HINDHU VIRODHI YATHRE – Peepal Media

ಭಾರತ ಐಕ್ಯತಾ ಯಾತ್ರೆ ಹಿಂದೂ ವಿರೋಧಿ ಯಾತ್ರೆ: ಬಿಜೆಪಿ ಆರೋಪ
ಬೆಂಗಳೂರು: ತಮಿಳುನಾಡಿನಿಂದ ಆರಂಭಗೊಂಡ ಭಾರತೀಯ ಐಕ್ಯತಾ ಯಾತ್ರೆ ಹೆಜ್ಜೆ ಹೆಜ್ಜೆಗೂ ಹಿಂದೂಗಳನ್ನು ಅವಮಾನಿಸುತ್ತಿದೆ. ಹಿಂದೂ ಸಮಾಜವನ್ನು ಕೆಣಕಿ ಕಾಂಗ್ರೆಸ್‌ ಪಕ್ಷವು ಮತಬ್ಯಾಂಕ್‌ ಗಟ್ಟಿಗೊಳಿಸುವ ಹುನ್ನಾರ ನಡೆಸುತ್ತಿದ್ದು, ರಾಹುಲ್ ಗಾಂಧಿ ಯಾತ್ರೆ ಹಿಂದೂ ವಿರೋಧಿ ಯಾತ್ರೆಯಾಗಿ ಬದಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.

ಕೇರಳದಲ್ಲೂ ಹಿಂದೂ ದ್ವೇಷವನ್ನು ರಾಷ್ಟ್ರೀಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮುಂದುವರೆಸಿದರು. ನಡುಬೀದಿಯಲ್ಲಿ ಗೋವಿನ ತಲೆ ಕಡಿದ ಯುವ ಕಾಂಗ್ರೆಸ್‌ ಮುಖಂಡನೊಂದಿಗೆ ಪಾದಯಾತ್ರೆ ಮಾಡುವ ಮೂಲಕ ರಾಹುಲ್‌ ಗಾಂಧಿ ಬಹುಸಂಖ್ಯಾತ ಹಿಂದೂಗಳನ್ನು ಅಪಮಾನಿಸಿದ್ದಾರೆ. ಹೀಗಾಗಿ ಹಿಂದೂಗಳ ಪೂಜನೀಯ ಗೋವಿನ ಹತ್ಯೆಗೆ ರಾಹುಲ್‌ ಗಾಂಧಿ ಅವರ ಸಮ್ಮತಿಯಿದೆಯೇ? ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.

ತಮಿಳುನಾಡು, ಕೇರಳದಲ್ಲಿ ತೋರಿದ ಹಿಂದೂ ದ್ವೇಷವನ್ನು ರಾಹುಲ್‌ ಗಾಂಧಿ ಅವರು ಕರ್ನಾಟಕದಲ್ಲೂ ಬಿಡಲಿಲ್ಲ. ಮತಾಂಧರ ಮೂಲಕ ಡಿಜೆ ಹಳ್ಳಿಯ ಹಿಂದೂಗಳ ಮನೆಗೆ ಬೆಂಕಿಹಚ್ಚಲು ಪ್ರಚೋದನೆ ನೀಡಿದ ಸಂಪತ್‌ ರಾಜ್‌ ಯಾತ್ರೆಯಲ್ಲಿ ರಾಹುಲ್‌ ಜೊತೆ ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ಸಿಗರೇ, ಈ ಯಾತ್ರೆಯ ಹೆಸರನ್ನು ಹಿಂದೂ ವಿರೋಧಿ ಯಾತ್ರೆ ಎಂದು ಬದಲಾಯಿಸಿಕೊಳ್ಳುವಿರಾ? ಎಂದು ಬಿಜೆಪಿ ಟೀಕಿಸಿದೆ.

ತಮಿಳುನಾಡು, ಕೇರಳದಲ್ಲಿ ತೋರಿದ ಹಿಂದೂ ದ್ವೇಷವನ್ನು @RahulGandhi ಕರ್ನಾಟಕದಲ್ಲೂ ಬಿಡಲಿಲ್ಲ.

ಮತಾಂಧರ ಮೂಲಕ ಡಿಜೆ ಹಳ್ಳಿಯ ಹಿಂದೂಗಳ ಮನೆಗೆ ಬೆಂಕಿಹಚ್ಚಲು ಪ್ರಚೋದನೆ ನೀಡಿದ ಸಂಪತ್‌ ರಾಜ್‌ ಯಾತ್ರೆಯಲ್ಲಿ ರಾಹುಲ್‌ ಜೊತೆ ಹೆಜ್ಜೆ ಹಾಕಿದ್ದಾನೆ.

ಕಾಂಗ್ರೆಸ್ಸಿಗರೇ, ಯಾತ್ರೆಯ ಹೆಸರನ್ನು #HinduVirodhiYatra ಎಂದು ಬದಲಾಯಿಸಿಕೊಳ್ಳುವಿರಾ? pic.twitter.com/XSclz7RkBT
— BJP Karnataka (@BJP4Karnataka) October 1, 2022