indian constitution – Peepal Media

ಭಾರತ ಸಂವಿಧಾನದಲ್ಲಿ ವೈಜ್ಞಾನಿಕ ಮನೋವೃತ್ತಿ (ಅಂಕಣ)
ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ

Scientific Temper ಎಂಬ ಪದವನ್ನು ರೂಪಿಸಿ ಮೊಟ್ಟಮೊದಲು ಬಳಸಿದ್ದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು. ಅವರು ಇದನ್ನು 1946ರಲ್ಲಿ  ತಮ್ಮ “ಡಿಸ್ಕವರಿ ಆಫ್ ಇಂಡಿಯಾ” ಕೃತಿಯಲ್ಲಿ ಬಳಸಿದ್ದಾರೆ. ಅಲ್ಲಿ ಅವರು “ಸೈಂಟಿಫಿಕ್ ಟೆಂಪರ್” ಎಂದರೇನು ಎಂದೂ ವ್ಯಾಖ್ಯಾನಿಸಿದ್ದಾರೆ.

“The Scientific Temper is a way of life (defined in this context as an individual and social process of thinking and acting) which uses the scientific method and which may, consequently, include questioning, observing physical reality, testing, hypothesizing, analyzing, and communicating (not necessarily in that order).

ಸರಳವಾಗಿ ಹೇಳುವುದಾದರೆ,“ಪ್ರಶ್ನೆ, ಭೌತಿಕ ವಾಸ್ತವದ ಅವಲೋಕನ, ಪರೀಕ್ಷೆ, ಪರಿಕಲ್ಪನೆ, ವಿಶ್ಲೇಷಣೆ ಇವುಗಳನ್ನು ಒಳಗೊಂಡ ವಿಜ್ಞಾನ ವಿಧಾನವನ್ನು ಬಳಸುವ ಆಲೋಚನೆ ಮತ್ತು ಆಚರಣೆಯ ವೈಯಕ್ತಿಕ ಮತ್ತು ಸಾಮಾಜಿಕ ಪ್ರಕ್ರಿಯೆ.”ಇಲ್ಲಿ ಆಲೋಚನೆ ಮತ್ತು ಆಚರಣೆ ಎರಡರಲ್ಲಿಯೂ ಇದು ಕಂಡುಬಂದ ವೈಜ್ಞಾನಿಕ ಮನೋವೃತ್ತಿ ಸಾರ್ಥಕ, ಮತ್ತು ಇದು ವೈಯಕ್ತಿಕ ನೆಲೆಯಲ್ಲಷ್ಟೇ ಅಲ್ಲ, ಸಾಮಾಜಿಕ, ರಾಜಕೀಯ ನೆಲೆಯಲ್ಲಿಯೂ ಕಂಡುಬರಬೇಕು ಎಂಬ ಮಾತನ್ನು ಹೇಳಿರುವುದು ಅರ್ಥಪೂರ್ಣವಾಗಿದೆ.

ನೆಹರು ಅವರು ಆರಂಭದಿಂದಲೂ ವೈಜ್ಞಾನಿಕ ಮನೋವೃತ್ತಿ ಉಳ್ಳವರಾಗಿದ್ದರು. ಅವರಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ದೇವಸ್ಥಾನಗಳಿಂದ ಬಲುದೂರ. ಈ ಕುರಿತು ಮಹಾತ್ಮ ಗಾಂಧಿಯವರಿಗೆ ಇದ್ದ ನಂಬಿಕೆಗಳನ್ನೂ ಅವರು ಟೀಕಿಸುತ್ತಿದ್ದರು. ಹೀಗಾಗಿ ತಮ್ಮ “Discovery of India” – “ಭಾರತ ದರ್ಶನ”ದಲ್ಲಿ ಅವರು ವೈಜ್ಞಾನಿಕ ಮನೋವೃತ್ತಿಯ ಕುರಿತು ವಿಶದವಾಗಿ ವಿಶ್ಲೇಷಿಸಿದ್ದಾರೆ. 1928ರಲ್ಲಿ,  ಮಸ್ಸೌರಿಯಲ್ಲಿ ಓದುತ್ತಿದ್ದ 10 ವರ್ಷದ ಮಗಳು ಇಂದಿರಾ ಪ್ರಿಯದರ್ಶಿನಿಗೆ ಅವರು 30 ಪತ್ರಗಳನ್ನು ಬರೆಯುತ್ತಾರೆ; ಅವು ಹೇಗಿದ್ದೀಯ, ಚೆನ್ನಾಗಿದ್ದೀಯಾ ಎನ್ನುವ ರೀತಿಯ ತಂದೆ ಮಗಳಿಗೆ ಬರೆದ ಮುದ್ದಿನ ಪತ್ರಗಳಲ್ಲ; ಬದಲಿಗೆ, “ಬುಕ್ ಆಫ್ ನೇಚರ್” ಎಂಬ ಮೊದಲ ಪತ್ರದಿಂದ ಆರಂಭಿಸಿ ನೆಹರು ಅವರು  ಭೂಮಿಯಲ್ಲಿ ಜೀವದ ಉಗಮ ಹೇಗಾಯಿತು ಎಂದು ಬರೆಯುತ್ತಾರೆ. ನಂತರ ಒಂದೊಂದೇ ಪತ್ರದಲ್ಲಿ ಜೀವ ವಿಕಾಸ, ಪುರಾಣಗಳು, ಭಾಷೆಗಳು, ವಾಣಿಜ್ಯ, ಭೋಗೋಳ, ವಿಜ್ಞಾನ ಇತ್ಯಾದಿ ವಿವಿಧ ವಿಷಯಗಳ ಕುರಿತು ಬರೆಯುತ್ತಾರೆ. ಅವರ ಪತ್ರಗಳು ಒಬ್ಬ ಪ್ರಜ್ಞಾವಂತ ಶಿಕ್ಷಕ ಹತ್ತು ವರ್ಷದ ಮಗುವನ್ನು ಉದ್ದೇಶಿಸಿ ವಿಷಯಗಳನ್ನು ಹೇಗೆ ಕಲಿಸಬೇಕು ಎಂಬುದಕ್ಕೆ ಮಾದರಿಯಾಗಿವೆ. ಅವುಗಳಲ್ಲಿನ ಶೈಕ್ಷಣಿಕ ವಿಧಾನಗಳು, ಸರಳವಾದ ಭಾಷೆ, ನಿರೂಪಣಾ ಶೈಲಿಯ ಕುರಿತೇ, ಮಹಾರಾಷ್ಟ್ರದ ವೈಜಾಪುರದ ವಿನಾಯಕರಾವ್ ಪಾಟೀಲ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ.ಡಿ.ಎಸ್.ಸಾಳುಂಕೆಯವರು ಒಂದು ಅಧ್ಯಯನವನ್ನೇ ಪ್ರಕಟಿಸಿದ್ದಾರೆ. ಬಹುಶಃ ಎಳೆಯರಿಗಾಗಿ ಶೈಕ್ಷಣಿಕ ವಿಷಯಗಳ ಬಗ್ಗೆ ಬರೆಯುವವರು, ಬೋಧಿಸುವವರು ಈ ಮೂವತ್ತು ಪತ್ರಗಳನ್ನು ಈ ದೃಷ್ಠಿಯಿಂದ ಅಧ್ಯಯನಿಸುವುದು ಪ್ರಯೋಜನವಾದೀತು.

ಸ್ವಾತಂತ್ರ್ಯ ಹೋರಾಟದಲ್ಲಿ, ಸುಮಾರು 1920 ರಿಂದ 27 ವರ್ಷಗಳ ಕಾಲ ಸಕ್ರಿಯವಾಗಿದ್ದಾಗಲೇ ನೆಹರು ಅವರು ಸ್ವತಂತ್ರ ಭಾರತಕ್ಕಾಗಿ ಹಲವು ಕನಸುಗಳನ್ನು ಕಂಡಿದ್ದರು. ಅವು ಭ್ರಾಮಕ ಕನಸುಗಳಾಗಿರದೇ ಐತಿಹಾಸಿಕ ವಾಸ್ತವಗಳನ್ನು ಆಧರಿಸಿದ ಯೋಜನೆಗಳಾಗಿದ್ದವು. ಸ್ವಾತಂತ್ರ್ಯ ಬಂದು ಅವರೇ ದೇಶದ ಪ್ರಥಮ ಪ್ರಧಾನಿಯಾದಾಗ, ದೇಶವನ್ನು ಕಾಡುತ್ತಿದ್ದ ಹಸಿವು, ಬಡತನ, ನಿರಕ್ಷರತೆ ಇತ್ಯಾದಿ ತುರ್ತು ಸಮಸ್ಯೆಗಳ ಪರಿಹಾರಕ್ಕಾಗಿ ನೆಚ್ಚಿಕೊಂಡಿದ್ದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು. ಅವರು ಪ್ರಧಾನಿಯಾಗಿದ್ದ ಸುಮಾರು 15 ವರ್ಷಗಳಲ್ಲಿ 32 ಬೃಹತ್ ನೀರಾವರಿ/ವಿದ್ಯುತ್ ಯೋಜನೆಗಳು, ಉದ್ಯಮಗಳು, ಉನ್ನತ ದರ್ಜೆಯ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದರು, ಈಗಿನ ಪ್ರಧಾನಿಯವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟುವುದೇ ರಾಷ್ಟ್ರೀಯ ಕಾರ್ಯ ಯೋಜನೆಯಾಗಿದೆ. ಆದರೆ, ಈ ಮೊದಲ ಪ್ರಧಾನಿ, 1948ರಲ್ಲಿ ಭಾಕ್ರಾ ನಂಗಲ್ ಅಣೆಕಟ್ಟಿಗೆ ಶಂಕುಸ್ಥಾಪನೆ ಮಾಡಿ ಮಾತಾಡಿದಾಗ, ಇವೇ “ಭಾರತದ ಆಧುನಿಕ ದೇವಾಲಯಗಳು” ಎಂಬ  ಹೇಳಿಕೆಯನ್ನು ಕೊಟ್ಟರು. ಇಂಥ ವಿಷನರಿಯಾಗಿದ್ದ ಪ್ರಧಾನಿ ನೆಹರು ಅವರು ನಿರೂಪಿಸಿದ “ವೈಜ್ಞಾನಿಕ ಮನೋವೃತ್ತಿ”ಯ ವ್ಯಾಖ್ಯೆ ಈಗಲೂ ಪ್ರಚಲಿತ.

ವೈಜ್ಞಾನಿಕ ಮನೋವೃತ್ತಿ ಮತ್ತು ಭಾರತ ಸಂವಿಧಾನ

“ಭಾರತ ಸಂವಿಧಾನ ಎಂಥ ಗ್ರಂಥ” ಎಂದು ಕೇಳಿದರೆ ನಿಮ್ಮ ಉತ್ತರವೇನು? ಕೆಲವರಿಗೆ ಭಾರತ ಸಂವಿಧಾನ ಸಾರುವ ಸಮಾನತೆ, ಸಮತೆ ಮತ್ತು ಇತರ ಹಕ್ಕುಗಳ ಕುರಿತು ಗುನುಗು ಇದೆ, ಹೊರನೋಟಕ್ಕೆ ಅದನ್ನು ಗೌರವಿಸುತ್ತೇವೆ ಎಂದು ಆಲೋಚನೆಯಲ್ಲಿ ಹೇಳಿದರೂ ಆಚರಣೆಯಲ್ಲಿ ಅದನ್ನು ಅವಹೇಳನ ಮಾಡುತ್ತಾರೆ. 2018ರ ಆಗಸ್ಟ್ 9ರಂದು ಯೂತ್ ಫಾರ್ ಇಕ್ವಾಲಿಟಿ ಫೌಂಡೇಷನ್ (ಅಜಾದ್ ಸೇನಾ) ಮತ್ತು ಆರಕ್ಷಣ್ ವಿರೋಧಿ ಪಾರ್ಟಿ ಎಂಬ ಎರಡು ಸಂಘಟನೆಗಳು ಎಸ್.ಸಿ./ಎಸ್.ಟಿ (ದೌರ್ಜನ್ಯಗಳ ತಡೆಗಟ್ಟುವಿಕೆ) ಕಾಯ್ದೆಯಲ್ಲಿ ತರಲಾದ ತಿದ್ದುಪಡಿಯ ವಿರುದ್ಧ ಪ್ರತಿಭಟನೆಯ ವೇಳೆಯಲ್ಲಿ ಭಾರತ ಸಂವಿಧಾನದ ಪ್ರತಿಯನ್ನು ಸುಟ್ಟರು. ಅಪರಾಧಿಗಳನ್ನು ಬಂಧಿಸಿದರು, ಶಿಕ್ಷೆಯೂ ಆಗಿರಬಹುದು. ಇದು ಆಕ್ರೋಶದಲ್ಲಿ ಭೌತಿಕವಾಗಿ ಸಂವಿಧಾನದ ಪ್ರತಿಯನ್ನು ಸುಟ್ಟ ಪ್ರಕರಣ, ಆದರೆ ಸಂವಿಧಾನವನ್ನು ಗೌರವಿಸುತ್ತೇವೆ ಎಂದು ಸಂಭಾವಿತರ ಹಾಗೆ ಮಾತಾಡಿ, ಅದರ ಮೂಲಭೂತ ತತ್ತ್ವಗಳನ್ನೇ ದಿನವೂ ಸುಡುವ ಬಹುತೇಕ ಜನಪ್ರತಿನಿಧಿಗಳು ಈ ದೂಷಣೆಯಿಂದ ತಪ್ಪಿಸಿಕೊಳ್ಳುತ್ತಾರೆ. ಇರಲಿ.

ಇನ್ನೊಂದು ವರ್ಗವಿದೆ. ಅವರು, “ಭಾರತ ಸಂವಿಧಾನ ಒಂದು“ಪವಿತ್ರ” ಗ್ರಂಥ, ಪ್ರಜಾಪ್ರಭುತ್ವ ನಮ್ಮ ಧರ್ಮ, ಸಂವಿಧಾನ ನಮ್ಮ ಧರ್ಮಗ್ರಂಥ” ಎಂದು ಹೇಳುತ್ತಾರೆ, ಡಾ.ಅಂಬೇಡ್ಕರ್ ಜಯಂತಿಯಂದು ಸಂವಿಧಾನದ ಪ್ರತಿಗೆ ಹೂ ಹಾಕಿ ಶಾಸ್ತ್ರೋಕ್ತವಾಗಿ ಊದಿನ ಕಟ್ಟಿ ಹಚ್ಚಿ ಆರತಿ ಬೆಳಗಿ ಪೂಜೆ ಮಾಡುವವರೂ ಇದ್ದಾರೆ. ಅವರ ಅಭಿಮಾನವನ್ನು ಮೆಚ್ಚಬೇಕು. ಮೊದಲು ನಾನೂ ಹಾಗೇ ಹೇಳುತ್ತಿದ್ದೆ. ಆದರೆ ಹೆಚ್ಚು ತಿಳಿವಳಿಕೆ ಬಂದ ನಂತರ ನನ್ನ ಅಭಿಪ್ರಾಯ ಬೇರೆಯಾಯಿತು. ಕುರಾನ್, ಬೈಬಲ್, ಗೀತೆ ಇತ್ಯಾದಿ ಗ್ರಂಥಗಳನ್ನು ನಾವು ದೈವಿಕ, ಅಪೌರುಷೇಯ, ಅವತೀರ್ಣಗೊಂಡಿದ್ದು, ಪವಿತ್ರ ಎಂದೆಲ್ಲಾ ಭಾವಿಸುತ್ತೇವೆ. ಆದ್ದರಿಂದ ಅವುಗಳನ್ನು ಗೌರವಿಸುತ್ತೇವೆ, ಅವುಗಳಿಗೆ ಅವಮಾನವಾದರೆ ಜೀವ ಕೊಡುತ್ತೇವೆ, ಆದರೆ ತೆಗೆದು ಓದುವುದಿಲ್ಲ, ಅದರಲ್ಲಿ ವಾಸ್ತವವಾಗಿ ಏನು ಹೇಳಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ತಾವು ಓದಿದ್ದೇವೆ ಎಂದು ಹೇಳುವರು ಅದರಲ್ಲಿದೆ ಎಂದು ಹೇಳುವುದನ್ನು ಬುದ್ಧಿ ಮುಚ್ಚಿಕೊಂಡು ನಂಬುತ್ತೇವೆ. ಭಾರತ ಸಂವಿಧಾನದ ಕುರಿತು ಈ ಮಾದರಿಯ ಅಂಧವಿಶ್ವಾಸ, ಭಕ್ತಿಯೂ ಸಲ್ಲದು.

ವಾಸ್ತವವಾಗಿ ಭಾರತ ಸಂವಿಧಾನ ಇದ್ಯಾವುದೂ ಅಲ್ಲ. ಎಂದರೆ ಇದು ದೈವಿಕವಲ್ಲ, ಲೌಕಿಕ. ಇದು ಸ್ವತಃ ದೇವರಿಂದ ದೇವದೂತನ ಮೂಲಕ ಅವತೀರ್ಣಗೊಂಡಿಲ್ಲ, ಎಂದರೆ ಅಪೌರುಷೇಯವಲ್ಲ, ಇದನ್ನು ಮನುಷ್ಯರೇ ಬರೆದಿದ್ದು, ಇದು ಪವಿತ್ರವಲ್ಲ, ಮೌಲಿಕವಾದದ್ದು. ಡಾ.ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ, 6.12.1946 ರಿಂದ  24.1.1950ರ (2 ವರ್ಷ 11 ತಿಂಗಳು 18 ದಿನ) ವರೆಗೆ ನಡೆದ ಸಂವಿಧಾನ ರಚನಾ ಸಭೆಯಲ್ಲಿ ಇದರ ರಚನೆಯಾಯಿತು. ವಿವಿಧ ರಾಜ್ಯಗಳಿಂದ ಬಂದ, 15 ಜನ ಮಹಿಳೆಯರೂ ಸೇರಿದ ಹಾಗೆ 299 ಜನಪ್ರತಿನಿಧಿಗಳು ಇದರ ರಚನೆಯಲ್ಲಿ ಪಾಲ್ಗೊಂಡರು. 22 ಸಮಿತಿಗಳಲ್ಲಿ ಹಲವಾರು ವಿಷಯಗಳ ಸುದೀರ್ಘ ವಿಶ್ಲೇಷಣೆ ಮಾಡಿದರು. ಆಯಾ ಸಮಿತಿಗಳಲ್ಲಿ ಮೂಡಿದ ವರದಿಗಳನ್ನು ಸಂವಿಧಾನ ರಚನಾ ಸಭೆಯ 11 ಗೋಷ್ಠಿಗಳಲ್ಲಿ 166 ದಿನ ಎಲ್ಲರೂ ಸೇರಿ ಚರ್ಚಿಸಿ ಪರಿಷ್ಕರಿಸಲಾಯಿತು. 29.08.1947 ರಂದು ರಚನೆಯಾದ ’ಕರಡು ರಚನಾ ಸಮಿತಿ’ಯು ಅದಕ್ಕೆ ಒಂದು ಗ್ರಂಥದ ರೂಪವನ್ನು ನೀಡಿತು. ಈ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿದ್ವತ್ತು, ಅನುಭವ, ನಿರಂತರದ ಪರಿಶ್ರಮದ ಫಲವಾಗಿ ಈಗಿನ ಸಂವಿಧಾನದ ಕರಡು ಸಿದ್ಧವಾಯಿತು.26.11.1949ರಂದು ಭಾರತ ಸಂಸತ್ತು ಇದನ್ನು ಅಂಗೀಕರಿಸಿ, 26.01.1950ರಂದು ಇದು ದೇಶದಲ್ಲಿ ಜಾರಿಗೆ ಬಂತು. ಇದರ ರಚನೆಯ ಪ್ರಕ್ರಿಯೆಯೇ ಅತ್ಯಂತ ಲೌಕಿಕವಾಗಿತ್ತು, ಜನತಂತ್ರಾತ್ಮಕವಾಗಿತ್ತು, ಆ ಕಾರಣಕ್ಕಾಗಿ ವೈಜ್ಞಾನಿಕವಾಗಿತ್ತು ಎಂಬುದನ್ನು ಗಮನಿಸಿ.

ಸಂವಿಧಾನದ ಪ್ರಸ್ತಾವನೆ

ಭಾರತ ಸಂವಿಧಾನದ ಮೊದಲ ಪುಟವೇ ಪ್ರಸ್ತಾವನೆ. Preamble of Constitution of India. ಇದು ಇಡೀ ಭಾರತ ಸಂವಿಧಾನದ ಮೂಲ ಆಶಯ, ತಾತ್ಪರ್ಯ, ದ್ಯೇಯೋದ್ಧೇಶದ ಹೇಳಿಕೆ, ಶಪಥ. ಇದರಲ್ಲಿರುವ ಅಂಶಗಳನ್ನು ನಾವು ಬಿಡಿಸಿ ಮನನ ಮಾಡಿಕೊಳ್ಳುವುದು, ಆಲೋಚನೆ ಮತ್ತು ಆಚರಣೆಯಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಸಂವಿಧಾನದ ಪ್ರಸ್ತಾವನೆ ಸಂವಿಧಾನದ ತಾತ್ಪರ್ಯವಿದ್ದಂತೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಾಸ್ತವವಾಗಿ ಪ್ರಸ್ತಾವನೆಯೇ ’ಸಂವಿಧಾನ’. ನಂತರ ಬರುವ 25 ಭಾಗಗಳ 448 ಅನುಚ್ಛೇದಗಳು, 12 ಅನುಸೂಚಿ ಸಹಿತವಾದ ಸುಮಾರು 250 ಪುಟಗಳ ಪಠ್ಯವು ಪ್ರಸ್ತಾವನೆಯಲ್ಲಿ ಬರುವ ಒಂದೊಂದು ಪದಕ್ಕೆ ನೀಡಿರುವ ’ಅಡಿಟಿಪ್ಪಣಿ’ ಅಥವಾ ’ವಿವರ’ ಎನ್ನಬಹುದು. ಅಷ್ಟು ಮುಖ್ಯ ಸಂವಿಧಾನದ ಪ್ರಸ್ತಾವನೆ. ಪ್ರಸ್ತಾವನೆಯ ಪಠ್ಯದ ಕೆಲವು ಅಂಶಗಳನ್ನು ನೋಡೋಣ;

1.ಇಡೀ ಭಾರತ ಸಂವಿಧಾನ ಆರಂಭವಾಗುವುದೇ We the People of India, “ಭಾರತ ಜನತೆಯಾದ ನಾವು”ಎಂಬ ಮಾತಿನಿಂದ…ಪ್ರಸ್ತಾವನೆ ಕೊನೆಗೊಳ್ಳುವುದು “ಈ ಸಂವಿಧಾನವನ್ನುನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ” ಎಂದು.ಎಂದರೆ ದೇವರಾಗಲೀ, ಪ್ರವಾದಿಗಳಾಗಲೀ, ಯಾವುದೇ ಶಾಹಿಗಳಾಗಲೀ ಇದನ್ನು ನಮ್ಮ ಮೇಲೆ ಹೇರಿಲ್ಲ.ನಮಗೆ ನಾವೇ ವಿಧಿಸಿಕೊಂಡಿದ್ದೇವೆ. ಈ ಪದಗಳನ್ನು ಮನನ ಮಾಡಿಕೊಂಡರೆ ಇದು ನಮ್ಮದೇ ಸಂವಿಧಾನ ಎಂಬ ಪ್ರೀತಿ, ಅಭಿಮಾನ, ಶ್ರದ್ಧೆ, ಜವಾಬ್ದಾರಿ ಮೂಡುತ್ತದೆ. ಮುಂದಿನದೆಲ್ಲ ಹೆಚ್ಚು ಸುಗಮವಾಗುತ್ತದೆ.

2.ಸ್ವತಂತ್ರ ಭಾರತವನ್ನು ಕಟ್ಟುವುದಕ್ಕಾಗಿ ನಮ್ಮ ಗುರಿಗಳೇನು ಎನ್ನುವುದನ್ನು ಪ್ರಸ್ತಾವನೆ Sovereign, Socialist, Secular, Democratic Republic ಎಂದು ಹೇಳಿದೆ. ಇದರಲ್ಲಿ ಎರಡು ಪದಗಳನ್ನು ಮಾತ್ರ ನಾನು ವಿಮರ್ಶೆಗೆ ತೆಗೆದುಕೊಳ್ಳುತ್ತೇನೆ.

ಪ್ರಸ್ತಾವನೆಯ ಇಂಗ್ಲಿಷ್ ಆವೃತ್ತಿಯಲ್ಲಿ Secular ಎಂಬ ಪದವನ್ನು ಬಳಸಿದೆ. ಕೇಂಬ್ರಿಜ್ ಇಂಗ್ಲಿಷ್ ನಿಘಂಟುವಿನಲ್ಲಿ ಇದರ ಅರ್ಥ, ’not connected with religion or spiritual matters’ ಮತ್ತು ‘not having any connection with religion’ ಎಂದಿದೆ. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟುವಿನಲ್ಲಿ Secularಎನ್ನುವ ಪದಕ್ಕೆ, “ಲೌಕಿಕ, ಜಾತ್ಯತೀತ, ಮತ ಧರ್ಮಾತೀತ, ರಾಷ್ಟ್ರನೀತಿ ಆಡಳಿತ ವ್ಯವಸ್ಥೆಯಲ್ಲಿ ಧರ್ಮದ ಪ್ರವೇಶ ಕೂಡದೆನ್ನುವ; ಧಾರ್ಮಿಕ ಕ್ಷೇತ್ರಕ್ಕೆ, ಚರ್ಚು, ಮಠ, ಮಸೀದಿ ಇತ್ಯಾದಿಗಳಿಗೆ ಸಂಬಂಧಿಸದೇ ಇರುವ…” ಎಂದಿದೆ.

ಇದನ್ನು ಅನುಸರಿಸಿ ಕೆಲವು ಭಾಷೆಗಳಲ್ಲಿ ಸೆಕ್ಯುಲರ್ ಎಂಬ ಪದವನ್ನು ಅನುವಾದ ಮಾಡಿಕೊಂಡಿರುವುದನ್ನು ನೋಡಿ: ಮೂಲ ಇಂಗ್ಲಿಷ್ ಆವೃತ್ತಿಯೊಂದಿಗೇ ರಚಿತವಾದ ಹಿಂದಿ ಆವೃತ್ತಿಯಲ್ಲಿ ’ಪಂಥ್ ನಿರಪೇಕ್ಷ್’ ಎಂಬ ಪದವಿದೆ, ಹಾಗೆಯೇ ತೆಲುಗು-ಲೌಕಿಕ, ಮರಾಠಿ-ಧರ್ಮ್ ನಿರಪೇಕ್ಷ್, ಬಂಗಾಲಿ-ಧರ್ಮ್ ನಿರಪೇಕ್ಷ್. ಆದರೆ ಕನ್ನಡದಲ್ಲಿ ಸರಕಾರದ ಅಧಿಕೃತ ಅನುವಾದದಲ್ಲಿ [1]ಸೆಕ್ಯುಲರ್ ಎಂಬ ಪದಕ್ಕೆ “ಸರ್ವಧರ್ಮ ಸಮಭಾವದ” ಎಂಬ ಪದವನ್ನು ಬಳಸಿದ್ದಾರೆ. ಈ ಅರ್ಥ ಎಲ್ಲಿಯೂ ಇಲ್ಲ ಅನ್ನುವುದಷ್ಟೆ ಅಲ್ಲ, ಮೂಲ ಅರ್ಥವನ್ನು ಇದು ಹಾದಿ ತಪ್ಪಿಸುತ್ತದೆ. ಸಂವಿಧಾನದ ಮೂಲ ಆಶಯಕ್ಕೆ ತದ್ವಿರುದ್ಧವಾಗಿದೆ. ಆದ್ದರಿಂದ ಸಂವಿಧಾನದ ಪ್ರಸ್ತಾವನೆಯನ್ನು ಅರ್ಥ ಮಾಡಿಕೊಳ್ಳುವಾಗ ನಾವು ಸೆಕ್ಯುಲರ್ ಎಂಬ ಪದವನ್ನು “ಮತಧರ್ಮ ನಿರಪೇಕ್ಷ” ಎಂದೇ ಅರ್ಥ ಮಾಡಿಕೊಳ್ಳಬೇಕು.

3. ಪ್ರಸ್ತಾವನೆಯಲ್ಲಿರುವ ಇನ್ನೊಂದು ಪದ, Democratic ಎನ್ನುವುದು. ಇದನ್ನು ಬಂಗಾಲಿಯಲ್ಲಿ ಜನತಾಂತ್ರಿಕ್, ಹಿಂದಿಯಲ್ಲಿ ಲೋಕತಂತ್ರಾತ್ಮಕ್, ಮರಾಠಿಯಲ್ಲಿ ಲೋಕಶಾಶಿ, ತಮಿಳಿನಲ್ಲಿ ಜನನಾಯಕ ಎಂದೆಲ್ಲಾ ಮಾಡಿಕೊಂಡಿದ್ದಾರೆ. ಇವು ಹೆಚ್ಚು ಸರಿ. ಆದರೆ ಕನ್ನಡದ ಅಧಿಕೃತ ಅನುವಾದದಲ್ಲಿ Democratic ಎನ್ನುವುದಕ್ಕೆ“ಪ್ರಜಾಸತ್ತಾತ್ಮಕ”ಎಂಬ ಪದವನ್ನು ಬಳಸಲಾಗಿದೆ (ಹೆಚ್ಚಿನವರು ಪ್ರಜಾಪ್ರಭುತ್ವ ಎಂಬ ಪದವನ್ನೇ ಬಳಸುತ್ತಾರೆ.) ಎಂದರೆ ಇಲ್ಲಿ ನಮ್ಮನ್ನು ’ಪ್ರಜೆ’ ಎಂದು ಕರೆಯಲಾಗಿದೆ. ಅನೇಕ ಬಗೆಯ ಪ್ರಭುಗಳು ಇದ್ದಾಗ ನಾವು ವಿನೀತ ಪ್ರಜೆಗಳಾಗಿದ್ದೆವು. ಈಗ ನಾವೇ ದೇಶದ ಸಮಷ್ಠಿ ಮಾಲೀಕರು, ಈಗ ಯಾರೂ ಪ್ರಭುಗಳಿಲ್ಲ, ನಾವೂ ಪ್ರಭುಗಳಾಗಬಾರದು. ನಾವು ಈ ದೇಶದ citizenಗಳು, ನಾಗರಿಕರು, ಜನರು. ಆದ್ದರಿಂದ ನಮ್ಮದು ಜನಸತ್ತಾತ್ಮಕ ಗಣರಾಜ್ಯ.

ಎಲ್ಲ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮತೆ ದೊರೆಯುವಂತೆ ಮಾಡುವ ಮತ್ತು ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವ ದೃಢ ಸಂಕಲ್ಪ ಮಾಡಿದ್ದೇವೆ ಎಂದಿದೆ. ವಿಧಾನದ ಒಳಗಿನ ಯಾವುದೇ ಅನುಚ್ಛೇದ ಪ್ರಸ್ತಾವನೆಯಲ್ಲಿನ ಮೌಲ್ಯಗಳನ್ನು ಮೀರುವಂತಿಲ್ಲ, ಅದಕ್ಕೆ ಅನುಗುಣವಾಗಿಯೇ ಇರಬೇಕು ಎಂದಾದ ಮೇಲೆ ಇಡೀ ಸಂವಿಧಾನವು ಹೇಗೆ ವೈಚಾರಿಕತೆ, ತರ್ಕ, ಸಾಮಾಜಿಕ ನ್ಯಾಯ, ವೈಜ್ಞಾನಿಕ ಮನೋವೃತ್ತಿಯನ್ನು ಆಧರಿಸಿದೆ ಎಂಬುದನ್ನು ಪ್ರಸ್ತಾವನೆಯಲ್ಲಿಯೇ ದೃಢಪಡಿಸಲಾಗಿದೆ.

ಸಂವಿಧಾನ ಸಾಕ್ಷರತೆ

ಸಂವಿಧಾನದ ಪ್ರಕಾರ ನಮ್ಮದು ಜನ ತಂತ್ರಾತ್ಮಕ ಗಣರಾಜ್ಯ. ಎಂದರೆ ಈ ದೇಶದ ನಾಗರಿಕರೇ ಇಡೀ ದೇಶದ ಸಮಷ್ಠಿ ಮಾಲೀಕರು; ದೇಶದ ಆಗುಹೋಗುಗಳಿಗೆ ಬಾಧ್ಯಸ್ಥರು, ಹೊಣೆಗಾರರು. ನಾಗರಿಕರು ಉತ್ಪಾದನೆ, ಸಂಶೋಧನೆ, ಸೇವೆ, ದುಡಿಮೆ ಇತ್ಯಾದಿ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ ಅವರ ಪರವಾಗಿ ಈ ದೇಶವನ್ನು (ಆಳಲು ಅಲ್ಲ) ನಡೆಸಿಕೊಂಡು ಹೋಗಲು ಅವರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಚುನಾವಣೆಗಳಲ್ಲಿ (ಮತ’ದಾನ’ ಮಾಡಿ ಅಲ್ಲ) ಮತ (ಅಭಿಪ್ರಾಯ)ದ ಹಕ್ಕನ್ನು ಚಲಾಯಿಸುವ ಮೂಲಕ ಇದನ್ನು ಮಾಡುತ್ತಾರೆ. ಚುನಾಯಿಸಿ ಬರುವವರು ನಮ್ಮ ’ನಾಯಕರಲ್ಲ’, ಅವರು ನಮ್ಮ ಪ್ರತಿನಿಧಿಗಳು. ಅವರಿಗೆ ಸಮಯವಿದೆ, ಪರಿಣತಿ, ಅನುಭವ ಇದೆ ಎಂಬುದಕ್ಕಾಗಿ ನಾವು ಅವರನ್ನು ಆಯ್ಕೆ ಮಾಡುತ್ತೇವೆ. ಅವರಿಗೆ ಸಂವಿಧಾನ ಬದ್ಧವಾದ ಸ್ಥಾನಮಾನ, ಅಧಿಕಾರ, ಸಂಭಾವನೆ, ಸೌಕರ್ಯ, ಭತ್ಯ ಇತ್ಯಾದಿ ಎಲ್ಲವನ್ನೂ ಒದಗಿಸಿ, ನೀವು ಆಯ್ಕೆಯಾಗಿರುವ ಅವಧಿ ಮುಗಿಯುವ ವರೆಗೆ ಪ್ರಾಮಾಣಿಕವಾಗಿ ನಮ್ಮ ಅಭ್ಯುದಯಕ್ಕಾಗಿ ದುಡಿಯಿರಿ ಎಂದು ಕಳಿಸಿರುತ್ತೇವೆ. ಆದರೆ ಈ ಮಾದರಿಯಲ್ಲಿ ತಮ್ಮ ಅಧಿಕಾರವೇನು, ತಮ್ಮ ಮತದ ಮಹತ್ವವೇನು ಎಂಬುದು ನಾಗರಿಕರಿಗೆ ಗೊತ್ತಿದೆಯೇ? ಸಂವಿಧಾನ ಜಾರಿಯಾದ 1950ರ ವರ್ಷದ ಭಾರತೀಯರಿಗೆ ಹೋಗಲಿ, ಈಗಿನ 2020ರ ಸಾರ್ವಜನಿಕರಿಗಾದರೂ ಸಂವಿಧಾನ ಮತ್ತು ಅದರ ಮಹತ್ವದ ಕುರಿತು ಅರಿವಿದೆಯೇ? ಇಲ್ಲ.

ಹೀಗಾಗಿ, ಭಾರತ ಸಂವಿಧಾನದ ಮೂಲಭೂತ ಸಾಕ್ಷರತೆ ಭಾರತದ ನಾಗರಿಕರಿಗೆ ಇರಬೇಕಾಗುತ್ತದೆ; ಮುಖ್ಯವಾಗಿ ಮತವನ್ನು ಚಲಾಯಿಸಿ ದೇಶ ನಡೆಸುವವರನ್ನು ಆಯ್ಕೆ ಮಾಡುವ ವಯಸ್ಕರಿಗೆ ಸಂವಿಧಾನದ ಮೂಲಭೂತ ಅಂಶಗಳು ಗೊತ್ತಿರಬೇಕಾಗುತ್ತದೆ. ಆದರೆ, ಅದ್ಯಾಕೋ, ಅಷ್ಟೊಂದು ಕಾಳಜಿಯಿಂದ, ಸಾಮಾಜಿಕ ಹೊಣೆಗಾರಿಕೆಯಿಂದ ಸಂವಿಧಾನವನ್ನು ರಚಿಸಿ, ಜಾರಿಗೆ ತಂದ ಆಗಿನ ಹಿರಿಯರು, ನಂತರ ಅದರ ಕುರಿತು ದೇಶದ ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಗೌಣವಾಗಿ ಕಂಡರು, ಜನಸತ್ತಾತ್ಮಕ ವ್ಯವಸ್ಥೆಯನ್ನು ಅಂಗೀಕರಿಸಿದ ಆರಂಭದಿಂದಲೇ ಆಗಿರುವ  ಬಹುದೊಡ್ಡ ಪ್ರಮಾದವಿದು. ಜನರ ಪ್ರತಿನಿಧಿಗಳು ಎಂದು ಹೇಳಿಕೊಂಡು ಸಂವಿಧಾನ ರಚನಾ ಸಭೆಯಲ್ಲಿ ಕುಳಿತು ಪರಿಶ್ರಮ ವಹಿಸಿ ಅದ್ಭುತವಾದ ಸಂವಿಧಾನವನ್ನು ಸಾಕಾರಗೊಳಿಸಿದ ಆ ಹಿರಿಯರು, ಸಭಾಧ್ಯಕ್ಷರೂ, ತಾವೂ ಅದಕ್ಕೆ ’ಭಾರತದ ಜನತೆಯಾದ ನಮ್ಮ’ ಪರವಾಗಿ ಸಹಿ ಹಾಕಿ, 1950ರ ಜನವರಿ 26ರಂದು ಅದನ್ನು ಜಾರಿ ಮಾಡಿದ ನಂತರವಾದರೂ ಕೂಡಲೇ ಮಾಡಬೇಕಾದ ಒಂದು ಕೆಲಸವಿತ್ತು. ಆಗ ಭಾರತದ ಜನಸಂಖ್ಯೆ 36 ಕೋಟಿ ಇತ್ತು. ಅವರನ್ನು ಉದ್ದೇಶಿಸಿ, “ನೋಡಿಯಪ್ಪಾ, ನಿಮ್ಮ ಪರವಾಗಿ ಎಂದು ಹೇಳಿಕೊಂಡು ನಾವು ನಮ್ಮೆಲ್ಲರಿಗಾಗಿ ಈ ಸಂವಿಧಾನವನ್ನು ರಚಿಸಿದ್ದೇವೆ. ಇದರ ಅನುಷ್ಠಾನದಲ್ಲಿ ನೀವೂ ಕೂಡ ಸಮಸಮ ಭಾಧ್ಯಸ್ಥರು, ನೀವೂ ಇದರ ಕುರಿತು ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಸೂಕ್ತ” ಎಂದು ಪ್ರಾಮಾಣಿಕವಾಗಿ ಹೇಳಬೇಕಾಗಿತ್ತು. ಸಂವಿಧಾನದ ಮೂಲ ತತ್ತ್ವಗಳು, ಹಕ್ಕುಗಳು, ಬಾಧ್ಯತೆಗಳು ಇತ್ಯಾದಿಗಳನ್ನು ಸರಳಗೊಳಿಸಿ, ಕೈಪಿಡಿ ರಚನೆ ಮಾಡಬೇಕಾಗಿತ್ತು. ಅದನ್ನು ಬಳಸಿ ಬೃಹತ್ ಪ್ರಮಾಣದಲ್ಲಿ “ಸಂವಿಧಾನ ಸಾಕ್ಷರತಾ” ಆಂದೋಲನವನ್ನು ನಡೆಸಬೇಕಾಗಿತ್ತು. ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ಮುನ್ನ ದೇಶದ ಮಾಲೀಕರಿಗೆ ಅದರ ಕುರಿತು ಅರಿವನ್ನು ಮೂಡಿಸಬೇಕಾಗಿತ್ತು. ಕೊನೆಯ ಪಕ್ಷ, ಮೊದಲ ಪಂಚವಾರ್ಷಿಕ ಯೋಜನೆಯಲ್ಲಿಯಾದರೂ ಸಂವಿಧಾನ ಸಾಕ್ಷರತೆಗೆ ಪ್ರಪ್ರಥಮ ಆದ್ಯತೆಯನ್ನು ನೀಡಬೇಕಾಗಿತ್ತು. ಆಗಿನ ಸಂವಿಧಾನ ಸಭೆಯ 299 ಪ್ರತಿನಿಧಿಗಳ ಅನುಮೋದನೆ ಪಡೆದ ಹಾಗೆ ಜನರ ಸಹಮತಿಯನ್ನು ಪಡೆಯಬೇಕಾಗಿತ್ತು. ಜನರನ್ನು ಅವರ ಸಂವಿಧಾನದ ಕುರಿತು ಸಾಕ್ಷರರನ್ನಾಗಿ ಮಾಡಬೇಕಾಗಿತ್ತು; ಇದು ಅಕ್ಷರದ ಸಾಕ್ಷರತೆಗಿಂತ, ಬಡತನ ನಿವಾರಣೆಗಿಂತಲೂ ಮಹತ್ವದ್ದಾಗಿತ್ತು, ತುರ್ತಾಗಿತ್ತು. ಅದನ್ನು ಮಾಡದೇ ಇದ್ದದ್ದು, ಈಗಲೂ ಅಂಥ ಯಾವುದೇ ಪ್ರಯತ್ನ, ಯೋಜನೆ ಇಲ್ಲದಿರುವುದು ಭಾರತ ಇಂದು ಎದುರಿಸುತ್ತಿರುವ ಸಾಂವಿಧಾನಿಕ ಮೌಲ್ಯಗಳ ಅವನತಿಗೆ ಮೂಲ ಕಾರಣವಾಗಿದೆ. ಆಟವನ್ನು ಆಡುತ್ತೇವೆ, ಆದರೆ ನಾವು ಆಡುವ ಆಟದ ಮೂಲ ನಿಯಮಗಳೇ ಗೊತ್ತಿಲ್ಲ.

ಹಕ್ಕುಗಳು ಮತ್ತು ಕರ್ತವ್ಯಗಳು

ಬಹುಶಃ ಹಿಂದಿನ ಯಾವುದೇ ಆಳ್ವಿಕೆಗಳಲ್ಲಿ ಇಲ್ಲದೇ ಇದ್ದ ಮಾನವ ಹಕ್ಕುಗಳನ್ನು ಭಾರತ ಸಂವಿಧಾನವು ನಮಗೆ ನೀಡಿದೆ. ಸಂವಿಧಾನದ ಭಾಗ 3ರಲ್ಲಿ, ಅನುಚ್ಛೇದ 12 ರಿಂದ 35ರಲ್ಲಿ ಆರು ಬಗೆಯ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ, ಜನತಂತ್ರ ಯಶಸ್ವಿಯಾಗಬೇಕು ಎಂದರೆ ನಾಗರಿಕರು ಬರೀ ತಮ್ಮ ಹಕ್ಕುಗಳನ್ನು ಚಲಾಯಿಸುವುದರಲ್ಲಿ, ಅವುಗಳನ್ನು ಅನುಭವಿಸುವುದರಲ್ಲಿ ಕಾಲ ಕಳೆದರೆ ಆಗುವುದಿಲ್ಲ. ಪ್ರತಿಯೊಬ್ಬ ನಾಕರಿಕರಿಗೂ ಕೆಲವು ಸಾಂವಿಧಾನಿಕ ಕರ್ತವ್ಯಗಳೂ ಇರಬೇಕು. ಇದು ಕಾಲಾಂತರದಲ್ಲಿ ನಮಗೆ ಮನನವಾಯಿತು.

1976ರಲ್ಲಿ ಸರ್ದಾರ್ ಸ್ವರಣ್ ಸಿಂಗ್ ಸಮಿತಿಯು ನೀಡಿದ ಶಿಫಾರಸ್ಸನ್ನು ಅನುಸರಿಸಿ ಅಗಿನ ಸರಕಾರವು ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತಂದು ಮೊದಲ ಬಾರಿಗೆ ಭಾಗ 4 ಎ-ರಲ್ಲಿ ಪ್ರತಿಯೊಬ್ಬ ಭಾರತೀಯರೂ ನಿಭಾಯಿಸಬೇಕಾದ 10 ಮೂಲಭೂತ ಕರ್ತವ್ಯಗಳನ್ನು ಪಟ್ಟಿ ಮಾಡಲಾಯಿತು. ಮುಂದೆ 2002ರಲ್ಲಿ, 86ನೇ ಸಂವಿಧಾನ ತಿದ್ದುಪಡಿಯ ಮೂಲಕ ಹನ್ನೊಂದನೆಯ, “ಪ್ರತಿಯೊಬ್ಬ ಪೋಷಕರೂ ತಮ್ಮ 6 ರಿಂದ 14ರ ಒಳಗಿನ ಮಕ್ಕಳಿಗೆ ಶಿಕ್ಷಣದ ಅವಕಾಶವನ್ನು ಒದಗಿಸುವುದು” ಎಂಬ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ. ನನಗೆ ಪ್ರಸ್ತುತ ಮುಖ್ಯವಾಗಿರುವುದು ಇದರಲ್ಲಿನ ಒಂದು ಮೂಲಭೂತ ಕರ್ತವ್ಯ.

ಸಂವಿಧಾನದ ಭಾಗ 4 ಎ, ಅನುಚ್ಛೇದ 51 ಎ (ಎಚ್)ರ ಪ್ರಕಾರ “ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸಿಕೊಳ್ಳುವುದು” ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಿದೆ.

ನಿಜವೆಂದರೆ ’ವೈಜ್ಞಾನಿಕ ಮನೋವೃತ್ತಿ’ ಎಂಬುದರಲ್ಲಿಯೇ ’ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವ”ಗಳು ಒಳಗೊಂಡಿವೆ, ಆದರೂ ಅವುಗಳನ್ನು ಇನ್ನೂ ಸ್ಪಷ್ಟವಾಗಿ ಮನಗಾಣಿಸಲು ಹೀಗೆ ಬರೆಯಲಾಗಿದೆ. ಇತರ ಹಲವು ದೇಶಗಳ ಸಂವಿಧಾನಗಳಲ್ಲಿ ಮೂಲಭೂತ ಕರ್ತವ್ಯಗಳನ್ನು ನಮೂದಿಸಲಾಗಿದ್ದರೂ, ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದನ್ನು ಮೂಲಭೂತ ಕರ್ತವ್ಯವನ್ನಾಗಿ ವಿಧಿಸಿರುವುದು ನಮ್ಮ ಸಂವಿಧಾನದಲ್ಲಿ ಮಾತ್ರ ಎಂದು ಹೇಳಲಾಗುತ್ತದೆ.

ಜನ ಏಕೆ ಕಂಗಾಲಾಗಿದ್ದಾರೆ?

ನಮಗೆ ನಾವೇ ಸಂವಿಧಾನವನ್ನು ಕೊಟ್ಟುಕೊಂಡ ನಂತರದಿಂದ ಜನತಂತ್ರಾತ್ಮಕ ಗಣರಾಜ್ಯವಾದ ನಮ್ಮ ದೇಶದಲ್ಲಿ ಜನತೆಯೇ ದೇಶದ ಸಮಷ್ಟಿ ಒಡೆಯರು. ತಮ್ಮನ್ನು ತಾವೇ ಸಂವಿಧಾನದ ಅಡಿಯಲ್ಲಿ ನಿರ್ವಹಿಸಿಕೊಳ್ಳುವವರು. ಆದರೂ ನಮ್ಮ ದೇಶದ ಜನಸಾಮಾನ್ಯರು ಏಕೆ ಇಷ್ಟೊಂದು, ಅಸಹಾಯಕ, ದಯನೀಯ ಪರಿಸ್ಥಿತಿಯಲ್ಲಿದ್ದಾರೆ? ಏಕೆಂದರೆ, ಅವರಿಗೆ ತಮ್ಮ ಪಾತ್ರ, ತಮ್ಮ ಹೊಣೆಗಾರಿಕೆಯ ಅರಿವಿಲ್ಲ.

ಜನತಂತ್ರವು ಯಶಸ್ವಿಯಾಗುವುದು, ಸಬಲಗೊಳ್ಳುವುದು ಜನರ ಭಾಗವಹಿಸುವಿಕೆಯಿಂದ. ಭಾಗವಹಿಸುವುದು ಎಂದರೆ ಚುನಾವಣೆ ಬಂದಾಗ ಕೇವಲ ತಮ್ಮ ಓಟನ್ನು ಒತ್ತಿ ತೆಪ್ಪಗೆ ಕೂಡುವುದಲ್ಲ. ದೇಶದಲ್ಲಿ ಜಾರಿಯಾಗುವ ಪ್ರತಿಯೊಂದು ಯೋಜನೆ, ಅನುಷ್ಠಾನ, ಫಲಿತಾಂಶ ಎಲ್ಲದರಲ್ಲಿಯೂ ಸಕ್ರಿಯವಾಗಿ ಭಾಗವಹಿಸುವುದು, ಯಶಸ್ಸಿನ ಪ್ರಶಂಸೆಯನ್ನು ಪಡೆಯುವುದು, ಸೋಲಿನ ಹೊಣೆಯನ್ನು ಹೊರುವುದು. ಎಂದರೆ, ಜನರ ಮಾಹಿತಿ ಸಂಪನ್ನವಾದ, ವಿವೇಕಯುತ ಭಾಗವಹಿಸುವಿಕೆ ಜನತಂತ್ರದ ಯಶಸ್ಸಿನ ಗುಟ್ಟು. ಇಂಥ ಜನ ನಮ್ಮಲ್ಲಿ ಎಷ್ಟು ಪ್ರಮಾಣದಲ್ಲಿದ್ದಾರೆ? ಇದಕ್ಕಾಗಿ ಮೂಲಭೂತವಾಗಿ ಜನರಲ್ಲಿ ವೈಜ್ಞಾನಿಕ ಮನೋವೃತ್ತಿ, ಜಿಜ್ಹಾಸೆ ಮತ್ತು ಸುಧಾರಣಾ ಮನೋಭಾವ ಇರಬೇಕಾಗುತ್ತೆ, ಅದಕ್ಕೆ ಅಲ್ಲವೇ ಅದನ್ನು 1976ರ ನಂತರವಾದರೂ ನಾವು ನಮ್ಮ ಮೂಲಭೂತ ಕರ್ತವ್ಯವೆಂಬಂತೆ ಒಪ್ಪಿಕೊಂಡಿರುವುದು!

ಸಮಾನತೆ, ಸಮತೆ, ಸೌಹಾರ್ದಯುತವಾದ, ಅಂಧಶ್ರದ್ಧೆ ಮತ್ತು ಅತಾರ್ಕಿಕ ಆಚರಣೆಗಳಿಂದ ಮುಕ್ತವಾದ, ಅಲೌಕಿಕದ ಭ್ರಮೆಯಲ್ಲಿ ಬದುಕುವುದನ್ನು ಬಿಟ್ಟು ಸ್ವವಿಶ್ವಾಸದ ಮೇಲೆ ಭರವಸೆ ಇಡುವ, ಜನರ ಸಕ್ರಿಯವಾದ ಭಾಗವಹಿಸುವಿಕೆಯಿಂದಲೇ ದೇಶದ ಸುಸ್ಥಿರ ಅಭಿವೃದ್ಧಿ ಸಾಧ್ಯ. ಇದು ಸಾಧ್ಯವಾಗಬೇಕು ಎಂದರೆ ಜನತಂತ್ರದಲ್ಲಿ ಭಾಗವಹಿಸುವ ಎಲ್ಲರೂ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

ಮರೀಚಿಕೆಯಾಗಿರುವ ವೈಜ್ಞಾನಿಕ ಮನೋವೃತ್ತಿ

ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನ ಇವುಗಳ ಬೆಳವಣಿಗೆಯಾದಾಗ ಅದರ ಪರಿಣಾಮವಾಗಿ ಸಹಜವಾಗಿಯೇ ಜನರಲ್ಲಿ ವೈಚಾರಿಕತೆ ಬೆಳೆಯುತ್ತದೆ ಎಂಬ ಒಂದು ನಂಬಿಕೆಯಿತ್ತು. ಇದೊಂದು ಮೂಢನಂಬಿಕೆ ಎಂದು ಸಾಬೀತಾಗಿದೆ. ಮೂಢನಂಬಿಕೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ; ಹೆಚ್ಚು ಆಳವಾಗಿ ಬೇರೂರುತ್ತಿದೆ. ವಿಪರ್ಯಾಸದ ಸಂಗತಿಯೆಂದರೆ ದಟ್ಟವಾದ, ಅಖಂಡವಾದ, ಅಚಲವಾದ ಮೌಢ್ಯವನ್ನು ಜನರಲ್ಲಿ ಬಿತ್ತಿ ಬೆಳೆಸಲು ಆಧುನಿಕ ವಿಜ್ಞಾನ ತಂತ್ರಜ್ಞಾನದ ಸಾಧನಗಳನ್ನೇ ಬಳಸಿಕೊಳ್ಳುತ್ತಿರುವುದು. ಮೌಢ್ಯವನ್ನು ಬೆಳೆಸುವುದು, ಕಣ್ಣುಮುಚ್ಚಿ ಹೇಳಿದ್ದನ್ನು ನಂಬುವ ಮನೋದಾಸ್ಯವನ್ನು ಪೋಷಿಸುವುದು ಫಲಜ್ಯೋತಿಷ, ವಾಸ್ತು, ಸಂಖ್ಯಾಶಾಸ್ತ್ರ, ಮಾಂತ್ರಿಕ ಶಕ್ತಿಯ ವಸ್ತುಗಳನ್ನು ಮಾರುವಂಥ ಕೆಲವರಿಗೆ  ಲಾಭದಾಯಕ ವ್ಯಾಪಾರವಾದರೆ, ಸ್ವಾರ್ಥಿ ರಾಜಕಾರಣಿಗಳಿಗೆ ಇದು ಶೋಷಣೆಯ ಸಾಧನವಾಗಿವೆ.

ಸಾಮಾಜಿಕ ಹೊಣೆಗಾರಿಕೆ ಎನ್ನುವುದರ ಮೂಲ ಕಾಗುಣಿತವೂ ಗೊತ್ತಿರದ ಮಾಧ್ಯಮಗಳು, ಅವುಗಳನ್ನು ಬಳಸಿಕೊಳ್ಳುವ ವಂಚಕರು, ಅವರ ಮಾತಿಗೆ ಮರುಳಾಗಿ ಕಂಗಾಲಾಗಿರುವ, ಭಯಗ್ರಸ್ಥರಾಗಿರುವ ಜನ ಸಾಮಾನ್ಯರು ಹೀಗೆ ಅತಾರ್ಕಿಕವಾಗಿ ಮಾತಾಡಿದರೆ, ಆಚರಿಸಿದರೆ ಅದೊಂದು ಮಾತು. ಆದರೆ, ನಮ್ಮ ಪರವಾಗಿ, ಪ್ರತಿನಿಧಿಗಳಾಗಿ ನಮ್ಮ ದೇಶವನ್ನು ನಿರ್ವಹಿಸಿ ಎಂದು ನಾವು ಗ್ರಾಮ ಮಟ್ಟದಿಂದ ಹಿಡಿದು ಸಂಸತ್ತಿನ ಮಟ್ಟದ ವರೆಗೆ ಆಯ್ಕೆ ಮಾಡಿ ಕಳಿಸುವ ರಾಜಕಾರಣಿಗಳೂ ಯಾವುದೇ ನಾಚಿಕೆಯಿಂದಲ್ಲದೇ ಮುಜುಗರವಿಲ್ಲದೇ ಮೂಢಾಚರಣೆಯಲ್ಲಿ ತೊಡಗಿರುವುದು ತುಂಬ ವಿಷಾದದ ಸಂಗತಿ.

ಸಂವಿಧಾನದ ಅನುಚ್ಛೇದ 25-28ರಲ್ಲಿ ಭಾರತದ ನಾಗರೀಕರು ತಮ್ಮ ಆಯ್ಕೆಯ ಧರ್ಮವನ್ನು ಅನುಸರಿಸುವ, ಬೋಧಿಸುವ, ಪ್ರಚಾರ ಮಾಡುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ. ದೇಶದ ಬಹುಧರ್ಮೀಯ ಮತ್ತು ಬಹುತ್ವದ ಹಿನ್ನೆಲೆಯಲ್ಲಿ ಇದನ್ನು ಇನ್ನೊಂದು ಧರ್ಮವನ್ನು ಅನುಸರಿಸುವ ನಾಗರಿಕರ ಹಕ್ಕುಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಮಾಡಬೇಕು ಎಂದು ನಿರೀಕ್ಷಿಸಲಾಗುತ್ತದೆ. ಆದರೆ, ಇದೆಲ್ಲಾ, ನಾಗರಿಕರ ವೈಯಕ್ತಿಕ ಹಕ್ಕಿನ ಪ್ರಶ್ನೆಯಾಯಿತು. ಆದರೆ ಇಡೀ ರಾಷ್ಟ್ರಕ್ಕೆ ತನ್ನದೇ ಆದ ಧರ್ಮ ಎಂಬುದಿಲ್ಲ.

ನವೆಂಬರ್ 5, 2019ರಂದು, 5ನೇ ಇಂಡಿಯಾ ಇಂಟರ್ ನ್ಯಾಷನಲ್ ಸೈನ್ಸ್ ಫೆಸ್ಟಿವಲನ್ನು ಉದ್ಘಾಟಿಸುತ್ತಾ,    ಪ್ರಧಾನಿ ಮೋದಿಯವರು  ಜನರಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದು ಎಷ್ಟೊಂದು ಮಹತ್ವದ ವಿಚಾರ ಎಂಬುದರ ಕುರಿತು ವಿದ್ವತ್ಪೂರ್ಣವಾಗಿ ಮಾತಾಡಿದರು, ಅದೇ ವರ್ಷ ಜನವರಿ 3ರಂದು ೧೦೬ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆಯೆ ವೇಳೆಯಲ್ಲಿ ಪುರಾಣದ ಉದಾಹರಣೆಗಳನ್ನು ಕೊಟ್ಟು ಪ್ಲ್ಯಾಸ್ಟಿಕ್ ಸರ್ಜರಿ, ಜೆನೆಟಿಕ್ ಇಂಜಿನಿಯರಿಂಗ್, ವಿಮಾನಯಾನ ಸಾವಿರಾರು ವರ್ಷಗಳ ಹಿಂದೆಯೆ ಭಾರತದಲ್ಲಿತ್ತು ಎಂದು ಹೇಳಿದರು. ಜುಲೈ 22ರಂದು ಗುಜರಾತಿನಲ್ಲಿರುವ ಕಕ್ರಪಾರ್ ಪರಮಾಣು ಶಕ್ತಿ ಕೇಂದ್ರ ಮಾಡಿದ ಪರಮ ಸಾಧನೆಯ ಆಚರಣೆಗಾಗಿ ಇದ್ದಲ್ಲಿಂದಲೇ ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದರು, ಖುದ್ದಾಗಿ ಹೋಗಲಿಲ್ಲ; ಆದರೆ ಆಗಸ್ಟ್ 5ರಂದು ಅಯೋದ್ಯೆಯ ರಾಮ ಮಂದಿರ ಶಿಲಾನ್ಯಾಸ ಪೂಜೆಗೆ ಸಕಲ ಗೌರವಗಳೊಂದಿಗೆ ಹಾಜರಾದರು. ಇದು ಬೀಜದ ರೂಪದಲ್ಲಿ ನಮ್ಮ ದೇಶದಲ್ಲಿನ ವೈಜ್ಞಾನಿಕ ಮನೋವೃತ್ತಿಯ ಸ್ಥಿತಿಗತಿಯನ್ನು, ಎಡೆಬಿಡಂಗಿತನ, ಗೊಂದಲಗಲಿಬಿಯ ಸ್ಥಿತಿಯನ್ನು ಸೂಚಿಸುತ್ತದೆ. ಈ ಕುರಿತು ನಿಮ್ಮ ಜವಾಬ್ದಾರಿ ಏನು, ಅರಿತುಕೊಳ್ಳಿ.

ಕೃಪೆ: “ಹೊಸರು” ಮಾಸಿಕ

ʼಸಂವಿಧಾನ ಅಪಾಯದಲ್ಲಿದೆ, ಎಚ್ಚರಿಕೆʼ
ಸಂವಿಧಾನ ಅಪಾಯದಲ್ಲಿದೆ ಎಂದು ಒಪ್ಪಿಕೊಳ್ಳದೇ ಹೋದರೆ, ಸಂವಿಧಾನದ ರಕ್ಷಣೆಗೆ ಎಂತಹಾ ತ್ಯಾಗಕ್ಕೂ ಸಿದ್ಧರಾಗಬೇಕು ಎನ್ನುವ ಮನೋಭಾವನೆಯನ್ನು ಜನಸಮೂಹದಲ್ಲಿ ಗಟ್ಟಿಗೊಳಿಸುವ ಕೆಲಸ ಆಗದೆ ಹೋದರೆ ಮತ್ತು ಇದಕ್ಕೆ ಪೂರಕವಾಗಿ ಸಂವಿಧಾನದ ಕುರಿತಾದ ಅರಿವನ್ನು ಜನರ ಸಾಂಸ್ಕೃತಿಕ ಅರಿವಿನ ಭಾಗವಾಗಿ ಸ್ಥಾಪಿಸದೆ ಹೋದರೆ, ಪರಿಸ್ಥಿತಿ ಬಹುಬೇಗ ಕೈ ಮೀರಿ ಹೋಗಲಿದೆ ಎಂದು ಜನ ಸಮುದಾಯಕ್ಕೆ ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ ಲೇಖಕ ಎ. ನಾರಾಯಣ

‘ಧರ್ಮವನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸುತ್ತದೆ’ ಅಂತ ಕೆಲವರು ಕಂಡ ಕಂಡ ಕಡೆ ಬರೆದರು, ಬೇರೆ ಬೇರೆ ಕಡೆ ಹೇಳಿದರು. ಅದರಲ್ಲಿ ಯಾರಿಗೂ ಏನೂ ದೋಷ ಕಾಣಲಿಲ್ಲ. ಧರ್ಮವನ್ನು ರಕ್ಷಿಸುವಷ್ಟರ ಮಟ್ಟಿಗೆ ಧರ್ಮಕ್ಕೇನು ಅಪಾಯ ಬಂದಿದೆ ಅಂತ ಯಾರೂ ಕೇಳಲಿಲ್ಲ. ಈ ಮೌನದ ನಡುವೆ ‘ಧರ್ಮವನ್ನು ರಕ್ಷಿಸಿ’ ‘ಧರ್ಮವನ್ನು ರಕ್ಷಿಸಿ’ ಎನ್ನುವ ಮಾತೇ ಮತ್ತೆ ಮತ್ತೆ ಎಲ್ಲೆಡೆ  ಮಾರ್ದನಿಗೊಂಡು ‘ನಮ್ಮ ಧರ್ಮಕ್ಕೇನೋ’ ಆಗಿದೆ ಎನ್ನುವ ಒಂದು ಭಾವನೆ ದೊಡ್ಡ ಸಂಖ್ಯೆಯ ಜನರಲ್ಲಿ ಮೂಡತೊಡಗಿತು.  ಅದನ್ನು ಯಾರೂ ಗಮನಿಸಲಿಲ್ಲ. ಮಾತ್ರವಲ್ಲ, ಅವರು ಹಾಗೆ ಹೇಳುತ್ತಿದ್ದಾಗ ‘ಸಂವಿಧಾನವನ್ನು ರಕ್ಷಿಸಿ. ಅದು ನಮ್ಮನ್ನು ರಕ್ಷಿಸುತ್ತದೆ’ ಅಂತ ಪ್ರತಿ ಹೇಳಿಕೆ ನೀಡಬೇಕು ಅಂತಲೂ ಯಾರಿಗೂ ಅನ್ನಿಸಲಿಲ್ಲ. ಸಂವಿಧಾನ ಪಾಲನೆಯೇ ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಯ ಧರ್ಮ, ಸಂವಿಧಾನವೇ ಸ್ವತಂತ್ರ ಭಾರತದ ಧರ್ಮ ಗ್ರಂಥ ಅಂತ ಯಾರೂ ಸ್ವಾತಂತ್ರ್ಯಾನಂತರದ ತಲೆಮಾರುಗಳಿಗೆ ಮನವರಿಕೆ ಮಾಡಲಿಲ್ಲ. ಹೊಸ ತಲೆಮಾರಿನ ಮಕ್ಕಳು ಸಂವಿಧಾನವನ್ನು ಸಾಮಾನ್ಯ ಜ್ಞಾನದ ಪುಸ್ತಕ ಓದುವಂತೆ ಓದಿದರು. ಶಿಕ್ಷಕರು ಪಾಠ ಹೇಳುವಾಗಲೂ ಹಾಗೇನೇ ಮಾಡಿದರು.

ಸಂವಿಧಾನವನ್ನು ಕಡ್ಡಾಯವಾಗಿ ಭೋದಿಸಬೇಕು ಅಂದರೆ ಆದದ್ದೇನು?

ಸಂವಿಧಾನವು ಸಮಾಜ ವಿಜ್ಞಾನದ ಭಾಗವಾಗಿ ಶಾಲಾ ಪಠ್ಯದಲ್ಲಿ ಸೇರಿಕೊಂಡಿದೆ. ಸಮಾಜ ವಿಜ್ಞಾನ ಎಂದರೆ ಅದು ‘ಓದಿ, ಮಾರ್ಕು ಗಳಿಸಿ, ಮರೆತು ಬಿಡಲು’ ಎನ್ನುವ ಧೋರಣೆ ಹೇಗೂ ಇದೆ. ಸಮಾಜ ವಿಜ್ಞಾನದ ಜತೆಗೆ, ಸಂವಿಧಾನದ ಬಗ್ಗೆ ಶಾಲೆಯಲ್ಲಿ ಕಲಿತ ಸಾಮಾನ್ಯ ಜ್ಞಾನವೂ ಮರೆತು ಹೋಗುತ್ತದೆ. ಉನ್ನತ ಶಿಕ್ಷಣದಲ್ಲಿ ಕಲಿಯುವ ವಿಷಯ ಯಾವುದಾದರೂ ಇರಲಿ, ಅದರ ಜತೆಗೆ ಸಂವಿಧಾನವನ್ನು ಕಡ್ಡಾಯ ಭೋದನೆ ಮಾಡಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿತು. ನಿಜಕ್ಕೂ  ಇದು ಸುಪ್ರೀಂ ಕೋರ್ಟ್ ಹೇಳ ಬೇಕಿರುವುದಕ್ಕಿಂತ ಹೆಚ್ಚಾಗಿ ಸಂವಿಧಾನ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಕ್ಷದ ಸರಕಾರ ಹೇಳಿ ಕಡ್ಡಾಯ ಗೊಳಿಸ ಬೇಕಿತ್ತು. ಅಂತೂ ಸುಪ್ರೀಂ ಕೋರ್ಟ್ ಆದರೂ ಹೇಳಿತಲ್ಲ, ಒಳ್ಳೆಯದಾಯಿತು ಅಂದು ಕೊಂಡರೆ, ನಮ್ಮ ಉನ್ನತ ಶಿಕ್ಷಣ ರಂಗದಲ್ಲಿ ನಡೆದದ್ದೇ ಬೇರೆ. ಕಾಟಾಚಾರಕ್ಕೆ ಎಂಬಂತೆ ಏನೋ ಸಂವಿಧಾನದ ಬಗ್ಗೆ ಕೆಲವು ತರಗತಿಗಳನ್ನು ನಡೆಸಿ ಕೈತೊಳೆದುಕೊಳ್ಳುವ ಕೆಲಸವನ್ನು ಒಂದಷ್ಟು ಸಮಯ ಒಂದಷ್ಟು ಸಂಸ್ಥೆಗಳು ಮಾಡಿದವು. ಆ ನಂತರ ಅದೂ ನಿಂತು ಹೋಯಿತು.

ಸಂವಿಧಾನ ಕಲಿಕೆ ಹೇಗಿರಬೇಕು?

ಕೆಲವು ರಾಷ್ಟ್ರಗಳಲ್ಲಿ ಸಂವಿಧಾನ ಕಲಿಕೆ ಎನ್ನುವುದೇ ಒಂದು ದೊಡ್ಡ ಅಧ್ಯಯನದ ವಿಷಯ. ದೇಶದ ಸಂವಿಧಾನವನ್ನು ಶಾಲೆಯಲ್ಲಿ ಹೇಗೆ ಕಲಿಸಬೇಕು, ಹೈಸ್ಕೂಲು ಮುಗಿಯುವ ವೇಳೆಗೆ ಮಕ್ಕಳಲ್ಲಿ ಕನಿಷ್ಠ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಎಷ್ಟು ಅರಿವಿರಬೇಕು ಎನ್ನುವ ಬಗ್ಗೆ ನಿಯಮಗಳಿವೆ ಮತ್ತು ಅವುಗಳನ್ನು ಅನುಸರಿಸಲಾಗುತ್ತಿದೆ. ಭಾರತದಲ್ಲಿ ಸಂವಿಧಾನವನ್ನು ಮಕ್ಕಳಿಗೆ ಹೇಗೆ ಹೇಳಿಕೊಡಬೇಕು ಎಂದು ಶಿಕ್ಷಕರಿಗೆ ಸರಿಯಾದ ತರಬೇತಿ ಇಲ್ಲ. ಬಿಎಡ್ ಕಲಿಯುವಾಗ ಸಮಾಜ ವಿಜ್ಞಾನವನ್ನು ಹೇಗೆ ಕಲಿಸ ಬೇಕೆಂಬ ಸ್ಥೂಲವಾದ ಮಾರ್ಗದರ್ಶಿ ಸೂತ್ರಗಳಿರುತ್ತವೆಯೇ ಹೊರತು ಸಂವಿಧಾನ ಬೋಧನೆಯ ಬಗ್ಗೆ, ಬೋಧನಾ ವಿಧಾನಗಳ ಬಗ್ಗೆ ನಿರ್ದಿಷ್ಟವಾಗಿ ಏನೂ ಇಲ್ಲ. ಸಂವಿಧಾನದ ಬಗ್ಗೆ ಸರಿಯಾಗಿ ಅರಿಯದ, ಸಂವಿಧಾನದ ಮೌಲ್ಯಗಳ ಬಗ್ಗೆ ಭಾವನಾತ್ಮಕ ಸ್ಪಂದನೆಯೇ ಇಲ್ಲದ ಶಿಕ್ಷಕ ವರ್ಗ ಯಾಂತ್ರಿಕವಾಗಿ ಪರೀಕ್ಷೆಗೆ ಎಷ್ಟು ಬೇಕೋ ಅಷ್ಟು ಸಂವಿಧಾನವನ್ನು ಕಲಿಸುತ್ತದೆ. ಎಲ್ಲೋ ಒಬ್ಬಿಬ್ಬರು ಶಿಕ್ಷಕರು ವೈಯಕ್ತಿಕ ಆಸಕ್ತಿಯಿಂದ ಇದಕ್ಕಿಂತಾಚೆಗೆ ಏನಾದರೂ ಕಲಿಸುವ ಪ್ರಯತ್ನ ಮಾಡಿರಬಹುದೇನೋ!

‘ಸಂವಿಧಾನ ಓದು’ ಎಂಬ ಸೀಮಿತ ಕಾರ್ಯಕ್ರಮ

ಕೆಲವು ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ‘ಸಂವಿಧಾನ ಓದು’ ಎನ್ನುವ ಕಾರ್ಯಕ್ರಮದ ಮೂಲಕ, ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಪುಟ್ಟ ಕೃತಿಗಳನ್ನು ರಚಿಸಿ ಹಂಚುವ ಮೂಲಕ ಈ ಕೊರತೆಯನ್ನು ತುಂಬಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೂ, ಅದೂ ತುಂಬಾ ತಡವಾಗಿ ಆದ ತೀರಾ ಸೀಮಿತ ಪ್ರಮಾಣದ ಕೆಲಸ. ಸಾಮಾನ್ಯ ಜ್ಞಾನದ ನೆಲೆಯಾಚೆಗೆ ಸಂವಿಧಾನದ ಬಗ್ಗೆ ಏನೂ ಹೇಳದೆ, ಸಂವಿಧಾನ ಈ ದೇಶದಲ್ಲಿ ತಂದ ಮೌನ ಕ್ರಾಂತಿಯ ಬಗ್ಗೆ ಅಭಿಮಾನ ಮೂಡಿಸದೆ, ಸಂವಿಧಾನದ ಮೌಲ್ಯಗಳನ್ನು ಎಳೆಯ ತಲೆಮಾರಿನ ಹೃದಯಕ್ಕೆ ದಾಟಿಸದೆ, ಸಂವಿಧಾನದ ಬಗ್ಗೆ ಹೇಳಲಾಗುವ ಸುಳ್ಳುಗಳಿಗೆ ಸೂಕ್ತ ಸ್ಪಷ್ಟೀಕರಣ ನೀಡದೆ, ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಲಾಗುತ್ತದೆ; ಗಣರಾಜ್ಯ ದಿನವನ್ನು ಆಚರಿಸಲಾಗುತ್ತದೆ. ಈಗ್ಗೆ ಕೆಲ ವರ್ಷಗಳಿಂದ ಆ ಪಟ್ಟಿಗೆ ಸಂವಿಧಾನ ದಿನವೂ ಸೇರಿಕೊಂಡಿದೆ.

ವಾಟ್ಸಪ್ಪ್ ಯೂನಿವರ್ಸಿಟಿ ಮಾಡಿದ್ದೇನು?

ಈ ಮಧ್ಯೆ ವಾಟ್ಸಪ್ಪ್ ಯೂನಿವರ್ಸಿಟಿ ಅಂಗಡಿ ತೆರೆದುಕೊಳ್ಳುತ್ತಲೇ ‘ಧರ್ಮವನ್ನು ರಕ್ಷಿಸಿ, ಧರ್ಮ ನಿಮ್ಮನ್ನು ರಕ್ಷಿಸುತ್ತದೆ’ ಅಂತ ಹೇಳುತ್ತಿದ್ದವರೆಲ್ಲಾ ಅಲ್ಲಿ ತಮ್ಮ ವರಸೆ ಬದಲಿಸಿದರು. ಧರ್ಮವನ್ನು ನಾವು ರಕ್ಷಿ ಬೇಕಾದ ಸ್ಥಿತಿ ಬರಲು ಸಂವಿಧಾನವೂ ಕಾರಣ ಎನ್ನುವ ಅರ್ಥದ ಬಗೆಬಗೆಯ ಸಾಹಿತ್ಯ ಸೃಷ್ಟಿಸಿ ಜಾಲತಾಣ ಪೂರ್ತಿ ಹರಡಿದರು. ವಿಡಿಯೋಗಳನ್ನೂ ಮಾಡಿ ಯಥೇಚ್ಛ ಹರಿಬಿಟ್ಟರು. ಈ ರೀತಿಯ ಸಾಹಿತ್ಯ ಮತ್ತು ವಿಡಿಯೋಗಳ ಮೂಲಕ ‘ಸಂವಿಧಾನ’ ದೇಶಕ್ಕೇನೋ ಕೆಟ್ಟದ್ದು ಮಾಡಿದೆ, ಅಪಚಾರ ಬಗೆದಿದೆ, ಬಹುಸಂಖ್ಯಾತರ ಧರ್ಮಕ್ಕೆ ಅನ್ಯಾಯ ಮಾಡಿದೆ, ಅಲ್ಪಸಂಖ್ಯಾತರ ಧರ್ಮಗಳಿಗೆ ಎಲ್ಲಾ ಸೌಲಭ್ಯಗಳನ್ನೂ ನೀಡಿದೆ  ಎನ್ನುವ ರೀತಿಯ ಭಾವನೆ ಜನರಲ್ಲಿ ನಿಧಾನವಾಗಿ ಮೂಡುವಂತೆ ಮಾಡುವ ಪ್ರಯತ್ನಗಳನ್ನು ನಿರಂತರವಾಗಿ ಕೈಗೊಂಡರು. ಈ ಪ್ರಯತ್ನದ ಭಾಗವಾಗಿ  ವೈರಲ್ ಆದ ಒಂದು ವಿಡಿಯೋದ ಉದಾಹರಣೆ ಹೀಗಿದೆ:

ಆ ವಿಡಿಯೋದಲ್ಲಿ ಕಾವಿಧಾರಿ ವ್ಯಕ್ತಿಯೊಬ್ಬರು ಕಿಕ್ಕಿರಿದ ಸಭಾಂಗಣ ಒಂದರಲ್ಲಿ ಭಾಷಣ ಮಾಡುವುದು ಕಾಣಿಸುತ್ತದೆ. ಆ ಭಾಷಣದಲ್ಲಿ ಅವರು ಹೇಳಿದ್ದು ಹೀಗೆ: ನಾನೊಬ್ಬ ಸನ್ಯಾಸಿ… ಒಂದು ದಿನ ನನ್ನ ಬಳಿ ಎರಡು ಅನ್ಯ ಧರ್ಮಗಳಿಗೆ ಸೇರಿದ ಧರ್ಮಗುರುಗಳು ಬಂದರು. ನನ್ನ ಜತೆ ವೃಥಾ ಜಗಳಕ್ಕಿಳಿದು ನನ್ನನ್ನು ಒಂದೇ ಸಮನೆ ಥಳಿಸ ತೊಡಗಿದರು (ಈ ಹಂತದಲ್ಲಿ ಇದು ನಿಜ ಘಟನೆಯಲ್ಲ, ಕಲ್ಪನೆ ಎಂದೂ ಹೇಳುತ್ತಾರೆ) ನನಗೆ ಅವರು ಥಳಿಸುತ್ತಿದ್ದಾಗ ಪಕ್ಕದಲ್ಲಿ ಒಬ್ಬ ಪೊಲೀಸ್ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ. ನೋವು ತಡೆಯಲಾರದೆ ನಾನು ಆ ಪೊಲೀಸ್ ನವನ ಜತೆ ನನ್ನ ಸಹಾಯಕ್ಕೆ ಬರುವಂತೆ ಅಂಗಲಾಚಿದೆ. ಆತ ‘’ನೀವು ಧಾರ್ಮಿಕ ಮುಖಂಡರು. ಜಗಳವಾಡುವಾಗ ನಾನು ಮಧ್ಯೆ ಪ್ರವೇಶಿಸಲಾರೆ. ನಾನು ಸೆಕ್ಯುಲರ್ ಆಗಿ ಕೆಲಸ ಮಾಡಬೇಕು’ ಎಂದು ಹೇಳಿದ (ಸಭಿಕರಿಂದ ಚಪ್ಪಾಳೆ). ನಾನು ಬೇರೆ ದಾರಿ ಕಾಣದೆ ಆತ್ಮ ರಕ್ಷಣೆಗೆಂದು ನನಗೆ ಹೊಡೆಯುತ್ತಿರುವವರನ್ನು ತಿರುಗಿ ಹೊಡೆಯಲಾರಂಭಿಸಿದೆ. ನಾನು ತಿರುಗಿ ಯಾವಾಗ ಹೊಡೆಯಲಾರಂಭಿಸಿದೆನೋ ಆಗ ಪಕ್ಕದಲ್ಲಿದ್ದ ಪೊಲೀಸಿನವ ಬಂದು ನನ್ನನ್ನು ತಡೆದ. ನೀವು ಅವರಿಗೆ ಹೊಡೆಯುವಂತಿಲ್ಲ ಎಂದ. ನನ್ನ ರಕ್ಷಣೆಗೆ ಬಾರದ ನೀನು ಈಗ್ಯಾಕೆ ಬಂದೆ ಅಂತ ನಾನು ಕೇಳಿದರೆ ಆತ ‘ನಾನು ಅಲ್ಪಸಂಖ್ಯಾತರನ್ನು ರಕ್ಷಿಸಬೇಕು’ ಎಂದ. ಇದು ನಮ್ಮ ಸಂವಿಧಾನ…

ಇದನ್ನು ಕೇಳಿಸಿಕೊಂಡ ಸಭೆಗೆ ಸಭೆಯೇ ಚಪ್ಪಾಳೆ ತಟ್ಟುತ್ತದೆ. ಆಗ ಭಾಷಣಕಾರ ಹೇಳುತ್ತಾರೆ: ‘LET US BLOODY CHANGE THIS CONSTITUTION’… ಮತ್ತೆ ಚಪ್ಪಾಳೆ. ಈ ವಿಡಿಯೋ ಲಿಂಕ್ ಇಲ್ಲಿದೆ:

ಜನರ ಸ್ವಾಭಿಮಾನ ಕೆರಳಿಸುವಂತೆ ಪ್ರಚಾರ

ಸಂವಿಧಾನ ಮತ್ತು ಸಂವಿಧಾನ ಮೌಲ್ಯಗಳನ್ನು ಪರಿಹಾಸ್ಯ ಮಾಡುವ ಮತ್ತು ಸಂವಿಧಾನ ಬದಲಿಸಬೇಕೆಂಬ ಸಂದೇಶವಿರುವ ಇಂತಹ ವಿಡಿಯೋಗಳ ಮೂಲಕ ಜನಸಾಮಾನ್ಯರ ಮನಸ್ಸುಗಳನ್ನು ಸಂವಿಧಾನ ಬದಲಾವಣೆಗಾಗಿ ನಿಧಾನವಾಗಿ ತಯಾರಿಸುವ ಕೆಲಸ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ವಿದ್ಯಾವಂತರ, ಯೋಚಿಸುವವರ ಮನಸ್ಸನ್ನು ಮುಟ್ಟಲು ಇನ್ನೊಂದು ರೀತಿಯ ಕೆಲಸ ನಡೆಯುತ್ತಿದೆ. ಜನಸಾಮಾನ್ಯರಿಗೆ ಹೇಳುವಾಗ ಸಂವಿಧಾನ ಧರ್ಮ ವಿರೋಧಿ ಎನ್ನುವ ಸಂದೇಶವನ್ನು ನೀಡಿದರೆ, ಮೇಲ್‌ಸ್ತರದ ಜನರ ಮಧ್ಯೆ ‘ಸಂವಿಧಾನದಲ್ಲಿ ಭಾರತೀಯ ಎನ್ನುವಂತದ್ದು ಏನೂ ಇಲ್ಲ, ಅದರಲ್ಲಿ ಪಾಶ್ಚಿಮಾತ್ಯ ವಿಚಾರಗಳೇ ತುಂಬಿವೆ’ ಅಂತ ಅವರ ಸ್ವಾಭಿಮಾನವನ್ನು ಕೆರಳಿಸುವ ಪ್ರಚಾರ ನಡೆಯುತ್ತದೆ. ಉದಾಹರಣೆಗೆ ಈ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯಲ್ಲಿ ಸಂವಿಧಾನದ ಬಗ್ಗೆ ಚರ್ಚಿಸಲು ದೊಡ್ಡ ಮಟ್ಟದ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿತ್ತು. ಆಳುವ ಪಕ್ಷದ ಜತೆಗೆ ಕೆಲಸ ಮಾಡುವ ವಿದ್ವತ್ ಲೋಕದ ಹಲವಾರು ಭಾಷಣಕಾರರು ಅಲ್ಲಿದ್ದರು. ಅಲ್ಲಿ ಕುಹಕವಿಲ್ಲ. ಪರಿಹಾಸ್ಯವಿಲ್ಲ. ನೇರವಾಗಿ ಧಾಳಿ ಇಲ್ಲ. ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲರೂ ನೀಡಿದ ಸಂದೇಶ ಏನೆಂದರೆ, ಈಗಿನ ಸಂವಿಧಾನವನ್ನು ಬರೆದದ್ದು ಪಾಶ್ಚಿಮಾತ್ಯ ಶಿಕ್ಷಣ ಪಡೆದು, ಪಾಶ್ಚಿಮಾತ್ಯ ಮೌಲ್ಯಗಳನ್ನು ಆರಾಧಿಸುವ ಮಂದಿ, ಭಾರತ ಈಗ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ. ನಮಗೆ ನಮ್ಮದೇ ಆದ ಸಂವಿಧಾನ ಇರಬೇಕು ಎಂದು.

ದಲಿತ ವರ್ಗದ ಪ್ರತಿರೋಧದ ಭಯ

ಸಂವಿಧಾನ ವಿರೋಧಿಗಳಿಗೆ ಮತ್ತು ಒಂದಲ್ಲ ಒಂದು ದಿನ ಅದನ್ನು ಬದಲಿಸಿಯೇ ತೀರುತ್ತೇವೆ ಅಂತ ಹೊರಟವರಿಗೆ ದೊಡ್ಡ ತೊಡಕಾಗಿರುವುದು ಈ ದೇಶದ ದಲಿತ ವರ್ಗ ಸಂವಿಧಾನದ ಜತೆಯಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವುದು. ದಲಿತ ರಾಜಕೀಯದ ಬಹುದೊಡ್ಡ ಐಕಾನ್ ಆಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಆಗಿರುವ ಕಾರಣಕ್ಕೆ ಈ ದೇಶದಲ್ಲಿ ಉಳಿದೆಲ್ಲಾ ಜನ ಸಮುದಾಯಗಳಿಗಿಂತ ಹೆಚ್ಚಾಗಿ ಸಂವಿಧಾನವನ್ನು ಒಪ್ಪಿಕೊಂಡು ಅಪ್ಪಿಕೊಂಡು ಇರುವುದು ದಲಿತರು. ಅಂಬೇಡ್ಕರ್ ಅವರ ಮುಂದಾಳುತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ಏಕಾಏಕಿ ಕಿತ್ತು ಅದರ ಜಾಗದಲ್ಲಿ ಹೊಸತೊಂದು ಸಂವಿಧಾನ ತರುತ್ತೇವೆ ಅಂತ ನೇರವಾಗಿ ಮುಂದುವರಿದರೆ ಬಹುದೊಡ್ಡ ಮಟ್ಟಿಗೆ ದಲಿತರ ಕೋಪವನ್ನು ಎದುರಿಸಬೇಕಾಗುತ್ತದೆ  ಮತ್ತು ದಲಿತರ ಮತಗಳನ್ನು ಕಳೆದು ಕೊಳ್ಳಬೇಕಾಗುತ್ತದೆ ಎನ್ನುವ ಅರಿವು ಸಂವಿಧಾನ ವಿರೋಧಿಗಳಿಗೆ ಇದೆ. ಹಾಗಾಗಿ ಈ ವಿಚಾರದಲ್ಲಿ ಬಹಳ ನಾಜೂಕಿನಿಂದ ಮುಂದುವರಿಯುವುದರ ಜತೆಗೆ ದಲಿತರನ್ನು ಕೂಡಾ ನಿಧಾನವಾಗಿ ಈ ಉದ್ದೇಶಕ್ಕಾಗಿ ಒಲಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ.  ದಲಿತ ರಾಜಕೀಯ ನಾಯಕರಿಗೆ ಆಯಕಟ್ಟಿನ ಹುದ್ದೆಗಳನ್ನು ಕೊಡುವಲ್ಲಿಂದ ಹಿಡಿದು, ಅಂಬೇಡ್ಕರ್ ಅವರ ಎಲ್ಲಾ ಸ್ಮಾರಕಗಳನ್ನು ಭವ್ಯವಾಗಿ ಪುನರ್ ನಿರ್ಮಾಣ ಮಾಡುವುದರಿಂದ ಹಿಡಿದು, ದಲಿತ-ಬುಡಕಟ್ಟು ಜನಾಂಗದ ಮಕ್ಕಳ ಮನಸ್ಸುಗಳನ್ನು ಶಾಲಾ ಹಂತದಿಂದಲೇ ‘ಧಾರ್ಮಿಕವಾಗಿ ಹದ’ಗೊಳಿಸಲು ತಮ್ಮದೇ ಶಾಲೆಗಳನ್ನು ತೆರೆಯುವುದರಿಂದ ಹಿಡಿದು ಎಲ್ಲವೂ ನಡೆಯುತ್ತಿದೆ. ಮೇಲ್ನೋಟಕ್ಕೆ ಇವೆಲ್ಲ ಸಹಜವಾದ ಅಧಿಕಾರ ಹಂಚಿಕೆಯ ಮತ್ತು ಆಡಳಿತದ ಭಾಗ ಅಂತ ಅನ್ನಿಸ ಬಹುದು. ಆದರೆ ಇದರ ಹಿಂದೆ ಲೆಕ್ಕಾಚಾರ ಬೇರೆ ಇದ್ದಂತಿದೆ. ‘ದೊಡ್ಡ ಪ್ರಮಾಣದ ದಲಿತ ನಾಯಕ ವರ್ಗವನ್ನು ತಮ್ಮ ಕಡೆಗೆ ಒಲಿಸಿ ಕೊಂಡರೆ ಅಷ್ಟರ ಮಟ್ಟಿಗೆ ಸಂವಿಧಾನ ಬದಲಾವಣೆಗೆ ದಲಿತ ವರ್ಗದ ಪ್ರತಿರೋಧ ಕಡಿಮೆ ಆದಂತೆ ಆಗುತ್ತದೆ’ ಎನ್ನುವ ಲೆಕ್ಕಾಚಾರ ಅದು. ಅಲ್ಲದೆ, ಸ್ವತಃ ಅಂಬೇಡ್ಕರ್ ಅವರೇ ಮುಂದಿನ ತಲೆಮಾರು ಬೇಕಾದರೆ ಸಂವಿಧಾನವನ್ನು ಬದಲಿಸಿಕೊಳ್ಳಲಿ ಎಂಬ ಅರ್ಥದ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಜನರನ್ನು ನಂಬಿಸಲು ಅವರ ಬರಹ ಮತ್ತು ಭಾಷಣಗಳ ಕೆಲವು ಅಂಶಗಳನ್ನು ಸನ್ನಿವೇಶದಿಂದ ಪ್ರತ್ಯೇಕಿಸಿ ಎತ್ತಿ ತೋರಿಸುವ ಕೆಲಸವೂ ನಡೆದಿದೆ.

ಸಂವಿಧಾನ ಬದಲಿಸಲು ಜನಮನದ ಸಿದ್ಧತೆ

ಇಷ್ಟೆಲ್ಲಾ ಆಗುತ್ತಿದ್ದರೂ ಸಂವಿಧಾನ ಅಪಾಯದಲ್ಲಿದೆ ಎನ್ನುವ ಅಭಿಪ್ರಾಯ ದಟ್ಟಗೊಳ್ಳುತ್ತಿಲ್ಲ. ‘ಧರ್ಮ ಅಪಾಯದಲ್ಲಿದೆ’ ಎನ್ನುವ ಅಭಿಪ್ರಾಯದ ಮಹಾ ಪ್ರವಾಹದಲ್ಲಿ ಅಲ್ಲಿಲ್ಲಿ ಕೇಳಿಸಿ ಕೊಳ್ಳುತ್ತಿರುವ ‘ಸಂವಿಧಾನ ಅಪಾಯದಲ್ಲಿದೆ’ ಎನ್ನುವ ಕೆಲವರ ಆತಂಕ ಭರಿತ ಮಾತುಗಳೂ ಕೊಚ್ಚಿ ಹೋಗುತ್ತಿವೆ. ಈ ದೇಶದಲ್ಲಿ ಜನತಂತ್ರ ಬಂದದ್ದು, ಸಮಾನತೆಯ ಕಾನೂನು ಬಂದದ್ದು ಸಂವಿಧಾನದ ಮೂಲಕ ಎನ್ನುವ ಸತ್ಯವನ್ನೇ ಅಳಿಸಲೆಂಬಂತೆ, ವೇದಕಾಲದಿಂದಲೂ ದೇಶದಲ್ಲಿ ಪ್ರಜಾತಂತ್ರ ಇತ್ತು ಎನ್ನುವ ಅರ್ಥದ   ಸಂಕಥನಗಳನ್ನು ಸೃಷ್ಟಿಸುವ ಸನ್ನಾಹವೂ ನಡೆಯುತ್ತಿದೆ. ಅದಕ್ಕಾಗಿಯೇ ಸಂವಿಧಾನ ದಿನವನ್ನು ‘ಭಾರತ: ಪ್ರಜಾತಂತ್ರದ ಜನನಿ’ ಎನ್ನುವ ಘೋಷಣೆಯೊಂದಿಗೆ ಆಚರಿಸಬೇಕೆಂಬ ಆದೇಶ ಬಂದಿರುವುದು. ಇವೆಲ್ಲವೂ ಸಂವಿಧಾನ ಬದಲಿಸಲು ಜನಮನವನ್ನು ಹದಗೊಳಿಸುವ ಸನ್ನಾಹದ ಭಾಗ.

ಸಂವಿಧಾನ ರಕ್ಷಣೆಗೆ ಸಿದ್ಧರಾಗದಿದ್ದರೆ…

ಹಾಗಾಗಿ ಈಗಲಾದರೂ ಸಂವಿಧಾನ ಅಪಾಯದಲ್ಲಿದೆ ಎಂದು ಒಪ್ಪಿಕೊಳ್ಳದೇ ಹೋದರೆ, ಸಂವಿಧಾನದ ರಕ್ಷಣೆಗೆ ಎಂತಹಾ ತ್ಯಾಗಕ್ಕೂ ಸಿದ್ಧರಾಗಬೇಕು ಎನ್ನುವ ಮನೋಭಾವನೆಯನ್ನು ಜನಸಮೂಹದಲ್ಲಿ ಗಟ್ಟಿಗೊಳಿಸುವ ಕೆಲಸ ಆಗದೆ ಹೋದರೆ ಮತ್ತು ಇದಕ್ಕೆ ಪೂರಕವಾಗಿ ಸಂವಿಧಾನದ ಕುರಿತಾದ ಅರಿವನ್ನು ಜನರ ಸಾಂಸ್ಕೃತಿಕ ಅರಿವಿನ ಭಾಗವಾಗಿ ಸ್ಥಾಪಿಸದೆ ಹೋದರೆ, ಪರಿಸ್ಥಿತಿ ಬಹುಬೇಗ ಕೈ ಮೀರಿ ಹೋಗಲಿದೆ. ಈಗ ಮೈಮರೆತರೆ ಊರು ಸೂರೆ ಹೋದ ಮೇಲೆ ಕೋಟೆಗೆ ಬಾಗಿಲು ಹಾಕುವ ಪರಿಸ್ಥಿತಿ ಬಂದೀತು.

ಎ ನಾರಾಯಣ

ಲೇಖಕರು

ಭಾರತ ಸಂವಿಧಾನವೆಂಬ ಶ್ರೀ ಸಾಮಾನ್ಯನ ಜೀವಂತ ಗ್ರಂಥ!
ಭಾರತದ ಸಂವಿಧಾನದ ಬಗ್ಗೆ ಬೇಕಾಬಿಟ್ಟಿ ಮಾತಾಡುವ ಜನರ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಸಂವಿಧಾನದ ಆಶೋತ್ತರಗಳನ್ನು ಯುವ ಸಮುದಾಯ ಹೆಚ್ಚು ಹೆಚ್ಚಾಗಿ ಅಂತರ್ಗತಗೊಳಿಸಿ ಕೊಳ್ಳಬೇಕಾದ ತುರ್ತು ದೇಶದ ಮುಂದಿದೆ. ಈ ಸಂದರ್ಭದಲ್ಲಿ ತಿಪಟೂರಿನ ಯುವಕ ವಿನಯ್ ಎಸ್ ಕೆ  ಅವರು ಸಂವಿಧಾನದ ಉದಾತ್ತ ಆದರ್ಶಗಳ ಮೇಲೆ ತಮ್ಮ ಲೇಖನಿ ಹರಿಸಿದ್ದಾರೆ

ನವೆಂಬರ್ 26, 1949 ಭಾರತದ ಸಂವಿಧಾನ ಸಭೆಯಲ್ಲಿ ಭಾರತಕ್ಕೆ ಹೊಸದಾದ ಒಂದು ಸಂವಿಧಾನ ಅಂಗೀಕಾರಗೊಂಡ ದಿನ. ಅಂದಿಗೆ ಶತಮಾನಗಳ ಕಾಲ ಇದ್ದ ಧರ್ಮ ಶಾಸ್ತ್ರಗಳು, ಪುರಾಣಗಳು ಬದಿಗೆ ಸರಿದು ಮಾನವೀಯ ಮುಖದ  ಸಮತೆಯ  ಗ್ರಂಥ ಅಂಗೀಕಾರಗೊಂಡಿತು. ಅ ದಿನವನ್ನು ಸರ್ಕಾರ  ಸಂವಿಧಾನ ದಿನವಾಗಿ ಆಚರಿಸುತ್ತದೆ. ಸಂವಿಧಾನ ಸಭೆಯ 284 ಜನ ಸದಸ್ಯರ  ಸಹಿ ಮೂಲಕ ನಮ್ಮ ಹೆಮ್ಮೆಯ ಸಂವಿಧಾನವು ಅಂಗೀಕಾರಗೊಂಡಿತು. ಆ ಮೂಲಕ ಡಾ ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ಸಮಿತಿಯ ಸುದೀರ್ಘ 2 ವರ್ಷ 11ತಿಂಗಳು 18 ದಿನಗಳ ಶ್ರಮ ಫಲಪ್ರದವಾಯಿತು. ಇದುವರೆಗೂ 468 ಅನುಚ್ಛೇದಗಳು,  12 ಪರಿಚ್ಛೇದಗಳು, 105 ತಿದ್ದುಪಡಿಗಳನ್ನು ಕಂಡ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಲಿಖಿತ ಸಂವಿಧಾನ ಎಂಬಾ ಹೆಗ್ಗಳಿಕೆಯನ್ನು ನಮ್ಮ ಭಾರತ ಸಂವಿಧಾನ ಪಡೆದುಕೊಂಡಿತು.

ಸಂವಿಧಾನದ ಪ್ರಾಮುಖ್ಯತೆ

ಭಾರತ ಒಂದು ಒಕ್ಕೂಟ

ಐತಿಹಾಸಿಕವಾಗಿ 550 ಕ್ಕು ಹೆಚ್ಚು ಪ್ರಾಂತಗಳಾಗಿದ್ದ ಭಾರತ  ಒಂದೇ ಕಾನೂನಿನ ವ್ಯಾಪ್ತಿಗೆ ಒಳಪಟ್ಟಿದ್ದು  ಸಂವಿಧಾನದಿಂದ. ಭಾರತ ರಾಜ್ಯಗಳ ಒಕ್ಕೂಟ ಎಂದು ಸಂವಿಧಾನದ 1ನೇ ಅನುಚ್ಛೇದ ಹೇಳುತ್ತದೆ. ಅಂದಿನಿಂದ ಭಾರತ ಒಕ್ಕೂಟ ಮಾದರಿಯ ದೇಶವಾಯಿತು.

ಸಾಮಾಜಿಕ ಸ್ವಾತಂತ್ರ್ಯ

ಐತಿಹಾಸಿಕವಾಗಿ ಚಾತುರ್ವರ್ಣ ಮನುಧರ್ಮ ಶಾಸ್ತ್ರದಿಂದ  ಭಾರತೀಯರು ಜಾತಿಗಳಾಗಿ ಒಡೆದು ಹೋಗಿ ಹಲವಾರು ಅಸಮಾನತೆಗಳನ್ನು ಅನುಭವಿಸಿ  ವಿದ್ಯೆ, ಆಸ್ತಿ, ಅಧಿಕಾರ, ಇಷ್ಟದ ವೃತ್ತಿ ಇಲ್ಲದೇ ನೋವುಂಡಿದ್ದರು. ಅಂತಹ ಜನರಿಗೆ ಓದುವ ಬರೆಯುವ, ದೇಶದ ಯಾವುದೇ ಭಾಗದಲ್ಲಿ ಸಂಚರಿಸುವ, ಇಷ್ಟಪಟ್ಪ ಬಟ್ಟೆ ತೊಡುವ, ಇಷ್ಟ ಪಟ್ಟ ಆಹಾರ ಸೇವನೆ ಮಾಡುವ ಸ್ವಾತಂತ್ರ್ಯ ಕೊಟ್ಟಿದ್ದು ಸಂವಿಧಾನ. ಈ ಎಲ್ಲದರ ಮೇಲೆ ನಿಷೇಧ ಹೇರಿದ್ದು ಶಾಸ್ತ್ರ ಪುರಾಣಗಳು. ಎಲ್ಲಕ್ಕೂ ಮಿಗಿಲಾಗಿ ಶ್ರೇಣೀಕೃತ ಸಮಾಜದಿಂದ ಸಮತೆಯ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ್ದೇ ಸಂವಿಧಾನ.

ರಾಜಕೀಯ ಸಮಾನತೆ ಮತ್ತು ಸಮಾನ ಅವಕಾಶ

ರಾಷ್ಟ್ರದ ರಾಷ್ಟ್ರಪತಿಯವರಿಂದ ಹಿಡಿದು ಕಟ್ಟಕಡೆಯ ವ್ಯಕ್ತಿಗೂ ಒಂದೇ ಮತ ಒಂದೇ ಮೌಲ್ಯ. 25 ವರ್ಷ ವಯಸ್ಸಿನ ಮೇಲ್ಪಟ್ಟ ಯಾವುದೇ ಜಾತಿ, ಧರ್ಮ, ಅಂತಸ್ತು, ಲಿಂಗ, ಪ್ರದೇಶ, ತಾರತಮ್ಯವಿಲ್ಲದೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆತಿದ್ದು ಸಂವಿಧಾನದಿಂದ. ಬಹುಸಂಖ್ಯಾತ ವರ್ಗಕ್ಕೆ ಐತಿಹಾಸಿಕವಾಗಿ ರಾಜ್ಯ ಆಳುವ ಹಕ್ಕನ್ನು ಧರ್ಮಶಾಸ್ತ್ರಗಳು ನಿಷೇಧ ಹೇರಿದ್ದವು.

ಅವಕಾಶಗಳ ಸಮಾನತೆ

ಐತಿಹಾಸಿಕ ಅನ್ಯಾಯದ ಪರಿಣಾಮವಾಗಿ ಮತ್ತು ಅನ್ಯಾಯಕ್ಕೆ ಒಳಗಾದ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸಲು  ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ದೊರಕಿರುವುದು ಸಂವಿಧಾನದಿಂದ.

ಅಸ್ಪೃಶ್ಯತೆ ನಿಷೇಧ

ಶತಮಾನಗಳ ಕಾಲ  ಅನುಭವಿಸಿದ ಶೋಷಣೆ  ಮತ್ತು ಕ್ರೌರ್ಯದಿಂದ  ಮುಕ್ತಿಗೆ ಕಾನೂನಿನ ಬಲ ತಂದಿದ್ದು ಸಂವಿಧಾನ.

ನಮ್ಮ ದೇಶದ ವೈವಿಧ್ಯತೆಯನ್ನು ಗುರುತಿಸಿದ್ದು ಸಂವಿಧಾನ. ಭಾಷಾವಾರು ರಾಜ್ಯಗಳ  ರಚನೆ, ಯಾವುದೇ ಭಾಷೆಗೆ ದೇವ ಭಾಷೆ,  ರಾಷ್ಟ್ರೀಯ ಭಾಷೆ ಸ್ಥಾನಮಾನ ನೀಡದೆ ಬಹುಮುಖ್ಯವಾಗಿ ಮಾತನಾಡುವ 22 ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಗುರುತಿಸಿರುವುದು ಸಂವಿಧಾನ. ಯಾವುದೇ ನುಡಿ, ಭಾಷೆ, ಸಂಸ್ಕೃತಿ ರಕ್ಷಣೆ ಸಂವಿಧಾನ ನೀಡಿದ ಮೂಲಭೂತ ಹಕ್ಕು.

ಧಾರ್ಮಿಕ ಸ್ವಾತಂತ್ರ್ಯ

ಭಾರತವು ಐತಿಹಾಸಿಕವಾಗಿ ಜಾತ್ಯತೀತ ರಾಷ್ಟ್ರ. ಇಲ್ಲಿ ಹಲವಾರು ಧರ್ಮಗಳಿವೆ. ಹಾಗಾಗಿ ಧರ್ಮ ಧರ್ಮಗಳ ನಡುವೆ ಸಮಾನತೆ, ಧರ್ಮದ ಒಳಗೂ ಸ್ವಾತಂತ್ರ್ಯ ಮತ್ತು ಸಮಾನತೆ ನೀಡುವ ಮೂಲಕ ಧಾರ್ಮಿಕ ದಬ್ಬಾಳಿಕೆಗೆ ಆಸ್ಪದ ನೀಡದೆ ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ.

ಪ್ರಜೆಗಳು ತಮ್ಮ ಹಕ್ಕುಗಳಿಂದ ವಂಚಿತರಾದಾಗ ಸಂವಿಧಾನದ ಪರಿಹಾರದ ಹಕ್ಕುಗಳ ಮೂಲಕ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನಲ್ಲಿ ತಮ್ಮ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುವ ಹಕ್ಕನ್ನು ಸಹ ಇದು ನೀಡಿದೆ.

ʼಸಂವಿಧಾನವನ್ನು ರಕ್ಷಿಸಿದರೆ ನಮ್ಮನ್ನು ಸಂವಿಧಾನ ರಕ್ಷಿಸುತ್ತದೆʼ

ಭಾರತದ ಪ್ರಜೆಗಳು ತಮಗೆ ತಾವೇ ಅರ್ಪಿಸಿಕೊಂಡ ಸಂವಿಧಾನ ಇದಾಗಿದೆ. ಅದನ್ನು ಪಾಲಿಸಿ ಎತ್ತಿಹಿಡಿದು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ನಮಗೆ ಸಂವಿಧಾನ ಕರ್ತೃಗಳು ನೀಡಿದ್ದಾರೆ. ಅದನ್ನು ನಮ್ಮ ಪ್ರತಿ ನಡೆಗಳಲ್ಲಿ ಕಾಪಾಡೋಣ, ಎತ್ತಿಹಿಡಿಯೋಣ. ನಾವು ಸಂವಿಧಾನವನ್ನು ರಕ್ಷಿಸಿದರೆ ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ ಎಂಬ ದೇವನೂರು ಮಹಾದೇವ ಅವರ ಮಾತುಗಳು ಸದಾ ಮನನೀಯ.

ವಿನಯ್ ಎಸ್ ಕೆ

ತಿಪಟೂರು

ಭಾರತ ಸಂವಿಧಾನದ ಸ್ತ್ರೀ ಪರ ನಿಲುವು: ಪ್ರಸ್ತುತ ವಿದ್ಯಮಾನಗಳು
ಭಾರತ ಸಂವಿಧಾನದ ಸ್ತ್ರೀ ಪರ ನಿಲುವು ನ್ಯಾಯಾಧೀಶರ ಎಚ್ಚರ ಮತ್ತು ಸ್ಫೂರ್ತಿ ಹಾಗೂ ಸಮಾಜವು ನ್ಯಾಯಾಂಗವನ್ನು ಧನಾತ್ಮಕ ಪರಿವರ್ತನೆಗೆ ಹಚ್ಚುವುದು ಇವೆರಡೂ ಏಕಕಾಲಕ್ಕೆ ನಡೆದಲ್ಲಿ ಮಾತ್ರ ಮಹಿಳಾ ಪ್ರಶ್ನೆಗಳು ನಿಜವಾದ ಸ್ತ್ರೀ ಪರ ನ್ಯಾಯವನ್ನು ಪಡೆಯಬಲ್ಲವು ಎನ್ನುತ್ತಾರೆ ಅಂತಾರಾಷ್ಟ್ರೀಯ ಖ್ಯಾತಿಯ ಕಾನೂನು ವಿದ್ವಾಂಸರೂ, ಸಿಂಬಿಯಾಸಿಸ್ ಲಾ ಸ್ಕೂಲಿನ‌ ನಿರ್ದೇಶಕರೂ ಆಗಿರುವ ಡಾ. ಶಶಿಕಲಾ ಗುರುಪುರ

ಅಮೃತ ಮಹೋತ್ಸವದ ಆಚರಣೆಯಲ್ಲಿರುವ ಭಾರತದ ಪ್ರಜಾಪ್ರಭುತ್ವದ ಭದ್ರ ತಳಹದಿಯೇ ನಮ್ಮ ಸಂವಿಧಾನ. ಕಾಲಾತೀತವಾಗಿ ಈ ದೇಶದ ಆಶೋತ್ತರಗಳನ್ನು ಪ್ರತಿಬಿಂಬಿಸುವ ಈ ಸಾಮಾಜಿಕ ದಾಖಲೆಯಲ್ಲಿ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತೆಗಳು ಮೂಲಭೂತ ಮೌಲ್ಯಗಳು.

ಸಂವಿಧಾನದ ಆತ್ಮವೆಂಬುದಾಗಿ ಹೇಳಲಾದ ಮೂರನೆಯ ಪರಿಚ್ಛೇದದ ೧೨ ರಿಂದ ೩೨ ರ ವರೆಗಿನ ವಿಧಿಗಳು ಮೂಲಭೂತ ಹಕ್ಕುಗಳನ್ನು ವಿವರಿಸುತ್ತವೆ. ಇವುಗಳಲ್ಲಿ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಜೀವಿಸುವ ಹಕ್ಕು ಧಾರ್ಮಿಕ ಸ್ವಾತಂತ್ರ್ಯ ಹಾಗೂ ನ್ಯಾಯಾಂಗ ನೆರವಿನ ಹಕ್ಕು ಒಳಗೊಂಡಿವೆ. ೧೫ನೆಯ ವಿಧಿಯು ತಾರತಮ್ಯಗಳನ್ನು ನಿಷೇಧಿಸುತ್ತಾ ಲಿಂಗಾಧಾರಿತ ತಾರತಮ್ಯವನ್ನು ವಿರೋಧಿಸಿದೆ. ಅದೇ ವಿಧಿಯಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ಒದಗಿಸುವಂಥ ಕರ್ತವ್ಯ ಸರಕಾರದ ಮೇಲಿದೆ.

ಸಂವಿಧಾನದ ಒಳ ಸ್ತ್ರೋತವಾದ ನ್ಯಾಯವನ್ನು ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ಸ್ತರಗಳಲ್ಲಿ  ಅನುಷ್ಠಾನ ಗೊಳಿಸುವಲ್ಲಿ ಕಾಯಿದೆ ಹಾಗೂ ಅಡಳಿತ ನೀತಿಗಳಿಗಿಂತಲೂ ತೀವ್ರವಾಗಿ ಭಾರತೀಯ ನ್ಯಾಯಾಂಗದ ಕೊಡುಗೆ ಕಂಡು ಬರುತ್ತದೆ. ಇದರಲ್ಲಿ ಮಹಿಳಾಪರವಾದ ನ್ಯಾಯದ ನಿಲುವುಗಳು ಗಮನಾರ್ಹ. ಆದರೂ ಮಹಿಳಾ ನಿರ್ಲಿಪ್ತ, ಮಹಿಳಾ ವಿರೋಧಿ, ಪೂರ್ವಾಗ್ರಹ ಪೀಡಿತ ನಿಲುವುಗಳು ಕಂಡು ಬರುತ್ತವೆ. ೧೯೭೦ ರ ದಶಕದ ಮಥುರಾ ಮೊಕದ್ದಮೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಶೀಲದ ಸುತ್ತಲಿನ  ಸಂಶಯವು ಆರೋಪಿಯ ಶಿಕ್ಷೆಯನ್ನು ಕಡಿತಗೊಳಿಸಿರುವುದು ಒಂದು. ಗಂಡನು ಸಹಜೀವನಕ್ಕಾಗಿ ಆದೇಶಿಸಿದಾಗ ವೃತ್ತಿಯ ಕಾರಣಕ್ಕೆ ನಿರಾಕರಿಸಿದ ಮಡದಿ ಸಿನೆಮಾ ನಟಿ ಸರಿತಾ ಅವರ ಸಾಂವಿಧಾನಿಕ ಘನತೆಯನ್ನು ಮದುವೆಯೆಂಬ ಪವಿತ್ರ ಬಂಧನದ ಪ್ರತಿಸ್ಪರ್ಧಿಯಾಗಿ ನೋಡಿರುವುದೂ ವಿಪರ್ಯಾಸ!

ಕಳೆದ ಐದು ವರುಷಗಳಲ್ಲಿ ಕಾನೂನಿನ ತಕ್ಕಡಿಯನ್ನು ಹಿಡಿದಿರುವ ನ್ಯಾಯ ದೇವತೆ ತನ್ನ ಕಣ್ಣ ಪಟ್ಟಿಯನ್ನು ಸರಿಸಿ ಮಹಿಳೆಯ ನೋವನ್ನು ಗ್ರಹಿಸಿರುವ ವಿದ್ಯಮಾನಗಳು ಅನೇಕ. ಇಲ್ಲಿ, ಹಾಲಿ ಸರ್ವೋಚ್ಚ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಾ. ಧನಂಜಯ ಚಂದ್ರಚೂಡ್‌ ಒಬ್ಬ ದೃಷ್ಟಾರರಾಗಿ ಅಪರೂಪದ ಮಹಿಳಾ ಒಳ ದನಿಯಾಗಿ ಕಾಣುತ್ತಾರೆ. ಮಹಿಳೆಯರನ್ನು ವೃತ್ತಿಯ ಹುದ್ದೆಯ ತಾರತಮ್ಯದಿಂದ ಸಕ್ರಿಯವಾಗಿ ಸೈನ್ಯದಲ್ಲಿ ಇರಿಸಿದ ತೀರ್ಪು ಮಾತ್ರವಲ್ಲ, ಮದುವೆಯೊಳಗೆ ಮಹಿಳೆಯ ಶರೀರದ ಒಡೆತನ ಪುರುಷನದ್ದಲ್ಲ ಎಂದು  ವ್ಯಭಿಚಾರದ ಅಪರಾಧ ಕಾನೂನನ್ನು ಒರೆಗೆ ಹಚ್ಚಿದವರು. ಮಾನ್ಯ ನ್ಯಾಯ ಮೂರ್ತಿಗಳು ಶಬರಿಮಲೆಯ ತೀರ್ಪಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯನ್ನು ಸಾರ್ವಜನಿಕ ಧರ್ಮಾನುಭವಕ್ಕೆ ಶರೀರದ ಆಧಾರದಲ್ಲಿ ಅತೀತವಾಗಿಸುವುದು ʼಅಸ್ಪೃಶ್ಯತೆʼ ಎಂದು ಸಾರಿದ್ದಾರೆ. ಇದು ಮಹಿಳಾ ಹಕ್ಕುಗಳಿಗೆ ನಾಗರಿಕ ಹಕ್ಕಿನ ನಿರ್ದಿಷ್ಟ ಹೋರಾಟಕ್ಕೆ ಮುನ್ನುಡಿ ಬರೆದಂತಿದೆ. ಖಾಸಗಿ ತನದ ವ್ಯಾಖ್ಯಾನವನ್ನು ʼಆಧಾರ್‌ʼ ಕೇಸಲ್ಲಿ ನೀಡುತ್ತಾ, ಗರ್ಭಪಾತದ  ಕಾನೂನುಗಳ, ಖಾಸಗಿ ಕೌಟುಂಬಿಕ ಕಾನೂನುಗಳ ಮಹಿಳಾ ವಿರೋಧಿ ಅಂಶಗಳನ್ನು ಪರಿಶೋಧಿಸಿದ್ದೂ ಇದೆ.

ಇದರಂತೆಯೇ ಮುನ್ನುಗ್ಗಿದ ಪುರೋಗಾಮಿ ಛಲವು ಮಾಜಿ ನ್ಯಾಯಮೂರ್ತಿ ಸುಜಾತಾ ಮನೋಹರ್‌ ಅವರಲ್ಲಿ, ಹಾಲಿ ಮುಂಬೈ  ಹೈಕೋರ್ಟಿನ ನಮ್ಮ ಹಳೆ ವಿದ್ಯಾರ್ಥಿನಿ ನ್ಯಾಯ ಮೂರ್ತಿ ರೇವತಿ ಡೇರೆಯವರಲ್ಲಿ, ನ್ಯಾಯಮೂರ್ತಿ ರವೀಂದ್ರ ಭಟ್‌ ರವರ ಸ್ತ್ರೀ ಪರ ತೀರ್ಪುಗಳಲ್ಲಿ ಕಾಣುತ್ತವೆ.

ಇವೆಲ್ಲ ವಿದ್ಯಮಾನಗಳು ಸಂವಿಧಾನದ ರಕ್ಷಕರಾಗಿ ನ್ಯಾಯಾಂಗದ ಪರಿಣತರ ಎಚ್ಚರ ಹಾಗೂ ದಕ್ಷತೆಗಳಿಗೆ ಕುರುಹಾಗಿವೆ. ಅಪವಾದವೆಂಬಂತೆ ʼಚರ್ಮ ಸ್ಪರ್ಷವಿಲ್ಲದ ಶೋಷಣೆ ಮಗುವಿನ ಮೇಲಾಗಿದ್ದರೆ ಅದನ್ನು ಹಾಗೆ ಹೇಳಲಾಗದುʼ ಎಂಬ ಮಹಿಳಾ ನ್ಯಾಯಾಧೀಶೆಯ ಅಪ್ರಬುದ್ಧ ವ್ಯಾಖ್ಯಾನಗಳೂ ಕಾಣಿಸುತ್ತವೆ.

ಒಟ್ಟಿನಲ್ಲಿ ನ್ಯಾಯಾಧೀಶರ ಎಚ್ಚರ ಮತ್ತು ಸ್ಫೂರ್ತಿ ಹಾಗೂ ಸಮಾಜವು ನ್ಯಾಯಾಂಗವನ್ನು ಧನಾತ್ಮಕ ಪರಿವರ್ತನೆಗೆ ಹಚ್ಚುವುದು ಇವೆರಡೂ ಏಕಕಾಲಕ್ಕೆ ನಡೆದಲ್ಲಿ ಮಾತ್ರ ಮಹಿಳಾ ಪ್ರಶ್ನೆಗಳು ನಿಜವಾದ ಸ್ತ್ರೀ ಪರ ನ್ಯಾಯವನ್ನು ಪಡೆದು ಐತಿಹಾಸಿಕ ತಾರತಮ್ಯಕ್ಕೆ ಹಾಗೂ ಪರಿಹಾರ ಸಿಗದ ಅನ್ಯಾಯದ ಮೂಕ ರೋಧನಕ್ಕೆ ಕಿವಿಯಾಗಬಲ್ಲುದು.

ಡಾ.ಶಶಿಕಲಾ ಗುರುಪುರ

ಪ್ರಸ್ತುತ ಪುಣೆಯ ಸಿಂಬಿಯಾಸಿಸ್‌ ಲಾ ಸ್ಕೂಲಿನ ನಿರ್ದೇಶಕರು, ಸಿಂಬಿಯಾಸಿಸ್ ಅಂತಾರಾಷ್ಟ್ರೀಯ‌ ಯೂನಿವರ್ಸಿಟಿಯ ಡೀನ್‌ ಆಗಿರುವ ಇವರು ಖ್ಯಾತ ಅಂತಾರಾಷ್ಟ್ರೀಯ ಕಾನೂನು ವಿದ್ವಾಂಸರು.

“ಸಂವಿಧಾನ ಸಮರ್ಪಣಾ ದಿನ”ವನ್ನು “ವೇದ ಹಾಗೂ ಮನುಸ್ಮೃತಿ ದಿನ” ಮಾಡುವ ಬಿಜೆಪಿ ಹುನ್ನಾರ : ಚಿಂತಕ ಶಿವಸುಂದರ್
ಈ ಬಾರಿ ನ.26 ರ ಸಂವಿಧಾನ ಸಮರ್ಪಣಾ ದಿನವನ್ನು “ಭಾರತ-ಪ್ರಜಾತಂತ್ರದ ಜನನಿ” ಎಂಬ ಹೆಸರಿನಲ್ಲಿ ದೇಶಾದ್ಯಂತ ಆಚರಿಸಬೇಕೆಂದು ಮೋದಿ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿ ನವಂಬರ್ 9 ರಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ, ವಿಶ್ವವಿದ್ಯಾಲಯಗಳಿಗೆ ಹಾಗೂ ಕೇಂದ್ರ ಕಚೇರಿಗಳಿಗೆ ಸೂಚನೆಯನ್ನು ಕೊಟ್ಟಿದ್ದಾರೆ.

ಆ ಆಚರಣೆಯ ಒತ್ತು ಏನಿರಬೇಕೆಂಬ ಬಗ್ಗೆ ICHR- Indian Council For Historical Research ತಯಾರಿಸಿದ  ಎರಡು ಪುಟದ ಒಂದು ಪರಿಕಲ್ಪನಾತ್ಮಕ ಟಿಪ್ಪಣಿ (Concept Note) ಯನ್ನು ಕೂಡ ಅದರ ಜೊತೆ ಲಗತ್ತಿಸಲಾಗಿದೆ. (ಅದು ಈ ಲೇಖನದ attachment ನಲ್ಲಿದೆ).

ಆ ಟಿಪ್ಪಣಿಯ ಕೆಲವು ಭಾಗಗಳು ಹೀಗಿವೆ:
●  ವೇದಗಳ ಕಾಲದಲ್ಲೇ ಭಾರತದಲ್ಲಿ ಪ್ರಜಾತಂತ್ರವಿತ್ತು.
●  ವೇದಗಳ ಕಾಲದಿಂದಲೂ ಗ್ರಾಮಗಳಲ್ಲಿ  ಸಮುದಾಯ ಆಧಾರಿತ ಆಡಳಿತವಿತ್ತು. ಅದು ಪಂಚಾಯತಿ ಮತ್ತು ಖಾಪ್ ಪಂಚಾಯತಿ ರೂಪದಲ್ಲಿತ್ತು.
(ಆರ್ಥಾತ್ ಜಾತಿ ವ್ಯವಸ್ಥೆಯನ್ನು ಪ್ರಜಾತಾಂತ್ರಿಕ ಗ್ರಾಮ ವ್ಯವಸ್ಥೆಯೆಂದು ಬಣ್ಣಿಸಲಾಗುತ್ತಿದೆ!)
●  ಈ ಕಾರಣದಿಂದಾಗಿಯೇ  ಭಾರತವು 2000  ವರ್ಷಗಳಿಂದಲೂ ವಿದೇಶಿಯರ ದಾಳಿಗೆ ತುತ್ತಾಗುತ್ತಲೇ ಬಂದಿದ್ದರೂ ಹಿಂದೂ ಸಂಸ್ಕೃತಿ ಮತ್ತು ನಾಗರಿಕತೆ ಉಳಿದುಕೊಂಡು ಬಂದಿದೆ.
(ಇದು ಆರೆಸ್ಸೆಸ್ ಸರಸಂಘಚಾಲಕ ಗೋಲ್ವಾಲ್ಕರ್  ಪ್ರತಿಪಾದನೆ. ಜಾತಿ ವ್ಯವಸ್ಥೆಯೇ ಈ ದೇಶದ ಅಸ್ಮಿತೆ. ಅದು ಸಡಿಲವಾಗಿದ್ದರಿಂದಲೇ ಭಾರತದ ಈಶಾನ್ಯ ಮತ್ತು ವಾಯುವ್ಯ  ಪ್ರಾಂತ್ಯಗಳಲ್ಲಿ ಪರದೇಸಿ ಧರ್ಮಗಳು ನೆಲಸುವಂತಾಯಿತು ಎಂದು ಅವರ Bunch Of Thoughts ನಲ್ಲಿ ಬರೆದುಕೊಂಡಿದ್ದಾರೆ. ಈಗ ಮೋದಿ ಸರ್ಕಾರ ಯಥಾವತ್ ಅದೇ ಮಾತನ್ನು ಸಂವಿಧಾನ ದಿನದಂದು ಪ್ರಚಾರ ಮಾಡುತ್ತಿದೆ)
●  ಇತ್ತೀಚಿಗೆ ರಾಖಿಗರಿ ಸಂಶೋಧನೆಯಲ್ಲೂ ಭಾರತದ ವೈದಿಕ ನಾಗರೀಕತೆ 5000 ವರ್ಷಗಳಷ್ಟು ಹಿಂದಿನದ್ದೆಂದೂ, ಆ ಕಾಲದಲ್ಲೂ ಪ್ರಜಾತಾಂತ್ರಿಕ ವ್ಯವಸ್ಥೆ ಇತ್ತೆಂದು ಸಾಬೀತಾಗಿದೆ.
(ಇದು ಮತ್ತೊಂದು ಮಹಾ ಸುಳ್ಳು. ರಾಖಿಗರಿ ಸಂಶೋಧನೆಯು  ಹರಪ್ಪಾ ನಾಗರಿಕತೆಗೂ ಆರ್ಯರಿಗೂ ಸಂಬಂಧವಿಲ್ಲ. ಅದು ದ್ರಾವಿಡ ನಾಗರೀಕತೆ ಹೊರತು ಆರ್ಯ ನಾಗರೀಕತೆಯಲ್ಲ ಅರ್ಥಾತ್ ವೇದ ನಾಗರಿಕತೆಯಲ್ಲ ಎಂಬುದುನ್ನು ರಾಖಿಗರಿ ಸಂಶೋಧನೆ ಸಾಬೀತು ಮಾಡಿದೆ)

●  ಭಗವದ್ಗೀತೆಯು ಈ ವೇದ ಪ್ರಣೀತ ಪ್ರಜಾತಾಂತ್ರಿಕತೆಯ ಭಾಗವಾಗಿ ಮಾನವನ ನಡತೆಯಲ್ಲಿ ಜ್ಞಾನ, ಶ್ರದ್ಧೆ , ಕ್ರಿಯೆ ಮತ್ತು ಗುಣಗಳು ವ್ಯಕ್ತವಾಗಬೇಕು ಎಂದು ಪ್ರತಿಪಾದಿಸುತ್ತದೆ.
(ಆದರೆ ಅಂಬೇಡ್ಕರ್ ಅವರು ಸ್ಪಷ್ಟಪಡಿಸುವಂತೆ, ಭಗವದ್ಗೀತೆಯು  ಜಾತಿ ಆಧಾರಿತ ಶ್ರೇಣೀಕರಣವನ್ನು ಪ್ರತಿಪಾದಿಸುವ ಮನುಸ್ಮೃತಿಯ ತಾತ್ವಿಕ ಸಮರ್ಥನೆಯಾಗಿದ್ದು, ಅದರಲ್ಲಿ ಭೋಧಿಸಲಾಗಿರುವ ಜ್ಞಾನ, ಗುಣ ಮತ್ತು ಕ್ರಿಯೆಗಳೆಲ್ಲವೂ ಹುಟ್ಟಿನಿಂದಲೇ ತೀರ್ಮಾನವಾಗಿರುತ್ತದೆ ಎಂಬ ಜಾತಿ ಶ್ರೇಣೀಕರಣದ ತಾರತಮ್ಯ ತತ್ವವನ್ನೇ ಹೇಳುತ್ತದೆ. ಆದರೆ ಮೋದಿ ಸರ್ಕಾರ ಅದನ್ನು ಭಾರತದ ಸನಾತನ ಪ್ರಜಾತಂತ್ರ ಎಂದು ಆಚರಿಸಲು ಆದೇಶಿಸುತ್ತಿದೆ )

●  ಇದಲ್ಲದೆ, ಜಗತ್ತಿನ ಇತರ ಪ್ರಾಚೀನ ಪ್ರಜಾತಂತ್ರಗಳಾದ ಗ್ರೀಸ್ ಮತ್ತು ರೋಮನ್ ಪ್ರಜಾತಂತ್ರಕ್ಕೂ ಮತ್ತು ಭಾರತದ ವೈದಿಕ ಪ್ರಜಾತಂತ್ರಕ್ಕೂ ಇದ್ದ ದೊಡ್ಡ ವ್ಯತ್ಯಾಸವೇನೆಂದರೆ ಭಾರತದಲ್ಲಿ ಹುಟ್ಟಿನ ಆಧಾರದಲ್ಲಿ ಸಂಪತ್ತು, ಜ್ಞಾನ ಮತ್ತು ರಾಜ್ಯಅಧಿಕಾರಗಳು ಒಂದೆಡೆ ಕೇಂದ್ರೀಕರಣಗೊಂಡು ನಿರಂಕುಶ ಸಾಮ್ರಾಜ್ಯಗಳು ರೂಪುಗೊಳ್ಳಲಿಲ್ಲ.
(ಇದಕ್ಕಿಂತ ದೊಡ್ಡ ಸುಳ್ಳು ಮತ್ತೊಂದು ಇರಬಹುದೇ??? ಜಗತ್ತಿನಲ್ಲಿ ಬೇರೆಲ್ಲೂ ಇಲ್ಲದ ಹುಟ್ಟಿನ ಆಧಾರದ ಜಾತಿ ವ್ಯವಸ್ಥೆ, ಜಾತಿ ತಾರತಮ್ಯ ಇರುವುದು ಭಾರತದ ಬ್ರಾಹ್ಮಣಿಯ ಸಾಮಾಜಿಕ  ವ್ಯವಸ್ಥೆಯಲ್ಲಿ ಮಾತ್ರ. ಸಂಪತ್ತು, ಅಧಿಕಾರ ಮತ್ತು ಜ್ಞಾನ ವನ್ನು ವೇದಗಳ ಪ್ರಮಾಣಡ್ಮದಲೇ ದಲಿತರಿಂದ ಮತ್ತು ಶೂದ್ರರಿಂದ, ಮಹಿಳೆಯರಿಂದ ಕಸಿದು ಕೇವಲ ಬ್ರಾಹ್ಮಣಿಯ ಮೇಲ್ಜಾತಿಗಳ ಖಾಸಗಿ ಆಸ್ತಿಯನ್ನಾಗಿ ಮಾಡಿದ್ದು ಭಾರತದ ವೇದ -ಪುರಾಣ -ಶಾಸ್ತ್ರ -ಸ್ಮೃತಿ -ಶ್ರುತಿಗಳನ್ನಾಧರಿಸಿದ ಈ ದೇಶದ ಹಿಂದೂ ಬ್ರಾಹ್ಮಣಿಯ ಜಾತಿ ವ್ಯವಸ್ಥೆ.

ಆದ್ದರಿಂದಲೇ ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಪ್ರಜಾತಂತ್ರ, ಸ್ವಾತಂತ್ರ್ಯ-ಸಮಾನತೆ-ಭ್ರಾತ್ತ್ರುತ್ವ ಇಲ್ಲವೇ ಇಲ್ಲ. ಏಕೆಂದರೆ ಅದು ತಾರತಮ್ಯವನ್ನೇ ಆಧರಿಸಿದ ವೇದ-ಪುರಾಣಗಳನ್ನು ಅನುಸರಿಸುತ್ತದೆ. ಆದ್ದರಿಂದ ಹಿಂದೂ ರಾಷ್ಟ್ರವೆಂಬುದು ಭಾರತಕ್ಕೆ ಒದಗಬಹುದಾದ ಅತಿ ದೊಡ್ಡ ವಿಪತ್ತು ಎಂದು ಎಚ್ಚರಿಸಿದ್ದರು.

ಆದರೆ ಮೋದಿ ಸರ್ಕಾರ ಸಂವಿಧಾನ ದಿನದಂದು ಅದೇ ವೇದ-ಪುರಾಣ ಆಧರಿಸಿದ ಜಾತಿ ವ್ಯವಸ್ಥೆಯನ್ನೇ ಭಾರತದ ಹಿರಿಮೆ ಎಂದು ಆಚರಿಸಲು ಆದೇಶಿಸಿದ್ದಾರೆ)

ಹಾಗೆ ನೋಡಿದರೆ, 1949  ರ ನವಂಬರ್ 25 ರಂದು ಭಾರತಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡುತ್ತಾ ಅಂಬೇಡ್ಕರ್ ಅವರು ಮಾಡಿದ ಭಾಷಣದಲ್ಲಿ ಕೂಡ ಪ್ರಾಚೀನ ಭಾರತದಲ್ಲಿ ಪ್ರಜಾತಂತ್ರವಿತ್ತು ಎಂದು ಹೇಳಿದ್ದಾರೆ.

ಆದರೆ ಅದು ವೇದ ಭಾರತದಲ್ಲಲ್ಲ
ವೇದವನ್ನು ನಿರಾಕರಿಸುತ್ತಾ ಸಮತೆ, ಮಮತೆಯ ಮೌಲ್ಯಗಳ ಆಧಾರದಲ್ಲಿ ಹುಟ್ಟಿಕೊಂಡದ್ದು ಬುದ್ಧ ಕಾಲದ ಭಾರತದಲ್ಲಿ. ಬುದ್ಧ ಸಂಘಗಳಲ್ಲಿ.

ಇಂಥಾ ನೈಜ ಪ್ರಜಾತಂತ್ರವನ್ನು ಪುಷ್ಯ ಶೃಂಗ ನೇತೃತ್ವದಲ್ಲಿ ಬ್ರಾಹ್ಮಣರು ಪ್ರತಿಕ್ರಾಂತಿ ಮಾಡಿ ಸರ್ವನಾಶ ಮಾಡಿದರು. ಬ್ರಾಹ್ಮಣ್ಯದ ದಿಗ್ವಿಜಯದೊಂದಿಗೆ ಭಾರತದ ಸ್ವದೇಶಿ ಪ್ರಜಾತಂತ್ರ ಪತನಗೊಂಡಿತ್ತು. ಈಗ ಮತ್ತೊಮ್ಮೆ ಪ್ರಜಾತಂತ್ರ ಸಾಧಿಸಿದ್ದೇವೆ. ಆದರೆ ಅದು ಕೂಡ ಸರ್ವಾಧಿಕಾರದ ಹಾದಿ ಹಿಡಿಯುವ ಸಾಧ್ಯತೆ ಇದೆಯೆಂದು ಅಂಬೆಡ್ಕರ್ ಸಂವಿಧಾನ ಸಮರ್ಪಣಾ ದಿನದಂದೇ ಎಚ್ಚರಿಸಿದ್ದರು.

ಈಗ ಮೋದಿ ಸರ್ಕಾರ ಅಂಬೇಡ್ಕರ್ ನೇತೃತ್ವದಲ್ಲಿ ನಡೆದ ಜನಕ್ರಾಂತಿಯನ್ನು-ಸಂವಿಧಾನವನ್ನು ನಾಶಗೊಳಿಸಿ ಮತ್ತೆ  ವೇದಕಾಲದ ವರ್ಣಾಶ್ರಮವನ್ನೇ ಪ್ರಜಾತಂತ್ರ ಎಂದು ಪ್ರತಿಕ್ರಾಂತಿ ಮಾಡುತ್ತಿದ್ದಾರೆ.

ಈ ಪ್ರಜಾತಂತ್ರ ವಿರೋಧಿ ಬ್ರಾಹ್ಮಣಿಯ  ಸರ್ವಾಧಿಕಾರಿ ತತ್ವವನ್ನು ಅಧಿಕೃತಗೊಳಿಸಲು ನವಂಬರ್ 26ರ ಸಂವಿಧಾನ ಸಮರ್ಪಣಾ ದಿನವನ್ನೇ ಬಳಸಿಕೊಳ್ಳುತ್ತಿದ್ದಾರೆ.

ಇದನ್ನು ಭಾರತದ ಜನತೆ ತಿರಸ್ಕರಿಸಬೇಕು.
ಅದರ ಅರ್ಥ ಪ್ರಾಚಿನ ಭಾರತದಲ್ಲಿ ಪ್ರಜಾತಂತ್ರವಿರಲಿಲ್ಲ ಎಂದೇನಲ್ಲ. ಅಂಬೇಡ್ಕರ್ ಸ್ಪಷ್ಟಪಡಿಸಿರುವಂತೆ ಬೌದ್ಧ ಸಂಘಗಳಲ್ಲಿ ಇಂದಿನ ಆಧುನಿಕ ಸಂಸದೀಯ ಪ್ರಜಾತಂತ್ರದ ಎಲ್ಲಾ ರಿವಾಜುಗಳೂ ಇದ್ದವು. ಮತ್ತು ಬೌದ್ಧ ಸಂಘದ ಮೌಲ್ಯ ಸಮತೆ ಮತ್ತು ಮಮತೆಗಳಾಗಿದ್ದವು. ಹಾಗೆಯೇ ಬಸವ ಕ್ರಾಂತಿಯ ಅನುಭವ ಮಂಟಪವೂ ಕೂಡ. ನಮ್ಮ ಇತಿಹಾಸದಲ್ಲಿ ನಾವು ಹೆಮ್ಮೆ ಪಡಬೇಕಾದದ್ದು, ಮಾರ್ಗದರ್ಶಿಯಾಗಬೇಕಿರುವುದು ಬುದ್ಧ, ಬಸವರೇ ವಿನಾ ವೇದ-ಪುರಾಣ- ಗೀತಗಳಲ್ಲ.

ಆದರೆ ICHR ತಯಾರು ಮಾಡಿರುವ Concept Note ನಲ್ಲಿ ಬುದ್ಧನ ಬಗ್ಗೆಯಾಗಲೀ, ಅಪ್ಪಟ  ಭಾರತೀಯ  ಅವೈದಿಕ ಹಾಗೂ ಬ್ರಾಹ್ಮಣ ವಿರೋಧಿ  ಪ್ರಜಾತಾಂತ್ರಿಕ ಜ್ಞಾನ ದರ್ಶನಗಳ  ಬಗ್ಗೆ ಒಂದೇ ಒಂದು ಪದವೂ ಉಲ್ಲೇಖವಾಗಿಲ್ಲ.

ಬ್ರಾಹ್ಮಣೀಕರಣವೇ ಭಾರತೀಕರಣ ಎಂಬ ಸಂಘಿ ಹುನ್ನಾರ ಇದರಲ್ಲೂ ಎದ್ದು ಕಾಣುತ್ತಿದೆ. ಶೋಷಕರ ಇತಿಹಾಸವನ್ನು ನಿರಾಕರಿಸಿ ಶೋಷಿತರ ಪ್ರಜಾತಾಂತ್ರಿಕ ಇತಿಹಾಸವನ್ನು ಈ ನವಂಬರ್ 26 ರಂದೂ ಎತ್ತಿ ಹಿಡಿಯುವ ಜವಾಬ್ದಾರಿ ನಮ್ಮಮೇಲಿದೆ.
ಅಲ್ಲವೇ?

– ಶಿವಸುಂದರ್

ಅಂಬೇಡ್ಕರ್ ಅವರ ಸಮಾನತೆಯ ಚಿಂತನೆಗೆ ನಾವು ಬಲ ತುಂಬಬೇಕು : ಸಿದ್ದರಾಮಯ್ಯ
ಬೆಂಗಳೂರು: ಡಾ. ಬಿ.ಆರ್‌ ಅಂಬೇಡ್ಕರ್‌ ಅವರು ನಮ್ಮೆಲ್ಲರಿಗೂ ಸಮಾನತೆ ತಂದುಕೊಡುವುದಾದರೆ ಅವರ ಚಿಂತನೆಗಳಿಗೆ ನಾವು ಬಲ ತುಂಬಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಬೆಂಗಳೂರಿನ ಡಾ.ಬಿ,ಆರ್‌ ಅಂಬೇಡ್ಕರ್‌ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪ್ರಜಾಪ್ರಭುತ್ವದ ಬಲವರ್ದನೆ ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ, ಅದರ ಹುಟ್ಟು ಮತ್ತು ಬೆಳವಣಿಗೆ, ಈಗಿನ ಸವಾಲುಗಳು ಮತ್ತು ಮುಂದೇನು ಮಾಡಬೇಕು ಎಂಬ ಬಗ್ಗೆ ಶಿವಮಲ್ಲು ಅವರು ಬಹಳಷ್ಟು ಅಧ್ಯಯನ ನಡೆಸಿ, ಪುಸ್ತಕ ರಚನೆ ಮಾಡಿದ್ದಾರೆ. ಇಂಜಿನಿಯರಿಂಗ್‌ ಪದವೀಧರರಾದ ಶಿವಮಲ್ಲು ಅವರು ರಾಜಕಾರಣದಲ್ಲಿ ಭಾಗವಹಿಸದೆ ಇದ್ದರೂ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ. ಬಹಳ ಅಳೆದು ತೂಗಿ ಈ ದೇಶಕ್ಕೆ ಪ್ರಜಾಪ್ರಭುತ್ವ ಅಗತ್ಯವಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡು, ಅಳವಡಿಸಿಕೊಂಡಿದ್ದೇವೆ. ಸ್ವಾತಂತ್ಯ್ರ ನಂತರ ನಮ್ಮ ಸಂವಿಧಾನ ರಚನೆಯಾಗಿದ್ದು, ನಮ್ಮನ್ನು ನಾವೇ ಆಳಿಕೊಳ್ಳುವುದು ಪ್ರಜಾಪ್ರಭುತ್ವ ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರರು ಸಂವಿಧಾನ ಸಭೆಯಲ್ಲಿ ಭಾಷಣ ಮಾಡುವಾಗ, ನಾವೇನೋ ಇಂದು ಸಂವಿಧಾನ ರಚನೆ ಮಾಡಿಕೊಂಡಿದ್ದೇವೆ, 1950 ಜನವರಿ 26ರಿಂದ ಈ ಸಂವಿಧಾನ ಜಾರಿಗೆ ಬರಲಿದೆ. ಅಂದಿನಿಂದ ನಾವು ವೈರುಧ್ಯದ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ನಮಗೆ ಸಂವಿಧಾನದ ಮೂಲಕ ರಾಜಕೀಯ ಸಮಾನತೆ ಸಿಕ್ಕಿದೆ ಆದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಾನತೆಯನ್ನು ನಿರಾಕರಿಸಲಾಗಿದೆ. ನಮಗೆ ಕೇವಲ ಮತದಾನದ ಹಕ್ಕು ಇದ್ದರೆ ಸಾಲದು, ಇದರಿಂದ ಸ್ವಾತಂತ್ರ್ಯ ಸಾರ್ಥಕವಾಗಲ್ಲ, ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗಲಿದೆ ಎಂದು ಹೇಳಿದ್ದರು. ಸಂವಿಧಾನ ಒಳ್ಳೆಯವರ ಕೈಲಿದ್ದರೆ ಒಳ್ಳೆಯದಾಗಲಿದೆ, ಕೆಟ್ಟವರ ಕೈಲಿದ್ದರೆ ಕೆಟ್ಟದ್ದಾಗಲಿದೆ. ಹಾಗಾಗಿ ಸಂವಿಧಾನ ಬದ್ಧತೆ ಇರುವವರ ಕೈಲಿ ಇದ್ದಾಗ ಮಾತ್ರ ಜನರಿಗೆ ಒಳ್ಳೆಯದಾಗಲಿದೆ. ಇಂದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವವರ ಕೈಲಿ ಸಂವಿಧಾನವಿದೆ. ಸಂಘಪರಿವಾರ ಯಾವತ್ತೂ ಕೂಡ ಅಂಬೇಡ್ಕರರ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ದೇಶದಲ್ಲಿ ಸಮಾನತೆ ಬರಬಾರದು ಎಂಬುದು ಅವರ ಉದ್ದೇಶ. ಸಮಾನತೆ ಬಂದಾಗ ಶೋಷಣೆ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿದೆ ಎಂದು ಹೇಳಿದರು.

ಬಾಬಾ ಸಾಹೇಬರು ರಚನೆ ಮಾಡಿರುವ ಸಂವಿಧಾನವನ್ನು ಬದಲಾವಣೆ ಮಾಡಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅನಂತ ಕುಮಾರ್‌ ಹೆಗ್ಡೆ ಅವರು ಹೇಳಿದ್ದರು, ಅವರನ್ನು ನರೇಂದ್ರ ಮೋದಿ ಅವರಾಗಲೀ, ಅಮಿತ್‌ ಶಾ ಅವರಾಗಲೀ ಸಚಿವ ಸಂಪುಟದಿಂದ ವಜಾ ಮಾಡಿದ್ರಾ? ಕನಿಷ್ಠ ಅವರ ವಿರುದ್ಧ ಶಿಸ್ತುಕ್ರಮವನ್ನೂ ಕೈಗೊಂಡಿಲ್ಲ. ಇಂಥವರು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಣೆ ಮಾಡುತ್ತಾರಾ? ಎಂದು ಪ್ರಶ್ನಿಸಿದರು.

ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದು ಸರಿಯಾ? ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಏನು ಹೇಳಿದೆ? ಈ ಮೀಸಲಾತಿ ಅಡಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮಾತ್ರ ಅವಕಾಶ ಇದೆ. ಹಿಂದುಳಿದ, ದಲಿತ ಸಮುದಾಯದ ಬಡವರಿಗೆ ಇದರಲ್ಲಿ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ. ಈಗ ರಾಜ್ಯದಲ್ಲಿ ಶೇಕಡಾ 3 ರಷ್ಟು ಸಾಮಾನ್ಯ ವರ್ಗದ ಜನರಿದ್ದಾರೆ. ಅವರಿಗೆ 10% ಮೀಸಲು ಬೇಕಾ? ಆದರೂ ನಾವೆಲ್ಲ ಸುಮ್ಮನೆ ಇದ್ದೇವೆ. ಹೀಗಾದರೆ ಸಮಾನತೆ ಬಂದು ಬಿಡುತ್ತಾ? ಯಾವ ವರ್ಗದ ಜನರಿಗೆ ಶತಶತಮಾನಗಳ ಕಾಲ ಓದಲು, ಸಂಪತ್ತು ಅನುಭವಿಸಲು ಅವಕಾಶ ಇತ್ತು ಅಂಥವರಿಗೆ ಮೀಸಲಾತಿ ನೀಡುವುದು ಸರಿನಾ? ಅಂಬೇಡ್ಕರ್‌ ಅವರು ರಚನೆ ಮಾಡಿರುವ ಸಂವಿಧಾನದ ಆಶಯ ಇದರಿಂದ ಈಡೇರುತ್ತದಾ? ಸಂವಿಧಾನದ 15 ಮತ್ತು 16ನೇ ಪರಿಚ್ಛೇದದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಮಾತ್ರ ಅವಕಾಶ ನೀಡಿದೆ. 3% ಜನರಿಗೆ 10% ಮೀಸಲಾತಿ, 52% ಜನರಿಗೆ 27% ಮೀಸಲಾತಿ ನೀಡಿದರೆ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯವೇ? ಎಂದರು.

1983ರಲ್ಲಿ ಕೇವಲ 63,000 ಹಣ ಖರ್ಚು ಮಾಡಿ ಚುನಾವಣೆ ಗೆದ್ದಿದ್ದೆ, ಈಗ ಎಷ್ಟಾಗುತ್ತದೆ ಎಂದು ಹೇಳುವ ಹಾಗೆ ಇಲ್ಲ, ಹೇಳಿದ್ರೂ ಕಷ್ಟವಾಗುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆ ಇದ್ದರೂ ರಾಜೀನಾಮೆ ನೀಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮತ್ತೆ ನಿಂತು ಗೆದ್ದು ಬರುತ್ತಾರೆ. ಕಳೆದ ಉಪಚುನಾವಣೆಯಲ್ಲಿ ನಾನೂ ಸಕ್ರಿಯವಾಗಿ ಭಾಗವಹಿಸಿದ್ದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಬ್ಬೊಬ್ಬನು ಕನಿಷ್ಠ 25 ಕೋಟಿ ಖರ್ಚು ಮಾಡಿದ್ರು. ಹೀಗಾದರೆ ಪ್ರಜಾಪ್ರಭುತ್ವ ಗಟ್ಟಿಯಾಗುತ್ತಾ? ದುಡ್ಡಿಲ್ಲದವನು ಗೆಲ್ಲಲು ಸಾಧ್ಯವಾ? ಇದಕ್ಕೆ ಪರಿಹಾರ ಏನಿದೆ? ಎಂದು ವಾಗ್ದಾಳಿ ನಡೆಸಿದರು.

ಇಷ್ಟೆಲ್ಲಾ ಆಗುತ್ತಿದೆ ಎಂಬ ಕಾರಣಕ್ಕೆ ನಾವು ಅಧೈರ್ಯಗೊಂಡು ಸುಮ್ಮನೆ ಕೂರುವುದು ಸರಿಯಲ್ಲ. ಯಾವೆಲ್ಲಾ ಸುಧಾರಣೆ ಸಾಧ್ಯ ಅದನ್ನು ಮಾಡುವ ಪ್ರಯತ್ನ ಮಾಡಲೇ ಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ಸಾಕ್ಷರತೆ ಪ್ರಮಾಣ 14% ಇತ್ತು, ಇಂದು 74% ಆಗಿದೆ. ಆದರೆ ಎಲ್ಲರಿಗೂ ಸಮಾನತೆ, ಸಂಪತ್ತಿನ ಸಮಾನ ಹಂಚಿಕೆ ಆಗಿದೆಯಾ? ಉದ್ಯೋಗ ಎಲ್ಲರಿಗೂ ದೊರೆಯುತ್ತಿದೆ. ಚತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರ ವರ್ಗದವರಿಗೆ ಮತ್ತು ಮಹಿಳೆಯರಿಗೆ ಅಕ್ಷರ ಸಂಸ್ಕೃತಿಯಿಂದ ಹೊರಗಿಡಲಾಗಿತ್ತು. ನಾನು ಮುಖ್ಯಮಂತ್ರಿಯಾಗಲು, ಮೋದಿ ಅವರು ಪ್ರಧಾನಿಯಾಗಲು ಕೂಡ ಸಂವಿಧಾನ ಕಾರಣ. ಬಿಜೆಪಿಯವರು ಸರ್ವಾಧಿಕಾರದಲ್ಲಿ ನಂಬಿಕೆ ಹೊಂದಿರುವವರು, ಒಂದು ಕಾಲದಲ್ಲಿ ಇವರು ಹಿಟ್ಲರ್‌ ನನ್ನು ಹೊಗಳುತ್ತಿದ್ದರು ಎಂದು ಹೇಳಿದರು.

ದಲಿತರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಭಿಯಾಗಬೇಕು ಎಂಬ ಕಾರಣಕ್ಕೆ ನಮ್ಮ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು. ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾಯ್ದೆ ಜಾರಿ ಮಾಡಿದ್ದು ಕೂಡ ಇದೇ ಕಾರಣಕ್ಕೆ. ಈ ಕಾಯ್ದೆ ಕೇಂದ್ರ ಸರ್ಕಾರದಲ್ಲಿ ಇದೆಯಾ? ಅಥವಾ ಬೇರೆ ರಾಜ್ಯಗಳಲ್ಲಿ ಇದೆಯಾ? ಯಾಕೆ ಬೇರೆ ರಾಜ್ಯಗಳಲ್ಲಿ ಜಾರಿಯಾಗಿಲ್ಲ? 2013ರಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ ಬೆಳಗಾವಿ ಅಧಿವೇಶನದಲ್ಲಿ ಈ ಕಾಯ್ದೆಯನ್ನು ಜಾರಿ ಮಾಡಿದ್ದೆವು. 2008ರಿಂದ 2013 ರವರೆಗೆ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗಾಗಿ ಖರ್ಚು ಮಾಡಿದ್ದ ಹಣ 22,000 ಕೋಟಿ ರೂಪಾಯಿ. ನಮ್ಮ ಸರ್ಕಾರ ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾನೂನು ಜಾರಿ ಮಾಡಿದ ನಂತರ ಖರ್ಚಾದ ಹಣ 88,000 ಕೋಟಿ ರೂಪಾಯಿ. ಕಡೇ ಪಕ್ಷ ನೀವು ನಮ್ಮ ಬೆನ್ನು ತಟ್ಟಬೇಕಲ್ವ? 2018ರ ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ ಈ ಯೋಜನೆಗೆ ನೀಡಿದ್ದ ಅನುದಾನ 30,000 ಕೋಟಿ, ಈ ವರ್ಷದ ಬಜೆಟ್‌ ನಲ್ಲಿ 28,300 ಕೋಟಿ. ಬಜೆಟ್‌ ಗಾತ್ರ ಹೆಚ್ಚಿದ್ದರೂ ಅನುದಾನ ಕಡಿಮೆ ಮಾಡಿದ್ದಾರೆ. ಈಗಿನ ಬಜೆಟ್‌ ಗಾತ್ರಕ್ಕೆ ಅನುಗುಣವಾಗಿ ಕನಿಷ್ಠ 42,000 ಕೋಟಿಗೆ ಏರಿಕೆಯಾಗಬೇಕಿತ್ತು. ಈ ಯೋಜನೆಯ ಅನುದಾನದಲ್ಲಿ ಸುಮಾರು 7,885 ಕೋಟಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ವಿದ್ಯಾವಂತ ಸಮುದಾಯದ ಜನ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್‌ ಅವರು ತಾವು ಸಾಮಾಜಿಕ ನ್ಯಾಯದ ರಥವನ್ನು ಇಷ್ಟುದೂರ ಎಳೆದುಕೊಂಡು ಬಂದಿದ್ದೇನೆ, ನಿಮ್ಮಿಂದ ಸಾಧ್ಯವಾದರೆ ಮುಂದಕ್ಕೆ ತಳ್ಳಿ ಇಲ್ಲದಿದ್ದರೆ ಅಲ್ಲಿಯೇ ಬಿಟ್ಟುಬಿಡಿ, ಹಿಂದಕ್ಕೆ ಮಾತ್ರ ತಳ್ಳುವ ಕೆಲಸ ಮಾಡಬೇಡಿ ಎಂದಿದ್ದರು. ಈಗ ಸಾಮಾಜಿಕ ನ್ಯಾಯದ ರಥವನ್ನು ಹಿಂದಕ್ಕೆ ತಳ್ಳುವ ಪ್ರಯತ್ನ ಆಗುತ್ತಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಭಡ್ತಿಯಲ್ಲಿ ಇದ್ದ ಮೀಸಲಾತಿಯನ್ನು ಸುಪ್ರೀಂಕೋರ್ಟ್‌ ತೆಗೆದುಹಾಕಿತ್ತು, ಆಗ ನಾನು ರತ್ನಪ್ರಭಾ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿ, ಅದರ ವರದಿಯನ್ನು ಆಧರಿಸಿ ಸುಪ್ರೀಂಕೋರ್ಟ್‌ ನಲ್ಲಿ ಮೇಲ್ಮನವಿ ಮಾಡಿದ್ದೆವು. ಅದೃಷ್ಟವಶಾತ್‌ ನಮ್ಮ ಕಾನೂನನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿಯಿತು. ಕರ್ನಾಟಕ ಒಂದನ್ನು ಬಿಟ್ಟರೆ ದೇಶದ ಬೇರೆ ರಾಜ್ಯದಲ್ಲಿ ಇಂಥಾ ಕಾನೂನನ್ನು ಜಾರಿ ಮಾಡಿದೆಯಾ ನೀವೇ ಒಮ್ಮೆ ಹುಡುಕಿ ನೋಡಿ. ಆದರೂ ಜನ ಮೋದಿ, ಮೋದಿ ಎನ್ನುತ್ತಾರೆ. ದುರ್ಬಲರು, ಅವಕಾಶ ವಂಚಿತ ಜನರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡರೆ ಪ್ರಜಾಪ್ರಭುತ್ವ ಉಳಿಯುತ್ತಾ? ನಮ್ಮ ಸರ್ಕಾರ ಸರ್ಕಾರಿ ಗುತ್ತಿಗೆಕಾಮಗಾರಿಗಳಲ್ಲಿ ಮೀಸಲಾತಿ ಜಾರಿಗೆ ತಂದೆವು, ಈ ಕಾನೂನು ದೇಶದ ಬೇರೆ ರಾಜ್ಯಗಳಲ್ಲಿ ಇದೆಯಾ? ಇಲ್ಲ. ಅಸಮಾನತೆ ನಿರ್ಮಾಣವಾಗಿರುವ ಕಡೆ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಒಬ್ಬ ಅಂಬೇಡ್ಕರ್‌ ಅವರು ನಮ್ಮೆಲ್ಲರಿಗೂ ಸಮಾನತೆ ತಂದುಕೊಡುವುದಾದರೆ ಅವರ ಚಿಂತನೆಗಳಿಗೆ ನಾವು ಬಲ ತುಂಬಬೇಕು ಅಲ್ವಾ? ಅಂಬೇಡ್ಕರ್‌ ಅವರ ಆಶಯಗಳ ಹಾದಿಯಲ್ಲಿ ನಾವು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದು ಸಂವಿಧಾನದ ರೀತಿ ಕೆಲಸ ಮಾಡಬೇಕು, ಇಲ್ಲದಿದ್ದರೆ ಜನರೇ ಅದನ್ನು ಕಿತ್ತುಬಿಸಾಕುವಷ್ಟು ಜಾಗೃತರಾಗಬೇಕು ಆಗ ಮಾತ್ರ ಸಂವಿಧಾನ ಉಳಿಯಲು ಸಾಧ್ಯ, ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ ಎಂದರು.

ಯಾರೇ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೂ ಅದನ್ನು ಗಟ್ಟಿಯಾಗಿ ವಿರೋಧ ಮಾಡುವಷ್ಟು ದಾರ್ಷ್ಟ್ಯವನ್ನು ಬೆಳೆಸಿಕೊಳ್ಳಬೇಕು. ಈ ಜಾಗೃತಿ ಜನರಲ್ಲಿ ಮೂಡಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.

ಭಾರತದ ಸಂವಿಧಾನ ಬಗ್ಗೆ ರಾಜ್ಯ ಮಟ್ಟದ ಲೇಖನ ಸ್ಪರ್ಧೆ
ಬೆಂಗಳೂರು: ಭಾರತ ಸಂವಿಧಾನದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಲಿತ ಮತ್ತು ಮಹಿಳಾ ಚಳುವಳಿ ಹಾಗು ಬೇರು ಸಂಸ್ಥೆಯು ರಾಜ್ಯ ಮಟ್ಟದ ಭಾರತ ಸಂವಿಧಾನ ಕುರಿತ ಲೇಖನ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ಉತ್ತಮ ಲೇಖನಕ್ಕೆ ಬಹುಮಾನ ನೀಡಲಾಗುತ್ತಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು, 1. ಸಂವಿಧಾನ ಮತ್ತು ನನ್ನ ಬದುಕು, 2. ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, 3. ಸಂವಿಧಾನ ಮತ್ತು ಭಾರತದ ಅಭಿವೃದ್ಧಿ, 4. ಸಂವಿಧಾನ ಮತ್ತು ತಳ ಸಮುದಾಯಗಳು ಈ  ನಾಲ್ಕು ವಿಷಯಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿ ಅದರ ಕುರಿತು ಲೇಖನ ಬರೆದು ಕಳುಹಿಸಿ ಬಹುಮಾನ ಗೆಲ್ಲಬಹುದಾಗಿದೆ.

ಸ್ಪರ್ಧೆಯ ನಿಯಮಗಳು :

18 ರಿಂದ 25 ವರ್ಷದೊಳಗಿನ ಯುವ ಜನರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಲೇಖನ ಸ್ವಂತ ಬರವಣಿಗೆಯಾಗಿರಬೇಕು.

ಲೇಖನ ಕನಿಷ್ಟ 800 ರಿಂದ 2000 ಸಾವಿರ ಪದಗಳು ಇರಬೇಕು.

ಲೇಖನವನ್ನು ನುಡಿ ಅಥವಾ ಯುನಿಕೋಡ್ ನಲ್ಲಿ ಟೈಪ್ ಮಾಡಿರಬೇಕು.

ತಮ್ಮ ಸ್ಪರ್ಧಾತ್ಮಕ ಲೇಖನಗಳನ್ನು ಆಯೋಜಕರಿಗೆ ದಿನಾಂಕ : 31/12/2022 ರ ಒಳಗೆ beruorg@gmail.com  ಅಥವಾ dmcchaluvali@gmail.com  ಇ- ಮೇಲ್ ವಿಳಾಸಕ್ಕೆ ಕಳಹಿಸಬೇಕಾಗಿದೆ.

ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರದ ಜೊತೆಗೆ ಮೊದಲನೇ ಬಹುಮಾನ-3000 ಎರಡನೇ ಬಹುಮಾನ-2000 ಮೂರನೇ ಬಹುಮಾನ-1000 ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಬೇರು ಸಂಸ್ಥೆ- 9008660371-beruorg@gmail.com ದಲಿತ ಮತ್ತು ಮಹಿಳಾ ಚಳುವಳಿ-9945966683- dmcchaluvali@gmail.com  ಇವರನ್ನು ಸಂಪರ್ಕಿಸಬಹುದಾಗಿದೆ.