Justice – Peepal Media

ಕಾನೂನು ವ್ಯವಸ್ಥೆ ಇಲ್ಲದಿದ್ದರೇ ಬದುಕು ಏನಾಗುತಿತ್ತು? ಸಮಾಜದಲ್ಲಿ ವಕೀಲರ ಪಾತ್ರ ಪ್ರಮುಖ: ಕೆ.ಆರ್. ರಮೇಶ್ ಕುಮಾರ್
ಹಾಸನ: ಸಮಾಜದಲ್ಲಿ ಈ ಕಾನೂನು ವ್ಯವಸ್ಥೆ ಇಲ್ಲದಿದ್ದರೇ ಬದುಕು ಏನಾಗುತಿತ್ತು ಎನ್ನುವ ಬಗ್ಗೆ ನೆನಪಿಸಿಕೊಂಡರೇ ನಮಗೆ ಭಯವಾಗುತ್ತದೆ. ದೇಶದ ಇತಿಹಾಸದಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.

ನಗರದ ಬಸ್ ನಿಲ್ದಾಣ ಎದುರು ಇರುವ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಕೀಲರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಚಲಾವಣೆಯಲ್ಲಿರುವವರನ್ನು ಸಮಾಜ ನೋಡುವ ರೀತಿ ಬೇರೆಯಿದೆ. ಚಲಾವಣೆಯಿಂದ ಪಕ್ಕಕ್ಕೆ ಸರಿದವರನ್ನು ಬೇರೆ ರೀತಿ ಕಾಣುತ್ತದೆ. ಪ್ರಪಂಚ ಇರುವುದು ಹೀಗೆ. ಈ ಸಮಯದಲ್ಲಿ ಯಾರಾದರೂ ಆಕ್ಷೇಪಣೆ ಮಾಡಿದಾಗ ಬೇಸರ ಮಾಡಿಕೊಳ್ಳಬಾರದು. ನಾನು ಕಳೆದ ಎರಡು ವರ್ಷಗಳಿಂದ ಮೌನ ಗೀತೆಯಲ್ಲಿದ್ದೆನು. ಇದೊಂದು ಗೌರವ ಎಂದು ನಾನು ಭಾವಿಸಿದ್ದೇನೆ. ಆಗಿನ ನ್ಯಾಯಾಲಯದಲ್ಲಿ ಆಚರಣೆ ಮಾಡುತ್ತಿರುವುದು ಒಂದು ಸೈಡಾದರೇ ಸರ್ವೋಚ್ಛ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತದ ಮುಖ್ಯ ನ್ಯಾಯಾಧೀಶರು ನನ್ನ ದೃಷ್ಠಿಯಲ್ಲಿ ಒಂದೆ. ಅವರವರ ಅನುಭವ ಬೇರೆ ಬೇರೆ ಕಾರಣಗಳಿಂದ ಬೇರೆ ಸ್ಥಾನದಲ್ಲಿರುತ್ತದೆ. ನ್ಯಾಯಾಧೀಶರೆಂದರೆ ಒಂದೆ. ಒಂದು ವೇಳೆ ಈ ಕಾನೂನು ವ್ಯವಸ್ಥೆ ಇಲ್ಲದಿದ್ದರೇ ಬದುಕು ಏನಾಗುತಿತ್ತು ಎಂದರು. ೨೪೦೦ ವರ್ಷಗಳ ಹಿಂದೆ ಪ್ರಪಂಚದಲ್ಲಿ ಬದುಕಿಗೆ ಶಿಸ್ತು ಕ್ರಮ ಬದ್ಧವಾಗಿ ಇರಬೇಕೆಂದು ಹೇಳಲಾಗಿತ್ತು. ನಂತರದ ದಿನಗಳಲ್ಲಿ ಚಕ್ರವರ್ತಿ, ರಾಜ ಮಹಾರಾಜರು ಬಂದರು. ಈ ವೇಳೆ ಇದ್ದ ನ್ಯಾಯಾಲಯದ ವ್ಯವಸ್ಥೆ ಪ್ರಸ್ತೂತದ ನ್ಯಾಯಾಂಗದ ವ್ಯವಸ್ಥೆಗೂ ವ್ಯತ್ಯಾಸ ಏನಿತ್ತು ಬಗ್ಗೆ ತಿಳಿಯಬೇಕು. ಹಿಂದೆ ದೊರೆ ಹೇಳಿದ್ದೆ ಶಾಸನ. ದೊರೆ ತಲೆ ತೆಗೆಯಬೇಕೆಂದು ಸೂಚಿಸಿದರೇ ಅದಕ್ಕೆ ತಡೆ ಮಾಡಲು ಅವಕಾಶ ಇರಲಿಲ್ಲ ತಲೆ ತೆಗೆಯಲೆಬೇಕು. ನಂತರದಲ್ಲಿ ಈಗಿರುವ ನ್ಯಾಯಾಲಯದಲ್ಲಿ ಯಾವುದೇ ತೀರ್ಪು ಕೊಡಬೇಕಾದರೇ ವಾದ ವಿವಾದಗಳು ಇರುತ್ತದೆ ಎಂದು ಹೇಳಿದರು..

ಸಮಾಜಕ್ಕೆ ವಕೀಲರು ನೀಡಿರುವ ಕೊಡುಗೆಯ ನೆನಪಿಗಾಗಿ ಆತ್ಮವಲೋಕನ ಮಾಡಿಕೊಳ್ಳುವ ದಿನ ಇದಾಗಿದೆ. ನ್ಯಾಯ, ನೀತಿ, ಕಾನೂನಿನ ನಿಯಮಕ್ಕೆ ಬದ್ಧತೆಯನ್ನು ಪುನರ್ ಉಚ್ಛರಿಸಲು ಇದು ಉತ್ತಮ ದಿನ. ಕಾನೂನು ಮತ್ತು ನ್ಯಾಯ ಸಮಾಜವನ್ನು ಅಖಂಡವಾಗಿ ಇರಿಸುತ್ತದೆ. ವಕೀಲರು ನ್ಯಾಯದ ವಾಸ್ತು ಶಿಲ್ಪಿಗಳಾಗಿ ಇದನ್ನು ಖಚಿತ ಪಡಿಸಿಕೊಳ್ಳಲು ನಿರ್ಣಯಕ ಪಾತ್ರವಹಿಸುತ್ತಾರೆ ಎಂದರು. ಕಾನೂನು ಎಂಬ ವ್ಯವಸ್ಥೆ ಇಲ್ಲದಿದ್ದರೇ ಬದುಕು ಹೇಗೆ ಎನ್ನುವ ದೊಡ್ಡ ಪ್ರಶ್ನಾತೀತ ಪ್ರಶ್ನೆ ನಮ್ಮ ಮುಂದೆ ಉದ್ಭವಿಸುತ್ತದೆ. ನೆನಪಿಸಿಕೊಳ್ಳಲು ಕೂಡ ನಮಗೆ ಭಯವಾಗುತ್ತದೆ. ದೇಶದ ಇತಿಹಾಸದಲ್ಲಿ ವಕೀಲರ ಪಾತ್ರ ಹೇಳಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ವಕೀಲರು ತಮ್ಮ ವೃತ್ತಿ ಬದಿಗೊತ್ತಿ ಹೋರಾಟಕ್ಕೆ ದುಮಕಿದ್ದರು. ಎಲ್ಲಾ ಪ್ರಜೆಗಳಿಗೆ ತಮ್ಮ ಹಕ್ಕು ಮಾಡುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದಂತೆ ವಕೀಲರು ಆಗಿದ್ದಾರೆ. ಯಾವುದೇ ವಿಷಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದು ಉತ್ತಮ ಎಂದು ಇದೆ ವೇಳೆ ಯುವ ವಕೀಲರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್, ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ವಿಶಾಲ್ ರಘು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಟಿ. ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಂ. ಸಂತೋಷ್, ಉಪಾಧ್ಯಕ್ಷ ಹೆಚ್.ಎನ್. ಯೋಗೀಶ್, ಖಜಾಂಚಿ ಹೆಚ್.ಎನ್. ಪ್ರತಾಪ್, ಜಂಠಿ ಕಾರ್ಯದರ್ಶಿ ಆರ್. ರೂಪ ಕರೀಗೌಡ, ಶ್ರೀಕಾಂತ್ ಇತರರು ಉಪಸ್ಥಿತರಿದ್ದರು. ಬಿ. ಚಂದ್ರಶೇಖರ್ ಅವರು ಕಾರ್ಯಕ್ರಮ ನಿರೂಪಿಸಿದರು.

Fact Check: ನಿಜಕ್ಕೂ ದಲ್ವೀರ್ ಭಂಡಾರಿ ICJ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಆಯ್ಕೆಯಾಗಿದ್ದಾರೆಯೇ?
ಭಾರತೀಯ ಮೂಲದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರನ್ನು ಮುಂದಿನ 9 ವರ್ಷಗಳ ಕಾಲ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಸಂದೇಶವೊಂದು ಎಲ್ಲೆಡೆ ಹರಿದಾಡುತ್ತಿದೆ. ಈ ಸ್ಥಾನಕ್ಕೆ ಆಯ್ಕೆಯಾಗಲು ಅವರು 193 ಮತಗಳಲ್ಲಿ 183 ಮತಗಳನ್ನು ಗಳಿಸಿದರು ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಗ್ರೇಟ್ ಬ್ರಿಟನ್ 71 ವರ್ಷಗಳಿಂದ ಈ ಸ್ಥಾನವನ್ನು ಹೊಂದಿದೆ ಮತ್ತು ಇದು ಭಾರತ ಮತ್ತು ಜೋಧಪುರಕ್ಕೆ ನಿಜಕ್ಕೂ ಹೆಮ್ಮೆಯ ಕ್ಷಣವಾಗಿದೆ ಎಂದು ಸಂದೇಶವು ಹೇಳುತ್ತದೆ. ಇದು ನಿಜವೇ? ನಿಜವಲ್ಲದಿದ್ದರೆ ನಿಜವೇನು? ತಿಳಿಯುವ ಬನ್ನಿ

ಬ್ರೇಕಿಂಗ್ ನ್ಯೂಸ್ : ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಯ್ಕೆ! *
ಭಾರತಕ್ಕೆ ಭರ್ಜರಿ ಗೆಲುವು!!! ಪ್ರಧಾನಿ ಮೋದಿಯವರ ಚಾಣಕ್ಯ ರಾಜತಾಂತ್ರಿಕತೆ. ವಿಶ್ವ ವೇದಿಕೆಯಲ್ಲಿ ಬ್ರಿಟನ್‌ನ ಸೋಲು. ಪ್ರಧಾನಿ ಮೋದಿಜಿ ಜಗತ್ತಿನಾದ್ಯಂತ ಸಂಬಂಧಗಳನ್ನು ಹೇಗೆ ಬೆಳೆಸಿಕೊಂಡಿದ್ದಾರೆ ಎಂಬುದಕ್ಕೆ ಇದು ಒಂದು ಶ್ರೇಷ್ಠ ಉದಾಹರಣೆಯಾಗಿದೆ. ನ್ಯಾಯಮೂರ್ತಿ ದಲ್ವೀರ್ ಭಂಡಾರಿ – “ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ” ಯಾಗಿ ಆಯ್ಕೆಯಾಗಿದ್ದಾರೆ. ಭಾರತದ ನ್ಯಾಯಮೂರ್ತಿ ದಲ್ವೀರ್ ಸಿಂಗ್ ಅವರು 193 ಮತಗಳಲ್ಲಿ 183 ಮತಗಳನ್ನು ಪಡೆದರು (ಪ್ರತಿ ದೇಶದಿಂದ ಒಬ್ಬರು ಪ್ರತಿನಿಧಿಸುತ್ತಾರೆ) ಮತ್ತು ಬ್ರಿಟನ್‌ನ ನ್ಯಾಯಮೂರ್ತಿ ಕ್ರಿಸ್ಟೋಫರ್ ಗ್ರೀನ್‌ವುಡ್ ಅವರನ್ನು ಸೋಲಿಸಿದರು. ಅವರು ಬ್ರಿಟನ್‌ನ ಈ ಹುದ್ದೆಯ ಮೇಲಿನ 71 ವರ್ಷಗಳ ಏಕಸ್ವಾಮ್ಯವನ್ನು ಮುರಿದರು.

ಇದನ್ನು ಸಾಧಿಸಲು ಪ್ರಧಾನಿ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ 6 ತಿಂಗಳಿಂದ ಶ್ರಮಿಸುತ್ತಿದೆ! ಎಲ್ಲಾ 193 ದೇಶಗಳ ಪ್ರತಿನಿಧಿಗಳನ್ನು ಸಂಪರ್ಕಿಸುವುದು ಮತ್ತು ಸುಲಭವಾಗಿ ಗೆಲ್ಲುವ ಖಚಿತವಾದ ಬ್ರಿಟಿಷ್ ಅಭ್ಯರ್ಥಿಯ ಬಗ್ಗೆ ಭಾರತದ ನಿಲುವನ್ನು ವಿವರಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು. 11 ಸುತ್ತಿನ ಮತದಾನದಲ್ಲಿ, ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ಸಾಮಾನ್ಯ ಸಭೆಯಲ್ಲಿ 193 ಮತಗಳಲ್ಲಿ 183 ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಸದಸ್ಯರಲ್ಲಿ 15 ಮತಗಳನ್ನು ಪಡೆದರು.
ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು 9 ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿರುತ್ತಾರೆ. ಈ 183 ದೇಶಗಳು ಭಾರತಕ್ಕೆ ಮತ ಹಾಕಿದ್ದಾರೆ, ಇವರು ಯಾರೂ “ಕುರುಡು ಮೋದಿ ಭಕ್ತರಲ್ಲ”! ಅವರೆಲ್ಲ ವಿಚಾರವಂತರು,ನಮ್ಮ ಸ್ವಾತಂತ್ರ್ಯದ 70 ವರ್ಷಗಳ ನಂತರ ನಮ್ಮ ಪ್ರಧಾನಿ ಮೋದಿಜಿ ಪ್ರಪಂಚದಾದ್ಯಂತದ ದೇಶಗಳೊಂದಿಗೆ ಎಷ್ಟು ಸೌಜನ್ಯ, ಗೌರವಾನ್ವಿತ ಮತ್ತು ಉತ್ತಮ ಸಂಬಂಧವನ್ನು ನಿರ್ಮಿಸಿದ್ದಾರೆ ಎಂಬುದಕ್ಕೆ ಇದು ಒಂದು ಶ್ರೇಷ್ಠ ಉದಾಹರಣೆಯಾಗಿದೆ.
ಇಂಥ ಶ್ರೇಷ್ಠ ವಿಷಯಗಳನ್ನು ಭಾರತೀಯ ಸುದ್ದಿ ಮಾದ್ಯಮಗಳು ಪ್ರಸಾರ ಮಾಡಲ್ಲ, ಅವರಿಗೆ ಮೋದಿ ವಿರುದ್ಧದ ಸುದ್ದಿ ಬೇಕು, ಅದನ್ನೇ ಅವರು ಹುಡುಕಿ ಪ್ರಸಾರ ಮಾಡುವುದು .
️ವಿನಂತಿ – ನಿಮ್ಮ ಇತರ ಸ್ನೇಹಿತರಿಗೆ ಕೂಡ ಕಳುಹಿಸಿ

ಭಾರತ ಮಾತಾ ಜೈ…

ಬಹುಶಃ ಇಂತಹದ್ದೊಂದು WHATSAPP FORWARD ನಿಮ್ಮ ಮೊಬೈಲಿಗೂ ಬಂದಿರಬಹುದು. ಅದನ್ನು ಕಳಹಿಸಿರುವುದು ನಿಮ್ಮ ನಂಬಿಕಸ್ಥ ಸ್ನೇಹಿತರೇ ಆಗಿರುವುದರಿಂದ ನೀವೂ ಅದನ್ನು ಒಂದಷ್ಟು ನಿಮ್ಮ ಸ್ನೇಹಿತರ ಮತ್ತು ಕುಟುಂಬದ ಗ್ರೂಪುಗಳಿಗೆ ಫಾರ್ವರ್ಡ್‌ ಕೂಡಾ ಮಾಡಿರುತ್ತೀರಿ. ಆದರೆ ಈ ಮಾಹಿತಿ ನಿಜಕ್ಕೂ ನಂಬಲರ್ಹವೇ? ಅಲ್ಲವೆನ್ನುತ್ತದೆ SSC online blog. ಹಾಗಿದ್ದರೆ ನಿಜವೇನು? ಬನ್ನಿ ತಿಳಿದುಕೊಳ್ಳೋಣ

ಈ ಮಾಹಿತಿ ಸಂಪೂರ್ಣ ಸುಳ್ಳು, ಮತ್ತು ಮೊದಲನೆಯದಾಗಿ, ಐಸಿಜೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎನ್ನುವಂತಹ ಸ್ಥಾನವೇ ಇಲ್ಲ. ಅಲ್ಲಿರುವುದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾತ್ರ.

ಎರಡನೆಯದಾಗಿ, ಐಸಿಜೆಯ ಅಧಿಕೃತ ವೆಬ್‌ಸೈಟ್ ಮೇಲ್ನೋಟಕ್ಕೇ ಐಸಿಜೆಯ ಪ್ರಸ್ತುತ ಅಧ್ಯಕ್ಷ US ನ ನ್ಯಾಯಮೂರ್ತಿ ಜೋನ್ ಡೊನೊಗ್ಯೂ ಅವರು ಎಂದು ತೋರಿಸುತ್ತದೆ. ಅವರು 2021ರ ಫೆಬ್ರವರಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು 2010ರಿಂದ ನ್ಯಾಯಾಲಯದ ಸದಸ್ಯರಾಗಿದ್ದಾರೆ.

Justice Dalveer Bhandari ಕೂಡ  ಐಸಿಜೆ ಸದಸ್ಯರು ಮತ್ತು ಅವರು 1012ರಿಂದ ಈ ಸ್ಥಾನದಲ್ಲಿದ್ದಾರೆ. ಅವರು 2017ರಲ್ಲಿ (ನವೆಂಬರ್, 2017ರಲ್ಲಿ ಚುನಾಯಿತರಾಗಿ ಈ ಸ್ಥಾನಕ್ಕೆ ಫೆಬ್ರವರಿ, 2018 ರಲ್ಲಿ ನೇಮಕಗೊಂಡರು) 9 ವರ್ಷಗಳ ಅವಧಿಗೆ ಸದಸ್ಯರಾಗಿ (ಅಧ್ಯಕ್ಷರಾಗಿ ಅಲ್ಲ) ಪುನರಾಯ್ಕೆಯಾದರು.

193ರಲ್ಲಿ 183 ಮತಗಳಿಗೂ ನ್ಯಾಯಮೂರ್ತಿ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. 193 ಜನರು 11 ಸುತ್ತಿನಲ್ಲಿ ಮತ ಚಲಾಯಿಸಿದ ನಂತರ ಭದ್ರತಾ ಮಂಡಳಿಯಲ್ಲಿರುವ 15 ಜನರೂ ಮತ ಚಲಾಯಿಸಿ ಕೊನೆಗೆ ಇಬ್ಬರೂ ಬಿಕ್ಕಟ್ಟಿಗೆ ಸಿಲಿಕಿದ್ದರು. ಆಗ ಬ್ರಿಟಿಷ್ ಅಭ್ಯರ್ಥಿ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡರು ಮತ್ತು ಇದರೊಂದಿಗೆ ನ್ಯಾಯಮೂರ್ತಿ ಭಂಡಾರಿಯವರು ಸಾಮಾನ್ಯ ಸಭೆಯಲ್ಲಿ 193 ಮತಗಳಲ್ಲಿ 183 ಮತ್ತು ಭದ್ರತಾ ಮಂಡಳಿಯ ಎಲ್ಲಾ 15 ಮತಗಳನ್ನು ಪಡೆದರು. ಆದರೆ ಇದಕ್ಕೂ ಅಧ್ಯಕ್ಷ ಪದವಿಯ ಚುನಾವಣೆಗೂ ಯಾವುದೇ ಸಂಬಂಧವಿಲ್ಲ.

ಈಗ ಇನ್ನೊಂದು ರಹಸ್ಯವನ್ನ ಬೇಧಿಸೋಣ ಬನ್ನಿ. ಈ ಐಸಿಜೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನ್ಯಾಯಾಲಯದ ಸದಸ್ಯರು ಪ್ರತಿ ಮೂರು ವರ್ಷಗಳಿಗೊಮ್ಮೆ ರಹಸ್ಯ ಮತದಾನದ ಮೂಲಕ ಚುನಾಯಿಸುತ್ತಾರೆ. ಪ್ರಸ್ತುತ ವೈರಲ್ ಆಗಿರುವ ಸಂದೇಶದಲ್ಲಿ ತಿಳಿಸಿರುವಂತೆ 193 ಸದಸ್ಯರು ಇರುವದಿಲ್ಲ. ಅದೆಲ್ಲ ಬರೀ ಬೊಗಳೆ. ಅಲ್ಲದೆ, ಐಸಿಜೆಯ ಅಧ್ಯಕ್ಷರ ಅವಧಿ ಮೂರು ವರ್ಷಗಳಾದರೆ, ಆದರೆ ಸದಸ್ಯರ ಅವಧಿ ಒಂಬತ್ತು ವರ್ಷಗಳು, ಹೀಗಾಗಿ ಹೇಗೆ ನೋಡಿದರೂ ಈ ಸುದ್ದಿ ಸುಳ್ಳು ಎನ್ನುವುದು ಸಾಬೀತಾಗುತ್ತದೆ.

“ಗ್ರೇಟ್ ಬ್ರಿಟನ್ 71 ವರ್ಷಗಳ ಕಾಲ ಈ ಸ್ಥಾನವನ್ನು ಹೊಂದಿತ್ತು” ಎಂಬ ವಿಷಯ ಕೂಡಾ ಹಸಿ ಹಸಿ ಸುಳ್ಳು. ಏಕೆಂದರೆ ಅಮೆರಿಕದ ನ್ಯಾಯಮೂರ್ತಿ ಜೋನ್ ಡೊನೊಗ್ಯು ಈ ಸ್ಥಾನಕ್ಕೆ ಆಯ್ಕೆಯಾಗುವ ಮೊದಲು, ಸೊಮಾಲಿಯಾದ ಅಬ್ದುಲ್ ಖಾವಿ ಯೂಸುಫ್ ಐಸಿಜೆಯ ಅಧ್ಯಕ್ಷರಾಗಿದ್ದರು ಮತ್ತು ಅವರಿಗಿಂತ ಮೊದಲು ಫ್ರಾನ್ಸ್ ನ ರೋನಿ ಅಬ್ರಹಾಂ ಈ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದರು. ಈ ಸಂಸ್ಥೆಯ ಅಧ್ಯಕ್ಷರ ಅಧಿಕಾರಾವಧಿ ಕೇವಲ ಮೂರು ವರ್ಷಗಳು ಮತ್ತು ಯುನೈಟೆಡ್ ಕಿಂಗ್‌ಡಮ್‌ನ ನ್ಯಾಯಾಧೀಶರನ್ನು ಕೊನೆಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು 2006-09ರ ನಡುವೆ.

ಈಗ “ಭಾರತ ಮತ್ತು ಜೋಧಪುರಕ್ಕೆ ಹೆಮ್ಮೆಯ ಕ್ಷಣ” ಎಂಬ ಕೊನೆಯ ವಾಕ್ಯಕ್ಕೆ ಬರೋಣ. ಈ ವೈರಲ್ ಸಂದೇಶದಲ್ಲಿ ಜೋಧಪುರ ನಗರವನ್ನು ಉಲ್ಲೇಖಿಸಲು ಕಾರಣ ಬಹುಶಃ ನ್ಯಾಯಮೂರ್ತಿ ಭಂಡಾರಿ ಅವರ ಜನ್ಮಸ್ಥಳ ಜೋಧಪುರವಾಗಿರುವುದು. ಜೋಧಪುರ ಮತ್ತು ದೇಶದ ಉಳಿದ ಭಾಗಗಳ ನಿವಾಸಿಗಳು ಐಸಿಜೆ ಸದಸ್ಯರಾಗಿ ಪುನರಾಯ್ಕೆಗೊಂಡಿದ್ದಕ್ಕಾಗಿ ಅವರ ಬಗ್ಗೆ ನಿಜವಾಗಿಯೂ ಬಹಳ ಹೆಮ್ಮೆ ಪಡುತ್ತಾರೆ. ನಕಲಿ ಫಾರ್ವಡಡಡ್‌ಗಳು ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ದೇಶವನ್ನು ಪ್ರತಿನಿಧಿಸುವ ಭಾರತೀಯ ಮೂಲದ ನ್ಯಾಯಾಧೀಶರಾಗಿ ಅವರಿಗೆ ಮತ್ತು ಅವರ ಪರಂಪರೆಗೆ ಅಪಚಾರ ಮಾಡಿದಂತೆಯೇ ಹೊರತು ಇನ್ನೇನೂ ಅಲ್ಲ. ಇನ್ನಾದರೂ ದಯವಿಟ್ಟು ಕೋಣ ಈದೈತೆ ಎಂದು ಯಾರಾದರೂ ಹೇಳಿದಾಗ ಕೊಟ್ಟಿಗೆಯಲ್ಲಿ ಕಟ್ಟು ಎಂದು ಹೇಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡೋಣ.

ಲೇಖನ ಕೃಪೆ: www.scconline.com

ಸಹಿಷ್ಣು ಭಾರತವನ್ನು ನಾವು ಕಟ್ಟಬೇಕು: ಜಸ್ಟೀಸ್‌ ನಾಗಮೋಹನ್‌ ದಾಸ್‌
ಮಂಗಳೂರು: ಇದು ಸಹಿಷ್ಣು ಭಾರತ. ಹಿರಿಯರು ಕಟ್ಟಿಕೊಟ್ಟ ಸಹಿಷ್ಣುತೆಯ ಪರಂಪರೆ ನಮ್ಮದು. ಪ್ರೀತಿ, ಸುಖ ಸಮೃದ್ಧಿ ಭಾವೈಕ್ಯತೆ ಇರುವ ಸಮಾಜವನ್ನು ನಾವು ನಿರ್ಮಾಣ ಮಾಡಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಹೇಳಿದರು. ಸಂತ ಮದರ್‌ ಮದರ್‌ ತೆರೆಸಾ ವಿಚಾರ ವೇದಿಕೆಯು ನಗರದ ಕುದ್ಮುಲ್‌ ರಂಗರಾವ್‌ ವೇದಿಕೆಯಲ್ಲಿ ಹಮ್ಮಿಕೊಂಡ ಮದರ್‌ ತೆರೇಸಾ ೨೫ನೇ ಸಂಸ್ಮರಣೆ ದಿನದ ವಿಚಾರ ಗೋಷ್ಟಿಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.

ಧರ್ಮ ಜನಿಸಿದ್ದು ಜನರ ಕಣ್ಣೀರನ್ನು ಒರೆಸುವುದಕ್ಕೆ, ಅವರ ದು:ಖ ದುಮ್ಮಾನಗಳನ್ನು ದೂರ ಮಾಡುವುದಕ್ಕೆ. ಅದರೆ, ಧರ್ಮವನ್ನು ಅಪ್ರಜಾಸತ್ತಾತ್ಮಕ ಗೊಳಿಸಿದಾಗ ಅದು ಮೂಲಭೂತವಾಗುತ್ತದೆ. ಹಾಗಾಗಿ ಈ ಪ್ರಕ್ರಿಯೆಯನ್ನು ವಿರೋಧಿಸಬೇಕು. ಧರ್ಮದೊಂದಿಗೆ ರಾಜಕಾರಣ ಬೆರೆತಾಗ ಕೋಮುವಾದ ಬೆಳೆಯುತ್ತದೆ. ನಾವು ಧರ್ಮವನ್ನು ವಿರೋಧಿಸುವ ಬದಲು ಧರ್ಮವನ್ನು ರಾಜಕಾರಣದೊಂದಿಗೆ ಬೆರೆಸುವುದನ್ನು ವಿರೋಧಿಸಬೇಕು. ಇದನ್ನು ಅರ್ಥಮಾಡಿಕೊಂಡಾಗ ಮಾತ್ರ ಸಂವಿಧಾನದ ಜಾತ್ಯತೀತ ಪದ ಅರ್ಥ ಆಗಲು ಸಾಧ್ಯ ಎಂದು ನ್ಯಾ. ನಾಗಮೋಹನ್‌ ದಾಸ್‌ ಅಭಿಪ್ರಾಯ ವ್ಯಕ್ತ ಪಡಿಸಿದರು.

ಇಂದು ಭಾವನಾತ್ಮಕ ವಿಚಾರಗಳು ಹೆಚ್ಚು ಚರ್ಚಿತವಾಗುತ್ತಿವೆ. ಬದುಕಿಗೆ ಸಂಬಂಧಿಸಿದ ವಿಷಯಗಳು ಮರೆಗೆ ಸರಿಯುತ್ತಿವೆ. ಸಂವಿಧಾನದ ಆಶಯಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿದಿವೆ. ಅಸಹಿಷ್ಣುತೆ ದೇಶದಾದ್ಯಂತ ಹಬ್ಬಿದೆ ಎಂದು ಅವರು ವಿಷಾದಿಸಿದರು.

ಎಲ್ಲರೂ ತೆರೆಸಾ ಆಗುವುದು ಸಾಧ್ಯವಿಲ್ಲದಿದ್ದರೂ ತೆರೇಸಾರವರ ಹಾದಿಯಲ್ಲಿ ನಡೆಯುವುದು ಸಾಧ್ಯವಿದೆ. ಭಾರತದಲ್ಲಿ ಪ್ರೀತಿಯನ್ನು ಹುಡುಕುವ ಕೆಲಸವನ್ನು ಮಾಡೋಣ, ಪ್ರೀತಿಯ ಜಗತ್ತನ್ನು ನಮ್ಮದಾಗಿಸಿಕೊಳ್ಳೋಣ ಎಂದು ಆಶಯ ವ್ಯಕ್ತಪಡಿಸಿದರು.

ಬಹುತ್ವ ಭಾರತದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಪಲ್ಲವಿ ಇಡೂರು ಮಾತಾಡಿದರು. ಪ್ರೀತಿಯ ಅತ್ಯಂತ ಶ್ರೇಷ್ಟ ರೂಪ ಅಂದರೆ ಅದು ದಾನ. ಮಾನವೀಯತೆ ಒಂದು ಆಶಾವಾದ ಮತ್ತು ಒಂದು ಬದುಕು. ಇವೆರಡನ್ನೂ ಜತೆಗಿರಿಸಿಕೊಂಡೇ ಬದುಕ ಬೇಕಾಗುತ್ತದೆ. ಆದರೆ, ೨೦೧೪ ರ ಬಳಿಕ ಪರಿಸ್ಥಿತಿ ಬದಲಾಗಿದೆ.

ಸೇವೆ ಮಾಡುತ್ತಾ ಮಾನವೀಯತೆ ಮೆರೆಯುವವರ ಮೇಲೆ ಬಳಿಕ ಪ್ರಹಾರ ನಡೆಯುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಕೋಮುವಾದವನ್ನು ಬಹಳ ಮುತುವರ್ಜಿಯಿಂದ ಬೆಳೆಸುತ್ತಾ ಇದ್ದೇವೆ. ಮನುಷ್ಯ ಮನುಷ್ಯರ ನಡುವೆ ಕಂದಕಗಳು ಏರ್ಪಟ್ಟಿವೆ. ಬದುಕಲು ಯೋಗ್ಯವಾದ ಸಮಾಜವನ್ನು ಕಟ್ಟುವುದು ಮಾನವೀಯತೆಯ ಕೆಲಸವಾಗಿರುವುದರಿಂದ ಈ ಕಂದಕಗಳು ಏರ್ಪಡದಂತೆ ಮೊದಲಿಗೆ ನಮ್ಮ ಮನೆಯವರನ್ನು, ಬಳಿಕ ಸುತ್ತ ಮುತ್ತಲಿನವರೊಂದಿಗೆ ಸಂವಹನ ನಡೆಸುವ ಜವಾಬ್ದಾರಿ ನಮ್ಮೆಲ್ಲರದು ಎಂದರು.ಫಾ. ಜೆ ಬಿ ಸಲ್ದಾನ ಮತ್ತು ಮುನೀರ್‌ ಕಾಟಿಪಳ್ಳ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಮದರ್‌ ತೆರೆಸಾ ವಿಚಾರ ವೇದಿಕೆಯ ರೋಯ್‌ ಕ್ಯಾಸ್ಟಲಿನೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜೋಸೆಫ ಕ್ರಾಸ್ತಾ, ಎಂ. ದೇವದಾಸ್‌, ಸ್ಟಾನಿ ಲೋಬೋ, ಸುಶೀಲ್‌ ನೊರೋನ್ನಾ, ಎಂಜಿ ಹೆಗ್ಡೆ, ಆಶ್ರಫ್‌ ಕೆ. ಯಶವಂತ ಮರೋಳಿ, ಡಾ. ರೀಟಾ ನೊರೋನ್ನಾ, ಫ್ಲೇವಿ ಡಿಸೋಜಾ ಸುಮತಿ ಎಸ್‌ ಹೆಗ್ಡೆ ಮತ್ತು ಸಿಸ್ಟರ್‌ ಲೊರೆನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಫಾ. ರೂಪೇಶ್‌ ಮಾಡ್ತಾ ಸ್ವಾಗತಿಸಿ ಡಾ. ಕೃಷ್ಣಪ್ಪ ಕೊಂಚಾಡಿ ವಂದಿಸಿದರು. ಸುನಿಲ್‌ ಕುಮಾರ್‌ ಬಜಾಲ್‌ ಕಾರ್ಯಕ್ರಮ ನಿರೂಪಿಸಿದರು.