Janardhana Reddy – Peepal Media

ಮಾಜಿ ಸಚಿವ ಜನಾರ್ಧನ ರೆಡ್ಡಿ ಗೋಳಾಡುತ್ತಿರುವುದು ಯಾರ ವಿರುದ್ಧ?: ಕಾಂಗ್ರೆಸ್‌ ಪ್ರಶ್ನೆ
ಬೆಂಗಳೂರು: ʼಪಕ್ಷವನ್ನು ಕಟ್ಟಲು ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಾನು ದೊಡ್ಡ ಪಾತ್ರ ನಿರ್ವಹಿಸಿದ್ದರಿಂದ ಬಿಜೆಪಿಯಿಂದ ಟೀಕೆಯನ್ನು ಎದುರು ನೋಡಿರಲಿಲ್ಲʼ ಎಂದು ಬಳ್ಳಾರಿಯಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿಗೆ ರಾಜ್ಯ ಕಾಂಗ್ರೆಸ್‌ ಪ್ರಶ್ನೆಗಳ ಸುರಿಮಳೆ ಸುರಿಸಿದೆ,

ಮೊನ್ನೆ ಬಳ್ಳಾರಿಗೆ ಬಂದಾಗ ಮಾತನಾಡಿದ ಜನಾರ್ಧನ ರೆಡ್ಡಿಯವರು, “ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಗೆ ನನ್ನನ್ನು ಟೀಕಿಸುವ ಎಲ್ಲಾ ಹಕ್ಕಿದೆ, ಆದರೆ, ಪಕ್ಷವನ್ನು ಕಟ್ಟಲು ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಾನು ದೊಡ್ಡ ಪಾತ್ರ ನಿರ್ವಹಿಸಿದ್ದರಿಂದ ಬಿಜೆಪಿಯಿಂದ ಟೀಕೆಯನ್ನು ಎದುರು ನೋಡಿರಲಿಲ್ಲ. ನನ್ನ ರಾಜಕೀಯ ಬದುಕಿನ ಕುರಿತು ನನಗೆ ತೃಪ್ತಿಯಿದೆ. ಶೀಘ್ರದಲ್ಲೇ, ನನ್ನ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ.” ಎಂದು ಮೊನ್ನೆ ಬಳ್ಳಾರಿಗೆ ಬಂದಾಗ ಹೇಳಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯಕಾಂಗ್ರೆಸ್‌ ಘಟಕ, ʼಬಿಜೆಪಿಯವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಗೋಳಾಡುತ್ತಿರುವುದು ಯಾರ ವಿರುದ್ಧ?ʼ ಗೆಳೆಯನನ್ನು ಬಿಟ್ಟಿರುವ ಶ್ರೀ ರಾಮುಲು ವಿರುದ್ಧವೇ? ಅಥವಾ ಋಣ ಮರೆತಿರುವ ಬಿ.ಎಸ್‌.ಯಡಿಯೂರಪ್ಪನವರ ವಿರುದ್ಧವೇ?ʼ ಎಂದು ಪ್ರಶ್ನೆ ಮಾಡಿದೆ.

ಆಪರೇಷನ್ ಕಮಲ ಎಂಬ ಕೊಳಕು ರಾಜಕೀಯಕ್ಕೆ ನಾಂದಿ ಹಾಡಿದವರನ್ನು ತುಳಿದು ಹಾಕಿದ ಬಿಜೆಪಿ ವಿರುದ್ಧವೇ? ಎಂದು ಪ್ರಶ್ನಿಸಿ ಕಾಂಗ್ರೆಸ್‌ ಕಿಡಿಕಾರಿದೆ.

ಗಣಿ ಉದ್ಯಮಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ಅನುಮತಿ
ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ಮಗಳನ್ನು ಭೇಟಿ ಮಾಡಲು ಹಾಗೂ ನವೆಂಬರ್‌ 6 ರವರೆಗೆ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಸುಪ್ರೀಂ ಕೋರ್ಟ್‌ ಸೋಮವಾರ ಅನುಮತಿ ನೀಡಿದೆ.

ಮಾಜಿ ಸಚಿವ ಜನಾರ್ದನ ರೆಡ್ಡಿ

ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪದಡಿ ಜನಾರ್ದನ ರೆಡ್ಡಿ ಅವರು 2015 ರಿಂದ ಜಾಮೀನಿನ ಮೇಲೆ ಹೊರಗಿದ್ದು, ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪಕ್ಕೆ ಭೇಟಿ ನೀಡುವುದನ್ನು ನಿಷೇಧಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ವಿಧಿಸಿದೆ.

ಈ ಹಿನ್ನಲೆಯಲ್ಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ಭೇಟಿ ನೀಡುವುದನ್ನು ಮತ್ತು ವಾಸ್ತವ್ಯ ಹೂಡುವುದನ್ನು ನಿಷೇದಿಸುವುದಾಗಿ ಸುಪ್ರೀಂ ಕೊರ್ಟ್‌ ಆದೇಶಿಸಿತ್ತು.

ಆದರೆ ಜನಾರ್ದನ ರೆಡ್ಡಿ ಅವರ ಮಗಳು ಇತ್ತೀಚಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮೊಮ್ಮಗಳನ್ನು ಮತ್ತು ಮಗಳನ್ನು ನೋಡುವ ನಿಟ್ಟಿನಲ್ಲಿ, ಬಳ್ಳಾರಿಗೆ ಭೇಟಿ ನೀಡಲು ರೆಡ್ಡಿ ಅವರು ಸುಪ್ರೀಂ ಕೋರ್ಟ್‌ಗೆ ಅನುಮತಿ ಕೋರಿದ್ದರು. ಹೀಗಾಗಿ ಅನುಮತಿಯನ್ನು ಸ್ವೀಕರಿಸಿದ ಸುಪ್ರೀಂ ನ್ಯಾಯಾಲಯ, ರೆಡ್ಡಿ ಅವರಿಗೆ ಬಳ್ಳಾರಿಗೆ ಭೇಟಿ ನೀಡಲು ಮತ್ತು ಕೆಲವು ದಿನ ವಾಸ್ತವ್ಯ ಹೂಡಲು ಅನುಮತಿ ನೀಡಿದೆ.