INC – Peepal Media

ಆರ್ಟಿಕಲ್ 370 ರದ್ದತಿಯ ನಂತರ ನಡೆದ ಲಡಾಖ್ ಕೌನ್ಸಿಲ್ ಚುನಾವಣೆಯಲ್ಲಿ, ಕಾಂಗ್ರೆಸ್-ಎನ್‌ಸಿ ಮೈತ್ರಿಗೆ ಗೆಲುವು
Ladakh Council elections | ಲೇಹ್: ಲಡಾಖ್‌ ವಿಭಾಗದ ಕೇಂದ್ರಾಡಳಿತ ಪ್ರದೇಶವಾದ ಕಾರ್ಗಿಲ್‌ನಲ್ಲಿ ಇತ್ತೀಚೆಗೆ ನಡೆದ ಲಡಾಖ್ ಸ್ವಾಯತ್ತ ಹಿಲ್ ಕೌನ್ಸಿಲ್‌ಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟ ಜಯಗಳಿಸಿದೆ. 26 ಸ್ಥಾನಗಳಿಗೆ 85 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟ 19 ಸ್ಥಾನಗಳನ್ನು ಗೆದ್ದಿದೆ. ಎನ್‌ಸಿ 11 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 2 ಸ್ಥಾನ ಮತ್ತು ಐಎನ್‌ಡಿಪಿ ಒಂದು ಸ್ಥಾನ ಗಳಿಸಿದೆ. ಇನ್ನು 4 ಸ್ಥಾನಗಳ ಫಲಿತಾಂಶ ಬರಬೇಕಿದೆ.

ಈ ಹಿಂದೆ ಆಗಸ್ಟ್ 5, 2019ರಂದು, ಕೇಂದ್ರದ ಬಿಜೆಪಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಗೆ ಸಂಬಂಧಿಸಿದ 370ನೇ ವಿಧಿಯನ್ನು ರದ್ದುಗೊಳಿಸಿತ್ತು. ಇದರೊಂದಿಗೆ ಅಂದು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು. ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಪಕ್ಷಗಳ ಮುಖಂಡರನ್ನು ಗೃಹಬಂಧನದಲ್ಲಿರಿಸಲಾಗಿತ್ತು.

https://x.com/ANI/status/1711014506779054197?s=20

ಮತ್ತೊಂದೆಡೆ, ಆರ್ಟಿಕಲ್ 370 ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಭಜನೆಯ ಸುಮಾರು ನಾಲ್ಕು ವರ್ಷಗಳ ನಂತರ, ಆ ಪ್ರದೇಶದಲ್ಲಿ ಮೊದಲ ಬಾರಿಗೆ ಸ್ಥಳೀಯ ಚುನಾವಣೆಗಳು ನಡೆದವು. ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟವು ಲಡಾಖ್ ಸ್ವಾಯತ್ತ ಹಿಲ್ ಕೌನ್ಸಿಲ್ ಚುನಾವಣಾ ಫಲಿತಾಂಶಗಳನ್ನು ಗೆದ್ದಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಜನರು ಈ ತೀರ್ಪು ನೀಡಿದ್ದಾರೆ ಎಂದು ಹೇಳಿಕೊಂಡಿವೆ.

ಇದೇ ವೇಳೆ ಕಾರ್ಗಿಲ್ ಜನತೆ ರಾಜ್ಯ ವಿಭಜನೆಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದೇವೆ ಎಂದು ಮತದಾನದ ವೇಳೆ ಅಳಲು ತೋಡಿಕೊಂಡರು. ಅವರು ಜಮ್ಮು ಮತ್ತು ಕಾಶ್ಮೀರವನ್ನು ಮರು ವಿಲೀನಗೊಳಿಸಬೇಕು ಮತ್ತು ರಾಜ್ಯವನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಚುನಾವಣಾ ಫಲಿತಾಂಶದ ನಂತರ ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟದ ವಿಜಯೋತ್ಸವ ಆಚರಿಸಲಾಯಿತು.

ಏರುತ್ತಿರುವ ಕನ್ಹಯ್ಯ ಕುಮಾರ್‌ ರಾಜಕೀಯ ಬದುಕಿನ ಸೂಚ್ಯಂಕ – ಕಾಂಗ್ರೆಸ್‌ ಇವರಿಂದ ಪಡೆದಿದ್ದೇನು?
ಫೆಬ್ರವರಿ 9, 2016ರ ಘಟನೆಯ ನಂತರ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಕನ್ಹಯ್ಯ ಕುಮಾರ್ ಎಂಬ ಹೆಸರು ಹೊರಹೊಮ್ಮಿತು ಮತ್ತು ಅದು ದೇಶಾದ್ಯಂತ ಪ್ರತಿಧ್ವನಿಸಲು ಪ್ರಾರಂಭಿಸಿತು. ಆಗ ಕನ್ಹಯ್ಯ ಕುಮಾರ್ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ವಿದ್ಯಾರ್ಥಿ ವಿಭಾಗವಾದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ ನ ನಾಯಕರಾಗಿದ್ದರು ಮತ್ತು JNU ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.

ಈಗ ಅದೆಲ್ಲ ಮುಗಿದು ಏಳೂವರೆ ವರ್ಷವಾಗಿರುವ ಹೊತ್ತಿನಲ್ಲಿ ಕನ್ಹಯ್ಯ ಕುಮಾರ್‌ ಕಾಂಗ್ರೆಸ್‌ ಪಕ್ಷದಲ್ಲಿ ನೆಲೆಯಾಗಿದ್ದಾರೆ. ಪ್ರಸ್ತುತ ಪಕ್ಷವು ಅವರನ್ನು ಕೇಂದ್ರ ಕಾರ್ಯಕಾರಿ ಸಮಿತಿಯ ಉಸ್ತುವಾರಿಯನ್ನಾಗಿ ಮಾಡಿದೆ. ರಾಜಕೀಯವಾಗಿ ಚುರುಕಿನ ಮನುಷ್ಯನಾದ ಕನ್ಹಯ್ಯ 2021ರಲ್ಲಿ ಕಾಂಗ್ರೆಸ್‌ ಬಹುಬೇಗನೆ ಬೆಳವಣಿಗೆಯ ಏಣಿಯನ್ನು ಏರುತ್ತಾ ಪ್ರಸ್ತುತ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ಕಮ್ಯೂನಿಸ್ಟ್‌ ಪಕ್ಷದೊಂದಿಗಿನ 17 ವರ್ಷಗಳ ಸಂಬಂಧವನ್ನು ಕಡಿದುಕೊಂಡು ಕಾಂಗ್ರೆಸ್‌ ಪಕ್ಷಕ್ಕೆ ಬಂದ ಕನ್ಹಯ್ಯಾ ಅವರಿಗೆ ಎರಡೂ ಪಕ್ಷಗಳ ತತ್ವದಲ್ಲಿ ಸಾಕಷ್ಟು ಹೋಲಿಕೆ ಕಾಣಿಸಿತ್ತು. ಕನ್ಹಯ್ಯ ಪಕ್ಷದಲ್ಲಿ ತನ್ನ ಭವಿಷ್ಯದ ಗೆರೆಯನ್ನು ಕಂಡರೆ ಕಾಂಗ್ರೆಸ್‌ ಅವರಲ್ಲಿ ತನ್ನ ಭವಿಷ್ಯದ ನಾಯಕನನ್ನು ಕಂಡುಕೊಂಡಿತು. ಕನ್ಹಯ್ಯ ಪಕ್ಷಕ್ಕೆ ಬಂದಿದ್ದರಿಂದ ಆದ ಲಾಭವೆಂದರೆ ಆ ಪಕ್ಷಕ್ಕೆ ಬಿಹಾರದಲ್ಲಿ ಬಿಜೆಪಿಗರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಬಲ್ಲ ಯುವ ನಾಯಕನೊಬ್ಬ ಸಿಕ್ಕಿದ್ದ. ಈ ಯಂಗ್‌ ಟರ್ಕ್‌ನಲ್ಲಿ ಕಾಂಗ್ರೆಸ್‌ ತನ್ನ ಭವಿಷ್ಯದ ನಾಯಕನನ್ನು ಕಾಣುತ್ತಿದೆ. ಮತ್ತು ಈ ನಿಟ್ಟಿನಲ್ಲಿ ಕನ್ಹಯ್ಯಾ ಕೂಡಾ ಪಕ್ಷವನ್ನು ನಿರಾಶೆ ಮಾಡದೆ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ನೆಲದಲ್ಲಿ ನಿಂತು ಏಕಾಂಗಿಯಾಗಿ ಬಡಿದಾಡುವ ಕಮ್ಯುನಿಸ್ಟ್‌ ಗುಣವನ್ನು ಅವರು ಇಂದಿಗೂ ಬಿಟ್ಟುಕೊಟ್ಟಿಲ್ಲ. ಮೈಕು ಹಿಡಿದರೆಂದರೆ ವಿರೋಧ ಪಕ್ಷಗಳನ್ನು ತೊಳೆದು ಮುಗಿಸಿಯೇ ಮೈಕು ಕೆಳಗಿಡುವ ಗುಣ ಕನ್ಹಯ್ಯ ಅವರದು. ಅವರ ದಿಟ್ಟ ಮಾತುಗಳಿಗೆ ವಿರೋಧಿಗಳಿಗೂ ತಲೆದೂಗುವಂತೆ ಮಾಡುವ ಶಕ್ತಿಯಿದೆ.

ಕಾಂಗ್ರೆಸ್‌ ಈಗ ಕನ್ಹಯ್ಯ ಮೂಲಕ ಯುವಕರನ್ನು ತಲುಪಲು ಪ್ರಯತ್ನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಮೊದಲ ಸಲದ ಮತದಾರರನ್ನು ಅದು ಗುರಿಯಾಗಿಸಿಕೊಂಡು ಕನ್ಹಯ್ಯ ಅವರನ್ನು ಬಳಸಿಕೊಳ್ಳುತ್ತಿದೆ. ಕನ್ಹಯ್ಯ ವಿದ್ಯಾರ್ಥಿ ನಾಯಕನಾಗಿ ಜನಪ್ರಿಯರಾದವರು. ಅವರ ಮಾತಿನ ಮೋಡಿಗೆ ಯುವಕರು ಮರುಳಾಗಿದ್ದು ಕೂಡಾ ಅವರು ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಎನ್ನುವುದು ಗಮನಾರ್ಹ. ಅವರು JNU ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದವರು. ಈ ಹಿನ್ನೆಲೆಯಲ್ಲೇ ಕನ್ಹಯ್ಯ ಅವರ ಮೇಲೆ ಭರವಸೆಯಿಟ್ಟು ಮುನ್ನಡೆಯುತ್ತಿದೆ.

ಕಾಂಗ್ರೆಸ್‌ ಕನ್ಹಯ್ಯ ವಿಷಯದಲ್ಲಿ ಪರಿಗಣಿಸುತ್ತಿರುವ ಪ್ರಮುಖ ಅಂಶವೆಂದರೆ ಕನ್ಹಯ್ಯ ಮೂಲಕ ಬಿಹಾರದಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸುವುದು. ವಾಸ್ತವವಾಗಿ, ಕನ್ಹಯ್ಯ ಬಿಹಾರದ ಲೆನಿನ್ಗ್ರಾಡ್ ಎಂದು ಕರೆಯಲ್ಪಡುವ ಮಿನಿ ಮಾಸ್ಕೋ ಅಥವಾ ಬೇಗುಸರಾಯ್ ಪ್ರದೇಶದಿಂದ ಬಂದವರು. JNU ಮೂಲಕ ಪಿಎಚ್ಡಿ ಪೂರ್ಣಗೊಳಿಸಿದ ನಂತರ, ಕನ್ಹಯ್ಯ 2019ರಲ್ಲಿ ಸಿಪಿಐ ಟಿಕೆಟ್ ಪಡೆದು ಬೇಗುಸರಾಯ್ ಕ್ಷೇತ್ರದಿಂದ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಅವರು ಆಗ ಗೆಲ್ಲದಿದ್ದರೂ,  ರಾಜ್ಯದಲ್ಲಿ ಕೋಲಾಹಲವೊಂದನ್ನು ಖಂಡಿತಾ ಸೃಷ್ಟಿಸಿದ್ದರು. ಆದಾಗ್ಯೂ, ಕನ್ಹಯ್ಯ ಚುನಾವಣೆಯ ನಂತರ ಒಂದು ವರ್ಷ ಸಿಪಿಐನಲ್ಲಿ ಕೆಲಸ ಮಾಡಿ ನಂತರ ಕಾಂಗ್ರೆಸ್ ಸೇರಿದರು.

ಕನ್ಹಯ್ಯ ತಮ್ಮ ವಿದ್ಯಾರ್ಥಿ ಜೀವನ ಆರಂಭದಿಂದಲೂ, ಎಂದರೆ 2002ರಿಂದಲೂ ಸಂಬಂಧ ಹೊಂದಿದ್ದರಾದರೂ JNU ಓದು ಮುಗಿಸಿ ಮರಳಿ ಬಂದವರಿಗೆ ಪಕ್ಷದ ಕಾರ್ಯಶೈಲಿಯಲ್ಲಿ ಯಾವ ವಿಶೇಷವೂ ಕಾಣಲಿಲ್ಲ. ಇನ್ನು ಈ ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿಯ ಕುರಿತು ಹೇಳುವುದಾದರೆ ಈ ರಾಜ್ಯದಲ್ಲಿ ಪಕ್ಷಕ್ಕೆ 1990ರಿಂದ ಇದುವರೆಗೆ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಅಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೆ ಚೈತನ್ಯ ತುಂಬಿ ಅಧಿಕಾರಕ್ಕೆ ಮರಳಿಸಬಲ್ಲ ನಾಯಕರೂ ಕಾಣುತ್ತಿಲ್ಲ. ಈ ಪರಿಸ್ಥಿತಿಯನ್ನು ಬಿಡಿಸಿ ಹೇಳುವುದಾದರೆ, ಕನ್ಹಯ್ಯಗೆ ತನಗೆ ಸರಿಹೊಂದ ಬಲ್ಲ ಪಕ್ಷ ಕಾಣುತ್ತಿರಲಿಲ್ಲ, ಅತ್ತ ಕಾಂಗ್ರೆಸ್ಸಿಗೆ ತನ್ನ ಪಕ್ಷವನ್ನು ಮತ್ತೆ ಮೇಲೆತ್ತಬಲ್ಲ ನಾಯಕ ಕಾಣುತ್ತಿರಲಿಲ್ಲ. ಇಬ್ಬರಿಗೂ ಪರಸ್ಪರ ಒಬ್ಬರಿಗೊಬ್ಬರ ಅವಶ್ಯಕತೆಯಿತ್ತು.

ಕಾಂಗ್ರೆಸ್‌ ಕನ್ಹಯ್ಯ ಅವರಲ್ಲಿ ಕಂಡ ಇನ್ನೊಂದು ಭರವಸೆಯೆಂದರೆ ಅವರ ವಾಕ್ಚಾತುರ್ಯ. ಇದು ಪಕ್ಷದ ಪಾಲಿಗೆ ಅದ್ಭುತ ಸಾಧ್ಯತೆಯಾಗಿ ಕಾಣಿಸಿತ್ತು. ಪ್ರಸ್ತುತ ತಮ್ಮ ಮಾತುಗಳಿಂದ ಜನರನ್ನು ಹಿಡಿದಿಡಬಲ್ಲ ನಾಯಕರ ಪಟ್ಟಿ ಮಾಡುವಾಗ ಖಂಡಿತವಾಗಿಯೂ ನೀವು ಕನ್ಹಯ್ಯ ಅವರ ಹೆಸರನ್ನು ಹೊರಗಿಡಲಾರಿರಿ. ಇಂದು ಬಿಜೆಪಿಯ ಹಿಂದುತ್ವವಾದಿ ರಾಷ್ಟ್ರೀಯತೆಗೆ ದಿಟ್ಟವಾಗಿ ಉತ್ತರ ನೀಡಬಲ್ಲ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಕನ್ಹಯ್ಯ ಕೂಡಾ ಒಬ್ಬರೆಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ತಮ್ಮ ತೀಕ್ಷ್ಣ ಮಾತುಗಳಿಂದ ಎದುರಾಳಿ ಪಕ್ಷದ ನಾಯಕರ ಪಕ್ಷದ ಬಾಯಿಯನ್ನು ಕಟ್ಟಿಹಾಕುವುದು ಅವರ ದೊಡ್ಡ ಬಲವಾಗಿದೆ.

ಕನ್ಹಯ್ಯ ಎದುರಾಳಿಗಳ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬಲ್ಲ ಧೈರ್ಯ ಇರುವ ಮನುಷ್ಯ. CAA ಮತ್ತು NRC ವಿಷಯದಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ಧೈರ್ಯ ಸಾಲದೆ ಪರದಾಡುತ್ತಿರುವಾಗ ಕನ್ಹಯ್ಯ ಏಕಾಂಗಿಯಾಗಿ ರಂಗಕ್ಕೆ ಧುಮುಕಿದ್ದರು. ಅವರು ಆಗ ಸೀಮಾಂಚಲದ ಅರಾರಿಯಾ, ಪೂರ್ಣಿಯಾ, ಕಥಿಹಾರ್ ಮತ್ತು ಕಿಶನ್ಗಂಜ್‌ ಮೊದಲಾದ ಪ್ರದೇಶಗಳಲ್ಲಿ ಸಭೆ ನಡೆಸಿದರು. ಆ ಸಭೆಗಳಿಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು ಎನ್ನುವುದು ಇಲ್ಲಿ ಗಮನಾರ್ಹ. 2019ರಲ್ಲಿ ಬೇಗುಸರಾಯ್‌ ಕ್ಷೇತ್ರದಲ್ಲಿ ಗಿರಿರಾಜ್‌ ಸಿಂಗ್‌ ಅವರೆದುರು ಸೋತ ನಂತರ ಕನ್ಹಯ್ಯ ರಾಜಕೀಯ ಬದುಕು ಮುಗಿದೇ ಹೋಯಿತು ಎಂದುಕೊಂಡಿದ್ದ ಬಿಜೆಪಿಗೆ ಇದು ಶಾಕಿಂಗ್‌ ಆಗಿ ಪರಿಣಮಿಸುತ್ತು.

ಇದು ಕಾಂಗ್ರೆಸ್‌ ಪಕ್ಷಕ್ಕೆ ಕನ್ಹಯ್ಯ ಮೇಲಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿತು. ಈ ಸಭೆಗಳಿಗೆ ಬಂದ ಜನರು ತನ್ನ ಪಕ್ಷದ ಹಿಂದೆ ನಿಲ್ಲುತ್ತಾರೆನ್ನುವ ಭರವಸೆ ಕಾಂಗ್ರೆಸ್ಸಿಗೆ ಹುಟ್ಟಿಸಿತು. ಇದರೊಂದಿಗೆ ಕನ್ಹಯ್ಯ ಅಲ್ಲಿನ ಒಂದು ಸಾಮಾನ್ಯ ಕುಟುಂಬದಿಂದ ಬಂದವರು ಹೀಗಾಗಿ ಅವರಿಗೆ ಜನಸಾಮಾನ್ಯರ ಬದುಕಿನ ಮಿಡಿತ ಗೊತ್ತು. ಜೊತೆಗೆ JNU ರೀತಿಯ ವಿಶ್ವವಿದ್ಯಾಲಯದಿಂದ PHD ಪಡೆದಿರುವುದು ಅವರನ್ನು ಬೌದ್ಧಿಕ ವಲಯವೂ ಮೆಚ್ಚಿ ಸ್ವೀಕರಿಸುವಂತೆ ಮಾಡಿದೆ.

ವಿದ್ಯಾರ್ಥಿ ರಾಜಕಾರಣದಲ್ಲಿ ಕನ್ಹಯ್ಯ ಅವರ ತಳಮಟ್ಟದ ಸಂಪರ್ಕ, ಅನುಭವ ಮತ್ತು ವಾಕ್ಚಾತುರ್ಯದ ಹೊರತಾಗಿ, ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖರನ್ನಾಗಿ ಮಾಡಲು ಮತ್ತೊಂದು ಕಾರಣವಿದೆ. ಅದು ರಾಹುಲ್‌ ಗಾಂಧಿಯವರೊಂದಿಗೆ ಅವರಿಗಿರುವ ನೇರ ಸಂಪರ್ಕ. ರಾಹುಲ್‌ ಆಪ್ತ ಬಳಗದ ನೇತಾರರಲ್ಲಿ ಕನ್ಹಯ್ಯ ಕೂಡಾ ಒಬ್ಬರು. ಭಾರತ ಜೋಡೋ ಯಾತ್ರೆಯ ಕಾರ್ಯತಂತ್ರವನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಯಾಣದುದ್ದಕ್ಕೂ ಅವರು ರಾಹುಲ್ ಗಾಂಧಿ ಅವರೊಂದಿಗೆ ಇದ್ದರು. ಪಕ್ಷದ ನಾಯಕತ್ವದೊಂದಿಗಿನ ಈ ನೇರ ಸಂಪರ್ಕವೂ ಅವರನ್ನು ಪಕ್ಷದಲ್ಲಿ ಒಬ್ಬ ಪ್ರಮುಖ ನಾಯಕನನ್ನಾಗಿ ಹೊರಹೊಮ್ಮಿಸಿದೆ.

ಮಳೆಯ ನಡುವೆಯೂ ಕಾಂಗ್ರೆಸ್ ಭಾರೀ ಪ್ರತಿಭಟನೆ: ದೇಶದಾದ್ಯಂತ ಆಕ್ರೋಶದ ಅಲೆ
ನವದೆಹಲಿ: ಸುರಿಯುತ್ತಿರುವ ಮಳೆಯ ನಡುವೆಯೂ ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಇಂದು ಪ್ರತಿಭಟನೆ ನಡೆಸಿದರು.

ಹಣದುಬ್ಬರ, ನಿರುದ್ಯೋಗ, ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ಕಾಂಗ್ರೆಸ್ ಪಕ್ಷ ಒಂದು ದೇಶವ್ಯಾಪಿ ಪ್ರತಿಭಟನೆಗೆ ಕರೆನೀಡಿತ್ತು. ರಾಜಧಾನಿಯಲ್ಲಿ ಮಳೆಯ ನಡುವೆಯೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಹಣದುಬ್ಬರ ಮಿತಿ ಮೀರಿದೆ. ದೇಶದ ಜನರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಬೆಲೆಯೇರಿಕೆ ತಗ್ಗಿಸಲು ಏನನ್ನೂ ಮಾಡುತ್ತಿಲ್ಲ. ಈ ಕಾರಣದಿಂದ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.

ಪ್ರತಿಭಟನೆಗೂ ಮುನ್ನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ದೇಶದಲ್ಲಿ ಪ್ರಜಾಪ್ರಭುತ್ವ ಸಾಯುತ್ತಿದೆ, ಸರ್ವಾಧಿಕಾರ ಬಲಗೊಳ್ಳುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ರಾಹುಲ್ ಗಾಂಧಿ ಇಂದು ಪ್ರತಿಭಟನಾರ್ಥವಾಗಿ ಕಪ್ಪುಬಣ್ಣದ ದಿರಿಸನ್ನು ಧರಿಸಿ ಸಂಸತ್ ಪ್ರವೇಶಿಸಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಸದ್ ಭವನದ ಆವರಣದಲ್ಲಿ ಕಾಂಗ್ರೆಸ್ ಸಂಸದರೊಂದಿಗೆ ಪ್ರತಿಭಟನೆ ನಡೆಸಿದರು.

ಈ ನಡುವೆ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಳಾಸಾಹೇಬ್ ಥೋರಟ್, ಸಂಜಯ್ ನಿರುಪಮ್, ನಾನಾ ಪಟೋಲೆ ಮತ್ತಿತರನ್ನು ಬಂಧಿಸಲಾಯಿತು. ಅಸ್ಸಾಂನಲ್ಲಿ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.