k̤ sudhakar – Peepal Media

ಜಾತಿ ಗಣತಿ ವರದಿ ಸೋರಿಕೆ ಮಾಡಿರುವ ಕಾಂಗ್ರೆಸ್‌ ನಾಯಕರು ಎಷ್ಟು ಬಾರಿ ರಾಜೀನಾಮೆ ನೀಡಬೇಕಿತ್ತು?: ಡಾ.ಕೆ ಸುಧಾಕರ್‌
ಬೆಂಗಳೂರು : ಜಾತಿ ಗಣತಿಯ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದ ಕಾಂಗ್ರೆಸ್‌ ನಾಯಕರು, ಪ್ರತಿ ಜಿಲ್ಲೆಗಳಲ್ಲಿ ಅವರ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ವರದಿಯನ್ನು ಸೋರಿಕೆ ಮಾಡಿದ್ದರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಶುಕ್ರವಾರದಂದು  ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ʼಚುನಾವಣೆ ಹತ್ತಿರವಾದಂತೆ ಕ್ಷುಲ್ಲಕ ವಿಚಾರಗಳನ್ನೆತ್ತಿ ಆರೋಪ ಮಾಡುವುದನ್ನು, ಸುಳ್ಳು ಆಪಾದನೆ ಮಾಡುವುದನ್ನು ಕಾಂಗ್ರೆಸ್‌ ನಾಯಕರು ಕರಗತ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, 130 ಕೋಟಿ ರೂ. ಖರ್ಚು ಮಾಡಿ ಜಾತಿ ಗಣತಿ ಮಾಡಲಾಗಿತ್ತು. ಆ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದೆ ಕಾಂಗ್ರೆಸ್‌ ಅಭ್ಯರ್ಥಿಗಳ ಬಳಿ ಮಾತ್ರ ಹಂಚಿಕೊಳ್ಳಲಾಗಿತ್ತು. ಇದನ್ನು ನಾನು ಬೇಕಿದ್ದರೆ ಶೇರ್‌ ಮಾಡುತ್ತೇನೆ. ಜಾತಿ ಗಣತಿಯನ್ನು ಗೌಪ್ಯವಾಗಿ ಎಲ್ಲಾ ಜಿಲ್ಲೆಗಳಲ್ಲಿ ಅವರಿಗೆ ಬೇಕಾದವರಿಗೆ ಸೋರಿಕೆ ಮಾಡಲಾಗಿದೆ. ಇದರ ಹೊಣೆಗಾರಿಕೆಯನ್ನು ಕಾಂಗ್ರೆಸ್‌ ನಾಯಕರು ಹೊರುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.

ಚುನಾವಣಾ ಆಯೋಗದ ಮೂಲಕ ನಗರ ಪಾಲಿಕೆಗಳು ಎನ್‌ಜಿಒಗೆ ಕೆಲವು ಕೆಲಸಗಳನ್ನು ನೀಡುವುದು ನಿರಂತರವಾಗಿ ನಡೆದುಕೊಂಡೇ ಬಂದಿದೆ. ಕಾನೂನಿನ ಪರಿಮಿತಿಯಲ್ಲೇ ಈ ಕೆಲಸ ನಡೆಯುತ್ತದೆ. ನಿಯಮ ಪಾಲಿಸದೇ ಇದ್ದಲ್ಲಿ ಆ ಸಂಸ್ಥೆ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಇದನ್ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಷ್ಟಕ್ಕೇ ಮುಖ್ಯಮಂತ್ರಿಗಳ ರಾಜೀನಾಮೆ ಕೇಳಲಾಗುತ್ತಿದೆ. ಹಾಗಾದರೆ ಜಾತಿ ಗಣತಿ ವರದಿಯ ಸೋರಿಕೆಗಾಗಿ ವಿರೋಧ ಪಕ್ಷಗಳ ನಾಯಕರು ಎಷ್ಟು ಬಾರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಸಚಿವರು ಪ್ರಶ್ನೆ ಮಾಡಿದರು.

ಯಾವುದಾದರೂ ತಾರ್ಕಿಕವಾದ ವಿಷಯಗಳನ್ನು ಇಟ್ಟುಕೊಂಡು ಮಾತನಾಡಬೇಕು. ಆದರೆ ಕಾಂಗ್ರೆಸ್‌ ನಾಯಕರು ಕ್ಷುಲ್ಲಕ ವಿಷಯಗಳನ್ನು ಇಟ್ಟುಕೊಂಡು ಮಾತನಾಡಿ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ. ಅವರು ಉತ್ಪ್ರೇಕ್ಷೆ ಮಾಡಿ ಮಾತನಾಡಿದ್ದಾರೆ. ಆದರೆ ಮುಖ್ಯಮಂತ್ರಿಗಳು ಈಗಾಗಲೇ ತನಿಖೆಗಾಗಿ ಕಾನೂನಿನ ಸಲಹೆ ಪಡೆಯಲು ಸೂಚಿಸಿದ್ದಾರೆ. ಕಾನೂನು ಸಲಹೆಯಂತೆ ಸರ್ಕಾರ ಕ್ರಮ ವಹಿಸಲಿದೆ. ಈ ರೀತಿಯ ರಾಜಕೀಯ ಹುನ್ನಾರ ಮಾಡುವುದು ಬಿಜೆಪಿಯ ಇತಿಹಾಸದಲ್ಲೇ ಇಲ್ಲ. ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಡೆಯುತ್ತಿರುವುದರಿಂದ ಇಂತಹ ವಿಷಯಗಳನ್ನು ಇಟ್ಟುಕೊಂಡು ಕಾಂಗ್ರೆಸ್‌ ಜನರ ಮುಂದೆ ಹೋಗುತ್ತಿದೆ ಎಂದು ಸುಧಾಕರ್‌ ಅವರು ಮಾತನಾಡಿದ್ದಾರೆ.

ಜನರ ವಿರೋಧಿ ಕೆಲಸ ಮಾಡುತ್ತಿದೆ ಬಿಜೆಪಿ : ಮೋಹನ್‌ ದಾಸರಿ
ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಮುಂದಿಟ್ಟುಕೊಂಡು, ʼಸರ್ಕಾರಕ್ಕೆ ಬಡಜನರು, ಹಿಂದುಳಿತ ವರ್ಗದವರು, ದಲಿತರ ಮೇಲೆ ಯಾವುದೇ ರೀತಿಯ ಕಾಳಜಿ ಇಲ್ಲʼ ಎಂದು ಬೆಂಗಳೂರಿನ ಆಮ್‌ ಆದ್ಮಿ ಅಧ್ಯಕ್ಷ ಮೋಹನ್‌ ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಕೇವಲ ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌ ಇಲ್ಲ ಎಂದು ತಾಯಿ ಮತ್ತು ನವಜಾತ ಶಿಶುಗಳನ್ನು ಕೊಲೆಮಾಡಿದ್ದಾರೆ.ಚಿಕ್ಕಬಳ್ಳಾಪುರದ ಒಂದು ಹಳ್ಳಿಯಲ್ಲಿ ಈಗಲೂ ದೇವಸ್ಥಾನಗಳಿಗೆ ಪ್ರವೇಶವಿಲ್ಲ. ಅಸ್ಪೃಶ್ಯತೆ ಹೋಗಿಲ್ಲ. ಹೇರ್‌ಕಟ್‌   ಮಾಡಿಸಬೇಕು ಅಂದರೆ, ದೇವಾಲಯಗಳಿಗೆ ಪೂಜೆ ಸಲ್ಲಿಸಬೇಕಾದರೆ ಟೌನ್‌ಗಳಿಗೆ ಹೋಗುತ್ತಿದ್ದಾರೆ ಎಂದು ಅಸ್ಪೃಶ್ಯತೆಯ ಈಗಿನ ವಾಸ್ತವ್ಯದ ಬಗ್ಗೆ ಮಾತನಾಡಿದ್ದಾರೆ.

ʼಗುಡಿಬಂಡೆಯಲ್ಲಿಸರ್ಕಾರ ನಡೆಸುತ್ತಿರುವ ಕಲ್ಯಾಣ ಮಂಟಪದಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ಯಾವುದೇ ಸ್ಥಾನ ಕೊಡದಿದ್ದರೆ ಹೇಗೆ. ಮೊನ್ನೆ ಬಂದ ಟೆಂಡರ್‌ನಲ್ಲಿ ಪರಿಶಿಷ್ಟ ಜಾತಿಯವರು ಎಂದು ಜಾತಿಯ ಹೆಸರನ್ನೂ ಬರೆದು ಚಪ್ಪಲಿಗಳನ್ನು ಕಾಯುವ ಕೆಲಸ ಎಂದು ಪ್ರಕಟಿಸಿರುವು, ಅವರಿಗೆ ಸಾಮಾಜಿಕ ಗೌರವವೇ ಇಲ್ಲದಂತೆ ಮಾಡಿದೆ. ಬಡಜನರ, ದಲಿತರ, ಸಾಮಾಜಿಕವಾಗಿ ಹಿಂದುಳಿದವರಿಗೆ ಯಾವುದೇ ರೀತಿಯ ಭದ್ರತೆ ಇಲ್ಲದಂತೆ ಆಗಿದೆ. ಪರಿಶಿಷ್ಟ ಜಾತಿಯವರು ದೇವರ ಮಕ್ಕಳು ಅಂತಿರಾ. ಇದೆನಾ ನೀವು ದೇವರ ಮಕ್ಕಳನ್ನು ನೋಡಿಕೊಳ್ಳುವ ರೀತಿ ?ʼ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ʼಬೊಮ್ಮಾಯಿಯವರಿಗೆ ಬಡಜನರ ಮೇಲೆ, ಶೋಷಿತ ವರ್ಗದವರ ಮೇಲೆ ಯಾವುದೇ ರೀತಿಯ ಕಾಳಜಿ ಇಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ʼಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್‌ ಅವರು ತುಮಕೂರಿನ ಘಟನೆಯ ನಂತರ ಸಿಬ್ಬಂದಿಗ ಸಸ್ಪೆಂಡ್‌ ಮಾಡುತ್ತೇನೆ ಅಂದಿದ್ರಿ. ಹಾಗೆ ನೋಡಿದರೆ ನೀವೇ ನೈತಿಕವಾಗಿ ಹೊಣೆ ಹೊತ್ತು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಯಾಕಂದರೆ ನೀವು ತುಮಕೂರು ಜಿಲ್ಲಾ ಆಸ್ಪತ್ರಗೂ ಹೋಗಿ ಭೇಟಿ ಮಾಡಿಲ್ಲ. ಸರ್ಕಾರದ ಜಿಲ್ಲಾ ಆಸ್ಪತ್ರೆಗಳು ಯಾವ ರೀತಿ ಕಾರ್ಯನಿರ್ವಹಿಸುತ್ತೆ ಅಂತ ನೀವು ಯಾವತ್ತು ನೋಡಿಲ್ಲ. ಇವತ್ತು ನಿಮ್ಮದೇ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರ ವಿರುದ್ಧ ಸರ್ಕಾರ ನಡೆಸುತ್ತಿರೋ ಕಲ್ಯಾಣ ಮಂಟಪ ಸಿಗುತ್ತಿಲ್ಲ. ತುಮಕೂರಿನ ಘಟನೆಯಿಂದ ಆರೋಗ್ಯ ಸಚಿವರಾಗಿ, ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಮಂತ್ರಿಗಳಾಗಿ ವಿಫಲರಾಗಿದ್ದೀರಾ ಎಂದು ಬೆಂಗಳೂರಿನ ಆಮ್‌ ಆದ್ಮಿ ಅಧ್ಯಕ್ಷ ಮೋಹನ್‌ ದಾಸರಿ ಡಾ. ಕೆ ಸುಧಾಕರ್‌ ಅವರ ವಿರುದ್ಧ ಕಿಡಿಕಾರಿದ್ದಾರೆ.

ಜನರ ವಿರೋಧಿ ಕೆಲಸ ಮಾಡ್ತಿರೋ ಬಿಜೆಪಿ ವಿರುದ್ಧ ಬೊಮ್ಮಯಿ ಸರ್ಕಾರದ ವಿರುದ್ಧ ಜನ ಯೋಚಿಸಬೇಕು ಎಂದು ಮೋಹನ್‌ ದಾಸರಿ ಇಂದು ತಮ್ಮ ಫೇಸ್‌ಬುಕ್‌ ಲೈವ್‌ ಬಂದು ಮಾತನಾಡಿದ್ಧಾರೆ.

ತುಮಕೂರಿನ ಘಟನೆಯ ಕುರಿತು ಟ್ವೀಟ್‌ ಮಾಡಿರುವ ಮೋಹನ್‌ ದಾಸರಿಯವರು, ʼಪ್ರಾಣ ಉಳಿಸಬೇಕಾದ ವೈದ್ಯರೇ ಇಲ್ಲವೆಂದು ದೂಡಿ ತಾಯಿ ಮಕ್ಕಳು ಮನೆಯಲ್ಲಿ ಸಾಯಬೇಕಾದ ಅಮಾನವೀಯ ಘಟನೆ ನಮ್ಮ ನಾಡಲ್ಲಿ ನಡೆದಿರುವುದು ದುರಾದೃಷ್ಟಕರ!́ʼ ಎಂದು ಹೇಳಿದ್ದಾರೆ.