india v/s new zeland – Peepal Media

ಕಿವಿಸ್ ಮುಡಿಗೇರಿದ ಏಕದಿನ ಸರಣಿ
ಕ್ರೈಸ್ಟ್ ಚರ್ಚ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ನ್ಯೂಜಿಲೆಂಡ್ ಪಾಲಾಗಿದೆ.

ಒಟ್ಟು ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳು ಮಳೆಯ ಕಾರಣ ರದ್ದಾಗಿದ್ದು ಮೊದಲ ಪಂದ್ಯವನ್ನು ಜಯಿಸಿದ್ದ ನ್ಯೂಜಿಲೆಂಡ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ತಮ್ಮ ಉತ್ತಮ ಬೌಲಿಂಗ್ ದಾಳಿಯಿಂದಾಗಿ ಭಾರತವನ್ನು 50 ಓವರ್ ಗಳ ಮುಕ್ತಾಯಕ್ಕೆ 219 ರನ್ ಗಳಿಗೆ ಕಟ್ಟಿಹಾಕಿದ್ದರು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಕೇವಲ ಒಂದು ವಿಕೆಟ್ ನಷ್ಟಕ್ಕೆ 18 ಓವರ್ ಗಳಲ್ಲಿ ಬರೋಬ್ಬರಿ 104 ರನ್ ದಾಖಲಿಸಿತ್ತು.

ಸರಣಿಯ ಎರಡನೇ ಏಕದಿನ ಪಂದ್ಯವೂ ಸಹ ಮಳೆಯ ಕಾರಣದಿಂದಾಗಿ ಫಲಿತಾಂಶ ಹೊರಬರಲಿಲ್ಲ ಹಾಗೆಯೇ ಇಂದಿನ ಪಂದ್ಯವೂ ಸಹ ಮಳೆಯ ಕಾರಣ ರದ್ದಾಗಿದೆ.

ಎರಡೂ ಪಂದ್ಯಗಳು ಮಳೆಯಿಂದ ರದ್ದಾದ ಕಾರಣ ನ್ಯೂಜಿಲೆಂಡ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಸೋಲಿನ ನಂತರ ಪ್ರತಿಕ್ರಿಯೆ ನೀಡಿದ ಭಾರತ ತಂಡದ ಕ್ಯಾಪ್ಟನ್ ಶಿಖರ್ ಧವನ್ , ʼನಮ್ಮ ತಂಡವು ಮುಂದಿನ ಬಾಂಗ್ಲಾ ದೇಶದ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಉತ್ತಮ‌ ಪ್ರದರ್ಶನ ತೋರಲಿದೆ. ಬಾಂಗ್ಲಾದೇಶದ ಸರಣಿಗೆ ಹವಾಮಾನ ಉತ್ತಮ ರೀತಿಯಲ್ಲಿ ಇರಬಹುದೆಂದು ಭಾವಿಸಿದ್ದೇವೆ’ ಎಂದು ತಿಳಿಸಿದರು.

ಸ್ಕೋರ್ ಕಾರ್ಡ್:

ಭಾರತ : 219/10 (47.3)

ಬ್ಯಾಟಿಂಗ್:

ಶಿಖರ್ ದವನ್: 28(45)

ಶಬ್ನಮ್ ಗಿಲ್: 13(22)

ಶ್ರೇಯಸ್ ಐಯ್ಯರ್ : 49(59)

ರಿಶಬ್ ಪಂತ್ : 10(16)

ಸೂರ್ಯಕುಮಾರ್ ಯಾದವ್ : 6(10)

ದೀಪಕ್ ಹೂಡಾ : 12(25)

ವಾಶಿಂಗ್ಟನ್ ಸುಂದರ್ : 51(64)

ಡಿ. ಚಾಹರ್ : 12(9)

ಚಾಹಲ್ : 8(22)

ಅರ್ಶದೀಪ್ ಸಿಂಗ್ : 9(9)

ಉಮ್ರಾನ್ ಮಲಿಕ್ : 0(4)

ಇತರೆ: 21

ಬೌಲಿಂಗ್ :

ಟೀಂ ಸೌತೀ: 8.3-1-36-2

ಮ್ಯಾಟ್ ಹೆರ್ರಿ : 10-2-29-0

ಮಿಲೆನ್ : 10-0-57-3

ಲಾಕಿ ಫರ್ಗ್ಯೂಸನ್ : 10-0-49-1

ಡ್ಯಾರಿಲ್ ಮೆಚೆಲ್ : 7-0-25-3

ಸ್ಯಾಂಟ್ನೆರ್ : 2-0-15-1

ನ್ಯೂಜಿಲೆಂಡ್ : 104/1(18)

ಬ್ಯಾಟಿಂಗ್ :

ಫಿಲ್ ಅಲೆನ್ : 57(54)

ಡಿವೋನ್ ಕಾನ್‌ವೇ : 38(51)

ಕೇನ್ ವಿಲಿಮ್ಸನ್ : 0(3)

ಇತರೆ : 0

ಬೌಲಿಂಗ್ :

ದೀಪಕ್ ಚಾಹರ್ : 5-0-30-0

ಅರ್ಶದೀಪ್ : 5-1-21-0

ಉಮ್ರಾನ್ ಮಲಿಕ್ : 5-0-31-1

ವಾಷಿಂಗ್ಟನ್ ಸುಂದರ್ : 3-0-16-0

ಸಂಜು ಸ್ಯಾಮ್ಸನ್ ಗೆ ತಪ್ಪಿದ ಅವಕಾಶ: ಸಿಟ್ಟಿಗೆದ್ದ ಅಭಿಮಾನಿಗಳು
ಸೆಡನ್ ಪಾರ್ಕ್ (ನ್ಯೂಜಿಲ್ಯಾಂಡ್): ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಇಂದು ಇಲ್ಲಿ ಆರಂಭಗೊಂಡಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿರುವುದಕ್ಕೆ ಅಭಿಮಾನಿಗಳು ಕೆರಳಿದ್ದಾರೆ.

ಟ್ವಿಟರ್ ನಲ್ಲಿ  #SanjuSamson ಟ್ರೆಂಡ್ ಆಗುತ್ತಿದ್ದು, ಮೊದಲನೇ ಏಕದಿನ ಪಂದ್ಯದಲ್ಲಿ ಸಂಜು ಚೆನ್ನಾಗಿ ಆಡಿದ್ದರೂ ಎರಡನೇ ಪಂದ್ಯಕ್ಕೆ ಡ್ರಾಪ್ ಮಾಡಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ.

ಪದೇಪದೇ ವಿಫಲರಾಗುತ್ತಿದ್ದರೂ ರಿಷಬ್ ಪಂಥ್ ಅವರನ್ನು ಆಡಿಸಿ, ಸಂಜು ಸ್ಯಾಮ್ಸನ್ ಅವರನ್ನು ಕೂರಿಸಲಾಗುತ್ತಿದೆ. ಬಿಸಿಸಿಐ ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದೆ. ಇದು ಅಕ್ಷಮ್ಯ ಎಂದು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಸಂಜು ಸ್ಯಾಮ್ಸನ್ ಅವರನ್ನು ಆಡಿಸಿ, ರಿಷಬ್ ಪಂಥ್ ದೇಶೀಯ ಪಂದ್ಯಾವಳಿಗಳಲ್ಲಿ ಆಡಿ ತನ್ನ ಸಾಮರ್ತ್ಯ ಸಾಬೀತುಪಡಿಸಲಿ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ನೀಡಿರುವ ಹೇಳಿಕೆಯನ್ನು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

Kris Srikanth:-
India messing up with team selection. Why you need Pant in the XI when Sanju Samson can keep also if Pant play at 4 then you are wasting both Sky and Sanju down the order. Bring in Hooda at 6 and ask Pant to go back to domestic and reinvent himself in white ball pic.twitter.com/E0rA3zcXTA
— SAMSONITE💭 (@thesuperroyal) November 26, 2022

ಸಂಜು ಸ್ಯಾಮ್ಸನ್ ಪಕ್ಷಪಾತ ಧೋರಣೆಗೆ ಬಲಿಪಶುವಾಗಿದ್ದಾರೆ. ಅವರಿಗೆ ಅವಕಾಶ ಕಲ್ಪಿಸುವವರೆಗೆ ನಾವು ಕ್ರಿಕೆಟ್ ನೋಡುವುದೇ ಇಲ್ಲ ಎಂದು ಆದರ್ಶ್ ಜೆ.ಎಸ್. ಎಂಬುವವರು ಟ್ವೀಟ್ ಮಾಡಿದ್ದಾರೆ.

Cricket craze gonna end here. Thanks to BCCI. from viru, yuvi to msd to sanju samson. Sanju is a victim of favourism running in bcci. Until it is stopped, I won't be watching any matches of team india. Replacing inform batsman is ridiculous. No more tweets🤐🤐🤐    #SanjuSamson pic.twitter.com/cCfxMz8uMX
— ADARSH J S (@never_give_u_p_) November 27, 2022

ಇತರ ಆಟಗಾರರಿಗಿಂತ ಹೆಚ್ಚಿನ ಅರ್ಹತೆ, ಉತ್ತಮ ದಾಖಲೆ ಇದ್ದರೂ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ಬಾಂಗ್ಲಾದೇಶ ಸರಣಿಗೆ ಕೈಬಿಡಲಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಸೆಡನ್ ಪಾರ್ಕ್ ನಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ 4.5 ಓವರ್ ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 22 ರನ್ ಗಳಿಸಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದು, ಶುಭಮನ್ ಗಿಲ್ 19, ಶಿಖರ್ ಧವನ್ 2 ರನ್ ಗಳಿಸಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.