himachala pradesh – Peepal Media

ಚುನಾವಣಾ ಫಲಿತಾಂಶ : ಗುಜರಾತ್ ನಲ್ಲಿ ಬಿಜೆಪಿ, ಹಿ.ಪ್ರದೇಶದಲ್ಲಿ ಅಲ್ಪ ಬಹುಮತದಲ್ಲಿ ಕಾಂಗ್ರೆಸ್ ಮುನ್ನಡೆ
ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್ ರಾಜ್ಯದ ಸಾರ್ವತ್ರಿಕ ಚುನಾವಣೆ ಹಲವು ಕಾರಣಗಳಿಂದ ಗಮನ ಸೆಳೆದಿದ್ದು, ಜೊತೆಗೆ ಹಿಮಾಚಲ ಪ್ರದೇಶದ ಮತ ಎಣಿಕೆ ಕೂಡಾ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ತೀವ್ರ ಪೈಪೋಟಿಯಿಂದ ಕುತೂಹಲ ಹುಟ್ಟಿಸಿದೆ.

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಎರಡೂ ಕಡೆಗಳಲ್ಲಿ ಮೊದಲ ಹಂತದ ಮತ ಎಣಿಕೆ ಮುಗಿದಿದ್ದು, ಗುಜರಾತ್ ನಲ್ಲಿ ಆಡಳಿತಾರೂಢ ಬಿಜೆಪಿ ಎಂದಿನಂತೆ ಮುನ್ನಡೆ ಸಾಧಿಸಿದೆ. ಗುಜರಾತ್ ನ 182 ಸ್ಥಾನಗಳಲ್ಲಿ 131 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಗುಜರಾತ್ ನಲ್ಲಿ ಸರ್ಕಾರ ರಚಿಸಲು 92 ಸೀಟುಗಳ ಸ್ಪಷ್ಟ ಬಹುಮತ ಬೇಕಿದೆ.

ಇಲ್ಲಿಯವರೆಗಿನ ಚುನಾವಣಾ ಸಮೀಕ್ಷೆ ಮತ್ತು ಸಧ್ಯದ ಮತ ಎಣಿಕೆ ಮುನ್ನಡೆ ಎಲ್ಲವನ್ನೂ ಗಮನಿಸಿದರೆ ಗುಜರಾತ್ ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಬರುವುದು ನಿಚ್ಚಳವಾಗಿದೆ. ಕಾಂಗ್ರೆಸ್ ಕೂಡಾ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಕೊಟ್ಟಿದೆ. ಈ ನಡುವೆ ಹೊಸದೇನೋ ಮ್ಯಾಜಿಕ್ ಮಾಡಬಹುದು ಎಂದು ನಿರೀಕ್ಷಿಸಿದ ಆಮ್ ಆದ್ಮಿ ಪಕ್ಷ ಕೆಲವೇ ಕ್ಷೇತ್ರಗಳಲ್ಲಿ ಪೈಪೋಟಿ ನೀಡಿದೆ. ಆದರೆ ಇಲ್ಲಿಯವರೆಗೂ ಗೆಲುವಿನ ಬಗ್ಗೆ ಯಾವುದೇ ವಿಶ್ವಾಸ ಮೂಡಿಸಿಲ್ಲ.

ಇನ್ನು ಹಿಮಾಚಲ ಪ್ರದೇಶದಲ್ಲೂ ಮೊದಲ ಹಂತದ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹಿಮಾಚಲ ಪ್ರದೇಶದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದ್ದು ಕಾಂಗ್ರೆಸ್ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಒಟ್ಟಾರೆ ಹಿಮಾಚಲ ಪ್ರದೇಶದ 68 ಕ್ಷೇತ್ರಗಳ 35 ಕ್ಷೇತ್ರಗಳಲ್ಲಿ ಬಹುಮತ ಬಂದವರು ಸರ್ಕಾರ ರಚಿಸಬಹುದು. ಒಂದು ಕಡೆ ಗುಜರಾತ್ ನರೇಂದ್ರ ಮೋದಿಯವರ ತವರು ರಾಜ್ಯ ಎಂಬ ಕುತೂಹಲದಿಂದ ಗಮನ ಸೆಳೆದರೆ ಹಿಮಾಚಲ ಪ್ರದೇಶ ಎರಡು ಪ್ರಮುಖ ಪಕ್ಷಗಳ ನಡುವಿನ ತೀವ್ರ ಹಣಾಹಣಿಯ ಕಾರಣಕ್ಕೆ ಕುತೂಹಲ ಮೂಡಿಸಿದೆ.

ಗುಜರಾತ್ ನಲ್ಲಿ ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಇಬ್ಬರೂ ಮತ ಗಳಿಕೆಯಲ್ಲಿ ಮುಂದಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಗ್ನೇಶ್ ಮೇಹ್ವಾನಿ ಕೆಲವೇ ಮತಗಳ ಅಂತರದಲ್ಲಿ ಹಿಂದಿದ್ದಾರೆ. ಬಿಜೆಪಿಯ ಅಲ್ಪೇಶ್ ಠಾಕೂರ್, ಆಮ್ ಆದ್ಮಿಯ ಇಸುದನ್ ಗಾದ್ವಿ ಮುನ್ನಡೆ ಸಾಧಿಸಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರೆಸ್ ನ ರೋಹಿತ್ ಠಾಕೂರ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಜೆಪಿ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ಜೈ ರಾಮ್‌ ಠಾಕೂರ್‌ ನೇಮಕ
ಶಿಮ್ಲಾ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರನ್ನು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸುರೇಶ್ ಕಶ್ಯಪ್ ತಿಳಿಸಿದ್ದಾರೆ.

ಸೋಮವಾರ ಸಂಜೆ ಇಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕಶ್ಯಪ್ ಅವರು ಪಕ್ಷದ ಉನ್ನತ ನಾಯಕತ್ವವನ್ನು ಸಂಪರ್ಕಿಸಿದ ನಂತರ ಠಾಕೂರ್ ಅವರನ್ನು ರಾಜ್ಯ ಬಿಜೆಪಿ ಚುನಾವಣಾ ಸ್ಟೀರಿಂಗ್ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಜತೆಗೆ ಮಾಜಿ ಎಚ್.ಪಿ. ವಿಧಾನಸಭೆ ಸ್ಪೀಕರ್ ರಾಜೀವ್ ಬಿಂದಾಲ್ ಅವರನ್ನು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.

ಹಿಮಾಚಲ ಪ್ರದೇಶದಲ್ಲಿ ಮುಂದಿನ ನಾಲ್ಕು ತಿಂಗಳೊಳಗೆ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಸುರೇಶ್ ಕಶ್ಯಪ್ ತಿಳಿಸಿದರು.

ಹಿಮಾಚಲದ ಭಾವನಗರದಲ್ಲಿ ದಿಢೀರ್‌ ಭೂಕುಸಿತ
ಹಿಮಾಚಲ ಪ್ರದೇಶ:  ಕಿನ್ನೌರ್‌ನ ಭಾವನಗರ ಬಳಿ ತಕ್ಷಣ ಭೂಕುಸಿತ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ 05 ಅನ್ನು ನಿರ್ಬಂಧಿಸಲಾಗಿದೆ.

ಭೂಕುಸಿತದ ನಂತರ ಅವಶೇಷಗಳನ್ನು ತೆರವುಗೊಳಿಸಲು ಸರ್ಕಾರ ಯಂತ್ರಗಳನ್ನು ನಿಯೋಜಿಸಿದೆ. ಅದೃಷ್ಟವಶಾತ್‌ ಹೆದ್ದಾರಿಯಲ್ಲಿ ಚಲಿಸುತಿದ್ದ ಪ್ರಯಾಣಕರಿಗೆ ಭೂಕುಸಿತ ಗೋಚರವಾಗಿದ್ದು, ಅಲ್ಲೆ ತಟಸ್ಥರಾದ ಕಾರಣ  ಯಾವುದೇ ಜೀವಪಾಯ ಸಂಬವಿಸಿಲ್ಲ.

#WATCH | National Highway 05 blocked after sudden landslides happened near Bhawanagar in Kinnaur of Himachal Pradesh. Machines deployed to clear the debris pic.twitter.com/LgNdSEYudL
— ANI (@ANI) August 8, 2022

ಶಿಮ್ಲಾ-ಕಲ್ಕಾ ಹೆರಿಟೇಜ್ ರೈಲು ಹಳಿಯಲ್ಲಿ ಭೂಕುಸಿತ, ಸಮಯಕ್ಕೆ ಸರಿಯಾಗಿ ಚಾಲಕ ಬ್ರೇಕ್..!
ಚಂಡೀಗಢ: ಹಿಮಾಚಲ ಪ್ರದೇಶದಲ್ಲಿ ಇಂದು (ಗುರುವಾರ) ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಶಿಮ್ಲಾ-ಕಲ್ಕಾ ಹೆರಿಟೇಜ್ ರೈಲು ಹಳಿಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ.

50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ರೈಲು ಸೋಲನ್ ಜಿಲ್ಲೆಯ ಪಟ್ಟಾ ಮೋರ್ ಬಳಿ ತಲುಪಿದಾಗ, ಬೆಟ್ಟದಿಂದ ದೊಡ್ಡ ಕಲ್ಲುಗಳು ಬೀಳಲು ಪ್ರಾರಂಭಿಸಿದವು.

ತಕ್ಷಣವೇ ಎಚ್ಚೆತ್ತ ಚಾಲಕ ಸಕಾಲದಲ್ಲಿ ಬ್ರೇಕ್ ಹಾಕಿದ್ದರಿಂದ  ದೊಡ್ಡ ಅಪಘಾತ ತಪ್ಪಿಸಿದ್ದು, ಅಷ್ಟುಜನರ ಪ್ರಾಣ ಉಳಿಸಿದ್ದಾರೆ.