hindu course – Peepal Media

ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚುತ್ತಿರುವ ‘ಹಿಂದೂ’ ಕೋರ್ಸ್‌ಗಳು
ಹೊಸದೆಹಲಿ: ಬಿಜೆಪಿ ಆಡಳಿತದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ಅಧ್ಯಯನ ಮತ್ತು ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್‌ಗಳ ಸಂಖ್ಯೆ ಹೆಚ್ಚುತ್ತಿದೆ.

ಉದಾಹರಣೆಗೆ, ಕಾನ್ಪುರದ ಛತ್ರಪತಿ ಸಾಹುಜಿ ಮಹಾರಾಜ್ ವಿಶ್ವವಿದ್ಯಾಲಯವು ಇತ್ತೀಚೆಗೆ ಮೂರು ಕೋರ್ಸ್‌ಗಳನ್ನು ಪರಿಚಯಿಸಿತು. ವಿಶ್ವವಿದ್ಯಾನಿಲಯವು ‘ಕರ್ಮಕಾಂಡ’ ಕುರಿತ ಸರ್ಟಿಫಿಕೇಟ್‌, ಮತ್ತು ಡಿಪ್ಲೊಮಾ ಕೋರ್ಸ್‌ಗಳ ಜೊತೆಗೆ ಮತ್ತು ‘ಜ್ಯೋತಿಷ್ಯ ವಿಜ್ಞಾನ’ ಕುರಿತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶವನ್ನು ಪ್ರಾರಂಭಿಸಿದೆ. ಕರ್ಮಕಾಂಡ ಆಚರಣೆಯು ವೈದಿಕರಿಗೆ ಸಂಬಂಧಿಸಿದ್ದು ಇದು ವೇದಗಳಲ್ಲಿ ಕಂಡುಬರುತ್ತದೆ.

ಸತ್ತ ಪೋಷಕರು ಮತ್ತು ಇತರ ಸಂಬಂಧಿಕರಿಗೆ ಶಾಂತಿ ನೀಡಲುಲು ಈ ಆಚರಣೆಗಳನ್ನು ನಡೆಸಲಾಗುತ್ತದೆ. ಇವು ಬ್ರಾಹ್ಮಣರ ಆಶ್ರಯದಲ್ಲಿ ನಡೆಯುತ್ತವೆ. ಆಚರಣೆಗಳನ್ನು ನಿರ್ವಹಿಸುವುದಕ್ಕೆ ಪ್ರತಿಯಾಗಿ, ಅವರಿಗೆ ದಕ್ಷಿಣೆಯ ರೂಪದಲ್ಲಿ ನಗದು ಮತ್ತು ಇತರ ಕಾಣಿಕೆಗಳನ್ನು ನೀಡಲಾಗುತ್ತದೆ. ಆರಂಭದಲ್ಲಿ ಕೇವಲ 29 ವಿದ್ಯಾರ್ಥಿಗಳು ಮಾತ್ರ ಕೋರ್ಸ್‌ಗೆ ದಾಖಲಾಗಿದ್ದರು, ಆದರೆ ಜನಪ್ರಿಯತೆಯಿಂದಾಗಿ ಸಂಖ್ಯೆ ಹೆಚ್ಚಾಗಿದೆ ಎಂದು ವಿಶ್ವವಿದ್ಯಾಲಯದ ಮಾಧ್ಯಮ ಪ್ರಭಾರಿ ವಿಶಾಲ್ ಶರ್ಮಾ ಹೇಳಿದರು.

ಈ ವಿಷಯವನ್ನು ಅಧ್ಯಯನ ಮಾಡಲು ಉತ್ಸುಕರಾಗಿದ್ದೇವೆ ಎಂದು ವಿದ್ಯಾರ್ಥಿ ಪುನಿತ್ ತಿವಾರಿ ಹೇಳುತ್ತಾರೆ. ಅವರು ಕಾನ್ಪುರದಲ್ಲಿ ಸಿಸಿ ಟಿವಿ ಹೊರಗುತ್ತಿಗೆ ವ್ಯವಹಾರ ಮಾಡುತ್ತಿದ್ದಾರೆ. ಕೋರ್ಸ್ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಲ್ಲಿ OBCಗಳ ಜೊತೆಗೆ ವಿವಿಧ ಹಿನ್ನೆಲೆಗಳಿಂದ ನಿವೃತ್ತ ಉದ್ಯೋಗಿಗಳು ಸಹ ಸೇರಿದ್ದಾರೆ. ಅನೇಕ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ, ಇನ್ನೂ ಕೆಲವರು ವೈಯಕ್ತಿಕ ಆಸಕ್ತಿಗಾಗಿ ಈ ಕೋರ್ಸ್ ಅನ್ನು ಕಲಿಯುತ್ತಿದ್ದಾರೆ ಎಂದು ತಿವಾರಿ ಹೇಳಿದರು.

ಹೊಸ ಶಿಕ್ಷಣ ವ್ಯವಸ್ಥೆ-2020ರ ಭಾಗವಾಗಿ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ‘ಪ್ರಾಚೀನ ಮತ್ತು ಸನಾತನ ಭಾರತೀಯ ವಿಜ್ಞಾನ’ವನ್ನು ಮುಂದಕ್ಕೆ ಕೊಂಡೊಯ್ಯುವ ಹೆಸರಿನಲ್ಲಿ ಈ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ ಎಂದು ವಾರ್ಸಿಟಿ ಅಧಿಕಾರಿಗಳು ಹೇಳುತ್ತಾರೆ. ಈ ಕೋರ್ಸ್‌ಗಳನ್ನು ಸಂಸ್ಕೃತ ಶಿಕ್ಷಣ ಪಂಡಿತರ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಸರ್ಟಿಫಿಕೇಟ್ ಕೋರ್ಸ್‌ನಲ್ಲಿ ಪ್ರಾರ್ಥನೆಗಳು ಮತ್ತು ಪಂಚಾಂಗ ಬರೆಯುವ ತಂತ್ರಗಳಂತಹ ವಿಷಯಗಳನ್ನು ಕಲಿಸಲಾಗುತ್ತದೆ.

ಪ್ರಾಚೀನ ವೈದಿಕ ಜ್ಯೋತಿಷ್ಯ ಮತ್ತು ಆ ಶಾಸ್ತ್ರದ ಆಧುನಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಬಹುದು. ಗೋರಖ್‌ಪುರ-ಲಖನೌ ವಿಶ್ವವಿದ್ಯಾನಿಲಯದಲ್ಲಿ ಇದೇ ರೀತಿಯ ಧಾರ್ಮಿಕ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಇನ್ನು ಕೆಲವು ವಿಶ್ವವಿದ್ಯಾಲಯಗಳು ಇಂತಹ ಕೋರ್ಸ್‌ಗಳನ್ನು ಆರಂಭಿಸಲು ಮುಂದಾಗಿವೆ. ದೆಹಲಿ ವಿಶ್ವವಿದ್ಯಾನಿಲಯವು ‘ಹಿಂದೂ ಅಧ್ಯಯನಗಳು’ ಎಂಬ ಹೊಸ ಕೋರ್ಸ್ ಅನ್ನು ಪ್ರಾರಂಭಿಸಿದೆ. ಇದನ್ನು ಹೊಸದಾಗಿ ಸ್ಥಾಪಿಸಲಾದ ಹಿಂದೂ ಅಧ್ಯಯನ ಕೇಂದ್ರದ ಅಡಿಯಲ್ಲಿ ಪ್ರಾರಂಭಿಸಲಾಯಿತು. ಮುಂಬರುವ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಹಂತದ ಕೋರ್ಸ್‌ಗಳು ಸಹ ಪ್ರಾರಂಭವಾಗಲಿವೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕೂಡ ಇದೇ ರೀತಿಯ ಕೋರ್ಸ್‌ಗಳನ್ನು ನೀಡುತ್ತದೆ.