Honey trap – Peepal Media

ಎದುರಾಳಿಗಳ ಮಟ್ಟ ಹಾಕಲು ಹನಿಟ್ರಾಪ್ ಪ್ರಯೋಗ ; ಬಿಜೆಪಿ ಶಾಸಕ ಮುನಿರತ್ನ ಮೇಲೆ ಗಂಭೀರ ಆರೋಪ
ತನಗೆ ಆಗದವರ ಮಟ್ಟ ಹಾಕಲು, ಚುನಾವಣೆ ಸಂದರ್ಭದಲ್ಲಿ ಎದುರಾಳಿಗಳ ಸುಮ್ಮನಾಗಿಸಲು, ಓಟು ಗಿಟ್ಟಿಸಲು ಬಿಜೆಪಿ ಶಾಸಕ ಮುನಿರತ್ನ ಹನಿಟ್ರಾಪ್ ಮಾಡುತ್ತಿದ್ದರು. ಅದಕ್ಕಾಗಿಯೇ ಎರಡ್ಮೂರು ಪ್ರತ್ಯೇಕ ಸ್ಟುಡಿಯೋ ಸೆಟಪ್ ಕೂಡಾ ಮಾಡಿಕೊಂಡಿದ್ದಾರೆ ಎಂದು ಶಾಸಕ ಮುನಿರತ್ನ ಬೆಂಬಲಿಗ, ಜುಲೈ 23 ರ ಭಾನುವಾರ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಬಿಬಿಎಂಪಿ ಸದಸ್ಯ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.

ವೇಲು ನಾಯ್ಕರ್ ಒಂದು ಕಾಲದಲ್ಲಿ ಶಾಸಕ ಮುನಿರತ್ನ ಆಪ್ತ ವಲಯದಲ್ಲಿದ್ದು, ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದವರು. ಚುನಾವಣೆ ಸಂದರ್ಭದಲ್ಲಿ ಚುನಾವಣೆ ಎದುರಿಸುವುದು ಹೇಗೆ ಅಂದಾಗ ಈಸ್ಟಮನ್ ಕಲರ್ ಸಿನಿಮಾ ಇದೆ, ಅದನ್ನು ತೋರಿಸಿ ಓಟು ಗಿಟ್ಟಿಸೋದು ಅನ್ನೋ ಮತನ್ನು ಹೇಳಿದ್ದರು. ಇದು ಮುನಿರತ್ನ ಚುನಾವಣೆ ಎದುರಿಸೋ ರೀತಿ ಅಂತಲೇ ವೇಲು ನಾಯ್ಕರ್ ನೇರವಾಗಿ ಆರೋಪಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಕಾರ್ಪೊರೇಟರ್ ಗಳಾದ ವೇಲು ನಾಯ್ಕರ್, ಮೋಹನ್ ಕುಮಾರ್, ಶ್ರೀನಿವಾಸ್ ಮೂರ್ತಿ, ಸಿದ್ದೇಗೌಡರು ಸೇರಿದಂತೆ ನೂರಾರು ಮಂದಿ ಅವರ ಅನುಯಾಯಿಗಳು ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಆ ಕಾರ್ಯಕ್ರಮದಲ್ಲಿ ಮುನಿರತ್ನ ಮೇಲೆ ವೇಲು ನಾಯ್ಕರ್ ಮೇಲಿನಂತೆ ಆರೋಪಿಸಿದ್ದಾರೆ.

ಮುನಿರತ್ನ ನಿರ್ಮಾಪಕನಾಗಿ ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಸಚಿವರಾದ ಮೇಲೂ ಇದನ್ನೇ ಮುಂದುವರಿಸಿಕೊಂಡೇ ಬಂದಿದ್ದಾರೆ. ಅವರ ಕಚೇರಿಗಳಲ್ಲಿ ಬರೀ ಆಂಟಿಗಳೇ ಇರುತ್ತಿದ್ದರು. ವಿಕಾಸಸೌಧ, ವಿಧಾನಸೌಧ ಚೇಂಬರ್‌ನಲ್ಲೆಲ್ಲಾ ಬರೀ ಆಂಟಿಗಳೇ ಇರುತ್ತಿದ್ದರು. ಆಗದವರ ಮೇಲೆ ಹನಿಟ್ರ್ಯಾಪ್ ಮಾಡಿ ಹೆದರಿಸುವುದು ಮಾಡುತ್ತಾರೆ. ಜೆ.ಪಿ.ಪಾರ್ಕ್‌, ಡಾಲರ್ಸ್‌ ಕಾಲೋನಿಯಲ್ಲಿ ಇದಕ್ಕಾಗಿ ಒಂದು ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಹೇಗಿದ್ದರೂ ಅವರು ಸಿನಿಮಾ ನಿರ್ಮಾಪಕರಲ್ಲವೇ. ಹೀಗಾಗಿ ಹನಿಟ್ರ್ಯಾಪ್ ಮಾಡಿಸಿ ಹೆದರಿಸುತ್ತಾರೆ ಎಂಬ ಆರೋಪ ಮಾಡಿದ್ದಾರೆ.

ಮುಸ್ಲಿಂ ಉದ್ಯಮಿಯ ಹನಿಟ್ರಾಪ್ : ಹಿಂದುತ್ವವಾದಿ ಸಂಘಟನೆ ಕಾರ್ಯಕರ್ತರು ಅರೆಸ್ಟ್
ಯುವತಿಯೊಬ್ಬಳನ್ನು ಮುಂದೆ ಬಿಟ್ಟು ಹನಿಟ್ರಾಪ್ ಗೆ ತೊಡಗಿದ 8 ಮಂದಿ ಹಿಂದುತ್ವವಾದಿ ಸಂಘಟನೆ ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಹನಿಟ್ರಾಪ್ ಪ್ರಕರಣ ಈಗ ಹಿಂದುತ್ವವಾದಿ ಸಂಘಟನೆ ಕಾರ್ಯಕರ್ತರ ಬಂಧನದ ಮೂಲಕ ಬೆಳಕಿಗೆ ಬಂದಿದೆ.

ಕೇರಳ ಮೂಲದ ಮುಸ್ಲಿಂ ಉದ್ಯಮಿಯೊಬ್ಬರನ್ನು ಹನಿಟ್ರಾಪ್ ಮೂಲಕ ಬೀಳಿಸಿ ಇಲ್ಲಿಯವರೆಗೆ ಬರೋಬ್ಬರಿ 10 ಲಕ್ಷ ವಸೂಲಿ ಮಾಡಲಾಗಿದೆ. ಯುವತಿಯ ಮೂಲಕ ಉದ್ಯಮಿಯನ್ನು ಬಲೆಗೆ ಬೀಳಿಸಿ, ಆಕೆಯ ಜೊತೆಯಲ್ಲಿ ಇರುವಾಗಲೇ ಉದ್ಯಮಿಯ ವಿಡಿಯೋ ಮಾಡಿಕೊಂಡು ಆತನನ್ನು ಬ್ಲಾಕ್ಮೇಲ್ ಮಾಡಿದ 8 ಮಂದಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಮಂಗಳೂರಿನ ವಾಮಂಜೂರು ಬಳಿಯ ಮೂಡುಶೆಡ್ಡೆಯಲ್ಲಿರುವ ರೆಸಾರ್ಟ್‌ ಒಂದರಲ್ಲಿ ಕೇರಳದ ಮೂಲದ ಮುಸ್ಲಿಂ ಉದ್ಯಮಿಯನ್ನು ಕಳೆದ ಫೆಬ್ರವರಿ 16 ರಂದು ಹನಿಟ್ರ್ಯಾಪ್‌ಗೆ ಬೀಳಿಸಲಾಗಿತ್ತು. ಯುವತಿಯನ್ನು ಬಳಸಿ ನಡೆದ ಈ ಹನಿಟ್ರಾಪ್ ಪ್ರಕರಣದಲ್ಲಿ ‘ತಾವು ಹಿಂದುತ್ವವಾದಿ ಸಂಘಟನೆಯವರು, ಎಷ್ಟು ಹಣ ಇದೆಯೋ ಅಷ್ಟು ಕೊಡದೇ ಹೋದರೆ ಚಿತ್ರಿಸಿಕೊಂಡ ವಿಡಿಯೋ ವೈರಲ್ ಮಾಡಲಾಗುತ್ತದೆ’ ಎಂದು ಬ್ಲಾಕ್ಮೇಲ್ ಮಾಡಿದ್ದಾರೆ. ಪ್ರಕರಣ ನಡೆದ ಸಂದರ್ಭದಲ್ಲಿ ಮುಸ್ಲಿಂ ಉದ್ಯಮಿಗೆ ಹೊಡೆದು ಕೈಯಲ್ಲಿದ್ದ ಸಾವಿರಾರು ರೂಪಾಯಿಗಳನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು.

ಕಳೆದ ಫೆಬ್ರವರಿಯಲ್ಲಿ ಈ ಘಟನೆ ನಡೆದ ನಂತರ ಮತ್ತೆ ಅದೇ ಯುವಕರು ಕೆಲ ದಿನಗಳ ನಂತರ ಅದೇ ಉದ್ಯಮಿಗೆ ಕರೆಮಾಡಿ ಪುನಃ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಸುಮಾರು ಮೂರು ತಿಂಗಳಲ್ಲಿ ಇದು ಪದೇ ಪದೆ ಮುಂದುವರೆದಿದೆ. ಆ ನಂತರ ಇಲ್ಲಿಯವರೆಗೆ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಹಣವನ್ನು ದೋಚಿದ್ದಾರೆ ಎಂದು ಕೇರಳ ಮೂಲದ ಮುಸ್ಲಿಂ ಉದ್ಯಮಿ ತಿಳಿಸಿದ್ದಾರೆ.

ಪದೇಪದೇ ಹಣ ದೋಚುತ್ತಿದ್ದ ಯುವಕರ ಕಡೆಯಿಂದ ನೊಂದ ಉದ್ಯಮಿ ಕೊನೆಗೆ ತಾನು ಹನಿಟ್ರಾಪ್ ಗೆ ಒಳಗಾದ ಬಗ್ಗೆ ದಕ್ಷಿಣ ಕನ್ನಡದ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಯುವತಿಯ ಮೂಲದಿಂದ ತನಿಖೆ ಮುಂದುವರೆಸಿದ ಪೊಲೀಸರಿಗೆ ಬ್ಲಾಕ್ಮೇಲ್ ಮಾಡಿದ ಹಿಂದುತ್ವವಾದಿ ಸಂಘಟನೆ ಯುವಕರು ಯುವತಿಯ ನಿರಂತರ ಸಂಪರ್ಕದಲ್ಲಿ ಇರುವುದು ಕಂಡುಬಂದಿದೆ. ಹಾಗಾಗಿ ಸ್ಪಷ್ಟವಾಗಿ ಇದೊಂದು ಹನಿಟ್ರಾಪ್ ಪ್ರಕರಣ ಎಂಬುದು ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಯುವತಿ ಸೇರಿದಂತೆ ಒಟ್ಟು 8 ಮಂದಿ ಹಿಂದುತ್ವವಾದಿ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಹನಿಟ್ರಾಪ್ ನಲ್ಲಿ ಭಾಗಿಯಾದ ಆರೋಪಿಗಳು

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬೊಂದೇಲ್‌ ನಿವಾಸಿ ಪ್ರೀತಮ್‌, ಮೂಡುಶೆಡ್ಡೆ ಭಾಗದ ನಿವಾಸಿಗಳಾದ ಮುರುಳಿ, ಕಿಶೋರ್‌, ಸುಶಾಂತ್‌, ಅಭಿ, ಮೂಡುಬಿದಿರೆ ಮೂಲದ ಯುವತಿ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ.