KALBURGI – Peepal Media

ಸಂಜಯ್ ಕುರ್ಡೀಕರ್ ಕೊಲೆ ಪ್ರಕರಣ: ಖುದ್ದು ಪರಿಶೀಲಿಸಲು ರಾಯಚೂರು SP ಗೆ ಸೂಚಿಸಿದ ಸಿಎಂ
ಕಲಬುರಗಿ: ಆಗಸ್ಟ್ 22 ರಂದು ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದ್ದ ಸಂಜಯ್ ಕುರ್ಡೀಕರ್ ಕೊಲೆ ಪ್ರಕರಣದ ತನಿಖೆಯನ್ನು ಖುದ್ದು ಪರಿಶೀಲನೆ ನಡೆಸುವಂತೆ ರಾಯಚೂರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿಗಳು ಮತ್ತು ಸಂಪುಟ ಸದಸ್ಯರು ಬಸ್ ನಲ್ಲಿ ತೆರಳುವ ವೇಳೆ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಈ ವೇಳೆ ಕೊಲೆಯಾದ ಸಂಜಯ್ ಪತ್ನಿ ಶಾಂತಮ್ಮ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಶಾಂತಮ್ಮ ಅವರ ಗೋಳಾಟ ನೋಡಿ ಮರುಗಿದ ಸಿಎಂ, ಸ್ಥಳದಲ್ಲೇ ದೂರವಾಣಿ ಮೂಲಕ ರಾಯಚೂರು SP ಅವರನ್ನು ಸಂಪರ್ಕಿಸಿ ಕೊಲೆ ಪ್ರಕರಣದ ವಿವರಣೆ ಕೇಳಿದರು.

ಬಳಿಕ ಕೊಲೆ ಪ್ರಕರಣದ ತನಿಖೆಯನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು. ಈ ವರೆಗೂ ನಡೆದಿರುವ ತನಿಖೆ ಸಮರ್ಪಕವಾಗಿದೆಯೇ? ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದು ಅವರು ತಪ್ಪಿಸಿಕೊಂಡಿದ್ದಾರಾ? ನಿಜವಾದ ಆರೋಪಿಗಳು ಹೊರಗೆ ಇದ್ದರೆ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ದೊರಕಲು ಸಾಧ್ಯವಿಲ್ಲ. ಆದ್ದರಿಂದ ಖುದ್ದಾಗಿ ಕೊಲೆ ಪ್ರಕರಣದ ತನಿಖೆಯ ಮೇಲೆ ನಿಗಾ ವಹಿಸಬೇಕು, ಬಳಿಕ ಈ ಬಗ್ಗೆ ನನಗೆ ವರದಿ ಮಾಡಬೇಕು ಎನ್ನುವ ಸ್ಪಷ್ಟ ಸೂಚನೆ ನೀಡಿದರು.

ದಲಿತರು ರಾಜಕೀಯ ಮಾಡಬಾರದು ಎಂದು ಮನುವಾದಿಗಳಿಂದ ಬೆದರಿಕೆ ಪತ್ರ ಬಂದಿದೆ: ಪ್ರಿಯಾಂಕ್ ಖರ್ಗೆ
ದೇಶದಲ್ಲಿ ಲೋಕಸಭೆ ಚುನಾವಣೆಗೆ ಮುನ್ನ, ಸಚಿವ ಮತ್ತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಕಲಬುರಗಿ ಸಂಸದ ಉಮೇಶ್ ಜಿ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ್ದು, ದಲಿತರು ರಾಜಕೀಯ ಮಾಡಬಾರದು ಎಂದು ನನಗೆ ಬೆದರಿಕೆ ಪತ್ರ ಬಂದಿದೆ ಎಂದು ಹೇಳಿದ್ದಾರೆ.

ಕಲಬುರಗಿ ಸಂಸದರು ಕಲಬುರಗಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಎಂದು ಹೇಳುತ್ತಿದ್ದಾರೆ, ಕಲಬುರಗಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವುದು ಎಂದರೆ ಏನು ಎಂದು ನನಗೆ ತಿಳಿದಿಲ್ಲ ಎಂದರು.
ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಇಡೀ ಸಿಬಿಐ, ಇಡಿ, ಐಟಿ ಮತ್ತು ಇಸಿ ಅವರೊಂದಿಗೆ ಇರುವಾಗ, ಅವರ ಆತಂಕ ಏನು ಎಂದು ನನಗೆ ತಿಳಿದಿಲ್ಲ” ಎಂದು ಹೇಳಿದರು.

“ಅದಕ್ಕಿಂತ ಮುಖ್ಯವಾಗಿ, ಇತ್ತೀಚೆಗೆ ಮತ್ತೊಮ್ಮೆ ನನಗೆ ‘ಮನುವಾದಿ’ಗಳಿಂದ ಬೆದರಿಕೆ ಪತ್ರ ಬಂದಿದೆ, ದಲಿತರು ಈ ರೀತಿ ಗಟ್ಟಿಯಾಗಿ ಮಾತನಾಡಬಾರದು, ದಲಿತರು ರಾಜಕೀಯಕ್ಕೆ ಬರಬಾರದು ಮತ್ತು ದಲಿತರು ಸಮಾಜದ ಮೆಟ್ಟಿಲು ಹತ್ತಬಾರದು ಮತ್ತು ನೀವು ಮಾತನಾಡುವುದನ್ನು ಮುಂದುವರಿಸಿದರೆ ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಅದರಲ್ಲಿ ಬರೆಯಲಾಗಿದೆ”ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ಪೊಲೀಸರ ಸಹಾಯವನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸಿರುವ ಅವರು ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ 2024 ಏಪ್ರಿಲ್ 19ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಮತಗಳ ಎಣಿಕೆ ಜೂನ್ 4ರಂದು ನಡೆಯಲಿದೆ.

ಕಲಬುರಗಿ ರೈಲ್ವೆ ನಿಲ್ದಾಣದ ಗೋಡೆಗಳಿಗೆ ಹಸಿರು ಬಣ್ಣ: ಹಿಂದೂ ಸಂಘಟನೆಗಳ ವಿರೋಧ
ಕಲಬುರಗಿ: ಕಲಬುರಗಿ ರೈಲು ನಿಲ್ದಾಣದ ಗೋಡೆಗಳಿಗೆ ಹಸಿರು ಬಣ್ಣ ಬಳಿದಿದ್ದು, ಅದನ್ನು ಹಿಂದೂ ಸಂಘಟನೆಗಳು ವಿರೋಧಿಸಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಎಚ್ಚರಿಸಿವೆ.

15 ದಿನಗಳ ಒಳಗೆ ಹಸಿರು ಬಣ್ಣವನ್ನು ತೆಗೆಯದಿದ್ದರೆ, ಒಟ್ಟು ರೈಲು ನಿಲ್ದಾಣಕ್ಕೆ ಕೇಸರಿ ಬಣ್ಣ ಬಳಿಯಲಾಗುವುದು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.

ಪ್ರಸ್ತುತ, ರೈಲ್ವೆ ನಿಲ್ದಾಣದ ಎರಡು ಗೋಡೆಗಳಿಗೆ ಹಸಿರು ಬಣ್ಣ ಬಳಿಯಲಾಗಿದ್ದು, ಈ ವಿರುದ್ಧ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ನಂತರ ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಇದನೆಲ್ಲಾ ಮಾಡಲಾಗುತ್ತಿದೆ ಎಂದು ಹಿಂದೂ ಸಂಘಟನಕಾರರು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತ ಲಕ್ಷ್ಮೀಕಾಂತ ಸಾಧ್ವಿ, ʼರೈಲ್ವೆ ನಿಲ್ದಾಣದ ಕಟ್ಟಡಕ್ಕೆ ಹಸಿರು ಬಣ್ಣವನ್ನು ಹೊರತುಪಡಿಸಿ ಬೇರೆ ಯಾವುದೇ ಬಣ್ಣ ಬಳಿದರು ಸಮಸ್ಯೆ ಇಲ್ಲಾ. ಕನ್ನಡ ಧ್ವಜದ ಹಳದಿ ಮತ್ತು ಕೆಂಪು ಬಣ್ಣಗಳನ್ನು ಸಹ ಬಳಸಬಹುದು. ಇಲ್ಲದಿದ್ದರೆ, ರೈಲ್ವೆ ಕಟ್ಟಡಕ್ಕೆ ಕೇಸರಿ ಬಣ್ಣ ಬಳಿಯಲಾಗುತ್ತದೆʼ ಎಂದು ತಿಳಿಸಿದ್ದಾರೆ.

ರೈಲ್ವೆ ಅಧಿಕಾರಿಗಳು ರೈಲ್ವೆ ನಿಲ್ದಾಣದ ಮುಂಭಾಗದ ಚಿತ್ರಕಲಾ ಕೆಲಸವನ್ನು ಕೈಗೆತ್ತಿಕೊಂಡಿದ್ದರು, ಆದರೆ ವಿರೋಧ ಮತ್ತು ಪ್ರತಿಭಟನೆಯ ನಂತರ ಚಿತ್ರಕಲಾ ಕೆಲಸವನ್ನು ನಿಲ್ಲಿಸಿದ್ದಾರೆ.

ಕಲಬುರಗಿ ರೈಲ್ವೆ ನಿಲ್ದಾಣದ ಸಿಬ್ಬಂದಿ ಸತ್ಯನಾರಾಯಣ ದೇಸಾಯಿ ಮಾತನಾಡಿ, ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ವರ್ಣಚಿತ್ರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ವಾಸ್ತುಶಿಲ್ಪಿಗಳ ಸಲಹೆಯ ಆಧಾರದ ಮೇಲೆ ವರ್ಣಚಿತ್ರವನ್ನು ಮಾಡಲಾಯಿತು. ರೈಲ್ವೆ ನಿಲ್ದಾಣಕ್ಕೆ ಮತ್ತೊಂದು ಬಣ್ಣ ಬಳಿಯುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕರ್ನಾಟಕ-ಮಹಾ ಗಡಿ ವಿವಾದವು ಒಂದು ಪಿತೂರಿ: ಕಾಂಗ್ರೆಸ್
ಕಲಬುರಗಿ: ಕರ್ನಾಟಕ-ಮಹಾರಾಷ್ಟ್ರದೊಂದಿಗಿನ ಗಡಿ ವಿವಾದದಿಂದ ಉದ್ಭವಿಸಿರುವ ಉದ್ವಿಗ್ನತೆಯ ನಡುವೆಯೇ, ಕರ್ನಾಟಕ ಕಾಂಗ್ರೆಸ್ ಪ್ರಸ್ತುತ ಪರಿಸ್ಥಿತಿಯನ್ನು ‘ಪಿತೂರಿ’ ಎಂದು ಕರೆದಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಚುನಾವಣೆಗೂ ಮುನ್ನ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿದ್ದು, ʼನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲಿನ ಕೀಳರಿಮೆಯನ್ನು ಮರೆಮಾಚಲು ಇದನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಪಿತೂರಿ ಇದೆʼ ಎಂದು ಶಿವಕುಮಾರ್ ದೂರಿದ್ದಾರೆ.

ಗಡಿ ವಿವಾದವನ್ನು ಈಗಾಗಲೇ ಪರಿಹರಿಸಲಾಗಿದೆ. ʼನಮ್ಮ ಗಡಿಯೊಳಗಿನ ಪ್ರದೇಶ ನಮ್ಮದು, ಅವರ ಭೂಪ್ರದೇಶದಲ್ಲಿರುವ ಪ್ರದೇಶ ಅವರದು. ನಮ್ಮ ಪರವಾಗಿರುವವರು ನಮ್ಮ ಜನರೇʼ ಎಂದು ಶಿವಕುಮಾರ್‌ ಸಮರ್ಥಿಸಿಕೊಂಡಿದ್ದಾರೆ.

ಗಡಿ ವಿವಾದದ ನೆಪದಲ್ಲಿ ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷಕ್ಕೆ ಸೇರಿದ ಯಾರೊಬ್ಬರೂ ಶಾಂತಿ ಕದಡುವುದು ಸೂಕ್ತವಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ.

ʼನಾವು ಬೆಳಗಾವಿಯಲ್ಲಿ ಸುವರ್ಣ ಸೌಧವನ್ನು ನಿರ್ಮಿಸಿದ್ದೇವೆ. ಶಾಂತಿ ಕದಡುವ ಕಾರ್ಯದಲ್ಲಿ ಯಾರೂ ತೊಡಗಬಾರದು’ ಎಂದಿದ್ದಾರೆ.

ಬೆಳಗಾವಿ ನಗರ ಮತ್ತು ಕರ್ನಾಟಕದ ನಾಲ್ಕು ಜಿಲ್ಲೆಗಳ 865 ಹಳ್ಳಿಗಳ ಮೇಲೆ ತನ್ನ ಹಕ್ಕುಗಳನ್ನು ಕೋರಿ ಮಹಾರಾಷ್ಟ್ರ ಸರ್ಕಾರವು 2004 ರಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ನಂತರದ ದಿನದಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ಶಿವಕುಮಾರ್‌ ತಿಳಿಸಿದ್ದಾರೆ.

ಕರ್ನಾಟಕದ ಗಡಿ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಇಲಾಖೆ ಗಡಿ ಪ್ರದೇಶದಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಎಂಬ ರಾಜಕೀಯ ಸಂಘಟನೆ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರದ ಇಬ್ಬರು ಸಚಿವರನ್ನು ಬೆಳಗಾವಿಗೆ ಆಹ್ವಾನಿಸಿದ್ದು, ಅವರಿಗೆ ಅವಕಾಶ ನೀಡದಂತೆ ಕನ್ನಡ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಆದಾಗ್ಯೂ, ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ನೀಡಿದ ಹೇಳಿಕೆಯು ರಾಜ್ಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬರ್ಬರ ಹತ್ಯೆ
ಅಳಂದ (ಕಲಬುರಗಿ): ಶಾಲಾ ಬಾಲಕಿಯ ಮೇಲೆ ಬರ್ಬರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಕೊರಳ್ಳಿ ಗ್ರಾಮದಲ್ಲಿ ನಡೆದಿದೆ.

ಮಳವಳ್ಳಿಯಲ್ಲಿ ಹತ್ತು ವರ್ಷದ ಬಾಲಕಿ ಮೇಲೆ ಶಾಲೆಯ ಶಿಕ್ಷಕರೇ ಕ್ರೂರವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದ ನೆನಪು ಮಾಸುವ ಮುನ್ನವೇ ಈ ಭೀಕರ ಘಟನೆ ನಡೆದಿದೆ.

9 ನೇ ತರಗತಿ ವಿದ್ಯಾಭ್ಯಾಸ ಮಾಡ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಕೊರಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಅತ್ಯಾಚಾರ ನಡೆಸಿದ ನಂತರ ಹಂತಕರು ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಬಾಲಕಿ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕೋಗನೂರು ಗ್ರಾಮದವಳಾಗಿದ್ದು, ಆಳಂದ ತಾಲ್ಲೂಕಿನ ಕೊರಳ್ಳಿಯ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದಳು.

ದೀಪಾವಳಿ ಹಬ್ಬಕ್ಕೆ ತಂದೆ ತಾಯಿಯ ಬಳಿ ತೆರಳಿದ್ದ ಬಾಲಕಿ ಹಬ್ಬ ಮುಗಿಸಿ ವಾಪಸ್ ನಿನ್ನೆ ಕೊರಳ್ಳಿಗೆ ಬಂದಿದ್ದಳು ಸಂಬಂಧಿಕರ ಮನೆಯಲ್ಲಿದ್ದ ಬಾಲಕಿ ನಿನ್ನೆ ಮಧ್ಯಾಹ್ನ ಬಹಿರ್ದೆಸಗೆ ಹೋಗಿದ್ದ ಬಾಲಕಿ ಸಂಜೆಯಾದ್ರು ಮನೆಗೆ ವಾಪಸ್ ಬಂದಿರಲಿಲ್ಲ. ಬಳಿಕ ಸಂಬಂಧಿಕರು ಬಹಿರ್ದೆಸೆಗೆ ತೆರಳಿದ್ದ ಸ್ಥಳಕ್ಕೆ ಹೋಗಿ ಹುಡುಕಾಡಿದರೂ ಬಾಲಕಿ ಪತ್ತೆಯಾಗಿರಲಿಲ್ಲ.

ಕಬ್ಬಿನ ಹೊಲದಲ್ಲಿ ಬಾಲಕಿ ಶವವಾಗಿ ಪತ್ತೆಯಾದ ನಂತರ, ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ. ಎಸ್ಪಿ ಇಶಾ ಪಂತ್ ಸ್ಥಳಕ್ಕೆ ಭೇಟಿದ್ದು, ಆರೋಪಿಗಳ ಹುಡುಕಲು ತಂಡ ರಚನೆ ಮಾಡಲಾಗಿದೆ.

ನವೆಂಬರ್‌ 1ರಂದು ಜನಿಸಿದವರಿಗೆ ಸನ್ಮಾನ ಮಾಡಿ ಕರ್ನಾಟಕ ರಾಜ್ಯೋತ್ಸವ ಆಚರಣೆ
ಕಲ್ಬುರ್ಗಿ : ಜಿಲ್ಲೆಯ ಆಳಂದ ತಾಲೂಕಿನ ಕಾಮನಳ್ಳಿ ಗ್ರಾಮದಲ್ಲಿ ಇಂದು ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಆಚರಣೆ ಮಾಡಲಾಗಿದ್ದು, ನವೆಂಬರ್‌ 1ರಂದು ಜನಿಸಿದವರಿಗೆ ವ್ಯಕ್ತಿಗಳಿಗೆ ಸನ್ಮಾನ ಮಾಡಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿಲಾಗಿದೆ.

ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದ ವಿಶೇಷನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ದಯಾನಂದ ಪಾಟೀಲ್ ಅವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ವಿಶೇಷವಾಗಿ  ಜರುಗಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನದಂದು ಹುಟ್ಟಿದ ಭೋಗೇಶ ನೇಲ್ಲುರೆ ಮತ್ತು ಪ್ರಜ್ವಲ್ ಸರಡಗಿ ಇವರಿಗೆ ಹುಟ್ಟು ಹಬ್ಬದ ದಿನದಂದು ಅದ್ದೂರಿ ಸನ್ಮಾನ ಮಾಡಿ ಗೌರವಿಸಿದ್ದಾರೆ. ತದನಂತರ ನಾಡಗೀತೆಯ  ಜೊತೆಗೆ ಧ್ವಜಾರೋಹಣನೆರವೇರಿಸಿ ಶಾಲಾ ಮಕ್ಕಳಿಗೆ ಸಿಹಿ ಹಂಚಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ ಬಿ ಪಾಟೀಲ್ , ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಶಿವಲಿಂಗಪ್ಪಾ ಪೋಲೀಸ್ ಪಾಟೀಲ್, ಕಾಮನಳ್ಳಿ ಮಾಜಿ ಗ್ರಾಮಪಂಚಾಯತ್ ಸದಸ್ಯರಾದ ಶಿವರಾಜ್ ಸರಡಗಿ, ಮಾಹಾದೇವ ಕುಮುಟಗಿ, ವಿಜಯ್ ಕುಮಾರ್ ಬೇಳಮಗಿ, ಸುರೇಶ ನೇಲ್ಲುರೆ, ಕಾಮನಳ್ಳಿ ಗ್ರಾಮದ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.

ರೈಲು ಹರಿದು ಸುಮಾರು 70 ಕುರಿಗಳು ಸ್ಥಳದಲ್ಲೇ ಸಾವು
ಕಲಬುರಗಿ : ಕುರಿಗಳ ಮೇಲೆ ರೈಲು ಹರಿದು ಸುಮಾರು 70 ಕುರಿಗಳು ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ಮೊಗಲಾ ಗ್ರಾಮದಲ್ಲಿ ಶುಕ್ರವಾರದಂದು ನಡೆದಿದೆ.

ರೈಲ್ವೇ ಹಳಿಗಳ ಮೇಲೆ ಇದ್ದ ಕುರಿಗಳ ಮೇಲೆ ಬೆಂಗಳೂರಿನ ನಾಂದೇಡ್‌ ಲಿಂಕ್‌ ಎಕ್ಸ್‌ಪ್ರೆಸ್‌ ರೈಲು ಮದ್ಯಾಹ್ನ 12ರ ಹೊತ್ತಿಗೆ ಕುರಿಗಳ ಮೇಲೆ ಹರಿದು ಹೋಗಿದ್ದು ಸುಮಾರು 70 ಕುರಿಗಳು ಸ್ಥಳದಲ್ಲೇ ಮೃತ ಪಟ್ಟಿದ್ದಾವೆ. ರೈಲು ಬೆಂಗಳೂರಿನಿಂದ ತೆರಳುತ್ತಿದ್ದಾಗ ಕಲಬುರಗಿ ಜಿಲ್ಲೆಯ ಮೊಗಲಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ವಿಷಯ ತಿಳಿದ ರೈಲ್ವೇ ಪೋಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಮೃತ ಪಟ್ಟ ಕುರಿಗಳು ಮಲ್ಲಪ್ಪ, ರಾಘವೇಂದ್ರ ಉಮೇಶ ಬಡಿಗೇರ, ಶ್ರೀದೇವಿ ರಾಜು, ಗೌಸ್ಮಿಯ್ಯಾ ಇಮಾಮ್‌ಸಾಬ್‌, ಅಶೋಕ ಮೊಗಲಯ್ಯಾ, ಶಿವಕಾಂತಮ್ಮ ಅರ್ಜುನ ಮತ್ತು ಶ್ರೀದೇವಿ ರಾಜು ಅವರಿಗೆ ಸೇರಿದ್ದಾಗಿವೆ ಎಂದು ತಿಳಿದು ಬಂದಿವೆ.

ಇದನ್ನೂ ನೋಡಿ :  ದಿಲ್ ಪಸಂದ್ ಟೀಸರ್ ಬಿಡುಗಡೆ, ನವೆಂಬರ್ 11ಕ್ಕೆ ತೆರೆಗೆ

ದಿಲ್ ಪಸಂದ್ ಟೀಸರ್ ಬಿಡುಗಡೆ, ನವೆಂಬರ್ 11ಕ್ಕೆ ತೆರೆಗೆ

ಪೋಕ್ಸೋ ಪ್ರಕರಣ: ಪ್ರಾಚಾರ್ಯ ಸೇರಿದಂತೆ ಇಬ್ಬರ ಬಂಧನ
ಕಲ್ಬುರ್ಗಿ: ಕಲಬುರಗಿ ಜಿಲ್ಲೆಯ ಚಿಂಚೂಳಿ ತಾಲೂಕಿನಲ್ಲಿ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ, ಶಾಲೆಯ ಪ್ರಾಚಾರ್ಯ ಸೇರಿದಂತೆ ಇಬ್ಬರನ್ನು ತಾಲೂಕಿನ ಕುಂಚಾವರಂ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಶಾಲೆಯ ಕೆಲವು ವಿಧ್ಯಾರ್ಥಿನಿಯರು ಅನಾರೋಗ್ಯವೆಂದು ಆಸ್ಪತ್ರೆಗೆ ಹೋದಾಗ ಅಲ್ಲಿನ ವೈಧ್ಯರು ವಿಧ್ಯಾರ್ಥಿನಿಯರ ದಿನಚರಿ ಪ್ರಶ್ನಿಸಿದ್ದಾರೆ. ಆಗ ವಿಧ್ಯಾರ್ಥಿನಿಯರು ಕೆಲವು ದಿನಗಳಿಂದ ಶಾಲೆಯ ಪ್ರಾಚಾರ್ಯ ಮತ್ತು  ಕಂಪ್ಯೂಟರ್‌ ಅಪರೇಟರ್‌ ಇಬ್ಬರು ರಾತ್ರಿ ಬಂದು ತಮ್ಮ ಮೂಟ್ಟುವ ಮೂಲಕ ಕಿರಿಕಿರಿ ಮಾಡುತ್ತಿದ್ದು, ಈ ಕಿರಿಕಿರಿಯಿಂದಾಗಿ ಮೈಕೀ ನೋವು ಮತ್ತು ಅನಾರೋಗ್ಯವೆನಿಸುತ್ತಿದೆ ಎಂದು ಹೇಳಿದಾಗ, ಈ ವಿಷಯವನ್ನು ವೈದ್ಯರು ಕೂಡಲೆ ಪೊಲೀಸರ ಗಮನಕ್ಕೆ ತಂದಿದ್ದಾರೆ.

ವಿಚಾರದ ಹಿನ್ನಲೆ ಸಮಾಜ ಕಲ್ಯಾಣಾಧಿಕಾರಿ ಅವರು ವಿಧ್ಯಾರ್ಥಿನಿಯರ ಜೊತೆ ಮಾತನಾಡಿ ಸಮಗ್ರ ಮಾಹಿತಿ ಸಂಗ್ರಹಿಸಿದ ಮೇಲೆ  ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರಿಂದ, ಪೊಲೀಸರು ಪ್ರಾಚಾರ್ಯ ಮತ್ತು ಕಂಪ್ಯೂಟರ್‌ ಅಪರೇಟರ್‌ ಮೇಲೆ ಪೋಕ್ಸೋ ಕಾಯ್ದೆಯಡಿ ಪರಕರಣ ದಾಖಲಿಸಿದ್ದಾರೆ.

ತಮ್ಮ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ತಿಳಿದು ಆಕ್ರೋಶಗೊಂಡ ಪೋಷಕರು, ಸಿಬ್ಬಂದಿಗಳನ್ನು ಥಳಿಸಿದ್ದಾರೆ. ಈ ವಿಚಾರ ತಿಳಿದ ಜಿಲ್ಲಾಧಿಕಾರಿ ಯಶವಂತ್‌ ವಿ. ಗುರುಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗಳನ್ನು ಸೇಯಿಂದ ಅಮಾನತುಗೊಳಿಸಿದ್ದು, ಶಾಲೆಗೆ ಮಹಿಳಾ ವಾರ್ಡನ್‌, ಕಂಪ್ಯೂಟರ್‌ ಅಪರೇಟರ್‌ ಮತ್ತು ಮಹಿಳಾ ಪ್ರಾಚಾರ್ಯರನ್ನು ನೀಯೋಜಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.