IND VS AUS – Peepal Media

ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ರೋಮಾಂಚಕ ಗೆಲುವು
ಬ್ರಿಸ್ಬೇನ್‌ (ಆಸ್ಟ್ರೇಲಿಯಾ): ಟಿಟ್ವೆಂಟಿ ವಿಶ್ವಕಪ್‌ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಭಾರತ‌ ತಂಡ ಆತಿಥೇಯ ಆಸ್ಟ್ರೇಲಿಯಾ ಎದುರು ಆರು ರನ್‌ ಗಳಿಂದ ರೋಮಾಂಚಕ ಗೆಲುವು ಸಾಧಿಸಿದೆ. ಕೊನೆಯ ಓವರ್‌ಗಳಲ್ಲಿ ಆಸ್ಟ್ರೇಲಿಯಾ ಒಂದಾದ ಮೇಲೊಂದರಂತೆ ವಿಕೆಟ್‌ ಕಳೆದುಕೊಂಡಿದ್ದರಿಂದಾಗಿ ಗೆಲ್ಲುವ ಪಂದ್ಯವನ್ನು ಸೋತುಹೋಯಿತು.

ಮಹಮದ್‌ ಶಮಿ ಎಸೆದ ಕೊನೆಯ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ ಕಳೆದುಕೊಂಡಿತು. ವಿರಾಟ್‌ ಕೊಹ್ಲಿ ಬೌಂಡರಿ ಗೆರೆಯಲ್ಲಿ ಪ್ಯಾಟ್‌ ಕಮಿನ್ಸ್‌ ಅವರ ಹಿಡಿದ ಕ್ಯಾಚ್‌ ಪಂದ್ಯದ ಗತಿಯನ್ನೇ ಬದಲಾಯಿಸಿತು. ಟಿಮ್‌ ಡೇವಿಡ್‌ ಅವರನ್ನು ಕೊಹ್ಲಿ ರನೌಟ್‌ ಮಾಡಿದ್ದೂ ಸಹ ಆಸ್ಟ್ರೇಲಿಯಾ ಸೋಲಿಗೆ ಕಾರಣವಾಯಿತು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ, ಬ್ಯಾಟಿಂಗ್‌ಗೆ ಅನುಕೂಲಕರವಾಗಿದ್ದ ಪಿಚ್‌ ನಲ್ಲಿ ಭಾರತ ತಂಡವನ್ನು 186 ರನ್‌ ಗಳಿಗೆ ಕಟ್ಟಿಹಾಕಲು ಯಶಸ್ವಿಯಾಯಿತು.

ಭಾರತ ತಂಡದ ಪರವಾಗಿ ಆರಂಭಿಕ ಆಟಗಾರ, ಕನ್ನಡಿಗ ಕೆ.ಎಲ್.ರಾಹುಲ್‌ 33 ಎಸೆತಗಳಲ್ಲಿ 57ರನ್‌ ಗಳಿಸಿ ಮಿಂಚಿದರು. ಬಿರುಸಿನ ಆಟವಾಡಿದ ರಾಹುಲ್‌, ಐದು ಬೌಂಡರಿ, ಮೂರು ಸಿಕ್ಸರ್‌ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ 33 ಎಸೆತಗಳನ್ನು ಎದುರಿಸಿ 50 ರನ್‌ ಗಳಿಸಿ ಔಟಾದರು. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ದಿನೇಶ್‌ ಕಾರ್ತಿಕ್‌ ಉತ್ತಮ ಆರಂಭ ಪಡೆದರಾದರೂ ಹೆಚ್ಚು ಮೊತ್ತ ಪೇರಿಸುವಲ್ಲಿ ವಿಫಲರಾದರು.

ಆಸ್ಟ್ರೇಲಿಯಾದ ವೇಗ ಬೌಲರ್‌ ಕೇನ್‌ ರಿಚರ್ಡ್ಸ್ ನ್‌ 30 ರನ್‌ ನೀಡಿ ನಾಲ್ಕು ವಿಕೆಟ್‌ ಗಳಿಸಿದರು. ಭಾರತ ಏಳು ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತು. ಸೂರ್ಯಕುಮಾರ್‌ ಯಾದವ್‌ ಮತ್ತು ದಿನೇಶ್‌ ಕಾರ್ತಿಕ್‌ ವಿಕೆಟ್‌ ಪತನದೊಂದಿಗೆ ಭಾರತ ಇನ್ನೂರರ ಗಡಿ ದಾಟುವ ಅವಕಾಶ ಕಳೆದುಕೊಂಡಿತು.

ಭಾರತದ ಹೋರಾಟದ ಮೊತ್ತವನ್ನು ಚೇಸ್‌ ಮಾಡಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ಆರೋನ್‌ ಫಿಂಚ್‌ ಭರ್ಜರಿ ಆಟವಾಡಿ, 54 ಎಸೆತಗಳಲ್ಲಿ 79 ರನ್‌ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ, ಮೂರು ಭರ್ಜರಿ ಸಿಕ್ಸರ್‌ ಗಳು ಇದ್ದವು. ಮತ್ತೋರ್ವ ಆರಂಭಿಕ ಆಟಗಾರ ಮಿಚೆಲ್‌ ಮಾರ್ಶ್‌ ಕೇವಲ 18 ಎಸೆತಗಳಲ್ಲಿ 35 ರನ್‌ ಗಳಿಸಿ ಭುವನೇಶ್ವರ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು.

ಮಹಮದ್‌ ಶಮಿ ಎಸೆದ ಒಂದು ಓವರ್‌ನಲ್ಲೇ ಮೂರು ವಿಕೆಟ್‌ ಗಳಿಸಿ, ಭಾರತ ತಂಡಕ್ಕೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇಪ್ಪತ್ತನೇ ಓವರ್‌ನ ಅಂತ್ಯದಲ್ಲಿ ಆಸ್ಟ್ರೇಲಿಯಾ ಆಲ್‌ ಔಟ್‌ ಆಗಿ ಸೋಲೊಪ್ಪಿಕೊಂಡಿತು.

ನಾಳೆಯಿಂದ ಭಾರತ-ಆಸ್ಟ್ರೇಲಿಯಾ ಟಿ-20 ಸರಣಿ
ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ-20 ಸರಣಿಯು ಸೆಪ್ಟಂಬರ್‌ 20 ಮಂಗಳವಾರದಂದು ಆರಂಭಗೊಳ್ಳಲಿದ್ದು, ಸರಣಿಯ ಮೂರು ಪಂದ್ಯಗಳು ಮೊಹಲಿಯಲ್ಲಿ ನಡೆಯಲಿವೆ.

ಈ ಸರಣಿಯ ಮೊದಲ ಪಂದ್ಯವು ನಾಳೆಯಿಂದ ಶುರುವಾಗಲಿದ್ದು, ಪಂದ್ಯವು ನಾಳೆ ಸಂಜೆ 7: 30 ರಿಂದ ಆರಂಭಗೊಳ್ಳಲಿದೆ.

ಮುಂಬರುವ ಟಿ-20 ವಿಶ್ವಕಪ್‌ ಹಿನ್ನಲೆ ಉಭಯ ತಂಡಗಳಿಗು ಈ ಸರಣಿಯು ಒಂದು ರೀತಿ ಅಭ್ಯಾಸ ಪಂದ್ಯಗಳಾಗಿವೆ.

ಏಷ್ಯಾಕಪ್‌ ಸೋಲಿನ ಬಳಿಕ ಭಾರತ ತಂಡಕ್ಕೆ  ಪ್ಲೆಯಿಂಗ್‌ 11 ಆಟಗಾರರನ್ನು ನೇಮಿಸುವು ಪ್ರಕ್ರಿಯೆ ನಡೆಯುತ್ತಿದ್ದು, ಈ ಸರಣಿಯು ಅದಕ್ಕೆ ಅನೂಕೂಲಕರವಾಗಿದೆ.

ಈ ಮೂರು ಸರಣಿಯಲ್ಲಿ ಭಾರತ ತಂಡವು ವಿಶ್ವ ಚಾಂಪಿಯನ್‌ ಎಂದು ಗುರಿತಿಸಿಕೊಂಡಿರುವ ಆಸ್ಟ್ರೇಲಿಯಾದ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ ಮುಂಬರುವ ಟಿ-20 ವಿಶ್ವಕಪ್‌ನಲ್ಲಿ  ಗೆಲ್ಲುವ ಭರವಸೆ ಹೊಂದುತ್ತದೆ ಎಂದು ಮಾಜಿ ಕ್ರಿಕೆಟ್‌ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಈ ಕಾರಣ ಆಸೀಸ್ ವಿರುದ್ಧದ ಈ ಸರಣಿಯಲ್ಲಿ ಟೀಮ್ ಇಂಡಿಯಾ ಕೆಲ ಪ್ರಯೋಗಗಳನ್ನು ಮಾಡುವ ಸಾಧ್ಯತೆಯಿದೆ.

ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ನಡೆಯುವ ಈ ಸರಣಿಯಲ್ಲಿ ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ ತಂಡದಲ್ಲಿರಲಿದ್ದಾರೆ.

ಅದೇ ರೀರಿ ಆಸ್ಟ್ರೇಲಿಯಾ ತಂಡದಲ್ಲಿ ಆರೋನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಆಡಮ್ ಝಂಪಾ ಆಟದಲ್ಲಿ ಭಾಗವಹಿಸಲಿದ್ದಾರೆ.

ಆಸ್ಟ್ರೇಲಿಯಾ ಟಿ-20 ಸರಣಿಯಲ್ಲಿ ಶಮಿ ಬದಲು ಉಮೇಶ್‌ ಯಾದವ್:‌ ಬಿಸಿಸಿಐ
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಯಿಂದ ಮೊಹಮ್ಮದ್‌ ಶಮಿ ಅವರು ಹೊರಗುಳಿದಿರುವ ಕಾರಣ ಭಾರತ ತಂಡಕ್ಕೆ ಉಮೇಶ್‌ ಯಾದವ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು  ಭಾರತ  ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಕೋವಿಡ್ -19 ಕಾರಣದಿಂದ ಸರಣಿಯಿಂದ ಹೊರಗುಳಿದ ನಂತರ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿಗೆ ವೇಗಿ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆಮಾಡಲಾಗಿದೆ ಎಂದು ಬಿಸಿಸಿಐ  ಭಾನುವಾರ ಪ್ರಕಟಿಸಿದೆ.

ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ಪ್ರಾರಂಭವಾಗುವ ಸರಣಿಯ ಮೊದಲು ತಂಡದ ಆಟಗಾರರಿಗೆ ಕೋವಿಡ್ -19 ಪರೀಕ್ಷೆ ಮಾಡಿಸಲಾಗಿದ್ದು, ಪರೀಕ್ಷೆಯಲ್ಲಿ ಮೊಮಮ್ಮದ್‌ ಶಮಿ ಅವರಿಗೆ ಕೋವಿಡ್‌ ದೃಢ ಎಂದು ವರದಿ ಬಂದ ನಂತರ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

ಮುಂಬರುವ ಟಿ 20 ವಿಶ್ವಕಪ್‌ ನಲ್ಲಿ ಮೊಹಮದ್‌ ಶಮಿ ಅವರು ಭಾಗವಹಿಸಲಿದ್ದು, ವಿಶ್ವ ಚಾಂಪಿಯನ್‌ ಎಂದೆನಿಸಿಕೊಂಡಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಯಲ್ಲಿ ಶಮಿ ಅವರು ತಮ್ಮ ಕೌಶಲ್ಯವನ್ನು ಹೇಗೆ ಪ್ರದರ್ಶಿಸಲಿದ್ದಾರೆ ಎಂದು ತಿಳಿಯಲು ಬಿಸಿಸಿಐ ಕಾದಿತ್ತು, ಆದರೆ ಶಮಿ ಅವರಿಗೆ ಕೋವಿಡ್‌ ದೃಢವಾದ ಕಾರಣ ಬಿಸಿಸಿಐಗೆ ನಿರಾಸೆಯಾಗಿದೆ.