jairam ramesh – Peepal Media

ಜಾತಿ ಗಣತಿ: ಕೇಂದ್ರೀಯ ಮೀಸಲಾತಿ ಮೇಲಿನ 50% ಮಿತಿಯನ್ನು ತೆಗೆದುಹಾಕುವುದು ದೇಶದ ಅಗತ್ಯ- ಕಾಂಗ್ರೇಸ್
ನವದೆಹಲಿ: ರಾಷ್ಟ್ರವ್ಯಾಪಿ ಜಾತಿ ಸಮೀಕ್ಷೆ ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿಯ ಮೇಲೆ ಸುಪ್ರೀಂ ಕೋರ್ಟ್‌ನ ಶೇಕಡಾ 50 ರ ಅನಿಯಂತ್ರಿತ ಸೀಲಿಂಗ್ ಅನ್ನು ತೆಗೆದುಹಾಕುವುದು ದೇಶದ ದೃಷ್ಟಿಯಿಂದ ಬಹುಮುಖ್ಯ ಎಂದು ಕಾಂಗ್ರೆಸ್ ನವೆಂಬರ್‌ 9, ಶನಿವಾರ ಪ್ರತಿಪಾದಿಸಿದೆ.

ತೆಲಂಗಾಣದಲ್ಲಿ ಪಕ್ಷದ ಸರ್ಕಾರವು ತನ್ನ ಜಾತಿ ಸಮೀಕ್ಷೆಯನ್ನು ಶನಿವಾರ ಪ್ರಾರಂಭಿಸಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಜೈರಾಮ್ ರಮೇಶ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

The Congress Government in Telangana will begin its caste-based survey today. 80,000 ennumerators will be going door to door over the next few weeks, covering over 1.17 crore households across 33 districts.

This is the first time a caste-based survey is being conducted by the…
— Jairam Ramesh (@Jairam_Ramesh) November 9, 2024

ಮುಂದಿನ ಕೆಲವು ವಾರಗಳಲ್ಲಿ 80,000 ಗಣತಿದಾರರು ಮನೆ ಮನೆಗೆ ತೆರಳಿ 33 ಜಿಲ್ಲೆಗಳಲ್ಲಿ 1.17 ಕೋಟಿ ಕುಟುಂಬಗಳನ್ನು ಒಳಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಈಗ ಸರ್ಕಾರಿ ಅಧಿಕಾರಿಗಳು RSS ಚಡ್ಡಿ ಹಾಕ್ಕೊಂಡು ಕಚೇರಿಗೆ ಬರಬಹುದು: ಜೈ ರಾಮ್‌ ರಮೇಶ್‌
ನವದೆಹಲಿ: ಆರ್‌ಎಸ್‌ಎಸ್‌ ಸಭೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಇದ್ದ ನಿಷೇಧವನ್ನು ತೆಗೆದು ಹಾಕಿರುವುದಕ್ಕೆ ಕಾಂಗ್ರೆಸ್‌ ಪಕ್ಷದ ಮುಖಂಡ ಜೈರಾಮ್‌ ರಮೇಶ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ  ಈ ಹಿಂದೆ ನಿಷೇಧಗೊಂಡಿದ್ದ RSSನ ಸಭೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು RSS ಚಡ್ಡಿ ಹಾಕ್ಕೊಂಡು ಕಚೇರಿಗೆ ಬರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಜುಲೈ 9 ರಂದು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದೆ ಎನ್ನಲಾದ ಆದೇಶ ಪ್ರತಿಯ ಫೋಟೋವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದಾರೆ.

RSSನ ದುಷ್ಕೃತ್ಯಗಳನ್ನು ಮನಗಂಡು 1948ರ ಫೆಬ್ರವರಿಯಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ಸರ್ದಾರ್ ಪಟೇಲ್ ಆರಈ ಸಂಘಟನೆಯನ್ನು ನಿಷೇಧಿಸಿದ್ದರು. ನಂತರದ ದಿನಗಳಲ್ಲಿ ಉತ್ತಮ ನಡವಳಿಕೆಯ ಭರವಸೆಯ ಮೇಲೆ ನಿಷೇಧವನ್ನು ಹಿಂತೆಗೆದುಕೊಳ್ಳಲಾಗಿತ್ತು.  ಇದಾದ ನಂತರವೂ ಆರ್‌ಎಸ್‌ಎಸ್ ನಾಗಪುರದಲ್ಲಿ ತಿರಂಗವನ್ನು ಹಾರಿಸಿರಲಿಲ್ಲ. ಹೀಗಾಗಿ 1966 ರಲ್ಲಿ, ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದಂತೆ  ನಿಷೇಧ ಹೇರಲಾಗಿತ್ತು ಎಂದು ಅವರು ಬರೆದುಕೊಂಡಿದ್ದಾರೆ.

ಬಿಜೆಪಿ ಪಕ್ಷದ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಜಾರಿಯಲ್ಲಿದ್ದ  ಈ ಕಾನೂನು ಜಾರಿಯಲ್ಲಿತ್ತು. 58 ವರ್ಷಗಳ ನಿಷೇಧವನ್ನು ಈಗ ಮೋದಿ ಸರ್ಕಾರ ತೆಗೆದು ಹಾಕಿದೆ. ಇನ್ನು ಮುಂದೆ  ಅಧಿಕಾರಿಗಳು ಚೆಡ್ಡಿ ತೊಟ್ಟು ಬರಬಹುದು ಎಂಬುವುದು ನನ್ನ ಭಾವನೆ” ಎಂದು ಬರೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಕೂಡಾ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.

ಇಂಡಿಯಾ ಕೂಟ ಗೆಲ್ಲಲಿದ್ದು, 48 ಗಂಟೆಯಲ್ಲಿ ಹೊಸ ಪ್ರಧಾನಿ ಆಯ್ಕೆ: ಜೈರಾಮ್ ರಮೇಶ್
ನವದೆಹಲಿ:  ಇನ್ನೇನು ಫಲಿತಾಂಶದ ನಿರೀಕ್ಷೆಯಲ್ಲಿರುವ ಲೋಕಸಭಾ ಚುನಾವಣೆಯು ಈ ಸಲ ನಿರ್ಣಾಯಕ ಜನಾಭಿಪ್ರಾಯ ಪಡೆಯಲಿದೆ. ಇಂಡಿಯಾ ಕೂಟ ಆಧಿಕಾರ ಹಿಡಿಯಲಿದ್ದು,  48 ಗಂಟೆಯಲ್ಲಿ ‍ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ ಭರವಸೆ ವ್ಯಕ್ತಪಡಿಸಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟವು ಸರಳ ಬಹುಮತಕ್ಕೆ ಅಗತ್ಯ ಇರುವ 272ಕ್ಕಿಂತ ಅಧಿಕ ಸೀಟುಗಳಲ್ಲಿ ಗೆಲುವು ಸಾಧಿಸಲಿದೆ. ಇಂಡಿಯಾ ಒಕ್ಕೂಟದ ಪಕ್ಷದ ಪರವಾಗಿ ಜನಾಭಿಪ್ರಾಯ ಇರಲಿದೆ. ಎನ್‌ಡಿಎ ಮೈತ್ರಿಕೂಟದ ಕೆಲವೊಂದು ಪಕ್ಷಗಳು ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಂಪರ್ಕದಲ್ಲಿವೆ. ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

‘2004ರಲ್ಲಿ ಬಿಜೆಪಿ  ಭಾರತ ಪ್ರಕಾಶಿಸಲಿದೆ ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡಿತು. ಆಗ ಕಾಂಗ್ರೆಸ್ ಗೆಲುವು ಸಾಧಿಸಿ ಮೈತ್ರಿ ಸರ್ಕಾರ ರಚಿಸಿತ್ತು. 2024ರಲ್ಲಿ ಅದೇ ಪುನರಾವರ್ತನೆಯಾಗಲಿದೆ. ರಾಜಸ್ಥಾನ, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಸೀಟುಗಳಿಕೆ ಹೆಚ್ಚಳವಾಗಲಿದೆ. ಛತ್ತೀಸಗಢ, ಮಧ್ಯಪ್ರದೇಶ ಹಾಗೂ ಅಸ್ಸಾಂನಲ್ಲೂ ನಮಗೆ ಹೆಚ್ಚು ಸೀಟುಗಳು ಲಭಿಸುವ ನಿರೀಕ್ಷೆ ಇದೆ.   ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಸೀಟು ಗಳಿಕೆ ಹೆಚ್ಚಳವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಬಿಜೆಪಿ 2019ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಲಿದೆ. ಪಶ್ಚಿಮ ಬಂಗಾಳದಲ್ಲೂ ಅವರ ಗಳಿಕೆ ಕಡಿಮೆಯಾಗಲಿದೆ ಎಂದರು.

ಮಣಿಪುರ ಹಿಂಸಾಚಾರ ಬಿಜೆಪಿಯ ವಿಭಜಕ ರಾಜಕಾರಣದ ಪರಿಣಾಮ: ಕಾಂಗ್ರೆಸ್
ಮಣಿಪುರದ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಹೇಳಿಕೆಗಳನ್ನು ಖಂಡಿಸಿದ ಕಾಂಗ್ರೆಸ್, ಈಶಾನ್ಯ ರಾಜ್ಯದಲ್ಲಿನ ಹಿಂಸಾಚಾರವು ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿಭಜಕ ಮತ್ತು ಧ್ರುವೀಕರಣದ ರಾಜಕೀಯದ ಪರಿಣಾಮವಾಗಿದೆ ಎಂದು ಸೋಮವಾರ ಆರೋಪಿಸಿದೆ.

ಮಣಿಪುರವನ್ನು ಪ್ರಧಾನಿ ಉಳಿಸಿದ್ದಾರೆ ಎಂದು ಬಿಜೆಪಿ ಹೇಳುವುದು ಅವಮಾನಕರ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

‘ದಿ ಅಸ್ಸಾಂ ಟ್ರಿಬ್ಯೂನ್’ ಪತ್ರಿಕೆಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಿಂದಿನ ಸರ್ಕಾರಗಳಿಂದ ನಿರ್ಲಕ್ಷಿಸಲ್ಪಟ್ಟ ಈಶಾನ್ಯ ಪ್ರದೇಶವನ್ನು ಅಭಿವೃದ್ಧಿ ಮತ್ತು ಶಾಂತಿಗೆ ಕಾರಣವಾಗುವ ಪ್ರದೇಶವಾಗಿ ಪರಿವರ್ತಿಸಿದೆ ಎಂದು ಹೇಳಿದರು. ಕಳೆದ ದಶಕದಲ್ಲಿ ಸಮೃದ್ಧಿ. ಮಣಿಪುರದ ಪರಿಸ್ಥಿತಿ ಮತ್ತು ಪ್ರತಿಪಕ್ಷಗಳ ಟೀಕೆಗೆ ಸಂಬಂಧಿಸಿದಂತೆ ಪ್ರಧಾನಿ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಬಗ್ಗೆ ಈಗಾಗಲೇ ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಘರ್ಷಣೆ ಪರಿಹಾರಕ್ಕೆ ನಮ್ಮ ಅತ್ಯುತ್ತಮ ಸಂಪನ್ಮೂಲ ಮತ್ತು ಆಡಳಿತ ಯಂತ್ರವನ್ನು ಮೀಸಲಿಟ್ಟಿದ್ದೇವೆ. ಭಾರತ ಸರ್ಕಾರದ ಸಕಾಲಿಕ ಮಧ್ಯಪ್ರವೇಶ ಮತ್ತು ಸರ್ಕಾರದ ಪ್ರಯತ್ನದಿಂದ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಮಣಿಪುರದ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಜೈರಾಮ್ ರಮೇಶ್ ಅವರು ಎಕ್ಸ್ ನಲ್ಲಿ ಬರೆದುಕೊಂಡಿದ್ದು, “ಪ್ರಧಾನಿ ಮಣಿಪುರವನ್ನು ಉಳಿಸಿದ್ದಾರೆಂದು ಬಿಜೆಪಿ ಹೇಳಿಕೊಳ್ಳುವುದು ನಾಚಿಕೆಯಿಲ್ಲದ ಮತ್ತು ಅಪಮಾನಕರ” ಎಂದು ಬರೆದಿದ್ದಾರೆ.

ಜೈರಾಮ್ ರಮೇಶ್ ಮುಂದುವರೆದು, “ಪ್ರಧಾನಿ ಮಣಿಪುರವನ್ನು ಉಳಿಸಿದ್ದಾರೆಂದು ಬಿಜೆಪಿ ಹೇಳಿಕೊಳ್ಳುವುದು ನಾಚಿಕೆಗೇಡಿ ವಿಷಯ. ನೂರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಅಲ್ಲಿ ಇಂದಿಗೂ ಭಯ ಮತ್ತು ಬೆದರಿಕೆಯ ವಾತಾವರಣವಿದೆ ಮತ್ತು ಸಮುದಾಯಗಳು ಪ್ರತ್ಯೇಕವಾಗಿವೆ. ಪ್ರಧಾನಿಯವರು 11 ತಿಂಗಳಿಂದ ಮಣಿಪುರಕ್ಕೆ ಭೇಟಿ ನೀಡಿಲ್ಲ ಅಥವಾ ಮೂರು ನಿಮಿಷ ಬಿಟ್ಟು ಅದರ ಬಗ್ಗೆ ಮಾತನಾಡಿಲ್ಲ ಎಂದು ಅವರು ಕಿಡಿಕಾರಿದರು.

ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಅವರು ರಾಜ್ಯದ ಮುಖ್ಯಮಂತ್ರಿ ಅಥವಾ ಶಾಸಕರು ಅಥವಾ ಸಂಸದರನ್ನು ಭೇಟಿ ಮಾಡಿಲ್ಲ ಎಂದು ರಮೇಶ್ ಆರೋಪಿಸಿದರು. “ಇದು ಬಿಜೆಪಿ ಕರಗತ ಮಾಡಿಕೊಂಡಿರುವ ಹಿಂಸಾಚಾರ, ವಿಭಜನೆ ಮತ್ತು ಧ್ರುವೀಕರಣದ ರಾಜಕೀಯದ ಪರಿಣಾಮವಾಗಿದೆ. ಇದು ಮಣಿಪುರದ ವಾಸ್ತವ” ಎಂದು ಅವರು ಹೇಳಿದ್ದಾರೆ.

ಚುನಾವಣಾ ಬಾಂಡ್‍ ಮೂಲಕ ಬಿಜೆಪಿ ಭ್ರಷ್ಟಾಚಾರಗಳು ಬಯಲಾಗುತ್ತಿವೆ: ಜೈರಾಮ್‌ ರಮೇಶ್‌
ನವದೆಹಲಿ: ಚುನಾವಣಾ ಬಾಂಡ್ ಮೂಲಕ ಬಿಜೆಪಿಯ ಹಲವಾರು ಬಗೆಯ ಭ್ರಷ್ಟಾಚಾರಗಳು ಬಯಲಿಗೆ ಬರುತ್ತಿವೆ. ನಿಮ್ಮ ಕಂಪನಿಗೆ ಸರ್ಕಾರದ ರಕ್ಷಣೆ ಬೇಕೆಂದರೆ ದೇಣಿಗೆ ಕೊಡಿ ಎಂದು ಕೇಳುವುದು, ಕಿಕ್‍ಬ್ಯಾಕ್ ಪಡೆಯುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹಣ ದುರುಪಯೋಗ ಮಾಡುವುದು ಸೇರಿದಂತೆ  ನಾಲ್ಕು ಬಿಜೆಪಿಯ ಭ್ರಷ್ಟ ತಂತ್ರಗಾರಿಕೆಗಳು ಬಯಲುಗೊಗೊಂಡಿವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ವಿಶಿಷ್ಟ ಬಾಂಡ್ ಐಡಿ ಸಂಖ್ಯೆಗಳನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ. ಇದರಿಂದ ಯಾವ ದಾನಿಗಳು ಯಾವ ಪಕ್ಷಗಳಿಗೆ ದೇಣಿಗೆ ನೀಡಿದ್ದಾರೆ ಎನ್ನುವುದು ಕೂಡಾ ತಿಳಿಯುತ್ತದೆ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ  ಆಗ್ರಹಿಸಿದ್ದಾರೆ.

ಚುನಾವಣೆ ಮುಗಿಯುವವರೆಗೂ ವಿವರ ಬಹಿರಂಗಪಡಿಸುವುದನ್ನು ಮುಂದೂಡುವ ಸತತ ಪ್ರಯತ್ನ ಎಸ್‌ಬಿಐ ಮತ್ತು ಬಿಜೆಪಿ ಮಾಡಿದವು. ಈಗ ಸುಪ್ರೀಂಕೋರ್ಟ್ ಒತ್ತಡದ ನಿರ್ದೇಶನದಂತೆ ಎಸ್‍ಬಿಐ ಒಂದಿಷ್ಟು ವಿವರಗಳನ್ನು ಬಹಿರಂಗಪಡಿಸಿದೆ. 1300ಕ್ಕೂ ಅಧಿಕ ಕಂಪನಿಗಳು ಮತ್ತು ವ್ಯಕ್ತಿಗಳು ಚುನಾವಣಾ ಬಾಂಡ್‍ಗಳ ಮೂಲಕ ದೇಣಿಗೆ ಬಿಜೆಪಿಗೆ ದೇಣಿಗೆ ನೀಡಿದ್ದಾರೆ. ಬಿಜೆಪಿ 2019ರ ಬಳಿಕ 6000 ಕೋಟಿಗೂ ಅಧಿಕ ಮೊತ್ತದ ದೇಣಿಗೆ ಸ್ವೀಕರಿಸಿದೆ. ಚುನಾವಣಾ ಬಾಂಡ್‍ಗಳ ವಿವರಗಳು ಸದ್ಯಕ್ಕೆ ಬಿಜೆಪಿಯ ನಾಲ್ಕು ತಂತ್ರಗಳನ್ನು ಬಯಲುಗೊಳಿಸಿವೆ. ಇನ್ನೆಷ್ಟು ತಂತ್ರಗಳಿವೆಯೋ ಎಂದು ಅವರು ಆರೋಪಿಸಿದ್ದಾರೆ.

ಮೇಘಾ ಎಂಜಿನಿಯರಿಂಗ್ ಎಂಬ ಕಂಪನಿಯು 2023ರ ಏಪ್ರಿಲ್‍ನಲ್ಲಿ 800 ಕೋಟಿಗೂ ಅಧಿಕ ಮೊತ್ತವನ್ನು ಬಾಂಡ್ ಖರೀದಿಗೆ ವ್ಯಯಿಸಿದೆ. ಇದಕ್ಕೂ ಒಂದು ತಿಂಗಳ ಮುನ್ನ ಕಂಪನಿಗೆ 14400 ಕೋಟಿ ರೂಪಾಯಿ ಮೊತ್ತದ ಥಾಣೆ- ಬೊರಿವಿಲಿ ಅವಳಿ ಸುರಂಗ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಹೀಗೆ ಕಂಪನಿಗಳ ಜೊತೆ ಕೊಡುವ ಮತ್ತು ತೆಗೆದುಕೊಳ್ಳುವ ಭ್ರಷ್ಟಾಚಾರವನ್ನು ಬಿಜೆಪಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

‘ಕಿಕ್ ಬ್ಯಾಕ್, ಬ್ಲಾಕ್ಮೇಲ್, ಭ್ರಷ್ಟಾಚಾರ..’ ; ಚುನಾವಣಾ ಬಾಂಡ್ ಖರೀದಿಯಲ್ಲಿ ನಡೆದ ಅವ್ಯವಹಾರ ಎಂತದ್ದು ಗೊತ್ತಾ?
ಚುನಾವಣಾ ಬಾಂಡ್ ಗಳ ಬಹಿರಂಗಪಡಿಸುವಿಕೆಯ ಬಗ್ಗೆ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದಾಖಲೆಯಂತೆ ಮಹತ್ವದ ವಿಚಾರಗಳು ಹೊರಬಿದ್ದಿವೆ.

ಎಲ್ಲರ ಅನುಮಾನದಂತೆ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರವನ್ನೇ ಕಾನೂನುಬದ್ಧಗೊಳಿಸಿದ ಆರೋಪದಂತೆ ಹಲವು ‘ಕೊಡು ಕೊಳ್ಳುವಿಕೆ’, ‘ಕಿಕ್ ಬ್ಯಾಕ್’ ಸೇರಿದಂತೆ ‘ಬ್ಲಾಕ್ ಮೇಲ್’ ಪ್ರಕ್ರಿಯೆಗಳೂ ನಡೆದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಆ ಮೂಲಕ ಕೋಟ್ಯಾಂತರ ರೂಪಾಯಿಯ ಬಾಂಡ್‌ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಂಪನಿಗಳು, ಅದಕ್ಕೆ ಪ್ರತಿಯಾಗಿ ಲಾಭ ಪಡೆದಿರುವುದು ಗೊತ್ತಾಗಿದೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿದ ಮಾಹಿತಿಯಂತೆ ಯಾವ್ಯಾವ ಕಂಪನಿಗಳು ಎಷ್ಟೆಷ್ಟು ದೇಣಿಗೆ ನೀಡಿವೆ ಎಂಬ ಮಾಹಿತಿಗಳು ಇದ್ದರೂ ಯಾರಿಗೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಆದರೆ ದೇಣಿಗೆ ನೀಡಿದ ಕೆಲವೇ ದಿನಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಕಡೆಯಿಂದ ದೊಡ್ಡ ದೊಡ್ಡ ಮೊತ್ತದ ಲಾಭ ಪಡೆದುಕೊಂಡ ಬಗ್ಗೆಯೂ ಮಾಹಿತಿ ಬಿಡುಗಡೆ ಆಗಿದೆ.

ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಅದು ಈ ಕೆಳಗಿನಂತಿದೆ.

Here’s a quick first analysis of the Electoral Bonds data disclosure that the SBI put up last night, after weeks of attempting to postpone it until after the election:

•Over 1,300 companies and individuals have donated electoral bonds, including over 6,000 crores to the BJP…
— Jairam Ramesh (@Jairam_Ramesh) March 15, 2024

* ದೇಶದ ದೊಡ್ಡ ಮಾಧ್ಯಮ TV 9 ಸಂಸ್ಥೆಯ ಮಾಲಿಕತ್ವ ಹೊಂದಿರುವ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯು 966 ಕೋಟಿ ರೂ.ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದೆ. ಏಪ್ರಿಲ್ 2023ರಲ್ಲಿ ಈ ಕಂಪನಿಯು 140 ಕೋಟಿ ರೂ. ದೇಣಿಗೆ ನೀಡಿತ್ತು. ಇದಾಗಿ ಒಂದು ತಿಂಗಳ ಬಳಿಕ ಕಂಪನಿಯು ಕೇಂದ್ರ ಬಿಜೆಪಿ ಸರ್ಕಾರದಿಂದ 14,400 ಕೋಟಿ ರೂ. ವೆಚ್ಚದ ಥಾಣೆ-ಬೊರಿವಲಿ ಅವಳಿ ಸುರಂಗ ಮಾರ್ಗದ ದೊಡ್ಡ ಯೋಜನೆಯನ್ನು ತನ್ನದಾಗಿಸಿಕೊಂಡಿದೆ.

* ಜಿಂದಾಲ್ ಸ್ಟೀಲ್ & ಪವರ್ ಕಂಪನಿ ಅಕ್ಟೋಬರ್ 7, 2022ರಂದು 25 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿ ಮಾಡಿದೆ. ಅದಾಗಿ ಕೇವಲ ಮೂರೇ ದಿನಗಳ ಬಳಿಕ, ಅಂದರೆ 10 ಅಕ್ಟೋಬರ್ 2022 ರಂದು ಜಿಂದಾಲ್ ಕಂಪನಿಯು ಗರೇ ಪಾಲ್ಮಾ IV/6 ಕಲ್ಲಿದ್ದಲು ಗಣಿಗಾರಿಕೆಯ ಗುತ್ತಿಗೆ ತನ್ನದಾಗಿಸಿಕೊಂಡಿದೆ.

ಇದು ದೇಣಿಗೆ ನೀಡಿ, ಲಾಭದಾಯಕ ಕೆಲಸಗಳನ್ನು ತನ್ನದಾಗಿಸಿಕೊಂಡ ಮಾಹಿತಿಯಾದರೆ ಬಿಜೆಪಿ ಸರ್ಕಾರ ಐಟಿ, ಇಡಿ, CBI ನಂತಹ ತನಿಖಾ ಸಂಸ್ಥೆಗಳ ಮೇಲೆ ಪ್ರಭಾವ ಬಳಸಿ, ದಾಳಿಗಳ ಮೂಲಕ ಬ್ಲಾಕ್ಮೇಲ್ ತಂತ್ರ ಮಾಡಿಯೂ ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದ ಬಗ್ಗೆಯೂ ಜೈರಾಮ್ ರಮೇಶ್ ತಮ್ಮ ಪೋಸ್ಟ್ ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

* ಹೆಟೆರೊ ಫಾರ್ಮಾ ಮತ್ತು ಯಶೋದಾ ಆಸ್ಪತ್ರೆಯಂತಹ ಕಂಪನಿಗಳು ತನಿಖಾ ಸಂಸ್ಥೆಗಳ ದಾಳಿಗೆ ಒಳಗಾದ ಬಳಿಕ ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.

* ಕಳೆದ ಡಿಸೆಂಬರ್ 2023ರಲ್ಲಿ ಶಿರಡಿ ಸಾಯಿ ಎಲೆಕ್ಟ್ರಿಕಲ್ಸ್ ಮೇಲೆ ಐಟಿ ಸಂಸ್ಥೆ ದಾಳಿ ನಡೆಸಿತ್ತು. ಅದಾಗಿ ಒಂದೇ ತಿಂಗಳಲ್ಲಿ ಈ ಸಂಸ್ಥೆ 40 ಕೋಟಿ ಎಲೆಕ್ಟಾಲ್ ಬಾಂಡ್ ಮೂಲಕ ದೇಣಿಗೆ ನೀಡಿದೆ.

* ಈ ಪಟ್ಟಿಯಲ್ಲಿ ಅತಿ ಹೆಚ್ಚು ಮೊತ್ತದ ದೇಣಿಗೆ ನೀಡಿದ ಸಂಸ್ಥೆಯಾಗಿ ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ಸ್ ಲಿಮಿಟೆಡ್ ನಿಲ್ಲಲಿದೆ. ಈ ಸಂಸ್ಥೆ 1,200 ಕೋಟಿ ಮೌಲ್ಯದ ಬಾಂಡ್ ಖರೀದಿಸುವ ಮೂಲಕ ಅತೀ ಹೆಚ್ಚು ದೇಣಿಗೆ ನೀಡಿದ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಏಪ್ರಿಲ್ 2, 2022 ರಂದು ಫ್ಯೂಚರ್ ಗೇಮಿಂಗಗ್ ಕಂಪನಿ ಮೇಲೆ ಇಡಿ ದಾಳಿ ನಡೆಸಿತ್ತು. ಇದಾಗಿ ಕೇವಲ 5 ದಿನಗಳ ನಂತರ, ಏಪ್ರಿಲ್ 7ರಂದು ಕಂಪನಿಯು ಚುನಾವಣಾ ಬಾಂಡ್‌ ಮೂಲಕ 100 ಕೋಟಿ ರೂ. ದೇಣಿಗೆ ನೀಡಿದೆ.

* ಅಕ್ಟೋಬರ್ 2023ರಲ್ಲಿ ಐಟಿ ಇಲಾಖೆಯು ಫ್ಯೂಚರ್ ಕಂಪನಿ ಮೇಲೆ ದಾಳಿ ನಡೆಸಿತ್ತು. ಅದೇ ತಿಂಗಳು ಕಂಪನಿಯು ಚುನಾವಣಾ ಬಾಂಡ್‌ ಮೂಲಕ 65 ಕೋಟಿ ರೂ. ದೇಣಿಗೆ ನೀಡಿದೆ.

ಇನ್ನು ಕೇಂದ್ರ ಸರ್ಕಾರದ ಮೇಲೆ ಕಿಕ್ ಬ್ಯಾಕ್ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಬಿಜೆಪಿ ಈ ಮಾರ್ಗವಾಗಿಯೂ ಹಣ ಪಡೆದಿರುವ ಬಗ್ಗೆ ಆರೋಪ ಮಾಡಿದ್ದಾರೆ.

* ವೇದಾಂತ ಸಂಸ್ಥೆಯು ಮಾರ್ಚ 3, 2021ರಂದು ರಾಧಿಕಪೂರ್ ವೆಸ್ಟ್ ಖಾಸಗಿ ಕಲ್ಲಿದ್ದಲು ಗಣಿ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿತ್ತು. ಈ ಪ್ರಕ್ರಿಯೆಯ ಕೇವಲ ಒಂದು ತಿಂಗಳ ನಂತರ ಏಪ್ರಿಲ್ 2021ರಲ್ಲಿ ಸಂಸ್ಥೆ ಚುನಾವಣಾ ಬಾಂಡ್‌ಗಳ ಮೂಲಕ 25 ಕೋಟಿ ರೂ. ದೇಣಿಗೆ ನೀಡಿದೆ.

* ಮೇಘಾ ಇಂಜಿನಿಯರಿಂಗ್ ಕಂಪನಿಯು ಆಗಸ್ಟ್ 2020ರಲ್ಲಿ 4,500 ಕೋಟಿ ರೂ. ವೆಚ್ಚದ ಜೊಜಿಲಾ ಸುರಂಗ ಯೋಜನೆಯನ್ನು ತನ್ನದಾಗಿಸಿಕೊಂಡಿತ್ತು. ಅಕ್ಟೋಬರ್ 2020ರಲ್ಲಿ ಕಂಪನಿಯು ಚುನಾವಣಾ ಬಾಂಡ್‌ಗಳ ಮೂಲಕ 20 ಕೋಟಿ ರೂ. ದೇಣಿಗೆ ನೀಡಿದೆ.

* ಮೇಘಾ ಕಂಪನಿಯು ಡಿಸೆಂಬರ್ 2022ರಲ್ಲಿ ಬಿಕೆಸಿ ಬುಲೆಟ್ ರೈಲು ನಿಲ್ದಾಣದ ಗುತ್ತಿಗೆಯನ್ನು ಪಡೆದಿತ್ತು. ಅದೇ ತಿಂಗಳು ಕಂಪನಿ 56 ಕೋಟಿ ರೂ. ದೇಣಿಗೆ ನೀಡಿದೆ.

ಇನ್ನು ಹಣಕಾಸು ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಜಾರಿಗೊಳಿಸಿದ ಈ ಯೋಜನೆಯ ಹಿಂದೆ ಕೋಟ್ಯಂತರ ರೂಪಾಯಿ ಅವ್ಯವಹಾರದ ಬಗ್ಗೆಯೂ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಹಿತಿ ಹೊರಹಾಕಿದ್ದಾರೆ. ತಿದ್ದುಪಡಿಯ ವೇಳೆ ಯಾವುದೇ ಕಂಪನಿಯ ಲಾಭದ ಒಂದು ಸಣ್ಣ ಶೇಕಡಾವಾರು ಭಾಗವನ್ನು ಮಾತ್ರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದೆಂಬ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.

ಅಷ್ಟೆ ಅಲ್ಲದೆ ಕಪ್ಪು ಹಣ ಕೂಡಾ ಈ ಚುನಾವಣಾ ಬಾಂಡ್ ಕೆಳಗೆ ಓಡಾಡಿದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.

* ಶೆಲ್ ಕಂಪನಿಗಳಿಗೆ ಕಪ್ಪು ಹಣವನ್ನು ದೇಣಿಗೆ ನೀಡಲು ಚುನಾವಣಾ ಬಾಂಡ್ ಹೆಚ್ಚು ನೆರವು ಮಾಡಿಕೊಟ್ಟಿದೆ. ಕ್ವಿಕ್ ಸಪ್ಲೈ ಚೈನ್ ಲಿಮಿಟೆಡ್ ಎಂಬ ಕಂಪನಿಯು ರೂ. 410 ಕೋಟಿ ದೇಣಿಗೆ ನೀಡಿದೆ. ಈ ಕಂಪನಿಯ ಸಂಪೂರ್ಣ ಷೇರು ಬಂಡವಾಳ ಕೇವಲ 130 ಕೋಟಿ ರೂ. ಮಾತ್ರ. ಇದು ಎಲೆಕ್ಟ್ರಾಲ್ ಬಾಂಡ್ ಕೆಳಗೆ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಹಣವೂ ಕಾನೂನುಬದ್ಧವಾಗಿ ಓಡಾಡಲು ಇದು ಕೆಲಸ ಮಾಡಿದೆ ಎನ್ನಲಾಗಿದೆ.

ಇನ್ನು ಎಸ್‌ಬಿಐ ಕಡೆಯಿಂದ ಬಂದ ಈ ಮಾಹಿತಿ ಕೇವಲ ಏಪ್ರಿಲ್ 2019ರಿಂದ ಮಾರಾಟ ಮಾಡಿದ ಬಾಂಡ್‌ಗಳದ್ದಾಗಿದೆ. ಆದರೆ ಎಸ್‌ಬಿಐ ಮಾರ್ಚ್ 2018 ರಲ್ಲಿ ಮೊದಲ ಬಾಂಡ್‌ಗಳನ್ನು ಮಾರಾಟ ಮಾಡಿದೆ. ಹಾಗಾಗಿ, ಡೇಟಾದಿಂದ 2,500 ಕೋಟಿ ರೂ. ಮೌಲ್ಯದ ಬಾಂಡ್‌ಗಳು ಕಾಣೆಯಾಗಿವೆ.

ಮಾರ್ಚ್ 2018 ರಿಂದ ಏಪ್ರಿಲ್ 2019 ರವರೆಗಿನ ಈ ಕಾಣೆಯಾದ ಬಾಂಡ್‌ಗಳ ಡೇಟಾ ಎಲ್ಲಿದೆ? ಉದಾಹರಣೆಗೆ, ಬಾಂಡ್‌ಗಳ ಮೊದಲ ಕಂತಿನಲ್ಲಿ ಬಿಜೆಪಿ ಶೇ. 95 ಹಣವನ್ನು ಪಡೆದುಕೊಂಡಿದೆ. ಬಿಜೆಪಿ ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

ಚುನಾವಣಾ ಬಾಂಡ್‌ಗಳ ಅಂಕಿ ಅಂಶಗಳ ವಿಶ್ಲೇಷಣೆ ಮುಂದುವರಿದಂತೆ, ಬಿಜೆಪಿಯ ಭ್ರಷ್ಟಾಚಾರದ ಇನ್ನೂ ಅನೇಕ ಪ್ರಕರಣಗಳು ಬಯಲಿಗೆ ಬರಲಿವೆ. ನಾವು ವಿಶಿಷ್ಟ ಬಾಂಡ್‌ಗಳ ಐಡಿ ಸಂಖ್ಯೆ ಅಥವಾ ಸೀರಿಯಲ್ ನಂಬರ್ ಬಹಿರಂಗಗೊಳಿಸುವಂತೆ ಆಗ್ರಹಿಸುತ್ತಿದ್ದೇವೆ. ಇದರಿಂದ ಯಾವ ಪಕ್ಷ, ಯಾರಿಂದ ಎಷ್ಟು ದೇಣಿಗೆ ಪಡೆದಿದೆ ಎಂಬುವುದು ಗೊತ್ತಾಗಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಮೋದಿಯಿಂದ ತಮ್ಮ ಸ್ನೇಹಿತ ಅದಾನಿಗೆ ಇನ್ನೊಂದು‌ ಗಿಫ್ಟ್!:‌ ಧಾರಾವಿ ಯೋಜನೆ ಬಗ್ಗೆ ಕಾಂಗ್ರೇಸ್
ಬೆಂಗಳೂರು: “ಮೋದಿ ಮೇಡ್ ಮೊನೋಪೊಲಿಯಿಂದ (Modi Made  Monoploy – 3M) ಅದಾನಿ ಲಾಭ ಪಡೆದಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಿಯಮಗಳನ್ನು ಗಾಳಿಗೆ ತೂರಿ, ಮೂಲ ಬಿಡ್ಡರ್ ಅನ್ನು ಬದಲಾಯಿಸುವ ಮೂಲಕ ಧಾರಾವಿ ಮರುಅಭಿವೃದ್ಧಿ ಯೋಜನೆಯನ್ನು ಪ್ರಧಾನಿಯವರು ತಮ್ಮ ಆಪ್ತ ಸ್ನೇಹಿತನಿಗೆ ಹಸ್ತಾಂತರಿಸಿದ್ದಾರೆ. ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸುವಂತೆ ಮಹಾರಾಷ್ಟ್ರ ನಗರಾಭಿವೃದ್ಧಿ ಇಲಾಖೆಯನ್ನು ಒತ್ತಾಯಿಸಲಾಗಿದೆ,” ಎಂದು ಏಐಸಿಸಿ ಮುಖ್ಯ ಕಾರ್ಯದರ್ಶಿ, ಸಂಸದ ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.

ತಮ್ಮ x ನಲ್ಲಿ ಈ ಬಗ್ಗೆ ಬರೆದಿದ್ದು, ಇದನ್ನು ಮೋದಿಯವರು ತಮ್ಮ ನೆಚ್ಚಿನ ವ್ಯಾಪಾರಿ ಸಂಸ್ಥೆಗೆ ನೀಡಿದ ಮತ್ತೊಂದು ‘ರೆವಿಡಿ – ಗಿಫ್ಟ್’ ಎಂದು ಕರೆದಿದ್ದಾರೆ.

“ಹಮ್ ಅದಾನಿ ಕೆ ಹೈ ಕೌನ್ (Hum Adani Ke Hain Kaun – HAHK) ಹೆಸರಿನಲ್ಲಿ 27 ಫೆಬ್ರವರಿ 2023 ಮತ್ತು 23 ಏಪ್ರಿಲ್ 2023 ರಂದು ಕೇಳಿದ ಸರಣಿ ಪ್ರಶ್ನಾವಳಿಯಲ್ಲಿ ಅದಾನಿ ಗ್ರೂಪ್‌ಗೆ 2022 ರಲ್ಲಿ ಕೇವಲ 5,069 ಕೋಟಿ ರುಪಾಯಿ ಬಿಡ್‌ಗೆ ಧಾರಾವಿ ಮರುಅಭಿವೃದ್ಧಿ ಯೋಜನೆಯನ್ನು ತೆಗೆದುಕೊಳ್ಳಲು ಹೇಗೆ ಅನುಮತಿ ನೀಡಿದಿರಿ ಎಂದು ಕೇಳಿದ್ದೆವು. ಇದು 2018 ರಲ್ಲಿ ಇದ್ದ ಗೆದ್ದಿರುವ ಮೂಲ ಬಿಡ್‌ಗಿಂತ 2,131 ಕೋಟಿ ರುಪಾಯಿ ಕಡಿಮೆ ಇದೆ. ಬಿಡ್‌ ಗೆದ್ದಿರುವವರನ್ನು ಹೊರಗಿಟ್ಟು ಇದ್ದನ್ನು ಮಾಡಲಾಗಿದೆ,” ಎಂದು ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.

Maharashtra Urban Development Departmentಗೆ  Dharavi’s real estate Transferable Development Rights (TDR)  ಸೂಚ್ಯಂಕವನ್ನು ತೆಗೆದುಹಾಕುವ ಅಧಿಸೂಚನೆಯನ್ನು ಹೊರಡಿಸಲು ಒತ್ತಾಯಿಸಲಾಗಿದೆ. ಮುಂಬೈನ ಎಲ್ಲಾ ಬಿಲ್ಡರ್‌ಗಳು ತಮ್ಮ ಮೊದಲ 40% TDRಗಳನ್ನು ಅದಾನಿಯಿಂದ ಖರೀದಿಸುವಂತೆ ಹೇಳಲಾಗಿದೆ. ಈ ಮೂಲಕ ಧಾರಾವಿ ಯೋಜನೆಯಿಂದ ಅದಾನಿಗೆ, ಕೇವಲ ಅದಾನಿಗೆ ಮಾತ್ರ TDRಗಳ  ಮೌಲ್ಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜೈರಾಮ್‌ ತಿಳಿಸಿದ್ದಾರೆ.

ಟಿಡಿಆರ್‌ ಎಂದರೇನು?

TDR ಎನ್ನುವುದು ಇನ್ನೊಬ್ಬರಿಗೆ ಬೇಕಾದಾಗ ಕೊಡಬಹುದಾದ ಕ್ರೆಡಿಟ್. ಪ್ರಾಕೃತಿಕ, ಐತಿಹಾಸಿಕ ಮೊದಲಾದ ವಿಶೇಷತೆಗಳನ್ನು ಹೊಂದಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟಡ ನಿರ್ಮಿಸಲು ಇರುವ ತಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ಅನುಮತಿ ನೀಡುತ್ತದೆ. ಅಲ್ಲದೇ, ಹೀಗೆ ಬಿಟ್ಟುಕೊಟ್ಟರೆ ಅವರಿಗೆ ಬೇರೆ ಅನುಮೋದಿತ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡುವ ಅವಕಾಶವನ್ನು ನೀಡಲಾಗುತ್ತದೆ.

ಈ ಸೂಚ್ಯಂಕವನ್ನು ತೆಗೆದುಹಾಕುವುದರಿಂದ ಧಾರಾವಿಯಂತಹ ಕಡಿಮೆ-ವೆಚ್ಚದ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ TDRS ಅನ್ನು ಬಾಂದ್ರಾ, ದಕ್ಷಿಣ ಮುಂಬೈ ಮತ್ತು ಜುಹು ಮುಂತಾದ ಪ್ರಮುಖ ಸ್ಥಳಗಳಲ್ಲಿ ದುಬಾರಿ ರಿಯಲ್ ಎಸ್ಟೇಟ್ ಅನ್ನು ಅಭಿವೃದ್ಧಿಪಡಿಸಲು ಬಳಸಬಹುದು. ಇದರಿಂದ ಈಗಾಗಲೇ ದುಬಾರಿಯಾಗಿರುವ ಮುಂಬೈನ ಹೌಸಿಂಗ್‌ ಮಾರ್ಕೆಟ್‌ನ ಬೆಲೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಈ ನೀತಿಯ ಬದಲಾವಣೆಯಿಂದ ಲಾಭವಾಗುವುದು ಅದಾನಿಗೆ ಮಾತ್ರ, ಇದು ಪ್ರಧಾನ ಮಂತ್ರಿಯವರು ತಮ್ಮ ಪ್ರೀತಿಯ ಬಿಸಿನೆಸ್‌ ಗ್ರೂಪಿಗೆ ನೀಡಿದ ಉಡುಗೊರೆ ಎಂದು ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ. “ಬಿಜೆಪಿ ಮತ್ತು ಅದಾನಿ ನಡುವಿನ ಈ ಬಲವಾದ ಚುನಾವಣಾ ಬಾಂಧವ್ಯದ ಸ್ವರೂಪವೇನು? ಜಂಟಿ ಸಂಸದೀಯ ಸಮಿತಿ ಮಾತ್ರ ಇದರ ಹಿಂದಿನ ಸಂಪೂರ್ಣ ಸತ್ಯವನ್ನು ಬಿಚ್ಚಿಡಬಲ್ಲದು,” ಎಂದು ಹೇಳಿದ್ದಾರೆ.