JDS Dirty Politics – Peepal Media

ಅಸಂಖ್ಯಾತ ಮಹಿಳೆಯರ ಅತ್ಯಾಚಾರ: ಪ್ರಜ್ವಲ್ ರೇವಣ್ಣ ಮಾಸ್ ರೇಪಿಸ್ಟ್’ – ರಾಹುಲ್‌ ಗಾಂಧಿ ವಾಗ್ದಾಳಿ
ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಇಡೀ ದೇಶದ ಗಮನ ಸೆಳೆದಿದೆ. 400 ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ. ಇದೊಂದು ಸಾಮೂಹಿಕ ಅತ್ಯಾಚಾರ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಗುಡುಗಿದ್ದಾರೆ.

ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ಪರ ಪ್ರಚಾರ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಪ್ರಕರಣ ಬಿಜೆಪಿಯವರಿಗೆ ಮೊದಲೇ ಗೊತ್ತಿತ್ತು. ಆದರೂ ಪ್ರಧಾನಿ ಮೋದಿ ಹಾಗೂ ಆ ಪಕ್ಷದ ಮುಖಂಡರು ಪ್ರಜ್ವಲ್ ರೇವಣ್ಣನಿಗೆ ಟಿಕೇಟ್ ನೀಡಿ ಅವರ ಪರ ಮತಯಾಚಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಮಹಿಳೆಯರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಅವರು ಪ್ರಜ್ವಲ್ ರೇವಣ್ಣ 400 ಮಹಿಳೆಯರ ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾರೆ. ಇದಕ್ಕೆ ಮಾಸ್ ರೇಪ್ ಅಂತ ಕರೆಯುತ್ತಾರೆ. ಪ್ರಜ್ವಲ್ ರೇವಣ್ಣಗೆ ವೋಟ್ ಹಾಕಿ ಅಂತ ಪ್ರಧಾನಿ ನರೇಂದ್ರ ಮೋದಿ ಕೇಳಿದ್ದಾರೆ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.

ಪೆನ್ ಡ್ರೈವ್ ಪೀಕಲಾಟ : ಕುಮಾರಣ್ಣನಿಗೆ ಬಿಸಿ ತುಪ್ಪವಾಗ್ತಿರೋ ಬಿಜೆಪಿ
ಪೆನ್ ಡ್ರೈವ್ ಪ್ರಕರಣದ ನಂತರ ಜೆಡಿಎಸ್ ಪಕ್ಷವೇನೋ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಕೈ ತೊಳೆದುಕೊಳ್ಳೋ ಕೆಲಸಕ್ಕೆ ಮುಂದಾಗಿದೆ. ಕುಮಾರಸ್ವಾಮಿ ಕೂಡ ನಮಗೂ (ಜೆಡಿಎಸ್ ಪಕ್ಷ ಅಥವಾ ದೇವೇಗೌಡರ ಕುಟುಂಬ ಅನ್ನೋದು ಬಿಡಿಸಿ ಹೇಳಿಲ್ಲ) ರೇವಣ್ಣನ ಕುಟುಂಬಕ್ಕೂ ಸಂಬಂಧ ಇಲ್ಲ. ನಮ್ಮ ಕುಟುಂಬಕ್ಕೂ ಅವರನ ತಳುಕು ಹಾಕಬೇಡಿ. ಅವರು ಅವರದೇ ಸಂಸಾರ ಅಂತ ಬೇರೆ ಇದ್ದಾರೆ ಅಂತೆಲ್ಲಾ ಹೇಳಿ ತಿಪ್ಪೆ ಸಾರಿಸೋಕೆ ನೋಡ್ತಿದ್ದಾರೆ. ಆದರೆ ರಕ್ತ ಸಂಬಂಧ ಅನ್ನೋದನ್ನ ಈ ಜನ್ಮ ಇರೋ ವರೆಗೂ ಅಳಿಸೋಕೆ ಸಾಧ್ಯವೇ ಕುಮಾರಣ್ಣಾ?

ಇರಲಿ. ಈ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಲ್ಲಿಯವರೆಗೂ ಕೇವಲ ಪ್ರಜ್ವಲ್ ರೇವಣ್ಣನ ಹೆಸರು ಮಾತ್ರ ಓಡಾಡಿತ್ತು. ಫೋಟೋ ವಿಡಿಯೋ ಸಾಕ್ಷಿಗಳು ಜಗಜ್ಜಾಹೀರಾದ್ವು. ಸ್ವಪಕ್ಷದವರೇ ಛೀ ತೂ ಅಂದ್ರು. ಆದರೆ ವಿಷಯ ಗುಲ್ಲಾಗಿ, ಸಂತ್ರಸ್ತರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುತಿದ್ದಂತೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಅಣ್ಣ ರೇವಣ್ಣನ ಹೆಸರೂ ಓಡಾಡ್ತಿದೆ. ದೌರ್ಜನ್ಯ ಪ್ರಕರಣವೊಂದರಲ್ಲಿ ಕುಮಾರಸ್ವಾಮಿ ಅವರ ಅಣ್ಣ ರೇವಣ್ಣ ಕೂಡ  A1 ಆರೋಪಿ. ಇಲ್ಲಿ ಪ್ರಜ್ವಲ್ ಹಾಗೂ ರೇವಣ್ಣ ಇಬ್ಬರ ಮೇಲೂ ಆರೋಪ ಸಾಭೀತಾಗಿಲ್ಲ.. ಹೀಗಿರುವಾಗ ರೇವಣ್ಣನನ್ನು ಜೆಡಿಎಸ್ ಪಕ್ಷ ಉಚ್ಛಾಟಿಸೋದು ಯಾವಾಗ ಕುಮಾರಣ್ಣ?

ಇದು ಪಕ್ಷದ ಆಂತರಿಕ ವಿಚಾರ. ಹೇಳಬೇಕಾದ ಪ್ರಮುಖ ವಿಚಾರ ಏನೆಂದರೆ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣದ ಅಸಂಖ್ಯಾತ ವಿಡಿಯೋಗಳು ಇವೆ ಎಂದು ಮೊದಲು ಬಾಯ್ಬಿಟ್ಟದ್ದೇ ಹಾಸನದ ಬಿಜೆಪಿ ನಾಯಕರು. ಈ ಬಗ್ಗೆ ಅಲ್ಲಲ್ಲಿ ಗುಸುಗುಸು ಹರಿದಾಡುವಾಗಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಹಾಸನದ ಬಿಜೆಪಿ ನಾಯಕ ದೇವರಾಜೇ ಗೌಡ ಒಂದು ಪ್ರೆಸ್ ಮೀಟ್ ಮಾಡುವ ಮೂಲಕ ಎಲ್ಲಾ ಹೊರಹಾಕಿದ್ರು. ಅಲ್ಲಿಂದ ಪ್ರಜ್ವಲ್ ರೇವಣ್ಣನ ಕಾಮಕಾಂಡವೊಂದು ಇದೆ ಅಂತ ಎಲ್ಲರ ಬಾಯಲ್ಲೂ ಓಡಾಡೋಕೆ ಶುರು ಆಯ್ತು. ವಿಶೇಷ ಎಂದರೆ ಈ ಇಷ್ಟೂ ಹಂತದಲ್ಲೂ ಕಾಂಗ್ರೆಸ್ ಎಲ್ಲೂ ಸಹ ತನ್ನ ಪಾತ್ರ ತೋರಿಸಿಲ್ಲ ಎಂಬುದು ಗಮನಾರ್ಹ.

ದೇವರಾಜೇ ಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಹ ಈ ಬಗ್ಗೆ ಪ್ರಸ್ತಾಪಿಸಿ ಜನರ ಗಮನ ಸೆಳೆಧಿದ್ದರು. ಜೆಡಿಎಸ್ ಭದ್ರಕೋಟೆಯಂತಿದ್ದ ಹೊಳೆನರಸೀಪುರದಲ್ಲೂ ಹೆಚ್.ಡಿ.ರೇವಣ್ಣ ಸ್ವಲ್ಪ ಯಾಮಾರಿದ್ದರೂ ತನ್ನ ಕ್ಷೇತ್ರ ಕಳೆದುಕೊಳ್ಳುವ ಮಟ್ಟಕ್ಕೆ ಜೆಡಿಎಸ್ ತನ್ನ ಮತ ಕಳೆದುಕೊಂಡಿತ್ತು. ಇದಕ್ಕೆ ಪ್ರತ್ಯಕ್ಷ ಕಾರಣ ಇದೇ ಅಶ್ಲೀಲ ಪೆನ್ ಡ್ರೈವ್ ಹಗರಣವೇ ಆದರೂ ಇಲ್ಲೂ ಸಹ ತನ್ನ ಪಾತ್ರ ವಹಿಸಿದ್ದು ಬಿಜೆಪಿ ಎಂಬುದು ಮರೆಯುವಂತಿಲ್ಲ.

ಲೋಕಸಭಾ ಚುನಾವಣೆ ಹಂತದಲ್ಲೂ ಸಹ ಬಿಜೆಪಿ ಜೆಡಿಎಸ್ ಮೈತ್ರಿ ಸಂದರ್ಭದಲ್ಲಿ ಹಾಸನ ಬಿಜೆಪಿ ನಾಯಕರೇ ಮೈತ್ರಿ ವಿರುದ್ಧ ದೊಡ್ಡ ಮಟ್ಟದ ಅಪಸ್ವರ ಎತ್ತಿದ್ದರು. ಯಾವ ಕಾರಣಕ್ಕೂ ಈ ಮೈತ್ರಿ ಒಪ್ಪುವುದಿಲ್ಲ ಎಂದೇ ತಮ್ಮ ರಾಷ್ಟ್ರೀಯ ನಾಯಕರಿಗೆ ತಿಳಿಸುತ್ತಲೇ ಬಂದಿದ್ದರು. ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ ಸಹ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದಾದರೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಅಷ್ಟೇ ಅಲ್ಲದೇ ತಮ್ಮ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋಗಳಿವೆ, ಆ ವ್ಯಕ್ತಿಯನ್ನೇ ಮೈತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಮುಂದೆ ಬಿಜೆಪಿ ಪಕ್ಷ ರಾಷ್ಟ್ರ ಮಟ್ಟದಲ್ಲಿ ತಲೆ ತಗ್ಗಿಸುವ ಸ್ಥಿತಿ ಬರುತ್ತದೆ ಎಂದು ಪತ್ರ ಮತ್ತು ಇ ಮೇಲ್ ಮೂಲಕವೂ ಎಚ್ಚರಿಸಿದ್ದು ಮರೆಯುವಂತಿಲ್ಲ.

ಸರಿ. ಪೆನ್ ಡ್ರೈವ್ ಅಂತೂ ರಿಲೀಸ್ ಆಯ್ತು. ಆಗ ಬಿಜೆಪಿ ಮುಖಂಡ ದೇವರಾಜೇ ಗೌಡ ಪೆನ್ ಡ್ರೈವ್ ಬಿಡುಗಡೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ, ಪೆನ್ ಡ್ರೈವ್ ನನಗೆ ಸಿಗುವುದಕ್ಕಿಂತ ಮೊದಲೇ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಗೆ ತಲುಪಿದೆ ಎಂಬ ಹೇಳಿಕೆ ಕೊಟ್ಟಿದ್ದರು. ಹೇಗಿದ್ದರೂ ಬಿಜೆಪಿ ಜೆಡಿಎಸ್ ಮೈತ್ರಿ ಇದೆ. ಕುಮಾರಣ್ಣ ಹೋದಲ್ಲಿ ಬಂದದ್ದೆಲ್ಲ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ತಿದ್ದಾರೆ. ಹೀಗಿರುವಾಗ ಪೆನ್ ಡ್ರೈವ್ ರಿಲೀಸ್ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎನ್ನುವ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ಯೋಜಿಸಿದ್ದರು. ಆದರೆ ಮೊದಲು ಪೆನ್ ಡ್ರೈವ್ ನೀಡಿದ್ದೇ ದೇವರಾಜೇ ಗೌಡರಿಗೆ, ನಾನು ಡಿಕೆಶಿ ಮತ್ತು ಡಿಕೆ ಸುರೇಶ್ ಭೇಟಿ ಮಾಡಿದ್ದು ನಿಜ, ಆದರೆ ಅವರಿಗೆ ನಾನು ಪೆನ್ ಡ್ರೈವ್ ಕೊಟ್ಟೇ ಇಲ್ಲ ಎಂದು ಎಂದು ಪ್ರಜ್ವಲ್ ರೇವಣ್ಣ ಕಾರ್ ಡ್ರೈವರ್ ಹೇಳಿಕೆ ಕೊಟ್ಟು, ಅದನ್ನು ಎಸ್ಐಟಿ ಗೂ ಹೇಳಿರುವುದಾಗಿ ಕೇಳಿ ಬಂದಿದೆ.

ಹೀಗೇ ಅಶ್ಲೀಲ ಪೆನ್ ಡ್ರೈವ್ ಹಗರಣದಲ್ಲಿ ಮುಂಚಿನಿಂದಲೂ ನೇರವಾಗಿ ಬಿಜೆಪಿಯೇ ಕೈವಾಡ ಮೆರೆದಿದ್ದರೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಮುಗಿ ಬೀಳುತ್ತಿದ್ದಾರೆ. ಅಷ್ಟಕ್ಕೂ ಕುಮಾರಸ್ವಾಮಿ ಈ ವರೆಗೆ ಹೆಚ್ಚಿನ ಪಾತ್ರ ಇರುವ ಬಿಜೆಪಿ ವಿರುದ್ದವಾಗಿ  ಒಂದೂ ಹೇಳಿಕೆ ಕೊಟ್ಟಿಲ್ಲ. ಇದಕ್ಕೆ ಅಸಲಿ ಕಾರಣ ನೋಡ್ತಾ ಹೋದರೆ ಸಿಗೋದು, ಕುಮಾರಸ್ವಾಮಿಗೆ ಬಿಜೆಪಿ ಮೇಲಿರುವ ಭಯ ಎದ್ದು ಕಾಣುತ್ತಿದೆ.

ಸಧ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷ ಸುಮ್ಮನೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರೂ ಒಂದೆರಡು ಸೀಟು ಪಡೆಯಲು ಮೋಸ ಇರಲಿಲ್ಲ. ಆದರೆ ತಾವಾಗೇ ಬಿಜೆಪಿಗೆ ಜುಟ್ಟು ಕೊಡುವ ಮೂಲಕ ದೊಡ್ಡ ಪೀಕಲಾಟ ಎದುರಿಸುವಂತಾಗಿದೆ. ಕುಮಾರಸ್ವಾಮಿಗೆ ಚುನಾವಣೆ ಫಲಿತಾಂಶ ಬರುವ ಮೋದಲೇ ಈಗ ಬಿಜೆಪಿ ಸಹವಾಸ ಬೇಡ ಎನ್ನಿಸಿದ್ದರೂ ಬಿಜೆಪಿ ವಿರುದ್ಧವಾಗಿ ಉಸಿರೆತ್ತದ ಉಸಿರುಗಟ್ಟಿಸುವ ವಾತಾವರಣದಿಂದ ಅನಿವಾರ್ಯವಾಗಿ ಡಿಕೆ ಶಿವಕುಮಾರ್ ಮೇಲೆ ಹರಿಹಾಯ್ತಿದ್ದಾರೆ. ಕುಮಾರಸ್ವಾಮಿಯವರು ಪ್ರತೀ ಬಾರಿ ಮಾಧ್ಯಮಗಳ ಪ್ರಶ್ನೆ ಎದುರಿಸುವಾಗಲೂ ಹತಾಶೆ ಎದ್ದು ಕಾಣುತ್ತಿದೆ. ಪ್ರಜ್ವಲ್ ರೇವಣ್ಣನ  ಪೆನ್ ಡ್ರೈವ್ ಕಾಮಕಾಂಡಕ್ಕೆ ಮಂಡ್ಯದಲ್ಲೂ ತಮ್ಮ ಗೆಲುವು ಅನುಮಾನ ಎಂಬಂತಾಗಿದೆ.

ನೇರವಾಗಿ  ಬಿಜೆಪಿ ನಾಯಕರಿಗೆ ಬೈದರೆ ಎಲ್ಲಿ ತಮ್ಮ ಅಸ್ತಿತ್ವ ಅಲುಗಾಡುತ್ತೋ ಎಂಬ ಭಯ ಕುಮಾರಸ್ವಾಮಿಯವರಲ್ಲಿ ಎದ್ದು ಕಾಣುತ್ತಿದೆ. ಪ್ರಜ್ವಲ್ ರೇವಣ್ಣನ ಅಶ್ಲೀಲ ಹಗರಣದ ಒಂದೇ ಒಂದು ಕಾರಣಕ್ಕೆ ಕುಮಾರಸ್ವಾಮಿಯಂತಹ ಮನುಷ್ಯ ಹೋದಲ್ಲಿ ಬಂದಲ್ಲಿ ತಲೆ ತಗ್ಗಿಸಬೇಕಾದ ಸ್ಥಿತಿ ಉದ್ಭವವಾಗಿದೆ.

ಒಟ್ಟಿನಲ್ಲಿ ಜೆಡಿಎಸ್ ಗೆ ಬಿಜೆಪಿ ಸಹವಾಸವೇ ಬೇಡದಿತ್ತು. ಆದರೆ ಗೊತ್ತಿದ್ದೂ ಬಿಜೆಪಿಗೆ ತನ್ನ ಜುಟ್ಟು ಕೊಡುವ ಮೂಲಕ ದಶಕಗಳಿಂದ ಕೇವಲ ಹಳೆ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್ ಈಗ ಬಿಜೆಪಿ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದೆ. ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರ ಇನ್ನೆಂದೂ ತಲೆ ಎತ್ತದ ಸ್ಥಿತಿಗೆ ಜೆಡಿಎಸ್ ಬಂದು ನಿಂತದ್ದು, ಬಹುಶಃ ಜೆಡಿಎಸ್ ನ ಅಂತ್ಯಕ್ಕೆ ಬಿಜೆಪಿ ಪಕ್ಷವೇ ಕೊನೆ ಮೊಳೆ ಹೊಡೆಯಲು ಸಿದ್ಧವಾಗಿದೆ. ಈ ಸತ್ಯ ಜೆಡಿಎಸ್ ನಾಯಕರಿಗೆ ಗೊತ್ತಿದ್ದರೂ ಪ್ರತಿರೋಧಿಸುವಂತಿಲ್ಲ.

ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಧಿಕೃತವಾಗಿ ಅಮಾನತು ಮಾಡಿ ಆದೇಶ
ಜೆಡಿಎಸ್ ಕೋರ್ ಕಮಿಟಿ ಸಮಿತಿ ಬಳಿಕ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಹಂಚಿಕೆ ಹಿಂದೆ ಕಾಂಗ್ರೆಸ್ ನ ಮಹಾನಾಯಕ, ಉಪಮುಖ್ಯಮಂತ್ರಿ ಕೈವಾಡವಿದೆ. ಪೆನ್ ಡ್ರೈವ್ ಹಂಚಿಕೆ ಮಾಡಿರುವುದು ಯಾರು ಅಂತ ಹೇಳಲಿ, ಪೆನ್ ಡ್ರೈವ್ ವಿಷಯ ಎಷ್ಟು ತಿಂಗಳ ಹಿಂದೆ ವಿಷ್ಯ ಗೊತ್ತಿತ್ತು? ಕಾಂಗ್ರೆಸ್ ಮಹಾನ್ ನಾಯಕ ದೊಡ್ಡ ಅಪರಾಧ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾನೂನು ಪ್ರಕಾರ ಆಗಬೇಕಾದ ಕೆಲಸ ನಡೆಯಲಿ. ಆದರೆ ಇದನ್ನು ಇಷ್ಟು ದೊಡ್ಡದಾಗಿ ಮಾಡುವ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ. ನಾವು ಯಾವುದಕ್ಕೂ ಹೆದರುವವರಲ್ಲ. ಎಲ್ಲದನ್ನೂ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಬಗ್ಗೆ ಬಿಜೆಪಿಗೆ ಎಲ್ಲವೂ ಗೊತ್ತಿತ್ತು, ಆದರೂ ಹಾಸನ ಟಿಕೇಟ್ ಅಂತಿಮಗೊಳಿಸಿದ್ದೇಕೆ?
2023 ರ ಡಿಸೆಂಬರ್ ತಿಂಗಳಲ್ಲೇ ಹಾಸನದ ಜಿಲ್ಲಾ ಬಿಜೆಪಿ ಮುಖಂಡರೊಬ್ಬರು ತಮ್ಮ ಹೈಕಮಾಂಡ್ ಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣನ ಬಗ್ಗೆ ಮುನ್ನೆಚ್ಚರಿಕೆ ತಿಳಿಸಿದ್ದರು. ಅಷ್ಟೇ ಅಲ್ಲದೇ ಹಾಸನದ ಬಿಜೆಪಿ ಮುಖಂಡ, ಹೊಳೆನರಸೀಪುರ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇ ಗೌಡ 2023 ರಂದೇ ಹಾಸನದಲ್ಲಿ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣದ ವಿಡಿಯೋ ಸಾಕ್ಷಿ ಬಗ್ಗೆ ಬಹಿರಂಗ ಪತ್ರಿಕಾಗೋಷ್ಠಿ ನಡೆಸಿದ್ದರು.

ಅಷ್ಟೇ ಅಲ್ಲದೇ ಬಿಜೆಪಿ ಜೆಡಿಎಸ್ ಮೈತ್ರಿಗೆ ಇಡೀ ಹಾಸನದ ಯಾವ ನಾಯಕರಿಗೂ ಸಮ್ಮತಿ ಇರಲಿಲ್ಲ. ಈ ಬಗ್ಗೆ ಹಾಸನ ಜಿಲ್ಲಾ ಬಿಜೆಪಿ ಸಮಿತಿ ಬಹಿರಂಗವಾಗಿ ಹೈಕಮಾಂಡ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿತ್ತು. ಅದು ಜೆಡಿಎಸ್ ಜೊತೆಗಿನ ತಮ್ಮ ಸೈದ್ಧಾಂತಿಕ ವಿರೋಧದ ಜೊತೆಗೆ ರೇವಣ್ಣ ಕುಟುಂಬದ ಇಂತಹ ಲೈಂಗಿಕ ಹಗರಣದ ವಿಚಾರವನ್ನೇ ಮುಖ್ಯವಾಗಿಸಿಕೊಂಡು ತನ್ನ ಅಭಿಪ್ರಾಯ ತಿಳಿಸಿತ್ತು.

ಈ ನಡುವೆ ತಮ್ಮ ಯಾವುದೇ ರಾಜ್ಯ ನಾಯಕರಿಗೆ ತಿಳಿಸದೇ, ಇತ್ತ ರಾಜ್ಯ ಬಿಜೆಪಿ ನಾಯಕರಿಗೂ ಸಹ ತಿಳಿಸದೇ ದೇವೇಗೌಡರ ಪೂರ್ತಿ ಕುಟುಂಬ ನೇರವಾಗಿ ನರೇಂದ್ರ ಮೋದಿ, ಜೆಪಿ ನಡ್ಡಾ ಹಾಗೂ ಅಮಿತ್ ಶಾ ಭೇಟಿ ಮಾಡಿ ತಮ್ಮ ಮೈತ್ರಿ ಕುದುರಿಸಿಕೊಂಡಿದ್ದರು. ಈ ಬಗ್ಗೆ ಎರಡೂ ಪಕ್ಷಗಳ ನಾಯಕರಿಗೆ ತೀವ್ರ ಅಸಮಾಧಾನ ಇದ್ದರೂ ಹೈಕಮಾಂಡ್ ಕಟ್ಟಪ್ಪಣೆ ಮೀರದ ಒಂದು ನಿಯಮ ಎರಡೂ ಪಕ್ಷಗಳಲ್ಲಿ ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಮೈತ್ರಿ ಒಪ್ಪಿಕೊಳ್ಳಬೇಕಾಯಿತು.

ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಜೆಡಿಎಸ್ ನ ಯಾವುದೇ ಅಕ್ರಮಕ್ಕೂ ಕೇಂದ್ರ ಬಿಜೆಪಿ ನಾಯಕರ ಸಹಕಾರ ಅಥವಾ ರಕ್ಷಣೆ ಸಿಕ್ಕೇ ಸಿಗುತ್ತೆ ಎಂಬ ಅಂಶವೇ ರೇವಣ್ಣ ಕುಟುಂಬಕ್ಕೆ ದೊಡ್ಡ ಭರವಸೆಯಾಗಿತ್ತು. ಕೇಂದ್ರ ನಾಯಕರ ಮೂಲಕ ರಾಜ್ಯ ನಾಯಕರ ಬಾಯಿ ಮುಚ್ಚಿಸುವ ಬಗ್ಗೆಯೂ ದೇವೇಗೌಡರ ಕುಟುಂಬ ಯೋಚಿಸಿತ್ತು ಎಂಬುದು ಸುಳ್ಳಲ್ಲ. ಆಮೇಲೆ ಈಗ ಪ್ರಜ್ವಲ್ ಜರ್ಮನಿಗೇ ಎಸ್ಕೇಪ್ ಆಗಿರುವ ಪ್ರಕರಣದ ಹಿಂದೆಯೂ ಬಿಜೆಪಿ ಕೇಂದ್ರ ನಾಯಕರ ಕೃಪೆ ಇರಬಹುದೇ ಎಂಬ ಅನುಮಾನ ಕೂಡ ವ್ಯಕ್ತವಾಗಿವೆ.

ದೇವೇಗೌಡರ ಕುಟುಂಬಕ್ಕೆ ಕೇಂದ್ರ ನಾಯಕರ ಕೃಪೆ ಒಂದು ಕಡೆಯಾದರೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹ ಪ್ರಜ್ವಲ್ ರೇವಣ್ಣನ ಬಗ್ಗೆ ಇಷ್ಟೆಲ್ಲ ಸತ್ಯ ಗೊತ್ತಿದ್ದರೂ ಮುಚ್ಚಿಟ್ಟು, ಟಿಕೇಟ್ ನೀಡಿದ್ದು ಯಾಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ಹಾಸನ ಜಿಲ್ಲಾ ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣನಿಗೆ ಟಿಕೇಟ್ ನೀಡಿದ್ದೇ ಆದರೆ ಚುನಾವಣೆ ಸಮಯದಲ್ಲಿ ಇಡೀ ರಾಜ್ಯ ಬಿಜೆಪಿ ಮುಜುಗರಕ್ಕೆ ಸಿಕ್ಕುವ ಸಾಧ್ಯತೆ ಇದೆ ಎಂದು ಏಚ್ಚರಿಸಿದ್ದರೂ ಈ ಬಗ್ಗೆ ಗಮನಹರಿಸದೇ ಟಿಕೇಟ್ ಅಂತಿಮಗೊಳಿಸಿದುದರ ಹಿಂದೆ, ಪ್ರಜ್ವಲ್ ರೇವಣ್ಣನಿಗೆ ಬಿಜೆಪಿ ಕೃಪೆ ಇತ್ತೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿವೆ.

ಇನ್ನು ಏಪ್ರಿಲ್ 28 ರ ಭಾನುವಾರವೇ ಪ್ರಜ್ವಲ್ ರೇವಣ್ಣ ಹಾಗು ಆತನ ತಂದೆ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿ ಎಫ್ಐಆರ್ ಆಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354ಎ (ಲೈಂಗಿಕ ಕಿರುಕುಳ), 354ಡಿ (ಹಿಂಬಾಲಿಸುವಿಕೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಅತಿರೇಕದ ವರ್ತನೆ) ಅಡಿಯಲ್ಲಿ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 28 ರಂದು ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ಸಿಐಡಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಕುಮಾರಣ್ಣನ ಜೇಬಲ್ಲಿದ್ದ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿಸಿಎಂ ಡಿ.ಕೆ. ಶಿವಕುಮಾರ್
ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತೋರಿಸಿ ತಮ್ಮ ಜೇಬಲ್ಲಿಟ್ಟುಕೊಂಡಿದ್ದ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹಾಸನ ಸಂಸದರ ಪೆನ್ ಡ್ರೈವ್ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಶನಿವಾರ ಉತ್ತರಿಸಿದರು.

ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಹಾಸನ ನಾಯಕರ ವಿರುದ್ಧ ಲೈಂಗಿಕ ಹಗರಣ ಆರೋಪ ಬರುತ್ತಿದ್ದು, ಈ ಬಗ್ಗೆ ಎಸ್ಐಟಿ ತನಿಖೆ ಮಾಡಬೇಕು ಎಂದು ಕೇಳಿರುವ ಬಗ್ಗೆ ಪ್ರಶ್ನಿಸಿದಾಗ ಅವರು ಉತ್ತರಿಸಿದ್ದು ಹೀಗೆ;

“ಕುಮಾರಸ್ವಾಮಿ ಅವರು ತೋರಿಸುತ್ತಿದ್ದ ಪೆನ್ ಡ್ರೈವ್ ಯಾವುದು, ಅದರಲ್ಲಿ ಏನಿದೆ ಎಂಬುದು ಆಗ ನನಗೆ ಗೊತ್ತಿರಲಿಲ್ಲ. ಅದರಲ್ಲಿ ಏನಿದೆ ಎಂದು ಈಗ ಗೊತ್ತಾಯಿತು. ಈ ಪೆನ್ ಡ್ರೈವ್ ಬಗ್ಗೆ ಕುಮಾರಣ್ಣನಿಗೆ ಚೆನ್ನಾಗಿ ಗೊತ್ತು. ಅವರ ಜೇಬಿನಲ್ಲೇ ಇಟ್ಟುಕೊಂಡಿದ್ದನ್ನು ಮಾಧ್ಯಮದವರಿಗೆ ತೋರಿಸಿದ್ದರು. ಹೀಗಾಗಿ ಇದರ ಬಗ್ಗೆ ಕುಮಾರಸ್ವಾಮಿ ಅವರನ್ನು ನೀವು ಕೇಳಬೇಕು. ಇದಕ್ಕೆ ಉತ್ತರಿಸಲು ಅವರೇ ಸೂಕ್ತ ವ್ಯಕ್ತಿ ಎಂದರು.

ಮಾಧ್ಯಮಗಳು ಈ ಹಗರಣದ ವಿಚಾರದಲ್ಲಿ ಸುಳ್ಳು ಹೇಳುತ್ತಿವೆ. ಅದು ಬರೀ ಹಾಸನದ ನಾಯಕನದಲ್ಲ. ಹಾಸನ ಲೋಕಸಭಾ ಕ್ಷೇತ್ರದ ಎಡಿಎ ಮೈತ್ರಿ ಕೂಟದ ಅಭ್ಯರ್ಥಿಯದ್ದು, ಸಂಸದನದ್ದು. ಹೀಗಾಗಿ ಈ ವಿಚಾರವಾಗಿ ಪ್ರಧಾನಮಂತ್ರಿಗಳು, ವಿಜಯೇಂದ್ರ, ಶೋಭಕ್ಕ, ಅಶೋಕ್, ಕುಮಾರಣ್ಣ, ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದ ಅಶ್ವತ್ಥ್ ನಾರಾಯಣ ಅವರು ಉತ್ತರ ನೀಡಬೇಕು. ನಮ್ಮ ಹೆಸರಿಗೆ ಮಸಿ ಬಳಿಯಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರೇ ದೂರು ಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಓದಿದೆ. ಮಹಿಳಾ ಆಯೋಗದ ಅಧ್ಯಕ್ಷರು ಇದೆಲ್ಲವನ್ನು ನೋಡಿ ರಾಜ್ಯ ಗೃಹ ಸಚಿವರು ಹಾಗೂ ಸಿಎಂಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ನೀವು (ಮಾಧ್ಯಮದವರು) ಯಾಕೆ ಮೌನ ತಾಳುತ್ತಿದ್ದೀರಿ? ಈ ವಿಚಾರದಲ್ಲಿ ನೀವು ರಾಜ್ಯದ ಜನತೆಗೆ ಬೆಳಕು ಚೆಲ್ಲಬೇಕು ಎಂದು ಮನವಿ ಮಾಡುತ್ತೇನೆ” ಎಂದರು.

ಎಸ್ಐಟಿ ತನಿಖೆ ಬಗ್ಗೆ ಸರ್ಕಾರದ ನಿಲುವೇನು ಎಂದು ಕೇಳಿದಾಗ, “ಈ ಬಗ್ಗೆ ಮುಖ್ಯಮಂತ್ರಿ, ಗೃಹಮಂತ್ರಿಗಳನ್ನು ಕೇಳಬೇಕು. ನಾನು ಸರ್ಕಾರದ ಭಾಗವಾಗಿದ್ದರು, ಇನ್ನೂ ಈ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಸಿಎಂ ಜತೆ ಚರ್ಚೆ ಮಾಡಲು ಆಗಿಲ್ಲ” ಎಂದರು.

ಸಂತ್ರಸ್ತ ಮಹಿಳೆಯರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆಯೇ ಎಂದು ಕೇಳಿದಾಗ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಬಹುಮುಖ್ಯ ಆಧಾರಸ್ತಂಭ. ನೀವು ನಿಮ್ಮ ನಡುವಣ ಪೈಪೋಟಿ, ಆಂತರಿಕ ವಿಚಾರಕ್ಕೆ, ಬೇರೆಯವರಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಇಂತಹ ದೊಡ್ಡ ವಿಚಾರಗಳನ್ನು ಮುಚ್ಚಿಹಾಕುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಭಾವಿಸುತ್ತೇನೆ. ನಮ್ಮ ಆತ್ಮಸಾಕ್ಷಿಗಾದರೂ ನಾವು ಕೆಲಸ ಮಾಡಬೇಕು ಅಲ್ಲವೇ” ಎಂದರು.

ಕುಮಾರಸ್ವಾಮಿ ಈ ಪ್ರಕರಣದಲ್ಲಿ ನನ್ನ ಹೆಸರು ಹೇಳಲಿ: ಡಿಸಿಎಂ ಸವಾಲು
ಮಹಿಳೆಯರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ, ಅವರಿಗೆ ಒಳ್ಳೆಯದಾಗುತ್ತಾ ಎಂದು ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎಂದು ಮಾಧ್ಯಮಗಳು ಕೇಳಿದಾಗ, “ಅವರು ನನ್ನ ಹೆಸರು ಹೇಳಿ ಮಾತನಾಡಲಿ. ಆಮೇಲೆ ನನ್ನ ಪುರಾಣ, ನನ್ನ ಕಥೆ, ನನ್ನ ನುಡಿಮುತ್ತುಗಳನ್ನು ಹೇಳುತ್ತೇನೆ. ಹಾಗಾದರೆ ಆ ಹೆಣ್ಣು ಮಕ್ಕಳ ಮಾನ ಹರಣವಾಗಿರುವುದನ್ನು ಕುಮಾರಸ್ವಾಮಿ ಅವರು ಈ ರೀತಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರಾ?” ಎಂದು ಮರುಪ್ರಶ್ನಿಸಿದರು.

ಸರ್ಕಾರ ಈ ವಿಚಾರದಲ್ಲಿ ಜವಾಬ್ದಾರಿ ನಿರ್ವಹಿಸಬೇಕಲ್ಲವೇ ಎಂದು ಕೇಳಿದಾಗ, “ಮಾಧ್ಯಮಗಳು ಮೊದಲು ಈ ಬಗ್ಗೆ ರಾಜ್ಯದ ಜನರಿಗೆ ಬೆಳಕು ಚೆಲ್ಲಲಿ. ಮಹಿಳಾ ಆಯೋಗ ಹಂತ ಹಂತವಾಗಿ ಏನು ಮಾಡಬೇಕೋ ಮಾಡಲಿ. ನೀವು ಈ ವಿಚಾರವಾಗಿ ಹೆಚ್ಚಿನ ತನಿಖೆ ಮಾಡಿ ಮಾಹಿತಿ ಒದಗಿಸಿಕೊಟ್ಟರೆ ನಾವು ಕೂಡ ಮುಂದಿನ ಹೆಜ್ಜೆ ಬಗ್ಗೆ ಗಮನ ಹರಿಸುತ್ತೇವೆ” ಎಂದು ತಿಳಿಸಿದರು.

ಇಬ್ಬರು ಸಂತ್ರಸ್ತೆಯರು ಡಿಜಿ ಅವರಿಗೆ ದೂರು ನೀಡಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದುಕೊಂಡು ಆಮೇಲೆ ಮಾತನಾಡುತ್ತೇನೆ. ಮಾಹಿತಿ ಇಲ್ಲದೆ ಮಾತನಾಡಬಾರದು” ಎಂದರು.

ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಸೋಲಿನ ಸುಳಿವು ಕೊಟ್ಟ ಕುಮಾರಸ್ವಾಮಿ ; ಚುನಾವಣಾ ಆಯೋಗದ ಮೇಲೆ ಆರೋಪ
ಬೆಂಗಳೂರು ಗ್ರಾಮಾಂತರದಲ್ಲಿ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ, ಎಲ್ಲಾ ಕಡೆಗೂ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗುವಂತೆ ನಡೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಮೂಲಕ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಪರವಾದ ಯಾವುದೇ ಅಲೆ ಇಲ್ಲ ಎಂಬುದನ್ನು ಪರೋಕ್ಷವಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಈ ರೀತಿ ಚುನಾವಣೆ ನಡೆಸುವ ಬದಲು ಹಣ ಹಂಚಿಕೊಂಡು ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಿ‌.ಕೆ. ಸುರೇಶ್ ಕಡೆಯವರು ಚುನಾವಣಾ ಅಕ್ರಮದಲ್ಲಿ ತೊಡಗಿದ್ದಾರೆ. ಈ ಮೂಲಕ ಅವರ ಪರವಾಗಿ ಚುನಾವಣಾ ಆಯೋಗ ಕೆಲಸ ಮಾಡಿದೆ. ಕೆಲವು ಕಡೆ ಮೈತ್ರಿ ಕಾರ್ಯಕರ್ತರ ಮೇಲೆ ಹಲ್ಲೆಗಳಾಗಿವೆ. ಇದೇ ರೀತಿ ಆದರೆ ಮುಕ್ತ ಮತದಾನ ಅರ್ಥ ಕಳೆದುಕೊಳ್ಳಲಿದೆ ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ  ಶಾಸಕರಾದ ಡಾ.ರಂಗನಾಥ್‌, ಎಚ್‌.ಸಿ.ಬಾಲಕೃಷ್ಣ, ಇಕ್ಬಾಲ್‌ ಹುಸೇನ್‌, ಡಿಸಿಎಂ ಡಿ.ಕೆ.ಶಿವಕುಮಾರ್‌, ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಹಾಗೂ ಕುಸುಮ ಹನುಮಂತರಾಯಪ್ಪ ಅವರ ಹೆಸರಿನಲ್ಲಿ ಕೂಪನ್‌ ಹಂಚಲಾಗಿದೆ ಎಂದು ಆರೋಪಿಸಿಸಿ ಮೊಬೈಲ್‌ ಕೂಪನ್‌ ನೀಡಲಾಗಿದೆ ಎನ್ನಲಾದ ಚಿತ್ರಗಳನ್ನು ತೋರಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಕಾಂಗ್ರೆಸ್‌ ಕೂಪನ್‌ ಕಾರ್ಡ್‌ಗಳನ್ನು ಹಂಚಿಕೆ ಮಾಡಿತ್ತು ಎಂದು ಆಪಾದಿಸಿದರು.