indian media – Peepal Media

ಬಾಂಗ್ಲಾದೇಶ ಬಿಕ್ಕಟ್ಟಿನ ಬಗ್ಗೆ ಭಾರತೀಯ ಮಾಧ್ಯಮಗಳಿಂದ ಸುಳ್ಳು ಸುದ್ದಿಗಳು
ಬೆಂಗಳೂರು: ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಬಾಂಗ್ರಾದೇಶದ ಬಗ್ಗೆ ವದಂತಿ ಹಬ್ಬಿಸುತ್ತಿವೆ ಎಂದು ಬಾಂಗ್ಲಾದೇಶ ಮೂಲದ ಸತ್ಯ ತಪಾಸಣೆ ವೆಬ್‌ಸೈಟ್ ರೂಮರ್ ಸ್ಕ್ಯಾನರ್ ವರದಿಯಲ್ಲಿ ಬಹಿರಂಗಪಡಿಸಿದೆ.

ಈ ತನಿಖಾ ಘಟಕವು X ನಲ್ಲಿ 50 ಖಾತೆಗಳನ್ನು ಗುರುತಿಸಿದೆ, ಅದು ಬಾಂಗ್ಲಾದೇಶದಲ್ಲಿ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದ ಚಿತ್ರಗಳು, ವೀಡಿಯೊಗಳು ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಕೋಮುದ್ವೇಷವನ್ನು ಹರಡಿಸುತ್ತಿವೆ ಎಂದು ಹೇಳಿದೆ.

ಈ ಪ್ರತಿಯೊಂದು ಖಾತೆಯಲ್ಲಿ ಕನಿಷ್ಠ ಒಂದು ಪೋಸ್ಟ್ ಕೋಮು ದ್ವೇಷದ ಮತ್ತು ಸುಳ್ಳು ಮಾಹಿತಿ ಪ್ರಕಟವಾಗಿದೆ ಎಂದು Surge of Communal Misinformation on X During Bangladesh’s Political Crisis ಎಂಬ ಈ ವರದಿ ಹೇಳಿದೆ.

ಆಗಸ್ಟ್ 5 ರಿಂದ 13 ರವರೆಗೆ, ಆ 50 ಖಾತೆಗಳಲ್ಲಿ ಮಾಡಲಾಗಿದ್ದ  ಪೋಸ್ಟ್‌ಗಳನ್ನು 154 ಮಿಲಿಯನ್ ಗೂ ಅಧಿಕ ಜನ ನೋಡಿದ್ದು , 72% ರಷ್ಟು ನಕಲಿ ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹರಡುವ ಖಾತೆಗಳು ಭಾರತದಲ್ಲಿವೆ ಎಂದು ಹೇಳಿದೆ. ಹಲವಾರು ಜವಾಬ್ದಾರಿಯುತ ವ್ಯಕ್ತಿಗಳು ಮತ್ತು ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಕೂಡ ಈ ಕೆಲವು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುತ್ತಿವೆ ಎಂದು ವರದಿ ಹೇಳಿದೆ. ಇದಲ್ಲಿ ನ್ಯೂಸ್ ಮಧ್ಯಪ್ರದೇಶ ಮತ್ತು ನ್ಯೂಸ್ 24 ಕೂಡ ಸೇರಿವೆ.

ಹಿಂದೂ ಮಹಿಳೆಯರು ಮತ್ತು ಮಕ್ಕಳ ಶಿಬಿರದಲ್ಲಿ ಬಾಂಬ್‌ಗಳನ್ನು ಸ್ಫೋಟಿಸುವ ಮೂಲಕ ಜಿಹಾದಿಗಳು ನೂರಾರು ಮಹಿಳೆಯರನ್ನು ಕೊಂದಿದ್ದಾರೆ ಎಂದು ಹೇಳುವ ವೀಡಿಯೊವನ್ನು ದೀಪಕ್ ಶರ್ಮಾ ಎಂಬ X ಖಾತೆಯಿಂದ ಆಗಸ್ಟ್ 9 ರಂದು ಪೋಸ್ಟ್ ಮಾಡಲಾಗಿದೆ. ವೀಡಿಯೋವನ್ನು ಪರಿಶೀಲಿಸಿದಾಗ, ಜುಲೈ 7 ರಂದು ಜಗನ್ನಾಥ ದೇವರ ರಥಯಾತ್ರೆಯ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಐದು ಜನರ ಸಾವಿನ ವಿಡಿಯೋ ಇದು ಎಂದು ತಿಳಿದುಬಂದಿದೆ.

ಕಾಣೆಯಾದ ತನ್ನ ಮಗನ ಪತ್ತೆಗೆ ಒತ್ತಾಯಿಸುತ್ತಿರುವ ಹಿಂದೂ ವ್ಯಕ್ತಿಯ ವೀಡಿಯೊವನ್ನು ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI), NDTV ಮತ್ತು ಮಿರರ್ ನೌ ತಮ್ಮ X ನಲ್ಲಿ ಹಂಚಿಕೊಂಡಿವೆ. ರೂಮರ್ ಸ್ಕ್ಯಾನರ್ ಇದರ ಹಿಂದಿನ ಸುಳ್ಳನ್ನು ಪತ್ತೆ ಮಾಡಿದ್ದು, ಇದು ಬಾಬುಲ್ ಹೌಲಾಡರ್ ಎಂಬ ಮುಸ್ಲಿಂ ವ್ಯಕ್ತಿ 2013 ರಿಂದ ಕಾಣೆಯಾದ ತನ್ನ ಮಗನನ್ನು ಪತ್ತೆ ಹಚ್ಚಲು ಆಗ್ರಹಿಸಿ ನಡೆಸಿದ ಪ್ರತಿಭಟನೆಯ ವಿಡಿಯೋವಾಗಿದೆ.

Correction: The below tweet has been deleted since this person is not from the minority Hindu community. Error regretted. pic.twitter.com/EY8FBnJc1g
— ANI (@ANI) August 13, 2024

ಸುಳ್ಳುಸುದ್ದಿ ಹರಡಲು ಹೆಸರಾಗಿರುವ OpIndia ನ ಮುಖ್ಯ ಸಂಪಾದಕಿ ನೂಪುರ್ ಜೆ ಶರ್ಮಾ ತನ್ನ X ಹ್ಯಾಂಡಲ್‌ನಿಂದ ಎಂದಿನಂತೆ ಸುಳ್ಳು ಸುದ್ದಿಗಳನ್ನು ಹರಡಿದ್ದರು. ಇದನ್ನು ಆಕೆಯ ಗಮನಕ್ಕೆ ತಂದ ರೂಮರ್‌ ಸ್ಕಾನರ್‌ನ ಸದಸ್ಯರೊಬ್ಬರನ್ನು ಆಕೆ ಆಗಸ್ಟ್ 11 ರಂದು X ನಲ್ಲಿ ಬ್ಲಾಕ್‌ ಮಾಡಿದ್ದಾರೆ.

ಭಾರತ ಮಾತ್ರವಲ್ಲ ಇತರ ದೇಶಗಳಲ್ಲೂ ಬಾಂಗ್ಲಾದೇಶದ ಬಗ್ಗೆ ಸುಳ್ಳನ್ನು ಹರಡಲಾಗಿದೆ ಎಂದು ರೂಮರ್‌ ಸ್ಕ್ಯಾನರ್‌ ಹೇಳಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಸುಳ್ಳು ಹೇಳುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಾಸ್ತವದಲ್ಲಿ, ಈ ದೃಶ್ಯಾವಳಿಗಳು ಮಶ್ರಫ್‌ ಎಂಬವರ ಮನೆಯ ಮೇಲೆ ನಡೆದ ಬೆಂಕಿ ದಾಳಿಯಾಗಿದ್ದವು. ಲಿಟನ್ ಅವರ ಮನೆಯಲ್ಲಿ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ರೂಮರ್‌ ಸ್ಕ್ಯಾನರ್‌ ಹೇಳಿದೆ.

ಭಾರತದ ಮಾಧ್ಯಮಗಳು ಪಕ್ಷಪಾತಿಗಳು: ಪತ್ರಿಕಾಗೋಷ್ಟಿ ನಡೆಸದ ಮೋದಿ
“ಭಾರತದ ಮಾಧ್ಯಮಗಳಲ್ಲಿ ‘ತಟಸ್ಥತೆಯ ಕೊರತೆ’ ಇದೆ ಮತ್ತು ಪತ್ರಕರ್ತರು ‘ತಮ್ಮ ಅಭಿಪ್ರಾಯಗಳು ಮತ್ತು ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಾರೆ. ಈ ಕಾರಣಕ್ಕೆ ನಾನು ಪತ್ರಿಕಾಗೋಷ್ಠಿಗಳನ್ನು ನಡೆಸಲಿಲ್ಲ,” ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ನರೇಂದ್ರ ಮೋದಿಯವರು ಹೇಳಿದ್ದರಲ್ಲಿ ಹೇಳುವಂತ ತಪ್ಪೇನು ಇಲ್ಲ. ಆದರೆ ಕಳೆದ ಒಂದು ದಶಕದಿಂದ ಮಾಧ್ಯಮಗಳು ತಮ್ಮ ಪಕ್ಷದ ಸಿದ್ಧಾಂತವನ್ನು ಪ್ರಚಾರ ಮಾಡಿ ʼಪಕ್ಷಪಾತಿʼಗಳಾಗಿ ಬೆಳೆದಿವೆ ಎಂದು ಹೇಳಲು ಮರೆತಿದ್ದಾರೆ.

“ನಾನು ಸಂಸತ್ತಿಗೆ ಜವಾಬ್ದಾರನಾಗಿದ್ದೇನೆ. ಇಂದು ಪತ್ರಕರ್ತರು ತಮ್ಮದೇ ಆದ ಆದ್ಯತೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಮಾಧ್ಯಮವು ಸದ್ಯ ಪಕ್ಷಾತೀತ ಘಟಕವಾಗಿ ಉಳಿದಿಲ್ಲ,” ಎಂದು ಹೇಳಿದ್ದಾರೆ.

“ಜನರಿಗೆ ಈಗ ನಿಮ್ಮ ನಂಬಿಕೆಗಳ ಬಗ್ಗೆಯೂ ಅರಿವಿದೆ. ಈ ಹಿಂದೆ ಮಾಧ್ಯಮಗಳು ಮುಖರಹಿತವಾಗಿದ್ದವು… ಮಾಧ್ಯಮದಲ್ಲಿ ಯಾರು ಬರೆಯುತ್ತಿದ್ದಾರೆ, ಅದರ ಸಿದ್ಧಾಂತ ಏನು… ಈ ಹಿಂದೆ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹಾಗಿದ್ದೂ, ಪರಿಸ್ಥಿತಿಯು ಇನ್ನು ಮುಂದೆಯೂ ಹಾಗೆ ಇರಬೇಕೆಂದಿಲ್ಲ,” ಎಂದು ಮೋದಿ ಆಜ್ ತಕ್ ಹಿಂದಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪತ್ರಿಕಾಗೋಷ್ಟಿಯನ್ನೇ ನಡೆಸದೆ ದಾಖಲೆ ಸೃಷ್ಟಿ ಮಾಡಿರುವ ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯವರು ಲೋಕಸಭಾ ಚುನಾವಣೆ-2024ರ ಈ ಸಂದರ್ಭದಲ್ಲಿ ‘ಗೋದಿ ಮೀಡಿಯಾ’ದ ಒಂದು ಭಾಗವೆಂದೇ ಪರಿಗಣಿಸಲಾಗಿರುವ ಆಜ್‌ ತಕ್‌ ಹಿಂದಿ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ʼಗೋದಿ ಮೀಡಿಯಾʼ ಎಂಬುದು ನರೇಂದ್ರ ಮೋದಿಯವರ ಗುಣಗಾನ ಮಾಡುತ್ತಾ, ಸುಳ್ಳನ್ನೇ ಸುದ್ದಿ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಟಿವಿ ಚಾನೆಲ್‌ಗಳಿಗೆ ಪತ್ರಕರ್ತ ರವೀಶ್ ಕುಮಾರ್ ಅವರು ನೀಡಿದ ಹೆಸರಾಗಿದೆ.

“ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾಧ್ಯಮ ನಿರ್ವಹಣೆಯ ಸುತ್ತ ಸುತ್ತುವ ರಾಜಕೀಯದಲ್ಲಿ ಹೊಸ ಸಂಸ್ಕೃತಿಯೊಂದು ಬೆಳೆದಿದೆ,” ಎಂದು ಪ್ರಧಾನಿ ಹೇಳಿದ್ದಾರೆ. 2019 ರಲ್ಲಿ ಇದೇ ನರೇಂದ್ರ ಮೋದಿಯವರು ಇದನ್ನು “ನಾನು ಪ್ರಜಾಪ್ರಭುತ್ವ ವಿರೋಧಿಯಲ್ಲ. ಸುದ್ದಿ ಪ್ರಕಟಣೆಯೊಂದೇ ಪ್ರಜಾಪ್ರಭುತ್ವದ ಅಂಶವಲ್ಲ,”ಎಂದು ಹೇಳಿದ್ದರು.

ಆದರೆ ತಮ್ಮ ಸಂದರ್ಶನದಲ್ಲಿ ಮಾಧ್ಯಮಗಳ ಸುತ್ತ ಬೆಳೆದಿರುವ ಈ ʼಹೊಸ ಸಂಸ್ಕೃತಿʼ ತಮ್ಮ ಸರ್ಕಾರದ ನಿಯಂತ್ರಣ-ಸುಪರ್ದಿಯಲ್ಲಿ ಹೇಗೆ ಬಂತು ಎಂಬ ಬಗ್ಗೆ ಮಾತನಾಡಿಲ್ಲ.

ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (RSF) ಬಿಡುಗಡೆ ಮಾಡಿರುವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 176 ದೇಶಗಳಲ್ಲಿ ಭಾರತ 159 ನೇ ಸ್ಥಾನವನ್ನು ಪಡೆದಿದೆ. ಈ ವರದಿ ಪ್ರಕಟವಾದ ಎರಡು ವಾರಗಳ ನಂತರ ಮೋದಿಯವರು ಭಾರತದ ಮಾಧ್ಯಮಗಳು  ‘ಪಕ್ಷಪಾತಿಗಳು’ ಎಂದು ಟೀಕೆ ಮಾಡಿದ್ದಾರೆ.

“ಪತ್ರಕರ್ತರ ವಿರುದ್ಧದ ಹಿಂಸಾಚಾರ, ಮಾಧ್ಯಮಗಳ ಕಾರ್ಪೋರೇಟ್ ಮಾಲೀಕತ್ವ ಮತ್ತು ರಾಜಕೀಯ‌ ಪಕ್ಷಗಳ ಜೊತೆಗಿನ ಹೊಂದಾಣಿಕೆ: ಇವೆಲ್ಲಾ ಕಾರಣಗಳಿಂದ 2014 ರಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಆಳುತ್ತಿರುವ ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ’ದ ಪತ್ರಿಕಾ ಸ್ವಾತಂತ್ರ್ಯ ಬಿಕ್ಕಟ್ಟಿನಲ್ಲಿದೆ,” ಎಂದು RSF ಡೇಟಾದ ಜೊತೆಗೆ ‘Asia – Pacific: Press freedom under yoke of authoritarian governments’ ವರದಿಯನ್ನು ಬಿಡುಗಡೆ ಮಾಡಿತ್ತು.

ಮೋದಿಯವರು ಟೀಕಿಸಿರುವ ‘ಪಕ್ಷಪಾತಿ’ ಮಾಧ್ಯಮಗಳ ಮಾಲೀಕರು ಯಾರು? ಮೋದಿಯವರಿಗೆ ಅವರ ಜೊತೆಗೆ ಏನು ಸಂಬಂಧ?

ನರೇಂದ್ರ ಮೋದಿಯವರು ಆಜ್‌ ತಕ್‌ ಸಂದರ್ಶನದಲ್ಲಿ ಹೇಳಿರುವ ʼಪಕ್ಷಪಾತಿʼ ಮಾಧ್ಯಮಗಳು ದೇಶದ ಪ್ರಮುಖ ಉದ್ಯಮಿಗಳ ಒಡೆತನದಲ್ಲಿ ಇವೆ. ಇವರೆಲ್ಲರೂ ನರೇಂದ್ರ ಮೋದಿಯರ ಆತ್ಮೀಯ ಸ್ನೇಹಿತರು. ಈ ಮಾಧ್ಯಮಗಳು ನರೇಂದ್ರ ಮೋದಿಯವರಿಗೆ ಹೆಚ್ಚಿನ ಪ್ರಚಾರವನ್ನೂ, ಸುಳ್ಳು ಸುದ್ದಿಗಳನ್ನೂ ಪ್ರಕಟಿಸಿ ಮಾಧ್ಯಮ ಟೀಕಾಕಾರರಿಂದ ʼಗೋದಿ ಮೀಡಿಯಾ, ಬಕೆಟ್‌ ಮೀಡಿಯಾʼ ಎಂದು ಕರೆಸಿಕೊಂಡಿವೆ.

ವಾರದ ವೀಕ್ಷಕರ ಪ್ರಕಾರ 2022 ರ ವಾರ 10 (ಮಾರ್ಚ್‌ 4 ರಿಂದ ಮಾರ್ಚ್‌ 10, 2024) ರಲ್ಲಿ ಭಾರತದಾದ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಐದು ಇಂಗ್ಲಿಷ್ ಟಿವಿ ಚಾನೆಲ್‌ಗಳು: ಟೈಮ್ಸ್ ನೌ, ರಿಪಬ್ಲಿಕ್ ಟಿವಿ, ಇಂಡಿಯಾ ಟುಡೇ, ಸಿಎನ್‌ಎನ್ ನ್ಯೂಸ್ 18 ಮತ್ತು ವಿಯನ್. (ಸ್ಟಟಿಸ್ಟಾ)

ವಿಯಾನ್ (Wion) ಸಂಸ್ಥೆಯ ಸೋದರಿ ಸಂಸ್ಥೆ ʼಝೀ ನ್ಯೂಸ್ʼನ ಒಡೆಯ, ಬಿಜೆಪಿ ಜೊತೆಗೆ ಆತ್ಮೀಯ ನಂಟನ್ನು ಹೊಂದಿರುವ ಸುಭಾಷ್ ಚಂದ್ರ. ಇವರು 2016 ರ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಹರಿಯಾಣದಿಂದ ಭಾರತೀಯ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾದರು.

ಸಿಎನ್‌ಎನ್ ನ್ಯೂಸ್ 18 ಭಾರತದ ಕುಬೇರನ ಕುಬೇರ ಮುಖೇಶ್ ಅಂಬಾನಿಯವರ ಒಡೆತನದಲ್ಲಿದೆ. ಅಂಬಾನಿ ಹಾಗೂ ಮೋದಿಯವರ ದೋಸ್ತಿ ಜಗದ್ವಿಖ್ಯಾತ.

ಸದಾ ವಿಷಕಾರಿ ವಿಚಾರಗಳನ್ನೂ, ಕೋಮು ದ್ವೇಷವನ್ನೂ, ಸಂವೇದನಾರಹಿತ ವರದಿಗಾರಿಕೆಯನ್ನೂ ಮಾಡುವುದರಲ್ಲಿ ಖ್ಯಾತವಾಗಿರುವ ರಿಪಬ್ಲಿಕ್ ಟಿವಿಯನ್ನು 2017 ರಲ್ಲಿ ರಾಜೀವ್ ಚಂದ್ರಶೇಖರ್ ಅವರು ಸ್ಥಾಪಿಸಿದರು (ಸಹ-ಸಂಸ್ಥಾಪಕ). ಇವರು ಬಿಜೆಪಿ ನಾಯಕರೂ ಆಗಿದ್ದು, ಕೇರಳದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. ಸದ್ಯ ರಾಜ್ಯಸಭಾ ಸದಸ್ಯರಾಗಿದ್ದು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಜ್ಯ ಸಚಿವರಾಗಿದ್ದಾರೆ.

ಇದೇ ರಿಪಬ್ಲಿಕ್‌ ಚಾನೆಲ್‌ನ ಇನ್ನೋರ್ವ ಸಂಸ್ಥಾಪಕ ಅರ್ನಾಬ್‌ ಗೋಸ್ವಾಮಿಯವರು ಅನೇಕ ಬಾರಿ ತಮ್ಮ ಸಂವೇದನಾರಹಿತ ಮಾತುಗಳಿಗೆ ದೇಶದ ಮುಂದೆ ಕ್ಷಮೆ ಕೇಳಿ ಖ್ಯಾತರಾದವರು.ಇವರೂ ನರೇಂದ್ರ ಮೋದಿಯವರ ದೋಸ್ತಿ. ಇವರ ತಂದೆ ತೊಂಬತ್ತರ ದಶಕದಲ್ಲಿ ಬಿಜೆಪಿಗೆ ಸೇರಿ, ಗುವಾಹಟಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ಇವರ ತಾಯಿಯ ಚಿಕ್ಕಪ್ಪ 2015 ರವರೆಗೆ ಬಿಜೆಪಿಯ ಅಸ್ಸಾಂ ಘಟಕದ ಮುಖ್ಯಸ್ಥರಾಗಿದ್ದರು.

ಟೈಮ್ಸ್ ನೌ ಎಂಬ ಇನ್ನೊಂದು ಟಿವಿ ಚಾನೆಲ್‌ ಬೆನೆಟ್, ಕೋಲ್ಮನ್ ಮತ್ತು ಕೋ.ಗ್ರೂಪ್‌ನ ಮಾಲೀಕರಾಗಿರುವ ಸಾಹು ಜೈನ್ ಅವರ ಒಡೆತನದಲ್ಲಿದೆ. ಇದರಲ್ಲಿ ಸುದ್ದಿ ನಿರೂಪಕಿಯಾಗಿರುವ ನವಿಕಾ ಕುಮಾರ್ ಮತ್ತು ರಾಹುಲ್ ಶಿವಶಂಕರ್ ಬಿಜೆಪಿ ಸರ್ಕಾರದ ಪರ ಬ್ಯಾಟಿಂಗ್‌ ಮಾಡುವುದಕ್ಕಾಗಿ ಅನೇಕ ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ನವಿಕಾ ಕುಮಾರ್ ಮತ್ತು ಮತ್ತೊಬ್ಬ ನಿರೂಪಕ ಸುಶಾಂತ್ ಸಿನ್ಹಾ ಅವರಿಗೆ ನರೇಂದ್ರ ಮೋದಿಯವರು ಸಂದರ್ಶನ ನೀಡಿದ್ದರು.

ಗುರುವಾರದಂದು  ಆಜ್ ತಕ್‌ನ ಅಂಜನಾ ಓಂ ಕಶ್ಯಪ್, ಶ್ವೇತಾ ಸಿಂಗ್, ಸುಧೀರ್ ಚೌಧರಿ ಮತ್ತು ರಾಹುಲ್ ಕನ್ವಾಲ್  ಎಂಬ ಬಿಜೆಪಿ ʼಪಕ್ಷಪಾತಿʼ ಮಾಧ್ಯಮಗಳ ನಿರೂಪಕರ ಮುಂದೆ ಕುಳಿತು, ನರೇಂದ್ರ ಮೋದಿಯವರಯ ಮಾಧ್ಯಮಗಳನ್ನು ʼಹೇಡಿಗಳು, ಪಕ್ಷಪಾತಿಗಳುʼ ಎಂದು ಕರೆದರು. ಮೋದಿಯವರ ಪರ ಭಜನೆ ಮಾಡುತ್ತಲೇ ಬದುಕು ಕಳೆಯುತ್ತಿರುವ ಈ ನಾಲ್ಕೂಜನ ನಿರೂಪಕರು ಮೋದಿಯವರ ಬೈಗುಳ ಕೇಳಿ ಗೊಳ್ಳೆಂದು ನಕ್ಕರು.