HIMS Governing Council – Peepal Media

ಹಿಮ್ಸ್‌ನ ಆಡಳಿತ ಪರಿಷತ್‌ಗೆ ಯುವ ನಾಯಕ ರವೀಶ್ ಬಸವಾಪುರ ಆಯ್ಕೆ
ಬೇಲೂರು : ನಗರದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಯಾದ ಹಿಮ್ಸ್‌ನ ಆಡಳಿತ ಪರಿಷತ್‌ಗೆ ಯುವ ನಾಯಕ ರವೀಶ್ ಬಸವಾಪುರ ಅವರನ್ನು ನಾಮ ನಿರ್ದೇಶಿತ ಸದಸ್ಯರಾಗಿ ನೇಮಿಸಿದ ಹಿನ್ನಲೆಯಲ್ಲಿ ಅವರು ಬೇಲೂರು ಪಟ್ಟಣದ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಮಾಜಿ ಸಚಿವ ಬಿ ಶಿವರಾಂ ಅವರನ್ನು ಸನ್ಮಾನಿಸಿದರು.ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ ಶಿವರಾಂ ರವೀಶ್ ಬಸವಾಪುರ ಅವರು ಜಿಲ್ಲಾ ಯುವ ಕಾಂಗ್ರೆಸ್‌ ಮಾಜಿ ಉಪಾಧ್ಯಕ್ಷರಾಗಿ ಸಕ್ರಿಯರಾಗಿದ್ದು ಉತ್ತಮ ಕಾರ್ಯನಿರ್ವಹಣೆ ಮಾಡಿರುತ್ತಾರೆ.

ತಮ್ಮ ಸಾರ್ವಜನಿಕ ಜೀವನದಲ್ಲಿ ಯುವ ಕಾಂಗ್ರೆಸ್‌ ನಲ್ಲಿ ಕಳೆದ ಹಲವು ವರ್ಷಗಳಿಂದ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ರವೀಶ್ ಬಸವಾಪುರ, ಸಮಾಜ ಸೇವೆಯ ಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಯುವಕರ ಸ್ಪೂರ್ತಿಯಾಗಿರುವ ಇವರು ಇವರ ಕಾರ್ಯ ಚಟುವಟಿಕೆ ಗಮನಿಸಿ ರವೀಶ್‌ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಈ ಹುದ್ದೆಗೆ ನೇಮಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಗಳು ಆದೇಶ ಹೊರಡಿಸಿ ದ್ದಾರೆ.ಹಿಮ್ಸ್‌ನ ಆಡಳಿತ ಮಂಡಳಿಗೆ ಯುವ ನಾಯಕನ ಆಗಮನವು ಸಂಸ್ಥೆಯ ಕಾರ್ಯಚಟು ವಟಿಕೆಗಳಿಗೆ ಹೊಸ ಹುರುಪು ನೀಡುವ ನಿರೀಕ್ಷೆಯಿದೆ.ಈ ಒಂದು ವೈದ್ಯಕೀಯ ಶಿಕ್ಷಣ ಸಂಸ್ಥೆಯಾದ ಹಿಮ್ಸ್  ಆಸ್ಪತ್ರೆಯಲ್ಲಿ  ಸುಸಜ್ಜಿತವಾದ 1 ಸಾವಿರ ಹಾಸಿಗೆಯುಳ್ಳ ಹಾಗು ನುರಿತ ವೈದ್ಯ ತಜ್ಞರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ‌.ನಾಮ ನಿರ್ದೇಶನ ಗೊಂಡವರು ಅಲ್ಲಿರುವ ವರ ಜೊತೆ ಒಳ್ಳೆಯ ಒಡ ನಾಟ ಇಟ್ಟುಕೊಂಡು

ಬರುವಂತಹ ರೋಗಿಗಳಿಗೆ ಇವರು ಸಹಾಯ ಹಸ್ತ ಚಾಚಬೇಕು.ರವೀಶ್ ಬಸವಾಪುರ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ನಂತರ ಮಾತನಾಡಿದ ಹಿಮ್ಸ್‌ನ ಆಡಳಿತ ಪರಿಷತ್‌ಗೆ ನಾಮ ನಿರ್ದೇಶಿತ ಸದಸ್ಯ ರವೀಶ್ ಬಸವಾಪುರ ನನ್ನನ್ನು ಸದಸ್ಯನನ್ನಾಗಿ ಮಾಡಿದ ನನ್ನೆಲ್ಲಾ ಕಾಂಗ್ರೆಸ್ ಮುಖಂಡರಿಗೆ ಹಾಗು ನನ್ನ ರಾಜಕೀಯ ಗುರುಗಳಾದ ಬಿ ಶಿವರಾಮ್ ಅವರಿಗೆ ಧನ್ಯವಾದ ತಿಳಿಸಿ ಇವರ ಮಾರ್ಗದರ್ಶನದಲ್ಲಿ ಕೊಟ್ಟಂತ ಸ್ಥಾನವನ್ನು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.ಈ ಸಂದರ್ಭ ದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಜೆ ನಿಶಾಂತ್,ಜಿಪಂ ಮಾಜಿ ಸದಸ್ಯ ಸೈಯದ್ ತೌಫಿಕ್ ,ಸಫಾಯಿ ಕರ್ಮಚಾರಿ ಮಾಜಿ ಅಧ್ಯಕ್ಷ ಎಮ್ ಆರ್ ವೆಂಕಟೇಶ್, ಅರ್ಬನ್ ಕೊ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಪೈಂಟ್ ರವಿ,ಮಾಜಿ ಅಧ್ಯಕ್ಷ ಚಂದ್ರಶೇಖರ್,ಪುರಸಭೆ ಸದಸ್ಯ ಜಮಾಲ್, ಭರತ್,ನಾಸೀರ್,ಗೋಪಿನಾಥ್,ಕಾಂಗ್ರೆಸ್ ಮುಖಂಡ ಸಂತೋಷ್ ,ಜುಬೇರ್ ಸೇರಿದಂತೆ ಇತರರು ಹಾಜರಿದ್ದರು.