IND VS BAN – Peepal Media

ICC T20-ವರ್ಲ್ಡ್ ಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಜಯ
ಅಡಿಲೈಡ್ ಓವಲ್: ವಿಶ್ವಕಪ್ T20 ಟೂರ್ನಿಯ ಇಂದಿನ ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದಲ್ಲಿ ಭಾರತ ಐದು ರನ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶವು, ಮೊದ-ಮೊದಲು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಪ್ರಯತ್ನಿಸಿತು. ಈ ವೇಳೆ ರನ್‌ ಗಳಿಸಲು ಪರದಾಡಿದ ರೋಹಿತ್‌ ಶರ್ಮಾ 2 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಬಂದ ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌ ಜೊತೆಗೂಡಿ ತಮ್ಮ ಉತ್ತಮ ಪ್ರದರ್ಶನ ನೀಡುವುದರ ಮೂಲಕ, ಇಬ್ಬರು ಆಟಗಾರರು ಅರ್ಧ ಶತಕಗಳಿಸಿ, ಬಾಂಗ್ಲಾದೇಶದ ಬೌಲರ್‌ಗಳಿಗೆ ನೀರು ಕುಡಿಸಿದರು.

ನಂತರ ಬಂದ ಸೂರ್ಯ ಕುಮಾರ್‌ ಯಾದವ್‌ ರಭಸದ ಆಟವಾಡುವ ಮೂಲಕ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನೀಡಿ 184 ರನ್‌ಗಳಿಸಿತು.

ನಂತರ ಮಳೆಯ ಕಾರಣದಿಂದಾಗಿ ಮೊಟಕುಗೊಂಡ ಪಂದ್ಯ 16 ಓವರ್ ಗಳಿಗೆ ಸೀಮಿತಗೊಂಡಿತ್ತು. ಈ ಹಿನ್ನಲೆಯಲ್ಲಿ ಬಾಂಗ್ಲಾದೇಶವು 16 ಓವರ್‌ಗಳಿಗೆ 151 ರನ್‌ ಗಳಿಸಬೇಕಾಗಿತ್ತು. ಈ ವೇಳೆ ಭಾರತೀಯ ಬೌಲರ್‌ಗಳ ದಾಳಿಗೆ ರನ್‌ ಗಳಿಸಲು ಪರದಾಡಿದ ಬಾಂಗ್ಲಾ ಆಟಗಾರರು, 16 ಓವರ್‌ಗಳಿಗೆ 6 ವಿಕೆಟ್‌ ನೀಡಿ 145 ರನ್‌ ಗಳಿಸಿದರು. ಈ ಮೂಲಕ ಭಾರತ ತಂಡವು 5 ರನ್‌ಗಳ ಜಯ ಸಾಧಿಸಿ, ಸೆಮಿಪೈನಲ್‌ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಸಫಲವಾಯಿತು.

ಟಿ-20 ವಿಶ್ವಕಪ್‌: ಭಾರತಕ್ಕೆ ಗೆಲ್ಲಲ್ಲೇಬೇಕಾದ ಅನಿವಾರ್ಯತೆ
ಅಡಿಲೇಡ್ ಓವಲ್: ಇಂದು ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ಸೆಣಸಾಡುತ್ತಿದ್ದು, ಎರಡು ತಂಡಗಳಿಗೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.

ಗ್ರೂಪ್‌ ಎರಡರಲ್ಲಿರುವ ಭಾರತ ತಂಡ ಮೂರು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಅದೇರೀತಿ ಬಾಂಗ್ಲದೇಶವು ಕೂಡ, ಎರಡರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಹೀಗಾಗಿ ಎರೆಡು ತಂಡಗಳು ಸಮಬಲ ಸಾಧಿಸಿದ್ದು, ಭಾರತ ತಂಡವು ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನವನ್ನು ಬಾಂಗ್ಲಾದೇಶ ಪಡೆದುಕೊಂಡಿದೆ.

ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆಯೋ, ಆ ತಂಡ ಸೆಮಿಪೈನಲ್‌ಗೆ ತಲುಪುವ ಕನಸನ್ನು ಒಂದು ಮಟ್ಟಿಗೆ ನನಸು ಮಾಡಿಕೊಳ್ಳಬಹುದಾದ ಅವಕಾಶ ಇದೆ. ಈ ಹಿನ್ನಲೆಯಲ್ಲಿ ಎರೆಡು ತಂಡಗಳು ಮುಂಬರುವ ಎರಡು ಪಂದ್ಯಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸೂಪರ್‌ 12 ಪಂದ್ಯಕ್ಕೆ ಮಳೆರಾಯನ ಆತಂಕ

ಇಂದು ಅಡಿಲೇಡ್ ಓವಲ್ ಭಾಗದಲ್ಲಿ ಶೇ,60 ರಷ್ಟು ಮಳೆ ಬೀಳುವ ಸಂಭವವಿದ್ದು, ಹೆಚ್ಚಾಗಿ ಸಂಜೆ. ನೈಋತ್ಯ ದಿಕ್ಕಿಗೆ 20 ರಿಂದ 30 ಕಿ.ಮೀ/ಗಂಟೆ ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ತಿಳಿಸಿದೆ.