inequality – Peepal Media

ಸಂಪತ್ತಿನ ಅಸಮಾನತೆ ಬೆಳೆಯುತ್ತಿರುವ ಬಗ್ಗೆ 81% ಭಾರತೀಯರು ಕಳವಳ: ಪ್ಯೂ ಸಂಶೋಧನಾ ಕೇಂದ್ರ
ಸುಮಾರು 71% ಭಾರತೀಯರು ಧಾರ್ಮಿಕ ತಾರತಮ್ಯವನ್ನು ಅತೀ ದೊಡ್ಡ ಸಮಸ್ಯೆಯಾಗಿ ನೋಡಿದರೆ, 69% ಜನರು ಜಾತಿ ಮತ್ತು ಜನಾಂಗೀಯ ತಾರತಮ್ಯವನ್ನು ಒಂದು ಸಮಸ್ಯೆ ಎಂದು ನಂಬಿದ್ದರು

ಬೆಂಗಳೂರು: ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ತುಂಬಾ ಹೆಚ್ಚಿದೆ ಎಂದು ಬಹುಪಾಲು ಭಾರತೀಯರು ನಂಬಿದ್ದಾರೆ ಎಂದು ಪ್ಯೂ ಸಂಶೋಧನಾ ಕೇಂದ್ರದ (Pew Research Center) ಇತ್ತೀಚಿನ ಸಮೀಕ್ಷೆ ಬಹಿರಂಗಪಡಿಸಿದೆ. ಸರಿಸುಮಾರು 81% ಪ್ರತಿಕ್ರಿಯಿಸಿದವರು ಆರ್ಥಿಕ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, 64% ಜನರು ಇದನ್ನು “ಬಹಳ ದೊಡ್ಡ ಸಮಸ್ಯೆ” ಎಂದು ಪರಿಗಣಿಸಿದ್ದಾರೆ.

ಜನವರಿ 9, ಗುರುವಾರ , ಏಷ್ಯಾ-ಪೆಸಿಫಿಕ್ ಪ್ರದೇಶ, ಯುರೋಪ್, ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ, ಉತ್ತರ ಅಮೇರಿಕಾ ಮತ್ತು ಸಬ್-ಸಹಾರನ್ ಆಫ್ರಿಕಾದಲ್ಲಿ ನಡೆಸಿರುವ ಸಮೀಕ್ಷೆಯ ಆಧಾರದ ಮೇಲೆ ಪ್ಯೂ ಸಂಶೋಧನಾ ಕೇಂದ್ರವು ತನ್ನ ವರದಿಯನ್ನು ಪ್ರಕಟಿಸಿ, “ವಿಶ್ವದಾದ್ಯಂತ ಆರ್ಥಿಕ ಅಸಮಾನತೆ ಪ್ರಮುಖ ಸವಾಲಾಗಿ ಕಂಡುಬರುತ್ತಿದೆ,” ಎಂದು ಹೇಳಿದೆ.

ಭಾರತದಲ್ಲಿ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರವು ದೇಶದಲ್ಲಿರುವ ಒಂದು ಸಮಸ್ಯೆಯಾಗಿದೆ ಎಂದು 81% ರಷ್ಟು ಜನರು ಒತ್ತಿಹೇಳಿದರೆ, ಸಮೀಕ್ಷೆಯಲ್ಲಿ ಭಾಗವಹಿಸಿದ 39% ಜನರು ಆರ್ಥಿಕ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆ ತರುವ ಅಗತ್ಯವಿದೆ ಎಂದು ಒತ್ತಿಹೇಳಿದ್ದಾರೆ ಮತ್ತು 34% ಜನರು ಪ್ರಮುಖ ಬದಲಾವಣೆಗಳನ್ನು ಸೂಚಿಸಿದ್ದಾರೆ.

ಈ ಅಸಮಾನತೆಗೆ ಕಾರಣವೇನು ಎಂದು ಕೇಳಿದಾಗ, ಪ್ರಪಂಚದಾದ್ಯಂತ ಸಮೀಕ್ಷೆ ನಡೆಸಿದ ಹೆಚ್ಚಿನ ಜನರು ಸಂಪತ್ತು ಮತ್ತು ರಾಜಕೀಯ ಪರಸ್ಪರ ಒಂದಾಗುವುದು ಎಂದು  ಸೂಚಿಸಿದ್ದಾರೆ.

ವರದಿ ಓದಲು: Economic Inequality Seen as Major Challenge Around the World

“ಸಮೀಕ್ಷೆಗೆ ಒಳಗಾದ ರಾಷ್ಟ್ರಗಳಾದ್ಯಂತ 54% ವಯಸ್ಕರ ಸರಾಸರಿಯು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವು ತಮ್ಮ ದೇಶದಲ್ಲಿ ಬಹಳ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳುತ್ತಾರೆ. ಉಳಿದ 30% ಇದು ಮಧ್ಯಮ ದೊಡ್ಡ ಸಮಸ್ಯೆ ಎಂದು ಹೇಳುತ್ತಾರೆ,” ಎಂದು ವರದಿ ಹೇಳುತ್ತದೆ.

“ಹೆಚ್ಚು ರಾಜಕೀಯ ಪ್ರಭಾವವನ್ನು ಹೊಂದಿರುವ ಶ್ರೀಮಂತರು ಆರ್ಥಿಕ ಅಸಮಾನತೆಗೆ ದೊಡ್ಡ ಕಾರಣ ಎಂದು ಸರಾಸರಿ 60% ರ ನಂಬುತ್ತಾರೆ,” ಎಂದು ವರದಿ ಹೇಳಿದೆ.

ಆರ್ಥಿಕ ಅಸಮಾನತೆಯ ವಿಷಯದಲ್ಲಿ, ಶ್ರೀಮಂತರ ರಾಜಕೀಯ ಪ್ರಭಾವ (79%), ಯಾಂತ್ರೀಕರಣ (73%), ಶಿಕ್ಷಣ ವ್ಯವಸ್ಥೆ (72%) ಮತ್ತು ಜನಾಂಗೀಯ ಅಥವಾ ಜಾತಿ ತಾರತಮ್ಯ (56%) ಸೇರಿದಂತೆ ವಿವಿಧ ಅಂಶಗಳು ಸಂಪತ್ತಿನ ಅಸಮಾನ ಹಂಚಿಕೆಗೆ ಕಾರಣವೆಂದು ಭಾರತೀಯರು ಹೇಳಿದ್ದಾರೆ. ಇದಲ್ಲದೆ, ಹುಟ್ಟುವಾಗ ಸಿಗುವ ವಿಭಿನ್ನ ಅವಕಾಶಗಳು ಆರ್ಥಿಕ ಅಸಮಾನತೆಗೆ ಕಾರಣವಾಗುತ್ತವೆ ಎಂದು 65% ಒಪ್ಪಿಕೊಂಡಿದ್ದಾರೆ.

71% ಭಾರತೀಯರು ಧಾರ್ಮಿಕ ತಾರತಮ್ಯವನ್ನು ಗಂಭೀರ ಸಮಸ್ಯೆಯಾಗಿ ನೋಡುತ್ತಾರೆ

ಅಮೇರಿಕಾದಲ್ಲಿ 3,600 ಸೇರಿದಂತೆ 36 ದೇಶಗಳಲ್ಲಿ 41,503 ಜನರನ್ನು ಸಮೀಕ್ಷೆಗೆ ಒಳಪಡಿಸಿದ ಸಮೀಕ್ಷೆಯು ಭಾರತೀಯರು ಧಾರ್ಮಿಕ ಮತ್ತು ಜಾತಿ ತಾರತಮ್ಯದಿಂದ ತೀವ್ರವಾಗಿ ತೊಂದರೆಗೀಡಾಗಿದ್ದಾರೆ ಎಂದು ಕಂಡುಹಿಡಿದಿದೆ.

ಸಮೀಕ್ಷೆಗೆ ಪ್ರತಿಕ್ರಿಯಿಸಿದ ಸುಮಾರು 71% ಭಾರತೀಯ ಧಾರ್ಮಿಕ ತಾರತಮ್ಯವನ್ನು ಮಹತ್ವದ ವಿಷಯವೆಂದು ಪರಿಗಣಿಸಿದ್ದಾರೆ (57% ಇದನ್ನು ಬಹಳ ದೊಡ್ಡದಾಗಿದೆ ಮತ್ತು 14% ಮಧ್ಯಮ ದೊಡ್ಡ ಸಮಸ್ಯೆ ಎಂದು ಪರಿಗಣಿಸಿದ್ದಾರೆ), ಆದರೆ 69% ಜನರು ಜಾತಿ ಮತ್ತು ಜನಾಂಗೀಯ ತಾರತಮ್ಯ ಒಂದು ಸಮಸ್ಯೆಯಾಗಿತ್ತು ಎಂದು ನಂಬಿದ್ದಾರೆ.

ಸಮೀಕ್ಷೆ ನಡೆದ ದೇಶಗಳಾದ್ಯಂತ ಸರಾಸರಿ 29% ವಯಸ್ಕರು ಧಾರ್ಮಿಕ ತಾರತಮ್ಯವು “ಬಹಳ ದೊಡ್ಡ ಸಮಸ್ಯೆ” ಹೇಳಿದ್ದಾರೆ.

ಶೋಷಣೆ ಅಸಮಾನತೆ ವಿರುದ್ಧ, ಜಾತಿ ಧರ್ಮಗಳ ವಿರುದ್ಧ ಪ್ರಶ್ನೆ ಮಾಡಲು ಹುಟ್ಟಿದ್ದೆ ದಲಿತ ಚಳುವಳಿ – ಮಾವಳ್ಳಿ ಶಂಕರ್
ನಗರದ ಸ್ವಾಭಿಮಾನ ಭವನದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ದ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆ ಹಾಗೂ ಜಿಲ್ಲಾ ಸಮಿತಿ ಪುನರ್ ರಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದು ಒದಗಿದೆ ಒಂದು ಕಡೆ ಸಂವಿಧಾನ ಮತ್ತೊಂದು ಕಡೆ ಅಲಿಖಿತ ಸಂವಿಧಾನ ಇದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಇದ್ದರೂ ಸಹ ಧಾರ್ಮಿಕ ಭಯೋತ್ಪಾದನೆ ಅಂತಹ ಅಲಿಖಿತ ಸಂವಿಧಾನಗಳು ದಾಳಿ ಮಾಡಿ ನಮ್ಮನ್ನು ಕುಗ್ಗಿಸುವಂತೆ ಮಾಡುತ್ತಿದೆ ಎಂದರೂ.

ವೈದಿಕ ಕೋಮುವಾದಿಗಳು ಹೆಚ್ಚಾಗುತ್ತಿದ್ದು ಸಂವಿಧಾನ ಪ್ರಜಾಪ್ರಭುತ್ವದ ಬಗ್ಗೆ ಸಂಪೂರ್ಣವಾಗಿ ನಾಶ ಮಾಡುವ ಕ್ರಿಯೆಯಲ್ಲಿ ಅವರು ತೊಡಗಿದ್ದಾರೆ ಈ ಬಗ್ಗೆ ಪ್ರತಿಯೊಂದು ಶೋಷಿತ ಸಮಾಜ ಅರಿತು ಅದರ ವಿರುದ್ಧ ಧನಿಯತ್ತಬೇಕು ಎಂದು ಕರೆ ನೀಡಿದರು.

ಒಂದು ಕಡೆ ಅಸಮಾನತೆ ಅಘಧವಾಗಿ ನಮ್ಮನ್ನು ಕಾಡುತ್ತಿದೆ. ಇನ್ನೊಂದು ಕಡೆ ದೇಶದ ಸಂಪತ್ತು ಕೆಲವೇ ಜನರ ಕಪಿಮುಷ್ಠಿಯಲ್ಲಿ ಸಿಲುಕಿ ಕೊಂಡಿದೆ. ಕೆಲವೇ ಕುಟುಂಬಗಳು ದೇಶದ ಸಂಪತ್ತನ್ನು ಲೂಟಿ ಮಾಡುತ್ತೇವೆ ಕೇಂದ್ರ ಸರಕಾರ ಅವರ ಪರ ನೀತಿಗಳನ್ನು ಜಾರಿ ಮಾಡಿದೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ದೇಶ ಸಾಧಿಸುವ ಸಾಧನೆ ಸಂಪೂರ್ಣವಾಗಿ ಹಿನ್ನಡೆ ತಲುಪಿದೆ ಎಂಬುದನ್ನು ನಾವು ಸೂಚ್ಯಂಕಗಳ ಮೂಲಕ ಗಮನಿಸಬಹುದು. ಇವತ್ತಿನ ದಿನಗಳಲ್ಲಿ ಬಡತನ ಅತ್ಯಂತ ಕೆಳಮಟ್ಟಕ್ಕೆ ತಲುಪುತ್ತಿದೆ ಶಿಕ್ಷಣ ಕೈ ಎಟುಗದ ರೀತಿಯಲ್ಲಿ ನಡೆಯುತ್ತಿದ್ದು ಮಹಿಳೆಯರ ಮೇಲಿನ ದೌರ್ಜನ್ಯಗಳು ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ ತೀವ್ರವಾಗಿ ನಡೆಯುತ್ತಿದೆ ಎಂದರು.

ಹಾಗಾಗಿ ಪ್ರತಿಯೊಬ್ಬ ಹಿಂದುಳಿದ ಸಮುದಾಯಗಳು, ಮಹಿಳೆಯರು, ಬಡತನದಲ್ಲಿರುವ ಮಕ್ಕಳು ಕೈಜೋಡಿಸಿ ಸಂಘಟನೆಯನ್ನು ಕಟ್ಟುವ ಮೂಲಕ ಸಮಸ್ಯೆಗಳನ್ನು ಎದುರಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಅಂತರ್ರಾಷ್ಟ್ರೀಯ ಚಿತ್ರ ಕಲಾವಿದ ಕೆ ಟಿ ಶಿವಪ್ರಸಾದ್, ಡಿಎಸ್ಎಸ್ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಬೇಲೂರು ಲಕ್ಷ್ಮಣ್, ವಿಭಜಿಯ ಸಂಚಾಲಕ ಆಲೇಶಪ್ಪ, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ಸುಮದುದ್ದ, ಡಾಕ್ಟರ್ ಕೃಷ್ಣ ಹತ್ನಿ, ಮಲ್ಲಿಗೆವಾಳುದೇವಪ್ಪ ಇತರರು ಹಾಜರಿದ್ದರು.