JDS – Peepal Media

ಘನತೆಗೆ ತಕ್ಕಂತೆ ನಡೆದುಕೊಳ್ಳಲಿ, ಸಣ್ಣತನ ಬೇಡ: ಸೂರಜ್ ರೇವಣ್ಣ ಶ್ರೇಯಸ್ ಪಟೇಲ್ ತಿರುಗೇಟು
ಹಾಸನ : “ಅಸೂಯೆಯಿಂದ ಈ ರೀತಿ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರ ಕುಟುಂಬದಿಂದ ಬಂದವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಜನ ಬುದ್ದಿ ಕಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಅತಿ ದೊಡ್ಡದಾಗಿ ಬುದ್ದಿ ಕಲಿಸುತ್ತಾರೆ,” ಎಂದು ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್ ಎಂ. ಪಟೇಲ್ ತಿರುಗೇಟು ನೀಡಿದರು.

ನಗರದ ಪತ್ರಕರ್ತರ ಭವನದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, “ಸೂರಜ್ ರೇವಣ್ಣ ಅವರದ್ದು ಬಾಲೀಷವಾದ ಹೇಳಿಕೆ ನೀಡಿರುವುದು ಅವರ ವ್ಯಕ್ತಿತ್ವ, ನಡತೆಯನ್ನು ತೋರಿಸುತ್ತದೆ. ಎರಡು ಮೂರು ಬಾರಿ ಸಚಿವರು, ಐದಾರು ಬಾರಿ ಶಾಸಕರಾಗಿರುವವರ ತರಹ ಮಾತನಾಡಿದ್ದಾರೆ. ಜೊತೆಗೆ  ವಾಗ್ಮಿ, ದೊಡ್ಡ ಮೇದಾವಿಗಳ ತರ ಮಾತನಾಡಿದ್ದಾರೆ. ಅವರಿನ್ನು ಒಂದು ಬಾರಿ ಎಂಎಲ್‌ಸಿ ಆಗಿದ್ದಾರೆ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ ತಳಮಟ್ಟದಿಂದ ಬೆಳೆದಿದ್ದೇನೆ. ಏಕಾಏಕಿ ಅವರ ಕುಟುಂಬದಿಂದ ಅಚಾನಕ್ಕಾಗಿ ಎಂಎಲ್‌ಸಿ ಆಗಿರುವವರು ಅವರು. ಉದ್ಭವಮೂರ್ತಿ ತರಹ ಎದ್ದು ಬಂದವರು. ಎಂಎಲ್‌ಸಿ ಆದಮೇಲೆ ಏಳು ಕ್ಷೇತ್ರದಲ್ಲಿ ಒಂದು ಗ್ರಾ.ಪಂ.ಗೆ ಹೋಗಿ ಸಭೆ ಮಾಡಿದ್ದಾರಾ! ಎಂದು ವ್ಯಂಗ್ಯವಾಡಿದರು. ಅವರ ಹೇಳಿಕೆ ನನಗೆ ವೈಯುಕ್ತಿಕವಾಗಿ ಬೇಜಾರಾಗಿದೆ. ರಾಜಕೀಯವಾಗಿ ನಾವು ಅವರು ಎದುರಾಳಿ. ಯಾವುದೇ ವಿಚಾರದಲ್ಲಿ ನಾನು ಬಗ್ಗುವವನಲ್ಲ. ನಾನು ನಮ್ಮ ತಾತನ ಹೆಸರು ಹೇಳಿಕೊಂಡು ಬಂದವನಲ್ಲ. ಹೋರಾಟ ಮನೋಭಾವ, ತಳಮಟ್ಟದಿಂದ ಬಂದಿರುವವನು ನಾನು. ಅವರ ಹೇಳಿಕೆ ಬೇಜಾರು ತರಿಸಿದೆ. ಬದುಕಿದ್ದವರ ಬಗ್ಗೆ ಮಾತನಾಡಲಿ,” ಎಂದು ಹೇಳಿದ್ದಾರೆ.

“ನಾವು ದೇವೇಗೌಡರ ಬಗ್ಗೆ ಯಾವತ್ತಾದರೂ ಮಾತನಾಡಿದ್ದೇವಾ! ಇವತ್ತು ಅವರ ಮೇಲೆ ಗೌರವವಿದೆ. ದೇವೇಗೌಡರು, ಪುಟ್ಟಸ್ವಾಮಿಗೌಡ, ಶ್ರೀಕಂಠಯ್ಯ ಅವರ ಬಗ್ಗೆ ಮಾತನಾಡಲು ನಮಗೆ ಯಾರಿಗೂ ಅರ್ಹತೆ ಇಲ್ಲ, ಯೋಗ್ಯತೆ ಇಲ್ಲ. ಯಾವುದೇ ಪುರಾವೆ ಇಲ್ಲದೆ ನಮ್ಮ ತಾತನ ಹೆಸರು ತೆಗೆದುಕೊಂಡಿದ್ದಾರೆ. ಆ ಘಟನೆಯಾದಾಗ ಸೂರಜ್ ಅವರ ವಯಸ್ಸು ಎಷ್ಟಿತ್ತು, ಮಾಹಿತಿ ಇತ್ತಾ! ಅವರ ತಂದೆ ರೇವಣ್ಣ ಅವರೇ ಏಕೆ ಇಷ್ಟು ದಿನ ಮಾತನಾಡಲಿಲ್ಲ. ಅವರ ಕುಟುಂಬದವರು ಯಾರು ಮಾತನಾಡಿಲ್ಲ. ಮೈಕ್ ಸಿಕ್ಕಿದೆ ಜನ ಶಿಳ್ಳೆ ಹೊಡಿತಾರೆ ಅಂಥ ಮಾತನಾಡಿದ್ದಾರಾ,” ಎಂದು ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿದರು.

“ಪೆನ್‌ಡ್ರೈವ್ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಎಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗಿದೆ, ಬಲಿಪಶುಯಾಗಿದ್ದಾರೆ. ಅದಕ್ಕೆ ಕಾರಣ ಯಾರು? ಪೆನ್‌ಡ್ರೈವ್ ಒಳಗೆ ಇದ್ದ ವಿಡಿಯೋ ಮಾಡಿದ್ದು ಯಾರು? ಮೊದಲು ಅದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಇವರ ತಾತನ ಹೆಸರಿನಿಂದ ಗೆದ್ದಿದ್ದಾರೆ. ಎಂಎಲ್‌ಸಿ ಅವರ ಸಾಧನೆ ಪಟ್ಟಿ ಮೊದಲು ಬಿಡುಗಡೆ ಮಾಡಲಿ. ದೇವೇಗೌಡರು, ರೇವಣ್ಣ ಅವರದ್ದನ್ನು ಬಿಡಿ. ಎಂಎಲ್‌ಸಿ ಸಾಧನೆ ಏನು ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ,” ಎಂದು ಸವಾಲು ಎಸೆದರು.

“ಹತಾಶೆ, ಮಾನಸಿಕ ಸ್ಥಿಮಿತತೆ ಕಳೆದುಕೊಂಡಾಗ ಈ ರೀತಿ ಮಾತು ಬರುತ್ತದೆ. ಜನ ಎಲ್ಲವನ್ನು ನೋಡುತ್ತಿದ್ದಾರೆ. ಇಡೀ ಜಿಲ್ಲೆಗೆ ಬೆಂಕಿ ಹಚ್ಚಿಸುತ್ತಾರೆ, ಎಲ್ಲೇ ಹೋದರೂ ಕಿತಾಪತಿ ಮಾಡಿ ಬರ್ತಾರೆ.”

“ಯಾವ ಊರಿಗೆ ಹೋದರು ಕಿತಾಪತಿ ಮಾಡಿ ಬರ್ತಾರೆ, ಅದೇ ಅವರ ಕೆಲಸ. ಅವರ ಕಾರ್ಯಕರ್ತರ ಮೇಲೆ ಕೇಸ್ ಹಾಕ್ಸಿದ್ರೆ ದಾಖಲೆ ಕೊಡಲಿ. ನಮ್ಮ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬದವರ ಮೇಲೆಲ್ಲಾ ಕೇಸ್ ಆಗಿದೆ. ಇನ್ನೂ ಅವರ ಕಾರ್ಯಕರ್ತರ ಮೇಲೆ ಕೇಸ್ ಏಕೆ ಹಾಕ್ತಾರೆ! ಅಸೂಯೆಯಿಂದ ಈ ರೀತಿ ಮಾತನಾಡಿದ್ದಾರೆ. ದೇವೇಗೌಡರ ಕುಟುಂಬದಿಂದ ಬಂದವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಜನ ಬುದ್ದಿ ಕಲಿಸಿದ್ದು, ಮುಂದಿನ ದಿನಗಳಲ್ಲಿ ಅತಿ ದೊಡ್ಡದಾಗಿ ಬುದ್ದಿ ಕಲಿಸುತ್ತಾರೆ ಎಂದು ಕಿಡಿಕಾರಿದರು. ೨೦೨೮ರ ಚುನಾವಣೆಯಲ್ಲಿ ಯಾರ? ಯಾರು ಏನಾಗುತ್ತಾರೆ ಗೊತಾಗುತ್ತದೆ. ಜನ ಇವರ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು. ಇನ್ನು ಮುಂದಾದರೂ ಅಭಿವೃದ್ಧಿ ಕೆಲಸಕ್ಕೆ ಬೆಂಬಲ ಕೊಡಲಿ, ಇಲ್ಲಾ ಸುಮ್ಮನೆ ಇರಲಿ,” ಎಂದು ಸಲಹೆ ನೀಡಿದರು.

“ಸಾರಿಗೆ ಬಸ್ ದರ ಏರಿಕೆ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇಂಧನ ದರ ಹೆಚ್ಚಾಗಿದ್ದು, ೭ನೇ ವೇತನ ಆಯೋಗ ಜಾರಿ ಆಗುತ್ತಿದೆ. ಸಾರಿಗೆ ಇಲಾಖೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕೊಟ್ಟಿದ್ದೇವೆ. ಬೆಲೆ ಏರಿಕೆ ಸರ್ವೆ ಸಾಮಾನ್ಯ, ಎಲ್ಲಾ ಆಡಳಿತದಲ್ಲೂ ಬಸ್ ದರ ಏರಿಕೆ ಮಾಡಲಾಗಿದೆ ಎಂದರು. ಆಗುತ್ತಿದೆ. ಹಾಲು, ಬಸ್ ದರ ಏರಿಕೆ ನಾವಷ್ಟೇ ಮಾಡಿಲ್ಲ. ಎಲ್ಲ ಸರ್ಕಾರಗಳು ಮಾಡಿವೆ. ರಾಜ್ಯದ ಜನ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಶಾಶ್ವತ ಗ್ಯಾರಂಟಿ ನೀಡಿದ್ದು, ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಈ ಗ್ಯಾರಂಟಿ ಕೂಡ ಮುಂದುವರೆಯಲಿದೆ,” ಎಂದು ಭವಿಷ್ಯ ನುಡಿದರು.

ಈ ರೀತಿ ಹತ್ತು ಸಮಾವೇಶ ಮಾಡಿದ್ರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ: ಕಾಂಗ್ರೇಸ್‌ಗೆ ರೇವಣ್ಣ ತಿರುಗೇಟು
ಈ ರೀತಿ ಹತ್ತು ಸಮಾವೇಶ ಮಾಡಿದ್ರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಈಗ ಇರುವುದು ನಕಲಿ ಕಾಂಗ್ರೆಸ್ ಎಂದು ಕಾಂಗ್ರೇಸ್‌ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಹೆಚ್.ಡಿ. ರೇವಣ್ಣ

ಹಾಸನ: ಈತರ ಹತ್ತು ಸಮಾವೇಶ ಮಾಡಿ ಹೇಳಿಕೆ ನೀಡಿದರೂ ಏನು ಆಗಲ್ಲ. ನಾನು ತಲೆ ಕೆಡಿಸಿಕೊಳ್ಳಲ್ಲ. ಕೇಳಿದ ಸಾಕ್ಷಿಗುಡ್ಡೆ ಬಗ್ಗೆ ಪ್ರಸ್ತಾಪಿಸಿದಲ್ಲದೇ ಈಗ ಕಾಂಗ್ರೆಸ್ ಪಕ್ಷ ಇಲ್ಲಾ. ಇರೋದು ನಕಲಿ ಕಾಂಗ್ರೆಸ್ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ, “ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ 28 ಸಾವಿರ ಕೋಟಿ ಸಾಲಾಮನ್ನಾ ಮಾಡಿದ್ರು. ಯಾವ ಆಂದೋಲನ ಇದು? ಈಗ ಜನರು ಸಂಕಷ್ಟದಲ್ಲಿ ಇದಾಗೆ ಒಮ್ಮೆ ರೈತರ ಸಾಲಾ ಮನ್ನಾ ಮಾಡಲಿ! ಐದು ಗ್ಯಾರಂಟಿ ಕೊಟ್ಟಿದಾರೆ ಇನ್ನೊಂದು ಗ್ಯಾರಂಟಿ ಕೊಡಿ. ಹಾಸನದಲ್ಲಿ ಆರು ಜಿಲ್ಲೆ ಜನ ಕರೆತಂದು ಸಮಾವೇಶ ಮಾಡಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಏನಿದೆ? ಸ್ವಾಭಿಮಾನಿ ಅಂತೆ, ಜನ ಕಲ್ಯಾಣ ಅಂತೆ. ದೇವೇಗೌಡರು ಪ್ರಧಾನಮಂತ್ರಿ ಇದ್ದಾಗ ಕೇಂದ್ರ ಸರ್ಕಾರದ ನಬಾರ್ಡ್‌ನಿಂದ ರೈತರಿಗೆ ಕಾರ್ಯಕ್ರಮ ರೂಪದಲ್ಲಿ ಸಾಲ ಕೊಡುವಂತೆ ಮಾಡಿದ್ರು. ನಬಾರ್ಡ್ ಮೂಲಕ ರೈತರಿಗೆ ಲೋನ್ ಕೊಡುವುದು, ರಸ್ತೆಗೆ ಹಣ ಕೊಡುವುದು ಮಾಡಿದ್ದು, ದೇವೇಗೌಡರು ಏನು ಪ್ರಸ್ತಾವನೆ ಮಾಡಲ್ಲ ಅಂತ ಇವತ್ತು ರಾಜ್ಯ ಸರ್ಕಾರದವರು ಹೇಳುತ್ತಿದ್ದಾರೆ. ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕ್‌ಗೆ 70% ಹಣ ಕೊಡುತ್ತಿದ್ದರು. ಕೇಂದ್ರದಿಂದ ಸಿಗುವ ಸೌಲಭ್ಯವನ್ನು ರಾಜ್ಯಕ್ಕೆ ದೊರಕುವಂತೆ ಮಾಡಿದ್ದೇ ದೇವೇಗೌಡರು. ಕುಮಾರಸ್ವಾಮಿ ಸಾಲಮನ್ನಾ ಮಾಡದಿದ್ದರೆ 21 ಬ್ಯಾಂಕ್‌ಗಳು ಮುಳುಗಿ ಹೋಗುತ್ತಿದ್ದವು. ದೇವೇಗೌಡರನ್ನ ಸಾಕ್ಷಿ ಗುಡ್ಡೆ ಕೇಳ್ತಾರೆ. ಅಪೆಕ್ಸ್ ಬ್ಯಾಂಕ್‌ಗೆ 9162 ಕೋಟಿ ಕೊಡಿ ಎಂದು ಕೇಂದ್ರ, ಆರ್‌ಬಿಐ, ನಬಾರ್ಡ್‌ಗೆ ದೇವೇಗೌಡರು ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ಇಟ್ಟುಕೊಳ್ಳಬೇಕು. ಆದರೇ ಬೆಳಿಗ್ಗೆ ಎದ್ದರೆ ಪ್ರಧಾನಮಂತ್ರಿಯನ್ನು ಬೈತಾರೆ. ವಿಶ್ವಾಸ ಇಟ್ಟುಕೊಂಡರೆ ಮಾತ್ರ ಏನಾದರೂ ಕೊಡ್ತಾರೆ ಎಂದು ಟಾಂಗ್ ನೀಡಿದರು. ಕುಮಾರಸ್ವಾಮಿ ಹಾಸನ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ಗಳ 531 ಕೋಟಿ ಸಾಲಮನ್ನ ಮಾಡಿದ್ದು, 9600 ಕೋಟಿ ರಾಷ್ಟ್ರೀಯ ಬ್ಯಾಂಕ್‌ಗಳ ಸಾಲಮನ್ನ ಆಗಿದೆ. ಕಾಂಗ್ರೆಸ್‌ನವರೇ ರೈತರ ಬಗ್ಗೆ ಮಾತನಾಡುತ್ತಿರಲ್ಲಾ ಮೊದಲು ರೈತರ ಸಾಲಮನ್ನ ಮಾಡಿ. ದೇವೇಗೌಡರ ರಾಜಕೀಯ ಮುಗಿದು ಹೋಯ್ತು ಅಂತ ಬಾಷಣ ಮಾಡ್ತಾರೆ. ಈ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಏನು ಕೊಡುಗೆ ಕೊಟ್ಟಿದೆ ಎಂಬುದನ್ನು ಹೇಳಲಿ. ಬ್ರಿಟಿಷರ ಕಾಲದಲ್ಲಿ ಆಗಿದ್ದ ರೈಲ್ವೆ ಮಾರ್ಗ ಕಿತ್ತುಕೊಂಡು ಹೋದರವರು ಕಾಂಗ್ರೆಸ್‌ನವರು,” ಎಂದು ಕಾಂಗ್ರೇಸಿನ ಮೇಲೆ ಹರಿಹಾಯ್ದರು.

“ದೇವೇಗೌಡರು ಪ್ರಧಾನಮಂತ್ರಿಯಾಗಿ ಹತ್ತುವರೆ ತಿಂಗಳಿನಲ್ಲಿ ರೈಲ್ವೆ ಮಾರ್ಗ ಮಾಡಿದ್ರು. ಡಿಸಿಎಂ ಈ ಜಿಲ್ಲೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ರೈಲ್ವೆ ಮಾರ್ಗ, ಕೋರ್ಟ್, ಬಸ್ಟಾಂಡ್ ಕಟ್ಟಿದ್ದು ಯಾರು? ಇವೆಲ್ಲಾ ಸಾಕ್ಷಿ ಗುಡ್ಡೆಗಳಲ್ಲವಾ! ಗಿರಾಕಿಗಳೇ ಆಸ್ಪತ್ರೆ, ಇಂಜಿನಿಯರ್, ಮೆಡಿಕಲ್ ಕಾಲೇಜು, ಪಶುವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜುಗಳನ್ನು ನೋಡಿ.”

“ಈ ಜಿಲ್ಲೆಯ ಜನ ದೇವೇಗೌಡರಿಗೆ, ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಅವರ ಋಣ ನಮ್ಮ ಮೇಲೆ ಇದೆ, ಅದನ್ನು ತೀರಿಸುತ್ತೇವೆ. ನನ್ನ ಕೈಲಾದ ಕೆಲಸವನ್ನು ಈ ಜಿಲ್ಲೆಗೆ ಮಾಡುತ್ತೇನೆ. ಇಂತಹ ಹತ್ತು ಸಮಾವೇಶ ಮಾಡಿದ್ರೆ ನಾನೇನು ತಲೆ ಕೆಡಿಸಿಕೊಡಲ್ಲ. ಇವರಿಗೆ ತಾಕತ್ ಇದ್ದರೆ ಕಾಂಗ್ರೆಸ್ ಬಿಟ್ಟು ಬಂದು ನಮ್ಮ ರೀತಿ ಪಕ್ಷ ಕಟ್ಟಲಿ,” ಎಂದು ಸವಾಲು ಎಸೆದರು.

“ಹಿಂದಿನ ಕಾಂಗ್ರೆಸ್ ಈಗ ಇಲ್ಲ, ಈಗ ಇರುವುದು ನಕಲಿ ಕಾಂಗ್ರೆಸ್. ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ ಅಂತಾರೆ, ಇವರು ಬಿಎಲ್ ಶಂಕರ್ ಕರೆದೊಯ್ದು ಏನು ಮಾಡಿದ್ರು. ನಮ್ಮಿಂದ ವಲಸೆ ಹೋದವರು ಅಲ್ಲಿ ಇರುವವರು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಜೇನುಕಲ್ಲು ಸಿದ್ದೇಶ್ವರನೇ ಇದಕ್ಕೆ ಸಾಕ್ಷಿ ಎಂದರು. ಮೂರು ಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡಿಸದೆ ಎಲೆಕ್ಷನ್ ಮಾಡಿ ಗೆಲ್ಲಿಸಿಕೊಂಡು ಬಂದಿದ್ದೇನೆ. ಇವರೆಲ್ಲ ಜೆಡಿಎಸ್ ಮುಗಿದುಹೋಯ್ತು ಅಂತಾರೆ. ೨೦೨೮ ಕ್ಕೆ ಜೆಡಿಎಸ್ ಏನು ಎಂದು ಗೊತ್ತಾಗುತ್ತದೆ ಎಂದು ಪಕ್ಷ ಬಿಟ್ಟವರಿಗೆ ಬಿಸಿ ಮುಟ್ಟಿಸಿದರು. ಹಾಸನದಲ್ಲಿ ಯಾವಾಗ ಸಮಾವೇಶ ಮಾಡಬೇಕು ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ. ದೇವೇಗೌಡರು ಮೇಕೆದಾಟು ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡಿದ್ದಾರೆ. ಹಾಸನದ ಔಟರ್ ರಿಂಗ್ ರೋಡ್ ಗೆ ೭೫೦ ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ,” ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಗಿರೀಶ್ ಚನ್ನವೀರಪ್ಪ, ಬಿದರಿಕೆರೆ ಜಯರಾಂ, ಜಗದೀಶ್, ನಾಗರಾಜು ಇತರರು ಉಪಸ್ಥಿತರಿದ್ದರು.

ಸರ್ಕಾರದ ಐದು ಗ್ಯಾರಂಟಿಗಳನ್ನು ಪಡೆದಿರುವುದಕ್ಕೆ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ಪರಮ ಜನದ್ರೋಹಿಗಳು: ಸಿ.ಎಂ
ಹಾಸನದ ಬೃಹತ್ ಜನ ಸಮಾವೇಶದ ಯಶಸ್ಸಿಗೆ ಸ್ವಾಭಿಮಾನಿ ಒಕ್ಕೂಟ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದಿಸಿದ ಸಿಎಂ

ಡಾ.ರಾಜ್ ಅವರಿಗೆ ಅಭಿಮಾನಿಗಳೇ ದೇವರು-ನಮಗೆ ಮತದಾರರೇ ದೇವರು: ಸಿ.ಎಂ

ಗ್ಯಾರಂಟಿ ಪಡೆದದ್ದಕ್ಕೆ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ಜನದ್ರೋಹಿಗಳು: ಸಿ.ಎಂ ಆಕ್ರೋಶ

ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರ ಮಾತು ಈಗ ನಿಜವಾಗಿದೆ: ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದ್ದರ ಫಲ ಈಗ ದೇವೇಗೌಡರು ನೋಡುವಂತಾಗಿದೆ: ಸಿಎಂ

ಹಾಸನ ಡಿ. 5: ನಮ್ಮ ಸರ್ಕಾರದ ಐದು ಗ್ಯಾರಂಟಿಗಳನ್ನು ಪಡೆದಿರುವುದಕ್ಕೆ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ಪರಮ ಜನದ್ರೋಹಿಗಳು. ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಹಾಸನದಲ್ಲಿ ನಡೆದ ಬೃಹತ್ ಜನಕಲ್ಯಾಣೋತ್ಸವ ಸಮಾವೇಶವದಲ್ಲಿ ಮಾತನಾಡುತ್ತಾ, “ಡಾ.ರಾಜ್ ಅವರು ಅಭಿಮಾನಿ ದೇವರು ಎಂದು ಹೇಳುತ್ತಿದ್ದರು. ನಮಗೆ ಮತದಾರರ ಬಂಧುಗಳೇ ದೇವರು,” ಎನ್ನುತ್ತಾ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ʼಆಶೀರ್ವದಿಸಿದ್ದಕ್ಕೆʼ ಧನ್ಯವಾದ ಅರ್ಪಿಸಿದರು.

ಹಾಸನದ ಮಹಾನ್ ನಾಯಕರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣದಲ್ಲಿ , ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗನನ್ನು ಈಗ್ಗಾಂವಿಯಲ್ಲಿ ಜನ ಸೋಲಿಸಿ ನಮಗೆ ಆಶೀರ್ವದಿಸಿದ್ದಾರೆ ಮುಖ್ಯಮಂತ್ರಿ ಹೇಳಿದ್ದಾರೆ.

“ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವಷ್ಟು ಬಹುಮತ ಈ ರಾಜ್ಯದ ಜನರೆ ಯಾವತ್ತೂ ಕೊಟ್ಟಿಲ್ಲ. ಒಮ್ಮೆ ಕಾಂಗ್ರೆಸ್ ಬೆಂಬಲದಲ್ಲಿ ಮತ್ತೊಮ್ಮೆ ಬಿಜೆಪಿ ಬೆಂಬಲದಲ್ಲಿ ಮುಖ್ಯಮಂತ್ರಿ ಆದರು. ಬಳಿಕ ಎರಡೂ ಪಕ್ಷಗಳಿಗೆ ವಂಚಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಸುಭದ್ರ ಸರ್ಕಾರ ಕೊಟ್ಟಿದೆ. ಮಾತ್ರವಲ್ಲ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. 2013 ರಲ್ಲಿ ಕೊಟ್ಟ ಮಾತಿನಂತೆ ಹಲವಾರು ಭಾಗ್ಯಗಳನ್ನು ಜಾರಿ ಮಾಡಿದೆವು‌. ಈ ಬಾರಿ ಐದಕ್ಕೆ ಐದೂ ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನೂ ಈಡೇರಿಸುತ್ತಿದ್ದೇವೆ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

“ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಪ್ರಧಾನಿ ಮೋದಿ ಅವರ ಸರ್ಕಾರ ನಾವು ದುಡ್ಡು ಕೊಡ್ತೀವಿ ಅಂದರೂ ಅಕ್ಕಿ ಕೊಡಲಿಲ್ಲ. ಇಂಥಾ ಜನದ್ರೋಹಿ ಸರ್ಕಾರ ಬಿಜೆಪಿಯದ್ದು. ನಾವು ಐದು ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಈ ಐದು ಗ್ಯಾರಂಟಿಗಳನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ದೊಡ್ಡ ಜನದ್ರೋಹಿಗಳು. ಕೇಂದ್ರದಲ್ಲಿ ಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ಮೇಕೆದಾಟು ವಿಚಾರದಲ್ಲಿ ಮೌನ ಆಗಿರುವುದು ಏಕೆ? ಬೆಂಗಳೂರಿನ ಜನತೆಗೆ ನೀರು ಬೇಕಾಗಿದೆ. ಕೊಡಿಸಲಿ,” ಎಂದು ಸವಾಲು ಹಾಕಿದರು.

“ಮಾಜಿ ಪ್ರಧಾನಿ ದೇವೇಗೌಡರು ನನಗಿಂತ 15 ವರ್ಷ ಹಿರಿಯರು. ಅವರು ಅಷ್ಟೆ ಘನತೆಯಿಂದ ಮಾತಾಡಬೇಕಿತ್ತು. ಯಾವತ್ತೂ ಗರ್ವ ತೋರಿಸದ ನನಗೆ, “ಸಿದ್ದರಾಮಯ್ಯ ಅವರ ಗರ್ವಭಂಗ ಮಾಡ್ತೀನಿ” ಎಂದರು. ಇದನ್ನು ನೀವು ಒಪ್ಪಿಕೊಳ್ಳುತ್ತೀರಾ, ಸಹಿಸುತ್ತೀರಾ? ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜನತೆ ಯಾವುದೇ ಕಾರಣಕ್ಕೂ ಸಹಿಸಲ್ಲ. ಹಾಸನದ ಹೆಣ್ಣು ಮಕ್ಕಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ರೈತರ ಪಾಲಿನ ಸಾಲದಲ್ಲಿ ಶೇ58 ರಷ್ಟನ್ನು ಕಡಿತಗೊಳಿಸಿದೆ. ಇದರಿಂದ ಹಾಸನದ ರೈತರು ಮತ್ತು ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಮಗ ಎಂದುಕೊಂಡಿರುವ ಕುಮಾರಸ್ವಾಮಿಯವರು ಏಕೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ. ನಬಾರ್ಡ್ ನಿಂದ ಆಗಿರುವ ಅನ್ಯಾಯವನ್ನು ಕುಮಾರಸ್ವಾಮಿ ಅವರು ಏಕೆ ಸರಿಪಡಿಸುತ್ತಿಲ್ಲ? ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ 11 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯಕ್ಕೆ ಕೊಡಿಸಲು ಬಿಜೆಪಿ-ಜೆಡಿಎಸ್ ಏಕೆ ಬಾಯಿ ಬಿಡುತ್ತಿಲ್ಲ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

“ದೇವೇಗೌಡರು ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡರು, ವೈ.ಕೆ.ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ದೇವೇಗೌಡರು ರಾಜಕೀಯವಾಗಿ ಮುಗಿಸಿದರು. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಒಕ್ಕಲಿಗ ನಾಯಕ ಕೃಷ್ಣಪ್ಪ ಅವರ ಮಾತು ನಿಜವಾಗಿದೆ. ನಾನು ಮತ್ತು ಜಾಲಪ್ಪ ಒಟ್ಟಾಗಿ ರಾಮಕೃಷ್ಣಹೆಗಡೆಯವರ ಬದಲಿಗೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೆವು. ಆಮೇಲೆ ನನ್ನನ್ನೇ ಪಕ್ಷದಿಂದ ಉಚ್ಚಾಟಿಸಿದರು,” ಎಂದು ಟೀಕಿಸಿದರು.

ಹಾಸನ ಮತ್ತೆ ಕಾಂಗ್ರೆಸ್ ತೆಕ್ಕೆಗೆ

“ಕಾಂಗ್ರೆಸ್ ಸರ್ಕಾರ ಮಾತ್ರ ಸುಭದ್ರ ಸರ್ಕಾರ ಕೊಡಲು ಸಾಧ್ಯ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿಗಳಿಸಲಿದೆ. ಇದು ಶತಸಿದ್ದ ಎಂದು ಭರವಸೆ. ಹಾಸನದಲ್ಲಿ ಈ ಮಟ್ಟದ ದೊಡ್ಡ ಜನ ಕಲ್ಯಾಣ ಕಾಂಗ್ರೆಸ್ ಸಮಾವೇಶ ಹಿಂದೆಂದೂ ಆಗಿರಲಿಲ್ಲ. ಇದರಲ್ಲಿ ಸ್ವಾಭಿಮಾನಿ ಒಕ್ಕೂಟಗಳು, ಕಾಂಗ್ರೆಸ್ಸೇತರ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಶ್ರಮಿಸಿದ್ದಾರೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಉಪಚುನಾವಣೆ ಫಲಿತಾಂಶದ ಸಂದೇಶಗಳು: ಬದಲಾದ ರಾಜಕೀಯ ಧೋರಣೆ ಮತ್ತು ಮತದಾರರ ಮನ್ನಣೆ
ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಮತದಾರರ ಮಣೆ, ಬಿಜೆಪಿ-ಜೆಡಿಎಸ್‌ ಸೋಲಿಗೆ ಯಾರು ಹೊಣೆ?

ಲೇಖನ: ರಾಜೇಶ್‌ ಹೆಬ್ಬಾರ್

ಚನ್ನಪಟ್ಟಣ, ಶಿಗ್ಗಾಂವ, ಸಂಡೂರು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿ(ಎಸ್) ಎನ್‌ಡಿಎ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಚುನಾವಣೆಗಳು ಒಂದು ಕಡೆ ದಿಗ್ಗಜರು, ಮಾಜಿ ಮುಖ್ಯಮಂತ್ರಿಗಳು ಮತ್ತು ಅವರ ಪುತ್ರರನ್ನು ಒಳಗೊಂಡ ಹೈ-ವೋಲ್ಟೇಜ್ ಹೋರಾಟಗಳನ್ನು ಕಂಡವು, ಮತ್ತು ಇನ್ನೊಂದು ಕಡೆ ಇಡೀ ಸರ್ಕಾರಿ ಯಂತ್ರ.

ಎರಡೂ ಕಡೆಯವರು ಅಪಾರ ಸಂಪನ್ಮೂಲಗಳು, ಭಾವನಾತ್ಮಕ ಮತ್ತು ಕೋಮುವಾದಿ ನಿರೂಪಣೆಗಳು ಹಾಗೂ ವೈಯಕ್ತಿಕ ದಾಳಿಗಳನ್ನು ಬಳಸಿಕೊಂಡು ತೀವ್ರವಾದ ಪ್ರಚಾರದಲ್ಲಿ ತೊಡಗಿಸಿಕೊಂಡರು.   ಈ ಬಿರುಸಿನ-ತುರುಸಿನ ಪೈಪೋಟಿಯಲ್ಲಿ  ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿತು ಮತ್ತು ಬಿಜೆಪಿ-ಜೆಡಿ (ಎಸ್) ಗೆ ಬಲವಾದ ಹೊಡೆತವನ್ನು ನೀಡಿತು.  ವಿಶೇಷವಾಗಿ ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ವೈ. ವಿಜಯೇಂದ್ರ ಅವರಿಗೆ ಈ ಸೋಲು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಮತ್ತು ಅವರ ನಾಯಕತ್ವದ ಕುರಿತು ಅನೇಕ ಪ್ರಶ್ನೆಗಳು ಏಳುವಂತೆ ಮಾಡಿದೆ.

ಈ ಗೆಲುವು ಕಾಂಗ್ರೆಸ್ಸಿನ ಸ್ಥೈರ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ.  ಪ್ರತಿಪಕ್ಷಗಳು, ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಆಂತರಿಕ ಪ್ರತಿಸ್ಪರ್ಧಿಗಳಿಂದ ತೀವ್ರ ಒತ್ತಡವನ್ನು ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನಿರಾಳತೆಯನ್ನು ಒದಗಿಸಿದೆ. ಅವರ ಮುಖ್ಯಮಂತ್ರಿ ಸ್ಥಾನವನ್ನು ಬಲಪಡಿಸಿದೆ. ಈ ಫಲಿತಾಂಶಗಳು ಸಿದ್ದರಾಮಯ್ಯ ಅವರ ನಾಯಕತ್ವದ ವಿಶ್ವಾಸಾರ್ಹತೆಯನ್ನು ಮರು ಸಾಬೀತು ಪಡಿಸಿವೆ ಮತ್ತು  ಅಹಿಂದ ವರ್ಗದ ಮತದಾರರ ಬೆಂಬಲ ಅಚಲವಾಗಿರುವುದನ್ನು ಸ್ಪಷ್ಟಪಡಿಸಿದೆ.

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್‌ ಅವರಿಗೂ ಈ ಉಪಚುನಾವಣೆ ಅಷ್ಟೇ ನಿರ್ಣಾಯಕವಾಗಿದ್ದು, ವಿಶೇಷವಾಗಿ ಅವರ ಸಹೋದರ ಡಿ.ಕೆ. ಸುರೇಶ್ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರಿಂದ ಹಿನ್ನಡೆಯಿಂದ ಹೊರಬರಲು ಇದು ನೆರವಾಯಿತು. ಶಿವಕುಮಾರ್‌ ಅವರ ಬಹುಕಾಲದ ಪ್ರತಿಸ್ಪರ್ಧಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಇದು ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕತ್ವಕ್ಕೆ ಅವರು ನಡೆಸುತ್ತಿದ್ದ ಹೋರಾಟಕ್ಕೆ ಬಲ ತಂದಿದೆ. ಭವಿಷ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಬೇಡಿಕೆಯನ್ನು  ಇದು ಗಟ್ಟಿಗೊಳಿಸಿದೆ.

ಈ ಉಪಚುನಾವಣೆ ಫಲಿತಾಂಶಗಳು ರಾಜ್ಯದಾದ್ಯಂತ ವೈವಿಧ್ಯಮಯ ಸಂದೇಶಗಳನ್ನು ರವಾನಿಸಿದ್ದು, ಅನೇಕರು ಅವುಗಳನ್ನು ವಿವಿಧ ದೃಷ್ಟಿಕೋನಗಳ ಮೂಲಕ ವ್ಯಾಖ್ಯಾನಿಸಿದ್ದಾರೆ.

23 ನವೆಂಬರ್‌, 2024 ರಂದು ಹೊರಬಂದ ಕರ್ನಾಟಕದ ಮೂರು ಉಪಚುನಾವಣೆಯ ಫಲಿತಾಂಶಗಳನ್ನು ಅನೇಕರು ಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ, ಅರ್ಥೈಸಿದ್ದಾರೆ. ಕಳೆದ 2024 ರ ಲೋಕಸಭೆ ಚುನಾವಣೆಯ ನಂತರದಲ್ಲಿ ರಾಜ್ಯದಲ್ಲಿ ನಡೆದ ಬೆಳವಣಿಗೆಗಳನ್ನು ಒಮ್ಮೆ ಮೆಲಕು ಹಾಕಿದರೆ ಈ ವಿಧಾನಸಭೆ ಉಪಚುನಾವಣೆಗಳು ಅನೇಕ ರೀತಿಯ ದಿಕ್ಸೂಚಿಯನ್ನು ನೀಡುತ್ತಿವೆ. ಇದು ಸಾಮಾನ್ಯ ಉಪಚುನಾವಣೆಯಾಗಿದ್ದರೆ ಆಡಳಿತಾರೂಢ ಪಕ್ಷ ತನ್ನ ಪ್ರಾಬಲ್ಯ ಮತ್ತು ಪ್ರಭಾವದಿಂದ ಈ ಚುನಾವಣೆ ಗೆಲ್ಲುವುದು ಅಂತಹ ವಿಶೇಷ ಎಂದೆನಿಸುತ್ತಿರಲಿಲ್ಲ. ಆದರೆ ಈ ಮೂರು ಉಪಚುನಾವಣೆಗಳೂ ಯಾವ ಹಂತದಲ್ಲಿಯೂ ಏಕಪಕ್ಷೀಯವಾಗಿ ನಡೆಯಲಿಲ್ಲ. ಚನ್ನಪಟ್ಟಣದಿಂದ ಆರಂಭವಾದ ಗದ್ದಲ, ಜಿದ್ದಾಜಿದ್ದಿ ಹೋರಾಟ, ಶಿಗ್ಗಾವಿ ಸಂಡೂರು ಸೇರಿದಂತೆ ಮೂರು ಕ್ಷೇತ್ರಗಳಲ್ಲೂ ಪರಾಕಾಷ್ಠೆಯನ್ನು ತಲುಪಿದೆ. ಈ ಮೂರು ಕ್ಷೇತ್ರದ ಮತದಾರರು ಹಿಂದೆಂದೂ ಕಂಡಿರದ ಪೈಪೋಟಿ, ರಾಜಕೀಯ ಹೇಳಿಕೆಗಳ ಬಿರುಸು- ಬಾಣ, ಶಕ್ತಿ ಪ್ರದರ್ಶನ, ಹಣದ ಹೊಳೆಗೆ ಉಪಚುನಾವಣೆ ಸಾಕ್ಷಿಯಾಗಿದೆ. ಇಲ್ಲಿ ಎರಡು ಕ್ಷೇತ್ರಗಳು ಬಿಜೆಪಿ-ಜೆಡಿಎಸ್‌ ಮೈತ್ರಿಯ ಪ್ರಾಬಲ್ಯವಿರುವ ಮತ್ತು ಮಾಜಿ ಮುಖ್ಯಮಂತ್ರಿಗಳು ಸತತವಾಗಿ ಪ್ರತಿನಿಧಿಸುತ್ತಿದ್ದವು ಎಂಬುದು ಬಹು ಮುಖ್ಯದ ಸಂಗತಿ. ಈ ಚುನಾವಣೆಯಲ್ಲಿ ಅವರ ಪುತ್ರರೇ ಆಯಾ ಪಕ್ಷದ ಅಭ್ಯರ್ಥಿಗಳು ಮತ್ತು ರಾಜಕೀಯ ಉತ್ತರಾಧಿಕಾರಿಗಳು. ಇಲ್ಲಿ ಕಾಂಗ್ರೆಸ್‌ ಪಕ್ಷ ಇತ್ತೀಚಿನ ದಶಕದಲ್ಲಿ ಗೆಲುವು ಸಾಧಿಸುವುದಿರಲಿ ಮತಗಳಿಕೆಯಲ್ಲಿಯೂ ಬಾರಿ ಹಿಂದೆ ಇತ್ತು. ಇದೆಲ್ಲದರ ಆಧಾರದಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್‌ ಮತ್ತು ಶಿಗ್ಗಾವಿಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭಾವಿಸಲಾಗಿತ್ತು. ಬಹುತೇಕ ಮಾಧ್ಯಮ ಸಮೀಕ್ಷೆಗಳು ಕೂಡ ಇದನ್ನೇ ಬಿತ್ತರಿಸಿದ್ದವು.

ಆದರೆ ಈ ಚುನಾವಣೆ ಸಂಪೂರ್ಣವಾಗಿ ಭಿನ್ನವಾದ ಫಲಿತಾಂಶವನ್ನು ನೀಡಿದೆ. ಈ ಕ್ಷೇತ್ರದ ಜನರು ಭಾರೀ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ತಮ್ಮದೇ ವರ್ಚಸ್ಸು, ಕಾರ್ಯಕರ್ತರ ಪಡೆ ಮತ್ತು ಕುಟುಂಬದ ಪ್ರಭಾವದಿಂದ ಕ್ಷೇತ್ರವನ್ನು ಭದ್ರಕೋಟೆಯನ್ನಾಗಿಸಿಕೊಂಡಿದ್ದ ಇಬ್ಬರು ಮುಖ್ಯಮಂತ್ರಿಗಳ ಕೋಟೆ ಛಿದ್ರವಾಗಿದೆ. ಸಾಮಾನ್ಯ ಕುಟುಂಬದಿಂದ ಬಂದ ಅಭ್ಯರ್ಥಿಗಳು ಮಾಜಿ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಕುಟುಂಬದ ಕುಡಿಗಳ ವಿರುದ್ಧ ಗೆಲುವು ಸಾಧಿಸಿದ್ದಾರೆ.

ರಾಜಕೀಯ ವಲಯದಿಂದ ಆಚೆ ಇರುವವರು ಈ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೂ ಫಲಿತಾಂಶ ಬೀರಬಹುದಾದ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವದ ಗೆಲುವು ಎನ್ನುವ ರೀತಿಯಲ್ಲಿ ಅನೇಕರು ವ್ಯಾಖ್ಯಾನಿಸುತ್ತಿದ್ದರೂ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಯಾವ ರಾಜಕೀಯ ಪಕ್ಷಗಳೂ ಆ ಗಾಂಭೀರ್ಯತೆ ಮತ್ತು ಬದ್ಧತೆಯನ್ನು ಉಳಿಸಿಕೊಳ್ಳದಿರುವ ಕಾರಣ ಐಡಿಯಲಿಸ್ಟಿಕ್‌ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ.

ಈ ವಿಧಾನಸಭೆ ಉಪಚುನಾವಣೆ ಮೂರು ಮುಖ್ಯ ಸಂದೇಶಗಳನ್ನು ನೀಡಿದೆ.

1. ಒಂದು ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರರಲ್ಲಿ ಇಂದಿಗೂ ಪ್ರಭಾವವನ್ನು ಉಳಿಸಿಕೊಂಡಿವೆ ಎಂದು.

2. ಎರಡನೇಯದು,  ಸತತ ಅಪಪ್ರಚಾರ, ರಾಜಕೀಯ, ಭೃಷ್ಟಾಚಾರ, ಹಗರಣಗಳ ಅರೋಪಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವರ್ಚಸ್ಸು ಮತ್ತು ಪ್ರಭಾವಗಳನ್ನು ಉಳಿಸಿಕೊಂಡಿದ್ದಾರೆ ಮತ್ತು ಅಹಿಂದ ವರ್ಗ ಅವರ ಜೊತೆ ಅದಮ್ಯ ನಿಷ್ಠೆ ಮತ್ತು ಬೆಂಬಲದಿಂದ ನಿಂತಿದೆ, ಸದ್ಯದಲ್ಲಿ ಸಿದ್ದರಾಮಯ್ಯನವರನ್ನು ದುರ್ಬಲಗೊಳಿಸುವ ಮತ್ತು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಹೊರಗಿನವರ ಮತ್ತು ಒಳಗಿನವರ ಪ್ರಯತ್ನಗಳಿಗೆ ಜನ ಮನ್ನಣೆಯನ್ನು ನೀಡಿಲ್ಲ ಎಂಬುದು.

3. ಬಿಜೆಪಿ-ಜೆಡಿಎಸ್‌ ಆರು ತಿಂಗಳ ಸತತ ರಾಜಕೀಯ ಹೋರಾಟ, ರಾಜ್ಯಪಾಲರ ಬೆಂಬಲದಿಂದ ಸಿದ್ದರಾಮಯ್ಯನವರ ವಿರುದ್ಧ ಕಾನೂನು ಸಮರ, ದಲಿತ ವಿರೋಧಿ ಪಟ್ಟಕಟ್ಟುವ ಪ್ರಚಾರ, ಗ್ಯಾರಂಟಿಗಳಿಂದ ಕರ್ನಾಟಕ ದಿವಾಳಿಯಾಗಿದೆ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸ್ಥಗಿತಗೊಂಡಿದೆ ಎಂಬ ದಿನ ನಿತ್ಯದ ಬಿಜೆಪಿ-ಜೆಡಿಎಸ್‌ ಮತ್ತು ಮುಖ್ಯವಾಹಿನಿ ಮಾಧ್ಯಮದ ನರೆಟಿವ್‌ ಮತದಾರರನ್ನು ಗಂಭೀರವಾಗಿ ಪ್ರಬಾವಿಸಿಲ್ಲ ಎಂದು.

ಗ್ಯಾಂಟಿಯೋಜನೆಗಳಿಗೆ ಕರ್ನಾಟಕ ಸರ್ಕಾರ ಸರಾಸರಿ 56,000 ಕೋಟಿಗಳಷ್ಟು ಅನುದಾನ ಅಂದರೆ ರಾಜ್ಯದ ಬಜೆಟ್‌ ನ 14% ಹಣವನ್ನು ಮೀಸಲಿರಿಸಿದೆ. ಇದು ದೇಶದಲ್ಲಿಯೇ ಅತಿದೊಡ್ಡ  ನೇರ ಲಾಭ ಹಸ್ತಾಂತರಿಸುವ (Direct Benefit Transfer-DBT) ಕಾರ್ಯಕ್ರಮ. ಈ ಐದು ಗ್ಯಾರಂಟಿ ಯೋಜನೆಯ ಮುಖಾಂತರ ರಾಜ್ಯದ 224 ಕ್ಷೇತ್ರಗಳಿಗೆ ತಲಾ 200-215 ಕೋಟಿ ರೂ ನಷ್ಟು ಅನುದಾನ ವಿತರಣೆಯಾಗುತ್ತಿದೆ. ಇಷ್ಟು ಬೃಹತ್‌ ಹಣವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿರಿಸಿದ್ದರೂ   ಕರ್ನಾಟಕ ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನಕ್ಕೆ ಏರಿದೆ, ಹಾಗೆ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆ (GSDP)  ಶೇ 10.2% ಕ್ಕೆ ಹೆಚ್ಚಳವಾಗಿದ್ದು, ಇಲ್ಲಿ ಕೂಡ ರಾಜ್ಯ ಎರಡನೇ ಸ್ಥಾನಕ್ಕೆ ಏರಿದೆ. ಗುಜರಾತ್‌, ತಮಿಳುನಾಡು ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕವು ಈ ವರ್ಷ ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ವಿದೇಶಿ ಬಂಡವಾಳ ಹೂಡಿಕೆ, ಮಾಹಿತಿ ತಂತ್ರಜ್ಞಾನದ ಬೆಳವಣಿಗೆ, ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ ಸೇರಿದಂತೆ ಅನೇಕ ಮಹತ್ತ ಮೈಲಿಗಲ್ಲು ಸ್ಥಾಪಿಸಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೂಡ ಕರ್ನಾಟಕದ ಸೂಚ್ಯಂಕ ಭಾರತದ ರಾಷ್ಟ್ರೀಯ ಸೂಚ್ಯಂಕಕ್ಕಿಂತ ಉತ್ತಮ ಗೊಂಡಿದೆ. ಈ ಅಂಕಿ ಸಂಖ್ಯೆಗಳು ಯಾವುದೋ ಖಾಸಗಿ ಸಂಸ್ಥೆಗಳು ನೀಡಿದ್ದಲ್ಲ, ಸ್ವತ: ಕೇಂದ್ರ ಸರ್ಕಾರದ ಸಂಸ್ಥೆಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ನೀಡಿದ ಅಂಕಿ ಅಂಶಗಳು.

ರಾಜ್ಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ತಳಮಟ್ಟದ ಜನರ ಜೀವನದಲ್ಲಿ ಸುಧಾರಣೆಯಾದಾಗ ಮಾತ್ರ ಈ ಪ್ರಗತಿ ಸಾಧ್ಯ ಎಂಬುದು ಸಾರ್ವತ್ರಿಕ ಸತ್ಯ. ಆದರೂ ಸರ್ಕಾರ ತನ್ನನ್ನು ಪ್ರಚಾರ ಮಾಡಿಕೊಳ್ಳಲು ವಿಫಲವಾಗಿ ವಿರೋಧ ಪಕ್ಷದ ಅಪಪ್ರಚಾರಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಧಾನಿ  ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಗ್ಯಾರಂಟಿ ಯೋಜನೆಗಳನ್ನು ಪುಂಕಾನುಪುಂಕವಾಗಿ ವಿರೋಧಿಸಿದ್ದಾರೆ. ಆದರೆ ಚುನಾವಣೆ ಫಲಿತಾಂಶ ಅವರ ಪ್ರಚಾರಕ್ಕೆ ವ್ಯತಿರಿಕ್ತವಾಗಿದೆ. ಕಾಂಗ್ರೆಸ್‌ನ ಅನೇಕ ಮಂತ್ರಿಗಳು ಮತ್ತು ಶಾಸಕರು ಸಹಿತ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ, ಸ್ಥಗಿತಗೊಳಿಸುವ ಮಾತನಾಡಿದ್ದರು. ಆದರೆ ಇವರೆಲ್ಲರ ಬಾಯಿ ಮುಚ್ಚಿಸುವಂತೆ ಜನರು ಗ್ಯಾರಂಟಿ ಯೋಜನೆಗಳು ಮುಂದುವರೆಯಬೇಕು ಎಂಬ ತೀರ್ಪನ್ನು ಈ ಉಪಚುನಾವಣೆಯ ಮೂಲಕ ಪರೋಕ್ಷವಾಗಿ ರವಾನಿಸಿದ್ದಾರೆ. ಬಿಜೆಪಿಯ ನಕಾರಾತ್ಮಕ ಪ್ರಚಾರಗಳು ಇಲ್ಲಿ ಕೆಲಸಮಾಡಿಲ್ಲ.

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಕಾಂಗ್ರೆಸ್ ತನ್ನ ಕಲ್ಯಾಣ ಉಪಕ್ರಮಗಳಾದ ‘ಗೃಹ ಜ್ಯೋತಿ’ ಮತ್ತು ‘ಗೃಹ ಲಕ್ಷ್ಮಿ’ ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಯಶಸ್ವಿಯಾಗಿ ಪ್ರಚಾರ ಮಾಡಿತು, ಇದು ಕರ್ನಾಟಕದಾದ್ಯಂತ ಮನೆಗಳಿಗೆ ಆರ್ಥಿಕ ಪರಿಹಾರವನ್ನು ಒದಗಿಸುವ ಗುರಿ ರಾಜಕೀಯವಾಗಿ ಕಾಂಗ್ರೆಸ್ ಗೆ ಲಾಭ ತಂದುಕೊಟ್ಟಿದೆ. ಈ ಯೋಜನೆಗಳು ಮತದಾರರೊಂದಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳಲ್ಲಿ ಕಾಂಗ್ರೆಸ್‌ನ ಬೆಂಬಲದ ನೆಲೆಯನ್ನು ಗಟ್ಟಿಗೊಳಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಮತ್ತು ಜೆಡಿ (ಎಸ್) ಋಣಾತ್ಮಕ ಪ್ರಚಾರವನ್ನು ಆಶ್ರಯಿಸಿ, ವಕ್ಫ್ ವಿಷಯದಲ್ಲಿ ವಿವಾದವನ್ನು ಹುಟ್ಟುಹಾಕಲು ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಆಧಾರರಹಿತ ಕಾನೂನು ಮೊಕದ್ದಮೆಗಳನ್ನು ಹೂಡಲು ಪ್ರಯತ್ನಿಸಿದವು. ಆದಾಗ್ಯೂ, ಈ ತಂತ್ರಗಳು ಕಾಂಗ್ರೆಸ್‌ನ ಆಡಳಿತದ ವಿರುದ್ಧ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆ ಕುಗ್ಗಿಸುವ ಹತಾಶ ಪ್ರಯತ್ನವಾಗಿಯಷ್ಟೆ ಉಳಿದಿದೆ. ಪ್ರಭಾವಿ ಜನಾಭಿಪ್ರಾಯ ರೂಪಿಸಲು ವಿರೋಧ ಪಕ್ಷಗಳು ಸೋತಿವೆ.

ಕರ್ನಾಟದ ಮತದಾರರಲ್ಲಿ ನಾಯಕತ್ವದ ಬದಲಾವಣೆ ಕುರಿತಂತೆ ಇಂದಿಗೂ ಒಂದು ಸಂದೇಹ ಮತ್ತು ಅಸ್ಪಷ್ಟತೆ ಕಾಡುತ್ತಿರುವುದು ಈ ಚುನಾವಣೆಯ ಫಲಿತಾಂಶಗಳಲ್ಲಿ ಗೋಚರಿಸುತ್ತಿದೆ.  ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ-ಜೆಡಿಎಸ್‌ ಮೂಡಾ ಆರೋಪ, ಪಾದಯಾತ್ರೆ, ರಾಜ್ಯವ್ಯಾಪಿ ಹೋರಾಟ ನಡೆಸಿದರೂ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಅದಕ್ಕೆ ಸಮರ್ಥ ಪರ್ಯಾಯ ನಾಯಕತ್ವ ಯಾರದು ? ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ದೀರ್ಘಕಾಲದಿಂದ ಚುನಾವಣಾ ರಾಜಕಾರಣವು ಪಕ್ಷದ ವರ್ಚಸು ಮಾತ್ರವಲ್ಲದೇ ನಾಯಕತ್ವದ ವರ್ಚಸ್ಸು ಮತ್ತು  ಜನಬೆಂಬಲದ ಆಧಾರದಲ್ಲಿ ನಡೆದಿರುವುದು ಎಲ್ಲರಿಗೂ ಅರಿವಿರುವ ಸಂಗತಿ. ಈ ಸಂದರ್ಭದಲ್ಲಿ ಜನರು ಪರ್ಯಾಯ ನಾಯಕತ್ವದತ್ತ ದೃಷ್ಟಿ ನೆಟ್ಟಿಲ್ಲ ಎಂಬುದು ಈ ಮೂರು ಉಪಚುನಾವಣೆಗಳ ಒಟ್ಟೂ ಫಲಿತಾಂಶದ ಆಧಾರದಲ್ಲಿ ಹೇಳಬಹುದು.

ಪ್ರತಿ ಮತ ಕ್ಷೇತ್ರದ ಸ್ಥಳೀಯ ರಾಜಕೀಯ, ಜಾತಿ ಸಮೀಕರಣ ಮತ್ತು ಅಲ್ಲಿನ ಮತದಾರರು ನಿರ್ದಿಷ್ಟ ಪಕ್ಷವನ್ನು, ಮತ್ತು ಅಭ್ಯರ್ಥಿಯನ್ನು ಬೆಂಬಲಿಸಲು ಇರುವ ಕಾರಣಗಳು ಭಿನ್ನವಾಗಿವೆ ಇದೆ. ಆದರೆ ಒಟ್ಟು ರಾಜ್ಯ ರಾಜಕಾರಣ ಸಾಗುತ್ತಿರುವ ದಿಕ್ಕು ಮತ್ತು ದಿಶೆಯಲ್ಲಿ ಈ ಉಪಚುನಾವಣೆ ರಾಜ್ಯವ್ಯಾಪಿ   ಸಾರ್ವತ್ರಿವಾಗಹುದಾದ ಅನೇಕ ಸಂದೇಶಗಳನ್ನು ನೀಡಿದೆ.

ಲೋಕಸಭೆ ಚುನಾವಣೆ ನಂತರ ಬಿಜೆಪಿ-ಜೆಡಿ(ಎಸ್) ಮೈತ್ರಿಕೂಟವು ಕಾಂಗ್ರೆಸ್ ಸರ್ಕಾರದ ವಿರುದ್ಧ  ನಕಾರಾತ್ಮಕ ಪ್ರಚಾರಗಳ ಸರಣಿಯನ್ನು ಪ್ರಾರಂಭಿಸಿತು, ಸಾರ್ವಜನಿಕರ ಗಮನವನ್ನು ಸೆಳೆಯಲು ಮತ್ತು ಜನಾಭಿಪ್ರಾಯವನ್ನು ರೂಪಿಸಲು ನಡೆಸಿದ ಬಿಜೆಪಿ-ಜೆಡಿಎಸ್‌ ಪ್ರಯತ್ನ ವಿಫಲವಾಗಿದೆ. ಬದಲಾಗಿ, ಅವರ ಕೋಮು ಧ್ರುವೀಕರಣದ ತಂತ್ರಗಳು, ತಪ್ಪುದಾರಿಗೆಳೆಯುವ ನಿರೂಪಣೆಗಳು ಮತ್ತು ಭಾವನಾತ್ಮಕ ಪ್ರಚಾರ ತಂತ್ರಗಳು  ಅಂತಿಮವಾಗಿ ನೆಲಕಚ್ಚಿವೆ. ಬಿಜೆಪಿ-ಜೆಡಿ(ಎಸ್) ಮೈತ್ರಿ ಕೂಡ ಆಂತರಿಕ ಬಿರುಕುಗಳು ಈ ಚುನಾವಣೆಯಲ್ಲಿ ಬಹಿರಂಗಗೊಂಡಿದೆ.

ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿ (ಎಸ್), ಪ್ರಭಾವಿ ಸಂದೇಶವನ್ನು ನೀಡಲು ಹೆಣಗಾಡುತ್ತಿದೆ,  ವಂಶಪಾರಂಪರ್ಯ  ರಾಜಕೀಯದ ಬಗ್ಗೆ ಬೆಳೆಯುತ್ತಿರುವ ಅಸಮಾಧಾನವನ್ನು ಅರ್ಥಮಾಡಿಕೊಳ್ಳಲು ಜೆಡಿಎಸ್‌ ವಿಫಲವಾಗಿದೆ. ವಿಶೇಷವಾಗಿ ಎಚ್‌ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿಗೆ  ನಾಯಕತ್ವವನ್ನು ಹಸ್ತಾಂತರಿಸುವ ಪ್ರಯತ್ನಗಳನ್ನು ಜನರು ಸತತವಾಗಿ ತಿರಸ್ಕರಿಸಿದ್ದಾರೆ. ಈ ಕ್ರಮವು ಕಾಂಗ್ರೆಸ್‌ನ ಬಡವರ ಪರ, ಜನಸಾಮಾನ್ಯರ ಪರ ಎಂಬ ಇಮೇಜಿಗೆ ಪ್ರಬಲ ಪರ್ಯಾಯವನ್ನು ಪ್ರಸ್ತುತಪಡಿಸಲು ಪಕ್ಷದ ಅಸಮರ್ಥತೆಯ ಜೊತೆಗೆ ಮತದಾರರಲ್ಲಿ ಪರಕೀಯತೆಯ ಭಾವನೆಗೆ ಕಾರಣವಾಯಿತು. ಬಿಜೆಪಿ ಮತದಾರರು ಸಹ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಹಿಂಜರಿಯುತ್ತಿರುವುದು ಮೈತ್ರಿಯ ಬಲವನ್ನು ಮತ್ತಷ್ಟು ಕುಗ್ಗಿಸುವಂತೆ ಮಾಡಿದೆ.

ಬಿಜೆಪಿಯಲ್ಲಿ ಸಹ ಬಿಎಸ್‌ ಯೆಡಿಯೂರಪ್ಪನವರ ನಂತರ ಪಕ್ಷದ ಹಿಡಿತ ವಿಜಯೇಂದ್ರ ಕೈಗೆ ಹೋಗುವುದನ್ನು ಆ ಪಕ್ಷದ ಮುಖಂಡರು ಬಹಿರಂಗವಾಗಿ ವಿರೋಧಿಸಿದ್ದಾರೆ. ಬಿಜೆಪಿಯ ಪ್ರಭಾವಿ ನಾಯಕ ಬಸವನಗೌಡ ಯತ್ನಾಳ್‌ ನಾಯಕತ್ವದಲ್ಲಿ ಬಿಜೆಪಿಯಲ್ಲಿಯೇ ಪರ್ಯಾಯ ಗುಂಪು ವಿಜಯೇಂದ್ರ ಪದಚ್ಯುತಿಗೆ ನಿರಂತರ ಪ್ರಯತ್ನ ನಡೆಸುತ್ತಿದ್ದು ಸರಣಿ ಸಭೆಗಳು,  ಸತತ ಹೇಳಿಕೆಗಳು ಹೊರಬರುತ್ತಿವೆ. ಅಧಿಕಾರ ಮತ್ತು ಪ್ರಾಬಲ್ಯ ಸಾಧಿಸುವ, ಕುಗ್ಗಿಸುವ ಗೌಪ್ಯ ಅಜೆಂಡಾದೊಂದಿಗೆ ನಡೆಸಿದ ಬಿಜೆಪಿಯ ಪ್ರತಿಭಟನೆ ಮತ್ತು ಹೋರಾಟಗಳು ಕೇವಲ ಮೇಲ್ಪದರಕ್ಕಷ್ಟೇ ಸೀಮಿತವಾಗಿವೆ, ಮಾಧ್ಯಮದ ಪ್ರಚಾರಕ್ಕಷ್ಟೇ ಸೀಮಿತವಾಗಿವೆ ಎಂಬುದನ್ನು ಈ ಚುನಾವಣಾ ಫಲಿತಾಂಶ ಪ್ರತಿಧ್ವನಿಸಿದೆ. ತಳಮಟ್ಟದಲ್ಲಿ ಜನರನ್ನು ಸ್ಪರ್ಷಿಸಿದೇ ಹೇಳಿಕೆಗಳ ಹೋರಾಟಗಳು ಜನಬೆಂಬಲವನ್ನು ಗಳಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಚುನಾವಣೆ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಕ್ಕೆ ನೀಡಿದೆ.

ಬಿಜೆಪಿ, ವಿಶೇಷವಾಗಿ ಬಸವನಗೌಡ ಯತ್ನಾಳ್ ಮತ್ತು ಸಿ.ಟಿ.ರವಿಯಂತಹ   ನಾಯಕರು, ತಮ್ಮ ಪಕ್ಷದ ಸೋಲಿಗೆ ಮುಸ್ಲಿಮರನ್ನು ಬಲಿಪಶು ಮಾಡಲು ಪ್ರಯತ್ನಿಸುತ್ತಿದ್ದಾರೆ, ತಮ್ಮ ಸೋಲಿಗೆ ಅವರನ್ನು ದೂಷಿಸುತ್ತಿದ್ದಾರೆ. ಇಂತಹ ಸಮಾಜದಲ್ಲಿ ವಿಷ ಭಿತ್ತುವ ಹೇಳಿಕೆಗಳು,  ಕೋಮು ವಿಭಜನೆಗಳು ಜನ ಬೆಂಬಲವನ್ನು ಒಟ್ಟುಗೂಡಿಸುವ ಬದಲು, ಮತದಾರರನ್ನು ದೂರವಿಡುತ್ತವೆ, ವಿಶೇಷವಾಗಿ ವೈವಿಧ್ಯಮಯ ಜಾತಿ ಸಮೀಕರಣ ಹೊಂದಿರುವ ಕ್ಷೇತ್ರಗಳಲ್ಲಿ ಕೋಮು ಧ್ರುವೀಕರಣದ ಮೂಲಕ ಭಾವನಾತ್ಮಕವಾಗಿ ಸಮಾಜವನ್ನು ಒಡೆಯುವ ಮೂಲಕ ಬಿಜೆಪಿ-ಜೆಡಿಎಸ್  ರಚಿಸಿದ ಬಿಜೆಪಿಯ ಪ್ರಯತ್ನಗಳು ಮತದಾರರ ಕಲ್ಪನೆಯನ್ನು ಸೆರೆಹಿಡಿಯಲು ವಿಫಲವಾಗಿದೆ. ಬಿಜೆಪಿ ಈ ಉಪಚುನಾವಣೆಯಿಂದ ಅರ್ಥಮಾಡಿಕೊಳ್ಳ ಬೇಕಾಗಿರುವದೆಂದರೆ ಜನರ ಬದುಕಿನ ಮೇಲೆ ಯಾವುದೇ ಆರ್ಥಿಕ-ಸಾಮಾಜಿಕ ಪ್ರಭಾವ ಬೀರದ, ಭರವಸೆಯನ್ನೂ ನೀಡದ ಮತೀಯ ರಾಜಕಾರಣ ಒಂದು ಪೊಳ್ಳು ತಂತ್ರ ಮತ್ತು ವಿಫಲವಾದ ಮಾದರಿ ಅಷ್ಟೇ. ದೀರ್ಘಕಾಲದಲ್ಲಿ ಇದು ಮತದಾರರನ್ನು ಪ್ರಭಾವಿಸಲು ಸಾಧ್ಯವಿಲ್ಲ. ಜನಪರ ರಾಜಕಾರಣವಲ್ಲದೇ ಮತ್ಯಾವ ಗಿಮಿಕ್‌ಗಳಿಂದ ಜನರ ಮನಸು ಗೆಲ್ಲುವುದು ಸುಲಭವಲ್ಲ ಎಂಬ ಸಂದೇಶವನ್ನು ಜನರು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಿಗೆ ಈ ಚುನಾವಣೆ ಮೂಲಕ ರವಾನಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮತದಾರರು ಚುನಾವಣೆ ದಿನ ಹರಿದು ಬರುವ ಹಣಕ್ಕೆ ಮಹತ್ವ ಕೊಡದೇ ತಮ್ಮ ಗಮನವನ್ನು ಸರ್ಕಾರದ ಆರ್ಥಿಕ ನೆರವು ಯೋಜನೆ ಮತ್ತು ಗ್ರಾಮೀಣ ಅಭಿವೃದ್ಧಿಯಂತಹ ಸ್ಪಷ್ಟವಾದ ವಿಷಯಗಳ ಮೇಲೆ ಕೇಂದ್ರೀಕರಿಸಿರುವುದು ಕಂಡು ಬಂದಿದೆ. ಬಿಜೆಪಿ-ಜೆಡಿಎಸ್ ತಮ್ಮ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಒಗ್ಗಟ್ಟಿನ ನಾಯಕತ್ವ ಮತ್ತು ಸಂಘಟಿತ ಹೋರಾಟ ನಡೆಸಲು ವಿಫಲವಾದವು. ಕುಟುಂಬದ ಕುಡಿಗಳ ಸ್ಪರ್ಧೆ ಅವರ ಪತನಕ್ಕೆ ಮತ್ತಷ್ಟು ಕೊಡುಗೆ ನೀಡಿತು, ಬಿಜೆಪಿ-ಜೆಡಿಎಸ್‌ ಪಕ್ಷದ ನಾಯಕರು ತಮ್ಮ ನಾಯಕತ್ವವನ್ನು ಬಹಿರಂಗವಾಗಿ ಟೀಕಿಸಿದರು ಮತ್ತು ಏಕೀಕೃತ ಸಂದೇಶವನ್ನು ಪ್ರಸ್ತುತಪಡಿಸಲು ವಿಫಲರಾದರು.

ರಾಜ್ಯ ಭೀಕರ ಪ್ರವಾಹ, ಬರ, ನೆರೆಯಲ್ಲಿ ನಲುಗುತ್ತಿದ್ದಾಗಲೂ ಬಿಜೆಪಿ ಸಿದ್ದರಾಮಯ್ಯನವರ ವಿರುದ್ಧ ವಯಕ್ತಿಕ ತೇಜೋವಧೆಯಲ್ಲಿ, ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿತ್ತು. ಇದು ಜನರಿಗೆ ಹಿಡಿಸಿದಂತೆ ಕಾಣಿಸುತ್ತಿಲ್ಲ. ಹಾಗೇ ರಾಜ್ಯದ ಪರವಾಗಿ ಧ್ವನಿ ಎತ್ತಲು ವಿಫಲವಾದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧವೂ ಮತದಾರರಲ್ಲಿ ಅಸಮಾಧಾನದ ಹೊಗೆ ನಿಧಾನವಾಗಿ ಏಳಲು ಆರಂಭವಾಗಿರುವುದು ಸ್ಪಷ್ಟವಾಗಿದೆ.

ಅಬ್ಬರದ ಪಾದಯಾತ್ರೆ, ನಾಯಕರ ಭಾಷಣಗಳ ನಡುವೆಯೂ ಎನ್‌ಡಿಎ  ಮೈತ್ರಿಕೂಟ ಮತದಾರರನ್ನು ತಲುಪಲು ವಿಫಲವಾಗಿದೆ ಎಂಬುದಕ್ಕೆ ಈ ಉಪಚುನಾವಣೆ ಫಲಿತಾಂಶ ಸ್ಪಷ್ಟ ಉದಾಹರಣೆ. ಪಾದಯಾತ್ರೆಯ ಅಬ್ಬರದ ಹೊರತಾಗಿಯೂ ಚನ್ನಪಟ್ಟಣದಲ್ಲಿ ಮೈತ್ರಿಯ ನಾಯಕನ ಪುತ್ರ ಹೀನಾಯ ಸೋಲನ್ನು ಅನುಭವಿಸುವಂತಾಯಿತು. ಈ ಸೋಲನ್ನು, ಮತದಾರರು ಕಾಂಗ್ರೆಸ್‌ನ ಆಡಳಿತ ಮಾದರಿಗೆ ಅಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಉತ್ಪ್ರೇಕ್ಷೇಯ ವ್ಯಾಖ್ಯಾನ ಕೂಡ ಅತ್ಯಂತ ಅಪಾಯಕಾರಿ.

ಚುನಾವಣೆಯ ನಂತರ, ಬಿಜೆಪಿ ನಾಯಕರ ಮುಸ್ಲಿಮರ ವಿರುದ್ಧ ಆಧಾರರಹಿತ ಆರೋಪಗಳು ಮತ್ತು ಸೋಲನ್ನು ಘನತೆಯಿಂದ ಸ್ವೀಕರಿಸಲು ವಿಫಲವಾದದ್ದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ರಚನಾತ್ಮಕ ರಾಜಕೀಯ ಚರ್ಚೆಗಿಂತ ಹೆಚ್ಚಾಗಿ ಕೋಮು ಮತ್ತು ಭಾವನಾತ್ಮಕ ಮನವಿಗಳ ಮೇಲಿನ ಅವಲಂಬನೆಯು ಅಲ್ಪಸಂಖ್ಯಾತ ಸಮುದಾಯಗಳನ್ನು ಮಾತ್ರವಲ್ಲದೆ ಬಿಜೆಪಿಯ ವಿಭಜಕ ತಂತ್ರಗಳಿಂದ ಭ್ರಮನಿರಸನಗೊಂಡ ದಲಿತ, ಹಿಂದುಳಿದ ವರ್ಗ ಮತ್ತು ಸ್ವಲ್ಪ ಪ್ರಮಾಣದ ಒಕ್ಕಲಿಗ-ಲಿಂಗಾಯಿತ ಮತದಾರರನ್ನು ದೂರ ಮಾಡಿದೆ. ಇದರ ಪರಿಣಾಮವಾಗಿ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಸರ್ಕಾರ ಪ್ರಬಲವಾಗಿ ಹೊರಹೊಮ್ಮಿದೆ, ಆಡಳಿತ, ಒಳಗೊಳ್ಳುವಿಕೆ ಮತ್ತು ಕಲ್ಯಾಣದ ಪಕ್ಷವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಈ ಉಪಚುನಾವಣೆ ಫಲಿತಾಂಶ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ತಿರುವು ನೀಡಿದೆ. ಕಾಂಗ್ರೆಸ್   ವಿರುದ್ಧ ಅಪಪ್ರಚಾರ, ಸಿದ್ಧರಾಮಯ್ಯನವರ ವಿರುದ್ಧ ವಯಕ್ತಿಕ ತೇಜೋವಧೆಯ ಅಭಿಯಾನ ನಡೆಸಲು ಬಿಜೆಪಿ-ಜೆಡಿಎಸ್  ಪ್ರಯತ್ನಿಸಿದರೂ, ಅದರಲ್ಲಿ ಯಶಸ್ವಿಯಾಗಿಲ್ಲ. ಸಾಮಾಜಿಕ ನ್ಯಾಯ ಮತ್ತು ಗ್ಯಾರಂಟಿ ಯೋಜನೆಗಳು ಜನರ ಬೆಂಬಲ ಪಡೆದಿವೆ. ಕಲ್ಯಾಣ-ಕೇಂದ್ರಿತ ರಾಜಕೀಯದ ಮೇಲೆ ಸಾರ್ವಜನಿಕರ ನಂಬಿಕೆ ಅಚಲವಾಗಿದೆ. ಈ ಫಲಿತಾಂಶವು ಜನರ ಆಯ್ಕೆಯಲ್ಲಿ ಸ್ಪಷ್ಟತೆಯನ್ನು ತೋರಿಸುತ್ತದೆ. ಉಪಚುನಾವಣೆಗಳು ಮತದಾರರ ಬದಲಾಗುತ್ತಿರುವ ಆದ್ಯತೆಗಳನ್ನು ಪ್ರತಿಬಿಂಬಿಸುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸಿದೆ. ಕಲ್ಯಾಣ ಯೋಜನೆಗಳ ಯಶಸ್ಸು, ವಿಶೇಷವಾಗಿ ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ, ಮತದಾರರ ನಂಬಿಕೆಗಳನ್ನು ಆರ್ಥಿಕ ಅಭಿವೃದ್ಧಿಯತ್ತ ಕೇಂದ್ರೀಕರಿಸಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಆಂತರಿಕ ಕಲಹ ಮತ್ತು ನಕಾರಾತ್ಮಕ ಪ್ರಚಾರದಿಂದ ಬಳಲಿದ್ದು, ಕೋಮು ಧ್ರುವೀಕರಣದ ಪ್ರಯತ್ನ, ವಂಶಪಾರಂಪರ್ಯದ ನಾಯಕತ್ವವನ್ನು ಬೆಳೆಸುವ ಪ್ರಯತ್ನಗಳು ವಿಫಲವಾಗಿವೆ. ಮತದಾರರು ವಿಭಜನೆಗಿಂತ ಏಕತೆ, ಪ್ರಗತಿ ಮತ್ತು ಸ್ಥಿರ ಆಡಳಿತವನ್ನು ಆಯ್ಕೆ ಮಾಡಿದ್ದಾರೆ..

ಈ ಫಲಿತಾಂಶಗಳು ಕರ್ನಾಟಕದಲ್ಲಿ ಮತದಾರರ ಮನಸ್ಥಿತಿ  ಬದಲಾಗುತ್ತಿರುವುದನ್ನು, ಮತ್ತು ಆರ್ಥಿಕ ಕಲ್ಯಾಣ, ಸಾಮಾಜಿಕ ನ್ಯಾಯ ಅಭಿವೃದ್ಧಿಯ ನಿರೂಪಣೆಗಳು ಕೋಮು, ಜಾತಿ ವಿಭಜನೆ ರಾಜಕೀಯಕ್ಕಿಂತ ಪ್ರಾಮುಖ್ಯತೆ ಪಡೆಯುತ್ತಿರುವುದನ್ನು ತೋರಿಸುತ್ತವೆ.

ಸರ್ಕಾರ ತನ್ನ ಬಣ್ಣದ ಕನಸುಗಳಿಂದ ಹೊರಬಂದು ಜನಪರ ಕಾರ್ಯಗಳಿಗೆ ಗಮನ ಹರಿಸಲು ಇದು ಉತ್ತಮ ಅವಕಾಶ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಪ್ರಮುಖ ಬದಲಾವಣೆ ತರುವ, ಕ್ರಾಂತಿಕಾರಕ ಯೋಜನೆ ಅಥವಾ ಕಾನೂನುಗಳನ್ನು ಜನರು ನಿರೀಕ್ಷಿಸುತ್ತಿದ್ದಾರೆ. ರಾಜಕೀಯ ಶಕ್ತಿ, ಇರುವ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಂಡು, ರಾಜ್ಯದ ಅಭಿವೃದ್ಧಿಯ ದಿಕ್ಕಿನಲ್ಲಿ ಸರ್ಕಾರ ಚಿಂತನೆ ಮಾಡಿದರೆ ಸೂಕ್ತ.

ಜಾತಿ ಜನಗಣತಿ ಬಹಿರಂಗಗೊಳಿಸುವುದು, ಎಸ್‌ಎಸ್ಟಿ ಒಳ ಮೀಸಲಾತಿಯ ಅನುಷ್ಠಾನ, ಕೃಷಿ ಸುಧಾರಣೆ, ಬಗರ್‌ ಹುಕುಂ, ಸಾಗುವಳಿ ಚೀಟಿ ವಿತರಣೆ, ಮನೆಗಳ ನಿರ್ಮಾಣ, ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ ಮತ್ತು ಅಭಿವೃದ್ಧಿಗೆ ಅನುದಾನ ಹೊಂದಿಸುವಂತಹ ದೊಡ್ಡ ಸವಾಲುಗಳು ಕಾಂಗ್ರೆಸ್‌ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರಿವೆ. ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ವಿರೋಧ ಪಕ್ಷಗಳ ಟೀಕೆ ಮತ್ತು ಆಂತರಿಕ ಅಸಮಾಧಾನವನ್ನು ನಿಭಾಯಿಸಿ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಅವಕಾಶವಾಗಿದೆ. ಆದರೆ ಜನರ ಸಮಸ್ಯೆಗಳಿಗೆ ಪ್ರಾಮುಖ್ಯತೆ ನೀಡದೆ ಅಧಿಕಾರದ ಲಾಲಸೆಯಲ್ಲಿ ಮುನ್ನುಗ್ಗಿದರೆ, ಮುಂದಿನ ಚುನಾವಣೆಗಳಲ್ಲಿ ಜನರ ಕಠಿಣ ತೀರ್ಪು ಎದುರಿಸಲೇಬಾಕುಗತ್ತದೆ.

ಲೇಖನ: ರಾಜೇಶ್‌ ಹೆಬ್ಬಾರ್

ಎಡಿಜಿಪಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಜೆಡಿಎಸ್‌ ಒತ್ತಾಯ
ಬೆಂಗಳೂರು: ಕುಮಾರಸ್ವಾಮಿಯವರನ್ನು ಇತ್ತೀಚೆಗೆ ಟೀಕಿಸಿ ಹೇಳಿಕೆ ನೀಡಿದ್ದ ಕರ್ನಾಟಕ ಲೋಕಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿಎಂ ಚಂದ್ರಶೇಖರ್‍ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಜೆಡಿಎಸ್‌ ನಾಯಕರು ಮನವಿ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ನಿರ್ದೇಶಕರಾದ ಡಾ. ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಿ ಭಾರತ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಜನತಾದಳ(ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಅಸಭ್ಯ ಮತ್ತು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ಐಪಿಎಸ್ ಅಧಿಕಾರಿ ಹಾಗೂ ಎಸ್‍ಐಟಿ ಮುಖ್ಯಸ್ಥ ಎಂ ಚಂದ್ರಶೇಖರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಮುಖಂಡ ಟಿ.ಎ. ಶರವಣ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ನಾಯಕರು ಮನವಿ ನೀಡಿದ್ದಾರೆ.

ದೇಶದ ವಿರೋಧಪಕ್ಷಗಳ ವಿರುದ್ಧ ಮೋದಿ ದ್ವೇಷ- ಬಿಜೆಪಿ ಜೆಡಿಎಸ್ ಪಿತೂರಿಗೆ ನಾನು ಹೆದರಲ್ಲ: ಸಿಎಂ ಸ್ಪಷ್ಟ ಎಚ್ಚರಿಕೆ
ಬೆಂಗಳೂರು, ಸೆಪ್ಟೆಂಬರ್ 24: ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಿ, ಹಾಗೂ ನನಗೆ ಕಪ್ಪು ಮಸಿ ಬಳಿಯಲು ಬಿಜೆಪಿ ಜೆಡಿಎಸ್ ನಡೆಸುತ್ತಿರುವ ಪ್ರಯತ್ನಕ್ಕೆ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ಆದೇಶ ಹೊರಬಂದ ನಂತರ ಪತ್ರಿಕಾ ಗೋಷ್ಠಿ ನಡೆಸಿ, ತಮ್ಮ ಮೊದಲ ಪ್ರತಿಕ್ರಿಯೆ ನೀಡಿದರು.

ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ , ಬಿಎನ್ ಎಸ್ ಎಸ್ ಪ್ರಕಾರ 218 ಹಾಗೂ ಪಿಸಿ ಕಾಯ್ದೆ 19ರಂತೆ ತನಿಖೆಗೆ ಅನುಮತಿ ನೀಡುವುದನ್ನು ತಿರಸ್ಕರಿಸಿ, ಪಿಸಿ ಕಾಯ್ದೆಯ 17 ಎ ಪ್ರಕಾರ ತನಿಖೆಗೆ ಉಚ್ಛನ್ಯಾಯಾಲಯ ಆದೇಶ ನೀಡಿದೆ. ಈ ತೀರ್ಪಿನ ಮೇಲೆ ಕಾನೂನು ಹೋರಾಟದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ , ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.

ಬಿಜೆಪಿ ಜೆಡಿಎಸ್ ನ ಪಿತೂರಿಗೆ ಹೆದರುವುದಿಲ್ಲ

ಬಿಜೆಪಿ ಜೆಡಿಎಸ್ ನ ಪಿತೂರಿಗೆ ನಾನು ಎಂದೂ ಹೆದರುವುದಿಲ್ಲ. ಬಿಜೆಪಿ ಜೆಡಿಎಸ್ ಸಂಚು , ರಾಜಭವನ ದುರುಪಯೋಗ ಹಾಗೂ ದುರ್ಬಳಕೆಗೆ ನಾನು ಹೆದರುವುದಿಲ್ಲ. ರಾಜ್ಯದ ಜನ , ಪಕ್ಷದ ಹೈಕಮಾಂಡ್, ಶಾಸಕರು, ಸಚಿವರು, ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಕಾನೂನು ಹೋರಾಟಕ್ಕೆ ಹೈಕಮಾಂಡ್ ಸಹಕಾರ ನೀಡಲಿದೆ. ನರೆಂದ್ರ ಮೋದಿಯವರ ಬಿಜೆಪಿ ಸರ್ಕಾರ , ಕೇವಲ ನನ್ನ ಮೇಲಷ್ಟೇ ಅಲ್ಲ , ಇಡೀ ದೇಶದ ವಿರೋಧಪಕ್ಷಗಳ ವಿರುದ್ಧ ಮೇಲೆ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಮಾಡುತ್ತಿದ್ದಾರೆ ಎಂದರು.

ಆಪರೇಷನ್ ಕಮಲದ ಪ್ರಯತ್ನ ವಿಫಲ

ಬಿಜೆಪಿ ಹಾಗೂ ಜೆಡಿಎಸ್ ನವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭೆ ಚುನಾವಣೆಯಲ್ಲಿಯೂ ಸೋತಿದ್ದಾರೆ. ಅವರು ಹಣಬಲದಿಂದ, ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೇ ಹೊರತು, ಜನರ ಆಶೀರ್ವಾದದೊಂದಿಗೆ ಎಂದಿಗೂ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ ಬಂದಿದ್ದರಿಂದ ಆಪರೇಷನ್ ಕಮಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ದುಡ್ಡನ್ನು ಕೊಟ್ಟು ಶಾಸಕರನ್ನು ಖರೀದಿಸುವ ಪ್ರಯತ್ನ ಮಡಿದರು. ನಮ್ಮ ಯಾವ ಶಾಸಕರೂ ದುಡ್ಡಿನ ಹಿಂದೆ ಹೋಗದ ಕಾರಣ,ಅವರ ಪ್ರಯತ್ನ ವಿಫಲವಾಯಿತು ಎಂದರು.

ಬಿಜೆಪಿಯವರು ಸಾಮಾಜಿಕ ನ್ಯಾಯ, ಬಡವರ ವಿರೋಧಿಗಳು

ಕಾಂಗ್ರೆಸ್ ಸರ್ಕಾರದ ಬಡವರ ಪರ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸುತ್ತಾ ಬಂದಿದ್ದಾರೆ. ಶೂಭಾಗ್ಯ, ಪಶುಭಾಗ್ಯ, ಶಾದಿಭಾಗ್ಯ , ಕ್ಷೀರಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳು ಹಾಗೂ ಈಗಿನ ಗ್ಯಾರಂಟಿ ಯೋಜನೆಗಳನ್ನು ಸಹ ವಿರೋಧಿಸುತ್ತಿದ್ದಾರೆ. ಬಿಜೆಪಿಯವರು ಸಾಮಾಜಿಕ ನ್ಯಾಯ, ಬಡವರ ವಿರೋಧಿಗಳು. ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವುದು ಅವರ ದುರಾಲೋಚನೆ. ಹೈಕೋರ್ಟ್ ಆದೇಶದ ಪ್ರತಿಯನ್ನು ಸಂಪೂರ್ಣ ಪರಿಶೀಲಿಸಿ , ಮುಂದಿನ ಪ್ರತಿಕ್ರಿಯೆಯನ್ನು ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಇಡೀ ದೇಶದಲ್ಲಿ ಪಿತೂರಿ ಮಾಡಿದಂತೆ ಕರ್ನಾಟಕದಲ್ಲಿಯೂ ನನ್ನ ಹಾಗೂ ಸರ್ಕಾರದ ವಿರುದ್ಧ ಪಿತೂರಿ ಮಾಡಲಾಗಿದೆ ಎಂದರು.

ಕಾನೂನಾತ್ಮಕ ಹೋರಾಟ:
ಆದೇಶ ತೃಪ್ತಿ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇದೊಂದು ಕಾನೂನಾತ್ಮಕ ಹೋರಾಟ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

ತಪ್ಪು ಮಾಡಿಲ್ಲ
ನನ್ನ ಪ್ರಕಾರ ನಾನು ತಪ್ಪು ಮಾಡಿಲ್ಲ. 17 ಎ ರಡಿ ತನಿಖೆ ಮಾಡಲು ಆದೇಶ ನೀಡಿದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ಬಿ ಎನ್.ಎಸ್.ಎಸ್ ಕಾಯ್ದೆಯಡಿ 218 ಆದೇಶ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.

ಸಚಿವ ಕುಮಾರಸ್ವಾಮಿಯವರಿಗೆ ಅನ್ವಯವಾಗುವುದಿಲವೇ?

ಬಿಜೆಪಿಯವರು ಮುಖ್ಯಮಂತ್ರಿಗಳು ರಾಜಿನಾಮೆ ಕೊಡಲು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರನ್ನು ನಾವು ಎದುರಿಸುತ್ತೇವೆ. ರಾಜಿನಾಮೆ ಏಕೆ ಕೊಡಬೇಕು ಎಂದು ಪ್ರಶ್ನಿಸಿದರು. ರಾಜಿನಾಮೆ ಕೇಳುವುದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಹೇಳಿಕೆಗೆ ಪ್ರತಿಕ್ರಿಯಿಸಿ ಅವರ ಮೇಲೆ ಎಫ್.ಐ.ಆರ್ ಆಗಿದ್ದು ಅವರು ಜಾಮೀನಿನ ಮೇಲೆ ಇದ್ದಾರೆ.ಅವರು ರಾಜಿನಾಮೆ ಕೊಟ್ಟಿದ್ದಾರೆಯೇ? ಇದು ಅವರಿಗೆ ಅನ್ವಯವಾಗುವುದಿಲ್ಲವೇ? ತನಿಖೆ ಹಂತದಲ್ಲಿಯೇ ರಾಜಿನಾಮೆ ಕೊಡುವ ಬಗ್ಗೆ ಕುಮಾರಸ್ವಾಮಿಯವರನ್ನು ಕೇಳಿ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ನ್ಯಾಯಾಲಯದ ತೀರ್ಪನ್ನು ನಾನು ಪೂರ್ತಿ ಓದಿಲ್ಲ. ಮಾಧ್ಯಮಗಳಲ್ಲಿ ಬಿತ್ತರಿಸಿರುವುದನ್ನು ಮಾತ್ರ ಓದಿದ್ದೇನೆ ಎಂದರು. ಓದಿದ ನಂತರ ಪುನಃ ಪ್ರತಿಕ್ರಿಯೆ ನೀಡುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಕಾಡೆ ಮಲಗಿದ ನಮೋ ಮತ್ಸರದ ಬಿಲ್ಲುಗಳು (ಕಠಾರಿಯವರ ರಾಜಕೀಯ ವಿಡಂಬನೆ)
“ಪಲ್ಟು…ಪಲ್ಟು…ಬಾಬುಗಾರು…ಬಾಬುಗಾರು”

ಕೂಗುತ್ತ ರೂಮುಗಳ ಬಾಗಿಲ ಹಿಂದೆ, ಮಂಚ ಕುರ್ಚಿಯ ಕೆಳಗೆ, ಬೀರುಗಳ ಹಿಂದೆ ಎಲ್ಲಿ ಹುಡುಕಿದರೂ ಪಲ್ಟುಕುಮಾರ, ತೆಲುಗುಬಾಬು ಕಾಣದೆ ನಮೋಬಾಬಾ ಚಿಂತೆಗೀಡಾದ. ʼನಾವಷ್ಟೇ ಆಟ ಆಡೋಣ. ಚೀಟಿಂಗ್ ಬೇಡ. ಚೇಲಾಗಳು, ಸೆಕ್ರೆಟರಿ, ಕಾವಲುಗಾರ – ಎಲ್ಲರಿಗೂ ಹೊರ ಹೋಗಲು ಹೇಳಿʼ ಎಂದು ಪಲ್ಟುಕುಮಾರ, ತೆಲುಗು ಬಾಬು ಆಟಕ್ಕೆ ಮುಂಚೆ ಹೇಳಿದ್ದ ಕಾರಣ ನಮೋಗೆ ತಡವಾಗಿ ಅರಿವಾಗತೊಡಗಿತ್ತು. ʼಯಾರೂ ಇಲ್ಲದ ಸಮಯ ನೋಡಿ, ಯಾಮಾರಿಸಿ ಎಸ್ಕೇಪ್ ಆಗಿದ್ದಾರೆ! ಬಿಸಿಲಲ್ಲೂ ಜಿಗಿದಾಡೋ ಈ ಕಪ್ಪೆಗಳನ್ನ ಹೇಗಪ್ಪ ತಕ್ಕಡಿಗೆ ಹಾಕೋದು? ಅಣಬೆ ತಿನ್ಕೊಂಡ್, ಡ್ರೆಸ್ ಮಾಡ್ಕೊಂಡ್ ಹೆಂಗೊ ಮಜವಾಗಿದ್ದೆ. ನಂಬಿದ್ದ ಭಕ್ತರೇ ಕೈಕೊಟ್ಟು…ಪಲ್ಟು, ಬಾಬು ಅಂತ ಅಯೋಗ್ಯರಿಗೆ ಮಸ್ಕಾ ಹೊಡೆಯೊ ಹಂಗಾಯ್ತುʼ ಎಂದು ನಮೋ ಪರಿತಪಿಸಿದ.

ಹಾಗೂ ಹೀಗೂ ಏದುಸಿರು ಬಿಡುತ್ತ, ಸೂರ್ಯ ಮುಳುಗಿದ ಹೊತ್ತಲ್ಲಿ ಪಟ್ಟಾಭಿಷಕ್ತನಾದ ನಮೋಬಾಬಾನ ಕುಂಡಲಿಗೆ ಕತ್ತಲು ತುಂಬಿತ್ತು. ಶನಿ, ಮಂಗಳ, ಗುರು ಎಲ್ಲಾ ಗ್ರಹಗಳು ಒಟ್ಟಿಗೆ ರಾಗಾ ಮತ್ತವನ ಇಂಡಿಯಾ ಗ್ಯಾಂಗ್ ನಲ್ಲಿ ವಕ್ಕರಿಸಿಕೊಂಡು, ದಶದಿಕ್ಕುಗಳಿಂದಲೂ ಅಟಕಾಯಿಸಿಕೊಂಡು ಕೈಕಾಲು ಕಟ್ಟಿ ಹಾಕಿದ್ದವು. ಇಷ್ಟು ಸಾಲದೂಂತ, ಪದಗ್ರಹಣದ ನಂತರ ತುರ್ತಾಗಿ ಕುಟೀರಕ್ಕೆ ಬರಹೇಳಿದ್ದ ಮಾಧವ ಕೃಪಾಕಟಾಕ್ಷ ಕುಟೀರದ ಪುರೋಹಿತ, ಇಂಥದ್ದೇ ಅವಕಾಶಕ್ಕಾಗಿ ಕಾಯುತ್ತಿದ್ದವನಂತೆ ಉರಿವ ಬೆಂಕಿಗೆ ಸುರಿಯಲು ತುಪ್ಪದ ಗಿಂಡಿ ಹಿಡಿದು ನಿಂತಿದ್ದ.

“ಏನು ಅಹಂಕಾರ! ಎಷ್ಟು ಕೊಬ್ಬು!”

“ಯಾರಿಗಪ್ಪ?”

“ಮರ್ಯಾದೆ…ಮರ್ಯಾದೆ. ನಾಲಿಗೆ ಮೇಲೆ ನಿಗಾ ಇರಲಿ. ಚಡ್ಡಿ ಪೂರ್ವಾಶ್ರಮದಲ್ಲಿ ಒಟ್ಟಿಗೆ ಇದ್ದು ಮೂರೊತ್ತು ಉಪ್ಪಿಟ್ಟು ತಿಂದು ಕೊಕ್ಕೊ ಕಬ್ಬಡಿ ಆಡಿರಬಹುದು. ಆಗಿನ ಪುರೋಹಿತರಿಗೆ ಇಬ್ಬರೂ ಕೂಡಿ ಬಾಡಿ ಮಸಾಜ್ ಸೇವೆ ಮಾಡಿರಬಹುದು. ಆದರೆ, ಈಗ ನಾನು ಸಾಮ್ರಾಟನನ್ನು ನಾಮಿನೇಶನ್ ಮಾಡೋನು. ಸಲಿಗೆ ಬೇಡ, ಎಚ್ಚರವಿರಲಿ”

“ಪೂಜಾರಿಗಳು ಕ್ಷಮಿಸಬೇಕು. ತಮ್ಮ ಕೋಪಕ್ಕೆ ಕಾರಣ ತಿಳಿಯಬಹುದೇ?”

“ಯಾವನೋ ಅವ್ನು…ಕಪಿ ನಡ್ಡ…ಸಾಮ್ರಾಟರಿಗೆ ಕುಟೀರದ ಅವಶ್ಯಕತೆ ಇಲ್ಲ ಅಂದವನು?”

“ಅಯ್ಯೋ ಬಿಡಿ…ಆ ದಡ್ಡನ ಮಾತು”

“ಆ ಕಪಿ ಬಾಯಿಗೆ ಆ ಮಾತನ್ನ ಯಾರು ತುರುಕಿರೋದು ನಂಗೊತ್ತು. ನಾನಷ್ಟು ದಡ್ಡ ಅಲ್ಲ. ಇರಲಿ…ದಾನದ ಹೆಸರಲ್ಲಿ ಆಸ್ತಿ ಮಾಡ್ಕೊಂಡ್ ಮಜಾ ಮಾಡ್ತಿರೊ ಸಾಬ್ರ ಬಾಲನ ಕಟ್ ಮಾಡ್ಬೇಕು. ಅದು ಬಿಟ್ಟು ಸಾಬ್ರಿಗೆ ಮೀಸಲಾತಿ ಕೊಡ್ತಿರೊ ತೆಲುಗು ಬಾಬುನ…ಮತ್ತೆ ʼಅಲ್ಲಾ….ಅಲ್ಲಾʼ ಅಂತ ಭಜನೆ ಮಾಡೋ ಪಲ್ಟುನ ಹೆಗಲ ಮೇಲೆ ಹೊತ್ತು ಮೆರೆಸ್ತಿದ್ದೀಯ!”

“ಅದೆಲ್ಲ ನಾಟಕ…ನಿಮಗೆ ಗೊತ್ತಿರೋದೆ. ಎಲ್ರನ್ನೂ ತಬ್ಕೊಬೇಕು ಅಂತ ಅದೆಷ್ಟು ಬಾರಿ ನೀವೇ ಹೇಳಿದ್ದೀರ!”

“ಆಯ್ತು… ಆಯ್ತು. ಹಾಗೆ ಕುಟೀರದ ವತಿಯಿಂದ ದೀಕ್ಷೆ ಪಡೆದ ಚಡ್ಡಿ ಪಂಡಿತರನ್ನು ಉನ್ನತ ಹುದ್ದೆಗೆ ಲಾಂಗಿಟ್ಯುಡಿನಲ್ಲಿ ನೇರವಾಗಿ ಅಪಾಯಿಂಟ್ ಮಾಡ್ಬೇಕು. ಜಾರಿ ಮಾಡಬೇಕಾದ ಮನುವಿಕೃತಿ ಸನಾತನಿ ಅಜೆಂಡಾಗಳು ಸಾಕಷ್ಟಿದೆ”

“ಅದು ಲಾಂಗಿಟ್ಯುಡಿನಲಿ…ಆಗಲ್ಲ…ಲ್ಯಾಟರಲಿ ಮಾಡಬಹುದು”

“ಲ್ಯಾಟರಲ್…ಪರ್ಪೆಂಡಿಕ್ಯುಲರ್…ಯಾವುದೊ ಒಂದು. ಒಟ್ನಲ್ಲಿ ಮಾಡು. ಸದ್ಯಕ್ಕೆ ಹೊರಡು. ನಂಗೆ ಬ್ರೈನ್ ವಾಶಿಂಗ್ ಟೈಮಾಯ್ತು”

ಯಾವ ಆಸೆ ತೋರಿಸಿ ಪಲ್ಟುಕುಮಾರ, ತೆಲುಗುಬಾಬುರನ್ನು ಹೊಸ ಬಿಲ್ಲಿಗೆ ಒಪ್ಪಿಸೋದು ಅಂತ ನಮೋ ಯೋಚಿಸುತ್ತಿರ ಬೇಕಾದರೆ, ಅಪರಿಮಿತ ಕುತಂತ್ರಿ ಆಯೋಜಿಸಿದ್ದ ʼಸಕಲ ಗೋದಿ ಮೀಡಿಯಾ ಪೆಡಿಗ್ರೆ ಬಿಸ್ಕತ್ ಪಾರ್ಟಿʼ ಗೆ ತಡವಾಗುತ್ತಿರುವ ಬಗ್ಗೆ ಆಪ್ತಕಾರ್ಯದರ್ಶಿ ಸೂಚನೆ ನೀಡಿದ.

ವಿಶಾಲವಾದ ಕಾನ್ ಫರೆನ್ಸ್ ರೂಮಿನಲ್ಲಿ – ಬಕೆಟ್ ಗೊಸ್ವಾಮಿ, ತುತ್ತೂರಿ ಕುಮಾರಿ, ಬೆಇಜ್ಜತ್ ಶರ್ಮ, ಪಜಿತ್ ಅವನಪ್ಪನವರ್, ತಂಗಣ್ಣ, ಕುದೀರ್ ಕೌದರಿ…..ಸಕಲ ಗೋದಿ ಮೀಡಿಯಾದ ಮುಖ್ಯ ಆಂಕರ್ ಗಳು ನಮೋಬಾಬಾರ ಪಾದಗಳನ್ನು ಚುಂಬಿಸಿ, ಕುರ್ಚಿಗಳಲ್ಲಿ ಆಸೀನರಾದರು. ಅಪರಿಮಿತ ಕುತಂತ್ರಿ ಎಸೆದ ಬಿಸ್ಕತ್ ಗಳನ್ನು ಕ್ಯಾಚ್ ಹಿಡಿದು ಸವಿಯುತ್ತ ಆನಂದದಲ್ಲಿ ತೇಲಾಡುತ್ತಿರುವಾಗ, ಸಡನ್ನಾಗಿ ಅಪರಿಮಿತ ಕುತಂತ್ರಿ ಕುಪಿತನಾಗಿ “ನೀವೆಲ್ಲಾ ನಿಮ್ಮದೇ ಲೋಕದಲ್ಲಿ… ಹೊರ ಜಗತ್ತಿನ ಪರಿವೇ ಇಲ್ಲದೆ ಮೋಜು ಮಸ್ತಿ ಮಾಡ್ತಿದ್ದೀರ! ಸರ್ವೆ ರಿಪೋರ್ಟ್ ಬಂದಿದೆ. ನಿಮ್ಮ ಚಾನೆಲ್ ಗಳನ್ನ ಯಾರೂ ನೋಡ್ತಾ ಇಲ್ಲಾಂತ! ಅದರಲ್ಲೂ ನಮೋಬಾಬಾ ಸ್ಕ್ರೀನ್ ಮೇಲೆ ಕಂಡ ಕೂಡಲೇ ಟೀವಿ ಆಫ್ ಮಾಡ್ತಿದ್ದಾರಂತೆ! ಜನರು ರಾಗಾ…ರಾಗಾ ಅಂತಿದ್ದಾರೆ. ನೀವುಗಳು ಭೋಗ…ಭೋಗ ಅಂತಿದ್ದೀರ. ಜನ ನಮೋಭಜನೆ ಮಾಡ್ತಾ ಇಲ್ಲ? ನಿಮಗ್ಯಾಕೆ ಬಿಸ್ಕತ್ ಕೊಡ್ಬೇಕು?” ಎಂದು ಕಿರುಚಿದ್ದೇ, ಎಲ್ಲರ ಬಾಯಿಂದ ತಿಂದ ಬಿಸ್ಕತ್ ಹೊರ ಕಕ್ಕಿದವು.

“ಸ್ವಾಮಿಗಳೇ…ನಾವಾದ್ರೂ ಎಷ್ಟೂಂತ ಬೊಗಳೋದು? ನಮೋ ಅವರು ತುಂಬಾನಿಗೆ ಹೇಳಿ ಪುಗಸಟ್ಟೆ ಡೇಟಾ ಕೊಟ್ಟಾಗಿಂದ ಎಲ್ರೂ ಮೊಬೈಲ್, ಕಂಪ್ಯೂಟರಲ್ಲಿ ಬರೋ ಅರ್ಬನ್ ನಕ್ಸಲ್, ಟೆರರಿಸ್ಟ್ ಗಳ ನ್ಯೂಸ್ ನೋಡೋಕೆ ಮುಗಿ ಬಿದ್ದಿದ್ದಾರೆ. ಅವರೆಲ್ಲಾ ದೇಶದ್ರೋಹಿಗಳು, ಒಳಗಾಕಿ. ನಮ್ ಹೊಟ್ಟೆ ಮೇಲೆ ಬರೆ ಹಾಕ್ಬೇಡಿ” ಎಂದು ಗೋಗೆರೆದರು.

ಲ್ಯಾಟರಲ್ ಸನಾತನಿ ಎಂಟ್ರಿ, ಮುಸ್ಲಿಮ್ ಆಸ್ತಿ ಬಾಲ ಕಟ್ ಬಿಲ್ ಜೊತೆಗೆ ಆಂಟಿ ಅರ್ಬನ್ ನಕ್ಸಲ್ ಬ್ರಾಡ್ ಕಾಸ್ಟಿಂಗ್ ಬಿಲ್ಲನ್ನೂ ಒಟ್ಟಿಗೆ ತಂದರಾಯಿತು ಎಂದು ಅಪರಿಮಿತ ಕುತಂತ್ರಿ ಸಲಹೆ ಕೊಟ್ಟ. ಹಾಗೆ ಪಲ್ಟು, ಬಾಬುವನ್ನು ಯಾಮಾರಿಸಲು ʼಲಾಲಿಪಪ್ʼ ಐಡಿಯಾವನ್ನು ಕಿವಿಯಲ್ಲಿ ಸುರಿದಾಗ, ಮೂವತ್ತಾರು ಇಂಚಿಗೆ ಕುಗಿದ್ದ ಎದೆಯನ್ನು ಐವತ್ತಾರಕ್ಕೆ ಉಬ್ಬಿಸಿ ನಮೋ ಪ್ರಸನ್ನನಾದ.

ಲಾಲಿಪಪ್ ಆಸೆಗೆ ಜೊಲ್ಲು ಸುರಿಸುತ್ತ ಪಲ್ಟುಕುಮಾರ, ತೆಲುಗುಬಾಬು ಬಂದಾಗ ನಮೋ ಅವರನ್ನು ತಬ್ಬಿ, ಅಪ್ಪಿ ಮುದ್ದಾಡಿ ಬರಮಾಡಿಕೊಂಡ. ʼಇದ್ಯಾಕೊ ಅತಿಯಾಯಿತುʼ ಎಂದು ಪಲ್ಟು, ಬಾಬು ಮುಖಕ್ಕೆ ಮೆತ್ತಿದ್ದ ಎಂಜಲನ್ನು ಒರೆಸಿಕೊಂಡರು.

“ಪಲ್ಟು, ಬಾಬುಗಾರು…ಇದು ನಿಮಗೋಸ್ಕರ ಆರ್ಡರ್ ಮಾಡಿ ತರಿಸಿದ ಡೆಲಿಶಿಯಸ್ ಲಾಲಿಪಪ್!” ಎಂದು ಕೈಲಿಡಿದ ಚಿನ್ನಾರಿ ಪೇಪರ್ ಸುತ್ತಿಕೊಂಡ ವಿಶೇಷ ಪ್ಯಾಕೇಜನ್ನು ನಮೋ ತೋರಿಸಿದ. ಆತುರದಿಂದ ಅವರು ಪ್ಯಾಕೇಜನ್ನು ತೆಗೆದುಕೊಳ್ಳಲು ಕುರ್ಚಿಯಿಂದ ಎದ್ದಾಗ ನಮೋ ನಗುತ್ತ “ಅವಸರ ಬೇಡ…ಮಿತ್ರೋ. ಇದು ನಿಮಗಾಗಿಯೇ ಇರೋದು” ಎಂದು ಟೇಬಲ್ಲಿನ ಮೇಲಿಟ್ಟು “ಕೊಡ್ತೀನಿ. ಆದರೆ, ಅದಕ್ಕೂ ಮುಂಚೆ ಒಂದಷ್ಟು ಆಟ ಆಡೋಣ. ನನಗೂ ಇತ್ತೀಚಿಗೆ ಫೋಟೊ ಶೂಟ್ ಗಳಿಲ್ಲದೆ ಬೋರ್ ಆಗ್ತಿದೆ” ಎಂದಾಗ ನಮೋನ ಕಳ್ಳಾಟದ ವಾಸನೆ ಹಿಡಿದ ಪಲ್ಟು, ಬಾಬು ಪರಸ್ಪರ ಮುಖ ನೋಡಿಕೊಂಡರು.

ಸರಿ. ಆಪ್ತಕಾರ್ಯದರ್ಶಿ ನೆಲದಲ್ಲಿ ಚೌಕವನ್ನು ಬರೆದು, ಚೌಕಬಾರ ಆಡಲು ಕವಡೆಗಳನ್ನು ತಂದಿಟ್ಟ. ಕವಡೆಗಳನ್ನು ಚೆಲ್ಲುತ್ತ ನಾಲ್ವರು ಆಟವಾಡುವಾಗ, ಅವರನ್ನು ಸಂಪ್ರೀತಗೊಳಿಸಲು ಕುತಂತ್ರಿ ನಮೋ – ಅವಕಾಶ ಸಿಕ್ಕರೂ ಕಾಯಿಗಳನ್ನು ಹೊಡೆಯದೆ ಬೇಕಂತಲೇ ತಪ್ಪುತಪ್ಪಾಗಿ ನಡೆಸಿ ಆಟದಲ್ಲಿ ಹಿನ್ನೆಡೆ ಸಾಧಿಸುವುದನ್ನು ಪಲ್ಟು, ಬಾಬು ಗಮನಿಸಿದರು.

ಅಮರಾವತಿ, ಗುಂಟೂರ್ ಮೆಣಸಿನಕಾಯಿ, ಗಯಾ, ಬೋಜ್ ಪುರಿ ಅಂತೆಲ್ಲ ಹರಟೆ ಮಾತಿನ ಮಧ್ಯೆ – ಲ್ಯಾಟರಲ್ ಸನಾತನಿ ಎಂಟ್ರಿ, ಮುಸ್ಲಿಮ್ ಆಸ್ತಿ ಬಾಲ ಕಟ್ ಬಿಲ್, ಆಂಟಿ ಅರ್ಬನ್ ನಕ್ಸಲ್ ಬ್ರಾಡ್ ಕಾಸ್ಟಿಂಗ್ ಬಿಲ್ಲಿನ ಪ್ರಸ್ತಾಪವನ್ನು ನಮೋ ನವಿರಾಗಿ ಜೋಡಿಸಿದ. ʼಮುಸ್ಲಿಮ್ʼ ಪದ ಕಿವಿಗೆ ಬಿದ್ದದ್ದೇ ಪಲ್ಟು, ಬಾಬು ಕೈಕೊಡವಿಕೊಂಡು ಎದ್ದದ್ದು ನೋಡಿ ನಮೋ ಆತುರ ಪಟ್ಟೆನೆಂದು ಕೈಕೈ ಹಿಸುಕಿಕೊಂಡ.

“ಏಕೆ ಆಟ ಬೇಸರ ಬಂತಾ? ನೀವೇ ಗೆಲ್ತಿದ್ದೀರಿ”

“ಚೌಕಬಾರ ಮಕ್ಕಳಾಟ…ಐಸ್ ಪೈಸ್ ಆಡೋಣ, ನಾವಷ್ಟೇ! ಚೀಟಿಂಗ್ ಬೇಡ. ಚೇಲಾಗಳು, ಸೆಕ್ರೆಟರಿ, ಕಾವಲುಗಾರ – ಎಲ್ಲರನ್ನೂ ಹೊರಗೆ ಕಳಿಸಿ” ಎಂದ ತೆಲುಗುಬಾಬು, ಯಾರು ಮೊದಲು ಹುಡುಕೋದೆಂದು ನಿರ್ಧರಿಸಲು ಹಸ್ತದ ಮೇಲೆ ಹಸ್ತ ಇರಿಸಲು ಹೇಳಿದ. ಸೋತ ನಮೋ ಗೋಡೆಗೆ ಮುಖ ಮಾಡಿ ನೂರರವರೆಗೆ ಎಣಿಸುತ್ತ ನಿಂತ.

ಸಂಖ್ಯೆಗಳನ್ನು ಎಗರಿಸಿ “ತೊಂಭತ್ತೊಂಭತ್ತು…ನೂರು” ಎಂದು ಎಣಿಕೆ ಮುಗಿಸಿ ʼಎಲ್ರೂ ಬಚ್ಚಿಟ್ ಕೊಂಡ್ರಾ…ಹುಡುಕೋಕೆ ಬರ್ಲಾʼ ಅಂತ ಹುಡುಕುತ್ತ ಹೊರಟಾಗ ಪಲ್ಟುಕುಮಾರ, ತೆಲುಗುಬಾಬು ಎಲ್ಲೂ ಕಾಣದೆ ಮಂಗಮಾಯವಾಗಿದ್ದರು.

ಜನವಿರೋಧಿ, ಅಸಮಾನತೆ ಮೆತ್ತಿಕೊಂಡ, ಸೊಲ್ಲೆತ್ತುವ ಬಾಯಿಗೆ ಬೀಗ ಜಡಿಯುವ ಮತ್ಸರದ ನಮೋ ಬಿಟ್ಟ ಬಾಣದ ಬಿಲ್ಲುಗಳು ಜನಾಕ್ರೋಶಕ್ಕೆ ಸಿಕ್ಕು ನಪಾಸಾಗಿ ಮಕಾಡೆ ಮಲಗಿದವು.

ಚಂದ್ರಪ್ರಭ ಕಠಾರಿ
cpkatari@yahoo.com

ಇಂದು ಪ್ರಜ್ವಲ್‌ ರೇವಣ್ಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಎಸ್‌ಐಟಿ
ಹಾಸನ: ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಎಸ್‌ಐಟಿ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಿದ್ದು, ಎಸ್‌ಐಟಿ ಅಧಿಕಾರಿಗಳು ಇಂದು ಮಂಗಳವಾರ ಮತ್ತೊಮ್ಮೆ ಪ್ರಜ್ವಲ್ ರೇವಣ್ಣ ಕೋರ್ಟ್‌ ಗೆ ಹಾಜರುಪಡಿಸಲಿದ್ದಾರೆ.

ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣ, ಅತ್ಯಾಚಾರ ಪ್ರಕರಣ ಹಾಗೂ ಸಿಐಡಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಎಸ್ಐಟಿ ತನಿಖೆ ಮುಗಿದ ಹಿನ್ನೆಲೆ ಇಂದು ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು.

ಸಿಐಡಿಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣ‌ದ ಹೆಚ್ಚಿನ ತನಿಖೆಗಾಗಿ ಪ್ರಜ್ವಲ್ ರೇವಣ್ಣನನ್ನು ಮತ್ತೆ ಎಸ್‌ಐಟಿ ಕಸ್ಟಡಿಗೆ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕಸ್ಟಡಿಗೆ ಪಡೆಯಲು ಎಸ್ಐಟಿ ಕೋರ್ಟ್ ನಲ್ಲಿ ಸಿದ್ಧತೆ ನಡೆಸಿದೆ.

ಎರಡೆರಡು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದರೂ ಪೊಲೀಸರಿಗೆ ತಲೆ ಬಿಸಿ ತಪ್ಪಿಲ್ಲ. ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಬಲ ಸಾಕ್ಷಿಗಳ ಸಂಗ್ರಹಕ್ಕೆ ಎಸ್‌ಐಟಿ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಈವರೆಗೆ ಆರೋಪಿ ವಿರುದ್ಧದ ಎರಡು ಪ್ರಕರಣಗಳ ತನಿಖೆಯನ್ನು ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ.

ಒಂದು ಪ್ರಕರಣ ಮುಗಿದ ಬೆನ್ನಲ್ಲೇ ಮತ್ತೊಂದು ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರತಿಯೊಂದು ಪ್ರಕರಣದಲ್ಲಿ ಕಸ್ಟಡಿಗೆ ಪಡೆದು ಪ್ರತ್ಯೇಕವಾಗಿ ತನಿಖೆ ನಡೆಸಲಾಗುವುದು. ಇದೀಗ ಮತ್ತೊಂದು ಪ್ರಕರಣದಲ್ಲಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಎಸ್‌ಐಟಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಪ್ರಜ್ವಲ್ ಅವರನ್ನು ದೇಶಕ್ಕೆ ಕರೆತರಲು ಕೇಂದ್ರ ಸಿದ್ಧ, ಆದ್ರೆ ರಾಜ್ಯ ಸರ್ಕಾರ ಕತ್ತೆ ಕಾಯ್ತಿತ್ತಾ?: ಜೋಶಿ
ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ದೇಶಕ್ಕೆ ವಾಪಸ್‌ ಕರೆತರುವುದಕ್ಕಾಗಿ ಕೇಂದ್ರ ಸಹಕಾರ ನೀಡಲಿದೆ. ಆದರೆ, ರಾಜ್ಯ ಸರ್ಕಾರದ ಪ್ರತಿನಿಧಿಗಳು ಇಷ್ಟು ದಿನ ಕತ್ತೆ ಕಾಯುತ್ತಿದ್ದರೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಕ್ರೋಶವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ, ಕಾಂಗ್ರೆಸ್ ಪಕ್ಷವು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ; ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ” ಎಂದು ಕೇಂದ್ರ ಸಚಿವರು ಆರೋಪಿಸಿದರು.

ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ತ್ವರಿತ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡನೇ ಪತ್ರ ಬರೆದಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, “ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಇದೆ. ಇದುವರೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಗೃಹ ಸಚಿವ ಪರಮೇಶ್ವರ ನನ್ನ ಪ್ರಶ್ನೆಗೆ ಉತ್ತರಿಸಿಲ್ಲ ಎಂದು ದೂರಿದರು.

ಏಪ್ರಿಲ್ 21 ರಂದು ಪ್ರಜ್ವಲ್ ಇರುವಂಥ ಸ್ಪಷ್ಟ ಕ್ಲಿಪ್ಪಿಂಗ್ ಒಳಗೊಂಡ ಮೊದಲ ಪೆನ್ ಡ್ರೈವ್ ಹೊರಬಂದಿದೆ. ಪ್ರಜ್ವಲ್ ರೇವಣ್ಣ ಏಪ್ರಿಲ್ 27 ರಂದು ವಿದೇಶಕ್ಕೆ ತೆರಳಿದ್ದಾರೆ. ಈ ಏಳು ದಿನಗಳ ಕಾಲ ರಾಜ್ಯ ಸರ್ಕಾರದವರು ಕತ್ತೆಗಳನ್ನು ಕಾಯುತ್ತಿದ್ದರಾ?  ಏಕೆ ಎಫ್‌ಐಆರ್ ದಾಖಲಿಸಿ ಬಂಧಿಸಲಿಲ್ಲ ಎಂದು ಜೋಶಿ ಪ್ರಶ್ನಿಸಿದರು.

ಪ್ರಜ್ವಲ್ ಅವರನ್ನು ವಿದೇಶದಿಂದ ವಾಪಸ್ ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ಕಾನೂನು ಪ್ರಕಾರ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಿ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದರು.

“ಆದರೆ, ನಾವು ಸಿಎಂ ಅಥವಾ ರಾಜ್ಯ ಸರ್ಕಾರ ಪತ್ರ ಬರೆದ ತಕ್ಷಣ ಈ ವಿಷಯ ಇತ್ಯರ್ಥ ಮಾಡಬೇಕೆಂಬುದು ಸರಿಯೇ? ರಾಜ್ಯ ಸರ್ಕಾರ ಮೊದಲ ಹಂತದ ಚುನಾವಣೆ ಮುಗಿಯುವವರೆಗೆ ಅಂದರೆ ಏಪ್ರಿಲ್ 26ರವರೆಗೆ ಸುಮ್ಮನಿತ್ತು. ಒಕ್ಕಲಿಗರ ಮತಗಳಿಗಾಗಿ ಸುಮ್ಮನಿತ್ತು.  ಈಗ ಅವರು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದಾರೆ. ತನಿಖೆಗಿಂತ ಹೆಚ್ಚಾಗಿ ಈ ಪ್ರಕರಣದಲ್ಲಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎಂದು ಜೋಶಿ ಹೇಳಿದರು.

ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಮತ್ತು ಗೃಹ ಸಚಿವಾಲಯಗಳನ್ನು ಒತ್ತಾಯಿಸುವಂತೆ ಮುಖ್ಯಮಂತ್ರಿಗಳು ಮೇ 1 ರಂದು ಮೋದಿ ಅವರಿಗೆ ಪತ್ರ ಬರೆದಿದ್ದರು.

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ: ಎಚ್‌ಡಿ ರೇವಣ್ಣನಿಂದ ಸಂತ್ರಸ್ತೆಯ ಅಪಹರಣ
ಹಾಸನ ಅಶ್ಲೀಲ ವಿಡಿಯೋ ವೈರಲ್‌ ಪ್ರಕರಣಕ್ಕೆ ಕೊನೆಗೂ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದೂರು ಕೊಟ್ಟ ಮೇಲೆ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಈ ಮಧ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು, ಎಚ್‌ ಡಿ ರೇವಣ್ಣ ಹಾಗೂ ಸತೀಶ್‌ ಬಾಬಣ್ಣ ಮೇಲೆ ಸಂತ್ರಸ್ತೆಯನ್ನು ಅಪಹರಿಸಿದ ದೂರು ದಾಖಲಾಗಿದೆ. ಎಪ್ರಿಲ್‌ 29 ರಂದು ಈ ಕೃತ್ಯ ನಡೆದಿದ್ದು, ಕೆಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಕೆಆರ್‌ ನಗರದ ಹೆಬ್ಬಾಲುವಿನಲ್ಲಿ ಈ ಕೃತ್ಯ ನಡೆದಿದ್ದು, ರಾಜು ಎಂಬವರು ದೂರು ದಾಖಲಿಸಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯನ್ನು ಅಪಹರಿಸಲಾಗಿದೆ. ಈ ಮೂಲಕ ಇಡೀ ಪ್ರಕರಣಕ್ಕೆ ಸಿನಿಮೀಯ ತಿರುವ ಸಿಕ್ಕಿದೆ.