Infosys – Peepal Media

ರಾತ್ರೋರಾತ್ರಿ ಟ್ರೇನಿಗಳನ್ನು ಹೊರ ಹಾಕಿದ ಐಟಿ ದೈತ್ಯ ಇನ್ಫೋಸಿಸ್ ವಿರುದ್ಧ ತೀವ್ರ ಆಕ್ರೋಶ
ಮೈಸೂರು : ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ ಎಂದು ಮೈಸೂರಿನ ಕ್ಯಾಂಪಸ್‌ನಲ್ಲಿ ಸುಮಾರು 400 ಟ್ರೇನಿಗಳನ್ನು ಏಕಾಏಕಿ ವಜಾಗೊಳಿಸಿ, ರಾತ್ರೋರಾತ್ರಿ ಹೊರಹಾಕಿದ ಐಟಿ ದೈತ್ಯ ಇನ್ಫೋಸಿಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಂಪನಿಯು ಟ್ರೇನಿಗಳನ್ನು ವಜಾಗೊಳಿಸಿದ ದಿನವೇ ಅವರನ್ನು ಬಲವಂತವಾಗಿ ಕ್ಯಾಂಪಸ್ ನಿಂದ ಹೊರಹಾಕಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ. ಇವತ್ತು ಒಂದು ರಾತ್ರಿಯ ಉಳಿದುಕೊಳ್ಳಲು ಅವಕಾಶ ನೀಡಿ ಎಂಬ ಟ್ರೇನಿಗಳ ಮನವಿಯನ್ನು ಕಂಪನಿ ನಿರಾಕರಿಸಿದೆ ಎಂದು ಫೆಬ್ರವರಿ 7 ರಂದು ವಜಾಗೊಂಡ ಟ್ರೇನಿಗಳ ಸಂಕಷ್ಟವನ್ನು ಮನಿ ಕಂಟ್ರೋಲ್ ವರದಿ ವಿವರಿಸಿದೆ.

ವಜಾಗೊಳಿಸಿದ ಟ್ರೇನಿಗಳಲ್ಲಿ ಒಬ್ಬರಾದ ಮಧ್ಯಪ್ರದೇಶದ ಮಹಿಳೆಯೊಬ್ಬರು “ದಯವಿಟ್ಟು ನನಗೆ ಒಂದು ರಾತ್ರಿ ಉಳಿಯಲು ಅವಕಾಶ ನೀಡಿ, ನಾನು ನಾಳೆ ಹೊರಡುತ್ತೇನೆ. ನಾನು ಈಗ ಎಲ್ಲಿಗೆ ಹೋಗಬೇಕು?” ಎಂದು ಕಣ್ಣೀರು ಹಾಕಿದರೂ ಅಧಿಕಾರಿಗಳು ಕೇಳಲಿಲ್ಲ ಎಂದು ವರದಿ ತಿಳಿಸಿದೆ.”ನಮಗೆ ಗೊತ್ತಿಲ್ಲ. ನೀವು ಇನ್ನು ಮುಂದೆ ಕಂಪನಿಯ ಭಾಗವಲ್ಲ. ಸಂಜೆ 6 ಗಂಟೆಯೊಳಗೆ ಕ್ಯಾಂಪಸ್ ಖಾಲಿ ಮಾಡಬೇಕು” ಎಂದು ಅಧಿಕಾರಿ ಹೇಳಿದ್ದಾರೆ.

ಮೌಲ್ಯಮಾಪನ ಪರೀಕ್ಷೆಗಳಲ್ಲಿ ಮೂರು ಬಾರಿ ಅನುತ್ತೀರ್ಣರಾದ ನಂತರ ಟ್ರೇನಿಗಳ ಮೇಲೆ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮನಿ ಕಂಟ್ರೋಲ್‌ ವರದಿ ಮಾಡಿದೆ. ಮನಿ ಕಂಟ್ರೋಲ್ ಪ್ರಕಾರ, ಸುಮಾರು 50 ಮಂದಿಯ ಬ್ಯಾಚ್‌ಗಳಲ್ಲಿ ತರಬೇತಿ ಪಡೆದವರನ್ನು ಕರೆಯಲಾಗುತ್ತಿದ್ದು, ಪರಸ್ಪರ ಬೇರ್ಪಡಿಕೆ ಪತ್ರಗಳಿಗೆ(ಮ್ಯೂಚುವಲ್‌ ಸಪರೇಷನ್‌ ಲೆಟರ್‌) ಸಹಿ ಹಾಕುವಂತೆ ಮಾಡಲಾಗುತ್ತಿದೆ. ಕಂಪನಿಯು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿಯ ಮೂಲಕ ಬೆದರಿಕೆ ಹಾಕಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇನ್ಫೋಸಿಸ್‌, “ಸಂಸ್ಥೆಯಲ್ಲಿ ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ನಾವು ಹೊಂದಿದ್ದೇವೆ. ನಮ್ಮ ಮೈಸೂರು ಕ್ಯಾಂಪಸ್‌ನಲ್ಲಿ ಪ್ರಾಥಮಿಕ ತರಬೇತಿ ಪಡೆದ ನಂತರ ಎಲ್ಲಾ ಹೊಸಬರು ಆಂತರಿಕ ಮೌಲ್ಯಮಾಪನಗಳಲ್ಲಿ ಉತ್ತೀರ್ಣರಾಗಬೇಕು. ಎಲ್ಲಾ ಹೊಸಬರಿಗೆ ಇದರಲ್ಲಿ ಉತ್ತೀರ್ಣರಾಗಲು ಮೂರು ಅವಕಾಶಗಳನ್ನು ನೀಡಲಾಗುತ್ತದೆ. ಇದರಲ್ಲಿ ವಿಫಲವಾದಲ್ಲಿ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ಅವರ ಜೊತೆಗಿನ ಒಪ್ಪಂದದಲ್ಲಿಯೂ ಇದನ್ನು ಉಲ್ಲೇಖಿಸಲಾಗಿರುತ್ತದೆ. ಈ ಪ್ರಕ್ರಿಯೆ ಎರಡು ದಶಕಗಳಿಂದಲೂ ಚಾಲ್ತಿಯಲ್ಲಿದೆ. ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪ್ರತಿಭೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಯನ್ನು ಹೊಂದಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ

“ಯುವಕರೇ, ವಾರಕ್ಕೆ 70 ಗಂಟೆ ದುಡಿಯಿರಿ!”: ಇನ್ಫೀ ನಾರಾಯಣ ಮೂರ್ತಿಗೆ ನೆಟ್ಟಿಗರ ತರಾಟೆ
ಬೆಂಗಳೂರು,ಅಕ್ಟೋಬರ್‌.27: ಇನ್ಫೋಸಿಸ್ ನಾರಾಯಣ ಮೂರ್ತಿಯವರು ಭಾರತದ ವರ್ಕ್‌ ಕಲ್ಚರ್‌ ಬಗ್ಗೆ ಆಡಿರುವ ಮಾತು ಸದ್ಯ ಭಾರೀ ಚರ್ಚೆಯಲ್ಲಿದೆ. ಕೆಲಸದಲ್ಲಿನ ಉತ್ಪಾದಕತೆಯಲ್ಲಿ ಜಾಗತಿಕವಾಗಿ ಭಾರತದ ಸ್ಥಾನ ಹಿಂದುಳಿದಿದೆ ಎನ್ನುತ್ತಾ “ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು” ಎಂದು ಹೇಳಿದ್ದಾರೆ.

3one4 ಕ್ಯಾಪಿಟಲ್‌ನ ಪಾಡ್‌ಕಾಸ್ಟ್ ‘ದಿ ರೆಕಾರ್ಡ್’ ನ ಉದ್ಘಾಟನೆಯಲ್ಲಿ ಮಾತನಾಡುತ್ತಾ ನಾರಾಯಣ ಮೂರ್ತಿ, ರಾಷ್ಟ್ರದ ವರ್ಕಿಂಗ್‌ ಕಲ್ಚರ್‌ನ ಉತ್ಪಾದಕತೆಯನ್ನು ಹೆಚ್ಚಸಿ, ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸಲು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ನಾವು ಸಿದ್ಧರಾಗಿರಬೇಕು ಎಂದು ಭಾರತದ ಯುವಕರಿಗೆ ʼಕರೆʼ ನೀಡಿದ್ದಾರೆ.

ತಮ್ಮ ಚರ್ಚೆಯಲ್ಲಿ ಅವರು ಭಾರತದ ಕೆಲಸದ ಸಂಸ್ಕೃತಿಯನ್ನು ಚೀನಾ, ಜಪಾನ್ ಮತ್ತು ಜರ್ಮನಿಯಂತಹ ದೇಶಗಳಿಗೆ ಹೋಲಿಸಿ, ಹೆಚ್ಚಿನ ಕೆಲಸದ ಸಮಯ ಮತ್ತು ಸಮರ್ಪಣಾ ಭಾವವನ್ನು ಬೆಳೆಸುವ ಮೂಲಕ ಜಪಾನ್ ಮತ್ತು ಜರ್ಮನಿ ಎರಡನೇ ಮಹಾಯುದ್ಧದ ನಂತರದ ಗಮನಾರ್ಹ ಆರ್ಥಿಕ ಚೇತರಿಕೆಗಳನ್ನು ಕಂಡಿದೆ ಎಂದು ಅವರು ಹೇಳಿದ್ದಾರೆ. ಈ ದೇಶಗಳಿಂದ ಸ್ಪೂರ್ತಿ ಪಡೆಯುವಂತೆ ಯುವಕರಿಗೆ ಸಲಹೆ ನೀಡಿದ್ದಾರೆ.

‘ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ.’ ಎಂದು ನಮ್ಮ ಯುವಕರು ಹೇಳಬೇಕು. – ನಾರಾಯಣ ಮೂರ್ತಿ

ನಾರಾಯಣ ಮೂರ್ತಿಯವರ ಈ ಮಾತು ಇಂಟರ್ನೆಟ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಇವರ ಈ ಮಾತುಗಳು “ವಿಷಕಾರಿ ದುಡಿಮೆಯ ಸಂಸ್ಕೃತಿಗೆ” ಕಾರಣವಾಗಬಹುದು ಎಂದು ಟೀಕಿಸಿದ್ದಾರೆ. ಈ ರೀತಿಯ ವರ್ಕಿಂಗ್‌ ಕಲ್ಚರ್‌ ಬೆಳೆಸುವುದರಿಂದ ಅತಿಯಾದ ಒತ್ತಡದ ಕೆಲಸ ಹಾಗೂ ಕಡಿಮೆ ವೇತನಕ್ಕೆ ಕಾರಣವಾಗಬಹುದು ಎಂದು ವಿಮರ್ಶಿಸಿದ್ದಾರೆ.

ಈ ರೀತಿಯ ಒತ್ತಡದ ವರ್ಕಿಂಗ್‌ ಕಲ್ಚರ್‌ನಿಂದಾಗಿ ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಅಸಮತೋಲನ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ನಾರಾಯಣ ಮೂರ್ತಿಯವರ ಅಭಿಪ್ರಾಯವನ್ನು ಟೀಕಿಸುತ್ತಾ  ಹಾಸ್ಯನಟ ವೀರ್ ದಾಸ್ ತಮ್ಮ X ನಲ್ಲಿ “ನೀವು ವಾರಕ್ಕೆ 70 ಗಂಟೆಗಳು, ವಾರದಲ್ಲಿ 5 ದಿನಗಳು, ಬೆಳಿಗ್ಗೆ 9 ರಿಂದ ರಾತ್ರಿ 11 ರವರೆಗೆ ಕೆಲಸ ಮಾಡುತ್ತಿದ್ದರೆ, ನೀವು ಮನೆಗೆ 12.30 ಗಂಟೆಗೆ ಹೋಗುತ್ತೀರಾ? ವಾಪಾಸ್‌ ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಡುತ್ತೀರಾ? ನಿಮ್ಮ ಬಾಸಿನ ಆಫೀಸಿನಲ್ಲಿ ಹೂಸು ಬಿಡಲೂ ಅನುಮತಿ ಸಿಗಬೇಕು. ಟೈಮ್‌ ಕಮಿಟ್‌ಮೆಂಟ್‌ ಕೇಳಲು ಹೋದರೆ, ನಿಮಗೆ ಇಂಟಿಮಸಿ ಕೂಡ ಸಿಗಬೇಕು” ಎಂದು ಹಾಸ್ಯಭರಿತವಾಗಿ ಪೋಸ್ಟ್‌ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಏನೇನು ಚರ್ಚೆಗಳಾಗಿವೆ ಎಂಬುದನ್ನು ಇಲ್ಲಿ ನೋಡಿ…