jawahar lal nehru – Peepal Media

“ನೆಹರೂ ಗುರುತು ಕೆಲಸದಲ್ಲಿದೆಯೇ ಹೊರತು ಹೆಸರಿನಲ್ಲಲ್ಲ” : ರಾಹುಲ್ ಗಾಂಧಿ
ನೆಹರೂ ಅವರು ತಮ್ಮ ಕೆಲಸಗಳಿಂದ ಖ್ಯಾತರಾಗಿದ್ದಾರೆ, ಬದಲಾಗಿ ಕೇವಲ ತಮ್ಮ ಹೆಸರಿನಿಂದ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜವಾಹರಲಾಲ್ ನೆಹರೂ ವಸ್ತು ಸಂಗ್ರಹಾಲಯಕ್ಕೆ ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಎಂದು ಮರು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ನೆಹರೂ ಕುರಿತಾಗಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ನೆಹರೂ ವಸ್ತು ಸಂಗ್ರಹಾಲಯದ ಮರು ನಾಮಕರಣ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ನಡೆಯುತ್ತಿರುವ ತೀಕ್ಷ್ಣ ವಾಕ್ಸಮರದ ನಡುವೆ ರಾಹುಲ್ ಗಾಂಧಿಯವರ ಈ ಪ್ರತಿಕ್ರಿಯೆ ಹೊರಬಿದ್ದಿದೆ.

“ನೆಹರೂಜೀಯ ಗುರುತು ಅವರ ಕೆಲಸದಲ್ಲಿದೆಯೇ ಹೊರತು ಹೆಸರಿನಲ್ಲಲ್ಲ” ಎಂದು ಲಡಾಖ್ ಗೆ ವಿಮಾನ ನಿಲ್ದಾಣದಿಂದ ತೆರಳುವ ಮುನ್ನ ರಾಹುಲ್ ಗಾಂಧಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗಾಂಧಿ ಹಾಗೂ ನೆಹರೂ ಕುಟುಂಬಸ್ಥರ ಹೆಸರುಗಳನ್ನು ಅನಗತ್ಯವಾಗಿ ಬದಲಿಸುವ ಮೂಲಕವೇ ಹೆಚ್ಚು ಪ್ರಚಾರಕ್ಕೆ ಬಂದಿರುವ ನರೇಂದ್ರ ಮೋದಿ ಸರ್ಕಾರ, ಆಗಸ್ಟ್ 14 ರಂದು ನೆಹರೂ ಹೆಸರಿನಲ್ಲಿ ಇರುವ ವಸ್ತು ಸಂಗ್ರಹಾಲಯಕ್ಕೆ ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಎಂದು ಮರು ನಾಮಕರಣ ಮಾಡಿತ್ತು.

ಸಧ್ಯ ಈ ನಾಮಕರಣ ಪ್ರಕ್ರಿಯೆ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ವಾಕ್ಸಮರದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಈ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ನೆಹರೂ ಹುಟ್ಟುಹಬ್ಬಕ್ಕೆ ಶುಭಕೋರಿದ ಗಣ್ಯರು
ಬೆಂಗಳೂರು: ನವೆಂಬರ್‌ 14, ಇಂದು ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್‌ ಜವಾಹರ್‌ಲಾಲ್‌ ನೆಹರೂ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು ನೆಹರೂ ಅವರ ಭಾರತಕ್ಕೆ ಕೊಟ್ಟಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ.

ಈ ವಿಶೇಷ ದಿನದ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಮಂತ್ರಿ ನರೇಂದ್ರಮೋದಿಯವರು, ʼನಮ್ಮ ಭಾರತದ ಮಾಜಿ ಪ್ರಧಾನಿ ಪಂಡಿತ್‌ ಜವಾಹರ್‌ಲಾಲ್‌ ನೆಹರೂ ಜಿ ಅವರ ಜನ್ಮದಿನದಂದು ಅವರಿಗೆ ನಮನಗಳು. ದೇಶಕ್ಕೆ ನೆಹರೂ ಅವರು ನೀಡಿರುವ ಕೊಡುಗೆಯನ್ನು ನಾವೂ ಸಹ ಸ್ಮರಿಸುತ್ತೇವೆʼ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ʼದೇಶದ ಪ್ರಪ್ರಥಮ ಪ್ರಧಾನಮಂತ್ರಿ ಶ್ರೀ ಪಂಡಿತ್‌ ಜವಾಹರಲಾಲ್‌ ನೆಹರೂರವರ ಜನ್ಮದಿನದಂದು ಅವರಿಗೆ ಗೌರವ ಪೂರ್ವಕ ನಮನಗಳು. ಈ ದಿನ ಅವರನ್ನು ಸ್ಮರಿಸುತ್ತಾ, ನಾಡಿನ ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಾಷಯಗಳುʼ ಎಂದು ಟ್ವೀಟ್‌ ಮಾಡಿ ಶುಭ ಕೋರಿದ್ದಾರೆ.

ʼವೈಜ್ಞಾನಿಕ, ವೈಚಾರಿಕ ಮತ್ತು ಸೆಕ್ಯುಲರ್ ಚಿಂತನೆಯ ಮೂಲಕ ಸ್ವಾಭಿಮಾನಿ, ಸ್ವಾವಲಂಬಿ ಮತ್ತು‌ ಬಲಿಷ್ಠ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದ ಜವಾಹರ ಲಾಲ್ ನೆಹರೂ ಅವರಿಗೆ ಗೌರವದಿಂದ ವಂದಿಸುವೆʼ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವೀಟ್‌ ಮಾಡಿ ಗೌರವ ಸೂಚಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಟ್ವೀಟ್‌ ಮಾಡಿ, ʼಭವ್ಯ ಭಾರತ ನಿರ್ಮಾಣದೆಡೆಗೆ ನಿರಂತರವಾಗಿ ಶ್ರಮಿಸಿದ ದೂರದರ್ಶಿ ನಾಯಕ, ಭಾರತದ ಮೊದಲ ಪ್ರಧಾನಿ, ಭಾರತ ರತ್ನ ದಿವಂಗತ ಪಂಡಿತ್ ಜವಾಹರ ಲಾಲ್ ನೆಹರು ಅವರ ಜಯಂತಿಯಂದು ಅನಂತ ನಮನಗಳು. ಅವರ ಗೌರವಾರ್ಥವಾಗಿ ಆಚರಿಸಲಾಗುವ ಮಕ್ಕಳ ದಿನಾಚರಣೆಯ ಶುಭಾಶಯಗಳುʼ ಎಂದು ಹೇಳಿದ್ದಾರೆ.