jawans – Peepal Media

ಸಿಕ್ಕಿಂನಲ್ಲಿ ಪ್ರವಾಹ ದುರಂತ: 23 ಯೋಧರು ಕಣ್ಮರೆ
ಈಶಾನ್ಯ ರಾಜ್ಯ ಸಿಕ್ಕಿಂ ಭಾರಿ ಪ್ರವಾಹದಿಂದ ತತ್ತರಿಸಿದೆ. ಲಾಚೆನ್ ಕಣಿವೆಯ ತೀಸ್ತಾನದಿಯಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಏಕಾಏಕಿ ಪ್ರವಾಹ ಉಂಟಾಗಿದೆ.

ಇದು ಅಲ್ಲಿನ ಸೇನಾ ಶಿಬಿರಗಳ ಮೇಲೆ ಪರಿಣಾಮ ಬೀರಿದೆ. ಅನಿರೀಕ್ಷಿತ ಪ್ರವಾಹದಿಂದಾಗಿ 23 ಭಾರತೀಯ ಯೋಧರು ಪ್ರಾಣ ಕಣ್ಮರೆಯಾಗಿದ್ದಾರೆ ಎಂದು ರಕ್ಷಣಾ ಇಲಾಖೆ ಬಹಿರಂಗಪಡಿಸಿದೆ. ಹೆಚ್ಚುತ್ತಿರುವ ಪ್ರವಾಹದಿಂದ ಸೇನಾ ಅಧಿಕಾರಿಗಳ ವಾಹನಗಳೂ ಕೊಚ್ಚಿ ಹೋಗಿವೆ ಎಂದು ಅದು ಹೇಳಿದೆ.

https://x.com/ANI/status/1709406004981744094?s=20

ಉತ್ತರ ಸಿಕ್ಕಿಂನ ಲೋನಾಕ್ ಸರೋವರದ ಜಲಾನಯನ ಪ್ರದೇಶದಲ್ಲಿ ಮೋಡ ಸಿಡಿದಿದ್ದರಿಂದ ತೀಸ್ತಾ ನದಿಯ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಿಂದಾಗಿ ಪ್ರವಾಹ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದೆಡೆ, ಚುಂಗ್‌ತಾಂಗ್ ಅಣೆಕಟ್ಟಿನಿಂದ ನೀರು ಬಿಟ್ಟಿದ್ದರಿಂದಾಗಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಇದರಿಂದಾಗಿ ನೀರಿನ ಮಟ್ಟ 15ರಿಂದ 20 ಅಡಿಯವರೆಗೂ ಏರಿಕೆಯಾಗಿದೆ. ಪರಿಣಾಮವಾಗಿ ಮಧ್ಯರಾತ್ರಿ ಏಕಾಏಕಿ ಪ್ರವಾಹ ಉಂಟಾಗಿದೆ.

https://x.com/YadavYadavrocky/status/1709430910347849899?s=20

ಹಠಾತ್ ಪ್ರವಾಹವು ಲಾಚೆನ್ ಕಣಿವೆಯಲ್ಲಿ ಸೇನಾ ಪೋಸ್ಟ್‌ಗಳನ್ನು ಹಾನಿಗೊಳಿಸಿತು. ಸಿಂಘ್‌ಥಾಮ್ ಬಳಿಯ ಬರ್ದುಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಪ್ರವಾಹದ ತೀವ್ರತೆಯಿಂದ 23 ಸಿಬ್ಬಂದಿ ಕಳೆದುಹೋಗಿದ್ದಾರೆ ಎಂದು ಪೂರ್ವ ಕಮಾಂಡ್ ಹೇಳಿಕೆಯಲ್ಲಿ ಬಹಿರಂಗಪಡಿಸಿದೆ. ನಾಪತ್ತೆಯಾಗಿರುವ ಸಿಬ್ಬಂದಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅದು ಹೇಳಿದೆ.

ತೀಸ್ತಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಸಿಂಗಟಂ ಕಾಲು ಸೇತುವೆ ಕುಸಿದಿದೆ. ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 10 ಹಲವೆಡೆ ಕೆಟ್ಟು ಹೋಗಿದೆ. ಹಠಾತ್ ಪ್ರವಾಹದಿಂದಾಗಿ ಹಲವು ರಸ್ತೆಗಳು ಮತ್ತು ಹೆದ್ದಾರಿಗಳು ಹಾನಿಗೊಳಗಾಗಿವೆ. ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.