helth news – Peepal Media

ರಾಜ್ಯದಲ್ಲಿ ಚಿಕೂನ್ ಗುನ್ಯಾ, ಡೆಂಗ್ಯೂ ಹೆಚ್ಚಳ : ಸಾಂಕ್ರಾಮಿಕ ರೋಗ ಹರಡುವ ಭಯದಲ್ಲಿ ಜನರು!
ರಾಜ್ಯದಲ್ಲಿ ಹವಾಮಾನದ ವೈಪರೀತ್ಯ ಹಿನ್ನಲೆ ಭಾರಿ ಮಳೆ ಸುರಿಯುತ್ತಿದೆ. ಹಲವೆಡೆ ಪ್ರವಾಹ ಭೀತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿ ಮಹಾಮಾರಿ ಡೆಂಗ್ಯೂ ಕೂಡ ಹೆಚ್ಚಳವಾಗಿದೆ.

ಹೌದು, ಮಳೆಯ ನಡುವೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಎಲ್ಲೆಡೆ ಚಿಕೂನ್ ಗುನ್ಯಾ, ಡೆಂಗ್ಯೂ ಸಾಂಕ್ರಾಮಿಕ ರೋಗ ಹರಡುತ್ತಿದೆ. ರಾಜ್ಯದಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಉಲ್ಬಣಗೊಳ್ಳುತ್ತಿದ್ದು, ಈ ವಾರದಲ್ಲಿ 264 ಪ್ರಕರಣಗಳು ದೃಢಪಟ್ಟಿವೆ.

ಈ ವರ್ಷ 1.10 ಲಕ್ಷಕ್ಕೂ ಅಧಿಕ ಡೆಂಗ್ಯೂ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 47 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಈವರೆಗೆ 5,656 ಡೆಂಗ್ಯೂ ಕಂಡುಬಂದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ 28 ಜಿಲ್ಲೆಗಳಲ್ಲಿ 1,354 ಚಿಕೂನ್ ಗುನ್ಯಾ ಪ್ರಕರಣಗಳು ಕೂಡ ಪತ್ತೆಯಾಗಿವೆ.

ಕಳೆದ ತಿಂಗಳು ಆಗಸ್ಟ್ ನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 5 ಸಾವಿರ ಇತ್ತು. ಆಗಲೂ ನಾಲ್ಕು ಸಾವುಗಳು ವರದಿಯಾಗಿದ್ದವು. ಬೆಂಗಳೂರು ಒಂದರಲ್ಲೇ 1102 ಕೇಸ್ ದಾಖಲಾಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ ಎಂದು NDTV ವರದಿ ಮಾಡಿದೆ.

2016 ರಲ್ಲಿ 6083 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದರೆ ಎಂಟು ಮಂದಿ ಸಾವನಪ್ಪಿದ್ದರು. 2017 ರಲ್ಲಿ 17,844 ಪ್ರಕರಣಗಳು ವರದಿಯಾದರೆ, ಹತ್ತು ಮಂದಿ ಸಾವನಪ್ಪಿದ್ದರು‌. 2018 ರಲ್ಲಿ 4,848 ಜನರಿಗೆ ಡೆಂಗ್ಯೂ ಡೃಢವಾಗಿದ್ದು, ನಾಲ್ಕು ಮಂದಿ ಸಾವನಪ್ಪಿದ್ದರು. 2019 ರಲ್ಲಿ 18,183 ಪ್ರಕರಣ ದಾಖಲಾಗಿದ್ದು 17 ಜನ ಸಾವನಪ್ಪಿದ್ದರು‌. 2021 ರಲ್ಲಿ 7,189 ಪ್ರಕರಣಗಳು ದಾಖಲಾದರೆ. ಐದು ಮಂದಿ ಸಾವನಪ್ಪಿದ್ದಾರೆ‌. 2022 ರ ಇಲ್ಲಿವರೆಗೆ 4738 ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಜನರು ಸಾವನಪ್ಪಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಮಳೆ ನೀರು ಇಳಿಮುಖವಾದ ನಂತರ ಅನೇಕ ರೋಗಗಳು ಹರಡುವ ಅಪಾಯವಿದೆ. ಈ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುತ್ತಿದ್ದಾರೆ ತಜ್ಞರು.

ಮಳೆ ಮತ್ತು ಪ್ರವಾಹದಿಂದಾಗಿ ಅತಿಸಾರ, ಕಾಲರಾ, ಟೈಫಾಯಿಡ್, ಗ್ಯಾಸ್ಟ್ರೋ ಎಂಟರೈಟಿಸ್, ಚರ್ಮ ರೋಗಗಳು, ಕಣ್ಣಿನ ಸೋಂಕುಗಳು, ಹೆಪಟೈಟಿಸ್-ಎ, ಡೆಂಗ್ಯೂ, ಲೆಪ್ಟೊಸ್ಪೈರೋಸಿಸ್, ಮಲೇರಿಯಾ ಇತ್ಯಾದಿಗಳು ಹರಡುವ ಅಪಾಯವಿದೆ. ವೈರಲ್ ಸೋಂಕಿನ ಪ್ರಕರಣಗಳು ಸಹ ಹೆಚ್ಚಾಗಬಹುದು.

ಕರ್ನಾಟಕದಲ್ಲಿ ‌ʼಮಂಕಿಪಾಕ್ಸ್ʼ ಮೂರನೇ ಶಂಕಿತ ವ್ಯಕ್ತಿಗೆ ನೆಗೆಟಿವ್‌ ಫಲಿತಾಂಶ
ಬೆಂಗಳೂರು:  ರಾಜ್ಯದಲ್ಲಿ ಮಂಕಿಪಾಕ್ಸ್‌ ಮೂರನೇ ಶಂಕಿತ ವ್ಯಕ್ತಿಗೆ ಸೊಂಕಿನ ಲಕ್ಷಣಗಳು ಕಂಡುಬಂದಿದ್ದರು ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದೆ.

ಬೆಲ್ಜಿಯಂನಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಟಿಬೆಟಿಯನ್ ಕ್ಯಾಂಪ್‌ಗೆ ಬಂದಿದ್ದ, ಒಂಬತ್ತು ವರ್ಷದ ಟಿಬೆಟಿಯನ್ ಬಾಲಕನಿಗೆ ಚರ್ಮದಲ್ಲಿ ದದ್ದು ಸೇರಿದಂತೆ ಮಂಗನ ಕಾಯಿಲೆಯ ಲಕ್ಷಣಗಳು ಕಂಡು ಬಂದಿದ್ದು, ಆತನನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿರುವ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ (ವಿಆರ್‌ಡಿಎಲ್) ಸೋಮವಾರ ಸಂಜೆ ಮಂಗನ ಕಾಯಿಲೆ ಪರೀಕ್ಷೆಗಾಗಿ ಅವರ ಮಾದರಿಯನ್ನು ಸ್ವೀಕರಿಸಿದ್ದು, ನೆಗೆಟಿವ್‌ ಫಲಿತಾಂಶ ಬಂದಿದೆ ಎಂದು ತಿಳಿಸಿದೆ.

ಜುಲೈ 1 ರಂದು ಮಗು ತನ್ನ ಹೆತ್ತವರು ಮತ್ತು ಟಿಬೆಟಿಯನ್ ಪಾದ್ರಿಯೊಂದಿಗೆ ಭಾರತಕ್ಕೆ ಬಂದಿತ್ತು, ಅವರು ದೆಹಲಿಗೆ ಭೇಟಿ ನೀಡಿದ ನಂತರ  ಹಿಮಾಚಲ ಪ್ರದೇಶದ ಟಿಬೆಟಿಯನ್ ಶಿಬಿರಕ್ಕೂ ಭೇಟಿ ನೀಡಿದರು. ನಂತರ ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿದರು. ಹೀಗೆ ಮುಂಡಗೋಡು ಟಿಬೆಟಿಯನ್ ಕ್ಯಾಂಪ್ ತಲುಪಿದಾಗ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಪರೀಕ್ಷೆ ನಡೆದ ನಂತರ ಇದು ವೈರಲ್ ಸೊಂಕಿನ ಪ್ರಕರಣವಾಗಿರಬಹುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು, ಖಾಸಗಿ ಆಸ್ಪತ್ರೆಯಿಂದ ಪಡೆದ ಮಧ್ಯವಯಸ್ಕ ಆಫ್ರಿಕನ್ ಪ್ರಜೆಯ ಎರಡನೇ ಶಂಕಿತ ಪ್ರಕರಣದ ಮಾದರಿಯು ನಕಾರಾತ್ಮಕವಾಗಿತ್ತು. ನಂತರ ಅದನ್ನು ಚಿಕನ್ ಪಾಕ್ಸ್ ಎಂದು ಗುರುತಿಸಲಾಯಿತು. ಮತ್ತೊಂದು ಖಾಸಗಿ ಆಸ್ಪತ್ರೆಯ ಮೊದಲ ಶಂಕಿತ ಪ್ರಕರಣದ ಮಾದರಿಯೂ ನೆಗೆಟಿವ್ ಎಂದು ಕಂಡುಬಂದಿದೆ.