J&K – Peepal Media

ಸೌದಿ ಅರೇಬಿಯಾ: ಭಾರತೀಯ ಯಾತ್ರಿಕರಿಗೆ 52,000 ಹಜ್ ಸ್ಲಾಟ್‌ಗಳು ರದ್ದು- ವಿದೇಶಾಂಗ ಸಚಿವಾಲಯದ ಹಸ್ತಕ್ಷೇಪಕ್ಕೆ ಆಗ್ರಹ
ಸೌದಿ ಅರೇಬಿಯಾ ಖಾಸಗಿ ಪ್ರವಾಸಗಳ ಮೂಲಕ ಹಜ್ ಯಾತ್ರೆ ಕೈಗೊಳ್ಳುವ ಭಾರತೀಯರಿಗೆ ವಲಯ ಹಂಚಿಕೆಗಳನ್ನು ರದ್ದುಗೊಳಿಸಿದೆ ಎಂದು ವರದಿ ಹೊರ ಬಂದ ನಂತರ ಜಮ್ಮು ಮತ್ತು ಕಾಶ್ಮೀರದ ಪಕ್ಷಾತೀತ ನಾಯಕರು ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಕೋರಿದ್ದಾರೆ. ಇದರಿಂದಾಗಿ 52,000 ಕ್ಕೂ ಹೆಚ್ಚು ಯಾತ್ರಿಕರು ಸಂಕಷ್ಟದಲ್ಲಿದ್ದಾರೆ.

ಈ ಬೆಳವಣಿಗೆ ತೀವ್ರ ಕಳವಳಕಾರಿ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೌದಿ ಅರೇಬಿಯಾ ಅಧಿಕಾರಿಗಳೊಂದಿಗೆ ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಲು ಮಾತುಕತೆ ನಡೆಸುವಂತೆ ಒತ್ತಾಯಿಸಿದರು.

ಈ ವರ್ಷದ ಹಜ್ ಯಾತ್ರೆಗೆ ಹಲವಾರು ಭಾರತೀಯರು ಈಗಾಗಲೇ ಪಾವತಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಅಬ್ದುಲ್ಲಾ ಹೇಳಿದರು.

ಈ ವಿಷಯದ ಬಗ್ಗೆ ಸೌದಿ ಅರೇಬಿಯಾ ನಾಯಕತ್ವದೊಂದಿಗೆ ಮಾತುಕತೆ ನಡೆಸುವಂತೆ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

“ನಾನು ಪ್ರಧಾನಿಯವರನ್ನು ಒತ್ತಾಯಿಸಲು ಬಯಸುತ್ತೇನೆ… ಅವರು ಸೌದಿ ಅರೇಬಿಯಾಕ್ಕೆ ಆತ್ಮೀಯರಾಗಿರುವುದರಿಂದ, ಅವರು ಅವರನ್ನು ಒತ್ತಾಯಿಸಬೇಕು… ಈ ವಿಷಯವು ಸಾವಿರಾರು ಜನರಿಗೆ ಸಂಬಂಧಿಸಿದೆ. ಅಲ್ಲಿಗೆ ಹೋಗುವುದು ಪ್ರತಿಯೊಬ್ಬ ಮುಸ್ಲಿಮರ ಕನಸು,” ಎಂದು ಅವರು ಹೇಳಿದರು.

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ವಿದೇಶಾಂಗ ಸಚಿವಾಲಯದ ಹಸ್ತಕ್ಷೇಪವನ್ನು ಕೋರಿದರು ಮತ್ತು ಸೌದಿ ಅರೇಬಿಯಾದ “ಹಠಾತ್ ನಿರ್ಧಾರ” ದೇಶಾದ್ಯಂತ ಯಾತ್ರಿಕರು ಮತ್ತು ಪ್ರವಾಸ ನಿರ್ವಾಹಕರಿಗೆ ಅಪಾರ ತೊಂದರೆ ಉಂಟುಮಾಡಿದೆ ಎಂದು ಹೇಳಿದರು.

ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ತೀರ್ಥಯಾತ್ರೆ ಭಾರತದಿಂದ ಭಕ್ತರನ್ನು ಕರೆತರುವ ಖಾಸಗಿ ಪ್ರವಾಸ ನಿರ್ವಾಹಕರಿಗೆ ನೀಡಲಾಗಿದ್ದ ಎರಡು ವಲಯಗಳನ್ನು ರದ್ದುಗೊಳಿಸಿದೆ ಮತ್ತು ಈಗ ಇನ್ನೂ ಮೂರು ವಲಯಗಳು “ಪಾವತಿ ಇಲ್ಲ” ಆಯ್ಕೆಯನ್ನು ತೋರಿಸುತ್ತವೆ ಎಂದು ಟೈಮ್ಸ್ ಆಫ್ ಇಂಡಿಯಾ ಮಾರ್ಚ್ 22 ರಂದು ವರದಿ ಮಾಡಿದೆ.

VIDEO | On Saudi Arabia slashing Indian private Hajj quota by 80 per cent, National Conference president Farooq Abdullah says, "I would like to urge the prime minister… Since he is close to Saudi Arabia, he should urge them… This issue is related to thousands of people. It is… pic.twitter.com/IKJYqzNtCk
— Press Trust of India (@PTI_News) April 14, 2025

ಈ ಕಾರಣದಿಂದಾಗಿ, ಖಾಸಗಿ ಪ್ರವಾಸ ನಿರ್ವಾಹಕರೊಂದಿಗೆ ಪ್ರಯಾಣ ಕೈಗೊಳ್ಳುವ ಭಾರತೀಯರ ಹಜ್ ಯಾತ್ರೆ ಈ ವರ್ಷ ರದ್ದಾಗಬಹುದು ಎಂದು ನಿರ್ವಾಹಕರು ಹೇಳಿರುವುದಾಗಿ ಪತ್ರಿಕೆ ಉಲ್ಲೇಖಿಸಿದೆ.

ಹಜ್ ಯಾತ್ರೆಯು ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ, ಇದನ್ನು ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಪೂರೈಸಬೇಕೆಂದು ಬಯಸುತ್ತಾರೆ. ಇಸ್ಲಾಮಿಕ್ ಚಂದ್ರ ಕ್ಯಾಲೆಂಡರ್ ಪ್ರಕಾರ ಹಜ್‌ನ ದಿನಾಂಕಗಳನ್ನು ಚಂದ್ರನ ಸ್ಥಾನದಿಂದ ನಿರ್ಧರಿಸಲಾಗುತ್ತದೆ. ಈ ಆಚರಣೆಯು ಹಲವಾರು ದಿನಗಳವರೆಗೆ ಇರುತ್ತದೆ ಮತ್ತು ಮೆಕ್ಕಾದಲ್ಲಿ ಕೊನೆಗೊಳ್ಳುತ್ತದೆ.

ಈ ವರ್ಷ, ಚಂದ್ರನ ಸ್ಥಾನವನ್ನು ಅವಲಂಬಿಸಿ, ತೀರ್ಥಯಾತ್ರೆ ಜೂನ್ 6 ರಂದು ಪ್ರಾರಂಭವಾಗಿ ಜೂನ್ 11 ರಂದು ಮುಕ್ತಾಯಗೊಳ್ಳಲಿದೆ.

ಸೌದಿ ಅರೇಬಿಯಾ ವಿವಿಧ ದೇಶಗಳ ಮುಸ್ಲಿಂ ಜನಸಂಖ್ಯೆಯನ್ನು ಆಧರಿಸಿ ಹಜ್ ಕೋಟಾಗಳನ್ನು ನಿಗದಿಪಡಿಸುತ್ತದೆ.

ಭಾರತೀಯ ಯಾತ್ರಿಕರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಶಾಸನಬದ್ಧ ಸಂಸ್ಥೆಯಾದ ಭಾರತದ ಹಜ್ ಸಮಿತಿಯ ಮೂಲಕ ಅಥವಾ ಹಜ್ ಗ್ರೂಪ್ ಆರ್ಗನೈಸರ್ಸ್ ಎಂದು ಕರೆಯಲ್ಪಡುವ ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಾರೆ .

ಈ ವರ್ಷ, ಭಾರತದ 1.75 ಲಕ್ಷ ಯಾತ್ರಿಕರ ಕೋಟಾದಲ್ಲಿ, 52,500 ಯಾತ್ರಿಕರು ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಮೆಕ್ಕಾಗೆ ಪ್ರಯಾಣಿಸಲಿದ್ದಾರೆ, ಉಳಿದವರು ಭಾರತೀಯ ಹಜ್ ಸಮಿತಿಯ ಮೂಲಕ ಹಾಗೆ ಮಾಡಲಿದ್ದಾರೆ.

ಸೌದಿ ಅರೇಬಿಯಾದ ಪ್ರವಾಸೋದ್ಯಮ ಸಚಿವಾಲಯವು ಈ ಹಿಂದೆ ಅಧಿಕೃತವಾದ ಹಜ್ ಪರವಾನಗಿ ಇಲ್ಲದೆ ಮೆಕ್ಕಾ ಪ್ರವೇಶಿಸಲು ಪ್ರಯತ್ನಿಸುವ ನಾಗರಿಕ, ನಿವಾಸಿ ಅಥವಾ ಸಂದರ್ಶಕ ಯಾರಿಗಾದರೂ 10,000 ಸೌದಿ ರಿಯಾಲ್ ಅಥವಾ 2.27 ಲಕ್ಷ ರೂ.ಗಿಂತ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ಘೋಷಿಸಿತ್ತು.

ಧಾರ್ಮಿಕ ಯಾತ್ರೆಗೆ ಸರಿಯಾದ ವೀಸಾವನ್ನು ಪಡೆಯಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ ಮತ್ತು ಪಾಲಿಸದಿದ್ದಕ್ಕಾಗಿ ಕಾನೂನು ದಂಡಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಬಿಸಿಲಿನಂತಹ ಸಮಸ್ಯೆಗಳಿಂದ 2024 ರ ಹಜ್ ಯಾತ್ರೆಯಲ್ಲಿ ಕನಿಷ್ಠ 900 ಯಾತ್ರಿಕರು ಸಾವನ್ನಪ್ಪಿದರು.

ಕಾಶ್ಮೀರದ ಟ್ರಾಲ್‌ನಲ್ಲಿ ಉಗ್ರರ ದಾಳಿ- ಯೋಧ ಮುಷ್ತಾಕ್ ಸೋಫಿ ಗಾಯ
ಶ್ರೀನಗರ : ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಕೆಲ ಗಂಟೆಗಳ ನಂತರ ಡಿಸೆಂಬರ್ 4, ಬುಧವಾರ ಸಂಜೆ ದಕ್ಷಿಣ ಕಾಶ್ಮೀರದ ತ್ರಾಲ್ ಪ್ರದೇಶದಲ್ಲಿ ಸೇನಾ ಯೋಧನೊಬ್ಬರು ಶಂಕಿತ ಉಗ್ರರ ಗುಂಡಿಗೆ ಗಾಯಗೊಂಡಿದ್ದಾರೆ.

ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಖಾನಗುಂಡ್ ಗ್ರಾಮದ ನಿವಾಸಿ ಡೆಲೈರ್ ಮುಷ್ತಾಕ್ ಸೋಫಿ ಎಂದು ಗುರುತಿಸಲಾಗಿರು ಈ ಯೋಧ ತಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ರಜೆಯ ಮೇಲೆ ಇತ್ತೀಚೆಗೆ ಮನೆಗೆ ಬಂದಿದ್ದರು.

ಬುಧವಾರ ಸಂಜೆ ಸೋಫಿಯವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಮನೆಯ ಬಳಿ ಶಂಕಿತ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

“ಸಂತ್ರಸ್ತರನ್ನು ತಕ್ಷಣವೇ ಸ್ಥಳೀಯರ ಸಹಾಯದಿಂದ ಪೊಲೀಸರು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದರು. ಅವರ ಬಲಗಾಲಿಗೆ ಎರಡು ಗುಂಡುಗಳು ಬಿದ್ದಿವೆ, ಅವರ ಸ್ಥಿತಿ ಸದ್ಯ ಸ್ಥಿರವಾಗಿದೆ, ದುಷ್ಕರ್ಮಿಗಳನ್ನು ಹಿಡಿಯಲು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಗಾಯಗೊಂಡ ಯೋಧನನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಟ್ರಾಲ್ ಉಪಜಿಲ್ಲಾ ಆಸ್ಪತ್ರೆಯ ಬ್ಲಾಕ್ ಮೆಡಿಕಲ್ ಆಫೀಸರ್ ಡಾ.ಜಹೂರ್ ಅಹ್ಮದ್ ಭಟ್ ತಿಳಿಸಿದ್ದಾರೆ. ಸೋಫಿ ಅವರು ಟೆರಿಟೋರಿಯಲ್ ಆರ್ಮಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರು ಉತ್ತರ ಕಾಶ್ಮೀರದ ಪಟ್ಟನ್‌ನಲ್ಲಿ 29 ರಾಷ್ಟ್ರೀಯ ರೈಫಲ್ಸ್‌ನೊಂದಿಗೆ ನಿಯೋಜಿಸಲ್ಪಟ್ಟಿದ್ದಾರೆ.

ಕಾಶ್ಮೀರ ಸ್ಟ್ರೈಕರ್ಸ್ ಎಂಬ ಹೊಸ ಉಗ್ರಗಾಮಿ ಗುಂಪು, ಕಳೆದ ಎರಡು ತಿಂಗಳಲ್ಲಿ ಸ್ಥಳೀಯ ಸೈನಿಕನನ್ನು ಗುರಿಯಾಗಿಸಿಕೊಂಡು ನಡೆಸಿದ ಈ ಎರಡನೇ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಅಕ್ಟೋಬರ್ 8 ರಂದು ದಕ್ಷಿಣ ಕಾಶ್ಮೀರದ ಕೋಕರ್‌ನಾಗ್‌ನಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಟೆರಿಟೋರಿಯಲ್ ಆರ್ಮಿಯ ರೈಫಲ್‌ಮನ್‌ನನ್ನು ಶಂಕಿತ ಉಗ್ರರು ಅಪಹರಿಸಿ ಕೊಂದರು.

ಸೇನಾ ಶಿಬಿರದ ಮೇಲೆ ಗ್ರೆನೇಡ್‌ ದಾಳಿ

ಜಮ್ಮುವಿನ ಪಿರ್ ಪಂಜಾಲ್ ಪ್ರದೇಶದ ಪೂಂಚ್ ಜಿಲ್ಲೆಯ ಸೇನಾ ಪೋಸ್ಟ್‌ನಲ್ಲಿ ಶಂಕಿತ ಉಗ್ರರು ಗ್ರೆನೇಡ್‌ಗಳನ್ನು ಎಸೆದ ಕೆಲವೇ ಗಂಟೆಗಳ ನಂತರ ತ್ರಾಲ್‌ನಲ್ಲಿ ದಾಳಿ ನಡೆದಿದೆ, ಆದರೆ ಯಾವುದೇ ಹಾನಿಯಾಗಲಿಲ್ಲ.

ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪೂಂಚ್‌ನ ಸುರನ್‌ಕೋಟೆ ಪ್ರದೇಶದಲ್ಲಿನ ಸೇನಾ ಶಿಬಿರದ ಹಿಂಭಾಗದ ಪೋಸ್ಟ್‌ನಲ್ಲಿ ಎರಡು ಗ್ರೆನೇಡ್‌ಗಳನ್ನು ಲಾಬ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಗ್ರೆನೇಡ್‌ಗಳಲ್ಲಿ ಒಂದು ದೊಡ್ಡ ಸದ್ದಿನಿಂದ ಸ್ಫೋಟಗೊಂಡರೂ ಯಾವುದೇ ಹಾನಿಯಾಗಲಿಲ್ಲ, ಎರಡನೆಯದು ಸ್ಫೋಟಗೊಳ್ಳದೆ ಉಳಿದಿದೆ, ನಂತರ ಅದನ್ನು ಬಾಂಬ್ ನಿಷ್ಕ್ರಿಯ ದಳದಿಂದ ನಿಷ್ಕ್ರಿಯಗೊಳಿಸಲಾಯಿತು.

ಅಧಿಕಾರಿಗಳ ಪ್ರಕಾರ, ಸೇನಾ ಶಿಬಿರದ ಸುತ್ತುಗೋಡೆಯ ಬಳಿ ಗ್ರೆನೇಡ್‌ಗಳಲ್ಲಿ ಒಂದರ ಸೇಫ್ಟಿ ಪಿನ್ ಪತ್ತೆಯಾಗಿದೆ, ನಂತರ ಉಗ್ರರನ್ನು ಪತ್ತೆಹಚ್ಚಲು ಸೇನೆ ಮತ್ತು ಪೊಲೀಸರು ಭಾರಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ದ ಸಂಬಂಧಿ ಸಂಘಟನೆ ಎಂದು ಅಧಿಕಾರಿಗಳು ನಂಬಿರುವ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಉಗ್ರನೊಬ್ಬ ಶ್ರೀನಗರದ ಹೊರವಲಯದಲ್ಲಿರುವ ಹರ್ವಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಒಂದು ದಿನದ ನಂತರ ಬುಧವಾರದ ದಾಳಿಗಳು ನಡೆದಿವೆ.

ಪೊಲೀಸರ ಪ್ರಕಾರ, ಜುನೈದ್ ಅಹ್ಮದ್ ಭಟ್ ಎಂದು ಗುರುತಿಸಲಾಗಿರುವ ಉಗ್ರಗಾಮಿ ಎಲ್‌ಇಟಿಯ (LeT) ಉನ್ನತ ಕಮಾಂಡರ್ ಮತ್ತು ಗಂದರ್‌ಬಲ್‌ ಜಿಲ್ಲೆಯ ಗಗಂಗೀರ್ ಪ್ರದೇಶದ ಆಪ್ಕೊ ಇನ್‌ಫ್ರಾ ಕನ್‌ಸ್ಟ್ರಕ್ಷನ್ ಕಂಪನಿಯ ಬೇಸ್ ಮೇಲೆ ಅಕ್ಟೋಬರ್‌ನಲ್ಲಿ ನಡೆದ ದಾಳಿ ಮಾಡಿದ ನಂತರ ವೈದ್ಯರು ಸೇರಿದಂತೆ ಏಳು ಕಾರ್ಮಿಕರನ್ನು ಕೊಂದ ಸ್ಕ್ವಾಡ್‌ನ ಇಬ್ಬರು ಸದಸ್ಯರಲ್ಲಿ ಒಬ್ಬರು.

ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಆಯಕಟ್ಟಿನ ಝಡ್-ಮೋರ್ಹ್ ಸುರಂಗವನ್ನು ನಿರ್ಮಿಸುತ್ತಿರುವ ಕಂಪನಿಯ ಕಾರ್ಮಿಕರಿಗೆ ರಾತ್ರಿಯ ಉಳಿದುಕೊಳ್ಳಲು ನೀಡಿದ್ದ ಬೇಸ್‌ನಲ್ಲಿ ವಾಸಿಸುವ ಕ್ವಾರ್ಟರ್‌ನಲ್ಲಿ ರೈಫಲ್ ಹಿಡಿದುಕೊಂಡು ಓಡಾಡುತ್ತಿರುವ ಜುನೈದ್ ಅಹ್ಮದ್ ಭಟ್  ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ.

ಹರ್ವಾನ್ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಕನಿಷ್ಠ ಒಂದರಿಂದ ಇಬ್ಬರು ಉಗ್ರರು ಅಡಗಿಕೊಂಡಿದ್ದಾರೆ ಎಂದು ನಂಬಲಾಗಿದೆ, ಅಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ದಟ್ಟವಾದ ಕಾಡುಗಳು ಮತ್ತು ಪೊದೆಗಳು ಇರುವ ಕಾರಣ, ಯಾವುದೇ ಹಾನಿ ನಡೆಯದಂತೆ ತಡೆಗಟ್ಟಲು ಭದ್ರತಾ ಪಡೆಗಳು ಎಚ್ಚರಿಕೆಯಿಂದ ಕಾರ್ಯಾಚರಣೆಯನ್ನು ಮುಂದುವರೆಸುತ್ತಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ಕನಿಷ್ಠ 63 ಉಗ್ರರನ್ನು ಹೊಡೆದುರುಳಿಸಲಾಗಿದೆ, ಅಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಂಗೆ-ಸಂಬಂಧಿತ ಹಿಂಸಾಚಾರವು ತೀವ್ರ ಏರಿಕೆಗೆ ಸಾಕ್ಷಿಯಾಗಿದೆ. 2024 ರಲ್ಲಿ ಕನಿಷ್ಠ 31 ನಾಗರಿಕರು ಸಾವನ್ನಪ್ಪಿದ್ದಾರೆ, ಇದು ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು.

ಮೊದಲು ಕಾಶ್ಮೀರ ಕಣಿವೆಗೆ ಮಾತ್ರ ಸೀಮಿತವಾಗಿದ್ದ ಹೋರಾಟ ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ ಜಮ್ಮು ಪ್ರದೇಶಕ್ಕೂ ಹರಡಿದೆ. ಅಧಿಕೃತ ಮಾಹಿತಿಯ ಪ್ರಕಾರ, ಜಮ್ಮುವಿನ 10 ಜಿಲ್ಲೆಗಳಲ್ಲಿ  ಈ ವರ್ಷ ಎಂಟು ಉಗ್ರಗಾಮಿ ದಾಳಿಗೆ ಸಾಕ್ಷಿಯಾಗಿದೆ, ಇದರಲ್ಲಿ ಭದ್ರತಾ ಸಿಬ್ಬಂದಿ ಮತ್ತು ಯಾತ್ರಿಗಳು ಸೇರಿದಂತೆ ಅನೇಕ ನಾಗರಿಕರು ಹತರಾಗಿದ್ದಾರೆ.

ಪೂಂಛ್ ನಲ್ಲಿ ಸೈನಿಕರಿಂದಲೇ ನಾಗರೀಕರ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮೂವರು ನಾಗರಿಕರಿಗೆ ಚಿತ್ರಹಿಂಸೆ ನೀಡಿ ಥಳಿಸಿರುವ ವೀಡಿಯೋ ವೈರಲ್ ಆಗುತ್ತಿದೆ. ಮೃತರನ್ನು ಅವರ ಗ್ರಾಮದ ಸರಪಂಚ್ ಮತ್ತು ಇಬ್ಬರ ಸಂಬಂಧಿಕರು ಗುರುತಿಸಿದ್ದು, ಹಿಂಸಿದ ಸೈನಿಕರನ್ನು ಗುರುತಿಸಲಿಲ್ಲ.

ಸಫೀರ್ ಹುಸೇನ್ (48), ಮೊಹಮ್ಮದ್ ಶೋಕತ್ (28) ಮತ್ತು ಶಬ್ಬೀರ್ ಅಹ್ಮದ್ (25) ಪ್ರಾಣ ಭಿಕ್ಷೆಗಾಗಿ ಅಂಗಲಾಚುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಈ ಘಟನೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಕ್ರೋಶ ವ್ಯಕ್ತವಾಗಿದೆ.

https://twitter.com/Silly12120/status/1738493050958078311/video/1

ಉಗ್ರರ ಜೊತೆಗಿನ ಭೀಕರ ಗುಂಡಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಈ ಘಟನೆಗೆ ಯಅರು ಕಾರಣ ಎಂಬುದನ್ನು ಸೇನೆಯಾಗಲೀ, ಜಮ್ಮು-ಕಾಶ್ಮೀರದ ಆಡಳಿತವಾಗಲೀ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಈ ಹಿನ್ನಲೆಯಲ್ಲಿ ಸ್ಥಳೀಯರನ್ನು ಕಸ್ಟಡಿಗೆ ತೆಗೆದುಕೊಂಡು ಕೊಲ್ಲಲಾಗಿದೆ ಎಂದು ಸೇನೆಯ ಮೇಲೆ ಆರೋಪ ಮಾಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ವೀಡಿಯೋವೊಂದನ್ನು ಹರಿಯಬಿಡಲಾಗಿದೆ.

ಕೇಂದ್ರಾಡಳಿತ ಪ್ರದೇಶದ ಆಡಳಿತವು ಕೇಂದ್ರ ಗೃಹ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಬರುವುದರಿಂದ ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಉದ್ಯೋಗದ ಬರವಸೆಯನ್ನೂ ನೀಡಲಾಗಿದೆ.

However, the death of three civilians was reported on 22 Dec 2023 in Baffliaz of Poonch district. The medico-legal formalities were conducted and legal action in this matter has been initiated by the appropriate authority.

(2/4) pic.twitter.com/1kTuHNdysE
— Counter Disinformation Centre (@JKCDC_) December 24, 2023

ಭಾನುವಾರ ರಾತ್ರಿ, ಭಾರತೀಯ ದಂಡ ಸಂಹಿತೆಯ (ಕೊಲೆ) ಸೆಕ್ಷನ್ 302 ರ ಅಡಿಯಲ್ಲಿ ಜೆ & ಕೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
48-ರಾಷ್ಟ್ರೀಯ ರೈಫಲ್ಸ್ನ ಸೈನಿಕರಿಂದ ಚಿತ್ರಹಿಂಸೆಗೊಳಗಾಗಿ ಸಾವನ್ನಪ್ಪಿರುವ ಇವರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಿದಾಗಿದೆ. ಸದ್ಯ ಪೂಂಚ್ನ ಟೋಪಾ ಪೀರ್ ಗ್ರಾಮಕ್ಕೆ ಅಕ್ಷರಶಃ ಬೀಗ ಜಡಿಯಲಾಗಿದ್ದು, ಮಿಲಿಟರಿ ಪಡೆಗಳಿಂದ ತುಂಬಿ ಹೋಗಿದೆ ಹಾಗೂ ಇಂಟರ್ನೆಟ್ ಸ್ಥಗಿತಗೊಂಡಿದೆ.

ಮೃತರ ಮನೆಗಳನ್ನು ಸೇನೆ ಸುತ್ತುವರಿದಿರುವುದರಿಂದ ಗ್ರಾಮಸ್ಥರಿಗೆ ಅಂತಿಮ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮದ ಸರಪಂಚ್ ಅಹ್ಮದ್ ಹೇಳಿಕೆಯನ್ನು ದಿ ವೈರ್ ವರದಿ ಮಾಡಿದೆ.
ಮೃತ ನಾಗರೀಕ ಮೊಹಮ್ಮದ್ ಶಬ್ಬೀರ್ ಅವರ ತಂದೆ ವಾಲಿ ಮೊಹಮ್ಮದ್ ಅವರು ತಮ್ಮ ಮಗನ ಮೃತ ದೇಹವನ್ನು ನೋಡಿ ಮತಿ ಕಳೆದುಕೊಳ್ಳುತ್ತಿದ್ದು, “ಅವರು ನನ್ನ ಸುಂದರ ಮಗನನ್ನು ಹೊಲಿದು ಈಗ ಒಂದು ದೇಹವನ್ನಾಗಿ ಮಾಡಿದ್ದಾರೆ. ನನಗೆ 60 ವರ್ಷ, ನನ್ನ 27 ವರ್ಷದ ಮಗನ ದೇಹದಾದ್ಯಂತ ಹೊಲಿಗೆ ಹಾಕಲಾಗಿದೆ. ಅವನ ತಲೆ ಮತ್ತು ಎದೆಗೂ ಹೊಲಿಗೆ ಹಾಕಲಾಗಿದೆ. ಶರೀರದ ತುಂಬಾ ವಿದ್ಯುತ್ ಶಾಕ್ ನೀಡಿರುವ ಗುರುತುಗಳಿವೆ,” ಎಂದು ಹೇಳಿರುವುದು ದಿ ವೈರ್ನಲ್ಲಿ ವರದಿಯಾಗಿದೆ.

ಮೊಹಮ್ಮದ್ ಸ್ವತಃ 27-ರಾಷ್ಟ್ರೀಯ ರೈಫಲ್ಸ್ ಮತ್ತು 16-ರಾಷ್ಟ್ರೀಯ ರೈಫಲ್ಸ್ನಲ್ಲಿ ಪೋರ್ಟರ್ ಆಗಿ ಕೆಲಸ ಮಾಡಿದ್ದವರು. ಮಗ ಶಬ್ಬೀರ್ ಕೂಡ ಸೇನೆಯಲ್ಲಿ ಪೋರ್ಟರ್ ಆಗಿದ್ದರು.

ಕ್ಯಾಂಪಿಗೆ ಬರುವಂತೆ ಫೋನ್ ಮಾಡಿ ಕರೆದು ತಮ್ಮದೇ ನೌಕರನನ್ನು ಏಕೆ ವಿಚಾರಣೆಗೆ ಕರೆಯುತ್ತಾರೆ? ನಾವು ಅವರೊಂದಿಗೆ ಕೆಲಸ ಮಾಡಿದ್ದೇವೆ. ಗಡಿಯಲ್ಲಿ ಅವರಿಗೆ ಬೆಂಬಲವಾಗಿದೆ ನಿಂತಿದ್ದೇವೆ. ಅದಕ್ಕಾಗಿ ಸಿಕ್ಕ ಪ್ರತಿಫಲ ಇದು,” ಎಂದು ತಂದೆ ಮೊಹಮ್ಮದ್ ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ಆಡಳಿತ ನಾಗರೀಕರ ಈ ಸಾವಿಗೆ ಕಾರಣವನ್ನು ನಿರ್ದಿಷ್ಟಪಡಿಸಿಲ್ಲ. ಆದರೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಪರಿಹಾರವನ್ನು ಘೋಷಿಸಿದೆ.

However, the death of three civilians was reported on 22 Dec 2023 in Baffliaz of Poonch district. The medico-legal formalities were conducted and legal action in this matter has been initiated by the appropriate authority.

(2/4) pic.twitter.com/1kTuHNdysE
— Counter Disinformation Centre (@JKCDC_) December 24, 2023

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಮ್ಮು&ಕಾಶ್ಮೀರ, “ಪೂಂಚ್ ಜಿಲ್ಲೆಯ ಬಫ್ಲಿಯಾಜ್ನಲ್ಲಿ ನಿನ್ನೆ ಮೂವರು ನಾಗರಿಕರು ಸಾವನ್ನಪ್ಪಿರುವುದು ವರದಿಯಾಗಿದೆ. ವೈದ್ಯಕೀಯ ಕಾನೂನು ಫರ್ಮಾಲಿಟಿಗಳನ್ನು ನಡೆಸಲಾಗಿದೆ ಮತ್ತು ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು. ಮೃತರಿಗೆ ಸರ್ಕಾರ ಪರಿಹಾರವನ್ನು ಘೋಷಿಸಿದೆ. ಸರ್ಕಾರವು ಪ್ರತಿ ಮೃತರ ಮುಂದಿನ ಸಂಬಂಧಿಕರಿಗೆ ಸಹಾನುಭೂತಿಯ ಉದ್ಯೋಗಗಳನ್ನು ಘೋಷಿಸಿದೆ,” ಎಂದು X ನಲ್ಲಿ ತಿಳಿಸಿದೆ.

“ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ಶಿಕ್ಷೆಗೆ ಒಳಪಡಿಸಲು ಆಗ್ರಹಿಸುವುದು ಕೂಡಾ ಅರ್ಥಹೀನವೆಂದು ತೋರುತ್ತದೆ. ತಪ್ಪಿತಸ್ಥರು ಶಿಕ್ಷೆಗೆ ಒಳಪಡದೆ, ಅವರನ್ನು ಸ್ಕಾಟ್-ಫ್ರೀಯಾಗಿ ಬಿಡುಗಡೆ ಮಾಡುತ್ತಾರೆ. ‘ದಿಲ್ ಕಿ ದೂರಿ ಅಥವಾ ದಿಲ್ಲಿ ಸೆ ದೂರಿʼ ಯನ್ನು ತೊಡೆದು ಹಾಕುವುದು ಃಈಗಲ್ಲ,” ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಜುಲೈ 2020ರಲ್ಲಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರನ್ನು ಕೊಂದ ಆರೋಪಿ ಸೇನಾ ಕ್ಯಾಪ್ಟನ್ ಒಬ್ಬರನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವುದನ್ನು ಉಲ್ಲೇಖಿಸಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಕೂಡ ಪೂಂಚ್ ಹತ್ಯೆಯನ್ನು ಖಂಡಿಸಿದ್ದು, “ಇದು ಬೇರೆ ಯಾವುದೇ ಸರ್ಕಾರದ ಅಡಿಯಲ್ಲಿ ನಡೆದಿದ್ದರೆ, ಗೋದಿ ಮೀಡಿಯಾ ಪ್ರಶ್ನೆ ಮಾಡುತ್ತಿತ್ತು. ಹದಿನೈದು ಜನರನ್ನು ಅವರ ಮನೆಗಳಿಂದ ಎತ್ತಾಕೊಂಡು ಹೋಗಿ ಹಿಂಸೆ ನೀಡಲಾಗಿದೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸೈನಿಕರೂ, ಸಾಮಾನ್ಯ ಜನರೂ ಸುರಕ್ಷಿತವಾಗಿಲ್ಲದ ಈ ‘ಖುಶಾಲ್ ಕಾಶ್ಮೀರ’ ಅಥವಾ ‘ನಯಾ ಕಾಶ್ಮೀರ ಹೇಗಿದೆ?” ಎಂದು ಟ್ವೀಟ್ನಲ್ಲಿ ಟೀಕಿಸಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಕೂಡ “ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನೆಯ ವಶದಲ್ಲಿದ್ದ ಮೂವರು ನಾಗರಿಕರನ್ನು ಕ್ರೂರವಾಗಿ ಹತ್ಯೆಗೈದಿರುವುದನ್ನು” ಖಂಡಿಸಿದ್ದು, ಮೃತರ ಕುಟುಂಬಗಳಿಗೆ ಕೇವಲ ಪರಿಹಾರ ಘೋಷಿಸಿದರೆ ಸಾಕಾಗುವುದಿಲ್ಲ ಶೀಘ್ರ ತನಿಖೆಯಾಗಬೇಕು ಮತ್ತು ಹೊಣೆಗಾರರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ. “ಇಂತಹ ಭಯವಿಲ್ಲದೆ ನಡೆಸುವ ಕೃತ್ಯಗಳಿಂದ ದೀರ್ಘಕಾಲದಿಂದ ಬಳಲುತ್ತಿರುವ ಜಮ್ಮು&ಕಾಶ್ಮೀರದ ಜನತೆ, ಈ ಘಟನೆಯಲ್ಲಿ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ” ಎಂದು ಹೇಳಿದೆ.