hennota – Peepal Media

ಹೋರಾಟವನ್ನೇ ಬದುಕಾಗಿಸಿಕೊಂಡ ಸುರೇಖಾ ರಾಜಪೂತ್
ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ 10 ವರ್ಷಗಳಾದ ನೆನಪಿಗೆ ಒಕ್ಕೂಟವು ಪಯಣ ನಡೆಸಿದ 11 ಜಿಲ್ಲೆಗಳಿಂದ ಒಬ್ಬೊಬ್ಬ ಹಿರಿಯ ಸಂಗಾತಿಯ ವ್ಯಕ್ತಿಗತ-ಸಂಘಟಿತ ಹೋರಾಟದ ಸ್ಫೂರ್ತಿಯನ್ನು ತೆರೆದಿಡುತ್ತಾ, `ನಮ್ಮ ಅಕ್ಕ, ನಮ್ಮ ಹಿರಿಮೆ’ ಎಂದು ಅವರನ್ನು ಗೌರವಿಸಲಿದೆ. ಅಕ್ಕಂದಿರ ಬದುಕು-ಸಾಧನೆಯ ಕಿರು ಚಿತ್ರಗಳನ್ನು ಪೀಪಲ್‌ ಮೀಡಿಯಾವು ಪ್ರಕಟಿಸುತ್ತಿರುವ ಆರನೇ ಸರಣಿಯಲ್ಲಿ ಹೋರಾಟವನ್ನೇ ಬದುಕಾಗಿಸಿಕೊಂಡ ವಿಜಯಪುರದ ಸುರೇಖಾ ರಾಜಪೂತ್ ಅವರನ್ನು ಪರಿಚಯಿಸಿದ್ದಾರೆ ಮಹಿಳಾಪರ ಚಿಂತಕಿ ಡಾ.ಆರ್‌ ಸುನಂದಮ್ಮ

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆಯೇ ಇರಲಿ; ಪಡಿತರ ಚೀಟಿ, ಆಹಾರ ಧಾನ್ಯ, ಕುಡಿಯುವ ನೀರು, ಮಹಿಳಾ ಶೌಚಾಲಯಗಳ ಸಮಸ್ಯೆಯೇ ಇರಲಿ; ರೈತ ಹೋರಾಟವೇ ಇರಲಿ; ಕೋಮು ವೈಷಮ್ಯದ ಬೆಂಕಿ ಉರಿಯುವಲ್ಲೇ ಇರಲಿ – ವಿಜಯಪುರದ ಆಸುಪಾಸು ಇಂತಹ ಯಾವುದೇ ಬಿಕ್ಕಟ್ಟು ಎದುರಾಗಿ ಹೋರಾಟ ನಡೆಯುತ್ತಿದ್ದರೆ ಅಲ್ಲಿ ಸುರೇಖಾ ರಾಜಪೂತ್ ಎಂಬ ಮಹಿಳೆ ಇದ್ದೇ ಇರುವರು. ಸ್ಥಳಿಯ ಜನರನ್ನು ಸಂಘಟಿಸಿ ಹೋರಾಟಕ್ಕಿಳಿದರೆಂದರೆ ಸಮಸ್ಯೆಗೊಂದು ಪರಿಹಾರ ದೊರಕಿದಂತೆಯೇ. ಅಂತಹ ದಿಟ್ಟ ಹೋರಾಟಗಾರ್ತಿ ಅವರು.

3-5-1957ರಲ್ಲಿ ವಿಜಯಪುರದಲ್ಲಿ ಹುಟ್ಟಿದ ಸುರೇಖಾ ಹೋರಾಟವನ್ನೇ ಜೀವನವನ್ನಾಗಿಸಿಕೊಂಡಿರುವವರು. ಭಾರತ್ ಸಿಂಗ್ ಮತ್ತು ಗೌರಾಬಾಯಿಯವರ ನಾಲ್ಕು ಮಕ್ಕಳಲ್ಲಿ ಇವರೇ ಹಿರಿಯವರು. ತಾಯಿಯ ತವರಾದ ಮಹಾರಾಷ್ಟ್ರದ ಸೋಲಾಪುರದ ಸೇವಾಸದನ ಮರಾಠಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಸುರೇಖಾ ಏಳನೇ ಇಯತ್ತೆಯ ಬೋರ್ಡ್ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದರು. ಪ್ರೌಢಶಿಕ್ಷಣವನ್ನು ವಿಜಯಪುರದ ಮರಾಠಿ ವಿದ್ಯಾಲಯದಲ್ಲಿ ನಡೆಸಿ ಪದವಿಯನ್ನು ಶಿಕ್ಯಾಬ ವುಮೆನ್ಸ್ ಕಾಲೇಜಿನಲ್ಲಿ ಪಡೆದರು. ಬಳಿಕ ನರಸಿಂಗರಾವ್ ಸೆಂಗಾರ್ ಅವರನ್ನು ಪ್ರೀತಿಸಿ, ತಾಯ್ತಂದೆಯರನ್ನು ಒಪ್ಪಿಸಿ ಮದುವೆಯಾದರು.

ಸಾರಿಗೆ ಇಲಾಖೆ, ಕೆಇಬಿ ಮುಂತಾದೆಡೆ ನೌಕರಿಯ ಅವಕಾಶವಿದ್ದಾಗಲೂ ಹೋಗದ ಸುರೇಖಾ ಸಮಾಜಕ್ಕಾಗಿ ಕೆಲಸ ಮಾಡುವ ನಿರ್ಧಾರ ತಳೆದದ್ದು ದಾರುಣ ಘಳಿಗೆಯೊಂದರಲ್ಲಿ. ಮರಾಠಿ ವಿದ್ಯಾಲಯದ ತನ್ನ ಪ್ರಾಣಸ್ನೇಹಿತೆ, ಎರಡು ಮಕ್ಕಳ ತಾಯಿಯಾಗಿದ್ದ ನಿರ್ಮಲಾ ತಾಪಾಡಿಯಾ ಗಂಡ, ಅತ್ತೆಯ ಮನೆಯವರ ಕಿರುಕುಳ ಸಹಿಸಲಾರದೇ ಚಿಮಣಿ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಆಳವಾಗಿ ಅವರ ಮನ ಕಲಕಿತು. ಆಗಲೇ, ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಯುವ ಕೆಲಸ ಮಾಡಬೇಕೆಂದು ಅವರ ಮನದಲ್ಲಿ ಧೃಢ ನಿರ್ಧಾರ ಮೂಡಿತು.

1992ರಲ್ಲಿ ವಿಜಯಪುರ ನಗರದ ಗಾಂಧಿ ವೃತ್ತದಲ್ಲಿ ಮುಳವಾಡ ಏತ ನೀರಾವರಿ ಯೋಜನೆಗೆ ಆಗ್ರಹಿಸಿ ನೀಲಗುಂದ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಐತಿಹಾಸಿಕ ಹೋರಾಟವನ್ನು ಸುರೇಖಾ ಗಮನಿಸಿದರು. ಅದೇ ವೇಳೆಗೆ ವಿಜಯಪುರ ನಗರದಲ್ಲಿ ನಡೆದ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದಾಗ ಇವರ ವಿಚಾರಗಳನ್ನು ಕೇಳಿದ ಜಿಲ್ಲಾ ಮತ್ತು ರಾಜ್ಯ ಸಮಿತಿಯವರು ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದರು. ಮುಂದೆ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದರು.

1995ರಲ್ಲಿ ಬಸವನ ಬಾಗೇವಾಡಿ ತಾಲೂಕಿನ ಮಟ್ಟಿಹಾಳ ಕ್ರಾಸಿನಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ಮಾಳವಾಡ ಏತ ನೀರಾವರಿಗಾಗಿ ಒಂದು ತಿಂಗಳು ನಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅದರ ಯಶಸ್ಸಿಗೆ ಕಾರಣರಾದರು. ಪ್ರತಿದಿನ ಪಾದಯಾತ್ರೆ ಮಾಡಿ ಹಳ್ಳಿಹಳ್ಳಿ ಸುತ್ತಾಡಿ ರೈತರನ್ನು ಸಂಘಟಿಸಿ ಕರೆತಂದರು. ನೀರಾವರಿ ಮಂತ್ರಿಗಳೂ, ಯುಕೆಪಿ ವ್ಯವಸ್ಥಾಪಕ ನಿರ್ದೇಶಕರೂ ಹೋರಾಟ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ 17 ಕೋಟಿ ರೂಪಾಯಿ ಮಂಜೂರು ಮಾಡಿಸಿದರು. ಮುಳವಾಡ ಏತ ನೀರಾವರಿಗೆ ಚಾಲನೆ ದೊರೆತು ರೈತರ ಜಮೀನಿಗೆ ನೀರು ಹರಿಯುವಂತೆ ಆಯಿತು. ಒಂದು ತಿಂಗಳು ಮನೆ, ಮಕ್ಕಳು, ಸಂಸಾರವನ್ನು ಬಿಟ್ಟು ರೈತರನ್ನು ಸಂಘಟಿಸಿ ಧೈರ್ಯ ತುಂಬಿದ ಸುರೇಖಾರ ನಾಯಕತ್ವದ ಗುಣ ಆಗ ಮುನ್ನೆಲೆಗೆ ಬಂತು.

ಮಹಿಳಾ ದೌರ್ಜನ್ಯದ ವಿರುದ್ಧವಂತೂ ಅವರು ಅಸಂಖ್ಯ ಹೋರಾಟಗಳನ್ನು ಸಂಘಟಿಸಿದ್ದಾರೆ. ಬೋವಿ ಸಮಾಜದ ಶಾಂತಾಬಾಯಿ ಪಡಿತರ ಅವರು ಮಹಿಳಾ ಗುಂಪುಗಳನ್ನು ಮಾಡಿಕೊಂಡು ಆರ್ಥಿಕ ಸ್ಥಿತಿ ಸುಧಾರಿಸುವ ಪ್ರಯತ್ನ ಮಾಡುವಾಗ ಆ ಸಮಾಜದ ಪುರುಷರೇ ಅದಕ್ಕೆ ಅಡ್ಡಗಾಲಾದರು. ಶಾಂತಾಬಾಯಿಗೆ ಬೆಂಬಲವಾಗಿ ಸುರೇಖಾ ನಿಂತು ಜಿಲ್ಲಾಧಿಕಾರಿ ಕಚೇರಿಯೆದುರು ಧರಣಿ ಸತ್ಯಾಗ್ರಹ ನಡೆಸಿ ನ್ಯಾಯ ಪಡೆಯಲು ಬೆಂಬಲವಾಗಿ ನಿಂತರು. ಭಾಗೀರಥಿ ಹುನಗುಂದ ಎಂಬ ಶಿಕ್ಷಕಿಯನ್ನು ವಂಚಿಸಿದ ವಕೀಲ ಪಿ. ಎಸ್. ವಸ್ತ್ರದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಾಂಧಿ ವೃತ್ತದಲ್ಲಿ ಧರಣಿ ಸಂಘಟಿಸಿದರು. ನಡುರಾತ್ರಿ ಪೆಂಡಾಲಿಗೆ ಪೆಟ್ರೋಲ್ ಸುರುವಿ ಬೆಂಕಿ ಹಚ್ಚಿದಾಗ ಸುರೇಖಾ ಸ್ವಲ್ಪದರಲ್ಲಿ ಪಾರಾದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ, ದುಷ್ಕರ್ಮಿಗಳು ಯಾರೆಂದು ತಿಳಿದರೂ ಬಂಧಿಸದೇ ಸತ್ಯಾಗ್ರಹವನ್ನು ಹುಸಿ ಭರವಸೆ ನೀಡಿ ಪೊಲೀಸರು ಕೊನೆಗೊಳಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಯೆದುರು ಧರಣಿ ನಡೆಸಿದಾಗ ಲಾಠಿ ಚಾರ್ಜ್ ಮಾಡಿದರು. ಸುರೇಖಾ, ಭಾಗೀರಥಿ, ಶಕೀಲಾ ಜಮಾದಾರ, ಸೋಮುಬಾಯಿ ರಾಠೋಡ, ಅಣ್ಣಾರಾಯ ಈಳಗೇರ ಮೊದಲಾದವರನ್ನು ಬಂಧಿಸಿ 12 ದಿನಗಳವರೆಗೆ ಜೈಲಿನಲ್ಲಿಟ್ಟರು. ಈ ಪ್ರಕರಣ 2 ವರ್ಷ ನ್ಯಾಯಾಲಯದಲ್ಲಿ ನಡೆದು ಗಲಭೆಕೋರರೆಂಬ ಪೊಲೀಸರ ಆರೋಪ ಸುಳ್ಳು ಎಂದು ಸಾಬೀತಾಯಿತು. ಹೋರಾಟಗಾರರು ನಿರ್ದೋಷಿಗಳೆಂದು ಬಿಡುಗಡೆ ಮಾಡಿದರು. ಮಹಿಳೆಯರಿಗೆ ನ್ಯಾಯ ಸಿಗುವುದು ಎಷ್ಟು ಕಠಿಣವೆಂದು ಸುರೇಖಾಗೆ ಇಂತಹ ಪ್ರಕರಣಗಳೇ ತಿಳಿಸಿಕೊಟ್ಟವು. ಈ ರೀತಿ ಮಹಿಳೆಯರ ಮೇಲೆ, ದಲಿತರ ಮೇಲೆ, ಅಲ್ಪಸಂಖ್ಯಾತರ ಮೇಲೆ ನಡೆವ ದೌರ್ಜನ್ಯಗಳನ್ನು ವಿರೋಧಿಸಿದ, ತಡೆದ, ಪ್ರಕರಣಗಳಲ್ಲಿ ಸಿಲುಕಿಕೊಂಡ ಹಲವಾರು ನಿದರ್ಶನಗಳಿವೆ. ಅವರ ಕೆಲಸ ಕಾರ್ಯಗಳಿಗೆ ಪತಿ ನರಸಿಂಗರಾವ ಸೆಂಗಾರ ಮತ್ತು ಮಕ್ಕಳು ಬೆಂಬಲ ನೀಡುವುದು ಅವರ ಸ್ಥೈರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

ವಿಜಯಪುರ ನಗರದ ಕೊಳೆಗೇರಿ ನಿವಾಸಿಗಳನ್ನು ಒಕ್ಕಲೆಬ್ಬಿಸಲು ನಗರಾಡಳಿತ ಮುಂದಾದಾಗ ಅವರ ಬೆಂಬಲಕ್ಕೆ ಸುರೇಖಾ ನಿಂತರು. ಗುಡಿಸಲುಗಳನ್ನು ತೆರವುಗೊಳಿಸಲು ಜೆಸಿಬಿ ಯಂತ್ರ ಬಂದಾಗ ಅದರ ದಾರಿಗಡ್ಡವಾಗಿ ಮಲಗಿ ತಡೆದರು. ಹಾಗೆಯೇ ಮನೆ, ನಿವೇಶನ ಏನೊಂದೂ ಇಲ್ಲದವರಿಗೆ ಒಂದು ಸೂರೊದಗಿಸಲು ನಿರಂತರ ಹೋರಾಟ, ಜಾಥಾ ಸಂಘಟನೆ ಮಾಡಿ ಅವರಿಗೆ ಮನೆ ಸಿಗಲು ಕಾರಣರಾದರು. ಮಹಿಳಾ ಮೀಸಲಾತಿ, ರೈತರ ಬೇಡಿಕೆ ಈಡೇರಿಕೆಯೇ ಮೊದಲಾದ ಹಕ್ಕೊತ್ತಾಯಗಳಿಗೆ ಬೆಂಗಳೂರು ಚಲೋ, ದೆಹಲಿ ಚಲೋಗಳನ್ನು ಸಂಘಟಿಸಿದರು. ಬೆಲೆಯೇರಿಕೆ, ಭ್ರಷ್ಟಾಚಾರ, ಕೋಮುವೈಷಮ್ಯ, ವರದಕ್ಷಿಣೆ, ಅಸ್ಪೃಶ್ಯತೆ ಮೊದಲಾದವುಗಳ ವಿರುದ್ಧ ಈಗಲೂ ನಿರಂತರ ಸಂಘಟನೆ, ಹೋರಾಟದಲ್ಲಿ ತೊಡಗಿದ್ದಾರೆ.

ದಿಟ್ಟ, ಪ್ರಾಮಾಣಿಕ ಬದುಕು ನಡೆಸುವ, ತಮಗಾಗಿ ಸಂಪತ್ತು ಶೇಖರಿಸಿಕೊಳ್ಳದೇ ಸರಳ ಬದುಕು ನಡೆಸುತ್ತಿರುವ ಸುರೇಖಾ ರಾಜಪೂತ್ `ನಮ್ಮ ಅಕ್ಕ, ನಮ್ಮ ಹೆಮ್ಮೆ’ಯಾಗಿದ್ದಾರೆ.

ಡಾ. ಆರ್‌ ಸುನಂದಮ್ಮ

ಲೇಖಕರು, ಮಹಿಳಾಪರ ಚಿಂತಕರು

ಸೋಪಾನಪೇಟೆಯ ದೊಡ್ಡಾಸ್ಪತ್ರೆಯಲ್ಲಿ……
(ಈ ವರೆಗೆ…)

ಕೈಗೆ ತಾಯತ ಕಟ್ಟಿಸಿಕೊಂಡು ಮನೆಗೆ ಬಂದ ಲಕ್ಷ್ಮಿ ಅದನ್ನು ತೆಗೆಯುವಂತೆ ದುಂಬಾಲು ಬೀಳುತ್ತಾಳೆ. ಯಾರೂ ತೆಗೆಯದಿದ್ದಾಗ ಮುನಿಸುಗೊಂಡು ಊಟಮಾಡಲು ನಿರಾಕರಿಸಿದ ಆಕೆಯನ್ನು ಒರಟಾಗಿ ಎಬ್ಬಿಸಲು ಹೋದ ಗಿರಿಧರನ ಮುಖಕ್ಕೆ ಬಿಸಿ ಅನ್ನದ ತಟ್ಟೆಯನ್ನು ಎಸೆಯುತ್ತಾಳೆ. ಕೋಪಗೊಂಡ ಆತ ಅಕೆಯ ತಲೆಯ ಮೇಲೆ ಹೊಡೆಯುತ್ತಾನೆ. ಲಕ್ಷ್ಮಿ ಏದುಸಿರು ಬಿಡುತ್ತಾ ಬಿದ್ದುಹೋಗುತ್ತಾಳೆ. ಅಪ್ಪ ಅವ್ವ ದೊಡ್ಡ ಡಾಕ್ಟರ್‌ ಗೆ ತೋರಿಸಲು ಗಾಡಿಯನ್ನು ಸೋಪಾನಪೇಟೆಯತ್ತ ಓಡಿಸುತ್ತಾರೆ. ಆಸ್ಪತ್ರೆಯಲ್ಲಿ ವಿಚಿತ್ರವೊಂದು ನಡೆಯುತ್ತದೆ. ಏನದು? ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಒಂಬತ್ತನೇ ಕಂತು ಓದಿ

ಎತ್ತಿನ ಗಾಡಿ ಆಸ್ಪತ್ರೆಯ ಮುಂದೆ ಬಂದು ನಿಂತಿತು. ಅಪ್ಪ ಗಾಡಿಯಿಂದ ಹಸುವನ್ನು ಬಿಚ್ಚಿ ಅಲ್ಲೇ ಇದ್ದ ಒಂದು ಮರಕ್ಕೆ ಕಟ್ಟಿ  ಹುಲ್ಲು ಹಾಕಿದ. “ನೀವಿಬ್ರು ಗಾಡಿಲೇ ಇರಿ ಡಾಕ್ಟ್ರು ಬಂದವ್ರಾ  ನೋಡ್ಕೊಂಡು ಬತ್ತಿನಿ”. ಎಂದು ಹೇಳಿ ಸಿಂಗು ಡಾಕ್ಟರ್ ಕೊಟ್ಟ ಪತ್ರ ಹಿಡಿದು ಹೊರಟ. ಒಳಗೆ ಹೋಗುತ್ತಿದ್ದಂತೆ ಎದುರಾದ ನರ್ಸ್  ಒಬ್ಬಳಿಗೆ ಆ ಪತ್ರ ತೋರಿಸಿ “ಈ ಡಾಕ್ಟ್ರು  ಅವ್ರಾ  ತಾಯಿ” ಎಂದು ಕೇಳಿದ. ಅವಳು ತನ್ನ ಎದುರಿದ್ದ ಕೋಣೆಯ ಕಡೆ ಕೈ ತೋರಿಸಿ ” ಪೂವಯ್ಯ ಡಾಕ್ಟರ್  ಆ ರೂಮಿನಲ್ಲಿದ್ದಾರೆ  ಹೋಗಿ” ಎಂದಳು.

ಆಗಷ್ಟೇ ದಿನದ ಕಾರ್ಯ ಆರಂಭವಾಗಿದ್ದರಿಂದ  ರೋಗಿಗಳ ಸಂಖ್ಯೆಯು ಅಷ್ಟಾಗಿ ಇರಲಿಲ್ಲವಾಗಿ ಅಪ್ಪ ಸೀದ ಒಳ ಹೋದವನೆ ಡಾಕ್ಟರ್ ಎದುರು ಸಿಂಗು ಡಾಕ್ಟರ್ ಕೊಟ್ಟ ಪತ್ರವನ್ನಿಟ್ಟು,  ಒಂದೇ ಉಸಿರಿಗೆ ತನ್ನ ಮಗಳ ಸಮಸ್ಯೆಯನ್ನೆಲ್ಲಾ ಹೇಳಿಕೊಂಡ. “ಏನಾರ ಮಾಡಿ ನನ್ನ ಮಗಳುನ್ನ ಹುಸಾರ್ ಮಾಡ್ಕೊಡಿ ಸಾ” ಎಂದು ಅಂಗಲಾಚಿದ. ಪೂವಯ್ಯ ಡಾಕ್ಟರ್ ಚೀಟಿಯನ್ನು ಓದಿ ಮುಖ ಅರಳಿಸಿ “ಓ…ಡಾಕ್ಟರ್ ಸಿಂಗ್, ಇವರಿಂದ ನಾನು ಬಹಳ ಕಲಿತಿದ್ದೇನೆ. ಒಂದು ರೀತಿ ಇವರು  ನನಗೆ  ಟೀಚರ್ ಇದ್ದ ಹಾಗೆ. ಸರಿ ಈಗ  ನಿಮ್ಮ ಮಗಳೆಲ್ಲಿ” ಎಂದು ಹೊರಗೆ ಕಣ್ಣಾಡಿಸಿದರು. “ಗಾಡಿಲೇ ಮಲಗವ್ಳೆ ಸಾ ಈಗ ಕರ್ಕೊಂಡು ಬಂದ್ಬುಡ್ತಿನಿ” ಎಂದು ಎದ್ದು ಹೊರಗೆ ಓಡಿದ.  ಲಕ್ಷ್ಮಿ ನಡೆಯುವುದಿರಲಿ ಎದ್ದು ಕೂರಲು ಆಗದಷ್ಟು  ನಿತ್ರಾಣಳಾಗಿ ಹೋಗಿದ್ದಳು. ಅಪ್ಪ ಎತ್ತಿಕೊಳ್ಳಲು ನೋಡಿದ ಆಗಲಿಲ್ಲ. ಕೊನೆಗೆ ವೀಲ್ ಚೇರ್ ತರಿಸಿ ಲಕ್ಷ್ಮಿಯನ್ನು ಒಳಗೆ ಕರೆದುಕೊಂಡು ಹೋಗಲಾಯಿತು. ತಲೆ ಎತ್ತಲು ಶಕ್ತಿ ಇಲ್ಲದಂತೆ ಕುಗ್ಗಿ ಹೋಗಿದ್ದ ಲಕ್ಷ್ಮಿಯನ್ನು  ಪರೀಕ್ಷಿಸಿದ  ಡಾಕ್ಟರ್ ಕೂಡಲೇ ನರ್ಸ್ ಒಬ್ಬಳನ್ನು ಕರೆದು  ಲಕ್ಷ್ಮಿಯನ್ನು ಅಡ್ಮಿಟ್ ಮಾಡಿಕೊಂಡು ಗ್ಲೂಕೋಸ್ ಬಾಟಲಿ ಹಾಕಲು ತಾಕೀತು ಮಾಡಿದರು.

ಪೂವಯ್ಯ ಡಾಕ್ಟರರ ಮುತುವರ್ಜಿಯಿಂದಾಗಿ ಎರಡು ದಿನಗಳ ಕಾಲ  ತರಾತುರಿಯಿಂದಲೇ ಒಂದರ ಮೇಲೊಂದರಂತೆ ಪರೀಕ್ಷೆ ಗಳು ನಡೆದವು. ಬೇರೆ ಬೇರೆ ವೈದ್ಯರುಗಳು ಬಂದು ನೋಡಿದರು. ಆದರೂ ಲಕ್ಷ್ಮಿಯ ಕಾಯಿಲೆಯನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.  ಎಲ್ಲಾ ರಿಪೋರ್ಟ್ ಗಳಲ್ಲಿಯೂ ನಾರ್ಮಲ್ ಎನ್ನುವುದನ್ನು ಬಿಟ್ಟರೆ ಒಂದು ಸಣ್ಣ ಸಮಸ್ಯೆ ಕೂಡ ಕಂಡು ಬರಲಿಲ್ಲ.  ಆದರೆ ಅವಳ ಆರೋಗ್ಯ ಸ್ಥಿತಿ ಮಾತ್ರ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಲೇ ಇತ್ತು.

ಮೂರನೆಯ ದಿನ ಬಹಳ ನುರಿತ  ಸೀನಿಯರ್ ಡಾಕ್ಟರ್ ಒಬ್ಬರು ಬಂದು ಲಕ್ಷ್ಮಿಯನ್ನು ಕೂಲಂಕಷವಾಗಿ ಪರೀಕ್ಷಿಸಿದರು. ಅವರು ಕುತ್ತಿಗೆ ಬಳಿಯ ನರದಲ್ಲಿ ಏನೋ ಸಮಸ್ಯೆ ಕಾಣುತ್ತಿದೆ ಎಂದು ಹೇಳಿ, ದುಬಾರಿ ಬೆಲೆಯ ಇಂಜೆಕ್ಷನ್ ಮಾತ್ರೆಗಳನ್ನು ಬರೆದು, “ಕೂಡಲೇ ಈ ಟ್ರೀಟ್ ಮೆಂಟ್ ಆರಂಭಿಸಿ ನೋಡೋಣ” ಎಂದು ಹೇಳಿ ಹೋದರು. ಪೂವಯ್ಯ ಡಾಕ್ಟರ್ ಅಪ್ಪ ಅವ್ವನೊಂದಿಗೆ ಹಣದ ಅಂದಾಜು ವೆಚ್ಚವನ್ನು ತಿಳಿಸಿ, ಆದಷ್ಟು ಬೇಗ ಈ ಔಷಧಿಗಳನ್ನು ತೆಗೆದು ಕೊಂಡು ಬನ್ನಿ ಎಂದು ಹೇಳಿ ಔಷಧಿಯ ಚೀಟಿಯನ್ನು ಕೊಟ್ಟು ಹೋದರು. ಡಾಕ್ಟರ್ ಅತ್ತ ಮರೆಯಾದದ್ದೇ ಅವ್ವ ತನ್ನ ಕಿವಿಯಲ್ಲಿದ್ದ ಬೆಂಡೋಲೆಯನ್ನು ಬಿಚ್ಚಿ ಅಪ್ಪನ ಕೈಗಿಟ್ಟು ” ಏನೀ ತಡ ಮಾಡ್ಬ್ಯಾಡಿ ಮಗ ಹುಸಾರಾದ್ರೆ ಸಾಕು. ಇದು ಎಷ್ಟುಕ್ಕೊಯ್ತದೆ  ಕೊಟ್ಟು ಬೇಗ ಡಾಕ್ಟ್ರು ಹೇಳಿರೋ ಔಸ್ತಿ ಮಾತ್ರೆ ತನ್ನಿ” ಎಂದು ಕಳುಹಿಸಿದಳು.

ಅಪ್ಪ ಸೋಪಾನಪೇಟೆಯ ಚಿನ್ನ ಬೆಳ್ಳಿ ಅಂಗಡಿಗಳನ್ನು ಸುತ್ತಿ, ಜಾಸ್ತಿ ಬೆಲೆ ಸಿಕ್ಕ ಅಂಗಡಿಗೆ ಆ ಓಲೆಯನ್ನು ಮಾರಿ ಡಾಕ್ಟರ್ ಹೇಳಿದ್ದ  ಔಷಧಗಳನ್ನೆಲ್ಲಾ ಕೊಂಡು ತಂದನು. ಲಕ್ಷ್ಮಿಯ ಚಿಕಿತ್ಸಾ ಕಾರ್ಯ ಆರಂಭವಾಯಿತು. ದಿನ ದಿನಕ್ಕೂ ಮಗಳು ಕುಗ್ಗುತ್ತಿರುವುದನ್ನು ನೋಡಲಾಗದ ಅವ್ವ, ಅವಳ ಚಿಂತೆಯಲ್ಲಿಯೇ ಹಸಿವು ಎಂಬುದನ್ನೇ ಮರೆತಳು. ಮೂರು ಹೊತ್ತು ಬಿಟ್ಟ ಕಣ್ಣು ಬಿಟ್ಟಂತೆ ಮಗಳನ್ನು ನೋಡುತ್ತಾ ಕೂತುಬಿಟ್ಟಳು. ಕಣ್ಣಿಗೆ ನಿದ್ರೆ ಅನ್ನುವುದೇ ಹತ್ತದಾಯಿತು. ಕಣ್ಣು ಮುಚ್ಚಿದರೆ ಮಗಳು ಎಲ್ಲಿ ಕಳೆದು ಹೋಗಿ ಬಿಡುವಳೋ ಅನ್ನುವ ಆತಂಕ ಅವಳನ್ನು ಕ್ಷಣ ಕ್ಷಣವೂ ಹೈರಾಣ ಮಾಡತೊಡಗಿತ್ತು.

ಇತ್ತ ಹೊಸ ನಾರಿಪುರಕ್ಕೆ ಹೋಗಿ ಸಿಂಗು ಡಾಕ್ಟರರ ಹತ್ತಿರ ಅಪ್ಪ ಅವ್ವ ಸೋಪಾನಪೇಟೆಯ ದೊಡ್ಡ ಆಸ್ಪತ್ರೆಗೆ ಹೋಗಿರುವ ಮಾಹಿತಿ ತಿಳಿದು ಬಂದಿದ್ದ ಚಂದ್ರಹಾಸ, ಎರಡು ದಿನವಾದರೂ ಅವರು ಬಾರದನ್ನು ಕಂಡು ಆತಂಕಿತನಾದ. ಅಪ್ಪ ಅವ್ವನ ಅನುಪಸ್ಥಿತಿಯಲ್ಲಿ ಇವರ ನಿಗಾ ನೋಡಿಕೊಳ್ಳಲು ಮೇಗಳ ಬೀದಿಯ ತನ್ನ ಮನೆಯಿಂದ ಬಂದು ಹೋಗುತ್ತಿದ್ದ ಅಪ್ಪನ ಮೊದಲ ಹೆಂಡತಿ ದೇವಿರಮ್ಮ, ಚಂದ್ರಹಾಸನಿಗೆ ದುಂಬಾಲು ಬಿದ್ದು, ಲಕ್ಷ್ಮಿಯ ಸ್ಥಿತಿಗತಿಗಳನ್ನು ತಿಳಿದು ಬರಲು  ಸೋಪಾನಪೇಟೆಗೆ ಹೊರಡಿಸಿದಳು. ಸೋಪಾನ ಪೇಟೆಗೆ ಇದ್ದದ್ದು ದಿನದಲ್ಲಿ ಎರಡೇ ಬಸ್ ಆದ್ದರಿಂದ ಚಂದ್ರಹಾಸ ಬೆಳಗ್ಗಿನ ಏಳರ ಬಸ್ಸಿಗೆ ಹೋಗುವುದೆಂದು ನಿರ್ಧರಿಸಿದ. ನಿದ್ದೆ ಪೋತನಾಗಿದ್ದ ಗಿರಿಧರನಿಗೆ ತಾಸಿಗೆ ಮುಂಚೆಯೇ ಹೊರಟು ರೆಡಿಯಾಗಿರ ಬೇಕೆಂದು ತಾಕೀತು ಮಾಡಿದ. ಅವ್ವನ ಮೋರೆ ಕಾಣದೆ ಸದಾ ಬಿಕ್ಕಳಿಸುತ್ತಲೇ ಇರುತ್ತಿದ್ದ ಗಂಗೆ ಅಣ್ಣಂದಿರ ಈ ಮಾತು ಕೇಳಿಸಿ ಕೊಂಡು ನನ್ನನ್ನು ಕರೆದು ಕೊಂಡು ಹೋಗಿ ಎಂದು ಹಠ ಹಿಡಿದು ಕೂತಳು. ಅಣ್ಣಂದಿರ ಯಾವ ಹೊಡೆತ ಬಡಿತಗಳಿಗೂ ಅವಳು ಜಗ್ಗಲಿಲ್ಲ. ಕೊನೆಗೆ ದೊಡ್ಡಮ್ಮ, ಚಂದ್ರಹಾಸ ಮತ್ತು  ಗಿರಿಧರನನ್ನು ಓಲೈಸಿ ಗಂಗೆಯನ್ನು ಅವರೊಂದಿಗೆ ಕಳಿಸಲು ವ್ಯವಸ್ಥೆ ಮಾಡಿದಳು.

ದೊಡ್ಡಮ್ಮ  ಸೂರ್ಯ ಕಣ್ಣು ಬಿಡುವುದಕ್ಕೂ  ಮುಂಚೆಯೇ, ತನ್ನ ಮನೆಯಿಂದಲೇ ಅಪ್ಪನಿಗೆ ಮತ್ತು ಲಕ್ಷ್ಮಿ ಗೆ ಇಷ್ಟವಾದ ಬಿಸಿಬಿಸಿಯಾದ ರೊಟ್ಟಿ, ಮೆಣಸಿನ ಕಾಯಿ ಗೊಡ್ಡುಗಾರ ಅರೆದು, ಅದರ ಮೇಲೊಂದಿಷ್ಟು ಬೆಣ್ಣೆಯನ್ನು ಹಾಕಿ ಬುತ್ತಿ ಕಟ್ಟಿ ಹೊಸ ನಾರಿಪುರದವರೆಗೂ ಹೋಗಿ ಮೂವರನ್ನು ಬಸ್ ಹತ್ತಿಸಿ ಬಂದಳು.

ಸಾವಿರಾರು ರೂಪಾಯಿ ಬೆಲೆಯ ಔಷಧಿ ಮಾತ್ರೆಗಳಿಗೆ ಒಡ್ಡಿ ಕೊಂಡ ಲಕ್ಷ್ಮಿಯ ದೇಹ ಒಂದು ಘಳಿಗೆ ಇದ್ದಂತೆ ಇನ್ನೊಂದು ಘಳಿಗೆ ಇರುತ್ತಿರಲಿಲ್ಲ. ಒಮ್ಮೆ ಗೆಲುವಾದಂತೆ ಕಂಡರು ಇನ್ನೊಮ್ಮೆ ಸುರುಟಿ ಕೊಂಡು ಬಿದ್ದಿರುತ್ತಿದ್ದಳು. ಅನ್ನ ನೀರು ಎಂಬುದು ದೂರವೇ ಉಳಿಯಿತು. ಮಗಳು ಏನು ತಿನ್ನದೆ ಹೀಗೆ ನಿತ್ರಾಣಳಾಗಿ ಬಿದ್ದಿರುವುದನ್ನು ನೋಡಲಾರದ ಅಪ್ಪ, ಆ ದಿನ ಮಧ್ಯಾಹ್ನ ಪಕ್ಕದಲ್ಲಿಯೇ ಇದ್ದ ಹೋಟೆಲಿನಿಂದ  ಬಿಸಿ ಬಾದಾಮಿ ಹಾಲು ತಂದು ಅವಳ  ಕೈ ಕಾಲು ಹಿಡಿದು ಕುಡಿವಂತೆ ಒತ್ತಾಯ ಮಾಡಿದ. ಅಪ್ಪನ ಹಿಂಸೆ ತಾಳಲಾರದೆ ಕಿರಿಕಿರಿ ಗೊಂಡ ಲಕ್ಷ್ಮಿ, ಕೋಪೋದ್ರಿಕ್ತಳಾಗಿ ಬಿರುಸಾಗಿ ಎದ್ದು ಅಪ್ಪನ ಕೈಯಲ್ಲಿದ್ದ ಹಾಲಿನ ಲೋಟ ಕಸಿದುಕೊಂಡು ಅವನ ಮುಖಕ್ಕೆ ರಪ್ಪೆಂದು ಎರಚಿದಳು. ಮಗಳ ಈ ಅನಿರೀಕ್ಷಿತ ನಡೆಯಿಂದ ತತ್ತರಿಸಿದ ಅಪ್ಪ ತನ್ನ ಪಂಚೆಯ ತುದಿಯಿಂದ ಉರಿಯುವ ಮುಖವನ್ನು ಒರೆಸಿಕೊಳ್ಳುತ್ತಾ, ಸಂಕೋಚದಿಂದ ತನ್ನ ಸುತ್ತಾ ಒಮ್ಮೆ ಕಣ್ಣಾಡಿಸಿದ. ಪುಣ್ಯಕ್ಕೆ ಸುತ್ತಾ ಮುತ್ತಾ ಯಾರು ಇರಲಿಲ್ಲ.  ಇಷ್ಟು ದಿನ ಲಕ್ಷ್ಮಿಯ ಪಕ್ಕದ ಹಾಸಿಗೆಯಲ್ಲಿಯೇ ಇದ್ದ ಒಬ್ಬ ರೋಗಿಯು, ಆ ದಿನ ಡಿಸ್ಚಾರ್ಜ್ ಆಗಿ ಹೋಗಿದ್ದ. ಹಾಗಾಗಿ ಆ ಕೊಣೆಯಲ್ಲಿ ಲಕ್ಷ್ಮಿ ಒಬ್ಬಳೇ ಉಳಿದಿದ್ದಳು‌.

ಅಪ್ಪ ತನ್ನ ಮುದ್ದಿನ ಮಗಳು ಹೀಗೆ ಮಾಡಿದ್ದನ್ನು ಕಂಡು ದುಃಖ ಗೊಂಡ. ಕಣ್ಣಿನಲ್ಲಿ ನೀರು ತುಳುಕಿಸುತ್ತಾ  “ಯಾಕ್ ಮಗ ಹಿಂಗ್ ಮಾಡ್ಬುಟ್ಟೆ..?  ನನ್ನ ಮಖಕ್ಕೆ ಬೆಂಕಿ ಇಟ್ಟಂಗೆ  ಉರಿತಾಯ್ತಲವ್ವ” ಎಂದ. ಕೂಡಲೇ ಎಚ್ಚರಗೊಂಡ ಲಕ್ಷ್ಮಿ ” ಅಯ್ಯೋ.. ಹಂಗ್ ಮಾಡ್ಬುಟ್ನಾ ನಂಗೆ ಗೊತ್ತೇ ಆಗ್ಲಿಲ್ವಲ್ರಪ್ಪ ನಾನೊಬ್ಳು ಹಾಳಾದೋಳು” ಎಂದು ಹೇಳಿ  ತನ್ನ ಸೆರಗಿನ ತುದಿಯಿಂದ ಅಪ್ಪನ ಮುಖವನ್ನು ವರೆಸಿದಳು. ಅಲ್ಲದೆ ಅವ್ವ ಎರಡು ದಿನದಿಂದ ಊಟ ಮಾಡದೆ ಅನ್ನವನ್ನೆಲ್ಲಾ ಕಿಟಕಿಯಿಂದ ಹೊರ ಸುರಿಯುತ್ತಿರುವ  ಗುಟ್ಟನ್ನು ಅಪ್ಪನಿಗೆ ತಿಳಿಸಿದಳು. ಅಪ್ಪ ಆಶ್ಚರ್ಯದಿಂದ ಮಗಳ ಮುಖ ನೋಡಿದ. ಲಕ್ಷ್ಮಿ ಅಪ್ಪನನ್ನು ದುರು ಗುಟ್ಟಿ ನೋಡುತ್ತಾ “ನಂಗೆ ಹೆಂಗ್ ಗೊತ್ತಾಯ್ತು ಅಂತ ನೋಡ್ತಿದ್ದೀಯ.  ನನಗೆ ಕೂತ ಜಾಗದಲ್ಲೇ ಎಲ್ಲಾ ಗೊತ್ತಾಯ್ತದೆ ಕಂತೆ  ಎಲ್ಲಾನೂ ಕೆದ್ಕಕ್ಕೋಗ್ ಬ್ಯಾಡ. ನಾನು ಹೇಳ್ದಂಗೆ ಹೋಗಿ ನಿನ್ನ ಹೆಂಡ್ತಿ ಮುಂದ್ಗಡೆನೆ ಕೂತ್ಕೊಂಡು ಏನಾರು ತಿನ್ಸು”  ಎಂದಳು. ಎಂದೂ ಏಕವಚನದಲ್ಲಿ ಮಾತಾಡದಿದ್ದ ಮಗಳ ಮಾತಿನ ವರಸೆ ಕಂಡು ಅಪ್ಪನಿಗೆ ಒಂದು ರೀತಿಯ ಆತಂಕವಾಯಿತು. ಅವನಿಗೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ, ಯಾರೋ ಕುತ್ತಿಗೆ ಹಿಡಿದು ದಬ್ಬುತ್ತಿದ್ದಾರೆ ಎನ್ನುವ ಅನುಭವವಾಗ ತೊಡಗಿತು. ಕೂಡಲೇ ವಾರ್ಡಿನ ಹೊರಗಿನ ವೆರಾಂಡದಲ್ಲಿ ಮಲಗಿದ್ದ ಅವ್ವನ ಬಳಿಗೆ ಬಂದ.

ರಾತ್ರಿ ಪೂರ ಮಗಳನ್ನು ಕಾಯುವುದರಲ್ಲೇ ನಿದ್ದೆ ಗೆಟ್ಟಿದ್ದ ಅವ್ವ, ಆಗಷ್ಟೆ ಚಾಪೆಯ ಮೇಲೆ ಬಂದು ಉರುಳಿ ಕೊಂಡಿದ್ದಳು. ಹೊರ ಬಂದ ಅಪ್ಪ, ಅವ್ವನನ್ನು ಎಬ್ಬಿಸಿ,  ಒಳಗೆ ಲಕ್ಷ್ಮಿ  ನಡೆದು ಕೊಂಡ  ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದುದಲ್ಲದೆ, ಅವಳು ಹೇಳಿದಂತೆ  ಊಟ ತಿಂಡಿ ಹೊರ ಹಾಕುತ್ತಿರುವುದು ನಿಜವೇ ಎಂದು ಕೇಳಿದ. ಯಾರಿಗೂ ಗೊತ್ತಾಗದಂತೆ ತಾನು ಊಟವನ್ನು ಕಿಟಕಿಯ ಹೊರಗೆ ಹಾಕುತ್ತಿರುವುದನ್ನು  ಮಿಸುಕಾಟವೇ ಇಲ್ಲದ ಮಗಳು, ನೋಡಿದವಳಂತೆ ವರ್ಣಿಸಿರುವುದು, ಅಪ್ಪನ ಮೇಲೆ  ಹಾಲು ಎರಚಿ ಏಕವಚನದಲ್ಲಿ ಮಾತನಾಡಿರುವುದು, ಈ ಎಲ್ಲವೂ ಅವ್ವನ ಒಳಗೆ ಹೊಗೆ ಆಡುತ್ತಿದ್ದ ಅನುಮಾನವನ್ನು ಇನ್ನಷ್ಟು ಗಟ್ಟಿ ಗೊಳಿಸಿತು.

ರಾತ್ರಿ ಡಾಕ್ಟರ್ ಮನೆಗೆ ಹಿಂದಿರುಗುವ ಮುನ್ನ ಲಕ್ಷ್ಮಿಯನ್ನು ಮಾತಾಡಿಸಿ ಕೊಂಡು ಹೋಗಲು ಅವಳಿದ್ದ ಕೊಠಡಿಗೆ ಬಂದರು. ಮಗಳ ತಲೆಯ ಬಳಿ ಒಬ್ಬರು ಕಾಲಿನ ಬುಡದಲ್ಲಿ ಒಬ್ಬರು ಕುಳಿತಿದ್ದ ಅಪ್ಪ, ಅವ್ವನಲ್ಲಿ  “ನಾನು ಅವಳಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವುದಿದೆ ನೀವು ಸ್ವಲ್ಪ ಹೊತ್ತು ಹೊರಗಿರಿ” ಎಂದು ಕಳುಹಿಸಿದರು. ಬೆಳಗ್ಗಿನಿಂದ ಒಂದೇ ಸಮನೆ ಉರಿದ ಬಿಸಿಲಿನಿಂದಾಗಿ ವಾರ್ಡ್ ಕಾದು ಧಗೆ ತುಂಬಿತ್ತು.  ಡಾಕ್ಟರ್‌ ಗೆ ವಿಪರೀತ ಸೆಕೆ ಎನ್ನಿಸಿ ಫ್ಯಾನ್ ಹಾಕಲು  ಸ್ವಿಚ್ ಕಡೆ ನೋಡಿದರು. ಗೋಡೆಯ ಕಡೆ ಮುಖ ತಿರುಗಿಸಿ ಮಲಗಿದ್ದ ಲಕ್ಷ್ಮಿ, ಅವರ ಮನಸ್ಸನ್ನು ಓದಿದವಳಂತೆ “ಡೋಂಟ್ ಪುಟ್ ಫ್ಯಾನ್ ಡಾಕ್ಟರ್. ನನಗೆ ಗಾಳಿ ಆಗಲ್ಲ ಅಂತ ನಿಮಗೆ ಗೊತ್ತಿಲ್ವ” ಎಂದು  ಗಡುಸಾಗಿ ಹೇಳಿದಳು. ಡಾಕ್ಟರ್ ಆಶ್ಚರ್ಯದಿಂದ  ಬೆನ್ನು ತಿರುಗಿಸಿ ಮಲಗಿದ್ದ ಲಕ್ಷ್ಮಿಯನ್ನೇ ದಿಟ್ಟಿಸಿದರು. “ಏನ್ ಸರ್ ನನ್ನ ಮನಸ್ಸಿನಲ್ಲಿರೋದು ಇವಳಿಗೆ ಹೇಗೆ ಗೊತ್ತಾಯ್ತು ಅಂತ ಯೋಚಿಸ್ತಿದ್ದೀರ ಅಲ್ವ” ಎಂದು ಜೋರಾಗಿಯೇ ನಕ್ಕಳು. ಡಾಕ್ಟರ್ ತುಸು ಸಾವರಿಸಿ ಕೊಂಡು ಪ್ರಯತ್ನ ಪೂರ್ವಕವಾಗಿ  ಮುಖದ ಮೇಲೆ ನಗು ತಂದು ಕೊಂಡು  “ಯೆಸ್ ಯೆಸ್….  ಹೌ ಆರ್ ಯು ಲಕ್ಷ್ಮಿ . ಕೆನ್ ಯು ವೇಕ್ ಅಪ್ ” ಎಂದು ಕೇಳಿದರು. ” ಓ.. ಶೂರ್ ಡಾಕ್ಟರ್” ಎಂದು ತನಗೆ ಏನು ಆಗೇ ಇಲ್ಲ ಎಂಬಂತೆ  ಆರಾಮವಾಗಿ ಎದ್ದು ಡಾಕ್ಟರಿನ ಸರಿ ಸಮಕ್ಕೆ ಕಾಲು ಮೇಲೆ ಕಾಲು ಹಾಕಿ ಕೂತಳು. ಡಾಕ್ಟರ್ ಮಾತು‌ ಎತ್ತಿಕೊಳ್ಳಲು ಪೀಠಿಗೆ ಎಂಬಂತೆ ” ನಿನಗೆ ಇಂಗ್ಲೀಷ್ ಮಾತಾಡೋಕು ಬರುತ್ತಾ. ವೆರಿ ಗುಡ್” ಎಂದರು. ” ನಂದು ಎಲೆಕ್ಟ್ರಿಕ್ ಆಫೀಸ್ನಲ್ಲಿ ಮೂವತ್ತು ವರ್ಷದ ಸರ್ವಿಸ್‌ ಸರ್. ಎಂತೆಂತ ಜನ್ರು ಜೊತೆ ಇಂಟ್ರ್ಯಕ್ಟ ಮಾಡಿರ್ತಿವಿ ಅಷ್ಟು ಇಂಗ್ಲೀಷ್ ಬರ್ಲಿಲ್ಲ ಅಂದ್ರೆ ಹೇಗೆ ಹೇಳಿ” ಎಂದಳು. ಡಾಕ್ಟರ್ ಗೆ ಅವಳ ಮಾತಿನ ತಳ ಬುಡ ಅರ್ಥವಾಗಲಿಲ್ಲ. ಗಲಿಬಿಲಿ ಗೊಂಡ ಡಾಕ್ಟರ್ “ಲಕ್ಷ್ಮಿ ಆರ್ ಯು ಓಕೆ” ಎಂದು ಕೇಳಿದರು. “ಓ..ಐ ಯಮ್ ಫೈನ್ ಸರ್. ನೋಡಿ ಹೇಗ್ ಗುಂಡ್ರು ಗೂಳಿ ಇದ್ದಂಗಿದ್ದೀನಿ” ಎಂದು ಲಕ್ಷ್ಮಿ ತನ್ನ ಮೈ ಕುಣಿಸಿದಳು. ಹೀಗೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಡಾಕ್ಟರ್  ಕೇಳಿದ ಪ್ರಶ್ನೆಗಳಿಗೆಲ್ಲಾ ಕೆಲವೊಮ್ಮೆ ಅಸಂಬದ್ಧವಾಗಿ ಕೆಲವೊಮ್ಮೆ ತಾರ್ಕಿಕವಾಗಿ ಇಂಗ್ಲಿಷ್ ಕನ್ನಡ ಎಂಬುದರ ಹಂಗು ತೊರೆದು ಪ್ರತಿಕ್ರಿಯಿಸಿದಳು. ಹೀಗೆ ಅರಳು ಹುರಿದಂತೆ ಮಾತಾಡುತ್ತಲೇ ಇದ್ದವಳು ಇದ್ದಕ್ಕಿದ್ದಂತೆ ನಿಶಕ್ತಳಾದಳು. ದೇಹದ ತ್ರಾಣವೆಲ್ಲ ಬಸಿದು ಹೋದಂತೆ ಡಾಕ್ಟರರ ಕೈ ಹಿಡಿದು, “ಡಾಕ್ಟ್ರೇ ನಮ್ಮಪ್ಪ ಅವ್ವುಂತವ ಸುಮ್ನೆ ದುಡ್ಡು ಯಾಕ್ ಖರ್ಚು ಮಾಡುಸ್ತೀರಾ? ಇದು ಆಸ್ಪತ್ರೆ ಕಾಯಿಲೆನೂ ಅಲ್ಲ, ಹುಸಾರಾಗೋ ಕಾಯಿಲೆನೂ ಅಲ್ಲ. ಮೊದ್ಲು ನಮ್ಮುನ್ನ ಮನೆಗೆ ಕಳ್ಸ್ಬುಡಿ” ಎಂದು ಹೇಳಿ ನರಳುತ್ತಾ ಹಾಸಿಗೆ ಮೇಲೆ ಮುದುಡಿ ಮಲಗಿದಳು. ಯಾಕೋ ಅವಳು ಹೇಳಿದ “ಇದು ಆಸ್ಪತ್ರೆ ಕಾಯಿಲೆ ಅಲ್ಲ”, ಎನ್ನುವ ಮಾತು ಡಾಕ್ಟರರ ಮನಸ್ಸನ್ನು ನಾಟಿ ಕ್ಷಣ ಎದೆಯನ್ನು ನಡುಗಿಸಿತು. ಮುದುಡಿ ಮಲಗಿದ್ದವಳನ್ನು ನೆಟ್ಟ ನೋಟದಿಂದ  ಸೂಕ್ಷ್ಮವಾಗಿ ಗಮನಿಸಿದರು. ಮನಸ್ಸಿನಲ್ಲೇ, ಎಷ್ಟು ಮುದ್ದಾದ ಹುಡುಗಿ ಎಂದು ಕೊಳ್ಳುತ್ತಿದ್ದಂತೆ ಅವಳ ರವಿಕೆಯ ತೋಳ ಮರೆಯಲ್ಲಿ ಕಟ್ಟಿದ್ದ ಹಸಿರು ತಾಯತ ಕಣ್ಣಿಗೆ ಬಿತ್ತು…ಒಮ್ಮೆ ಅವಳ ತಲೆ ಸವರಿ ಏನೋ ನಿರ್ಧರಿಸಿದವರಂತೆ ನಿಟ್ಟುಸಿರು ಬಿಟ್ಟು ಎದ್ದು ಹೊರ ಬಂದರು.

(ಮುಂದುವರಿಯುವುದು…)

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮನೆಗೆ ಬಂದ ಮಹಾಲಕ್ಷ್ಮಿ
(ಈವರೆಗೆ…)

ಗಂಗೆಯ ಅಮ್ಮ ನೀರು ತರಲೆಂದು ಮಟ ಮಟ ಮಧ್ಯಾಹ್ನ ಹೊಳೆಯ ಬದಿಗೆ ಹೋಗುತ್ತಾಳೆ. ಅಲ್ಲಿ ಮಗುವೊಂದು ಚೀರಾಡುವ ಶಬ್ದಕೇಳಿ ಆ ಶಬ್ದದ ಜಾಡು ಹಿಡಿದು ನಡೆಯುತ್ತಾಳೆ. ಬಿದಿರುಮೆಳೆಯೊಳಗೆ ಹೆಂಗಸೊಬ್ಬಳು ಹಸುಗೂಸೊಂದನ್ನು ಕತ್ತು ಹಿಸುಕಿ ಸಾಯಿಸುವ ಪ್ರಯತ್ನದಲ್ಲಿರುವುದನ್ನು ಕಂಡು ಆ ಮಗುವನ್ನು ತಾನು ಸಾಕುವ ನಿರ್ಧಾರ ಮಾಡಿ ಮನೆಗೆ ತರುತ್ತಾಳೆ. ಕೂಸು ಲಕ್ಷ್ಮಿ ಬೆಳೆದು ಯುವತಿಯಾಗಿ ಒಂದು ಅನಾಹುತ ಮಾಡಿಬಿಟ್ಟಳು. ಏನದು? ಉತ್ತರಕ್ಕಾಗಿ  ಓದಿ..ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ ಅಂಕಣದ ಆರನೆಯ ಕಂತು

ಹಸುಳೆ ಲಕ್ಷ್ಮಿ ಮನೆ ಸೇರಿದ ನಾಲ್ಕು ದಿನಕ್ಕೆ ಅವ್ವನ ಹೆರಿಗೆಯಾಗಿ ಗಿರಿಧರ ಹುಟ್ಟಿದ. ಮನೆಯಲ್ಲಿ ಈಗ ಎರಡು ತೊಟ್ಟಿಲುಗಳಾಡ ತೊಡಗಿದವು. ಇಬ್ಬರು ಮಕ್ಕಳಿಗೂ ಕುಡಿಸಿ ಸುರಿದು ಹೋಗುವಷ್ಟು ಹಾಲು ಗಟ್ಟಿಗಿತ್ತಿ ಅವ್ವನ ಎದೆ ತುಂಬಿತ್ತು. ಲಕ್ಷ್ಮಿ ಗಿರಿಧರನೊಡಗೂಡಿ ಬಹಳ ಅಕ್ಕರೆಯಲ್ಲಿ ಬೆಳೆಯ ತೊಡಗಿದಳು.

ಹೀಗೆ ಕಣ್ಣು ಮಿಟುಕಿನಲ್ಲಿಯೇ ಕಳೆದು ಹೋದ ವರುಷ ಒಪ್ಪತ್ತಿನಲ್ಲಿ ಅವ್ವ, ಒಂದು ಹೆಣ್ಣು, ನಾಲ್ಕು ಗಂಡು ಮಕ್ಕಳಿಗೆ ಜನ್ಮವಿತ್ತಳು. ಅವ್ವ ಅಪ್ಪನ ಪುಟ್ಟ ಕುಟುಂಬವೀಗ ಬರೋಬ್ಬರಿ ಎಂಟು ಮಕ್ಕಳ ತುಂಬು ಕುಟುಂಬವಾಗಿ ಬೆಳೆದಿತ್ತು. ದಿನೇ ದಿನೇ ಹೆಚ್ಚುತ್ತಲೇ ಇದ್ದ ಅವ್ವ ಅಪ್ಪನ ಪರಿಶ್ರಮದಿಂದಾಗಿ ಊರ ತುಂಬಾ ಜಮೀನುಗಳು ಏಳತೊಡಗಿದವು. ಮನೆ ತುಂಬಿ ತುಳುಕುವ ಕರಾವು, ದವಸ ಧಾನ್ಯ, ಆಳು ಕಾಳು ಒಟ್ಟಿನಲ್ಲಿ ಆ ಸಂಸಾರ ಸಂತುಷ್ಟವಾದ ಸಿರಿವಂತ ಕುಟುಂಬವಾಗಿ  ಹಳೇ ನಾರಿಪುರದಲ್ಲಿ  ತಲೆ ಎತ್ತಿ ನಿಂತಿತ್ತು.

ಅವ್ವನ ಕುರುಡು ಮೋಹದಲ್ಲಿ ಬೆಳೆದು ಬಲಗೊಳ್ಳ ತೊಡಗಿದ್ದ ಗಂಡು ಮಕ್ಕಳು ವಯಸ್ಸಿಗೆ ಬಂದಂತೆಲ್ಲಾ ಸೋಮಾರಿತನವನ್ನು ಮೈಗೂಡಿಸಿ ಕೊಂಡು ಅಪ್ಪನ ಉರಿಗಣ್ಣಿಗೆ ಒಳಗಾದರು. ಸಾಲದೆಂಬಂತೆ ಹೆಡ್ಡ ಗಂಡ ಮತ್ತು ಆರುಜನ ಮಕ್ಕಳೊಂದಿಗೆ ಒಂದೇ ಮನೆಗೆ ಅಡ್ಡಲಾಗಿ ನಿಂತಿದ್ದ ಗೋಡೆಯಾಚೆ ಅಸಂತೃಪ್ತ ಜೀವನ ಸಡೆಸುತ್ತಿದ್ದ ಸೋದರತ್ತೆಯ (ಅಪ್ಪನ ತಂಗಿ) ಅಸೂಯೆಯ ಕೇಡುಗಣ್ಣು ಅಣ್ಣನ ಕುಟುಂಬದ ಮೇಲೆ ಕತ್ತಿ ಮಸೆಯ ತೊಡಗಿತ್ತು.

ಸೋದರತ್ತೆಯ ಬೆಡಗಿನ  ಮುತ್ತು ಸುರಿಸುವಂತಹ ಮಾತು,  ಈ ಮನೆಯ ಗಂಡು ಮಕ್ಕಳಿಗೆ ನಶೆ ಏರಿಸಿತ್ತು. ಬಹು ಬೇಗ  ಅವಳ ಕೈ ಗೊಂಬೆಗಳಾಗಿ ಆಟ ಆರಂಭಿಸಿದರು. ಅತ್ತೆಯ ಆಣತಿಯಂತೆ ಎಲ್ಲರ ಕಣ್ಣು ತಪ್ಪಿಸಿ, ಮನೆಯ ವಸ್ತುಗಳನ್ನು ಕಳುವು ಮಾಡಿ, ತಮ್ಮ ಬೇಕು ಬೇಡಗಳನ್ನು ಪೂರೈಸಿ ಕೊಳ್ಳುವ ವಿದ್ಯೆಯನ್ನು ಕಲಿತರು. ಅವ್ವನನ್ನು ಬ್ಲ್ಯಾಕ್ ಮೇಲ್ ಮಾಡಿ ತಮ್ಮೆಲ್ಲಾ ಮಾತಿಗೂ ತಲೆ ಆಡಿಸುವಂತೆ ಮಾಡಿಕೊಂಡರು. ಅಪ್ಪನ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬಿದ್ದು, ಬೀದಿರಂಪ ಮಾಡುವುದನ್ನು ಕಲಿತು, ನಾಲ್ಕು ಜನಕ್ಕೆ ನ್ಯಾಯ ಹೇಳುತ್ತಿದ್ದ ಅಪ್ಪ ಮರಿಯಾದಿಗಂಜಿ ಮೌನ ಹೊದ್ದು ಆಗಾಗ  ಹೊಲದ ಗುಡಿಸಲು ಸೇರುವಂತೆ ಮಾಡಿದ್ದರು.

ಏಳು ಮಕ್ಕಳ ನಡುವೆ ಒಂದು ಕೈ ಹೆಚ್ಚಾಗಿಯೇ ಪ್ರೀತಿ ಪಡೆದು ಬೆಳೆದ ಲಕ್ಷ್ಮಿ ಮೂರನೇ ತರಗತಿವರೆಗು ಸ್ಕೂಲ್ ಮೆಟ್ಟಿಲೇರಿ ಬಂದಳು. ಒಮ್ಮೆ ಶಾಲೆಯ ಮಾಸ್ಟರು ಎಲ್ಲಾ ಮಕ್ಕಳೆದುರು ಅವಳ ಲಂಗ ಎತ್ತಿ ಚಡ್ಡಿ ಇಲ್ಲದ ಖಾಲಿ ಕುಂಡಿಗೆ ಬಾಸುಂಡೆ ಬರುವಂತೆ ಹೊಡೆದರು ಎಂದು ಸ್ಲೇಟನ್ನು ಮುರಿದು ಪುಡಿ ಪುಡಿ ಮಾಡಿ ಬಚ್ಚಲ ನೀರ ಒಲೆಗೆ ತುರುಕಿದಳು. ಅದನ್ನು ಧಗ ಧಗಿಸುವ ಬೆಂಕಿಯಲ್ಲಿ ಉರಿಸಿ ಮೇಷ್ಟರ ಮೇಲಿದ್ದ ರೊಚ್ಚು ತೀರಿಸಿ ಕೊಂಡಳು. ಅಂದೇ ಕೊನೆ, ಅಪ್ಪಿ ತಪ್ಪಿಯೂ “ಇಸ್ಕೂಲು” ಅನ್ನುವ ಪದ ಅವಳ ಬಾಯಿಂದ ಹೊರಡಲಿಲ್ಲ.

ಹೀಗೆ ಓದಿಗೆ ಎಳ್ಳು ನೀರು ಬಿಟ್ಟವಳು ಅವ್ವನೊಂದಿಗೆ ಅಡಿಗೆ ಕೋಣೆ ಸೇರಿ ಒಲೆ ಮುಂದೆ ಬೇಯುವುದನ್ನು ಬಹು ಬೇಗ ರೂಢಿಸಿಕೊಂಡಳು. ಸಿನಿಕತೆಯಲ್ಲಿಯೇ ಕೊಬ್ಬಿ ನಿಂತಿದ್ದ ಅಣ್ಣತಮ್ಮಂದಿರ ಕಣ್ಗಾವಲಿನಲ್ಲಿ, ಸೂರಿನಾಚೆ ತಲೆ ಹಾಕದಂತೆ, ನಾಲ್ಕು ಗೋಡೆಯೊಳಗೇ ಕಣ್ಣು ಕುಕ್ಕುವಂತೆ ಅರಳಿ ನಿಂತಳು. ಹಳೇ ನಾರಿಪುರವಿರಲಿ ಸುತ್ತಮುತ್ತಲ ನಾಲ್ಕು ಹಳ್ಳಿಯ  ಜನರ ಬಾಯಲ್ಲೂ ಲಕ್ಷ್ಮಿಯ ಅಂದ ಚಂದದ ಮಾತೆ ಹರಿದಾಡುತ್ತಿತ್ತು.

ಅಕ್ಕ ಪಕ್ಕದ ಊರ ಗೌಡರ ಆದಿಯಾಗಿ ದೂರದೂರಿನ ಇಂಜಿನಿಯರುಗಳು ಕೂಡ  ಆ ಮನೆಗೆ ಹೆಣ್ಣಿಗಾಗಿ ಎಡತಾಕ ತೊಡಗಿದರು. ಕೊನೆಗೆ ಅಪ್ಪ ಅವ್ವ ಅಳೆದು ಸುರಿದು, ಮಗಳು ಕಣ್ಣ ಮುಂದೆಯೇ ಇರಲೆಂದು ನಿರ್ಧರಿಸಿ, ಪಕ್ಕದ ಜೋಗತಿ ಕಟ್ಟೆಯ ಗೌಡರ ಮಗನಿಗೆ ಮಗಳನ್ನು ಕೊಡುವುದಾಗಿ ಮಾತಾಯಿತು.

ಮದುವೆಗೆ ತಿಂಗಳೊಪ್ಪತ್ತು ಎನ್ನುವಂತಿತ್ತು. ಅಂದು ಅವ್ವನಿಗೆ ವಿಪರೀತ ಜ್ವರ ಬಂದು ಹಾಸಿಗೆ ಹಿಡಿದಿದ್ದಳು. ಭಾನುವಾರವಾದ್ದರಿಂದ  ಅಣ್ಣ ತಮ್ಮಂದಿರೆಲ್ಲಾ ಊರಿನವರೊಂದಿಗೆ ಜೇನು ಕಲ್ಲು ಬೆಟ್ಟಕ್ಕೆ ಸೌದೆ ಕಡಿದು ತರಲು ಹೋಗಿದ್ದರು. ಮಧ್ಯಾಹ್ನ ಊಟದ ಹೊತ್ತು ಮೀರುತ್ತಾ ಬಂದಿತ್ತು. ಹೊಲಕ್ಕೆ ಹೋಗಿದ್ದ ಅಪ್ಪನಿಗೆ ಊಟ ತೆಗೆದುಕೊಂಡು ಹೋಗುವವರಿಲ್ಲದೆ ಲಕ್ಷ್ಮಿ ತಾನೇ ಬುತ್ತಿ ತೆಗೆದು ಕೊಂಡು ಹೋಗಲು ನಿರ್ಧರಿಸಿದಳು. ಹಾಗೆಯೇ ಹೊಲದೊಳಗೆ ಹರಿಯುತ್ತಿದ್ದ ಕಾಲುವೆಯಲ್ಲಿ ತೊಳೆದು ಕೊಂಡು ಬರಲೆಂದು, ಮೈಲಿಗೆ ಬಟ್ಟೆ ಮತ್ತು ಪಾತ್ರೆಗಳನ್ನು ತುಂಬಿಕೊಂಡು ಕೊನೆಯ ತಮ್ಮ ಶಂಕರನೊಡನೆ ಹೊಲದ ಕಡೆ ಹೊರಟಳು.

ಎಂದೂ ಊರ ಹೆದ್ದಾರಿ ಒಳಗೆ ಓಡಾಡದ ಲಕ್ಷ್ಮಿ, ಮನೆಯ ಹಿಂದಿದ್ದ ಹಿತ್ತಿಲ ಒಳ ದಾರಿಯಲ್ಲೇ ನಡೆದು ಮೈಲು ದೂರದ ಗದ್ದೆಗೆ ಬಂದು ತಲುಪಿದಳು . ಹೊಲ ಉಳುವುದರಲ್ಲಿ ಮಗ್ನನಾಗಿದ್ದ ಅಪ್ಪ ಮಗಳನ್ನು ಕಂಡು ಗಾಬರಿಯಾದ. ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಓಡಿ ಬಂದು ಲಕ್ಷ್ಮಿಯ ತಲೆ ಮತ್ತು ಕಂಕುಳಲ್ಲಿ ಹಿಡಿದಿದ್ದ ಬಟ್ಟೆ ಪಾತ್ರೆಗಳನ್ನು ಕೆಳಗಿಳಿಸಿದ. “ನೀನ್ಯಾಕವ್ವ ಬರಕೋದೆ ಒಂದು ಹೊತ್ತು ಉಂಡಿಲ್ಲ ಅಂದ್ರೇನು ಸತ್ತೋಗ್ತಿದ್ನ. ಆ ರಾಕ್ಷಸ್ರು ನಿಮ್ಮಣ್ಣ ತಮ್ಮದಿರಿಗೆ ಗೊತ್ತಾದ್ರೆ ನಿನ್ ಬುಟ್ಟಾರೇನವ್ವ. ಬಿರ್ನೋಗಿ ಮನೆ ಸೇರ್ಕೋ”, ಎಂದು ಹೇಳಿದ. ಹೆಚ್ಚು ಮಾತಾಡದ ಲಕ್ಷ್ಮಿ ಸರಿಯೆಂದು ತಲೆ ಆಡಿಸಿ ಅನತಿ ದೂರದಲ್ಲಿ ಹರಿಯುತ್ತಿದ್ದ ಕಾಲುವೆ ಕಡೆ ಹೆಜ್ಜೆ ಹಾಕಿದಳು.

ಸಣ್ಣ ವಯಸ್ಸಿನಲ್ಲಷ್ಟೇ ಅಲ್ಲಿಗೆ ಬಂದಿದ್ದ  ಅವಳಿಗೆ ಆ ಹಸಿರುಟ್ಟ ಗದ್ದೆ ಬಯಲು, ಜುಳು ಜುಳು ಸದ್ದಿನೊಂದಿಗೆ ಹರಿಯುವ ನೀರು, ಆ ಉರಿ ಬಿಸಿಲಿನಲ್ಲಿ ತಣ್ಣಗೆ ಬೀಸುತ್ತಿದ್ದ ಗಾಳಿ, ದೊಡ್ಡ ಅರಳಿ ಮರದಲ್ಲಿ ಗೂಡು ಕಟ್ಟಿ ಕಿಚ ಪಿಚ ಎನ್ನುತ್ತಿದ್ದ ಹಕ್ಕಿ ಮರಿಗಳ ಸದ್ದು, ಇವೆಲ್ಲವೂ ಹೊಸ ಚೈತನ್ಯ ನೀಡಿದವು. ಮನೆಯ ಮಂದಿಯೆಲ್ಲಾ ವಾರಕ್ಕೆರಡು ಬಾರಿ ಬಂದು ಆ ಕಾಲುವೆಯ ಪಕ್ಕವೇ ಉರಿ ಹಾಕಿ ನೀರು ಕಾಯಿಸಿ ಸ್ನಾನ ಮಾಡಿ ಹೋಗುತ್ತಿದ್ದುದು ವಾಡಿಕೆ. ಆದರೆ ಲಕ್ಷ್ಮಿಗೆ ಮಾತ್ರ ಇಲ್ಲಿ ಸುಳಿಯಲು ಅನುಮತಿ ಇರಲಿಲ್ಲ. ತುಸು ಹತ್ತಿರವಿರುವ ಹೊಳೆಯಿಂದಲೇ ನೀರು ಹೊತ್ತು ತಂದು ಅವಳು ಮನೆಯಲ್ಲಿಯೇ ಸ್ನಾನ ಮಾಡಲು ವ್ಯವಸ್ಥೆ ಮಾಡಿದ್ದರು. ಹಾಗಾಗಿ ಲಕ್ಷ್ಮಿ ಇಂದು ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಕುಪ್ಪಳಿಸುತ್ತಾ, ಅಲ್ಲಿ ಇದ್ದ ದೊಡ್ಡ ತಪ್ಪಲೆಗೆ ನೀರು ತುಂಬಿಸಿ ಒಲೆಗೆ ಉರಿ ಹಾಕಿದಳು.

ನೀರು ಕಾಯುವುದರೊಳಗೆ ಬಟ್ಟೆ ಪಾತ್ರೆಯ ಕೆಲಸ ಮುಗಿಸಿ ಕೊಂಡಳು. ಶಂಕರನೊಂದಿಗೆ ಸೇರಿ ಕಾಲುವೆಯ ಸಂದು ಗೊಂದುಗಳಲ್ಲಿ ಅಡಗಿದ್ದ ಏಡಿಗಳನ್ನು ಹಿಡಿದು ಪಾತ್ರೆಗೆ ತುಂಬಿಸಿದಳು. ತಮ್ಮನಿಗೆ ಉಜ್ಜುವ ಕಲ್ಲಿನಿಂದ ಚೆನ್ನಾಗಿ ಮೈತಿಕ್ಕಿ ಸ್ನಾನ ಮಾಡಿಸಿದಳು. ಪಕ್ಕದಲ್ಲಿಯೇ ಹೆಂಗಸರಿಗಾಗಿಯೇ ಹೆಣೆದು ನಿಲ್ಲಿಸಿದ್ದ ತೆಂಗಿನ ಸೋಗೆಯ ಮರೆಯಲ್ಲಿ ತಾನೂ ಸ್ನಾನಕ್ಕಿಳಿದಳು. ಬೆಳ್ಳಗೆ ರಕ್ತ ಚಿಮ್ಮುವಂತಿದ್ದ ಅವಳ ಮೈ, ಉಜ್ಜುವ ಕಲ್ಲಿನ ಒರಟುತನಕ್ಕೆ ಇನ್ನಷ್ಟು ಕೆಂಪಾಗಿ ರಂಗು ರಂಗಾಗಿ ಹೋಯಿತು. ಕಣ್ಣು ಮುಚ್ಚಿ ಬಿಸಿ ನೀರಿನ ಆನಂದ ಅನುಭವಿಸುತ್ತಿದ್ದವಳಿಗೆ, ಅದೆಲ್ಲಿತ್ತೊ ಇದ್ದಕ್ಕಿದ್ದಂತೆ ಭಾರಿ ಗಾತ್ರದ ನೊಣವೊಂದು ಭಯಂಕರ ಸದ್ದು ಮಾಡುತ್ತಾ ಹಾರಿ ಬಂದು, ಕಣ್ಣು ಮುಚ್ಚಿ ಬಿಡುವುದರೊಳಗೆ ಅವಳ  ತೊಡೆಯ ಮಾಂಸ ಕಿತ್ತು ಬರುವಂತೆ ಕಚ್ಚಿ, ಹಾರಿ ಹೋಯಿತು. ತೊಡೆಯಿಂದ ಚಿಮ್ಮಿದ ರಕ್ತ ತಡೆಯಲು ಸಾಹಸ ಮಾಡಿದಳು. ಕೊನೆಗೆ ಅವ್ವನ ಒಳ ಲಂಗದ ಅಂಚು ಅರಿದು ತೊಡೆಗೆ ಬಿಗಿಯಾಗಿ ಕಟ್ಟಿಕೊಂಡಳು. ಅಪ್ಪಿ ತಪ್ಪಿಯು ಇದನ್ನು ಯಾರಿಗೂ ತಿಳಿಸಬಾರದೆಂದು ನಿರ್ಧರಿಸಿ, ಬಂದ ದಾರಿಯಲ್ಲಿಯೇ ಮನೆಯ ಕಡೆ ಹೊರಟಳು.

ಮಗಳಿಗಾಗಿ ಅಕ್ಕ ಪಕ್ಕದ ಮನೆಗಳನ್ನೆಲ್ಲಾ ಹುಡುಕಿ ಸುಸ್ತಾಗಿ ಬಂದ ಅವ್ವ, ಮನೆಯ ಹಟ್ಟಿ ಬಾಗಿಲಲ್ಲಿಯೇ ತಲೆ ಮೇಲೆ ಕೈ ಹೊತ್ತು ಕೂತಳು. ಗದ್ದೆಯಿಂದ ಹಸು ಕರುಗಳಿಗೆ ಹುಲ್ಲು ಕೊಯ್ದು ಕೊಂಡು ಹೋಗುತ್ತಿದ್ದ ಅಕ್ಕಜ್ಜಮ್ಮ, ಅವ್ವನನ್ನು ಮಾತಾಡಿಸಿ  ಹೊಲದಲ್ಲಿ ಬಟ್ಟೆ ತೊಳೆಯುತ್ತಿದ್ದ ಲಕ್ಷ್ಮಿಯ ಬಗ್ಗೆ ಮಾಹಿತಿ ನೀಡಿದಳು. ಗಾಬರಿಯಾದ ಅವ್ವ ಅಲ್ಲಿಗೆ ಹೋಗುವ ತ್ರಾಣವಿಲ್ಲದೆ ಹಿತ್ತಿಲ ನಡು ಹಾದಿಯಲ್ಲಿ ಮಗಳಿಗಾಗಿ ಕಾಯತೊಡಗಿದಳು. ಲಕ್ಷ್ಮಿಯನ್ನು ದೂರದಿಂದಲೇ ಕಂಡು ಕಾಲೆಳೆಯುತ್ತಾ ಹತ್ತಿರ ಓಡಿದಳು. ಕಣ್ಣಿನಲ್ಲಿ ನೀರು ತುಳುಕಿಸುತ್ತಾ “ಅಯ್ಯೋ ನನ್ನ ತಾಯಿ ಸೋಕು ಗೀಕು ಆದ್ರೆ ಏನೇ ಮಾಡದು. ನನಗೆ ಒಂದು ಮಾತು ಹೇಳ್ದೆ ಯಾಕವ್ವ ಹೋದೆ.  ಅಣ್ಣತಮ್ಮದಿರ್ಗೆ ಗೊತ್ತಾದ್ರೆ ನಿನ್ ಸುಮ್ನೆ ಬುಟ್ಟಾರೆನೆ. ಹಿಂಗೆ ಯಾವತ್ತು ಮಾಡದಿಲ್ಲ ಅಂತ ನನ್ನ ತಲೆ ಮೇಲೆ ಕೈ ಇಟ್ಟು ಪ್ರಮಾಣ ಮಾಡು” ಎಂದು ಪ್ರಮಾಣ ಮಾಡಿಸಿ ಕೊಂಡು ಮಗಳ ಕೈಲಿದ್ದ ಬಟ್ಟೆ ಪಾತ್ರೆಯ ಕುಕ್ಕೆಗಳನ್ನು ತೆಕೊಂಡು ಮನೆಗೆ ಕರೆತಂದಳು.

(ಮುಂದುವರೆಯುವುದು…)

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.