Fstory_fbid%3Dpfbid0Txi4qgbiHUjonBUbPSU3af6jMQatvdSzX2rQGSsCj79ADMkWsdV6uoY9pWHp3nfxl%26id%3D1668871181&show_text=true&width=500

ಇನ್ನಷ್ಟು ಈ ಕುರಿತು ಪೋಸ್ಟುಗಳನ್ನು ಈ ಹ್ಯಾಶ್‌ ಟ್ಯಾಗ್‌ಗಳ ಮೇಲೆ ಕ್ಲಿಕ್‌ ಮಾಡುವ ಮೂಲಕ ನೋಡಬಹುದು.

#HeadBush

#WeStandWithDhananjaya

ಟ್ವಿಟರ್‌ನಲ್ಲೂ ಈ ವಿಷಯ ಟ್ರೆಂಡ್‌ ಆಗುತ್ತಿದ್ದು ಹಲವರು ಈ ಕುರಿತು ಟ್ವೀಟ್‌ ಮಾಡುತ್ತಿದ್ದಾರೆ.

#dhanjay #HeadBush #daali@Dhananjayaka @daali_pictures @Dhananjaya_Fans #DaaliDhananjaya pic.twitter.com/Frq04MsYSi
— ಕೇಶವ ಟಾಕೀಸ್ 🎥 🎬 R.keshavamurthy (@KESHAVAMURTHYR) October 26, 2022

ʼಹೆಡ್‌ ಬುಷ್‌ʼ| ಆತ್ಮ ಕಥೆಯಲ್ಲ- ಜೀವನ ಕಥೆ: ಅಗ್ನಿ ಶ್ರೀಧರ್‌
ಬೆಂಗಳೂರು: ಗುರುವಾರ ರಾಜ್ಯಾದಾದ್ಯಂತ ʼಹೆಡ್‌ ಬುಷ್‌ʼ ಸಿನಿಮಾದ ಪ್ರೀಮಿಯರ್‌ ಶೋ ಬಿಡುಗಡೆಯಾಗಿದ್ದು, ಸಿನಿಮಾ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾಕಡೆ ಬೆಂಗಳೂರಿನ ಭೂಗತ ದೊರೆ ಎಂ.ಪಿ. ಜಯರಾಜ್‌ ಎನ್ನುವ ಕೂಗು ಕೇಳಿಬರುತ್ತಿದೆ.

ʼನಟ ರಾಕ್ಷಸʼ ಡಾಲಿ ಧನಂಜಯ ನಾಯಕನಾಗಿ ಅಭಿನಯಿಸಿರುವ ʼಹೆಡ್‌ ಬುಷ್‌ʼ ಸಿನಿಮಾದ ಪ್ರೀಮಿಯರ್‌ ಶೋ ಗುರುವಾರ ಬಿಡುಗಡೆಯಾಗಿದ್ದು, ಈಗಾಗಲೇ ಸಿನಿಮಾ ಸಂದರ್ಶಕರಿಂದ ಮತ್ತು ಅಭಿಮಾನಿಗಳಿಂದ ಮೆಚ್ಚುಗೆ ಪಡದುಕೊಂಡಿದೆ.

1970ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಪರಿಚಯಿಸಲಿರುವ ಈ ಚಿತ್ರ, ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಸಿನಿಮಾದ ಪ್ರೀಮಿಯರ್‌ ಶೂ ಬಿಡುಗಡೆ ನಂತರ ಭೂಗತ ಲೋಕದ ಕಥೆಯನ್ನು ಸಿನಿಮಾ ಮಾಡಬೇಕು ಎಂದೆನಿಸಿದ್ದು ಏಕೆ? ಎಂದು ಪೀಪಲ್‌ ಟಿವಿ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಗ್ನಿ ಶ್ರೀಧರ್ ಅವರು, ಇದು ಆತ್ಮ ಕಥೆಯಲ್ಲಾ, ಇದು ಬದುಕಿನ ಕಥೆ. ನಾನು ಜೀವನದಲ್ಲಿ ಸಂಚಾರಿಸಿದ ರೀತಿಯ ಕಥೆ. ಹಾಗಾಗಿ ಸಿನಿಮಾ ಮಾಡಬೇಕು ಎಂದೆನಿಸಿದ್ದು ಎಂದರು.

ಇದನ್ನು ನೋಡಿ: ಇದು ಸಿನಿಮಾ ಅಲ್ಲ, ಬದುಕಿನ ಕಥೆ ಎಂದು ಅಗ್ನಿ ಶ್ರೀಧರ್‌ ಹೇಳಿದ್ಯಾಕೆ?

ಬದುಕಿನಲ್ಲಿ, ಒಳ್ಳೆಯವರು, ಕೆಟ್ಟವರು, ಪೊಲೀಸ್‌ ಅಧಿಕಾರಿಗಳು, ರಾಜಕಾರಣಿಗಳು, ಸಮಾನ್ಯ ಜನರು ಎಲ್ಲಾರು ಇದ್ದಾರೆ, ಹಾಗೆ ಒಂದು ಸಾಹಿತ್ಯ ಹೇಗೂ ಸಿನಿಮಾನು ಅದೇ ರೀತಿಯಾದಂತದ್ದು, ಆ ಸಿನಿಮಾ ಒಂದು ಬದುಕನ್ನು ಹಿಡಿದಿಟ್ಟಾಗ ತುಂಬಾ ಸಂತೋಷವಾಗುತ್ತೆ. ಆ ದೃಷ್ಟಿಕೋನದಿಂದ ಈ ಸಿನಿಮಾ ನಿರ್ಮಾಣವಾಗಿರೋದು, ಹೀಗಾಗಿ ಹೆಡ್‌ ಬುಷ್‌ ಒಂದು ಮ್ಯಾಜಿಕಲ್‌ ನಿನಿಮಾ, ಜನರು ಈ ಸಿನಿಮಾವನ್ನು ಇಷ್ಟಪಡುತ್ತಾರೆ ಮತ್ತು ಇದು ಕಂಡಿತವಾಗಿ ಯಶಸ್ವಿಯಾಗುತ್ತೆ ಎಂದರು.

ಅಗ್ನಿ ಶ್ರೀಧರ್‌ ಅವರ ಕಥೆ-ಚಿತ್ರ ಕಥೆ- ಸಂಭಾಷಣೆ ಮತ್ತು ಶೂನ್ಯ ಅವರ ನಿರ್ದೇಶನದ ಈ ಸಿನಿಮಾವನ್ನು, ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಈ ಚಿತ್ರಕ್ಕೆ ಚರಣರಾಜ್ ಸಂಗೀತ ನೀಡಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್, ಡೈನಾಮಿಕ್ ಸ್ಟಾರ್ ದೇವರಾಜ್, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಇಂದು ಹೆಡ್‌ ಬುಷ್‌ ನಿನಿಮಾ ರಾಜ್ಯಾದಾದ್ಯಂತ ತೆರೆಕಾಣಲಿದ್ದು, ಯಶಸ್ವಿ ಪ್ರದರ್ಶನ ಕಾಣಲಿ ಎಂದು ಪೀಪಲ್‌ ಟಿವಿ ಶುಭ ಹಾರೈಸುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಹೆಡ್ ಬುಷ್ ಟ್ರೈಲರ್ : ಎಲ್ಲೆಡೆ ಜಯರಾಜ್‌ನದ್ದೇ ಹವಾ!
‘ಹೆಡ್ ಬುಷ್’ ಹೆಸರು ಕೇಳಿದ್ರೆ ನೆನಪಾಗೋದು ಬಾಲ್ಯ. ಕ್ರಿಕೇಟ್ ಆಡುವಾಗ, ಗಿಲ್ಲಿ ದಾಂಡು ಆಡುವಾಗ ಇನ್ನಿತರೆ ಆಟವಾಡಬೇಕಾದರೆ ಟಾಸ್ ಹಾಕಲು ಬಳಸುತ್ತಿದ್ದ ಪದವದು. ಈಗ ಇದೇ ʼಹೆಡ್ ಬಿಷ್ʼ ಎಂಬ ಶೀರ್ಷಿಕೆಯಡಿ ನಟ ರಾಕ್ಷಸ ಡಾಲಿ ಧನಂಜಯ ಅಭಿನಯಿಸಿ, ನಿರ್ಮಾಣ ಕೂಡ ಮಾಡಿದ್ದಾರೆ. ಈಗ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.

ನಿನ್ನೆ ದಾವಣಿಗೆಯಲ್ಲಿ ಹೆಡ್ ಬುಷ್ ಪ್ರೀ ರಿಲೀಸ್ ಇವೆಂಟ್ ಕೂಡ ಭರ್ಜರಿಯಾಗಿ ನೆರವೇರಿದೆ. ಯೂಟ್ಯೂಬ್ ನಲ್ಲಿ ಟ್ರೈಲರ್ 59 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ಭಾರೀ ಸದ್ದು ಮಾಡುತ್ತಿದೆ. 1970ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಪರಿಚಯಿಸಲಿರುವ ಈ ಚಿತ್ರ, ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.

ಬೆಂಗಳೂರಿನ ಭೂಗತ ಲೋಕದ ಡಾನ್ ಆಗಿದ್ದ ಜಯರಾಜ್ ಪಾತ್ರವನ್ನು ಡಾಲಿ ಧನಂಜಯ್ ನಿರ್ವಹಿಸಿದ್ದಾರೆ. ಬಣ್ಣದ ಶರ್ಟ್, ಬೆಲ್ ಬಾಟಂ ಪ್ಯಾಂಟ್ ದರಿಸಿ ಪ್ರೇಕ್ಷಕರನ್ನು 70ರ ದಶಕಕ್ಕೆ ಕರೆದೊಯ್ಯಲಿದ್ದಾರೆ. ಡಾನ್ ಜಯರಾಜ್ ಅವರ ಪಾತ್ರಕ್ಕೆ ಡಾಲಿ ಧನಂಜಯ್ ಜೀವ ತುಂಬಿದ್ದಾರೆ ಎನ್ನುವುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ.

ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಹೊಸ ನಿರ್ದೇಶಕ ಶೂನ್ಯ ಅವರು ಆಕ್ಷನ್-ಕಟ್ ಹೇಳಿದ್ದಾರೆ. ಕ್ರೇಜಿಸ್ಟಾರ್‌ ರವಿಚಂದ್ರನ್‌, ಲೂಸ್‌ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್‌, ಶೃತಿ ಹರಿಹರನ್‌, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಹೆಡ್ ಬುಷ್ ಚಿತ್ರದ ನಾಯಕಿಯಾಗಿ ಪಾಯಲ್‌ ರಜಪೂತ್‌ ನಟಿಸಿದ್ದಾರೆ. ದೆಹಲಿ ಮೂಲದ ಇವರು ಸ್ಯಾಂಡಲ್‌ವುಡ್ ಮೂಲಕ ಬಿಗ್ ಸ್ಕ್ರೀನ್ ಗೆ ಕಾಲಿಟ್ಟಿದ್ದಾರೆ.

ಹೆಡ್‌ ಬುಷ್‌ ಟ್ರೈಲರ್‌ ನಲ್ಲಿ ತಾಂತ್ರಿಕ ದೋಷ: ತಡವಾಗಿ ಟ್ರೈಲರ್‌ ಬಿಡುಗಡೆ
ಬೆಂಗಳೂರು: ನಟ ರಾಕ್ಷಸ ಡಾಲಿ ಧನಂಜಯ್‌ ಅಭಿನಯನದ ʼಹೆಡ್‌ ಬುಷ್‌ʼ ನಿನಿಮಾದ ಟ್ರೈಲರ್‌ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಟ್ರೈಲರ್‌ ಅನ್ನು ಭಾನುವಾರ ಸಂಜೆ ಪ್ರಸ್ತುತಪಡಿಸುತ್ತೆವೆ ಎಂದು ʼಹೆಡ್‌ ಬುಷ್‌ʼ ಚಿತ್ರತಂಡ ತಿಳಿಸಿದೆ.

ಈ ಕುರಿತು ನಟ ಡಾಲಿ ಧನಂಜಯ್‌ ಅವರು ಸಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ʼಹೆಡ್‌ ಬುಷ್‌ʼ ಸಿನಿಮಾದ ಟ್ರೈಲರ್‌ ಅನ್ನು ಇಂದು ಬೆಳಗ್ಗೆ 11.05 ಕ್ಕೆ ನಿಮ್ಮ ಮುಂದೆ ಪ್ರಸ್ತುತಪಡಿಸಬೇಕಿತ್ತು. ಆದರೆ ಕೆಲವು ತಾಂತ್ರಿಕ ಅಡೆತಡೆಗಳಿಂದ ಇಂದು ಸಂಜೆ  5.55 ಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ತಿಳಿಸಿದ್ದು, ತಡವಾಗಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿರುವ ನಟ ಧನಂಜಯ್‌ ಮತ್ತು ಯೋಗೇಶ್‌

ಇಡೀ ಹೆಡ್‌ ಬುಷ್‌ ಚಿತ್ರ ತಂಡವು ಚಿತ್ರದ ಟ್ರೈಲರ್‌ ಅರ್ಪಿಸುವ ಮೊದಲು, ಬಂಡಿ ಮಾಕಾಳಮ್ಮನ ಆಶೀರ್ವಾದದೊಂದಿಗೆ ಪ್ರಯಾಣವನ್ನು ಶುರು ಮಾಡಿ, ಸಂಜೆ ದಾವಣಗೆರೆಗೆ ಭೇಟಿ ನೀಡಲಿದೆ.