kalaburagi – Peepal Media

ವಾಡಿಯಲ್ಲಿ ಬೈಕ್ ಜಾಥಾಕ್ಕೆ ಚಾಲನೆ: ಏ.26ಕ್ಕೆ ಸಂವಿಧಾನ ಸಂರಕ್ಷಕರ ಸಮಾವೇಶ
ಕಲಬುರಗಿ,ವಾಡಿ: ಬಾಬಾಸಾಹೇಬ್‌ ಡಾ. ಬಿಆರ್‌ ಅಂಬೇಡ್ಕರ್‌ ಅವರು ಬೇಟಿ ನೀಡಿದ್ದ ವಾಡಿಯಲ್ಲಿ ನಡೆದ ದೇಶಪ್ರೇಮಿ ಯುವಾಂದೋಲನ ಬೈಕ್ ಜಾಥಾವನ್ನು ಅಮೃತರಾವ್ ಕೋಮಟೆ ಅವರ ಮಗ ಟೋಪಣ್ಣ ಕೋಮಟೆ ಅವರು ಏ.14ರಂದು (ಸೋಮವಾರ) ಉದ್ಘಾಟಿಸಿದರು.

ಬಾಬಾಸಾಹೇಬರ ಒಡನಾಟದಲ್ಲಿದ್ದು ಬಾಬಾಸಾಹೇಬರ ಜೊತೆಯೇ ಬೌದ್ಧ ಧಮ್ಮ ಸ್ವೀಕರಿಸಿದ ವಾಡಿಯ ಅಮೃತರಾವ್ ಕೋಮಟೆ ಅವರ ಮಗ ಟೋಪಣ್ಣ ಕೋಮಟೆ ಅವರು ಯುವ ತಂಡಕ್ಕೆ ಬಾಬಾಸಾಹೇಬರ ಬಾವುಟ ನೀಡಿ ಉದ್ಘಾಟಿಸಿ.

ನಂತರ ಜಾಥಾದ ತಂಡವು ಪುರಸಭೆಯ ನೌಕರರು, ಲಾರಿ ಒಕ್ಕೂಟದ ಸಂಘದವರ ಜೊತೆ ಸಭೆಗಳನ್ನು ನಡೆಸಿ, ಏ.26ರಂದು ದಾವಣಗೆರೆಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಕರ ಸಮಾವೇಶದ ಮಹತ್ವ ಕುರಿತು ತಿಳಿಸಿ, ಸಮಾವೇಶಕ್ಕೆ ಆಹ್ವಾನ ಮಾಡಿತು. ಅಂದು ದಾವಣಗೆರೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ಸುಮಾರು 10,000ಕ್ಕೂ ಹೆಚ್ಚು ಸಂವಿಧಾನ ಸಂರಕ್ಷಕ ಹೋರಾಟಗಾರರು ಸೇರಲಿದ್ದಾರೆ ಎಂದು ತಂಡದವರು ತಿಳಿಸಿದ್ದಾರೆ.

ಈ ಸಮಾವೇಶದ ಉದ್ದೇಶ ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಿಸಿಕೊಳ್ಳುವುದೇ ಆಗಿದೆ. ಕಾಂಗ್ರೆಸ್ಸಿನ ವೈಫಲ್ಯಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಅಧಿಕಾರಕ್ಕೆರಿದ ಬಿಜೆಪಿ ಭಾರತವನ್ನು ನೈತಿಕವಾಗಿ, ಆರ್ಥಿಕವಾಗಿಯೂ, ರಾಜಕೀಯವಾಗಿ ಅವನತಿಯ ಅಂಚಿಗೆ ತಂದು ನಿಲ್ಲಿಸಿದೆ. ಸಂತ-ಶರಣರ ಬೀಡಾಗಿದ್ದ ಭಾರತವನ್ನು ಜಾತಿ, ಧರ್ಮಗಳ ಹೆಸರಲ್ಲಿ ಕಚ್ಚಾಡುವ ಕುರುಕ್ಷೇತ್ರವನ್ನಾಗಿ ಪರಿವರ್ತಿಸಲಾಗಿದೆ. ಜನರ ಗಮನವನ್ನೆಲ್ಲಾ ದಿಕ್ಕುತಪ್ಪಿಸಿ ದೇಶದ ಬೃಹತ್ ಸಂಪತ್ತನ್ನು ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಕುಳಗಳ ತೆಕ್ಕೆಗೆ ಅರ್ಪಿಸಲಾಗಿದೆ. ಸಂವಿಧಾನ ಮೌಲ್ಯಗಳಿಗೆ ತದ್ವಿರುದ್ದ ದಿಕ್ಕಿನಲ್ಲಿ ದೇಶವನ್ನು ಅಪಹರಿಸಿ ಕೊಂಡೊಯ್ಯಲಾಗುತ್ತಿದೆ. ಸ್ವಾತಂತ್ರ್ಯದ ಜಾಗದಲ್ಲಿ ಸರ್ವಾಧಿಕಾರ, ಸಮಾನತೆಯ ಜಾಗದಲ್ಲಿ ಬಲಾಢ್ಯರ ಅಭಿವೃದ್ಧಿ, ಸೋದರತ್ವದ ಜಾಗದಲ್ಲಿ ಸನಾತನವಾದ, ಸಾಮಾಜಿಕ ನ್ಯಾಯದ ಜಾಗದಲ್ಲಿ ಮೇಲ್ವರ್ಗದವರಿಗೆ ಮೇಲ್ಪಂಕ್ತಿ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಸಂವಿಧಾನ ಈ ದೇಶದ ದುಡಿಯುವ ಜನರಾದ ರೈತ, ಕೂಲಿ, ಕಾರ್ಮಿಕ, ಸಾಮಾನ್ಯ ಜನರಿಗೆ ನೀಡಿದ್ದ ಹಕ್ಕುಗಳನ್ನೆಲ್ಲಾ ವೇಗಗತಿಯಲ್ಲಿ ರದ್ದುಗೊಳಿಸಲಾಗತ್ತಿದೆ. ಈ ದೇಶದ ದಮನಿತ ಸಮುದಾಯಗಳಾದ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಅತಿ ಹಿಂದುಳಿದ, ಮಹಿಳಾ, ಲೈಂಗಿಕ ಅಲ್ಪಸಂಖ್ಯಾತ ಮುಂತಾದ ಜನ ವರ್ಗಗಳಿಗೆ ಸಾಮಾಜಿಕವಾಗಿ ಮುಂದೆ ಬರಲು ನೀಡಲಾಗಿದ್ದ ಅವಕಾಶಗಳ ಮಾರ್ಗಗಳನ್ನೆಲ್ಲಾ ಮುಚ್ಚಲಾಗುತ್ತಿದೆ. ಸರಕಾರಿ ಶಿಕ್ಷಣ, ಸರಕಾರಿ ಚಿಕಿತ್ಸೆ ಕಣ್ಮರೆಯಾಗುತ್ತಿವೆ. ಕೆಲಸಕ್ಕೆ ಯಾವ ಭದ್ರತೆಯೂ ಇಲ್ಲವಾಗಿದೆ. ಬೆಲೆಏರಿಕೆ, ಭ್ರಷ್ಟಾಚಾರ ದುಡಿದದ್ದನ್ನೆಲ್ಲಾ ಬಾಚಿ ತಿನ್ನುತ್ತಿವೆ. ರೈತರು, ಜನಸಾಮಾನ್ಯರು ಸಾಲದ ಸುಳಿಯಲ್ಲಿ ನಲುಗುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಮಿತಿಮೀರಿ ಬೆಳೆಯುತ್ತಿವೆ. ಜಾತಿ ಧರ್ಮದ ಹೆಸರಿನಲ್ಲಿ ನೆತ್ತರು ಹರಿದಾಡುತ್ತಿದೆ. ಒಟ್ಟಾರೆ ಸಂವಿಧಾನ ಅಪಾಯದಲ್ಲಿದೆ ಇದರ ರಕ್ಷಣೆಯೇ ನಮ್ಮ ಈ ಸಮಾವೇಶದ ಉದ್ದೇಶ ಎಂದು ಯುವಾಂದೋಲನ ತಂಡ ತಿಳಿಸಿದೆ.

“ಜನಸಾಮಾನ್ಯರ ಬಲ ಕುಗ್ಗಿದೊಡನೆ ಪ್ರಜಾಪ್ರಭುತ್ವ ಸತ್ವ ಕಳೆದುಕೊಳ್ಳುತ್ತದೆ. ಕಳೆದ 3 ದಶಕಗಳಲ್ಲಿ ಆದದ್ದು ಇದೇ. ನಾವು ಒಡೆದು ಹೋದೆವು. ಅವರು ನಮ್ಮ ಮೇಲೆರಿ ಕುಳಿತರು. ಆದ ಕಾರಣ ರಾಜ್ಯದಲ್ಲಿರುವ ಎಲ್ಲ ಜನಪರ ಸಂಘಟನೆಗಳು, ಜನಪರ ಮನಸ್ಸುಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೂತು ಮಾತನಾಡುತ್ತಿದ್ದೇವೆ. ಪರಸ್ಪರ ಕೈ ಕೈ ಜೋಡಿಸಿ ಕೆಲಸ ಮಾಡಲು ಶುರು ಮಾಡಿದ್ದೇವೆ. ನಮ್ಮ ನಮ್ಮದೇ ರೀತಿಯಲ್ಲಿ ಸರ್ವಾಧಿಕಾರಿ, ಷಡ್ಯಂತ್ರಕಾರಿ ಶಕ್ತಿಗಳನ್ನು ಪ್ರತಿರೋಧಿಸುತ್ತಿದ್ದೇವೆ. ಇದೊಂದು ಮಹಾಯಾನ, ನಾವು ನೀವೆಲ್ಲರೂ ಕೂಡಿ ಮುಂದ್ಸಾಗಿಸಬೇಕಾದ ನವಯಾನ. ದುಡಿಯುವ ವರ್ಗದ ಹೋರಾಟಗಳಿಗೆ ಹೆಸರಾಗಿದ್ದ ದಾವಣಗೆರೆ ಹೊಸ ತಲೆಮಾರಿನ ಮಹಾಯನಕ್ಕೆ ವೇದಿಕೆಯಾಗುತ್ತಿದೆ,” ಎಂದು ಆಯೋಜಕರು ತಿಳಿಸಿದ್ದಾರೆ.

ವಾಡಿಯಿಂದ ಪ್ರಾರಂಭವಾಗಿರುವ ಈ ನಮ್ಮ ಬೈಕ್ ಜಾಥಾವು ಇಂದಿನಿಂದ (ಏ.14) ಏ.26ರವರೆಗೆ ನಡೆಯಲಿದ್ದು, ಸುಮಾರು 20 ಜಿಲ್ಲೆಗಳ ಮೂಲಕ, ಸರಿ ಸುಮಾರು 2000 ಕಿ.ಮೀ. ಕ್ರಮಿಸಿ 26ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ಸೇರಿಕೊಳ್ಳಲಿದೆ ಎಂದು ತಂಡದ ಸರೋವರ್ ಬೆಂಕಿಕೆರೆ ತಿಳಿಸಿದ್ದಾರೆ.

ದೇಶಪ್ರೇಮಿ ಯುವ ಆಂದೋಲನವು ಜಾಥಾದ ಉದ್ದಕ್ಕೂ ವಿದ್ಯಾರ್ಥಿ ಯುವಜನರ ಸಮಸ್ಯೆಗಳು ಮತ್ತು ಸಂವಿಧಾನದ ಸಂರಕ್ಷಣೆಯಲ್ಲಿ ಯುವಜನರ ಪಾತ್ರದ ಕುರಿತು ಹಾಗೂ ಏಪ್ರಿಲ್ 26ರ ಸಮಾವೇಶದ ಪ್ರಚಾರವನ್ನು ನಡೆಸಲಿದೆ. ಏಪ್ರಿಲ್ 14ನೇ ತಾರೀಕು ಅಂಬೇಡ್ಕರ್ ಅವರು ನಮ್ಮ ರಾಜ್ಯದ ಗುಲ್ಬರ್ಗ ಜಿಲ್ಲೆಯ ಈ ವಾಡಿಗೆ ಭೇಟಿ ನೀಡಿದ ಸ್ಥಳವಾದ್ದರಿಂದ ಇಲ್ಲಿಂದಲೇ ನಮ್ಮ ಜಾಥವನ್ನು ಪ್ರಾರಂಭಿಸಲಾಗಿದೆ.

ಈ ಜಾಥಾವು ಸುಮಾರು 20 ಬೈಕ್ ಗಳಲ್ಲಿ 12 ದಿನಗಳು ನಡೆಯಲಿದ್ದು ಸುಮಾರು 20 ಜಿಲ್ಲೆಗಳನ್ನು ಮತ್ತು ಹಲವು ತಾಲೂಕುಗಳನ್ನು ಹಾಗೂ ಊರುಗಳನ್ನು ಸುತ್ತಾಡಿಕೊಂಡು ಏಪ್ರಿಲ್ 25 ನೇ ತಾರೀಕು ದಾವಣಗೆರೆಯನ್ನು ತಲುಪಲಿದೆ. ಇದು ಹಾದು ಹೋಗುವ ಜಿಲ್ಲೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಊರುಗಳಲ್ಲಿ ಯುವಜನರೊಂದಿಗೆ ವಿದ್ಯಾರ್ಥಿ ಯುವಜನರೊಂದಿಗೆ ಸಂವಾದ ಮತ್ತು ಪತ್ರಿಕಾಗೋಷ್ಟಿ ನಡೆಸಲಿದೆ.

ಜಾಥಾದ ಇನ್ನೊಬ್ಬ ಯುವ ಮುಂದಾಳು, ವಿದ್ಯಾರ್ಥಿ ನಾಯಕ ಹೇಮಂತ್ ಸಕಲೇಶ್ ಪುರ, “ನಮ್ಮ ಜಾಥಾವು ಇಂದು ವಾಡಿಯಿಂದ ಆರಂಭಿಸಿ, ಸೇಡಂ, ಚಿಂಚೋಳಿಗೆ ಭೇಟಿ ನೀಡಲಿದೆ. ನಾಳೆ ಅಂದರೆ ಏ.15ರಂದು ಭಾಲ್ಕಿ, ಬಸವಕಲ್ಯಾಣ, ಹುಮ್ನಬಾದ್, ಕಲಬುರ್ಗಿಗಳಲ್ಲಿ ಸಂಚರಿಸಲಿದೆ. ಏ.16ರಂದು ಕಲಬುರ್ಗಿ, ಇಂಡಿ, ವಿಜಯಪುರ, ಏ.17ರಂದು ಸಿಂದಗಿ, ಗಹಾಪುರ, ಯಾದಗಿರಿ, ಏ.18 ದೇವದುರ್ಗ, ರಾಯಚೂರು, ಏ.19ರಂದು ಮಾನ್ವಿ, ಸಿಂಧನೂರು, ಗಂಗಾವತಿ, ಏ.20ರಂದು ಗಂಗಾವತಿ, ಕೊಪ್ಪಳ, ಗದಗ, ಅಥವಾ ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಗದಗ, ಏ.21ರಂದು ಹುಬ್ಬಳ್ಳಿ, ಧಾರವಾಡ, ಮುಂಡಗೋಡ, ಏ.22ರಂದು ಶಿಗ್ಗಾಂವಿ, ಹಾವೇರಿ, ರಾಣಿಬೆನ್ನೂರು, ಶಿಕಾರಿಪುರ, ಏ.23ರಂದು ತೀರ್ಥಹಳ್ಳಿ, ಕೊಪ್ಪ, ಜೈಪುರ, ಶೃಂಗೇರಿ, ಏ.24 ಮತ್ತು 25 ಕೊನೆಯ ದಿನದಂದು ಭದ್ರಾವತಿ, ಶಿವಮೊಗ್ಗ, ಚನ್ನಗಿರಿ, ಚಿತ್ರದುರ್ಗ, ದಾವಣಗೆರೆ ಸಂಚರಿಸಲಿದೆ,” ಎಂದು ತಿಳಿಸಿದ್ದಾರೆ.

ಕಲ್ಬುರ್ಗಿ ಕೇಂದ್ರೀಯ ವಿವಿಯಲ್ಲಿ RSS ಸಭೆ: ಸಾಹಿತಿಗಳಿಂದ ವಿರೋಧ
ಕಲ್ಬುರ್ಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್‌ ಸಭೆ ನಡೆಸಿರುವುದನ್ನು ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆ ತೀವ್ರವಾಗಿ ಖಂಡಿಸಿದ್ದು, ಇದು ಶೈಕ್ಷಣಿಕ ವಲಯದ ಮಹಾ ದುರಂತ ಎಂದು ಆರೋಪಿಸಿದೆ.

ಕೇಂದ್ರೀಯ ವಿಶ್ವ ವಿದ್ಯಾಲಯವನ್ನು ಕೋಮುವಾದದ ಆಡುಂಬೊಲ ಮಾಡಲು ಹೊರಟಿರುವ ಅಲ್ಲಿನ ಆಡಳಿತ ಮಂಡಳಿಯ ಈ ಕುಕೃತ್ಯ ಶೈಕ್ಷಣಿಕ ವಲಯದ ಮಹಾ ದುರಂತವಾಗಿದೆ. ವಿವಿಯಲ್ಲಿ ಸಂಘಿಗಳ ಸಭೆ, ಚಟುವಟಿಕೆ ನಡೆಸುವುದು, ಸಂಘದ ಗೀತೆಯಾಗಿರುವ ನಮಸ್ತೇ ಸದಾ ವತ್ಸಲೇ ಹಾಡಿಸುವುದು ದೇಶದ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ ಎಂದು ಸಂಘಟನೆಯ ಹಿರಿಯರಾದ ಕೆ. ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ಎಸ್‌.ಜಿ ಸಿದ್ದರಾಮಯ್ಯ, ವಿಜಯಾ, ಬಿ.ಶ್ರೀಪಾದ ಭಟ್, ಕೆ.ಎಸ್‌. ವಿಮಲಾ, ಟಿ ಸುರೇಂದ್ರ ರಾವ್, ಮೀನಾಕ್ಷಿ ಬಾಳಿ, ಬಿ.ಎನ್‌ ಯೋಗಾನಂದ, ಎನ್‌.ಗಾಯತ್ರಿ ಮುಂತಾದವರು ಆರೋಪಿಸಿದ್ದಾರೆ.

ವಿವಿಯಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಚಟುವಟಿಕೆಗಳು, ಜನೋಪಯೋಗಿ ಸಂಶೋಧನೆಗಳು, ವರ್ತಮಾನದ ತಲ್ಲಣಗಳ ಕುರಿತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಚಿಂತನ-ಮಂಥನಗಳನ್ನು ನಡೆಸುವುದು ಮುಖ್ಯವಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳ ಬೆಳವಣಿಗೆಯಾಗುತ್ತದೆ. ಆದರೆ, ಇಲ್ಲಿ ಸಂಕುಚಿತ ಮನಸ್ಥಿತಿಯನ್ನು ಮೂಡಿಸುವ ಒಂದು ಗುಂಪು ಧರ್ಮದ್ವೇಷ, ಹಗೆತನ, ದೇಶದ ಸಂವಿಧಾನ ಎಂದಿಗೂ ಒಪ್ಪಲಾರದ ಕೋಮುದ್ವೇಷಗಳನ್ನು ತುಂಬುವ ಆರ್‌ಎಸ್‌ಎಸ್‌ ಪ್ರತಿಪಾದಿಸುವ ದೇಶ ವಿಭಜಕ ವಿಧ್ವಂಸಕ ಕೃತ್ಯಗಳು ನಡೆಯುತ್ತಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

ಈ ಮೊದಲೇ ಇಂಥಹ ಚಟುವಟಿಕೆಗಳು ನಡೆದಾಗ ಸ್ಥಳೀಯ ಸಂವಿಧಾನ ಪರ, ಪ್ರಗತಿಶೀಲರು ಬೃಹತ್ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದರು. ಸ್ವಲ್ಪ ದಿನ ಸಮ್ಮನಿದ್ದಂತೆ ನಟಿಸಿ, ಮತ್ತೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಿದೆ ಎಂಬ ಕಾರಣಕ್ಕೆ ತಮ್ಮ ಚಟುವಟಿಕೆಗಳನ್ನು ಶುರು ಮಾಡಿರುವುದು ಖಂಡನೀಯ.  ಕೇಂದ್ರೀಯ ವಿಶ್ವ ವಿದ್ಯಾಲಯ ದೇಶದ ಆಸ್ಥಿಯೇ ಹೊರತು, ಯಾವುದೇ ಒಂದು ಪಕ್ಷದ ಅಥವಾ ಕೋಮುವಾದಿ ಸಿದ್ದಾಂತವನ್ನು ಪ್ರತಿಪಾದಿಸುವ ಸಂಘಟನೆಯ ಆಸ್ತಿಯಲ್ಲ. ವಿವಿ 140 ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆಯಾಗಿ ದೇಶದ ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸಬೇಕೇ ಹೊರತು, ಕೇಶವ ಕೃಪಾ ಅಥವಾ ನಾಗಪುರದ ಕಛೇರಿಯಾಗಿ ಅಲ್ಲ ದೂರಿದ್ದಾರೆ.

ಕಲಬುರಗಿಯ ಪ್ರಜ್ಞಾವಂತ ಜನರು ಈ  ಕೋಮುವಾದಿ ಸಂಘಿಗಳ ಹುನ್ನಾರದ ವಿರುದ್ಧ ನಡೆಸುವ ಎಲ್ಲಾ ಸಂವಿಧಾನ ಪರ, ನಿಜ ಭಾರತದ ಉಳಿವಿನ ಪರವಾದ ಕೆಲಸಗಳು, ಮತ್ತು ಪ್ರತಿಭಟನೆಗೆ ಬೆಂಬಲ ಸೂಚಿಸುತ್ತೇವೆ. ನಾವು ನಿಮ್ಮೊಂದಿಗೆ ಇರುತ್ತೆವೆ ಎಂಬ ಭರವಸೆಯನ್ನು I ಸಂಘಟನೆಯ ಹಿರಿಯ ನೀಡಿದ್ದಾರೆ.

ರೋಹಿಣಾಕ್ಷ ಶಿರ್ಲಾಲುರಿಂದ ಬೌದ್ಧ-ಮುಸ್ಲಿಮರಲ್ಲಿ ಕೋಮುಭಾವನೆ ಕೆರಳಿಸುವ ಬರಹ: ವಿವಿಗೆ ಪತ್ರ ಬರೆಯಲು ನಿರ್ಧಾರ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲ ಎಂಬುವವರು ಬರೆದಿರುವ ಲೇಖನದಲ್ಲಿ  ಬೌದ್ಧರು, ಮುಸ್ಲಿಮರು, ಅಂಬೇಡ್ಕರ್‌ವಾದಿಗಳಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಲೇಖಕರು ಸುಳ್ಳು ಬರೆದಿದ್ದಾರೆ ಎಂದು ಕಲಬುರಗಿಯ ಸೌಹಾರ್ಧ ಬಳಗದ ದತ್ತಾತ್ರೆಯ ಇಕ್ಕಳಕಿ ಆರೋಪಿಸಿದ್ದಾರೆ.

ರೋಹಿಣಾಕ್ಷ ಅವರು ‘ಅಂಬೇಡ್ಕರರನ್ನು ಬುದ್ಧನೇಕೆ ಸೆಳೆದ’ ಶಿರ್ಷಿಕೆಯೊಂದಿಗೆ ಇಂದು ಬುಧವಾರ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ ‘ಬೌದ್ಧಧಮ್ಮಕ್ಕೆ ಬಾರಿ ಪೆಟ್ಟು ಬಿದ್ದದ್ದು ಮುಸ್ಲಿಂ ಆಕ್ರಮಣದಿಂದ.  ಮುಸ್ಲಿಮರು ಬೌದ್ಧ ವಿಗ್ರಹಗಳನ್ನು ನಾಶ ಮಾಡಿದರು, ಬಿಕ್ಕುಗಳನ್ನು ಕೊಂದುಬಿಟ್ಟರು, ನಳಂದವನ್ನು ಸುಟ್ಟುಹಾಕಿದರು, ಭಾರತದಲ್ಲಿ ಮಾತ್ರವಲ್ಲ ಇಸ್ಲಾಂ ಹೋದಡೆಯಲ್ಲೆಲ್ಲಾ ನಾಶ ಮಾಡಿತು’ ಎಂಬ ಸತ್ಯವನ್ನು ಅಂಬೇಡ್ಕರ್‌ ಅರ್ಥ ಮಾಡಿಕೊಂಡಿದ್ದರು ಎಂದು ರೋಹಿಣಾಕ್ಷ ಅಂಬೇಡ್ಕರ್‌ ಹೆಸರಲ್ಲಿ ಸುಳ್ಳು ಮಾಹಿತಿಯನ್ನು ಬಿತ್ತುತ್ತಿದ್ದಾರೆ ಎಂದು ಎಂದು ಇಕ್ಕಳಿಕೆ ಆರೋಪಿಸಿದ್ದಾರೆ.

ಬೌದ್ಧ ಧರ್ಮದ ಉದಯವನ್ನು ಒಂದು ಕ್ರಾಂತಿಯೆಂದೂ, ಬ್ರಾಹ್ಮಣರಿಂದ ಪ್ರಾರಂಭವಾದ ಪ್ರತಿಕ್ರಾಂತಿಯು ಬೌದ್ಧಧಮ್ಮದ ಅವನತಿ ಮತ್ತು ಪತನಕ್ಕೆ ಕಾರಣವಾಯಿತು ಎಂದು ಡಾ. ಅಂಬೇಡ್ಕರ್‌ ದಾಖಲಿಸಿರುವುದು (ಸಂ:3/2015, ಪುಟ:163) ಅಂಬೇಡ್ಕರ್‌ ಸಂಪುಟಗಳಲ್ಲಿ ದಾಖಲಾಗಿದೆ. ತಾವು ಬೌದ್ಧ ಧಮ್ಮಕ್ಕೆ ಮತಾಂತರ ಆಗಲು ಹಿಂದೂ ಧರ್ಮದ ಸನಾತನತೆಯೆ ಕಾರಣ ಎಂದು ಅಂಬೇಡ್ಕರ್‌ ಪದೆ ಪದೆ ಹೇಳುತ್ತಿದ್ದರು ಎಂದು ಇಕ್ಕಳಕಿ ತಿಳಿಸಿದ್ದಾರೆ.

3.10.1935 ರಲ್ಲಿ ನಾಸಿಕ್ ಜಿಲ್ಲೆಯ ಯಹೋಲ ಮುನಿಸಿಪಾಲಟಿಯು ಡಾ.ಅಂಬೇಡ್ಕರ್ ಅವರಿಗೆ ಬಿನ್ನವತ್ತಳೆ ಅರ್ಪಿಸಿತು. ಇದಕ್ಕೆ ಉತ್ತರಿಸುತ್ತಾ ಡಾ. ಅಂಬೇಡ್ಕರ್ ‘ಹಿಂದೂಧರ್ಮದಲ್ಲಿ ಬೇರೂರಿದ ಅಸಮಾನತೆಯು ಆ ಧರ್ಮವನ್ನು ತೊರೆಯುವಂತೆ ನನ್ನನ್ನು ಒತ್ತಾಯಿಸುತ್ತಿದೆ. ನನ್ನ ತಪ್ಪಿಲ್ಲದೆ ಇದ್ದರೂ ನಾನು  ಅಸ್ಪೃಶ್ಯನಾಗಿ ಜನಿಸಿದೆ. ಈಗ ನಾನು ಹಿಂದೂವಾಗಿ ಸಾಯಲಾರೆ, ಇದರ ನಿರ್ಧಾರ ನನ್ನ ಕೈಯಲ್ಲಿದೆ’ ಎಂದು ಹೇಳುತ್ತಾರೆ. ಹೀಗೆ ಬೌದ್ಧ ಧರ್ಮ ನಾಶವಾಗಲು ಬ್ರಾಹ್ಮಣರು ಕಾರಣ ಎಂಬ ಸತ್ಯ ಅಂಗೈಯಲ್ಲಿ ಇರುವಾಗ ರೋಹಿಣಾಕ್ಷ ಅವರು ಬೌದ್ಧ ಧರ್ಮದ ನಾಶಕ್ಕೆ ಮುಸ್ಲಿಮರು ಕಾರಣ ಎನ್ನುವ ಮೂಲಕ ಕೋಮು ಬಾವನೆ ಕೆರಳಿಸಲು ಕಾರಣರಾಗಿದ್ದಾರೆ. ಲೇಖಕರು ಇಡೀ ಲೇಖನದಲ್ಲಿ ಒಂದೇ ಒಂದು ಪದವನ್ನು ಹಿಂದೂ ಧರ್ಮದ ಸನಾತನೆಯ ಬಗ್ಗೆ ಉಲ್ಲೇಖ ಮಾಡದೆ ಲೇಖಕರು ದಿಡೀರ್ ‘ಮುಸ್ಲಿಮರೆ ಬೌದ್ಧಧರ್ಮದ ನಾಶಕರು’ ಎಂದು ಬರೆದಿದ್ದಾರೆ ಎಂದು ದೂರಿದ್ದಾರೆ.

ಕಲಬುರಗಿ ಹಿಂದೂ-ಬೌದ್ಧ-ಮುಸ್ಲಿಂ ಧರ್ಮೀಯರು ಸಾಮರಸ್ಯದಿಂದ ಬದುಕುವ ಸೂಫಿ-ಶರಣರ ಸೌಹಾರ್ಧದ ನೆಲೆ. ಇಂತಹ ನೆಲೆಯಲ್ಲಿ ಬೌದ್ಧರು-ಮುಸ್ಲೀಮರ ಮಧ್ಯೆ ಕೋಮು ದ್ವೇಶವನ್ನು ಬಿತ್ತಲು ಈ ಲೇಖಕರು ಪ್ರಯತ್ನಿಸಿದ್ದಾರೆ. ಈ ಮೂಲದ ಸ್ವತಃ ಅಂಬೇಡ್ಕರ್ ಆಲೋಚನೆಗಳನ್ನು ತಪ್ಪಾಗಿ ಅರ್ಥೈಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಕಲಬುರಗಿಯ ಅಂಬೇಡ್ಕರ್ ವಾದಿಗಳಿಗೂ ಪರೋಕ್ಷವಾಗಿ ಅವಮಾನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಜೈಭೀಮ್ ಬಂಧುಗಳು, ಬೌದ್ಧಾನುಯಾಯಿಗಳು, ಮುಸ್ಲೀಂ ಬಂಧುಗಳು ಒಟ್ಟಾಗಿ ಈ ಬರಹವನ್ನೂ, ಈ ಬರಹ ಬರೆದ ಲೇಖಕರಿಗೂ ಕಲಬುರಗಿಯ ಸೌಹಾರ್ಧ ಕದಡುವ ನೀಚತನಕ್ಕೆ ದಿಕ್ಕಾರ ಹೇಳಬೇಕಿದೆ. ಈ ಕುರಿತು ಸೆಂಟ್ರಲ್ ಯುನಿವರ್ಸಿಟಿಯ ಕುಲಪತಿಗಳಿಗೆ ಎಚ್ಚರಿಕೆಯ ಪತ್ರ ನೀಡಲಾಗುವುದು ಎಂದು ದತ್ರಾತ್ರೆಯ ಇಕ್ಕಳಕಿ ತಿಳಿಸಿದ್ದಾರೆ.

ವಿಪಕ್ಷ ನಾಯಕನ ಗೊಂದಲ ಮುಚ್ಚಿಕೊಳ್ಳಲು ಬಿಜೆಪಿ ಅನಗತ್ಯ ರಾಜಕೀಯ : ಸಚಿವ ಕೃಷ್ಣಭೈರೇಗೌಡ
ಬಿಜೆಪಿಯವರ ತಮ್ಮ ಮನೆಯ ಹುಳುಕನ್ನ ಮುಚ್ಚಿಕೊಳ್ಳಲು ಸಣ್ಣಪುಟ್ಟ ವಿಷಯಗಳಲ್ಲೂ ರಾಜಕೀಯ ಬೇರೆಸ್ತಿದ್ದಾರೆ. ಅವರು ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಕಲಬುರಗಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ಹತಾಶರಾಗಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಜನರ ನಾಡಿ ಮಿಡಿತ ಅರಿತು ಕೆಲಸ ಮಾಡುತ್ತಿದೆ. ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿ ಎರಡೂವರೆ ತಿಂಗಳಾದ್ರು ವಿಧಾನಸಭೆ ಮತ್ತು ಪರಿಷತ್ ಎರಡೂ ಕಡೆಗಳಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳಲು ಬಿಜೆಪಿಗೆ ಆಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧದ ನಿಲುವನ್ನು ಬಿಜೆಪಿ ತಗೆದುಕೊಂಡಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಸರ್ಕಾರದ ಧ್ಯೆಯೋದ್ದೇಶ ಅರಿತು ಉತ್ತಮ ಆಡಳಿತ ನೀಡಬೇಕು
ಇನ್ನು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾವಾರು ಕಂದಾಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಸಚಿವ ಕೃಷ್ಣ ಬೈರೇಗೌಡರು, ಕಂದಾಯ ಇಲಾಖೆಯು ಸರ್ಕಾರದ‌ ಮಾತೃ ಇಲಾಖೆಯಾಗಿದ್ದು, ಇಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಸಹ ಮಾತೃ ಹೃದಯಿಗಳಾಗಿರಬೇಕು. ಸರ್ಕಾರದ ಉದ್ದೇಶ ಮತ್ತು ಧ್ಯೆಯೋದ್ದೇಶಗಳನ್ನು ಅರಿತು ಜನರಿಗೆ ಉತ್ತಮ ಆಡಳಿತ ನೀಡಬೇಕು ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಭಾಗದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

“ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಅಡಳಿತದಲ್ಲಿ ಬದಲಾವಣೆ ತರಬೇಕು. ಸರಳೀಕರಣಕ್ಕೆ ಆದ್ಯತೆ ನೀಡಬೇಕು. ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ-ಸಿಬ್ಬಂದಿಗಳು ತಂಡದ ರೂಪದಲ್ಲಿ ಕಾರ್ಯನಿರ್ವಹಿಸಬೇಕು ಎಂದ‌ ಸಚಿವರು, ಕಂದಾಯ ಸಚಿವನಾದ ಮೇಲೆ ಈಗಾಗಲೆ ಬೆಳಗಾವಿ‌ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿದ್ದು, ಇಂದು‌ ಇಲ್ಲಿ (ಕಲಬುರಗಿ) ನಡೆಸಲಾಗುತ್ತಿದೆ. ಮುಂದೆ ಜಿಲ್ಲಾವಾರು ಸಹ ಪ್ರಗತಿ ಪರಿಶೀಲನೆ ಮಾಡುವುದಾಗಿ ಹೇಳಿದರು.

ಕಷ್ಟದಲ್ಲಿದ್ದವರಿಗೆ ಪರಿಹಾರ ವಿತರಣೆ ಮಾಡುವುದು ಒಳ್ಳೆಯದ್ದೆ. ನೊಂದವರಿಗೆ ಸರ್ಕಾರ ಸಹಾಯ ಹಸ್ತ ಚಾಚುವುದು ಉತ್ತಮ. ಆದರೆ ಇದನ್ನು ದುರಪಯೋಗ ವಾಗಬಾರದು ಎಂಬುದು ನಮ್ಮ‌ ಕಳಕಳಿಯಾಗಿದೆ. ವಿಪತ್ತು ನಿರ್ವಹಣೆ ಹೆಸರಿನಲ್ಲಿ ಹಣ ದುರಪಯೋಗವಾದಲ್ಲಿ ಅದು ಕೆಟ್ಟ ಆಡಳಿತಕ್ಕೆ ಅವಕಾಶ ಮಾಡಿಕೊಡುತ್ತದೆ. ಪರಿಹಾರ ವಿತರಣೆಯ ಕೆಲವೊಂದು ಪ್ರಕರಣದಲ್ಲಿ ಸ್ಯಾಟಲೈಟ್ ಫೋಟೋ ಗಳನ್ನು ಪರೀಕ್ಷಿಸಿ ಜಿಲ್ಲಾಧಿಕಾರಿಗಳು ಪರಿಹಾರ ನೀಡಬೇಕು ಎಂದು ಕಂದಾಯ ಸಚಿವ‌ ಕೃಷ್ಣ ಬೈರೇಗೌಡ ತಿಳಿಸಿದರು.

ವಿಪತ್ತು ನಿರ್ವಹಣೆ ಕೆಲಸ ವಿಳಂಬ ಸಲ್ಲ
ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ 2020-21ನೇ ಸಾಲಿನ ನೆರೆ ಹಾವಳಿಯ ಕಾಮಗಾರಿಗಳು ಇನ್ನು ಪ್ರಗತಿಯಲ್ಲಿರುವುದಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿ, ರಸ್ತೆ, ಶಾಲೆ, ಸೇತುವೆ ದುರಸ್ತಿಗೆ ವಿಪತ್ತು ನಿರ್ವಹಣೆಯಲ್ಲಿ 1-2 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಮಳೆಗಾಲ ಹೋಗಿ ಮತ್ತೆ ಮಳೆಗಾಲ ಬಂದರೂ ಕೆಲಸ ಇನ್ನು ಮುಗಿಯಲ್ಲ ಎಂದರೆ ಏನರ್ಥ. ನೀಡಲಾದ ಅನುದಾನ ಉದ್ದೇಶ ಈಡೇರುತ್ತಾ ಎಂದು ಡಿಸಿಯನ್ನು ತರಾಟೆಗೆ ತೆಗೆದುಕೊಂಡರು.

ಗಡಿಪಾರಿನ ಸೇಡಿಗೆ ಫೋನ್ ಆಡಿಯೋ ಹರಿಬಿಟ್ಟ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್!
ಕಾಂಗ್ರೆಸ್ ನಾಯಕ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಚಿತ್ತಾಪುರ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ಮಣಿಕಂಠ ರಾಠೋಡ್ ಅವರ ನಡುವಿನ ರಾಜಕೀಯ ಸಮರ ಈಗ ಹೊಸ ತಿರುವು ಪಡೆದುಕೊಂಡಿದೆ. ಅದರಲ್ಲಿ ಗುಲ್ಬರ್ಗ ಕಮೀಷನರ್ ರವಿಕುಮಾರ್ ಅವರ ಪತ್ನಿ ರೂಪಾಲಿ ನಾಯಕ್ ಅವರು ಮಣಿಕಂಠ ರಾಠೋಡ್ ಅವರ ಜೊತೆಗೆ ಮಾತಾಡಿರುವ ಆಡಿಯೋ ಈಗ ವೈರಲ್ ಆಗಿದ್ದು, ಅದರ ಸತ್ಯಾಸತ್ಯತೆ ಏನು ಎಂಬ ಬಗ್ಗೆ ಪೀಪಲ್ ಮೀಡಿಯಾ ನಡೆಸಿದ ಒಂದು FACT CHECK ತನಿಖಾ ವರದಿ ಹೀಗಿದೆ.

ಮಣಿಕಂಠ ರಾಠೋಡ್ ಹಿನ್ನೆಲೆ ನೋಡಿದಾಗ ಈ ವ್ಯಕ್ತಿ ರಾಜಕೀಯವಾಗಿ ಬಿಜೆಪಿ ಪಕ್ಷದವರಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಹಾಗಾಗೇ ಪ್ರಿಯಾಂಕ್ ಖರ್ಗೆ ವಿರುದ್ಧ ನಿರಂತರವಾಗಿ ಒಂದಿಲ್ಲೊಂದು ಆರೋಪ ಪ್ರತ್ಯಾರೋಪ ನಡೆಯುತ್ತಲೇ ಇದೆ. ಕಳೆದ ನವೆಂಬರ್ ನಲ್ಲೂ ಕೂಡಾ ಈ ವ್ಯಕ್ತಿ ಬಹಿರಂಗ ಪತ್ರಿಕಾಗೋಷ್ಠಿಯಲ್ಲೂ ‘ಪ್ರಿಯಾಂಕ್ ಖರ್ಗೆಗೆ ಶೂಟ್ ಮಾಡಲೂ ನಾವು ರೆಡಿ’ ಎಂಬಂತೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.

ರಾಜಕೀಯದ ಹೊರತಾಗಿಯೂ ಈ ವ್ಯಕ್ತಿ ಕಡೆಯಿಂದ ವಿವಾದಾತ್ಮಕ ವಿಚಾರಗಳಿವೆ. ಪೊಲೀಸ್ ಇತಿಹಾಸದಲ್ಲಿ ಇವರೊಬ್ಬ ರೌಡಿಶೀಟರ್ ಸಾಲಿಗೆ ಸೇರಿದ್ದು 30 ಕ್ಕೂ ಹೆಚ್ಚು ಕ್ರಿಮಿನಲ್ ಹಾಗೂ ಅಪರಾಧ ಪ್ರಕರಣಗಳಲ್ಲಿ ಇವರ ಹೆಸರು ಇದೆ ಎಂಬುದು ಪೊಲೀಸ್ ಮೂಲಗಳಿಂದ ಬಂದ ಮಾಹಿತಿಯಾಗಿದೆ. ಅಷ್ಟೆ ಅಲ್ಲದೇ ಇಂತಹ ಪ್ರಕರಣಗಳಿಗೇ ಸಂಬಂಧಿಸಿದಂತೆ ಪೊಲೀಸರ ಕಡೆಯಿಂದ ಒಂದು ವರ್ಷ ಕಾಲ ಶಿವಮೊಗ್ಗಕ್ಕೆ ಗಡಿಪಾರಿಗೆ ಗುರಿಯಾಗಿದ್ದಾರೆ. ಮತ್ತು ಪ್ರತಿನಿತ್ಯ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಾದ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಕೂಡಾ ಇವರಾಗಿದ್ದಾರೆ.

ಮಣಿಕಂಠ ರಾಠೋಡ್ ಬಗ್ಗೆ ಇಷ್ಟು ವಿವರವಾದ ಮಾಹಿತಿ ಹಿಂದೆ ಪ್ರಮುಖ ಕಾರಣವಿದೆ. ಸಾಕಷ್ಟು ಕ್ರಿಮಿನಲ್ ಹಿನ್ನೆಲೆ, ರಾಜಕೀಯವಾಗಿಯೂ ಮೇಲಿಂದ ಮೇಲೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ಜೊತೆಗೆ ಕ್ರಿಮಿನಲ್ ಪ್ರಕರಣಗಳ ಕಾರಣಕ್ಕೇ ಗಡಿಪಾರಿಗೆ ಒಳಗಾದ ಇಂತಹ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಕಲಬುರಗಿ ಕಮೀಷನರ್ ರವಿಕುಮಾರ್ ಅವರ ಪತ್ನಿ ರೂಪಾಲಿ ನಾಯಕ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಜೊತೆಗೆ ಅವರ ಜೊತೆಗೆ ಮಾತನಾಡಿದ್ದು ಎನ್ನಲಾದ ಆಡಿಯೋ ಒಂದರಲ್ಲಿ 3 ಲಕ್ಷ ಲಂಚ ಕೇಳಿದ ಗಂಭೀರ ಆರೋಪ ಮಾಡಿದ್ದಾರೆ. ಇದರ ಸತ್ಯಾಸತ್ಯತೆ ಬಗ್ಗೆ ವಿವರವಾಗಿ ಮಾಹಿತಿ ಕಲೆ ಹಾಕಲು ಪೀಪಲ್ ಮೀಡಿಯಾ ನೇರವಾಗಿ ಕಮೀಷನರ್ ರವಿಕುಮಾರ್ ಅವರ ಪತ್ನಿ ರೂಪಾಲಿ ನಾಯಕ್ ಅವರ ಬಳಿ ಮಾತನಾಡಿತು.

ರೂಪಾಲಿ ನಾಯಕ್ ಒಂದಷ್ಟು ಕಾಲದಿಂದ ಹಲವಷ್ಟು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ, ಯುವ, ಸ್ಥಳೀಯ ಪ್ರತಿಭೆಗಳಿಗೆ ಸಾಕಷ್ಟು ವೇದಿಕೆ ಕಲ್ಪಿಸಿದ ಹಿನ್ನೆಲೆಯವರು. ಮತ್ತು ಇವರ ಪತಿ ಕಮೀಷನರ್ ರವಿಕುಮಾರ್ ಕೂಡಾ ಇಲ್ಲಿಯವರೆಗೂ ಒಂದೇ ಒಂದು ಕಪ್ಪುಚುಕ್ಕೆ ಪಡೆಯದೇ ಒಳ್ಳೆಯ ಹೆಸರು ಗಳಿಸಿಕೊಂಡು ಬಂದ ಹಿನ್ನೆಲೆಯವರಾಗಿದ್ದವರು. ಈ ಹಿಂದೆ ಡಿಜಿಪಿ ಹುದ್ದೆಯಲ್ಲಿದ್ದು ದಕ್ಷ ಪ್ರಾಮಣಿಕ ಅಧಿಕಾರಿ ಎನಿಸಿಕೊಂಡವರು. ಆದರೆ ಕ್ರಿಮಿನಲ್ ಗಳ ಪಾಲಿಗೆ ಯಾವುದೇ ಕಾರಣಕ್ಕೂ ಮುಲಾಜಿಗೆ ಒಳಗಾಗುವ ವ್ಯಕ್ತಿಯಲ್ಲ ಎಂಬುದು ಇವರ ಪೊಲೀಸ್ ಟ್ರಾಕ್ ರೆಕಾರ್ಡ್ ನಲ್ಲೇ ಮನೆಮಾತಾದ ವ್ಯಕ್ತಿ.

ಇನ್ನು ಈ ಆಡಿಯೋ ಕಾಲ್ ವದಂತಿಗೆ ಸಂಬಂಧಿಸಿದಂತೆ ಕಲಬುರಗಿ ದಸರಾ ಹಿನ್ನೆಲೆಯ ದಾಂಡ್ಯಾ ಕಾರ್ಯಕ್ರಮಕ್ಕೆ ರೂಪಾಲಿ ನಾಯಕ್ ಹೆಚ್ಚಿನ ಜವಾಬ್ದಾರಿ ತಗೆದುಕೊಂಡಿರುತ್ತಾರೆ. ಹಾಗಾಗಿ ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಪ್ರಚಾರಕ್ಕೆ ಬಂದು ಮನೆಮಾತಾಗಿರುವ ಸೆಲೆಬ್ರಿಟಿ ಮಂಗ್ಲಿ ಬಾಯಿ ಅವರನ್ನು ಕರೆಸುವ ಬಗ್ಗೆಯೂ ಆಯೋಜಕರಲ್ಲಿ ಚರ್ಚೆ ನಡೆದಿದೆ. ಆ ಸಮಯಕ್ಕೆ ಒಂದಷ್ಟು ಕಾರ್ಯಕ್ರಮದ ಕಾರಣಕ್ಕೆ ಮಂಗ್ಲಿ ಬಾಯಿ ಅವರ ಸಂಪರ್ಕ ಗಿಟ್ಟಿಸಿದ್ದ ಮಣಿಕಂಠ ರಾಠೋಡ್ ಮಂಗ್ಲಿ ಬಾಯಿ ಅವರ ಕರೆಸುವ ಜವಾಬ್ದಾರಿ ನಾನು ತಗೆದುಕೊಳ್ಳುತ್ತೇನೆ. ಉಳಿದ ಪೇಮೆಂಟ್ ವಿಚಾರಗಳನ್ನ ನೀವುಗಳೇ ಮಾತನಾಡಬೇಕು ಎಂದಿದ್ದಾರೆ.

ನಂತರ ಮಂಗ್ಲಿ ಬಾಯಿ ಕಾರ್ಯಕ್ರಮಕ್ಕೆ ಒಪ್ಪಿ 3 ಲಕ್ಷ ಪೇಮೆಂಟ್ ಗೆ ಬರುವ ಬಗ್ಗೆ ಮಾತುಕತೆ ಮುಗಿದಿರುತ್ತದೆ. ಇದರ ಮಾಹಿತಿ ನೀಡಲು ರೂಪಾಲಿ ನಾಯಕ್ ಅವರು ಮಣಿಕಂಠ ರಾಠೋಡ್ ಅವರ ಜೊತೆಗೆ ಮಾತನಾಡಿದ ಆಡಿಯೋ ಈಗ ಕನ್ನಡದ ವಿವಿಧ ದೃಶ್ಯ ಮಾದ್ಯಮಗಳ ಮೂಲಕ ವೈರಲ್ ಆಗುತ್ತಿದೆ. ಈ ಬಗ್ಗೆ ಪೀಪಲ್ ಮೀಡಿಯಾಗೆ ಸ್ಪಷ್ಟನೆ ನೀಡಿದ ರೂಪಾಲಿ ನಾಯಕ್ ಇದಿಷ್ಟು ಬಿಟ್ಟರೆ ಮತ್ತೆ ಯಾವ ಭ್ರಷ್ಟಾಚಾರವೂ ಇಲ್ಲ, ಏನೂ ಇಲ್ಲ. ತನ್ನ ಕ್ರಿಮಿನಲ್ ಚಟುವಟಿಕೆಗೆ ಕಮೀಷನರ್ ರವಿಕುಮಾರ್ ಬ್ರೇಕ್ ಹಾಕಿದ ಮತ್ತು ಗಡಿಪಾರಿಗೆ ವ್ಯವಸ್ಥೆ ಮಾಡಿದ ಕಾರಣಕ್ಕೆ ರವಿಕುಮಾರ್ ಮೇಲೆ ಇಲ್ಲದ ಆರೋಪ ಮಾಡಿದ್ದಾರೆ. ಜೊತೆಗೆ ದಸರಾ ಸಂದರ್ಭದಲ್ಲಿ ಅತಿಥಿಗಳ ಕರೆಯಲು ಮಾತನಾಡಿದ ಆಡಿಯೋ ಇಟ್ಟು ಭ್ರಷ್ಟಾಚಾರದ ವಿಚಾರಕ್ಕೆ ತಳುಕು ಹಾಕುವುದು ಎಷ್ಟು ಸರಿ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

‘ಬೇಕಾದರೆ ಈ ಬಗ್ಗೆ ತನಿಖೆ ಕೂಡಾ ನಡೆಯಲಿ. ಅದಕ್ಕೆ ಬೇಕಾದ ಸಾಕ್ಷ್ಯ ಕೊಡಲು ನಾನು ಸಿದ್ಧಳಿದ್ದೇನೆ. ಇವರ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ನನ್ನ ಹೆಸರು ಕೆಡಿಸುವ ಕಾರ್ಯ ದಯವಿಟ್ಟು ನಿಲ್ಲಿಸಲಿ ಎಂದು ಮಣಿಕಂಠ ರಾಠೋಡ್ ಮತ್ತು ಮಾಧ್ಯಮಗಳ ಬಗ್ಗೆ ರೂಪಾಲಿ ನಾಯಕ್’ ಕಿಡಿಕಾರಿದ್ದಾರೆ.

ಇಲ್ಲಿ ಲಂಬಾಣಿ ನುಡಿಯಲ್ಲಿರುವ ಆಡಿಯೋ ತುಣುಕನ್ನು  ಪೀಪಲ್ ಮೀಡಿಯಾ ಪರಿಶೀಲಿಸಿದೆ. ಅದರಲ್ಲಿ   ರೂಪಾಲಿ ನಾಯಕ್ ಒಂದೆರಡು ಬಾರಿ ಕಾರ್ಯಕ್ರಮದ ಬಗ್ಗೆ ಮಾತಾಡಿದ್ದಾರೆ. ಸೆಲೆಬ್ರಿಟಿ ಎಂದು ಹೇಳಿದ್ದಾರೆ‌. ಅದು ಯಾವುದೋ ವೈಯಕ್ತಿಕ ವ್ಯವಹಾರ ಎನ್ನಲು ಯಾವುದೇ ಆಧಾರವಿಲ್ಲ. ಮಾಧ್ಯಮಗಳು ಈ ಆಡಿಯೋವನ್ನು ಸಂದರ್ಭದಿಂದ ಹೊರಗಿಟ್ಟು ಇದೊಂದು ಭ್ರಷ್ಟಾಚಾರ ಪ್ರಕರಣ ಎನ್ನುವಂತೆ ಪ್ರಸಾರ ಮಾಡಿವೆ. ಹಾಗಾದರೆ ಇದರಲ್ಲಿ ಮಣಿಕಂಠ ರಾಠೋಡ್ ಉದ್ದೇಶ ಏನಿರಬಹುದು.? ಸುಮಾರು ಎರಡು ತಿಂಗಳ ಹಿಂದೆ ಮಾತನಾಡಿದ ಆಡಿಯೋ ಇಟ್ಟು ಕಮೀಷನರ್ ಹೆಸರು ಕೆಡಿಸುವ ಉದ್ದೇಶದ ಬಗ್ಗೆ ಈಗ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸಂಕ್ಷಿಪ್ತವಾಗಿ ರೂಪಾಲಿ ನಾಯಕ್ ಅವರು ಕೊಟ್ಟ ಮಾಹಿತಿಯಂತೆ ಸ್ಪಷ್ಟವಾಗಿ ಇದೊಂದು ಹಿಟ್ ಅಂಡ್ ರನ್ ಕೇಸ್ ಅನ್ನೋದರಲ್ಲಿ ಎರಡು ಮಾತಿಲ್ಲ.

ಈ ಮೂಲಕ ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಿದ ಮಣಿಕಂಠ ರಾಠೋಡ್ ಗೆ ರಾಜಕೀಯವಾಗಿ ತಲೆದಂಡ ತೆರಬಹುದೇ? ಗೊತ್ತಿಲ್ಲ. ಆದರೆ ಕಳೆದ ಒಂದು ವಾರದಿಂದ ಬಿಜೆಪಿ ಪಕ್ಷಕ್ಕೆ ಸೇರುತ್ತಿರುವ ಕ್ರಿಮಿನಲ್ ಗಳ ಪಟ್ಟಿ ಮಾಡ್ತಾ ಹೋದರೆ ಆ ಪಟ್ಟಿಯಲ್ಲಿ ಮಣಿಕಂಠ ರಾಠೋಡ್ ಹೆಸರೂ ಸೇರ್ಪಡೆ ಆಗಲಿದೆ. ಆಡಳಿತಾರೂಢ ಬಿಜೆಪಿಗೆ ಇಂತವರೇ ಬೇಕಾ ಎಂಬುದು ಪ್ರಶ್ನಾರ್ಹ ವಿಚಾರವಾಗಿದೆ.

ಮುಂದಿನ ಶೈಕ್ಷಣಿಕ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಬಸವರಾಜ ಬೊಮ್ಮಾಯಿ
ಕಲಬುರಗಿ: ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಕುರಿತು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಹಾಗೂ ಕಟ್ಟಡ ನಿರ್ಮಾಣ ಮಾಡುವ ಮೂಲಕ ಅಗತ್ಯ ಮೂಲಸೌಕರ್ಯ ಒದಗಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ತರಲಾಗುವುದು. ಮುಂದಿನ ಆಗಸ್ಟ್ 15ರೊಳಗೆ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಶೌಚಾಲಯ ನಿರ್ಮಾಣ ಮಾಡಲು ತಕ್ಷಣವೇ 250 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದರು.

ರಾಜ್ಯದ 6 ಸಾವಿರ ಶಾಲೆಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲೇ 2 ಸಾವಿರ ಕಟ್ಟಡಗಳು ನಿರ್ಮಾಣವಾಗಲಿವೆ. ಈಗಾಗಲೇ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ವಾರ 2ನೇ ಹಂತದಲ್ಲಿ ನೇಮಕಾತಿಗೆ ಆದೇಶ ಹೊರಬೀಳಲಿದೆ ಎಂದು ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪಠ್ಯ ಕೇಸರಿಕರಣವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ದಿನಗಳಿಂದ ಸರ್ಕಾರ ಏನೇ ಪ್ರಗತಿಪರ ಕೆಸಗಳನ್ನು ಮಾಡಿದರು ಕೂಡ, ಅದರಲ್ಲಿ ವಿವಾದ ಸೃಷ್ಠಿಮಾಡುವಂತಹ ಅವ್ಯಾಸ ಬೆಳದು ಬಿಟ್ಟಿದೆ. ಏಕೆಂದರೆ ಅವರಿಗೆ ರಾಜ್ಯ ಮತ್ತು ರಾಜ್ಯದಲ್ಲಿನ ಜನರು ಪ್ರಗತಿಯಾಗುವುದು ಇಷ್ಟವಿಲ್ಲ, ಸರ್ಕಾರ ಇಂತಹ ಪ್ರಗತಿಪರ ಯೋಜನೆಗಳನ್ನು ಜಾರಿಗೆ ತರುವುದರಿಂದ ಜನರಿಗೆ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂಬ ಕಾರಣಕ್ಕೆ, ಇದರಲ್ಲೂ ರಾಜಕಾರಣ ಮಾಡಬೇಕು ಎನ್ನುವುದು ಹಲವರ ಉದ್ದೇಶವಾಗಿದೆ ಎಂದು ದೂರಿದರು.

ಬಾಲಕಿ ಅತ್ಯಾಚಾರ ಮಾಡಿ ಕೊಂದವರು ಅಪ್ರಾಪ್ತ ಬಾಲಕರು: ಆಘಾತಕಾರಿ ಮಾಹಿತಿ ಬಯಲು
ಆಳಂದ (ಕಲಬುರಗಿ): ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಪ್ರಕರಣದ ಆರೋಪಿಗಳೆಲ್ಲರೂ ಅಪ್ರಾಪ್ತ ಬಾಲಕರು ಎಂಬ ಆಘಾತಕಾರಿ ವಿದ್ಯಮಾನ ಬಯಲಿಗೆ ಬಂದಿದೆ.
ಮೂರು ಜನ ಅಪ್ರಾಪ್ತ ಬಾಲಕರು ತಾಲ್ಲೂಕಿನ ಕೊರಳ್ಳಿ ಗ್ರಾಮದ ಕಬ್ಬಿನಗದ್ದೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು. ಅತ್ಯಾಚಾರದ ಬಳಿಕ ಬಳಿಕ ಬಾಲಕಿಯ ಕುತ್ತಿಗೆಯನ್ನು ವೇಲ್‌ನಿಂದ ಸುತ್ತಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಆಳಂದ ಪೊಲೀಸರು ಅತ್ಯಾಚಾರ ಎಸಗಿದ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿ, ಅತ್ಯಾಚಾರವೆಸಗಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕೊರಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಬಾಲಕಿ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕೋಗನೂರು ಗ್ರಾಮದವಳಾಗಿದ್ದು, ಆಳಂದ ತಾಲ್ಲೂಕಿನ ಕೊರಳ್ಳಿಯ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದಳು.
ದೀಪಾವಳಿ ಹಬ್ಬಕ್ಕೆ ತಂದೆ ತಾಯಿಯ ಬಳಿ ತೆರಳಿದ್ದ ಬಾಲಕಿ ಹಬ್ಬ ಮುಗಿಸಿ ವಾಪಸ್ ನಿನ್ನೆ ಕೊರಳ್ಳಿಗೆ ಬಂದಿದ್ದಳು ಸಂಬಂಧಿಕರ ಮನೆಯಲ್ಲಿದ್ದ ಬಾಲಕಿ ನಿನ್ನೆ ಮಧ್ಯಾಹ್ನ ಬಹಿರ್ದೆಸಗೆ ಹೋಗಿದ್ದವಳು ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಬಳಿಕ ಸಂಬಂಧಿಕರು ಬಹಿರ್ದೆಸೆಗೆ ತೆರಳಿದ್ದ ಸ್ಥಳಕ್ಕೆ ಹೋಗಿ ಹುಡುಕಾಡಿದರೂ ಬಾಲಕಿ ಪತ್ತೆಯಾಗಿರಲಿಲ್ಲ.
ಕಬ್ಬಿನ ಹೊಲದಲ್ಲಿ ಬಾಲಕಿ ಶವವಾಗಿ ಪತ್ತೆಯಾದ ನಂತರ, ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರಿಂದ ಹುಡುಕಾಟ ನಡೆಸಿದ ಪೊಲೀಸರಿಗೆ ಅಪ್ತಾಪ್ತ ಬಾಲಕರು ಸಿಕ್ಕಿಬಿದ್ದಿದ್ದಾರೆ.

ನವ ಕಲ್ಯಾಣ ಕರ್ನಾಟಕದಿಂದ ನವ ಕರ್ನಾಟಕ ನಿರ್ಮಾಣ: ಬಸವರಾಜ ಬೊಮ್ಮಾಯಿ
ಕಲಬುರಗಿ: ಹೈದರಬಾದ್-‌ ಕರ್ನಾಟಕದ ವಿಮೋಚನಾ ದಿನದ ಅಮೃತಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕದ ಮುಂದಿನ ಸಮಗ್ರ ಅಭಿವೃದ್ಧಿ ಕುರಿತು ಮಾತನಾಡಿದರು.

ಈ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಪ್ರದೇಶ ಎಂದರೆ ನನಗೆ ಅಚ್ಚುಮೆಚ್ಚು. ಇದು ನನ್ನ ಹೃದಯಕ್ಕೆ ಹತ್ತಿರವಾದ ಪ್ರದೇಶವಾಗಿದೆ. ನವ ಕಲ್ಯಾಣ ಕರ್ನಾಟಕದಿಂದ ನವ ಕರ್ನಾಟಕ ನಿರ್ಮಾಣ, ನವ ಕರ್ನಾಟಕದಿಂದ ನವಭಾರತ ನಿರ್ಮಾಣ. ಇದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ರಿಯೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹಿಂದಿನ ಬಜೆಟ್ ನಲ್ಲಿ 3000ಕೋಟಿ ರೂ ನೀಡಿದ್ದೇವು. ಮುಂದಿನ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆಂದು 5000ಕೋಟಿ ಮೀಸಲಿರಿಸಲಿದ್ದೇವೆ ಎಂದು ಬೊಮ್ಮಾಯಿ ಅವರು ಹೇಳಿದರು.

ಕಲಬುರಗಿ ಜವಳಿ ಪಾರ್ಕ್ ಸ್ಥಾಪಿಸಿ ಸ್ಥಳೀಯ 25 ಸಾವಿರ ಜನರಿಗೆ ಉದ್ಯೋಗ ದೊರಕಿಸುವ ಮಹತ್ತರ ಯೋಜನೆಗೆ ನಾನೇ ಶೀಘ್ರದಲ್ಲಿಯೇ ಅಡಿಗಲ್ಲು ಹಾಕಲಿದ್ದೇನೆ ಹಾಗೂ ಜಯದೇವ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ  ಉದ್ಘಾಟಿಸುತ್ತೇವೆ‌‌ ಎಂದು ಬೊಮ್ಮಾಯಿ ಅವರು ತಿಳಿಸಿದರು.

ವಿಶ್ವಗುರು ಬಸವಣ್ಣನವರ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು. ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಅನುಭವ ಮಂಟಪಕ್ಕೆ ಗುದ್ದಲಿ ಪೂಜೆಯನ್ನು ನೇರವೇರಿಸಿದ್ದರು. ನಾವು ಶೀಘ್ರದಲ್ಲಿಯೇ ಅನುಭವ ಮಂಟಪವನ್ನು ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲಿದ್ದೇವೆ. ಇದು ನಮ್ಮ ಸಂಕಲ್ಪವಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲೆ ಕೊಠಡಿಗಳ ನಿರ್ಮಾಣದ ಕುರಿತು ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ 2100 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು ಹಾಗೂ 2500 ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಮುಂದುವರೆದು ಮಾತನಾಡಿದ ಅವರು, ಹಲವಾರು ಸರ್ಕಾರಗಳು, ಹಲವಾರು ಮುಖ್ಯಮಂತ್ರಿಗಳು, ಹಲವಾರು ನಾಯಕರು ಈ ಪ್ರದೇಶದ ಜನರ ಆಶೀರ್ವಾದದಿಂದ ಆಡಳಿತ ಮಾಡಿದ್ದಾರೆ. ಸದಾ ಜನರ ಮಧ್ಯವಿದ್ದು, ಜನರ ಸಮಸ್ಯೆಗಳನ್ನು ಆಲಿಸಿ, ತ್ವರಿತಗತಿಯಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಜನಪರ ಸರ್ಕಾರದ ಮುಖ್ಯ ಲಕ್ಷಣವಾಗಿದೆ. ಸಾಧು, ಸಂತ, ಶರಣರ ನಾಡಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಜನಿಸಿರುವ ನಾವೆಲ್ಲರೂ ಪುಣ್ಯವಂತರು. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಪರ್ವಕ್ಕೆ ಇಂದು ನಾವೆಲ್ಲರೂ ಸೇರಿ ಚಾಲನೆ ನೀಡಿದ್ದೇವೆ ಮತ್ತು ಕಲ್ಯಾಣ ಕರ್ನಾಟಕ ಸಹ ಮುಂದಿನ ದಿನಗಳಲ್ಲಿ ಇತರ ಭಾಗದಂತೆ ಅಭಿವೃದ್ಧಿಶೀಲ ಪ್ರದೇಶವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವ: ಸಿ.ಎಂ ಗೆ ಕಪ್ಪು ಬಟ್ಟೆ ಪ್ರದರ್ಶನ
ಕಲಬುರಗಿ: ಹೈದರಾಬಾದ್ ಕರ್ನಾಟಕ ವಿಮೋಚನ ದಿನದ ವಿಶೇಶವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಲಬುರಗಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ,  ನಗರದ ಎಸ್‌ವಿಪಿ ವೃತ್ತದಲ್ಲಿನ ಭಾರತದ ಉಕ್ಕಿನ ಮನುಷ್ಯ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ವೇಳೆ ತಳವಾರ, ಕೋಲಿ ಸಮುದಾಯದ ಮುಖಂಡರು ಕಪ್ಪು ಬಟ್ಟೆ ಪ್ರದರ್ಶಿಸಿದರು.

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಎಸ್‌ವಿಪಿ ವೃತ್ತದಲ್ಲಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ವೇಳೆ ತಳವಾರ, ಕೋಲಿ ಸಮುದಾಯದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿದರು.#kalaburagi #basavarajbommai #KalyanaKarnatakaUtsava pic.twitter.com/7WqXvgUgU5
— Prajavani (@prajavani) September 17, 2022

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ : ಕಲಬುರಗಿಯಲ್ಲಿ ಧ್ವಜಾರೋಹಣ ಮಾಡಿದ ಸಿಎಂ ಬೊಮ್ಮಾಯಿ
ಕಲಬುರಗಿ : ಸೆಪ್ಟಂಬರ್‌ 17 ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳಲ್ಲಿರುವ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯಾಗಿದೆ. ಈ ವಿಶೇಷ ದಿನದಂದು ರಾಜ್ಯದ 7 ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದ್ದು ಕಲಬುರಗಿಯ ಈ ಅಮೃತ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡಿದ್ದಾರೆ.

1948 ಸೆಪ್ಟಂಬರ್ 17, ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳು ಹೈದ್ರಾಬಾದ್ ನಿಜಾಮರ ಆಳ್ವಿಕೆಯಿಂದ ಸ್ವತಂತ್ರಗೊಂಡ ದಿನವಾಗಿದೆ. ಆದ್ದರಿಂದ ಆ ಭಾಗದ ಜನತೆಗೆ ಸೆಪ್ಟೆಂಬರ್ 17 ಸ್ವಾತಂತ್ರ್ಯೋತ್ಸವದ ದಿನವಾಗಿದೆ. ಈ ವಿಶೇಷ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಲಬುರಗಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ, ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದ್ದಾರೆ.

ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ವಿಜಯನಗರ ಮತ್ತು  ಬೀದರ್  ಈ ಏಳು ರಾಜ್ಯಗಳಲ್ಲಿ ಕಲ್ಯಾಣ ಕರ್ನಾಟಕ ಎಂದೇ ಮರುನಾಮಕೊಂಡಿರುವ ಹೈದರಾಬಾದ್‌ ಕರ್ನಾಟಕದ ಅಮೃತ ಮಹೊತ್ವವ ಜರುಗುತಿದ್ದು ರಾಜ್ಯದ ಹಲವು ಗಣ್ಯರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.