Kalluballi – Peepal Media

BBL ಜಾಗತಿಕ ಸಮಸ್ಯೆಗಳು – ಕಳ್ಳುಬಳ್ಳಿ -10
ಬ್ರೆಜಿಲಿಯನ್ ಬಟ್ ಲಿಫ್ಟ್ ಅನ್ನುವ ಇದೊಂದು ನಿತಂಬ ದುಂಡಗಾಗಿಸುವ ಖಯಾಲಿ.  ದಕ್ಷಿಣ ಆಫ್ರಿಕಾ ದೇಶದ ಮಹಿಳೆಯರು ಸೇರಿದಂತೆ ವಿದೇಶಿ ಮಹಿಳೆಯರು ಅತಿಹೆಚ್ಚಾಗಿ ಈ BBL ಎಂಬ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ.

ಆದರೆ ದಕ್ಷಿಣ ಆಫ್ರಿಕಾ ದೇಶೀಯರಿಗೆ ಈ BBL ಹುಚ್ಚು ಅತಿಯಾಗಿ ಕಾಡುತ್ತಿದೆ.  ಅವರು ಚಿಕನ್ ಬಟ್ಸ್ ಎಂದು ಸಹ ಕರೆಯುತ್ತಾರೆ.  ಮಹಿಳೆಯರು ತಮ್ಮ ನಿತಂಬಗಳನ್ನು ಅತಿಯಾಗಿ ಗುಂಡಗೆ ಇಟ್ಟುಕೊಳ್ಳಲು ಅಪೇಕ್ಷಿಸುತ್ತಾರೆ.  ಇದೊಂದು ತರಹ ದೇಹದ ಆಕರ್ಷಣೆಯ ಪ್ರಮುಖ ಭಾಗವಾಗಿದೆ ಅನ್ನುವ ರೀತಿಯ ಮನಸ್ಥಿತಿ ಬೆಳೆಯುತ್ತಿದೆ.

ಇವರಲ್ಲಿ ಜಗತ್ಪ್ರಸಿದ್ಧ ಗಾಯಕಿಯರು, ನೃತ್ಯಗಾರ್ತಿಯರು ಸಹ ಇದ್ದಾರೆ. ಸಿಲಿಕಾನ್ ಬಟ್ಸ್ ಸಹ ಚರ್ಮದೊಳಗೆ ಸೇರಿಸುವ ಕ್ರಮ ಇದೆ.  ಸಿಲಿಕಾನ್ ಇಂಜೆಕ್ಷನ್ ಕೊಟ್ಟು ಬಟ್ಸ್ ಬೆಳೆದಿರುವಂತೆ ಮಾಡುವ ವೈದ್ಯಕೀಯ ಕ್ರಮ ಸಹ ದುಬಾರಿ ವೆಚ್ಚದಲ್ಲಿ ಲಭ್ಯವಿದೆ.

BBL ಆಸಕ್ತಿ ಇರುವ ಹೆಣ್ಣು ಮಗಳ ದೇಹದ ಕೊಬ್ಬನ್ನು ತೆಗೆದು ಆಕೆಯ ನಿತಂಬಗಳಿಗೆ ಏರಿಸುವ ವೈದ್ಯಕೀಯ ಚಿಕಿತ್ಸೆಯ ಕ್ರಮಕ್ಕೆ ೩ ಸಾವಿರದಿಂದ ೧೦ ಸಾವಿರ ಡಾಲರ್ ವೆಚ್ಚವಾಗುತ್ತದೆ.  ಅಂದರೆ ಇದೆಲ್ಲಾ ದುಬಾರಿ ದುಡ್ಡು ತೆತ್ತು ಮಾಡಿಕೊಳ್ಳುವ ಅದ್ವಾನ.

BBL ವಿಫಲಗೊಂಡು ಅನೇಕ ಮಹಿಳೆಯರು ಸಾವಿಗೀಡಾದ ಘಟನೆಗಳು ಸಹ ಇವೆ.  ಇನ್ನೂ ಅನೇಕ ಘಟನೆಗಳನ್ನು ಗಮನಿಸಿದಾಗ ನಿತಂಬಗಳು ಇಳಿದು ಬಿದ್ದು ನರಮಂಡಲದ ಮೇಲೆ ಭಾರಿ ತೂಕ ಬಿದ್ದ ಪರಿಣಾಮ ಹೃದಯದ ಒತ್ತಡ ಸಹ ಹೆಚ್ಚಾಗುತ್ತದೆ.  ನರಗಳು ತುಂಡಾದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದಿದೆ.  ನೋವಿರುವ ಜಾಗದಲ್ಲಿ ಊತವೂ ಆಗಿ ಜೀವನ‌ ನರಕ ಸದೃಶ ಆದದ್ದಿದೆ.

BBL ತ್ವಚೆಯ ಮೇಲ್ಬಾಗದ ಬಣ್ಣ ಬದಲಾಯಿಸಿ ಬಿಡುತ್ತದೆ.  ಆ ಭಾಗವು ಊಹಿದಲಾರದಂತ ಅತಿಯಾದ ನೋವು ಕೊಡುತ್ತದೆ.

ಸಿಲಿಕಾನ್ ಬಟ್ಸ್ ಅನ್ನು ಒಮ್ಮೆ ಸೇರಿಸಿದ ಮೇಲೆ ಅದನ್ನು ತೆಗೆದು ಹಾಕಲು ವೈದ್ಯಕೀಯ ವೆಚ್ಚ ೨ ಸಾವಿರದಿಂದ ೧೨ ಸಾವಿರ ಡಾಲರ್ ಆಗುವುದು.

ಹೊಸದಾಗಿ ಇದೀಗ ಕಾಲೆಜಿನ್ ಇಂಜೆಕ್ಷನ್ ನೀಡಿ ಬಂಪ್ ಬೆಳೆಸುವ ಕ್ರಮವೂ ಜಾರಿಯಲ್ಲಿದೆ.  ಒಟ್ಟಿನಲ್ಲಿ ಹೇಳುವುದಾದರೆ ಇವೆಲ್ಲಾ ವಿಧಾನವೂ ಹೆಣ್ತನಕ್ಕೆ ಅಗತ್ಯವೇನೂ ಅಲ್ಲ.  ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಇಂತಹ ವಿಪರೀತ ಚಿಕಿತ್ಸೆಗಳು

ಆರೋಗ್ಯದ ಸಮಸ್ಯೆಗಳನ್ನು ಸಹ ಹೊತ್ತು ತಂದಿವೆ.

ಚಿಕನ್ ಬಟ್ಸ್ ಶಾಟ್ಸ್ ಎನ್ನುವ ಮತ್ತೊಂದು ವಿಧಾನ ದಕ್ಷಿಣ ಆಫ್ರಿಕಾ ದೇಶೀಯ ಮಹಿಳೆಯರಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.  ಇದನ್ನು ಮ್ಯಾಗಿ ಬಟ್ ಟ್ರಿಕ್ ಅಂತಲೂ ಕರೆಯುತ್ತಾರೆ.  ಚಿಕನ್  ದ್ರಾವಣವನ್ನು ಸಿದ್ದಪಡಿಸಿ ಅದನ್ನು ಗುದದ್ವಾರದ ಮೂಲಕ ಮಹಿಳೆಯರ ದೇಹಕ್ಕೆ ಸೇರಿಸುವ ಮೂಲಕ ಚಿಕನ್ ಬಟ್ಸ್ ವಿಧಾನ ನಡೆಸುತ್ತಾರೆ.  ಇದು ಸಹ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ.

ದಕ್ಷಿಣ ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಹೆಂಗಸರು ಸಣ್ಣದಾದ ದೇಹ ಹೊಂದಿರುವುದಕ್ಕೆ ಇಷ್ಟಪಡುವುದಿಲ್ಲ.  ಏಕೆಂದರೆ ಸಣಕಲಿ‌ ಎಂದು ಆಡಿಕೊಳ್ಳುವರಂತೆ.  ತುಂಬಿದ ತೊಡೆಗಳು ಮತ್ತು ಗುಂಡಾದ ನಿತಂಬಗಳನ್ನು ಹೊಂದಿರಲು ಮಹಿಳೆಯರಲ್ಲಿ ಕೆಲವರು ಆಸಕ್ತಿ ವಹಿಸುತ್ತಾರೆ.  ಹೀಗಾಗಿ ಈ ಎಲ್ಲಾ ಕೃತಕ ವಿಧಾನಗಳು ಸಹ ಮಹಿಳೆಯರಿಗೆ ಆರೋಗ್ಯದ ಸಮಸ್ಯೆಗಳನ್ನು ಹೊತ್ತು ತರುವಂತವೇ ಆಗಿವೆ.

ಮಹಿಳೆಯರು ಹುಟ್ಟಿದ ರೀತಿಯಲ್ಲಿ ಬದುಕು ನಡೆಸುವ ಅವಕಾಶ ಇಲ್ಲವೇ? ಎಂಬ ಮೂಲಭೂತ ಪ್ರಶ್ನೆ ಇಂತಹ ಸಮಸ್ಯೆಗಳನ್ನು ಕಂಡಾಗ ಕಾಡಿದ್ದಿದೆ.  ಈ ಎಲ್ಲಾ ಸವಾಲುಗಳನ್ನು ಸಹ ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಲೇ ಇದ್ದಾರೆ.

ಇತ್ತೀಚೆಗೆ ರಿಹಾನಾ ಎಂಬ ಪಾಪ್ ಹಾಡುಗಾರ್ತಿ ಭಾರತಕ್ಕೆ ಬಂದು ಹಾಡಿ ಪಾಡಿ ಹೋದರು.  ಆದರೆ ಇವರಿಗೆ ಈ BBL ಖಯಾಲಿ ಇಲ್ಲದಿರುವುದು ಸಂತೋಷದ ವಿಚಾರ.

ಇದೇ ರೀತಿ ಇತ್ತೀಚೆಗೆ ಹಾಲಿವುಡ್ ನಲ್ಲೇ  BBL ವಿರೋಧಿಸಿ ಅನೇಕ ಸೆಲೆಬ್ರಿಟಿಗಳು ಮಹಿಳೆಯರಿಗೆ ಬುದ್ದಿಮಾತು ಹೇಳಿದ್ದಾರೆ.  BBL ನಿಂತ ಸಾವಿಗೀಡಾದ ಮಹಿಳೆಯರ ಸಂಖ್ಯೆ ಹೆಚ್ಚೇ ಇರುವುದರಿಂದ ಹಾಲಿವುಡ್ ಸೆಲೆಬ್ರಿಟಿಗಳು ಈ ರೀತಿ ಸಾಮಾನ್ಯ ಮಹಿಳೆಯರಿಗೆ ಬಟ್ಸ್ ಮಾರ್ಪಾಡಿಗೆ ಒಳಗಾಗದಂತೆ ಬುದ್ದಿ ಹೇಳಿ ಮಾದರಿ ಎನಿಸುತ್ತಿದ್ದಾರೆ.  ಏಕೆಂದರೆ ಇವರಿಂದಲೇ ಅನೇಕ ಫ್ಯಾಷನ್ ಟ್ರೆಂಡ್ ಹುಟ್ಟುತ್ತವೆ.

ಮಹಿಳೆಯ ವ್ಯಕ್ತಿತ್ವ ಹೊರಗಿನ ಮಾರ್ಪಾಡು ಮಾಡುವುದರಿಂದ ಬದಲಾಗುವುದಿಲ್ಲ.  ಬದಲಿಗೆ ಮಹಿಳೆಯರಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ, ಉದ್ಯೋಗ, ಅವಕಾಶ ಒದಗಿಸಿದಾಗ ಬದಲಾಗುತ್ತದೆ.

ಗಂಡೆಂಬ ಬೇಡಿಕೆ : ಕಳ್ಳುಬಳ್ಳಿ 9
“ಹೆಣ್ಣು ಮರಿ ಹುಟ್ಟಿ ಬಂದರೆ ಮತ್ತೆಮತ್ತೆ ಮರಿ ಹಾಕುತ್ತದೆ.  ಅಗ ಮನೆ ತುಂಬಾ ಮರಿಗಳು ಎನ್ನುವ ಬೇಸರ ಇರಬಹುದೇನೋ?  ಅದೇ ಗಂಡಾದರೆ ಈ ಯಾವುದೇ ತಲೆಬಿಸಿ ಇರೋದೆಲ್ಲವಲ್ಲ..” ನಳಿನಾ ಚಿಕ್ಕಮಗಳೂರು ಅವರ ಕಳ್ಳುಬಳ್ಳಿ 9 ನೇ ಅಧ್ಯಾಯ

ಮೊನ್ನೆ ಬೆಳಿಗ್ಗೆ ಇನ್ನೂ ಒಂಬತ್ತು ಗಂಟೆ ಕಳೆದಿರಲಿಲ್ಲ.  ನನಗೆ ಪರೀಕ್ಷೆಯ ಒತ್ತಡ ಇದ್ದುದರಿಂದ ಲಗುಬಗೆಯಿಂದ ಹತ್ತಿರದ ಹೊಟೇಲ್ ಒಂದಕ್ಕೆ ತಿಂಡಿ ಕಟ್ಟಿಸಿಕೊಂಡು ಬರಲು ಹೋಗಿದ್ದೆ.  ಆರ್ಡರ್ ತಿಳಿಸಿ ಟೇಬಲ್ ಬಳಿ ಕೂತಿದ್ದಾಗ ಎಳೆ ಬೆಕ್ಕಿನ ದ್ವನಿ ತೇಲಿ ಬಂತು.  ಬಲಕ್ಕೆ ಹೊರಳಿದಾಗ ಮೆಲ್ಲಗೆ ಹೆಜ್ಜೆ ಇಡುತ್ತಾ ಪುಟಾಣಿ ಬೆಕ್ಕು ರಾಗ ಹಾಡಿ ನಡೆದಾಡುತ್ತಿದ್ದದು ಕಂಡು ಬಂತು.  ಕ್ರೀಮ್ ಬಣ್ಣದ ಪಟ್ಟಾ ಪಟ್ಟೆ ಮೈಯ ಅದರ ಅಂದವನ್ನು ಹೊಗಳುತ್ತಾ ಖುಷಿಪಟ್ಟೆ.

ಹೊಟೇಲ್ ಬಾಗಿನಲ್ಲಿ ನಾಲ್ಕಾರು ಪುರುಷರು ಮಾತನಾಡುತ್ತಿದ್ದರು.  ಅದೂ ಬೆಕ್ಕಿನ ಬಗ್ಗೆನೆ.  ಅಷ್ಟರಲ್ಲಿ ಬೆಕ್ಕು ಆ ಮಧ್ಯವಯಸ್ಕ ಪುರುಷರ ಕಾಲ ಬಳಿ ಕಾಣಿಸಿಕೊಂಡಿತು.  ಅದರಲ್ಲೊಬ್ಬಾತ ‘ಅವನವ್ವನ್ನಾ … ಹಾಕಿರೋ ಮೂರೂ ಹೆಣ್ಣು ಮರಿನೇ ಆಗಬೇಕಾ?  ಅಲ್ಲಾ ಒಂದಾರಾ ಗಂಡಾಗಬಾರದಿತ್ತಾ’? ಎಂದು ಜೋರಾಗೇ ಹೇಳಿದಾಗ ಹಿಂದೆ ತಿರುಗಿ, ಆತನ ಮುಖವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದೆ.  ಆತನ ಅಪೇಕ್ಷೆ ಗಂಡೆಂಬ ಬೇಡಿಕೆಯಾಗಿತ್ತು ಎಂಬುದು ಅತ್ಯಂತ ಸ್ಪಷ್ಟವಾಗುತ್ತಿತ್ತು.

ಹೆಣ್ಣು ಮರಿ ಹುಟ್ಟಿ ಬಂದರೆ ಮತ್ತೆಮತ್ತೆ ಮರಿ ಹಾಕುತ್ತದೆ.  ಅಗ ಮನೆ ತುಂಬಾ ಮರಿಗಳು ಎನ್ನುವ ಬೇಸರ ಇರಬಹುದೇನೋ?  ಅದೇ ಗಂಡಾದರೆ ಈ ಯಾವುದೇ ತಲೆಬಿಸಿ ಇರೋದೆಲ್ಲವಲ್ಲ.

ಸಾಕು ಪ್ರಾಣಿ ಪ್ರಪಂಚದಲ್ಲಿ ಸಹ ಗಂಡಿನ ಬೇಡಿಕೆ ಇದ್ದೇ ಇದೆ.  ಇದು ಹೆಚ್ಚು ಕಾಣಿಸೋದು ಸಾಕು ನಾಯಿ ವಿಚಾರದಲ್ಲಿ. ಸಾಕಿದ  ನಾಯಿಗೆ ಮರಿ ಆಗಬಾರದು ಅಂತಲೇ ಸಂತಾನ ಹರಣ ಇಂಜೆಕ್ಷನ್ ಕೊಡಿಸುವುದು ಕಂಡಿದ್ದೇವೆ.  ಇದೆಲ್ಲಾ ಮರಿ ಸಾಕುವ ಗೊಜಿಗೆ ಹೋಗದ ಮನಸ್ಥಿತಿಗಳಿಂದಲ್ಲವೇ?

ಹಸು, ಎಮ್ಮೆಗಳು ಕರು ಹಾಕಿದಾಗ ಹೆಣ್ಣೇ ಹುಟ್ಟಲಿ ಎಂದು ದೇವರು ಬೇಡುವ ಜನರು ಇದ್ದಾರೆ.  ಆಗ ಮನೆಯಲ್ಲಿ ಕರಾವು ಇನ್ನೂ ಅಧಿಕವಾಗಿ ಹಣದ ಗಳಿಕೆ ಸಹ ಸಾಧ್ಯವಿದೆ ಎಂಬ ಹಿನ್ನೆಲೆಯಲ್ಲಿ.

ನಿಸರ್ಗಕ್ಕೆ ಮಾತ್ರ ಹೆಣ್ಣು ಗಂಡೆಂಬ ಬೇಧ ಇಲ್ಲವೇ ಇಲ್ಲ.  ಮನುಷ್ಯ ಯಾವಾಗಲೂ ತನ್ನ ಆದ್ಯತೆಯಂತೆಯೇ ಬದುಕಲು ನೋಡಿತ್ತಾನೆ.  ಅವನಿಗೆ ಬೇಕಾದ್ದು ಮಾತ್ರ ಬೇಕು, ಬೇಡದ್ದು ಬೇಡವೇ ಬೇಡ.

ಎಮ್ಮೆ, ಹಸು ಕರು ಹಾಕಿದಾಗ ಗಂಡಾದರೆ ಅದು ಅಷ್ಟೇನು ಉಪಯುಕ್ತ ಅಲ್ಲ, ಮನೆ ತುಂಬಾ ಎತ್ತು, ಹೋರಿ ಏತಕ್ಕೆ?  ಊಳಲು ಸರಿಯಾದ ಎರಡು ಹೋರಿಗಳು ಸಂತೆಯಿಂದ ತಂದು ಇರಿಸಿಕೊಂಡರೆ ಸಾಕು ಎನ್ನುವ ಮನೋಭಾವನೆ ಇದ್ದವರೂ ಇರುತ್ತಾರೆ.  ಗಂಡು ಕರುಗಳನ್ನು ಬೇರೆಯವರ ಉಪಯೋಗಕ್ಕೆ ಮಾರುವುದೂ ಹೆಚ್ಚು.  ಕಟುಕರೂ ಸಹ ಗಂಡು ಕರುವಿನ ಖರೀದಿಗಾರರೇ.

ರಸ್ತೆಯ ಬದಿಯಲ್ಲಿ ಸಹ ಹೆಣ್ಣು ನಾಯಿಗಳು ಅಧಿಕ ಇರುವ ಏರಿಯಾಗಳಲ್ಲಿ ಕಡೆಗೆ ನಾಯಿ ಕಾಟ ಮೊದಲಾದ ಕಾರಣಗಳಿಂದ ಆ ಹೆಣ್ಣು ಮರಿಗಳನ್ನು ಹೇಗಾದರೂ ದೂರ ಮಾಡುವವರಿದ್ದಾರೆ.

ನನ್ನ ಬಾಲ್ಯದಲ್ಲಿ ವಾಸವಿದ್ದ ಚಿಕ್ಕಮಗಳೂರು ಪಕ್ಕದ ಹಳ್ಳಿಯಲ್ಲಿ ನನ್ನ ಜೊತೆಯ ಆಟಗಾರರು ಒಂದು ದಿನ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಊರಿನ ಕೆರೆಯ ಬಳಿಗೆ ಹೋಗಲು ಪುಸಲಾಯಿಸಿದರು.  ನಾಕಾರು ಮಕ್ಕಳೊಡನೆ ನಾನೂ ನೇರಳಕಟ್ಟೆಯ ಬಳಿಗೆ ಹೋದಾಗ, ಪ್ಲಾಸ್ಟಿಕ್ ಚೀಲದಿಂದ ನಾಯೊ ಮರಿಗಳನ್ನು ಹೊರಹೆ ತೆಗೆದ ಹುಡುಗರು ಒಂದೊಂದನ್ನೇ ಕತ್ತಿನ ಬಳಿ ಚರ್ಮದಿಂದ ಹಿಡಿದು ನೀರಿನೊಳಗೆ ಎಸೆದರು.  ಆ ಹೆಣ್ಣು ಮರಿಗಳು ಕಾಲು ಆಡಿಸುತ್ತಾ ನೀರಿನೊಳಗೆ ಮುಳುಗಿದಾಗ ಅತಿ ಸುಂದರವಾಗಿ ಕಾಣಿಸಿದುವು‌.  ಏನೋ ಒಂಥರ ಖಾಲಿ ಭಾವನೆಯಿಂದ ಕಣ್ಣು ತುಂಬಿ ಬಂತು.  ಆ ಹುಡುಗರೇಕೆ ಹೀಗೆ ಮಾಡಿದರೆಂದು ಕೇಳಿದರೆ, ಅವರಿಗೆ ಮನೆಯಲ್ಲಿ ತಾಕೀತು ಮಾಡಲಾಗಿತ್ತು ಎಂದಿದ್ದರು.

ಲೋಕೋ ಭಿನ್ನ ರುಚಿ.  ಹೆಣ್ಣು ಗಂಡೆಂಬ ಬೇಧ ಮಾಡುವ ಹಕ್ಕು ಯಾರಿಗೂ ಇಲ್ಲ.  ಆದರೆ ಕಳೆದ ವರ್ಷ ಬೀದಿಯಲ್ಲಿ ಹೆಚ್ಚು ನಾಯಿಗಳಿವೆ ಅಂತ ಅನಾಮಿಕರ್ಯಾರೋ ವಿಷವಿಕ್ಕಿ ನಾಲ್ಕಾರು ಮರಿ ಕೊಂದರು.  ಅವುಗಳಲ್ಲಿ ಹೆಣ್ಣು ಗಂಡು ಎರಡೂ ಇದ್ದಿರಬಹುದು.  ಏಕೆಂದರೆ ತಿಂಡಿಗೆ ಬೆರೆಸಿದ್ದ ವಿಷ ಎಲ್ಲವೂ ತಿಂದಿದ್ದವು.  ನನ್ನ ನಾಲ್ಕು ವರ್ಷದ ಮಗಳಿಗೆ ಈ ನಾಯಿ ಮರಿಗಳ ಸಾವಿಗೆ ಕಾರಣ ವಿವರಿಸುವುದು ಬಹು ಕಷ್ಟಸಾಧ್ಯವಾದ ವಿಚಾರವಾಗಿತ್ತು.  ಮಕ್ಕಳಿಗೆ ಪ್ರಾಣಿ ಅಂದರೆ ಎಲ್ಲಾ ಒಂದೇ.  ಹೆಣ್ಣು ಗಂಡು ಎಂಬ ಬೇಧವೂ ತಿಳಿಯದು.  ಈ ಬೇಧಗಳನ್ನು ನಾವು ಅರ್ಥಮಾಡಿಸಿ  ತಿಳಿಸುವುದು ಬಹು ಕಷ್ಟ.  ಆದರೆ ಅದರ ಪರಿಣಾಮಗಳನ್ನು ಮಾತ್ರ ತೋರಿಸಬಹುದು.

ಪ್ರಾಣಿ ಲೋಕದಲ್ಲೂ ಹೆಣ್ಣು ಗಂಡಿನ ಬೇಧ ಎಣಿಸುವುದು ಸಲ್ಲ.  ಪ್ರತಿಯೊಂದು ಜೀವಿಗೂ ತನ್ನದೇ ಆದ ಬದುಕುವ ಹಕ್ಕು ಇದ್ದೇ ಇದೆ.  ಅದನ್ನು ಕಸಿಯುವ ಮನುಜನದು ಮಿತಿ ಮೀರಿದ ಸ್ವಾರ್ಥ.  ಇಂಥ ಸ್ವಾರ್ಥ ಮೀರಿ ಮಾನವೀಯತೆಯ ಆದರ್ಶ ಬೇಳೆಯಲಿ.

ಅನುಮಾನಕೆ ಬಲಿಪಶು ಈ ಹೆಣ್ಣು – ಕಳ್ಳುಬಳ್ಳಿ ೮
ಶತಶತಮಾನದಿಂದಲೂ ಹೆಣ್ಣಿನ ಶೀಲದ ಕುರಿತು ಶಂಕೆ ಪಟ್ಟವರಿದ್ದಾರೆ.  ಅವರು ದಾರಿಹೋಕರಲ್ಲದೆ ಕೂಡಿದ ಗಂಡ, ಹತ್ತಿರದ ಸಂಬಂಧಿ ಇವರೇ ಆಗಿರುತ್ತಾರೆ.

ಎಲ್ಲಮ್ಮ ದೇವಿಯ ಚಂಚಲತೆ ಪರೀಕ್ಷಿಸಲು ಪತಿ ಜಮದಗ್ನಿ ಋಷಿಗಳು ಮಾಡಿದ ತಂತ್ರ ಎಂಥಹುದು? ಅಗ್ನಿಯಂತೆ ಉರಿಯುವ ಅವನ ಕೋಪ ತಾಪವನ್ನು ಮಗ ಪರಶುರಾಮನು ಮಾತ್ರ ಎದುರಿಸಲು ಸಾಧ್ಯವಾಯಿತಷ್ಟೇ.

ಸೀತೆಯ ಶೀಲವನ್ನು ಶಂಕಿಸಿದ ಅಗಸನ ಮಾತಿಗೆ ಮರ್ಯಾದೆ ಕೊಡುವ ರಾಮ ಬಸುರಿ ಸೀತೆಯನ್ನು ಮರಳಿ ವನವಾಸಕ್ಕೆ ಬಿಟ್ಟುಬರಲು ಸೋದರ ಲಕ್ಷ್ಮಣನಿಗೆ ರಾಜಾಜ್ಞೆ ನೀಡುತ್ತಾನೆ.  ಮುಂದೆ ಮಕ್ಕಳು ಹೆತ್ತು, ಅವರಿಗೆ ಗುರುವಾಗಿ ಬಿಲ್ವಿದ್ಯೆ ಮೊದಲಾದ ವಿದ್ಯೆಗಳನ್ನು ಕಲಿಸಿ, ಯೋಗ್ಯರನ್ನಾಗಿ ಮಾಡಿದ ಮೇಲೂ ರಾಮನ ಶಂಕೆಯಿಂದಾಗಿ ನಮ್ಮ ಸೀತಮ್ಮ ಅಗ್ನಿ ಪ್ರವೇಶ ಮಾಡಬೇಕಾಗಿ ಬಂತು.  ಸೀತಮ್ಮನ ಪಾತಿವ್ರತಾ ಧರ್ಮದಿಂದ ಅಗ್ನಿ ದಹಿಸದೆ ಹಿಮ್ಮೆಟ್ಟಿದಾಗಲೂ ಆಕೆ ತನ್ನ ತವರಿನ ಆಸರೆ ಪಡೆಯಬೇಕಾಗುತ್ತದೆ.

ಗಂಡಿಗೆ ಹುಟ್ಟುವ ಶಂಕೆಯೆಂಬ ಒಂದು ಹನಿ ಹುಳಿ, ಹಾಲಿನಂಥ ಅದೆಷ್ಟೋ ಸಂಸಾರಗಳನ್ನು ಹೊಡೆದು ಹಾಕಿದ್ದಿದೆ.  ಆದರೆ ಆ‌ ಶಂಕೆ ಹುಟ್ಟಲು ಕಾರಣವಾದ ಗಂಡು ಮಾತ್ರ ತನ್ನ ಪಾಡಿಗೆ ತನ್ನದೇ ಲೋಕದಲ್ಲಿ ಇರುತ್ತಾನೆ.

ಕೆಲವು ಬುಡಕಟ್ಟು ಜನರಲ್ಲಿ ಈ ಶಂಕೆಯ ಅಮಲು ಇನ್ನಷ್ಟು ಹೆಚ್ಚು.  ಹೊರ ಜಗತ್ತಿನಿಂದ ದೂರ ಉಳಿದಿರುವ ಇಂತಹ ಬುಡಕಟ್ಟು ಜನಾಂಗದವರು ತಮ್ಮದೇ ಆದ ಟ್ಯಾಬೂ /ನಿಷೇಧಗಳನ್ನು ಹೇರಿಕೊಂಡು ಬದುಕುತ್ತಾರೆ.

ನೀವು ಫೋಟೋದಲ್ಲಿ ಗಮನಿಸಬಹುದಾದ ಈ ಹೆಣ್ಣಿನ ಫೋಟೋವನ್ನು ಹೀಗೆ ಅನಾಮತ್ತು ಓರ್ವ ವಿದೇಶಿ ಫೋಟೋಗ್ರಾಫರ್ ಕ್ಲಿಕ್ಕಿಸಿದ್ದ.  ಆತನ ಹೆಸರು ಸ್ಡಿಫನ್ ಫ್ಯಾಸೆಟ್, ಈತ ಪ್ರೆಂಚ್ ದೇಶದ ಛಾಯಾಚಿತ್ರಗಾರನಾಗಿದ್ದ.  ಆತನನ್ನು ಅಲ್ಬರ್ಟ್ ಖಾನ್ ಎಂಬುವವರು ಮರುಭೂಮಿಯ ಸುತ್ತಲಿನ ಫೋಟೋ ತೆಗೆಯಲು ನಿಯೋಜಿಸಿಕೊಂಡಿದ್ದನು.  ಆತ ವರ್ಣಮಯ ಛಾಯಾಚಿತ್ರಗಳ ಪ್ರವರ್ತಕನಾಗಿದ್ದ.

ಇವರ ಹವ್ಯಾಸ ವಿಲಕ್ಷಣ, ವಿಚಿತ್ರವಾದ ದೇಶಗಳಿಗೆ ಬೇಟಿನೀಡುವುದಾಗಿತ್ತು.  ಇಂತಹ ದೇಶಗಳ ಸಾಲಿನಲ್ಲಿ ಮಂಗೋಲಿಯಾ ದೇಶ ಪರ್ಯಟನೆ ಮಾಡಿದ್ದರು.

ಆ ಸಂದರ್ಭದಲ್ಲಿ ಓರ್ವ ಮಹಿಳೆಯನ್ನು ಸಲಾಕೆಗಳಲ್ಲಿ ಬಂಧಿಸಿ ಒಂದು ಮರದ ಪೆಟ್ಟಿಗೆಯಲ್ಲಿರಿಸಿ ಮರುಭೂಮಿಯಲ್ಲಿ ಇರಿಸಲಾಗಿತ್ತು.  ಅಂದರೆ ಆಕೆಗೆ

ನಿಧಾನವಾಗಿ ಸಾಯುವ, ಬರ್ಬರವಾದ ಶಿಕ್ಷೆಯನ್ನು ವಿಧಿಸಲಾಗಿದ್ದ ಕಾರಣ ಆಕೆ ಹೀಗೆ ಸುಟ್ಟು ಹಾಕುವಂತಹ ಬಿಸಿಲಿನಲ್ಲಿ ಬೇಯುತ್ತಾ ಬಿದ್ದುಕೊಳ್ಳಬೇಕಾಗಿತ್ತು.

ಅಲ್ಲಿ ಪ್ರಖರ ಸೂರ್ಯಕಿರಣಗಳನ್ನು ಆಕೆ ತಡೆದುಕೊಳ್ಳಬೇಕಿತ್ತು.  ತಿನ್ನಲು ಸಹ ಏನಾದರೂ ಸಿಗುವಂತಹ ಪರಿಸ್ಥಿತಿ ಇರಲೇ ಇಲ್ಲ.

ಈ ಫೋಟೋಗ್ರಾಫರ್ ಆಕೆಯ ಪರಿಸ್ಥಿತಿಗೆ ಯಾವ ಉಪಕಾರವನ್ನೂ ಮಾಡಲಿಲ್ಲ.  ಅಲ್ಲಿಂದ ತೆಪ್ಪಗೆ ಫೋಟೋ ತೆಗೆದುಕೊಂಡು ಹೊರಟೇ ಹೋಗಿದ್ದ.  ಬಹುಶಃ ಬೇರಾರೂ ಆಗಿದ್ದರೆ ಖಂಡಿತವಾಗಿ ಸಹಾಯ ಮಾಡಿ ಆಕೆಯನ್ನು ಬಂಧಮುಕ್ತಗೊಳಿಸುತ್ತಿದ್ದರೇನೋ?  ಆದರೆ ಹಾಗೆ ಮಾಡಿದ್ದರೆ ಅಲ್ಲಿನ ಮ‌ೂಲ ನಿವಾಸಿಗಳ ಕೋಪಕ್ಕೆ ಗುರಿಯಾಗಬೇಕಾಗಿತ್ತು.  ಆಕೆಯನ್ನು ಬಂಧ ಮುಕ್ತಗೊಳಿಸುವ ಕ್ರಮ ನಿಷಿದ್ಧ ವಾಗಿತ್ತು.

ಮಾನವಶಾಸ್ತ್ರಜ್ಞರು ಒಂದು ಸಂಗತಿಯನ್ನವರಿಗೆ ಹೇಳಿದ್ದರು.  ಸಾರ್ವಜನಿಕ ನಿಯಮಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭಿನ್ನವಾಗಿರುತ್ತವೆ ಅಂತ.  ಹೀಗಾಗಿ ಅನೇಕ ದೇಶಗಳ ಭಿನ್ನ ಸಂಸ್ಕೃತಿಗಳ ಅರಿವಿದ್ದ ಅವರು ಸುಮ್ಮನೆ ಹಿಂತಿರುಗಿದ್ದು ಸರಿ.  ಇಲ್ಲದಿದ್ದರೆ ಇವರೂ ಸಹ ಇನ್ಯಾವುದೇ ಶಿಕ್ಷೆಗೆ ಒಳಗಾಗುವ ಸಾಧ್ಯತೆಗಳು ಇದ್ದುವು.

ಆದರೆ ಈ ಭಾವಚಿತ್ರ ಒಂದು ಹೆಣ್ಣಿನ ಜೀವಮಾನ ಬಿಸಿಲಿನಲ್ಲಿ ಬೆಂದು ಹೋದದ್ದಕ್ಕೆ ಸಾಕ್ಷಿಭೂತವಾಗಿ ಇಂದಿಗೂ ಇದೆ.  ಆಕೆ ವ್ಯಭಿಚಾರ ನಡೆಸಿದ್ದಳೆಂಬ ಕಾರಣ ಆಕೆಯ ಶಿಕ್ಷೆಯ ಹಿಂದೆ ಇತ್ತು.  ಈ ಘಟನೆಯ ಸುತ್ತಾ ಆ ಕಾಲದಲ್ಲಿ ಅನೇಕ ಕಥೆಗಳು ಹರಡಿಕೊಂಡಿದ್ದುವು.  ಆ ವ್ಯಭಿಚಾರ ಆಕೆಯೇ ನಡೆಸಿದ್ದಳೇ? ಎಂಬುದು ಪ್ರಶ್ನಾತೀತ.  ಈ ಚಿತ್ರಕ್ಕೆ ಇಟ್ಟ ಪ್ರಸಿದ್ಧವಾದ ಹೆಸರು – ಬಾಕ್ಸ್ ನಲ್ಲಿ ಮಂಗೋಲಿಯಾದ ಖೈದಿ ಎಂದಾಗಿತ್ತು.

೧೯೨೨ರಲ್ಲಿ ನ್ಯಾಷನಲ್ ಜಿಯಾಗ್ರಫೀ ಮ್ಯಾಗಜೀನ್ ನಲ್ಲಿ ಈ ಛಾಯಾಚಿತ್ರ ಬಣ್ಣದೊಂದಿಗೆ ಪ್ರಕಟವಾಗಿತ್ತು.  ಆ ಛಾಯಾಚಿತ್ರದ ಕತೆಯನ್ನು ಸಹ ಹಿನ್ನೆಲೆಯಲ್ಲಿ ವಿವರಿಸಲಾಗಿತ್ತು.  ೨೦ನೇ ಶತಮಾನದಲ್ಲಿ ಈ ಬಗೆಯ ಶಿಕ್ಷೆಗಳು ಮಂಗೋಲಿಯನ್ನರಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬಂದುವು.

ಇಂದಿಗೂ ಇಂತಹ ಬರ್ಬರ ಶಿಕ್ಷೆಯ ಕ್ರಮಗಳು ಜಾರಿಯಲ್ಲಿದ್ದರೆ ಅಚ್ಚರಿ ಇಲ್ಲ.  ಓರ್ವ ವ್ಯಕ್ತಿಯನ್ನು ಎಲ್ಲಾದರೂ ಬಂಧಿಸಿಡುವುದು, ಅನ್ನ ನೀರು ನೀಡದಂತೆ ಸಾಯಲು ಬಿಟ್ಟ ಹೆಣ್ಣು  ಅದೂ ವ್ಯಭಿಚಾರದ ಹೆಸರಿನಲ್ಲಿ.

ಆ ಹೆಣ್ಣುಮಗಳನ್ನು ವ್ಯಭಿಚಾರಕ್ಕೆ ಪುಸಲಾಯಿಸುವ ವ್ಯಕ್ತಿ ಮಾತ್ರ ಶಿಕ್ಷೆಗೊಳಗಾಗುವ ರೀತಿ ಎಲ್ಲಿಯೂ ಕಾಣಸಿಗುವುದಿಲ್ಲ.  ಅಥವಾ ಅವನ ನಡೆಯನ್ನು ಸಮಾಜ ಪುರಸ್ಕರಿಸಿಬಿಟ್ಟಿರುತ್ತದೆ.  ಗೊತ್ತಿದ್ದರೂ ಗೊತ್ತಿಲ್ಲ ಎನ್ನುವ ರೀತಿ ಸುಮ್ಮನಿದ್ದು ಬಿಡುತ್ತದೆ.  ಆ ಹೆಣ್ಣು ಕೆಟ್ಟಿದ್ದರೆ ಅದಕ್ಕೆ ಓರ್ವ ಗಂಡೂ ಕಾರಣಕರ್ತನಲ್ಲವೇ?  ಅದನ್ನೇಕೆ ಸಮಾಜ ಎತ್ತಿ ತೋರುವುದಿಲ್ಲ.

ಇಂದ್ರನ ಇಂದ್ರಜಾಲದಲ್ಲಿ ಕೊಳೆಯಾದ ಋಷಿ ಪತ್ನಿಯರು ಕಳೆದುಕೊಂಡ ಸಮಾಜಿಕ ಸ್ಥಾನಮಾನಗಳು ಅಪಾರ.  ಆದರೆ ಇಂದ್ರ ದೇವೇಂದ್ರನಾಗೇ ಮೆರೆದಿದ್ದಾನೆ ಎಂದು ಕತೆ ಪುರಾಣಗಳಲ್ಲಿ ಹೇಳಲಾಗಿದೆ.

ಇದು ಇಂದಿನ ಕತೆಯಲ್ಲ.  ಹೆಣ್ಣಿನ ವ್ಯಥೆ.  ಸಮಾಜಿಕ ನಿಷೇಧಗಳು ಆ ಭಾವಚಿತ್ರದ ಹೆಣ್ಣನ್ನು ಕೊಂದ ಬಗೆಗೆ ಧಿಕ್ಕಾರವಿರಲಿ.  ೧೦೨ ವರ್ಷಗಳು ಕಳೆದರೂ, ಈ ಕೆಲವು ಸಂವೇದನಾಶೀಲ ವಿಚಾರಗಳಲ್ಲಿ ಹೆಣ್ಣಿನ ಸ್ಥಿತಿಗತಿ ಬದಲಾಗಿದೆಯೇ ಎಂಬುದು ಸಹ ಇಂದಿಗೂ ಯಕ್ಷಪ್ರಶ್ನೆ.

ಕಳ್ಳುಬಳ್ಳಿ -2 : ಕ್ರಾಂತಿಯ ಉಪಾಸನೆ ಸಂಕ್ರಾಂತಿ
ಸಂಕ್ರಾಂತಿಯ ದಿವಸ ಭೂಮಿಯ ಪಥವೇ ಬದಲಾಯಿಸುವ ಪರ್ವ ಕಾಲ. ಮನುಷ್ಯಜೀವಿಯೂ ತನ್ನ ಬದುಕಿನ ನಡೆಯನ್ನು ಬದಲಿಸುವತ್ತ ಮನಸ್ಸು ಮಾಡಲು ಪ್ರಕೃತಿಯ ಮುಕ್ತ ಆಹ್ವಾನ.

ನಿನ್ನರಿವೇ ನಿನಗೆ ದಾರಿದೀಪ. ಇದೇ ಮುಂದೆ ಇತರರ ಒಳ ಹೊಕ್ಕು ಅವರ ಬದುಕಿಗೂ ದಿಟದ ದೀವಿಗೆಯಾಗುವುಂಟು. ಹೀಗೆ ಒಳ್ಳೆಯ ಚಿಂತನೆಗಳು ವಿಚಾರ ಕ್ರಾಂತಿಗೆ ಆಹ್ವಾನವನ್ನು ನೀಡುತ್ತವೆ.

ಸಚ್ಚರಿತ್ರೆ, ಸದಾಚಾರ ಸಂಪನ್ನತೆ, ತನ್ನಂತೆ ಪರರನ್ನು ಸಮಾನವಾಗಿ ಆದರಿಸುವ ಗುಣಗಳು, ಜಾತಿ, ಧರ್ಮ, ಜಾತಿ-ಪಂಗಡ, ಬಣ್ಣ, ಅಂತಸ್ತು, ಲಿಂಗ ಮೊದಲಾದ ಭಿನ್ನ ಭಾವಗಳನ್ನು ಮೀರಿ ಮನುಷ್ಯ ಮನುಷ್ಯ ಮಾತ್ರವಾಗಿ ಪ್ರೀತಿಸುವ ಗುಣಗಳು ಮನುಷ್ಯನನ್ನು ಮಹಾನತೆಗೆ ಕೊಂಡೊಯ್ಯುತ್ತವೆ.

ಬಡತನ, ದಾರಿದ್ರ್ಯ, ತುತ್ತು ಅನ್ನಕ್ಕಾಗಿ ತಾತ್ವಾರ, ದುಡಿಯುವ ಮನಸ್ಸಿದ್ದರೂ ದುಡಿಯುವ ಕೈನ ಕೆಲಸ ಕಿತ್ತುಕೊಳ್ಳುವ ದುಷ್ಟ ಶಕ್ತಿಗಳು, ಮತಭ್ರಾಂತಿಯಲ್ಲೇ ಕೊಳೆಯುವ ಮೂಢಮತಿಗಳು ಇಲ್ಲೆಲ್ಲಾ ವಿಚಾರ ಕ್ರಾಂತಿಯ ಆಹ್ವಾನವಾಗಬೇಕಿದೆ.

ವಿಚಾರಕ್ರಾಂತಿ ಮತ್ತು ಮತದಿಂದ ಉಂಟಾದ ಮತಿಭ್ರಮಣೆ ಕಳೆಯಲು, ವಿಶ್ವಮಾನವತೆಯ ಕಡೆಗೆ ಸಂಚರಿಸಲು ಸಂ-ಕ್ರಾಂತಿಯ ಅವಶ್ಯಕತೆ ಇದ್ದೇ ಇದೆ. ರಾಷ್ಟ್ರಕವಿ ಕುವೆಂಪು ವಿರಚಿತ ವಿಚಾರ ಸಾಹಿತ್ಯ ಇದೇ ಸಕ್ರಾಂತಿಯಲಿ ಡಮರಿನಂತೆ ಸದ್ದು ಮಾಡಬೇಕಾಗಿದೆ.

ವಿಚಾರ ಸಾಹಿತ್ಯ ಓದಿದಷ್ಟು ಜಗತ್ತು ಕಿರಿದಾಗಿ, ಎಲ್ಲರೂ ಸಹೋದರತೆಯ ಹೊಳೆಯಲ್ಲಿ ಮಿಂದು ಹೊಸ ಬದುಕು ಪಡೆದಷ್ಟೇ ಜನ್ಮ ಪಾವನಗೊಂಡ ಅನುಭವವಾಗುತ್ತದೆ.

ಭೂಮಿ ತನ್ನದೇ ಆದ ದಿಕ್ಕು ಬದಲಿಸುವುದು, ಹಾಗೆಯೇ ಮನುಷ್ಯನ ಮೆದುಳು ಸಹ ತನ್ನ ವಿಚಾರದ ದಿಕ್ಕು ಬದಲಾಯಿಸಿ ನವನವೀನತೆಯಲ್ಲಿ ಬೆಳಗಬೇಕು.

ನಮ್ಮಲ್ಲಿ ಅಂತರ್ಗತವಾಗಿರುವ ಸನಾತನ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿದು, ಹಿಂದೂ ಧರ್ಮದ ಅಂಟುಜಾಡ್ಯಗಳನ್ನು ಜಾಡಿಸಿದ ವೀರ ಸನ್ಯಾಸಿ ಸ್ವಾಮಿವಿವೇಕಾನಂದರವರು ಪ್ರಚಾರಪಡಿಸಿದ ವಿಚಾರಗಳು ಇಡೀ ಜಗತ್ತಿಗೇ ಸಕ್ರಾಂತಿಯಂತೆ ಕೆಲಸ ಮಾಡಿದ್ದು ಸುಳ್ಳಲ್ಲ. ಸಿಸ್ಟರ್ ನಿವೇದಿತಾ ಇದೇ ಸಂಕ್ರಾಂತಿಯ ದೀವಿಗೆಯಂತೆ ಬೆಳಗಿದರು. ಚಿಕ್ಕಮಗಳೂರಿನಲ್ಲಿ ಜನಿಸಿದ ಅಳಸಿಂಗ ಪೆರುಮಾಳ್ ಸಹ ಸ್ವಾಮಿ ವಿವೇಕಾನಂದರನ್ನ ಧರ್ಮ ಸಮ್ಮೇಳನಕ್ಕೆ ಹೋಗಲು ಒತ್ತಾಯಿಸಿ ಅವರಿಗೆ ಹಣದ ಸಹಾಯ ಮಾಡಿ ಕೃತಾರ್ಥತೆ ಮೆರೆದರು. ಐವತ್ತು ವರ್ಷದೊಳಗೆ ಇಲ್ಲವಾದ ಪೆರುಮಾಳ್ ಸ್ವಾಮಿವಿವೇಕಾನಂದರ ಅಪ್ಪಟ ಅನುಯಾಯಿಯಾಗಿ ಬೆಳಗಿದರು. ಹೀಗೆ ವಿಚಾರ ಕ್ರಾಂತಿಯನ್ನು ಜಗತ್ತಿನಲ್ಲಿ ಬೆಳಗಿದವರ ಕತೆಗಳು ಓದಿದವರ, ಕೇಳಿದವರಲ್ಲೂ ಸಂ-ಕ್ರಾಂತಿಯನ್ನು ಮೂಡಿಸುತ್ತದೆ.

ಸಕ್ರಾಂತಿ ಸುಗ್ಗಿ, ರೈತರ ಹಬ್ಬವಾಗಿಯೇ ಉಳಿದಿಲ್ಲ. ಮಳೆಯಿರದ, ಬಿಸಿಲಿನ ಸೀಮೆಗಳಿಗೂ ಸಂಕ್ರಾಂತಿ ಹಬ್ಬ ಇದ್ದೇ ಇದೆ.

ಹೊಸ ದೀಪ ಬೆಳಗಲು, ಹೊಸ ವಿಚಾರಗಳನ್ನು ಚಿಂತಿಸಲು ನಮಗೆ ಸಕ್ರಾಂತಿಯ ಅವಶ್ಯಕತೆ ಇದೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ಡಿವಿಜಿ ಹೇಳಿರುವ ಹಾಗೆ ಭಿನ್ನ ಬೇಧವ ಮರೆವಿಗೆ ತಳ್ಳಿ, ಹಚ್ಚುತಾ ಕೆಡುಕಿಗೆ ಒಳ್ಳೆಯತನದ ಕೊಳ್ಳಿ, ಸುಟ್ಟು ಬಿಡೋಣ ಸಕ್ರಾಂತಿಯ ಕಿಚ್ಚಲಿ, ಬೆಳಗಲಿ ಬಡವರ ಭಾಗ್ಯ.

ಹೊರಗಿನ ಆಚರಣೆಗಳಾದ ದೇಹಕೆ ತೈಲ ಎರೆದು, ಸ್ನಾನ ಮಾಡುವುದು, ಹೊಸ ಬಟ್ಟೆ ಉಡುವುದು, ಎಣ್ಣೆ ತುಂಬಿದ ತಟ್ಟೆಯಲಿ ಮುಖ ನೋಡಿಕೊಳ್ಳುವುದು, ಇವುಗಳೆಲ್ಲಾ ಹಬ್ಬದ ಜೊತೆಗೆ ಇದ್ದೇ ಇರುತ್ತದೆ. ಎಳ್ಳುಬೆಲ್ಲ ಮೆದ್ದು ಒಳ್ಳೆ ಮಾತಾಡಿ ಎನ್ನುವ ಹಾಗೇ, ಒಳ್ಳೆಯ ವಿಚಾರಗಳನ್ನು ಹಂಚಲು ಸಕ್ರಾಂತಿಯ ದಿವಸ ಬಂದಿದೆ.

ಉಳಿದ ಆಚರಣೆಗಳಾದ ಪೊಂಗಲ್ ಮಾಡಿ ಹಂಚುವುದು, ದೇವರಿಗೆ ಎಡೆ ಮಾಡುವುದು, ಎಳ್ಳು ಬೆಲ್ಲ, ಕಬ್ಬು ಮನೆಮನೆಗೆ ತಿದ್ದುವುದು, ಇವುಗಳ ಜೊತೆಗೆ ನೆರೆಹೊರೆಯವರೊಂದಿಗೆ ವಿರಸ ಮರೆಸಿ ಸ್ನೇಹ ಹಂಚೋಣ. ಇರುವಷ್ಟು ಕಾಲ ಒಳ್ಳೆಯತನದಿ ಆಲೋಚಿಸಿ ಸಂತೃಪ್ತಿಯ ಸಂಕ್ರಾಂತಿ ಆಚರಿಸೋಣ.

ಮನುಷ್ಯ ಜೀವನದಲ್ಲಿ ವಯಸ್ಸು ಕಳೆದಂತೆ ಮದುವೆ, ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು, ಪರಿವಾರದವರು ಹೆಚ್ಚುತ್ತಾ ಹೋಗುತ್ತಾರೆ. ಪ್ರೀತಿ ಪ್ರೇಮ ಇವು ಅಲ್ಪಕಾಲದ ಸುಖ ನೀಡುತ್ತವೆ. ಸ್ನೇಹ, ಸಾಂಗತ್ಯ ಇವು ನಮಗೆ ಅವಶ್ಯಕವಾಗಿ ಬರುತ್ತವೆ. ಮಾನವೀಯ ಮೌಲ್ಯಗಳು ಜೀವನ ಪೂರ್ತಿ ಮನುಷ್ಯ ನಿಗೆ ಆತ್ನ ಸಂತೋಷದ ಬದುಕನ್ನು ದಯಪಾಲಿಸುತ್ತದೆ. ಇದಕ್ಕಾಗಿಯೇ ಕೆಲವರು ನಮ್ಮ ನಿಮ್ಮ ನಿಮ್ಮಂತೆ ಸಾಮಾನ್ಯರಾಗಿ ಹುಟ್ಡಿದರೂ ಮಹಾನ್ ಚೇತನಗಳಾಗಿ ಇಂದಿಗೂ ನಮ್ಮ ನಿಮ್ಮ ನಡುವೆ ಇದ್ದಾರೆ, ಇರುತ್ತಾರೆ.

ಕಳ್ಳುಬಳ್ಳಿ : ಹೆಣ್ಣು ಮತ್ತು ಲೈಂಗಿಕ ಸ್ವಾತಂತ್ರ್ಯ
ಮಹಿಳೆ ಮತ್ತು ಸ್ತ್ರೀ ಪರ ಚಿಂತನೆ ಹಿನ್ನೆಲೆಯಲ್ಲಿ ಕಳ್ಳುಬಳ್ಳಿ ಅಂಕಣದಲ್ಲಿ ಲೇಖಕರಾದ ನಳಿನಿ ಚಿಕ್ಕಮಗಳೂರು ಅಂಕಣಕ್ಕೆ ಜೀವ ತುಂಬಲಿದ್ದಾರೆ. ಪೀಪಲ್ ಮೀಡಿಯಾದ ಕಳ್ಳುಬಳ್ಳಿಗೆ ಇದು ಅವರ ಮೊದಲ ಅಂಕಣ.

ರಾಜ ಮಹಾರಾಜರ ಕಾಲದಲ್ಲಿ ವಿಶೇಷವಾಗಿ ರಾಣಿಯರು ಲೋಹದ ಚಡ್ಡಿಯನ್ನು ಧರಿಸಿಕೊಳ್ಳಬೇಕಾಗಿತ್ತು.  ಅದರ ಬೀಗವನ್ನು ರಾಜ ಮಾತ್ರ ತೆರೆಯಲು ಅವಕಾಶ ಇರುತ್ತಿತ್ತು.  ಹೀಗೆ ಮಾಡುವ ಕ್ರಮ ಏಷ್ಯಾದ ದೇಶಗಳಲ್ಲಿ ನಡೆಯುತ್ತಿತ್ತು.

ಚೀನಾ ದೇಶದಲ್ಲೂ ಈ ಕ್ರಮ ಇತ್ತು.  ಓರ್ವ ಚೀನಿ ಯುವತಿಯ ತಂದೆ ಮಾಡಿಸಿದ್ದ ಇಂಥಾ ಒಂದು ಸಾಧನ ಧರಿಸಿದ್ದ ಹೆಣ್ಣೊಬ್ಬಳಿಗೆ ವಿವಾಹ ನಡೆದ ಮೇಲೂ ಅದನ್ನು ಬಿಚ್ಚಿಕೊಳ್ಳಲು ಕಬ್ಬಿಣದ ಕೆಲಸಗಾರನ ಬಳಿಗೆ ಕೋರಿದರೂ ಸಾಧ್ಯವಾಗಲಿಲ್ಲ.  ಹೀಗೇ ನಿರಾಸೆಯಲ್ಲೇ ಗಂಡ ಹೆಂಡಿರು ಆ ಲೋಹದ ಸಾಧನ ಬಿಚ್ಚುವ  ವಿಫಲ ಯತ್ನ ನಡೆಸುತ್ತಲೇ ವರ್ಷಗಳನೇಕ ಕಳೆಯುತ್ತಾರೆ.  ಹೀಗೇ  ಒಂದು ದಿನ ಆಕೆಯ ಗಂಡನೂ ಸಾಯುತ್ತಾನೆ.  ಗಂಡ ಸತ್ತ ದಿವಸ ಅಚಾನಕ್ ಆಕೆಯ ಲೋಹದ ಒಳ ಉಡುಗೆ ತೆರೆದುಕೊಂಡು ಆಕೆಗೆ ಇನ್ನಿಲ್ಲದಷ್ಟು ದುಃಖ ಉಂಟು ಮಾಡುತ್ತದೆ.

ಹೆಣ್ಣು ರಾಜನೊಬ್ಬನಿಗೇ ನಿಗದಿ ಪಡಿಸಿದಂತೆ ಬಾಳಬೇಕು ಎಂಬ ಉದ್ದೇಶದಿಂದ ಲೋಹದ ಒಳ ಉಡುಪನ್ನು ಆತನನ್ನು ವರಿಸುವ ಹೆಣ್ಣುಗಳು ಧರಿಸಬೇಕಾಗಿತ್ತು.

ಈ ಕ್ರಮ ರಾಜ ಮಹಾರಾಜರಲ್ಲಷ್ಟೇ ಅಲ್ಲದೆ ಉಚ್ಚ ಜಾತಿಯವರಲ್ಲೂ ರೂಢಿಯಲ್ಲಿತ್ತು.  ಇಂಥಾ ಲೋಹದ ಒಳಾಂಗ ಸಾಧನ ಧರಿಸುವ ಹೆಣ್ಣುಮಕ್ಕಳಲ್ಲಿ ಎಲ್ಲರಿಗೂ ಅದರ ಕೀ ಹೊಂದುವ ಅವಕಾಶ ಇರಲಿಲ್ಲ.  ಆಕೆಯ ವಿವಾಹಿತ ಪುರುಷರು ಅದರ ಕೀಲಿಕೈಗಳನ್ನು ಹೊಂದಿರುತ್ತಿದ್ದರು.

ಕೆಲವು ವರ್ಷಗಳ ಹಿಂದೆ ಉತ್ತರ ಭಾರತದ ಭಾಗದಲ್ಲಿ ನಡೆದ ಪ್ರಕರಣವೊಂದರ ಸುದ್ದಿ ಹೀಗೆ ಪ್ರಕರಣವಾಗಿತ್ತು.  ಪತ್ನಿಯ ಮೇಲಿನ ಶಂಕೆಯಿಂದ ಓರ್ವ ಪತಿಯು ತನ್ನ ಪತ್ನಿಯ ಮರ್ಮಾಂಗವನ್ನು ಹೊಲೆದಿದ್ದ.  ಘಟನೆ ಬಗ್ಗೆ ಸ್ಥಳೀಯರಿಂದ ಪೊಲೀಸರು ಆಕೆಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆ ನೀಡಲು ಯಶಸ್ವಿಯಾಗಿದ್ದರು.  ಇಂತಹ ಕ್ರೌರ್ಯ ಮೆರೆದ ಪತಿಗೆ ಶಿಕ್ಷೆ ಸಹ ವಿಧಿಸಲು ನ್ಯಾಯಾಂಗಕ್ಕೆ ಕೋರಿದ್ದರು.

ಶತಶತಮಾನಗಳಿಂದಲೂ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯದ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ.  ಇಂದಿಗೂ ಜರುಗುವ ಮರ್ಯಾದೆ ಹತ್ಯೆಗಳು ಇದಕ್ಕೆ ನೈಜ ಉದಾಹರಣೆ.

ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ ಎನ್ನುವಂತಹ ಅಮಾನವೀಯ ಹೇಳಿಕೆಗಳು ಇದೇ ಸಾಲಿನಲ್ಲಿ ಸರಿಗಟ್ಟಿ ನಿಲ್ಲುತ್ತವೆ.

ಒಂದುಕಡೆ ಹೆಣ್ಣು ತನ್ನ ಇಷ್ಟದ ಸಂಗಾತಿ ಹೊಂದಲು ಅವಕಾಶ ನೀಡುವಲ್ಲಿ ಜಾತಿ, ಧರ್ಮ, ಅಂತಸ್ತಿನ ತಡೆಗೋಡೆಗಳನ್ನು ಎತ್ತಿ ಕಟ್ಟುತ್ತದೆ.  ಮತ್ತೊಂದೆಡೆ ವಿವಾಹಿತ ಮಹಿಳೆಯರು ತಮ್ಮ ಸಂಗಾತಿ ಯೊಡನೆ ಸುಖಿಸುವ ಹಕ್ಕನ್ನೂ ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತದೆ.

ಧರ್ಮದ ಹೆಸರಿನಲ್ಲಿ ಸಾವಿರಾರು ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡಿದ್ದ ಅಸಾರಾಮ್ ಬಾಪು ತರಹದ ಧರ್ಮಾಂಧ ವಿಟರಿಗೆ ಕೋಟಿ ಕೋಟಿ ಬಂದು ಕೊಳೆಯುತ್ತಿತ್ತು.  ಚಿತ್ರದುರ್ಗದ ಮಠದ ಕಾಮಕತೆಗಳು ಮುಕ್ಕಿದ ಹಸುಳೆಗಳ ಭವಿಷ್ಯ ಬದಲಿಸಿಲ್ಲ ಇನ್ನೂ.

ಒಟ್ಟಾರೆ ಹೇಳುವುದಾದರೆ ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹತೆ ಪಡೆದಿಲ್ಲ.  ಅದರಲ್ಲೂ ಲೈಂಗಿಕ ಸ್ವಾತಂತ್ರ್ಯ ಕನಸಿನ ಮಾತು.

ರಾಣಿಯರು ರಾಜ ವರ್ಷಗಟ್ಟಲೆ ಯುದ್ಧ, ಬೇಟೆ ಮೊದಲಾದವುಗಳನ್ನು ನಡೆಸಿ ಅಂತಃಪುರಕ್ಕೆ ಬರುವವರೆಗೂ ಸಹ ಕೀಲಿಕೈಗಾಗಿ ಕಾಯಬೇಕಿತ್ತು.  ಇಂತಹ ಸಾಧನ ಧರಿಸಿದ ಮೇಲೆ ಮುಟ್ಟಿನ ನಿರ್ವಹಣೆ, ಮಲಮೂತ್ರ ವಿಸರ್ಜನೆಯೂ ಸಹ ತಾಪತ್ರಯವೇ ಆಗಿರುತ್ತಿತ್ತು.  ಕೆಲವೊಮ್ಮೆ ದಾಸಿಯರು ಸಹ ಈ ಕೀಲಿಕೈ ನಿರ್ವಹಣೆ ಮಾಡಿದ್ದಿರಬಹುದೆನೋ.. ಒಂದರ್ಥದಲ್ಲಿ ಇದು ದೈಹಿಕ ಹಿಂಸೆ ಹುಟ್ಟಿಸಿದ್ದಲ್ಲಿ ಆಶ್ಚರ್ಯವಿಲ್ಲ.

ಬಹು ಪತ್ನಿತ್ವ ಅನುಸರಿಸುವ ಕುಟುಂಬದಲ್ಲಿ ಯಾವ ಪತ್ನಿಗೆ ಲೈಂಗಿಕ ಸ್ವಾತಂತ್ರ್ಯ ಇದೆ?  ತನ್ನ ಗಂಡನ ಬಳಿಗೆ ಹೋಗಲು ಸಹ ಆತನದೇ ಒಪ್ಪಿಗೆಯ ಅವಶ್ಯಕತೆ ಇರುತ್ತದೆ.

ರಾಜನೊಬ್ಬನ ಹಲವಾರು ಪತ್ನಿಯರು ಎಲ್ಲಾ ಅರಸೊತ್ತಿಗೆ ನಡುವೆ ತನ್ನ ರಾಜನ ಬಳಿಗೆ ಹೋಗಲು, ಸುಖಿಸಲು ಸ್ವಾತಂತ್ರ್ಯವಿಲ್ಲದೇ ಬದುಕುತ್ತಾರೆ.  ಈ ಅಸುಖದ ಮನಸ್ಸುಗಳಿಗೆ ಬಹಳ. ನೋವಿರುತ್ತದೆ.  ಇದರ ಜೊತೆಗೆ ರಾಜನ ಮೊದಲ ಮಗನಿಗೆ ಮಾತ್ರ ಧಕ್ಕುವ ಸಿಂಹಾಸನ ಉಳಿದ ಮಕ್ಕಳು ಹಡೆದವರನ್ನು ಅತಂತ್ರ ಸ್ಥಿತಿಗೆ ದೂಕುತ್ತಿತ್ತು.  ಹೀಗಿರುವಾಗ ಅಂಥಾ ರಾಣಿಯರು ರಾಜನೊಂದಿಗೆ ನಿಜವಾಗಿಯೂ ಸುಖಿಸಲು ಅವಕಾಶ ಇರುತ್ತಿತ್ತೇ ಎಂಬುದೇ ಯಕ್ಷಪ್ರಶ್ನೆ.

ಒಂದರ್ಥದಲ್ಲಿ ಕೆಲವು ಹೆಣ್ಣು ಮಕ್ಕಳು ವಿವಾಹಿತರಾದರೂ ಊರ್ಮಿಳೆಯರಂತೆ ಕಾಯುತ್ತಲೇ ಜೀವನ ಸಾಗಿಸಬೇಕಾದ ಸಂದರ್ಭಗಳು ಅನೇಕ.  ಸೈನ್ಯದಲ್ಲಿ ಉದ್ಯೋಗ ಮಾಡುವ ಪತಿ, ದುಬೈ ಸೇರಿದಂತೆ ವಿದೇಶದಲ್ಲಿ ಉದ್ಯೋಗದಲ್ಲಿರುವ ಪತಿ ಹೀಗೆ ಪತಿ ಸತಿಯಿಂದ ದೂರ ಇದ್ದಾಗ ಆತನಿಗಾಗಿ ಕಾಯುತ್ತಲೇ ಬಾಳಬೇಕಾಗುವುದು.

ಹದಿನಾರಕ್ಕಿಂತ ಬೇಗ ಋತುಮತಿಯರಾಗುವ ಹೆಣ್ಣುಮಕ್ಕಳು ಐರೋಪ್ಯ ರಾಷ್ಟ್ರಗಳಲ್ಲಿ ಕಿರಿಯ ವಯಸ್ಸಿಗೇ ತಾಯಂದಿರಾಗಿ ಆ ಮಗುವನ್ನು ಬೆಳೆಸುವ  ತಾಯಿಯಾಗಿ ಬದಲಾವಣೆ ಆಗುತ್ತಿದ್ದಾರೆ.   ದೇಹದ ಅಂಗಗಳ ಬಗ್ಗೇ ಏನೂ ಅರಿಯದ ಕಿರಿಯ ಹೆಣ್ಣುಮಕ್ಕಳಿಗೆ ಒತ್ತಾಯವೋ, ದೇಹ ಚಪಲವೋ ಕಾಮ ಕ್ರೀಡೆಗೆ ಇಳಿಸಿ ಗರ್ಭಿಣಿಯರನ್ನಾಗಿ ಮಾಡುತ್ತಿರುವವರು ಸಹ ಕಿರಿಯ ವಯೋಮಾನದ ಗಂಡು ಮಕ್ಕಳೇ.  ಇಂಥಾ ಪ್ರಕರಣಗಳಲ್ಲಿ ನೋಯುವ ಹೆಣ್ಣು ಭವಿಷ್ಯದಲ್ಲಿ ಇನ್ಯಾವ ಸುಖಗಳ ನಿರೀಕ್ಷೆ ಇರಿಸಿಕೊಳ್ಳಲು ಸಾಧ್ಯ?   ಇನ್ನು ಲೈಂಗಿಕ ಸ್ವಾತಂತ್ರ್ಯದ ಹಕ್ಕು ದೂರವೇ ಉಳಿಯುವುದು.