Jobs – Peepal Media

SSCನಲ್ಲಿ ಉದ್ಯೋಗಾವಕಾಶ ಬಿಇ/ಬಿ.ಟೆಕ್‌ ಪದವಿದರರಿಗೆ ಸುವರ್ಣಾವಕಾಶ ?
ಬೆಂಗಳೂರು : ಸ್ಟಾಫ್ ಸೆಲೆಕ್ಷನ್ ಕಮಿಷನ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1,340 ಜೂನಿಯರ್‌ ಎಂಜಿನಿಯರ್‌ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸ್ಟಾಫ್​ ಸೆಲೆಕ್ಷನ್ ಕಮಿಷನ್ ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಮಾಡ ಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ಜು. 21 ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssc.nic.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ವಿದ್ಯಾರ್ಹತೆ:
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಡಿಪ್ಲೊಮಾ, ಸಿವಿಲ್‌/ಮೆಕ್ಯಾನಿಕಲ್‌/ಎಲೆಕ್ಟ್ರಿಕಲ್‌ ವಿಷಯಗಳಲ್ಲಿ ಬಿಇ/ಬಿ.ಟೆಕ್‌ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 32 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳ ರಿಯಾಯಿತಿ ಇದೆ.

ವೇತನ:
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 35,400 ರೂ.-1,12,400 ರೂ. ವೇತನ ದೊರೆಯಲಿದೆ.

SSC Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
(https://ssc.gov.in/login)

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: ssc.gov.inಗೆ ಭೇಟಿ ನೀಡಿ.

ಪೊಲೀಸ್‌ ಕಾನ್ಸ್ಟೇಬಲ್ ಉದ್ಯೋಗಾಕಾಂಕ್ಷಿಗಳ ಬೇಡಿಕೆಗೆ ಕೊನೆಗೂ ಸ್ಪಂದಿಸಿದ ಸರ್ಕಾರ
‌ಕರ್ನಾಟಕ ರಾಜ್ಯ ಪೊಲೀಸ್‌ ಡಿಪಾರ್ಟ್‌ಮೆಂಟಿನ ಪೊಲೀಸ್‌ ಕಾನ್ಸ್‌ಟೇಬಲ್‌ (ಸಿವಿಲ್‌, ಸಿಎಆರ್‌ ಹಾಗೂ ಡಿಎಆರ್‌) ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರವೇ ಅನ್ವಯಿಸುವಂತೆ ಎರಡು ವರ್ಷಗಳ ಕಾಲ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಕೊರೋನಾ ಮತ್ತು ಅದರ ಕಾರಣದಿಂದ ಹೇರಲ್ಪಟ್ಟ ಲಾಕ್‌ಡೌನ್‌ ಸಾಕಷ್ಟು ಕೆಲಸದ ಕನಸನ್ನು ಹೊತ್ತಿದ್ದ ಯುವಕರು ಮನೆಯಲ್ಲೇ ಕುಳಿತು ಕಂಗಾಲಾಗಿದ್ದರು. ಆ ಸಮಯದಲ್ಲಿ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಬಹುತೇಕ ನೇಮಕಾತಿಗಳು ನಿಂತು ಹೋಗಿದ್ದವು. ಬಹುಪಾಲು ಯುವಕರೇ ಇರುವ ದೇಶದಲ್ಲಿ ಹಲವು ವರ್ಷಗಳ ಕಾಲ ಹೊಸ ಉದ್ಯೋಗವಕಾಶಗಳು ನಿಂತು ಹೋಗುವುದೆಂದರೆ ದೇಶದ ಯುವಶಕ್ತಿಯ ವ್ಯರ್ಥ ಮತ್ತು ಆರ್ಥಿಕತೆ ಸ್ಥಗಿತಗೊಳ್ಳುವುದೆಂದೇ ಅರ್ಥ.

ಸನ್ನಿವೇಶ ಹೀಗಿರುವಾಗ, ಕೊನೆಗೂ ಕೊವಿಡ್‌ ಎನ್ನುವ ಕೆಟ್ಟ ಕನಸು ಕಳೆದು ಯುವಕರು ಹೊಸ ನಾಳೆಗಳಿಗೆ ಕಣ್ಣು ತೆರೆಯುತ್ತಿರುವ ವೇಳೆ ಅವರಲ್ಲಿ ಕೆಲವರು ಆಗಲೇ ಸರಕಾರಿ ಕೆಲಸಗಳನ್ನು ಪಡೆಯಲು ಇರುವ ವಯೋಮಿತಿಯನ್ನು ಮೀರಿದ್ದರು. ಅವರ ಪಾಲಿಗೆ ಅವರ ಕನಸಿನ ಕೆಲಸವೆನ್ನುವುದು ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಅಂತಹ ಕೆಲಸಗಳಲ್ಲಿ ಈಗ ಕರ್ನಾಟಕ ಸರ್ಕಾರ ಅರ್ಜಿ ಆಹ್ವಾನಿಸಿರುವ ಕಾನ್ಸ್ಟೇಬಲ್‌ ಹುದ್ದೆಯೂ ಒಂದು. ಸರಕಾರಿ ಕೆಲಸಗಳೇ ಅತ್ಯಲ್ಪವಾಗಿರುವ ಈ ಸಮಯದಲ್ಲಿ ಈ ಹುದ್ದೆ ಎನ್ನುವುದು ಬಹಳಷ್ಟು ಯುವ ಜನರ ಪಾಲಿಗೆ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಆಕಾಂಕ್ಷಿಗಳು ತಮಗೆ ಅವಕಾಶ ಸಿಕ್ಕಲ್ಲೆಲ್ಲ ವಯೋಮಿತಿಯನ್ನು ವಿಸ್ತರಿಸುವಂತೆ ಅಂಗಲಾಚುತ್ತಿದ್ದರು. ಸೋಷಿಯಲ್‌ ಮೀಡಿಯಾಗಳಲ್ಲಿ ಹೆಚ್ಚೂ ಕಡಿಮೆ ಆಂದೋಲನವೇ ಈ ಕುರಿತಾಗಿ ಸೃಷ್ಟಿಯಾಗಿತ್ತು.

ಆದರೆ ಸರ್ಕಾರ ಈ ಕುರಿತು ಬಹುತೇಕ ಕಿವುಡಾಗಿಯೇ ಉಳಿದಿತ್ತು. ಈಗ ಕೊನೆಗೂ ಸರಕಾರ ಎಚ್ಚೆತ್ತು ಈ ಯುವಜನರ ಕೂಗಿಗೆ ಕಿವಿಕೊಟ್ಟು ವಯೋಮಿತಿಯನ್ನು ಒಂದು ಬಾರಿಗೆನ್ನುವಂತೆ ವಿಸ್ತರಿಸಿದೆ. ವಯೋಮಿತಿ ವಿಸ್ತರಣೆಯ ವಿವರಗಳು ಈ ಕೆಳಗಿನಂತಿವೆ:

ಸಿವಿಲ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಎಸ್ಸಿ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 29 ವರ್ಷ, ಇತರೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷ, ಬುಡಕಟ್ಟು ಅಭ್ಯರ್ಥಿಗಳಿಗೆ 32 ವರ್ಷ ನಿಗದಿಗೊಳಿಸಲಾಗಿದೆ. ಸಿಎಆರ್‌ ಮತ್ತು ಡಿಎಆರ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಪರಿಶಿಷ್ಟಜಾತಿ ಮತ್ತು ಇತರೆ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ 29 ವರ್ಷ, ಇತರೆ ಅಭ್ಯರ್ಥಿಗಳಿಗೆ 27 ವರ್ಷ ಹಾಗೂ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 32 ವರ್ಷ ನಿಗದಿಗೊಳಿಸಲಾಗಿದೆ.