I.N.D.I.A – Peepal Media

ದೆಹಲಿ, ಗುಜರಾತ್ ಮತ್ತು ಹರಿಯಾಣ ಕಾಂಗ್ರೆಸ್–ಎಎಪಿ ಸೀಟು ಹಂಚಿಕೆ ಅಂತಿಮ ಸಾಧ್ಯತೆ
ನವದೆಹಲಿ: ಲೋಕಸಭಾ ಚುನಾವಣೆಗೆ ದೆಹಲಿ, ಗುಜರಾತ್, ಹರಿಯಾಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಮತ್ತು ಎಎಪಿ ನಡೆಸಿರುವ ಸೀಟು ಹಂಚಿಕೆ ಮಾತುಕತೆ ಬಹುತೇಕ ಮುಕ್ತಾಯವಾಗಿದ್ದು, ಘೋಷಣೆಯಷ್ಟೇ ಬಾಕಿ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ, ವಾಯವ್ಯ ದೆಹಲಿ ಹಾಗೂ ನವದೆಹಲಿ ಸ್ಥಾನಗಳಲ್ಲಿ ಎಎಪಿ ಸ್ಪರ್ಧಿಸಲಿದೆ. ಚಾಂದಿನಿ ಚೌಕ್‌, ಪೂರ್ವ ದೆಹಲಿ ಮತ್ತು ಈಶಾನ್ಯ ದೆಹಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂದು ಎಎಪಿ ಮೂಲಗಳು ಮಾಹಿತಿ ನೀಡಿವೆ.2019ರ ಲೋಕಸಭೆ ಚುನಾವಣೆಯಲ್ಲಿ ಇಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತ್ತು.

ಹರಿಯಾಣದಲ್ಲಿ ಒಂದು ಹಾಗೂ ಗುಜರಾತ್‌ನಲ್ಲಿ ಎರಡು ಸ್ಥಾನಗಳನ್ನು ಎಎಪಿಗೆ ಬಿಟ್ಟುಕೊಡಲು ಕಾಂಗ್ರೆಸ್‌ ನಿರ್ಧಾರ ಮಾಡಿದೆ ಎನ್ನಲಾಗಿದೆ. ಅದರಂತೆ ಹರಿಯಾಣದಲ್ಲಿ ಗುರುಗ್ರಾಮ ಇಲ್ಲವೇ ಫರಿದಾಬಾದ್‌ ಎಎಪಿ ಪಾಲಾಗಲಿದೆ. ಗುಜರಾತ್‌ನಲ್ಲಿ ಭರೂಚ್‌ ಹಾಗೂ ಭಾವನಗರ ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆದಿದೆ. ಕಾಂಗ್ರೆಸ್‌ನ ಪ್ರಬಲ ನಾಯಕರಾಗಿದ್ದ ದಿವಂಗತ ಅಹ್ಮದ್‌ ಪಟೇಲ್‌ ಅವರ ಮಗ ಹಾಗೂ ಮಗಳು ಭರೂಚ್‌ ಕ್ಷೇತ್ರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.

ಎಎಪಿ ಸಂಚಾಲಕರು ಹಾಗೂ ದೆಹಲಿ ಮುಖ್ಯಮಂತ್ರಿ ಹಾಗೂ ಆಗಿರುವ ಅರವಿಂದ ಕೇಜ್ರಿವಾಲ್‌ ಅವರು, ಮೈತ್ರಿ ಕುರಿತ ಮಾತುಕತೆ ವಿಳಂಬವಾಗುತ್ತಿದೆ ಎಂದು ಬುಧವಾರ ಹೇಳಿದ್ದರು. ಇನ್ನೆರಡು ದಿನಗಳಲ್ಲಿ ಹೊಸ ಬೆಳವಣಿಗೆಗಳು ನಡೆಯಬಹುದು ಎಂದು ಅವರು ಮುನ್ಸೂಚನೆ ನೀಡಿದ್ದರು.

ಗೋವಾದ ಬೆನೌಲಿಮ್‌ ಶಾಸಕ ವೆಂಜಿ ವೀಗಸ್‌ ಅವರು ದಕ್ಷಿಣ ಗೋವಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಗುಜರಾತ್‌ನ ಶಾಸಕರಾದ ಚೈತರ್‌ ವಾಸವ ಮತ್ತು ಉಮೇಶ್‌ಭಾಯ್‌ ಮಕ್ವಾನ ಕ್ರಮವಾಗಿ ಭರೂಜ್‌ ಮತ್ತು ಭಾವನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಈ ತಿಂಗಳ ಆರಂಭದಲ್ಲೇ ಘೋಷಿಸಲಾಗಿತ್ತು. ಅಸ್ಸಾಂನ ಮೂರು ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಮೊದಲೇ ಪ್ರಕಟಿಸಲಾಗಿತ್ತು.

ಗುಜರಾತ್‌ನಲ್ಲಿ 26 ಹಾಗೂ ಹರಿಯಾಣದಲ್ಲಿ 10 ಲೋಕಸಭೆ ಕ್ಷೇತ್ರಗಳಿವೆ. ಸಾರ್ವತ್ರಿಕ ಚುನಾವಣೆಯು ಏಪ್ರಿಲ್‌–ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಇನ್ನುಳಿದ ಕೆಲವು ಕ್ಷೇತ್ರಗಳಿಗೂ ಮುಂದಿನ ಹಂತದಲ್ಲಿ ಮಾತುಕತೆ ನಡೆಯಲಿದೆ.

ಷರತ್ತುಗಳೊಂದಿಗೆ I.N.D.I.A ಭಾಗವಾಗಲಿರುವ BSP!
ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ BSP ಪಕ್ಷ, ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (I.N.D.I.A) ಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದೆ. ಈ ವರೆಗೆ I.N.D.I.A ಬಣದ ಭಾಗವಲ್ಲದ ಬಹುಜನ ಸಮಾಜ ಪಕ್ಷ (BSP) ಕೆಲವು ಪ್ರಮುಖ ಷರತ್ತುಗಳೊಂದಿಗೆ ಮೈತ್ರಿಗೆ ಸೇರುವ ಬಗ್ಗೆ ಮಾಹಿತಿ ನೀಡಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ 10 ಸ್ಥಾನಗಳನ್ನ ಗೆದ್ದಿತ್ತು. ಈಗ ಹಲವು ಷರತ್ತುಗಳೊಂದಿಗೆ ಮತ್ತೊಮ್ಮೆ INDIA ಮಿತ್ರಪಕ್ಷಗಳ ಜೊತೆಗೆ BSP ಮೈತ್ರಿ ಮಾಡಿಕೊಳ್ಳಲಿದೆ.

ಬಿಎಸ್ಪಿ ಸಂಸದ ಮಲೂಕ್ ನಗರ್ ಗುರುವಾರ ಮಾತನಾಡಿ, “ಮಾಯಾವತಿ ಜಿ ಅವರನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು” ಎಂದು ಹೇಳಿದರು. ಕುತೂಹಲಕಾರಿ ಸಂಗತಿಯೆಂದರೆ, ಎನ್ಡಿಎ ಮತ್ತು ಎನ್ಡಿಎ ಬಣಗಳೆರಡೂ ಬಡವರ ವಿರೋಧಿ, ಜಾತಿವಾದಿ, ಕೋಮುವಾದಿ, ಶ್ರೀಮಂತರ ಪರ ಮತ್ತು ಬಂಡವಾಳಶಾಹಿ ನೀತಿಗಳನ್ನ ಹೊಂದಿರುವ ಪಕ್ಷಗಳನ್ನು ಒಳಗೊಂಡಿವೆ, ಇದರ ವಿರುದ್ಧ ಬಿಎಸ್ಪಿಯ ಹೋರಾಟ ಮುಂದುವರೆದಿದೆ ಎಂದು ಮಾಯಾವತಿ ಹೇಳಿದ್ದಾರೆ.

ಈ ನಡುವೆ INDIA ಮಿತ್ರಪಕ್ಷಗಳು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ತಮ್ಮ ಪ್ರಧಾನಿ ಅಭ್ಯರ್ಥಿ ಎಂಬ ಅಭಿಪ್ರಾಯ ಹೊಂದಿವೆ.