iran – Peepal Media

ಇರಾನ್ ವಿರುದ್ಧ ಅಮೆರಿಕಾ-ಇಸ್ರೇಲ್ ಯುದ್ಧ: ಯುದ್ಧ ಗೆದ್ದರೂ ಕಾರ್ಯತಂತ್ರ ಸೋಲಬಹುದು!
ರಾಜತಾಂತ್ರಿಕತೆಯ ಬದಲು ಬಾಂಬ್‌ಗಳನ್ನು ಆರಿಸಿಕೊಳ್ಳುವ ಮೂಲಕ, ಡೊನಾಲ್ಡ್ ಟ್ರಂಪ್ ಇಸ್ರೇಲ್‌ಗೆ ಅಲ್ಪಾವಧಿಯ ಗೆಲುವನ್ನು ನೀಡಿದ್ದಾರೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ವಿಚಾರದಲ್ಲಿ ದಶಕಗಳಿಂದ ಜಾಗತಿಕವಾಗಿ ಕಾಯ್ದುಕೊಂಡು ಬಂದಿದ್ದ ಸಂಯಮಕ್ಕೆ ಬೆಂಕಿ ಹಚ್ಚಿದ್ದಾರೆ - ಇದು ಮಧ್ಯಪ್ರಾಚ್ಯ ಮತ್ತು ಜಗತ್ತನ್ನು ವರ್ಷಗಳ ಕಾಲ ಕಾಡಬಹುದಾದ ಅಜಾಗರೂಕ ಕೃತ್ಯ - ಲೇಖಕ: ಮನೋಜ್‌ ಜೋಶಿ

“ನಾನು ಅದನ್ನು ಮಾಡಲೂ ಬಹುದು, ಮಾಡದಿರಲೂ ಬಹುದು.. ನಾನು ಏನು ಮಾಡಲಿದ್ದೇನೆಂದು ಎಂಬುದು ಯಾರಿಗೂ ತಿಳಿದಿಲ್ಲ,” ಎಂದು ಡೊನಾಲ್ಡ್ ಟ್ರಂಪ್ ಬುಧವಾರ ಇರಾನ್ ಮೇಲಿನ ಇಸ್ರೇಲಿ ದಾಳಿಗೆ ಸಂಬಂಧಿಸಿದ ವಿಚಾರದ ಬಗ್ಗೆ ಹೇಳಿದ್ದರು. ಮರುದಿನ ಶ್ವೇತಭವನದ ಅಧಿಕೃತ ವಕ್ತಾರರು ಅಮೆರಿಕದ ಅಧ್ಯಕ್ಷರು ಎರಡು ವಾರಗಳಲ್ಲಿ ಎಲ್ಲವನ್ನೂ ನಿರ್ಧರಿಸುತ್ತಾರೆ ಎಂದು ಹೇಳಿದರು. ಆದರೆ ಕೊನೆಯಲ್ಲಿ, ದಾಳಿ ಮಾಡುವ ನಿರ್ಧಾರವು ಕೇವಲ ಮೂರು ದಿನಗಳಲ್ಲಿ, ಅಂದರೆ ಶನಿವಾರದಂದು ಮಾಡಲಾಯಿತು. ಇದಕ್ಕಿಂತ ಹಿಂದೆ ನೀಡಿದ ಆ ಎಲ್ಲಾ ಹೇಳಿಕೆಗಳು ಬಹುಶಃ ವಂಚನೆ ಯೋಜನೆಯ ಭಾಗವಾಗಿರಬಹುದು.

ವಾಸ್ತವವಾಗಿ ಇರಾನ್ ಜೊತೆಗಿನ ಯುದ್ಧವು ಇಸ್ರೇಲ್ ಮತ್ತು ಅಮೆರಿಕಾದ ಜಂಟಿ ಉದ್ಯಮವಾಗಿದೆ ಎಂಬುದನ್ನು ನಂಬಲು ನಮ್ಮಲ್ಲಿ ಒಳ್ಳೆಯ ಕಾರಣಗಳಿವೆ. ಆರಂಭದಿಂದಲೂ, ಇರಾನಿನ ಕ್ಷಿಪಣಿಗಳ ದಾಳಿಯಿಂದ ಇಸ್ರೇಲ್ ಅನ್ನು ರಕ್ಷಿಸಲು ಅಮೆರಿಕದ ಕ್ಷಿಪಣಿ ವಿರೋಧಿ ವ್ಯವಸ್ಥೆಗಳನ್ನು ಬಳಸಲಾಗುತ್ತಿತ್ತು. ಇರಾನ್ ಮೇಲಿನ ದಾಳಿಗಳಿಗೆ ಇಸ್ರೇಲ್‌ಗೆ ಅಮೆರಿಕದ ಗುಪ್ತಚರ ಸಹಾಯ ಮಾಡಿತು. ಈಗ ಇಸ್ರೇಲಿಗಳು ಪ್ರಾರಂಭಿಸಿದ ಕೃತ್ಯವನ್ನು “ಕೊನೆಗೊಳಿಸಲು” ಅಮೆರಿಕದ ವಿಮಾನಗಳು ಇರಾನಿನ ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿವೆ.

ಸಮಸ್ಯೆಯೆಂದರೆ “ಕೆಲಸವನ್ನು ಮುಗಿಸುವುದು” ಹೆಚ್ಚಿನ ಜನರು ಊಹಿಸುವುದಕ್ಕಿಂತ ದೀರ್ಘವಾದ ಪ್ರಕ್ರಿಯೆಯಾಗಿರಬಹುದು. ಅಮೆರಿಕದ ದಾಳಿಯು ಇರಾನ್ ತಾನು ಒಪ್ಪಿಕೊಂಡಿರುವ ಪರಮಾಣು ಪ್ರಸರಣ ನಿಷೇಧ ಒಪ್ಪಂದವನ್ನು (Nuclear Non-proliferation Treaty) ಕೈಬಿಡಲು ಮತ್ತು ಇರಾನಿನ ಪರಮಾಣು ಸಾಮರ್ಥ್ಯದ ಮೇಲೆ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮೇಲ್ವಿಚಾರಣೆಯನ್ನು ತೆಗೆದುಹಾಕಲು ಕಾರಣವಾಗಬಹುದು.

ಇತ್ತೀಚಿನ ವರ್ಷಗಳಲ್ಲಿ ಇರಾನ್ ಕೆಲವು ಅತಿ-ಸುರಕ್ಷಿತ ತಾಣಗಳನ್ನು (ultra-secure sites) ನಿರ್ಮಿಸಿದೆ ಮತ್ತು ಅದರ ಪರಮಾಣು ಸಾಮರ್ಥ್ಯಗಳನ್ನು ಬೇರೆ ಬೇರೆ ಕಡೆಗಳಲ್ಲಿ ಕಟ್ಟಿಕೊಂಡಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆ ದೇಶವು ಇಲ್ಲಿಯವರೆಗೆ ಹೊಂದಿದ್ದ ಸುರಕ್ಷಿತ ಪರಮಾಣು ವಸ್ತುಗಳ ಪ್ರಮಾಣವಾದ 60% ಪುಷ್ಟೀಕರಿಸಿದ ಯುರೇನಿಯಂನ (enriched uranium) 400 ಕೆಜಿಯನ್ನು ಡಜನ್‌ಗಿಂತ ಹೆಚ್ಚಿನ ತಾಣಗಳಿಗೆ ಹಂಚುವುದು ತುಂಬಾ ಕಷ್ಟದ ಕೆಲಸವಲ್ಲ.

ಇದನ್ನು ಎದುರಿಸಲು ಅಮೆರಿಕನ್ನರಿಗೆ ಇರುವ ದಾರಿಯೆಂದರೆ ಆಕ್ರಮಣ, ರಹಸ್ಯ ತಾಣಗಳೆಂದು ಹೇಳಲಾಗುವ ಘಟಕಗಳ ಮೇಲೆ ಬಾಂಬ್ ದಾಳಿ ನಡೆಸುವುದು.

ಇದರ ಪರಿಣಾಮ ಇನ್ನೂ ಕೆಟ್ಟದಾಗಿರುತ್ತದೆ, ಇರಾನ್ ಅಂತಿಮವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ರೂಪಿಸಲು ಕಾರಣವಾಗಬಹುದು. ಇದು ಊಹಿಸಲೂ ಅಸಾಧ್ಯವಾದ ಭಯಾನಕ ಪರಿಣಾಮಗಳಿಗೆ ಕಾರಣವಾಗಬಹುದು.

ಮತ್ತೊಂದೆಡೆ, ಇರಾನ್ ಮತ್ತೆ ವಿಷದ ಪಾತ್ರೆಯನ್ನೇ ನುಂಗಿ ಶಾಂತಿಗಾಗಿ ಮೊಕದ್ದಮೆ ಹೂಡಲು ನಿರ್ಧರಿಸಬಹುದು ಮತ್ತು ಇರಾನ್ ಮೇಲಿನ ಇಸ್ರೇಲ್-ಅಮೆರಿಕನ್ ಯುದ್ಧವು ಕೊನೆಗೊಳ್ಳಬಹುದು. ಆದರೆ ಆಳವಾಗಿ ಹಾನಿ ಆಗಿಯೇ ಆಗಿರುತ್ತದೆ. ಇರಾನಿಯನ್ನರು ತಮ್ಮ ಮೇಲೆ ದಾಳಿ ಮಾಡಿದ ದೇಶಗಳನ್ನು ನಂಬುವುದಿಲ್ಲ; ಹಾಗೆಯೇ, ಇಸ್ರೇಲ್ ಹೆಚ್ಚಾಗಿ ಅಖಂಡವಾಗಿರುವ ದೇಶವನ್ನು ನಂಬುವುದಿಲ್ಲ. ಇಸ್ರೇಲ್ ಬಯಸುವ ಶಾಂತಿ ಎಂದರೆ ಇರಾನ್‌ನ ಕೈಕಾಲುಗಳನ್ನು ಶಾಶ್ವತವಾಗಿ ಕಟ್ಟಿ ಹಾಕುವುದು. ಇರಾನಿನ ಜನರಿಗೆ ಇದು ಬೇಕೇ ಎಂಬುದು ಬೇರೆ ವಿಷಯ. ವಾಸ್ತವವಾಗಿ, ಯುಎಸ್ ಮತ್ತು ಇಸ್ರೇಲಿಗಳು ಇದನ್ನು ಮಾಡಲು ಸಮರ್ಥರಾಗಿದ್ದಾರೆಯೇ ಎಂಬುದು ಕೂಡ ಪ್ರಶ್ನಾರ್ಹವಾಗಿದೆ.

ಹಿಂದಿರುಗಿ ಒಮ್ಮೆ ನೋಡಿದರೆ, ಇರಾನ್ ತನ್ನಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುವ ಹಕ್ಕನ್ನು ಕೈಬಿಡುವುದಕ್ಕೆ ಸಿದ್ಧವಾಗಿಲ್ಲ ಎಂಬುದು ಸ್ಪಷ್ಟವಾದ ಕ್ಷಣದಿಂದ ಇಸ್ರೇಲ್‌ ಮತ್ತು ಅಮೆರಿಕ ಜಂಟಿಯಾಗಿ ತಮ್ಮ ಯೋಜನೆಯನ್ನು ಹಾಕಿಕೊಂಡವು. 2015 ರ P5+1 ರ ಜಂಟಿ ಸಮಗ್ರ ಕ್ರಿಯಾ ಯೋಜನೆ ಒಪ್ಪಂದವು (Joint Comprehensive Plan of Action agreement) ನಿಗದಿಪಡಿಸಿದ ಮಿತಿಯಂತೆ, ಇರಾನ್ 3.67% ಮಾತ್ರ ಪರಮಾಣು ಪುಷ್ಟೀಕರಣವನ್ನು ಮಾಡುವುದಕ್ಕೆ ರಾಜಿ ಮಾಡಿಕೊಂಡಿತ್ತು. 2018 ರಲ್ಲಿ ಟ್ರಂಪ್ JCPOA ಯಿಂದ ಹಿಂದೆ ಸರಿಯುವವರೆಗೂ ಇರಾನ್ ತಾನು ಒಪ್ಪಿಕೊಂಡಿದ್ದ ರಾಜಿಯನ್ನು ಪಾಲಿಸಿಕೊಂಡು ಬಂದಿತ್ತು.

ಒಂದು ಕಡೆ ಅಮೆರಿಕ ಯುದ್ಧಕ್ಕೆ ನಿರ್ಧರಿಸಿ, ಇನ್ನೊಂದು ಕಡೆ ಇರಾನಿಯನ್ನರೊಂದಿಗೆ ಮಾತುಕತೆ ಮುಂದುವರಿಸುವುದಾಗಿ ಕಟ್ಟುಕಥೆ ಕಟ್ಟಿ ನಟಿಸುತ್ತಾ ಬಂದಿದೆ. ಮೇ ತಿಂಗಳ ಅಂತ್ಯದಲ್ಲಿ, ಅಮೇರಿಕಾ ಇರಾನ್‌ನ ಹೊರಗೆ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುವ ಪ್ರಾದೇಶಿಕ ಒಕ್ಕೂಟವನ್ನು ರಚಿಸುವ ಪ್ರಸ್ತಾಪವನ್ನು ಇರಾನ್‌ನ ಮುಂದೆ ಇಟ್ಟಿತ್ತು, ಆದರೆ ಈ ಪ್ರಸ್ತಾಪವು ಇರಾನ್ ಒಪ್ಪಲಿಲ್ಲ. ಆದರೆ ಜೂನ್ 13 ರಂದು ಇಸ್ರೇಲಿಗಳು ಅಮೆರಿಕದ ವಿಶೇಷ ರಾಯಭಾರಿ ಸ್ಟೀವನ್ ವಿಟ್ಕಾಫ್ ಅವರೊಂದಿಗಿನ ಪರಮಾಣು ಮಾತುಕತೆಯಲ್ಲಿ ಮುಖ್ಯ ಸಮಾಲೋಚಕರಾಗಿದ್ದ ಅಲಿ ಶಮ್ಖಾನಿಯನ್ನು ಗುರಿ ಮಾಡಿದ್ದು ಅಮೆರಿಕದ ನಿಜವಾದ ಉದ್ದೇಶಗಳನ್ನು ತೋರಿಸುತ್ತದೆ. ಇಷ್ಟು ಆದ ಮೇಲೂ, ಕಟ್ಟುಕಥೆ ಹೇಳುವುದನ್ನು ಅಮೇರಿಕಾ ಮುಂದುವರಿಸಿತು. ಇಸ್ರೇಲ್ ದಾಳಿಗಳ ನಂತರವೂ ಸ್ಟೀವನ್ ವಿಟ್ಕಾಫ್ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿಯೊಂದಿಗೆ ಹಲವಾರು ಸುತ್ತಿನ ಫೋನ್ ಸಂಭಾಷಣೆಗಳನ್ನು ನಡೆಸಿದರು.

ಇಸ್ರೇಲ್ ತನ್ನ ಬಾಂಬ್ ದಾಳಿ ಕಾರ್ಯಾಚರಣೆಯನ್ನು ಕೈಬಿಟ್ಟರೆ ಮಾತುಕತೆಗೆ ಸಿದ್ಧ ಎಂದು ಇರಾನ್ ಅಮೆರಿಕಕ್ಕೆ ತಿಳಿಸಿತು.  ಶುಕ್ರವಾರ, ಫ್ರಾನ್ಸ್, ಜರ್ಮನಿ, ಯುಕೆ ಮತ್ತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ಮಂತ್ರಿಗಳು ಜಿನೀವಾದಲ್ಲಿ ತಮ್ಮ ಇರಾನಿನ ವಿದೇಶಾಂಗ ಮಂತ್ರಿಯನ್ನು ಭೇಟಿಯಾಗಿ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯುವ ಪ್ರಯತ್ನ ಮಾಡಿದರು. ರಾಜತಾಂತ್ರಿಕ ಪರಿಹಾರಗಳನ್ನು ಪರಿಗಣಿಸಲು ಇರಾನ್ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿತು, ಆದರೆ ಯುರೋಪಿಯನ್ನರು ನೀಡಿದ ಸಲಹೆಯೆಂದರೆ ಇರಾನ್ ಅಮೆರಿಕ ಹೇಳಿದಂತೆ ನಡೆದುಕೊಳ್ಳಬೇಕು ಎಂಬುದು.

ಈಗ, ಇರಾನ್ ಪ್ರತೀಕಾರ ತೀರಿಸಿಕೊಳ್ಳದಿದ್ದರೆ ಅಮೆರಿಕ ಶನಿವಾರ ನಡೆಸಿದ ಪರಮಾಣು ಸೌಲಭ್ಯಗಳ ಮೇಲಿನ ಬಾಂಬ್ ದಾಳಿಯನ್ನು ಮೀರಿ ಮುಂದುವರಿಯುವುದಿಲ್ಲ ಎಂದು ಇರಾನ್‌ಗೆ ತಿಳಿಸಲಾಗಿದೆ ಎಂದು ಅಮೆರಿಕಾ ಹೇಳುತ್ತಿದೆ. ಇರಾನ್‌ ಸುಮ್ಮನೆ ಇದ್ದರೆ, ಅಮೆರಿಕ ಹಿಂದೆ ಸರಿಯುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಇರಾನ್‌ನಲ್ಲಿ “ಆಡಳಿತ ಬದಲಾವಣೆ ಮಾಡುವ ಪ್ರಯತ್ನಗಳನ್ನು ಯೋಜಿಸಲಾಗಿಲ್ಲ.”

ಅಮೆರಿಕದ ಈ ನಡೆಗಳು ದೀರ್ಘಾವಧಿಯ ಕಾರ್ಯತಂತ್ರದ ಭಾಗವಾಗಿದ್ದು, ಇರಾನ್ ಅನ್ನು ಕಡೆವಿ ಹಾಕುವುದೇ ಇದರ ಗುರಿ. ಸಾಂಪ್ರದಾಯಿಕವಾದ ತಂತ್ರವಾಗಿರುವ ಇದರಲ್ಲಿ ಮಿಲಿಟರಿ ಪರಿಣಾಮಗಳ ಭಯವನ್ನು ಹುಟ್ಟುಹಾಕುವ ಮೂಲಕ ಎದುರಾಳಿಯನ್ನು ನಿರುತ್ಸಾಹಗೊಳಿಸಲಾಗುತ್ತದೆ. ಆದರೆ ಅಮೆರಿಕಾಕ್ಕೆ ಬೇಕಿರುವುದು ಮೊದಲನೆಯ ಮಹಾಯುದ್ಧದ ನಂತರ ಅದರ ಮಿತ್ರರಾಷ್ಟ್ರಗಳು ಜರ್ಮನಿಯ ವಿರುದ್ಧ ಏನೆಲ್ಲಾ ಮಾಡಿದ್ದವೋ, ಅದನ್ನೇ ಇರಾನ್‌ಗೂ ಮಾಡುವುದು.

ಇಸ್ರೇಲ್-ಅಮೆರಿಕನ್ ಮಿಲಿಟರಿ ಕಾರ್ಯಾಚರಣೆಯ ಅಂತಿಮ ಪರಿಣಾಮವೆಂದರೆ ಆ ಎರಡೂ ರಾಷ್ಟ್ರಗಳು ಮಧ್ಯಪ್ರಾಚ್ಯ ದೇಶಗಳ ಮೇಲೆ ಸಂಪೂರ್ಣ ಮಿಲಿಟರಿ ನಿಯಂತ್ರಣವನ್ನು ತೆಗೆದುಕೊಳ್ಳುವುದು. ಇಸ್ರೇಲ್ ಹೆಚ್ಚು ಸುರಕ್ಷಿತವಾಗಿರುತ್ತದೆ, ಆದರೆ ಅದು ಸುಳ್ಳು ಭದ್ರತೆ ಮತ್ತು ದುರಹಂಕಾರವನ್ನು ತುಂಬಿಕೊಳ್ಳುತ್ತದೆ. ಕಳೆದ ಎರಡು ವಾರಗಳಿಂದ ಈ ಘಟನೆಗಳಿಂದ ದೂರ ಉಳಿದಿರುವ ಚೀನಾ ಮತ್ತು ರಷ್ಯಾಗಳು ಈ ಹಂತದಲ್ಲಿ ಅಮೆರಿಕ ತಾನು ತನ್ನ ಬಗ್ಗೆ ರೂಪಿಸಿಕೊಂಡಿರುವ ಪ್ರಾದೇಶಿಕ ಪ್ರಾಮುಖ್ಯತೆಯನ್ನು ದುರ್ಬಲಗೊಳಿಸಲು ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ.

ಪ್ರಪಂಚದ ಮೇಲೆ ಇದರ ಪರಿಣಾಮಗಳು ದೊಡ್ಡದಾಗಿರುತ್ತವೆ. ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳಿಲ್ಲದ ರಾಷ್ಟ್ರದ ಮೇಲೆ ಬಾಂಬ್ ದಾಳಿ ಮಾಡಿವೆ, ಅವು ಕೂಡ ದಾಳಿಗೆ ಒಳಗಾಗಿವೆ. ಭದ್ರತೆಯ ಕಾರಣಕ್ಕಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಹೆಚ್ಚು ಹೆಚ್ಚು ದೇಶಗಳು ಮುಂದಾಗುತ್ತವೆ. ಇಸ್ರೇಲ್‌ನ ಆಪರೇಷನ್ ರೈಸಿಂಗ್ ಲಯನ್ ಮತ್ತು ಅಮೆರಿಕದ ಮಿಡ್‌ನೈಟ್ ಹ್ಯಾಮರ್‌ಗೂ ಮುಂಚೆಯೇ, ಟ್ರಂಪ್‌ರ ನೀತಿಗಳು ಪ್ರಸ್ತುತ ಅಮೆರಿಕದ ಪರಮಾಣು ನೀತಿಗಳ ಛತ್ರಿಯಡಿಯಲ್ಲಿ ಬರುವ ಮಿತ್ರರಾಷ್ಟ್ರಗಳನ್ನು ಎಚ್ಚರಿಸಿದ್ದವು – ಒಂದು ದಶಕದ ಹಿಂದೆ ಯೋಚಿಸಲಾಗದಂತ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು.

ನಡೆದ ಘಟನೆ ಮತ್ತು ಅದರ ಪರಿಣಾಮಗಳ ವಾಬ್ದಾರಿಯನ್ನು ಹೊರಬೇಕಾದವನು ಒಬ್ಬನೇ ಒಬ್ಬ ಮನುಷ್ಯ – ಅದು ಡೊನಾಲ್ಡ್ ಟ್ರಂಪ್. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಎಂಬ ನಂಬಿಕೆಯಲ್ಲಿ ವಿಶ್ವ ಸಮುದಾಯವು ಒಗ್ಗಟ್ಟಾಗಿತ್ತು ಮತ್ತು ಅದು 2015 ರ JCPOA ಯನ್ನು ಆಧರಿಸಿತ್ತು. ಟ್ರಂಪ್ ಆ ದಾಖಲೆಯನ್ನು ಹರಿದುಹಾಕಿದರು, ಇರಾನ್ ಮೇಲೆ “ಗರಿಷ್ಠ ಒತ್ತಡ”ವನ್ನು ಹಾಕಿದರು, ಇರಾನ್‌ನ ಪ್ರಮುಖ ಜನರಲ್ ಖಾಸಿಮ್ ಸೊಲೈಮಾನಿಯನ್ನು ಹತ್ಯೆ ಮಾಡಿದರು. ಇಲ್ಲದಿದ್ದರೆ ಹಲವಾರು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬೇಕಾದಷ್ಟು ಪುಷ್ಟೀಕರಿಸಿದ ಯುರೇನಿಯಂ ( enriched uranium) ಅನ್ನು ಸಂಗ್ರಹಿಸುವ ಹಂತಕ್ಕೆ ಹೋಗಲು ಇರಾನ್‌ಗೆ ಇನ್ನೂ ಒಂದು ದಶಕ ಬೇಕಾಗುತ್ತಿತ್ತು.

JCPOA ಅನ್ನು ಪುನಃಸ್ಥಾಪಿಸಲು ನಡೆದ ಮಾತುಕತೆಗಳನ್ನು ಹಾಳು ಮಾಡಿದ ಕೀರ್ತಿಯೂ ಟ್ರಂಪ್‌ಗೆ ಹೋಗುತ್ತದೆ. ಆರಂಭದಲ್ಲಿ ಅವರು “ಸಶಸ್ತ್ರೀಕರಣ ಬೇಡ” ಎಂಬ ರೆಡ್‌ ಲೈನ್‌ ಹಾಕಿದರು, ಆದರೆ ಇಸ್ರೇಲಿನ ಒತ್ತಡದ ಅಡಿಯಲ್ಲಿ ಮಾತುಕತೆಯನ್ನು ನಡೆಸುತ್ತಲೇ ಅರ್ಧದಾರಿಯಲ್ಲೇ ಅವರು ತಮ್ಮ ಅಭಿಪ್ರಾಯವನ್ನು ಅಣ್ವಸ್ತ್ರಗಳ “ಪುಷ್ಟೀಕರಣ ಬೇಡ – no enrichment” ಎಂಬುದಕ್ಕೆ ಬದಲಾಯಿಸಿದರು.

ಅಮೆರಿಕ-ಇರಾನ್ ಪರಮಾಣು ಒಪ್ಪಂದವನ್ನು ತಡೆಯಲು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿತು ಎಂದು ನಂಬಲು ಕಾರಣಗಳಿವೆ. ಶನಿವಾರ ಸಂಜೆ ಅಮೆರಿಕದ ದಾಳಿಗಳನ್ನು ಘೋಷಿಸಿದ ಟ್ರಂಪ್ ಅವರ ಭಾಷಣದಲ್ಲಿ ನೆತನ್ಯಾಹು ಅವರಿಗೆ ಧನ್ಯವಾದ ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದು ತನ್ನದೇ ಆದ ಕಥೆಯನ್ನು ಹೇಳುತ್ತದೆ.

ವರ್ತಮಾನದ ಸಂಗತಿಗಳನ್ನು ನೋಡಿ ಭವಿಷ್ಯವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅದರೆ ಅದರ ಇತಿಹಾಸವನ್ನು ನೋಡಿದರೆ, (ಇರಾನ್‌ನಲ್ಲಿ) ಆಡಳಿತ ಬದಲಾವಣೆ ಮಾಡುವುದರಲ್ಲಿ ತಾನು ಆಸಕ್ತಿ ಹೊಂದಿಲ್ಲ ಎಂಬ ಅಮೆರಿಕದ ಮಾತನ್ನು ಒಪ್ಪಿಕೊಳ್ಳುವುದು ಕಷ್ಟ. ಆ ದಿಕ್ಕಿನಲ್ಲಿ ಅಮೇರಿಕಾ ನಡೆಸುತ್ತಿರುವ ಪ್ರಯತ್ನಗಳು ದೇಶದಲ್ಲಿ ಅಂತರ್ಯುದ್ಧ ಮತ್ತು ಅರಾಜಕತೆಗೆ ಕಾರಣವಾಗಬಹುದು ಮತ್ತು ಅದರ ಹತ್ತಿರದ ನೆರೆಹೊರೆಯ ದೇಶಗಳ ಮೇಲೆ ಪರಿಣಾಮ ಬೀರಬಹುದು.

ಮತ್ತೊಂದೆಡೆ, ಆಡಳಿತವು ಉಳಿದರೂ, ಅದು ನಿರ್ಣಾಯಕವಾಗಿ ದುರ್ಬಲರ ಆಯುಧವಾದ ಭಯೋತ್ಪಾದನೆಯನ್ನು ಇಟ್ಟುಕೊಂಡು ನಡೆಸುವ ಆಡಳಿತವಾಗಬಹುದು.

ಜಾಗತೀಕರಣವು ವ್ಯಾಪಾರ, ಪ್ರತಿಭೆಗಳು ಮತ್ತು ಹೊಸ ಅನ್ವೇಷನೆಗಳು ದೇಶಗಳನ್ನು ಸ್ಥಿರವಾಗಿ ಶ್ರೀಮಂತಗೊಳಿಸುವ ವಿಶ್ವ ಕ್ರಮಕ್ಕೆ ಕಾರಣವಾಗುತ್ತದೆ ಎಂದು ನಾವು ಒಂದು ಕಾಲದಲ್ಲಿ ನಂಬಿದ್ದೆವು, ಆದರೆ ಈಗ ನಾವು ಅನಿಶ್ಚಿತ ಜಗತ್ತೊಂದನ್ನು ನೋಡುತ್ತಿದ್ದೇವೆ, ಅಲ್ಲಿ ಶಕ್ತಿ ಮತ್ತು ಬಲಶಾಲಿಗಳು ನಿಯಮಗಳನ್ನು ರೂಪಿಸುತ್ತಾರೆ.

ಲೇಖಕ: ಮನೋಜ್‌ ಜೋಶಿ, ನವದೆಹಲಿಯ ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಡಿಸ್ಟಿಂಗ್ವಿಶ್ಡ್ ಫೆಲೋ

(ಇದು US-Israeli War on Iran: Tactical Success May Not Add Up to Strategic Victory ಎಂದು ದಿ ವೈರ್‌ ಪ್ರಕಟಿಸಿದ ಅಂಕಣದ ಕನ್ನಡಾನುವಾದ)

ಇರಾನ್ ಅಧ್ಯಕ್ಷರೊಂದಿಗೆ ಮೋದಿ ದೂರವಾಣಿ ಮಾತುಕತೆ: ಅಮೆರಿಕದ ದಾಳಿಗಳ ಬಗ್ಗೆ ‘ಕಳವಳ’ ಮಾತ್ರ, ಖಂಡನೆ ಇಲ್ಲ!
ಇರಾನ್‌ನ ಮೂರು ಪರಮಾಣು ಘಟಕಗಳ ಮೇಲೆ ಅಮೆರಿಕ ಜೂನ್ 22, 2025 ಭಾನುವಾರ ಮುಂಜಾನೆ ವೈಮಾನಿಕ ದಾಳಿ ನಡೆಸಿದ ಹಲವು ಗಂಟೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಬಗ್ಗೆ “ತೀವ್ರ ಕಳವಳ” ವ್ಯಕ್ತಪಡಿಸಿದರು. ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ “ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು” ಕರೆ ನೀಡಿದರು. ಈ ಫೋನ್‌ ಕರೆಯನ್ನು ಪೆಜೆಶ್ಕಿಯಾನ್ ಮಾಡಿದ್ದಾರೆ.

ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ ಮೋದಿ, ಇಬ್ಬರು ನಾಯಕರು “ಪ್ರಸ್ತುತ ಸಂದರ್ಭದ ಪರಿಸ್ಥಿತಿಯನ್ನು ವಿವರವಾಗಿ” ಚರ್ಚಿಸಿದರು ಮತ್ತು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆ ಕಂಡುಕೊಳ್ಳಲು ಭಾರತ ಬೆಂಬಲಿಸುವುದಾಗಿ ಹೇಳಿದರು. “ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಮರು ಕಟ್ಟುವ” ಅಗತ್ಯವನ್ನು ಒತ್ತಿ ಹೇಳಿದ ಅವರು, ರಾಜತಾಂತ್ರಿಕತೆ ಮತ್ತು ಮಾತುಕತೆಯೇ ಮುಂದಿನ ಕಾರ್ಯಸಾಧ್ಯತೆಯ ಮಾರ್ಗವಾಗಿದೆ ಎಂದು ಹೇಳಿದರು.

“ಇರಾನ್‌ನ ಪರಮಾಣು ಸಾಮರ್ಥ್ಯವನ್ನು ನಾಶಮಾಡಲು” ಅಮೆರಿಕದ ಬಾಂಬರ್‌ಗಳು ಇರಾನಿನ ಮೂರು ಪರಮಾಣು ತಾಣಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ ಭಾರತ ನೀಡಿದ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ಇದಾಗಿದೆ. ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಮಾಡಿದ ವರದಿಗಳ ಪ್ರಕಾರ, ಫೋರ್ಡೋ ಮತ್ತು ನಟಾಂಜ್ ಪರಮಾಣು ಸೌಲಭ್ಯಗಳ ಮೇಲೆ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಹಾಕಲಾಯಿತು, ಆದರೆ ಕ್ರೂಸ್ ಕ್ಷಿಪಣಿಗಳನ್ನು ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಎರಡನೇ ತಾಣದ ಮೇಲೆ ಜಲಾಂತರ್ಗಾಮಿ ನೌಕೆಗಳನ್ನು ಬಳಸಿ ಹಾರಿಸಲಾಯಿತು.

ಕೇವಲ ಎರಡು ತಿಂಗಳ ಹಿಂದೆ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪೆಜೆಶ್ಕಿಯಾನ್ ಅವರು ಮೋದಿಯವರೊಂದಿಗೆ ಫೋನ್ ಮೂಲಕ ಮಾತನಾಡಿದ್ದರು, ಉಗ್ರರ ದಾಳಿಯನ್ನು ಬಲವಾಗಿ ಖಂಡಿಸಿದ್ದರು.

ನರೇಂದ್ರ ಮೋದಿಯವರ X ಪೋಸ್ಟ್

ಭಾರತದ ವಿದೇಶಾಂಗ ಸಚಿವಾಲಯದ (MEA) ಪತ್ರಿಕಾ ಪ್ರಕಟಣೆಯ ಪ್ರಕಾರ, ಅಧ್ಯಕ್ಷ ಪೆಜೆಶ್ಕಿಯಾನ್ ಅವರು ಈ ಫೋನ್‌ ಕರೆಯನ್ನು ಮಾಡಿದರು. ಇರಾನಿನ ಅಧ್ಯಕ್ಷರ ವೆಬ್‌ಸೈಟ್ ನಲ್ಲಿ ಇವರು ಈಜಿಪ್ಟ್, ಪಾಕಿಸ್ತಾನ, ಫ್ರಾನ್ಸ್ ಮತ್ತು ಭಾರತ ಸೇರಿದಂತೆ ಹಲವಾರು ವಿಶ್ವ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ಕಂಡುಬಂದಿದೆ.

“ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ತೀವ್ರ ಕಳವಳ” ವ್ಯಕ್ತಪಡಿಸುವುದಕ್ಕೆ ಸೀಮಿತವಾದ ಮೋದಿಯವರ ಹೇಳಿಕೆಯಲ್ಲಿ, ಅಮೆರಿಕದ ದಾಳಿಗಳನ್ನು ಖಂಡಿಸದೆ ಇರುವುದು ಕಂಡು ಬಂದಿದೆ. ದಾಳಿಗಳ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ, ಅಥವಾ ಕೃತ್ಯದ ಜವಾಬ್ದಾರಿಯನ್ನು ಯಾರ ಮೇಲೂ ಆರೋಪಿಸುವ ಯತ್ನವನ್ನೂ ಮಾಡಲಾಗಿಲ್ಲ. “ಪ್ರಸ್ತುತ ಪರಿಸ್ಥಿತಿ” ಮತ್ತು “ಇತ್ತೀಚಿನ ಉಲ್ಬಣಗಳು” ಎಂಬಂತಹ ವಿಶಾಲಾರ್ಥದ ಪದಗಳನ್ನು ಮಾತ್ರ ಬಳಸಲಾಯಿತು.

ಇಸ್ರೇಲ್ ಇರಾನಿನ ತಾಣಗಳನ್ನು ಗುರಿಯಾಗಿಸಲು ಪ್ರಾರಂಭಿಸುವ ಮೊದಲು ತನ್ನ ಪರಮಾಣು ಕಾರ್ಯಕ್ರಮದ ಕುರಿತು ಯುರೋಪಿಯನ್ ದೇಶಗಳೊಂದಿಗೆ ಇರಾನ್‌ ತಾನು ಮಾತುಕತೆಗಳಲ್ಲಿ ತೊಡಗಿಕೊಂಡಿರುವುದಾಗಿ ಹೇಳಿತ್ತು. ಅಮೆರಿಕದ ವೈಮಾನಿಕ ದಾಳಿಗೆ ಕೆಲವೇ ದಿನಗಳ ಮೊದಲು, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಯುರೋಪಿಯನ್ ಸಹವರ್ತಿ ದೇಶಗಳೊಂದಿಗೆ ಸಭೆಗಳನ್ನು ನಡೆಸಿದ್ದರು.

ಇರಾನ್ ಅಧ್ಯಕ್ಷರ ಕಚೇರಿಯ ಫಾರ್ಸಿ ಭಾಷೆಯಲ್ಲಿ ಪ್ರಕಟವಾದ ಪತ್ರದ ಪ್ರಕಾರ, ಅಧ್ಯಕ್ಷ ಪೆಜೆಶ್ಕಿಯಾನ್ ಕೂಡ ಇದನ್ನೇ ಒತ್ತಿ ಹೇಳಿದರು. ದಾಳಿಯ ಸಮಯದಲ್ಲಿ ಇರಾನ್ ಅಮೆರಿಕದೊಂದಿಗೆ ಮಾತುಕತೆಗಳಲ್ಲಿ ತೊಡಗಿತ್ತು ಎಂದು ಅವರು ಹೇಳಿದರು. ಇದು ಅಮೇರಿಕಾ ತಾನು ನಡೆಸುವ ಸಂವಾದಕ್ಕೆ ಬದ್ಧತೆಯಿಂದ ನಡೆದುಕೊಳ್ಳದೆ, ಯಾವಾಗಲೂ “ಟೊಳ್ಳು ಮತ್ತು ಆಧಾರರಹಿತ” ಸಂವಾದ ನಡೆಸುವುದಕ್ಕೆ ಪುರಾವೆಯಾಗಿದೆ ಎಂದು ಅವರು ಹೇಳಿದರು.

“ಇಂದು ಜಗತ್ತು ನೋಡುತ್ತಿರುವುದು ಆತಂಕಕಾರಿ ಮತ್ತು ಸ್ವೀಕಾರಾರ್ಹವಲ್ಲದ ಪ್ರವೃತ್ತಿ ಇದಾಗಿದೆ. ಇದರಲ್ಲಿ ಅಂತರರಾಷ್ಟ್ರೀಯ ನಿಯಮಗಳು ಮತ್ತು ಕಟ್ಟುಪಾಡುಗಳ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವ ದೇಶವೊಂದು – ವಿಶೇಷವಾಗಿ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ – ಅಮೇರಿಕಾ ಮತ್ತು ಝಿಯೋನಿಸ್ಟ್ ಆಡಳಿತದ ದೇಶದಿಂದ ನೇರವಾಗಿ ಮತ್ತು ಬಹಿರಂಗವಾಗಿ ದಾಳಿಗೊಳಗಾಗುತ್ತಿದೆ” ಎಂದು ಪೆಜೆಶ್ಕಿಯನ್ ಹೇಳಿದ್ದಾರೆ. “ಶಾಂತಿ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ನಿಯಮಗಳ ಅನುಸರಣೆಗೆ ಸಂಬಂಧಿಸಿದ ಅವರ ಎಲ್ಲಾ ಹಕ್ಕುಗಳು ಘೋಷಣೆಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳು ನಾಶವಾಗಿದೆ ಎಂಬುದನ್ನು ಇದು ತೋರಿಸುತ್ತದೆ,” ಎಂದು ಅವರು ಹೇಳಿದ್ದಾರೆ.

ಅಮೆರಿಕ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಇರಾನ್ ಮೇಲಿನ ಇಸ್ರೇಲಿ ದಾಳಿಗಳನ್ನು ಬೆಂಬಲಿಸಿವೆ ಎಂದು ಅವರು ಆರೋಪಿಸಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೂನ್ 13 ರಂದು ಮೋದಿ ಅವರಿಗೆ ಕರೆ ಮಾಡಿದ್ದರು, ಈ ಸಂದರ್ಭದಲ್ಲಿ ಅವರು “ಭಾರತದ ಕಳವಳಗಳನ್ನು ಹಂಚಿಕೊಂಡರು ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದರು” ಎಂದು ವರದಿಯಾಗಿದೆ.

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸೃಷ್ಟಿಸುತ್ತಿದೆ ಎಂಬ ಅಮೆರಿಕ ಮತ್ತು ಇಸ್ರೇಲ್‌ನ ಆರೋಪಗಳನ್ನು “ದೊಡ್ಡ ಮತ್ತು ಐತಿಹಾಸಿಕ ಸುಳ್ಳು” ಎಂದು ಇರಾನ್ ಅಧ್ಯಕ್ಷರು ತಳ್ಳಿಹಾಕಿದರು.

“ಸರ್ವೋಚ್ಚ ನಾಯಕ ಹೊರಡಿಸಿದ ಸ್ಪಷ್ಟ ಫತ್ವಾ ಪ್ರಕಾರ, ಪರಮಾಣು ಶಸ್ತ್ರಾಸ್ತ್ರಗಳ ನಿರ್ಮಾಣ ಮತ್ತು ಬಳಕೆಯನ್ನು ಧಾರ್ಮಿಕವಾಗಿ ಹಾಗೂ ನೈತಿಕವಾಗಿ ನಿಷೇಧಿಸಲಾಗಿದೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ರಕ್ಷಣಾ ಸಿದ್ಧಾಂತದಲ್ಲಿ ಅದಕ್ಕೆ ಯಾವುದೇ ಸ್ಥಾನವಿಲ್ಲ.‌ ಇವೆಲ್ಲವೂ ಜಾಗತಿಕ ವೇದಿಕೆಯಲ್ಲಿ ಇರಾನ್ ವಿರುದ್ಧ ನಡೆಸುವ ಎಲ್ಲಾ ಅಪಪ್ರಚಾರಗಳು ಶುದ್ಧ ಸುಳ್ಳು” ಎಂದು ಪೆಜೆಶ್ಕಿಯನ್ ಹೇಳಿದ್ದಾರೆ.

ಇರಾನ್ ತನ್ನ ಕಾನೂನು ಮತ್ತು ಕಾನೂನುಬದ್ಧ ಹಕ್ಕುಗಳನ್ನು ಪ್ರತಿಪಾದಿಸಲು ತಡೆಯನ್ನು ಉಂಟು ಮಾಡುವ ಪ್ರಯತ್ನಗಳನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು. “ನಮ್ಮ ರಾಷ್ಟ್ರ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವ ಹಕ್ಕನ್ನು ನಾವು ಕಾಪಾಡಿಕೊಂಡಿದ್ದೇವೆ,” ಎಂದು ಅವರು ಹೇಳಿದರು.

ನಂತರ, ಭಾನುವಾರ ಮಧ್ಯಾಹ್ನ ಇಸ್ತಾನ್‌ಬುಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಇರಾನ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲು ಅರಾಘ್ಚಿ ನಿರಾಕರಿಸಿದರು. ದೇಶವು “ಎಲ್ಲಾ ಆಯ್ಕೆಗಳನ್ನು ಕಾಯ್ದಿರಿಸಿದೆ” ಎಂದು ಹೇಳಿದರು. “ಸಾಮಾನ್ಯವಾಗಿ, ಸಂವಾದ ಮತ್ತು ಮಾತುಕತೆಗೆ ಬಾಗಿಲು ಯಾವಾಗಲೂ ತೆರೆದಿರಬೇಕು, ಆದರೆ ಪ್ರಸ್ತುತ ಪರಿಸ್ಥಿತಿ ಸಾಮಾನ್ಯವಲ್ಲ. ನನ್ನ ದೇಶವು ದಾಳಿಗೆ ಒಳಗಾಗಿದೆ, ಆಕ್ರಮಣಕ್ಕೆ ಒಳಗಾಗಿದೆ ಮತ್ತು ನಾವು ನಮ್ಮ ಸ್ವರಕ್ಷಣೆಯ ಕಾನೂನುಬದ್ಧ ಹಕ್ಕನ್ನು ಆಧರಿಸಿ ಪ್ರತಿಕ್ರಿಯಿಸಬೇಕಾಗಿದೆ,” ಅವರು ಹೇಳಿದರು.

ಇರಾನ್‌ನಲ್ಲಿರುವ ಭಾರತೀಯರನ್ನು ವಾಪಾಸ್‌ ದೇಶಕ್ಕೆ ಅವರ ದೇಶಕ್ಕೆ ಕಳುಹಿಸಲು ಇರಾನ್ ನೀಡಿದ ನಿರಂತರ ಬೆಂಬಲಕ್ಕಾಗಿ ಮೋದಿ ಧನ್ಯವಾದ ಅರ್ಪಿಸಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವ್ಯಾಪಾರ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜೂನ್ 13 ರಂದು ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ಮಾಡುವ ಮೊದಲು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಉದ್ಯಮಿಗಳು ಸೇರಿದಂತೆ 10,000 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಇರಾನ್‌ನಲ್ಲಿ ವಾಸಿಸುತ್ತಿದ್ದರು. ಇಲ್ಲಿಯವರೆಗೆ, ಆಪರೇಷನ್ ಸಿಂಧು ಅಡಿಯಲ್ಲಿ 1,428 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ. ಹೆಚ್ಚಿನ ವೈಮಾನಿಕ ಮಾರ್ಗಗಳು ಮುಚ್ಚಲ್ಪಟ್ಟಿರುವುದರಿಂದ, ವಿಶೇಷ ವಿಮಾನಗಳು ಈಶಾನ್ಯ ಇರಾನಿನ ನಗರವಾದ ಮಶಾದ್‌ನಿಂದ ಕಾರ್ಯನಿರ್ವಹಿಸುತ್ತಿವೆ. ಇತರರು ವಾಣಿಜ್ಯ ವಿಮಾನಗಳನ್ನು ಬಳಸಿ ದೆಹಲಿಗೆ ಹೋಗಲು ಭೂ ಗಡಿಗಳನ್ನು ದಾಟಿ ಅರ್ಮೇನಿಯಾ ಅಥವಾ ತುರ್ಕಮೆನಿಸ್ತಾನಕ್ಕೆ ಹೋಗುತ್ತಿದ್ದಾರೆ.

ಇರಾನ್‌ನಲ್ಲಿ ಅತ್ಯಂತ ಹೆಚ್ಚು ಭಾರತೀಯ ವಲಸಿಗರು ಇರುವುದರಿಂದ ಮತ್ತು ಕೊಲ್ಲಿ ರಾಷ್ಟ್ರದ ಇಂಧನವನ್ನು ಭಾರತವು ಹೆಚ್ಚು ಆಮದು ಮಾಡಿಕೊಳ್ಳುತ್ತಿರುವುದರಿಂದ, ಈ ಸಂಘರ್ಷವು ಭಾರತದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.

ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿಯ ಮೂಲಕ ಸಮುದ್ರ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ ಎಂದು ಸೂಚಿಸಿದೆ. ಭಾರತಕ್ಕೆ ಇಂಧನ ಸರಬರಾಜುಗಳು ನಡೆಯುವ ಪ್ರಮುಖ ತೈಲ ಸಾಗಣೆಯು ಈ ಮಾರ್ಗಗಳಲ್ಲಿ ಬರುವ ಚಾಕ್‌ಪಾಯಿಂಟ್ ಮೂಲಕ ನಡೆಯುತ್ತದೆ. ಕೇಂದ್ರ ಪೆಟ್ರೋಲ್ ಸಚಿವ ಹರ್ದೀಪ್ ಸಿಂಗ್ ಪುರಿ ಅವರು X ನಲ್ಲಿ ಪೋಸ್ಟ್‌ನಲ್ಲಿ, “… ನಾವು ಕಳೆದ ಕೆಲವು ವರ್ಷಗಳಿಂದ ನಮ್ಮ ಸರಬರಾಜುಗಳನ್ನು ವೈವಿಧ್ಯಗೊಳಿಸಿದ್ದೇವೆ ಮತ್ತು ನಮ್ಮ ಹೆಚ್ಚಿನ ಪ್ರಮಾಣದ ಸರಬರಾಜುಗಳು ಈಗ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುದಿಲ್ಲ. ನಮ್ಮ ತೈಲ ಮಾರುಕಟ್ಟೆ ಕಂಪನಿಗಳು ಹಲವಾರು ವಾರಗಳಿಗೆ ಬೇಕಾದ ಸರಬರಾಜುಗಳನ್ನು ಹೊಂದಿವೆ, ಹಲವಾರು ಮಾರ್ಗಗಳಿಂದ ಇಂಧನ ಸರಬರಾಜುಗಳನ್ನು ಪಡೆಯುತ್ತಲೇ ಇವೆ. ನಮ್ಮ ನಾಗರಿಕರಿಗೆ ಬೇಕಾದ ಇಂಧನವನ್ನು ಪೂರೈಸುವುದರಲ್ಲಿ ಯಾವುದೇ ಅಡೆತಡೆಯಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ,” ಎಂದು ಹೇಳಿದರು.

ಈಗಾಗಲೇ ಅಸ್ಥಿರವಾಗಿರುವ ತೈಲ ಬೆಲೆಗಳು, ಮಾರುಕಟ್ಟೆಗಳು ಮತ್ತೆ ತೆರೆದಾಗ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಹತ್ತು ದಿನಗಳ ಹಿಂದೆ ಇರಾನ್ ಮೇಲೆ ಇಸ್ರೇಲ್‌ನ ಆರಂಭಿಕ ಕ್ಷಿಪಣಿ ದಾಳಿಯ ನಂತರ, ಕಚ್ಚಾ ತೈಲ ಬೆಲೆಗಳು ಈಗಾಗಲೇ 10% ರಷ್ಟು ಏರಿಕೆಯಾಗಿವೆ.

ಇರಾನ್‌ನ ಪೆಟ್ರೋಲಿಯಂ ಸಾಗಿಸುವ ಆರೋಪದ ಮೇಲೆ ಭಾರತೀಯ ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ
ಇರಾನ್‌ನ “ನೆರಳು ನೌಕಾಪಡೆ – shadow fleet”ಯ ಭಾಗವಾಗಿ ಹಡಗುಗಳನ್ನು ನಿರ್ವಹಿಸುತ್ತಿದ್ದ ಮತ್ತು ಇರಾನ್ ತೈಲವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಭಾರತೀಯ ಪ್ರಜೆ ಮತ್ತು ಎರಡು ಭಾರತ ಮೂಲದ ಸಂಸ್ಥೆಗಳ ಮೇಲೆ ಅಮೆರಿಕ ಗುರುವಾರ ನಿರ್ಬಂಧ ಹೇರಿದೆ.

ನೆರಳು ನೌಕಾಪಡೆ – shadow fleet ಎಂದರೆ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ತಪ್ಪಿಸಲು, ಸರಕುಗಳ ಮಾಲೀಕತ್ವ ಮತ್ತು ಮೂಲವನ್ನು ಮರೆಮಾಚುವ ಟ್ಯಾಂಕರ್ ಹಡಗುಗಳ ಸಮೂಹ.

ಭಾರತೀಯ ಮೂಲದ ಜುಗ್ವಿಂದರ್ ಸಿಂಗ್ ಬ್ರಾರ್ ಎಂಬವರು ಹಲವಾರು ಹಡಗು ಕಂಪನಿಗಳನ್ನು ಹೊಂದಿದ್ದು, ಅವುಗಳು ಸುಮಾರು 30 ಹಡಗುಗಳನ್ನು ಹೊಂದಿದ್ದು, ಇವು ಇರಾನಿನ ನೆರಳು ನೌಕಾಪಡೆಯ ಭಾಗವಾಗಿದೆ ಎಂದು ಅಮೆರಿಕದ ಖಜಾನೆ ಇಲಾಖೆ ಆರೋಪಿಸಿದೆ.

ವಿದೇಶಿ ಆಸ್ತಿ ನಿಯಂತ್ರಣ ಕಚೇರಿಯು ಯುಎಇ ಮೂಲದ ಎರಡು ಸಂಸ್ಥೆಗಳು ಮತ್ತು ಭಾರತದಲ್ಲಿ ಬ್ರಾರ್ ಅವರ ಹಡಗುಗಳನ್ನು ನಿರ್ವಹಿಸುವ ಎರಡು ಇತರ ಸಂಸ್ಥೆಗಳ ಮೇಲೆ ಇರಾನಿನ ತೈಲ ಕಂಪನಿ ಮತ್ತು ಇರಾನಿನ ಮಿಲಿಟರಿಯ ಪರವಾಗಿ ಇರಾನಿನ ತೈಲವನ್ನು ಸಾಗಿಸಿದ ಕಾರಣಕ್ಕೆ ನಿರ್ಬಂಧ ಹೇರಿತು.

ಇರಾನ್ ತನ್ನ ತೈಲ ರಫ್ತುಗಳನ್ನು ಕಡಿತಗೊಳಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರವನ್ನು ಪಡೆಯುವುದನ್ನು ತಡೆಯಲು ಇದರ ಮೇಲೆ ಒತ್ತಡ ಹೇರಲು ಡೊನಾಲ್ಡ್ ಟ್ರಂಪ್ ಸರ್ಕಾರವು ಹೊಸ ಪ್ರಯತ್ನಗಳನ್ನು ಮಾಡುತ್ತಿರುವ ಮಧ್ಯೆ ಇದು ಸಂಭವಿಸಿದೆ. ಟೆಹ್ರಾನ್ ತನ್ನ ಪರಮಾಣು ಕಾರ್ಯಕ್ರಮವು ನಾಗರಿಕ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.

ಇರಾಕ್, ಇರಾನ್, ಯುಎಇ ಮತ್ತು ಓಮನ್ ಕೊಲ್ಲಿಯ ಕರಾವಳಿಯಲ್ಲಿ ಹಡಗುಗಳು ಇರಾನಿನ ಪೆಟ್ರೋಲಿಯಂನ ಹೆಚ್ಚಿನ ಅಪಾಯದ ಸಾಗಣೆಯನ್ನು ಕೈಗೊಳ್ಳುತ್ತವೆ ಎಂದು ಖಜಾನೆ ಇಲಾಖೆ ಹೇಳಿಕೊಂಡಿದೆ. ನಿರ್ಬಂಧಗಳನ್ನು ತಪ್ಪಿಸಲು ಹಡಗುಗಳು ಇರಾನ್ ಬೆಂಬಲಿತ ಹೌತಿ ಬಂಡುಕೋರರ ಹಣಕಾಸು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತವೆ ಎಂದು ಅದು ಆರೋಪಿಸಿದೆ.

“ಈ ಸರಕುಗಳು ನಂತರ ಇತರ ದೇಶಗಳ ಉತ್ಪನ್ನಗಳೊಂದಿಗೆ ತೈಲ ಅಥವಾ ಇಂಧನವನ್ನು ಮಿಶ್ರಣ ಮಾಡುವ ಮತ್ತು ಇರಾನ್‌ನೊಂದಿಗಿನ ಸಂಪರ್ಕವನ್ನು ಮರೆಮಾಡಲು ಸಾಗಣೆ ದಾಖಲೆಗಳನ್ನು ನಕಲಿ ಮಾಡುವ ಇತರ ಸಹಾಯಕರನ್ನು ತಲುಪುತ್ತವೆ, ಈ ಸರಕುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಲು ಅನುವು ಮಾಡಿಕೊಡುತ್ತದೆ” ಎಂದು ಅದು ಹೇಳಿದೆ.

ಭಾರತ ಮೂಲದ ಶಿಪ್ಪಿಂಗ್ ಕಂಪನಿ ಗ್ಲೋಬಲ್ ಟ್ಯಾಂಕರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಪೆಟ್ರೋಕೆಮಿಕಲ್ ಮಾರಾಟ ಕಂಪನಿ ಬಿ ಅಂಡ್ ಪಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಬ್ರಾರ್ ನಿಯಂತ್ರಿಸುತ್ತಿದ್ದಾರೆ ಎಂದು ಅಮೆರಿಕ ಸರ್ಕಾರ ತಿಳಿಸಿದೆ. ಯುಎಇ ಮೂಲದ ಘಟಕಗಳು: ಪ್ರೈಮ್ ಟ್ಯಾಂಕರ್ಸ್ ಎಲ್ಎಲ್ ಸಿ ಮತ್ತು ಗ್ಲೋರಿ ಇಂಟರ್ನ್ಯಾಷನಲ್.

ಇರಾನ್ ಆಡಳಿತವು ತನ್ನ ತೈಲ ಮಾರಾಟ ಮತ್ತು “ಅದರ ಅಸ್ಥಿರಗೊಳಿಸುವ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು” “ಬ್ರಾರ್‌ನಂತಹ ನಿರ್ಲಜ್ಜ ಸಾಗಣೆದಾರರು ಮತ್ತು ದಲ್ಲಾಳಿಗಳ” ಜಾಲವನ್ನು ಮತ್ತು ಅವರ ಘಟಕಗಳನ್ನು ಅವಲಂಬಿಸಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಆರೋಪಿಸಿದ್ದಾರೆ.

“ಇರಾನ್‌ನ ತೈಲ ರಫ್ತಿನ ಎಲ್ಲಾ ಅಂಶಗಳನ್ನು” ಅಡ್ಡಿಪಡಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಬೆಸೆಂಟ್ ಗುರುವಾರ ಹೇಳಿದ್ದಾರೆ.

ಬ್ಲೂಮ್‌ಬರ್ಗ್ ಕಂಪನಿಗಳಿಗೆ ಕಳುಹಿಸಿದ ಇಮೇಲ್‌ಗಳು ಮತ್ತು ಈ ವಿಷಯದ ಕುರಿತು ಬ್ರಾರ್ ಅವರ ಅಭಿಪ್ರಾಯಗಳನ್ನು ಕೋರಿ ಪ್ರೈಮ್ ಟ್ಯಾಂಕರ್‌ಗಳಿಗೆ ಮಾಡಿದ ದೂರವಾಣಿ ಕರೆ ಸ್ಥಳೀಯ ವ್ಯವಹಾರ ಸಮಯದ ಹೊರಗೆ ಪ್ರತಿಕ್ರಿಯೆಯನ್ನು ನೀಡಲಿಲ್ಲ ಎಂದು ವರದಿ ಮಾಡಿದೆ.

ಇರಾನ್‌ನಲ್ಲಿರುವ ತನ್ನ ನಾಗರಿಕರಿಗೆ ಎಚ್ಚರಿಕೆಯಿಂದಿರಲು ಭಾರತ ಮನವಿ
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇರಾನ್‌ಗೆ ಹೋಗುವ ಎಲ್ಲಾ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಭಾರತವು ತನ್ನ ನಾಗರಿಕರಿಗೆ ಬುಧವಾರ ಸಲಹೆ ನೀಡಿದೆ.

ಸಲಹೆಯೊಂದರಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪ್ರಸ್ತುತ ಇರಾನ್‌ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಮನವಿ ಮಾಡಿದೆ.

ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಸಂಘಟನೆಯ ಇತರ ಕಮಾಂಡರ್‌ಗಳನ್ನು ಇಸ್ರೇಲ್ ಕೊಂದಿದ್ದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಇಸ್ರೇಲ್‌ ಮೇಲೆ ಸುಮಾರು 200 ಕ್ಷಿಪಣಿಗಳನ್ನು ಉಡಾಯಿಸಿದ ಒಂದು ದಿನದ ನಂತರ ಈ ಮನವಿ ಮಾಡಿಕೊಳ್ಳಲಾಗಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕ್ಷಿಪಣಿ ದಾಳಿಗಳಿಗೆ ಪ್ರತಿಯಾಗಿ ಇರಾನ್ ಇಸ್ರೇಲಿನ ಪ್ರತಿಕಾರವನ್ನು “ಅನುಭವಿಸಲಿದೆ” ಎಂದು ಹೇಳಿದರು.

“ನಾವು ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಆಗುತ್ತಿರುವ ಇತ್ತೀಚಿನ ಉಲ್ಬಣವನ್ನು ನಿಕಟವಾಗಿ ಗಮನಿಸುತ್ತಿದ್ದೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

“ಇರಾನ್‌ಗೆ ಎಲ್ಲಾ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಭಾರತೀಯ ಪ್ರಜೆಗಳಿಗೆ ಸಲಹೆ ನೀಡಲಾಗಿದೆ. ಪ್ರಸ್ತುತ ಇರಾನ್‌ನಲ್ಲಿ ನೆಲೆಸಿರುವವರು ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ” ಎಂದು ಅದು ಹೇಳಿದೆ.

ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಂಗಳವಾರ ಇಸ್ರೇಲ್‌ನಲ್ಲಿ ವಾಸಿಸುವ ಭಾರತೀಯ ಪ್ರಜೆಗಳಿಗೆ ಸಲಹೆಯನ್ನು ನೀಡಿದೆ.

“ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಲು ಸೂಚಿಸಲಾಗಿದೆ” ಎಂದು ಅದು ಹೇಳಿದೆ.

“ದಯವಿಟ್ಟು ಜಾಗರೂಕರಾಗಿರಿ, ದೇಶದೊಳಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಿ ಮತ್ತು ಸುರಕ್ಷತಾ ಆಶ್ರಯಗಳ ಹತ್ತಿರ ಇರಿ” ಎಂದು ಅದು ಹೇಳಿದೆ.

ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಎಲ್ಲಾ ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೇಲಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದರು.

ʼಭಾರತದ ಮುಸಲ್ಮಾನರು ನೊಂದಿದ್ದಾರೆʼ- ಅಯತೊಲ್ಲಾ ಖಮೇನಿ: ಇರಾನ್‌ ನಾಯಕನ ಹೇಳಿಕೆ ಒಪ್ಪುವಂತದ್ದಲ್ಲ ಎಂದ ಭಾರತ ಸರ್ಕಾರ
ಬೆಂಗಳೂರು: ಗಾಜಾ ಮತ್ತು ಮ್ಯಾನ್ಮಾರ್‌ನಲ್ಲಿರುವಂತೆ ಭಾರತದ ಮುಸ್ಲಿಮರೂ “ನೋವಿನಲ್ಲಿದ್ದಾರೆ” ಎಂಬ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹೇಳಿಕೆಯನ್ನು ಭಾರತ ಸರ್ಕಾರವು ಸೆಪ್ಟೆಂಬರ್ 15 ರಂದು “ಇದು ಒಪ್ಪುವಂತದ್ದಲ್ಲ” ಎಂದು ಖಂಡಿಸಿದೆ ಮತ್ತು ಇರಾನ್ ತನ್ನ ದೇಶದ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯ ಕಡೆಗೆ ಗಮನ ಕೊಡುವಂತೆ ಒತ್ತಾಯಿಸಿದೆ.

ಟೆಹ್ರಾನ್‌ನಲ್ಲಿ ಇಸ್ಲಾಮಿಕ್ ವಿದ್ವಾಂಸರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಖಮೇನಿ ಇಸ್ಲಾಮಿನ ವಿಶ್ವ ಸಹೋದರತ್ವದ ಬಗ್ಗೆ ಮಾತನಾಡಿ, ಇದು ಮುಸ್ಲಿಮರು ಇತರರಿಂದ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಫಾರ್ಸಿಯಲ್ಲಿರುವ ಈ ಭಾಷಣವನ್ನು ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆಯ್ದ ಭಾಗವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

“ಇಸ್ಲಾಮಿನ ಶತ್ರುಗಳು ಯಾವಾಗಲೂ ನಮ್ಮ ಇಸ್ಲಾಮಿಕ್ ಉಮ್ಮಾ ಎಂಬ ನಮ್ಮ ಗುರುತಿನ ಬಗ್ಗೆ ಅಸಡ್ಡೆಯನ್ನು ಹೊಂದಿದ್ದಾರೆ. ಮ್ಯಾನ್ಮಾರ್, ಗಾಜಾ, ಭಾರತ ಅಥವಾ ಇನ್ನಾವುದೇ ಸ್ಥಳದಲ್ಲಿ ಮುಸಲ್ಮಾನನೊಬ್ಬ ಅನುಭವಿಸುತ್ತಿರುವ ನೋವನ್ನು ನಾವು ನಿರ್ಲಕ್ಷಿಸಿದರೆ ನಾವು ನಮ್ಮನ್ನು ಮುಸ್ಲಿಮರು ಎಂದು ಪರಿಗಣಿಸಲು ಸಾಧ್ಯವಿಲ್ಲ,” ಎಂದು ಎಕ್ಸ್ ಪೋಸ್ಟ್ ಹೇಳಿದೆ .

ಕೆಲವು ಗಂಟೆಗಳ ನಂತರ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಇರಾನ್ ನಾಯಕನ ಹೇಳಿಕೆಗಳನ್ನು ಟೀಕಿಸಿದರು.

“ಭಾರತದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಇರಾನ್‌ನ ಸರ್ವೋಚ್ಚ ನಾಯಕ ನೀಡಿರುವ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ತಪ್ಪು ಮಾಹಿತಿ ಮತ್ತು ಸ್ವೀಕಾರಾರ್ಹವಲ್ಲ. ಅಲ್ಪಸಂಖ್ಯಾತರ ಬಗ್ಗೆ ಕಾಮೆಂಟ್ ಮಾಡುವ ದೇಶಗಳು ಇತರರ ಬಗ್ಗೆ ಯಾವುದೇ ಅವಲೋಕನ ಮಾಡುವ ಮೊದಲು ತಮ್ಮದೇ ಆದ ಸ್ಥಿತಿಯನ್ನು ನೋಡಿಕೊಳ್ಳುವಂತೆ ನಾವು ಸಲಹೆ ನೀಡುತ್ತೇವೆ,” ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಭಾರತವು ಇರಾನ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ, ಟೆಹ್ರಾನ್‌ ಚಾಬಹಾರ್‌ನ ಆಯಕಟ್ಟಿನ ಬಂದರಿನಲ್ಲಿ ಕೆಲಸ ಮಾಡುತ್ತಿದೆ. ಈ ವರ್ಷದ ಮೇನಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಉಪರಾಷ್ಟ್ರಪತಿ ಭಾಗವಹಿಸಿದ್ದರು. ಜುಲೈನಲ್ಲಿ ನೂತನವಾಗಿ ಚುನಾಯಿತರಾದ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಹಿರಿಯ ಸಚಿವರೊಬ್ಬರು ಭಾರತವನ್ನು ಪ್ರತಿನಿಧಿಸಿದ್ದರು .

ಬಲವಾದ ಸಂಬಂಧಗಳ ಹೊರತಾಗಿಯೂ, ಇರಾನಿನ ಸುಪ್ರೀಂ ಲೀಡರ್ ಭಾರತದಲ್ಲಿರುವ ಮುಸ್ಲಿಮರ ಪರಿಸ್ಥಿತಿ ಮತ್ತು ಕಾಶ್ಮೀರ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು ಇದೇ ಮೊದಲೇನಲ್ಲ.

ಮಾರ್ಚ್ 2020 ರಲ್ಲಿ ದೆಹಲಿ ಗಲಭೆಯ ಸಂದರ್ಭದಲ್ಲಿ ಭಾರತೀಯ ಮುಸ್ಲಿಮರ ಬಗ್ಗೆ, “ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ಪ್ರಪಂಚದಾದ್ಯಂತದ ಮುಸ್ಲಿಮರ ಹೃದಯಗಳು ದುಃಖಿಸುತ್ತಿವೆ. ಭಾರತ ಸರ್ಕಾರವು ತೀವ್ರವಾದಿ ಹಿಂದೂಗಳು ಮತ್ತು ಅವರ ಪಕ್ಷಗಳನ್ನು ಎದುರಿಸಬೇಕು ಹಾಗೂ ಇಸ್ಲಾಮಿಕ್‌ ಜಗತ್ತಿನಿಂದ ಭಾರತವನ್ನು ಪ್ರತ್ಯೇಕಿಸುವುದು ಆಗಬಾರದೆಂದರೆ ಮುಸ್ಲಿಮರ ಹತ್ಯಾಕಾಂಡವನ್ನು ನಿಲ್ಲಿಸಬೇಕು,” ಎಂದು ಅಯತೊಲ್ಲಾ ಖಮೇನಿ ಅವರ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು.

ಹಿಂಸಾತ್ಮಕ ಗಲಭೆಗಳ ಬಗ್ಗೆ ಇರಾನ್ ವಿದೇಶಾಂಗ ಸಚಿವ ಜಾವೇದ್ ಜರೀಫ್ ಅವರು ಕಳವಳ ವ್ಯಕ್ತಪಡಿಸಿದ ನಂತರ, ಇರಾನ್ ರಾಯಭಾರಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಲಾಯಿತು .

ಅಯತೊಲ್ಲಾ ಕಾಶ್ಮೀರದ ಬಗ್ಗೆ ಹೆಚ್ಚು ಆಗಾಗ ಹೇಳಿಕೆಗಳನ್ನು ನೀಡುತ್ತಿದ್ದರು, ಅವರು ಎಂಬತ್ತರ ದಶಕದ ಆರಂಭದಲ್ಲಿ ಭೇಟಿ ತಾವು ನೀಡಿದ್ದ ಕಾಶ್ಮೀರದ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಕಾಶ್ಮೀರದ ಬಗ್ಗೆ ಆಗಸ್ಟ್ 2019 ರಂದು ಕೊನೆಯ ಬಾರಿ ಹೇಳಿಕೆ ನೀಡಿದ್ದರು. ಆದರೂ ಅದಕ್ಕೂ ಮೊದಲು ಅವರು ಕಾಶ್ಮೀರಿ ಮುಸ್ಲಿಮರನ್ನು ತುಳಿತಕ್ಕೊಳಗಾದ ಸಮುದಾಯಗಳ ಪಟ್ಟಿಯಲ್ಲಿ  ಸೇರಿಸಿದ್ದಾರೆ.

ನವೆಂಬರ್ 2010 ರಲ್ಲಿ , ಕಾಶ್ಮೀರದ ಕುರಿತು ಅಯತೊಲ್ಲಾ ನೀಡಿದ ಹೇಳಿಕೆಗಳನ್ನು ವಿರೋಧಿಸಿ ಪ್ರತಿಭಟನೆಯನ್ನು ತೋರಿಸಲು ಭಾರತ ಸರ್ಕಾರ ಹಂಗಾಮಿ ಇರಾನ್ ರಾಯಭಾರಿಯನ್ನು ಕರೆಸಿತ್ತು.