indo-pakistan war – Peepal Media

“ರಾಜಕೀಯ ನಾಯಕತ್ವದ ನಿರ್ಬಂಧಗಳಿಂದಾಗಿ ಭಾರತ ಯುದ್ಧ ವಿಮಾನಗಳನ್ನು ಕಳೆದುಕೊಂಡಿತು”- ಭಾರತೀಯ ರಕ್ಷಣಾ ಅಧಿಕಾರಿ
ಮೇ 7 ರ ರಾತ್ರಿ ಪಾಕಿಸ್ತಾನದ ಭಯೋತ್ಪಾದನಾ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುಪಡೆಯು ಪಾಕಿಸ್ತಾನದ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತವು ತನ್ನ ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಭಾರತದ ರಕ್ಷಣಾ ಅಧಿಕಾರಿ ಕ್ಯಾಪ್ಟನ್ (ಭಾರತೀಯ ನೌಕಾಪಡೆ) ಶಿವಕುಮಾರ್ ಜೂನ್ 10, 2025  ರಂದು ಇಂಡೋನೇಷ್ಯಾದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಹೇಳಿದ್ದರು. “ರಾಜಕೀಯ ನಾಯಕತ್ವವು ಮಿಲಿಟರಿ ಸ್ಥಾಪನೆ ಅಥವಾ ಅವರ ವಾಯು ರಕ್ಷಣೆಯ ಮೇಲೆ ದಾಳಿ ಮಾಡದಂತೆ ನೀಡಿದ್ದ ನಿರ್ಬಂಧದಿಂದಾಗಿ,” ಹೀಗಾಗಿದೆ ಎಂದು ಶಿವಕುಮಾರ್‌ ಹೇಳಿರುವುದನ್ನು ದಿ ವೈರ್ ವರದಿ ಮಾಡಿತ್ತು. ಇದಾದ ಒಂದು ದಿನದ ನಂತರ, ವಿರೋಧ ಪಕ್ಷ ಕಾಂಗ್ರೆಸ್ ಈ ವಿಚಾರದ ಬಗ್ಗೆ ಸ್ಪಷ್ಟತೆಯನ್ನು ಕೇಳಿತ್ತು.

ತಮ್ಮ ಭಾಷಣದಲ್ಲಿ ಭಾರತವು ಹಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಶಿವಕುಮಾರ್‌ ಒಪ್ಪಿಕೊಂಡಿದ್ದರು.

ಇಂಡೋನೇಷ್ಯಾದ ಜಕಾರ್ತದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಕ್ಯಾಪ್ಟನ್ ಕುಮಾರ್ ಅವರ ಹೇಳಿಕೆಗಳನ್ನು ” ಸಂದರ್ಭೋಚಿತವಲ್ಲದ (out of context)” ಎಂದು ಹೇಳಿಕೆ ನೀಡಿದ್ದರೂ, ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾತು ಹೊರಬಂದಿಲ್ಲ.

ನಿಜವಾದ ಸಮಸ್ಯೆ ಎಷ್ಟು ಜೆಟ್‌ ವಿಮಾನಗಳನ್ನು ಕಳೆದುಕೊಂಡಿದ್ದೇವೆ ಎಂಬುದಲ್ಲ, ಯಾಕೆ ಕಳೆದುಕೊಂಡಿದ್ದೇವೆ ಎಂಬುದು ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಈ ಹಿಂದೆ ಹೇಳಿದ್ದರು.

ಆಪರೇಷನ್ ಸಿಂಧೂರ್ ಬಗ್ಗೆ ಸರ್ಕಾರವು ಆರಂಭದಿಂದಲೂ ಗೌಪ್ಯತೆಯನ್ನು ಕಾಯ್ದುಕೊಂಡು ದೇಶವನ್ನು ದಾರಿ ತಪ್ಪಿಸಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ X ನಲ್ಲಿ ಹೇಳಿದ್ದರು:

"ಆಪರೇಷನ್ ಸಿಂಧೂರ್ ಸಮಯದಲ್ಲಿ ವಿಮಾನ ನಷ್ಟವನ್ನು ಬಹಿರಂಗಪಡಿಸುವಲ್ಲಿ ವಿಫಲವಾದ ಮೋದಿ ಸರ್ಕಾರ ಆರಂಭದಿಂದಲೂ ರಾಷ್ಟ್ರವನ್ನು ದಾರಿ ತಪ್ಪಿಸಿದೆ.
ಮೇ 6/7 ರಂದು ನಡೆದ ವಾಯು ಸಂಘರ್ಷದಲ್ಲಿನ ನಷ್ಟಗಳ ಬಗ್ಗೆ ಪರೋಕ್ಷ ಉಲ್ಲೇಖಗಳಿದ್ದವು, ಡಿಜಿ ಏರ್ ಆಪ್ಸ್ (ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ) ಅವರು "ನಾವು ಯುದ್ಧದ ಪರಿಸ್ಥಿತಿಯಲ್ಲಿದ್ದೇವೆ ಮತ್ತು ನಷ್ಟಗಳು ಯುದ್ಧದ ಒಂದು ಭಾಗವಾಗಿದೆ" ಎಂದು ಹೇಳಿದರು.
ನಂತರ, ಸಿಂಗಾಪುರದಲ್ಲಿ ಶಾಂಗ್ರಿ-ಲಾ ಸಂವಾದದ ಸಂದರ್ಭದಲ್ಲಿ ಬ್ಲೂಮ್‌ಬರ್ಗ್ ಟಿವಿಯೊಂದಿಗೆ ಮಾತನಾಡುತ್ತಾ, ನಮ್ಮ ಹಠಾತ್ ದಾಳಿಯ ಮೊದಲ ಅಧಿಕೃತ ಪ್ರವೇಶವನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರಿಗೆ ಬಿಡಲಾಯಿತು ಎಂದು ಹೇಳಿದ್ದರು.
ಈಗ, ಕ್ಯಾಪ್ಟನ್ ಶಿವಕುಮಾರ್ ಅವರ ಮತ್ತೊಂದು ಆಘಾತಕಾರಿ ಹೇಳಿಕೆಯಲ್ಲಿ, "ರಾಜಕೀಯ ನಾಯಕತ್ವ ನೀಡಿದ ನಿರ್ಬಂಧದಿಂದಾಗಿ" ಪಾಕಿಸ್ತಾನದ ಭಯೋತ್ಪಾದನೆಗೆ ಸಂಬಂಧಿಸಿದ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುಪಡೆಯು ಮೇ 7, 2025 ರ ರಾತ್ರಿ ಪಾಕಿಸ್ತಾನಕ್ಕೆ ಫೈಟರ್ ಜೆಟ್‌ಗಳನ್ನು ಕಳೆದುಕೊಂಡಿತು ಎಂದು ಬಹಿರಂಗಗೊಂಡಿದೆ.
ಇದು ಮೋದಿ ಸರ್ಕಾರದ, ವಿಶೇಷವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮೇಲೆ ಮಾಡಲಾದ ನೇರ ಆರೋಪ. ಅವರು ಪ್ಲೇಗ್‌ನಂತೆ ಸಂಸತ್ತಿನ ವಿಶೇಷ ಅಧಿವೇಶನದ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅವರು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂಬುದು ಅವರಿಗೆ ತಿಳಿದಿದೆ. ಕಾಂಗ್ರೆಸ್ ಪಕ್ಷವು ಭಾರತದ ಜನರ ಮುಂದೆ ಏನನ್ನು ಬಹಿರಂಗಪಡಿಸಲಿದೆ ಎಂಬ ಬಗ್ಗೆ ಅವರಿಗೆ ಭಯವಿದೆ."

ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್:

"ಮೊದಲು ರಕ್ಷಣಾ ಮುಖ್ಯಸ್ಥರು ಸಿಂಗಾಪುರದಲ್ಲಿ ಪ್ರಮುಖ ವಿಚಾರವನ್ನು ಬಹಿರಂಗಪಡಿಸುತ್ತಾರೆ. ನಂತರ ಇಂಡೋನೇಷ್ಯಾದಲ್ಲಿ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಅದಕ್ಕೆ ಪೂರಕವಾಗಿ ಹೇಳಿಕೆ ನೀಡಿತ್ತಾರೆ.
ಆದರೆ ಪ್ರಧಾನಿಯವರು ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಲು ಮತ್ತು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಏಕೆ ನಿರಾಕರಿಸುತ್ತಿದ್ದಾರೆ? ಸಂಸತ್ತಿನ ವಿಶೇಷ ಅಧಿವೇಶನದ ಬೇಡಿಕೆಯನ್ನು ಏಕೆ ತಿರಸ್ಕರಿಸಲಾಗಿದೆ?"

ಪಕ್ಷದ ಯುವ ನಾಯಕ ಶ್ರೀನಿವಾಸ್ ಬಿ.ವಿ ಮೋದಿಯವರು “ಗಂಭೀರ ಪ್ರಶ್ನೆಗಳಿಗೆ” ಉತ್ತರಿಸಬೇಕು ಎಂದು ಬರೆದಿದ್ದಾರೆ:

"ರಾಜಕೀಯ ನಾಯಕತ್ವ ನೀಡಿದ ನಿರ್ಬಂಧಗಳಿಂದಾಗಿ", ಪಾಕಿಸ್ತಾನದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಭಾರತೀಯ ವಾಯುಪಡೆಯು ಮೇ 7, 2025 ರ ರಾತ್ರಿ ಯುದ್ಧ ವಿಮಾನಗಳನ್ನು ಕಳೆದುಕೊಂಡಿತು.
ಕಳೆದ ತಿಂಗಳು ಇಂಡೋನೇಷ್ಯಾದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾರತದ ಯುದ್ಧ ವಿಮಾನಗಳ ನಷ್ಟವನ್ನು ಒಪ್ಪಿಕೊಂಡ ಇಂಡೋನೇಷ್ಯಾದ ಭಾರತದ ರಕ್ಷಣಾ ಅಟ್ಯಾಚ್ ಕ್ಯಾಪ್ಟನ್ (ಭಾರತೀಯ ನೌಕಾಪಡೆ) ಶಿವಕುಮಾರ್ ಅವರ ಮಾತುಗಳಿವು.
ಇದಕ್ಕೂ ಮೊದಲು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಅನಿಲ್ ಚೌಹಾಣ್ ಕೂಡ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಯುದ್ಧ ವಿಮಾನಗಳ ನಷ್ಟವನ್ನು ಒಪ್ಪಿಕೊಂಡಿದ್ದರು."

ಅಕಾಲಿಕ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಹಲವಾರು ಉತ್ತರಿಸಲಾಗದ ಪ್ರಶ್ನೆಗಳಿವೆ. ಪ್ರಧಾನಿ ಮೋದಿ ಈ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಶ್ರೀನಿವಾಸ್‌ ಬಿವಿಯವರು ಪ್ರಶ್ನೆಗಳ ಪಟ್ಟಿಯನ್ನು ನೀಡಿದ್ದಾರೆ.

👉ವಿಪಕ್ಷಗಳ ಮುಂದೆ ಸತ್ಯವನ್ನು ಹೇಳಲು ಪ್ರಧಾನಿಯವರು ತಮ್ಮ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲು ಏಕೆ ನಿರಾಕರಿಸುತ್ತಿದ್ದಾರೆ?

👉ಈ ವಿಷಯದ ಬಗ್ಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂಬ ಬೇಡಿಕೆಯನ್ನು ಏಕೆ ತಿರಸ್ಕರಿಸಲಾಯಿತು?

👉ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಜೈಶಂಕರ್ ಅವರು ದೇಶದಿಂದ ಏನನ್ನು ಮುಚ್ಚಿಡುತ್ತಿದ್ದಾರೆ?

‘ಯಾರ ಮಧ್ಯಸ್ಥಿಕೆಯೂ ನಮಗೆ ಬೇಕಿಲ್ಲ’: ಫೋನ್‌ ಕರೆಯಲ್ಲಿ ಟ್ರಂಪ್‌ಗೆ ಮೋದಿ ತಿರುಗೇಟು
ಐದು ವರ್ಷಗಳ ನಂತರ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ  ಡೊನಾಲ್ಡ್‌ ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಶ್ವೇತಭವನಕ್ಕೆ ಕರೆದು ಆತಿಥಿ ಸತ್ಕಾರ ನೀಡಿದ್ದಾರೆ. ಇದಕ್ಕಿಂತ ಹಿಂದಿನ ದಿನ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರಿಗೆ, ಪಾಕಿಸ್ತಾನದೊಂದಿಗಿನ ಇತ್ತೀಚಿನ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಭಾರತವು ಯಾವುದೇ ಮಟ್ಟದಲ್ಲಿ ವ್ಯಾಪಾರ ಒಪ್ಪಂದ ಅಥವಾ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ಎಂದಿಗೂ ಚರ್ಚಿಸಿಲ್ಲ ಎಂದು ಪೋನ್‌ ಮಾತುಕತೆಯಲ್ಲಿ ಹೇಳಿದ್ದಾರೆ.

ಆಲ್ಬರ್ಟಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ನಡೆಯಬೇಕಿದ್ದ ದ್ವಿಪಕ್ಷೀಯ ಸಭೆಯನ್ನು ರದ್ದುಗೊಳಿಸಿದ ಟ್ರಂಪ್ ವಾಷಿಂಗ್ಟನ್‌ಗೆ ಬೇಗನೆ ಹಿಂದಿರುಗಿದ ಕಾರಣ, ಅವರ ಜೊತೆಗಿಮ 35 ನಿಮಿಷಗಳ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಟ್ರಂಪ್ ಇಂದು ಬುಧವಾರ (ಜೂನ್ 18) ಮಧ್ಯಾಹ್ನ ಶ್ವೇತಭವನದಲ್ಲಿ ಊಟಕ್ಕೆ ಕರೆದಿದ್ದಾರೆ. ಇದಕ್ಕೆ ಮುನ್ನಾದಿನದಂದು ಟ್ರಂಪ್‌ ಅವರಿಂದ ಮೋದಿಯವರಿಗೆ ಈ ಕರೆ ಬಂದಿತು.

ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಜುಲೈ 2019 ರಲ್ಲಿ ಶ್ವೇತಭವನಕ್ಕೆ ಅತಿಥಿಯಾಗಿ ಹೋಗಿದ್ದರು. ಇವರು ಆಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಅಧ್ಯಕ್ಷ ಟ್ರಂಪ್ ಬೇಟಿ ಮಾಡಿದ್ದರು.

ಜನತೆಯ ಟೀಕೆ ಮತ್ತು ವಿರೋಧ ಪಕ್ಷಗಳ ಪ್ರಶ್ನೆಗಳ ನಡುವೆಯೇ ಮೋದಿ-ಟ್ರಂಪ್ ಫೋನ್ ಮಾತುಕತೆ

ಭಾರತದಲ್ಲಿ ಮೋದಿಯವರಿಗೆ ಟೀಕೆಗಳು ಹೆಚ್ಚುತ್ತಿದ್ದ ನಡುವೆಯೇ ಈ ಫೋನ್ ಕರೆ ಕೂಡ ಬಂದಿದೆ. ಕೆಲವು ದಿನಗಳ ಹಿಂದೆ, ಟ್ರಂಪ್ ಸಾರ್ವಜನಿಕ ವೇದಿಕೆಗಳಲ್ಲಿ ಕನಿಷ್ಠ 13 ಬಾರಿ “ತಾನೇ ಭಾರತ – ಪಾಕ್‌ ಯುದ್ಧ ನಿಲ್ಲಿಸಿದ್ದು, ವ್ಯಾಪಾರ ಮಾಡಬೇಕೆಂದರೆ ಯುದ್ಧ ನಿಲ್ಲಿಸಿ,” ಎಂಬಂತ ಹೇಳಿಕೆಗಳನ್ನು ನೀಡುವಾಗ ಮೋದಿಯವರು ವಹಿಸಿದ್ದ “ಮೌನ”ವನ್ನು ಕಾಂಗ್ರೆಸ್ ಪಕ್ಷ ಪ್ರಶ್ನಿಸಿತ್ತು.

ಇತ್ತೀಚೆಗೆ, ಜೂನ್ 15 ರಂದು, ಟ್ರಂಪ್ ಮತ್ತೊಮ್ಮೆ ಈ ಹಿಂದಿನ ಹೇಳಿಕೆಗಳನ್ನೇ ಉಲ್ಲೇಖಿಸಿ, “ಅಮೆರಿಕದೊಂದಿಗಿನ ಟ್ರೇಡ್ ಅನ್ನು ಬಳಸಿಕೊಂಡು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗಳಲ್ಲಿ ಒಗ್ಗಟ್ಟು ಮತ್ತು ವಿವೇಕವನ್ನು ತರುವ ಮೂಲಕ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಲು ಮತ್ತು ನಿಲ್ಲಿಸಲು ಸಾಧ್ಯವಾಯಿತು. ಇಸ್ರೇಲ್ ಮತ್ತು ಇರಾನ್ ನಡುವೆ ಶಾಂತಿಯನ್ನು ಸುಲಭವಾಗಿ ತರಲು ಮಧ್ಯಸ್ಥಿಕೆ ಕೆಲಸ ಮಾಡಬಹುದು,” ಎಂದು ಟ್ರಂಪ್ ಹೇಳಿದರು.

ಟ್ರಂಪ್ ಸರ್ಕಾರವು ಈ ಹೇಳಿಕೆಯನ್ನು ಕಾನೂನು ದಾಖಲೆಯಲ್ಲಿ ಔಪಚಾರಿಕಗೊಳಿಸಿತ್ತು. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಡಬ್ಲ್ಯೂ. ಲುಟ್ನಿಕ್ ಅವರು ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯಕ್ಕೆ ಸಲ್ಲಿಸಿದ ಲಿಖಿತ ಅರ್ಜಿಯಲ್ಲಿ, ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ “ಪೂರ್ಣ ಪ್ರಮಾಣದ ಯುದ್ಧವನ್ನು ತಪ್ಪಿಸಲು” ಪ್ರೋತ್ಸಾಹಕವಾಗಿ ವ್ಯಾಪಾರವನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಟ್ರಂಪ್ ಅವರ ನಿರೂಪಣೆಯನ್ನು ಸಾರ್ವಜನಿಕವಾಗಿ ವಿರೋಧಿಸಿದ್ದರು, ಆದರೆ ಟ್ರಂಪ್‌ ಮಾತ್ರ “ಯುದ್ಧ ನಿಲ್ಲಿಸಿದೆ,” ಎಂಬ ಜಪವನ್ನು ನಿಲ್ಲಿಸಲಿಲ್ಲ. ಭಾರತವು ಇದನ್ನು ವಿರೋಧಿಸಿ ಔಪಚಾರಿಕ ಪ್ರತಿಭಟನೆಯನ್ನು ದಾಖಲಿಸಿದೆಯೇ ಎಂಬುದು ಇಂದಿನ ವರೆಗೆ ತಿಳಿದು ಬಂದಿಲ್ಲ.

ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕೊನೆಗೊಂಡ ನಂತರ, ಟ್ರಂಪ್ ಅವರೊಂದಿಗಿನ ಮೋದಿಯವರ ಮೊದಲ ಬಾರಿಗೆ ಫೋನ್ ಮಾತುಕತೆ ನಡೆಸಿದ್ದಾರೆ.

“ಈ ಸಂಪೂರ್ಣ ಘಟನಾವಳಿಗಳ ಸರಣಿಯ ಯಾವುದೇ ಹಂತದಲ್ಲಿ ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದದ ಬಗ್ಗೆ ಅಥವಾ ಭಾರತ ಹಾಗೂ ಪಾಕಿಸ್ತಾನದ ನಡುವೆ ಅಮೆರಿಕದ ಮಧ್ಯಸ್ಥಿಕೆಗೆ ಯಾವುದೇ ಪ್ರಸ್ತಾಪದ ಬಗ್ಗೆ ಯಾವುದೇ ಮಟ್ಟದಲ್ಲಿ ಚರ್ಚೆ ನಡೆದಿಲ್ಲ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಸ್ಪಷ್ಟವಾಗಿ ತಿಳಿಸಿದರು” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ವೇತಭವನದಿಂದ ಬಂದ ಕರೆಗೆ ಪ್ರತ್ಯೇಕ ಪ್ರತಿಕ್ರಿಯೆಯನ್ನು ನೀಡಲಾಗಿಲ್ಲ.

ಎರಡೂ ದೇಶಗಳ ಸೇನೆಗಳ ನಡುವಿನ ಮಾತುಕತೆಯ ನಂತರ ಭಾರತದ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಿದೆ ಎಂದು ಮೋದಿ ಪುನರುಚ್ಚರಿಸಿದರು – “ಮತ್ತು ಇದು ಪಾಕಿಸ್ತಾನದ ಕೋರಿಕೆಯ ಮೇರೆಗೆ ಮಾಡಲಾಯಿತು,” ಎಂದು ಮಿಸ್ರಿ ಹೇಳಿದರು.

“ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಮತ್ತು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ಮೋದಿ ದೃಢವಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ಭಾರತದಲ್ಲಿ ಸಂಪೂರ್ಣ ರಾಜಕೀಯ ಒಮ್ಮತವಿದೆ,” ಎಂದು ಅವರು ಹೇಳಿದರು.

ಭಯೋತ್ಪಾದಕ ಶಿಬಿರಗಳ ಮೇಲೆ ಮೇ 6-7 ರಂದು ನಡೆದ ವೈಮಾನಿಕ ದಾಳಿಗಳನ್ನು “ಬಹಳ ಲೆಕ್ಕಾಚಾರ ಹಾಕಿ, ನಿಖರವಾದ ಮತ್ತು ಉಲ್ಬಣಗೊಳ್ಳದ” ದಾಳಿ ಎಂದು ಪ್ರಧಾನಿ ಬಣ್ಣಿಸಿದರು.

ಪಾಕಿಸ್ತಾನದಿಂದ ಬರುವ ಯಾವುದೇ ಗುಂಡನ್ನು  ಪ್ರತಿಯಾಗಿ ಗೋಲಾ (ಚಿಪ್ಪು)  ಮೂಲಕ ಎದುರಿಸಲಾಗುವುದು  ಎಂಬ ಭಾರತದ ಹೇಳಿಕೆಯನ್ನು ಅವರು ಪುನರುಚ್ಚರಿಸಿದರು.

ಮೋದಿ ಅವರ ಹೇಳಿಕೆಯ ಪ್ರಕಾರ, ಮೇ 9 ರ ರಾತ್ರಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು “ಪಾಕಿಸ್ತಾನ ಭಾರತದ ಮೇಲೆ ದೊಡ್ಡ ದಾಳಿ ನಡೆಸಬಹುದು” ಎಂದು ಎಚ್ಚರಿಸಿದ್ದರು ಎಂಬುದು ತಿಳಿದುಬಂದಿದೆ.

ಮೇ 9 ರಂದು ಭಾರತವು “ಬಹಳ ಬಲವಾದ ಪ್ರತಿಕ್ರಿಯೆ” ನೀಡಿ ಪಾಕಿಸ್ತಾನದ ವಾಯುನೆಲೆಗಳನ್ನು “ನಿಷ್ಕ್ರಿಯ”ಗೊಳಿಸಿದ ನಂತರವೇ, ಪಾಕ್‌ ಭಾರತದ ಬಳಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ವಿನಂತಿಸಿತು.

“ಪ್ರಧಾನಿಯವರು ತಿಳಿಸಿದ ಅಂಶಗಳನ್ನು ಟ್ರಂಪ್ ಎಚ್ಚರಿಕೆಯಿಂದ ಆಲಿಸಿದರು ಮತ್ತು ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು” ಎಂದು ಮಿಸ್ರಿ ಹೇಳಿದರು. “ಭಾರತವು ಇನ್ನು ಮುಂದೆ ಭಯೋತ್ಪಾದನೆಯನ್ನು ಪ್ರಾಕ್ಸಿ ಯುದ್ಧವೆಂದು ನೋಡುವುದಿಲ್ಲ, ಬದಲಿಗೆ ಯುದ್ಧವೆಂದೇ ಪರಿಗಣಿಸುತ್ತದೆ. ಭಾರತದ ಆಪರೇಷನ್ ಸಿಂಧೂರ್ ಇನ್ನೂ ಮುಂದುವರೆದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ” ಎಂದು ಅವರು ಹೇಳಿದರು.

ಕೆನಡಾದಿಂದ ಹಿಂದಿರುಗಿದ ನಂತರ ಮೋದಿ ಅಮೆರಿಕದಲ್ಲಿ ತಂಗಬಹುದೇ ಎಂದು ಟ್ರಂಪ್ ವಿಚಾರಿಸಿದರು. “ಇತರ ಕಮಿಟ್‌ಮೆಂಟ್‌ಗಳ ಕಾರಣಕ್ಕಾಗಿ, ಪ್ರಧಾನಿ ಮೋದಿ ಹಾಗೆ ಮಾಡಲು ತಮ್ಮ ಅಸಾಮರ್ಥ್ಯವನ್ನು ವ್ಯಕ್ತಪಡಿಸಿದರು” ಎಂದು ಮಿಶ್ರಿ ಹೇಳಿದರು. ಹಾಗಿದ್ದೂ, ಇಬ್ಬರೂ ನಾಯಕರು ಮುಂದಿನ ದಿನಗಳಲ್ಲಿ ಭೇಟಿಯಾಗಲು ಪ್ರಯತ್ನ ಮಾಡುವುದಾಗಿ ಒಪ್ಪಿಕೊಂಡರು.

ಇಬ್ಬರೂ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಚರ್ಚಿಸಿದರು ಮತ್ತು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಶಾಂತಿಗಾಗಿ ನೇರ ಸಂವಾದ ಅತ್ಯಗತ್ಯ ಎಂದು ಒಪ್ಪಿಕೊಂಡರು.

ಪಾಕಿಸ್ತಾನದ ಮುನೀರ್‌ಗೆ ಟ್ರಂಪ್‌ನಿಂದ ಪಾರ್ಟಿ!

ಇಂಡೋ-ಪೆಸಿಫಿಕ್ ಕುರಿತು, ಮೋದಿ ಮತ್ತು ಟ್ರಂಪ್‌ ಪರಸ್ಪರ ದೃಷ್ಟಿಕೋನಗಳನ್ನು ಹಂಚಿಕೊಂಡರು ಮತ್ತು ಈ ಪ್ರದೇಶದಲ್ಲಿ ಕ್ವಾಡ್ ಪಾತ್ರಕ್ಕೆ ಬೆಂಬಲವನ್ನು ಪುನರುಚ್ಚರಿಸಿದರು. ಮುಂದಿನ ಕ್ವಾಡ್ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಟ್ರಂಪ್ ಅವರಿಗೆ ಆಹ್ವಾನ ನೀಡಿದರು, ಅದನ್ನು ಟ್ರಂಪ್ ಸ್ವೀಕರಿಸಿದರು ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ತನ್ನ ಹೋರಾಟವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಭಾರತ ಹೇಳಿದ್ದರೂ, ಪಾಕಿಸ್ತಾನವನ್ನು “ಭಯೋತ್ಪಾದನೆಯ ಜಾಗತಿಕ ಕೇಂದ್ರ ” ಎಂಬ ಭಾರತದ ನಿಲುವನ್ನು ಟ್ರಂಪ್ ಸರ್ಕಾರ ಬೆಂಬಲಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ .

ಬದಲಾಗಿ, ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಭಯೋತ್ಪಾದನಾ ನಿಗ್ರಹಕ್ಕೆ ಪಾಕಿಸ್ತಾನವನ್ನು ವೇದಿಕೆಯಾಗಿ ರೂಪಿಸಿಕೊಂಡಿದೆ. ಅಮೇರಿಕಾ ಪಾಕಿಸ್ತಾನವನ್ನು ಭಯೋತ್ಪಾದನಾ ನಿಗ್ರಹದ ಪ್ರಮುಖ ಪಾಲುದಾರ ಎಂದು ಪರಿಗಣಿಸಿದೆ.

ಈ ಕಾರಣಕ್ಕಾಗಿ ಮುನೀರ್ ಅವರಿಗೆ ಭೋಜನ ಕೂಟ ಆಯೋಜಿಸುವ ಟ್ರಂಪ್ ನಿರ್ಧಾರವು ಮಹತ್ವದ್ದಾಗಿದೆ. ಭಾರತದೊಂದಿಗಿನ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದಲ್ಲಿ ಮುನೀರ್ ಅವರ ಖ್ಯಾತಿಯನ್ನು ಹೆಚ್ಚಿತು. ಈ ಹಿಂದೆ ಮಿಲಿಟರಿ ಸ್ಥಾಪನೆಯನ್ನು ಟೀಕಿಸಿದ್ದ ವಿರೋಧ ಪಕ್ಷ ಪಿಟಿಐ ಸೇರಿದಂತೆ ಪಾಕಿಸ್ತಾನದಾದ್ಯಂತ ಅವರಿಗೆ ಬೆಂಬಲವನ್ನು ವ್ಯಕ್ತವಾಗಿತ್ತು.

ಕಾಂಗ್ರೆಸ್ಸನಲ್‌ ಹಿಯರಿಂಗ್‌ನಲ್ಲಿ  ಇಸ್ಲಾಮಿಕ್ ಸ್ಟೇಟ್-ಖೋರಾಸನ್ ವಿರುದ್ಧ ಹೋರಾಡಲು ಪಾಕಿಸ್ತಾನವು “ಅದ್ಭುತ ಪಾಲುದಾರ” ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಮೈಕೆಲ್ ಕುರಿಲ್ಲಾ ಹೊಗಳಿದ ಬೆನ್ನಲ್ಲೇ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಊಟಕ್ಕೆ ಕರೆಯಲಾಗಿದೆ. (ಖೋರಾಸನ್ ಎಂದರೆ ಇಂದಿನ ಇರಾನ್, ಅಫ್ಘಾನಿಸ್ತಾನ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಕೆಲವು ಭಾಗಗಳನ್ನು ಒಳಗೊಂಡ ಐತಿಹಾಸಿಕ ಭೂ ಪ್ರದೇಶ)

ಈ ವರ್ಷದ ಆರಂಭದಲ್ಲಿ, ಅಂದರೆ ಫೆಬ್ರವರಿಯಲ್ಲಿ ಅಮೇರಿಕನ್ ಕಾಂಗ್ರೆಸ್‌ಗೆ ನೀಡಿದ ಮೊದಲ ಭಾಷಣದಲ್ಲಿ ಟ್ರಂಪ್, 13 ಅಮೆರಿಕನ್ ಸೈನಿಕರನ್ನು ಕೊಂದ ಕಾಬೂಲ್‌ನಲ್ಲಿ ನಡೆದ ಅಬ್ಬೆ ಗೇಟ್ ಬಾಂಬ್ ಸ್ಫೋಟದ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾದ ಮೊಹಮ್ಮದ್ ಶರೀಫುಲ್ಲಾನನ್ನು ಬಂಧಿಸಿ ಹಸ್ತಾಂತರಿಸಿದ್ದಕ್ಕಾಗಿ ಪಾಕಿಸ್ತಾನವನ್ನು ಹೊಗಳಿದ್ದರು.

We thank US President Donald Trump for acknowledging and appreciating Pakistan's role and support in counter terrorism efforts across the region, in the context of Pakistan Security Forces’ recent apprehension of ISKP’s top tier operational commander Shareefullah, who is an…
— Shehbaz Sharif (@CMShehbaz) March 5, 2025

ಟ್ರಂಪ್ ಭಾರತದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದರೂ, ಪಾಕಿಸ್ತಾನವನ್ನು ಸ್ಪಷ್ಟ ಮತ್ತು ನಿಷ್ಠುರವಾಗಿ ಖಂಡಿಸಲಿಲ್ಲ. ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಸಮಾನಾಗಿ ನೋಡಿ ಹೇಳಿಕೆಗಳನ್ನು ನೀಡುತ್ತಾ ಬಂದರು, ಮತ್ತು ಪಾಕಿಸ್ತಾನ “ಬಹಳ ಬಲವಾದ ನಾಯಕತ್ವ ” ಹೊಂದಿದೆ ಎಂದು ಹೊಗಳಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ರಾತ್ರೋರಾತ್ರಿ ನಡೆಸಿದ ಫಿರಂಗಿ ದಾಳಿಯಿಂದ ಹಲವರು ಸಾವನ್ನಪ್ಪಿರುವ ಶಂಕೆ
ವರದಿಗಳ ಪ್ರಕಾರ, ಶಂಕಿತ ಪಾಕಿಸ್ತಾನಿ ಡ್ರೋನ್‌ಗಳು ಸತತ ಎರಡನೇ ದಿನವೂ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೆಲವು ವಾಯು ನೆಲೆಗಳ ಒಳ ನುಸುಳಿವೆ. ಒಂದು ಪ್ರಮುಖ ದೇವಾಲಯ ಮತ್ತು ಕೆಲವು ನಾಗರಿಕ ಪ್ರದೇಶಗಳು ರಾತ್ರೋರಾತ್ರಿ ಶೆಲ್‌ ದಾಳಿಗೊಳಗಾದವು. ದಾಳಿಯಲ್ಲಿ ನಾಗರೀಕರ ಮನೆಗಳು ಹಾನಿಗೊಳಗಾಗಿವೆ

ಮೇ 9 ಮತ್ತು 10 ರ ನಡುವಿನ ರಾತ್ರಿ ಪಾಕಿಸ್ತಾನವು ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ)ಗಳ ಉದ್ದಕ್ಕೂ ಭಾರೀ ಫಿರಂಗಿ ದಾಳಿ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಸಾವು-ನೋವುಗಳು ಸಂಭವಿಸುವ ಭೀತಿಯ ವಾತಾವರಣವಿದೆ.

ಜಮ್ಮುವಿನ ʼಎಲ್‌ಒಸಿʼ ಉದ್ದಕ್ಕೂ ರಾಜೌರಿ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಭಾರೀ ಫಿರಂಗಿ ಗುಂಡಿನ ದಾಳಿ ನಡೆಸಿತ್ತು. ಈ ಸಂಧರ್ಭದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಜೌರಿ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆದ ಶೆಲ್ ದಾಳಿಯಲ್ಲಿ ಬಿಹಾರದ ಒಬ್ಬಳು ಅಪ್ರಾಪ್ತ ಬಾಲಕಿ ಮತ್ತು ಓರ್ವ 35 ವರ್ಷದ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನವು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಭಾರೀ ಫಿರಂಗಿ ದಾಳಿಯಲ್ಲಿ, ಪೂಂಚ್‌ನ ಮೆಂಧರ್ ಪ್ರಾಂತ್ಯದ ʼರಶೀದಾ ಬಾನೋʼ ಮತ್ತು ಜಮ್ಮುವಿನ ಆರ್‌ಎಸ್ ಪುರ ನಿವಾಸಿಯಾದ ʼಅಶೋಕ್ ಕುಮಾರ್ʼ ಎಂದು ಗುರುತಿಸಲಾದ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಜಮ್ಮು ಮತ್ತು ಶ್ರೀನಗರದ ನಾಗರಿಕ ವಿಮಾನ ನಿಲ್ದಾಣಗಳು, ಉಧಮ್‌ಪುರ ವಾಯುನೆಲೆ, ಅವಂತಿಪೋರಾ ವಾಯುನೆಲೆ ಮತ್ತು ಕೆಲವು ವಸತಿ ಪ್ರದೇಶಗಳು ಸೇರಿದಂತೆ ʼಎಲ್‌ಒಸಿʼ ಹಾಗೂ ʼಐಬಿʼಯ ಉದ್ದಕ್ಕೂ ರಾತ್ರಿಯಿಡೀ ಮತ್ತು ಶನಿವಾರ ಬೆಳಿಗ್ಗೆ ಅಲ್ಲಿನ ನಿವಾಸಿಗಳು ಹಲವಾರು ಬಾಂಬ್‌ ಸ್ಫೋಟದ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ.

ದಾಳಿಯಿಂದ ಹಾನಿಗೊಳಗಾದ ಜಮ್ಮುವಿನ ಕೆಲವು ಭಾಗಗಳು
ಜಮ್ಮು ಮತ್ತು ಕಾಶ್ಮೀರದ ವಾಯು ನೆಲೆಗಳಿಗೆ ಸತತ ಎರಡನೇ ದಿನವೂ ಪಾಕಿಸ್ತಾನದ್ದೆಂದು ಶಂಕಿಸಲಾದ ಡ್ರೋನ್‌ಗಳು ನುಸುಳಿವೆ ಎಂದು ವರದಿಗಳು ತಿಳಿಸಿವೆ. ಚಳಿಗಾಲದ ರಾಜಧಾನಿಯಾದ ಜಮ್ಮುವಿನಲ್ಲಿ ಪ್ರಮುಖ ದೇವಾಲಯ ಮತ್ತು ಕೆಲವು ನಾಗರಿಕ ಪ್ರದೇಶಗಳು ರಾತ್ರೋರಾತ್ರಿ ಶೆಲ್ ದಾಳಿಗೆ ಒಳಗಾದವು. ಇದು ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ. ಹಲವಾರು ಮನೆಗಳು ಹಾನಿಗೊಳಗಾಗಿವೆ.

ಜಮ್ಮು: ಮೇ 10, 2025 ರ ಶನಿವಾರ ಜಮ್ಮುವಿನ ವಸತಿ ಪ್ರದೇಶದಲ್ಲಿ ಪಾಕಿಸ್ತಾನದ ದಾಳಿಯಿಂದ ಹಾನಿಗೊಳಗಾದ ವಾಹನಗಳ ಬಳಿ, ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ನಾಗರಿಕರು ಜಮಾಯಿಸಿರುವುದು. ಚಿತ್ರ: ಪಿಟಿಐ

ಜಮ್ಮು ಮತ್ತು ಕಾಶ್ಮೀರದ ಹಲವು ಸ್ಥಳಗಳಿಂದ ಶನಿವಾರ ಸ್ಪೋಟಕಗಳು ಮತ್ತು ಡ್ರೋನ್‌ಗಳ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ಧಿ ಮೂಲವೊಂದರ ಮೂಲಕ ತಿಳಿದು ಬಂದಿದೆ. ಆದರೆ ಅವಶೇಷಗಳು ಕಂಡುಬಂದ ಸ್ಥಳಗಳ ವಿವರಗಳನ್ನು ಅವರು ಸ್ಪಷ್ಟಪಡಿಸಿಲ್ಲ.

ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳ ಮೇಲೆ ಮೇ 7 ರಂದು ಭಾರತ ಸರ್ಕಾರ ನಿಖರವಾದ ಕ್ಷಿಪಣಿ ದಾಳಿ ನಡೆಸಿದ ನಂತರ ಇದೇ ಮೊದಲ ಬಾರಿಗೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಶ್ರೀನಗರದ ಏಕೈಕ ನಾಗರಿಕ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಭಯಭೀತ ನಿವಾಸಿಗಳು ಹಲವಾರು ಸ್ಫೋಟಗಳ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ.
“ಬೆಳಗಾದ ಸ್ವಲ್ಪ ಹೊತ್ತಿನಲ್ಲೇ, ವಿಮಾನ ನಿಲ್ದಾಣದ ಕಡೆಯಿಂದ ಕನಿಷ್ಠ ಐದರಿಂದ ಆರು ದೊಡ್ಡ ಸ್ಫೋಟಗಳು ಸಂಭವಿಸಿದವು. ಮನೆ ನಡುಗಿತು ಮತ್ತು ಮಕ್ಕಳು ನಿದ್ರೆಯಿಂದ ಎದ್ದು ಬೆಚ್ಚಿಬಿದ್ದರು” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಶ್ರೀನಗರದ ಹುಮ್ಹಾಮಾ ಪ್ರದೇಶದ ನಿವಾಸಿಯೊಬ್ಬರು ಹೇಳಿದರು.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿಯ ರಕ್ಷಣಾ ವಾಯುನೆಲೆಯ ಸುತ್ತಮುತ್ತಲಿನ ನಿವಾಸಿಗಳು ಶುಕ್ರವಾರ ರಾತ್ರಿ ಸ್ಫೋಟಗಳ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ. ಸ್ಫೋಟಗಳಲ್ಲಿ ಯಾವುದೇ ಗಾಯಗಳು ಅಥವಾ ಸಾವುನೋವುಗಳು ಆದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ವರದಿಗಳು ಬಂದಿಲ್ಲ.

ಜಮ್ಮುವಿನ ಮೇಲೆ ಹಾರುತ್ತಿರುವ ಜೆಟ್‌ಗಳು ಜಮ್ಮು ವಿಮಾನ ನಿಲ್ದಾಣದ ಬಳಿ, ರಕ್ಷಣಾ ವಾಯುನೆಲೆಯ ಬಳಿ ಮತ್ತು ಉಧಂಪುರ್‌ನ ಗ್ಯಾರಿಸನ್ ಪಟ್ಟಣದ ವಾಯುನೆಲೆಯ ಬಳಿ ವಾಯುದಾಳಿಯ ಸೈರನ್‌ಗಳ ನಡುವೆ ಹಲವಾರು ಸ್ಫೋಟಗಳ ಭೀಕರ ಶಬ್ಧಗಳ ನಡುವೆ ಚಳಿಗಾಲದ ರಾಜಧಾನಿ ಜಮ್ಮುವಿನ ನಿವಾಸಿಗಳು ಎಚ್ಚರಗೊಂಡರು.
“ಜೆಟ್‌ಗಳು ಆಕಾಶದಲ್ಲಿ ಹಾರಾಡುತ್ತಿವೆ ಮತ್ತು ಆವಾಗಾವಾಗ ಬಾಂಬಿನ ಶಬ್ದಗಳು ಕೇಳಿಬರುತ್ತಿವೆ.ನನ್ನ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಸಂಬಂಧಿಕರು ಮತ್ತು ಸ್ನೇಹಿತರಿಂದ ನನಗೆ ಉದ್ರಿಕ್ತ ಕರೆಗಳು ಬರುತ್ತಿವೆ” ಎಂದು ಶನಿವಾರ ಬೆಳಿಗ್ಗೆ ಹೆಸರು ಹೇಳಲು ಇಚ್ಛಿಸದ ಜಮ್ಮು ನಿವಾಸಿಯೊಬ್ಬರು ತಿಳಿಸಿದರು.

ಶುಕ್ರವಾರ ರಾತ್ರಿ 9 ಗಂಟೆಯಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪ್ರತಿದಾಳಿ ನಡೆಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಬಿಎಸ್‌ಎಫ್ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನದ ರೇಂಜರ್‌ಗಳ ಪೋಸ್ಟ್‌ಗಳು ಮತ್ತು ಆಸ್ತಿಗಳಿಗೆ ವ್ಯಾಪಕ ಹಾನಿಯಾಗಿದೆ. ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಕಂಕಣಬದ್ಧರಾಗಿದ್ದೇವೆ” ಎಂದು ಜಮ್ಮುವಿನ ಬಿಎಸ್‌ಎಫ್ ವಕ್ತಾರರು ʼಎಕ್ಸ್‌ʼನಲ್ಲಿ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಕಂಡುಬರುವ ದೃಶ್ಯಗಳಲ್ಲಿ ಕೆಲವು ವಸತಿ ಪ್ರದೇಶಗಳ ಮೇಲೆ ಗಡಿಯಾಚೆಯಿಂದ ಸಿಡಿಸಲಾದ ಸ್ಪೋಟಕಗಳು ಬಿದ್ದಿರುವುದನ್ನು ತೋರಿಸಿವೆ. ದೃಶ್ಯವೊಂದರಲ್ಲಿ, ಹಿಂದೂಗಳ ಪ್ರಮುಖ ಧಾರ್ಮಿಕ ತಾಣವಾದ ʼಆಪ್ ಶಂಬುʼ ದೇವಾಲಯದಿಂದ ಸುಮಾರು 80 ಮೀಟರ್ ದೂರದಲ್ಲಿ ಸ್ಫೋಟಗೊಂಡ ಸ್ಪೋಟಕದ ಅವಶೇಷಗಳನ್ನು ಪೊಲೀಸ್ ತಂಡ ಪರಿಶೀಲಿಸುತ್ತಿರುವುದು ಕಂಡುಬಂದಿದೆ.

ವರದಿಗಳ ಪ್ರಕಾರ ರೆಹರಿ, ರೂಪ್ ನಗರ, ಜಾನಿಪುರ, ನಾಗಬಾನಿ ಮತ್ತು ಮುಥಿ ಸೇರಿದಂತೆ ಜಮ್ಮುವಿನ ಕೆಲವು ಭಾಗಗಳಲ್ಲಿ ಶೆಲ್ ದಾಳಿ ಮತ್ತು ಮೇಲಿನಿಂದ ಬೀಳುವ ಸ್ಪೋಟಕಗಳ ಅವಶೇಷಗಳಿಂದಾಗಿ ವಸತಿ ನಿವಾಸಗಳು ಹಾನಿಗೊಳಗಾಗಿವೆ. ಆದಾಗ್ಯೂ, ನಾಗರಿಕರಿಗೆ ಗಾಯಗಳಾದ ಬಗ್ಗೆ ಯಾವುದೇ ವರದಿಗಳಾಗಿಲ್ಲ. ಸಾಂಬಾ ಮತ್ತು ಕಥುವಾ ಜಿಲ್ಲೆಗಳ ಅಂತರರಾಷ್ಟ್ರೀಯ ಗಡಿಯಲ್ಲಿಯೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.

ಜಮ್ಮು: ಪಾಕಿಸ್ತಾನದ ದಾಳಿಯಿಂದ ಹಾನಿಗೊಳಗಾದ ವಾಹನಗಳ ಬಳಿ ಜಮಾಯಿಸಿರುವ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು, ಶನಿವಾರ, ಮೇ 10, 2025. ಚಿತ್ರ: ಪಿಟಿಐ.

ಕೇಂದ್ರಾಡಳಿತ ಪ್ರದೇಶದಲ್ಲಿ ಸತತ ಮೂರನೇ ದಿನವೂ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು ಆದ ಕಾರಣ, ಜಮ್ಮು ವಿಶ್ವವಿದ್ಯಾಲಯ ಮತ್ತು ಅಲ್ಲಿನ ಕೆಲವು ಕಾಲೇಜುಗಳಲ್ಲಿ ಓದುತ್ತಿರುವ ರಾಜೌರಿಯ ಡಜನ್‌ಗಟ್ಟಲೆ ವಿದ್ಯಾರ್ಥಿಗಳು ಶನಿವಾರ ಬೆಳಿಗ್ಗೆ ಜಮ್ಮು ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಸಹಾಯಕ್ಕಾಗಿ ಕಾಯುತ್ತಿದ್ದರು.

ಸಾರ್ವಜನಿಕ ಸಾರಿಗೆ ವಾಹನಗಳು ನಮ್ಮನ್ನು ನಮ್ಮ ಊರಿಗೆ ಹಿಂತಿರುಗಲು ನಿರಾಕರಿಸುತ್ತಿವೆ ಎಂದು ಜಮ್ಮು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಫಾರೂಕ್ ‘ದಿ ವೈರ್’ಗೆ ತಿಳಿಸಿದ್ದಾರೆ. ಅಲ್ಲಿ ನಿನ್ನೆ ರಾತ್ರಿ ಪಾಕಿಸ್ತಾನದಿಂದ ಭಾರೀ ಫಿರಂಗಿ ದಾಳಿ ನಡೆದು, ಜಮ್ಮು-ಕಾಶ್ಮೀರದ ಒಬ್ಬ ಹಿರಿಯ ಅಧಿಕಾರಿ ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು.”ನಾವು ಕೆಲವು ಖಾಸಗಿ ಪ್ರಯಾಣಿಕರ ಕ್ಯಾಬ್‌ಗಳ ಪ್ರಯಾಣಿಕರ ಸಂಖ್ಯೆಯನ್ನು ದ್ವಿಗುಣಗೊಳಿಸಲು ಕೇಳಿಕೊಂಡೆವು, ಆದರೆ ಅವರು ಸಹ ನಮಗೆ ಮನೆಗೆ ಹಿಂತಿರುಗಲು ಸಹಾಯ ಮಾಡಲು ನಿರಾಕರಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ಹಾನಿಗೊಳಗಾದ ಜೀವಗಳು
ಬಾರಾಮುಲ್ಲಾ, ಕುಪ್ವಾರಾ, ಬಂಡಿಪೋರಾ, ರಾಜೌರಿ ಮತ್ತು ಪೂಂಚ್‌ಗಳಲ್ಲಿನ ʼಎಲ್‌ಒಸಿʼ ಉದ್ದಕ್ಕೂ ಪಾಕಿಸ್ತಾನ ರಾತ್ರೋರಾತ್ರಿ ಭಾರೀ ಫಿರಂಗಿ ದಾಳಿ ನಡೆಸಿದ್ದು, ಇದರಲ್ಲಿ ಕನಿಷ್ಠ ನಾಲ್ಕು ನಾಗರಿಕರು ಮತ್ತು ರಾಜೌರಿಯ ಹೆಚ್ಚುವರಿ ಉಪ ಆಯುಕ್ತ ʼರಾಜ್‌ಕುಮಾರ್ ಥಪ್ಪಾʼ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ರಾಜೌರಿಯಿಂದ ಆಘಾತಕಾರಿ ಸುದ್ದಿ ಬಂದಿದೆ. ಜಮ್ಮು-ಕಾಶ್ಮೀರದ ರಕ್ಷಣೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಆಡಳಿತ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ಅವರು ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಇದ್ದರು ಮತ್ತು ನಾನು ಅಧ್ಯಕ್ಷತೆ ವಹಿಸಿದ್ದ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ್ದರು” ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ʼಎಕ್ಸ್‌ʼನಲ್ಲಿ ಪೋಸ್ಟ್ ಮಾಡಿದ್ದಾರೆ. “ಈ ಭಯಾನಕ ಸಾವಿನಿಂದ ನನಗೆ ಉಂಟಾದ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಪೋಸ್ಟ್‌ನಲ್ಲಿ ಸೇರಿಸಲಾಗಿದೆ.

ʼಎಲ್‌ಒಸಿʼಯಾದ್ಯಂತ ಸಿಡಿಸಿದ ಮಾರ್ಟರ್ ಶೆಲ್, ರಾಜೌರಿಯಲ್ಲಿರುವ ʼಥಾಪಾʼ ಅವರ ನಿವಾಸಕ್ಕೆ ಬಡಿದು ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಅವರ ಇಬ್ಬರು ಸಿಬ್ಬಂದಿಗಳು ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭಾರೀ ಫಿರಂಗಿ ಶೆಲ್ ದಾಳಿಯ ಕಾರಣದಿಂದಾಗಿ ʼಎಲ್‌ಒಸಿʼ ಗಡಿಯ ಉದ್ದಕ್ಕೂ ಇರುವ ಅನೇಕ ಗ್ರಾಮಗಳನ್ನು ಸ್ಥಳಾಂತರಿಸಬೇಕಾಯಿತು, ಇದೇ ಸಮಯದಲ್ಲಿ, ಈ ಪ್ರದೇಶಗಳಲ್ಲಿ ವಾಸಿಸುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಸಾರಿಗೆ ವ್ಯವಸ್ಥೆ ಕೂಡಾ ಮಾಡಲಾಗುತ್ತಿದೆ.

ವರದಿ: ಜಹಾಂಗೀರ್ ಅಲಿ, ದಿ ವೈರ್
ಅನುವಾದ: ಗುರು ಸುಳ್ಯ