Japan Airlines – Peepal Media

ಹೊತ್ತಿ ಉರಿದ ಜಪಾನ್ ಏರ್ ಲೈನ್ಸ್ ; 379 ಮಂದಿ ಸೇಫ್, ಐವರು ನಾಪತ್ತೆ
ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿನ ರನ್‌ವೇಯಲ್ಲಿ ಕೋಸ್ಟ್‌ಗಾರ್ಡ್ ವಿಮಾನದೊಂದಿಗೆ ಢಿಕ್ಕಿಯಾದ ಜಪಾನ್ ಏರ್‌ಲೈನ್ಸ್ ವಿಮಾನವು ಬೆಂಕಿಗೆ ಸಿಲುಕಿ ಸಂಪೂರ್ಣ ಆಹುತಿಯಾಗಿರುವ ಘಟನೆ ನಡೆದಿದೆ.

ವಿಮಾನದಲ್ಲಿದ್ದ 379 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ಸಿಬ್ಬಂದಿ ತಕ್ಷಣಕ್ಕೆ ಜಾಗೃತರಾಗಿ ಸ್ಥಳಾಂತರಿಸಿದ್ದು ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ ಆರು ಸಿಬ್ಬಂದಿಗಳಲ್ಲಿ ಐವರು ಪತ್ತೆಯಾಗಿಲ್ಲ ಎಂದು ತಿಳಿದ್ದಾರೆ. ಹಾಗೂ ಕ್ಯಾಪ್ಟನ್‌ ಈ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ಬೆಂಕಿಗೆ ಆಹುತಿಯಾದ ವಿಮಾನದ ದೃಶ್ಯಾವಳಿಗಳು ಸೋಷಿಯಲ್‌ ಮೀಡಿಯಾ ಫ್ಲಾಟ್‌ ಫಾರ್ಮ್‌ ಗಳಲ್ಲಿ ವೈರಲ್‌ ಆಗಿದೆ.

ಜಪಾನ್ ಏರ್‌ಲೈನ್ಸ್ ನ ಫ್ಲೈಟ್ 516 ಎಂಬ ವಿಮಾನವು ಅಲ್ಲಿನ ಸಮಯ 16:00 ಕ್ಕೆ (07:00 GMT) ಸಪೊರೊದ ನ್ಯೂ ಚಿಟೋಸ್ ವಿಮಾನ ನಿಲ್ದಾಣದಿಂದ ಹೊರಟು 17:40 ಕ್ಕೆ ಹನೆಡಾದಲ್ಲಿ ಇಳಿಯಲು ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಬೆಂಕಿಗೆ ಸಿಲುಕಿರುವುದಾಗಿ ಆಡಳಿತ ಸಿಬ್ಬಂದಿಯಿಂದ ತಿಳಿದು ಬಂದಿದೆ.

ನಿರಂತರ ಸುದ್ದಿಗಳಿಗೆ ನಮ್ಮ ವಾಟ್ಸಾಪ್ ಗುಂಪನ್ನು ಸೇರಿ :  ಪೀಪಲ್ ಮೀಡಿಯಾ

ಘಟನೆಗೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಎರಡು ವಿಮಾನಗಳು ಯಾವ ರೀತಿ ಪರಸ್ಪರ ಡಿಕ್ಕಿ ಹೊಡದಿವೆ ಎಂಬುದನ್ನು ತಿಳಿಯಲು ತನಿಖೆ ನಡೆಸುತ್ತೇವೆ ಎಂದು ಕೋಸ್ಟ್‌ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ಇಶಿಕಾವಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಸಹಾಯ ಮಾಡುವ ಸಲುವಾಗಿ ಕೋಸ್ಟ್‌ಗಾರ್ಡ್ ವಿಮಾನವು ಹನೆಡಾದಿಂದ ನಿಗಾಟಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.

ಘಟನೆಯ ನಂತರ ಹನೆಡಾ ವಿಮಾನ ನಿಲ್ದಾಣವು ತನ್ನ ಎಲ್ಲಾ ರನ್‌ವೇಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಘಟನೆಯಲ್ಲಿ ಕೋಸ್ಟ್‌ ಗಾರ್ಡ್‌ ವಿಮಾನದಲ್ಲಿದ್ದ ಐದು ಮಂದಿ ಮೃತಪಟ್ಟಿರುವ ಶಂಕೆ ಇದೆ.

ಘಟನೆ ನಡೆದಿರುವ ಬಗ್ಗೆ ಮುಂದಿನ ತನಿಖೆಯಿಂದ ಮತ್ತಷ್ಟು ವಿಚಾರಗಳು ಹೊರಬರುವ ಸಾದ್ಯತೆ ಇದೆ.