ind vs pak – Peepal Media

ಟಿ-20 ವಿಶ್ವಕಪ್‌: ಭಾರತಕ್ಕೆ ಪಾಕಿಸ್ತಾನದೆದುರು ಫೈನಲ್‌ ಆಡಲು ನಾವು ಬಿಡುವುದಿಲ್ಲ
ಅಡಿಲೇಡ್ ಓವಲ್ (ಆಸ್ಟ್ರೇಲಿಯಾ):‌ ಟಿ-20 ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಕಣಕ್ಕಿಳಿಯಲು ನಾವು ಬಿಡುವುದಿಲ್ಲ ಎಂದು ಇಂಗ್ಲೇಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಹೇಳಿದ್ದಾರೆ.

ʼಅಡಿಲೇಡ್ ಓವಲ್‌ʼನಲ್ಲಿ ಗುರುವಾರ ನಡೆಯಲಿರುವ ಟಿ 20 ವಿಶ್ವಕಪ್‌ ಎರಡನೇ ಸೆಮಿಫೈನಲ್‌ನಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಭಾರತ ತಂಡವನ್ನುಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರವರು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್‌ನಲ್ಲಿ ಯಾವ ತಂಡ ಜಯಗಳಿಸುವುದೊ, ಆ ತಂಡದ ವಿರುದ್ಧ ಪೈನಲ್‌ನಲ್ಲಿ ಆಡಲಿದೆ.

ಭಾರತದ ವಿರುದ್ಧದ ಪಂದ್ಯದ ಮೊದಲು, ನಾಯಕ ಜೋಸ್ ಬಟ್ಲರ್ ಅವರು ತಮ್ಮ ತಂಡದ ಸಿದ್ಧತೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಡೇವಿಡ್ ಮಲಾನ್ ಮತ್ತು ಮಾರ್ಕ್ ವುಡ್‌ಗೆ ಗಾಯದ ಭಯ ಕಾಡುತ್ತಿರುವುದಾಗಿ ತಿಳಿಸಿದರು. ನಂತರ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೆಚ್ಚು ರನ್‌ಗಳಿಸದಂತೆ ಕಟ್ಟಿಹಾಕುತ್ತೇವೆ ಎಂದು ಸಹ ಹೇಳಿದ್ದಾರೆ.

ಈ ವೇಳೆ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ಫರ್ಧಿಸಲು ನಾವು ಬಿಡುವುದಿಲ್ಲ, ಏಕೆಂದರೆ ನಮ್ಮ ತಂಡ ಭಾರತ ತಂಡವನ್ನು ಸೋಲಿಸುವ ಎಲ್ಲಾ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಂದುವರೆದು ಮಾತನಾಡಿದ ಅವರು, ʼನೋಡಿ, ನಾವು ಖಂಡಿತವಾಗಿಯೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಆಟವಾಡುವುದನ್ನು ನಾವು ನೋಡಲು ಬಯಸುವುದಿಲ್ಲ. ಆದ್ದರಿಂದ ಈ ರೀತಿ ನಡೆಯದಂತೆ ನಾವು ನಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ನಾವು ಮಾಡುತ್ತೇವೆʼ ಎಂದು ಬಟ್ಲರ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ʼಭಾರತವು ಕ್ರಿಕೆಟ್‌ ಜಗತ್ತಿನಲ್ಲಿ ಬಹಳ ಬಲಿಷ್ಠ ತಂಡ. ಅದನ್ನ ಅವರು ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾರೆ. ಸ್ವಾಭಾವಿಕವಾಗಿ ಭಾರತ ತಂಡದ ಆಟಗಾರರು ಒಳ್ಳೆಯ ಪ್ರತಿಭೆಯುಳ್ಳಂತವರು, ಹಾಗಾಗಿಯೇ ಅವರ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರಿದ್ದಾರೆʼ ಎಂದು ಬಟ್ಲರ್ ಹೇಳಿದರು.

ಬಲಗೈ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಬಗ್ಗೆ ಮಾತನಾಡಿದ ಬಟ್ಲರ್, ಅವರು ಪ್ರಸಕ್ತ ಟೂರ್ನಿಯಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ, ಏಕೆಂದರೆ ಅವರು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ಮೂರು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಅವರ ಆಟ ನೋಡುವುದೆ ಒಂದು ಅದ್ಭುತ. ಅವರು ಇಲ್ಲಿಯವರಗೆ ಆಟವಾಡಿರುವ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಸೂರ್ಯಕುಮಾರ್‌ ಕಣಕ್ಕೆ ಇಳಿದಾಗ ಹೆಚ್ಚು ರನ್‌ಗಳಿಸಲು ನೋಡುತ್ತಾರೆ. ಅದಲ್ಲದೇ ಅವರು ಹೊಡೆಯುವ ಎಲ್ಲಾ ಹೊಡೆತಗಳನ್ನು ಅತ್ಮವಿಶ್ವಾಸದಿಂದ ಹೊಡೆಯುತ್ತಾರೆ. ಹಾಗಾಗಿಯೇ ಅವರು ಮೈದಾನದ ಎಲ್ಲಾ ಕಡೆಗೂ ಚೆಂಡನ್ನು ಕಳಿಸುತ್ತಾರೆ ಎಂದು ಹೇಳಿದರು. ಹೀಗಾಗಿ ಇಂತಹ ಒಳ್ಳೆಯ ಆಟಗಾರನ ವಿಕೆಟ್‌ ಪಡೆಯಲು ನಮ್ಮ ತಂಡದ ಬೌಲರ್‌ಗಳು ಹಲವಾರು ಸಿದ್ದತೆಗಳನ್ನು ನಡೆಸಿದ್ದಾರೆ ಎಂದರು.

ಯಜುವೇಂದ್ರ ಚಹಲ್ ವಿಶ್ವಕಪ್ನಲ್ಲಿ ಯಾವುದೇ ಪಂದ್ಯದಲ್ಲಿ ಆಡದಿರುವುದು ನಿಮಗೆ ಆಶ್ಚರ್ಯ ತಂದಿದೆಯೇ ಎಂದು ಕೇಳಿದಾಗ, ಬಟ್ಲರ್ ಪ್ರತಿಕ್ರಯಿಸಿ, ಯೂಜಿ ಒಬ್ಬ ಶ್ರೇಷ್ಠ ಬೌಲರ್, ನಾನು ʼಐಪಿಎಲ್‌ʼನಲ್ಲಿ ಅವರೊಂದಿಗೆ ಆಡುವುದನ್ನು ನಿಜವಾಗಿಯೂ ಆನಂದಿಸಿದ್ದೇನೆ. ಅವರು ಉತ್ತಮ ಬೌಲರ್, ಅವರು ಯಾವಾಗಲೂ ವಿಕೆಟ್ ಪಡೆಯಲು ತುಂಬಾ ಉತ್ಸುಕರಾಗಿರುತ್ತಾರೆ. ಹಾಗಾಗಿ ಅವರು ಶ್ರೇಷ್ಠ ಬೌಲರ್ ಎಂದು ನನಗೆ ಖಾತ್ರಿಯಿದೆ,” ಎಂದು ಹೇಳಿದರು.

ಮಲಾನ್ ಮತ್ತು ವುಡ್‌ಗೆ ಆದ ಗಾಯಗಳ ಬಗ್ಗೆ ಮಾತನಾಡಿದ ಬಟ್ಲರ್, ನಾವು ವೈದ್ಯಕೀಯ ತಂಡವನ್ನು ನಂಬುತ್ತೇವೆ. ಜೊತೆಗೆ ಆ ಇಬ್ಬರು ಆಟಗಾರರನ್ನು ಸಹ. ಅವರು ಸದ್ಯಕ್ಕೆ ಗಾಯದಿಂದ ಸುಧಾರಿಸಿಕೊಂಡಿದ್ದು, ಸಮಿಫೈನಲ್‌ನಲ್ಲಿ ಆಡಲಿದ್ದಾರೆ ಎಂದು ತಿಳಿಸಿದರು.

ಭುವನೇಶ್ವರ್ ಕುಮಾರ್ ಅವರನ್ನು ಎದುರಿಸುವ ತಮ್ಮ ಸಿದ್ಧತೆಯ ಬಗ್ಗೆ ಮಾತನಾಡಿದ ಬಟ್ಲರ್, ʼನನ್ನ ಸ್ವಂತ ಆಟದ ಬಗ್ಗೆ ನನಗೆ ಯಾವಾಗಲೂ ವಿಶ್ವಾಸವಿದೆ. ಭಾರತದಂತಹ ನಂಬರ್‌ ಒನ್‌ ತಂಡದಲ್ಲಿ, ಇತರ ತಂಡಗಳಿಗಿಂತ ಕಷ್ಟವೆನಿಸುವ ಬೌಲರ್‌ಗಳು ಇರುತ್ತಾರೆ. ಆ ಪಟ್ಟಿಯಲ್ಲಿ ಭುವನೇಶ್ವರ್‌ ಕೂಡ ಒಬ್ಬರು. ನಾನು ಯಾವಾಗಲೂ ಚೆನ್ನಾಗಿ ತಯಾರಿ ನಡೆಸುತ್ತೇನೆ, ಹಾಗಾಗಿ ನಾನು ಯಾರಿಗೂ ಹೆದರುವುದಿಲ್ಲ. ಏಕೆಂದರೆ ನಾನು ಆಟವಾಡುವ ಸಂದರ್ಭದಲ್ಲಿ ನನ್ನ ಮುಂದೆ ಬರುವ ಚೆಂಡನ್ನು ನೋಡುತ್ತೇನೆಯೇ ಹೊರತು ಎಸೆತಗಾರನನ್ನಲ್ಲ ಎಂದು ಹೇಳಿದರು.

ವಿಶ್ವ ಕಪ್ T20: ಕೊಹ್ಲಿ ಅಬ್ಬರ ಪಾಕ್ ತತ್ತರ
ಮೆಲ್ಬರ್ನ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಕೊಹ್ಲಿಯ ಅಬ್ಬರ ಆಟದಿಂದಾಗಿ ಭಾರತಕ್ಕೆ ಜಯ.

ಇಡೀ ದೇಶದಾದ್ಯಂತ ಕಾತರದಿಂದ ಕಾಯುತ್ತಿದ್ದ ಕ್ರಿಕೇಟ್ ಅಭಿಮಾನಿಗಳಿಗಿಂದು ದೀಪಾವಳಿಯ ಉಡುಗೊರೆ ನೀಡಿದ ಕೊಹ್ಲಿ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತಕ್ಕೆ ಪಾಕಿಸ್ತಾನವು 160 ರನ್ ಗಳ ಗುರಿಯನ್ನು ನೀಡಿತ್ತು. ಆರಂಭದಲ್ಲಿ ಕೆಎಲ್.ರಾಹುಲ್ ಹಾಗೂ ರೋಹಿತ್ ಶರ್ಮ ವಿಕೆಟ್ ಕಳೆದುಕೊಡ ಟೀಂ ಇಂಡಿಯಾಗೆ ಆಸರೆಯಾಗಿ ನಿಂತಿದ್ದು ರನ್ ಮಿಷಿನ್ ವಿರಾಟ್ ಕೊಹ್ಲಿ.

ಆರಂಭದಲ್ಲಿ ಮಂದಗತಿಯಲ್ಲಿ ಶುರು ಮಾಡಿದ ವಿರಾಟ್ ಕೊಹ್ಲಿ ಅರ್ಧ ಶತಕವಾಗುತ್ತಿದ್ದಂತೆ ತಮ್ಮ ವಿರಾಟ ರೂಪವನ್ನು ತೋರಿಸಿದರು. ಕೇವಲ 53 ಎಸೆತಗಳಲ್ಲಿ ಬರೊಬ್ಬರಿ 6 ಬೌಂಡರಿ 4 ಸಿಕ್ಸರ್‌ಗಳೊಂದಿಗೆ 83 ರನ್ ಸಿಡಿಸಿದ ಕೊಯ್ಲಿ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟರು.

ಕೊಹ್ಲಿಯ ಆಟಕ್ಕೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ತಮ್ಮ ಚಾಣಾಕ್ಷತನದ ಆಟದಿಂದ 40(37) ರನ್ ಸಿಡಿಸಿ ಮತ್ತೊಂದು ಕಡೆ ತಂಡಕ್ಕೆ ಬಲವಾಗಿ ನಿಂತಿದ್ದರು.

ಸ್ಕೋರ್‌ ಕಾರ್ಡ್‌

ಪಾಕಿಸ್ತಾನ್ : 159-8 (20)

ರಿಜ್ವಾನ್ : 4(12)
ಬಾಬರ್ ಆಜ಼ಮ್ : 0(1)
ಮಸೂದ್ : 52(42)
ಇಫ್ತಿಕರ್ ಅಹ್ಮದ್ : 51(34)
ಶಾದಬ್ ಖಾನ್ : 5(6)
ಹೈದರ್ ಅಲಿ : 2(4)
ನವಾಝ್ : 9(6)
ಆಸಿಫ್ ಅಲಿ : 2(3)
ಶಾಹೀನ್ ಅಫ್ರಿದಿ : 16(8)
ಹ್ಯಾರಿಸ್ ರಾಫ್ : 6(4)
ಇತರೆ : 12

ಬೌಲಿಂಗ್ :
ಭುವನೇಶ್ವರ್ : 4-0-22-1
ಹರ್ಷದೀಪ್ ಸಿಂಗ್ : 4-0-32-3
ಶಮಿ : 4-0-25-1
ಹಾರ್ದಿಕ್ ಪಾಂಡ್ಯಾ : 4-0-30-3
ಅಶ್ವಿನ್ : 3-0-23-0
ಅಕ್ಸರ್ : 1-0-21-0

ಭಾರತ : 160-6(20)

ಕೆ.ಎಲ್. ರಾಹುಲ್ : 4(8)
ರೋಹಿತ್ ಶರ್ಮ : 4(7)
ವಿರಾಟ್ ಕೊಹ್ಲಿ (ನಾಟ್ ಔಟ್) : 82(53)
ಸೂರ್ಯ ಕುಮಾರ್ ಯಾದವ್ : 15(10)
ಅಕ್ಸರ್ ಪಟೇಲ್ : 2(3)
ಹಾರ್ದಿಕ್ ಪಂಡ್ಯಾ : 40(37)
ದಿನೇಶ್ ಕಾರ್ತಿಕ್ : 1(2)
ರವಿಚಂದ್ರನ್ ಅಶ್ವಿನ್ : 1(1)
ಇತರೆ : 11

ಬೌಲಿಂಗ್

ಶಾಯೀನ್ ಅಫ್ರಿದಿ : 4-0-34-0
ನಸೀಮ್ ಶಾ : 4-0-23-1
ಹ್ಯಾರಿಸ್ ರಾಫ್ : 4-0-36-2
ಸಾದಬ್ ಖಾನ್ : 4-0-21-0
ಮೊಹ್ಮದ್ ನವಾಜ್ : 4-0-42-2

ಏಷ್ಯಾ ಕಪ್:‌ ಪಾಕಿಸ್ತಾನ ವಿರುದ್ಧ ಭಾರತ ಜಯ ಭೇರಿ
ದುಬೈ: ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಟಿ20 ಪಂದ್ಯವನ್ನು ಭಾರತ ತಂಡ 5 ವಿಕೆಟ್‌ ಅಂತರದಿಂದ ಗೆದ್ದು ಬೀಗಿತು.

ದುಬೈನ ಅಂತಾರಾಷ್ಟೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಹಣಾಹಣಿಯಲ್ಲಿ ಭಾರತ ಜಯಗಳಿಸುವುದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್‌ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಭಾರತದ ವೇಗದ ಬೌಲರ್‌ ಗಳ ನಿಖರ ದಾಳಿಗೆ ಸಿಲುಕಿ ನಿಗದಿತ 19.5 ಓವರ್‌ಗಳಲ್ಲಿ 147 ರನ್‌ ಗಳಿಸುವುದರೊಂದಿಗೆ ಸರ್ವಪತನ ಕಂಡಿತು.

ಬಳಿಕ ಗುರಿ ಬೆನ್ನತ್ತಿದ ಭಾರತದ ಪರ ವಿರಾಟ್‌ ಕೋಹ್ಲಿ 35, ರವೀಂದ್ರ ಜಡೇಜಾ 35, ಹಾರ್ದಿಕ್‌ ಪಾಂಡ್ಯ 33 ರನ್‌ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಆಲ್‌ ರೌಂಡ್‌ ಪ್ರದರ್ಶನ ತೋರಿದ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ನಲ್ಲಿ ಮಿಂಚಿ ಮೂರು ವಿಕೆಟ್‌ ಗಳನ್ನು ಪಡೆದಿದ್ದಲ್ಲದೆ, ಬ್ಯಾಂಟಿಂಗ್‌ ನಲ್ಲೂ ಅಬ್ಬರಿಸಿ ಒಂದು ಸಿಕ್ಸರ್‌, ನಾಲ್ಕು ಬೌಂಡರಿಯೊಂದಿಗೆ ಅಜೇಯ 33 ರನ್‌ ಗಳನ್ನು ಗಳಿಸಿ ಗೆಲುವಿಗೆ ಕಾರಣರಾದರು. ಗೆಲುವಿನ ಹೊಡೆತವನ್ನು ಸಿಕ್ಸರ್‌ ನೊಂದಿಗೆ ಬಾರಿಸಿದ ಹಾರ್ದಿಕ್‌ ಪಾಂಡ್ಯ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಭಾರತದ ಪರ ವೇಗದ ಬೌಲರ್‌ ಭುವನೇಶ್ವರ ಕುಮಾರ್‌ ಪಾಕಿಸ್ತಾನದ ಅಪಾಯಕಾರಿ ಆಟಗಾರ ಬಾಬರ್‌ ಅಜಮ್‌ ವಿಕೆಟ್‌ ಸೇರಿದಂತೆ ನಾಲ್ಕು ವಿಕೆಟ್‌ ಗಳನ್ನು ಪಡೆದರು. ಯುವ ಆಟಗಾರ ಅರ್ಷದೀಪ್‌ ಸಿಂಗ್‌ ಎರಡು ವಿಕೆಟ್‌ ಗಳಿಸಿದರು. ಪಾಕಿಸ್ತಾನದ ಎಲ್ಲ ವಿಕೆಟ್‌ ಗಳನ್ನು ವೇಗದ ಬೌಲರ್‌ ಗಳೇ ಪಡೆದಿದ್ದು ವಿಶೇಷವಾಗಿತ್ತು. ಭಾರತದ ಪರ ಟಿ ಟ್ವಿಂಟಿ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಎಲ್ಲ ವಿಕೆಟ್‌ ಗಳನ್ನು ವೇಗದ ಬೌಲರ್‌ ಗಳೇ ಪಡೆದರು.

ಪಾಕಿಸ್ತಾನ ಪೇರಿಸಿದ 147 ರನ್‌ ಗಳ ಸಾಮಾನ್ಯ ಮೊತ್ತವನ್ನು ಬೆನ್ನೆತ್ತಿದ್ದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ತಂಡದ ಉಪನಾಯಕ ಕೆ.ಎಲ್.ರಾಹುಲ್‌ ತಾವು ಎದುರಿಸಿದ ಮೊದಲ ಎಸೆತದಲ್ಲೇ ಬೌಲ್ಡ್‌ ಆಗಿ ಪೆವಿಲಿಯನ್‌ ಗೆ ಮರಳಿದರು. ಚೊಚ್ಚಲ ಟಿ ಟ್ವಿಂಟಿ ಪಂದ್ಯ ಆಡಿದ ನಸೀಮ್‌ ಶಾ ತಾವು ಎಸೆದ ಮೊದಲ ಓವರ್‌ ನಲ್ಲೇ ವಿಕೆಟ್‌ ಪಡೆದು ಸಂಭ್ರಮಿಸಿದರು.

ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಭಾರತದ ಇನ್ನಿಂಗ್ಸ್‌ ಕಟ್ಟಲು ಶ್ರಮಿಸಿದರಾದರೂ, ರೋಹಿತ್‌ ಶರ್ಮ ಸ್ಪಿನ್ನರ್‌ ನವಾಜ್‌ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸಲು ಹೋಗಿ ಇಫ್ತಿಕಾರ್‌ ಅವರಿಗೆ ಕ್ಯಾಚಿತ್ತು ಔಟಾದರು. ನಾಯಕ ರೋಹಿತ್‌ 18 ಚೆಂಡುಗಳಲ್ಲಿ ಕೇವಲ 12 ರನ್‌ ಗಳಿಸಲು ಶಕ್ತರಾದರು. ಇನ್ನೊಂದೆಡೆ ತಾಳ್ಮೆಯ ಆಟವಾಡಿದ ವಿರಾಟ್‌ ಕೊಹ್ಲಿ 34 ಎಸೆತಗಳಲ್ಲಿ 35 ರನ್‌ ಗಳಿಸಿ, ನವಾಜ್‌ ಅವರ ಬೌಲಿಂಗ್‌ ನಲ್ಲೇ ಇಫ್ತಿಕಾರ್‌ ಅವರಿಗೆ ಕ್ಯಾಚಿತ್ತು ಔಟಾದರು.

ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ಪಡೆದು ಆಡಲು ಬಂದ ರವೀಂದ್ರ ಜಡೇಜಾ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿ ಇರಿಸಿದ್ದಲ್ಲದೆ, 29 ಎಸೆತಗಳಲ್ಲಿ 35 ರನ್‌ ಗಳಿಸಿದರು. ಕೊನೆಯ ಓವರ್‌ ನಲ್ಲಿ ಗೆಲುವಿಗೆ ಏಳು ರನ್‌ ಗಳು ಬೇಕಾಗಿದ್ದಾಗ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಲ್ಡ್‌ ಆದರು.

ಪಂದ್ಯದ ಹೀರೋ ಹಾರ್ದಿಕ್‌ ಪಾಂಡ್ಯ ಒತ್ತಡದ ಸ್ಥಿತಿಯಲ್ಲಿ ಬ್ಯಾಟ್‌ ಬೀಸಿ ಕೇವಲ 17 ಎಸೆತಗಳಲ್ಲಿ 33 ರನ್‌ ಗಳಿಸಿ ಅಜೇಯರಾಗಿ ಉಳಿದರು.