Jds BJP alliance – Peepal Media

ಪೆನ್ ಡ್ರೈವ್ ಪೀಕಲಾಟ : ಕುಮಾರಣ್ಣನಿಗೆ ಬಿಸಿ ತುಪ್ಪವಾಗ್ತಿರೋ ಬಿಜೆಪಿ
ಪೆನ್ ಡ್ರೈವ್ ಪ್ರಕರಣದ ನಂತರ ಜೆಡಿಎಸ್ ಪಕ್ಷವೇನೋ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಕೈ ತೊಳೆದುಕೊಳ್ಳೋ ಕೆಲಸಕ್ಕೆ ಮುಂದಾಗಿದೆ. ಕುಮಾರಸ್ವಾಮಿ ಕೂಡ ನಮಗೂ (ಜೆಡಿಎಸ್ ಪಕ್ಷ ಅಥವಾ ದೇವೇಗೌಡರ ಕುಟುಂಬ ಅನ್ನೋದು ಬಿಡಿಸಿ ಹೇಳಿಲ್ಲ) ರೇವಣ್ಣನ ಕುಟುಂಬಕ್ಕೂ ಸಂಬಂಧ ಇಲ್ಲ. ನಮ್ಮ ಕುಟುಂಬಕ್ಕೂ ಅವರನ ತಳುಕು ಹಾಕಬೇಡಿ. ಅವರು ಅವರದೇ ಸಂಸಾರ ಅಂತ ಬೇರೆ ಇದ್ದಾರೆ ಅಂತೆಲ್ಲಾ ಹೇಳಿ ತಿಪ್ಪೆ ಸಾರಿಸೋಕೆ ನೋಡ್ತಿದ್ದಾರೆ. ಆದರೆ ರಕ್ತ ಸಂಬಂಧ ಅನ್ನೋದನ್ನ ಈ ಜನ್ಮ ಇರೋ ವರೆಗೂ ಅಳಿಸೋಕೆ ಸಾಧ್ಯವೇ ಕುಮಾರಣ್ಣಾ?

ಇರಲಿ. ಈ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಲ್ಲಿಯವರೆಗೂ ಕೇವಲ ಪ್ರಜ್ವಲ್ ರೇವಣ್ಣನ ಹೆಸರು ಮಾತ್ರ ಓಡಾಡಿತ್ತು. ಫೋಟೋ ವಿಡಿಯೋ ಸಾಕ್ಷಿಗಳು ಜಗಜ್ಜಾಹೀರಾದ್ವು. ಸ್ವಪಕ್ಷದವರೇ ಛೀ ತೂ ಅಂದ್ರು. ಆದರೆ ವಿಷಯ ಗುಲ್ಲಾಗಿ, ಸಂತ್ರಸ್ತರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುತಿದ್ದಂತೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಅಣ್ಣ ರೇವಣ್ಣನ ಹೆಸರೂ ಓಡಾಡ್ತಿದೆ. ದೌರ್ಜನ್ಯ ಪ್ರಕರಣವೊಂದರಲ್ಲಿ ಕುಮಾರಸ್ವಾಮಿ ಅವರ ಅಣ್ಣ ರೇವಣ್ಣ ಕೂಡ  A1 ಆರೋಪಿ. ಇಲ್ಲಿ ಪ್ರಜ್ವಲ್ ಹಾಗೂ ರೇವಣ್ಣ ಇಬ್ಬರ ಮೇಲೂ ಆರೋಪ ಸಾಭೀತಾಗಿಲ್ಲ.. ಹೀಗಿರುವಾಗ ರೇವಣ್ಣನನ್ನು ಜೆಡಿಎಸ್ ಪಕ್ಷ ಉಚ್ಛಾಟಿಸೋದು ಯಾವಾಗ ಕುಮಾರಣ್ಣ?

ಇದು ಪಕ್ಷದ ಆಂತರಿಕ ವಿಚಾರ. ಹೇಳಬೇಕಾದ ಪ್ರಮುಖ ವಿಚಾರ ಏನೆಂದರೆ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣದ ಅಸಂಖ್ಯಾತ ವಿಡಿಯೋಗಳು ಇವೆ ಎಂದು ಮೊದಲು ಬಾಯ್ಬಿಟ್ಟದ್ದೇ ಹಾಸನದ ಬಿಜೆಪಿ ನಾಯಕರು. ಈ ಬಗ್ಗೆ ಅಲ್ಲಲ್ಲಿ ಗುಸುಗುಸು ಹರಿದಾಡುವಾಗಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಹಾಸನದ ಬಿಜೆಪಿ ನಾಯಕ ದೇವರಾಜೇ ಗೌಡ ಒಂದು ಪ್ರೆಸ್ ಮೀಟ್ ಮಾಡುವ ಮೂಲಕ ಎಲ್ಲಾ ಹೊರಹಾಕಿದ್ರು. ಅಲ್ಲಿಂದ ಪ್ರಜ್ವಲ್ ರೇವಣ್ಣನ ಕಾಮಕಾಂಡವೊಂದು ಇದೆ ಅಂತ ಎಲ್ಲರ ಬಾಯಲ್ಲೂ ಓಡಾಡೋಕೆ ಶುರು ಆಯ್ತು. ವಿಶೇಷ ಎಂದರೆ ಈ ಇಷ್ಟೂ ಹಂತದಲ್ಲೂ ಕಾಂಗ್ರೆಸ್ ಎಲ್ಲೂ ಸಹ ತನ್ನ ಪಾತ್ರ ತೋರಿಸಿಲ್ಲ ಎಂಬುದು ಗಮನಾರ್ಹ.

ದೇವರಾಜೇ ಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಹ ಈ ಬಗ್ಗೆ ಪ್ರಸ್ತಾಪಿಸಿ ಜನರ ಗಮನ ಸೆಳೆಧಿದ್ದರು. ಜೆಡಿಎಸ್ ಭದ್ರಕೋಟೆಯಂತಿದ್ದ ಹೊಳೆನರಸೀಪುರದಲ್ಲೂ ಹೆಚ್.ಡಿ.ರೇವಣ್ಣ ಸ್ವಲ್ಪ ಯಾಮಾರಿದ್ದರೂ ತನ್ನ ಕ್ಷೇತ್ರ ಕಳೆದುಕೊಳ್ಳುವ ಮಟ್ಟಕ್ಕೆ ಜೆಡಿಎಸ್ ತನ್ನ ಮತ ಕಳೆದುಕೊಂಡಿತ್ತು. ಇದಕ್ಕೆ ಪ್ರತ್ಯಕ್ಷ ಕಾರಣ ಇದೇ ಅಶ್ಲೀಲ ಪೆನ್ ಡ್ರೈವ್ ಹಗರಣವೇ ಆದರೂ ಇಲ್ಲೂ ಸಹ ತನ್ನ ಪಾತ್ರ ವಹಿಸಿದ್ದು ಬಿಜೆಪಿ ಎಂಬುದು ಮರೆಯುವಂತಿಲ್ಲ.

ಲೋಕಸಭಾ ಚುನಾವಣೆ ಹಂತದಲ್ಲೂ ಸಹ ಬಿಜೆಪಿ ಜೆಡಿಎಸ್ ಮೈತ್ರಿ ಸಂದರ್ಭದಲ್ಲಿ ಹಾಸನ ಬಿಜೆಪಿ ನಾಯಕರೇ ಮೈತ್ರಿ ವಿರುದ್ಧ ದೊಡ್ಡ ಮಟ್ಟದ ಅಪಸ್ವರ ಎತ್ತಿದ್ದರು. ಯಾವ ಕಾರಣಕ್ಕೂ ಈ ಮೈತ್ರಿ ಒಪ್ಪುವುದಿಲ್ಲ ಎಂದೇ ತಮ್ಮ ರಾಷ್ಟ್ರೀಯ ನಾಯಕರಿಗೆ ತಿಳಿಸುತ್ತಲೇ ಬಂದಿದ್ದರು. ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ ಸಹ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದಾದರೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಅಷ್ಟೇ ಅಲ್ಲದೇ ತಮ್ಮ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋಗಳಿವೆ, ಆ ವ್ಯಕ್ತಿಯನ್ನೇ ಮೈತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಮುಂದೆ ಬಿಜೆಪಿ ಪಕ್ಷ ರಾಷ್ಟ್ರ ಮಟ್ಟದಲ್ಲಿ ತಲೆ ತಗ್ಗಿಸುವ ಸ್ಥಿತಿ ಬರುತ್ತದೆ ಎಂದು ಪತ್ರ ಮತ್ತು ಇ ಮೇಲ್ ಮೂಲಕವೂ ಎಚ್ಚರಿಸಿದ್ದು ಮರೆಯುವಂತಿಲ್ಲ.

ಸರಿ. ಪೆನ್ ಡ್ರೈವ್ ಅಂತೂ ರಿಲೀಸ್ ಆಯ್ತು. ಆಗ ಬಿಜೆಪಿ ಮುಖಂಡ ದೇವರಾಜೇ ಗೌಡ ಪೆನ್ ಡ್ರೈವ್ ಬಿಡುಗಡೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ, ಪೆನ್ ಡ್ರೈವ್ ನನಗೆ ಸಿಗುವುದಕ್ಕಿಂತ ಮೊದಲೇ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಗೆ ತಲುಪಿದೆ ಎಂಬ ಹೇಳಿಕೆ ಕೊಟ್ಟಿದ್ದರು. ಹೇಗಿದ್ದರೂ ಬಿಜೆಪಿ ಜೆಡಿಎಸ್ ಮೈತ್ರಿ ಇದೆ. ಕುಮಾರಣ್ಣ ಹೋದಲ್ಲಿ ಬಂದದ್ದೆಲ್ಲ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ತಿದ್ದಾರೆ. ಹೀಗಿರುವಾಗ ಪೆನ್ ಡ್ರೈವ್ ರಿಲೀಸ್ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎನ್ನುವ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ಯೋಜಿಸಿದ್ದರು. ಆದರೆ ಮೊದಲು ಪೆನ್ ಡ್ರೈವ್ ನೀಡಿದ್ದೇ ದೇವರಾಜೇ ಗೌಡರಿಗೆ, ನಾನು ಡಿಕೆಶಿ ಮತ್ತು ಡಿಕೆ ಸುರೇಶ್ ಭೇಟಿ ಮಾಡಿದ್ದು ನಿಜ, ಆದರೆ ಅವರಿಗೆ ನಾನು ಪೆನ್ ಡ್ರೈವ್ ಕೊಟ್ಟೇ ಇಲ್ಲ ಎಂದು ಎಂದು ಪ್ರಜ್ವಲ್ ರೇವಣ್ಣ ಕಾರ್ ಡ್ರೈವರ್ ಹೇಳಿಕೆ ಕೊಟ್ಟು, ಅದನ್ನು ಎಸ್ಐಟಿ ಗೂ ಹೇಳಿರುವುದಾಗಿ ಕೇಳಿ ಬಂದಿದೆ.

ಹೀಗೇ ಅಶ್ಲೀಲ ಪೆನ್ ಡ್ರೈವ್ ಹಗರಣದಲ್ಲಿ ಮುಂಚಿನಿಂದಲೂ ನೇರವಾಗಿ ಬಿಜೆಪಿಯೇ ಕೈವಾಡ ಮೆರೆದಿದ್ದರೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಮುಗಿ ಬೀಳುತ್ತಿದ್ದಾರೆ. ಅಷ್ಟಕ್ಕೂ ಕುಮಾರಸ್ವಾಮಿ ಈ ವರೆಗೆ ಹೆಚ್ಚಿನ ಪಾತ್ರ ಇರುವ ಬಿಜೆಪಿ ವಿರುದ್ದವಾಗಿ  ಒಂದೂ ಹೇಳಿಕೆ ಕೊಟ್ಟಿಲ್ಲ. ಇದಕ್ಕೆ ಅಸಲಿ ಕಾರಣ ನೋಡ್ತಾ ಹೋದರೆ ಸಿಗೋದು, ಕುಮಾರಸ್ವಾಮಿಗೆ ಬಿಜೆಪಿ ಮೇಲಿರುವ ಭಯ ಎದ್ದು ಕಾಣುತ್ತಿದೆ.

ಸಧ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷ ಸುಮ್ಮನೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರೂ ಒಂದೆರಡು ಸೀಟು ಪಡೆಯಲು ಮೋಸ ಇರಲಿಲ್ಲ. ಆದರೆ ತಾವಾಗೇ ಬಿಜೆಪಿಗೆ ಜುಟ್ಟು ಕೊಡುವ ಮೂಲಕ ದೊಡ್ಡ ಪೀಕಲಾಟ ಎದುರಿಸುವಂತಾಗಿದೆ. ಕುಮಾರಸ್ವಾಮಿಗೆ ಚುನಾವಣೆ ಫಲಿತಾಂಶ ಬರುವ ಮೋದಲೇ ಈಗ ಬಿಜೆಪಿ ಸಹವಾಸ ಬೇಡ ಎನ್ನಿಸಿದ್ದರೂ ಬಿಜೆಪಿ ವಿರುದ್ಧವಾಗಿ ಉಸಿರೆತ್ತದ ಉಸಿರುಗಟ್ಟಿಸುವ ವಾತಾವರಣದಿಂದ ಅನಿವಾರ್ಯವಾಗಿ ಡಿಕೆ ಶಿವಕುಮಾರ್ ಮೇಲೆ ಹರಿಹಾಯ್ತಿದ್ದಾರೆ. ಕುಮಾರಸ್ವಾಮಿಯವರು ಪ್ರತೀ ಬಾರಿ ಮಾಧ್ಯಮಗಳ ಪ್ರಶ್ನೆ ಎದುರಿಸುವಾಗಲೂ ಹತಾಶೆ ಎದ್ದು ಕಾಣುತ್ತಿದೆ. ಪ್ರಜ್ವಲ್ ರೇವಣ್ಣನ  ಪೆನ್ ಡ್ರೈವ್ ಕಾಮಕಾಂಡಕ್ಕೆ ಮಂಡ್ಯದಲ್ಲೂ ತಮ್ಮ ಗೆಲುವು ಅನುಮಾನ ಎಂಬಂತಾಗಿದೆ.

ನೇರವಾಗಿ  ಬಿಜೆಪಿ ನಾಯಕರಿಗೆ ಬೈದರೆ ಎಲ್ಲಿ ತಮ್ಮ ಅಸ್ತಿತ್ವ ಅಲುಗಾಡುತ್ತೋ ಎಂಬ ಭಯ ಕುಮಾರಸ್ವಾಮಿಯವರಲ್ಲಿ ಎದ್ದು ಕಾಣುತ್ತಿದೆ. ಪ್ರಜ್ವಲ್ ರೇವಣ್ಣನ ಅಶ್ಲೀಲ ಹಗರಣದ ಒಂದೇ ಒಂದು ಕಾರಣಕ್ಕೆ ಕುಮಾರಸ್ವಾಮಿಯಂತಹ ಮನುಷ್ಯ ಹೋದಲ್ಲಿ ಬಂದಲ್ಲಿ ತಲೆ ತಗ್ಗಿಸಬೇಕಾದ ಸ್ಥಿತಿ ಉದ್ಭವವಾಗಿದೆ.

ಒಟ್ಟಿನಲ್ಲಿ ಜೆಡಿಎಸ್ ಗೆ ಬಿಜೆಪಿ ಸಹವಾಸವೇ ಬೇಡದಿತ್ತು. ಆದರೆ ಗೊತ್ತಿದ್ದೂ ಬಿಜೆಪಿಗೆ ತನ್ನ ಜುಟ್ಟು ಕೊಡುವ ಮೂಲಕ ದಶಕಗಳಿಂದ ಕೇವಲ ಹಳೆ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್ ಈಗ ಬಿಜೆಪಿ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದೆ. ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರ ಇನ್ನೆಂದೂ ತಲೆ ಎತ್ತದ ಸ್ಥಿತಿಗೆ ಜೆಡಿಎಸ್ ಬಂದು ನಿಂತದ್ದು, ಬಹುಶಃ ಜೆಡಿಎಸ್ ನ ಅಂತ್ಯಕ್ಕೆ ಬಿಜೆಪಿ ಪಕ್ಷವೇ ಕೊನೆ ಮೊಳೆ ಹೊಡೆಯಲು ಸಿದ್ಧವಾಗಿದೆ. ಈ ಸತ್ಯ ಜೆಡಿಎಸ್ ನಾಯಕರಿಗೆ ಗೊತ್ತಿದ್ದರೂ ಪ್ರತಿರೋಧಿಸುವಂತಿಲ್ಲ.

ಚುನಾವಣೆ ನಂತರ ಬಿಜೆಪಿ ಜೆಡಿಎಸ್ ಮೈತ್ರಿ ಖತಂ!
ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿ ಮುರಿದು ಬೀಳುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಜೆಡಿಎಸ್ ಮತ್ತು ಬಿಜೆಪಿ ಎರಡೂ ಮೂಲಗಳಿಂದ ಸಿಕ್ಕ ಮಾಹಿತಿಯಂತೆ ಕಾಂಗ್ರೆಸ್ ಪಕ್ಷ ಸೋಲಿಸುವ ಏಕೈಕ ಉದ್ದೇಶದಿಂದ ಈ ಎರಡೂ ಪಕ್ಷಗಳು ಒಟ್ಟಾಗಿವೆಯೇ ಹೊರತು ಈ ಮೈತ್ರಿ ಮುಂದುವರಿಯಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಸಧ್ಯ ಜೆಡಿಎಸ್ ಕಡೆಯಿಂದ ಕೇಳಿ ಬಂದ ಅಪಸ್ವರ ಏನೆಂದರೆ, ರಾಜ್ಯದಲ್ಲಿ ಜೆಡಿಎಸ್ ಅಳಿವು ಉಳಿವಿನ ದಾರಿಯಲ್ಲಿ ನಡೆಯುತ್ತಿದೆ‌. ಶತಾಯಗತಾಯ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಜೆಡಿಎಸ್ ಗೆ ಎದುರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಬಲಿಷ್ಠ ಪಕ್ಷವಾಗಿರುವಾಗ ಆ ಪಕ್ಷದ ಜೊತೆಗೆ ಮೈತ್ರಿ ಅಸಾಧ್ಯ. ಸೀಟು ಹಂಚಿಕೆ ವಿಚಾರವಂತೂ ದೂರದ ಮಾತು. ಹೀಗಿರುವಾಗ ಕಳೆದ ಬಾರಿಯ ಒಂದೂ ಸೀಟು ಕೈ ತಪ್ಪಿ ಹೋದರೆ ಸಂಸತ್ತಿನಲ್ಲಿ ಜೆಡಿಎಸ್ ಗೆ ಒಂದು ಸ್ಥಾನವೂ ಇಲ್ಲದಂತಾಗಲಿದೆ. ಹೀಗಾಗಿ ಈ ಮೈತ್ರಿ ಅನಿವಾರ್ಯವೇ ಹೊರತು ಅವಶ್ಯಕ ಆಗಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು ರಾಜಕೀಯವಾಗಿ ಬಿಜೆಪಿ ಜೊತೆಗಿನ ಮೈತ್ರಿ ದೂರವಾಗಲು ಇನ್ನೊಂದು ಕಾರಣ ಏನೆಂದರೆ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷ ಹೊರತುಪಡಿಸಿ ಈವರೆಗೆ ಬಿಜೆಪಿ ಜೊತೆಗೆ ಗುರುತಿಸಿಕೊಂಡ ಯಾವೊಂದು ಪ್ರಾದೇಶಿಕ ಪಕ್ಷಗಳೂ ಜೀವಂತವಾಗಿಲ್ಲ. ಇದ್ದರೂ ಸಹ ಬಿಜೆಪಿ ಪಕ್ಷ ಕೊಟ್ಟ ಭಿಕ್ಷೆಯಂತಹ ಸ್ಥಾನಮಾನಕ್ಕೆ ತೃಪ್ತಿ ಪಟ್ಟು ಇದ್ದಾರೆ. ಕಾಂಗ್ರೆಸ್ ಜೊತೆಗೆ INDIA ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಡಿಎಂಕೆ, ತೃಣಮೂಲ ಕಾಂಗ್ರೆಸ್, ಕೇರಳದ ಪ್ರಾದೇಶಿಕ ಪಕ್ಷಗಳು, ಆಮ್ ಆದ್ಮಿ ಪಕ್ಷ, ಶಿವಸೇನೆ, ಕಮ್ಯುನಿಸ್ಟ್ ಪಾರ್ಟಿ, RJD, NCP, ಸಮಾಜವಾದಿ ಪಾರ್ಟಿ ಸೇರಿದಂತೆ ಮೈತ್ರಿಕೂಟದ ಎಲ್ಲಾ 24 ಪಕ್ಷಗಳು ಘಟಾನುಘಟಿ ಪಕ್ಷಗಳೇ.. ಹಾಗೆಯೇ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಹೀಗಿರುವಾಗ, ಬಿಜೆಪಿ ಪಕ್ಷದ ಸಖ್ಯದಿಂದ ಎಷ್ಟು ಬೇಗ ಹೊರಬರುವುದೋ ಅಷ್ಟು ಬೇಗ ಜೆಡಿಎಸ್ ಗೆ ಉಳಿಗಾಲ ಎಂಬುದು ಜೆಡಿಎಸ್ ಪಕ್ಷದ ಮೂಲದಿಂದ ತಿಳಿದು ಬಂದಿದೆ.

ಅಷ್ಟೇ ಅಲ್ಲದೆ ಜಾತ್ಯಾತೀತ ಎಂಬ ಹಣೆಪಟ್ಟಿ ಹೊಂದಿರುವ ಪಕ್ಷ ಕೋಮುವಾದಿ ಎಂದೇ ಗುರುತಿಸಿಕೊಂಡ ಪಕ್ಷದ ಜೊತೆಗೆ ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗೆ ತಮಗೆ ಅಪವಾದ ತಪ್ಪಿದ್ದಲ್ಲ. ಈಗಾಗಲೇ ಆದಷ್ಟು ತಮ್ಮ ಪಕ್ಷದ ವರ್ಚಸ್ಸು ಕುಂದಿರುವ ಹೊತ್ತಲ್ಲಿ ಜೆಡಿಎಸ್ ಇನ್ನೂ ಬಿಜೆಪಿ ಜೊತೆಯಲ್ಲಿ ಗುರುತಿಸಿಕೊಂಡರೆ ತನ್ನ ಅಸ್ತಿತ್ವಕ್ಕೆ ಕುಂದು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜೆಡಿಎಸ್ ಮೂಲಗಳಿಂದ ಬಂದ ಅಭಿಪ್ರಾಯವಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲೂ ಸಹ ಇದರ ಛಾಯೆ ದಟ್ಟವಾಗಿದ್ದು ದೇವೇಗೌಡರ ಅಳಿಯ ಸಿಎನ್ ಮಂಜುನಾಥ್ ಗೆಲುವು ಸಹ ಅನುಮಾನ ಎನ್ನುವಂತಾಗಿದೆ. ಹೀಗಿರುವಾಗ ಚುನಾವಣೆ ಸಮಯದಲ್ಲಷ್ಟೆ ಬಿಜೆಪಿ ಸೇರ್ಪಡೆಯಾಗಿ, ಚುನಾವಣೆ ನಂತರ ಜೆಡಿಎಸ್ ಸೇರ್ಪಡೆ ಅಥವಾ ರಾಜಕೀಯದಿಂದ ದೂರ ಸರಿಯುವ ಬಗ್ಗೆಯೂ ಸಿಎನ್ ಮಂಜುನಾಥ್ ತನ್ನ ಆಪ್ತರಲ್ಲಿ ಹೇಳಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅಭ್ಯರ್ಥಿಗಳ ಆಯ್ಕೆ ಗೊಂದಲದಲ್ಲಿದ್ದ ಸಂದರ್ಭದಲ್ಲಿಯೂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಸಣ್ಣಗೆ ಮುನಿಸಿಕೊಂಡಿದ್ದು ಇನ್ನೂ ಸಹ ಜೆಡಿಎಸ್ ಪಾಳಯದಲ್ಲಿ ಮರೆತಿಲ್ಲ. ಕೇವಲ 2 ಸೀಟಿಗೆ ತೃಪ್ತಿ ಪಡುವಂತಾದರೆ ಈ ಮೈತ್ರಿಯ ಅಗತ್ಯ ಇರಲಿಲ್ಲ ಎಂದೇ ಜೆಡಿಎಸ್ ನಾಯಕ ತನ್ನ ಅಸಮಾಧಾನ ಹೊರಹಾಕಿದ್ದರು.

ಇನ್ನು ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಸಹ ಒಂದು ಸ್ಪಷ್ಟ ಸಿದ್ಧಾಂತ ಮತ್ತು ನಿಲುವಿಗೆ ನಿಲ್ಲದೇ ಇರುವುದು ಜೆಡಿಎಸ್ ಕಾರ್ಯಕರ್ತರಲ್ಲೇ ಗೊಂದಲ ಮತ್ತು ಅಸಮಾಧಾನ ಏರ್ಪಟ್ಟಿದೆ. ಈಗಾಗಲೇ ಜೆಡಿಎಸ್ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಗೆ ಎರಡೆರಡು ಬಾರಿ ಮೈತ್ರಿ ಮಾಡಿ ಮುರಿದು ಬಿದ್ದಿರುವಾಗ ವಿರೋಧಿಗಳಿಗೆ ಉತ್ತರ ಕೊಡುವಲ್ಲಿಯೂ ಸಹ ತೀವ್ರ ಗೊಂದಲಕ್ಕೆ ಒಳಗಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಗೆ ಬೈದು ವಿರೋಧಿಸಿಕೊಂಡು ಬಂದಿದ್ದ ಸಿದ್ಧಾಂತವನ್ನೇ ಏಕಾಏಕಿ ಅಪ್ಪಿಕೊಂಡಿರುವುದು ಸಹ ಕಾರ್ಯಕರ್ತರಲ್ಲಿ ತೀವ್ರ ಗೊಂದಲ ಉಂಟುಮಾಡಿದೆ‌.

ಅಷ್ಟೆ ಅಲ್ಲದೆ ಪಕ್ಷದ ಯಾವೊಬ್ಬ ಮುಖಂಡ, ಶಾಸಕರೊಂದಿಗೂ ಚರ್ಚಿಸದೇ, ರಾಜ್ಯ ಬಿಜೆಪಿ ನಾಯಕರೊಂದಿಗೂ ಸಮಾಲೋಚಿಸದೇ ನೇರವಾಗಿ ಬಿಜೆಪಿ ಹೈಕಮಾಂಡ್ ಕದ ತಟ್ಟಿದ ನಂತರ ನಿರ್ಮಾಣಗೊಂಡ ಮೈತ್ರಿಯನ್ನು ಕಾರ್ಯಕರ್ತರು, ಮುಖಂಡರು ಮತ್ತು ಪಕ್ಷದ ಉನ್ನತ ಮಟ್ಟದ ನಾಯಕರು ಅನಿವಾರ್ಯವಾಗಿ ಒಪ್ಪಬೇಕಾದ ಸ್ಥಿತಿ, ಜೆಡಿಎಸ್ ಪಕ್ಷದೊಳಗೇ ಆಂತರಿಕ ಸರ್ವಾಧಿಕಾರವನ್ನು ಅನಿವಾರ್ಯವಾಗಿ ಒಪ್ಪುವ ಹಂತಕ್ಕೆ ಜೆಡಿಎಸ್ ತಲುಪಿರುವುದು, ಈ ಬಗ್ಗೆ ಕುಮಾರಸ್ವಾಮಿ ಮೇಲೆ ಕೆಲವು ನಾಯಕರು ಸಣ್ಣ ಅಸಮಾಧಾನ ಹೊಂದಿರುವ ಹಿನ್ನೆಲೆಯಲ್ಲಿ ಚುನಾವಣೆ ನಂತರ ಬಿಜೆಪಿ ಸಖ್ಯ ತೊರೆಯುವ ಬಗ್ಗೆ ಎಲ್ಲಾ ಮುನ್ಸೂಚನೆಗಳು ಹಾಗೂ ಸಾಧ್ಯತೆಗಳು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ.

‘ಮೈತ್ರಿ’ ಕಾರಣ : ಪರಿಷತ್ ಸದಸ್ಯತ್ವಕ್ಕೆ ಜೆಡಿಎಸ್ ನ ಮರಿತಿಬ್ಬೇಗೌಡ ರಾಜೀನಾಮೆ
ನಾಲ್ಕು ಬಾರಿ ಶಾಸಕರಾಗಿದ್ದ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ತಮ್ಮ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಮಾರ್ಚ್ 21 ರಂದು ಹುಬ್ಬಳ್ಳಿಯ ತಮ್ಮ ನಿವಾಸ-ಕಚೇರಿಯಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಸಲ್ಲಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರು ಹಾಗೂ ಹಿತೈಷಿಗಳ ಸಲಹೆ ಪಡೆದು ಈ ನಿರ್ಧಾರ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಅವರ ಪುತ್ರರಾದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಎಚ್‌ಡಿ ರೇವಣ್ಣ ಅವರುಗಳು ಮಾತ್ರ ಜೆಡಿಎಸ್‌ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗಿನ ಬಿಜೆಪಿ ಜೊತೆಗಿನ ಹೊಂದಾಣಿಕೆ ಕೂಡಾ ಅವರದ್ದೇ ಸ್ವಂತ ನಿರ್ಧಾರ.

ಇನ್ನು ಬಿಜೆಪಿಯೊಂದಿಗೆ ಹೊಂದಾಣಿಕೆ ಸೇರಿದಂತೆ ಪಕ್ಷದ ಯಾವುದೇ ನಿರ್ಧಾರದ ಬಗ್ಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಯಾವುದೇ ಸಮಾಲೋಚನೆ ನಡೆಸಿಲ್ಲ. ದೇವೇಗೌಡರ ಕುಟುಂಬದ ಹೊರತಾಗಿ ಯಾವ ನಿರ್ಧಾರಗಳೂ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ವರೆಗೂ ಬರುವುದಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು ಗ್ರಾಮಾಂತರ ಬಿಜೆಪಿ-ಜೆಡಿಎಸ್ ಲೋಕಸಭಾ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ!
ಇತ್ತೀಚಿನ ದಿನಗಳ ರಾಜ್ಯ ರಾಜಕೀಯದಲ್ಲಿ ಹಿಟ್ ಅಂಡ್ ರನ್ ರಾಜಕಾರಣಿ ಅಂತಲೇ ಪ್ರಸಿದ್ಧಿ ಪಡೆದಿರುವ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಈಗ ಲೋಕಸಭಾ ಅಖಾಡಕ್ಕೆ ಹೆಜ್ಜೆ ಇರಿಸುವುದು ಬಹುತೇಕ ಖಚಿತ ಎನ್ನುವಂತಾಗಿದೆ. ರಾಮನಗರದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ನೋವು ಮಾಸುವ ಮುನ್ನವೇ ಕಾಂಗ್ರೆಸ್ ನ ದೊಡ್ಡ ಭದ್ರಕೋಟೆಯಂತಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಕುಮಾರಸ್ವಾಮಿ ಸ್ವತಃ ಅಭ್ಯರ್ಥಿಯಾಗುವ ಕಣ್ಣಿಟ್ಟಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ವರಿಷ್ಠರೊಂದಿಗೆ ಮಾತುಕಥೆ ನಡೆಸಲು ತೆರಳಿರುವ ಕುಮಾರಸ್ವಾಮಿ ಹಳೆ ಮೈಸೂರು ಭಾಗದ ಕೆಲವು ಲೋಕಸಭಾ ಕ್ಷೇತ್ರಗಳ ಬಗ್ಗೆ ಪ್ರಸ್ತಾಪಿಸಲಿದ್ದಾರೆ. ಸೀಟು ಹಂಚಿಕೆ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಷಾ ಜೊತೆಗೆ ಚರ್ಚೆ ನಡೆಸಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರ‌ಗಳನ್ನು ಜೆಡಿಎಸ್ ತೆಕ್ಕೆಗೆ ತಗೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವಿಶೇಷವಾಗಿ ಒಕ್ಕಲಿಗ ಪ್ರಾಬಲ್ಯ ಹೊಂದಿರುವ ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ತುಮಕೂರು, ಹಾಸನ ಕ್ಷೇತ್ರ ಹಾಗೂ ಕೋಲಾರ, ಚಿಕ್ಕಬಳ್ಳಾಪುರ ಸೇರಿ ಒಟ್ಟು 8 ಕ್ಷೇತ್ರಕ್ಕೆ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರೆ. ಆ ಮೂಲಕ ಈ ಕ್ಷೇತ್ರಗಳನ್ನು ಜೆಡಿಎಸ್ ತೆಕ್ಕೆಗೆ ತಗೆದುಕೊಂಡು ಕ್ಷೇತ್ರ ತಮ್ಮದಾಗಿಸಿಕೊಳ್ಳಲು ಅಭ್ಯರ್ಥಿಗಳ ಪಟ್ಟಿ ಜೊತೆಗೇ ಕುಮಾರಸ್ವಾಮಿ ದೆಹಲಿಗೆ ಪಯಣ ಬೆಳೆಸಿದ್ದಾರೆ.

ಆಶ್ಚರ್ಯ ಎಂದರೆ ಈ ಬಾರಿ ಸ್ವತಃ ತಾವೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಜೆಡಿಎಸ್ ಮುಖಂಡರ ಕಡೆಯಿಂದಲೂ ಅನುಮತಿ ಪಡೆದು ಬಿಜೆಪಿ ನಾಯಕರೊಂದಿಗೆ ಮಾತುಕತೆಗೆ ಮುಂದಾಗಲಿದ್ದಾರೆ. ಇಲ್ಲಿ ಜೆಡಿಎಸ್ ತಂತ್ರಗಾರಿಕೆ ಏನು, ಅದಕ್ಕೆ ಬಿಜೆಪಿ ಹೇಗೆ ಸಾತ್ ಕೊಡಬಹುದು ಎಂಬ ನಿಟ್ಟಿನಲ್ಲಿ ಅಮಿತ್ ಷಾ ಮತ್ತು ಜೆಪಿ ನಡ್ಡಾಗೆ ಮನವರಿಕೆ ಮಾಡುವುದು ಈಗ ಕುಮಾರಸ್ವಾಮಿ ಮುಂದಿರುವ ದೊಡ್ಡ ಸವಾಲು.

ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಮಂಡ್ಯ ಹೊರತುಪಡಿಸಿ ಬೇರೆಲ್ಲಾ ಕ್ಷೇತ್ರಗಳಲ್ಲಿ ಹಾಲಿ ಬಿಜೆಪಿ ಸಂಸದರೇ ಇರುವ ಹಿನ್ನೆಲೆಯಲ್ಲಿ ಈ ಉಳಿದ ಕ್ಷೇತ್ರಗಳ ಸೀಟು ಹಂಚಿಕೆ ಜೆಡಿಎಸ್ ಪಾಲಿಗೆ ಕಗ್ಗಂಟಾಗಿ ಉಳಿಯಲಿದೆ. ಆದರೆ ರಾಜ್ಯ ವಿಧಾನಸಭಾ ಚುನಾವಣೆ ನಂತರ ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆದಿದೆ. ಈ ಕಾರಣದಿಂದ ಜೆಡಿಎಸ್ ಈ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಬಿಜೆಪಿ ವರಿಷ್ಟರೊಂದಿಗೆ ಪಟ್ಟು ಹಿಡಿಯಬಹುದು.

ಇನ್ನು ಬೆಂಗಳೂರು ಗ್ರಾಮಾಂತರ ಜೆಡಿಎಸ್ ಗೆ ಹೊಸ ಕ್ಷೇತ್ರವೇನೂ ಅಲ್ಲ. ಈ ಹಿಂದೆ 2009 ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾಗಿದ್ದರು. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಕೂಡಾ ರಾಮನಗರದಲ್ಲಿ ಒಂದು ಅವಧಿಗೆ, ಕುಮಾರಸ್ವಾಮಿ ನಾಲ್ಕು ಅವಧಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಹಾಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರೂ ಆಗಿರುವ ಕುಮಾರಸ್ವಾಮಿಗೆ ಬೆಂಗಳೂರು ಗ್ರಾಮಾಂತರದಲ್ಲಿ ಸವಾಲು ಎನ್ನಿಸುವ ಕ್ಷೇತ್ರಗಳೆಂದರೆ ಕನಕಪುರ, ಮಾಗಡಿ, ಆನೇಕಲ್ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರಗಳು.

ಕುಮಾರಸ್ವಾಮಿ ಮಟ್ಟಿಗೆ ಈ ಅವಧಿಯಲ್ಲಿ ಕನಕಪುರ ಗಗನ ಕುಸುಮವೇ ಸರಿ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯದ ಇತಿಹಾಸದಲ್ಲೇ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಿದ ಕ್ಷೇತ್ರವಾಗಿದೆ ಕನಕಪುರ. ಡಿಕೆಶಿ ಬೇರಾವ ಕ್ಷೇತ್ರ ಬಿಟ್ಟುಕೊಟ್ಟರೂ ಕನಕಪುರವನ್ನು ಮಾತ್ರ ಯಾವ ಕಾರಣಕ್ಕೂ ಬಿಟ್ಟು ಕೊಡಲಾರರು. ಇನ್ನು ತಮ್ಮ ಪುತ್ರ ನಿಖಿಲ್ ಸೋಲಿನ ಬಳಿಕ ರಾಮನಗರದ ಜನತೆ ಬಗ್ಗೆ ಕುಮಾರಸ್ವಾಮಿ ನಡೆದುಕೊಂಡ ರೀತಿ ಈಗಲೂ ಚರ್ಚಿತ ವಿಷಯವೇ. ಅದೆಲ್ಲದರ ಹೊರತುಪಡಿಸಿ ಅನುಕಂಪ ಏನಾದರೂ ವರ್ಕೌಟ್ ಆದರೆ ರಾಮನಗರದಲ್ಲಿ ಕುಮಾರಸ್ವಾಮಿ ಹೆಚ್ಚಿನ ಅಂತರದ ಮತ ಪಡೆಯಬಹುದು.

ಇನ್ನು ಮಾಗಡಿ, ಆನೇಕಲ್ ಹಾಗೂ ಕುಣಿಗಲ್ ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿದ್ದರೂ ಈ ಬಾರಿ ಜೆಡಿಎಸ್ ಗೆ ಇಲ್ಲಿ ಕಡಿಮೆ ಅಂತರವೇನೂ ಇಲ್ಲ ಎಂಬುದು ಮುಖ್ಯವಾದ ಅಂಶ. ಆದರೆ ನೇರವಾಗಿ ಕುಮಾರಸ್ವಾಮಿಯೇ ಅಖಾಡಕ್ಕೆ ಇಳಿದರೆ ಈ ಮೂರೂ ಕ್ಷೇತ್ರಗಳಲ್ಲಿ ಏನಾದರೂ ಮ್ಯಾಜಿಕ್ ನಡೆದರೂ ಆಶ್ಚರ್ಯವಿಲ್ಲ. ಇವೆಲ್ಲವನ್ನೂ ಹೊರತುಪಡಿಸಿ ಹೆಚ್.ಡಿ.ಕುಮಾರಸ್ವಾಮಿಗೆ ಇರುವ ಅತಿ ದೊಡ್ಡ ಮತ್ತು ಬೇಧಿಸಲು ತೀರಾ ಕಷ್ಟಸಾಧ್ಯ ಎನ್ನಿಸುವ ಸವಾಲು ಎಂದರೆ ಅದು ಹಾಲಿ ಸಂಸದ ಡಿ.ಕೆ.ಸುರೇಶ್.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಕ್ಷಣಕ್ಕೆ ಚುನಾವಣೆ ನಡೆದರೂ ಗೆಲ್ಲೋದು ಬಂಡೆಯಂತೆ ಇರೋ ಡಿಕೆ ಸುರೇಶ್ ಅಂತ ಆ ಕ್ಷೇತ್ರದ ಪ್ರತಿಯೊಬ್ಬರೂ ಅಭಿಪ್ರಾಯ ಪಡುತ್ತಾರೆ. ಯಾಕೆಂದರೆ ಸಂಸದರಾಗಿ ಆಯ್ಕೆ ಆದ ದಿನದಿಂದಲೂ ಡಿ.ಕೆ.ಸುರೇಶ್ ಕ್ಷೇತ್ರದ ಜನರೊಂದಿಗೆ ದಿನನಿತ್ಯವೂ ಬೆರೆಯುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ತಮ್ಮ ಕಾರ್ಯಕರ್ತರಲ್ಲಿ ಒಬ್ಬರನ್ನೂ ಬಿಡದೇ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ.

ಇನ್ನು ತಂತ್ರಗಾರಿಕೆಯಲ್ಲಿ ಹೇಳುವುದೇ ಆದರೆ ತಮ್ಮ ಅಣ್ಣ ಡಿಕೆ ಶಿವಕುಮಾರ್ ಗಿಂತ ಒಂದು ಕೈ ಮೇಲೆಯೇ ಡಿಕೆ ಸುರೇಶ್ ಇದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಮೂಲಕ ಕಣಕ್ಕಿಳಿಯುವ ಬಗ್ಗೆ ಒಂದು ಊಹಾಪೋಹವಿತ್ತು. ಅಕಸ್ಮಾತ್ ಡಿಕೆ ಸುರೇಶ್ ಕಣಕ್ಕಿಳಿದಿದ್ದರೆ ಆರ್.ಅಶೋಕ್ ಗೆ ಪದ್ಮನಾಭ ನಗರ ಕೂಡಾ ಗೆಲುವಿಗೆ ಏದುಸಿರು ಬಿಡುವುದಿತ್ತು. ಇದಕ್ಕೆ ಇಂಬು ಕೊಡುವಂತೆ ಈಗ ಕೆಲವೇ ತಿಂಗಳ ಹಿಂದೆ ಪದ್ಮನಾಭ ನಗರದಲ್ಲಿ ಘಟಾನುಘಟಿ ಬಿಜೆಪಿ ನಾಯಕರುಗಳ ‘ಆಪರೇಷನ್ ಹಸ್ತ’ದ ಹಿಂದೆ ಇದ್ದದ್ದು ಇದೇ ಡಿಕೆ ಸುರೇಶ್.

ಇದೆಲ್ಲದರ ನಡುವೆ ಹೆಚ್.ಡಿ.ಕುಮಾರಸ್ವಾಮಿ ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಶತಾಯಗತಾಯ ಜೆಡಿಎಸ್ ಪಕ್ಷದ ಹೀನಾಯ ಸೋಲಿಗೆ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಉತ್ತರ ಕೊಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಆದರೆ ಗೆಲುವು ಮಾತ್ರ ತೀರಾ ಕಷ್ಟ ಎನ್ನುವಂತಿದೆ. ಅಷ್ಟಕ್ಕೂ ಬಿಜೆಪಿ ಹೈಕಮಾಂಡ್ ಎಷ್ಟು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಿದೆ, ಜೆಡಿಎಸ್ ಇದಕ್ಕೆ ತೃಪ್ತಿ ಹೊಂದಲಿದೆಯೇ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.

ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ಖಳನಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು : ರಾಜಕೀಯದಲ್ಲಿ ಯಾರಾದರೂ ಖಳನಾಯಕ ಇದ್ದರೆ ಅದು  ಹೆಚ್.ಡಿ.ಕುಮಾರಸ್ವಾಮಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿ  ಮುಖ್ಯಮಂತ್ರಿಗಳನ್ನು ಮಹಾಭಾರತದ ಎಲ್ಲಾ ಖಳನಾಯಕರಿಗೆ ಹೋಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕ್ರಿಕೆಟ್ ನೋಡಲು ಹೋಗಿದ್ದರು ಎನ್ನುವ ಅವರು ಸರ್ಕಾರ ಬಿದ್ದುಹೋಗುವಾಗ ಅಮೆರಿಕದಲ್ಲಿ ಒಂದು ವಾರ ಕೂತಿದ್ದರು. ಒಂದು ವರ್ಷ 2 ತಿಂಗಳು ತಾಜ್ ವೆಸ್ಟ್ ಎಂಡ್ ನಲ್ಲಿ ಕಾಲಕಳೆಯುತ್ತಿದ್ದರು. ಇವರು ನಮಗೆ ಹೇಳಿಕೊಡಬೇಕೆ” ಎಂದರು.

ತಪ್ಪುದಾರಿಗೆ ಎಳೆಯುತ್ತಿದ್ದಾರೆ
ಕುಮಾರಸ್ವಾಮಿ ಅವರ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಬೀಳಿಸಿದ್ದು, ಅದನ್ನು ಅವರು ಒಪ್ಪಿಕೊಳ್ಳಲಿ ಎಂದಿರುವ  ಬಗ್ಗೆ  ಮಾತನಾಡಿ ಅದನ್ನು ಅವರು ವಿಧಾನಮಂಡಲದ ವಿಶ್ವಾಸ ಮತಯಾಚನೆಯಾದ ಸಂದರ್ಭದಲ್ಲಿ ಉತ್ತರ ನೀಡಿದಾಗ ಈ ಸರ್ಕಾರವನ್ನು ಬೀಳಿಸಿದ್ದು ಬಿಜೆಪಿಯವರು ಎಂದಿರುವುದು ವಿಧಾನಮಂಡಲದ ರೆಕಾರ್ಡ್ ನಲ್ಲಿದೆ. ಅದನ್ನು ಬಿಡುಗಡೆ ಮಾಡುತ್ತೇನೆ.ಈಗ ಬೇರೆ ತರ ಹೇಳುತ್ತಿದ್ದಾರೆ. ಹಾಗಾದರೆ ವಿಧಾನಮಂಡಲವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ.  ಶಾಸಕರು, ಸಚಿವರನ್ನು ಭೇಟಿ ಮಾಡದೆ ಹೋಟೆಲಿನಲ್ಲಿ ಕುಳಿತಿದ್ದರು ಎಂದರು.

ಬಿಜೆಪಿ ಅವರಿಗಿಂತ ಹೆಚ್.ಡಿ.ಕುಮಾರಸ್ವಾಮಿ ಹೆಚ್ಚು  ಹತಾಶರಾಗಿದ್ದಾರೆ
ಬಿಜೆಪಿ ಗಿಂತಲೂ ಕುಮಾರಸ್ವಾಮಿ ಅವರು ಹೆಚ್ಚು ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ರಾಜಕೀಯವಾಗಿ ಹತಾಶರಾದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೆಚ್.ಡಿ ಕುಮಾರಸ್ವಾಮಿ ಅವರು ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು. ಬಿಜೆಪಿಗಿಂತ ಜಾಸ್ತಿ ಹತಾಶರಾಗಿರುವುದು ಕುಮಾರಸ್ವಾಮಿ. ಬಿಜೆಪಿ ಜೊತೆ ಸೇರದೇ ಹೋಗಿದ್ದಾರೆ ಒಂದು ಸ್ಥಾನವನ್ನೂ ಗೆಲ್ಲಲು ಆಗುತ್ತಿರಲಿಲ್ಲ. ಕುರುಡರು, ಹೆಳವರ ರೀತಿ ಒಬ್ಬರಿಗೊಬ್ಬರು ಅವಲಂಬಿತರಾಗಿದ್ದಾರೆ ಎಂದರು.

ಚುನಾವಣೆ ಪ್ರಯುಕ್ತ ಯಾವ ರಾಜ್ಯಗಳಿಗೂ ಹಣ ಕೊಟ್ಟಿಲ್ಲ
ಹೈ ಕಮಾಂಡಿಗೆ ದೂರು ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ ಪಂಚ ರಾಜ್ಯಗಳ ಚುನಾವಣೆ ಬಂದಿರುವುದರಿಂದ ನೆಪಮಾಡಿಕೊಂಡು  ಸುಳ್ಳು  ಹೇಳುತ್ತಾರೆ. ಇಂದಿನವರೆಗೆ ನಾವು ಯಾವ ರಾಜ್ಯಗಳಿಗೂ ಹಣ ಕೊಟ್ಟಿಲ್ಲ. ಅದಕ್ಕಾಗಿ ಯಾರ ಬಳಿಯೂ ಹಣ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದ್ಯುತ್ ಕ್ಷಾಮ: ಕೃತಕ  ಅಭಾವವಲ್ಲ
ವಿದ್ಯುತ್ ಕ್ಷಾಮ  ನೀಗಿಸಲು ಹೊರಗಿನಿಂದ ವಿದ್ಯುತ್ ಕೊಳ್ಳುವುದು, ಎಲ್ಲಾ ಸಕ್ಕರೆ ಕಾರ್ಖಾನೆ ಗಳು ಪ್ರಾರಂಭವಾಗುತ್ತಿದ್ದು, ಅಲ್ಲಿ ಕೋಜನರೇಷನ್ ಆಗುತ್ತದೆ. ಅದರಿಂದ ಕೊಂಡುಕೊಳ್ಳುತ್ತೇವೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಖಾಸಗಿ ಸಂಸ್ಥೆಗಳು    ರಾಜ್ಯಕ್ಕೆ ನೀಡಬೇಕೆಂದು ಆದೇಶ ಹೊರಡಿಸಿದ್ದೇವೆ ಎಂದರು.

ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳುವಂತೆ  ಇದು ಕೃತಕವಾಗಿ ಆಗಿರುವ ಅಭಾವವಲ್ಲ. 2 ಬಾರಿ ಮುಖ್ಯಮಂತ್ರಿಯಾದವರು ಸತ್ಯ ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ.

ಬೆಂಗಳೂರಿಗೆ ರಾಮನಗರ ಸೇರ್ಪಡೆ ಹೇಳಿಕೆ: ಡಿಸಿಎಂ ಜೊತೆ ಚರ್ಚೆ
ರಾಮನಗರವನ್ನು ಬೆಂಗಳೂರಿಗೆ ಸೇ ರ್ಪಡೆ ಮಾಡುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿಗಳು ಈ  ಪ್ರಶ್ನೆಯನ್ನು ಅವರನ್ನೇ ಕೇಳಿ ಎಂದರು.ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈ  ಬಗ್ಗೆ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದರು.

ಬಿಜೆಪಿಗೆ ಮಾನ, ಮರ್ಯಾದೆ ಇದೆಯೇ
ಬಿಜೆಪಿ ಎಟಿಎಂ ಸರ್ಕಾರ ಎಂದು ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಸುಳ್ಳು ಆರೋಪ. ಆಪರೇಷನ್ ಕಮಲ ಕೈಗೊಂಡು 25 ಕೋಟಿ ಹಣ ನೀಡಿ, 25.ಕೋಟಿ ಚುನಾವಣೆ ಗೆ ಖರ್ಚು ಮಾಡಲು ಹಣ ಎಲ್ಲಿಂದ ಬಂತು. ಇವರಿಗೆ ಏನಾದರೂ ಮಾನ , ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು. ಕರ್ನಾಟಕ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿರುವುದಕ್ಕೆ ಯಾರು ಜವಾಬ್ದಾರರು. 5 ವರ್ಷಗಳಿಂದ ಒಂದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. . ಬರದ ಸಂದರ್ಭದಲ್ಲಿ  ವಿದ್ಯುತ್ ತೊಂದರೆಯಾಗಿರುವುದಕ್ಕೆ ಬಿಜೆಪಿ ಕಾರಣ. 16000 ಮೆಗಾ ವ್ಯಾಟ್ ಸೌರ ವಿದ್ಯುತ್ ನಾವು ಉತ್ಪಾದನೆ ಮಾಡಿದ್ದೆವು.  ಬಿಜೆಪಿ ಯವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ  ಇಲ್ಲ. ಏನೂ ಮಾಡಿದ್ದಾರೆ 3 ವರ್ಷ 10 ತಿಂಗಳಲ್ಲಿ ಎಂದು ಪ್ರಶ್ನಿಸಿದರು.

30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳು
ಹಣವಿಲ್ಲದಿದ್ದರೂ ಕೆಲಸ ಮಂಜೂರು ಮಾಡಿ, ಟೆಂಡರ್ ಕರೆದು ಬಿಲ್ಲುಗಳನ್ನು ಬಾಕಿ ಇಟ್ಟು ಹೋಗಿದ್ದಾರೆ. 30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳಿವೆ. ಇದಕ್ಕೆ ಯಾರು ಹೊಣೆ. ನಮ್ಮ ಕಾಲದ ಹಾಗೂ ಬಿಜೆಪಿ ಕಾಲದ ಆರ್ಥಿಕಸ್ಥಿತಿ  ಕುರಿತು ಶ್ವೇತಪತ್ರವನ್ನು  ವಿಧಾನಮಂಡಲದಲ್ಲಿ ಮಂಡಿಸುತ್ತೇನೆ. ರಾಜ್ಯ ಹಾಳು ಮಾಡಿದ್ದಕ್ಕೆ ಜನ ತಿರಸ್ಕಾರ ಮಾಡಿದ್ದಾರೆ. ಈಗ  ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಾರೆ ಹೊರತು ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ
ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಸಚಿವರಾಗಬೇಕೆಂದು ಬಯಸುವುದರಲ್ಲಿ ತಪ್ಪಿಲ್ಲ.ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.

ಖಾಲಿ ಡಬ್ಬಗಳು ಹೆಚ್ಚು ಶಬ್ದ ಮಾಡುತ್ತವೆ
ಜಾತಿಜನಗಣತಿ ವರದಿ ಬಿಡುಗಡೆ  ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯ ನಂತರ ಅವರ ಮೇಲಿನ ವಿಪಕ್ಷಗಳ  ಆರೋಪಗಳು ಹೆಚ್ಚಾಗಿದೆ ಎಂಬ ಬಗ್ಗೆ ಉತ್ತರಿಸಿ ರಾಜಕೀಯ ವಾಗಿ ಹತಾಶರಾಗಿಮಾತನಾಡುತ್ತಾರೆ. ಖಾಲಿ ಡಬ್ಬಗಳು ಹೆಚ್ಚು ಶಬ್ದ ಮಾಡುತ್ತವೆ ಎಂದರು.

‘ಲೋಕ’ ಸಮರ : ಜೆಡಿಎಸ್ ಜೊತೆ ಕೈಜೋಡಿಸಲು ಹೈಕಮಾಂಡ್ ಒಪ್ಪಿಗೆ – ಯಡಿಯೂರಪ್ಪ
ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಜೊತೆಗೆ ಕೈಜೋಡಿಸಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಈ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದು, ಬಿಜೆಪಿ – ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುವುದು ಪಕ್ಕಾ ಆದಂತಾಗಿದೆ.

ಈಗಾಗಲೇ ರಾಜ್ಯ ಬಿಜೆಪಿ ನಿಯೋಗವೊಂದನ್ನು ಬಿಜೆಪಿ ಹೈಕಮಾಂಡ್ ಬಳಿ ಹೋಗಿ, ಸಧ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಮಾನ ವಿರೋಧಿ ಜೆಡಿಎಸ್ ಪಕ್ಷದ ಸಹಕಾರ ಪಡೆದರೆ ಗೆಲುವಿನ ಸಮೀಪದಲ್ಲಿ ಇರುವ ಅಭ್ಯರ್ಥಿಗಳನ್ನಾದರೂ ಗೆಲ್ಲಿಸಬಹುದು. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಜೊತೆಗೆ ಮೈತ್ರಿಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದೆ.

ಇದನ್ನು ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಜೆಡಿಎಸ್ ಗೆ ನಾಲ್ಕು ಅಥವಾ 5 ಲೋಕಸಭಾ ಸ್ಥಾನ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಈ ಬಗ್ಗೆ ಸಣ್ಣ ಮಾಹಿತಿ ಹೊರಹಾಕಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ‘ಅಮಿತ್ ಶಾ ಅವರು 4 ಸ್ಥಾನಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಬಿಜೆಪಿ ಪಕ್ಷಕ್ಕೆ ಹೆಚ್ಚು ಶಕ್ತಿ ಬರಲಿದೆ’ ಎಂದಿದ್ದಾರೆ.

ರಾಜ್ಯದಲ್ಲಿ 4 ಲೋಕಸಭಾ ಸ್ಥಾನಗಳಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಈಗಾಗಲೇ ವರಿಷ್ಠರು ನಮಗೆ ದೆಹಲಿಯಿಂದ ಸೂಚನೆ ನೀಡಿದ್ದಾರೆ. ಉಭಯ ಪಕ್ಷಗಳ ವರಿಷ್ಠರ ಮಧ್ಯೆ ಮಾತುಕತೆ ನಡೆದಿದೆ ಎಂದಿದ್ದಾರೆ.

ಆದರೆ ಜೆಡಿಎಸ್ ಇಲ್ಲಿ 6 ಲೋಕಸಭಾ ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದೆ. ಆದರೆ ಬಿಜೆಪಿ 4 ಕ್ಕಿಂತ ಹೆಚ್ಚು ಕ್ಷೇತ್ರ ಬಿಟ್ಟು ಕೊಡಲು ಹಿಂದೇಟು ಹಾಕುತ್ತಿದೆ. ಆದರೆ ಎರಡೂ ಪಕ್ಷಗಳು ಒಂದು ಒಮ್ಮತಕ್ಕೆ ಬಂದರೆ 5 ಕ್ಷೇತ್ರಗಳನ್ನಾದರೂ ಬಿಟ್ಟು ಕೊಟ್ಟು, ಜೆಡಿಎಸ್ ನಿರಾತಂಕವಾಗಿ ಬಿಜೆಪಿ ಜೊತೆಗೆ ಕೈಜೋಡಿಸಬಹುದು. ಇತ್ತ ಸೋಲಿನ ಸುಳಿಯಲ್ಲಿ ಇರುವ ರಾಜ್ಯ ಬಿಜೆಪಿಗೂ ಇದರ ಅಗತ್ಯ ಇರುವುದರಿಂದ, ಜೆಡಿಎಸ್ ಒತ್ತಡಕ್ಕೆ ಮಣಿಯಬಹುದು ಎನ್ನಲಾಗಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ಮಾಸ್ಟರ್ ಸ್ಟ್ರೋಕ್ ಕೊಡಲು ನಿರ್ಧರಿಸಿರುವ ಜೆಡಿಎಸ್ ವರಿಷ್ಠ ದೇವೇಗೌಡರು ಈಗಾಗಲೇ ಲೋಕಸಭೆ ಚುನಾವಣೆ ಸಂಬಂಧ ದೆಹಲಿಯಲ್ಲಿ ಬಿಜೆಪಿ ವರಿಷ್ಠ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಅವರ ಕೋರ್ಟ್ ಕೇಸ್ ಗೆ ಸಂಬಂಧಿಸಿದಂತೆ ವಕೀಲರ ಭೇಟಿಗೆ ದೆಹಲಿಗೆ ತೆರಳಿದ್ದ ದೇವೇಗೌಡರು ಇದೇ ವೇಳೆ ರಹಸ್ಯವಾಗಿ ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ. ಉಭಯ ನಾಯಕರ ನಡುವೆ ಮೈತ್ರಿ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.