Inauguration – Peepal Media

ಪ್ರಧಾನಿ ಮೋದಿ ಇಂದ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ ಲೋಕಾರ್ಪಣೆ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಲೋಕಾರ್ಪಣೆ ಮಾಡಿ ಇದರ ಕುರಿತು ಮಾತನಾಡಿದ್ದಾರೆ.

2022-23ರ ಕೇಂದ್ರ ಬಜೆಟ್‌ನ ಭಾಗವಾಗಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 75 ಜಿಲ್ಲೆಗಳಲ್ಲಿ 75 ಡಿಬಿಯುಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಇದು ಸ್ವತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಭಾರವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಿದ್ದ ನೆನಪಿಗಾಗಿ ಮಾಡಲಾಗಿದೆ.

ಡಿಜಿಟಲ್ ಬ್ಯಾಂಕಿಂಗ್‌ಗಳ (DBU) ಉದ್ದೇಶವೇನು?

ಡಿಜಿಟಲ್ ಬ್ಯಾಂಕಿಂಗ್‌ನ ಪ್ರಯೋಜನಗಳು ದೇಶದ ಮೂಲೆ ಮೂಲೆಯನ್ನು ತಲುಪುವಂತೆ ಮಾಡಲು ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಡಿಬಿಯುಗಳು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಹ ಒಳಗೊಂಡಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ಡಿಜಿಟಲ್ ಬ್ಯಾಂಕಿಂಗ್‌ಗಳಲ್ಲಿ ಎಷ್ಟು ಬ್ಯಾಂಕ್‌ಗಳು ಭಾಗವಹಿಸುತ್ತಿವೆ?

11 ಸಾರ್ವಜನಿಕ ವಲಯದ ಬ್ಯಾಂಕ್‌ಗಳು,
12 ಖಾಸಗಿ ಬ್ಯಾಂಕ್‌ಗಳು ಮತ್ತು
ಒಂದು ಸಣ್ಣ ಹಣಕಾಸು ಬ್ಯಾಂಕ್ ಈ ಪ್ರಯತ್ನದಲ್ಲಿ ಭಾಗವಹಿಸುತ್ತಿವೆ.

ಡಿಜಿಟಲ್ ಬ್ಯಾಂಕಿಂಗ್‌ಗಳ ಕಾರ್ಯಗಳು

ಜನರಿಗೆ ಉಳಿತಾಯ ಖಾತೆ ತೆರೆಯುವುದು, ಬ್ಯಾಲೆನ್ಸ್-ಚೆಕ್, ಪ್ರಿಂಟ್ ಪಾಸ್‌ಬುಕ್, ಹಣ ವರ್ಗಾವಣೆ, ಸ್ಥಿರ ಠೇವಣಿಗಳಲ್ಲಿ ಹೂಡಿಕೆ, ಸಾಲದ ಅರ್ಜಿಗಳು, ನೀಡಿದ ಚೆಕ್‌ಗಳಿಗೆ ಸ್ಟಾಪ್-ಪಾವತಿ ಸೂಚನೆಗಳಂತಹ ವಿವಿಧ ಸೌಲಭ್ಯಗಳನ್ನು ಡಿಜಿಟಲ್ ಬ್ಯಾಂಕಿಂಗ್‌ಗಳು ಒದಗಿಸುತ್ತದೆ.

“ಡಿಬಿಯುಗಳು ಗ್ರಾಹಕರು ವರ್ಷಪೂರ್ತಿ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ವೆಚ್ಚ ಪರಿಣಾಮಕಾರಿ, ಅನುಕೂಲಕರ ಮತ್ತು ವರ್ಧಿತ ಡಿಜಿಟಲ್ ಅನುಭವವನ್ನು ಹೊಂದಲು ಅನುವು ಮಾಡಿಕೊಡುತ್ತದೆ.