isreal – Peepal Media

ಇರಾನ್ ವಿರುದ್ಧ ಅಮೆರಿಕಾ-ಇಸ್ರೇಲ್ ಯುದ್ಧ: ಯುದ್ಧ ಗೆದ್ದರೂ ಕಾರ್ಯತಂತ್ರ ಸೋಲಬಹುದು!
ರಾಜತಾಂತ್ರಿಕತೆಯ ಬದಲು ಬಾಂಬ್‌ಗಳನ್ನು ಆರಿಸಿಕೊಳ್ಳುವ ಮೂಲಕ, ಡೊನಾಲ್ಡ್ ಟ್ರಂಪ್ ಇಸ್ರೇಲ್‌ಗೆ ಅಲ್ಪಾವಧಿಯ ಗೆಲುವನ್ನು ನೀಡಿದ್ದಾರೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ವಿಚಾರದಲ್ಲಿ ದಶಕಗಳಿಂದ ಜಾಗತಿಕವಾಗಿ ಕಾಯ್ದುಕೊಂಡು ಬಂದಿದ್ದ ಸಂಯಮಕ್ಕೆ ಬೆಂಕಿ ಹಚ್ಚಿದ್ದಾರೆ - ಇದು ಮಧ್ಯಪ್ರಾಚ್ಯ ಮತ್ತು ಜಗತ್ತನ್ನು ವರ್ಷಗಳ ಕಾಲ ಕಾಡಬಹುದಾದ ಅಜಾಗರೂಕ ಕೃತ್ಯ - ಲೇಖಕ: ಮನೋಜ್‌ ಜೋಶಿ

“ನಾನು ಅದನ್ನು ಮಾಡಲೂ ಬಹುದು, ಮಾಡದಿರಲೂ ಬಹುದು.. ನಾನು ಏನು ಮಾಡಲಿದ್ದೇನೆಂದು ಎಂಬುದು ಯಾರಿಗೂ ತಿಳಿದಿಲ್ಲ,” ಎಂದು ಡೊನಾಲ್ಡ್ ಟ್ರಂಪ್ ಬುಧವಾರ ಇರಾನ್ ಮೇಲಿನ ಇಸ್ರೇಲಿ ದಾಳಿಗೆ ಸಂಬಂಧಿಸಿದ ವಿಚಾರದ ಬಗ್ಗೆ ಹೇಳಿದ್ದರು. ಮರುದಿನ ಶ್ವೇತಭವನದ ಅಧಿಕೃತ ವಕ್ತಾರರು ಅಮೆರಿಕದ ಅಧ್ಯಕ್ಷರು ಎರಡು ವಾರಗಳಲ್ಲಿ ಎಲ್ಲವನ್ನೂ ನಿರ್ಧರಿಸುತ್ತಾರೆ ಎಂದು ಹೇಳಿದರು. ಆದರೆ ಕೊನೆಯಲ್ಲಿ, ದಾಳಿ ಮಾಡುವ ನಿರ್ಧಾರವು ಕೇವಲ ಮೂರು ದಿನಗಳಲ್ಲಿ, ಅಂದರೆ ಶನಿವಾರದಂದು ಮಾಡಲಾಯಿತು. ಇದಕ್ಕಿಂತ ಹಿಂದೆ ನೀಡಿದ ಆ ಎಲ್ಲಾ ಹೇಳಿಕೆಗಳು ಬಹುಶಃ ವಂಚನೆ ಯೋಜನೆಯ ಭಾಗವಾಗಿರಬಹುದು.

ವಾಸ್ತವವಾಗಿ ಇರಾನ್ ಜೊತೆಗಿನ ಯುದ್ಧವು ಇಸ್ರೇಲ್ ಮತ್ತು ಅಮೆರಿಕಾದ ಜಂಟಿ ಉದ್ಯಮವಾಗಿದೆ ಎಂಬುದನ್ನು ನಂಬಲು ನಮ್ಮಲ್ಲಿ ಒಳ್ಳೆಯ ಕಾರಣಗಳಿವೆ. ಆರಂಭದಿಂದಲೂ, ಇರಾನಿನ ಕ್ಷಿಪಣಿಗಳ ದಾಳಿಯಿಂದ ಇಸ್ರೇಲ್ ಅನ್ನು ರಕ್ಷಿಸಲು ಅಮೆರಿಕದ ಕ್ಷಿಪಣಿ ವಿರೋಧಿ ವ್ಯವಸ್ಥೆಗಳನ್ನು ಬಳಸಲಾಗುತ್ತಿತ್ತು. ಇರಾನ್ ಮೇಲಿನ ದಾಳಿಗಳಿಗೆ ಇಸ್ರೇಲ್‌ಗೆ ಅಮೆರಿಕದ ಗುಪ್ತಚರ ಸಹಾಯ ಮಾಡಿತು. ಈಗ ಇಸ್ರೇಲಿಗಳು ಪ್ರಾರಂಭಿಸಿದ ಕೃತ್ಯವನ್ನು “ಕೊನೆಗೊಳಿಸಲು” ಅಮೆರಿಕದ ವಿಮಾನಗಳು ಇರಾನಿನ ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿವೆ.

ಸಮಸ್ಯೆಯೆಂದರೆ “ಕೆಲಸವನ್ನು ಮುಗಿಸುವುದು” ಹೆಚ್ಚಿನ ಜನರು ಊಹಿಸುವುದಕ್ಕಿಂತ ದೀರ್ಘವಾದ ಪ್ರಕ್ರಿಯೆಯಾಗಿರಬಹುದು. ಅಮೆರಿಕದ ದಾಳಿಯು ಇರಾನ್ ತಾನು ಒಪ್ಪಿಕೊಂಡಿರುವ ಪರಮಾಣು ಪ್ರಸರಣ ನಿಷೇಧ ಒಪ್ಪಂದವನ್ನು (Nuclear Non-proliferation Treaty) ಕೈಬಿಡಲು ಮತ್ತು ಇರಾನಿನ ಪರಮಾಣು ಸಾಮರ್ಥ್ಯದ ಮೇಲೆ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮೇಲ್ವಿಚಾರಣೆಯನ್ನು ತೆಗೆದುಹಾಕಲು ಕಾರಣವಾಗಬಹುದು.

ಇತ್ತೀಚಿನ ವರ್ಷಗಳಲ್ಲಿ ಇರಾನ್ ಕೆಲವು ಅತಿ-ಸುರಕ್ಷಿತ ತಾಣಗಳನ್ನು (ultra-secure sites) ನಿರ್ಮಿಸಿದೆ ಮತ್ತು ಅದರ ಪರಮಾಣು ಸಾಮರ್ಥ್ಯಗಳನ್ನು ಬೇರೆ ಬೇರೆ ಕಡೆಗಳಲ್ಲಿ ಕಟ್ಟಿಕೊಂಡಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆ ದೇಶವು ಇಲ್ಲಿಯವರೆಗೆ ಹೊಂದಿದ್ದ ಸುರಕ್ಷಿತ ಪರಮಾಣು ವಸ್ತುಗಳ ಪ್ರಮಾಣವಾದ 60% ಪುಷ್ಟೀಕರಿಸಿದ ಯುರೇನಿಯಂನ (enriched uranium) 400 ಕೆಜಿಯನ್ನು ಡಜನ್‌ಗಿಂತ ಹೆಚ್ಚಿನ ತಾಣಗಳಿಗೆ ಹಂಚುವುದು ತುಂಬಾ ಕಷ್ಟದ ಕೆಲಸವಲ್ಲ.

ಇದನ್ನು ಎದುರಿಸಲು ಅಮೆರಿಕನ್ನರಿಗೆ ಇರುವ ದಾರಿಯೆಂದರೆ ಆಕ್ರಮಣ, ರಹಸ್ಯ ತಾಣಗಳೆಂದು ಹೇಳಲಾಗುವ ಘಟಕಗಳ ಮೇಲೆ ಬಾಂಬ್ ದಾಳಿ ನಡೆಸುವುದು.

ಇದರ ಪರಿಣಾಮ ಇನ್ನೂ ಕೆಟ್ಟದಾಗಿರುತ್ತದೆ, ಇರಾನ್ ಅಂತಿಮವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ರೂಪಿಸಲು ಕಾರಣವಾಗಬಹುದು. ಇದು ಊಹಿಸಲೂ ಅಸಾಧ್ಯವಾದ ಭಯಾನಕ ಪರಿಣಾಮಗಳಿಗೆ ಕಾರಣವಾಗಬಹುದು.

ಮತ್ತೊಂದೆಡೆ, ಇರಾನ್ ಮತ್ತೆ ವಿಷದ ಪಾತ್ರೆಯನ್ನೇ ನುಂಗಿ ಶಾಂತಿಗಾಗಿ ಮೊಕದ್ದಮೆ ಹೂಡಲು ನಿರ್ಧರಿಸಬಹುದು ಮತ್ತು ಇರಾನ್ ಮೇಲಿನ ಇಸ್ರೇಲ್-ಅಮೆರಿಕನ್ ಯುದ್ಧವು ಕೊನೆಗೊಳ್ಳಬಹುದು. ಆದರೆ ಆಳವಾಗಿ ಹಾನಿ ಆಗಿಯೇ ಆಗಿರುತ್ತದೆ. ಇರಾನಿಯನ್ನರು ತಮ್ಮ ಮೇಲೆ ದಾಳಿ ಮಾಡಿದ ದೇಶಗಳನ್ನು ನಂಬುವುದಿಲ್ಲ; ಹಾಗೆಯೇ, ಇಸ್ರೇಲ್ ಹೆಚ್ಚಾಗಿ ಅಖಂಡವಾಗಿರುವ ದೇಶವನ್ನು ನಂಬುವುದಿಲ್ಲ. ಇಸ್ರೇಲ್ ಬಯಸುವ ಶಾಂತಿ ಎಂದರೆ ಇರಾನ್‌ನ ಕೈಕಾಲುಗಳನ್ನು ಶಾಶ್ವತವಾಗಿ ಕಟ್ಟಿ ಹಾಕುವುದು. ಇರಾನಿನ ಜನರಿಗೆ ಇದು ಬೇಕೇ ಎಂಬುದು ಬೇರೆ ವಿಷಯ. ವಾಸ್ತವವಾಗಿ, ಯುಎಸ್ ಮತ್ತು ಇಸ್ರೇಲಿಗಳು ಇದನ್ನು ಮಾಡಲು ಸಮರ್ಥರಾಗಿದ್ದಾರೆಯೇ ಎಂಬುದು ಕೂಡ ಪ್ರಶ್ನಾರ್ಹವಾಗಿದೆ.

ಹಿಂದಿರುಗಿ ಒಮ್ಮೆ ನೋಡಿದರೆ, ಇರಾನ್ ತನ್ನಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುವ ಹಕ್ಕನ್ನು ಕೈಬಿಡುವುದಕ್ಕೆ ಸಿದ್ಧವಾಗಿಲ್ಲ ಎಂಬುದು ಸ್ಪಷ್ಟವಾದ ಕ್ಷಣದಿಂದ ಇಸ್ರೇಲ್‌ ಮತ್ತು ಅಮೆರಿಕ ಜಂಟಿಯಾಗಿ ತಮ್ಮ ಯೋಜನೆಯನ್ನು ಹಾಕಿಕೊಂಡವು. 2015 ರ P5+1 ರ ಜಂಟಿ ಸಮಗ್ರ ಕ್ರಿಯಾ ಯೋಜನೆ ಒಪ್ಪಂದವು (Joint Comprehensive Plan of Action agreement) ನಿಗದಿಪಡಿಸಿದ ಮಿತಿಯಂತೆ, ಇರಾನ್ 3.67% ಮಾತ್ರ ಪರಮಾಣು ಪುಷ್ಟೀಕರಣವನ್ನು ಮಾಡುವುದಕ್ಕೆ ರಾಜಿ ಮಾಡಿಕೊಂಡಿತ್ತು. 2018 ರಲ್ಲಿ ಟ್ರಂಪ್ JCPOA ಯಿಂದ ಹಿಂದೆ ಸರಿಯುವವರೆಗೂ ಇರಾನ್ ತಾನು ಒಪ್ಪಿಕೊಂಡಿದ್ದ ರಾಜಿಯನ್ನು ಪಾಲಿಸಿಕೊಂಡು ಬಂದಿತ್ತು.

ಒಂದು ಕಡೆ ಅಮೆರಿಕ ಯುದ್ಧಕ್ಕೆ ನಿರ್ಧರಿಸಿ, ಇನ್ನೊಂದು ಕಡೆ ಇರಾನಿಯನ್ನರೊಂದಿಗೆ ಮಾತುಕತೆ ಮುಂದುವರಿಸುವುದಾಗಿ ಕಟ್ಟುಕಥೆ ಕಟ್ಟಿ ನಟಿಸುತ್ತಾ ಬಂದಿದೆ. ಮೇ ತಿಂಗಳ ಅಂತ್ಯದಲ್ಲಿ, ಅಮೇರಿಕಾ ಇರಾನ್‌ನ ಹೊರಗೆ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುವ ಪ್ರಾದೇಶಿಕ ಒಕ್ಕೂಟವನ್ನು ರಚಿಸುವ ಪ್ರಸ್ತಾಪವನ್ನು ಇರಾನ್‌ನ ಮುಂದೆ ಇಟ್ಟಿತ್ತು, ಆದರೆ ಈ ಪ್ರಸ್ತಾಪವು ಇರಾನ್ ಒಪ್ಪಲಿಲ್ಲ. ಆದರೆ ಜೂನ್ 13 ರಂದು ಇಸ್ರೇಲಿಗಳು ಅಮೆರಿಕದ ವಿಶೇಷ ರಾಯಭಾರಿ ಸ್ಟೀವನ್ ವಿಟ್ಕಾಫ್ ಅವರೊಂದಿಗಿನ ಪರಮಾಣು ಮಾತುಕತೆಯಲ್ಲಿ ಮುಖ್ಯ ಸಮಾಲೋಚಕರಾಗಿದ್ದ ಅಲಿ ಶಮ್ಖಾನಿಯನ್ನು ಗುರಿ ಮಾಡಿದ್ದು ಅಮೆರಿಕದ ನಿಜವಾದ ಉದ್ದೇಶಗಳನ್ನು ತೋರಿಸುತ್ತದೆ. ಇಷ್ಟು ಆದ ಮೇಲೂ, ಕಟ್ಟುಕಥೆ ಹೇಳುವುದನ್ನು ಅಮೇರಿಕಾ ಮುಂದುವರಿಸಿತು. ಇಸ್ರೇಲ್ ದಾಳಿಗಳ ನಂತರವೂ ಸ್ಟೀವನ್ ವಿಟ್ಕಾಫ್ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿಯೊಂದಿಗೆ ಹಲವಾರು ಸುತ್ತಿನ ಫೋನ್ ಸಂಭಾಷಣೆಗಳನ್ನು ನಡೆಸಿದರು.

ಇಸ್ರೇಲ್ ತನ್ನ ಬಾಂಬ್ ದಾಳಿ ಕಾರ್ಯಾಚರಣೆಯನ್ನು ಕೈಬಿಟ್ಟರೆ ಮಾತುಕತೆಗೆ ಸಿದ್ಧ ಎಂದು ಇರಾನ್ ಅಮೆರಿಕಕ್ಕೆ ತಿಳಿಸಿತು.  ಶುಕ್ರವಾರ, ಫ್ರಾನ್ಸ್, ಜರ್ಮನಿ, ಯುಕೆ ಮತ್ತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ಮಂತ್ರಿಗಳು ಜಿನೀವಾದಲ್ಲಿ ತಮ್ಮ ಇರಾನಿನ ವಿದೇಶಾಂಗ ಮಂತ್ರಿಯನ್ನು ಭೇಟಿಯಾಗಿ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯುವ ಪ್ರಯತ್ನ ಮಾಡಿದರು. ರಾಜತಾಂತ್ರಿಕ ಪರಿಹಾರಗಳನ್ನು ಪರಿಗಣಿಸಲು ಇರಾನ್ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿತು, ಆದರೆ ಯುರೋಪಿಯನ್ನರು ನೀಡಿದ ಸಲಹೆಯೆಂದರೆ ಇರಾನ್ ಅಮೆರಿಕ ಹೇಳಿದಂತೆ ನಡೆದುಕೊಳ್ಳಬೇಕು ಎಂಬುದು.

ಈಗ, ಇರಾನ್ ಪ್ರತೀಕಾರ ತೀರಿಸಿಕೊಳ್ಳದಿದ್ದರೆ ಅಮೆರಿಕ ಶನಿವಾರ ನಡೆಸಿದ ಪರಮಾಣು ಸೌಲಭ್ಯಗಳ ಮೇಲಿನ ಬಾಂಬ್ ದಾಳಿಯನ್ನು ಮೀರಿ ಮುಂದುವರಿಯುವುದಿಲ್ಲ ಎಂದು ಇರಾನ್‌ಗೆ ತಿಳಿಸಲಾಗಿದೆ ಎಂದು ಅಮೆರಿಕಾ ಹೇಳುತ್ತಿದೆ. ಇರಾನ್‌ ಸುಮ್ಮನೆ ಇದ್ದರೆ, ಅಮೆರಿಕ ಹಿಂದೆ ಸರಿಯುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಇರಾನ್‌ನಲ್ಲಿ “ಆಡಳಿತ ಬದಲಾವಣೆ ಮಾಡುವ ಪ್ರಯತ್ನಗಳನ್ನು ಯೋಜಿಸಲಾಗಿಲ್ಲ.”

ಅಮೆರಿಕದ ಈ ನಡೆಗಳು ದೀರ್ಘಾವಧಿಯ ಕಾರ್ಯತಂತ್ರದ ಭಾಗವಾಗಿದ್ದು, ಇರಾನ್ ಅನ್ನು ಕಡೆವಿ ಹಾಕುವುದೇ ಇದರ ಗುರಿ. ಸಾಂಪ್ರದಾಯಿಕವಾದ ತಂತ್ರವಾಗಿರುವ ಇದರಲ್ಲಿ ಮಿಲಿಟರಿ ಪರಿಣಾಮಗಳ ಭಯವನ್ನು ಹುಟ್ಟುಹಾಕುವ ಮೂಲಕ ಎದುರಾಳಿಯನ್ನು ನಿರುತ್ಸಾಹಗೊಳಿಸಲಾಗುತ್ತದೆ. ಆದರೆ ಅಮೆರಿಕಾಕ್ಕೆ ಬೇಕಿರುವುದು ಮೊದಲನೆಯ ಮಹಾಯುದ್ಧದ ನಂತರ ಅದರ ಮಿತ್ರರಾಷ್ಟ್ರಗಳು ಜರ್ಮನಿಯ ವಿರುದ್ಧ ಏನೆಲ್ಲಾ ಮಾಡಿದ್ದವೋ, ಅದನ್ನೇ ಇರಾನ್‌ಗೂ ಮಾಡುವುದು.

ಇಸ್ರೇಲ್-ಅಮೆರಿಕನ್ ಮಿಲಿಟರಿ ಕಾರ್ಯಾಚರಣೆಯ ಅಂತಿಮ ಪರಿಣಾಮವೆಂದರೆ ಆ ಎರಡೂ ರಾಷ್ಟ್ರಗಳು ಮಧ್ಯಪ್ರಾಚ್ಯ ದೇಶಗಳ ಮೇಲೆ ಸಂಪೂರ್ಣ ಮಿಲಿಟರಿ ನಿಯಂತ್ರಣವನ್ನು ತೆಗೆದುಕೊಳ್ಳುವುದು. ಇಸ್ರೇಲ್ ಹೆಚ್ಚು ಸುರಕ್ಷಿತವಾಗಿರುತ್ತದೆ, ಆದರೆ ಅದು ಸುಳ್ಳು ಭದ್ರತೆ ಮತ್ತು ದುರಹಂಕಾರವನ್ನು ತುಂಬಿಕೊಳ್ಳುತ್ತದೆ. ಕಳೆದ ಎರಡು ವಾರಗಳಿಂದ ಈ ಘಟನೆಗಳಿಂದ ದೂರ ಉಳಿದಿರುವ ಚೀನಾ ಮತ್ತು ರಷ್ಯಾಗಳು ಈ ಹಂತದಲ್ಲಿ ಅಮೆರಿಕ ತಾನು ತನ್ನ ಬಗ್ಗೆ ರೂಪಿಸಿಕೊಂಡಿರುವ ಪ್ರಾದೇಶಿಕ ಪ್ರಾಮುಖ್ಯತೆಯನ್ನು ದುರ್ಬಲಗೊಳಿಸಲು ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ.

ಪ್ರಪಂಚದ ಮೇಲೆ ಇದರ ಪರಿಣಾಮಗಳು ದೊಡ್ಡದಾಗಿರುತ್ತವೆ. ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳಿಲ್ಲದ ರಾಷ್ಟ್ರದ ಮೇಲೆ ಬಾಂಬ್ ದಾಳಿ ಮಾಡಿವೆ, ಅವು ಕೂಡ ದಾಳಿಗೆ ಒಳಗಾಗಿವೆ. ಭದ್ರತೆಯ ಕಾರಣಕ್ಕಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಹೆಚ್ಚು ಹೆಚ್ಚು ದೇಶಗಳು ಮುಂದಾಗುತ್ತವೆ. ಇಸ್ರೇಲ್‌ನ ಆಪರೇಷನ್ ರೈಸಿಂಗ್ ಲಯನ್ ಮತ್ತು ಅಮೆರಿಕದ ಮಿಡ್‌ನೈಟ್ ಹ್ಯಾಮರ್‌ಗೂ ಮುಂಚೆಯೇ, ಟ್ರಂಪ್‌ರ ನೀತಿಗಳು ಪ್ರಸ್ತುತ ಅಮೆರಿಕದ ಪರಮಾಣು ನೀತಿಗಳ ಛತ್ರಿಯಡಿಯಲ್ಲಿ ಬರುವ ಮಿತ್ರರಾಷ್ಟ್ರಗಳನ್ನು ಎಚ್ಚರಿಸಿದ್ದವು – ಒಂದು ದಶಕದ ಹಿಂದೆ ಯೋಚಿಸಲಾಗದಂತ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು.

ನಡೆದ ಘಟನೆ ಮತ್ತು ಅದರ ಪರಿಣಾಮಗಳ ವಾಬ್ದಾರಿಯನ್ನು ಹೊರಬೇಕಾದವನು ಒಬ್ಬನೇ ಒಬ್ಬ ಮನುಷ್ಯ – ಅದು ಡೊನಾಲ್ಡ್ ಟ್ರಂಪ್. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಎಂಬ ನಂಬಿಕೆಯಲ್ಲಿ ವಿಶ್ವ ಸಮುದಾಯವು ಒಗ್ಗಟ್ಟಾಗಿತ್ತು ಮತ್ತು ಅದು 2015 ರ JCPOA ಯನ್ನು ಆಧರಿಸಿತ್ತು. ಟ್ರಂಪ್ ಆ ದಾಖಲೆಯನ್ನು ಹರಿದುಹಾಕಿದರು, ಇರಾನ್ ಮೇಲೆ “ಗರಿಷ್ಠ ಒತ್ತಡ”ವನ್ನು ಹಾಕಿದರು, ಇರಾನ್‌ನ ಪ್ರಮುಖ ಜನರಲ್ ಖಾಸಿಮ್ ಸೊಲೈಮಾನಿಯನ್ನು ಹತ್ಯೆ ಮಾಡಿದರು. ಇಲ್ಲದಿದ್ದರೆ ಹಲವಾರು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬೇಕಾದಷ್ಟು ಪುಷ್ಟೀಕರಿಸಿದ ಯುರೇನಿಯಂ ( enriched uranium) ಅನ್ನು ಸಂಗ್ರಹಿಸುವ ಹಂತಕ್ಕೆ ಹೋಗಲು ಇರಾನ್‌ಗೆ ಇನ್ನೂ ಒಂದು ದಶಕ ಬೇಕಾಗುತ್ತಿತ್ತು.

JCPOA ಅನ್ನು ಪುನಃಸ್ಥಾಪಿಸಲು ನಡೆದ ಮಾತುಕತೆಗಳನ್ನು ಹಾಳು ಮಾಡಿದ ಕೀರ್ತಿಯೂ ಟ್ರಂಪ್‌ಗೆ ಹೋಗುತ್ತದೆ. ಆರಂಭದಲ್ಲಿ ಅವರು “ಸಶಸ್ತ್ರೀಕರಣ ಬೇಡ” ಎಂಬ ರೆಡ್‌ ಲೈನ್‌ ಹಾಕಿದರು, ಆದರೆ ಇಸ್ರೇಲಿನ ಒತ್ತಡದ ಅಡಿಯಲ್ಲಿ ಮಾತುಕತೆಯನ್ನು ನಡೆಸುತ್ತಲೇ ಅರ್ಧದಾರಿಯಲ್ಲೇ ಅವರು ತಮ್ಮ ಅಭಿಪ್ರಾಯವನ್ನು ಅಣ್ವಸ್ತ್ರಗಳ “ಪುಷ್ಟೀಕರಣ ಬೇಡ – no enrichment” ಎಂಬುದಕ್ಕೆ ಬದಲಾಯಿಸಿದರು.

ಅಮೆರಿಕ-ಇರಾನ್ ಪರಮಾಣು ಒಪ್ಪಂದವನ್ನು ತಡೆಯಲು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿತು ಎಂದು ನಂಬಲು ಕಾರಣಗಳಿವೆ. ಶನಿವಾರ ಸಂಜೆ ಅಮೆರಿಕದ ದಾಳಿಗಳನ್ನು ಘೋಷಿಸಿದ ಟ್ರಂಪ್ ಅವರ ಭಾಷಣದಲ್ಲಿ ನೆತನ್ಯಾಹು ಅವರಿಗೆ ಧನ್ಯವಾದ ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದು ತನ್ನದೇ ಆದ ಕಥೆಯನ್ನು ಹೇಳುತ್ತದೆ.

ವರ್ತಮಾನದ ಸಂಗತಿಗಳನ್ನು ನೋಡಿ ಭವಿಷ್ಯವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅದರೆ ಅದರ ಇತಿಹಾಸವನ್ನು ನೋಡಿದರೆ, (ಇರಾನ್‌ನಲ್ಲಿ) ಆಡಳಿತ ಬದಲಾವಣೆ ಮಾಡುವುದರಲ್ಲಿ ತಾನು ಆಸಕ್ತಿ ಹೊಂದಿಲ್ಲ ಎಂಬ ಅಮೆರಿಕದ ಮಾತನ್ನು ಒಪ್ಪಿಕೊಳ್ಳುವುದು ಕಷ್ಟ. ಆ ದಿಕ್ಕಿನಲ್ಲಿ ಅಮೇರಿಕಾ ನಡೆಸುತ್ತಿರುವ ಪ್ರಯತ್ನಗಳು ದೇಶದಲ್ಲಿ ಅಂತರ್ಯುದ್ಧ ಮತ್ತು ಅರಾಜಕತೆಗೆ ಕಾರಣವಾಗಬಹುದು ಮತ್ತು ಅದರ ಹತ್ತಿರದ ನೆರೆಹೊರೆಯ ದೇಶಗಳ ಮೇಲೆ ಪರಿಣಾಮ ಬೀರಬಹುದು.

ಮತ್ತೊಂದೆಡೆ, ಆಡಳಿತವು ಉಳಿದರೂ, ಅದು ನಿರ್ಣಾಯಕವಾಗಿ ದುರ್ಬಲರ ಆಯುಧವಾದ ಭಯೋತ್ಪಾದನೆಯನ್ನು ಇಟ್ಟುಕೊಂಡು ನಡೆಸುವ ಆಡಳಿತವಾಗಬಹುದು.

ಜಾಗತೀಕರಣವು ವ್ಯಾಪಾರ, ಪ್ರತಿಭೆಗಳು ಮತ್ತು ಹೊಸ ಅನ್ವೇಷನೆಗಳು ದೇಶಗಳನ್ನು ಸ್ಥಿರವಾಗಿ ಶ್ರೀಮಂತಗೊಳಿಸುವ ವಿಶ್ವ ಕ್ರಮಕ್ಕೆ ಕಾರಣವಾಗುತ್ತದೆ ಎಂದು ನಾವು ಒಂದು ಕಾಲದಲ್ಲಿ ನಂಬಿದ್ದೆವು, ಆದರೆ ಈಗ ನಾವು ಅನಿಶ್ಚಿತ ಜಗತ್ತೊಂದನ್ನು ನೋಡುತ್ತಿದ್ದೇವೆ, ಅಲ್ಲಿ ಶಕ್ತಿ ಮತ್ತು ಬಲಶಾಲಿಗಳು ನಿಯಮಗಳನ್ನು ರೂಪಿಸುತ್ತಾರೆ.

ಲೇಖಕ: ಮನೋಜ್‌ ಜೋಶಿ, ನವದೆಹಲಿಯ ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಡಿಸ್ಟಿಂಗ್ವಿಶ್ಡ್ ಫೆಲೋ

(ಇದು US-Israeli War on Iran: Tactical Success May Not Add Up to Strategic Victory ಎಂದು ದಿ ವೈರ್‌ ಪ್ರಕಟಿಸಿದ ಅಂಕಣದ ಕನ್ನಡಾನುವಾದ)

ಇರಾನ್ ಅಧ್ಯಕ್ಷರೊಂದಿಗೆ ಮೋದಿ ದೂರವಾಣಿ ಮಾತುಕತೆ: ಅಮೆರಿಕದ ದಾಳಿಗಳ ಬಗ್ಗೆ ‘ಕಳವಳ’ ಮಾತ್ರ, ಖಂಡನೆ ಇಲ್ಲ!
ಇರಾನ್‌ನ ಮೂರು ಪರಮಾಣು ಘಟಕಗಳ ಮೇಲೆ ಅಮೆರಿಕ ಜೂನ್ 22, 2025 ಭಾನುವಾರ ಮುಂಜಾನೆ ವೈಮಾನಿಕ ದಾಳಿ ನಡೆಸಿದ ಹಲವು ಗಂಟೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಬಗ್ಗೆ “ತೀವ್ರ ಕಳವಳ” ವ್ಯಕ್ತಪಡಿಸಿದರು. ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ “ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು” ಕರೆ ನೀಡಿದರು. ಈ ಫೋನ್‌ ಕರೆಯನ್ನು ಪೆಜೆಶ್ಕಿಯಾನ್ ಮಾಡಿದ್ದಾರೆ.

ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ ಮೋದಿ, ಇಬ್ಬರು ನಾಯಕರು “ಪ್ರಸ್ತುತ ಸಂದರ್ಭದ ಪರಿಸ್ಥಿತಿಯನ್ನು ವಿವರವಾಗಿ” ಚರ್ಚಿಸಿದರು ಮತ್ತು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆ ಕಂಡುಕೊಳ್ಳಲು ಭಾರತ ಬೆಂಬಲಿಸುವುದಾಗಿ ಹೇಳಿದರು. “ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಮರು ಕಟ್ಟುವ” ಅಗತ್ಯವನ್ನು ಒತ್ತಿ ಹೇಳಿದ ಅವರು, ರಾಜತಾಂತ್ರಿಕತೆ ಮತ್ತು ಮಾತುಕತೆಯೇ ಮುಂದಿನ ಕಾರ್ಯಸಾಧ್ಯತೆಯ ಮಾರ್ಗವಾಗಿದೆ ಎಂದು ಹೇಳಿದರು.

“ಇರಾನ್‌ನ ಪರಮಾಣು ಸಾಮರ್ಥ್ಯವನ್ನು ನಾಶಮಾಡಲು” ಅಮೆರಿಕದ ಬಾಂಬರ್‌ಗಳು ಇರಾನಿನ ಮೂರು ಪರಮಾಣು ತಾಣಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ ಭಾರತ ನೀಡಿದ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ಇದಾಗಿದೆ. ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಮಾಡಿದ ವರದಿಗಳ ಪ್ರಕಾರ, ಫೋರ್ಡೋ ಮತ್ತು ನಟಾಂಜ್ ಪರಮಾಣು ಸೌಲಭ್ಯಗಳ ಮೇಲೆ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಹಾಕಲಾಯಿತು, ಆದರೆ ಕ್ರೂಸ್ ಕ್ಷಿಪಣಿಗಳನ್ನು ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಎರಡನೇ ತಾಣದ ಮೇಲೆ ಜಲಾಂತರ್ಗಾಮಿ ನೌಕೆಗಳನ್ನು ಬಳಸಿ ಹಾರಿಸಲಾಯಿತು.

ಕೇವಲ ಎರಡು ತಿಂಗಳ ಹಿಂದೆ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪೆಜೆಶ್ಕಿಯಾನ್ ಅವರು ಮೋದಿಯವರೊಂದಿಗೆ ಫೋನ್ ಮೂಲಕ ಮಾತನಾಡಿದ್ದರು, ಉಗ್ರರ ದಾಳಿಯನ್ನು ಬಲವಾಗಿ ಖಂಡಿಸಿದ್ದರು.

ನರೇಂದ್ರ ಮೋದಿಯವರ X ಪೋಸ್ಟ್

ಭಾರತದ ವಿದೇಶಾಂಗ ಸಚಿವಾಲಯದ (MEA) ಪತ್ರಿಕಾ ಪ್ರಕಟಣೆಯ ಪ್ರಕಾರ, ಅಧ್ಯಕ್ಷ ಪೆಜೆಶ್ಕಿಯಾನ್ ಅವರು ಈ ಫೋನ್‌ ಕರೆಯನ್ನು ಮಾಡಿದರು. ಇರಾನಿನ ಅಧ್ಯಕ್ಷರ ವೆಬ್‌ಸೈಟ್ ನಲ್ಲಿ ಇವರು ಈಜಿಪ್ಟ್, ಪಾಕಿಸ್ತಾನ, ಫ್ರಾನ್ಸ್ ಮತ್ತು ಭಾರತ ಸೇರಿದಂತೆ ಹಲವಾರು ವಿಶ್ವ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ಕಂಡುಬಂದಿದೆ.

“ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ತೀವ್ರ ಕಳವಳ” ವ್ಯಕ್ತಪಡಿಸುವುದಕ್ಕೆ ಸೀಮಿತವಾದ ಮೋದಿಯವರ ಹೇಳಿಕೆಯಲ್ಲಿ, ಅಮೆರಿಕದ ದಾಳಿಗಳನ್ನು ಖಂಡಿಸದೆ ಇರುವುದು ಕಂಡು ಬಂದಿದೆ. ದಾಳಿಗಳ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ, ಅಥವಾ ಕೃತ್ಯದ ಜವಾಬ್ದಾರಿಯನ್ನು ಯಾರ ಮೇಲೂ ಆರೋಪಿಸುವ ಯತ್ನವನ್ನೂ ಮಾಡಲಾಗಿಲ್ಲ. “ಪ್ರಸ್ತುತ ಪರಿಸ್ಥಿತಿ” ಮತ್ತು “ಇತ್ತೀಚಿನ ಉಲ್ಬಣಗಳು” ಎಂಬಂತಹ ವಿಶಾಲಾರ್ಥದ ಪದಗಳನ್ನು ಮಾತ್ರ ಬಳಸಲಾಯಿತು.

ಇಸ್ರೇಲ್ ಇರಾನಿನ ತಾಣಗಳನ್ನು ಗುರಿಯಾಗಿಸಲು ಪ್ರಾರಂಭಿಸುವ ಮೊದಲು ತನ್ನ ಪರಮಾಣು ಕಾರ್ಯಕ್ರಮದ ಕುರಿತು ಯುರೋಪಿಯನ್ ದೇಶಗಳೊಂದಿಗೆ ಇರಾನ್‌ ತಾನು ಮಾತುಕತೆಗಳಲ್ಲಿ ತೊಡಗಿಕೊಂಡಿರುವುದಾಗಿ ಹೇಳಿತ್ತು. ಅಮೆರಿಕದ ವೈಮಾನಿಕ ದಾಳಿಗೆ ಕೆಲವೇ ದಿನಗಳ ಮೊದಲು, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಯುರೋಪಿಯನ್ ಸಹವರ್ತಿ ದೇಶಗಳೊಂದಿಗೆ ಸಭೆಗಳನ್ನು ನಡೆಸಿದ್ದರು.

ಇರಾನ್ ಅಧ್ಯಕ್ಷರ ಕಚೇರಿಯ ಫಾರ್ಸಿ ಭಾಷೆಯಲ್ಲಿ ಪ್ರಕಟವಾದ ಪತ್ರದ ಪ್ರಕಾರ, ಅಧ್ಯಕ್ಷ ಪೆಜೆಶ್ಕಿಯಾನ್ ಕೂಡ ಇದನ್ನೇ ಒತ್ತಿ ಹೇಳಿದರು. ದಾಳಿಯ ಸಮಯದಲ್ಲಿ ಇರಾನ್ ಅಮೆರಿಕದೊಂದಿಗೆ ಮಾತುಕತೆಗಳಲ್ಲಿ ತೊಡಗಿತ್ತು ಎಂದು ಅವರು ಹೇಳಿದರು. ಇದು ಅಮೇರಿಕಾ ತಾನು ನಡೆಸುವ ಸಂವಾದಕ್ಕೆ ಬದ್ಧತೆಯಿಂದ ನಡೆದುಕೊಳ್ಳದೆ, ಯಾವಾಗಲೂ “ಟೊಳ್ಳು ಮತ್ತು ಆಧಾರರಹಿತ” ಸಂವಾದ ನಡೆಸುವುದಕ್ಕೆ ಪುರಾವೆಯಾಗಿದೆ ಎಂದು ಅವರು ಹೇಳಿದರು.

“ಇಂದು ಜಗತ್ತು ನೋಡುತ್ತಿರುವುದು ಆತಂಕಕಾರಿ ಮತ್ತು ಸ್ವೀಕಾರಾರ್ಹವಲ್ಲದ ಪ್ರವೃತ್ತಿ ಇದಾಗಿದೆ. ಇದರಲ್ಲಿ ಅಂತರರಾಷ್ಟ್ರೀಯ ನಿಯಮಗಳು ಮತ್ತು ಕಟ್ಟುಪಾಡುಗಳ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವ ದೇಶವೊಂದು – ವಿಶೇಷವಾಗಿ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ – ಅಮೇರಿಕಾ ಮತ್ತು ಝಿಯೋನಿಸ್ಟ್ ಆಡಳಿತದ ದೇಶದಿಂದ ನೇರವಾಗಿ ಮತ್ತು ಬಹಿರಂಗವಾಗಿ ದಾಳಿಗೊಳಗಾಗುತ್ತಿದೆ” ಎಂದು ಪೆಜೆಶ್ಕಿಯನ್ ಹೇಳಿದ್ದಾರೆ. “ಶಾಂತಿ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ನಿಯಮಗಳ ಅನುಸರಣೆಗೆ ಸಂಬಂಧಿಸಿದ ಅವರ ಎಲ್ಲಾ ಹಕ್ಕುಗಳು ಘೋಷಣೆಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳು ನಾಶವಾಗಿದೆ ಎಂಬುದನ್ನು ಇದು ತೋರಿಸುತ್ತದೆ,” ಎಂದು ಅವರು ಹೇಳಿದ್ದಾರೆ.

ಅಮೆರಿಕ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಇರಾನ್ ಮೇಲಿನ ಇಸ್ರೇಲಿ ದಾಳಿಗಳನ್ನು ಬೆಂಬಲಿಸಿವೆ ಎಂದು ಅವರು ಆರೋಪಿಸಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೂನ್ 13 ರಂದು ಮೋದಿ ಅವರಿಗೆ ಕರೆ ಮಾಡಿದ್ದರು, ಈ ಸಂದರ್ಭದಲ್ಲಿ ಅವರು “ಭಾರತದ ಕಳವಳಗಳನ್ನು ಹಂಚಿಕೊಂಡರು ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದರು” ಎಂದು ವರದಿಯಾಗಿದೆ.

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸೃಷ್ಟಿಸುತ್ತಿದೆ ಎಂಬ ಅಮೆರಿಕ ಮತ್ತು ಇಸ್ರೇಲ್‌ನ ಆರೋಪಗಳನ್ನು “ದೊಡ್ಡ ಮತ್ತು ಐತಿಹಾಸಿಕ ಸುಳ್ಳು” ಎಂದು ಇರಾನ್ ಅಧ್ಯಕ್ಷರು ತಳ್ಳಿಹಾಕಿದರು.

“ಸರ್ವೋಚ್ಚ ನಾಯಕ ಹೊರಡಿಸಿದ ಸ್ಪಷ್ಟ ಫತ್ವಾ ಪ್ರಕಾರ, ಪರಮಾಣು ಶಸ್ತ್ರಾಸ್ತ್ರಗಳ ನಿರ್ಮಾಣ ಮತ್ತು ಬಳಕೆಯನ್ನು ಧಾರ್ಮಿಕವಾಗಿ ಹಾಗೂ ನೈತಿಕವಾಗಿ ನಿಷೇಧಿಸಲಾಗಿದೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ರಕ್ಷಣಾ ಸಿದ್ಧಾಂತದಲ್ಲಿ ಅದಕ್ಕೆ ಯಾವುದೇ ಸ್ಥಾನವಿಲ್ಲ.‌ ಇವೆಲ್ಲವೂ ಜಾಗತಿಕ ವೇದಿಕೆಯಲ್ಲಿ ಇರಾನ್ ವಿರುದ್ಧ ನಡೆಸುವ ಎಲ್ಲಾ ಅಪಪ್ರಚಾರಗಳು ಶುದ್ಧ ಸುಳ್ಳು” ಎಂದು ಪೆಜೆಶ್ಕಿಯನ್ ಹೇಳಿದ್ದಾರೆ.

ಇರಾನ್ ತನ್ನ ಕಾನೂನು ಮತ್ತು ಕಾನೂನುಬದ್ಧ ಹಕ್ಕುಗಳನ್ನು ಪ್ರತಿಪಾದಿಸಲು ತಡೆಯನ್ನು ಉಂಟು ಮಾಡುವ ಪ್ರಯತ್ನಗಳನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು. “ನಮ್ಮ ರಾಷ್ಟ್ರ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವ ಹಕ್ಕನ್ನು ನಾವು ಕಾಪಾಡಿಕೊಂಡಿದ್ದೇವೆ,” ಎಂದು ಅವರು ಹೇಳಿದರು.

ನಂತರ, ಭಾನುವಾರ ಮಧ್ಯಾಹ್ನ ಇಸ್ತಾನ್‌ಬುಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಇರಾನ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲು ಅರಾಘ್ಚಿ ನಿರಾಕರಿಸಿದರು. ದೇಶವು “ಎಲ್ಲಾ ಆಯ್ಕೆಗಳನ್ನು ಕಾಯ್ದಿರಿಸಿದೆ” ಎಂದು ಹೇಳಿದರು. “ಸಾಮಾನ್ಯವಾಗಿ, ಸಂವಾದ ಮತ್ತು ಮಾತುಕತೆಗೆ ಬಾಗಿಲು ಯಾವಾಗಲೂ ತೆರೆದಿರಬೇಕು, ಆದರೆ ಪ್ರಸ್ತುತ ಪರಿಸ್ಥಿತಿ ಸಾಮಾನ್ಯವಲ್ಲ. ನನ್ನ ದೇಶವು ದಾಳಿಗೆ ಒಳಗಾಗಿದೆ, ಆಕ್ರಮಣಕ್ಕೆ ಒಳಗಾಗಿದೆ ಮತ್ತು ನಾವು ನಮ್ಮ ಸ್ವರಕ್ಷಣೆಯ ಕಾನೂನುಬದ್ಧ ಹಕ್ಕನ್ನು ಆಧರಿಸಿ ಪ್ರತಿಕ್ರಿಯಿಸಬೇಕಾಗಿದೆ,” ಅವರು ಹೇಳಿದರು.

ಇರಾನ್‌ನಲ್ಲಿರುವ ಭಾರತೀಯರನ್ನು ವಾಪಾಸ್‌ ದೇಶಕ್ಕೆ ಅವರ ದೇಶಕ್ಕೆ ಕಳುಹಿಸಲು ಇರಾನ್ ನೀಡಿದ ನಿರಂತರ ಬೆಂಬಲಕ್ಕಾಗಿ ಮೋದಿ ಧನ್ಯವಾದ ಅರ್ಪಿಸಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವ್ಯಾಪಾರ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜೂನ್ 13 ರಂದು ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ಮಾಡುವ ಮೊದಲು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಉದ್ಯಮಿಗಳು ಸೇರಿದಂತೆ 10,000 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಇರಾನ್‌ನಲ್ಲಿ ವಾಸಿಸುತ್ತಿದ್ದರು. ಇಲ್ಲಿಯವರೆಗೆ, ಆಪರೇಷನ್ ಸಿಂಧು ಅಡಿಯಲ್ಲಿ 1,428 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ. ಹೆಚ್ಚಿನ ವೈಮಾನಿಕ ಮಾರ್ಗಗಳು ಮುಚ್ಚಲ್ಪಟ್ಟಿರುವುದರಿಂದ, ವಿಶೇಷ ವಿಮಾನಗಳು ಈಶಾನ್ಯ ಇರಾನಿನ ನಗರವಾದ ಮಶಾದ್‌ನಿಂದ ಕಾರ್ಯನಿರ್ವಹಿಸುತ್ತಿವೆ. ಇತರರು ವಾಣಿಜ್ಯ ವಿಮಾನಗಳನ್ನು ಬಳಸಿ ದೆಹಲಿಗೆ ಹೋಗಲು ಭೂ ಗಡಿಗಳನ್ನು ದಾಟಿ ಅರ್ಮೇನಿಯಾ ಅಥವಾ ತುರ್ಕಮೆನಿಸ್ತಾನಕ್ಕೆ ಹೋಗುತ್ತಿದ್ದಾರೆ.

ಇರಾನ್‌ನಲ್ಲಿ ಅತ್ಯಂತ ಹೆಚ್ಚು ಭಾರತೀಯ ವಲಸಿಗರು ಇರುವುದರಿಂದ ಮತ್ತು ಕೊಲ್ಲಿ ರಾಷ್ಟ್ರದ ಇಂಧನವನ್ನು ಭಾರತವು ಹೆಚ್ಚು ಆಮದು ಮಾಡಿಕೊಳ್ಳುತ್ತಿರುವುದರಿಂದ, ಈ ಸಂಘರ್ಷವು ಭಾರತದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.

ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿಯ ಮೂಲಕ ಸಮುದ್ರ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ ಎಂದು ಸೂಚಿಸಿದೆ. ಭಾರತಕ್ಕೆ ಇಂಧನ ಸರಬರಾಜುಗಳು ನಡೆಯುವ ಪ್ರಮುಖ ತೈಲ ಸಾಗಣೆಯು ಈ ಮಾರ್ಗಗಳಲ್ಲಿ ಬರುವ ಚಾಕ್‌ಪಾಯಿಂಟ್ ಮೂಲಕ ನಡೆಯುತ್ತದೆ. ಕೇಂದ್ರ ಪೆಟ್ರೋಲ್ ಸಚಿವ ಹರ್ದೀಪ್ ಸಿಂಗ್ ಪುರಿ ಅವರು X ನಲ್ಲಿ ಪೋಸ್ಟ್‌ನಲ್ಲಿ, “… ನಾವು ಕಳೆದ ಕೆಲವು ವರ್ಷಗಳಿಂದ ನಮ್ಮ ಸರಬರಾಜುಗಳನ್ನು ವೈವಿಧ್ಯಗೊಳಿಸಿದ್ದೇವೆ ಮತ್ತು ನಮ್ಮ ಹೆಚ್ಚಿನ ಪ್ರಮಾಣದ ಸರಬರಾಜುಗಳು ಈಗ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುದಿಲ್ಲ. ನಮ್ಮ ತೈಲ ಮಾರುಕಟ್ಟೆ ಕಂಪನಿಗಳು ಹಲವಾರು ವಾರಗಳಿಗೆ ಬೇಕಾದ ಸರಬರಾಜುಗಳನ್ನು ಹೊಂದಿವೆ, ಹಲವಾರು ಮಾರ್ಗಗಳಿಂದ ಇಂಧನ ಸರಬರಾಜುಗಳನ್ನು ಪಡೆಯುತ್ತಲೇ ಇವೆ. ನಮ್ಮ ನಾಗರಿಕರಿಗೆ ಬೇಕಾದ ಇಂಧನವನ್ನು ಪೂರೈಸುವುದರಲ್ಲಿ ಯಾವುದೇ ಅಡೆತಡೆಯಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ,” ಎಂದು ಹೇಳಿದರು.

ಈಗಾಗಲೇ ಅಸ್ಥಿರವಾಗಿರುವ ತೈಲ ಬೆಲೆಗಳು, ಮಾರುಕಟ್ಟೆಗಳು ಮತ್ತೆ ತೆರೆದಾಗ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಹತ್ತು ದಿನಗಳ ಹಿಂದೆ ಇರಾನ್ ಮೇಲೆ ಇಸ್ರೇಲ್‌ನ ಆರಂಭಿಕ ಕ್ಷಿಪಣಿ ದಾಳಿಯ ನಂತರ, ಕಚ್ಚಾ ತೈಲ ಬೆಲೆಗಳು ಈಗಾಗಲೇ 10% ರಷ್ಟು ಏರಿಕೆಯಾಗಿವೆ.

ಮೈಕ್ರೋಸಾಫ್ಟ್‌ ಮೇಲೆ ಪ್ಯಾಲಿಸ್ತೇನ್‌ ಪರ ಹೋರಾಟಗಳನ್ನು ಹತ್ತಿಕ್ಕುವ ಆರೋಪ!
ಅಮೇರಿಕಾದ ವಾಷಿಂಗ್ಟನ್‌ನ ಸೀಟಲ್‌ ಕೇಂದ್ರಿತ ದೈತ್ಯ ಟೆಕ್‌ ಕಂಪನಿ ʼಮೈಕ್ರೋಸಾಫ್ಟ್‌ʼ ತನ್ನ ಕಾರ್ಪೊರೇಟ್ ಎಕ್ಸ್‌ಚೇಂಜ್ ಸರ್ವರ್‌ಗಳ ಮೂಲಕ “ಪ್ಯಾಲೆಸ್ತೇನ್,” “ಗಾಜಾ,” ಮತ್ತು “ಜನಾಂಗೀಯ ಹತ್ಯೆ” ಮುಂತಾದ ಪದಗಳನ್ನು ಕಳುಹಿಸುವುದನ್ನು ನಿರ್ಬಂಧಿಸುವ ಆಂತರಿಕ ಇಮೇಲ್ ನಿರ್ಬಂಧಗಳನ್ನು ಸದ್ದಿಲ್ಲದೆ ಜಾರಿಗೆ ತಂದಿದೆ ಎಂದು ಅದರ ಪ್ಯಾಲೆಸ್ತೇನ್ ಪರ ಉದ್ಯೋಗಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಇಸ್ರೇಲಿ ಮಿಲಿಟರಿಯೊಂದಿಗಿನ ಮೈಕ್ರೋಸಾಫ್ಟ್‌ ಕಂಪನಿಯ ಸಹಯೋಗವನ್ನು ಕೊನೆಗೊಳಿಸುವಂತೆ ಒತ್ತಾಯಿಸುವ ಮೈಕ್ರೋಸಾಫ್ಟ್ ಉದ್ಯೋಗಿಗಳ ಸಾಮೂಹಿಕ ಸಂಘಟನೆಯಾದ ನೋ ಅಜುರೆ ಫಾರ್ ಅಪಾರ್ಥೀಡ್ (No Azure for Apartheid) ಈ ಆರೋಪಗಳನ್ನು ಮಾಡಿದೆ. ಮೈಕ್ರೋಸಾಫ್ಟ್‌ನ ಪ್ರಮುಖ ಬಿಲ್ಡ್ ಡೆವಲಪರ್ ಸಮ್ಮೇಳನವು ಉನ್ನತ ಮಟ್ಟದ ಉದ್ಯೋಗಿಗಳ ಪ್ರತಿಭಟನೆಗಳಿಂದ ಹಾನಿಗೊಳಗಾದಂತೆಯೇ ಬುಧವಾರ ಇಮೇಲ್ ಫಿಲ್ಟರ್ ಮೊದಲ ಬಾರಿಗೆ ಗಮನಕ್ಕೆ ಬಂತು ಎಂದು ಈ ಸಂಘಟನೆ ಹೇಳಿದೆ.

“ಈ ಫಿಲ್ಟರ್‌ ಇ-ಮೇಲ್‌ನಲ್ಲಿ ನಿರ್ದಿಷ್ಟ ಪದಗಳನ್ನು ತಲುಪಬೇಕಾದವರಿಗೆ ಹೋಗದಂತೆ ನಿರ್ಬಂಧಿಸುತ್ತದೆ. ʼP4lestineʼ ಅಥವಾ ʼIsraelʼ ಎಂದು ಬಳಸಿದರೂ ಸಾಧ್ಯವಾಗುತ್ತಿಲ್ಲ,” ಎಂದು ಈ ಸಂಘಟನೆ ಆರೋಪ ಮಾಡಿದೆ. ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.

ಇಸ್ರೇಲ್ ರಕ್ಷಣಾ ಸಚಿವಾಲಯದೊಂದಿಗೆ ಮೈಕ್ರೋಸಾಫ್ಟ್‌ ಇಟ್ಟುಕೊಂಡಿರುವ ವ್ಯವಹಾರ ಸಂಬಂಧಗಳ ಬಗ್ಗೆ ಕಂಪನಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ವಿಶೇಷವಾಗಿ ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗಳಿಂದ ಸಂಭವಿಸುತ್ತಿರುವ ಘೋರ ಸಾವುನೋವುಗಳು ಮತ್ತು ಮಾನವೀಯ ಬಿಕ್ಕಟ್ಟುಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಕಂಪನಿಯ ಒಳಗೂ ಉದ್ಯೋಗಿಗಳು ತಮ್ಮ ಸಂಸ್ಥೆಯು ಇಸ್ರೇಲ್‌ ಜೊತೆಗೆ ಇಟ್ಟುಕೊಂಡಿರುವ ಸಂಬಂಧಗಳ ಬಗ್ಗೆ ತೀವ್ರ ಪ್ರತಿರೋಧವನ್ನು ಒಡ್ಡುತ್ತಿದ್ದಾರೆ.

ಬಿಲ್ಡ್‌ನ ಆರಂಭದಲ್ಲಿ ಮೈಕ್ರೋಸಾಫ್ಟ್ ಈ ವಿವಾದದಿಂದ ದೂರವಿರಲು ಪ್ರಯತ್ನಿಸಿತು. ಈ ಬಗ್ಗೆ ಆಂತರಿಕ ತನಿಖೆ ನಡೆಸಿದ ಕಂಪನಿಯ, ತನ್ನ ತಂತ್ರಜ್ಞಾನಗಳು ಗಾಜಾದಲ್ಲಿ ನಾಗರಿಕರ ಸಾವು ನೋವಿಗೆ ನೇರವಾದ ಪಾತ್ರವನ್ನು ವಹಿಸಿದೆ ಎಂಬುದಕ್ಕೆ “ಯಾವುದೇ ಪುರಾವೆಗಳು” ಕಂಡುಬಂದಿಲ್ಲ ಎಂದು ಕಂಪನಿಯು ತನ್ನ ವರದಿಯನ್ನು ಬಿಡುಗಡೆ ಮಾಡಿತು. ಹಾಗಿದ್ದೂ, ಡ್ರಾಪ್ ಸೈಟ್ ನ್ಯೂಸ್, ದಿ ಗಾರ್ಡಿಯನ್ ಮತ್ತು ಇಸ್ರೇಲಿ ಔಟ್‌ಲೆಟ್ +972 ಮ್ಯಾಗಜೀನ್‌ನ ವರದಿಗಳು ಕಂಪನಿಯಿಂದ ಸೋರಿಕೆಯಾದ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ವರದಿಗಳನ್ನು ಮಾಡಿದ್ದವು.

ಅಕ್ಟೋಬರ್ 7, 2023 ರ ದಾಳಿಗಳು ಮತ್ತು ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯ ಆರಂಭದ ಸ್ವಲ್ಪ ಸಮಯದ ನಂತರ, ಮೈಕ್ರೋಸಾಫ್ಟ್ ಇಸ್ರೇಲ್ ರಕ್ಷಣಾ ಸಚಿವಾಲಯಕ್ಕೆ ಹೆಚ್ಚಿನ ರಿಯಾಯಿತಿಗಳಲ್ಲಿ ಸೂಕ್ತವಾದ ಕ್ಲೌಡ್ ಮತ್ತು AI ನೀಡುವ ಪ್ರಸ್ತಾಪಗಳನ್ನು ಮುಂದಿಟ್ಟಿತು ಎಂದು ದಾಖಲೆಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 2024 ರ ಆರಂಭದ ವೇಳೆಗೆ, ಇಸ್ರೇಲಿ ಮಿಲಿಟರಿ ಮೈಕ್ರೋಸಾಫ್ಟ್‌ನ ಟಾಪ್ 500 ಜಾಗತಿಕ ಗ್ರಾಹಕರಲ್ಲಿ ಒಂದಾಗಿತ್ತು.

ತನ್ನ ಕಂಪನಿಯಿಂದ ಸೋರಿಕೆಯಾದ ದಾಖಲೆಗಳ ಸತ್ಯಾಸತ್ಯತೆಯನ್ನು ಮೈಕ್ರೋಸಾಫ್ಟ್ ಪ್ರಶ್ನಿಸಿತಲ್ಲದೇ, ಇಸ್ರೇಲ್‌ ನಡೆಸುತ್ತಿರುವ ಹತ್ಯಾಕಾಂಡದಲ್ಲಿ ತನ್ನ ತಂತ್ರಜ್ಞಾನದ ದುರುಪಯೋಗವಾಗಿದ್ದು ಕಂಡುಬಂದಿಲ್ಲ ಎಂದು ಹೇಳಿಕೊಂಡಿತು.

ಬಿಲ್ಡ್‌ನಲ್ಲಿ ವಿವಾದವು ಹೆಚ್ಚಾಗುತ್ತಲೇ ಹೋದಂತೆ, ಸೋಮವಾರ, ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾದೆಲ್ಲಾ ಅವರು ಮಾಡುತ್ತಿದ್ದ ಮುಖ್ಯ ಭಾಷಣಕ್ಕೆ ಅಡ್ಡಿಪಡಿಸಿದ ಉದ್ಯೋಗಿಯನ್ನು ವಜಾಗೊಳಿಸಲಾಯಿತು ಎಂದು ನೋ ಅಜೂರ್ ಫಾರ್ ಅಪಾರ್ಥೀಡ್ ವರದಿ ಮಾಡಿದೆ. ಮರುದಿನ, ಮತ್ತೊಬ್ಬ ಪ್ರತಿಭಟನಾಕಾರರು ಕೋರ್‌ಎಐ (CoreAI) ಯನ್ನು ಮುನ್ನಡೆಸುತ್ತಿರುವ ಜೇ ಪಾರಿಖ್ ಅವರ ಭಾಷಣಕ್ಕೆ ಅಡ್ಡಿಪಡಿಸಿ, “ಜೇ! ನನ್ನ ಜನರು ಸಾಯುತ್ತಿದ್ದಾರೆ! ಇಸ್ರೇಲ್ ಜೊತೆಗಿನ ಸಂಬಂಧಗಳನ್ನು ನಿಲ್ಲಿಸು! ಜನಾಂಗೀಯವಾದಕ್ಕೆ ಅಜೂರ್‌ನ ಬೆಂಬಲವಿಲ್ಲ! ಫ್ರೀ, ಫ್ರೀ ಪ್ಯಾಲೆಸ್ಟೈನ್!” ಎಂದು ಘೋಷಣೆ ಕೂಗಿದರು. ನಂತರ ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆದೊಯ್ದರು.

ಸದ್ಯದ ಈ ಪ್ರಕರಣ ಕಾರ್ಪೊರೇಟ್ ಕಂಪನಿಗಳ ಪಾರದರ್ಶಕತೆ, ತಂತ್ರಜ್ಞಾನ ಸಂಸ್ಥೆಗಳಲ್ಲಿ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಕ್ಷಣಾ ತಂತ್ರಜ್ಞಾನಗಳಲ್ಲಿ ತೊಡಗಿರುವ ಕಂಪನಿಗಳ ನೈತಿಕ ಜವಾಬ್ದಾರಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಇಸ್ರೇಲ್‌ನಂತಹ ರಾಷ್ಟ್ರ ನಡೆಸುತ್ತಿರುವ ನರಮೇಧದ ಬಗ್ಗೆ ವಹಿಸಿರುವ ಮೌನ ಮತ್ತು ಪ್ರತುಭಟನೆಯನ್ನು ಹತ್ತಿಕ್ಕುವ ರೀತಿ, ಅವುಗಳ ನೈತಿಕತೆಯ ಬಗ್ಗೆ ಅನುಮಾನ ಮೂಡಿಸುತ್ತವೆ.

ಇಮೇಲ್‌ನಲ್ಲಿ ಬಳಸಲಾಗಿರುವ ಫಿಲ್ಟರ್‌ಗಳು ಮತ್ತು ತನ್ನ ಉದ್ಯೋಗಿಗಳು ನಡೆಸುತ್ತಿರುವ ಪ್ರತಿಭಟನೆಗಳ ಬಗ್ಗೆ ಮೈಕ್ರೋಸಾಫ್ಟ್ ಇನ್ನೂ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.

‘ವಿಶಾಲ ಪ್ರದೇಶ ವಶಪಡಿಸಿಕೊಳ್ಳಲು’ ಇಸ್ರೇಲ್ ತನ್ನ ಗಾಜಾ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ: ರಕ್ಷಣಾ ಸಚಿವ
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕೇಟ್ಜ್ ಬುಧವಾರ ತಮ್ಮ ದೇಶವು ಗಾಜಾದಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದು, “ಇಸ್ರೇಲ್‌ನ ಭದ್ರತಾ ಪ್ರದೇಶಗಳಿಗೆ ಸೇರಿಸಲಾಗುವ ವಿಶಾಲವಾದ ಪ್ರದೇಶವನ್ನು ವಶಪಡಿಸಿಕೊಳ್ಳುತ್ತಿದೆ” ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ .

“ಭಯೋತ್ಪಾದಕರ ಪ್ರದೇಶಗಳು ಮತ್ತು ಮೂಲಸೌಕರ್ಯಗಳನ್ನು ತೆರವುಗೊಳಿಸಲು,” ಸೇನೆಯು ತೆರಳಲಿದೆ ಎಂದು ಕ್ಯಾಟ್ಜ್ ಹೇಳಿದ್ದಾರೆ.

ಗಾಜಾ ನಿವಾಸಿಗಳು “ಹಮಾಸ್ ಅನ್ನು ಉರುಳಿಸಲು ಮತ್ತು ಎಲ್ಲಾ ಒತ್ತೆಯಾಳುಗಳನ್ನು ಹಿಂತಿರುಗಿಸಲು ಈಗಲೇ ಕಾರ್ಯನಿರ್ವಹಿಸಬೇಕು. ಯುದ್ಧವನ್ನು ಕೊನೆಗೊಳಿಸಲು ಇದು ಏಕೈಕ ಮಾರ್ಗವಾಗಿದೆ,” ಎಂದು ಅವರು ಹೇಳಿದರು.

ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲ್‌ಗೆ ಅತಿಕ್ರಮಣ ಮಾಡುವಾಗ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಸುಮಾರು 200 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿತ್ತು, ಅದರಲ್ಲಿ 59 ಜನರನ್ನು ಇನ್ನೂ ತನ್ನ ವಶಕ್ಕೆ ತೆಗೆದುಕೊಂಡಿದೆ. ಕದನ ವಿರಾಮದ ಸಮಯದಲ್ಲಿ ಇತರ ಹೆಚ್ಚಿನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು.

ಜನವರಿ 19 ರಂದು ಜಾರಿಗೆ ಬಂದ ಇತ್ತೀಚಿನ ಕದನ ವಿರಾಮವನ್ನು ಮುರಿದು ಇಸ್ರೇಲ್ ಗಾಜಾದ ಮೇಲೆ ತನ್ನ ದಾಳಿಯನ್ನು ಪುನರಾರಂಭಿಸಿದ ಎರಡು ವಾರಗಳ ನಂತರ ಕಾಟ್ಜ್ ಅವರ ಹೇಳಿಕೆ ಬಂದಿದೆ .

ಮಾರ್ಚ್ 18 ರಂದು ಇಸ್ರೇಲಿ ಪಡೆಗಳು ಕನಿಷ್ಠ 330 ಜನರನ್ನು ಕೊಂದವು. ಮಾರ್ಚ್ 20 ರಂದು, ಗಾಜಾದಲ್ಲಿ ನಾಗರಿಕರ ಮೇಲೆ ಇಸ್ರೇಲ್ ನಡೆಸಿದ “ಹತ್ಯಾಕಾಂಡ” ಕ್ಕೆ ಪ್ರತಿಕ್ರಿಯೆಯಾಗಿ ಟೆಲ್ ಅವೀವ್ ಮೇಲೆ ರಾಕೆಟ್‌ಗಳನ್ನು ಹಾರಿಸಿರುವುದಾಗಿ ಹಮಾಸ್ ಹೇಳಿದೆ.

ಇಸ್ರೇಲ್‌ನ ಕ್ರಮಗಳು ” ಅಪ್ರಚೋದಿತ ಉಲ್ಬಣ “ವಾಗಿದ್ದು, ಇದು ಒತ್ತೆಯಾಳುಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಹಮಾಸ್ ಹೇಳಿತ್ತು. ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು “ಗಾಜಾ ಪಟ್ಟಿಯಲ್ಲಿ ನಮ್ಮ ಜನರ ವಿರುದ್ಧ ಜಿಯೋನಿಸ್ಟ್ ನಿರ್ನಾಮ ಯುದ್ಧದ ಪುನರಾರಂಭವನ್ನು ತಿರಸ್ಕರಿಸಲು ತಮ್ಮ ಧ್ವನಿಯನ್ನು ಎತ್ತುವಂತೆ,” ಇತರ ದೇಶಗಳಿಗೆ ಕರೆ ನೀಡಿತ್ತು .

ಶನಿವಾರ, 50 ದಿನಗಳ ಕದನ ವಿರಾಮಕ್ಕೆ ಬದಲಾಗಿ ಐದು ಜೀವಂತ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಕೊಂಡಿತು. ಆದಾಗ್ಯೂ, ಶಾಂತಿ ಒಪ್ಪಂದದ ಮಧ್ಯವರ್ತಿಗಳಲ್ಲಿ ಒಬ್ಬರಾದ ಅಮೆರಿಕಕ್ಕೆ ಪ್ರತಿ-ಪ್ರಸ್ತಾಪವನ್ನು ಮಂಡಿಸಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದರು.

“ಅಪಹರಣಕ್ಕೊಳಗಾದವರ ಮರಳುವಿಕೆ ಮತ್ತು ಹಮಾಸ್ ಸೋಲಿಗಾಗಿ ಗಾಜಾದಲ್ಲಿ ಧೈರ್ಯದಿಂದ ಮತ್ತು ಶಕ್ತಿಯುತವಾಗಿ ಹೋರಾಡುತ್ತಿರುವ ಇಸ್ರೇಲಿ ಪಡೆಗಳಿಗೆ ಯಶಸ್ಸನ್ನು ಹಾರೈಸುತ್ತೇನೆ” ಎಂದು ಕ್ಯಾಟ್ಜ್ ಬುಧವಾರ ಹೇಳಿದರು.

“ಆಪರೇಷನ್ ‘ಸ್ಟ್ರೆಂತ್ ಅಂಡ್ ಸ್ವೋರ್ಡ್’ ನ ಗುರಿ ಮೊದಲನೆಯದಾಗಿ ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಒತ್ತಡ ಹೆಚ್ಚಿಸುವುದು” ಎಂದು ಇಸ್ರೇಲಿ ಸಚಿವರು ಹೇಳಿದರು, ಹಮಾಸ್ ಹಾಗೆ ಮಾಡಲು ನಿರಾಕರಿಸಿದೆ ಎಂದು ಹೇಳಿಕೊಂಡರು.

ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸುವುದರಿಂದ ಹಮಾಸ್ ಮೇಲೆ ಮತ್ತು ಗಾಜಾದ ಜನಸಂಖ್ಯೆಯ ಮೇಲೂ “ಒತ್ತಡ ಹೆಚ್ಚಾಗುತ್ತದೆ” ಮತ್ತು ನಮ್ಮೆಲ್ಲರಿಗೂ ಪವಿತ್ರ ಮತ್ತು ಪ್ರಮುಖ ಗುರಿಯ ಸಾಧನೆಯನ್ನು ಮುನ್ನಡೆಸುತ್ತದೆ ಎಂದು ಅವರು ಹೇಳಿದರು.

ಹಮಾಸ್ ತನ್ನ ಆಕ್ರಮಣದ ಸಮಯದಲ್ಲಿ 1,200 ಜನರನ್ನು ಕೊಂದು ಒತ್ತೆಯಾಳುಗಳನ್ನು ತೆಗೆದುಕೊಂಡ ನಂತರ, ಅಕ್ಟೋಬರ್ 2023 ರಲ್ಲಿ ಇಸ್ರೇಲ್ ಗಾಜಾದ ಮೇಲೆ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿತು. ಅಂದಿನಿಂದ ಇಸ್ರೇಲ್ ಗಾಜಾದ ಮೇಲೆ ವಾಯು ಮತ್ತು ನೆಲದ ದಾಳಿಗಳನ್ನು ನಡೆಸುತ್ತಿದೆ, ಸುಮಾರು 17,500 ಮಕ್ಕಳು ಸೇರಿದಂತೆ 61,700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಫೆಬ್ರವರಿಯಲ್ಲಿ, ಗಾಜಾದಿಂದ ಪ್ಯಾಲೆಸ್ಟೀನಿಯನ್ನರ ” ಸ್ವಯಂಪ್ರೇರಿತ ನಿರ್ಗಮನ” ವನ್ನು ಮೇಲ್ವಿಚಾರಣೆ ಮಾಡಲು ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸುವ ಯೋಜನೆಯನ್ನು ಕ್ಯಾಟ್ಜ್ ಘೋಷಿಸಿದ್ದರು .

ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೋರ್ಡಾನ್ ಮತ್ತು ಈಜಿಪ್ಟ್ ಗಾಜಾದಿಂದ ಪ್ಯಾಲೆಸ್ಟೀನಿಯನ್ನರನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ ನಂತರ ಇದು ಬಂದಿತು.

ಹಮಾಸ್ ಮೂವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದಂತೆ, 369 ಪ್ಯಾಲೆಸ್ತೇನಿಯನ್ ಬಂಧಿತರನ್ನು ಬಿಡುಗಡೆ ಮಾಡಿದ ಇಸ್ರೇಲ್
ಹಮಾಸ್ ಶನಿವಾರ ಗಾಜಾದಲ್ಲಿ ಮೂವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದಂತೆ ಇಸ್ರೇಲ್ 369 ಬಂಧಿತ ಪ್ಯಾಲೆಸ್ತೇನಿಯನ್ನರನ್ನು ಬಿಡುಗಡೆ ಮಾಡಿತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಮಧ್ಯವರ್ತಿಗಳ ಮಧ್ಯಸ್ಥಿಕೆಯಲ್ಲಿ ನಡೆದ ಈ ವಿನಿಮಯವು ಕದನ ವಿರಾಮವನ್ನು ಉಳಿಸಿಕೊಳ್ಳಲು ಸಹಕರಿಸಿತು.

ಶನಿವಾರ ಬಿಡುಗಡೆಯಾದ ಮೂವರು ಒತ್ತೆಯಾಳುಗಳಾದ ಇಯಾರ್ ಹಾರ್ನ್, ಸಾಗುಯಿ ಡೆಕೆಲ್ ಚೆನ್ ಮತ್ತು ಸಶಾ ಟ್ರೌಫನೋವ್ ಅವರನ್ನು ಖಾನ್ ಯೂನಿಸ್‌ನಲ್ಲಿ ಒಂದು ವೇದಿಕೆಯಲ್ಲಿ ಇರಿಸಿ, ಅವರ ಸುತ್ತ ಸಶಸ್ತ್ರ ಹಮಾಸ್‌ಗಳು ನಿಂತಿರುವುದು ನೇರ ದೃಶ್ಯಗಳಲ್ಲಿ ಕಂಡುಬರುತ್ತದೆ. ನಂತರ ಅವರನ್ನು ಇಸ್ರೇಲ್‌ಗೆ ಹಿಂತಿರುಗಿಸಿದವು.

ಬಿಡುಗಡೆಯಾದ ಪ್ಯಾಲೆಸ್ತೇನಿಯನ್‌ ಕೈದಿಗಳನ್ನು ಹೊತ್ತ ಬಸ್‌ಗಳು ಇಸ್ರೇಲ್‌ನ ಓಫರ್ ಜೈಲಿನಿಂದ ಹೊರಟವು, ಮೊದಲ ಬಸ್‌ಗಳು ರಮಲ್ಲಾದಲ್ಲಿ ಪ್ಯಾಲೆಸ್ಟೀನಿಯನ್ ಧ್ವಜಗಳನ್ನು ಬೀಸುತ್ತಿದ್ದ ಜನಸಮೂಹದತ್ತ ಬಂದಿಳಿದವು.

“ನಾವು ಬಿಡುಗಡೆಯಾಗುತ್ತೇವೆಂದು ನಿರೀಕ್ಷಿಸಿರಲಿಲ್ಲ, ಆದರೆ ದೇವರು ದೊಡ್ಡವನು, ದೇವರು ನಮ್ಮನ್ನು ಸ್ವತಂತ್ರಗೊಳಿಸಿದನು” ಎಂದು ಬೆಥ್ ಲೆಹೆಮ್‌ನ 70 ವರ್ಷದ ಮೂಸಾ ನವರ್ವಾ ಹೇಳಿದರು, ಅವರು ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಸೈನಿಕರ ಹತ್ಯೆಗಾಗಿ ಎರಡು ಜೀವಾವಧಿ ಶಿಕ್ಷೆಗಳನ್ನು ಅನುಭವಿಸುತ್ತಿದ್ದರು.

ಬಿಡುಗಡೆಯಾದ ಪ್ಯಾಲೆಸ್ತೇನಿಯನ್ ಕೈದಿಗಳನ್ನು ಹೊತ್ತ ಬಸ್‌ಗಳು ನಂತರ ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿರುವ ಯುರೋಪಿಯನ್ ಆಸ್ಪತ್ರೆಗೆ ಬಂದವು.

ಬಿಡುಗಡೆಯಾದ ಕೆಲವು ಪ್ಯಾಲೆಸ್ತೇನಿಯನ್ನರು ಎರಡನೇ ಪ್ಯಾಲೆಸ್ತೇನಿಯನ್ ದಂಗೆಯ ಸಮಯದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಮತ್ತು ಇಸ್ರೇಲಿ ಸೈನಿಕರ ಹತ್ಯೆ ಸೇರಿದಂತೆ ದಾಳಿಗಳಿಗಾಗಿ ದೀರ್ಘ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು.

ಜನವರಿ 19 ರಿಂದ ಬಿಡುಗಡೆಯಾದ ಕೆಲವು ಇಸ್ರೇಲಿ ಒತ್ತೆಯಾಳುಗಳು ಆಹಾರವಿಲ್ಲದೆ, ತಿಂಗಳುಗಟ್ಟಲೆ ಸುರಂಗಗಳಲ್ಲಿ ಬಂಧಿಸಲ್ಪಟ್ಟು ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆಂದು ವಿವರಿಸಿದ್ದಾರೆ.

ಕದನ ವಿರಾಮದ ಎರಡನೇ ಹಂತದಲ್ಲಿ ಉಳಿದ ಜೀವಂತ ಒತ್ತೆಯಾಳುಗಳನ್ನು ಹಿಂದಿರುಗಿಸುವ ಮತ್ತು ಗಾಜಾದಿಂದ ಇಸ್ರೇಲಿ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಮಾತುಕತೆಗಳು ನಡೆಯಲಿದ್ದು, ನಾಶವಾದ ಆಸ್ತಿಯ ಪುನರ್ನಿರ್ಮಾಣಕ್ಕೆ ದಾರಿ ಮಾಡಿಕೊಡಲಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಬ್ಬ ಅಮೆರಿಕನ್ ಸೇರಿದಂತೆ ಮೂವರು ಒತ್ತೆಯಾಳುಗಳ ಬಿಡುಗಡೆಯನ್ನು ಒತ್ತಾಯಿಸಿದ್ದರು. “ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ತೋರುತ್ತದೆ!” ಅವರು ಹೇಳಿದರು.

ಶನಿವಾರದೊಳಗೆ ಎಲ್ಲಾ ಒತ್ತೆಯಾಳುಗಳನ್ನು ಹಿಂತಿರುಗಿಸದಿದ್ದರೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ಮಂಡಿಸುವುದಾಗಿ ಟ್ರಂಪ್ ಸೋಮವಾರ ಹೇಳಿದ್ದರು .

“ನನ್ನ ಮಟ್ಟಿಗೆ ಹೇಳುವುದಾದರೆ, ಎಲ್ಲಾ ಒತ್ತೆಯಾಳುಗಳನ್ನು ಶನಿವಾರ [ಫೆಬ್ರವರಿ 15] ಮಧ್ಯಾಹ್ನ 12 ಗಂಟೆಯೊಳಗೆ ಹಿಂತಿರುಗಿಸದಿದ್ದರೆ ಎಲ್ಲವನ್ನೂ ರದ್ದುಗೊಳಿಸಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ,” ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರ ಮೂಲಕ ಎಚ್ಚರವನ್ನು ನೀಡಿದ್ದಾರೆ.

ಫೆಬ್ರವರಿ 11 ರಂದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಶನಿವಾರ ಮಧ್ಯಾಹ್ನದೊಳಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಇಸ್ರೇಲ್ ಗಾಜಾದಲ್ಲಿ ತನ್ನ ಮಿಲಿಟರಿ ದಾಳಿಯನ್ನು ಪುನರಾರಂಭಿಸುತ್ತದೆ ಎಂದು ಹೇಳಿದರು.

ಹಮಾಸ್ ದಕ್ಷಿಣ ಇಸ್ರೇಲ್ ಮೇಲೆ ಆಕ್ರಮಣ ನಡೆಸಿ 1,200 ಜನರನ್ನು ಕೊಂದು 200 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ತೆಗೆದುಕೊಂಡ ನಂತರ, ಅಕ್ಟೋಬರ್ 7, 2023 ರಂದು ಗಾಜಾ ವಿರುದ್ಧ ಇಸ್ರೇಲ್ ಮಿಲಿಟರಿ ದಾಳಿ ಪ್ರಾರಂಭವಾಯಿತು. ಅಂದಿನಿಂದ ಇಸ್ರೇಲ್ ಗಾಜಾದ ಮೇಲೆ ವಾಯು ಮತ್ತು ಭೂದಾಳಿಗಳನ್ನು ನಡೆಸುತ್ತಿದೆ, 17,400 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 47,700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಂಘರ್ಷದಲ್ಲಿ ಸುಮಾರು 400 ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ.

ಕೆಲವು ಒತ್ತೆಯಾಳುಗಳನ್ನು ನವೆಂಬರ್ 2023 ರಲ್ಲಿ ಸಂಕ್ಷಿಪ್ತ ಕದನ ವಿರಾಮ ಒಪ್ಪಂದದ ಭಾಗವಾಗಿ ಬಿಡುಗಡೆ ಮಾಡಲಾಯಿತು ಮತ್ತು ಕೆಲವರು ಯುದ್ಧದ ಪರಿಣಾಮವಾಗಿ ಕೊಲ್ಲಲ್ಪಟ್ಟರು.

ಈ ಒಪ್ಪಂದವು ಲಕ್ಷಾಂತರ ಸ್ಥಳಾಂತರಗೊಂಡ ಪ್ಯಾಲೆಸ್ತೇನಿಯನ್ನರು ಗಾಜಾದಲ್ಲಿರುವ ತಮ್ಮ ಪ್ರದೇಶಗಳಿಗೆ ಮರಳಲು ಅವಕಾಶ ನೀಡುತ್ತದೆ. ವಿಶ್ವಸಂಸ್ಥೆಯ ಪ್ಯಾಲೆಸ್ಟೈನ್ ನಿರಾಶ್ರಿತರ ಸಂಸ್ಥೆಯ ಪ್ರಕಾರ, ಅಕ್ಟೋಬರ್ 2023 ರಿಂದ ಗಾಜಾದಲ್ಲಿ ಸುಮಾರು 1.9 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ.

ವಿಶ್ವಸಂಸ್ಥೆಯ ಪ್ರಕಾರ , ಇಸ್ರೇಲಿ ದಾಳಿಯಲ್ಲಿ ಗಾಜಾದಲ್ಲಿರುವ 92% ವಸತಿಗಳು ನಾಶವಾಗಿವೆ ಅಥವಾ ಹಾನಿಗೊಳಗಾಗಿವೆ.

ಮೋದಿಯವರ ಹೊಸ ಕಾಲಚಕ್ರದಲ್ಲಿ ಉದ್ಯೋಗ ಸಿಗಲಿದೆಯೇ?
ಕಳೆದ ಎರಡು ವರ್ಷಗಳಿಂದ ಪ್ರಧಾನಿ ಮೋದಿಯವರು ಮಾಡುವುತ್ತಿರುವುದೆಲ್ಲಾ ಹೇಗಾದರೂ ಮಾಡಿ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಆಸೆಯಿಂದ. ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಇದಕ್ಕೆ ಒಂದು ಉದಾಹರಣೆಯಷ್ಟೇ. ಇದರ ಮುಂದೆ ದೇಶ ಅನುಭವಿಸುತ್ತಿರುವ ಸಂಕಷ್ಟಗಳು ಮಣ್ಣುಪಾಲಾಗಿವೆ. ಕಂಠ ಹರಿದುಕೊಂಡು ಕೂಗುವ ಘೋಷಣೆಗಳ ಮಧ್ಯೆ ದೇಶದ ನೋವಿನ ದನಿ ಕೇಳದಾಗಿದೆ

ಲೇಖನ: ಚರಣ್ ಐವರ್ನಾಡು

ಅಯೋಧ್ಯೆಯಲ್ಲಿ ಪ್ರಧಾನಿಗಳು ಬಾಲರಾಮನ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಸ್ವತಃ ತಾವು ಗರ್ಭಗುಡಿಯ ಒಳಗೆ ರಾಮನಿಗೆ ಪೂಜೆ ಮಾಡಿದ್ದಾರೆ. ಇದಾದ ನಂತರ ಮಾಡಿದ ತಮ್ಮ ಭಾಷಣದಲ್ಲಿ ಜನವರಿ 22ನ್ನು ದೇಶದಲ್ಲಿ ಹೊಸ ಕಾಲ ಚಕ್ರದ ಆರಂಭ ಎಂದು ಘೋಷಿಸಿದ್ದಾರೆ. ಆದರೆ ಮುಂದೆ ಈ ಚಕ್ರ ಹೇಗೆ ತಿರುಗಲಿದೆ ಎಂಬುದು ನೋಡಬೇಕಿದೆ.

2014 ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಅವರು ನೀಡಿದ್ದ ಪ್ರಮುಖ ಭರವಸೆಗಳ ಚಕ್ರ ಉಲ್ಟಾ ಸುತ್ತುತ್ತಿದೆಯೇ?
2014 ರಲ್ಲಿ, ಭಾರತದ ಆರ್ಥಿಕತೆಯು ಸುಮಾರು ಎರಡು ದಶಕಗಳ ಕ್ಷಿಪ್ರ ಬೆಳವಣಿಗೆಯ ನಂತರ ಮೂರು ವರ್ಷಗಳ ಕಾಲ ತೀವ್ರ ಕುಸಿತವನ್ನು ಕಂಡಿತು. 2003-04 ರಿಂದ ವರ್ಷಕ್ಕೆ ಸರಾಸರಿ 70 ಲಕ್ಷಕ್ಕಿಂತಲೂ ಹೆಚ್ಚಿನ ಕೃಷಿಯೇತರ ಉದ್ಯೋಗದ ಬೆಳವಣಿಗೆಯು ತೀವ್ರವಾಗಿ ಕುಸಿದಿದೆ.

ಈ ಸಂದರ್ಭದಲ್ಲಿ ಪಿಎಂ ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು. ಈ ಬಣ್ಣ ಬಣ್ಣದ ಬರವಸೆಯನ್ನು ನಂಬಿದ ಯುವಕರು ಅವರನ್ನು ನಂಬಿ ಅಧಿಕಾರಕ್ಕೆ ತರಲು ಮತ ಹಾಕಿದರು. ಆದರೆ ಅವರ ಸರ್ಕಾರಕ್ಕೆ ಈ ಉದ್ಯೋಗ ಸೃಷ್ಟಿಯಲ್ಲಿ ಆಗಿರುವ ಕುಸಿತವನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾರ್ಚ್ 2020 ರ ಹೊತ್ತಿಗೆ, ಕೋವಿಡ್‌ ತಾಪತ್ರಯ ಶುರುವಾಗುವ ಮೊದಲು ಭಾರತದ ಆರ್ಥಿಕತೆಯ ಪರಿಸ್ಥಿತಿ ಶೋಚನೀಯವಾಗಿತ್ತು. ಇದರಿಂದ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಯುವಕರು.

ಭಾರತೀಯರು ಒಪ್ಪತ್ತಿನ ಊಟಕ್ಕೆ ಇಸ್ರೇಲ್‌ಗೆ ಹೋಗಬೇಕೇ?

ಪ್ಯಾಲಿಸ್ತೇನ್‌ ಹಅಗೂ ಗಾಜಾದ ಮೇಲೆ ಇಸ್ರೇಲ್‌ ಆಕ್ರಮಣ ಆರಂಭವಾಗಿ ಸುಮಾರು ನೂರು ದಿನಗಳಿಗೂ ಹೆಚ್ಚಾಗುತ್ತಿದೆ. ಗಾಜಾ ನಿರ್ಣಾಮವಾಗಿ ಹೋಗಿದೆ. ಇಸ್ರೇಲ್‌ ಯುದ್ಧದ ಉನ್ಮಾದದಲ್ಲಿಯೇ ಇದೆ.

ಪ್ಯಾಲಿಸ್ತೇನಿಯರ ಉದ್ಯೋಗ ಪರವಾನಗಿಯನ್ನು ಇಸ್ರೇಲ್‌ ಅಮಾನತು ಮಾಡಿರುವುದರಿಂದ ಅಲ್ಲಿ ಕಾರ್ಮಿಕರ ಅಭಾವ ಎದುರಾಗಿದೆ. ಹಾಗಾಗಿ ಅಲ್ಲಿ ಉದ್ಯೋಗಗಳು ಖಾಲಿ ಬಿದ್ದಿವೆ. ಅಕ್ಟೋಬರ್‌ನಲ್ಲಿ, ಟೆಲ್ ಅವಿವ್‌ನಲ್ಲಿ ಇಸ್ರೇಲಿ ಕಟ್ಟಡ ನಿರ್ಮಾಣ ಕಂಪನಿಗಳು   ಪ್ಯಾಲೆಸ್ತೇನಿಯರ ಬದಲಿಗೆ 100,000 ಭಾರತೀಯ ಕಾರ್ಮಿಕರನ್ನು ಕಳುಹಿಸಿ ಕೊಡುವಂತೆ ಭಾರತ ಸರ್ಕಾರವನ್ನು ಕೋರಿದೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಹರ್ಯಾಣ ಸರ್ಕಾರವು ಡಿಸೆಂಬರ್‌ನಲ್ಲಿ ಇಸ್ರೇಲ್‌ನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಕಾರ್ಮಿಕರನ್ನು ತಮ್ಮ ರಾಜ್ಯದಿಂದ ಕಳುಹಿಸಲು 10,000 ಹುದ್ದೆಗಳಿಗೆ ಅರ್ಜಿ ಕರೆದಿತ್ತು. ಇದರಲ್ಲಿ ಬಡಗಿಗಳು ಮತ್ತು ಕಬ್ಬಿಣದ ಮಾಡುವ 3,000 ಹುದ್ದೆಗಳಿದ್ದವು. ನೆಲಕ್ಕೆ ಟೈಲ್ ಹಾಕುವವರಿಗಾಗಿ 2,000 ಉದ್ಯೋಗಗಳು ಮತ್ತು ಗಾರೆ ಕೆಲಸಕ್ಕೆ 2,000 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಇದಕ್ಕೆ ಸಂಬಳ ತಿಂಗಳಿಗೆ 6,100 ಶೆಕೆಲ್‌ಗಳು ಅಥವಾ ಸುಮಾರು 1,625 ಡಾಲರ್ (1 ಲಕ್ಷದ 30 ಸಾವಿರ ರುಪಾಯಿ). ಹರ್ಯಾಣದ ತಲಾ ತಿಂಗಳ ಆದಾಯ (per capita income) ಸುಮಾರು 24723.75 ರುಪಾಯಿ (2022-23).

ಅದೇ ತಿಂಗಳು, ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶವು 10,000 ಕಾರ್ಮಿಕರಿಗಾಗಿ ಇದೇ ರೀತಿಯ ಇಸ್ರೇಲಿ ಉದ್ಯೋಗ ನೀಡುವ ಭರವಸೆಯ ಜಾಹೀರಾತನ್ನು ಬಿಡುಗಡೆ ಮಾಡಿತು. ಕಳೆದ ಮಂಗಳವಾರದಂದು ಲಕ್ನೋದಲ್ಲಿ ನೇಮಕಾತಿ ಚಾಲನೆ ಆರಂಭಗೊಂಡಿದ್ದು, ನೂರಾರು ಅರ್ಜಿದಾರರನ್ನು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಭಾರತ ಸರ್ಕಾರ ತನ್ನ ಪ್ರಜಾಪ್ರಭುಗಳಿಗೆ ವಿದೇಶಿ ಉದ್ಯೋಗ ನೀಡುವಷ್ಟು ಮುಂದೆ ಹೋಗಿದೆ ಎಂದು ನೀವು ಭಾವಿಸಿದರೆ, ಅದು ಮೂರ್ಖತನ. ಯುದ್ಧದಲ್ಲಿ ಮುಳುಗಿರುವ ಒಂದು ದೇಶ ಉದ್ಯೋಗ ನೀಡಲು ಶಕ್ತವಾದರೆ, ಭಾರತಕಕ್ಕೆ ಉದ್ಯೋಗ ಸೃಷ್ಟಿಸಲು ಯಾಕೆ ಸಾಧ್ಯವಾಗುತ್ತಿಲ್ಲ?

This is the queue for recruitment drive to send labourers to work in Israel. The registration cum screening began at ITI Lucknow on January 23 is witnessing huge influx of job seekers from UP, Bihar and West Bengal. pic.twitter.com/jLsVogk7QC
— Piyush Rai (@Benarasiyaa) January 24, 2024

ನಿರುದ್ಯೋಗದಿಂದ ಭಾರತ ತತ್ತರಿಸಿ ಹೋಗಲಿದೆ?

ಸದ್ಯ ಯುವಕರ ಅವರ ಭವಿಷ್ಯ ಎಷ್ಟು ಕರಾಳವಾಗಿತ್ತು ಎಂಬುದನ್ನು ತೋರಿಸಲು ಮೂರು ಉದಾಹರಣೆಗಳು ಸಾಕು. 2018 ರಲ್ಲಿ, ಭಾರತೀಯ ರೈಲ್ವೇ ವಿವಿಧ ಕೆಳಮಟ್ಟದ ಉದ್ಯೋಗಗಳಲ್ಲಿ 63,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಿತು. 1.91 ಕೋಟಿ ಪದವಿ ಮತ್ತು ಡಿಪ್ಲೋಮಾ ಓದಿರುವ ಯುವಕರು ಈ ಹುದ್ದೆಗಳಿಗೆ ಅಪ್ಲೈ ಮಾಡಿದ್ದರು.

ಒಂದು ವರ್ಷದ ನಂತರ, Personnel and Training Department 12,000 ಖಾಲಿ ಹುದ್ದೆಗಳನ್ನು ಅರ್ಜಿ ಕರೆದಾಗ, 1.2 ಕೋಟಿಗೂ ಹೆಚ್ಚು ಯುವಕರು ಮತ್ತೆ ಅರ್ಜಿ ಸಲ್ಲಿಸಿದರು.

ಆಯ್ದ ಯುವಕರಿಗೆ ನಾಲ್ಕು ವರ್ಷಗಳ ಮಿಲಿಟರಿ ತರಬೇತಿ ನೀಡಲು ಸರ್ಕಾರವು ಅಗ್ನಿವೀರ್ ಯೋಜನೆಯನ್ನು ಘೋಷಿಸಿದಾಗ, ಇದಕ್ಕೆ ಆಯ್ಕೆಯಾಗದೆ ವಿಫಲರಾಗಿ ಯುವಕರು ಹತಾಶೆಗೆ ಒಳಗಾದರು. ಹತಾಶ ಯುವಕರು ಆತ್ಮಹತ್ಯೆ ಮಾಡಿಕೊಂಡರು. ಬಿಹಾರದ ದಾನಪುರ ನಿಲ್ದಾಣದಲ್ಲಿ ರೈಲಿಗೆ ಬೆಂಕಿ ಕೂಡ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರಧಾನಿ ಮೋದಿಯವರು ತಮ್ಮ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾದರು., 2019 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಲೂ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಹುಡುಕಲಿಲ್ಲ. 2019-20 ರ ಹೊತ್ತಿಗೆ, GDP ಬೆಳವಣಿಗೆಯು 4.2 ಶೇಕಡಾಕ್ಕೆ ಕುಸಿದಿದೆ. ಇದು ಹಿಂದೆಂದೂ ಕಾಣದ ಕುಸಿತವಾಗಿದೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಆಗಸ್ಟ್ 2020 ರಲ್ಲಿ ಪ್ರಕಟವಾದ ಮೆಕಿನ್ಸೆ ವರದಿ ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುತ್ತದೆ: ಮುಂದಿನ ದಶಕದಲ್ಲಿ ಭಾರತದ ಜಿಡಿಪಿ ವಾರ್ಷಿಕವಾಗಿ ಶೇಕಡಾ 8 ರಿಂದ 8.5 ರಷ್ಟು ಬೆಳೆಯಬೇಕು. ಹಾಗಾದಾಗ ಮಾತ್ರ 2019-20 ರ ಹಣಕಾಸು ವರ್ಷದಲ್ಲಿ ದಾಖಲಾದ ಶೇಕಡಾ 4.2 ರ ಬೆಳವಣಿಗೆಯ ಡಬಲ್‌ ಆಗುತ್ತದೆ. ಆಗ 2023 ಮತ್ತು 2030 ರ ನಡುವೆ 9 ಕೋಟಿ ಹೊಸ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಯಾಗುತ್ತದೆ. ಇವುಗಳಲ್ಲಿ 6 ಕೋಟಿ ಹೊಸ ಉದ್ಯೋಗಿಗಳು ವರ್ಕ್‌ ಫೋರ್ಸ್‌ ಪ್ರವೇಶಿಸಲಿದ್ದಾರೆ.

ಆದರೆ ಇವರಿಗೆ ಮಾಡಲು ಕೆಲಸ ಇದ್ಯಾ? ಇದೊಂದು ಪ್ರಶ್ನೆ… ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನೆನ್ಸ್ ಈ ಬಗ್ಗೆ ಮಾತನಾಡುತ್ತದೆ. COVID ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದರು.

COVID ಆಟ ಮುಗಿದಾಗ ಅವರು ಮತ್ತೆ ಬಂದು ಮಾಡಲು ಏನೂ ಉದ್ಯೋಗ ಇರಲಿಲ್ಲ. ಇದರ ಪರಿಣಾಮವಾಗಿ, ಏಪ್ರಿಲ್ 2020 ಮತ್ತು ಜೂನ್ 2023 ರ ನಡುವೆ 6 ಕೋಟಿ ಕಾರ್ಮಿಕರು ಕೃಷಿ ಕೆಲಸದ ಚಟುವಟಿಕೆಗೆ ಬಂದರು ಎಂದು ಈ ಅಧ್ಯಯನ ಹೇಳುತ್ತದೆ.
2011 ಮತ್ತು 2021 ರ ನಡುವೆ, 16 ರಿಂದ 60 ವರ್ಷ ವಯಸ್ಸಿನ 7 ಕೋಟಿ ಜನರು ಕೆಲಸ ಹುಡುಕುವುದನ್ನೇ ಬಿಟ್ಟಿದ್ದಾರೆ. ಇವರು ದೇಶದ ಕಾರ್ಮಿಕ ಬಲದಿಂದ ಹೊರಗುಳಿದಿದ್ದಾರೆ. ಇದನ್ನು ಹೇಳಿದ್ದು ಸ್ವತಃ ಸರ್ಕಾರದ್ದೇ ಆದ Periodic Labour Force Studies.

ಸದ್ಯ ಮೋದಿಯವರು ಹೇಳಿದ ಚಕ್ರ ಮುಂದಕ್ಕೆ ಚಲಿಸುತ್ತೀಲ್ಲ. ಮುಂದಕ್ಕೆ ಹೋಗದೇ ಇದ್ದರೂ ಪರವಾಗಿಲ್ಲ, ನಿಂತಲ್ಲೇ ನಿಂತಿದ್ದರೂ ಫೈನ್… ಆದರೆ ಚಕ್ರ ಈಗ ಹಿಂದಕ್ಕೆ ಓಡುತ್ತಿದೆ. ಯುವಕ ಯುವತಿಯರು ಉದ್ಯೋಗದ ಭದ್ರತೆಯಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ಇದು ಒಂದು ಕಡೆ ಇದ್ದರೆ, ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಏಕಾಏಕಿ ದುರಂತಮಯವಾದ ಕುಸಿತವಾಗಿದೆ.

ಕಳೆದ ಎರಡು ದಶಕಗಳಲ್ಲಿ, ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜಿತವಾಗಿರುವ ಖಾಸಗಿ ಕಾಲೇಜುಗಳ ಸಂಖ್ಯೆ ಅಣಬೆಯಂತೆ ಹೆಚ್ಚಾಗುತ್ತಿದೆ. ಎರಡು ದಶಕಗಳ ಹಿಂದೆ ಸುಮಾರು 10,000 ಇದ್ದ ಖಾಸಗಿ ಕಾಲೇಜುಗಳ ಸಂಖ್ಯೆ ಈಗ 42,000ಕ್ಕೂ ಹೆಚ್ಚಾಗಿದೆ. ಇವೆಲ್ಲವೂ ಸುಳ್ಳು ಭರವಸೆಗಳನ್ನು ನೀಡುತ್ತಾ, ಫೀಸು ಹೆಚ್ಚಿಸುವುದನ್ನು ಮೂಮದುವರಿಸಿವೆ. ಉನ್ನತ ಶಿಕ್ಷಣ ದುಬಾರಿಯಾಗುತ್ತಿದೆ.

ಕಳೆದ ಎರಡು ವರ್ಷಗಳಿಂದ ಪಿಎಂ ಮೋದಿಯವರು ಮಾಡುವುತ್ತಿರುವುದೆಲ್ಲಾ ಹೇಗಾದರೂ ಮಾಡಿ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು. ಅಯೋಧ್ಯೆಯಲ್ಲಿ ಮಾಡಿರುವ ರಾಮನ ಪ್ರತಿಷ್ಠಾಪನೆ ಇದಕ್ಕೆ ಉದಾಹರಣೆ. ಇದರ ಮುಂದೆ ದೇಶ ಅನುಭವಿಸುತ್ತಿರುವ ಸಂಕಷ್ಟಗಳು ಮಣ್ಣುಪಾಲಾಗಿವೆ. ಕಂಠ ಹರಿದುಕೊಂಡು ಕೂಗುವ ಘೋಷಣೆಗಳ ಮಧ್ಯೆ ದೇಶದ ನೋವಿನ ದನಿ ಕೇಳದಾಗಿದೆ.

ಜನತೆಯನ್ನು ಎಲ್ಲಿ ಹೇಗೆ ನಿಯಂತ್ರಿಸಬೇಕು ಎಂಬುದನ್ನು ಸ್ಪಷ್ಟವಾಗಿ ಮೋದಿಯವರು ಮಾಡಿದ್ದಾರೆ. ಭ್ರಮೆಯಿಂದ ತೇಲಾಡುತ್ತಿದ್ದೇವೆ ನಾವು. ಸಮಸ್ಯೆಗಳನ್ನು ಮರೆತಿದ್ದೇವೆ. ಆದರೆ, ಸಮಸ್ಯೆಗಳು ನಮ್ಮನ್ನು ಮರೆಯಲ್ಲ. ಹುಚ್ಚುನಾಯಿಯಂತೆ ನಮ್ಮನ್ನು ಬೆನ್ನಟ್ಟಿ ಕಚ್ಚಲಿವೆ. ಒಂದು ದಿನ ದೀಡೀರನೇ ಮೋದಿಯವರು ಚುನಾವಣೆಯನ್ನು ಮುಂದೂಡುತ್ತಿದ್ದೇವೆ ಎಂದರೂ ಅಚ್ಚರಿಯಿಲ್ಲ.

ಹೀಗೇ ಆದರೆ ಮೋದಿಯವರು ಹೇಳಿದ ಭರತವರ್ಷದ ಹೊಸ ಕಾಲ ಚಕ್ರ ತುಂಬಾ ಸ್ಪೀಡಾಗಿ ಓಡಲಿದೆ. ಆದರೆ ಮುಂದಕ್ಕಲ್ಲ, ಹಿಂದಕ್ಕೆ…..

ಭಾರತಕ್ಕೆ ಬರುತ್ತಿದ್ದ ಹಡುಗನ್ನು ಅಪಹರಿಸಿದ ಯೆಮೆನ್‌ನ ಹೌತಿ ಬಂಡುಕೋರರು
ಟರ್ಕಿಯಿಂದ ಭಾರತಕ್ಕೆ ತೆರಳುತ್ತಿದ್ದ ಸರಕು ಹಡಗನ್ನು (cargo ship) ಭಾನುವಾರ ಕೆಂಪು ಸಮುದ್ರದಲ್ಲಿ ಯೆಮೆನ್‌ನ ಹೌತಿ ಬಂಡುಕೋರರು ಅಪಹರಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಹಡಗಿನ 25 ಸಿಬ್ಬಂದಿಯನ್ನು ಒತ್ತೆಯಾಳಾಗಿ ಈ ಸಂಘಟನೆ ವಶಪಡಿಸಿಕೊಂಡಿದೆ.

ಇಸ್ರೇಲ್‌ ಜೊತೆಗೆ ಈ ಹಡಗು ಸಂಪರ್ಕ ಹೊಂದಿದ್ದರಿಂದ ಇರಾನ್ ಬೆಂಬಲಿತ ಹೌತಿಗಳು (Houthi) ವಶಪಡಿಸಿಕೊಂಡಿದ್ದಾರೆ.  ಗಾಝಾದ ಮೇಲಿನ ಇಸ್ರೇಲ್‌ನ ದಾಳಿ ಕೊನೆಯಾಗುವ ವರೆಗೆ ಅಂತರರಾಷ್ಟ್ರೀಯ ಸಮುದ್ರಮಾರ್ಗದಲ್ಲಿ ಇಸ್ರೇಲಿಗೆ ಸಂಬಂಧಿಸಿದ ಅಥವಾ ಅದರ ಒಡೆತನದ ಹಡಗುಗಳನ್ನು ಗುರಿಯಾಗಿಸುತ್ತೇವೆ ಎಂದು ಈ ಸಂಘಟನೆ ಹೇಳಿದೆ.

“ಇಸ್ರೇಲಿ ಹಡಗನ್ನು ವಶಮಾಡಿಕೊಂಡಿರುವುದು ಯೆಮೆನ್ ಸಶಸ್ತ್ರ ಪಡೆ ಕಡಲ ಯುದ್ಧವನ್ನು ನಡೆಸಲು ಹೊರಟಿರುವ ಪ್ರಾಯೋಗಿಕ ಹೆಜ್ಜೆ, ಇದು ಆರಂಭ ಅಷ್ಟೇ” ಎಂದು ಹೌತಿಗಳ ವಕ್ತಾರ ಮೊಹಮ್ಮದ್ ಅಬ್ದುಲ್-ಸಲಾಮ್ ಹೇಳಿದ್ದಾರೆ.

ಇಸ್ರೇಲಿ ರಕ್ಷಣಾ ಪಡೆ ತನ್ನ X ನಲ್ಲಿ ಈ ಅಪಹರಣವನ್ನು ದೃಢಪಡಿಸಿದ್ದು, ಇದನ್ನು “ಜಾಗತಿಕ ಪರಿಣಾಮ ಬೀರಬಲ್ಲ ಅತ್ಯಂತ ಗಂಭೀರ ಘಟನೆ” ಎಂದು ಕರೆದಿದೆ.

The hijacking of a cargo ship by the Houthis near Yemen in the southern Red Sea is a very grave incident of global consequence.
The ship departed Turkey on its way to India, staffed by civilians of various nationalities, not including Israelis. It is not an Israeli ship.
— Israel Defense Forces (@IDF) November 19, 2023

“ನೌಕೆಯು ಟರ್ಕಿಯಿಂದ ಭಾರತಕ್ಕೆ ಹೋಗುವ ದಾರಿಯಲ್ಲಿತ್ತು, ಇಸ್ರೇಲಿಗರು ಸೇರಿದಂತೆ ವಿವಿಧ ದೇಶದ ನಾಗರಿಕರು ಮತ್ತು ಸಿಬ್ಬಂದಿಗಳು ಇದ್ದರು. ಆದರೆ ಇದು ಇಸ್ರೇಲಿ ಹಡಗು ಅಲ್ಲ,” ಎಂದು ಇಸ್ರೇಲಿ ರಕ್ಷಣಾ ಪಡೆ ತಿಳಿಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ಈ ಅಪಹರಣವನ್ನು “ಇರಾನ್ ಭಯೋತ್ಪಾದನೆಯ ಕೃತ್ಯ” ಎಂದು ಖಂಡಿಸಿದೆ.

Statement by Prime Minister's Office:

Israel strongly condemns the Iranian attack against an international vessel.

The ship, which is owned by a British company and is operated by a Japanese firm, was hijacked with Iran guidance by the Yemenite Houthi militia.
— Prime Minister of Israel (@IsraeliPM) November 19, 2023

“ಇದು ಮುಕ್ತ ಪ್ರಪಂಚದ ನಾಗರಿಕರ (citizens of the free world) ವಿರುದ್ಧ ಇರಾನ್‌ನ ಆಕ್ರಮಣ, ಜಾಗತಿಕ ಕಡಲ ಮಾರ್ಗಗಳ ಸುರಕ್ಷತೆಯ ಮೇಲೆ ಅಂತರರಾಷ್ಟ್ರೀಯ ಪರಿಣಾಮಗಳನ್ನು ಬೀರುತ್ತದೆ” ಎಂದು ನೆತನ್ಯಾಹ ಕಚೇರಿ ಹೇಳಿದೆ.

ಈ ಹಡಗು ಬ್ರಿಟಿಷ್ ಕಂಪನಿಯ ಒಡೆತನದಲ್ಲಿದ್ದು, ಜಪಾನಿನ ಸಂಸ್ಥೆಯೊಂದರಿಂದ ನಿರ್ವಹಿಸಲ್ಪಡುತ್ತದೆ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿ ಹೇಳಿದೆ.

ಅಸೋಸಿಯೇಟೆಡ್ ಪ್ರೆಸ್ ಪ್ರಕಾರ: ಇಸ್ರೇಲ್‌ನ ಶ್ರೀಮಂತರಲ್ಲಿ ಒಬ್ಬರಾದ ಅಬ್ರಹಾಂ “ರಾಮಿ” ಉಂಗಾರ್ (Abraham “Rami” Ungar) ಒಡೆತನದ ರೇ ಕಾರ್ ಕ್ಯಾರಿಯರ್ಸ್‌ಗೆ (Ray Car Carriers) ಹಡಗಿನ ಮಾಲೀಕರು ಸಂಬಂಧವನ್ನು ಹೊಂದಿದ್ದಾರೆ ಎಂದು ಸಾರ್ವಜನಿಕ ಶಿಪ್ಪಿಂಗ್ ಡೇಟಾಬೇಸ್ ದಾಖಲೆಗಳು ತೋರಿಸುತ್ತವೆ.

ಗಾಜಾದ ಮೇಲಿನ ಇಸ್ರೇಲ್‌ನ ದಾಳಿ ಏಳನೇ ವಾರಕ್ಕೆ ಮುನ್ನುಗ್ಗುತ್ತಿದ್ದು, ಇದುವರೆಗೆ 13,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಹತರಾಗಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಅಕ್ಟೋಬರ್ 7 ರಂದು ಪ್ಯಾಲೇಸ್ತೇನಿ ಬಂಡುಕೋರ ಗುಂಪು ಹಮಾಸ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಇದನ್ನು ನಡೆಸಲಾಗುತ್ತಿದೆ ಎಂದಿರುವ ಇಸ್ರೇಲ್‌, ಈ ದಾಳಿಯಲ್ಲಿ 1,200 ಇಸ್ರೇಲಿಗಳು ಹತರಾಗಿದ್ದರು.

ಇಸ್ರೇಲ್‌ಗೆ ಅಮೇರಿಕಾ ಬೆಂಬಲ: ಅಮೇರಿಕಾದ ಫೆಡರಲ್ ನ್ಯಾಯಾಲಯದ ಮೊರೆಹೋದ ಪ್ಯಾಲಿಸ್ತೇನಿಯರು
ಬೆಂಗಳೂರು: ಇಸ್ರೇಲ್‌ಗೆ ಶಸ್ತ್ರಾಸ್ತ್ರ, ಆರ್ಥಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ನೀಡದಂತೆ ಅಧ್ಯಕ್ಷ ಜೋ ಬಿಡೆನ್, ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಿಯೋಡ್ ಆಸ್ಟಿನ್ ಅವರನ್ನು ತಡೆಯಲು ಪ್ಯಾಲಿಸ್ತೇನಿನ ಸಂಘಟನೆಗಳು ಅಮೇರಿಕಾ ಫೆಡರಲ್ ನ್ಯಾಯಾಲಯದ ಮೊರೆ ಹೋಗಿವೆ. ಗಾಝಾದ ನಾಗರಿಕರ ವಿರುದ್ಧ ಇಸ್ರೇಲ್‌ ನಡೆಸುತ್ತಿರುವುದು “ಬಹಿರಂಗ ನರಮೇಧ – unfolding genocide” ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.

“ಅಮೇರಿಕಾದ ಅಧಿಕಾರಿಗಳು ಇಂತಹ ಅತ್ಯಂತ ಗಂಭೀರ ಅಪರಾಧಗಳನ್ನು ತಡೆಯುವ ಕಾನೂನಾತ್ಮಕ ಕರ್ತವ್ಯವನ್ನು ಹೊಂದಿದ್ದಾರೆ,” ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಈ ಅರ್ಜಿದಾರರ ಗುಂಪಲ್ಲಿ – ಪ್ಯಾಲೆಸ್ಟೀನಿಯನ್ ಮಾನವ ಹಕ್ಕುಗಳ ಸಂಘಟನೆಗಳಾದ ಡಿಫೆನ್ಸ್ ಫಾರ್ ಚಿಲ್ಡ್ರನ್ ಇಂಟರ್ನ್ಯಾಷನಲ್-ಪ್ಯಾಲೆಸ್ಟೈನ್ ಮತ್ತು ಅಲ್-ಹಕ್; ಗಾಜಾದಲ್ಲಿರುವ ಅಹ್ಮದ್ ಅಬು ಅರ್ಟೆಮಾ ಮತ್ತು ಮೊಹಮ್ಮದ್ ಅಹಮದ್ ಅಬು ರೋಕ್ಬೆಹ್; ಮತ್ತು ತಮ್ಮ ಕುಟುಂಬದೊಂದಿಗೆ ಗಾಝಾದಲ್ಲಿ ಇರುವ ಅಮೇರಿಕಾದ ನಾಗರಿಕರಾದ ಮೊಹಮ್ಮದ್ ಮೊನಾಡೆಲ್ ಹರ್ಜಲ್ಲಾ, ಲೈಲಾ ಎಲ್ಹದ್ದಾದ್, ವೈಲ್ ಎಲ್ಭಾಸ್ಸಿ, ಬಾಸಿಮ್ ಎಲ್ಕರ್ರಾ, ಮತ್ತು ಎ.ಎನ್ ಹಾಗೂ ಖಾನ್ ಯೂನಿಸ್‌ನಲ್ಲಿರುವ ನಾಸರ್ ಮೆಡಿಕಲ್ ಕಾಂಪ್ಲೆಕ್ಸ್‌ನಲ್ಲಿ ವೈದ್ಯಕೀಯ ಇಂಟರ್ನ್ ಆಗಿರುವ ಒಮರ್ ಅಲ್-ನಜ್ಜರ್ ಇದ್ದಾರೆ. ಇವೆರೆಲ್ಲರೂ ತಮ್ಮ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದಾರೆ.

Leading Genocide and Holocaust Experts Submit Declarations in Support of Federal Case

ಅರ್ಜಿದಾರರ ಪ್ರಕಾರ, “ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳು, ಹಣ ಮತ್ತು ರಾಜತಾಂತ್ರಿಕವಾಗಿ ನೆರವನ್ನು ನೀಡುತ್ತಾ Genocide Convention and customary international lawಯನ್ನು ಉಲ್ಲಂಘಿಸಿ ಜನಾಂಗೀಯ ಹತ್ಯೆಯನ್ನು  ತಡೆಯಲು ವಿಫಲವಾದ ಅಧ್ಯಕ್ಷ ಬಿಡೆನ್, ಬ್ಲಿಂಕೆನ್ ಮತ್ತು ಆಸ್ಟಿನ್‌ರ ಅಧಿಕೃತ ಸಾಮರ್ಥ್ಯವನ್ನು ಪ್ರಶ್ನಿಸಿ,” ಮೊಕದ್ದಮೆ ಹೂಡಲಾಗಿದೆ.

ನರಮೇಧದ ಬಗೆಗಿನ ಕಾನೂನು ತಜ್ಞ ವಿಲಿಯಂ ಶಾಬಾಸ್ ಅವರ ಅಭಿಪ್ರಾಯಗಳನ್ನೂ ಈ ಮೊಕದ್ದಮೆಯಲ್ಲಿ ಸೇರಿಸಲಾಗಿದ್ದು, ಇವರ ಪ್ರಕಾರ ಇಸ್ರೇಲಿ ಸರ್ಕಾರದ ಹೇಳಿಕೆಗಳು, ಮಾರಣಾಂತಿಕ ಮಿಲಿಟರಿ ದಾಳಿ ಮತ್ತು ಮುತ್ತಿಗೆ ಹಾಕುವ ರೀತಿ, ಇವೆಲ್ಲವೂ ನರಮೇಧದ ಚಿಹ್ನೆಗಳು. ನರಮೇಧವನ್ನು ತಡೆಗಟ್ಟುವ ಬದಲು ಅಮೇರಿಕಾ ಕಾನೂನು ಕರ್ತವ್ಯದ ಉಲ್ಲಂಘನೆ ಮಾಡಿರುವುದಾಗಿ ವಿಲಿಯಂ ಶಾಬಾಸ್ ತಿಳಿಸಿದ್ದಾರೆ.

ನರಹತ್ಯೆ ಮತ್ತು ಹತ್ಯಾಕಾಂಡದ ಬಗಿನ ತಜ್ಞರಾದ ಜಾನ್ ಕಾಕ್ಸ್, ವಿಕ್ಟೋರಿಯಾ ಸ್ಯಾನ್‌ಫೋರ್ಡ್ ಮತ್ತು ಬ್ಯಾರಿ ಟ್ರಾಚ್ಟೆನ್‌ಬರ್ಗ್‌ರವರ  “ಇಸ್ರೇಲಿ ನಾಯಕತ್ವದಲ್ಲಿ ನಡೆಯುತ್ತಿರುವ ನರಹತ್ಯೆಯ ಉದ್ದೇಶಗಳು ಮತ್ತು ರೀತಿ ಇತ್ತೀಚಿನ ಇತಿಹಾಸದಲ್ಲಿ ನಡೆದ ಇತರ ನರಮೇಧಗಳನ್ನು ಯಾವ ರೀತಿಯಲ್ಲಿ ಹೋಲುತ್ತವೆ,” ಎಂಬ ಅಭಿಪ್ರಾಯವನ್ನು ಈ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

“ಕಳೆದ ಐದು ವಾರಗಳಿಂದ ಅಧ್ಯಕ್ಷ ಬಿಡೆನ್ ಮತ್ತು ಕಾರ್ಯದರ್ಶಿಗಳಾದ ಬ್ಲಿಂಕೆನ್ ಮತ್ತು ಆಸ್ಟಿನ್ ಇಸ್ರೇಲಿ ಸರ್ಕಾರದೊಂದಿಗೆ ಭುಜಕ್ಕೆ ಭುಜಕೊಟ್ಟು ನಿಂತಿದ್ದಾರೆ. ಇದು ಗಾಜಾದಲ್ಲಿ ಪ್ಯಾಲೇಸ್ಟಿನಿಯನ್ ಜನರನ್ನು ನಾಶಮಾಡುವ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಸ್ವಲ್ಪ ಸ್ವಲ್ಪವೇ ನೆರೆಯ ಪ್ರದೇಶಗಳ, ಆಸ್ಪತ್ರೆಗಳ ಮತ್ತು ಮನೆಮಠ ಕಳೆದುಕೊಂಡು ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯನ್ನರ ಮೇಲೆ ಬಾಂಬ್ ದಾಳಿಯಾದಾಗ, 2.2 ಮಿಲಿಯನ್ ಜನರಿಗೆ ಬದುಕಲು ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದಾಗಲೂ ಈ ಮೂವರು ಇಸ್ರೇಲ್‌ನ ಈ ನರಮೇಧದ ಅಭಿಯಾನಕ್ಕೆ ಯಾವುದೇ ತಡೆಯನ್ನು ತಾರದೇ ಮಿಲಿಟರಿ ಮತ್ತು ರಾಜಕೀಯ ಬೆಂಬಲ ನೀಡುವುದನ್ನು ಮುಂದುವರೆಸಿದ್ದಾರೆ, ”ಎಂದು ಪ್ರಕರಣವನ್ನು ಅಮೇರಿಕಾದ ನ್ಯಾಯಾಲಯಕ್ಕೆ ತಂದಿರುವ ಸೆಂಟರ್ ಫಾರ್ ಸಾಂವಿಧಾನಿಕ ಹಕ್ಕುಗಳ (Center for Constitutional Rights – CCR) ಹಿರಿಯ ವಕೀಲ ಕ್ಯಾಥರೀನ್ ಗಲ್ಲಾಘರ್ ತಿಳಿಸಿದ್ದಾರೆ.

Center for Constitutional Rights ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ಪ್ರಕರಣ ದಾಖಲಿಸಿದೆ. ಪತ್ರಿಕಾ ಹೇಳಿಕೆಯ ಪ್ರಕಾರ, ನರಮೇಧದ ಕೃತ್ಯಗಳನ್ನು ತಡೆಗಟ್ಟುವುದು ಮತ್ತು ಶಿಕ್ಷಿಸುವುದು ಜೆನೊಸೈಡ್ ಕನ್ವೆನ್ಷನ್‌ನ ಆರ್ಟಿಕಲ್ – 1 (Article 1 of the Genocide Convention) ರ ಅಡಿಯಲ್ಲಿ ಅಮೇರಿಕಾದ ಕರ್ತವ್ಯ. 18 U.S.C. § 1091

ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ : 50 ಕ್ಕೂ ಹೆಚ್ಚು ಸಾ*ವು
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ದಿನದಿಂದ ದಿನಕ್ಕೆ ಭೀಕರ ರೂಪ ಪಡೆದುಕೊಳ್ಳುತ್ತಿದೆ. ಗಾಜಾದಲ್ಲಿ ಸಾವಿರಾರು ಮಂದಿ ತಂಗಿದ್ದ ಪ್ಯಾಲೆಸ್ತೇನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿದೆ. ಇದರ ಪರಿಣಾಮ 50 ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಮೃತಪಟ್ಟು, 200 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಇಸ್ರೇಲ್ ವೈಮಾನಿಕ ದಾಳಿಯಲ್ಲಿ 50 ಕ್ಕೂ ಹೆಚ್ಚು ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಗಾಝಾ ಆಸ್ಪತ್ರೆಯ ನಿರ್ದೇಶಕರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ದೊಡ್ಡ ನಿರಾಶ್ರಿತರ ಶಿಬಿರವನ್ನು ನಿರ್ಮಿಸಿದ ಸ್ಥಳದಲ್ಲಿ ಈ ವಾಯು ದಾಳಿ ನಡೆದಿದೆ ಎಂದು ಹೇಳಲಾಗಿದೆ. ಈ ಶಿಬಿರದ ನಾಶದ ಚಿತ್ರಗಳು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈವರೆಗಿನ ಮಾಹಿತಿಯಂತೆ ಘಟನೆಯ ಬಗ್ಗೆ ಇಸ್ರೇಲ್ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ.

ಆದರೆ ಗಾಝಾದಲ್ಲಿನ ಭಯೋತ್ಪಾದಕರ ವಿಶಾಲ ಸುರಂಗ ಜಾಲದೊಳಗೆ ಹಮಾಸ್ ಬಂದೂಕುಧಾರಿಗಳೊಂದಿಗೆ ತನ್ನ ವಿಶೇಷ ಮಿಲಿಟರಿ ನೇರ ಹೋರಾಟವನ್ನು ಪ್ರಾರಂಭಿಸಿದೆ ಎಂದು ಇಸ್ರೇಲ್ ಈ ಹಿಂದೆ ಹೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ವೈಮಾನಿಕ ದಾಳಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಇಸ್ರೇಲ್ ಸೇನೆ ಈ ಹಿಂದೆ ಗಾಜಾದ ಆಸ್ಪತ್ರೆಯ ಮೇಲೆ ನಡೆದ ದಾಳಿಯನ್ನು ನೆನಪಿಸಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ಹೇಳಿಕೊಂಡಿವೆ. ಇಸ್ರೇಲಿ ಸೈನ್ಯವು ಬಾಂಬ್ ದಾಳಿಯ ಜೊತೆಗೆ ನೆಲದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂಬ ವರದಿಗಳಿವೆ. ಈಗಾಗಲೇ ಗಾಝಾ ಪಟ್ಟಿಯ ಒಳಭಾಗವನ್ನು ಇಸ್ರೇಲಿ ಪಡೆಗಳು ತಲುಪಿವೆ.

ಸಧ್ಯ ಇಸ್ರೇಲ್ ಯಾವ ಜಾಗವನ್ನೂ ಬಿಡದಂತೆ ತನ್ನ ದಾಳಿಯನ್ನು ಮುಂದುವರೆಸಿದೆ. ಈಗಾಗಲೇ ವಿಶ್ವಸಂಸ್ಥೆಯ ಎಚ್ಚರಿಕೆಯನ್ನೂ ಧಿಕ್ಕರಿಸಿ ಇಸ್ರೇಲ್ ಆಸ್ಪತ್ರೆಗಳ ಮೇಲೂ ಸಹ ತನ್ನ ದಾಳಿ ನಡೆಸಿದೆ. ಆದರೆ ತನ್ನ ದಾಳಿಯ ಬಗ್ಗೆ ಇಸ್ರೇಲ್ ತನ್ನದೇ ಆದ ಸಮರ್ಥನೆ ಕೊಡುವುದನ್ನು ಮುಂದುವರೆಸಿದೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೇಲೆ ಕೇರಳ ಪೊಲೀಸ್‌ FIR
ಬೆಂಗಳೂರು,ಅಕ್ಟೋಬರ್.‌31: ಎರ್ನಾಕುಲಂನ ಕ್ರಿಶ್ಚಿಯನ್ ಧಾರ್ಮಿಕ ಸಂಘಟನೆಯೊಂದರ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳ ಪೊಲೀಸರು FIR ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಕೇರಳ ಪೊಲೀಸ್‌ ಕಾಯಿದೆ ಸೆಕ್ಷನ್ 120 (ಒ) (ಉಪದ್ರವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭಾನುವಾರ, ಕಲಮಸ್ಸೆರಿ ಪುರಸಭೆಯ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳ ಕೂಟದಲ್ಲಿ ಎರಡು ದೊಡ್ಡ ಸ್ಫೋಟಗಳು ಸಂಭವಿಸಿದವು. ಜಮ್ರಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ಪ್ರಾರ್ಥನಾ ಸಮಾವೇಶಕ್ಕೆ ರಾಜ್ಯದಾದ್ಯಂತ ಸುಮಾರು 2,500 ಯೆಹೋವನ ಸಾಕ್ಷಿಗಳು ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.30 ರ ಸುಮಾರಿಗೆ ಸ್ಫೋಟಗಳು ಸಂಭವಿಸಿದವು.

ಇದರ ಬಗ್ಗೆ ದೇಶದಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದಂತೆ, ಚಂದ್ರಶೇಖರ್ X ಪೋಸ್ಟ್‌ನಲ್ಲಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನವದೆಹಲಿಯಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, “ಜಿಹಾದ್‌ಗಾಗಿ ಭಯೋತ್ಪಾದಕ ಹಮಾಸ್‌ನ ನೀಡಿದ ಕರೆ ಮುಗ್ಧ ಕ್ರಿಶ್ಚಿಯನ್ನರ ಮೇಲಿನ ದಾಳಿ ಮತ್ತು ಬಾಂಬ್ ಸ್ಫೋಟಗಳಿಗೆ ಕಾರಣವಾಗುತ್ತಿದೆ” ಎಂದು ಟ್ವೀಟ್‌ ಮಾಡಿದ್ದರು.

ಈ ಸ್ಫೋಟ ಸಂಭವಿಸುವ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್ ಗಾಜಾ ಮೇಲಿನ ಇಸ್ರೇಲ್‌ನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವಂತೆ ಕೋರಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಚಂದ್ರಶೇಖರ್, “ಕೊಳಕು, ನಾಚಿಕೆಯಿಲ್ಲದ ತುಷ್ಟೀಕರಣ ರಾಜಕೀಯ” ಪಿಣರಾಯ್‌ ವಿಜಯನ್ ತೊಡಗಿದ್ದಾರೆ ಎಂದು ಆರೋಪಿಸಿದ್ದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನ್ ಮೂಲಭೂತವಾದಿಗಳ ವಿರುದ್ಧ ಸಹಿಷ್ಣುತೆ ತೋರಿದ್ದಾರೆ ಎಂದು ಕಿಡಿಕಾರಿದ್ದರು.

ಅಕ್ಟೋಬರ್ 27 ರಂದು ಮಲಪುರಂನಲ್ಲಿ ಜಮಾತ್-ಎ-ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಪ್ಯಾಲಿಸ್ತೇನ್ ಪರ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಹಮಾಸ್‌ನ ಮಾಜಿ ಮುಖ್ಯಸ್ಥ ಖಲೀದ್ ಮಶಾಲ್ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದು ವರದಿಯಾಗಿತ್ತು.

ಇಸ್ಲಾಂ ಧರ್ಮದ ಮೂರು ಪವಿತ್ರ ಸ್ಥಳಗಳಲ್ಲಿ ಒಂದಾದ ಜೆರುಸಲೆಮ್‌ನಲ್ಲಿರುವ ಅಲ್-ಅಕ್ಸಾ ಮಸೀದಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಪ್ಯಾಲೇಸ್ಟಿನಿಯನ್ ಹೋರಾಟಗಾರರನ್ನು ಪ್ರಪಂಚದಾದ್ಯಂತದ ಜನರು ಬೆಂಬಲಿಸಬೇಕು ಎಂದು ಮಶಾಲ್ ಭಾಷಣದಲ್ಲಿ ಹೇಳಿದ್ದರು.

“ಇಸ್ರೇಲ್ ನಮ್ಮ ನಿವಾಸಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಮನೆಗಳನ್ನು ಕೆಡವಲಾಗುತ್ತಿದೆ. ಅವರು ಗಾಜಾದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ನಾಶಪಡಿಸಿದ್ದಾರೆ. ಅವರು ಚರ್ಚುಗಳು, ದೇವಾಲಯಗಳು, ವಿಶ್ವವಿದ್ಯಾನಿಲಯಗಳು ಮತ್ತು ವಿಶ್ವಸಂಸ್ಥೆಯ ಕಟ್ಟಡಗಳನ್ನೂ ನಾಶಪಡಿಸುತ್ತಿದ್ದಾರೆ. ಈ ದಾಳಿಯ ಗಾಜಾವನ್ನು ಇಲ್ಲವಾಗಿಸುವುದೇ ಇದರ ಅರ್ಥ, ಮತ್ತು ಅವರು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಗಾಜಾದಲ್ಲಿನ ಹೋರಾಟಗಾರರು ಅವರನ್ನು ತಮ್ಮ ಮಿಲಿಟರಿಯಿಂದ ಸೋಲಿಸಿದ್ದಾರೆ,” ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು.

ಪ್ಯಾಲಿಸ್ತೇನ್ ಹಿತಾಸಕ್ತಿಗಳನ್ನು ಸಮರ್ಥಿಸುವ ಸೋಗಿನಲ್ಲಿ ಸಂಘಟಕರು ಹಮಾಸನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ತನಿಖೆಗೆ ಕರೆ ಆಗ್ರಹಿಸಿತ್ತು.

ಇದಾದ ನಂತರ, ಸೋಮವಾರ, ಪಿಣರಾಯ್‌ ವಿಜಯನ್ ಹಮಾಸ್ ನಾಯಕನ ಭಾಷಣವನ್ನು ಪೊಲೀಸರು ಪರಿಶೀಲಿಸುತ್ತಾರೆ ಮತ್ತು ರಾಜೀವ್‌ ಚಂದ್ರಶೇಖರ್ ಅವರನ್ನು “ಅತ್ಯಂತ ವಿಷಕಾರಿ” ಎಂದು ಟೀಕಿಸಿದ್ದು ಪಿಟಿಐಯಲ್ಲಿ ವರದಿಯಾಗಿತ್ತು.