hyderabad – Peepal Media

ಟ್ರಾನ್ಸ್‌ಜೆಂಡರ್‌ಗಳನ್ನು ಸಂಚಾರ ಸಹಾಯಕರನ್ನಾಗಿ ನೇಮಕ ಮಾಡುತ್ತಿರುವ ತೆಲಂಗಾಣ ಸರ್ಕಾರ
ಹೈದರಾಬಾದ್: ಹೈದರಾಬಾದ್ ಪೊಲೀಸರು ಬುಧವಾರ 44 ಟ್ರಾನ್ಸ್‌ಜೆಂಡರ್‌ಗಳನ್ನು ಸಂಚಾರ ಸಹಾಯಕರಾಗಿ ನೇಮಿಸಿಕೊಂಡಿದ್ದಾರೆ.

ಗೋಶಾಮಹಲ್ ಪೊಲೀಸ್ ಮೈದಾನದಲ್ಲಿ ಒಟ್ಟು 58 ತೃತೀಯಲಿಂಗಿಗಳು ಓಟ, ಉದ್ದ ಜಿಗಿತ, ಗುಂಡು ಎಸೆತ ಮುಂತಾದ ದೈಹಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಪೊಲೀಸರ ಪ್ರಕಾರ, ಆಯ್ಕೆಯಾದ 44 ಟ್ರಾನ್ಸ್‌ಜೆಂಡರ್‌ಗಳಲ್ಲಿ 29 ಮಂದಿ ಟ್ರಾನ್ಸ್- ಮಹಿಳೆಯರು ಟ್ರಾನ್ಸ್‌ಜೆಂಡರ್‌ಗಳು ಮತ್ತು ಉಳಿದ 15‌ ಮಂದಿ ಟ್ರಾನ್ಸ್- ಪುರುಷರು.

ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರ ನೇತೃತ್ವದಲ್ಲಿ ಈ ನೇಮಕಾತಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಆನಂದ್‌ ಅವರು, “ಆಯ್ಕೆಯಾದ ಟ್ರಾನ್ಸ್‌ಜೆಂಡರ್‌ಳಿಗೆ ಅವರು ತಮ್ಮ ಸಮುದಾಯಕ್ಕೆ ಮಾದರಿಯಾಗಬೇಕು ಮತ್ತು ಹೈದರಾಬಾದ್ ಪೊಲೀಸ್ ಹಾಗೂ ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ತರಬೇಕು,” ಎಂದು ಹೇಳಿದರು.

ಹೈದರಾಬಾದ್ ಟ್ರಾಫಿಕ್ ಪೊಲೀಸ್ ಇಲಾಖೆಯಲ್ಲಿ ಟ್ರಾನ್ಸ್‌ಜೆಂಡರ್‌ಗಳನ್ನು ಟ್ರಾಫಿಕ್ ಸಹಾಯಕರಾಗಿ ನೇಮಿಸಲು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಆದೇಶದ ನಂತರ ಅಧಿಕಾರಿಗಳು ನಡೆಸಿದ ಮೊದಲ ನೇಮಕಾತಿ ಇದಾಗಿದೆ.

The Telangana Govt and Hon’ble CM Shri Revanth Reddy has come out with a pathbreaking thought of mainstreaming Transgenders and integrating  them into society. Following intense discussions with their organisations over the last week, an order has been issued by government… pic.twitter.com/kXdojROOtq
— CV Anand IPS (@CVAnandIPS) December 4, 2024

ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಯುಕ್ತೆ ಅನಿತಾ ರಾಮಚಂದ್ರನ್, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿ ಗುಪ್ತಾ ಮತ್ತು ಹೈದರಾಬಾದ್ ಪೊಲೀಸ್ ಆಯುಕ್ತ ಸಿವಿ ಆನಂದ್ ಅವರು ತೃತೀಯಲಿಂಗಿಗಳೊಂದಿಗೆ ನೇಮಕಾತಿ ಕುರಿತು ಪ್ರಮುಖ ಸಭೆ ನಡೆಸಿ ಆದೇಶ ಹೊರಡಿಸಿದ್ದಾರೆ.

ಸರಕಾರದ ಸೂಚನೆ ಮೇರೆಗೆ ಗೋಶಾಮಹಲ್ ಪೊಲೀಸ್ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ನೀಡಿದ ಅಭ್ಯರ್ಥಿಗಳ ಪಟ್ಟಿಯಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಡಿಸಿಪಿ ಸೌತ್ ವೆಸ್ಟ್, ಹೋಮ್ ಗಾರ್ಡ್ ಕಮಾಂಡೆಂಟ್ ಮತ್ತು ಹೆಚ್ಚುವರಿ ಡಿಸಿಪಿ ಸಿಎಆರ್ ಅವರು ರಚಿಸಿದ ನೇಮಕಾತಿ ಸಮಿತಿಯಿಂದ ಈ ಭೌತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಟ್ರಾನ್ಸ್ಜೆಂಡರ್ಗಳಿಗಾಗಿ ಈ ಕೆಳಗಿನ ಕೆಲಸಗಳನ್ನು ಆಯೋಜಿಸಲಾಗಿದೆ.

ಆಯ್ಕೆಗೆ ನಿಗದಿಪಡಿಸಿದ ಅರ್ಹತೆಯ ಪ್ರಕಾರ, ಅಭ್ಯರ್ಥಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು, ಕನಿಷ್ಠ ಎಸ್‌ಎಸ್‌ಸಿ ಪಾಸ್ ಹೊಂದಿರಬೇಕು, ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ನೀಡಿದ ವೈಯಕ್ತಿಕ ಗುರುತಿನ ಚೀಟಿಯನ್ನು ಹೊಂದಿರಬೇಕು ಮತ್ತು ಹೈದರಾಬಾದ್ ಕಮಿಷನರೇಟ್‌ನ ಮಿತಿಯಲ್ಲಿ ಸ್ಥಳೀಯ ಅಭ್ಯರ್ಥಿಗಳಾಗಿರಬೇಕು.

ಹೈದರಾಬಾದ್‌ನಲ್ಲಿ ಟ್ರಾಫಿಕ್ ನಿರ್ವಹಣೆ ಮತ್ತು ‘ಡ್ರಂಕ್ ಅಂಡ್ ಡ್ರೈವ್’ ತಪಾಸಣೆಗಾಗಿ ಟ್ರಾನ್ಸ್‌ಜೆಂಡರ್‌ಗಳನ್ನು ಸ್ವಯಂಸೇವಕರನ್ನಾಗಿ ನೇಮಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಳೆದ ತಿಂಗಳು ಘೋಷಿಸಿದ್ದರು. ಮೊದಲ ಹಂತದಲ್ಲಿ ಗ್ರೇಟರ್ ಹೈದರಾಬಾದ್‌ನ ಜನನಿಬಿಡ ಪ್ರದೇಶಗಳಲ್ಲಿ ಟ್ರಾಫಿಕ್ ನಿರ್ವಹಿಸಲು ಅವರನ್ನು ನಿಯೋಜಿಸಲಾಗುವುದು.

తెలంగాణ ప్రభుత్వం మరియు గౌరవ ముఖ్యమంత్రి రేవంత్ రెడ్డి గారు ట్రాన్స్‌జెండర్ వ్యక్తులను సమాజంలో భాగస్వాములుగా నిలిపే గొప్ప ఆలోచనతో ముందుకు వచ్చారు. గత వారం రోజులుగా ట్రాన్స్‌జెండర్ సంఘాలతో జరిగిన సుదీర్ఘ చర్చల అనంతరం, హైదరాబాద్ ట్రాఫిక్ పోలీసులకు 50 మంది ట్రాన్స్‌జెండర్లను… pic.twitter.com/zVKtEMTkCu
— CV Anand IPS (@CVAnandIPS) December 4, 2024

ಗೃಹರಕ್ಷಕ ದಳದವರಂತೆ ಅವರ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇವರನ್ನು ಟ್ರಾಫಿಕ್ ಛೇದಕಗಳಲ್ಲಿ ನಿಯೋಜಿಸಲಾಗಿದೆ ಮತ್ತು ಸಿಗ್ನಲ್ ಜಂಪಿಂಗ್ ಹಾಗೂ ಇತರ ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಯುವ ಕೆಲಸವನ್ನು ನೀಡಲಾಗಿದೆ. ಡ್ರಂಕ್ ಅಂಡ್ ಡ್ರೈವ್ ತಪಾಸಣೆಗೆ ಟ್ರಾನ್ಸ್‌ಜೆಂಡರ್‌ ಸಂಚಾರ ಸಹಾಯಕರನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಟ್ರಾನ್ಸ್‌ಜೆಂಡರ್‌ಗಳಿಗೆ ವಿಶೇಷ ಡ್ರೆಸ್ ಕೋಡ್ ಅನ್ನು ಅಂತಿಮಗೊಳಿಸಬೇಕು ಮತ್ತು ಗೃಹರಕ್ಷಕರ ವೇತನಕ್ಕೆ ಸಮಾನವಾಗಿ ವೇತನವನ್ನು ನಿಗದಿಪಡಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. 10 ದಿನಗಳ ಕಾಲ ಸಂಚಾರ ನಿರ್ವಹಣೆಗೆ ಅಗತ್ಯವಿರುವ ತರಬೇತಿ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಅಪ್ಪ ಪ್ರೀತಿಯಿಂದ ತಂದ ವಿದೇಶದ ಚಾಕಲೇಟ್‌ನಿಂದಲೇ ಮಗನ ಸಾವು
ಹೈದರಾಬಾದ್‌: ತಂದೆ ವಿದೇಶದಿಂದ ತಂದ ಚಾಕಲೇಟ್‌ ತಿನ್ನಲು ಹೋಗಿ ಒಂಭತ್ತು ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ದುರಂತ ಘಟನೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದಿದೆ.

ಬಾಲಕನ ತಂದೆ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬರುವಾಗ ಅಲ್ಲಿಂದ ಅವರ ಮಕ್ಕಳಿಗೆಂದು ಚಾಕಲೇಟ್‌ ತಂದಿದ್ದಾರೆ. ಅದನ್ನು 9 ವರ್ಷದ ಸಂದೀಪ್‌ ಸಿಂಗ್‌ ಶಾಲೆಗೆ ತೆಗೆದುಕೊಂಡು ಹೋಗಿದ್ದನು. ಶಾಲೆಯಲ್ಲಿ ಚಾಕಲೇಟ್‌ ತಿನ್ನುವಾಗ ಅವನ ಗಂಟಳಲ್ಲಿ ಸಿಲುಕಿ ಉಸಿರುಗಟ್ಟಿಒದ್ದಾಡಿದ್ದಾರೆ. ವಿಷಯ ತಿಳಿದ ಶಿಕ್ಷಕಿ ಶಾಲಾ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ತಕ್ಷಣವೇ ಅಲ್ಲಿನ ಎಂಜಿಎಂ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಚಿಕಿತ್ಸೆ  ಫಲಕಾರಿಯಾಗದೆ ಬಾಲಕ ಮೃತ ಪಟ್ಟಿದ್ದಾನೆ.

ಸಂದೀಪ್‌ ಸಿಂಗ್‌ ಬಾಲಕ ನಗರದ ಶಾರದಾ ಪ್ರೌಢಶಾಲೆಯಲ್ಲಿ 2 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 9 ವರ್ಷದ ಪುಟ್ಟ ಬಾಲಕನಾಗಿದ್ದಾನೆ.

ಬಾಲಕನ ತಂದೆ ಕಂಗನ್‌ ಸಿಂಗ್‌ ಅವರು ಮೂಲತಃ ರಾಜಸ್ಥಾನದವರಾಗಿದ್ದು, ಎಲೆಕ್ಟ್ರಿಕಲ್‌ ಅಂಗಡಿ ನಡೆಸುತ್ತಿದ್ದು, ಕಳೆದ 20 ವರ್ಷಗಳಿಂದ ವಾರಂಗಲ್‌ನಲ್ಲಿ ತನ್ನ ಕುಟುಂಬದೊಂದಿಗೆ ಬಂದು ನೆಲೆಸಿದ್ದರು. ಆದರೆ ಮಗನಿಗೆಂದು ಪ್ರೀತಿಯಿಂದ ತಂದ ಚಾಕಲೇಟ್‌ ಅವನ ಸಾವಿಗೆ ಕಾರಣವಾಗಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು
ಹೈದರಾಬಾದ್: ಮಂಚಾಲ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತೆಲಂಗಾಣದ ವ್ಯಕ್ತಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ವಿಶೇಷ ನ್ಯಾಯಾಲಯ ಗುರುವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಂಚಲ್ ನಿವಾಸಿ ದುಸಾರಿ ರಾಜು ಅಲಿಯಾಸ್ ಕಟಾಮ್ ರಾಜು ಎಂದು ಗುರುತಿಸಲಾದ ಆರೋಪಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಹರಿಶಾರವರು ಆರೋಪಿಯನ್ನು ದೋಷಿ ಎಂದು ಗುರುತಿಸಿದ್ದು, ಆತನಿಗೆ ₹ 20,000 ದಂಡ ವಿಧಿಸಿದ್ದಾರೆ.

ಈ ಪ್ರಕರಣ 2016ಕ್ಕೆ ಸಂಬಂಧಿಸಿದೆ. ಫೆಬ್ರವರಿ 5 ರಂದು ಮಂಚಲ್ ಪೊಲೀಸರು 24 ವರ್ಷದ ದೂರುದಾರನಿಂದ ದೂರು ಸ್ವೀಕರಿಸಿದ್ದು, ಅದರಲ್ಲಿ ಕತಮ್ ರಾಜು ತನ್ನ 4 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.

ಫೆಬ್ರವರಿ 3 ರಂದು ಮಂಚಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಕಟಮ್ ರಾಜು ಮಗುವಿಗೆ ಹಣ ನೀಡುವ ನೆಪದಲ್ಲಿ, ಹತ್ತಿರದ ಮನೆಗೆ ಕರೆದೊಯ್ದು ಆಟವಾಡುತ್ತಿದ್ದಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ʼಫೆಬ್ರವರಿ 4 ರಂದು, ಆರೋಪಿಯು ಮತ್ತೊಮ್ಮೆ ಹಣವನ್ನು ಆಮಿಷವೊಡ್ಡಲು ಪ್ರಯತ್ನಿಸಿದನು, ಆದರೆ ಹುಡುಗಿ ಅವನಿಂದ ಓಡಿಹೋಗಿ ಇಡೀ ಘಟನೆಯನ್ನು ತನ್ನ ತಾಯಿಗೆ ವಿವರಿಸಿದಳುʼ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ದೂರಿನ ಆಧಾರದ ಮೇಲೆ ಮಂಚಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಸಮಯದಲ್ಲಿ, ಮಂಚಲ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಸಾಕ್ಷ್ಯಗಳನ್ನು ಸಂಗ್ರಹಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʼತನಿಖೆ ನಡೆದ ನಂತರ, ಇನ್ನೊಬ್ಬ ಪೊಲೀಸ್ ಅಧಿಕಾರಿ ಎಂ ಗಂಗಾಧರ್ ಅವರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆʼ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಪ್ರಕರಣದ ವಿಚಾರಣೆ ನಡೆಸಿದ ಎಲ್ ಬಿ ನಗರ ನ್ಯಾಯಾಧೀಶ ಹರಿಶಾ ಅವರ ವಿಶೇಷ ಪೋಕ್ಸೊ ನ್ಯಾಯಾಲಯವು ಆರೋಪಿ ದುಸಾರಿ ರಾಜುಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಿದೆ.

ತೆಲುಗು ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ
ಹೈದರಾಬಾದ್: ತೆಲುಗು ಚಿತ್ರರಂಗವನ್ನು 70-80 ದಶಕಗಳಲ್ಲಿ ತನ್ನದೇ ಆದ ವಿಶಿಷ್ಟ ನಟನೆಯ ಮೂಲಕ ಆಳಿದಂತಹ ಸೂಪರ್ ಸ್ಟಾರ್ ಕೃಷ್ಣ ಇಂದು ಬೆಳಿಗ್ಗೆ 4:10 ಸಮಯಕ್ಕೆ ಸರಿಯಾಗಿ ಹೈದರಾಬಾದ್ ನಗರದ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅಗಲಿರುವುದು ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಎನ್‌ಟಿಆರ್ ಏಎನ್ಆರ್ ಅವರ ಕಾಲದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃಷ್ಣ ಈ ಇಬ್ಬರು ಮೇರು ನಟರೊಂದಿಗೆ ಸೆಡ್ಡು ಹೊಡೆದು ಚಿತ್ರರಂಗದಲ್ಲಿ ನೆಲೆಯೂರಿದ್ದು ಸಾಮಾನ್ಯ ವಿಷಯವಲ್ಲ. ಹಾಗಾಗಿ ಇವರಿಗೆ ಸೂಪರ್ ಸ್ಟಾರ್ ಎಂಬ ಬಿರುದು ಮಾತ್ರವಲ್ಲದೆ ಛಲಗಾರ ಎಂಬುದೂ ಸಹ ಇವರ ಮನೆಯ ಹೆಸರಾದಂತೆ ಆಗಿತ್ತು.

ಸರಿ ಸುಮಾರು 55 ವರ್ಷಗಳು ತೆಲುಗು ಚಿತ್ರರಂಗದ ಸೇವೆ ಸಲ್ಲಿಸಿರುವ ಸೂಪರ್ ಸ್ಟಾರ್ ಕೃಷ್ಣ 350 ಸಿನಿಮಾಗಳಲ್ಲಿ ನಟಿಸಿದ್ದು, ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜರಾಗಿದ್ದಾರೆ.

2022 ರ ಇದೇ ಜನವರಿಯಂದು ತಮ್ಮ‌ ಮೊದಲ ಮಗನಾದ ರಮೇಶ್ ಬಾಬು ಅವರು ಮೃತರಾಗಿದ್ದರು. ಇತ್ತೀಚೆಗೆಷ್ಟೇ ತಮ್ಮ ಮೊದಲ ಪತ್ನಿಯಾದ ಇಂದಿರಾ ದೇವಿ ಅವರನ್ನು ಕಳೆದುಕೊಂಡಿದ್ದರು. ಈ ಹಿಂದೆ 2019 ರಲ್ಲಿ ತಮ್ಮ ಎರಡನೇ ಪತ್ನಿಯಾದ ವಿಜಯ ನಿರ್ಮಲರನ್ನು ಕಳೆದುಕೊಂಡಿದ್ದರು.

ಇದೀಗ ತಾವೇ ಕಾಲದ ಕರೆಗೆ ಓಗೊಟ್ಟು ಹೊರಟಿರುವುದು ಮಹೇಶ್ ಬಾಬು ಅವರಿಗೆ ದಿಕ್ಕು ತೋಚದಂತಾಗಿದೆ.

ಇಂದು ಕೃಷ್ಣ ಅವರ ಪಾರ್ಥೀವ ಶರೀರ ಅಭಿಮಾನಿಗಳ ವೀಕ್ಷಣೆಗಾಗಿ ಇರಿಸಿ ನಾಳೆಯ ದಿನ ಅಂತ್ಯಸಂಸ್ಕಾರ ಮಾಡುವುದಾಗಿ ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ‌.

ಕೃಷ್ಣ ಅವರ ಅಗಲಿಕೆಗೆ ರಾಷ್ಟ್ರದ ಬಹುತೇಕ ಸ್ಟಾರ್ ನಟರು ವಿಷಾದ ವ್ಯಕ್ತಪಡಿಸಿದ್ದು, ತೆಲುಗು ಚಿತ್ರರಂಗದ ನಟ ನಟಿಯರು ಮಹೇಶ್ ಬಾಬು ಅವರಿಗೆ ಸಾಂತ್ವನ ತಿಳಿಸುತ್ತಿದ್ದಾರೆ.

ಚೀನೀ ಕಂಪನಿಗಳಿಗೆ ನಕಲಿ ನಿರ್ದೇಶಕರ ನೇಮಕ : ಎಂಸಿಎ ದಾಳಿ
ನವದೆಹಲಿ: ನೂರಾರು ಚೀನೀ ಶೆಲ್ ಕಂಪನಿಗಳಿಗೆ ನಕಲಿ ನಿರ್ದೇಶಕರನ್ನು ಒದಗಿಸುವ ಭಾರತೀಯ ಸಂಸ್ಥೆಗಳ ಮೇಲೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ(ಎಂಸಿಎ)ದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ದೆಹಲಿ, ಗುರುಗ್ರಾಮ್, ಬೆಂಗಳೂರು ಮತ್ತು ಹೈದರಾಬಾದ್‌ ಸೇರಿದಂತೆ, ಪ್ರತಿ ಸ್ಥಳದಲ್ಲಿ 25 ರಿಂದ 30 ಅಧಿಕಾರಿಗಳು ದಾಳಿ ನಡೆಸುತ್ತಿದ್ದು, ದಾಳಿಗಳು ಮುಂದುವರೆದಿರುವ ಕಾರಣ ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮುಸ್ಲಿಮರ ಆಕ್ರೋಶಕ್ಕೆ ಕಾರಣವಾದ ʼಮಸೀದಿ ನೆಲಸಮʼ ಕಾರ್ಯಾಚರಣೆ
ಹೈದರಾಬಾದ್: ಶಂಶಾಬಾದ್‌ನಲ್ಲಿ ನಿರ್ಮಿಸಲಾಗಿದ್ದ ಮಸೀದಿಯೊಂದನ್ನು ನಗರಪಾಲಿಕೆ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಈ ಘಟನೆ ಸ್ಥಳೀಯ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರತಿಭಟನೆ ನಡೆಸಿದ್ದಾರೆ.

ಹೊರವಲಯದ ಶಂಶಾಬಾದ್‌ನ ಗ್ರೀನ್ ಅವಿನ್ಯೂ ಕಾಲೋನಿಯಲ್ಲಿ ನಿರ್ಮಿಸಲಾಗಿದ್ದ
ಮಸ್ಜಿದ್–ಇ–ಖಾಜಾ ಮಹ್ಮೂದ್ ಮಸೀದಿಯನ್ನು ನಿಗದಿತವಲ್ಲದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಗ್ರೀನ್ ಅವಿನ್ಯೂ ಕಾಲೋನಿಯ ನಿವಾಸಿಗಳು ಶಂಶಾಬಾದ್ ನಗರಪಾಲಿಕೆಗೆ ದೂರು ನೀಡಿದ್ದರು. ಹೀಗಾಗಿ ನಗರಪಾಲಿಕೆ ಅಧಿಕಾರಿಗಳು ಮಸೀದಿಯನ್ನು ಅನಧಿಕೃತವಾಗಿ ನಿರ್ಮಿಸಿರುವ ಕುರಿತು ದೂರು ಬಂದ ಬಳಿಕ,  ಬಿಗಿ ಪೊಲೀಸ್ ಭದ್ರತೆಯಲ್ಲಿ ಮಂಗಳವಾರ ಬೆಳಗ್ಗೆ ನೆಲಸಮ ಕಾರ್ಯಚರಣೆ ಮಾಡಿದ್ದಾರೆ.

Locals offered Namaz after Masjid Khaja Mehboob being razed to the ground by Shamshabad Municipality.#shamshabadmasjid #Shamshabad #Hyderabad #hyderabadairport pic.twitter.com/6akTU6UPOA
— Deccan Daily (@DailyDeccan) August 2, 2022

ಮಸೀದಿ ನೆಲಸಮ ಕಾರ್ಯಾಚರಣೆಯನ್ನು ವಿರೋಧಿಸಿ  ʼಆಲ್ ಇಂಡಿಯಾ ಮಜ್ಲಿಸ್–ಇ–ಇತ್ತೆಹಾದುಲ್ ಮುಸ್ಲಿಮೀನ್ʼ (ಎಐಎಂಐಎಂ) ಮತ್ತು ʼಮಜ್ಲಿಸ್ ಬಚಾವೊ ತೆಹ್ರೀಕ್ʼ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಂಬಿಟಿ ನಾಯಕ ಅಮ್ಜೆದುಲ್ಲಾ ಖಾನ್, ಗ್ರೀನ್ ಅವೆನ್ಯೂ ಕಾಲೋನಿ 15 ಎಕರೆ ಜಾಗದಲ್ಲಿ ಶಂಶಾದ್ ಗ್ರಾಮ ಪಂಚಾಯಿತಿಯಿಂದ ಸೂಕ್ತ ಅನುಮತಿ ಪಡೆದು ಪ್ಲಾಟ್ ಮಾಡಿ ಮಾರಾಟ ಮಾಡಲಾಗಿತು. 250 ಚದರ ಗಜಗಳ ಎರಡು ಪ್ಲಾಟ್‌ಗಳನ್ನು ಮಸೀದಿಗಾಗಿ ಒಂದು ನಿವೇಶನ ಎಂದು ಗುರುತಿಸಿ, ಮೂರು ವರ್ಷಗಳ ಹಿಂದೆ ಮಸೀದಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಶುಕ್ರವಾರದ ಪ್ರಾರ್ಥನೆ ಸೇರಿದಂತೆ ಪ್ರತಿದಿನ ಐದು ಬಾರಿ ನಮಾಜ್‌ಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ.  ಆದರೆ ಮಸೀದಿಯ ಪಕ್ಕದಲ್ಲಿ ಮನೆ ಹೊಂದಿರುವ ವ್ಯಕ್ತಿಯೊಬ್ಬರು ಇತರ ಕೆಲವು ನಿವಾಸಿಗಳೊಂದಿಗೆ, ಮಸೀದಿ ನಿರ್ಮಾಣದ ವಿರುದ್ಧ ಶಂಶಾದ್ ಪುರಸಭೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪುರಸಭೆ ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಕಟ್ಟಡ ಕೆಡವಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Locals are angry over the demolition of Mosque Khaja Mehmood under Shamshabad Municipality.#muslimsmatters #HyderabadMasjidDemolished #shamshabadmasjid pic.twitter.com/eEMXQhMzt1
— Deccan Daily (@DailyDeccan) August 2, 2022