kanakadasa jayanthi – Peepal Media

ದಲಿತ ಸಾಹಿತಿಗಳಿಗೆ ಬೆಲೆಯೇ ಇಲ್ವಾ?
ಬೆಂಗಳೂರು : ಕನಕದಾಸರ ಜನ್ಮದಿನದ ಪ್ರಯುಕ್ತ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ “ಕರ್ನಾಟಕ ತತ್ವಪದಕಾರರ ಹದಿನೆಂಟು ಸಂಪುಟಗಳ ಬಿಡುಗಡೆ ಸಮಾರಂಭʼ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯ ಅವರು ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ದಲಿತ ಸಾಹಿತಿ ಗಂಗಪ್ಪ ತಳವಾರ ಅವರು ಭಾವಾನುವಾದ ಮಾಡಿರುವ “ಗುಟ್ಟಹಳ್ಳಿ ಆಂಜನಪ್ಪ” ಅವರ “ಸುಜ್ಞಾನ ಬೋಧ ತತ್ವಗಳು ಸಂಪುಟ” ಎಂಬ ಸಂಪುಟವನ್ನು ಬಿಡುಗಡೆಗೋಳಿಸಿದರು.

ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯರನ್ನು ಅಮಂತ್ರಿಸಿ ಬಹಳಷ್ಟು ಜನರಿಗೆ ಗೌರವವನ್ನೂ ಸೂಚಿಸಿದ್ದಾರೆ. ಇದೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ದಲಿತ ಸಾಹಿತಿ ಗಂಗಪ್ಪ ತಳವಾರ ಅವರನ್ನು ಸೌಜನ್ಯಕ್ಕೂ ಅವರ ಹೆಸರನ್ನೂ ಕರೆಯದೇ ಅವಮಾನಿಸಿರುವ ಘಟನೆ ಸನ್ಮಾನ್ಯ ಮುಖ್ಯಮಂತ್ರಿಗಳ ಎದುರಲ್ಲೇ ನಡೆದಿರುವುದು ಖಂಡನೀಯ.

ದಲಿತ ಸಾಹಿತಿಗಳನ್ನು ಹಿಂದಿನಿಂದಲೂ ಕೆಲವು ಸಮಾರಂಭಗಳಲ್ಲಿ ದ್ವಿತೀಯ ದರ್ಜೆಯಲ್ಲಿಯೇ ನೋಡುತ್ತಿರುವುದು ದಲಿತ ಸಾಹಿತ್ಯಕ್ಕೆ ಮಾಡುತ್ತಿರುವ ಅಪಮಾನ. ರಾಜ್ಯದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದರಲ್ಲಿಯೂ ದಲಿತ ಸಾಹಿತಿಯೊಬ್ಬರ ಕೃತಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೆಸರನ್ನೇ ಹೇಳದೆ ಬಿಡುಗಡೆಗೊಳಿಸುವುದನ್ನು ಹೇಗೆ ದಲಿತ ಸಮುದಾಯ ಸ್ವೀಕರಿಬೇಕಿದೆ?

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ ಚಿಕ್ಕಣ್ಣ ಅವರ ಬೇಜವಬ್ದಾರಿತನದಿಂದ ಈ ಘಟನೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ರೀತಿ ದಲಿತ ಸಾಹಿತಿಗಳನ್ನು,ಲೇಖಕರರನ್ನು ಅವಮಾನಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರೇ ಹೇಳಬೇಕಿದೆ.

ಕೇಂದ್ರದ ಕಚೇರಿಯಿಂದ ಕರೆ ಮಾಡಿ ಕಾರ್ಯಕ್ರಮಕ್ಕೆ ಬರಲು ಹೇಳಿ, ತಾವೇ ಬರೆದಿರುವ ಪುಸ್ತಕ ಕೇಳಿದರೆ ಹಣ ಕೊಡಿ ಎಂದಿದ್ದಾರೆ. ಕುಟುಂಬ ಸಮೇತರಾಗಿ ಕಾರು ಬಾಡಿಗೆ ಮಾಡಿಕೊಂಡು ಬಂದಿದ್ದ ಗಂಗಪ್ಪನವರು ಕುಟುಂಬಸ್ತರ ಮುಂದೆ ತಲೆತಗ್ಗಿಸುವಂತಾಗಿದೆ.

ಕನಕ ದಾಸರು ನಾನು ಸಾವಿರಾರು ವರ್ಷಗಳ ಕಾಲ ಫೇಮಸ್ ಆಗಬೇಕೆಂದು ಭೂಮಿ ಉದ್ದಲಕ್ಕೂ ಸಾರಲಿಲ್ಲ – ಕೆ.ಟಿ. ಶಾಂತಲಾ
ಹಾಸನ : ನಾವು ಮಾಡುವ ಕೆಲಸವನ್ನು ಶ್ರದ್ಧೆ ಭಕ್ತಿಯಿಂದ ಮಾಡಿದರೇ ದೇವರು ಒಲಿಯುತ್ತಾನೆ. ಯಾವ ಸಂತರು ಕೂಡ ತನಗೊಬ್ಬನಿಗಾಗಿ ಯೋಚನೆ ಮಾಡಲಿಲ್ಲ. ಪ್ರತಿಯೊಬ್ಬರಿಗೂ ಕೂಡ ದೇವರು ಒಲಿಯಲಿ ಎಂದು ಎಲ್ಲೆಡೆ ತಮ್ಮ ಸಾಹಿತ್ಯ, ವಚನ ಹಾಗೂ ಹಾಡಿನ ಮೂಲಕ ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರದಂದು ಆಯೋಜಿಸಿದ್ದ ಕನಕದಾಸರ ಜಯಂತಿ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಕದಾಸರು ಉತ್ತಮವಾದ ತತ್ವ ಸಿದ್ಧಾಂತವನ್ನು ಹೊಂದಿದ್ದರು. ಗುರು ಪರಂಪರೆ ಎಂದರೇ ಯಾರಾದರೂ ಆಗಲಿ ಒಬ್ಬ ಯೋಗ್ಯ ಶಿಷ್ಯ ಬಂದರೆ ಅವರನ್ನು ಗುರುತಿಸಿ ಅಂತವರಿಗೆ ತಮ್ಮ ಒಳ್ಳೆಯ ಸಂದೇಶ ಹಾಗೂ ಎಲ್ಲಾ ಅಭ್ಯಾಸಗಳನ್ನು ದಾರಿ ಎರೆಯುತ್ತಿದ್ದರು. ೧೫ನೇ ಶತಮಾನದಲ್ಲಿ ಎಲ್ಲರೂ ಒಂದೇ ಎಂಬ ಭಾವದಿಂದ ಹೋರಾಡಿದವರು. ಅದರ ಬಗ್ಗೆ ಸ್ಪಷ್ಟವಾಗಿ ಸರಳವಾಗಿ ಪ್ರತಿಯೊಂದು ಜನರಿಗೂ ಮನಮುಟ್ಟುವಂತೆ ತಿಳಿಸಿದವರು. ನನಗೆ ಯಾವ ಕೀಳಿರಿಮೆ ಇಲ್ಲ ಎಂದು ಹೇಳಿದವರಲ್ಲಿ ಕನಕದಾಸರೇ ನಮಗೆ ನಿದರ್ಶನ ಎಂದು ನೀವು ಮಾಡುವ ಪ್ರತಿ ಸಣ್ಣ ಸಣ್ಣ ಕೆಲಸವೇ ದೇವರು. ಕನಕ ದಾಸರು ನಾನು ಸಾವಿರಾರು ವರ್ಷಗಳ ಕಾಲ ಫೇಮಸ್ ಆಗಬೇಕೆಂದು ಭೂಮಿ ಉದ್ದಲಕ್ಕೂ ಸಾರಲಿಲ್ಲ. ಎಲ್ಲಾ ಸಂತರನ್ನು ತೆಗೆದುಕೊಂಡರೂ ಎಲ್ಲಾರೂ ಕೂಡ ಸಮಾಜದ ಒಳಿತಿಗಾಗಿ ತಮ್ಮ ವಚನ ಹಾಗೂ ಹಾಡುಗಳ ಮೂಲಕ ಸಾರಿದ್ದಾರೆ ಎಂದರು. ಯಾವುದೇ ಕೀಳರಿಮೆ ಇರಲಿಲ್ಲ ಕನಕದಾಸರು ದೇವರು ಸಿಕ್ತಾನ ಎಂಬ ಪ್ರಶ್ನೆ ಮಾಡಬಹುದಿತ್ತು ಆದರೆ ಹುಡುಕಿದರೆ ದೇವರು ಸಿಗುತ್ತಾರೆ ಇದಕ್ಕೆ ಕನಕದಾಸರು ನಿದರ್ಶನ ಇದಕ್ಕೆ ಎಂದು ತಿಳಿಸಿದರು. ನಾವು ಮಾಡುವ ಕೆಲಸವನ್ನು ಭಕ್ತಿಯಿಂದ ಮಾಡುವುದರಿಂದ ದೇವರು ಒಲಿಯುತ್ತಾನೆ. ಸಂತರು ಎಲ್ಲರೂ ದೇವರ ಅಮಲಿನಲ್ಲಿ ಇರುತ್ತಿದ್ದರು. ಅವರು ಯೋಚನೆ ಮಾಡುತ್ತಿದ್ದ ರೀತಿ ದೇವರು ಒಬ್ಬನಿಗೆ ಮಾತ್ರ ಒಲಿಯಲ್ಲಿ ಎಂದು ಯೋಚನೆ ಮಾಡುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ದೇವರು ಒಲಿಯಲಿ ಎಂದು ಪ್ರಾರ್ಥಿಸುತ್ತಿದ್ದರು. ತಮ್ಮಲ್ಲಿ ಇದ್ದುದ್ದನ್ನು ಬಿಟ್ಟು ಹೋಗಿ ಅವರು ದೇವರನ್ನು ಹುಡುಕುವಂತ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು. ಪುರಂದ ದಾಸರು, ಕನಕ ದಾಸರು ಇವರೆಲ್ಲಾ ತನಗಾಗಿ ಏನನ್ನು ಕೇಳದೇ ಇತರರಿಗಾಗಿ ಬೇಡಿದ್ದಾರೆ ಎಂದು ಹೇಳಿದರು.

ನಗರ ಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ ಅವರು ಮಾತನಾಡಿ, ಕನಕದಾಸರು ಬಹಳ ಸರಳ ವ್ಯಕ್ತಿತ್ವದವರು. ಸರಳತೆಯಿಂದ ಹೇಗೆ ಜೀವನವನ್ನು ಮಾಡಬಹುದು ಎಂದು ತಿಳಿಸಿದವರು. ಆದರೆ ನಾವು ಆ ನಿಟ್ಟಿನಲ್ಲಿ ಸಾಗುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ಕನಕದಾಸರು ಒಂದು ಜಾತಿಗೆ ಸೀಮಿತವಾಗಿಲ್ಲ. ನಾವು ಎಲ್ಲರೂ ಒಂದೇ ಎಂಬ ಭಾವನೆ ಹೊಂದಿದ್ದು, ಯೋಗ ವ್ಯಕ್ತಿಯನ್ನು ಆಯ್ಕೆ ಮಾಡುವವರೆಗೂ ನಾವು ಉದ್ದಾರ ಆಗುವುದಿಲ್ಲ ಇದನ್ನೇ ಕನಕದಾಸರು ಹೇಳಿಕೊಟ್ಟಿದ್ದರು. ಕನಕದಾಸರು ಸಮಸ್ತ ಕುಲ ಕೋಟಿ ಜನಾಂಗಕ್ಕೆ ಅವರ ಜಯಂತಿ ಹೆಚ್ಚು ಪ್ರಚಾರ ಆಗಬೇಕು ಕನಕದಾಸರು ತೋರಿಸಿಕೊಟ್ಟ ಹಾದಿಯಲ್ಲಿ ಬಹಳ ಸರಳ, ಸುಂದರ ಜೀವನ ಮಾರ್ಗದರ್ಶನ ಮಾಡಿಕೊಟ್ಟಿದ್ದಾರೆ ಅವರ ಆದರ್ಶದಲ್ಲಿ ಸಮಾಜ ನಿರ್ಮಾಣ ಮಾಡುವುದರಲ್ಲಿ ಕೈಜೋಡಿಸೋಣ ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಎಚ್.ಎಲ್. ಮಲ್ಲೇಶ್ ಗೌಡ ಅವರು ಮಾತನಾಡಿ, ಕುವೆಂಪು ಅವರು ಒಂದು ಮಾತು ಹೇಳಿರುವುದು ಇಂದಿಗೂ ಕೂಡ ಎಲ್ಲಾರ ಬಾಯಿಯಲ್ಲಿ ಹರಿದಾಡುತ್ತಿರುವ ಸರ್ವ ಜನಾಂಗದ ಶಾಂತಿಯ ತೋಟ, ನಾಡು ಕನ್ನಡ ನಾಡು ಸರ್ವಜನಾಗದ ಶಾಂತಿಯ ತೋಟ ಒಂದೇ ಅಲ್ಲ ಸರ್ವ ಜನಾಂಗದ ಕಾಂತಿಯ ತೋಟ ಇದು. ನೆಲಕ್ಕೆ ಈ ನಾಡಿಗೆ ಕೊಡುಗೆ ಒಂದು ಸಮುದಾಯದವರಿಂದ ಬಂದಿದ್ದಲ್ಲ. ಈ ನಾಡಿನ ಸಂಸ್ಕೃತಿ ಇತಿಹಾಸಕ್ಕೆ ಸಾಹಿತ್ಯಕ್ಕೆ ಸಾಂಸ್ಕೃತಿಕಕ್ಕೆ, ಕಲೆಗೆ ದರ್ಶನಕ್ಕೆ ತತ್ವಕ್ಕೆ ಒಂದು ಜನಾಂಗದ ಕೊಡುಗೆ ಅಲ್ಲ ಕುರ್ಮಾ ಕೊರಚಿಗರಿಂದ ಹಿಡಿದು ಬ್ರಾಹ್ಮಣರವರೆಗೂ ಈ ಎಲ್ಲಾ ಸಮುದಾಯಗಳು ಈ ಸಮುದಾಯಗಳ ಮೂಲೆಗಳಿಂದ ನೆಲಗಳಿಂದ ದಾಸನಿಕರು ಬಂದು ನೆಲವನ್ನು ಗಟ್ಟಿಗೊಳಿಸಿದ್ದಾರೆ ಎಂದು ಹೇಳಿದರು. ಈ ನೆಲಕ್ಕೆ ಎಲ್ಲಾ ಜನಾಂಗದವರ ಕೊಡುಗೆ ಇದೆ. ಎಲ್ಲರೂ ಈ ನಾಡನ್ನು ಸಮೃದ್ಧಿಗೊಳಿಸಿದ್ದಾರೆ. ಕನ್ನಡ ಬರೀ ಭಾಷೆಯಲ್ಲ ನೆಲವಾಗಿ ನಾಡಾಗಿ, ಜಗತ್ತಿಗೆ ಒಂದು ಮಾದರಿ ನೆಲ. ಕನ್ನಡ ಭಾಷೆ ಹೇಗೆ ಮಾದರಿ ನೆಲವನ್ನು ಮಾದರಿ ನೆಲ ಘಟ್ಟ ಪ್ರದೇಶಗಳು ಬಟ್ಟ ಬಯಲು ಪ್ರದೇಶ ಅಚ್ಚ ಹಸಿರಿನಿಂದ ಕೂಡಿರುವಂತಹ ಈ ಜಗತ್ತಿನ ಎಲ್ಲಾ ಆಯಾಮಗಳು ಈ ಕನ್ನಡ ನೆಲದಲ್ಲಿ ಇವೆ ಎಂದು ಹೇಳಿದರು. ಜಗತ್ತಿನ ಎಲ್ಲ ಬೇರು ಸಂಗತಿಗಳು ಈ ನೆಲದಲ್ಲಿ ಸಹಜವಾಗಿ ಅರಳುತ್ತವೆ ಕನ್ನಡ ಸಾಹಿತ್ಯ ಜಗತ್ತಿಗೆ ಒಂದು ಕಿರೀಟ ಈ ಕಿರೀಟಕ್ಕೆ ಎರಡು ಗರಿಮೆಗಳು ದಾಸ ಸಾಹಿತ್ಯ, ವಚನ ಸಾಹಿತ್ಯ  ಕನ್ನಡ ಸಾಹಿತ್ಯಕ್ಕೆ ಮುಖಕ್ಕೆ ವಿಶೇಷವಾಗಿ ಗರಿಗಳು ವಚನ ಸಾಹಿತ್ಯ ದಾಸ ಸಾಹಿತ್ಯ. ವಚನ ಸಾಹಿತ್ಯ ಜನಸಾಮಾನ್ಯರ ಬಳಿ ವಿವೇಚನೆಯನ್ನು ತೆಗೆದುಕೊಂಡು ಹೋಗುತ್ತದೆ. ದಾಸ ಸಾಹಿತ್ಯ ಅತ್ಯಂತ ಸರಳವಾದ ಭಾಷೆಯಲ್ಲಿ ಇಬ್ಬರಿಗೂ ಭಕ್ತಿಯ ನೆಲವನ್ನು ಬಿತ್ತುವಂತಹ ಉದ್ದೇಶ ಇತ್ತು. ಭಕ್ತಿಯನ್ನು ಜನರ ಮನಸ್ಸಿನಲ್ಲಿ ಬಿತ್ತಬೇಕು ಎಂದರು. ಒಬ್ಬರಿಗೆ ಶಿವ ತತ್ವವನ್ನು ಬಿತ್ತಬೇಕು ಎಂಬ ಹಂಬಲ ಇದ್ದರೆ ಇನ್ನೊಬ್ಬರಿಗೆ ಹರಿತತ್ವ ಬಿತ್ತಬೇಕು ಎಂಬ ಹಂಬಲ ಇತ್ತು. ವಚನಕಾರರು ಶಿವ ತತ್ವವನ್ನು ಬಿಂಬಿಸುತ್ತಾರೆ ದಾಸರು ಅರಿತತ್ವವನ್ನು ಬಿಂಬಿಸುತ್ತಾರೆ. ಎರಡು ಕಾಲದಲ್ಲಿ ಸಮಾಜದಲ್ಲಿ ಅತ್ಯಂತ ಕೆಳ ವರ್ಗದಲ್ಲಿ ಬಂದಂತಹ ಚಿಂತಕರು ಸಿಗುತ್ತಾರೆ. ಕೆಳ ವರ್ಗದಲ್ಲಿ ಜನಿಸಿ ದಾಸರಲ್ಲಿ ಶ್ರೇಷ್ಠ ದಾಸರಾಗುತ್ತಾರೆ ಅದು ಸಾಧಾರಣವಾದ ಸಂಗತಿಯಲ್ಲ. ಅದು ಒಬ್ಬ ದಾಸ ಪರಂಪರೆಗೆ ಶ್ರೇಷ್ಠ ನೆಲವನ್ನು ತಂದುಕೊಂಡಂತಹ ಕನಕದಾಸರು ಎಂದು ತಿಳಿಸಿದರು.

ಬಿ.ಆರ್.ಸಿ. ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಂ.ಜಿ. ಪರಮೇಶ್ ಮಡಬಲು ಅವರು ಮಾತನಾಡಿ, ಕನಕದಾಸರು ನಡೆದು ಬಂದ ದಾರಿ, ಅವರು ಸಾರಿದ ಹಿತಾವಚನ ದೇರಿದಂತೆ ಜೀವನ ಚರಿತ್ರೆಯನ್ನು ಇದೆ ವೇಳೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮೊಹಮ್ಮದ್ ಸುಜೀತ, ಜಿಲ್ಲಾ ಸರಕಾರಿ ನೌಕರರ ಸಂಘದ ಈ. ಕೃಷ್ಣೇಗೌಡ, ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಲಿಂಗೇಗೌಡ, ಬಿ.ಟಿ. ಸತೀಶ್, ಸಮಾಜದ ಮುಖಂಡರಾದ ನವಿಲೇ ಅಣ್ಣಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಎಂ. ಮಹಾಲಿಂಗಯ್ಯ, ಮುಖಂಡರಾದ ಸಣ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾಕ್ಟರ್ ಎಚ್.ಪಿ. ತಾರನಾಥ್ ಇತರರು ಉಪಸ್ಥಿತರಿದ್ದರು.

ಕನಕದಾಸರು ವಿಶ್ವಮಾನವರಾಗಿದ್ದರು:ಸಿಎಂ ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 18: ಕನಕದಾಸರು ಸಂತರಷ್ಟೇ ಅಲ್ಲದೇ ದಾರ್ಶನಿಕರೂ, ಸಮಾಜ ಸುಧಾರಕರೂ ಆಗಿದ್ದರು. ವಿಶ್ವಮಾನವರೂ ಆಗಿದ್ದ ಅವರ ಜಯಂತ್ಯೋತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕನಕದಾಸ ಜಯಂತಿ ಅಂಗವಾಗಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಭಕ್ತ ಕನಕದಾಸ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದರು. ಕಾಗಿನೆಲೆ ಅವರ ಕರ್ಮಭೂಮಿ. ಕಾವ್ಯ, ಕೀರ್ತನೆಗಳನ್ನು ರಚನೆ ಮಾಡಿದ್ದರು ಎಂದು ವಿವರಿಸಿ ನಾಡಿನ ಎಲ್ಲಾ ಜನರಿಗೂ ಕನಕ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.