kambala – Peepal Media

ಮುಖ್ಯಮಂತ್ರಿಗಳೇ, ತುಳುನಾಡಿನ ಕಂಬಳದಲ್ಲಿನ ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಗಮನಿಸಿ
ಕಂಬಳಕ್ಕೆ ಜಾತಿ, ಧರ್ಮದ ಬೇಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಹೇಳಿಕೆ ಸತ್ಯಕ್ಕೆ ದೂರವಾಗಿರುವ ವಿಚಾರ. ಕಂಬಳ ಎನ್ನುವುದು ತುಳುವರ ಜನಪದ ಕ್ರೀಡೆ, ತುಳುವರ ಸಾಂಸ್ಕೃತಿಕ ಆಸ್ಮಿತೆ ಎಂದು ಬಿಂಬಿತವಾಗಿದೆ. ವಾಸ್ತವವಾಗಿ ಕಂಬಳ ಎನ್ನುವುದು ಫ್ಯೂಡಲ್ ವ್ಯವಸ್ಥೆಯ ಪಳೆಯುಳಿಕೆಯಾಗಿದ್ದು, ಈಗಲೂ ಕಂಬಳವನ್ನು ವಿಜೃಂಭಿಸುವುದು ಸಮಾಜದಲ್ಲಿ ಜಾತಿ ಆಧರಿತ ಅಸಮಾನತೆ ಮತ್ತು ಸಾಂಸ್ಕೃತಿಕ ಯಜಮಾನ್ಯದ ಪಾರಂಪರಿಕ ಆಚರಣೆಗಳನ್ನು ಇನ್ನೂ ಜಾರಿಯಲ್ಲಿಡುವ ವ್ಯವಸ್ಥಿತ ಹುನ್ನಾರವಾಗಿದೆ.
ಒಂದು ನಿರ್ದಿಷ್ಟ ಜಾತಿಯ ಮೆರೆದಾಟಕ್ಕೆ ಮತ್ತು ಕೆಳಜಾತಿ, ಕೆಳವರ್ಗಗಳ ದಬ್ಬಾಳಿಕೆಗೆ ಮಾಧ್ಯಮವಾಗಿದ್ದ ಕಂಬಳವನ್ನು ಇಡೀ ತುಳುನಾಡಿನ ಸಾಂಸ್ಕೃತಿಕ ಐಡೆಂಟಿಟಿಯ ರೂಪದಲ್ಲಿ ಬಿಂಬಿಸಲಾಗುತ್ತಿದೆ. ರೈತರು ತಮ್ಮ ಕೃಷಿ ಕಾಯಕದ ಬಿಡುವಿನ ವೇಳೆಯಲ್ಲಿ, ಕಂಬಳದ ಗದ್ದೆಯಲ್ಲಿ ಕೋಣಗಳನ್ನು ಓಡಿಸುವುದರ ಮೂಲಕ ಮನರಂಜನೆಯನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ಕಂಬಳದ ಸಮರ್ಥನೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಂಬಳದಲ್ಲಿ ಕಂಡುಬರುವ ಸ್ಪರ್ಧೆ’ ಅಥವಾಕ್ರೀಡೆ’ ಅನ್ನುವುದು ಕುಂಟಾಬಿಲ್ಲೆ ಅಥವಾ ಕಬ್ಬಡ್ಡಿಯಂತಹ ಸಹಜ ಮನೋರಂಜಕ ಪಂದ್ಯಾಟವಲ್ಲ. ಬದಲಿಗೆ ಅದು ಉಳ್ಳವರ ಆಟ- ಮೇಲಾಟದ, ಪೌರುಷದ ಮತ್ತು ಯಜಮಾನಿಕೆಯ ಅಭಿವ್ಯಕ್ತಿಯಾಗಿದೆ. ಮೂಲದಲ್ಲಿ ಕಂಬಳ ಬಂಟರ ಗುತ್ತಿನ ಅಧಿಕಾರವನ್ನು ಪ್ರತಿಷ್ಠಾಪಿಸಲು ಮತ್ತು ಅದಕ್ಕೆ ಸಾಂಸ್ಕೃತಿಕ ಮಾನ್ಯತೆಯನ್ನು ದಕ್ಕಿಸಿಕೊಳ್ಳುವ ಸಲುವಾಗಿ ಸೃಷ್ಠಿಯಾದ ಒಂದು ಆಚರಣೆಯಾಗಿದೆ. ಅಂದರೆ ಕಂಬಳ ಪ್ರಾರಂಭವಾಗಿದ್ದೇ ಒಕ್ಕಲು ರೈತರನ್ನು ಸುಲಿಯಲು ಮತ್ತು ಕೆಳ ಸಮುದಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಲುವಾಗಿ. ತುಳುನಾಡಿನಲ್ಲಿ ಜಾತಿ ಶ್ರೇಣೀಕರಣದ ಉಳಿವು ಮತ್ತು ಮುಂದುವರಿಕೆಯಲ್ಲಿ ಕಂಬಳದ ಪಾತ್ರ ಅಧ್ಯಯನಾರ್ಹ ವಿಚಾರವಾಗಿದೆ.
ಮೂಲದಲ್ಲಿ ಕಂಬಳದ ಕೋಣಗಳು ಬಂಟರ ಗುತ್ತಿನ ಮನೆಗಳಲ್ಲಿ ಮಾತ್ರ ಇರುತ್ತಿದ್ದವು. ಉಳುಮೆ ಮಾಡದ ಕೋಣಗಳನ್ನು ಕಂಬಳಕ್ಕಾಗಿಯೇ ಸಾಕುವುದು ಗುತ್ತಿನ ಮನೆಯ ಪ್ಯಾಶನ್ ಆಗಿತ್ತು. ದಷ್ಟಪುಷ್ಟವಾಗಿ ಕೊಬ್ಬಿರುತ್ತಿದ್ದ ಕಂಬಳದ ಕೋಣಗಳು ಗುತ್ತಿನ ಮನೆಗಳ ಗತ್ತಿಗೆ, ಪೌರುಷಕ್ಕೆ ಸಾಕ್ಷಿಯಾಗಿರುತ್ತಿದ್ದವು. ಅಂತಹ ಕೋಣಗಳನ್ನು ಸಾಕಿ ಸಲಹುವ ತಾಕತ್ತಿಲ್ಲದ ಬಡ ಹಾಗೂ ಸಣ್ಣ ರೈತರ, ಒಕ್ಕಲುದಾರರ ಮತ್ತು ಕೆಳಜಾತಿಗಳ ನಡುವೆ ಕಂಬಳ ಬಂಟರ ಗುತ್ತಿನ ಮನೆಗಳಿಗೆ ಹಿರಿಮೆಯನ್ನೂ, ಫ್ಯೂಡಲ್ ಅಧಿಕಾರದ ಛತ್ರವನ್ನೂ ನೀಡುತಿತ್ತು ; ಮತ್ತು ಇದೇ ಫ್ಯೂಡಲ್ ಅಧಿಕಾರದ ಬಲದಲ್ಲಿ ಗುತ್ತಿನ ಮನೆಗಳು ಸಮುದಾಯಗಳ ಸಂಪನ್ಮೂಲ ಹಾಗೂ ಉತ್ಪಾದನೆಯ ಮೇಲೂ ನಿಯಂತ್ರಣ ಸಾಧಿಸುತ್ತಿದ್ದವು. ಕಂಬಳದ ಕೋಣಗಳನ್ನು ಕೊಬ್ಬಿಸಲು, ಅವುಗಳಿಗೆ ಅಕ್ಕಿಯಲ್ಲಿ ಗಂಜಿ ಮಾಡಿ ತಿನ್ನಿಸಲು ಅಕ್ಕಿ, ದಾನ್ಯಗಳನ್ನು ಒಕ್ಕಲಿನ ರೈತರಿಂದ ಸಂಗ್ರಹಿಸಿಲಾಗುತ್ತಿತ್ತು. ಕೋಣಗಳಿಗೆ ತೆಂಗಿನ ಎಣ್ಣೆ ಹಚ್ಚಿ ಆರೈಕೆ ಮಾಡಲೆಂದೇ ಬಿಲ್ಲವರು, ದಲಿತರು ಮತ್ತಿತರ ಕೆಳವರ್ಗಗಳ ಹತ್ತಾರು ಸಂಖ್ಯೆಯ ಆಳುಗಳನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಒಕ್ಕಲುದಾರ ಬಡ ರೈತ ಹಾಗೂ ಕೆಳಜಾತಿಗಳ ಶ್ರಮ ಹಾಗೂ ಸಂಪನ್ಮೂಲಗಳ ಮೇಲೆ ಹತೋಟಿ ಸಾಧಿಸಲು ಕಂಬಳ ಒಂದು ಮಾಧ್ಯಮದಂತೆ ಬಳಕೆಯಾಗುತಿತ್ತು. ಹೀಗಾಗಿಯೇ ಆ ಕಾಲದಲ್ಲಿ ರೈತ ಹಸಿವಿನಿಂದ ಸಾಯುತ್ತಿದ್ದರೂ ಊರ ಗುತ್ತಿನ ಕಂಬಳದ ಕೋಣಗಳಿಗೆ ಅಕ್ಕಿ ಗಂಜಿ, ಹುರುಳಿ ಕಾಳಿನ ಗಂಜಿಗೆ ಕೊರತೆಯಾಗುತ್ತಿರಲಿಲ್ಲ. ಹೀಗೆ ಕಂಬಳ ಜಾತಿ ಶ್ರೇಣೀಕರಣದ ಅಸಮಾನ ಮತ್ತು ಶೋಷಕ ಸ್ವರೂಪದೊಂದಿಗೆ ಅವಿಭಾಜ್ಯ ಸಂಬಂಧವನ್ನು ಹೊಂದಿದೆ. ಹಲವು ಅಮಾನವವೀಯ ಅಸ್ಪೃಶ್ಯತಾ ಆಚರಣೆಗಳು ಮತ್ತು ಅಜಲು ಪದ್ದತಿ ಈ ಕಂಬಳ ಕ್ರೀಡೆಯ ಮೂಲಕ ತೀರಾ ಇತ್ತಿಚ್ಚಿನವರೆಗೂ ನಡೆಯುತ್ತಿದ್ದವು.
ಕಂಬಳ ಅನ್ನೋದು ಹಲವು ಊರಿನ ಗುತ್ತು ಮನೆತನಗಳ ನಡುವೆ ನಡೆಯುತ್ತಿದ್ದ ಪ್ರತಿಷ್ಟಿತ ಸ್ಪರ್ಧೆಯಾಗಿದ್ದರಿಂದ ಪ್ರತಿಸ್ಪರ್ಧಿ ಗುತ್ತಿನ ಜನರು ಬಂದು ಕಂಬಳದ ಗದ್ದೆಯನ್ನು ಹಾಳು ಮಾಡಬಹುದು ಎಂಬ ಕಾರಣಕ್ಕಾಗಿ ಕೊರಗ ಎಂಬ ಅತಿ ಶೋಷಿತ ಸಮುದಾಯ ಪನಿ ಕುಲ್ಲುನು’ ಎಂಬ ಸಂಪ್ರದಾಯವನ್ನು ಆಚರಿಸಬೇಕಿತ್ತು.ಪನಿ ಕುಲ್ಲುನು’ ಅಂದರೆ ಕೊರಗರು ತಮ್ಮ ಹೆಂಡತಿ ಮಕ್ಕಳ ಜೊತೆ ಇಡೀ ರಾತ್ರಿ ಕಂಬಳ ಗದ್ದೆಯನ್ನು ಕಾಯಬೇಕು. ಇದಕ್ಕಿಂತಲೂ ಅಮಾನುಷವೆಂದರೆ, ಕಂಬಳ ನಡೆಯುವ ಒಂದೆರಡು ಗಂಟೆಗಳ ಮೊದಲು ಕಂಬಳ ಗದ್ದೆಯಲ್ಲಿ ಕೊರಗರು ಓಡಬೇಕು. ಕಂಬಳ ಗದ್ದೆಯಲ್ಲಿ ಗುತ್ತಿನ ಮನೆಯ ವೈರಿಗಳು ಗಾಜು, ಕಲ್ಲುಗಳನ್ನು ಹಾಕಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಕೊರಗರು ಓಡಿ ಪರಿಶೀಲನೆ ಮಾಡಬೇಕು. ಗುತ್ತಿನ ಕೊಣಗಳಿಗೆ ಗಾಜು ಚುಚ್ಚುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಜಮೀನ್ದಾರಿ ಕುಟುಂಬಗಳ ಮಧ್ಯೆ ನಡೆಯುವ ಪಕ್ಕಾ ಫ್ಯೂಡಲ್ ಕ್ರೀಡೆಯಾಗಿರುವ ಕಂಬಳ ಈಗ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಡುಗಳನ್ನು ಹೊಂದಿದೆಯಾದರೂ ಆಳದಲ್ಲಿ ಫ್ಯೂಡಲ್ ವ್ಯವಸ್ಥೆಯನ್ನು ಜಾರಿಯಲ್ಲಿಡುವ ತಂತ್ರವೇ ಆಗಿದೆ.
ಸದ್ಯ ಕರಾವಳಿಯ ಹಲವೆಡೆ ನಡೆಯುತ್ತಿರುವ ಕಂಬಳದ ಸಂಚಾಲಕ ಸಮಿತಿಗಳನ್ನು ನೋಡಿದಲ್ಲಿ ಅದರ ವರ್ಗೀಯ ಮತ್ತು ಜಮೀನ್ದಾರಿ ಸ್ವರೂಪ ಮನದಟ್ಟಾಗುತ್ತದೆ. ಕರಾವಳಿಯ ಬಾರಾಡಿ ಬೀಡು (ಕಾರ್ಕಳದ ಸಮೀಪ), ಈದು (ಕಾರ್ಕಳ), ಮಿಯಾರು (ಕಾರ್ಕಳದ ಸಮೀಪ), ಐಕಳ ಬಾವ (ಮೂಡುಬಿದಿರೆ-ಮುಲ್ಕಿ ಮಧ್ಯೆ), ಬಂಗಾಡಿ (ಬೆಳ್ತಂಗಡಿ), ಹೊಕ್ಯಾಡಿಗೋಳಿ (ಬಂಟ್ವಾಳ), ಪಜೀರು (ಬಂಟ್ವಾಳ), ಪಿಲಿಕುಳ ನಿಸರ್ಗಧಾಮ (ಮಂಗಳೂರ ಸಮೀಪ), ಜಪ್ಪಿನಮೊಗರು (ಮಂಗಳೂರ ಸಮೀಪ), ತಲಪಾಡಿ ಪಂಜಾಳ (ಮಂಗಳೂರ ಸಮೀಪ), ಅಲ್ತಾರು (ಉಡುಪಿ), ಕಟಪಾಡಿ (ಉಡುಪಿ), ಅಡ್ವೆ, ನಂದಿಕೂರು, ಮೂಡುಬಿದಿರೆ, ಮುಲ್ಕಿ, ವೇಣೂರು, ಉಪ್ಪಿನಂಗಡಿ, ಪುತ್ತೂರು, ತೋನ್ಸೆಯಲ್ಲಿ ಕಂಬಳಗಳು ನಡೆಯುತ್ತಿದೆ. ಈ ಎಲ್ಲಾ ಕಂಬಳಗಳಲ್ಲಿ ಒಂದೋ ಬಂಟರು ಮುಖ್ಯಸ್ಥರಾಗಿರುತ್ತಾರೆ ಅಥವಾ ಜೈನರು ಸಂಚಾಲಕರಾಗಿರುತ್ತಾರೆ. ಕೋಣ ಓಡಿಸುವವರು, ಕೋಣದ ಚಾಕರಿ ಮಾಡುವವರು, ಕಂಬಳದ ಸ್ವಯಂಸೇವಕರೆಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಮುಲ್ಕಿ ಪಯ್ಯೊಟ್ಟು ಸದಾಶಿವ ಸಾಲ್ಯಾನ್ ಹೊರತುಪಡಿಸಿದಲ್ಲಿ ಬಹುತೇಕ ಕೋಣಗಳ ಮಾಲಿಕರು ಮಾತ್ರ ಈಗಲೂ ಗುತ್ತಿನ ಬಂಟರೇ ಆಗಿದ್ದಾರೆ ಎಂಬುದು ಗಮನಾರ್ಹ. ಈಗಲೂ ಮಂಗಳೂರಿಗೊಂದು ರೌಂಡ್ ಹೊಡೆದರೆ ಚೌಟ, ಶೆಟ್ಟಿ, ಹೆಗ್ಡೆಗಳ ದೊಡ್ಡ ದೊಡ್ಡ ಬ್ಯಾನರ್, ಕಟೌಟ್ ಗಳು ಕಂಬಳ ಸಂಬಂಧ ರಾರಾಜಿಸುತ್ತಿದೆ. ಇದು ಕರಾವಳಿಯಲ್ಲಿ ಬಂಟರ ಅಧಿಪತ್ಯವನ್ನು ಸಾರಲು ಹಾಕಲಾಗಿದೆಯೇ ಎಂಬ ಅನುಮಾನ ಹುಟ್ಟಿಸುವಂತಿದೆ. ಸಮಸಮಾಜದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ.
ಕಂಬಳ ಎಂಬುದು ಕೇವಲ ಕ್ರೀಡೆಯಾಗಿ ಪ್ರಾರಂಭವೂ ಆಗಿಲ್ಲ. ಮುಂದುವರಿಕೆಯೂ ಅಲ್ಲ. ಕಂಬಳ ಎಂಬುದು ಜಮೀನ್ದಾರಿಗಳ ಐಶಾರಾಮಿ ಬದುಕಿನ ಪಳಿಯುಳಿಕೆಯಾಗಿ ಮುಂದುವರೆಯುತ್ತಿದೆ. ಕಂಬಳ ಎಂಬುದು ಬಹುಜನರ ಸಂಸ್ಕೃತಿಯೂ ಅಲ್ಲ. ಜನಪದ ಕ್ರೀಡೆಯೂ ಅಲ್ಲ. ಕಂಬಳ ಎಂಬುದು ಪಕ್ಕಾ ಬಹುಜನ ವಿರೋಧಿ ಫ್ಯೂಡಲ್ ವರ್ಗದ ಮೋಜಿನ ಆಟವಷ್ಟೆ. ಕಂಬಳದಲ್ಲಿ ಜಾತಿ ಹೊರತುಪಡಿಸಿ ಇನ್ನೇನೂ ಇಲ್ಲ.

ನವೀನ್‌ ಸೂರಿಂಜೆ

ಬೆಂಗಳೂರು ಕಂಬಳ: ಸರ್ಕಾರದಿಂದ ಕಂಬಳಗಳಿಗೆ ಒಂದು ಕೋಟಿ ಅನುದಾನ
ಬೆಂಗಳೂರು: ಐಟಿ ಸಿಟಿ ಬೆಂಗಳೂರು ಮುಂದಿನ ತಿಂಗಳು ಸೂಪರ್‌ಹಿಟ್ ಚಿತ್ರ ‘ಕಾಂತಾರ’ ಬಿಡುಗಡೆಯಾದ ನಂತರ ದೇಶದಾದ್ಯಂತ ಗಮನ ಸೆಳೆದಿರುವ ಕರಾವಳಿ ಕರ್ನಾಟಕದ ಜನಪ್ರಿಯ ಕ್ರೀಡೆಯಾದ ‘ಕಂಬಳ’ಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದೆ.

ಬುಧವಾರ ಉಪಮುಖ್ಯಮಂತ್ರಿ ಡಿ.ಕೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ‘ಕೆರೆ ಪೂಜೆ’ಯಲ್ಲಿ ಶಿವಕುಮಾರ್ ಭಾಗವಹಿಸಿದ್ದರು.

ಈ ಕಾರ್ಯಕ್ರಮಕ್ಕೆ “ಬೆಂಗಳೂರು ಕಂಬಳ-ನಮ್ಮ ಕಂಬಳ” ಎಂದು ಹೆಸರಿಡಲಾಗಿದೆ.

ಕಾರ್ಯಕ್ರಮದ ನಂತರ ಮಾತನಾಡಿದ ಶಿವಕುಮಾರ್, ಕಂಬಳ ಕ್ರೀಡೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ 20 ಕಂಬಳ ಕಾರ್ಯಕ್ರಮಗಳಿಗೆ ಐದು ಲಕ್ಷ ರೂ.ಗಳಂತೆ, ಒಟ್ಟು ಒಂದು ಕೋಟಿ ರೂಪಾಯಿ ಅನುದಾನ ನೀಡಲಿದೆ ಎಂದು ಘೋಷಿಸಿದರು.

ದೇಸಿ ಮತ್ತು ಐತಿಹಾಸಿಕ ಕಂಬಳ ಕ್ರೀಡೆಯನ್ನು ರಾಜ್ಯದಲ್ಲಿ ಪ್ರೋತ್ಸಾಹಿಸಲಾಗುವುದು ಎಂದರು.

ಕಂಬಳ ಕ್ರೀಡೆಗೆ ಹಣ ಬಿಡುಗಡೆ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜತೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

“ಮನುಷ್ಯರು ಹೋಗುವಾಗ ತನ್ನೊಂದಿಗೆ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ ಮತ್ತು ಸಮಯ ಬಂದಾಗ, ಅವನು ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ಆದರೆ, ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸಲು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜನತೆ ಒಗ್ಗೂಡಿರುವುದು ಸಂತಸದ ಸಂಗತಿ” ಎಂದು ಶಿವಕುಮಾರ್ ತಿಳಿಸಿದರು.

“ರಾಜ್ಯದ ಕರಾವಳಿ ಪ್ರದೇಶವು ಇಡೀ ದೇಶದ ಆಸ್ತಿಯಾಗಿದೆ. ಈ ಪ್ರದೇಶದ ಜನರು ಶಿಕ್ಷಣ, ಉದ್ಯಮಗಳು, ಹೋಟೆಲ್ ಉದ್ಯಮ, ಪ್ರವಾಸೋದ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ದೊಡ್ಡ ಹೆಸರುಗಳನ್ನು ಮಾಡಿದ್ದಾರೆ. ಕಂಬಳ ಕ್ರೀಡೆಯನ್ನು ಬೆಂಗಳೂರಿಗೆ ಪರಿಚಯಿಸಲು ಶಾಸಕ ಅಶೋಕ್ ರೈ ಅವರು ಮುಂದಾಗಿರುವುದು ಶ್ಲಾಘನೀಯ” ಎಂದು ತಮ್ಮ ಪಕ್ಷದ ಶಾಸಕರನ್ನು ಹೊಗಳಿದರು.

“ನೆಲ ಮೂಲದ ಸಂಸ್ಕೃತಿ ಈ ದೇಶದ ದೊಡ್ಡ ಆಸ್ತಿ. ದಕ್ಷಿಣ ಕನ್ನಡ ಜಿಲ್ಲೆ ಶ್ರೀಮಂತ ಜಾನಪದ ಸಂಪ್ರದಾಯವನ್ನು ಕಾಪಾಡಿಕೊಂಡು ಬಂದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯ ಸಾವಿರಾರು ಯುವಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.”

“ಬೆಂಗಳೂರಿನಲ್ಲಿ ಕಂಬಳ ಕ್ರೀಡೆಯ ಆಯೋಜನೆಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ದೇವರು ಶಾಪ ಅಥವಾ ಆಶೀರ್ವಾದವನ್ನು ನೀಡುವುದಿಲ್ಲ. ಅವನು ಅವಕಾಶಗಳನ್ನು ಮಾತ್ರ ನೀಡುತ್ತಾನೆ, ನಾವು
ಆ ಅವಕಾಶಗಳನ್ನು ಬಳಸಿಕೊಳ್ಳಬೇಕು. ಯಾರೂ ಅಡೆತಡೆಗಳಿಗೆ ಸಿಲುಕಬಾರದು, ಸದಾ ಮುಂದೆ ಸಾಗಬೇಕು” ಎಂದು ಡಿಕೆ ಶಿವಕುಮಾರ್ ಹೇಳಿದರು.

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್, ಕಾಂಗ್ರೆಸ್ ಶಾಸಕರಾದ ಎನ್.ಎ.ಹ್ಯಾರಿಸ್, ಅಶೋಕ್ ಕುಮಾರ್ ರೈ ಹಾಗೂ ಕಂಬಳ ಸಮಿತಿ ಸದಸ್ಯರಾದ ಗುರುಕಿರಣ್, ಪ್ರಕಾಶ್ ಶೆಟ್ಟಿ, ಗುಣರಂಜನ್ ಶೆಟ್ಟಿ, ಉಮೇಶ್ ಶೆಟ್ಟಿ ಸ್ಥಳದಲ್ಲಿ ಉಪಸ್ಥಿತರಿದ್ದರು.