hindu – Peepal Media

ರಹಿಮಾನ್ ಕೊಲೆಯ ಕತೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಹೆಮ್ಮೆಯ ತುಳುನಾಡಿಗೆ ಈ ಗತಿ ತಂದಿಟ್ಟವರು ಯಾರು ?
ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ನಿಯೋಗ ಇತ್ತೀಚೆಗೆ ಮತಾಂಧರಿಂದ ಹತ್ಯೆಗೀಡಾದ ಕೊಳ್ತಮಜಲು ಅಬ್ದುಲ್ ರೆಹಮಾನ್ ಮನೆಗೆ ಇಂದು ಭೇಟಿ ನೀಡಿತು. ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿತು.

ಪೊಳಲಿ ದೇವಸ್ಥಾನದಿಂದ ಸುಮಾರು ನಾಲ್ಕು ಕಿ ಮೀ ದೂರದ ಕೊಳತ್ತಮಜಲು ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಅಬ್ದುಲ್ ರೆಹಮಾನ್ ಮನೆಗೆ ಭೇಟಿ ನೀಡಿದಾಗ, ಮನೆಯ ಮುಂಭಾಗ ಸಾವಿನ ಮೂರನೆ ದಿನದ ಪ್ರಾರ್ಥನೆಯ ಅಡುಗೆಯ ಸಿದ್ದತೆ ನಡೆಯುತ್ತಿತ್ತು. ನಿರ್ಮಾಣ ಹಂತದ ರೆಹಮಾನ್ ಮನೆಯ ಮುಂಭಾಗ ಪ್ರಾರ್ಥನಾ ಕೂಟಕ್ಕಾಗಿ ಚಪ್ಪರ ಹಾಕಲಾಗಿತ್ತು. ಅಜ್ಜನ (ತಾಯಿಯ ತಂದೆ) ಕೈಯಲ್ಲಿದ್ದ ರೆಹಮಾನ್ ನ ಎರಡು ಪುಟಾಣಿ ಮಕ್ಕಳು (ಮೂರು ವರ್ಷ ಹಾಗೂ ಎಂಟು ತಿಂಗಳಿನ) ಮನೆಯ ಮುಂಭಾಗ ದೊಡ್ಡ, ದೊಡ್ಡ ಪಾತ್ರೆಗಳಲ್ಲಿ ನಡೆಯುತ್ತಿದ್ದ ಅಡುಗೆ ತಯಾರಿ, ಸಂಬಂಧಿಗಳ ಓಡಾಟವನ್ನು ಅಮಾಯಕ ಕಣ್ಣುಗಳಲ್ಲಿ ನೋಡುತ್ತಿದ್ದರು. ಮನೆಯ ಒಳಗಡೆ ಗಂಡನನ್ನು ಕಳೆದುಕೊಂಡ ಯುವ ವಿಧವೆಯ, ಮಗನನ್ನು ಕಳೆದುಕೊಂಡ ತಾಯಿಯ ಮೂಕ ರೋಧನೆ ನಮ್ಮ ಹೃದಯಕ್ಕೆ ತಟ್ಟುತ್ತಿತ್ತು.

ನಾವು ಮನೆಯ ಅಂಗಳ ತಲುಪಿದ ಸುದ್ದಿ ತಿಳಿದು ಊರಿನ ಯುವಕರು ನಮ್ಮ ಸುತ್ತ ಜಮಾಯಿಸಿದರು. ರೆಹಮಾನ್ ತಂದೆ ಸ್ವರ ಹೊರಡದ ಗಂಟಲಿನಲ್ಲಿ ತಮ್ಮ ನೋವನ್ನು ಕಣ್ಣೀರು ಸುರಿಸುತ್ತಲೆ ಒಂದಿಷ್ಟು ಹಂಚಿಕೊಂಡರು. ರೆಹಮಾನ್ ನ ಆತ್ಮೀಯ ಗೆಳಯರು, ಒಡನಾಡಿಗಳು ತಮ್ಮ ಮನಸ್ಸಿಗಾದ ಘಾಸಿಯನ್ನು, ಒಳಗಡೆ ಕಟ್ಟಿಕೊಂಡಿರುವ ನೋವನ್ನು, ಜೊತೆಗೆ ಓಡಾಡಿದವರೆ ಕತ್ತರಿಸಿ ಕೊಂದದ್ದನ್ನು ಅರಗಿಸಿಕೊಳ್ಳಲು ಅಸಾಧ್ಯವಾದ ಭಾವದೊಂದಿಗೆ ನಮ್ಮೊಂದಿಗೆ ತಡೆ ರಹಿತವಾಗಿ ತೆರೆದಿಟ್ಟರು.

ಅಲ್ಲಿದ್ದ ಸ್ಥಳೀಯರು ರೆಹಮಾನ್ ಕೊಲೆಯ ದಾರುಣತೆಯನ್ನು, ಅದರ ರಾಜಕಾರಣವನ್ನು, ಕೊಲೆಗಡುಕರ ಮನಸ್ಥಿತಿಯನ್ನು ವಿವರಿಸುತ್ತಿದ್ದರೆ, ಕಳೆದ ಮೂರು ದಶಕದಲ್ಲಿ ಕರಾವಳಿಯ ಕೋಮು ಸಂಘರ್ಷ, ಅದರ ರಾಜಕಾರಣವನ್ನು ಹತ್ತಿರದಿಂದ ಕಂಡಿರುವ ನಾವೇ ರೆಹಮಾನ್ ಕೊಲೆಯ ಭಯಾನಕತೆಗೆ ಬೆಚ್ಚಿಬಿದ್ದೆವು. ಅವರ ವಿವರಣೆ ಹೀಗಿದೆ.

ಅಬ್ದುಲ್ ರೆಹಮಾನ್ ಯಾರೊಂದಿಗೂ ಜಗಳಗಳಿಲ್ಲದ ಸ್ನೇಹಮಯಿ ವ್ಯಕ್ತಿತ್ವದ ಯುವಕ. ತನ್ನ ಶ್ರಮದ ದುಡಿಮೆಯಿಂದ ಮೂರು ಪಿಕಪ್ ಗಳನ್ನು ಖರೀದಿಸಿದ್ದಾನೆ. ಮರಳು, ಕಟ್ಟಡ ನಿರ್ಮಾಣ ಸಾಮಾಗ್ರಿಗಳು, ತೋಟದ ಗೊಬ್ಬರ ಸಾಗಾಟ ಮಾಡುತ್ತಾನೆ. ಸಂಬಂಧಿಯಾದ ತೀರಾ ಬಡ ಕುಟುಂಬದ ಹೆಣ್ಣು ಮಗಳನ್ನು ಮದುವೆಯಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಸ್ಥಳೀಯ ಮಸೀದಿಯ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸುತ್ತಿದ್ದರು. ಊರಿನ ಹಿಂದುಗಳಿಗೂ ರೆಹಮಾನ್ ಅಂದರೆ ಅಚ್ಚು ಮೆಚ್ಚು. ಅವರೆ ರೆಹಮಾನ್‌ಗೆ
ದೊಡ್ಡ ಗ್ರಾಹಕರು. ಶಾರದೋತ್ಸವ ಮೆರವಣಿಗೆ ಸಂದರ್ಭ ಮನೆಯ ಮುಂದೆಯೆ ಗೆಳೆಯರನ್ನು ಸಂಘಟಿಸಿ ತಂಪು ಪಾನೀಯ ವಿತರಿಸುತ್ತಿದ್ದ. ಶಾರದೆಯ ವಿಗ್ರಹದ ಮೆರವಣಿಗೆಗೆ ರೆಹಮಾನ್ ಸಹೋದರ ಪಿಕಪ್ ಒದಗಿಸುತ್ತಿದ್ದ, ಸ್ವತಹ ಶಾರದೆ ಇದ್ದ ಪಿಕಪ್ ಚಲಾಯಿಸುತ್ತಿದ್ದ. ಇಂತಹ ಊರಲ್ಲಿ ಹೀಗಾಯ್ತಲ್ಲ….. !!

ಕೊಲೆಯ ಮುಂಚೂಣಿಯಲ್ಲಿದ್ದ ದೀಪಕ್ (21 ವರ್ಷ) ರೆಹಮಾನ್ ಗೆ ತೀರಾ ಪರಿಚಿತ. ಊರಿನ ಹುಡುಗ. ಬಡ ಕುಟುಂಬದ ಆತ ಮನೆ ಕಟ್ಟಲು ಆರಂಭಿಸಿದಾಗ ರೆಹಮಾನ್ ಒಂದು ಲೋಡ್ ಮರಳು ಉಚಿತವಾಗಿ ಒದಗಿಸಿದ್ದ. ಕಟ್ಟಡ ನಿರ್ಮಾಣದ ಸಾಮಾಗ್ರಿಗಳನ್ನು ರೆಹಮಾನ್ ನೆ ಸಾಗಾಟ ಮಾಡಿದ್ದ‌. ಅದರಲ್ಲಿ 30 ಸಾವಿರ ರೂಪಾಯಿ ದೀಪಕ್ ಬಾಕಿ ಉಳಿಸಿಕೊಂಡಿದ್ದ.

ರೆಹಮಾನ್ ಅದಕ್ಕಾಗಿ ದೀಪಕ್ ಮೇಲೆ ಒತ್ತಡ ಏನೂ ಹಾಕಿರಲಿಲ್ಲ. ಇದಲ್ಲದೆ ದೀಪಕ್ ತಂದೆ ವಿದ್ಯುತ್ ತಂತಿ ತಾಗಿ ವರ್ಷದ ಹಿಂದೆ ನಿಧನ ಹೊಂದಿದ್ದರು. ಆ ಸಂದರ್ಭ ತುರ್ತು ಚಿಕಿತ್ಸೆಗೆ ರಕ್ತದ ಅಗತ್ಯ ಬಿದ್ದಾಗ ಇದೇ ರೆಹಮಾನ್, ದೀಪಕ್ ತಂದೆಗೆ ರಕ್ತದ ಏರ್ಪಾಡು ಮಾಡಿದ್ದ.

ಕೊಲೆಯ ಹಿಂದಿನ ದಿವಸ ರೆಹಮಾನ್ ನನ್ನು ಸಂಪರ್ಕಿಸಿದ ದೀಪಕ್, “ಅರ್ಜೆಂಟ್ ಒಂದು ಲೋಡ್ ಮರಳು ಬೇಕಿತ್ತು, ಮನೆಯ ಕೆಲಸ ಪೂರ್ಣ ಗೊಳಿಸಬೇಕಿದೆ, ನಾಳೆಯ ಹಾಕಬೇಕು ” ಎಂದು ವಿನಂತಿಸಿದ್ದಾನೆ. ಅದರಂತೆ, ಕೊಲೆಯಾದ ದಿನ ಮಧ್ಯಾಹ್ನ ಕೂಲಿ ಕಾರ್ಮಿಕ ಶಾಫಿಯನ್ನು ಜೊತೆ ಸೇರಿಸಿ, ನಿರ್ಮಾಣ ಹಂತದ ತನ್ನ ಮನೆಯ ಮುಂಭಾಗದಲ್ಲಿ ಇದ್ದ ಮರಳನ್ನೆ ಪಿಕಪ್ ನಲ್ಲಿ ಲೋಡ್ ಮಾಡಿ ಕೊಂಡು ದೀಪಕ್ ನ ಮನೆಗೆ ತೆರಳಿದ್ದಾನೆ. ಮರಳು ಅನ್ ಲೋಡ್ ಮಾಡಿದ್ದಾರೆ. ಅಷ್ಟು ಹೊತ್ತಿಗೆ ಸುತ್ತಮುತ್ತ ಅವಿತು ಹೊಂಚು ಹಾಕುತ್ತಿದ್ದ ಮತಾಂಧತೆಯ ಅಫೀಮು ಸೇವಿಸಿದ ಪರಿಚಿತ ಯುವಕರ ದಂಡು ಪಿಕಪ್ ಮುಂದೆ ಆಯುಧಗಳ ಸಹಿತ ಪ್ರತ್ಯಕ್ಷಗೊಂಡಿದೆ. ಕೊಲೆಯ ಸಂಚಿನ ಸಣ್ಣ ಸುಳಿವೂ ಇಲ್ಲದ, ರೆಹಮಾನ್ ನಗುತ್ತಲೆ ಮಾತಾಡಲು ಯತ್ನಿಸಿದ್ದಾನೆ. ದೀಪಕ್ ನಗು ನಗುತ್ತಲೆ ಮಚ್ಚು ಬೀಸಿದ್ದಾನೆ. ವಿಷಯ ಅರ್ಥ ಆಗುವಷ್ಟರಲ್ಲಿ ರೆಹಮಾನ್ ಕುಸಿದಿದ್ದಾನೆ. ಜೊತೆಗಿದ್ದ ಶಾಫಿಗೆ ಓಡಲು ತಿಳಿಸಿದ್ದಾನೆ. ಶಾಫಿ ಪರಿಚಿತ ಕೊಲೆಗಡುಕರ ಕಾಲು ಹಿಡಿದು ರೆಹಮಾನ್ ನನ್ನು ಬಿಟ್ಟು ಬಿಡಿ ಎಂದು ಅಂಗಲಾಚಿದ್ದಾನೆ. ಆದರೆ ನಿರ್ದಯಿ ಹಂತಕರು ಗುರಿಯಿಟ್ಟು ಕಡಿಯತೊಡಗಿದ್ದಾರೆ. ಅಡ್ಡ ಬಂದ ಶಾಫಿಯ ಕಡೆಗೂ ಮಚ್ಚು ತಿರುಗಿದೆ. ರೆಹಮಾನ್, ನನ್ನ ಕತೆ ಮುಗಿಯಿತು, ನೀನು ಓಡು ಓಡು” ಎಂದು ಕೂಗಿದ್ದಾನೆ. ಗಾಯಗೊಂಡ ಶಾಫಿ ತಪ್ಪಿಸಿಕೊಂಡು ಓಡಿ ಹೋಗಿ ಊರಿನ ಯುವಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.‌

ಊರಿನ ಮುಸ್ಲಿಂ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟು ಹೊತ್ತಿಗೆ ರೆಹಮಾನ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇಷ್ಟೆಲ್ಲಾ ನಡೆಯುವಾಗ ದೀಪಕ್ ನ ತಾಯಿ ಹಾಗು ಇತರೆ ಮಕ್ಕಳು ಆ ಮನೆಯ ಒಳಗಡೆಯೇ ಇದ್ದರು. ಮತಾಂಧತೆಯಿಂದ ಕುರುಡಾಗಿದ್ದ ದೀಪಕ್, ಮೇಲಿನ “ನಾಯಕ” ರ ಮಾತು ಕೇಳಿ ತನ್ನ ಹೊಸ ಮನೆಯ ಅಂಗಳದಲ್ಲಿ ತನಗೆ ಹಲವು ಬಾರಿ ನೆರವಾಗಿದ್ದ ಪರಿಚಿತ ಮುಸಲ್ಮಾನನ್ನು ತನ್ನ ತಾಯಿ, ಸಣ್ಣ ಸಹೋದರರ ಕಣ್ಣ ಮುಂದೆಯೆ ಸಹಚರರ ಜೊತೆ ಕಡಿದು ನಿರ್ದಯವಾಗಿ ಕೊಂದು ಹಾಕಿದ್ದ. “ಧರ್ಮ” ರಕ್ಷಣೆಯ ಕಾರ್ಯ ಮಾಡಿದೆ ಎಂದು ಬೀಗಿದ್ದ.

ರೆಹಮಾನ್ ನ ಗೆಳೆಯರ ಈ ವಿವರಣೆ ನಮ್ಮನ್ನು ದಿಗ್ಮೂಢರನ್ನಾಗಿಸಿತು. ಕೋಟಿ ಚೆನ್ನಯರು, ಕಾನದ ಕಟರು, ಕೊರಗ ತನಿಯ, ಮಾಲಿಕುದ್ದಿನಾರ್, ಸಯ್ಯದ್ ಮದನಿ, ಸಿರಿಯಪ್ಪೆ, ರಾಣಿ ಅಬ್ಬಕ್ಕ, ಕುದ್ಮಲ್ ರಂಗರಾಯರು ಮುನ್ನಡೆಸಿದ ಕರಾವಳಿಯ ಸ್ಥಿತಿ ಯಾವ ಪಾತಾಳಕ್ಕೆ ಕುಸಿಯಿತು…!

ಕೊಳತ್ತಮಜಲು ಕೋಮು ಸೋಂಕು ಪೂರ್ಣ ಪ್ರಮಾಣದಲ್ಲಿ ತಾಗದ ಒಂದು ಸಾಮಾನ್ಯ ಹಳ್ಳಿ. ಇಲ್ಲಿ ಯಾವ ರಾಜಕೀಯವೂ ಇರಲಿಲ್ಲ, ನಾವು ಮನುಷ್ಯರಾಗಿ ಅಷ್ಟೆ ಬದುಕಿದ್ದೆವು ಎಂದು ನುಡಿಯುವ ಊರಿನ ಮುಸ್ಲಿಮರಿಗೆ, ತಮ್ಮ ಊರಿನಲ್ಲಿ ಇಂತಹ ಭೀಕರ ಘಟನೆ ನಡೆದಿರುವುದು ನಂಬಲೆ ಆಗುತ್ತಿಲ್ಲ. ದೂರದ ಬಜ್ಪೆಯ ಸುಹಾಸ್ ಶೆಟ್ಟಿಯ ಹತ್ಯೆಯ ಪ್ರತೀಕಾರ ತಮ್ಮ ಊರಿಗೆ ತಲುಪುತ್ತದೆ ಎಂಬುದು ಅವರಿಗೆ ನಂಬಲು ಸಾಧ್ಯವಾಗುತ್ತಿಲ್ಲ.

ಈಗ ಅವರ ಆಗ್ರಹ ಒಂದೇ ಇರುವುದು. ರೆಹಮಾನ್ ಕೊಲೆಯ ಆರೋಪಿಗಳು, ಪಿತೂರಿದಾರರಿಗೆ ಕಠಿಣ ಶಿಕ್ಷೆ ಆಗಬೇಕು, ಊರಿನ ನೆಮ್ಮದಿ, ಸೌಹಾರ್ದತೆ ಉಳಿಯಬೇಕು, ದೀಪಕ್ ಹಾಗೂ ಗೆಳೆಯರನ್ನು ಈ ಕೊಲೆಗೆ ಪ್ರೇರೇಪಿಸಿದ್ದು, ಸಂಚು ರೂಪಿಸಿದ್ದು ಬಜರಂಗ ದಳದ ನಾಯಕ ಭರತ್ ಕುಮ್ಡೇಲು (ಈತ ಸುಹಾಸ್ ಕೊಲೆಗೆ ಪ್ರತೀಕಾರ ಭೀಕರವಾಗಿ ಮಾಡುತ್ತೇವೆ ಎಂದು ಪತ್ರಿಕಾಗೋಷ್ಟಿ ನಡೆಸಿ ಹೇಳಿದ್ದ, ಈ ಹೇಳಿಕೆ ಮೇಲೆ ಎಫ್ಐಆರ್ ಆಗಿದೆ, ಅಶ್ರಪ್ ಕಲಾಯಿ ಹತ್ಯೆಯಲ್ಲೂ ಈತ ಆರೋಪಿ) ಆತ, ಕೊಲೆಯ ಹಿಂದಿನ ದಿನ ಕೊಳತ್ತಮಜಲಿಗೆ ಬಂದು ದೀಪಕ್ ಹಾಗು ಸಹಚರರ ಜೊತೆ ಮೀಟಿಂಗ್ ಮಾಡಿದ್ದ, ಸೂಚನೆ ನೀಡಿದ್ದ, ಆತನನ್ನು ತಕ್ಷಣ ಬಂಧಿಸಬೇಕು ಎಂಬುದು.‌

ರೆಹಮಾನ್ ನ ವೃದ್ಧ ತಂದೆ ಹಾಗೂ ಕೆಲವು ಹಿರಿಯರು ಇನ್ನೊಂದು ನೋವನ್ನು ನಮ್ಮಲ್ಲಿ ತೋಡಿಕೊಂಡರು. ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಕನಿಷ್ಟ ಸಾಂತ್ವನವನ್ನೂ ಹೇಳಲಿಲ್ಲ ಎಂಬುದು ಅವರ ಸಂಕಟವನ್ನು ಹೆಚ್ಚಿಸಿತು. ಸುಹಾಸ್ ಶೆಟ್ಟಿ ಕೊಲೆಯ ಸಂದರ್ಭ ಶವ ಮೆರವಣಿಗೆ, ಅಂತ್ಯ ಕ್ರಿಯೆಯವರೆಗೂ ಸ್ಥಳ ಬಿಟ್ಟು ಕದಲದ, ಆ ಮೇಲಿನ ಸುಹಾಸ್ ಕೊಲೆ ಖಂಡಿಸಿ ನಡೆದ ಪ್ರತಿಭಟನಾ ಸಭೆಗಳು, ಪ್ರತೀಕಾರದ ಮಾತುಗಳಿಗೆ ಸಾಕ್ಷಿ ಆದ ರಾಜೇಶ್ ನಾಯ್ಕ್ ತನ್ನ ಕ್ಷೇತ್ರದಲ್ಲಿ ನಡೆದ ಅಮಾಯಕನೊಬ್ಬ ಹತ್ಯೆಗೆ ಆತನ ಧರ್ಮದ ಗುರುತಿನ ಕಾರಣಕ್ಕೆ ಕನಿಷ್ಟ ಸಂತಾಪವನ್ನೂ ಸೂಚಿಸಲಿಲ್ಲ ಎಂಬದು ಕರಾವಳಿ ರಾಜಕಾರಣದ ಸದ್ಯದ ಹೆಗ್ಗುರುತು. ದೀಪಕ್ ಬೀಸಿದ ಮಚ್ಚಿನ ಏಟಿಗಿಂತಲೂ ಬಿಜೆಪಿ ಶಾಸಕರುಗಳ ಸದ್ಯದ ನಿಲುವುಗಳು ಕಡಿಮೆ ಅಪಾಯಕಾರಿ ಏನಲ್ಲ.

ಲೇಖನ: ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ,  ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲೆ

ಭಾರತದಲ್ಲಿ ವೈಜ್ಞಾನಿಕತೆ ಜೀವಂತವಿದೆಯೇ?
ವೈಜ್ಞಾನಿಕ ಚಿಂತನೆ ಮತ್ತು ಅದನ್ನು ಪಾಲಿಸುವುದು ಒಂದು ಸಮಾಜದ ಬೌದ್ಧಿಕ ಪ್ರಗತಿಯನ್ನು ರೂಪಿಸುವ ಪ್ರಮುಖ ಅಂಶವಾಗಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ವೈಜ್ಞಾನಿಕ ಮನೋಭಾವ, ಧಾರ್ಮಿಕ ಮೌಲ್ಯಗಳು, ಸಂಸ್ಕೃತಿಯ ಪ್ರಭಾವ ಮತ್ತು ರಾಜಕೀಯ ಒತ್ತಡಗಳ ನಡುವೆ ತೊಳಲಾಡುತ್ತಿದೆ. "Are We Indians Scientific? Nope" ಎಂಬ ಕುನಾಲ್ ಕಮ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಖ್ಯಾತ ವಿಜ್ಞಾನಿ ಹಾಗೂ ಸಾಹಿತಿ ಗೌಹರ್ ರಾಝಾ ಈ ಗಂಭೀರ ವಿಷಯದ ಬಗ್ಗೆ ಮಾತನಾಡಿದ್ದಾರೆ. ಇದರ ಸಾರಾಂಶವನ್ನು ಇಲ್ಲಿ ನೀಡಲಾಗಿದೆ

ವೈಜ್ಞಾನಿಕ ಚಿಂತನೆ ಎಂದರೇನು?
ವೈಜ್ಞಾನಿಕ ಚಿಂತನೆ ಎನ್ನುವುದು ಕೇವಲ ಪ್ರಯೋಗಾಲಯಗಳಲ್ಲಿ ನಡೆಯುವ ವಿಜ್ಞಾನಿಗಳ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಪ್ರಶ್ನೆ ಮಾಡುವ, ಪುರಾವೆಗಳ ಆಧಾರದ ಮೇಲೆ ನಂಬಿಕೆಗಳನ್ನು ಕಟ್ಟುವ, ಮತ್ತು ತಪ್ಪುಗಳನ್ನು ಗುರುತಿಸಿ ಸರಿ ಮಾಡುವ ಒಂದು ಸಾಮರ್ಥ್ಯ. ವೈಜ್ಞಾನಿಕ ಮನೋಭಾವವು ಮಕ್ಕಳಲ್ಲಿ ಹುಟ್ಟುವ, “ನಕ್ಷತ್ರಗಳು ಏಕೆ ಹೊಳೆಯುತ್ತವೆ?”, “ನಾವು ಎಲ್ಲಿಂದ ಬಂದೆವು?” ಮೊದಲಾದ ಪ್ರಶ್ನೆಗಳಿಂದ ಆರಂಭವಾಗುತ್ತದೆ.

ವೈಜ್ಞಾನಿಕ ಚಿಂತನೆಯ ಪಥ
ವಿಜ್ಞಾನ ಎಂದರೆ ಪ್ರಶ್ನೆಗಳೊಂದಿಗೆ ಆರಂಭವಾಗುವ ಪ್ರಯಾಣ. “ಹೇಗೇ?” ಎಂಬ ಪ್ರಶ್ನೆಯೇ ವೈಜ್ಞಾನಿಕ ಚಿಂತನೆಯ ಮೊದಲ ಹೆಜ್ಜೆ. ಇದು “ಏಕೆ?” ಎಂಬ ಧಾರ್ಮಿಕ ಅಥವಾ ತತ್ತ್ವಶಾಸ್ತ್ರೀಯ ಪ್ರಶ್ನೆಗಿಂತ ಭಿನ್ನವಾಗಿದೆ. “ಏಕೆ?” ಎಂಬ ಮತೀಯವಾದದ ಪ್ರಶ್ನೆ ದೇವರೇ ಕಾರಣ ಎಂಬಲ್ಲಿಗೆ ಅವಸಾನವಾಗುತ್ತದೆ. ಆದರೆ “ಹೇಗೇ?” ಎಂಬ ವಿಜ್ಞಾನ ಪ್ರಶ್ನೆ ಪ್ರತೀ ಬಾರಿ ಉತ್ತರಗಳನ್ನು ಕಂಡುಕೊಳ್ಳುತ್ತಾ, ಹಳೆಯ ಉತ್ತರ ತಿರಸ್ಕಾರವಾಗಿ ಹೊಸ ಉತ್ತರದೊಂದಿಗೆ ನವೀನವಾಗುತ್ತಾ ಹೋಗುತ್ತದೆ.

ಧರ್ಮ ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಾವಿರಾರು ವರ್ಷಗಳ ಹಿಂದೆ ಬರೆದ ಓಟ್‌ಡೇಟೆಡ್‌ ಪುಸ್ತಕದ ಮೊರೆ ಹೋದರೆ, ವಿಜ್ಞಾನಕ್ಕೆ ನಿನ್ನೆಯ ದಿನ ಬಂದ ವೈಜ್ಞಾನಿಕ ಸಂಶೋಧನೆಯೇ ಮುಖ್ಯವಾಗುತ್ತದೆ.

ಹಾಗಾಗಿ, ಹಳೆಯ ನಂಬಿಕೆಗಳನ್ನು ಪ್ರಶ್ನಿಸುವವರ ಕೊಲೆಯಾಗಬಹುದು, ಮನೆಗಳಿಗೆ ಬೆಂಕಿ ಬೀಳಬಹುದು. ಸಂಪ್ರದಾಯವಾದಿಗಳಿಂದ ಈ ಜಗತ್ತಿನಲ್ಲಿ ರಕ್ತ ಹರಿದಿದೆಯೇ ಹೊರತು, ವಿಜ್ಞಾನಿಗಳಿಂದಲ್ಲ.

ತಮ್ಮ ನಂಬಿಕೆ ಶ್ರೇಷ್ಟ ಎಂದು ಸಾಬೀತು ಮಾಡಲು ಅವರು ಇನ್ನೊಂದು ಧರ್ಮವನ್ನು ನಿಸ್ಕೃಷ್ಟ ಎಂದು ತೋರಿಸಬೇಕು. ಹಾಗಾಗಿ, ಇನ್ನೊಂದು ಧರ್ಮ ಇಲ್ಲದೇ ಒಂದು ಧರ್ಮಕ್ಕೆ ಮೇಲು-ಕೀಳು ಅಸ್ತಿತ್ವವೇ ಇರುವುದಿಲ್ಲ. ಹಾಗಾಗಿ, ಪರಸ್ಪರ ಧರ್ಮಗಳು ಕಾದಾಡಿ ಜನರ ರಕ್ತ ಹರಿಸುತ್ತವೆ.

ಧರ್ಮದಲ್ಲಿ ಹಳೆಯ ನಂಬಿಕೆ ಸುಳ್ಳು ಎಂದು ಸಾಬೀತು ಆದರೆ ಅಲ್ಲಿ ಒಂದು ಕೊಲೆಯಾಗುತ್ತದೆ, ಜನ ದೊಂಬಿ ಏಳುತ್ತಾರೆ. ಆದರೆ ವಿಜ್ಞಾನದಲ್ಲಿ ಹಳೆಯ ಥಿಯೆರಿಗಳು ಸರಿ ಇಲ್ಲ ಎಂದು ಸಾಬೀತಾಗಿ, ಹೊಸ ಥಿಯೆರಿ ಬಂದಾಗ ವಿಜ್ಞಾನಿಗಳು ಸಂಭ್ರಮಿಸುತ್ತಾರೆ, ಆ ಹೊಸ ಅನ್ವೇಷಣೆಗಾಗಿ ನೋಬೆಲ್‌ನಂತಹ ಪ್ರಶಸ್ತಿಗಳು ಸಿಗುತ್ತವೆ.

ಉದಾಹರಣೆಗೆ, ನ್ಯೂಟನ್‌ನ ಗುರುತ್ವಾಕರ್ಷಣ ಸಿದ್ಧಾಂತವನ್ನು ಐನ್‌ಸ್ಟೈನ್ ಪ್ರಶ್ನಿಸಿದರು. ಥಿಯೆರಿ ಆಫ್‌ ರಿಲೇಟಿವಿಟಿಯನ್ನು ತಂದರು. ನ್ಯೂಟನ್‌ನ ಚಲನೆಯ ನಿಯಮಗಳ ಬಗ್ಗೆ ಐನ್‌ಸ್ಟೈನ್ ಎತ್ತಿದ ಈ ಪ್ರಶ್ನೆಯೇ ವಿಜ್ಞಾನವನ್ನು ಮುಂದಕ್ಕೆ ಕೊಂಡೊಯ್ತು.

ಆದರೆ, “ಓ… ಐನ್‌ಸ್ಟೈನ್ ನಮ್ಮ ನ್ಯೂಟನ್ನರ ವಾದವನ್ನು ಸರಿ ಇಲ್ಲ ಎಂದರು!” ಎಂದು ನ್ಯೂಟನ್‌ನನ್ನು ಒಪ್ಪುವ ಜನರ ಗ್ಯಾಂಗ್‌ ಐನ್‌ಸ್ಟೈನ್ ಮನೆಗೆ ಹೋಗಿ ಕಲ್ಲುಹೊಡೆಯಲಿಲ್ಲ. ಆದರೆ ಧರ್ಮದಲ್ಲಿ ಹಳೆಯ ನಂಬಿಕೆಯನ್ನು ಪ್ರಶ್ನಿಸುವುದೇ ಅಪರಾಧ!

ವೈಜ್ಞಾನಿಕತೆ ಮತ್ತು ಧರ್ಮದ ನಡುವಿನ ಸಂಘರ್ಷ
ಭಾರತೀಯ ಸಮಾಜದಲ್ಲೂ ಪ್ರಶ್ನೆಗಳನ್ನು ಎತ್ತುವ ಸಂಸ್ಕೃತಿ ಇತ್ತು. ಗೌಹರ್ ರಾಝಾ ಅವರು ಭಾರತದ ತತ್ತ್ವಶಾಸ್ತ್ರದ ವಿಚಾರವಾಗಿ ಚಾರ್ವಾಕ ಮತ್ತು ಬುದ್ಧನ ಉಲ್ಲೇಖ ಮಾಡುತ್ತಾರೆ. ಚಾರ್ವಾಕನು “ಇಂದ್ರಿಯಗಳಿಗೆ ಗೋಚರವಾಗದ್ದನ್ನು ನಂಬಬೇಡಿ” ಎಂದು ಹೇಳಿದ. ಬುದ್ಧನು “ಯಾರಾದರೂ ಹೇಳಿದ್ದು ನಿಜವೆಂದು ನಂಬಬೇಡಿ, ಮೊದಲು ಆಲೋಚಿಸಿ, ಪರೀಕ್ಷಿಸಿ, ಆಮೇಲೆ ನಂಬಿ, ಅದನ್ನು ಜನರ ಒಳಿತಿಗಾಗಿ ಬಳಸಿ,” ಎಂದು ಬೋಧಿಸಿದ. ಈ ಎರಡು ದೃಷ್ಠಿಕೋನಗಳೂ ವೈಜ್ಞಾನಿಕ ಚಿಂತನೆಗೆ ಗಟ್ಟಿತನವನ್ನು ನೀಡುತ್ತವೆ.

ಗೌಹರ್ ರಾಝಾ ಅವರು ಋಗ್ವೇದದ ಹತ್ತನೆಯ ಮಂಡಲದಲ್ಲಿ ಉಕ್ತವಾಗಿರುವ 179 ನೇ ಸೂಕ್ತವಾದ ನಾಸದೀಯ ಸೂಕ್ತವನ್ನು ಈ ವಿವೇಚನಾ ಸಂಸ್ಕೃತಿಯ ಬಗ್ಗೆ ಮಾತನಾಡಲು ಬಳಸುತ್ತಾರೆ.

“ಜಗತ್ತಿನ ಸೃಷ್ಟಿಯ ರಹಸ್ಯವನ್ನು ಯಾರು ತಿಳಿದವರು ಎಂಬ ಪ್ರಶ್ನೆಯನ್ನು ಇದರಲ್ಲಿ ಎತ್ತಿಕೊಳ್ಳುತ್ತಾರೆ.  ಆ ರಹಸ್ಯವನ್ನು ನಿಜವಾಗಿ ಬಲ್ಲವರು ಯಾರೆಂಬ ಸಂಶಯ ಬಂದಾಗ, ದೇವತೆಗಳು ಇರಬಹುದೇ ಎಂಬ ಸಂಶಯ ಬರುತ್ತದೆ. ಆದರೆ, ದೇವತೆಗಳು ಸೃಷ್ಟಿಯ ನಂತರ ಬಂದವರಾದ್ದರಿಂದ ಅವರಿಗೂ ಇದು ತಿಳಿದಿಲ್ಲ.”

ನಾಸದೀಯ ಸೂಕ್ತದ ಈ ಪ್ರಶ್ನೋತ್ತರವು ಮನುಷ್ಯನ ವಿವೇಚನಾ ಶಕ್ತಿಯೇ ಆಗಿದೆ. ಆದರೆ ಕಾಲ ಕಳೆದಂತೆ ಪ್ರಶ್ನಿಸುವುದನ್ನು ಧರ್ಮಗಳು ಘನಘೋರ ಅಪರಾಧವಾಗಿ ಕಂಡವು, ಈಗಲೂ ಕಾಣುತ್ತಿದ್ದಾವೆ.

ಆದರೆ, ನಾವು ಭಯಯಿಂದ, ನಂಬಿಕೆಗಳಿಂದ, ಮತ್ತು ಅಜ್ಞಾನದ ಮೂಲಕ ನಮ್ಮ ಮುಂದಿನ ತಲೆಮಾರಿಗೆ ಇಂತಹ ಪರಂಪರೆಯ ಬದಲು ಯಾವುದನ್ನು ಕೊಡಲು ಹೊರಟಿದ್ದೇವೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ.

ಭಾರತೀಯ ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳು ವೈಜ್ಞಾನಿಕ ಸತ್ಯಗಳೊಂದಿಗೆ ಡಿಕ್ಕಿ ಹೊಡೆಯುವ ಹಲವಾರು ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಕೆಲವೊಮ್ಮೆ ಪುರಾತನ ಶಾಸ್ತ್ರಗಳಲ್ಲಿ, ಧರ್ಮಗ್ರಂಥಗಳಲ್ಲಿ ಉಲ್ಲೇಖಿತವಾದ ವಿಚಾರಗಳನ್ನು ವೈಜ್ಞಾನಿಕ ಎಂದು ಘೋಷಿಸುವ ಪ್ರಯತ್ನಗಳು ನಡೆಯುತ್ತವೆ — ಉದಾಹರಣೆಗೆ, ಪ್ಲಾಸ್ಟಿಕ್ ಸರ್ಜರಿ ಪ್ರಾಚೀನ ಭಾರತದಲ್ಲೇ ಇದ್ದಿತೆಂಬ ಅರ್ಥಹೀನ ಹೇಳಿಕೆಗಳು. ಈ ರೀತಿಯ ‘ಸುಳ್ಳು ವಾದ’ಗಳು ಸಮಾಜದಲ್ಲಿ ವೈಜ್ಞಾನಿಕತೆಯ ನಿಜವಾದ ಅರ್ಥವನ್ನು ನಾಶ ಮಾಡುತ್ತಿವೆ. ಸ್ವತಃ ಪ್ರಧಾನಿ ಮೋದಿಯವರು ಗಣಪತಿಯನ್ನು ಪ್ಲಾಸ್ಟಿಕ್‌ ಸರ್ಜರಿಯಿಂದ ಹುಟ್ಟಿದವನು ಎಂದು ಹೇಳಿದರು. ಆದರೆ ಕುಲಶಾಸ್ತ್ರೀಯವಾಗಿ, ಧಾರ್ಮಿಕ ಪಠ್ಯಗಳಲ್ಲಿ ಈ ಆನೆ ತಲೆಗೆ ಬೇರೆಯೇ ಅರ್ಥಗಳು ಇವೆ. ಮೋದಿಯವರ ಹೇಳಿಕೆಯಿಂದ ವಿಜ್ಞಾನಕ್ಕೆ ಮಾತ್ರ ಅವಮಾನವಲ್ಲ, ಗಣಪತಿಗೂ ಅವಮಾನ ಆಯ್ತು.

ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ ಚಿಂತನೆಯ ಕೊರತೆ

ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸಾಕಷ್ಟು ಪ್ರಾಧಾನ್ಯತೆ ನೀಡಲಾಗುತ್ತಿಲ್ಲ.  ವಿದ್ಯಾರ್ಥಿಗಳು ಪರೀಕ್ಷೆ ಪಾಸ್ ಆಗುವುದು ಮುಖ್ಯ ಎಂಬ ಒತ್ತಡವನ್ನು ಸೃಷ್ಟಿಸಿಕೊಂಡಿರುವುದರಿಂದ, ಪ್ರಶ್ನೆಗಳನ್ನು ಕೇಳುವ ಸಂಸ್ಕೃತಿಕ ಕಮ್ಮಿಯಾಗುತ್ತಿದೆ. “ನೀವು ಪ್ರಶ್ನೆ ಕೇಳದಿದ್ದರೆ, ನೀವು ಮತ್ತೆ ಮನುಷ್ಯನಿಂದ ಪ್ರಾಣಿಯೆ ಆಗುತ್ತೀರಿ,” ಎಂದು ಗೌಹರ್ ರಾಝಾ ಈ ಬಗ್ಗೆ ತೀವ್ರವಾಗಿ ಚಿಂತೆ ವ್ಯಕ್ತಪಡಿಸುತ್ತಾರೆ.

ನಮ್ಮ ಪಠ್ಯಪುಸ್ತಕಗಳಿಂದ ಡಾರ್ವಿನ್‌ನ ವಿಕಾಸವಾದವನ್ನು ತೆಗೆದುಹಾಕಲಾಗಿದೆ. ಸರಿ, ಆ ವಾದದ ಬಗ್ಗೆ ಇನ್ನೂ ವಿವಾದಗಳಿಗೆ, ಒಪ್ಪೋಣ. ಆದರೆ ಆವರ್ತಕ ಕೋಷ್ಟಕ (ಪೀರಿಯಾಡಿಕ್‌ ಟೇಬಲ್‌) ವನ್ನೂ ತೆಗೆದುಹಾಕಿದ್ದಾರೆ. ಯಾಕೆ?

ಯಾಕೆಂದರೆ, ಇದನ್ನು ಓದಿದ ಮಕ್ಕಳು ಬಾಬಾ-ಸ್ವಾಮಿಗಳು ಸೃಷ್ಟಿಯ ಬಗ್ಗೆ ನೀಡುವ ಅವೈಜ್ಞಾನಿಕ, ಸುಳ್ಳು ಪ್ರವಚನಗಳನ್ನು ಪ್ರಶ್ನಿಸದೇ ಇರಲೆಂದು! ಅವರು ಈ ಭೂಮಿ ಪಂಚಭೂತಗಳಿಂದ ಆಗಿದೆ ಎಂದು ಇಂದಿಗೂ ನಂಬುತ್ತಾರೆ, ಆದರೆ ಮ್ಯಾಂಡಲೀವನ ಆವರ್ತಕ ಕೋಷ್ಟಕವು ಇಲ್ಲಿಯ ವರೆಗೆ ಪತ್ತೆಯಾಗಿರುವ 119 ಅಂಶಗಳಿವೆ, ಇವುಗಳಿಂದ ಸೃಷ್ಟಿ ಆಗಿದೆ ಎಂದು ಹೇಳುತ್ತದೆ.

ಬಾಬಾಗಳು-ಮುಲ್ಲಾಗಳು-ಸ್ವಾಮಿಗಳು ಅವರ ಅಂಗಡಿಯ ಬಾಗಿಲು ಪರ್ಮನೆಂಟಾಗಿ ಮುಚ್ಚುವುದನ್ನು ತಡೆಯಲು ಅವರ ಕೈಯಲ್ಲಿರುವ ಸರ್ಕಾರ ಈ ಪೀರಿಯಾಡಿಕ್‌ ಟೇಬಲ್‌ನಂತರ ಮಹತ್ವದ ಪಾಠಗಳನ್ನು ವಿಜ್ಞಾನದ ಪಾಠಪುಸ್ತಕಗಳಿಂದ ಕಿತ್ತುಹಾಕಿದೆ.

ತಂತ್ರಜ್ಞಾನ ಮತ್ತು ವಿಜ್ಞಾನ — ಸ್ಪಷ್ಟ ಭಿನ್ನತೆ
ತಂತ್ರಜ್ಞಾನವನ್ನು ಅಳವಡಿಸಿಕೊಂಡು, ವೈಜ್ಞಾನಿಕತೆಯನ್ನು ನಿರಾಕರಿಸುವ ಒಂದು ವಿಚಿತ್ರ ಪ್ರವೃತ್ತಿ ಭಾರತದಲ್ಲಿ ಕಾಣಸಿಗುತ್ತದೆ. ಮುಲ್ಲಾಗಳು ಅಥವಾ ಸ್ವಾಮಿಗಳ ಪ್ರವಚನಗಳಲ್ಲಿ ವೈಜ್ಞಾನಿಕ ಸಾಧನೆಗಳ ಕುರಿತಾಗಿ ತಾತ್ವಿಕ ವಿರೋಧ ಕಂಡುಬರುತ್ತದೆ.

ಸಂಪ್ರದಾಯವಾದಿಗಳಿಗೆ ತಂತ್ರಜ್ಞಾನ ಬೇಕು, ವಿಜ್ಞಾನ ಬೇಡ. ವಿಜ್ಞಾನ ಒಂದು ಅರಿವು, ತಂತ್ರಜ್ಞಾನ ಎಂಬುದು ಆ ಅರಿವನ್ನು ಬಳಸಿಕೊಂಡು ಮಾನವೇಂದ್ರಿಯಗಳ ಅನುಕೂಲಕ್ಕೆ ಸಾಧನಗಳನ್ನು ಉತ್ಪಾಸಿಸುವ ಕ್ಷೇತ್ರ ಅಷ್ಟೇ. ಹಾಗಾಗಿ, ಬಾಬಾ- ಮುಲ್ಲಾಗಳಿಗೆ ತಂತ್ರಜ್ಞಾನದಿಂದ ಹುಟ್ಟಿದ ಸಾಧನಗಳು ಬೇಕು, ಆದರೆ ವಿಜ್ಞಾನ ಬೇಡ. ವಿಜ್ಞಾನ ಅವರು ಕೊಡುವ ಧಾರ್ಮಿಕ ಪ್ರವಚನಕ್ಕೆ ಸವಾಲನ್ನು ಒಡ್ಡುತ್ತದೆ.

ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಜನರು, ಮುಖ್ಯವಾಗಿ ಸ್ತ್ರೀಯರು, ಫೋಟೋ ತೆಗೆಸಿಕೊಳ್ಳುವುದನ್ನು, ಟಿವಿ ನೋಡುವುದನ್ನು, ವಿಡಿಯೋ ಮಾಡುವುದನ್ನು ನಿಷೇಧಿಸಿದರು. ಆದರೆ ಅದೇ ತಾಲಿಬಾನಿ ನಾಯಕರು ಕ್ಯಾಮರಾದ ಮುಂದೆ ಬಂದು ಪತ್ರಿಕಾಗೋಷ್ಟಿ ನಡೆಸುತ್ತಾರೆ. ಇದು ತಂತ್ರಜ್ಞಾನ ಎಂಬ ವಿಜ್ಞಾನದ ಕೂಸು ಮತೀಯವಾದಿಗಳ ಕೈಗೆ ಬಂದರೆ ಏನಾಗುತ್ತದೆ ಎಂಬುದನ್ನು ತೋರಿಸುತ್ತದೆ.

ಈ ನಿಖರ ವ್ಯತ್ಯಾಸವನ್ನು ತಿಳಿಯದಿದ್ದರೆ, ನಾವು ವೈಜ್ಞಾನಿಕ ಮನೋಭಾವವನ್ನು ಶ್ರದ್ದೆ ಅಥವಾ ಭಕ್ತಿಯನ್ನು ಇಟ್ಟು ಗೊಂದಲಕ್ಕೊಳಗಾಗುತ್ತೇವೆ.

ವೈಜ್ಞಾನಿಕತೆಯ ರಾಜಕೀಯಕರಣ
ವೈಜ್ಞಾನಿಕ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಅಥವಾ ನಿರಾಕರಿಸುವ ಉದಾಹರಣೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ, ವಿಜ್ಞಾನಿಗಳ ಧ್ವನಿಯನ್ನು ಹತ್ತಿಕ್ಕುವ ಅಪಾಯವಿದೆ. ಗೌಹರ್ ರಾಝಾ ಈ ಬಗ್ಗೆ, “ಇದು ರಾಜಕೀಯಕ್ಕಾಗಿ ವೈಜ್ಞಾನಿಕ ಸತ್ಯವನ್ನು ಬಳಕೆ ಮಾಡುವುದು” ಎಂದು ಎಚ್ಚರಿಕೆ ನೀಡುತ್ತಾರೆ.

ವೈಜ್ಞಾನಿಕ ಶಕ್ತಿ ಮತ್ತು ಪ್ರಗತಿಯ ಪರಿಪೂರ್ಣ ಸಂಬಂಧ
ವೈಜ್ಞಾನಿಕ ಮನೋಭಾವವು ಒಂದು ರಾಷ್ಟ್ರದ ಪ್ರಗತಿಯ ಮೂಲ ಆಧಾರವಾಗಿದೆ. ತಂತ್ರಜ್ಞಾನ ಅಭಿವೃದ್ಧಿಯ ಹಿಂದೆ ಇರುವ ವಿಜ್ಞಾನಕ್ಕೆ ಮಾನ್ಯತೆ ನೀಡದೆ ಕೇವಲ ಅದರಿಂದ ಉತ್ಪಾದಿಸಲ್ಪಟ್ಟ ಸಾಧನೆಗಳನ್ನು  ಸಂಭ್ರಮಿಸುವ ನಕಲಿ ರಾಷ್ಟ್ರೀಯತೆಯು ಯಾವುದೇ ಹೊಸ ಸಂಶೋಧನೆಗೆ ದಾರಿ ಮಾಡಿಕೊಡದು.

ಈ ಪಾಡ್‌ಕಾಸ್ಟ್‌ನಲ್ಲಿ ಕುನಾಲ್‌ ಕಾಮ್ರಾ ಅವರು ಗೌಹರ್ ರಾಝಾ ಅವರೊಂದಿಗೆ ಸುದೀರ್ಘ ಮತ್ತು ಆಳವಾದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ವೈಜ್ಞಾನಿಕತೆ ಹೇಗೆ ಧರ್ಮ, ರಾಜಕೀಯ ಮತ್ತು ಶಿಕ್ಷಣದೊಂದಿಗೆ ಸಂಘರ್ಷ ಮಾಡಿದೆ ಎಂಬುದರ ಮೇಲೆ ಅವರು ಬೆಳಕು ಚೆಲ್ಲುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ — “ಪ್ರಶ್ನೆಗಳು ತಪ್ಪಾಗುವುದಿಲ್ಲ, ಉತ್ತರಗಳು ತಪ್ಪಾಗಬಹುದು.”

ಕುನಾಲ್‌ ಕಾಮ್ರಾ ಮತ್ತು ಗೌಹರ್‌ ರಾಝಾ ಅವರ ಸಂವಾದವನ್ನು ವೀಕ್ಷಿಸಲು: Are We 🇮🇳 Indians Scientific? | Nope ft. Gauhar Raza | Episode 001

ಮ್ಯಾಗ್ಡೆಬರ್ಗ್ ಕ್ರಿಸ್ಮಸ್ ಮಾರ್ಕೆಟ್ ದಾಳಿ: ಮಾಧ್ಯಮಗಳಿಗೆ ಪಾಠ
ಮಾಧ್ಯಮ ಸಾಕ್ಷರತೆ ಮತ್ತು ಮಾಧ್ಯಮಗಳನ್ನು ವಿಮರ್ಶೆ ಮಾಡುವ, ಪ್ರಶ್ನೆ ಮಾಡುವ ಅಗತ್ಯತೆ ಇರುವ ಸಂದರ್ಭದಲ್ಲಿ ನಾವಿದ್ದೇವೆ. ಈ ಎಲ್ಲಾ ಸಿದ್ದಾಂತಗಳೂ ಹೇಳುವುದು ಒಂದೇ, ಮಾಧ್ಯಮಗಳು ತಾವು ಏನನ್ನು ಜನರಿಗೆ ಕೊಡಬೇಕು ಎನ್ನುವುದನ್ನು ಜನರ ಅಭಿರುಚಿಯ ಅಧಾರದಲ್ಲಿ ನಿರ್ಧರಿಸುವುದಿಲ್ಲ, ಬದಲಾಗಿ ಜನರು ತಮಗೆ ಏನು ಬೇಕು ಎನ್ನುವುದನ್ನು ಮೊದಲು ಅವರ ತಲೆಗೆ ತುರುಕಿ ಆಮೇಲೆ ಅದಕ್ಕೆ ಪೂರಕವಾದ ಸುದ್ದಿಗಳನ್ನು ನೀಡುತ್ತವೆ

ಡಿಸೆಂಬರ್ 20, 2024 ರಂದು, ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿ ಕ್ರಿಸ್ಮಸ್ ಮಾರ್ಕೆಟ್‌ನಲ್ಲಿ ನಡೆದ ದುರಂತ ದಾಳಿಯಲ್ಲಿ ಐವರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡರು. ಪಾಶ್ಚಿಮಾತ್ಯ ಮಾಧ್ಯಮಗಳು ಇಂತಹ ಘಟನೆಗಳನ್ನು, ಅದರಲ್ಲೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹೇಗೆ ರೂಪಿಸಬೇಕು ಎಂಬುದನ್ನು ತೋರಿಸಿಕೊಟ್ಟಿವೆ.

ದಾಳಿಕೋರ ಸೌದಿ ಅರೇಬಿಯಾ ಮೂಲದ ಮನೋವೈದ್ಯ ತಲೇಬ್ ಅಲ್-ಅಬ್ದುಲ್ಮೊಹ್ಸೆನ್, ಒಬ್ಬ ನಾಸ್ತಿಕ ಮತ್ತು ಇಸ್ಲಾಮಿಕ್ ವಿರೋಧಿ ನಿಲುವಿಗೆ ಹೆಸರಾಗಿದ್ದವನು. ಈ ಘಟನೆಯನ್ನು ಸಾಂಪ್ರದಾಯಿಕ ಮಾಧ್ಯಮಗಳು ಹೇಗೆ ವರದಿ ಮಾಡಿದವು ಎಂಬುದು ಮುಖ್ಯವಾಗುತ್ತದೆ.

ದಾಳಿಕೋರನ ಧರ್ಮ ಮತ್ತು ಸಿದ್ಧಾಂತ

ಸಾಮಾನ್ಯವಾಗಿ ಭಾರತೀಯ ಮಾಧ್ಯಮಗಳು ದಾಳಿಕೋರನ ಧರ್ಮ ಯಾವುದು ಎಂದು ನೋಡುತ್ತವೆ. ಅವನ ಸಿದ್ದಾಂತಗಳ ಮೂಲಕ ತಮ್ಮ ನಿರೂಪಣೆಗಳನ್ನು ಕಟ್ಟುತ್ತವೆ.

ದಾಳಿ ಮಾಡಿದವನು ಮುಸಲ್ಮಾನನಾಗಿದ್ದರೆ, “ರ್ಯಾಡಿಕಲ್‌ ಇಸ್ಲಾಂ, ಜಿಹಾದ್”‌ ನಂತಹ ಪದಗಳನ್ನು ಬಳಸಿ ಹೆಡ್‌ಲೈನ್‌ ಮಾಡುತ್ತವೆ. ಇಡೀ ಘಟನೆ ಇಸ್ಲಾಮಿಗೆ ಸಂಬಂಧ ಹೊಂದದೇ ಇದ್ದರೂ “ಇಸ್ಲಾಮಿಸ್ಟ್‌ ಭಯೋತ್ಪಾದನಾ ದಾಳಿ”ಯಾಗಿ ಬ್ರಾಂಡ್‌ ಮಾಡುತ್ತವೆ. ಲಷ್ಕರ್‌ ಎ ತೊಯೇಬಾ, ತಾಲಿಬಾನ್‌ನಂತಹ ಸಂಘಟನೆಗಳ ದಾಳಿಗಳಿಗೆ ವೈಯಕ್ತಿಕ ಅಪರಾಧಗಳನ್ನು ಸಮೀಕರಿಸಿ ನೋಡುತ್ತವೆ.

ಆದರೆ ಮ್ಯಾಗ್ಡೆಬರ್ಗ್‌ನ ಈ ದಾಳಿ ಇವೆಲ್ಲಕ್ಕೂ ಭಿನ್ನ ನಿರೂಪಣೆಯಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ವರದಿಯಾಗಿದೆ. ಧಾರ್ಮಿಕ ಗುರುತನ್ನು ಮುಂದಿಟ್ಟುಕೊಂಡು ಇಡೀ ಸಮಾಜವನ್ನು ಹೀಗಳೆಯುವ ಭಾರತೀಯ ಮಾಧ್ಯಮಗಳಿಗೆ ಭಿನ್ನವಾಗಿ ಇದರಲ್ಲಿ ಆಕ್ರಮಕಾರನ ವೈಯಕ್ತಿಕ ಮಾನಸಿಕ ಸಮಸ್ಯೆಗಳು, ಆತನ ನಾಸ್ತಿಕ ನಂಬಿಕೆ ಚರ್ಚೆಯ ಕೇಂದ್ರಬಿಂದುವಾಗಿದೆ.

ಪ್ರಾಬಲ್ಯ ಮತ್ತು ಮಾಧ್ಯಮ ನಿರೂಪಣೆಗಳು

ಆಂಟೋನಿಯೊ ಗ್ರಾಂಸ್ಕಿಯ ಅಧೀನತೆಯ ಸಿದ್ಧಾಂತ (theory of hegemony ) ಮಾಧ್ಯಮಗಳು ನಿರ್ದಿಷ್ಟ ಸಂದರ್ಭಗಳಲ್ಲಿ ನಡೆಯುವ ಘಟನೆಗಳನ್ನು ರೂಪಿಸುವ ರೀತಿಯ ಮೂಲಕ ಪ್ರಬಲ ಸಿದ್ಧಾಂತಗಳನ್ನು ಬಲಪಡಿಸುತ್ತದೆ ಎಂದು ಪ್ರತಿಪಾದಿಸುತ್ತದೆ. ಆದರೆ, ಮ್ಯಾಗ್ಡೆಬರ್ಗ್ ದಾಳಿಯು ಮಾದ್ಯಮಗಳು ಮುಸ್ಲಿಂ ಅಪರಾಧಿಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕಟ್ಟಿರುವ ನಿರೂಪಣೆಗಳಿಂದ ಭಿನ್ನವಾಗಿ ನೋಡಿರುವುದನ್ನು ತೋರಿಸುತ್ತದೆ.

ಹ್ಯಾಂಡೆಲ್ಸ್‌ಬ್ಲಾಟ್ (Handelsblatt) ಎಂಬ ಮಾಧ್ಯಮ ದಾಳಿಕೋರ ಆಲ್ಟರ್ನೇಟಿವ್‌ ಫಾರ್‌ ಜರ್ಮನಿ  (AfD) ಪಕ್ಷಕ್ಕೆ ತೋರಿರುವ ಸಹಾನುಭೂತಿ ಮತ್ತು ಆತನ ಇಸ್ಲಾಮಿಕ್ ವಿರೋಧಿ ಸೈದ್ಧಾಂತಿಕತೆಯ ದೃಷ್ಟಿಕೋನದಿಂದ ಘಟನೆಯನ್ನು ನೋಡಿದೆ.

ಡೈ ವೆಲ್ಟ್ (Die Welt) ದ್ವೇಷ ಭಾಷಣದ ಕಾನೂನುಗಳ ಬಗ್ಗೆ ಅಪರಾಧಿ ತೋರಿರುವ ಟೀಕೆಗಳು ಮತ್ತು ಅವನ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಮೇಲೆ ತನ್ನ ವರದಿಯನ್ನು ಕೇಂದ್ರೀಕರಿಸಿ, ಈ ದಾಳಿಯ ಹಿಂದಿನ ಪ್ರೇರಣೆಗಳನ್ನು  ಸೈದ್ಧಾಂತಿಕ ಚೌಕಟ್ಟಿನೊಳಗೆ ಇಟ್ಟು ವರದಿ ಮಾಡಿದೆ.

ಸಾಂಸ್ಕೃತಿಕ ಸಂಕೇತಗಳು ಮತ್ತು ಸುದ್ದಿ ಮೌಲ್ಯಗಳು

ಸ್ಟುವರ್ಟ್ ಹಾಲ್ ಅವರ ಸಾಂಸ್ಕೃತಿಕ ಸಂಕೇತಗಳ ಸಿದ್ಧಾಂತವು (theory of cultural codes) ಮಾಧ್ಯಮವು ವರದಿಗಳನ್ನು ಮಾಡುವಾಗ ಪ್ರೇಕ್ಷಕರ ಮೌಲ್ಯಗಳು ಮತ್ತು ಗ್ರಹಿಕೆಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಮಾಡುತ್ತವೆ ಎಂದು ಹೇಳುತ್ತದೆ. ದಾಳಿ ಮಾಡಿದವನು ಮುಸ್ಲಿಂ ಆಗಿದ್ದರೆ, ಆತನ ದಾಳಿ ಆತನ ಧಾರ್ಮಿಕ ಕಾರಣಗಳಿಂದ ಅಲ್ಲದೇ ಇದ್ದರೂ ಅದನ್ನು ಧರ್ಮದ ಜೊತೆಗೆ ತಳುಕುಹಾಕಿ ವರದಿ ಮಾಡುವುದು ಇದೇ ಕಾರಣಕ್ಕೆ. ಮೊದಲು ಮಾಧ್ಯಮಗಳು ವೀಕ್ಷಕನ, ಓದುಗನ ಆಲೋಚನೆಯನ್ನು ಬದಲಿಸುವಂತಹ ನಿರೂಪಣೆಗಳನ್ನು ಕಟ್ಟುತ್ತವೆ, ಆ ಮೇಲೆ ವೀಕ್ಷಕ/ಓದುಗ ಮಾಧ್ಯಮಗಳು ಈಗಾಗಲೇ ನೀಡಿರುವ ಕನ್ನಡಕ ಹಾಕಿಕೊಂಡು ಎಲ್ಲಾ ಘಟನೆಗಳನ್ನು ನೋಡುತ್ತಾನೆ. ಆತನ ಗ್ರಹಿಕೆಯನ್ನು ತಾನೇ ನಿರ್ಮಿಸಿ, ಅದನ್ನು ಪೋಷಿಸಲು ಬೇಕಾದ ರೀತಿಯಲ್ಲಿ ವರದಿ ಮಾಡುತ್ತವೆ.

ಒಂದು ವೇಳೆ ಈ ಘಟನೆ ಭಾರತದಲ್ಲಿ ನಡೆದಿದ್ದರೆ, ನಾಸ್ತಿಕ ಮತ್ತು ಕಟ್ಟರ್‌ ಇಸ್ಲಾಂ ವಿರೋಧಿ ದಾಳಿಕೋರನೂ ʼಜಿಹಾದಿʼಯಾಗುತ್ತಾನೆ. ಅದೇ ರೀತಿಯ ದಾಳಿಯನ್ನು ಹಿಂದೂ ಮಾಡಿದ್ದರೆ, ಅದು ಹಿಂದೂ ಧರ್ಮದ ಜೊತೆಗೆ ಚರ್ಚೆಯಾಗುವುದಿಲ್ಲ.

ಭಾರತದಲ್ಲಿ ನಡೆದಿರುವ ಕೆಲವು ಘಟನೆಗಳನ್ನು ನಾವು ಈ ಹಿನ್ನಲೆಯಿಂದ ನೋಡಬೇಕು. ಮುಸಲ್ಮಾನ ವ್ಯಕ್ತಿ ತನ್ನ ಪ್ರೇಯಸಿಯನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿ ಫ್ರೀಜರ್‌ನಲ್ಲಿ ಇಟ್ಟಿದ್ದು ಇಸ್ಲಾಂ ಬಗೆಗಿನ ಚರ್ಚೆಗೆ ಕಾರಣವಾದರೆ, ಅದೇ ರೀತಿಯ ಕೃತ್ಯ ನಡೆಸಿದ ಹಿಂದೂವಿನ ಈ ಅಪರಾಧ ಧರ್ಮದ ಜೊತೆಗೆ ಚರ್ಚೆಯಾಗುವುದಿಲ್ಲ. ಈ ಪೂರ್ವಾಗ್ರಹಗಳನ್ನು ಮಾಧ್ಯಮಗಳು ನಮಗೆ ನೀಡಿವೆ.

ಫ್ರಾಂಕ್‌ಫರ್ಟರ್ ಆಲ್‌ಗೆಮೈನ್ ಝೈತುಂಗ್ (Frankfurter Allgemeine Zeitung) ಈ ದಾಳಿಯನ್ನು ನಡೆಸಿದವನು ತನ್ನನ್ನು ತಾನು ‘ಇಸ್ಲಾಂನ ಇತಿಹಾಸದಲ್ಲಿಯೇ ಅತ್ಯಂತ ಆಕ್ರಮಣಕಾರಿ ವಿಮರ್ಶಕ’ ಎಂದು ಕರೆಸಿಕೊಂಡಿರುವುದು, ಆತನ ವೈಯಕ್ತಿಕ ಗುಣಕ್ಕೆ ಒತ್ತು ನೀಡುವ ಮೂಲಕ ತಟಸ್ಥ  ವರದಿಯನ್ನು ಮಾಡಿದೆ. ಬಿಬಿಸಿ ನ್ಯೂಸ್‌ ಕೂಡ ಇಸ್ಲಾಮೋಫೋಬಿಯಾದ ಬಗ್ಗೆ ಮರುಚರ್ಚೆಯನ್ನು ಮಾಡಿದರೂ, ಈ ಘಟನೆ ಸಾಮೂಹಿಕವಾಗಿ ನಡೆಯುವ ಇಸ್ಮಾಂನ ಬಗೆಗಿನ ಅಪಾದನೆಗಳಿಗೆ ಭಿನ್ನವಾಗಿ ಈ ಘಟನೆಯನ್ನು ನೋಡುವ ಬಗೆಯನ್ನು ತಿಳಿಸಿತು.

ಮ್ಯಾಗ್ಡೆಬರ್ಗ್‌ ದಾಳಿಯನ್ನು ಪಾಶ್ಚಿಮಾತ್ಯ ಮಾಧ್ಯಮಗಳು ವರದಿ ಮಾಡಿದ ಬಗೆಯನ್ನು ಕೆಲವು ಮಾಧ್ಯಮ ಸಿದ್ಧಾಂತಗಳ ಮೂಲಕ ನೋಡಬಹುದು.

ಚೌಕಟ್ಟಿನ ಸಿದ್ಧಾಂತ –Framing theory

ಮಾಧ್ಯಮಗಳು ವರದಿ ಮಾಡುವಾಗ ಒಂದು ಸಾರ್ವಜನಿಕ ಗ್ರಹಿಕೆಯನ್ನು ರೂಪಿಸುತ್ತವೆ. ಮಾಧ್ಯಮಗಳು ವಿಲನ್‌ ಎಂಬಂತೆ ಚಿತ್ರಿಸಿದ ವ್ಯಕ್ತಿ ಸಾರ್ವಜನಿಕರ ಗ್ರಹಿಕೆಯಲ್ಲಿಯೂ ವಿಲನ್‌ ಆಗುತ್ತಾನೆ. ಘಟನೆಯ ಹಿಂದೆ-ಮುಂದೆ ನೋಡಿ ಮಾಧ್ಯಮಗಳ ಸುದ್ದಿ ನಿರೂಪಣೆಯನ್ನು ಜನರು ಒಡೆದು ನೋಡುವುದಿಲ್ಲ ಎಂಬ ಧೈರ್ಯ ಕೂಡ ಮಾಧ್ಯಮಗಳಿಗೆ ಇರುತ್ತದೆ. ಮಾಧ್ಯಮಗಳ ದೃಷ್ಟಿಯಲ್ಲಿ ʼವೀಕ್ಷಕರು ಅವರು ಹೇಳಿದ್ದನ್ನು ಮಾತ್ರ ನಂಬುವ ಜೀವಿಗಳು.ʼ ಹೀಗಾಗಿ, ವೀಕ್ಷಕ ಏನನ್ನು ಯೋಚಿಸಬೇಕು ಎಂಬುದನ್ನು ಮಾಧ್ಯಮಗಳೇ ನಿಯಂತ್ರಿಸುತ್ತವೆ. ದಾಳಿಕೋರ ಮುಸ್ಲೀಂ ಆದರೆ ಆತನ ಅದು ಸಾಮೂಹಿಕ ಬೆದರಿಕೆ, ಮುಸ್ಲಿಮೇತರನಾದರೆ ಆತನ ಅಪರಾಧ ವೈಯಕ್ತಿಕ ಎಂಬಂತೆ ವರದಿ ಮಾಡುತ್ತವೆ.

ಇದರ ಪರಿಣಾಮವಾಗಿ ದಾಳಿ ನಡೆಸಿದವ, ಕಳ್ಳತನ ಮಾಡಿದವ, ಅತ್ಯಾಚಾರ ಮಾಡಿದವನು ಯಾವ ಧರ್ಮದವನು ಎಂದು ಮೊದಲು ನೋಡಿ ಈ ವರದಿಯನ್ನು ನೋಡುವ ಪರಿಪಾಠವನ್ನು ವೀಕ್ಷಕ ಬೆಳೆಸಿಕೊಳ್ಳುವಂತೆ ಮಾಧ್ಯಮಗಳು ಮಾಡಿವೆ.

ಸುದ್ದಿ ಮೌಲ್ಯಗಳ ಸಿದ್ಧಾಂತ – News values theory

ದಾಳಿಕೋರನ ಧರ್ಮ ಯಾವುದು ಎಂಬುದರಿಂದ ಸುದ್ದಿಗೆ  ಹೆಚ್ಚು ಮೌಲ್ಯ ಸಿಗುತ್ತಿದೆ. ಇಲ್ಲಿ ಸಾಂಪ್ರದಾಯಿಕ, ತಟಸ್ಠ ಸುದ್ದಿ ನಿರೂಪಣೆಗಳಿಗೆ ಬೆಲೆ ಇಲ್ಲ. ಪ್ರಕರಣದಲ್ಲಿ ಅಪರಾಧಿಯಾಗಿರುವ ವ್ಯಕ್ತಿಯ ಧರ್ಮದ ಮೇಲೆ ಆ ಸುದ್ದಿ ಹೆಚ್ಚು ಸಮಯ ಓಡುತ್ತದೆ. ಜನರು ಮತ್ತೆ ಮತ್ತೆ ತಮ್ಮ ಒಳಗೆ ಮಾಧ್ಯಮಗಳು ತುಂಬಿರುವ ಆಕ್ರೋಶವನ್ನು ಹೊರಗೆ ಹಾಕಲು ಈ ಸುದ್ದಿಯನ್ನು ಟಿವಿ, ಯೂಟ್ಯೂಬ್‌ಗಳಲ್ಲಿ ಹುಡುಕಿ ನೋಡುತ್ತಾರೆ.

ಅಧಿಕಾರ ಮತ್ತು ಸಿದ್ಧಾಂತ – Hegemony and ideology

ಮಾಧ್ಯಮಗಳು ಸುದ್ದಿಯ ಯಾವ ಅಂಶವನ್ನು ಹೆಚ್ಚು ಹೈಲೈಟ್‌ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಮೂಲಕ ತಾವು ಈಗಾಗಲೇ ಬಿತ್ತಿರುವ ಪ್ರಬಲ ಸಿದ್ದಾಂತವನ್ನು ಬಲಪಡಿಸುತ್ತವೆ. ಮ್ಯಾಗ್ಡೆಬರ್ಗ್‌ ದಾಳಿಯನ್ನು ಭಾರತೀಯ ಮಾಧ್ಯಮಗಳು ವರದಿ ಮಾಡಿದರೆ, ಆತ ಹುಟ್ಟಿದ ಧರ್ಮ ಇಸ್ಲಾಂಗೆ ಹೆಚ್ಚು ಒತ್ತು ನೀಡಿ ವರದಿ ಮಾಡುತ್ತವೆ, ಆತ ನಾಸ್ತಿಕ ಎಂಬುದನ್ನು ಕಡಿಮೆ ಚರ್ಚೆ ಮಾಡುತ್ತವೆ. ಏಕೆಂದರೆ, ಇಸ್ಲಾಮೋಫೋಬಿಯಾದಿಂದ ಸುದ್ದಿಗೆ ಮೌಲ್ಯ ಹೆಚ್ಚಾಗುತ್ತದೆ, ಸುದ್ದಿ ಚೆನ್ನಾಗಿ ಮಾರಾಟವಾಗುತ್ತದೆ ಮತ್ತು ಒಳ್ಳೆಯ ಆದಾಯ ಬರುತ್ತದೆ.

ಸಾಂಸ್ಕೃತಿಕ ಸಂಕೇತಗಳು –Cultural codes

ಮತ್ತೆ ಇಲ್ಲೂ ದಾಳಿಕೋರನ ಧರ್ಮದ ಮೂಲಕ ಘಟನೆಯನ್ನು ನೋಡಲಾಗುತ್ತದೆ. ಮುಸಲ್ಮಾನ ನಾಸ್ತಿಕ ಮಾಡಿದ ದಾಳಿಯೂ ʼಇಸ್ಲಾಂನಿಂದ ಸಾಮೂಹಿಕ ಬೆದರಿಕೆʼ ಎಂಬುದಾಗಿ ಚಿತ್ರಿಸಲಾಗುತ್ತದೆ, ಮುಸ್ಲಿಮೇತರ ಮಾಡಿದ ದಾಳಿ ವೈಯಕ್ತಿಕವಾಗುತ್ತದೆ. ಮಂಗಳೂರಿನ ಏರ್‌ಪೋರ್ಟ್‌ನಲ್ಲಿ ಬಾಂಬು ಇಟ್ಟಿದ್ದಾನೆ ಎಂದು ಆದಿತ್ಯ ರಾವ್‌ ಎಂಬಾತನನ್ನು ಬಂಧಿಸುವಾಗ, ಆತನನ್ನು ಮಾಧ್ಯಮಗಳು ʼಮಾನಸಿಕ ರೋಗಿʼ ಎಂದು ಕರೆಯುತ್ತವೆ ಎಂದು ಕೆಲವು ಜನರು ಟೀಕೆ ಮಾಡಿದ್ದರು. ಈ ಟೀಕೆಯೇ ಸದ್ಯದ ಮಾಧ್ಯಮಗಳ ನಿಜವಾದ ನಡವಳಿಕೆ.

ಸಾಮಾಜಿಕ ನಿರ್ಮಾಣವಾದ – Social constructionism

ಮಾಧ್ಯಮ ಸುದ್ದಿ ನಿರೂಪಣೆಗಳು ಒಂದು ಸಮುದಾಯವನ್ನು ಮತ್ತು ಇತತರನ್ನು ಹೇಗೆ ನೋಡಬೇಕು ಎಂಬುದನ್ನು ರೂಪಿಸುತ್ತವೆ. ಆದರೆ ಜರ್ಮನಿಯ ಈ ಘಟನೆಯಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳು ದಾಳಿ ನಡೆಸಿದವನ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿವೆ. ಇಲ್ಲಿ ಸಾಮೂಹಿಕ ಅಭಿಪ್ರಾಯವನ್ನು ಕಟ್ಟಲು ಹೋಗಲಿಲ್ಲ.

ಪವರ್ ಡೈನಾಮಿಕ್ಸ್ ಮತ್ತು ಸಾರ್ವಜನಿಕ ಗ್ರಹಿಕೆ – Power dynamics and public perception

ಮೈಕೆಲ್ ಫೌಕಾಲ್ಟ್ ಅವರ ಶಕ್ತಿ ಮತ್ತು ಜ್ಞಾನದ ಸಿದ್ಧಾಂತವು (theory of power and knowledge) ಮಾಧ್ಯಮವು ತನ್ನ ವರದಿಯ ಮೂಲಕ ಸಾಮಾಜಿಕ ನಿಯಂತ್ರಣವನ್ನು ಮಾಡುತ್ತದೆ ಎಂದು ಹೇಳುತ್ತದೆ.  ಮ್ಯಾಗ್ಡೆಬರ್ಗ್ ಪ್ರಕರಣದಲ್ಲಿ, ಆಕ್ರಮಣಕಾರನ ಇಸ್ಲಾಮೋಫೋಬಿಕ್ ಚಿಂತನೆಯನ್ನು ನಿರ್ಲಕ್ಷಿಸುವುದು   ಅಸ್ತಿತ್ವದಲ್ಲಿರುವ ಪವರ್‌ ಡೈನಾಮಿಕ್ಸ್ ಅನ್ನು ತೋರಿಸುತ್ತದೆ.

ಮಾಧ್ಯಮ ಸಾಕ್ಷರತೆ ಮತ್ತು ಮಾಧ್ಯಮಗಳನ್ನು ವಿಮರ್ಶೆ ಮಾಡುವ, ಪ್ರಶ್ನೆ ಮಾಡುವ ಅಗತ್ಯತೆ ಇರುವ ಸಂದರರ್ಭದಲ್ಲಿ ನಾವಿದ್ದೇವೆ. ಈ ಎಲ್ಲಾ ಸಿದ್ದಾಂತಗಳೂ ಹೇಳುವುದು ಒಂದೇ, ಮಾಧ್ಯಮಗಳು ತಾವು ಏನನ್ನು ಜನರಿಗೆ ಕೊಡಬೇಕು ಎನ್ನುವುದನ್ನು ಜನರ ಅಭಿರುಚಿಯ ಅಧಾರದಲ್ಲಿ ನಿರ್ಧರಿಸುವುದಿಲ್ಲ, ಬದಲಾಗಿ ಜನರು ತಮಗೆ ಏನು ಬೇಕು ಎನ್ನುವುದನ್ನು ಮೊದಲು ಅವರ ತಲೆಗೆ ತುರುಕಿ ಆಮೇಲೆ ಅದಕ್ಕೆ ಪೂರಕವಾದ ಸುದ್ದಿಗಳನ್ನು ನೀಡುತ್ತವೆ.

ಉದಾಹರಣೆಗೆ: ಆರಂಭದಲ್ಲಿ ರೀಲ್ಸ್‌ಗಳಲ್ಲಿ ಬರುವ ಜನರ ವೈಯಕ್ತಿಕ ಬದುಕಿನ ಬಗ್ಗೆ ಸಾಮಾನ್ಯ ಜನರಿಗೆ ಆಸಕ್ತಿ ಇರಲಿಲ್ಲ. ಆ ಆಸಕ್ತಿನ್ನು ಮಾಧ್ಯಮಗಳು ಆರಂಭದಲ್ಲಿ ಹುಟ್ಟಿಸಿದವು. ಆ ನಂತರ ಜನರು ಅದನ್ನು ಪದೇ ಪದೇ ಬಯಸುವಂತೆ ಮಾಡಿ, ಅಂತಹ ಕಳಪೆ ಸುದ್ದಿಗಳನ್ನೇ ಜನರಿಗೆ ನೀಡಲು ಆರಂಭಿಸಿದವು.

ಮಾಧ್ಯಮಗಳು ನೀಡುವ ಸುದ್ದಿಗಳ ಬಗ್ಗೆ ಎಚ್ಚರವಾಗಿರೋಣ..

ಸಂಭಾಲ್‌ ಸುತ್ತ ಕಟ್ಟಿದ ಸುಳ್ಳುಗಳು!
ಸಂಭಾಲ್‌ ಮಸೀದಿಯ ಮುಂದೆ ನಾಲ್ವರು ಸಾವನ್ನಪ್ಪಿದ್ದಾರೆ. ನಾಲ್ವರೂ ಭಾರತೀಯರು, ಆದರೆ ನಾಲ್ಕು ಮುಸ್ಲಿಮರು. ಬಹುಶಃ ಪೊಲೀಸರು ಅವರನ್ನೂ ಹಿಂದೂಗಳನ್ನು ನಡೆಸಿಕೊಂಡಂತೆ ನಡೆಸಿಕೊಂಡಿದ್ದರೆ ಬದುಕಿರುತ್ತಿದ್ದರೋ ಏನೋ!

ಹಿಂದೂಗಳು ಕೋಮುದ್ರಿಕ್ತರಾಗಿ ನಡೆದುಕೊಂಡರೆ ಪೊಲೀಸರ ಗುಂಡು ಕೆಲಸ ಮಾಡುವುದಿಲ್ಲ, ಮಾಡಿದರೂ ಪಟಾಕಿ ಬೆಂಕಿಕೊಟ್ಟು ಎಸೆದಂತೆ ಗಾಳಿಯಲ್ಲಿ ಹಾರುತ್ತವೆ. ಹಿಂದೂವಿನ ಎದೆಯನ್ನು ಅದು ಸೀಳುವುದಿಲ್ಲ. ಹಿಂದೂಗಳು ಇತರರ ಮನೆಗಳು , ವಾಹನಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಬೆಂಕಿ ಹಚ್ಚುವ ಮತ್ತು ದಾಳಿ ಮಾಡುವ ಸುದ್ದಿಯನ್ನು ನೀವು ಓದಿರುತ್ತೀರಿ. ಅನೇಕ ಕಡೆ ಹಿಂದುತ್ವದವರು ದಲಿತ-ಮುಸಲ್ಮಾನರ ಮೇಲೆ ಗುಂಪುದಾಳಿ ನಡೆಸಿದ್ದಾರೆ. ಆದರೆ ಅವರ್ಯಾರ ಮೇಲೂ ಪೊಲೀಸರು ಸಂಭಾಲ್‌ನಲ್ಲಿ ಮಾಡಿದಂತೆ ಪೊಲೀಸರು ನಡೆದುಕೊಂಡ ಸುದ್ದಿ ಇಲ್ಲ.

ಹಿಂದೂ ಕನ್ವಾರಿಯಾಗಳು ಜನರನ್ನು ಮಾತ್ರವಲ್ಲದೆ ಪೊಲೀಸರ ಮೇಲೂ ಹಲ್ಲೆ ನಡೆಸಿರುವ ವೀಡಿಯೊಗಳನ್ನು ನೀವು ನೋಡಿರುತ್ತೀರಿ , ಆದರೂ ಪೊಲೀಸರು ಮೂಕರಾಗಿ ನೋಡುತ್ತಿದ್ದರು. ಪ್ರಶ್ನೆ ಎಂದರೆ, ಪ್ರಕ್ಷುಬ್ಧ ಹಿಂದುತ್ವವಾದಿ ಗುಂಪು ಕಲ್ಲು ತೂರಾಟದ ಮಾಡಿದರೆ ಅವರ ಜೊತೆಗೂ ಪೊಲೀಸರು ಹೀಗೆ ನಡೆದುಕೊಳ್ಳುತ್ತಾರಾ?

ಪೊಲೀಸರು ಹೇಳುತ್ತಾರೆ, ತಾವು ಯಾವುದೇ ಮುಸ್ಲಿಮರನ್ನು ಕೊಂದಿಲ್ಲ ಎಂದು. ಅವರ ಪ್ರಕಾರ, ಮುಸ್ಲಿಮರೇ ಗುಂಡು ಹಾರಿಸಿಕೊಂಡು ನಾಲ್ವರನ್ನು ಕೊಂದರು. ಇದೊಂದು ಹೊಸ ಬದಲಾವಣೆ: ಮುಸ್ಲೀಮರ ಸಾವಿಗೆ ಅವರನ್ನೇ ದೂಷಿಸುವುದು. ಡಿಸೆಂಬರ್ 2019 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ 21 ಮುಸ್ಲಿಮರು ಕೊಲ್ಲಲ್ಪಟ್ಟಾಗ ಪೊಲೀಸರು ಇದೇ ಮಾತನ್ನು ಹೇಳಿದ್ದರು. ಮುಸ್ಲಿಮರನ್ನು ಕೊಂದ ಆ ಗುಂಡುಗಳು ಅವರ ಅಧಿಕೃತ ಬಂದೂಕುಗಳಿಗೆ ಸೇರಿದ್ದಲ್ಲ ಎಂದು ಪೊಲೀಸರು ಹೇಳಿದ್ದರು. ದೆಹಲಿ ಹಿಂಸಾಚಾರವನ್ನು ಮುಸ್ಲಿಂ ಕಾರ್ಯಕರ್ತರ ಮೇಲೆ ಆರೋಪಿಸಲಾಗಿದೆ ಮತ್ತು ಎಲ್ಗರ್ ಪರಿಷತ್ ಹಿಂಸಾಚಾರದಲ್ಲೂ ಮುಸಲ್ಮಾನರ ಮೇಲೆ ಗೂಬೆ ಕೂರಿಸಲಾಗಿದೆ.

ಮುಸ್ಲಿಮರನ್ನು ಪ್ರಚೋದಿಸಿ, ಹಿಂಸಾಚಾರಕ್ಕೆ ಕಾರಣನಾಗಿದ್ದಾನೆ ಎಂದು ಸಂಭಾಲ್ ಸಂಸದ ಮತ್ತು ಸ್ಥಳೀಯ ಶಾಸಕರ ಪುತ್ರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಸ್ಲಿಮರ ಹಿಂಸಾಚಾರ ಮತ್ತು ಹತ್ಯೆಯ ನಂತರ ಪೊಲೀಸರು ಧ್ವಜ ಮೆರವಣಿಗೆಗಳನ್ನು ನಡೆಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ!

ಮುಸ್ಲಿಮರ ಸಾವಿಗೆ ಪೊಲೀಸ್ ಅಧಿಕಾರಿಗಳು ವಿಷಾದ ಕೂಡ ವ್ಯಕ್ತಪಡಿಸಲಿಲ್ಲ. ಬದಲಾಗಿ, ಮೃತರಾದವರ ಕುಟುಂಬದವರಿಗೆ, “ಆಪಾದನೆಗಳನ್ನು ಮಾಡುವ ಮೊದಲು, ಅವರು [ಮೃತರ ಕುಟುಂಬ] ತಮ್ಮ ಮಕ್ಕಳು ಕಲ್ಲೆಸೆಯಲು ಏಕೆ ಅಲ್ಲಿಗೆ ಬಂದರು ಎಂದು ಕೇಳಬೇಕು. ಅವರು ಯಾವುದೇ ಧಾರ್ಮಿಕ ಕೆಲಸ, ಪವಿತ್ರ ಕಾರ್ಯ ಅಥವಾ ಉದ್ಯೀಗ ಮಾಡಲು ಹೋಗಿದ್ದಲ್ಲ,” ಎಂದು ಹೇಳುತ್ತಾರೆ. ಜನಸಮೂಹ ನಡೆಸಿದ ಈ ಕಲ್ಲು ತೂರಾಟ ಮತ್ತು ಗುಂಪುಗೂಡುವಿಕೆಯು ‘ಪ್ರಚೋದಿತ’ ಕೃತ್ಯವಾಗಿ ಕಂಡುಬಂದಿದೆ ಎಂದು ಪೊಲೀಸರು ಹೇಳುತ್ತಾರೆ.

ಸ್ಥಳೀಯ ಸಂಸದ ಮತ್ತು ಶಾಸಕನ ಪುತ್ರನ ವಿರುದ್ಧದ ಎಫ್‌ಐಆರ್‌ ದಾಖಲಾಗಿದೆ. ಮುಸಲ್ಮಾನರ ಮೇಲೆ ಪೊಲೀಸರು ಹೇಳುತ್ತಿರುವ ಮಾತುಗಳನ್ನು ಸಾಬೀತು ಮಾಡಲು- ಸಮೀಕ್ಷಾ ತಂಡವು ಮಸೀದಿಯನ್ನು ತಲುಪಿದ ನಂತರ ನೆರೆದಿದ್ದ ಮುಸ್ಲಿಮರು ಹಿಂಸಾಚಾರಕ್ಕೆ ಸಂಚುಕೋರರಿಂದ ಸನ್ನದ್ಧರಾಗಿದ್ದರು ಮತ್ತು ಪ್ರಚೋದಿತರಾಗಿದ್ದರು ಎಂದು ಹೇಳುತ್ತಿದ್ದಾರೆ.  ಮಸೀದಿ ಬಳಿ ಹಿಂಸಾಚಾರ ನಡೆಸಲು ಸ್ವಯಂಪ್ರೇರಿತವಾಗಿ ಜನರು ಬರುತ್ತಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇವರು ಜೈಶ್ರೀರಾಮ್‌ ಘೋಷಣೆಯ ಕೂಗುವುದನ್ನು ಕೇಳಿ ಆಕ್ರೋಶಿತರಾಗಿದ್ದರು ಎಂದು ಪೊಲೀಸರು ಹೇಳುತ್ತಾರೆ.

ಅಂದರೆ, ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತಾ ಗಲಭೆ ಎಬ್ಬಿಸಲು ಪ್ರಚೋದನೆ ಮಾಡಿದ್ದು ಮುಸಲ್ಮಾನರೇ?

ನ್ಯಾಯಾಲಯದಿಂದ ನೇಮಿಸಲ್ಪಟ್ಟ ವ್ಯಕ್ತಿಯೊಂದಿಗೆ ಜನಸಂದಣಿಯನ್ನು ಮಸೀದಿಗೆ ಬರದಂತೆ ತಡೆಯುವುದು ಮತ್ತು ಪ್ರಚೋದನಕಾರಿ ಘೋಷಣೆಗಳನ್ನು ನಿಲ್ಲಿಸುವುದು ಆಡಳಿತ ಮತ್ತು ಪೊಲೀಸರ ಕರ್ತವ್ಯವಲ್ಲವೇ? ಸರ್ವೆ ಮುಗಿಸಿ ಅಧಿಕಾರಿಗಳು ತೆರಳುವಾಗ ಜೈ ಶ್ರೀರಾಮ್ ಘೋಷಣೆಗಳು ಕೇಳಿ ಬಂದವು. ಸಮೀಕ್ಷೆ ಆಗಬೇಕಿದ್ದರೆ ಅಲ್ಲಿ ಜನಜಂಗುಳಿ ಏಕೆ ಬೇಕು? ‘ಜೈ ಶ್ರೀರಾಮ್’ ಘೋಷಣೆಗಳು ಹೇಗೆ ಬಂದವು? ಈ ರೀತಿ ಪ್ರಚೋದನೆ ನೀಡಲು ಅಧಿಕಾರಿಗಳು ಹೇಗೆ ಬಿಟ್ಟರು?

ಈ ಇಡೀ ಕೇಸ್‌ ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಒಂದು ನಿರ್ದಿಷ್ಟ ದೇವಾಲಯವು ಮೊದಲು ಮಸೀದಿಯಾಗಿತ್ತು ಎಂದು ಮುಸ್ಲಿಂ ಫಿರ್ಯಾದಿ ಕೋರ್ಟ್‌ಗೆ ಹೋಗುವ ಸನ್ನಿವೇಶವನ್ನು ಊಹಿಸಿ ಅಥವಾ ಬೌದ್ಧರು ನಿರ್ದಿಷ್ಟ ದೇವಾಲಯವು ಮೊದಲು ಬೌದ್ಧ ದೇವಾಲಯವಾಗಿತ್ತು ಎಂದು ಪ್ರತಿಪಾದಿಸಿ ಕೋರ್ಟ್‌ನ ಸಹಾಯ ಕೇಳುವ ಸನ್ನಿವೇಶವನ್ನು ಯೋಚಿಸಿ. ಈ ಅರ್ಜಿಗಳಿಗೆ ಆದ್ಯತೆ ನೀಡಿ ನ್ಯಾಯಾಲಯ ಪರಿಗಣಿಸುತ್ತದೆಯೇ? ದೇವಾಲಯ ಬರುವ ಮೊದಲು ಅಲ್ಲಿ ಬೌದ್ಧ ಚೈತ್ಯ ಅಥವಾ ಸ್ತೂಫ ಇತ್ತೇ ಎಂಬುದನ್ನು ಪತ್ತೆ ಮಾಡಲು ಸಮೀಕ್ಷೆಗೆ ಕೋರ್ಟ್‌ ಅನುಮತಿ ನೀಡುತ್ತದೆಯೇ? ಎಲ್ಲರಿಗೂ ಉತ್ತರ ಗೊತ್ತೇ ಇದೆ. ಒಂದೋ ಆ ಅರ್ಜಿಗಳು ವಜಾ ಆಗುತ್ತವೆ, ಇಲ್ಲವೇ ಅರ್ಜಿ ಹಾಕಿದವನಿಗೆ ದಂಡ ವಿಧಿಸುತ್ತಾರೆ.

ಸಂಭಾಲ್‌ನಲ್ಲಿ ಮಾಡಿದ ರೀತಿಯಲ್ಲಿಯೇ ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಸಮೀಕ್ಷೆಗಳನ್ನು ನಡೆಸಲು ಬಿಡುತ್ತವೆಯೇ ಎಂದು ನಾವು ಕೇಳಬೇಕಾಗಿದೆ. ಅರ್ಜಿ ಸಲ್ಲಿಕೆಯಾದ ತಕ್ಷಣ ಕ್ರಮಕ್ಕೆ ಆದೇಶ ನೀಡುವಷ್ಟು ನಮ್ಮ ನ್ಯಾಯಾಲಯಗಳು ಯಾವಾಗಿನಿಂದ ದಕ್ಷವಾಗಿ ಕೆಲಸ ಮಾಡಲು ಆರಂಭ ಮಾಡಿದವು? ಈ ಆದೇಶವನ್ನು ತಕ್ಷಣವೇ ಕಾರ್ಯಗತಗೊಳಿಸಲು ತನ್ನ ಎಲ್ಲಾ ಸಂಪನ್ಮೂಲಗಳನ್ನು ನೀಡುವ ಆಡಳಿತ ವ್ಯವಸ್ಥೆ ಇಷ್ಟು ಚುರುಕಾಗಿದ್ದು ಯಾವಾಗ?

ಸಂಭಾಲ್‌ನಲ್ಲಿ ನಡೆದಿರುವುದು ಇದೇ.

ಮಸೀದಿಯ ಮೊದಲು ದೇವಸ್ಥಾನವಿತ್ತು ಎಂಬುದಾಗಿ ಅದರ ಸ್ವರೂಪವನ್ನು ಖಚಿತಪಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಲಾಯಿತು. ನ್ಯಾಯಾಧೀಶರು ತಕ್ಷಣವೇ ಆಡಳಿತ ಮತ್ತು ಮಸೀದಿ ಸಮಿತಿಗೆ ನೋಟಿಸ್ ಜಾರಿ ಮಾಡದೆ, ಸಮೀಕ್ಷೆಗೆ ಆದೇಶಿಸಿದರು ಮತ್ತು ಇದಕ್ಕಾಗಿ ಒಬ್ಬ ವ್ಯಕ್ತಿಯನ್ನು ನೇಮಿಸಿದರು. ಆದೇಶ ಬಂದ ಕೆಲವೇ ಗಂಟೆಗಳಲ್ಲಿ ಸ್ಥಳೀಯ ಆಡಳಿತವು ಸರ್ವೆಗೆ ಬೇಕಾದ ವ್ಯವಸ್ಥೆ ನೀಡಿತು. ಇದು ಸ್ಥಳೀಯ ಮುಸ್ಲಿಂ ಜನರಲ್ಲಿ ಅಸಮಾಧಾನ ಮೂಡಿಸಿತು.

ಆದರೆ ಅದಾದ ಎರಡು ದಿನಗಳ ನಂತರ ಯಾವುದೇ ಪೂರ್ವ ಮಾಹಿತಿ ಇಲ್ಲದೆ ತಂಡ ಮತ್ತೆ ದೇವಸ್ಥಾನಕ್ಕೆ ಬಂತು. ಆಡಳಿತವು ಜನರ ಗುಂಪಿನ ಜೊತೆಗೂಡಿ ಮಸೀದಿಯನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಸಮೀಕ್ಷೆ ನಡೆಸಲು ಬಂದಿದ್ದ ತಂಡದ ಜೊತೆಗಿದ್ದ ಕೆಲವರು ಹೊರಹೋಗುವಾಗ ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದರು. ಇದು ಸ್ಥಳೀಯ ಮುಸ್ಲಿಮರನ್ನು ಕೆರಳಿಸಿತು. ಅವರು ಕಲ್ಲುಗಳನ್ನು ಎಸೆದರು. ಧರಣಿ ನಿರತ ಜನರ ಮೇಲೆ ನೇರವಾಗಿ ಗುಂಡು ಹಾರಿಸುತ್ತಿರುವುದನ್ನು ಪೊಲೀಸರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ನಾಲ್ವರು ಕೊಲ್ಲಲ್ಪಟ್ಟರು.

ಈಗ ಪೊಲೀಸರು ಈ ಹತ್ಯೆಯ ಹೊಣೆಯನ್ನು ಹೊತ್ತುಕೊಳ್ಳಲು ನಿರಾಕರಿಸುತ್ತಿದ್ದಾರೆ. ಈ ಹತ್ಯೆಗಳಿಗೆ ಮುಸ್ಲಿಮರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇಡೀ ಪ್ರತಿಭಟನೆಯನ್ನು ಪಿತೂರಿ ಎಂದು ಕರೆದರು. ಮುಸ್ಲಿಂ ಮುಖಂಡರ ಮೇಲೆ ಕೇಸು ಹಾಕಿದರು.

ಮುಸ್ಲಿಮರು ಸದ್ಯ ಸರ್ಕಾರ ತಮ್ಮ ವಿರುದ್ಧವಾಗಿದೆ ಎಂದು ನಂಬಿದ್ದಾರೆ. ನ್ಯಾಯಾಂಗವೂ ಅವರನ್ನು ಮೂಲೆಗೆ ತಳ್ಳುವ ಪ್ರಕ್ರಿಯೆಗಳನ್ನು ತಣ್ಣಗಾಗಿಸುತ್ತಿದೆ. ಎಲ್ಲವನ್ನೂ ಕಾನೂನುಬದ್ಧವಾಗಿ ಮಾಡಲಾಗುತ್ತಿದೆ. ಮುಸ್ಲಿಮರು ಪ್ರತಿಭಟಿಸಲು ಸಾಧ್ಯವಿಲ್ಲ, ಮಾಡಿದರೆ ಅವರು ದೇಶದ ಕಾನೂನನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸುತ್ತಾರೆ.

ಈ ನೆಲದ ಕಾನೂನಿಗೆ ಏನಾಯಿತು?- 1991 ರ ಪೂಜಾ ಸ್ಥಳಗಳ ಕಾಯಿದೆಗೆ ಏನಾಯಿತು? ಈ ಪ್ರಶ್ನೆಯನ್ನು ಬದಿಗಿಟ್ಟು ಒಂದು ರಚನೆಯ ಬಗ್ಗೆ ತಮ್ಮ ಕುತೂಹಲವನ್ನು ತಣಸಿಕೊಳ್ಳಲು ಹಿಂದೂಗಳಿಗೆ ಎಲ್ಲ ಹಕ್ಕಿದೆ ಎಂದು ಹೇಳಿದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು. ಇದರ ಅರ್ಥ, ಒಬ್ಬ ಹಿಂದು ತಾನು ಕಂಡ ಮಸೀದಿಯ ಅಡಿಯಲ್ಲಿ ದೇವಾಲಯ ಇದ್ಯಾ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿದ್ದಾನೆ, ಕಂಡ ಕಂಡ ಅನ್ಯರ ಧಾರ್ಮಿಕ ಕೇಂದ್ರಗಳಿಗೆ ಕನ್ನ ಹಾಕಬಹುದು ಎಂದೆ? ಇದಾದ ನಂತರ, ಹಿಂದುತ್ವದವರು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಭಾರತದಾದ್ಯಂತ ಮಸೀದಿಗಳು, ದರ್ಗಾಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಬಗ್ಗೆ ಕುತೂಹಲವನ್ನು ಬೆಳೆಸಲು ಪ್ರಾರಂಭಿಸಿದರು. ಚಂದ್ರಚೂಡ್ ತೋರಿದ ಉದಾಸೀನವನ್ನು, ನಿರಾಳತೆಯನ್ನು ಈಗ ಎಲ್ಲ ಪ್ರಾಥಮಿಕ ನ್ಯಾಯಾಲಯಗಳು ತೋರಿಸುತ್ತಿವೆ. ಮುಸ್ಲಿಮರು ಪ್ರತಿಭಟಿಸಲು ಮತ್ತು ವಿರೋಧಿಸಲು ಹೋದರೆ ಬಲಿಕೊಡಬೇಕಾಗಿ ಬರುವುದು ಅರ ಜೀವವನ್ನು ಮಾತ್ರ.

ಲೇಖನ: ಚರಣ್‌ ಐವರ್ನಾಡು

ಮೀಸಲಾತಿಗಾಗಿ ಆದ ಮತಾಂತರ ಸಂವಿಧಾನಕ್ಕೆ ಮಾಡಿದ ವಂಚನೆ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮೀಸಲಾತಿ ನೀತಿಯ ಪ್ರಯೋಜನಗಳನ್ನು ಪಡೆಯಲು ಮಾತ್ರ ಮತಾಂತರ ಆಗುವುದು “ಸಂವಿಧಾನಕ್ಕೆ ಮಾಡಿದ ವಂಚನೆ” ಮತ್ತು “ಯೋಜನೆಗಳ ಸಾಮಾಜಿಕ ಉದ್ದೇಶವನ್ನು ಸೋಲಿಸಿದಂತೆ” ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ನವೆಂಬರ್ 26) ಹೇಳಿದೆ.

ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಹಿಂದೂ ಧರ್ಮಕ್ಕೆ ಮತಾಂತರವಾಗಿರುವ ಕ್ರಿಶ್ಚಿಯನ್ ಮಹಿಳೆಗೆ ಪರಿಶಿಷ್ಟ ಜಾತಿ (ಎಸ್‌ಸಿ) ಪ್ರಮಾಣಪತ್ರವನ್ನು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಆರ್.ಮಹಾದೇವನ್ ಅವರನ್ನೊಳಗೊಂಡ ಪೀಠವು, ಮೇಲ್ಮನವಿದಾರರಾದ ಸಿ.ಸೆಲ್ವರಾಣಿ ಅವರು ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿರುವಾಗ ಹಿಂದೂ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

“ಈ ಪ್ರಕರಣದಲ್ಲಿ, ಪ್ರಸ್ತುತಪಡಿಸಿದ ಪುರಾವೆಗಳು ಮೇಲ್ಮನವಿದಾರನು ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಾನೆ ಮತ್ತು ನಿಯಮಿತವಾಗಿ ಚರ್ಚ್‌ಗೆ ಹಾಜರಾಗುವ ಮೂಲಕ ನಂಬಿಕೆಯನ್ನು ಸಕ್ರಿಯವಾಗಿ ಅನುಸರಿಸುತ್ತಾನೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಅದರ ಹೊರತಾಗಿಯೂ, ಅವಳು ತಾನು ಹಿಂದೂ ಎಂದು ಹೇಳಿಕೊಳ್ಳುತ್ತಾಳೆ ಮತ್ತು ಉದ್ಯೋಗದ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿ ಸಮುದಾಯದ ಪ್ರಮಾಣಪತ್ರಕ್ಕಾಗಿ ಪ್ರಯತ್ನಿಸುತ್ತಾಳೆ. ಆಕೆಯ ಇಂತಹ ದ್ವಂದ್ವ ಹಕ್ಕು ಸಮರ್ಥನೀಯವಲ್ಲ ಮತ್ತು ಬ್ಯಾಪ್ಟಿಸಮ್ ನಂತರ ಆಕೆ ತನ್ನನ್ನು ತಾನು ಹಿಂದೂ ಎಂದು ಗುರುತಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ಪೀಠ ಹೇಳಿದೆ.

“ಆದ್ದರಿಂದ, ಪರಿಶಿಷ್ಟ ಜಾತಿಯ ಧಾರ್ಮಿಕ ಸ್ಥಾನಮಾನವನ್ನು ಧರ್ಮದ ಮೂಲಕ ಕ್ರಿಶ್ಚಿಯನ್ ಆಗಿರುವ ಅರ್ಜಿದಾರರಿಗೆ ನೀಡುವುದು, ಆದರೆ ಉದ್ಯೋಗದಲ್ಲಿ ಮೀಸಲಾತಿ ಪಡೆಯುವ ಉದ್ದೇಶಕ್ಕಾಗಿ ಮಾತ್ರ ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ ಎಂದು ಹೇಳಿಕೊಳ್ಳುವುದು ಮೀಸಲಾತಿಯ ಉದ್ದೇಶಕ್ಕೆ ವಿರುದ್ಧವಾಗಿದೆ ಮತ್ತು ಸಂವಿಧಾನಕ್ಕೆ ಮಾಡಿದ ವಂಚನೆ,” ಎಂದು ಪೀಠ ಅಭಿಪ್ರಾಯ ಪಟ್ಟಿದೆ.

ಸೆಲ್ವರಾಣಿ ತಾನು ವಳ್ಳುವನ್ ಜಾತಿಗೆ ಸೇರಿದವಳು ಮತ್ತು ಹಿಂದೂ ತಂದೆ ಮತ್ತು ಕ್ರಿಶ್ಚಿಯನ್ ತಾಯಿಗೆ ಜನಿಸಿದೆ ಎಂದು ಹೇಳಿಕೊಂಡಿದ್ದಾರೆ, ಇಬ್ಬರೂ ಆ ನಂತರ ಹಿಂದೂ ಧರ್ಮವನ್ನು ಆಚರಿಸಿದರು ಎಂದು ಲೈವ್ ಲಾ ವರದಿ ಮಾಡಿದೆ. ಆಕೆಯ ತಂದೆ ಮತ್ತು ಸಹೋದರ ಎಸ್‌ಸಿ ಪ್ರಮಾಣಪತ್ರಗಳನ್ನು ಹೊಂದಿದ್ದರು ಎಂದು ಅವರು ಹೇಳಿದರು.

ಆದರೆ ಆಕೆಯ ತಂದೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾಗ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ನ್ಯಾಯಾಲಯವು ಪರಿಶೀಲಿಸಿದೆ. ಅವರು ಮತ್ತು ಅವರ ಸಹೋದರ ಇಬ್ಬರೂ ಕ್ರಮವಾಗಿ 1991 ಮತ್ತು 1989 ರಲ್ಲಿ ಬ್ಯಾಪ್ಟೈಜ್ ಆಗಿ ಮತಾಂತರ ಆದರು. ಮೇಲ್ಮನವಿದಾರನು ನಿಯಮಿತವಾಗಿ ಚರ್ಚ್‌ಗೆ ಹೋಗುವುದು ಸಹ ಕಂಡುಬಂದಿದೆ.

“ಯಾವುದೇ ಸಂದರ್ಭದಲ್ಲಿ, ಒಬ್ಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ತನ್ನ ಜಾತಿಯನ್ನು ಕಳೆದುಕೊಳ್ಳುತ್ತಾನೆ ಮತ್ತು ಆ ಜಾತಿಯ ಮೂಲಕ ಗುರುತಿಸಿಕೊಳ್ಳುವುದಿಲ್ಲ. ಮತಾಂತರದ ಅಂಶವು ವಿವಾದಾಸ್ಪದವಾಗಿರುವುದರಿಂದ, ಕೇವಲ ಹಕ್ಕುಗಿಂತ ಹೆಚ್ಚಿನವು ಇರಬೇಕು. ಯಾವುದೇ ಸಮಾರಂಭ ನಡೆಸಿ ಅಥವಾ ಆರ್ಯ ಸಮಾಜದ ಮೂಲಕ ಮತಾಂತರ ನಡೆದಿಲ್ಲ. ಯಾವುದೇ ಸಾರ್ವಜನಿಕ ಘೋಷಣೆಯನ್ನು ಮಾಡಿಲ್ಲ. ಈಕೆ ಅಥವಾ ಈಕೆಯ ಕುಟುಂಬವು ಹಿಂದೂ ಧರ್ಮಕ್ಕೆ ಮರುಮತಾಂತರಗೊಂಡಿದೆ ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ ಮತ್ತು ಇದಕ್ಕೆ ವಿರುದ್ಧವಾಗಿ, ಮೇಲ್ಮನವಿದಾರರು ಇನ್ನೂ ಕ್ರಿಶ್ಚಿಯನ್ ಧರ್ಮವನ್ನು ನಂಬುತ್ತಾರೆ ಎಂಬ ವಾಸ್ತವಾಂಶವಿದೆ. ಮೇಲೆ ಗಮನಿಸಿದಂತೆ, ಕೈಯಲ್ಲಿರುವ ಸಾಕ್ಷ್ಯವು ಮೇಲ್ಮನವಿದಾರರ ವಿರುದ್ಧವೂ ಇದೆ, ”ಎಂದು ನ್ಯಾಯಾಲಯ ಹೇಳಿದೆ.

ಸಾಧುಗಳ ವೇಷದಲ್ಲಿದ್ದವರು ಮುಸಲ್ಮಾನರೇ? Fact Check
ಸಾಧುಗಳಂತೆ ಕೇಸರಿ ಬಟ್ಟೆ ತೊಟ್ಟು ಮೂವರಲ್ಲಿ ಓರ್ವ ವ್ಯಕ್ತಿ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಹಾಗಾಗಿ ಈ ಹಿಂದೂ ಸನ್ಯಾಸಿಗಳಂತೆ ವೇಷ ಧರಿಸಿರುವವರು ಮುಸ್ಲಿಮರು ಎಂಬ ಒಂದು ವೀಡಿಯೋ ವೈರಲ್‌ ಆಗಿತ್ತು.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಈ ಕೇಸರಿ ಬಟ್ಟೆ ತೊಟ್ಟಿರುವವರಲ್ಲಿ, “ಕನಿಷ್ಠ ಒಂದು ಶ್ಲೋಕವನ್ನು (ಸಂಸ್ಕೃತದಲ್ಲಿ ಒಂದು ಶ್ಲೋಕ) ಹೇಳಿ, ಅಥವಾ ನಾವು ನಿಮ್ಮನ್ನು ಹೋಗಲು ಬಿಡುವುದಿಲ್ಲ. ನಿಮಗೆ ಎಷ್ಟು ದೇವರ ಹೆಸರುಗಳು ಗೊತ್ತು?” ಎಂದು ಕೇಳುತ್ತಾನೆ. ಇದಕ್ಕೆ ಆ ಮೂವರಲ್ಲಿ ಒಬ್ಬ ವ್ಯಕ್ತಿ, “ನಾವು ಭೋಲೆನಾಥನನ್ನು ಆರಾಧಿಸುತ್ತೇವೆ ” ಎಂದು ಉತ್ತರಿಸುತ್ತಾನೆ.

ವೀಡಿಯೋ ಮಾಡುತ್ತಿರುವ ವ್ಯಕ್ತಿ, “ನಿಮಗೆ ಒಂದೇ ಒಂದು ಹಿಂದೂ ದೇವತೆಯ ಹೆಸರು ತಿಳಿಯದಿದ್ದರೆ ನಿಮ್ಮನ್ನು ನಿಜವಾದ ಸಾಧುಗಳು ಎಂದು ಹೇಗೆ ನಂಬುವುದು,” ಎಂದು ಕೇಳುತ್ತಾರೆ. ಅಷ್ಟು ಹೊತ್ತಗೆ ಸುತ್ತಮುತ್ತ ಜನ ಸೇರುತ್ತಾರೆ, ಈ ಮೂವರು ಖಾವಿದಾರಿಗಳನ್ನು ‘ಬಾಂಗ್ಲಾದೇಶಿ’ ಮತ್ತು ‘ರೋಹಿಂಗ್ಯಾ’ ಎಂದೆಲ್ಲಾ ಬೈಯುತ್ತಾರೆ, ಕೆಲವರು ಪೆಟ್ಟು ಹೊಡೆಯಲು ಹೇಳುತ್ತಾರೆ.

ಆಮೇಲೆ ಈ ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಈ ಮೂವರು ಸಾಧುಗಳಲ್ಲಿ ಒಬ್ಬನ ಹೆಸರು ‘ಸಲ್ಮಾನ್’ ಎಂದು ಸುತ್ತಮುತ್ತ ಸೇರಿದವರಿಗೆ ಹೇಳುತ್ತಾನೆ, ಅದನ್ನು ಸಾಬೀತುಪಡಿಸಲು ಐಡಿ ಕಾರ್ಡ್‌ ಕೂಡ ತೋರಿಸುತ್ತಾನೆ.

ಗುಜರಾತಿ ನ್ಯೂಸ್ ಚಾನೆಲ್ Zee 24 Kalak (@Zee24Kalak) ನವೆಂಬರ್ 2 ರಂದು ಈ ಘಟನೆಯ ಕುರಿತು ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿದೆ: “ಸಾಧುವಿನ ವೇಷದಲ್ಲಿದ್ದ ಸಲ್ಮಾನ್ ಸಿಕ್ಕಿಬಿದ್ದಿದ್ದಾನೆ! ಸೂರತ್‌ನಲ್ಲಿ ಸಾಧು ಭಿಕ್ಷೆ ಬೇಡುತ್ತಿದ್ದ ಸತ್ಯವನ್ನು ಐಡಿ ಚೆಕ್‌ನಿಂದ ಬಯಲಾದ ವಂಚನೆ,” ಎಂದು ಟೈಟಲ್‌ ನೀಡಲಾಗಿದೆ. ( ಆರ್ಕೈವ್ )

સાધુના વેશમાં સલમાનનાથ પકડાયો! સુરતમાં ભીક્ષા માગી રહેલા સાધુનું આઇડી ચેક કરાતા ફૂટ્યો ભાંડો#Gujarat #Viral #ViralVideo #Trending #TrendingNow #India #Surat pic.twitter.com/891kz7qBdG
— Zee 24 Kalak (@Zee24Kalak) November 2, 2024

ಗೋದಿ ಮೀಡಿಯಾ OpIndia (@OpIndia_in ) ಕೂಡ Zee 24 Kalak ಅವರ ಟ್ವೀಟ್ ಇರುವ ವರದಿಯನ್ನು ಪ್ರಕಟಿಸಿದೆ.
ಜೊತಗೆ ತಮ್ಮ ಅಧಿಕೃತ X ಹ್ಯಾಂಡಲ್‌ನಲ್ಲಿ ಈ ವರದಿಯ ಲಿಂಕ್ ಅನ್ನು ಪೋಸ್ಟ್ ಮಾಡಿದೆ.  “ಸಲ್ಮಾನ್ ಮತ್ತು ಅವನ ಸಹಚರರು ಕೇಸರಿ ಬಟ್ಟೆಗಳನ್ನು ಧರಿಸಿ ಭಿಕ್ಷೆ ಬೇಡುತ್ತಿದ್ದರು. ಗುರುತಿನ ಚೀಟಿಯ ಮೂಲಕ ಅವರ ನಿಜವಾದ ಗುರುತು ಬಯಲಾಗಿದೆ. ಅವರಿಗೆ ಯಾವುದೇ ಶ್ಲೋಕವನ್ನು ಪಠಿಸಲು ಅಥವಾ ಹಿಂದೂ ದೇವರು ಮತ್ತು ದೇವತೆಗಳ ಹೆಸರನ್ನು ಸರಿಯಾಗಿ ಹೇಳಲು ಸಾಧ್ಯವಾಗಲಿಲ್ಲ,” ಎಂಬ ಟೈಟಲನ್ನು ಓಪ್‌ಇಂಡಿಯಾ ತನ್ನ X ನಲ್ಲಿ ಪೋಸ್ಟ್‌ ಮಾಡಿದೆ.

भगवा वस्त्र पहन सलमान और उसके साथी भीख माँग रहे थे। आईडी कार्ड से उनकी असली पहचान सामने आई। वे न कोई श्लोक सुना सके और न ही हिंदू देवी-देवताओं का ठीक से नाम बता सके।#surat #Muslims https://t.co/RpzS60uCZ7
— ऑपइंडिया (@OpIndia_in) November 4, 2024

ಹಿಂದಿಯಲ್ಲಿ ಇರುವ ಓಪ್‌ಇಂಡಿಯಾ ವರದಿಯ ಶೀರ್ಷಿಕೆಯಲ್ಲಿ ಹೀಗೆ ಹೇಳಲಾಗಿದೆ: “ಸಂಸ್ಕೃತ ಶ್ಲೋಕಗಳನ್ನು ಕೇಳಿದಾಗ, ಅವನು ಪ್ರಾರ್ಥಿಸಲು ಪ್ರಾರಂಭಿಸಿದನು, ಅವನಿಗೆ ಒಂದೇ ಒಂದು ಹಿಂದೂ ದೇವರ ಹೆಸರನ್ನು ಹೇಳಲು ಸಾಧ್ಯವಾಯಿತು: ಸಲ್ಮಾನ್ ಮತ್ತು ಗ್ಯಾಂಗ್ ಸೂರತ್‌ನಲ್ಲಿ ‘ಸಾಧು’ಗಳಂತೆ ಪೋಸು ಕೊಟ್ಟು ಭಿಕ್ಷೆ ಬೇಡುತ್ತಿದ್ದರು, ಈ ರಹಸ್ಯವು ಐಡಿ ಕಾರ್ಡ್‌ ಮೂಲಕ ಬಹಿರಂಗವಾಯಿತು.”

ತನ್ನ ವರದಿಯಲ್ಲಿ ಮೂವರು ವ್ಯಕ್ತಿಗಳು ‘ಸಾಧುಗಳ ವೇಷ ಧರಿಸಿ ತಿರುಗಾಡುತ್ತಿದ್ದ ಮುಸ್ಲಿಮರು’ ಮತ್ತು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು OpIndia ಹೇಳಿಕೊಂಡಿದೆ. (ಆರ್ಕೈವ್ 1, 2, 3)

ಮತ್ತೊಂದು ಕೂಗುಮಾರಿ ಚಾನೆಲ್ , ಸುದರ್ಶನ್ ನ್ಯೂಸ್ (@SudarshanNewsTV), ಈ ಘಟನೆಯ ಕುರಿತು ವೀಡಿಯೊ ವರದಿಯನ್ನು ಈ  ರೀತಿಯ ಶೀರ್ಷಿಕೆಯ ಜೊತೆಗೆ ಹಂಚಿಕೊಂಡಿದೆ: “ಗುಜರಾತ್‌ನ ಸೂರತ್‌ನಲ್ಲಿ, ‘ಜಿಹಾದಿ’ ಸಲ್ಮಾನ್ ಮತ್ತು ಅವನ ಗ್ಯಾಂಗ್ ಸಾಧುಗಳಂತೆ ಪೋಸ್ ಕೊಡುತ್ತಾ ಭಿಕ್ಷೆ ಬೇಡುತ್ತಿದ್ದರು … ಕೇಸರಿ ವಸ್ತ್ರಗಳನ್ನು ಧರಿಸಿ ಸಾಧುಗಳಂತೆ ಪೋಸು ಕೊಟ್ಟ ಈ ಮೂರು ‘ಜಿಹಾದಿಗಳು’ ಬಂಧಿಸಲಾಗಿದೆ. ( ಆರ್ಕೈವ್ )

गुजरात के सूरत में ‘साधु’ बन भीख मांग रहा था जिहादी सलमान और उसकी गैंग…

साधू वेश में भगवा वस्त्र पहन कर घूम रहे 3 जिहादी गिरफ्तार…#Surat #Gujarat pic.twitter.com/RQDu5uWvIk
— Sudarshan News (@SudarshanNewsTV) November 4, 2024

ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ (@epanchjanya) ಕೂಡ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹಿಂದಿಯಲ್ಲಿರುವ ಈ ಟ್ವೀಟ್‌ನಲ್ಲಿ, “ಸಾಧುಗಳ ವೇಷದಲ್ಲಿ ಸಿಕ್ಕಿಬಿದ್ದ ಮುಸ್ಲಿಮರು! ನೀವು ಸಾಧು ಆಗಬೇಕೆಂದಿದ್ದರೆ, ಹಿಂದೂವಾಗಿ ಯಾಕೆ ಬದಲಾಗಬಾರದು? ಸಲ್ಮಾನ್ ಎಂಬ ಮುಸ್ಲಿಂ ವ್ಯಕ್ತಿ ಕೇಸರಿ ವೇಷ ಧರಿಸಿ ಸಾಧುವಿನಂತೆ ಪೋಸು ಕೊಟ್ಟು ಭಿಕ್ಷೆ ಬೇಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನವೆಂಬರ್ 3, 2024 ರಂದು ನಡೆದಿದ್ದು, ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದೇ ಮೊದಲಲ್ಲ-ಸಾಧುಗಳ ವೇಷ ಧರಿಸಿದ ಮುಸ್ಲಿಮರು ಈ ಹಿಂದೆ 16 ಬಾರಿ ಸಿಕ್ಕಿಬಿದ್ದಿದ್ದಾರೆ!” (ಆರ್ಕೈವ್ )

साधु भेष में पकड़े गए मुस्लिम!

साधु ही बनना है तो हिन्दू क्यों नहीं बन जाते!

भगवा वस्त्र पहना हुआ मुस्लिम युवक सलमान, साधु के भेष में भीख माँगते हुए पकड़ा गया।

गुजरात के सूरत में 3 नवंबर, 2024 को ये घटना हुई जिसके बाद पुलिस ने उसे गिरफ्तार किया।

ऐसा पहली बार नहीं 16 बार हो… pic.twitter.com/3knDytJfXo
— Panchjanya (@epanchjanya) November 4, 2024

ಈ ವೀಡಿಯೋ ಫೇಸ್ಬುಕ್‌, X, ವಾಟ್ಸಾಪ್‌ ಗ್ರೂಪುಗಳಲ್ಲಿ ಜನರು ಹಂಚಿಕೊಂಡಿದ್ದಾರೆ. (ನೋಡಿ:  @ajaychauhan41 ,
@Sudanshutrivedi)

ಸತ್ಯ ಏನು?

ಸತ್ಯಾನ್ವೇಷಣೆಯ ನಂತರ ಈ ಮೂವರೂ ಸಂತರು ಹಿಂದೂಗಳು ಎಂಬುದು ಕಂಡುಬಂದಿದೆ. ದೈನಿಕ್ ಭಾಸ್ಕರ್ ಗ್ರೂಪ್‌ನ ಗುಜರಾತಿ ದಿನಪತ್ರಿಕೆ ದಿವ್ಯಾ ಭಾಸ್ಕರ್ ಈ ಬಗ್ಗೆ ವರದಿ ಮಾಡಿದೆ. ನವೆಂಬರ್ 4 ರಂದು, ಪೊಲೀಸ್ ತನಿಖೆಯ ನಂತರ ಇವರು ಮೂವರೂ ಹಿಂದೂಗಳು ಮತ್ತು ಜುನಾಗಢದಿಂದ ಬಂದವರು ಎಂದು ತಿಳಿದುಬಂದಿದೆ ಎಂದು ವರದಿ ಹೇಳುತ್ತದೆ.

ಸೂರತ್‌ನ ಅದಾಜನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್‌ಬಿ ಗೋಜಿಯಾ ಅವರು ಮೂವರು ಸನ್ಯಾಸಿಗಳನ್ನು ಅನುಮಾನಾಸ್ಪದ ವ್ಯಕ್ತಿಗಳೆಂದು ವರದಿ ಮಾಡಿದ್ದಾರೆ ಮತ್ತು ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ವಿಚಾರಣೆಯ ನಂತರ, ಪರಿಶೀಲನೆಗಾಗಿ, ಅವರ ನಿಜವಾದ ಗುರುತನ್ನು ನಿರ್ಧರಿಸಲು ಜುನಾಗಢದಲ್ಲಿ ತನಿಖೆಯನ್ನು ಪ್ರಾರಂಭಿಸಲಾಯಿತು. ಅವರು ನೀಡಿದ ಹೆಸರುಗಳು ಸತ್ಯವಾಗಿವೆ ಎಂದು ಕಂಡುಬಂದಿದೆ. ಒಬ್ಬ ವ್ಯಕ್ತಿಯ ಹೆಸರು ಸಲ್ಮನಾಥ್ ಆಗಿದ್ದು, ಆತನನ್ನು ಸಲ್ಮಾನ್‌, ಓರ್ವ ಮುಸಲ್ಮಾನ ಎಂದು ಹಿಂದೂಗಳು ಭಾವಿಸಿ ಆತನ ಮೇಲೆಗೆ ಹಲ್ಲೆಗೆ ಮುಂದಾಗಿದ್ದಾರೆ. ಆದರೆ, ಆತ ಹಿಂದೂ ಎಂಬುದು ದೃಢಪಟ್ಟಿದೆ.

Alt News ಈತನ ಮತದಾರ ಚೀಟಿಯನ್ನು ವರದಿ ಮಾಡಿದ್ದು, ಈ ಚೀಟಿಯಲ್ಲಿ ಈತನ ಹೆಸರು ಹೆಸರು ಸಲ್ಮನಾಥ್ ಪರ್ಮಾರ್ ಮತ್ತು ಅವನ ತಂದೆಯ ಹೆಸರು ಸೂರಮ್ನಾಥ್ ಪರ್ಮಾರ್ ಎಂದು ಉಲ್ಲೇಖಿಸಲಾಗಿದೆ.

ರಜಪೂತರಲ್ಲಿ ಪರ್ಮಾರ್ ಎಂಬ ಉಪನಾಮವಿದೆ. ಈ ಪರ್ಮಾರರು ಹೆಚ್ಚಾಗಿ ಉತ್ತರ ಮತ್ತು ಮಧ್ಯ ಭಾರತದಿಂದ, ವಿಶೇಷವಾಗಿ ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಮಹಾರಾಷ್ಟ್ರದಿಂದ ಬಂದವರು.

ಆದ್ದರಿಂದ ಸಾಧುವಿನ ವೇಷ ಧರಿಸಿದ ಮೂವರು ಮುಸ್ಲಿಮರು ಭಿಕ್ಷೆ ಬೇಡುತ್ತಿದ್ದಾರೆ ಎಂಬುದು ಹಸಿಹಸಿ ಸುಳ್ಳು, ಭಿಕ್ಷೆ ಬೇಡುತ್ತಿದ್ದವರು ಹಿಂದೂ ಸಾಧುಗಳೇ ಆಗಿದ್ದಾರೆ.

ಈ ರೀತಿ ಹಿಂದೂ ಸಾಧುಗಳನ್ನು ಮುಸಲ್ಮಾನರು ಎಂದು ಕರೆದು ಕಿರುಕುಳ ನೀಡಿದ್ದು ಇದೇ ಮೊದಲೇನಲ್ಲ. ಈ 2024 ರ ಜುಲೈನಲ್ಲಿ ಮೀರತ್‌ನಲ್ಲಿ ಮೂವರು ಸಾಧುಗಳ ಗುಂಪಿಗೆ ಮುಸ್ಲಿಮರು ಎಂಬ ಹಣೆಪಟ್ಟಿ ಕಟ್ಟಲಾಯಿತು. ಸಂಚಾರಿ ಸನ್ಯಾಸಿಗಳನ್ನು ಮಕ್ಕಳ ಅಪಹರಣಕಾರರು ಎಂದು ಸುಳ್ಳು ಆರೋಪ ಹೊರಿಸಿದ ಘಟನೆಗಳೂ ನಡೆದಿವೆ.

ಕೊಲೆಗಡುಕರಿಗೆ ಭವ್ಯ ಸ್ವಾಗತ l ನವಭಾರತದ ಆತಂಕಕಾರಿ ಬೆಳವಣಿಗೆ
ಇದೇ ತಿಂಗಳ 9ರಂದು ಗೌರಿ ಲಂಕೇಶ್‌ ಹಂತಕರೆಂದು ಆಪಾದಿಸಲಾಗಿರುವ ಪರಶುರಾಮ್‌ ವಾಘ್‌ಮೋರೆ ಮತ್ತು ಮನೋಹರ್‌ ಯಾದವೆ ಅವರಿಗೆ ಬೆಂಗಳೂರಿನ ಶೆಷನ್ಸ್‌ ಕೋರ್ಟ್‌ ಜಾಮೀನನ್ನು ನೀಡಿತು. ಅವರಿಬ್ಬರು ಆರು ವರ್ಷಗಳ ಕಾಲ ಕಂಬಿಯನ್ನು ಎಣಿಸಿದ್ದರು. ಇವರಿಬ್ಬರನ್ನು ವಿಜಯಪುರದಲ್ಲಿ ಕೆಲವು ಹಿಂದುತ್ವಾದಿ ಸಂಘಟನೆಗಳ ಕಾರ್ಯಕರ್ತರು “ ಭಾರತ್‌ ಮಾತಾ ಕಿ ಜೈ ʼ,” ಸನಾತನ್‌ ಧರ್ಮ್‌ ಕಿ ಜೈ” ಎಂದು ಘೋಷಣೆಗಳನ್ನು ಕೂಗುತ್ತ ಭವ್ಯ ಸ್ವಾಗತವನ್ನು ಮಾಡಿದರು! ಅವರನ್ನು ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆಯ ಬಳಿ ಕರೆದುಕೊಂಡು ಹೋಗಿ, ಕೇಸರಿ ಶಾಲುಗಳನ್ನು ಹೊದಿಸಿ, ಕೊರಳಿಗೆ ಹಾರಗಳನ್ನು ಹಾಕಲಾಯಿತು! ನಂತರ ಅವರು ದೇವಾಲಯವೊಂದಕ್ಕೆ ಭೇಟಿಯನ್ನು ನೀಡಿದರು ಎಂದು ಮಾಧ್ಯಮಗಳಲ್ಲಿ ವರದಿಯಾಯಿತು. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಯಿತು.

ನಮ್ಮ ದೇಶದಲ್ಲಿ, ಹಿಂದೂ ಮತ/ಸನಾತನ ಧರ್ಮದ ಸಂರಕ್ಷಣೆಗಾಗಿ ಹೇಯ ಕೃತ್ಯಗಳನ್ನು ಎಸಗಿದ ಕೆಲವು ಕೊಲೆಗಡುಕರು/ಅತ್ಯಾಚಾರಿಗಳಿಗೆ, ಕೆಲವು ಹಿಂದುತ್ವವಾದಿ ಸಂಘಟನೆಗಳು ಅದ್ದೂರಿ ಸ್ವಾಗತ ಹಾಗೂ ಸನ್ಮಾನವನ್ನು ಮಾಡಿದ ಅನೇಕ ಉದಾಹರಣೆಗಳಿವೆ. ಅಂತಹವರು ತಮ್ಮ ಹಿತವನ್ನು ಬದಿಗಿಟ್ಟು ತ್ಯಾಗವನ್ನು ಮಾಡಿದ್ದಾರೆ ಎಂಬರ್ಥದ ಹೇಳಿಕೆಗಳನ್ನು ಹರಿಬಿಡಲಾಗುತ್ತದೆ! ಅವರು ಸೂಪರ್‌ ಹೀರೋಗಳು ಎಂದು ಬಿಂಬಿಸಲಾಗುತ್ತದೆ. ಇವುಗಳನ್ನು ನಂಬುವ, ಸಮರ್ಥಿಸುವ ದೊಡ್ಡ ದಂಡೇ ನಮ್ಮ ನಡುವೆ ಇದೆ! ಇಂತಹ ಬೆಳವಣಿಗೆಗಳ ಸುದ್ದಿಗಳನ್ನು ಯಾವ ಬಗೆಯ ಹಿಂಜರಿತವಿಲ್ಲದೆ, ರಾಜಾರೋಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಪರಮತ ದ್ವೇಷ, ಹಿಂಸೆ ಮತ್ತು ಹತ್ಯೆಗಳನ್ನು ವಿಜೃಂಭಿಸಲಾಗುತ್ತದೆ.

ಕೆಳಗಿನ ವಿವರಣಾ ಪಟ್ಟಿಯಲ್ಲಿ ಹೀನ ಅಪರಾಧಗಳನ್ನು ಎಸಗಿದವರು/ಆಪಾದಿತರನ್ನು ಹಿಂದುತ್ವವಾದಿ ಸಂಘಟನೆಗಳು ಸನ್ಮಾನ ಮಾಡಿದ ಪ್ರಸಂಗಗಳನ್ನು ಉಲ್ಲೇಖಿಸಲಾಗಿದೆ:
ಅ) ಉತ್ತರಪ್ರದೇಶದ ಮುಝಫರ್‌ನಗರ್ನಲ್ಲಿ 2013ರಲ್ಲಿ ಕೋಮು ಹಿಂಸೆ ಜರುಗಿತು. ಸುಮಾರು 60ಕ್ಕೂ ಹೆಚ್ಚು ಮಂದಿ ಹತ್ಯೆಗಿಡಾದರು; ಸುಮಾರು 40,000 ಹೆಚ್ಚು ಮಂದಿ ನಿರ್ವಸತಿಗೆ ಒಳಗಾದರು. ಅವರಲ್ಲಿ ಹೆಚ್ಚಿನ ಮಂದಿ ಮುಸಸ್ಮಾನರಾಗಿದ್ದರು. ಕೋಮುವಾದಿ ಕೃತ್ಯಗಳಿಗೆ ಕಾರಣಕರ್ತರು ಎಂದು ಆಪಾದಿಸಲಾಗಿದ್ದ ಸಂಗೀತ್‌ ಸೋಮ್‌ ಮತ್ತು ಸುರೇಶ್‌ ರಾಣಾ ಎಂಬ ಕಾರ್ಯಕರ್ತರನ್ನು ನರೇಂದ್ರ ಮೋದಿ ಭಾಷಣ ಮಾಡಿದ ರ್ಯಾಲಿಯಲ್ಲಿ ಸನ್ಮಾನಿಸಲಾಯಿತು ಎಂದು ಮಾಧ್ಯಮಗಳಲ್ಲಿ ವರದಿಯಾಯಿತು.

ಆ) ಪುಣೆಯ ಟೆಕ್ಕಿ ಮೋಹ್ಸೀನ್‌ ಶೇಖ್‌ನನ್ನು ಕೊಲ್ಲಲಾಯಿತು. ಈತನ ಕೊಲೆಯಲ್ಲಿ ಹಿಂದೂ ರಾಷ್ಟ್ರ ಸೇನೆಯ ಮುಖ್ಯಸ್ಥನಾದ ಧನಂಜಯ್‌ ದೇಸಾಯಿಯ ಕೈವಾಡವಿದೆ ಎಂದು ಶಂಕಿಸಿ, ಆತನನ್ನು ದಸ್ತಗಿರಿ ಮಾಡಲಾಯಿತು. ಅತನಿಗೆ ʼ ಹಿಂದುತ್ವ ಶೌರ್ಯ ಪುರಸ್ಕಾರ್‌ʼ ಬಿರುದನ್ನು ನೀಡಲಾಗುವುದೆಂದು ಕೆಲವು ಹಿಂದೂ ಸಂಘಟನೆಗಳು ಘೋಷಿಸಿದವು.

ಇ) 2018ರಲ್ಲಿ ಜಮ್ಮು ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಹುಡುಗಿಯ ಮೇಲೆ ಬರ್ಬರವಾಗಿ ಗುಂಪು ಅತ್ಯಾಚಾರ ಮಾಡಿ, ಆಕೆಯನ್ನು ಕೊಲ್ಲಲಾಯಿತು. ಆ ಕೇಸಿನಲ್ಲಿ ಆಪಾದಿತರನ್ನು ಬಂಧಿಸಲಾಯಿತು. ಅವರ ಪರವಾಗಿ ಹಿಂದೂ ಏಕತಾ ಮಂಚ್‌ ಮತ್ತು ಕೆಲವು ಬಿಜೆಪಿ ನಾಯಕರು ಬಹಿರಂಗವಾಗಿ ರ್ಯಾಲಿಗಳನ್ನು ನಡೆಸಿದರು,

ಈ) ಜಾರ್ಖಂಡ್‌ನ ರಾಮ್‌ಗರ್ನಲ್ಲಿ 2017ರಲ್ಲಿ ಗೋವಿನ ಅಕ್ರಮ/ಕಳ್ಳ ಸಾಗಣೆ, ಹತ್ಯೆಯ ಕಾರಣವನ್ನು ಇರಿಸಿಕೊಂಡು ಅಲಿಮುದ್ದೀನ್‌ ಅನ್ಸಾರಿ ಎಂಬ ವ್ಯಕ್ತಿಯನ್ನು ಗುಂಪು ಹಿಂಸೆಯಲ್ಲಿ ಕೊಲ್ಲಲಾಯಿತು. ಕೆಳಹಂತದ ನ್ಯಾಯಾಲಯದಲ್ಲಿ ಎಂಟು ಮಂದಿಯನ್ನು ಆಪಾದಿತರೆಂಬ ತೀರ್ಪು ಹೊರಬಂದಿತು. ಉಚ್ಚ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ದೊರಕಿತು. 2018ರಲ್ಲಿ ಕೇಂದ್ರ ಸರ್ಕಾರದಲ್ಲಿ ಸಿವಿಲ್‌ ಏವಿಯೇಷನ್‌ ಖಾತೆಯ ರಾಜ್ಯ ಮಂತ್ರಿಯಾಗಿದ್ದ ಜಯಂತ್‌ ಸಿನ್ಹಾ ಈ ಎಂಟು ಮಂದಿಯನ್ನು ಭೇಟಿ ಮಾಡಿದ್ದಷ್ಟೇ ಅಲ್ಲದೆ ಅವರಿಗೆ ಮಾಲಾರ್ಪಣೆಯನ್ನೂ ಮಾಡಿದರು!

ಉ) ಗುಜರಾತಿನ 2002ರ ಕೋಮು ಗಲಭೆಯ ಭೀಕರ ಸಂದರ್ಭದಲ್ಲಿ ಬಿಲ್ಕಿಸ್‌ ಬಾನು ಎಂಬ ಮಹಿಳೆಯನ್ನು ಗ್ಯಾಂಗ್‌ ರೇಪ್‌ ಮಾಡಲಾಯಿತು. ಆಕೆಯ 14 ಮಂದಿ ಸಂಬಂಧಿಕರನ್ನು ಹೇಯವಾಗಿ ಹತ್ಯೆ ಮಾಡಲಾಯಿತು. ಈ ಕೇಸ್‌ನಲ್ಲಿ ಆಪಾದಿತರಾಗಿದ್ದ 11 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಯಿತು. ಆದರೆ 2022ರಲ್ಲಿ ಅವರ ಶಿಕ್ಷೆಯನ್ನು ಮೊಟಕುಗೊಳಿಸಲಾಯಿತು. ಅಗಸ್ಟ್‌ 15, 2022ರಂದು ಜರುಗಿದ ಸಮಾರಂಭವೊಂದರಲ್ಲಿ ಈ 11 ಮಾಹಾಮಾನವರಿಗೆ ಹೂಮಾಲೆಗಳನ್ನು ಹಾಕಿ, ಸಿಹಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಆರ್‌ಎಸ್‌ಎಸ್ ಗೆ ಸೇರಿದ ಅರವಿಂದ್‌ ಸಿಸೋಡಿಯಾ ಎಂಬ ವ್ಯಕ್ತಿ ದೀನ್‌ ದಯಾಳ್‌ ಟ್ರಸ್ಟ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಎಂಬ ವಿಷಯ ಮಾಧ್ಯಮಗಳಲ್ಲಿ ವರದಿಯಾಯಿತು! ನಮ್ಮ ದೇಶದ ಸ್ವಾತಂತ್ರ್ಯ ದಿನವನ್ನು ಇದಕ್ಕಿಂತ ಉತ್ತಮ ಬಗೆಯಲ್ಲಿ ಆಚರಿಸಲು ಸಾಧ್ಯವೇ?

ಊ) ಇದೇ ವರ್ಷದ ಜೂನ್‌ 30ರಂದು ಗೋವಾದ ಪೊಂಡಾದಲ್ಲಿ ಹಿಂದೂ ಜನಜಾಗೃತಿ ಸಮಿತಿ ಒಂದು ಸನ್ಮಾನ ಸಮಾರಂಭವನ್ನು ಆಯೋಜಿಸಿತು. ಅದರಲ್ಲಿ ವಿಚಾರವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಡಾ. ನರೇಂದ್ರ ಧಬೋಲ್ಕರ್‌ ಹತ್ಯೆಗೆ ಸಂಬಂಧಿಸಿದಂತೆ ಖುಲಾಸೆಗೊಂಡಿದ್ದ ಸನಾತನ ಸಂಸ್ಥೆಯ ಜೊತೆ ಸಂಪರ್ಕವಿದ್ದ ವಿಕ್ರಮ್‌ ಭಾವೆ ಮತ್ತು ಆತನ ವಕೀಲರಿಗೆ ಸನ್ಮಾನವನ್ನು ಮಾಡಲಾಯಿತು.

ಮೇಲೆ ಪ್ರಸ್ತಾಪಿಸಿರುವಂತಹ ಇನ್ನು ಅನೇಕ ಸನ್ಮಾನ ಸಮಾರಂಭಗಳು ನಮ್ಮ ದೇಶದ ಅನೇಕ ಭಾಗಗಳಲ್ಲಿ ಜರುಗಿವೆ. ಯು ಆರ್ ಅನಂತಮೂರ್ತಿ ಗತಿಸಿದಾಗ ಕೆಲವರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಇಂತಹ ಒಂದು ಮನಸ್ಥಿತಿ ಬೆಳೆಯುತ್ತಿರುವುದರ, ಬೆಳೆಸುತ್ತಿರುವುದರ ಹಿಂದೆ ಯಾವ ಶಕ್ತಿಗಳ ಕಾರಸ್ಥಾನಗಳಿವೆ? ಇದರಿಂದಾಗುವ ರಾಜಕೀಯ ಲಾಭಗಳೇನು ಎಂಬಿತ್ಯಾದಿ ಪ್ರಶ್ನೆಗಳ ಬಗೆಗೆ ಪ್ರತ್ಯೇಕವಾದ ವಿವರಣೆ ಬೇಕಿಲ್ಲ! ಡಾ,ನರೇಂದ್ರ ಧಬೋಲ್ಕರ್‌, ಗೋವಿಂದ್‌ ಪನ್ಸಾರೆ, ಎಂ ಎಂ ಕಲ್ಬುರ್ಗಿ, ಗೌರಿ ಲಂಕೇಶ್‌ ಅಂತಹ ವ್ಯಕ್ತಿಗಳ ಕಗ್ಗೊಲೆಯನ್ನು ಮಾಡಿದವರಿಗೆ, ಲಿಂಚಿಂಗ್‌ನಲ್ಲಿ ಭಾಗವಹಿಸಿದವರಿಗೆ ಸೂಕ್ತವಾದ ಶಿಕ್ಷೆ ದೊರಕುತ್ತದೆಯೇ?

ಇಂತಹ ಕೃತ್ಯಗಳನ್ನು ಖಂಡಿಸಿದರೇ, ಪ್ರಶ್ನಿಸಿದರೇ, ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಟ್ರೋಲ್‌ ಮಾಡಲಾಗುತ್ತದೆ. ಅನ್ಯಮತದವರು ಕುಕೃತ್ಯಗಳನ್ನು ಮಾಡುವುದಿಲ್ಲವೇ, ಏಕೆ ಅವುಗಳ ಬಗೆಗೆ ನೀವು ಬರೆಯುವುದಿಲ್ಲ: ಹೇಳಿಕೆಗಳನ್ನು ಕೊಡುವುದಿಲ್ಲ ಎಂಬ ವಿತ್ತಂಡ, ಅಸಂಬದ್ಧ ವಾದಗಳನ್ನು ಮುಂದಿಡಲಾಗುತ್ತದೆ. ಮಾನವತೆಯಲ್ಲಿ ನೈಜ ನಂಬಿಕೆಯಿರುವ ವ್ಯಕ್ತಿ ಎಲ್ಲ ಮತಗಳ ಮೂಲಭೂತವಾದ/ಕೋಮುವಾದಗಳನ್ನು ವಿರೋಧಿಸುತ್ತಾನೆ. ಅಂತಹ ವ್ಯಕ್ತಿ ಎಷ್ಟೇ ಬಾರಿ ತನ್ನ ಪಕ್ಷಪಾತರಹಿತ ನಿಲುವಿನ ನಿದರ್ಶನಗಳನ್ನು ನೀಡಿದರೂ, ಅವುಗಳನ್ನು ಸಾರಾಸಗಟಾಗಿ, ನಕಾರಾತ್ಮಕ ರೀತಿಯಲ್ಲಿ ಕಡೆಗಣಿಸಲಾಗುತ್ತದೆ! ಇದು ನವಭಾರತದ ಒಂದು ಬೆಳವಣಿಗೆ!

ಕೊಲೆಗಳನ್ನು ಸಂಭ್ರಮಿಸುವ ಈ ಪರಿ ವಿಕೃತಿಯೇ ಸರಿ. ಆತಂಕಕಾರಿಯಾದ ಈ ಬೆಳವಣಿಗೆ ನಮ್ಮ ಸಮ್ಮಿಳಿತ ಸಂಸ್ಕೃತಿಯ ಮೇಲೆ ಆಗುತ್ತಿರುವ ಅನೇಕ ಪ್ರಹಾರಗಳಲ್ಲಿ ಒಂದಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೂ ಇದು ಮಾರಕ!

ಬರೆದವರು: ಮ ಶ್ರೀ ಮುರಳಿ ಕೃಷ್ಣ

ಪ್ರಧಾನಿ ಮತ್ತು ರಾಷ್ಟ್ರಪತಿ ಹಿಂದುಗಳೇ ಅಲ್ಲ! – ಶಂಕರಾಚಾರ್ಯ
ಬೆಂಗಳೂರು: ಸದ್ಯದ ಬಿಜೆಪಿ ಆಡಳಿತದಲ್ಲಿ ಗೋಹತ್ಯೆ ಮುಂದುವರಿದಿದೆ ಎನ್ನುತ್ತಾ ಜ್ಯೋತಿರ್ಮಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು “ಪ್ರಧಾನಿ ಮತ್ತು ರಾಷ್ಟ್ರಪತಿ ಹುದ್ದೆಗಳಲ್ಲಿ ಕುಳಿತವರು ಹಿಂದೂಗಳಲ್ಲ,” ಎಂದು ಹೇಳಿದ್ದಾರೆ.

‘ಗೋಧ್ವಜ ಸ್ಥಾಪನಾ ಭಾರತ ಯಾತ್ರೆ’ಯ ಎರಡನೇ ದಿನವಾದ ಇಂದು ಲಕ್ನೋದಲ್ಲಿ ಮಾತನಾಡಿದ ಅವಿಮುಕ್ತೇಶ್ವರಾನಂದ್, “ಯಾವುದೇ ಒಬ್ಬ ಹಿಂದೂ ಪ್ರಧಾನಿ ಅಥವಾ ರಾಷ್ಟ್ರಪತಿ ಗೋಹತ್ಯೆ ನಿಲ್ಲಿಸಲು ಆದೇಶವನ್ನು ಹೊರಡಿಸುತ್ತಾರೆ, ಇಲ್ಲವೇ ರಾಜೀನಾಮೆ ನೀಡುತ್ತಾರೆ,” ಎನ್ನುತ್ತಾ ಆ ಹುದ್ದೆಗಳಲ್ಲಿ ಇರುವವರು “ಪ್ರದರ್ಶನಕ್ಕೆ ಇಟ್ಟಿರುವ ಲಕ್ನೋ ಆನೆಯ ಪ್ರತಿಮೆಗಳು,” ಎಂದು ಟೀಕಿಸಿದ್ದಾರೆ

ಜ್ಯೋತಿರ್ಮಠ ಶಂಕರಾಚಾರ್ಯರು ಆರಂಭಿಸಿದ ‘ಗೋಧ್ವಜ ಸ್ಥಾಪನಾ ಭಾರತ ಯಾತ್ರೆ’ ಭಾನುವಾರ ಅಯೋಧ್ಯೆಯಿಂದ ಆರಂಭಗೊಂಡಿದ್ದು, ಸೋಮವಾರ ಲಖನೌ ತಲುಪಿದ್ದು, ಇದೀಗ ಬಿಹಾರದ ಬಕ್ಸಾರ್‌ಗೆ ತೆರಳಲಿದೆ.

“ಅವರಲ್ಲಿ ಹಿಂದೂ ಯಾರು? ಯಾವ ರಾಷ್ಟ್ರಪತಿ ಹಿಂದೂ; ಯಾವ ಪ್ರಧಾನಿ ಹಿಂದೂ? ಅವರು ಹಿಂದೂಗಳಾಗಿದ್ದರೆ ಅವರ ಆಡಳಿತದಲ್ಲಿ ಗೋಹತ್ಯೆ ಮುಂದುವರಿಯುತ್ತಿತ್ತೇ? ನೀವು ಹಿಂದೂಗಳು. ನಿಮ್ಮನ್ನು ಪ್ರಧಾನಿಯನ್ನಾಗಿ ಮಾಡಿದರೆ, ನಿಮ್ಮ ಆಡಳಿತದಲ್ಲಿ ಗೋಹತ್ಯೆಯನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಪ್ರಧಾನಿ ಮತ್ತು ರಾಷ್ಟ್ರಪತಿ ಇಬ್ಬರೂ ಹಿಂದೂಗಳು ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.

ಲಕ್ನೋದ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಜ್ಯೋತಿರ್ಮಠ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ್, “ಇಲ್ಲಿಯವರೆಗೆ, ಯಾವುದೇ ಹಿಂದೂ ಈ ಹುದ್ದೆಗಳನ್ನು (ಪ್ರಧಾನಿ/ರಾಷ್ಟ್ರಪತಿ) ವಹಿಸಿಕೊಂಡಿಲ್ಲ. ಹೀಗಿದ್ದಿದ್ದರೆ ಅವರ ಅಂತರಂಗದ ಆತ್ಮಸಾಕ್ಷಿ ಇದನ್ನು (ಗೋಹತ್ಯೆ) ಮುಂದುವರಿಯುವಂತೆ ಮಾಡಲು ಬಿಡುತ್ತಿರಲಿಲ್ಲ. ಅವರು ಹುದ್ದೆಗೆ ರಾಜೀನಾಮೆ ನೀಡುತ್ತಿದ್ದರು ಇಲ್ಲವೇ, ಇಲ್ಲಿ ಗೋಹತ್ಯೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸುತ್ತಿದ್ದರು,” ಎಂದು ಹೇಳಿದ್ದಾರೆ.

“ಈಗ ಈ ಹುದ್ದೆಗಳಲ್ಲಿ ಯಾವೊಬ್ಬ ಹಿಂದೂವೂ ಕುಳಿತಿಲ್ಲ” ಎಂದೂ ಅವರು ಹೇಳಿದ್ದಾರೆ.

“ಲಕ್ನೋದ ಉದ್ಯಾನವನಗಳಲ್ಲಿರುವ ಆನೆಗಳಂತೆಯೇ… ಅವು (ನಿಜವಾದ) ಆನೆಗಳೇ? ಅವು ನಡೆಯುತ್ತವೆಯೇ? ಅವು ಪ್ರದರ್ಶನಕ್ಕೆ ಮಾತ್ರ, ಅಲ್ಲಿ ನಿಲ್ಲಿಸಲು ಮಾತ್ರ. ಲಕ್ನೋದ ಉದ್ಯಾನವನಗಳ ಆನೆಗಳು ಕೇವಲ ಪ್ರದರ್ಶನಕ್ಕಾಗಿ ಮತ್ತು ನಡೆಯಲು ಸಾಧ್ಯವಿಲ್ಲ, ಮರವನ್ನು ಮುರಿಯಲು ಸಾಧ್ಯವಿಲ್ಲ ಮತ್ತು ಸೌಂದರ್ಯವನ್ನು ನೀಡಲೂ ಸಾಧ್ಯವಿಲ್ಲ … ಅದೇ ರೀತಿಯಲ್ಲಿ, ಅವರು ಪ್ರದರ್ಶನಕ್ಕಾಗಿರುವ ಹಿಂದೂಗಳು … ನಿಜವಾದ ಹಿಂದೂಗಳಲ್ಲ. ಅವರು ಹಿಂದೂಗಳಾಗಿದ್ದರೆ, ಅವರ ಆಡಳಿತದಲ್ಲಿ ಒಂದೇ ಒಂದು ಬಾರಿಯೂ ಗೋಹತ್ಯೆ ನಡೆಯುತ್ತಿರಲಿಲ್ಲ,” ಎಂದು ಅವರು ಹೇಳಿದರು.

ಅಯೋಧ್ಯೆಯಲ್ಲಿ ‘ಗೋಧ್ವಜ ಸ್ಥಾಪನಾ ಭಾರತ ಯಾತ್ರೆ’ ನಡೆಸುವಾಗ ಗೋಹತ್ಯೆ ನಿಲ್ಲಿಸಲು ಶಕ್ತಿ ನೀಡುವಂತೆ ರಾಮ್ ಲಲ್ಲಾನ ಬಳಿ ಕೇಳಿದ್ದೇನೆ, ಗೋಹತ್ಯೆ ನಿಷೇಧ ಈಡೇರಿಸುವವರೆಗೆ ದೇವರ ದರ್ಶನಕ್ಕೆ ಹೋಗುವುದಿಲ್ಲ ಎಂದು ಶಪಥ ಮಾಡಿದ್ದೇನೆ ಎಂದು ಅವಿಮುಕ್ತೇಶ್ವರಾನಂದರು ಹೇಳಿದ್ದಾರೆ.

ಜ್ಯೋತಿರ್ಮಠ ಶಂಕರಾಚಾರ್ಯರು ಯಾತ್ರೆಯ ಪ್ರಾರಂಭಕ್ಕಾಗಿ ಭಾನುವಾರ ಅಯೋಧ್ಯೆಯಲ್ಲಿದ್ದರು ಆದರೆ ರಾಮ ಮಂದಿರಕ್ಕೆ ಭೇಟಿ ನೀಡುವುದನ್ನು ತಪ್ಪಿಸಿದರು ಮತ್ತು ಅದರ ಸಂಕೀರ್ಣವನ್ನು ಮಾತ್ರ ಪ್ರದಕ್ಷಿಣೆ ಮಾಡಿದರು.

ದೇವಾಲಯಕ್ಕೆ ಏಕೆ ಭೇಟಿ ನೀಡಲಿಲ್ಲ ಎಂಬ ಪ್ರಶ್ನೆಗೆ, ಅವಿಮುಕ್ತೇಶ್ವರಾನಂದರು, “ಭಾಗಶಃ ನಿರ್ಮಿಸಲಾದ ದೇವಾಲಯದಲ್ಲಿ ಯಾರೂ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ ಮತ್ತು ಅದರ ‘ಶಿಖರ’ ಪೂರ್ಣಗೊಂಡ ನಂತರ ದೇವಾಲಯಕ್ಕೆ ಭೇಟಿ ನೀಡುತ್ತೇನೆ,” ಎಂದು ಹೇಳಿದರು.

2024 ರ ಜನವರಿಯಲ್ಲಿ, ಅವಿಮುಕ್ತೇಶ್ವರಾನಂದರವರು ಅಪೂರ್ಣವಾಗಿರುವ ರಾಮಮಂದಿರದಲ್ಲಿ ರಾಮ ಲಲ್ಲಾನ ‘ಪ್ರಾಣ ಪ್ರತಿಷ್ಠೆ’ ಮಾಡಿದ್ದು ʼಶಾಸ್ತ್ರಗಳಿಗೆ ವಿರುದ್ಧವಾಗಿದೆʼ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ಸುದ್ದಿಯಾಗಿದ್ದರು.

ಇಂದು ಸೋಮವಾರ, “ರಾಮನ ಜೊತೆಗೆ, ನಮಗೆ ಲಕ್ಷ್ಮಣ ಜೀ ಕೂಡ ಬೇಕು – ಅದಕ್ಕಾಗಿಯೇ ನಾವು ಲಕ್ಷ್ಮಣಪುರಿಗೆ ಬಂದಿದ್ದೇವೆ (ಲಕ್ನೋದ ಹಳೆಯ ಹೆಸರು, ಇದನ್ನು ರಾಮನ ಕಿರಿಯ ಸಹೋದರ ಲಕ್ಷ್ಮಣ ಸ್ಥಾಪಿಸಿದ ಎಂದು ಪುರಾಣ ಹೇಳುತ್ತದೆ)” ಎಂದು ಹೇಳಿದರು. ಸ್ವಾಮೀಜಿ ದೇಶಾದ್ಯಂತ ಸಂಚರಿಸಲು ಯೋಜನೆ ಹಾಕಿಕೊಂಡಿದ್ದು, ಎಲ್ಲಾ ರಾಜ್ಯಗಳಲ್ಲಿ ʼಗೋಧ್ವಜʼ ಸ್ಥಾಪಿಸಲು ಯೋಜಿಸಿತ್ತಿರುವುದಾಗಿ ಹೇಳಿದ್ದಾರೆ.

‘ಯೋಗಿ ಇದ್ದರೂ ಗೋಮಾಂಸ ರಫ್ತಿನಲ್ಲಿ ಯುಪಿ ಅಗ್ರಸ್ಥಾನ – ತಿರುಪತಿ ಲಡ್ಡು ತನಿಖೆ ವಿಳಂಬ’

ಗೋಹತ್ಯೆ ನಿಷೇಧಕ್ಕೆ ಕೇಂದ್ರ ಸರಕಾರ ಕಾನೂನನ್ನು ರೂಪಿಸಬೇಕು ಎಂದಿರುವ ಜ್ಯೋತಿರ್ಮಠ ಶಂಕರಾಚಾರ್ಯರು ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸದ್ಯಕ್ಕೆ ಮಠ ತೊರೆದಿರುವುದಾಗಿ ಹೇಳಿದ್ದಾರೆ.

“ಮಹಂತ್ ಯೋಗಿ ಆದಿತ್ಯನಾಥ್ ಅವರು ಯುಪಿ ಮುಖ್ಯಮಂತ್ರಿಯಾಗಿದ್ದಾರೆ … ಹೀಗಿದ್ದೂ, ಯುಪಿ ಗರಿಷ್ಠ ಪ್ರಮಾಣದಲ್ಲಿ ಗೋಮಾಂಸ ರಫ್ತು ಮಾಡುತ್ತಿದೆ … ಬಿಜೆಪಿ ಮೊದಲು ನನ್ನ ಯಾತ್ರೆಯನ್ನು ವಿರೋಧಿಸಿತು – ಇದು ನನಗೆ ಆಶ್ಚರ್ಯವನ್ನುಂಟುಮಾಡಿತು” ಎಂದು ಅವರು ಹೇಳಿದರು.

“ನಮ್ಮನ್ನು ನಾಗಾಲ್ಯಾಂಡ್‌ನಲ್ಲಿ ನಿಲ್ಲಿಸಲಾಯಿತು, ಆದರೆ ನಾವು ಇನ್ನೂ ನಾಗಾಲ್ಯಾಂಡ್‌ಗೆ ಭೇಟಿ ನೀಡುತ್ತೇವೆ. ಇದು ಬಿಜೆಪಿಯ ದ್ವಂದ್ವ ನೀತಿ- ಇದು ನನಗೆ ಆಶ್ಚರ್ಯ ತಂದಿದೆ,” ಎಂದು ಅವರು ಹೇಳಿದರು. “ಶಂಕರಾಚಾರ್ಯರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಗೋವನ್ನು ತಿನ್ನುವುದು ಅವರ ಹಕ್ಕು ಎಂದು ಅಲ್ಪಸಂಖ್ಯಾತರು ಹೇಳಲು ಸಾಧ್ಯವಿಲ್ಲ. ಹೀಗಿದ್ದರೆ, ಅವರು ಷರಿಯಾ ಕಾನೂನು ಹೊಂದಿರುವ ದೇಶಕ್ಕೆ ಹೋಗಲಿ,” ಎಂದು ಹೇಳಿಕೆ ನೀಡಿದ್ದಾರೆ.

ತಿರುಪತಿ ಲಡ್ಡು ಪ್ರಸಾದದ ವಿಚಾರದಲ್ಲಿ ಮಾತನಾಡಿದ ಅವಿಮುಕ್ತೇಶ್ವರಾನಂದ, ಕೋಟ್ಯಂತರ ಜನ ಗೋಮಾಂಸದ ಕೊಬ್ಬಿನಂಶವಿರುವ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 18 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತದಲ್ಲಿ ತಿರುಪತಿ ಪ್ರಸಾದದ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪಿಸಿದ್ದು ಭಾರೀ ಗದ್ದಲಕ್ಕೆ ಕಾರಣವಾಯಿತು. ರೆಡ್ಡಿ ಆರೋಪಗಳನ್ನು “ಹೇಯ” ಮತ್ತು “ಶುದ್ಧ ಸುಳ್ಳು”, ಇದು ರಾಜಕೀಯ ಲಾಭಕ್ಕಾಗಿ ಸಿಎಂ ಮಾಡಿರುವ ವಿವಾದ ಎಂದು ಅವರು ಹೇಳಿದ್ದರು.

ಈ ಕುರಿತು ಮಾತನಾಡಿದ ಜ್ಯೋತಿರ್ಮಠದ ಶಂಕರಾಚಾರ್ಯರು, “ಜನ ಹಿಂದೂಗಳ ಮತವನ್ನು ಪಡೆದು ಆದರೆ ಹಿಂದೂಗಳಿಗೆ ದ್ರೋಹ ಬಗೆಯುತ್ತಿದ್ದಾರೆ. ಇವರ ಮತಗಳನ್ನು ತೆಗೆದುಕೊಂಡು ಇನ್ನೂ ಗೋಹತ್ಯೆಯನ್ನು ಮುಂದುವರಿಸಿದ್ದಾರೆ … ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿಯು ಭವಿಷ್ಯದಲ್ಲಿ ಬೆಳೆಯದಂತೆ ನೋಡಿಕೊಳ್ಳಲು ನಾವು ನಮ್ಮ ‘ಮಠ’ವನ್ನು ತೊರೆಯುತ್ತಿದ್ದೇವೆ,” ಎಂದು ಹೇಳಿದರು.

“ಈ ದೇಶದಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಚರ್ಚೆಯಲ್ಲಿರುವಾಗ, ನಾವು ರಾಜ್ಯಗಳಾದ್ಯಂತ ‘ಗೋಮಾತೆ’ಗಾಗಿ ಬೇರೆ ಬೇರೆ ಕಾನೂನುಗಳನ್ನು ಏಕೆ ಹೊಂದಿದ್ದೇವೆ?” ಎಂದು ಪ್ರಶ್ನಿಸಿದರು.

ತಿರುಪತಿಯಲ್ಲಿ ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ಸಮಿತಿಯನ್ನು ರಚಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ ಎಂದು ಜ್ಯೋತಿರ್ಮಠ ಶಂಕರಾಚಾರ್ಯರು ಟೀಕಿಸಿದ್ದಾರೆ.

“ಇದು ಸಣ್ಣ ಸಮಸ್ಯೆ ಎಂದು ನೀವು ಭಾವಿಸುತ್ತೀರಾ? ಈಗಾಗಲೇ ತನಿಖೆ ಆರಂಭವಾಗಬೇಕಿತ್ತು. ಆದರೆ ಏನಾಗುತ್ತಿದೆ? ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ? ಕೋಟ್ಯಂತರ ಹಿಂದೂಗಳ ಪರಿಶುದ್ಧತೆಗೆ ಭಂಗ ತರುವ ಯತ್ನ ನಡೆಯುತ್ತಿದೆ,” ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆಂಧ್ರಪ್ರದೇಶ ಸರ್ಕಾರ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲು ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದ ಅವರು, ಎಸ್‌ಐಟಿ ತನಿಖೆಯನ್ನು ಪೂರ್ಣಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಪ್ರಶ್ನಿಸಿದರು. “ಸಮಸ್ಯೆಯು ಹಿನ್ನಲೆಗೆ ಸರಿಬೇಕೆಂದು ಸರ್ಕಾರ ಬಯಸುತ್ತದೆಯೇ?” ಎಂದು ಕೇಳಿದ್ದಾರೆ.

ಭಾರತ ಹಿಂದೂ ರಾಷ್ಟ್ರವಲ್ಲ ಎಂಬುದು ಚುನಾವಣಾ ಫಲಿತಾಂಶದಿಂದ ನಿಜವಾಯಿತು: ಅಮರ್ತ್ಯ ಸೇನ್
ಕೋಲ್ಕತ್ತ: ಭಾರತವು ಹಿಂದೂ ರಾಷ್ಟ್ರ ಅಲ್ಲ ಎಂಬುವುದನ್ನು ಈ ಬಾರಿಯ ಲೋಕಸಭಾ ಚುನಾವಣೆಯು ನಿಜ ಮಾಡಿದೆ ಎಂದು ನೊಬೆಲ್ ‌ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದರು.

ಅಮೆರಿಕದಿಂದ ಕೋಲ್ಕತ್ತಗೆ ಬುಧವಾರ ಸಂಜೆ ಆಗಮಿಸಿದ ವೇಳೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಈ ಹಿಂದಿನ ಅವಧಿಯಲ್ಲಿ ವಿಚಾರಣೆಯಿಲ್ಲದೆ ಜನರನ್ನು ಜೈಲಿಗೆ ಹಾಕಲಾಗುತ್ತಿತ್ತು. ಜೊತೆಗೆ ಶ್ರೀಮಂತರು–ಬಡವರ ನಡುವಿನ ಅಂತರವನ್ನು ಹೆಚ್ಚಿಸುವಂತಹ ನೀತಿಗಳು ಜಾರಿಗೊಂಡಿದ್ದವು. ಅವು ಈಗಲೂ ಮುಂದುವರೆದಿವೆ ಎಂದು ಬೇಸರವ್ಯಕ್ತಪಡಿಸಿದರು.

‘ನಾನು ಚಿಕ್ಕವನಿದ್ದಾಗ ಬ್ರಿಟಿಷರು ನನ್ನ ಚಿಕ್ಕಪ್ಪಂದಿರು, ಸೋದರ ಸಂಬಂಧಿಗಳನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕುತ್ತಿದ್ದರು. ಇದರಿಂದ ಭಾರತ ಮುಕ್ತವಾಗಲಿದೆ ಎಂದು ಆಶಿಸಿದ್ದೆವು. ಆದರೆ ಕಾಂಗ್ರೆಸ್ ಆಡಳಿತದಲ್ಲಿಯೂ ಅದು ಮುಂದುವರಿದಿತ್ತು. ಆದರೆ, ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಇದು ಅವ್ಯಾಹತವಾಗಿ ನಡೆಯುತ್ತಿದೆʼ ಎಂದರು.

ಹೊಸ ಸಂಪುಟದ ಖಾತೆಗಳಲ್ಲಿ ಅಂತಹ ಬದಲಾವಣೆಗಳೇನು ಆಗಿಲ್ಲ. ಹಿಂದೆ ಇದ್ದವರೆ ಈಗ ಮುಂದುವರಿದಿದ್ದಾರೆ. ಅಲ್ಪಸ್ವಲ್ಪ ಬದಲಾವಣೆ ಮಾಡಿದರೂ ರಾಜಕೀಯವಾಗಿ ಪ್ರಬಲರಾಗಿರುವವರು ಇನ್ನೂ ಪ್ರಬಲರಾಗಿಯೇ ಉಳಿದಿದ್ದಾರೆ ಎಂದರು.

ತುಂಬಾ ಹಣ ವ್ಯಯಿಸಿ ರಾಮಮಂದಿರ ನಿರ್ಮಿಸಲಾಯಿತು. ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು.  ಆದರೆ, ಪೈಜಾಬಾದ್ ಕ್ಷೇತ್ರದಲ್ಲಿ ಇದು ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶದಲ್ಲಿ ನಡೆಯಬಾರದಿತ್ತು. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಅದರ ನೈಜ ಗುರುತನ್ನು ಬದಲಾಯಿಸುವ ಯತ್ನಗಳು ನಿರಂತರವಾಗಿ ಈ ದೇಶದಲ್ಲಿ ನಡೆಯುತ್ತಿರುತ್ತವೆ ಎಂದು ಆಶಿಸಿದರು.

ಹಿಂದೂ ಧರ್ಮ ಕುರಿತು ಹೇಳಿಕೆ: ಉದಯನಿಧಿ ಸ್ಟಾಲಿನ್‌ಗೆ ಜಾಮೀನು
ಬೆಂಗಳೂರು: ಸನಾತನ ಧರ್ಮ ಕುರಿತು ತಮಿಳುನಾಡಿನ ಸಚಿವ‌ ಉದಯನಿಧಿ ಸ್ಟಾಲಿನ್‌  ನೀಡಿದ ಹೇಳಿಕೆಯನ್ನು ಆಕ್ಷೇಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾಲಿನ್ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ‌.

“ಸನಾತನ ಧರ್ಮ ಸಾಂಕ್ರಾಮಿಕ ರೋಗ ಇದ್ದಂತೆ. ಅದನ್ನು ಬುಡ ಸಮೇತ ಕಿತ್ತು ಹಾಕಿದಾಗ ಮಾತ್ರ ದೇಶದಲ್ಲಿ ವೈಚಾರಿಕತೆ ಬೆಳೆದು ಶಾಂತಿ ನೆಲೆಸುತ್ತದೆ” ಎಂದು ಉದಯನಿಧಿ ಸ್ಟಾಲಿನ್‌ ‘ಚೆನ್ನೈನ ತೆಯನಂಪೇಟೆಯಲ್ಲಿ 2023ರ ಸೆಪ್ಟೆಂಬರ್ 3ರಂದು ನಡೆದಿದ್ದ, ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತದೆ ಎಂದು  ಬೆಂಗಳೂರಿನ ಬೆಳತ್ತೂರು ಕಾಲೋನಿಯ ವಿ.ಪರಮೇಶ್‌ ಖಾಸಗಿ ದೂರು ದಾಖಲಿಸಿದ್ದರು.

ದೂರಿನಲ್ಲಿ ‘ಸ್ಟಾಲಿನ್‌ ಹೇಳಿಕೆಯು ಸಮಾಜದಲ್ಲಿ ಅಶಾಂತಿ, ದಂಗೆ ಎಬ್ಬಿಸಲು ಪ್ರಚೋದನೆ ನೀಡುವಂತಿದೆ. ಇದರಿಂದ ನನ್ನ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗಿದೆ’ ಎಂದು ಆರೋಪಿಸದ್ದರು.

ದೂರಿನ ಅನುಸಾರ ಭಾರತೀಯ ದಂಡ ಸಂಹಿತೆ–1860ರ ಕಲಂ 153, 298 ಮತ್ತು 500ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ವಿಚಾರಣಾ ನ್ಯಾಯಾಲಯ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿತ್ತು.

ಈ ಸಂಬಂಧ ನೋಟಿಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಸಚಿವ ಉದಯ ನಿಧಿ ಸ್ಟಾಲಿನ್ ಅವರು ಮಂಗಳವಾರ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ‌ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್ ಮುಂದೆ ಖುದ್ದು ಹಾಜರಾಗಿದ್ದರು.

ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ₹5 ಸಾವಿರ ನಗದು ಹಾಗೂ ₹50 ಸಾವಿರ ಮೊತ್ತದ ಆರೋಪಿಯ ವೈಯಕ್ತಿಕ ಬಾಂಡ್ ಮೇರೆಗೆ ಜಾಮೀನು ನೀಡಿದರು. ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ.

ಉದಯನಿಧಿ ಪರ ಹೈಕೋರ್ಟ್ ವಕೀಲರಾದ ಬಾಲಾಜಿ ಸಿಂಗ್, ಚೆನ್ನೈನ ವಿಲ್ಸನ್ ಹಾಗೂ ದೂರುದಾರರ ಪರ ಕರ್ನಾಟಕ ಹೈಕೋರ್ಟ್ ವಕೀಲ ಧರ್ಮಪಾಲ್ ಹಾಜರಿದ್ದರು.