kananda – Peepal Media

ವಿದೇಶಿ ಸಂಸ್ಥೆಗಳಿಂದ ದೃಢೀಕರಣದ ಅಗತ್ಯವಿಲ್ಲ: ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಕೇಂದ್ರ ಸರ್ಕಾರ
ಭಾರತದ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕದಲ್ಲಿನ ಕುಸಿತ ಮತ್ತು ಪತ್ರಕರ್ತರ ಮೇಲಿನ ಹಿಂಸಾಚಾರ ಹಾಗೂ ಬೆದರಿಕೆ ಪ್ರಕರಣಗಳ ಕುರಿತು ಸಂಸತ್ತಿನ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರ, “ಭಾರತವು ಒಂದು ಚೈತನ್ಯಶೀಲ ಪತ್ರಿಕಾ ಮತ್ತು ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ, ಇದಕ್ಕೆ ವಿದೇಶಿ ಸಂಸ್ಥೆಗಳಿಂದ ದೃಢೀಕರಣದ ಅಗತ್ಯವಿಲ್ಲ” ಎಂದು ಹೇಳಿದೆ.

ಭಾರತದ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕದಲ್ಲಿನ ಕುಸಿತ ಮತ್ತು ಇತ್ತೀಚಿನ ವರ್ಷಗಳಲ್ಲಿ ಪತ್ರಕರ್ತರ ವಿರುದ್ಧದ ಬೆದರಿಕೆ, ಕಾನೂನು ಕಿರುಕುಳ ಮತ್ತು ಹಿಂಸಾಚಾರದಲ್ಲಿನ ಹೆಚ್ಚಳವನ್ನು ನಿರ್ಣಯಿಸಲು ಸರ್ಕಾರ ಯಾವುದೇ ಪರಿಶೀಲನೆಯನ್ನು ಕೈಗೊಂಡಿದೆಯೇ ಎಂದು ರಾಜ್ಯಸಭೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸದ ಮನೋಜ್ ಕುಮಾರ್ ಝಾ ಅವರು ಮಾಹಿತಿ ಮತ್ತು ಪ್ರಸಾರ ಸಚಿವರನ್ನು ಕೇಳಿದ್ದರು.

“ಪತ್ರಿಕಾ ಸ್ವಾತಂತ್ರ್ಯವನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಲು ಭಾರತೀಯ ಪತ್ರಿಕಾ ಮಂಡಳಿಯಂತಹ ( Press Council of India) ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ; ಮತ್ತು ಪತ್ರಕರ್ತರು ಸರ್ಕಾರ ಅಥವಾ ರಾಜಕೀಯ ವ್ಯಕ್ತಿಗಳಿಂದ ಭಯ ಅಥವಾ ಒತ್ತಡವಿಲ್ಲದೆ ಕೆಲಸ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ಯೋಜಿಸಲಾದ ಕ್ರಮಗಳು ಯಾವುವು?” ಎಂದು ಮನೋಜ್ ಕುಮಾರ್ ಝಾ ಪ್ರಶ್ನೆಯಲ್ಲಿ ಕೇಳಿದ್ದರು.

ಭಾರತದ ಪತ್ರಿಕಾ ಶ್ರೇಯಾಂಕದಲ್ಲಿನ ಕುಸಿತವನ್ನು ನಿರ್ಣಯಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಝಾ ಅವರ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸುವ ಬದಲು, ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್. ಮುರುಗನ್ ತಮ್ಮ ಪ್ರತಿಕ್ರಿಯೆಯಲ್ಲಿ ಪತ್ರಕರ್ತರನ್ನು ರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನ ಬಗ್ಗೆ ಮತ್ತು ಭಾರತದಲ್ಲಿನ ಪ್ರಕಟಣೆಗಳ ಸಂಖ್ಯೆಯ ವಿವರಗಳನ್ನು ನೀಡಿದರು.

“ಭಾರತವು ಒಂದು ಅದ್ಭುತವಾದ ಪತ್ರಿಕಾ ಮತ್ತು ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ, ಇದಕ್ಕೆ ವಿದೇಶಿ ಸಂಸ್ಥೆಗಳಿಂದ ದೃಢೀಕರಣದ ಅಗತ್ಯವಿಲ್ಲ. ಭಾರತವು ಸುಮಾರು 1,54,000 ಮುದ್ರಿತ ಪ್ರಕಟಣೆಗಳು, 900 ಕ್ಕೂ ಹೆಚ್ಚು ಖಾಸಗಿ ಉಪಗ್ರಹ ಟಿವಿ ಚಾನೆಲ್‌ಗಳು ಮತ್ತು OTT ಪ್ಲಾಟ್‌ಫಾರ್ಮ್‌ಗಳು, ಪತ್ರಿಕೆಗಳ ಇ-ರಿಪ್ಲಿಕಾ, ಡಿಜಿಟಲ್ ಪತ್ರಿಕೆಗಳು, ಸುದ್ದಿ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ಸುದ್ದಿ ಚಾನೆಲ್‌ಗಳು ಸೇರಿದಂತೆ ಡಿಜಿಟಲ್ ಮಾಧ್ಯಮದಲ್ಲಿ ಹಲವಾರು ಪಬ್ಲಿಷರ್‌ಗಳನ್ನು ಹೊಂದಿದೆ. ಭಾರತವು ಆರ್ಟಿಕಲ್ 19 (1) (ಎ) ನಂತಹ ಸಾಂವಿಧಾನಿಕ ಖಾತರಿಗಳನ್ನು ಹೊಂದಿದೆ, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ, ”ಎಂದು ಮುರುಗನ್ ಝಾ ಅವರ ಪ್ರಶ್ನೆಗೆ ಉತ್ತರಿಸಿದರು.

ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲಾಗಿದೆ, ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) 1978 ರ ಪತ್ರಿಕಾ ಮಂಡಳಿ ಕಾಯ್ದೆಯಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸ್ವಾಯತ್ತ ಸಂಸ್ಥೆಯಾಗಿದ್ದು, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ನೇತೃತ್ವ ವಹಿಸುತ್ತಾರೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ, ಪತ್ರಕರ್ತರ ಮೇಲಿನ ದೈಹಿಕ ಹಲ್ಲೆ/ದಾಳಿ ಇತ್ಯಾದಿಗಳ ಕುರಿತು ಪತ್ರಿಕಾ ಸದಸ್ಯರು ಸಲ್ಲಿಸುವ ದೂರುಗಳ ಮೇಲೆ ತೀರ್ಪು ನೀಡುತ್ತಾರೆ.

“1979 ರ ಪತ್ರಿಕಾ ಮಂಡಳಿ (ವಿಚಾರಣೆಗಾಗಿ ಕಾರ್ಯವಿಧಾನ) ನಿಯಮಗಳ 13 ನೇ ನಿಯಮದ ಅಡಿಯಲ್ಲಿ, ಪತ್ರಿಕಾ ಸ್ವಾತಂತ್ರ್ಯ ಮತ್ತು ಅದರ ಉನ್ನತ ಗುಣಮಟ್ಟಗಳ ರಕ್ಷಣೆಗೆ ಸಂಬಂಧಿಸಿದ ತುರ್ತು ಸಮಸ್ಯೆಗಳ ಬಗ್ಗೆ ಪಿಸಿಐ ಸ್ವಯಂಪ್ರೇರಿತವಾಗಿ ಗಮನ ಹರಿಸುವ ಹಕ್ಕನ್ನು ಹೊಂದಿದೆ” ಎಂದು ಸರ್ಕಾರದ ಪ್ರತಿಕ್ರಿಯೆ ತಿಳಿಸಿದೆ.

ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯ್ದೆ, 1995 ಮತ್ತು ಐಟಿ ನಿಯಮಗಳು, 2021 ರ ಅಡಿಯಲ್ಲಿ ಸ್ವಯಂ-ನಿಯಂತ್ರಕ ಕಾರ್ಯವಿಧಾನದ ಮೂಲಕ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಖಾತ್ರಿಪಡಿಸಲಾಗಿದೆ ಎಂದು ಪ್ರತಿಕ್ರಿಯೆಯಲ್ಲಿ ಸೇರಿಸಲಾಗಿದೆ. ದೂರುಗಳನ್ನು ಪರಿಹರಿಸಲು ಮೂರು ಹಂತದ ರಚನೆ ಜಾರಿಯಲ್ಲಿದೆ, ಮೊದಲ ಹಂತವು ಪ್ರಸಾರಕ/ಪ್ರಕಾಶಕರ ಮಟ್ಟದಲ್ಲಿ ಮತ್ತು ನಂತರ ಎರಡನೇ ಹಂತದಲ್ಲಿ ಸ್ವಯಂ-ನಿಯಂತ್ರಕ ಸಂಸ್ಥೆಗಳು ಇರುತ್ತವೆ ಎಂದು ಅದು ಹೇಳಿದೆ.

“ನಾನು ಇತ್ತೀಚೆಗೆ ರಾಜ್ಯಸಭೆಯಲ್ಲಿ ಈ ಪ್ರಶ್ನೆಯನ್ನು ಕೇಳಿದ್ದೆ ಮತ್ತು ‘ಪ್ರತಿಕ್ರಿಯೆ’ಯನ್ನು ಇಲ್ಲಿ ಕಾಣಬಹುದು. ನನ್ನ ಸರ್ಕಾರ ಏನು ಹೇಳುತ್ತದೆ ಮತ್ತು ಅದು ಏನು ಮಾಡುತ್ತದೆ ಎಂಬುದರ ನಡುವೆ ಮೈಲಿಗಟ್ಟಲೆ ಅಂತರವಿದೆ,” ಎಂದು ಆರ್‌ಜೆಡಿ ಸಂಸದ ಝಾ ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದರು .

ಕೊಟ್ಟಿಯೂರು ಜಾತ್ರೆ: ಭಕ್ತಿಯಲ್ಲಿ ಹೊಸ ಟ್ರೆಂಡ್!
ಜನರು ಹೊಸ ಹೊಸ ದೇವರನ್ನು, ಭಕ್ತಿಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂದು ಜನಪ್ರಿಯವಾಗಿರುವ ದೇವರು ನಾಳೆ ಯಾರಿಗೂ ಬೇಡವಾಗಬಹುದು. ಈಗ ಜನಜಂಗುಳಿಯಿಂದ ತುಂಬಿರುವ ದೇವಾಲಯದಲ್ಲಿ ನಾಳೆ ಅರ್ಚಕ ಮಾತ್ರ ಇರುವ ಕಾಲ ಬರಬಹುದು

2025 ರಲ್ಲಿ ಟ್ರೆಂಡಿಂಗ್‌ಗೆ ಬಂದಿರುವ ದೇವಸ್ಥಾನ ಮತ್ತು ಜಾತ್ರೆ ಎಂದರೆ ಉತ್ತರ ಮಲಬಾರು (ಕಣ್ಣೂರಿನ) ಕೊಟ್ಟಿಯೂರು ಶಿವ ದೇವಾಲಯ ಮತ್ತು ಅಲ್ಲಿ ನಡೆಯುವ ಕೊಟ್ಟಿಯೂರು ವೈಶಾಖ ಮಹೋತ್ಸವ. ನಾನು ಸುಮಾರು ಎರಡು ಮೂರು ವರ್ಷಗಳಿಂದ ಈ ದೇವಾಲಯ ಮತ್ತು ಜಾತ್ರೆಯ ವೀಡಿಯೋಗಳನ್ನು ನೋಡುತ್ತಾ ಬಂದಿದ್ದೇನೆ. ಈ ಬಗ್ಗೆ ಆ ಊರಿನಲ್ಲಿರುವ ನನ್ನ ಸ್ನೇಹಿತನ ಜೊತೆಗೆ ಮಾತನಾಡಿದ್ದೇನೆ.

ಈ ವರ್ಷ  ಆ ದೇವಾಲಯ ದಡೀರನೇ ಖ್ಯಾತಿಯನ್ನು ಪಡೆಯಿತು. ವರ್ಷಕ್ಕೊಮ್ಮೆ ಅಕ್ಕರೆ ಕೊಟ್ಟಿಯೂರು (ನದಿಯ ಆ ಭಾಗದ ಕೊಟ್ಟಿಯೂರು) ಎಂಬ ಕಾಡಿನಲ್ಲಿ ನಡೆಯುವ ವೈಶಾಖ ಮಹೋತ್ಸವಕ್ಕೆ ಈ ವರ್ಷ ಸಾವಿರ ಸಾವಿರ ಜನರು ಕರ್ನಾಟಕ, ತಮಿಳುನಾಡಿನಿಂದೆಲ್ಲಾ ದಂಡು ದಂಡಾಗಿ ಹೋಗುತ್ತಿದ್ದಾರೆ.

ನನ್ನ ಅಣ್ಣನೊಬ್ಬ ತಾನು ಆ ಜಾತ್ರೆಗೆ ಹೋಗುವುದಾಗಿ, ನನ್ನನ್ನು ಬರುವಂತೆ ಕೇಳಿಕೊಂಡ. ಆತನಿಗೆ ಈ ಜಾತ್ರೆಯ ಬಗ್ಗೆ ಫೇಸ್‌ಬುಕ್‌ನಿಂದ ಗೊತ್ತಾಗಿದ್ದು. ಫೇಸ್‌ಬುಕ್‌, ಇನ್ಸ್ಟಾಗ್ರಾಮಿನಲ್ಲಿ ಈ ಜಾತ್ರೆಯ ವೀಡಿಯೋಗಳು ಹರಿದಾಡುತ್ತಿವೆ. ಹಿಂದೊಮ್ಮೆ ಶಬರಿಮಲೆಗೆ ಹೋದಂತೆ, ಮಲಯಾಳಿಗಳಲ್ಲದವರೂ ಈ ಜಾತ್ರೆಗೆ ಗಾಡಿ ಮಾಡಿಕೊಂಡು ಹೋಗುತ್ತಾರೆ. ಅಲ್ಲಿ ಹೋಗಿ ಫೋಟೋ ತೆಗಿಸಿಕೊಂಡು, ವೀಡಿಯೋ ಮಾಡಿಕೊಂಡು ಅದಕ್ಕೆ ಪ್ರಚಾರವನ್ನು ನೀಡುತ್ತಿದ್ದಾರೆ. ಯೂಟ್ಯೂಬ್‌ ವ್ಲಾಗರ್‌ಗಳು ಕ್ಯಾಮರಾ ಹಿಡಿದುಕೊಂಡು, ಕೇಸರಿ ತೊಟ್ಟು ಜಾತ್ರೆಗೆ ಹೋಗಿ ‘ಕಂಟೆಂಟ್‌ʼ ಮಾಡುತ್ತಿದ್ದಾರೆ.

ಕೊಟ್ಟಿಯೂರಿನಲ್ಲಿರುವ ನನ್ನ ಸ್ನೇಹಿತ ಅನೀಶ್‌ ಕೊಟ್ಟಿಯೂರು ಹೇಳುವಂತೆ, “ಕೊಟ್ಟಿಯೂರಿನ ತುಂಬಾ KL ಗಾಡಿಗಳಿಗಿಂತ KA ಗಾಡಿಗಳೇ ತುಂಬಿ ಹೋಗಿವೆ.”

ಕಣ್ಣೂರಿನ ಕೊಟ್ಟಿಯೂರು ಗ್ರಾಮದಲ್ಲಿ ಎರಡು ದೇವಾಲಯಗಳಿಗೆ, ‘ಬಾವಲಿ ನದಿ’ಯ ಈ ಕಡೆಗೆ ಇರುವ ‘ಇಕ್ಕರೆ ಕೊಟ್ಟಿಯೂರಿನ’ ಶಿವನ್‌ ದೇವಾಲಯ ಮತ್ತು ಅ ಕಡೆ ಇರುವ ‘ಅಕ್ಕರೆ ಕೊಟ್ಟಿಯೂರುʼ ಎಂಬ ವರ್ಷಕ್ಕೊಮ್ಮೆ ವೈಶಾಖ ಮಾಸದಲ್ಲಿ ಮಾತ್ರ ಜನರ ಪ್ರವೇಶಕ್ಕೆ ಅವಕಾಶ ಇರುವ ಶಿವನ ಬನ, ಕಾಡು.

ಕೊಟ್ಟಿಯೂರು ವೈಶಾಖ ಮಹೋತ್ಸವ

ವೈಶಾಖ ಮಹೋತ್ಸಹ ಎನ್ನುವ ಬ್ರಾಹ್ಮಣರು ಅಕ್ಕರೆ ಕೊಟ್ಟಿಯೂರಿನಲ್ಲಿ ನಡೆಸುವ ಯಾಗ ಯಜ್ಞಾದಿಗಳನ್ನು ನಡೆಸುವ ಜಾತ್ರೆಗೆ ದಕ್ಷ ಭ್ರಹ್ಮನ ಮಗಳು, ಶಿವನ ಹೆಂಡತಿ ದಾಕ್ಷಾಯಿಣಿ ಯಾಗದ ಬೆಂಕಿಗೆ ಬೀಳುವ ಕತೆಯಾಗ ದಕ್ಷ ಯಜ್ಞದ ಕತೆಯೊಂದಿಗೆ ತಳುಕು ಹಾಕಿಕೊಂಡಿದೆ. ದಕ್ಷ ಯಜ್ಞ ನಡೆದದ್ದು ಇಲ್ಲಿಯೇ ಎಂದು ಇವರು ನಂಬುತ್ತಾರೆ. ಭಾರತದ ಅಲ್ಲಲ್ಲಿ ಈ ಕತೆಯನ್ನು ತಮ್ಮಲ್ಲೇ ನಡೆದದ್ದಾಗಿ ಹೇಳುತ್ತಾರೆ. ಉತ್ತರಾಖಂಡದ ಹರಿದ್ವಾರದ ಬಳಿ ಇರುವ ಕಂಕಾಳ್‌ನಲ್ಲಿ ದಕ್ಷ ಯಜ್ಞ ನಡೆದದ್ದು ಎಂಬುದು ತುಂಬಾ ಖ್ಯಾತವಾಗಿರುವ ನಂಬಿಕೆ. ಆದರೆ, ಸದ್ಯ ಕೊಟ್ಟಿಯೂರು ಟ್ರೆಂಡಿಂಗ್‌ನಲ್ಲಿ ಇರುವುದರಿಂದ ದಕ್ಷ ಯಜ್ಞ ನಡೆದದ್ದು ಕೊಟ್ಟಿಯೂರಿನಲ್ಲಿಯೇ ಎಂಬ ದೇವಾಲಯದ ಸ್ಥಳ ಪುರಾಣಗಳು ಹೇಳುತ್ತವೆ, ಅದನ್ನೇ ನಮ್ಮ ಯೂಟ್ಯೂಬರ್‌ಗಳೂ ಪ್ರಚಾರ ಮಾಡುತ್ತಾರೆ. ಸ್ಥಳ ಪುರಾಣಗಳು ಕಟ್ಟು ಕತೆಯಷ್ಟೇ, ಆ ಸ್ಥಳದ ಹೆಸರು, ಭೌಗೋಳಿಕತೆ, ಜನ ಸಮುದಾಯವನ್ನು, ಮೂಲ ಆರಾಧನಾ ಪದ್ದತಿಯನ್ನು ಜೋಡಿಸಿ ಹೊಸ ಕತೆಯನ್ನು ಬರೆದು, ಅದನ್ನು ಪುರಾಣದ ಜೊತೆಗೆ ಜೋಡಿಸುವುದು ಅದರಲ್ಲಿರುವ ವೈಶಿಷ್ಟ್ಯ. ಪಾಂಡವರು ವನವಾಸದಲ್ಲಿ ಎಲ್ಲಾ ಊರುಗಳಿಗೆ ಬಂದು ಶಿವಲಿಂಗ ಸ್ಥಾಪಿಸಿದಂತೆ!

ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಬಂದಿರುವ ಭಕ್ತರು

ಅನೀಶ್‌ ಒಂದು ಕತೆಯನ್ನು ಹೇಳಿದ. ಇದೇ ಕತೆಯನ್ನು ಕೊಟ್ಟಿಯೂರು ದೇವಾಲಯದ ಸ್ಥಳ ಪುರಾಣದಲ್ಲಿ ಕೂಡ ನೀಡಲಾಗಿದೆ: ಕುರಿಚ್ಯ ಎನ್ನುವ ಕಾಡಿನ ಜನಾಂಗದ ಬೇಟೆಗಾರರು ತಮ್ಮ ಬಾಣವನ್ನು ಹರಿತ ಮಾಡಲು ಕಲ್ಲೊಂದಕ್ಕೆ ಉಜ್ಜುವಾಗ, ಆ ಕಲ್ಲಿನಿಂದ ರಕ್ತ ಬರಲು ಆರಂಭವಾಯ್ತು! ಇದನ್ನು ಅವರು ಅಲ್ಲಿನ ಬ್ರಾಹ್ಮಣ ತರವಾಡು ಪಡಿಂಗಿಟ್ಟ ನಂಬೂತಿರಿ ಇಲ್ಲಂಗೆ ಬಂದು ಹೇಳುತ್ತಾರೆ. ಅವರು ಅದನ್ನು ಮನತನ ಗ್ರಾಮದ ನಾಯರ್‌ಗಳಿಗೆ ತಿಳಿಸಲು ಆ ಬೇಡರಿಗೆ ಹೇಳುತ್ತಾರೆ. ಹೀಗೆ ಅವರು ಸ್ವಯಂಭೂ ಲಿಂಗವನ್ನು ಪತ್ತೆ ಮಾಡುತ್ತಾರೆ.

ಇದು ಸ್ಥಳ ಪುರಾಣಗಳಲ್ಲಿ ಕಾಣುವ ಸಾಮಾನ್ಯವಾದ ಕತೆ. ಇದೇ ರೀತಿಯ ಕತೆಯನ್ನು ಅನೇಕ ದೇವಾಲಯಗಳಲ್ಲಿ ನೋಡಬಹುದು. ಮದರು ಎಂಬ ದಲಿತ ಮಹಿಳೆ ಕೆಲಸ ಮಾಡುವಾಗ, ಆಕೆಯ ಕತ್ತಿಯು ಕಲ್ಲೊಂದಕ್ಕೆ ತಾಗಿ, ಅದರಿಂದ ರಕ್ತ ಬಂತು. ಆ ಮದುರುವಿನಿಂದ ಪತ್ತೆಯಾದ ಲಿಂಗವೇ ಮದೂರು ಮದನಂತೇಶ್ವರ! ದಲಿತರಿಗೆ ಶಿವಲಿಂಗ ಸಿಗುವ ಐತಿಹ್ಯವೆಂದರೆ, ಮೂಲದಲ್ಲಿದ್ದ ಸಮುದಾಯಗಳ ಆರಾಧನಾ ಕ್ಷೇತ್ರಗಳನ್ನೇ ವೈದಿಕ ಶಿವಸ್ಥಾನಗಳಾಗಿ ಪರಿವರ್ತನೆಗೊಂಡ ಕತೆ. ಇಲ್ಲವೇ, ಬ್ರಾಹ್ಮಣೇತರ ಪೂಜಾರಿಗಳು ಆರಾಧಿಸಿಕೊಂಡು ಬರುತ್ತಿದ್ದ ದೇವಾಲಯಗಳು ವೈದಿಕ ಆರಾಧನೆಗೆ ಒಳಪಟ್ಟ ಸಂಗತಿಯನ್ನು ಈ ಕತೆಗಳು ಹೇಳುತ್ತವೆ.

ಕೊಟ್ಟಿಯೂರಿನ ಬಗ್ಗೆ ಬ್ರಿಟೀಷ್‌ ಮಾನವಶಾಸ್ತ್ರಜ್ಞ ಮತ್ತು ಪುರಾತತ್ವಶಾಸ್ತ್ರಜ್ಷ ಫ್ರೆಡ್ರಿಕ್ ಫಾಸೆಟ್ ಬರೆದಿರುವ “ದಿ ನಾಯರ್ಸ್‌ ಆಫ್ ಮಲಬಾರ್”‌ ಪುಸ್ತಕದಲ್ಲಿ ಕೆಲವು ಆಸಕ್ತಿಕರ ಸಂಗತಿಗಳು ದಾಖಲಾಗಿವೆ.

“ನಿಜವಾದ ಮಲಯಾಳಿ ಜಾತ್ರೆಯೆಂದರೆ ಉತ್ತರ ಮಲಬಾರಿನ ಕೊಟ್ಟಿಯೋರ್‌ನಲ್ಲಿ ನಡೆಯುವ ಜಾತ್ರೆ. ಅದು 3,000 ರಿಂದ 5,000 ಅಡಿ ಎತ್ತರದ ವೈನಾಡ್ ಬೆಟ್ಟಗಳ ತಪ್ಪಲಿನಲ್ಲಿರುವ ಕಾಡಿನಲ್ಲಿ ನಡೆಯುತ್ತದೆ. ಇದನ್ನು ಜುಲೈನಲ್ಲಿ ಮಾನ್ಸೂನ್ ಮಳೆ ಉತ್ತುಂಗದಲ್ಲಿದ್ದಾಗ ನಡೆಸಲಾಗುತ್ತದೆ. ಜುಲೈನಲ್ಲಿ ಕೊಟ್ಟಿಯೋರ್‌ನಲ್ಲಿ ಸರಾಸರಿ ಮಳೆ ಕನಿಷ್ಠ 60 ಇಂಚು ಇರಬಹುದು, ಆದ್ದರಿಂದ ಭಕ್ತರು ಇಲ್ಲಿ ಒಳ್ಳೆಯ ಮಳೆಯನ್ನು ನೋಡುತ್ತಾರೆ. ಇದು ಕೊಟ್ಟಿಯೋರ್‌ನಲ್ಲಿ ಪರಸ್ಪರ ಬರೆಯದ ಮೇಲು ಮತ್ತು ಕೀಳು ಜಾತಿಗಳ ಜಾತ್ರೆ. ಇಲ್ಲಿಗೆ ನಾಯರ್‌ಗಳು ಮೊದಲು ಹೋಗುತ್ತಾರೆ, ಕೆಲವು ದಿನಗಳ ನಂತರ ತೀಯಾಗಳು ಹೋಗುತ್ತಾರೆ, ಹೀಗೆ ಮುಂದುವರಿಯುತ್ತದೆ. ಇದರ ಒಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಇದಕ್ಕೆ ಹೋಗುವ ಭಕ್ತರು ಗದ್ದಲ ಎಬ್ಬಿಸಿಕೊಂಡು ಹೋಗುತ್ತಾರೆ. ದಾರಿಯಲ್ಲಿ ಸಿಕ್ಕವರನ್ನು ಪರಸ್ಪರ ಅತ್ಯಂತ ಕೆಟ್ಟ ಮತ್ತು ಕೊಳಕು ಪದಗಳಲ್ಲಿ ನಿಂದಿಸುತ್ತಾರೆ. ಅದನ್ನು ತಮ್ಮ ಹಕ್ಕು ಎಂದು ಭಾವಿಸುತ್ತಾರೆ. ಬಹುಶಃ ಕೆಲವು ದಿನಗಳ ವರೆಗೆ ನಡೆಯುವ ಈ ಮೆರವಣಿಗೆಯಲ್ಲಿ, ಜನರು ಅತಿಯಾದ ಉತ್ಸಾಹದಿಂದ ಹೃದಯಕ್ಕೆ ತೃಪ್ತಿಯಾಗುವಷ್ಟು ನಿಂದಿಸುತ್ತಾರೆ. ಮಾತ್ರವಲ್ಲದೆ, ರಸ್ತೆಯ ಉದ್ದಕ್ಕೂ ಸಿಗುವ ವ್ಯಕ್ತಿ ಮತ್ತು ವಸ್ತುಗಳನ್ನು ಹಿಂಸಿಸುತ್ತಾರೆ. ಅಲ್ಲಿಂದ ಹಿಂತಿರುಗುವಾಗ ಶಾಂತವಾಗಿ ಬರುತ್ತಾರೆ.”

ಭಕ್ತರು ಈ ಪರಿಯಾಗಿ ಭಾವಾವೇಶದಿಂದ, ಹಿಂಸಾತ್ಮಕವಾಗಿ ಜಾತ್ರೆಗೆ ಹೋಗುವುದನ್ನು, ಅವರು ಬಳಸುವ ಭಾಷೆಯನ್ನು ಅರ್ಥ ಮಾಡಿಕೊಳ್ಳಲು  ಎಫ್ ಫಾಸೆಟ್‌ಗೆ ಆಗುವುದಿಲ್ಲ. ಆತ ಕೊಟ್ಟಿಯೂರಿನಲ್ಲಿ ದೇವರನ್ನು ನೋಡಲು ಬರುವ ಭಕ್ತರು ದೇವರನ್ನೂ, ತಮ್ಮೊಂದಿಗೆ ಇರುವ ಇತರ ಭಕ್ತರನ್ನೂ ಕೆಟ್ಟದಾಗಿ ನಿಂದಿಸುವುದನ್ನು ನೋಡಿ, ಇಂತಹದ್ದೇ ಆಚರಣೆ ತಿರುಪತಿಯ ಗಂಗಮ್ಮ ಉತ್ಸವದಲ್ಲಿಯೂ ನೋಡಿರುವುದಾಗಿ ಹೇಳುತ್ತಾನೆ.

ಪ್ರತಿ ವರ್ಷ ಮೇ ತಿಂಗಳ ಮೊದಲ ಮತ್ತು ಎರಡನೇ ವಾರಗಳ ನಡುವೆ ಬರುವ ತಿರುಪತಿಯ ಗಂಗಮ್ಮ ಜಾತ್ರೆಯಲ್ಲಿಯೂ ಈ ತೆರನಾದ ಭಕ್ತಿಯನ್ನು ಜಾತ್ರೆಗೆ ಬರುವ ಭಕ್ತರು ತೋರಿಸುತ್ತಾರೆ. ಗಂಗಮ್ಮನನ್ನು ತಿರುಪತಿ ಬಾಲಾಜಿ (ವೆಂಕಟೇಶ್ವರನ) ಸಹೋದರಿ ಎಂದು ನಂಬಲಾಗುತ್ತದೆ. ಈ ಜಾತ್ರೆಯಲ್ಲಿ ದೇವಿಯನ್ನು ದೇವಿಯನ್ನು ಅಶ್ಲೀಲವೆಂದು ಪರಿಗಣಿಸಲಾಗುವ ಭಾಷೆಯಲ್ಲಿ ನಿಂದಿಸಲಾಗುತ್ತದೆ. “ಗಂಗಮ್ಮ! ನಿನ್ನದು ಬುಟ್ಟಿಯಷ್ಟು ದೊಡ್ಡದಾದ… (ಯೋನಿ)” ಎಂಬಂತ ನಿಂದಾಸ್ತುತಿಯನ್ನು ಭಕ್ತರು ಮಾಡುತ್ತಾರೆ. ಮೆರವಣಿಗೆ ದೇವಾಲಯಕ್ಕೆ ಬರುತ್ತಿದ್ದಂತೆ ಒಬ್ಬರನ್ನೊಬ್ಬರು ಮೀರಿಸಬೇಕು ಎಂಬಂತೆ ನಿಂದಾಸ್ತುತಿ ಮಾಡುತ್ತಾರೆ.

ಇದನ್ನು ಅವರು ಹರಕೆಯಂತೆ ಮಾಡುತ್ತಾರೆ. ಕುಣಿಯುತ್ತಾ, ಲೈಂಗಿಕ ಸನ್ನೆಗಳನ್ನು ಮಾಡುತ್ತಾ, ಆವೇಷಗೊಳ್ಳುತ್ತಾ ತಮ್ಮ ಹರಕೆಯನ್ನು ತೀರಿಸುತ್ತಾರೆ. ಕೊನೆಗೆ ಪ್ರಜ್ಞೆಯನ್ನು ಕಳೆದುಕೊಂಡು ಬೀಳುತ್ತಾರೆ. ತನ್ನ ಮಗನ ಅನಾರೋಗ್ಯಕ್ಕೆ ತಾಯಿಯೂ ಇಂತಹ ಹರಕೆಯನ್ನು ಕಟ್ಟಿಕೊಳ್ಳುತ್ತಾಳೆ.

ನಾನು ನೋಡಿದ ಇಂತಹ ಒಂದು ಜಾತ್ರೆಯೆಂದರೆ, ಕೋಡಂಗಲ್ಲೂರಿನ ಭಗವತಿಯ ಭರಣಿ ಜಾತ್ರೆ. ಇದರಲ್ಲಿ ಸಾವಿರಾರು ಮಂದಿ ಮಹಿಳೆಯರು, ಪುರುಷರು, ಮಂಗಳಮುಖಿಯರು ಗುಂಪು ಗುಂಪಾಗಿ ಕೋಲಾಟವಾಡುತ್ತಾ ಭದ್ರಕಾಳಿಯನ್ನು ಲೈಂಗಿಕ ಪರಿಭಾಷೆಗಳಿಂದ ನಿಂದಿಸುತ್ತಾರೆ. ಇದಕ್ಕೆ ಭರಣಿ ಪಾಟ್ಟ್‌ ಎಂದು ಕರೆಯುತ್ತಾರೆ. ಇದಕ್ಕಾಗಿ ಅವರು ಹಾಡುಗಳನ್ನು ಕಟ್ಟುತ್ತಾರೆ. “ಕೋಡಂಗಲ್ಲೂರಮ್ಮನಿಗೆ……ಮಾಡಬೇಕೆಂದರೆ…..ಧ್ವಜಮರದಂತ…..” ಇಂತಹ ಹಾಡುಗಳನ್ನು ಕಟ್ಟಿ ಹಾಡುತ್ತಾರೆ. ರಸ್ತೆಯಲ್ಲಿ ಕಾವಲು ಕಾಯುವ ಪೋಲೀಸನ್ನೂ ಬಿಡುವುದಿಲ್ಲ. ಅನೇಕ ಬೆಳಚ್ಚಪಾಡ ಗಂಡಸರು, ಹೆಂಗಸರು ಕೈಯಲ್ಲಿ ಗಗ್ಗರ (ಚಿಲಂಬು) ಮತ್ತು ಕಡ್ಸಲೆ (ಕತ್ತಿ) ಹಿಡಿದು ರಕ್ತಸಿಕ್ತವಾಗಿ ಆವೇಷಗೊಂಡು ಕೋಡಂಗಲ್ಲೂರು ಕ್ಷೇತ್ರದ ಸುತ್ತ ಓಡುತ್ತಾರೆ.

ಕೋಡಂಗಲ್ಲೂರು ಭರಣಿ ಜಾತ್ರೆ

ಈಗ ಸದ್ಯ ಟ್ರೆಂಡಿಂಗ್‌ನಲ್ಲಿ ಇರುವ ಕೊಟ್ಟಿಯೂರು ವೈಶಾಖ ಜಾತ್ರೆಯಲ್ಲಿಯೂ ಇಂತಹ ಆಚರಣೆಗಳಿದ್ದವು ಎಂದು ಫಾಸೆಟ್‌ ದಾಖಲಿಸಿದ್ದಾನೆ. 1894 ರಲ್ಲಿ ಫ್ರೆಡ್ರಿಕ್ ಫಾಸೆಟ್ ಕಂಡದ್ದೇನು ಎನ್ನುವುದನ್ನು ನೋಡೋಣ. ಅಲ್ಲಿ ಚೌಕಾಕಾರದ ಹುಲ್ಲಿನ ಕಟ್ಟಡ, ಮಧ್ಯದಲ್ಲಿ ದೇವಾಲಯ. ಜನರು ದೇವರನ್ನು ಪೆರುಮಾಳ್‌ (ಅಥವಾ ಪೆರುಮಾಳ್‌ ಈಶ್ವರ) ಎಂದು ಕರೆಯುತ್ತಾರೆ. (ಇದು ಇಕ್ಕರೆ ಕೊಟ್ಟಿಯೂರು ಶಿವ ದೇವಾಲಯ) ಆದರೆ ಅದರ ಒಳಗೆ ಏನಿದೆ ಎನ್ನುವುದನ್ನು ನೋಡಲು ಫಾಸೆಟ್‌ಗೆ ಅನುಮತಿ ಕೊಡಲಿಲ್ಲ. ಅವನು ಅಲ್ಲಿನ ಕೆಲವು ನಂಬೂತಿರಿ ಪುರೋಹಿತರ ಜೊತೆಗೆ ಮಾತಿಗಿಳಿದ. ಅವರು ಆ ಹಬ್ಬದ ದಿನಗಳಲ್ಲಿ ಆ ಕಡೆಯ ಕಾಡಿನಲ್ಲಿ ಒಂಟಿಯಾಗಿರಬೇಕು ಎಂದು ಹೇಳಿದರು. ಅವರು ನೀಡಿದ ಉಪಹಾರ, ಬೆಣ್ಣೆ-ಹಾಲು ಮತ್ತು ಸಕ್ಕರೆಯನ್ನು ಕೃತಜ್ಞತೆಯಿಂದ ಸ್ವೀಕರಿಸಿದ. ನಂಬೂತಿರಿಗಳು, ಬಹಳ ಅತ್ಯಾಧುನಿಕ ವ್ಯಕ್ತಿಗಳು ಮತ್ತು ಮಡಿ ಮೈಲಿಗೆ ಪಾಲಿಸುತ್ತಿದ್ದರು. ಹಾಲು ಮತ್ತು ಸಕ್ಕರೆಯನ್ನು ನೆಲದ ಮೇಲೆ ಇರಿಸಿ ಫಾಸೆಟ್‌ನನ್ನು ಆಹ್ವಾನಿಸಿದರು. ಫಾಸೆಟ್‌ನ ನಾಯಿಗೆ ತಿನ್ನಲು ಅವರು ದೊಡ್ಡ ತೆಂಗಿನಕಾಯಿಯ ತುಂಡನ್ನು ಎಸೆದರು.

ಫಾಸೆಟ್‌ ಅಲ್ಲಿಂದ ಅಕ್ಕರೆ ಕೊಟ್ಟಿಯೂರಿನ ಕಾಡಿನ ಕ್ಷೇತ್ರಕ್ಕೆ ಹೋಗುತ್ತಾನೆ. ಜಾತ್ರೆಯ ಸಮಯದ ಅಲ್ಲದ ಕಾರಣ, ಉಳಿದ ದಿನಗಳಲ್ಲಿ ಅಲ್ಲಿಗೆ ಹೋಗಲು ಜನ ಹೆದರುತ್ತಾರೆ. ನನ್ನ ಸ್ನೇಹಿತ ಅನೀಶ್‌ ಹೇಳುವಂತೆ, ಅವನ ಅಜ್ಜನಿಗೆ, ಅಪ್ಪನಿಗೆ ಬೇಟೆಗೆ ಕಾಡಿಗೆ ಹೋಗುವ ಸಮಯದಲ್ಲಿ ಆ ಕಾಡಿನ ಪರಿಸರದಲ್ಲಿ ಏನೇನೋ ಕಂಡುಬಂದಿತ್ತು.

ಫಾಸೆಟ್‌ ಜೊತೆಗೆ ನಾಯರ್‌ ಮತ್ತು ಕುರಿಚ್ಚನ್‌ ಇದ್ದರು. ಅವರಿಗೆ ನದಿಯನ್ನು ದಾಟಿ ಆ ಕಾಡಿಗೆ ಹೋಗಲು ಭಯವಿತ್ತು. ಅಲ್ಲಿಗೆ ಉಳಿದ ದಿನಗಳಲ್ಲಿ ಹೋಗುವವರು ಸಾಯುತ್ತಾರೆ ಎಂಬ ನಂಬಿಕೆ ಇತ್ತು. “ನಾವು ಆ ಪವಿತ್ರ ಸ್ಥಳವನ್ನು ತಲುಪಲು ಮೊಣಕಾಲು ಮಳುಗುವಷ್ಟು ನೀರು ಇರುವ, ಸುಮಾರು 30 ಗಜ ಅಗಲದ ಸಣ್ಣ ನದಿಯ ಮೂಲಕ ನಡೆದೆವು.  ನಮ್ಮೊಂದಿಗೆ ಇದ್ದ ನಾಯರ್‌ ಮತ್ತು ಕುರಿಚ್ಚನ್‌ ಮುಖದಲ್ಲಿ ಆತಂಕವಿತ್ತು. ಅವರು ನಮ್ಮೊಂದಿಗೆ ನದಿ ದಾಟಲು ಧೈರ್ಯ ಮಾಡಲಿಲ್ಲ,” ಎನ್ನುತ್ತಾನೆ ಫಾಸೆಟ್.‌

ಈ ಕಾಡಿಗೆ ಹೋಗುವ ತನ್ನ ಸಾಹಸವನ್ನು ವಿವರಿಸುತ್ತಾ “ಎವ್ರಿಡೈಸ್‌ನನ್ನು ಹುಡುಕಲು ಅಧೋಲೋಕಕ್ಕೆ ಹೋದ ಓರ್ಫಿಯಸ್, ನರಕದೊಳಗೆ ಪ್ರವೇಶಿಸಲು ಹೊರಟ ಡಾಂಟೆಯೂ” ಇಷ್ಟು ಭಯಾನಕ ಪ್ರಯಾಣವನ್ನು ಕೈಗೊಂಡಿರಲಿಲ್ಲ ಎಂದು ಹೇಳುತ್ತಾನೆ. ಪವಿತ್ರ ಸ್ಥಳವನ್ನು ತಲುಪಿದಾಗ, ಅದೊಂದು ಹುಲ್ಲು ಪ್ರದೇಶ. ಹಬ್ಬದ ಸಮಯದಲ್ಲಿ ಅದು ನೀರಿನಿಂದ ಮುಚ್ಚಿರುತ್ತದೆ. ಮಧ್ಯದಲ್ಲಿ 12 ಅಡಿ ವ್ಯಾಸದ ರಾಶಿ ಹಾಕಿದ ಕಲ್ಲುಗಳ ವೃತ್ತವಿದೆ. ಕಲ್ಲುಗಳ ರಾಶಿಯ ಮಧ್ಯದಲ್ಲಿ ಒಂದು ಒರಟಾದ ಲಿಂಗ.

ದೇವರ ಸಾನಿಧ್ಯ

ನಿಧಿಯನ್ನು ಹುಡುಕುವ ಯಾರೋ ಆ ಲಿಂಗವನ್ನು ಮುರಿದಿದ್ದರು ಎಂದು ಫಾಸೆಟ್‌ ಹೇಳುತ್ತಾನೆ. ಲಿಂಗದ ವೃತ್ತದಿಂದ ಪೂರ್ವ ದಿಕ್ಕಿನಲ್ಲಿ ಒಂದು ಉದ್ದವಾದ ಶೆಡ್ ಇದೆ, ಅದರ ಮಧ್ಯದಲ್ಲಿ ಇಟ್ಟಿಗೆಯ ಉದ್ದವಾದ ಎತ್ತರದ ವೇದಿಕೆ ಇದೆ. ಇದನ್ನು ಅಡುಗೆ ಮಾಡುವ ಸ್ಥಳವಾಗಿ ಬಳಸಲಾಗುತ್ತಿತ್ತು. ಹಬ್ಬದ ಸಮಯದಲ್ಲಿ ಜನರು ತಂಗಿದ್ದ ಹುಲ್ಲಿನ ಶೆಡ್‌ಗಳು ಸಹ ಇದ್ದವು. ಹುಲ್ಲು ಮತ್ತು ಕಳೆ ಗಿಡಗಳು ಎತ್ತರವಾಗಿ ಬೆಳೆದಿದ್ದವು. ಶೆಡ್‌ಗಳು ಶಿಥಿಲಗೊಂಡಿದ್ದವು, ತುಂಬಾ ವರ್ಷಗಳಿಂದ ಬಳಸದಿರುವಂತೆ ಕಾಣುತ್ತಿದ್ದವು.

ಜಾತ್ರೆಗೆ ಹೋಗುವ ಎಲ್ಲರೂ ತಮ್ಮೊಂದಿಗೆ ಕಾಣಿಗೆಯನ್ನು ತೆಗೆದುಕೊಂಡು ಹೋಗುತ್ತಾರೆ. ತೀಯಾಗಳು ಎಳೆನೀರು ತೆಗೆದುಕೊಂಡು ಹೋಗುತ್ತಾರೆ. “ನಾಯರ್‌ಗಳು ಏನು ತೆಗೆದುಕೊಂಡು ಹೋಗುತ್ತಾರೆ,” ಎಂಬುದು ತಿಳಿದಿಲ್ಲ ಎಂದು ಫಾಸೆಟ್‌ ಹೇಳುತ್ತಾನೆ. ಜಾತ್ರೆಗೆ ಹೋದವರು ತಾಳೆ ಮರದ ಮಡಲನ್ನು ಸೀಳಿ ಮಾಡಿದ ಚವಳವನ್ನು ತೆಗೆದುಕೊಂಡು ಹೋಗುತ್ತಾರೆ. (ಈಗ ಬಿದಿರನ್ನು ಸೀಳಿ ಮಾಡಿದ ಚವಳವನ್ನು ತೆಗೆದುಕೊಂಡು ಹೋಗುತ್ತಾರೆ, ಅವನ್ನು ಕೊಟ್ಟಿಯೂರಿನಲ್ಲಿ ಮಾರಾಟವೂ ಮಾಡುತ್ತಾರೆ)

ಮಾರಾಟಕ್ಕೆ ಇಟ್ಟಿರುವ ಚವಳ

ಸಾಮಾನ್ಯವಾಗಿ ವೃತ್ತಾಕಾರವಾಗಿ ಕಲ್ಲುಗಳನ್ನು ಜೋಡಿಸಿ, ಅದರ ಒಳಗೆ ಒಂದು ಕಲ್ಲನ್ನು ಇಡುವುದು, ಅಥವಾ ಕಲ್ಲಿನ ಗೂಡಿನಂತಹ ರಚನೆ ಇಡುವುದು ಪ್ರಾಚೀನ ಸಮಾಧಿಗಳ ಲಕ್ಷಣ. ಕ್ರಿಸ್ತಪೂರ್ವ 800 ರ ಹಿಂದಿನ ವಿಶಿಷ್ಟ ಮೆಗಾಲಿಥಿಕ್ ಸಮಾಧಿಯೊಂದು ದಕ್ಷಿಣ ಕನ್ನಡದ ಕಡಬ ತಾಲೂಕಿನ ರಾಮಕುಂಜದಲ್ಲಿ ಪತ್ತೆಯಾಗಿತ್ತು. ಇಂತಹ ಸಮಾಧಿಗಳನ್ನು ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲೂ ನೋಡಿದ್ದೇನೆ.

ಕುಮಾರ ಪರ್ವತದಲ್ಲಿರುವ ಸಮಾಧಿಗಳಲ್ಲಿ ಒಂದು

ಇಂತಹ ಸಮಾಧಿಗಳನ್ನು ಜನರು ಆರಾಧಿಸುತ್ತಾ ಬಂದಿದ್ದಾರೆ. ಕಾಲಾಂತರದಲ್ಲಿ ಇಂತಹ ಸಮಾಧಿಗಳ ಮೇಲೆಯೇ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಬೌದ್ಧ ಸ್ತೂಪಗಳ ಉತ್ಖನನಗಳನ್ನು ಮಾಡುವಾಗ, ಮಣ್ಣಿನ ಅಡಿಯಲ್ಲಿ ಪ್ರಾಚೀನ ಸಮಾಧಿಗಳು ಕಂಡುಬಂದಿರುವುದನ್ನು ನಾವು ನೋಡಿದ್ದೇವೆ. ಕೊಟ್ಟಿಯೂರಿನ ಆರಾಧನೆಯೂ ಇಂತಹ ಕ್ಷೇತ್ರಗಳಲ್ಲೇ ನಡೆಯುತ್ತದೆ. ಬುಡಕಟ್ಟು ಜನರು ತಮ್ಮ ಹಿರಿಯರ ಸಮಾಧಿಗಳಲ್ಲಿ ನಡೆಸುತ್ತಿದ್ದ ಆರಾಧನೆಗಳು ವೈದಿಕ ಶೈವ ದೇವಾಲಯವಾಗಿ ಬದಲಾಗಿರಬಹುದು.

ಇದಿಷ್ಟು, ಕೊಟ್ಟಿಯೂರಿನ ಬಗ್ಗೆ.

ಕೊಟ್ಟಿಯೂರಿಗೆ ಸದ್ಯ ಜನರು ಶಬರಿಮಲೆಗೆ ಹೋದಂತೆ ಯಾತ್ರೆ ಹೋಗಲು ಆರಂಭಿಸಿದ್ದಾರೆ. 1940 ರ ದಶಕದಲ್ಲಿ, ಶಬರಿಮಲೆ ಅಯ್ಯಪ್ಪ ದೇವಾಲಯವು ಕೇರಳದ ಹೊರಗಿನ ಪ್ರದೇಶಗಳಲ್ಲಿ ವ್ಯಾಪಕವಾದ ಪ್ರಚಾರದಲ್ಲಿರಲಿಲ್ಲ. 1980 ರ ದಶಕದಲ್ಲಿ ರಸ್ತೆ ಮತ್ತು ರೈಲು ಸಂಪರ್ಕ ಬಂದ ನಂತರ, ದೇವಾಲಯವು ಭಾರಿ ಜನಪ್ರಿಯತೆಯನ್ನು ಗಳಿಸಿತು. ತಮಿಳುನಾಡು ಮತ್ತು ಕರ್ನಾಟಕದ ಭಕ್ತರು ದಂಡು ದಂಡಾಗಿ ಬರಲು ಆರಂಭಿಸಿದರು. ಸಿನೇಮಾ ನಟರು, ಸಲಬ್ರೆಟಿಗಳು ಬರಲು ಆರಂಭಿಸಿದರು. ಇದಕ್ಕೆ ಮುಖ್ಯವಾದ ಕಾರಣ, 1975 ರ ಮಲಯಾಳಂ ಚಲನಚಿತ್ರ ಸ್ವಾಮಿ ಅಯ್ಯಪ್ಪನ್. ಈ ಚಲನಚಿತ್ರದ ಜನಪ್ರಿಯತೆಯ ನಂತರ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಅಯ್ಯಪ್ಪನ ಕತೆ ಹೇಳುವ ಸಿನೇಮಾಗಳು ಬಂದವು. ಟಿವಿ ಕಾರ್ಯಕ್ರಮಗಳು, ಭಕ್ತಿಗೀತೆಗಳು ಮತ್ತು ಭಜನೆಗಳ ಮೂಲಕ ಪ್ರಚಾರ ಪಡೆಯಿತು. ಶಬರಿ ಮಲೆಯ ಜ್ಯೋತಿಯ ಬಗ್ಗೆ ಅತಿಮಾನುಷ ಪರಿಕಲ್ಪನೆಗಳು ಹುಟ್ಟಿಕೊಂಡವು, ಸದ್ಯ ಇದು ಮನುಷ್ಯರ ಕೆಲಸ ಎಂಬುದು ಸಾಬೀತಾಗಿದೆ.

ಬಾಬಾ ಬುಡನ್‌ ಗಿರಿ – ದತ್ತ ಪೀಠದ ವಿವಾದದ ಸಮಯದಲ್ಲಿ, ಹಿಂದುತ್ವವಾದಿ ಸಂಘಟನೆಗಳು ಮತ್ತು ಕರ್ನಾಟಕ ಬಿಜೆಪಿ ಶಬರಿಮಲೆಯ ಭಕ್ತರು ವ್ರತ ಹಿಡಿಯುವಂತೆ ‘ದತ್ತ ಮಾಲೆʼ ಎಂಬ ಮಾಲೆ ಧರಿಸಿ, ಯಾತ್ರೆ ಹೋಗುವ ಹೊಸ ಸಂಸ್ಕೃತಿಯನ್ನು ತಂದರು. ಇದರ ಜನಪ್ರಿಯತೆ ಈಗ ಕಡಿಮೆಯಾಗುತ್ತಿದೆ.

ಸದ್ಯ ಕರ್ನಾಟಕದಲ್ಲಿ ಕೊರಗಜ್ಜ ಎಂಬ ತುಳುನಾಡಿನ ದೈವ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ಕೊರಗಜ್ಜನ ಹೆಸರಿನಲ್ಲಿ ಒಳ್ಳೆಯ ಸಂಪಾದನೆಯನ್ನು ಮಾಡುವ ಪ್ರವೃತ್ತಿಯೂ ಬೆಳೆದಿದ್ದು, ಇದಕ್ಕೆ ಅನೇಕ ದೈವಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕೊರಗಜ್ಜ ಎಂಬ ಖ್ಯಾತವಲ್ಲದ ದೈವವು ದಿಡೀರನೇ ಖ್ಯಾತಿಯನ್ನು ಪಡೆಯಿತು. ಬೆಂಗಳೂರು, ಮೈಸೂರಿನಲ್ಲಿ ಕೊರಗಜ್ಜನ ಗುಡಿಗಳು ಎದ್ದವು. ಬೆಂಗಳೂರಿನ ಆಟೋಗಳಲ್ಲಿ ಕೊರಗಜ್ಜನ ಸ್ಟಿಕ್ಕರ್‌ ಅಂಟಿಸಿ, ‘ಸ್ವಾಮಿ ಕೊರಗಜ್ಜʼ ಎಂದು ಬರೆದಿರುವುದನ್ನು ನೋಡಿದ್ದೇನೆ.

ಕಾಂತಾರ ಎಂಬ ಕನ್ನಡ ಸಿನೇಮಾದ ನಂತರ ಪಂಜುರ್ಲಿ ಮತ್ತು ಗುಳಿಗ ಎಂಬೆರಡು ತುಳುನಾಡಿನ ದೈವಗಳು ಇಡೀ ಭಾರತದಲ್ಲಿ ಪ್ರಚಾರಕ್ಕೆ ಬಂದವು. ಇವುಗಳ ವೇಷ ಕಟ್ಟಿಕೊಂಡು ವೇದಿಕೆಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಅಭಿನಯಿಸುವ, ಮೆರವಣಿಗೆ ಮಾಡುವ ಹೊಸ ಪ್ರವೃತ್ತಿಯೊಂದು ಆರಂಭ ಆಯ್ತು. ಇದು ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ, ಇತರ ಭಾಷೆಗಳ ರಿಯಾಲಿಟಿ ಶೋಗಳಲ್ಲೂ ಹೋ….. ಎನ್ನುತ್ತಾ ಕುಣಿಯುವ “ಕಾಂತಾರದ ಪಂಜುರ್ಲಿ, ಗುಳಿಗ” ರನ್ನು ನೋಡಿದ್ದೇವೆ. ಆರಂಭದಲ್ಲಿ ಕಾಂತಾರವನ್ನು “ದೈವಾರಾಧನೆಯನ್ನು ಪ್ರಪಂಚಕ್ಕೆ ತಿಳಿಸಿದ ಸಿನೇಮಾ” ಎಂದು ಹೊಗಳಿದ ಭಕ್ತರು ಈಗ ಸಿನೇಮಾದ ಪ್ರಚಾರದಿಂದ ಹುಟ್ಟಿಕೊಂಡ ಈ ರೀತಿಯ ಹೊಸ ಬೆಳವಣಿಗೆಯ ಬಗ್ಗೆ ಅಸಮಧಾನವನ್ನು ಹೊಂದಿದ್ದಾರೆ.

ಜನರು ಹೊಸ ಹೊಸ ದೇವರಿಗೆ ಮೊರೆ ಹೋಗುವ, ತಮ್ಮ ಭಕ್ತಿಯನ್ನು ತೋರಿಸುವ ಪ್ರವೃತ್ತಿಗೆ ಕುತೂಹಲಕಾರಿಯಾದ ನಿದರ್ಶನವೆಂದರೆ ‘ಸಂತೋಷಿ ಮಾʼ ಎಂಬ ದೇವತೆ. 1960 ರ ದಶಕದಲ್ಲಿ ಉತ್ತರ ಪ್ರದೇಶದ ಮಹಿಳೆಯರು ಪೂಜಿಸುತ್ತಿದ್ದ ಸಂತೋಷಿ ಮಾ ಎಂಬ ದೇವತೆಯನ್ನು ‘ಜೈ ಸಂತೋಷಿ ಮಾʼ ಎಂಬ ಸಿನೇಮಾ ಇಡೀ ದೇಶಕ್ಕೆ ಪರಿಚಯಿಸಿತು. ಇದಕ್ಕೂ ಹಿಂದೆ ಪುರಾಣದ ಯಾವುದೇ ಹಿನ್ನಲೆ ಇಲ್ಲದ ಈ ದೇವತೆಗೆ ಪುರಾಣಗಳು ಹುಟ್ಟಿಕೊಂಡವು.

1975 ರಲ್ಲಿ ಶೋಲೆ ಮತ್ತು ದೀವಾರ್ ಜೊತೆಗೆ, ಅಪರಿಚಿತ ಕಲಾವಿದರನ್ನು ಹಾಕಿಕೊಂಡು ಕಡಿಮೆ ಬಜೆಟ್ ನಲ್ಲಿ ‘ಜೈ ಸಂತೋಷಿ ಮಾʼ ಸಿನೇಮಾ ಬಂತು. ಬಹುತೇಕ ನೃತ್ಯಗಾರ್ತಿಯರು, ಕಲಾವಿದೆಯರನ್ನು ವೇಶ್ಯಾಗೃಹಗಳಿಂದ ಕರೆಸಿಕೊಂಡು ಬರಲಾಗಿತ್ತು.

ಈ ಬಗ್ಗೆ ಮಿಂಟ್‌ನಲ್ಲಿ ಸಂತೋಷಿ ಮಾ ಪಾತ್ರದಾರಿ ನಟಿ ಅನಿತಾ ಗುಹಾ, ಚಿತ್ರದ ಯಶಸ್ಸನ್ನು ವಿವರಿಸುತ್ತಾ, “ಪ್ರೇಕ್ಷಕರು ಸಿನೇಮಾವನ್ನು ಮೆಚ್ಚಿ ಪರದೆಯ ಮೇಲೆ ನಾಣ್ಯಗಳು, ಹೂವು, ಅಕ್ಕಿ ಎಸೆಯುತ್ತಿದ್ದರು. ಬರಿಗಾಲಿನಲ್ಲಿ ಥಿಯೇಟರ್‌ಗೆ ಬಂದು ಸಿನೇಮಾ ನೋಡುತ್ತಿದ್ದರು. ಬಾಂದ್ರಾದಲ್ಲಿ ಥಿಯೇಟರ್‌ ಹೊರಗೆ ಒಂದು ಸಣ್ಣ ಗುಡಿ ಕೂಡ ಕಟ್ಟಿದ್ದರು. 50 ವಾರಗಳ ಕಾಲ ಸಿನೇಮಾ ಓಡಿತು. ಅದೊಂದು ಪವಾಡ,” ಎಂದು ಹೇಳುತ್ತಾರೆ.

ಈ ಸಿನೇಮಾದಲ್ಲಿ ಸಂತೋಷಿ ಮಾತೆಯ ವ್ರತ ಹೇಗೆ ಮಾಡೋದು, ದೈವಿಗೆ ಯಾವ ನೈವೇದ್ಯ ಇಡೋದು, ಶುಕ್ರವಾರ ಉಪವಾಸ ಮಾಡೋದು ಮೊದಲಾದ ಪ್ರಸಂಗಗಳಿಗೆ. ಈಗಲೂ ಈ ದೇವಿಯ ಭಕ್ತರು ಶುಕ್ರವಾರ ಉಪವಾಸ ಮಾಡುತ್ತಾರೆ. “ಮೈ ತೋ ಆರತಿ ಉತರು ರೇ ಸಂತೋಷಿ ಮಾತಾ ಕಿ” ಎಂಬ ಹಾಡು ತುಂಬಾ ಫೇಮಸ್‌ ಆಯ್ತು. ಈ ಸಿನೇಮಾ ಸದ್ಯ ಯೂಟ್ಯೂಬಿನಲ್ಲಿಯೂ ಇದೆ.

ಬಜೆಟ್‌ ಮತ್ತು ಸಂಪಾದನೆಗೆ ಹೋಲಿಸಿದರೆ, ಈ ಸಿನೇಮಾವು ಇದರ ಜೊತೆ ಜೊತೆಗೆ ರಿಲೀಸ್‌ ಆದ ಶೋಲೆ ಮತ್ತು ದೀವಾರ್‌ಗಿಂತ ಸಕ್ಸಸ್‌ ಕಂಡಿತು.

ಸದ್ಯ ಕೋಳಿಯ ಮೇಲೆ ಕೂತಿರುವ ಸಂತೋಷಿ ಮಾತೆಯ ಪೋಟೋವನ್ನು ಲೈಂಗಿಕ ಅಲ್ಪಸಂಖ್ಯಾತರ ಮನೆಗಳಲ್ಲಿ, ವೃಶ್ಯಾಗೃಹಗಳಲ್ಲಿ ನೋಡಬಹುದು. ಬೆಂಗಳೂರಿನ ಬಿನ್ನಿಮಿಲ್‌ ರೋಡಿನಲ್ಲಿ ಕಾರವಾರದಲ್ಲಿ ಈ ಸಂತೋಷಿ ಮಾತೆಯ ದೇವಾಲಯಗಳಿವೆ.

ಕಾಲಕಾಲಕ್ಕೆ ಹೊಸ ದೇವರು ಹುಟ್ಟುತ್ತವೆ, ಯಾರಿಗೂ ತಿಳಿಯದ ದೇವರೊಂದು ದಿಡೀರ್‌ ಖ್ಯಾತಿಯನ್ನು ಪಡೆಯುತ್ತದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಯ ಸಿನೇಮಾಗಳ ನಂತರ ಮಂತ್ರಾಲಯಕ್ಕೆ ಬೇಟಿ ಕೊಡುವ ಭಕ್ತರ ಸಂಖ್ಯೆ ದಡೀರ್‌ ಹೆಚ್ಚಾಯಿತು.

ಒಂದೊಮ್ಮೆ ನಾನು ಬಾಲ್ಯದಲ್ಲಿ ಹೋಗುತ್ತಿದ್ದ, ಜನಜಂಗುಳಿಯಿಂದ ತುಂಬಿದ್ದ ಕಾಸರಗೋಡಿನ ಮಲ್ಲ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಈಗ ಭಕ್ತರ ಸಂಖ್ಯೆ ಎರಡಂಕೆಗೆ ಇಳಿದಿದೆ. ಹಿಂದಿನಂತೆ ದಿನಂಪ್ರತಿ ನೂರಾರು ಭಕ್ತರು ಬರುತ್ತಿಲ್ಲ.

ದಕ್ಷಿಣ ಕನ್ನಡದ ಬೆಳಾಲ್‌ ಎಂಬ ಗ್ರಾಮದಲ್ಲಿ ಮರದಡಿಯಲ್ಲಿ ಇದ್ದ ದೇವಿಗೆ ಅರಿಕೋಡಿ ಚಾಮುಂಡೇಶ್ವರಿ ಎಂದು ದೇವಾಲಯ ಕಟ್ಟಿಸಲಾಗಿದೆ. ಇಲ್ಲಿಗೆ ಹೆಚ್ಚು ಪ್ರಚಾರವನ್ನು ಕೊಟ್ಟಿದ್ದು ಕೆಲವು ಯೂಟ್ಯೂಬರ್‌ಗಳು. ಈಗ ಅಲ್ಲೊಬ್ಬರು ಸ್ವಯಂಘೋಷಿತ ಧರ್ಮದರ್ಶಿ ಇದ್ದಾರೆ. ಅವರನ್ನು ಬೇಟಿ ಮಾಡಲು ಟೋಕನ್‌ ತೆಗೆದುಕೊಳ್ಳಬೇಕು. ಈ ದೇವಾಲಯದ ಪೇಸ್‌ಬುಕ್‌ ಪೇಜ್‌ನಲ್ಲಿ, “ಮಾತು ಬಾರದವರಿಗೆ ಮಾತು ಬಂತು, ಮಕ್ಕಳಾಗದವರಿಗೆ ಮಕ್ಕಳಾಯಿತು,” ಎಂಬ ಅವೈಜ್ಞಾನಿಕ ನಂಬಿಕೆಗಳನ್ನು ಹರಡಲಾಗುತ್ತಿದೆ. ದೈವಾರಾಧನೆಯ ಪಾರಂಪರಿಕ ಶೈಲಿಗೆ ಭಿನ್ನವಾಗಿ ವೈಭವೋಪೇತ ರೀತಿಯಲ್ಲಿ ಮೈಯಲ್ಲಿ ಆವಾಹಿಸಿಕೊಂಡು, ತ್ರಿಶೂಲ ಹಿಡಿದು ದೇವಿ ಮಹಾತ್ಮೆ ಯಕ್ಷಗಾನದ ದೇವಿ ಪಾತ್ರದಾರಿಯಂತೆ ಕುಣಿಯುವ ಹೊಸ ಪದ್ಧತಿ ಬಂದಿದೆ. ಈ ದೇವಾಲಯಕ್ಕೆ ಈಗ ಸಾವಿರಾರು ಭಕ್ತರಿದ್ದಾರೆ.

ಇಂತಹ ಇನ್ನೊಂದು ಹೊಸ ದೇವಾಲಯ ತ್ರಿಶೂರಿನ ವಿಷ್ಣುಮಾಯ ದೇವಾಲಯ. ಇದು ತನ್ನ ವೆಬ್‌ಸೈಟಿನಲ್ಲಿ ತ್ರಿಶೂರ್‌ನಲ್ಲಿರುವ ಏಕೈಕ ಅಧಿಕೃತ ಪೆರಿಂಗೊಟ್ಟುಕರ ದೇವಸ್ಥಾನ ವಿಷ್ಣುಮಾಯ ದೇವಾಲಯ ನಮ್ಮದು. ಪ್ರಾಚೀನ ಮತ್ತು ದೊಡ್ಡ ದೇವಾಲಯ” ಎಂದು ಬರೆದುಕೊಂಡಿದೆ. ಇದಕ್ಕೊಬ್ಬ ಧರ್ಮದರ್ಶಿ ಇದ್ದಾನೆ. ಈ ದೇವಾಲಯವನ್ನು ಪ್ರಚಾರ ಮಾಡಲು ಹಿರಿಯ ನಟಿ ಅಂಬಿಕಾ ಸೇರಿದಂತೆ ಯೂಟ್ಯೂಬರ್‌ಗಳನ್ನೆಲ್ಲಾ ಬಳಸಲಾಗುತ್ತಿದೆ.

ಜನರು ಹೊಸ ಹೊಸ ದೇವರನ್ನು, ಭಕ್ತಿಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂದು ಜನಪ್ರಿಯವಾಗಿರುವ ದೇವರು ನಾಳೆ ಯಾರಿಗೂ ಬೇಡವಾಗಬಹುದು. ಈಗ ಜನಜಂಗುಳಿಯಿಂದ ತುಂಬಿರುವ ದೇವಾಲಯದಲ್ಲಿ ನಾಳೆ ಅರ್ಚಕ ಮಾತ್ರ ಇರುವ ಕಾಲ ಬರಬಹುದು. ಹೊಸ ದೇವರು, ದೇವಾಲಯ ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ರೀಲ್‌ಗಳಲ್ಲಿ ಬಂದರೆ ಸಾಕಷ್ಟೇ! ಹಿಂದೆ ಶಬರಿಮಲೆಗೆ ಹೋಗುತ್ತಿದ್ದ ಭಕ್ತರು, ಈಗ ಕೊಟ್ಟಿಯೂರನ್ನು ನೋಡಿದ್ದಾರೆ, ನಾಳೆ ಇನ್ನೊಂದು ದೇವಾಲಯ-ಅಚರಣೆಯ ರೀಲ್ಸ್‌ ಬಂದರೆ ಆ ಕಡೆಗೆ ಹೋಗುತ್ತಾರೆ.

ಭಕ್ತಿಯೆಂಬುದು ತೋರುಂಬ ಲಾಭ – ಅಲ್ಲಮ ಪ್ರಭು

ಲೇಖನ: ಚರಣ್‌ ಐವರ್ನಾಡು

2022 ರಲ್ಲಿ ನೋಂದಾಯಿತ ಸಾವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗಲಿಲ್ಲ; ನೋಂದಾಯಿಸದ ಸಾವುಗಳ ಲೆಕ್ಕವಿಲ್ಲ
ಇತ್ತೀಚಿನ ಸಿಆರ್‌ಎಸ್ ದತ್ತಾಂಶವು 2022 ರಲ್ಲಿ ದಾಖಲಾದ 'ಒಟ್ಟು' ಸಾವುಗಳ ಸಂಖ್ಯೆಯನ್ನು ಬಹಿರಂಗಪಡಿಸಿದೆ. 2022 ರ ಮತ್ತೊಂದು ದತ್ತಾಂಶ ಸಂಗ್ರಹವಾದ ಎಸ್‌ಆರ್‌ಎಸ್ ಅನ್ನು ಬಿಡುಗಡೆ ಮಾಡಲಾಗಿಲ್ಲ, ಇದರಿಂದಾಗಿ ಎಷ್ಟು 'ಶೇಕಡಾವಾರು' ಸಾವುಗಳು ನೋಂದಾಯಿಸದೆ ಉಳಿದಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವಾಗಿದೆ

ಭಾರತದಲ್ಲಿ ದಾಖಲಾಗಿರುವ ಎಲ್ಲಾ ಸಾವುಗಳಲ್ಲಿ, ಸುಮಾರು ಅರ್ಧದಷ್ಟು ಜನರು ಸಾಯುವ ಸಮಯದಲ್ಲಿ ಯಾವುದೇ ವೈದ್ಯಕೀಯ ಸೇವೆಯನ್ನು ಪಡೆಯಲಿಲ್ಲ. ನಾಗರಿಕ ನೋಂದಣಿ ವ್ಯವಸ್ಥೆಯ ( civil registration system – CRS) 2022 ರ ಇತ್ತೀಚಿನ ಮಾಹಿತಿಯ ಪ್ರಕಾರ, ದಾಖಲಾಗಿರುವ ಮರಣಗಳಲ್ಲಿ 50.7% ರಷ್ಟು ಜನರು ಯಾವುದೇ ವೈದ್ಯಕೀಯ ಸೇವೆಯನ್ನು ಪಡೆದಿರಲಿಲ್ಲ ಎಂಬುದು ಕಂಡು ಬಂದಿದೆ.

ಇನ್ನು ದಾಖಲಾಗದ ಸಾವಿನ ಸಂಖ್ಯೆ ಇದರಲ್ಲಿ ಸೇರಿಲ್ಲ. ವಿಚಿತ್ರವೆಂದರೆ, ಒಟ್ಟು ಸಾವುಗಳಲ್ಲಿ ಎಷ್ಟು ಶೇಕಡಾವಾರು ದಾಖಲಾಗಿವೆ ಎಂಬುದರ ಕುರಿತು ಯಾವುದೇ ದತ್ತಾಂಶ ಲಭ್ಯವಿಲ್ಲ – ಮತ್ತು ದತ್ತಾಂಶ ಸಿಗದಿರುವುದನ್ನು ಇದರಲ್ಲಿ ಉಲ್ಲೇಖಿಸಲಾಗಿಲ್ಲ. ಆದ್ದರಿಂದ ಸತ್ತವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ವೈದ್ಯಕೀಯ ಚಿಕಿತ್ಸೆ ಸಿಗಲಿಲ್ಲ ಎಂಬ ತೀರ್ಮಾನವು ಸಣ್ಣಮಟ್ಟಿನ ಅಂದಾಜು ಆಗಿರಬಹುದು.

2020 ಕ್ಕೆ ಹೋಲಿಸಿದರೆ 2022 ರಲ್ಲಿ  ಸಾಯುವ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಜನರ ಶೇಕಡಾವಾರು ಪ್ರಮಾಣವು ಐದು ಶೇಕಡಾ ಪಾಯಿಂಟ್‌ಗಳಷ್ಟು ಕಡಿಮೆಯಾಗಿದೆ.

2022 ಮತ್ತು 2021 ರ ನಡುವಿನ ಹೋಲಿಕೆಯನ್ನು ಇಲ್ಲಿ ತಪ್ಪಿಸಲಾಗಿದೆ. ಏಕೆಂದರೆ ಆ ಸಮಯದಲ್ಲಿ ಕೋವಿಡ್-19 ರ ಎರಡನೇಯ ಡೆಲ್ಟಾ ಅಲೆ ಬಂದಿತ್ತು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುವ ಜನರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿತ್ತು, ಅದು ನಿಜಕ್ಕೂ ಸಂಭವಿಸಿದೆ.

ರಾಜ್ಯ ಸರ್ಕಾರಗಳ ಕಳಪೆ ಆರೋಗ್ಯ ಮೂಲಸೌಕರ್ಯಕ್ಕೆ ಮತ್ತು ಭಾಗಶಃ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಪಡೆದ ಜನರು ಇಷ್ಟು ಕಡಿಮೆ ಶೇಕಡಾವಾರು ಪ್ರಮಾಣದಲ್ಲಿದ್ದಾರೆ ಎಂಬುದು ಸತ್ಯ.

2022 ರಲ್ಲಿ, ವೈದ್ಯಕೀಯ ಚಿಕಿತ್ಸೆ ಪಡೆದ ಎಲ್ಲರಲ್ಲಿ, 25% ಜನರು ವೈದ್ಯಕೀಯ ಸಂಸ್ಥೆಗಳಿಂದ ಪಡೆದವರು. ಇನ್ನೂ 17.1% ಜನರು ಮೆಡಿಕಲ್‌ ಕೇರ್ ವ್ಯಾಪ್ತಿಯಿಂದ ಹೊರಗಿದ್ದರೂ, ಒಂದಲ್ಲ ಒಂದು ರೂಪದಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆದರು.

ಮರಣ ನೋಂದಣಿ

2021 ರಲ್ಲಿ 102.2 ಲಕ್ಷವಿದ್ದ ನೋಂದಾಯಿತ ಸಾವುಗಳ ಸಂಖ್ಯೆ 2022 ರಲ್ಲಿ 86.5 ಲಕ್ಷಕ್ಕೆ ಇಳಿದಿದೆ. ಇದು ಶೇ. 15.4 ರಷ್ಟು ಇಳಿಕೆಯಾಗಿದೆ.

ಭಾರತದ ಕೆಲವು ಪ್ರಮುಖ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಹರಿಯಾಣ ರಾಜ್ಯಗಳು ನೋಂದಾಯಿತ ಸಾವುಗಳ ಸಂಖ್ಯೆಯಲ್ಲಿ ಇಳಿಕೆಗೆ ಗಮನಾರ್ಹವಾಗಿ ಕಾರಣವಾಗಿವೆ.

2022 ರಲ್ಲಿ ಸಾವಿನ ನೋಂದಣಿ ಸಂಖ್ಯೆಯಲ್ಲಿನ ಈ ಕುಸಿತವನ್ನು ಈ ದೃಷ್ಟಿಕೋನದಿಂದ ನೋಡಬಹುದು: ಕೋವಿಡ್‌-19 ಡೆಲ್ಟಾ ಅಲೆಯ ವರ್ಷ 2021 ರಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಯು 2022 ರಲ್ಲಿ ಸಂಭವಿಸಿದ್ದಕ್ಕಿಂತ ಹೆಚ್ಚಿನದಾಗಿದೆ. ಆದ್ದರಿಂದ, 2021 ರಲ್ಲಿ ನೋಂದಾಯಿಸಲಾದ ಸಾವುಗಳ ಸಂಖ್ಯೆ 2022 ಕ್ಕಿಂತ ಹೆಚ್ಚಾಗಿದೆ.

2021 ರಲ್ಲಿ ಯಾವುದೇ ಸಾವುಗಳನ್ನು ಕಡಿಮೆ ಮಾಡಿ ಎಣಿಸಲಾಗಿಲ್ಲ ಎಂದು ಸರ್ಕಾರ ದೀರ್ಘಕಾಲದವರೆಗೆ ಹೇಳಿಕೊಂಡಿತ್ತು. ಆದರೆ 2021 ರಲ್ಲಿ ದಾಖಲಾದ ಸಾವುಗಳ ಸಂಖ್ಯೆ 2022 ರಲ್ಲಿ ಸಂಭವಿಸಿದ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂಬ ಅಂಶವು ಸರ್ಕಾರದ ಪ್ರತಿಪಾದನೆಗಳನ್ನು ಪ್ರಶ್ನಿಸುವ ಮತ್ತೊಂದು ದತ್ತಾಂಶವಾಗಿದೆ.

ಸಿಆರ್‌ಎಸ್‌ನ 2022 ರ ದತ್ತಾಂಶದಿಂದ ದಾಖಲಾದ ಒಟ್ಟು ಸಾವುಗಳ ಸಂಖ್ಯೆ ಸ್ಪಷ್ಟವಾದರೂ, ಎಷ್ಟು ಶೇಕಡಾ ಸಾವುಗಳು ನೋಂದಾಯಿಸಲ್ಪಟ್ಟಿಲ್ಲ ಎಂಬುದನ್ನು ಸೂಚಿಸಲು ಯಾವುದೇ ದತ್ತಾಂಶವಿಲ್ಲ, ಇದು ಸಾವುಗಳನ್ನು ದಾಖಲಿಸುವ ವ್ಯವಸ್ಥೆಯ ದೃಢತೆಯನ್ನು ಅರ್ಥಮಾಡಿಕೊಳ್ಳಲು ನಿರ್ಣಾಯಕ ಸೂಚಕವಾಗಿದೆ.

ಎರಡು ದತ್ತಾಂಶ ಮೂಲಗಳನ್ನು ಒಟ್ಟುಗೂಡಿಸಿ ಸಾವಿನ ಶೇಕಡಾವಾರು ಪ್ರಮಾಣವನ್ನು ಲೆಕ್ಕಹಾಕಬಹುದು:

ಮಾದರಿ ನೋಂದಣಿ ವ್ಯವಸ್ಥೆ (sample registration system – SRS) ಪ್ರತಿ 1,000 ಜನಸಂಖ್ಯೆಗೆ ಸಾವಿನ ಪ್ರಮಾಣವನ್ನು ಅಂದಾಜು ಮಾಡುತ್ತದೆ ಮತ್ತು ಆದ್ದರಿಂದ, ಒಂದು ನಿರ್ದಿಷ್ಟ ವರ್ಷದಲ್ಲಿ (ಉದಾಹರಣೆಗೆ 2022) ಸಂಭವಿಸಿದ ಒಟ್ಟು ಸಾವುಗಳ ಅಂದಾಜು ಸಂಖ್ಯೆಯನ್ನು ನೀಡಬಹುದು .

ನಾಗರಿಕ ನೋಂದಣಿ ವ್ಯವಸ್ಥೆಯ ( civil registration system – CRS), ಇದು ಒಂದು ನಿರ್ದಿಷ್ಟ ವರ್ಷದಲ್ಲಿ (ಉದಾಹರಣೆಗೆ 2022) ದಾಖಲಾದ ಒಟ್ಟು ಸಾವುಗಳ ನಿಖರವಾದ ಸಂಖ್ಯೆಯನ್ನು ನೀಡುತ್ತದೆ.

ಆದ್ದರಿಂದ, ನೋಂದಾಯಿತ ಸಾವುಗಳ ಶೇಕಡಾವಾರು = (ಒಟ್ಟು ನೋಂದಾಯಿತ ಸಾವುಗಳ ಸಂಖ್ಯೆ (CRS) / ಅಂದಾಜು ಸಾವುಗಳ ಸಂಖ್ಯೆ (SRS)) X 100.

ಸರ್ಕಾರವು 2022 ರ ಸಿಆರ್‌ಎಸ್ ಡೇಟಾವನ್ನು ಬಿಡುಗಡೆ ಮಾಡಿದ್ದರೂ, ಅದು 2022 ರ ಎಸ್‌ಆರ್‌ಎಸ್ ಡೇಟಾವನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ, 2022 ರಲ್ಲಿ ದಾಖಲಾದ ಸಾವುಗಳ ಶೇಕಡಾವಾರು ಪ್ರಮಾಣವನ್ನು ಲೆಕ್ಕಹಾಕುವುದು ಅಸಾಧ್ಯ.

ಭಾರತದಲ್ಲಿ ಮರಣ ನೋಂದಣಿ ಸುಮಾರು 80% ರಷ್ಟಿದೆ, ಆದರೆ ರಾಜ್ಯವಾರು ವ್ಯತ್ಯಾಸಗಳನ್ನು ನೋಡುವುದು ಬಹಳ ಮುಖ್ಯ. 2022 ರಲ್ಲಿ ದಾಖಲಾದ ಸಾವಿನ ಶೇಕಡಾವಾರು ಇನ್ನೂ ತಿಳಿದಿಲ್ಲವಾದ್ದರಿಂದ, ಮೇಲೆ ತಿಳಿಸಿದ ಕಾರಣಗಳಿಂದಾಗಿ, ರಾಜ್ಯಗಳ ವೈಯಕ್ತಿಕ ಕಾರ್ಯಕ್ಷಮತೆಯನ್ನು ನೋಡಲು ಸಾಧ್ಯವಿಲ್ಲ.

ಮರಣ ನೋಂದಣಿ ಕಾನೂನಿನ ಅನುಷ್ಠಾನವು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. 1969 ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಯ ಪ್ರಕಾರ, ಪ್ರತಿಯೊಂದು ಸಾವನ್ನು ನೋಂದಾಯಿಸುವುದು ಕಡ್ಡಾಯವಾಗಿದೆ.

ನೋಂದಣಿಯಾದ ಸಾವುಗಳು ಮತ್ತು ಜನನಗಳ ನಿಜವಾದ ಸಂಖ್ಯೆಯನ್ನು ಒಳಗೊಂಡಿರುವ ಸಿಆರ್‌ಎಸ್ ಅನ್ನು ರಾಜ್ಯ ಸರ್ಕಾರಗಳು ನಡೆಸಬೇಕು. ಮತ್ತೊಂದೆಡೆ, ಅಂದಾಜು ಸಾವುಗಳು ಮತ್ತು ಜನನಗಳ ಸಂಖ್ಯೆಯನ್ನು ನೀಡುವ ಎಸ್‌ಆರ್‌ಎಸ್ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.

ನಿಜವಾದ ಸಾವುಗಳ ಸಂಖ್ಯೆಯನ್ನು ಕಳೆ ಹಾಕಲು ಸಾಧ್ಯವಾಗದೇ ಇದ್ದರೆ, ಈ ಸಮೀಕ್ಷೆಯ ಮೂಲಕ ಪ್ರತಿ 1,000 ಜನಸಂಖ್ಯೆಗೆ ಎಷ್ಟು ಸಾವುಗಳು ಸಂಭವಿಸಿವೆ ಎಂಬುದನ್ನು ಅಂದಾಜು ಮಾಡಬಹುದು, ಆದ್ದರಿಂದ SRS ಮುಖ್ಯವಾಗಿದೆ.

ಕೇಂದ್ರ ಸರ್ಕಾರವು CRS 2022 ಅನ್ನು ಬಿಡುಗಡೆ ಮಾಡಿದೆ, ಆದರೆ SRS 2022 ಅನ್ನು ತಡೆಹಿಡಿದಿದೆ.

ಮರಣ ನೋಂದಣಿಯಲ್ಲಿ ನಗರ-ಗ್ರಾಮೀಣ ಅಂತರವು ಸ್ಪಷ್ಟವಾಗಿ ಗೋಚರಿಸುತ್ತದೆ. ಎಷ್ಟೇ ಸಾವುಗಳು ದಾಖಲಾಗಿದ್ದರೂ, ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಿಗಿಂತ ಸಾವುಗಳನ್ನು ದಾಖಲಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಮರಣ ನೋಂದಣಿ ಕೇವಲ ಸರಳ ಅಂಕಿಅಂಶವಲ್ಲ.

ಇದು ದಾಖಲೆಗಳನ್ನು ಇಡುವ ಉದ್ದೇಶವಾದರೂ, ಸಾವಿನ ಕಾರಣವನ್ನು ಕಂಡುಹಿಡಿಯಲು ಸಹ ಇದು ಸಹಾಯ ಮಾಡುತ್ತದೆ – ಜನಸಂಖ್ಯಾ ಪರಿಭಾಷೆಯಲ್ಲಿ ಇದನ್ನು ವೈದ್ಯಕೀಯವಾಗಿ ಪ್ರಮಾಣೀಕೃತ ಸಾವಿನ ಕಾರಣ (medically certified cause of deaths – MCCD) ಎಂದು ಕರೆಯಲಾಗುತ್ತದೆ.

ರೋಗಗಳು ಮತ್ತು ಸಾವಿನ ಇತರ ಕಾರಣಗಳು ಸೇರಿದಂತೆ ಸಾವುಗಳನ್ನು 19 ವರ್ಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.

2022 ರಲ್ಲಿ ಕೇವಲ 22.3% ಸಾವುಗಳಿಗೆ ಕಾರಣಗಳನ್ನು ವೈದ್ಯಕೀಯವಾಗಿ ಪ್ರಮಾಣೀಕರಿಸಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆ ವರ್ಷದ ನಾಲ್ಕನೇ ಮೂರು ಭಾಗಕ್ಕಿಂತ ಹೆಚ್ಚಿನ ಸಾವುಗಳಿಗೆ ಇರುವ ಕಾರಣಗಳನ್ನು ವರ್ಗೀಕರಿಸಲಾಗಿಲ್ಲ.

ರಾಜ್ಯವಾರು ಅಸಮಾನತೆಗಳು ಕಂಡು ಬರುತ್ತವೆ. ಉದಾಹರಣೆಗೆ, 2022 ರಲ್ಲಿ ಬಿಹಾರದಲ್ಲಿ MCCD ದರವು 5.4%, ತಮಿಳುನಾಡಿನಲ್ಲಿ 43% ಮತ್ತು ಸಿಕ್ಕಿಂನಲ್ಲಿ 48.6% ರಷ್ಟಿತ್ತು.

ವೈದ್ಯಕೀಯ ಆರೈಕೆ ಪಡೆಯುವಲ್ಲಿ ದಾಖಲಾಗುವ ಅರ್ಧಕ್ಕಿಂತ ಕಡಿಮೆ ಸಾವುಗಳ ಪರಿಣಾಮವೆಂದರೆ ಕಡಿಮೆ MCCD ದರ. ಇಷ್ಟು ಹೆಚ್ಚಿನ ಪ್ರಮಾಣದ ಸಾವುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡದಿದ್ದರೆ (2022 ರಲ್ಲಿ 50.7% ರಷ್ಟು), ಅವುಗಳ ಕಾರಣವನ್ನು ಗುರುತಿಸಲು ಯಾವುದೇ ಮಾರ್ಗವಿಲ್ಲ.

ಹಾಗಿದ್ದರೂ, ನೋಂದಾಯಿತ ಸಾವುಗಳಲ್ಲಿ ಉಳಿದವುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂಬ ಅಂಶವು ಅವುಗಳ ಕಾರಣವನ್ನು ಸರಿಯಾಗಿ ಗುರುತಿಸಲಾಗಿದೆ ಎಂದು ಅರ್ಥವಲ್ಲ. ಇದಕ್ಕೆ ಹಲವಾರು ಕಾರಣಗಳಿವೆ , ಆದರೆ ಪ್ರಾಥಮಿಕ ಕಾರಣವೆಂದರೆ ಆರೋಗ್ಯ ಸೇವೆ ಒದಗಿಸುವವರು ಬಳಸುವ ತಪ್ಪು ಕಾರ್ಯವಿಧಾನಗಳು.

ಮೃತ ಶಿಶುಗಳ ಜನನ  (Stillbirths)

ಗರ್ಭಾವಸ್ಥೆಯ 28 ವಾರಗಳ ಅವಧಿಯಲ್ಲಿ ಅಥವಾ ನಂತರ ಯಾವುದೇ ಜೀವನದ ಲಕ್ಷಣಗಳಿಲ್ಲದೆ ಜನಿಸಿದ ಮಗುವನ್ನು ನಿರ್ಜೀವ ಜನನ ಎಂದು WHO ವ್ಯಾಖ್ಯಾನಿಸುತ್ತದೆ. ನಿರ್ಜೀವ ಜನನ ದರವು 1,000 ಜೀವಂತ ಜನನಗಳಿಗೆ ಎಷ್ಟು ಜನಿಸುತ್ತವೆ ಎಂಬುದನ್ನು ಸೂಚಿಸುತ್ತದೆ.

ಭಾರತವು 2022 ರಲ್ಲಿ 1,000 ಜೀವಂತ ಜನನಗಳಿಗೆ 7.54 ಮೃತ ಶಿಶು ಜನನ ದರವನ್ನು ತೋರಿಸಿದ್ದು, ಭಾರತದ ನವಜಾತ ಶಿಶು ಕ್ರಿಯಾ ಯೋಜನೆಯ ಪ್ರಕಾರ ಈ ಸಂಖ್ಯೆಯನ್ನು ಏಕ ಅಂಕೆಗೆ ಇಳಿಸುವ ಗುರಿಯನ್ನು ತಲುಪಿದೆ.

ಆದಾಗ್ಯೂ, ಮೇಘಾಲಯದಂತಹ ರಾಜ್ಯಗಳು ಅತಿ ಹೆಚ್ಚು ಮೃತ ಶಿಶು ಜನನ ಪ್ರಮಾಣವನ್ನು 14.46 ರಷ್ಟು ದಾಖಲಿಸಿದ್ದು, ಇದು ಇನ್ನೂ ಕಳವಳಕಾರಿ ವಿಷಯವಾಗಿದೆ. ರಾಜಸ್ಥಾನ (1,000 ಜನನಗಳಿಗೆ 12.91) ಮತ್ತು ಗುಜರಾತ್ (1,000 ಜನನಗಳಿಗೆ 10.47) ನಂತರದ ಸ್ಥಾನಗಳಲ್ಲಿವೆ.

ಕೆಲವು ಅಧ್ಯಯನಗಳು ಭಾರತದಲ್ಲಿ ಮೃತ ಶಿಶುಗಳ ಜನನ ಸರಿಯಾಗಿ ಎಣಿಸಲಾಗಿಲ್ಲ (ಕಡಿಮೆ ಎಣಿಸಲಾಗಿದೆ) ಎಂದು ಸೂಚಿಸುತ್ತವೆ.

ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ರಾಖಿ ದಂಡೋನಾ ಮತ್ತು ಅವರ ಸಹೋದ್ಯೋಗಿಗಳು ಬರೆದಿರುವ ಈ ಪ್ರಬಂಧವು 2016 ಮತ್ತು 2020 ರ ನಡುವಿನ ಮೃತ ಶಿಶುಗಳ ಜನನ ಪ್ರಮಾಣವನ್ನು ವಿಶ್ಲೇಷಿಸಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಯಿಂದ (1,000 ಜನನಗಳಿಗೆ 9.7 ಮೃತ ಶಿಶುಗಳ ಜನನಗಳು) ಭಾರತದ ಮೃತ ಶಿಶುಗಳ ಜನನ ಪ್ರಮಾಣವು 2016-2020 ರ ಮಾದರಿ ನೋಂದಣಿ ವ್ಯವಸ್ಥೆಯಲ್ಲಿ ವರದಿಯಾದ ಸರಾಸರಿ ದರಕ್ಕಿಂತ 2.6 ಪಟ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ.

ಹೆಚ್ಚಿನ ಮೃತ ಶಿಶು ಜನನ ಪ್ರಮಾಣವು ತಾಯಿಯ ಆರೈಕೆಯ ಕೊರತೆಯ ಸೂಚಕವಾಗಿದೆ. “ಮೃತ ಶಿಶು ಜನನಕ್ಕೆ ಪ್ರಮುಖ ಕಾರಣಗಳಲ್ಲಿ ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದ ತೊಡಕುಗಳು [ಆರೋಗ್ಯ ಮೂಲಸೌಕರ್ಯ ಕಳಪೆಯಾಗಿರುವುದರಿಂದ]; ದೀರ್ಘಕಾಲದ ಗರ್ಭಧಾರಣೆ; ಮಲೇರಿಯಾ, ಸಿಫಿಲಿಸ್ ಮತ್ತು ಎಚ್ಐವಿ ತಾಯಿಯ ಪರಿಸ್ಥಿತಿಗಳು, ವಿಶೇಷವಾಗಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ತಾಯಿಯ ಸೋಂಕುಗಳು; ಮತ್ತು ಭ್ರೂಣದ ಬೆಳವಣಿಗೆಯ ನಿರ್ಬಂಧ [ಹುಟ್ಟಲಿರುವ ಮಗು ತನ್ನ ಬೆಳವಣಿಗೆಯ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯವಾಗದಿದ್ದಾಗ ಮತ್ತು ಆದ್ದರಿಂದ ಅದು ಇರಬೇಕಾದಕ್ಕಿಂತ ಚಿಕ್ಕದಾಗಿದ್ದಾಗ] ಸೇರಿವೆ” ಎಂದು WHO ತಿಳಿಸಿದೆ.

ಲಿಂಗ ಅನುಪಾತ

ಸಿಆರ್‌ಎಸ್‌ನಲ್ಲಿ ಅತ್ಯಂತ ನಿರ್ಣಾಯಕ ಸೂಚಕಗಳಲ್ಲಿ ಒಂದು ಜನನದ ಸಮಯದಲ್ಲಿನ ಲಿಂಗ ಅನುಪಾತ, ಅಂದರೆ 1,000 ಪುರುಷರಿಗೆ ಮಹಿಳೆಯರ ಸಂಖ್ಯೆ. ಬಿಹಾರವು 891 ರ ಅತ್ಯಂತ ಕಡಿಮೆ ಲಿಂಗ ಅನುಪಾತವನ್ನು ದಾಖಲಿಸಿದೆ. ಇದರ ಲಿಂಗ ಅನುಪಾತವು 2021 ರಲ್ಲಿ 908 ರಿಂದ 2022 ರಲ್ಲಿ 891 ಕ್ಕೆ ಇಳಿದಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದಾರೆ, ಅವುಗಳಲ್ಲಿ ‘ಮುಖ್ಯಮಂತ್ರಿ ಕನ್ಯಾ ಸುರಕ್ಷಾ ಯೋಜನೆ’ (ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಮೊದಲು ಜನಿಸಿದವರಿಗೆ ಆರ್ಥಿಕವಾಗಿ ಸಹಾಯ ಮಾಡಲು), ‘ಮುಖ್ಯಮಂತ್ರಿ ಬಾಲಿಕಾ ಸೈಕಲ್ ಯೋಜನೆ’ (ಶಾಲೆಯಲ್ಲಿ ಹುಡುಗಿಯರ ದಾಖಲಾತಿಯನ್ನು ಸುಧಾರಿಸಲು), ‘ಮುಖ್ಯಮಂತ್ರಿ ಮಹಿಳಾ ಉದ್ಯಮಿ ಯೋಜನೆ’ (ವ್ಯಾಪಾರ ಉದ್ಯಮಗಳನ್ನು ಪ್ರಾರಂಭಿಸಲು ಮಹಿಳೆಯರಿಗೆ 10 ಲಕ್ಷ ರೂ.ಗಳನ್ನು ಒದಗಿಸುತ್ತದೆ) ಮತ್ತು ‘ನಿಶ್ಚಯ್ ಆರಕ್ಷಿತ್ ರೋಜ್‌ಗಾರ್ ಮಹಿಳಾವೋಂ ಕಾ ಅಧಿಕಾರ್’ (ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ) ಸೇರಿವೆ.

ಈ ಯೋಜನೆಗಳು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು ಮತ್ತು ಮಹಿಳೆಯರ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. ಆದಾಗ್ಯೂ, 2022 ರಲ್ಲಿ ರಾಜ್ಯವು ದೇಶದಲ್ಲೇ ಅತ್ಯಂತ ಕೆಟ್ಟ ಲಿಂಗ ಅನುಪಾತವನ್ನು ದಾಖಲಿಸಿದೆ ಎಂಬ ಅಂಶವು ಈ ಯೋಜನೆಗಳ ವ್ಯಾಪಕ ವ್ಯಾಪ್ತಿಯನ್ನು ಮತ್ತು ವಿಶೇಷವಾಗಿ ಅವು ಸಮಾಜ ಮತ್ತು ಜನರ ಮನಸ್ಸಿನ ಮೇಲೆ ಬೀರುತ್ತಿರುವ ಪರಿಣಾಮವನ್ನು ಪ್ರಶ್ನಿಸುವಂತೆ ಮಾಡುತ್ತದೆ.

ಬಿಹಾರದ ಜೊತೆಗೆ, ಇತರ ಕೆಲವು ರಾಜ್ಯಗಳು ಸಹ ತಮ್ಮ ಲಿಂಗ ಅನುಪಾತದಲ್ಲಿ ಕುಸಿತವನ್ನು ದಾಖಲಿಸಿವೆ. ಅವುಗಳೆಂದರೆ: ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ.

ಕೆಲವು ರಾಜ್ಯಗಳ ಲಿಂಗ ಅನುಪಾತವು ಕಳವಳಕಾರಿ ವಿಷಯವಾಗಿದ್ದರೂ, ಭಾರತದ ಒಟ್ಟಾರೆ ಸರಾಸರಿ ಲಿಂಗ ಅನುಪಾತವು ವರ್ಷಗಳಲ್ಲಿ ಸ್ಥಿರವಾಗಿ ಸುಧಾರಿಸಿದೆ ಎಂದು NFHS ಗಳ ದತ್ತಾಂಶವು ಸೂಚಿಸುತ್ತದೆ.

2015-16ರ ನಡುವೆ ನಡೆಸಿದ NFHS ನ ನಾಲ್ಕನೇ ಸುತ್ತಿನ ಅಡಿಯಲ್ಲಿ ನೋಂದಾಯಿಸಲಾದ ಲಿಂಗ ಅನುಪಾತವು 991 ಆಗಿದ್ದರೆ, 2020-21 ರಿಂದ ನಡೆಸಿದ ಐದನೇ ಸುತ್ತಿನ ಸಮೀಕ್ಷೆಯಲ್ಲಿ ಅದು 1,020 ಕ್ಕೆ ಏರಿದೆ.

ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ, ಹೆಣ್ಣು ಮಕ್ಕಳ ಜನನದ ಸಂಖ್ಯೆಯು ಪುರುಷರ ಜನನಕ್ಕಿಂತ ಹೆಚ್ಚಾಗಿದೆ.

ಲೇಖನ: ಬಂಜೋತ್ ಕೌರ್, Over Half of Registered Deaths in 2022 Got No Medical Attention; Unregistered Deaths Not Even Counted

40 ವರ್ಷ ಹಳೆಯ ಯೂನಿಯನ್ ಕಾರ್ಬೈಡ್ ತ್ಯಾಜ್ಯದ ಪ್ರಾಯೋಗಿಕ ವಿಲೇವಾರಿಗೆ ಅನುಮತಿ ನೀಡಿದ ಮಧ್ಯಪ್ರದೇಶ ಹೈಕೋರ್ಟ್
ಭೋಪಾಲ್‌ನ ಪಿತಾಂಪುರದ ನಿಷ್ಕ್ರಿಯ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ 40 ವರ್ಷಗಳಷ್ಟು ಹಳೆಯದಾದ ರಾಸಾಯನಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ಮಧ್ಯಪ್ರದೇಶ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ.

ಫೆಬ್ರವರಿ 27 ರಿಂದ ಮೂರು ಹಂತಗಳಲ್ಲಿ ದಹನ ಪ್ರಯೋಗಗಳು ನಡೆಯಲಿವೆ ಎಂದು ಅಡ್ವೊಕೇಟ್ ಜನರಲ್ ಪ್ರಶಾಂತ್ ಸಿಂಗ್ ಅವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತೆಗೆದುಕೊಂಡ ಕ್ರಮಗಳ ಕುರಿತು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಅನುಸರಣಾ ವರದಿಯನ್ನು ಸಲ್ಲಿಸಿದೆ ಎಂದು ಸಿಂಗ್ ಹೇಳಿದರು. ನ್ಯಾಯಾಲಯವು ಜನವರಿಯಲ್ಲಿ ವರದಿಯನ್ನು ಕೇಳಿತ್ತು.

ಡಿಸೆಂಬರ್ 1984 ರಲ್ಲಿ, ಭೋಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‌ನ ಕೀಟನಾಶಕ ಸ್ಥಾವರದಿಂದ ಮೀಥೈಲ್ ಐಸೋಸೈನೇಟ್ ಮತ್ತು ಇತರ ವಿಷಕಾರಿ ಅನಿಲಗಳು ಸೋರಿಕೆಯಾದವು. ಐದು ಲಕ್ಷಕ್ಕೂ ಹೆಚ್ಚು ಜನರು ವಿಷಕಾರಿ ಅನಿಲ ಸೇವಿಸಿ, ಕನಿಷ್ಠ 4,000 ಜನರು ಸಾವನ್ನಪ್ಪಿದರು. ಸರ್ಕಾರಿ ದತ್ತಾಂಶದ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಈ ವಿಪತ್ತಿನ ಪರಿಣಾಮವಾಗಿ 15,000 ಸಾವುಗಳು ಸಂಭವಿಸಿವೆ.

ಜನವರಿ 2 ರಂದು, ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಸುಮಾರು 337 ಟನ್ ಅಪಾಯಕಾರಿ ತ್ಯಾಜ್ಯವನ್ನು ಧಾರ್ ಜಿಲ್ಲೆಯ ಪಿತಾಂಪುರ್ ಕೈಗಾರಿಕಾ ಪ್ರದೇಶಕ್ಕೆ ತಲುಪಿಸಲಾಯಿತು, ಅಲ್ಲಿ ಅದು ವಿಲೇವಾರಿಗಾಗಿ ಕಾಯುತ್ತಿದೆ. ತ್ಯಾಜ್ಯವನ್ನು 12 ಸೋರಿಕೆ ನಿರೋಧಕ ಮತ್ತು ಬೆಂಕಿ ನಿರೋಧಕ ಪಾತ್ರೆಗಳಲ್ಲಿ ಸಾಗಿಸಲಾಯಿತು.

ಪಿತಾಂಪುರಕ್ಕೆ ತ್ಯಾಜ್ಯ ತಂದು ಸುರಿದಿರುವುದು ನಿವಾಸಿಗಳು ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಜನವರಿ 3 ರಂದು, ಪ್ರತಿಭಟನೆಯಲ್ಲಿ ಇಬ್ಬರು ಪುರುಷರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ಬದುಕುಳಿದರು.

ಜನವರಿ 6 ರಂದು, ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸುರಕ್ಷತಾ ಶಿಷ್ಟಾಚಾರಗಳಿಗೆ ಅನುಗುಣವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡಲು ಆರು ವಾರಗಳ ಕಾಲಾವಕಾಶ ನೀಡಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪಿತಾಂಪುರದಲ್ಲಿ ವಿಲೇವಾರಿಯನ್ನು ಪ್ರಶ್ನಿಸುವ ಅರ್ಜಿಗಳಲ್ಲಿ ವ್ಯಕ್ತಪಡಿಸಲಾದ ಕಳವಳಗಳನ್ನು ಗಣನೆಗೆ ತೆಗೆದುಕೊಳ್ಳುವಂತೆಯೂ ಅದು ರಾಜ್ಯ ಸರ್ಕಾರವನ್ನು ಹೇಳಿದೆ.

2015 ರಲ್ಲಿ ಈ ಪ್ರದೇಶದಲ್ಲಿ ತ್ಯಾಜ್ಯವನ್ನು ಸುಡುವ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿತ್ತು ಎಂದು ಅರ್ಜಿದಾರರು ಹೇಳಿದ್ದರು ಮತ್ತು ಎಂಟು ವರ್ಷಗಳ ಹಿಂದೆ ನಡೆಸಲಾದ ಪ್ರಾಥಮಿಕ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಇತ್ತೀಚೆಗೆ ಸಾಗಿಸಲಾದ ತ್ಯಾಜ್ಯವನ್ನು ಸುಡಲು ಅನುಮತಿಸಬಾರದು ಎಂದು ವಾದಿಸಿದರು.

ಸಾರ್ವಜನಿಕರ ಆತಂಕವನ್ನು ಕಡಿಮೆ ಮಾಡಲು ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ನಡೆಸಬೇಕೆಂದು ಅರ್ಜಿದಾರರು ಒತ್ತಾಯಿಸಿದರು.

ಇದರ ನಂತರ, ರಾಜ್ಯ ಸರ್ಕಾರವು ಜಾಗೃತಿ ಅಭಿಯಾನವನ್ನು ನಡೆಸಿ, ಈ ಪ್ರಕ್ರಿಯೆಯನ್ನು ಮುಂದುವರಿಸಲು ನ್ಯಾಯಾಲಯದ ಅನುಮೋದನೆಯನ್ನು ಕೋರಿತು ಎಂದು ಪಿಟಿಐ ವರದಿ ಮಾಡಿದೆ.

ಮಂಗಳವಾರ, ನ್ಯಾಯಾಲಯವು ಮೂರು ಹಂತಗಳಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಿದೆ, ಪ್ರತಿ ಹಂತದಲ್ಲಿ 10 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ ಎಂದು ಸಿಂಗ್ ಹೇಳಿದರು.

ಮೊದಲ ಹಂತದಲ್ಲಿ, ವಿಲೇವಾರಿ ಪ್ರಮಾಣ ಗಂಟೆಗೆ 135 ಕೆಜಿ ಆಗಿರುತ್ತದೆ, ಇದನ್ನು ಕ್ರಮೇಣ ಎರಡನೇ ಹಂತದಲ್ಲಿ ಗಂಟೆಗೆ 180 ಕೆಜಿ ಮತ್ತು ಮೂರನೇ ಹಂತದಲ್ಲಿ ಗಂಟೆಗೆ 270 ಕೆಜಿಗೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.

ನ್ಯಾಯಾಲಯದ ನಿರ್ದೇಶನದಂತೆ, ಮೊದಲ ಪ್ರಾಯೋಗಿಕ ಪರೀಕ್ಷೆ ಫೆಬ್ರವರಿ 27 ರಂದು ನಡೆಯಲಿದೆ. ಎರಡನೆಯ ಪರೀಕ್ಷೆ ಮಾರ್ಚ್ 4 ರಂದು ಮತ್ತು ಮೂರನೆಯ ಪರೀಕ್ಷೆಯನ್ನು ಅನಿರ್ದಿಷ್ಟ ದಿನಾಂಕದಂದು ನಡೆಸಲಾಗುವುದು ಎಂದು ಅಡ್ವೊಕೇಟ್ ಜನರಲ್ ತಿಳಿಸಿದ್ದಾರೆ.

ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಲಾಗುವುದು, ನಂತರ ಉಳಿದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಕ್ತವಾದ ವಿಧಾನವನ್ನು ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರವು ಮಾರ್ಚ್ 27 ರಂದು ನ್ಯಾಯಾಲಯಕ್ಕೆ ಅನುಸರಣಾ ವರದಿಯನ್ನು ಸಲ್ಲಿಸಲಿದೆ ಎಂದು ಸಿಂಗ್ ಹೇಳಿದರು.

ನಿಜ್ಜರ್ ಹತ್ಯೆಯ ತನಿಖೆಗೆ ವಿದೇಶಿ ಹಸ್ತಕ್ಷೇಪ ಆಯೋಗವನ್ನು ಕಡ್ಡಾಯಗೊಳಿಸಲಾಗಿಲ್ಲ: ಕೆನಡಾ
ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ತನಿಖೆ ನಡೆಸಲು ಕೆನಡಾದ ವಿದೇಶಿ ಹಸ್ತಕ್ಷೇಪ ಆಯೋಗಕ್ಕೆ ಕಡ್ಡಾಯ ಮಾಡಲಾಗಿಲ್ಲ ಮತ್ತು “ಜವಾಬ್ದಾರಿಯನ್ನು ನಿರ್ಧರಿಸುವುದು ನ್ಯಾಯಾಲಯಗಳಿಗೆ ಬಿಟ್ಟದ್ದು,” ಎಂದು ದೆಹಲಿಯಲ್ಲಿರುವ ದೇಶದ ಹೈಕಮಿಷನ್ ಗುರುವಾರ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಕೆನಡಾದ ತನಿಖಾ ಆಯೋಗವು ತನ್ನ ವರದಿಯಲ್ಲಿ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಭಾರತೀಯ ಸರ್ಕಾರದ ಏಜೆಂಟ್‌ಗಳು ಮತ್ತು ನಿಜ್ಜರ್ ಹತ್ಯೆಯ ನಡುವಿನ ಸಂಬಂಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಖಚಿತವಾದ ವಿದೇಶಿ ಸಂಪರ್ಕವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ ಎರಡು ದಿನಗಳ ನಂತರ ಈ ಹೇಳಿಕೆ ಬಂದಿದೆ .

ಕೆನಡಾದ ಫೆಡರಲ್ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪವನ್ನು ತನಿಖೆ ಮಾಡಲು ಕೆನಡಾದ ತನಿಖಾ ಆಯೋಗವನ್ನು ವಹಿಸಲಾಯಿತು.

ತನಿಖಾ ಆಯೋಗದ ವರದಿಯು ನಿಜ್ಜರ್ ಪ್ರಕರಣವನ್ನು ಉಲ್ಲೇಖಿಸಿ, “ಸರ್ಕಾರದ ಹಿತಾಸಕ್ತಿಗಳಿಗೆ ವಿರುದ್ಧವಾದ ನಿರ್ಧಾರಗಳನ್ನು ಶಿಕ್ಷಿಸಲು, ತಪ್ಪು ಮಾಹಿತಿಯು ಪ್ರತೀಕಾರದ ತಂತ್ರವಾಗಿಯೂ ಸಹ ಬಳಸಲ್ಪಡುತ್ತಿದೆ,” ಎಂದು ಹೇಳಿದೆ.

“ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಶಂಕಿತ ಭಾರತೀಯನ ಭಾಗಿಯ ಬಗ್ಗೆ ಪ್ರಧಾನ ಮಂತ್ರಿಯ ಘೋಷಣೆಯ ನಂತರದ ತಪ್ಪು ಮಾಹಿತಿಯ ಪ್ರಚಾರವೂ ಆಗಿರಬಹುದು [ಆದರೂ ವಿದೇಶಿ ರಾಜ್ಯಕ್ಕೆ ಯಾವುದೇ ಖಚಿತವಾದ ಸಂಬಂಧವನ್ನು ಮತ್ತೊಮ್ಮೆ ಸಾಬೀತುಪಡಿಸಲಾಗಿಲ್ಲ].”

ಗುರುವಾರ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಉಲ್ಲೇಖಿಸಿ “ಪಿಐಎಫ್ಐ [ವಿದೇಶಿ ಹಸ್ತಕ್ಷೇಪದ ಸಾರ್ವಜನಿಕ ವಿಚಾರಣೆ] ನಿಜ್ಜರ್ ಹತ್ಯೆಯ ತನಿಖೆಯನ್ನು ಕಡ್ಡಾಯಗೊಳಿಸಲಾಗಿಲ್ಲ,” ಎಂದು ಪಿಟಿಐ ಹೇಳಿದೆ.

“ಪ್ರಶ್ನೆಯಲ್ಲಿರುವ ಹೇಳಿಕೆಯು ಸರಳವಾಗಿದೆ, ಅಂತಿಮವಾಗಿ, ಈ ಸಂಕೀರ್ಣ ವಿಷಯಕ್ಕೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ನಿರ್ಧರಿಸುವುದು ನ್ಯಾಯಾಲಯಗಳಿಗೆ ಬಿಟ್ಟದ್ದು, ಇದು ತನಿಖೆಯ ಹಂತದಲ್ಲಿದೆ,” ಎಂದು ಹೈ ಕಮಿಷನ್ ಹೇಳಿದೆ.

ಸೆಪ್ಟೆಂಬರ್ 2023 ರಲ್ಲಿ ವ್ಯಾಂಕೋವರ್ ಬಳಿ ನಿಜ್ಜರ್ ಹತ್ಯೆಯ ನಂತರ ಮುರಿದುಬಿದ್ದ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳ ನಡುವೆ ಈ ಬೆಳವಣಿಗೆ ಸಂಭವಿಸಿದೆ .

ಸೆಪ್ಟೆಂಬರ್ 2023 ರಲ್ಲಿ, ಟ್ರೂಡೊ ತನ್ನ ದೇಶದ ಸಂಸತ್ತಿಗೆ ಗುಪ್ತಚರ ಸಂಸ್ಥೆಗಳು ನಿಜ್ಜರ್ ಹತ್ಯೆಗೆ ಭಾರತ ಸರ್ಕಾರದ ಏಜೆಂಟರನ್ನು ಬಂಧಿಸುವ “ನಂಬಲರ್ಹವಾದ ಆರೋಪಗಳನ್ನು” ಸಕ್ರಿಯವಾಗಿ ಅನುಸರಿಸುತ್ತಿವೆ ಎಂದು ಹೇಳಿದರು.

ನಿಜ್ಜಾರ್  ಸ್ವತಂತ್ರ ಸಿಖ್ ರಾಷ್ಟ್ರವಾದ ಖಲಿಸ್ತಾನದ ಬೆಂಬಲಿಗರಾಗಿದ್ದರು. ಭಾರತದಲ್ಲಿ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲಾಗಿರುವ ಖಲಿಸ್ತಾನ್ ಟೈಗರ್ ಫೋರ್ಸ್‌ನ ಮುಖ್ಯಸ್ಥರಾಗಿದ್ದರು.

ಕೆನಡಾದ ಆರೋಪಗಳನ್ನು ನವದೆಹಲಿ ತಳ್ಳಿ ಹಾಕಿತ್ತು.

ಮಂಗಳವಾರ, ತನಿಖಾ ಆಯೋಗವು ರಾಜಕೀಯ ನಾಯಕರಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡುವ ಮೂಲಕ ಮತ್ತು ತಪ್ಪು ಮಾಹಿತಿಯನ್ನು ಹರಡುವ ಮೂಲಕ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದೆ .

ಚೀನಾದ ನಂತರ ಭಾರತವು ಕೆನಡಾದ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಎರಡನೇ ಅತ್ಯಂತ ಸಕ್ರಿಯ ರಾಷ್ಟ್ರವಾಗಿದೆ ಎಂದು ಅದು ಆರೋಪಿಸಿದೆ.

ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆನಡಾದ ತನಿಖಾ ಆಯೋಗದ ವರದಿಯನ್ನು ತಿರಸ್ಕರಿಸಿತು ಮತ್ತು ವಾಸ್ತವವಾಗಿ ಕೆನಡಾವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಸತತವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದೆ.

ಫೆಬ್ರವರಿ 2024 ರಲ್ಲಿ, ಕೆನಡಾದಲ್ಲಿ ಭಾರತವು ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂದು ಕೆನಡಾ ಆರೋಪಿಸಿತು. ಭಾರತ ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿದೆ.

ಪೂಜಾ ಸ್ಥಳಗಳ ಕಾಯಿದೆ ವಿರುದ್ಧದ ಅರ್ಜಿಗಳು ‘ಪ್ರಶ್ನಾತೀತ ಉದ್ದೇಶಗಳನ್ನು’ ಹೊಂದಿವೆ: ಕಾಂಗ್ರೆಸ್
ಬೆಂಗಳೂರು: ಭಾರತದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುವ ಕಾನೂನನ್ನು ಸಮರ್ಥಿಸಿ, 1991ರ ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991ಕ್ಕೆ ಕಾಂಗ್ರೆಸ್ ಗುರುವಾರ ಪ್ರಬಲ ಬೆಂಬಲವನ್ನು ನೀಡಿತು.

ಪಿ.ವಿ.ನರಸಿಂಹರಾವ್ ಅವರ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪರಿಚಯಿಸಲಾದ ಈ ಕಾಯಿದೆಯು ಧಾರ್ಮಿಕ ಸ್ಥಳವನ್ನು ಮತ್ತೊಂದು ನಂಬಿಕೆಯ ಕೇಂದ್ರವಾಗಿ ಪರಿವರ್ತಿಸುವುದನ್ನು ನಿಷೇಧಿಸುತ್ತದೆ ಮತ್ತು ಆಗಸ್ಟ್ 15, 1947 ರಂದು ಇದ್ದಂತೆ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ಕಾಪಾಡುವ ಗುರಿಯನ್ನು ಹೊಂದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಮಧ್ಯಸ್ಥಿಕೆ ಅರ್ಜಿಯ ಮೂಲಕ ಕಾನೂನು “ಭಾರತೀಯ ಜನತೆಯ ಆದೇಶವನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದ್ದಾರೆ.

ಕಾಯಿದೆಗೆ ಸವಾಲು

ವಕೀಲ ಅಶ್ವಿನಿ ಉಪಾಧ್ಯಾಯ ನೇತೃತ್ವದ ಹಿಂದುತ್ವವಾದಿ ಅರ್ಜಿದಾರರು ಕಾಯಿದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿದ ನಂತರ 1991 ರ ಕಾಯಿದೆಯು ಕಾನೂನು ಪರಿಶೀಲನೆಯನ್ನು ಎದುರಿಸುತ್ತಿದೆ. ಈ ಹಿಂದೆ ಬಲವಂತದಿಂದ ಮತಾಂತರಗೊಂಡಿದ್ದ ಧಾರ್ಮಿಕ ಸ್ಥಳಗಳನ್ನು ಹಿಂಪಡೆಯಲು ಹಿಂದೂಗಳ ಹಕ್ಕುಗಳನ್ನು ಕಾನೂನು ನಿರ್ಬಂಧಿಸುತ್ತದೆ, ಆಕ್ರಮಣಕಾರರಿಂದ ಐತಿಹಾಸಿಕ ವಿಧ್ವಂಸಕತೆಯನ್ನು ಪರಿಣಾಮಕಾರಿಯಾಗಿ ಅನುಮೋದಿಸುತ್ತದೆ ಎಂದು ಅವರು ವಾದಿಸುತ್ತಾರೆ.

ಕಾಯಿದೆಯ ಸೆಕ್ಷನ್ 3 ಯಾವುದೇ ಪೂಜಾ ಸ್ಥಳವನ್ನು ಬೇರೆ ನಂಬಿಕೆಗೆ ಪರಿವರ್ತಿಸುವುದನ್ನು ನಿಷೇಧಿಸುತ್ತದೆ, ಆದರೆ ಸೆಕ್ಷನ್ 4 ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ-ಬಾಬರಿ ಮಸೀದಿ ಸ್ಥಳವನ್ನು ಹೊರತುಪಡಿಸಿ 1947 ರಂತೆ ಅದರ ಧಾರ್ಮಿಕ ಸ್ವರೂಪವನ್ನು ಕಾಪಾಡುವುದನ್ನು ಕಡ್ಡಾಯಗೊಳಿಸುತ್ತದೆ.

ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಫೆಬ್ರವರಿ 17 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ವಿಚಾರಣೆಗೆ ಒಳಪಡಿಸಲಿದೆ.

ಕಾಂಗ್ರೆಸ್ ಕಾನೂನನ್ನು ರಕ್ಷಿಸುತ್ತದೆ

ವಕೀಲ ಅಭಿಷೇಕ್ ಜೇಬ್ರಾಜ್ ಮೂಲಕ ಸಲ್ಲಿಸಲಾಗಿರುವ ಕಾಂಗ್ರೆಸ್‌ನ ಅರ್ಜಿಯಲ್ಲಿ, “ಭಾರತದಲ್ಲಿ ಜಾತ್ಯತೀತತೆಯನ್ನು ಕಾಪಾಡಲು ಈ ಕಾಯಿದೆ ಅತ್ಯಗತ್ಯ ಮತ್ತು ಪ್ರಸ್ತುತ ಇರುವ ಸವಾಲು ಎಂದರೆ ಜಾತ್ಯತೀತತೆಯ ಸ್ಥಾಪಿತ ತತ್ವಗಳನ್ನು ದುರ್ಬಲಗೊಳಿಸುವ ಪ್ರೇರಿತ ಮತ್ತು ದುರುದ್ದೇಶಪೂರಿತ ಪ್ರಯತ್ನವಾಗಿದೆ.” ಎಂದು ಉಲ್ಲೇಖಿಸಲಾಗಿದೆ. ಕಾನೂನಿನ ಯಾವುದೇ ದುರ್ಬಲಗೊಳಿಸುವಿಕೆಯು “ಭಾರತದ ಕೋಮು ಸೌಹಾರ್ದತೆ ಮತ್ತು ಜಾತ್ಯತೀತ ಸಂರಚನೆಗೆ ಧಕ್ಕೆ ತರಬಹುದು ಮತ್ತು ಆ ಮೂಲಕ ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತರಬಹುದು,” ಎಂದು ಅದು ಎಚ್ಚರಿಸಿದೆ.

ಕಾಂಗ್ರೆಸ್‌ನ ಅರ್ಜಿಯು ಹಿಂದುತ್ವವಾದಿಗಳ ಅರ್ಜಿಗಳನ್ನು “ಅಸಮರ್ಪಕ ಮತ್ತು ಪ್ರಶ್ನಾರ್ಹ ಉದ್ದೇಶಗಳು” ಎಂದು ಕರೆದಿದೆ, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಜಾತ್ಯತೀತತೆಯನ್ನು ಉತ್ತೇಜಿಸಲು 1991 ಕಾಯಿದೆ ಅತ್ಯಗತ್ಯ ಎಂದು ಒತ್ತಿಹೇಳಿದೆ. 1991 ರ ಕಾಯಿದೆಯ ಸಿಂಧುತ್ವವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ನ 2019 ರ ಅಯೋಧ್ಯೆಯ ತೀರ್ಪನ್ನು ಕಾಂಗ್ರೆಸ್ ಉಲ್ಲೇಖಿಸಿದೆ.

ಜಮಿಯತ್ ಉಲಾಮಾ-ಇ-ಹಿಂದ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಮಥುರಾದ ಶಾಹಿ ಮಸೀದಿ ಈದ್ಗಾದ ನಿರ್ವಹಣಾ ಸಮಿತಿ ಸೇರಿದಂತೆ ಇತರ ಸಂಘಟನೆಗಳು ಸಹ ಕಾಯ್ದೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ವಿರೋಧಿಸಿವೆ. ಕೋಮು ಸೌಹಾರ್ದತೆ ಕಾಪಾಡಲು ಮತ್ತು ಐತಿಹಾಸಿಕ ಸಮಸ್ಯೆಗಳು ದೇಶದ ಭವಿಷ್ಯವನ್ನು ಅಸ್ತವ್ಯಸ್ತಗೊಳಿಸದಂತೆ ತಡೆಯಲು ಈ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ನಾಗರಿಕ ಹಕ್ಕುಗಳ ಕಾರ್ಯಕರ್ತರು ವಾದಿಸಿದ್ದಾರೆ.

‘ವಿಕ್ರಂ ಗೌಡ ಹತ್ಯೆಯ ಕುರಿತು ನ್ಯಾಯಾಂಗ ತನಿಖೆಯಾಗಲಿ’: ಮುಖ್ಯವಾಹಿನಿಗೆ ಬರಲಿರುವ ಆರು ಮಂದಿ ನಕ್ಸಲರ ಒತ್ತಾಯ
ಚಿಕ್ಕಮಗಳೂರು: ಕಳೆದ ಇಪ್ಪತ್ತೈದು ವರ್ಷಗಳಿಂದ ಮಾವೋವಾದಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಆರು ಮಂದಿ ನಕ್ಸಲರು ಜನವರಿ, 8 ರಂದು ಚಿಕ್ಕಮಗಳೂರಿನಲ್ಲಿ ಮುಖ್ಯವಾಹಿನಿಗೆ ಬರಲಿದ್ದಾರೆ.

ಲತಾ ಮುಂಡಗಾರು, ವನಜಾಕ್ಷಿ, ಎಂ., ಜಯಣ್ಣ ಆರೋಲಿ, ಸುಂದರಿ, ವಸಂತ್‌.ಕೆ, ಜಿಷ. ಎ.ಡಿ ಎಂಬ ಆರು ಮಂದಿ ಮಾವೋವಾದಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ನಕ್ಸಲರು ಮುಖ್ಯವಾಹಿನಿಗೆ ಬರುವುದಾಗಿ ಒಪ್ಪಿಕೊಂಡಿದ್ದಾರೆ.

“ನಾವು ಆರು ಜನರು ಕಳೆದ 25 ವರ್ಷಗಳಿಂದ ಜನರ ಪರವಾಗಿ ಹೋರಾಡುತ್ತಾ ಬಂದಿದ್ದು, ಈಗ ಮುಖ್ಯ ವಾಹಿನಿಗೆ ಬಂದು ಸಂವಿಧನಾತ್ಮಕ, ಪ್ರಜಾಸತಾತ್ಮಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸ್ವ ಇಚ್ಛೆಯಿಂದ ಬಯಸಿದ್ದೇವೆ. ಈಗಿನ ಬದಲಾದ ಪರಿಸ್ಥಿತಿಯಲ್ಲಿ ಅದೇ ಸರಿ ಎಂದು ತೀರ್ಮಾನಿಸಿದ್ದೇವೆ. ಮುಂದೆಯೂ ಜನರ ಪರವಾಗಿ ಕೊನೆ ಉಸಿರಿನ ತನಕ ಹೊರಡಲು ಬಯಸಿದ್ದೇವೆ,” ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಅಲ್ಲದೆ, ನಮಗೆ ಮುಖ್ಯವಾಹಿನಿಗೆ ಬರಲು ಕರೆಕೊಟ್ಟು ಜನರ ಪರವಾಗಿ ಮುಂದೆಯೂ ಪ್ರಜಾತಾಂತ್ರಿಕ ಹೋರಾಟಗಳಲ್ಲಿ ತೊಡಗಳು ಯಾವುದೇ ತಡೆ ಇಲ್ಲದಂತೆ ಮತ್ತು ಜನರ ಹಕ್ಕುಗಳಿಗಾಗಿ ನಾವಿಟ್ಟ ಹಕ್ಕೊತ್ತಾಯಗಳನ್ನು ಈಡೇರಿಸುವ ಭರವಸೆ ನೀಡಿದ ಮಾನ್ಯ ಮುಖ್ಯಮಂತ್ರಿಯವರಿಗೂ ಮತ್ತು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ,” ಎಂದು ಹೇಳಿದ್ದಾರೆ.

“ಮೂರೂ ರಾಜ್ಯಗಳ ಪಶ್ಚಿಮ ಘಟ್ಟದಲ್ಲಿ ವಾಸಿಸುತ್ತಿರುವ ಆದಿವಾಸಿ, ದಲಿತ, ರೈತ, ಕೂಲಿ ಜನರ ಬದುಕಿಗೆ ಸಂಬಂಧಿಸಿದ ಮತ್ತು ಇಲ್ಲಿನ ಪರಿಸರಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಖಚಿತ ಹೆಜ್ಜೆಗಳನ್ನು ಇಡಬೇಕು ಎಂದು ನಾವು ಬಯಸುತ್ತೇವೆ. ಮೂರೂ ರಾಜ್ಯಗಳ ಸರ್ಕಾರಗಳಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಮೂರು ರಾಜ್ಯ ಜೈಲುಗಳಲ್ಲಿರುವ ನಮ್ಮ ಎಲ್ಲಾ ಕಾಡ್ಸ್ ರ್ ಕೇಸುಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಬಿಡುಗಡೆಗೊಳಿಸಲು ಮೃದು ಧೋರಣೆ ತೋರಬೇಕೆಂದು ಸರ್ಕಾರಗಳಲ್ಲಿ ಮನವಿ ಮಾಡುತ್ತೇವೆ. ವಿಕ್ರಂ ಗೌಡರ ಹತ್ಯೆಯ ಕುರಿತು ನ್ಯಾಯಾಂಗ ತನಿಖೆಗೆ ತನಿಖಾ ತಂಡವನ್ನು ರಚಿಸಬೇಕೆಂದು ಒತ್ತಾಯಿಸುತ್ತೇವೆ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2023 ರಲ್ಲಿ ಭಾರತದ ಆದಾಯದ ಅಸಮಾನತೆ 1950 ಕ್ಕಿಂತ ಹೆಚ್ಚು: ವರದಿ
ಬೆಂಗಳೂರು: ಭಾರತದ ಆದಾಯದ ಅಸಮಾನತೆಯು 1950ರ ದಶಕಕ್ಕಿಂತ 2023ರಲ್ಲಿ ಹೆಚ್ಚಿತ್ತು ಎಂದು ಪೀಪಲ್ ರಿಸರ್ಚ್ ಆನ್ ಇಂಡಿಯಾಸ್ ಕನ್ಸ್ಯೂಮರ್ ಎಕಾನಮಿ (PRICE) ಭಾನುವಾರ, ಜನವರಿ 5 ರಂದು ಮಾಹಿತಿ ಬಹಿರಂಗಪಡಿಸಿದೆ.  ಇದನ್ನು ನಿವಾರಿಸಲು ಅಂತರ್ಗತ ಬೆಳವಣಿಗೆ ಮತ್ತು ಸಾಮಾಜೋ-ಆರ್ಥಿಕ ಸಮಾನತೆಯ ಗುರಿಯನ್ನು ಸಾಧಿಸಲು  ಬೇಕಾದ ಪರಿಣಾಮಕಾರಿ ನೀತಿಗಳನ್ನು ತರಲು ಆದಾಯ ವಿತರಣೆಯ ನಿಖರವಾದ ಮಾಪನದ ಅಗತ್ಯವಿದೆ ಎಂದು ವರದಿ ಒತ್ತಿಹೇಳಿದೆ. .

ನ್ಯಾಶನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ ಮತ್ತು PRICE ನಂತಹ ಸಂಸ್ಥೆಗಳಿಂದ ಭಾರತದ ಮನೆಯ ಆದಾಯದ ಸಮೀಕ್ಷೆಗಳನ್ನು ನಡೆಸಿ ಮಾಡಿದ ಸಂಶೋಧನೆ 1953-55 ರಲ್ಲಿ ಇದ್ದ ಗಿನಿ ಸೂಚ್ಯಂಕ (Gini index) 0.371 ಆದಾಯದ ಅಸಮಾನತೆಯು 2022-23 ರಲ್ಲಿ 0.410 ಕ್ಕೆ ಏರಿದೆ ಎಂದು PRICE ತಿಳಿಸಿದೆ.

ಸಮಾಜದ ಶ್ರೀಮಂತ ವರ್ಗಗಳ ಬಳಿ ರಾಷ್ಟ್ರೀಯ ಆದಾಯದ ಅಸಮಾನ ಪಾಲು ಸಂಗ್ರಹಿಸುವುದು ಮುಂದುವರೆದಿದೆ, ಆದರೆ ಗ್ರಾಮೀಣ ಮತ್ತು ಅಂಚಿನಲ್ಲಿರುವ ಜನರು ಅಗತ್ಯ ಸೇವೆಗಳು, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಅವಕಾಶಗಳಿಗೆ ಹೋರಾಡುತ್ತಿದೆ ಎಂದು PRICE ಹೇಳಿದೆ.

1953 ರಿಂದ 2023 ರವರೆಗಿನ ಆದಾಯದ ಅಸಮಾನತೆಯ ಡೇಟಾ ಮತ್ತು ಗಿನಿ ಅನುಪಾತಗಳು. ಮೂಲ: PRICE authors’ compilation from publications (1953-2004) and estimates from PRICE’s ICE 360° surveys (2014-2023)

ಗಿನಿ ಸೂಚ್ಯಂಕವು ಸೊನ್ನೆ ಇದ್ದರೆ, ಅದು ಪರಿಪೂರ್ಣ ಸಮಾನತೆ. ಈ ಸೂಚ್ಯಂಕ ಹೆಚ್ಚಾದರೆ, ಆದಾಯದ ಅಸಮಾನತೆ ಹೆಚ್ಚಾದ ಲಕ್ಷಣ.

ಇದನ್ನು “see-saw” ಮಾದರಿ ಎಂದು ಕರೆದಿರುವ, PRICE ನ CEO ಮತ್ತು ವರದಿಯ ಲೇಖಕ ರಾಜೇಶ್ ಶುಕ್ಲಾ, ಆದಾಯದ ಅಸಮಾನತೆಯು ಸುಧಾರಣೆ ಮತ್ತು ಅವನತಿಯನ್ನು ಕಾಲ ಕಾಲದಲ್ಲಿ ಕಂಡಿದೆ ಎಂದು ಹೇಳಿದ್ದಾರೆ.

2015-16 ರಿಂದ 2020-21 ರವರೆಗೆ ಸೂಚ್ಯಂಕವು 0.395 ರಿಂದ 0.528 ಕ್ಕೆ ಏರಿದಾಗ ಡೇಟಾವು ಅಸಮಾನತೆಯ ತೀವ್ರ ಹೆಚ್ಚಳವನ್ನು ತೋರಿಸುತ್ತದೆ . ಕೋವಿಡ್-19 ಅವಧಿಯ ನಂತರ ಸುಧಾರಣೆಯ ಕೆಲವು ಲಕ್ಷಣಗಳಿವೆ. “ಸ್ವತಂತ್ರಪೂರ್ವದಲ್ಲಿ ಇದ್ದ ಗಿನಿ ಸೂಚ್ಯಂಕ 0.463 ವು 2015-16 ರಲ್ಲಿ 0.367 ಕ್ಕೆ ಸುಧಾರಿಸಿದೆ, ಆದರೆ 2021 ರ ವೇಳೆಗೆ COVID-19 ಸಾಂಕ್ರಾಮಿಕದಂತಹ ಅಡೆತಡೆಗಳಿಂದಾಗಿ 0.506 ಕ್ಕೆ ಹದಗೆಟ್ಟಿತು,” ಎಂದು PRICE ಹೇಳಿದೆ.

“ಪರಿಣಾಮಕಾರಿ ನೀತಿಗಳನ್ನು ತಂದರೆ ಆದಾಯದ ಅಸಮಾನತೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದು,” ಎಂದು ವರದಿ ಹೇಳಿದೆ.

ಸಂಪತ್ತಿನ ಕೇಂದ್ರೀಕರಣ:

ವಿಶ್ವ ಅಸಮಾನತೆಯ ಡೇಟಾಬೇಸ್ (World Inequality Database – WID) ಅಂದಾಜುಗಳು ಮತ್ತು ಭಾರತೀಯ ಮನೆಗಳ ಸಮೀಕ್ಷೆಗಳಿಂದ ಸಿಕ್ಕಿದ ಡೇಟಾವನ್ನು ಹೋಲಿಸಿ, ಲೇಖಕರು “ಎರಡನೆಯದು ಹೆಚ್ಚು ವಾಸ್ತವಿಕ ಸೂಚ್ಯಂಕವಾಗಿದೆ, ಏಕೆಂದರೆ WID ಸಂಪತ್ತಿನ ಕೇಂದ್ರೀಕರಣಕ್ಕೆ ಒತ್ತು ನೀಡುತ್ತದೆ ಮತ್ತು ಅನೌಪಚಾರಿಕ ವಲಯದ ಆದಾಯವನ್ನು ಹೊರಗಿಟ್ಟಿದೆ, ಇದು ಭಾರತದಂತಹ ಆರ್ಥಿಕತೆಗಳಿಗೆ ಜಿಡಿಪಿಯ ಪ್ರಮುಖ ಭಾಗವಾಗಿದೆ,” ಎಂದು ಹೇಳಿದ್ದಾರೆ.

WID ಅಂದಾಜಿನ ಪ್ರಕಾರ, ಭಾರತದ ‘ಟಾಪ್ 1%’ ಜನಸಂಖ್ಯೆಯಲ್ಲಿ ಆದಾಯವು ಕೇಂದ್ರೀಕೃತವಾಗಿದೆ. 2023 ರಲ್ಲಿ ರಾಷ್ಟ್ರೀಯ ಆದಾಯದ 22.6% ಇವರ ಕೈಯಲ್ಲಿದೆ. ಆದರೆ ಭಾರತೀಯ ಆದಾಯ ಸಮೀಕ್ಷೆಗಳ ಪ್ರಕಾರ, ಈ ಟಾಪ್‌ 1% ಶ್ರೀಮಂತರು ರಾಷ್ಟ್ರೀಯ ಆದಾಯದ 7.3% ಅನ್ನು ಮಾತ್ರ ನಿಯಂತ್ರಿಸಿದ್ದಾರೆ.

ಭಾರತದ ಮನೆಯ ಸಮೀಕ್ಷೆಗಳ ಪ್ರಕಾರ, ಜನಸಂಖ್ಯೆಯ  40% ಮಧ್ಯಮ ವರ್ಗ  ಸ್ಥಿರ ಆದಾಯವನ್ನು ಹೊಂದಿವೆ. ಇದು ವರ್ಷಗಳಲ್ಲಿ 43.9% ರಿಂದ 46.6% ವರೆಗೆ ಮಾತ್ರ ಏರಿದ್ದು, ಸ್ಥಿರ ಆರ್ಥಿಕತೆಯನ್ನು ಸೂಚಿಸುತ್ತದೆ. WID ಅಂದಾಜಿನ ಪ್ರಕಾರ ಮಧ್ಯಮ ಜನಸಂಖ್ಯೆಯ ಪಾಲು 1953-55 ರಲ್ಲಿ 41.5% ರಿಂದ 2022-23 ರಲ್ಲಿ ಕೇವಲ 27.3% ಕ್ಕೆ ಗಮನಾರ್ಹ ಇಳಿಕೆಯಾಗಿದೆ.

ಕೆಳಗಿನ ಹಂತದಲ್ಲಿರುವ 50% ಜನಸಂಖ್ಯೆಯ ಮನೆಗಳ ಸಮೀಕ್ಷೆಗಳು ಅದಾಯದ ಏರಿಳಿತದ ಪ್ರವೃತ್ತಿಯನ್ನು ತೋರಿಸುತ್ತವೆ. ಈ ವರ್ಗದ ಆದಾಯದ ಪಾಲು 15.8% (2020-21) ಮತ್ತು 25.5% (1961-65) ನಡುವೆ ಇರುತ್ತದೆ ಮತ್ತು ಕೊರೋನ ಅವಧಿಯ ನಂತರ ಚೇತರಿಕೆಯಾಗಿ 22.8% ನಲ್ಲಿ ನಿಂತಿದೆ.

ತುಲನಾತ್ಮಕ ಅಂದಾಜುಗಳು ಭಾರತೀಯ ಮತ್ತು ಜಾಗತಿಕ ಸಮೀಕ್ಷೆಗಳ ನಡುವಿನ ಅಸಮಾನತೆಯನ್ನು ತೋರಿಸುತ್ತವೆಯಾದರೂ, ಸಮಾಜದ ಅತ್ಯಂತ ಕೆಳ ಹಂತದಲ್ಲಿರುವ 10% ಜನರು ಹೆಚ್ಚು ಆದಾಯ ಗಳಿಸಲು ನಿರಂತರ ಹೋಡಾಟ ಮಾಡುತ್ತಿದ್ದಾರೆ.

ಸಿಂಧೂ ನಾಗರೀಕತೆಯ ಲಿಪಿಯನ್ನು ಓದಿದವರಿಗೆ ತಮಿಳುನಾಡು ಸರ್ಕಾರದಿಂದ 8.5 ಕೋಟಿ ಬಹುಮಾನ!
ಸಿಂಧೂ ಕಣಿವೆ ನಾಗರಿಕತೆಯ ಲಿಪಿಯನ್ನು ಓದುವುದರಲ್ಲಿ ಯಶಸ್ವಿಯಾಗುವ ಯಾವುದೇ ತಜ್ಞ ಅಥವಾ ಸಂಸ್ಥೆಗೆ 8.5 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ತಮಿಳುನಾಡು ಸರ್ಕಾರ ಭಾನುವಾರ ಘೋಷಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.

“ಒಂದೊಮ್ಮೆ ಪ್ರವರ್ಧಮಾನದಲ್ಲಿದ್ದ ಸಿಂಧೂ ಕಣಿವೆ ನಾಗರಿಕತೆಯ ಲಿಪಿಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. 100 ವರ್ಷಗಳ ನಂತರವೂ ಇದು ನಿಗೂಢವಾಗಿಯೇ ಉಳಿದಿದೆ,” ಎಂದು ಇಂಗ್ಲಿಷ್ ಪುರಾತತ್ವಶಾಸ್ತ್ರಜ್ಞ ಜಾನ್ ಮಾರ್ಷಲ್ ಅವರ ಸಿಂಧೂ ನಾಗರಿಕತೆಯ ಆವಿಷ್ಕಾರದ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದರು.

ಸಿಂಧೂ ಕಣಿವೆಯು ಪ್ರಪಂಚದ ಆರಂಭಿಕ ನಾಗರಿಕತೆಗಳಲ್ಲಿ ಒಂದಾಗಿತ್ತು. ಇದು ಆಧುನಿಕ ಪಾಕಿಸ್ತಾನ ಮತ್ತು ಉತ್ತರ ಭಾರತದ ಪ್ರದೇಶದಲ್ಲಿ ಸುಮಾರು 5,000 ವರ್ಷಗಳ ಹಿಂದೆ ಪ್ರಾರಂಭವಾಯಿತು. ಕಣಿವೆಯಲ್ಲಿ 1,400 ಕ್ಕೂ ಹೆಚ್ಚು ಪಟ್ಟಣಗಳು ​​ಮತ್ತು ನಗರಗಳು ಇದ್ದವು. ಇದರ ದೊಡ್ಡ ಪಟ್ಟಣಗಳೆಂದರೆ ಹರಪ್ಪಾ ಮತ್ತು ಮೊಹೆಂಜೋದಾರೋ. ಈ ನಗರಗಳಲ್ಲಿ ಸುಮಾರು 80,000 ಜನರು ವಾಸಿಸುತ್ತಿದ್ದಾರೆಂದು ನಂಬಲಾಗಿದೆ.

ನಾಗರಿಕತೆಯನ್ನು ಮೊದಲು 1921 ರಲ್ಲಿ ಗುರುತಿಸಲಾಯಿತು . ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಮಹಾನಿರ್ದೇಶಕರಾಗಿದ್ದ ಮಾರ್ಷಲ್, ಹರಪ್ಪಾ ಮತ್ತು ಮೊಹೆಂಜೋದಾರೊವನ್ನು ಬಹಿರಂಗಪಡಿಸಿದ ದೊಡ್ಡ ಪ್ರಮಾಣದ ಉತ್ಖನನಗಳಿಗೆ ಕಾರಣರಾಗಿದ್ದರು, 1924 ರಲ್ಲಿ ಇವುಗಳ ಆವಿಷ್ಕಾರವನ್ನು ಘೋಷಿಸಿದರು .

ಹಾಗಿದ್ದೂ, ಸಿಂಧೂ ನಾಗರಿಕತೆ ಬಳಸಿದ ಸಿಂಧೂ ಲಿಪಿಯನ್ನು ಅರ್ಥೈಸಲಾಗಿಲ್ಲ. ಕಳೆದ ಶತಮಾನದಲ್ಲಿ, ಪುರಾತತ್ವಶಾಸ್ತ್ರಜ್ಞರು, ಶಿಲಾಶಾಸನಶಾಸ್ತ್ರಜ್ಞರು, ಭಾಷಾಶಾಸ್ತ್ರಜ್ಞರು, ಇತಿಹಾಸಕಾರರು, ವಿಜ್ಞಾನಿಗಳು ಮತ್ತು ಅನೇಕರು ಲಿಪಿಯನ್ನು ಅರ್ಥೈಸಲು ನೂರಕ್ಕೂ ಹೆಚ್ಚು ಪ್ರಯತ್ನಗಳನ್ನು ಮಾಡಿದ್ದಾರೆ.

ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ ಎಂಬ ಸುಳ್ಳು!

ಸೀಲ್ ಕಲ್ಲುಗಳು, ಟೆರಾಕೋಟಾ ಟಾಬ್ಲೆಟ್‌ಗಳು ಮತ್ತು ಕೆಲವು ಲೋಹದ ವಸ್ತುಗಳ ಮೇಲೆ ನಾಗರೀಕತೆಯ ಶಾಸನಗಳು ಕಂಡುಬಂದಿವೆ. ಈ ಶಾಸನಗಳು ಸಾಮಾನ್ಯವಾಗಿ ಚಿತ್ರಸಂಕೇತಗಳನ್ನು ಒಳಗೊಂಡಿರುತ್ತವೆ, ಪ್ರಾಣಿಗಳು ಅಥವಾ ಮನುಷ್ಯರ ಚಿತ್ರಗಳಿವೆ.

ಸಿಂಧೂ ಕಣಿವೆ ನಾಗರಿಕತೆಯ ನಿವಾಸಿಗಳು ತಮಿಳರ ಪೂರ್ವಜರು ಎಂದು ತಮಿಳುನಾಡಿನ ದ್ರಾವಿಡ ಚಳವಳಿಯ ರಾಜಕಾರಣಿಗಳು ಬಹಳ ಹಿಂದಿನಿಂದಲೂ ಹೇಳಿಕೊಂಡಿದ್ದಾರೆ. ಸಿಂಧೂ ಲಿಪಿಯು ಆರಂಭಿಕ ದ್ರಾವಿಡ ಭಾಷೆಯನ್ನು ಪ್ರತಿನಿಧಿಸಲು ಬಳಸಲಾಗುವ ಸಂಕೇತಗಳ ಗುಂಪಾಗಿದೆ ಎಂದು ಹಲವಾರು ತಜ್ಞರು ಊಹಿಸಿದ್ದಾರೆ.

ಈ ಸಂಬಂಧವನ್ನು ಸಾಬೀತು ಮಾಡಲು ಸಾಕಷ್ಟು ಪುರಾತತ್ವ ಮತ್ತು ಆನುವಂಶಿಕ ಪುರಾವೆಗಳು ಇಲ್ಲಿಯವರೆಗೆ ಸಿಕ್ಕಿಲ್ಲ.

“ಪುರಾತತ್ವಶಾಸ್ತ್ರಜ್ಞರು, ತಮಿಳು ಕಂಪ್ಯೂಟರ್ ಸಾಫ್ಟ್‌ವೇರ್ ತಜ್ಞರು ಮತ್ತು ಪ್ರಪಂಚದಾದ್ಯಂತದ ಕಂಪ್ಯೂಟರ್ ತಜ್ಞರು ಲಿಪಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಂಶೋಧನೆಯನ್ನು ಪ್ರೋತ್ಸಾಹಿಸಲು, ರಾಜ್ಯ ಸರ್ಕಾರವು 8.5 ಕೋಟಿ ರುಪಾಯಿ ನೀಡುತ್ತದೆ,” ಎಂದು ಸ್ಟಾಲಿನ್ ಭಾನುವಾರ ಹೇಳಿದರು.

ಹೆಚ್ಚುವರಿಯಾಗಿ, ಸಿಂಧೂ ಕಣಿವೆ ನಾಗರಿಕತೆಯ ಕುರಿತು ಸಂಶೋಧನೆ ಮುಂದುವರಿಸಲು ಪುರಾತತ್ವಶಾಸ್ತ್ರಜ್ಞ ಮತ್ತು ಶಾಸನಶಾಸ್ತ್ರಜ್ಞ ಐರಾವತಂ ಮಹಾದೇವನ್ ಅವರ ಹೆಸರಿನಲ್ಲಿ ಪೀಠವನ್ನು ಸ್ಥಾಪಿಸಲು ರಾಜ್ಯ ಸರ್ಕಾರವು 2 ಕೋಟಿ ರೂಪಾಯಿ ಅನುದಾನವನ್ನು ನೀಡುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ . ಮಹಾದೇವನ್ ಸಿಂಧೂ ಲಿಪಿಯಲ್ಲಿ ಸಂಶೋಧನೆ ನಡೆಸಿದ್ದರು.

ರಾಜ್ಯ ಪುರಾತತ್ವ ಇಲಾಖೆ ಮತ್ತು ಸಿಂಧೂ ಸಂಶೋಧನಾ ಕೇಂದ್ರವು ಚೆನ್ನೈನ ರೋಜಾ ಮುತ್ತಯ್ಯ ಗ್ರಂಥಾಲಯದಲ್ಲಿ ಸಂಶೋಧನೆ ನಡೆಸಲಿದೆ.

ಪುರಾತತ್ವ, ಶಿಲಾಶಾಸನ ಮತ್ತು ನಾಣ್ಯಶಾಸ್ತ್ರದಲ್ಲಿ ಇಬ್ಬರು ವಿದ್ವಾಂಸರಿಗೆ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸುವುದಾಗಿ ಸ್ಟಾಲಿನ್ ಘೋಷಿಸಿದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮುಖ್ಯಮಂತ್ರಿಗಳು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಪುಸ್ತಕವನ್ನು ಬಿಡುಗಡೆ ಮಾಡಿದರು , ಇದು ತಮಿಳುನಾಡಿನಾದ್ಯಂತ ಉತ್ಖನನ ಸ್ಥಳಗಳಿಂದ ಪತ್ತೆಯಾದ 60% ಚಿಹ್ನೆಗಳು ಮತ್ತು 90% ರೇಖಾಚಿತ್ರಗಳು ಸಿಂಧೂ ಕಣಿವೆಯ ನಾಗರಿಕತೆ, ಹಿಂದೂಸ್ತಾನ್‌ನಲ್ಲಿ ಕಂಡುಬರುವ ಹೋಲಿಕೆಗಳನ್ನು ಹೊಂದಿವೆ ಎಂದು ಕಂಡುಹಿಡಿದಿದೆ.

ಜಾನ್‌ ಮಾರ್ಷಲ್ ಅವರ ನಾಗರಿಕತೆಯ ಆವಿಷ್ಕಾರವು ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಎಂದು ಸ್ಟಾಲಿನ್ ತಮ್ಮ ಭಾಷಣದಲ್ಲಿ ಹೇಳಿದರು.

“ಆರ್ಯನ್ ಮತ್ತು ಸಂಸ್ಕೃತವು ಭಾರತದ ಮೂಲ ಎಂದು ಹಲವರು ವಾದಿಸುತ್ತಿದ್ದರು. ಜಾನ್ ಮಾರ್ಷಲ್ ಅವರ ಆವಿಷ್ಕಾರವು ಗ್ರಹಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿತು.” ಎಂದು ಅವರು ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ.

“ಸಿಂಧೂ ಕಣಿವೆ ನಾಗರಿಕತೆಯು ಆರ್ಯ ನಾಗರಿಕತೆಗಿಂತ ಹಿಂದಿನದು ಮತ್ತು ಸಿಂಧೂ ಕಣಿವೆಯಲ್ಲಿ ಮಾತನಾಡುವ ಭಾಷೆ ದ್ರಾವಿಡವಾಗಿರಬಹುದು ಎಂಬ ಅವರ ವಾದವು ಮತ್ತಷ್ಟು ಬಲಗೊಂಡಿದೆ.”

ಸಿಂಧೂ ಕಣಿವೆ ನಾಗರಿಕತೆಯ ಮೂಲಗಳು ಮತ್ತು ಆರ್ಯರ ವಲಸೆ ಸಿದ್ಧಾಂತವು ಭಾರತದಲ್ಲಿ ಆಳವಾದ ವಿವಾದಾತ್ಮಕ ವಿಷಯಗಳಾಗಿವೆ.

ಆರ್ಯರ ವಲಸೆಯ ಸಿದ್ಧಾಂತವನ್ನು ಮೊದಲು ಪಾಶ್ಚಿಮಾತ್ಯ ವಿದ್ವಾಂಸರು ವಸಾಹತುಶಾಹಿ ಯುಗದಲ್ಲಿ ಮಂಡಿಸಿದರು. ಐರೋಪ್ಯ ಅಥವಾ ಮಧ್ಯ ಏಷ್ಯಾದ “ಆರ್ಯನ್ನರ” ಜನಾಂಗವು ಭಾರತೀಯ ಉಪಖಂಡಕ್ಕೆ ಬಂದು, ಸ್ಥಳೀಯ ಸಿಂಧೂ ಕಣಿವೆಯ ನಾಗರಿಕತೆಯನ್ನು ಸ್ಥಳಾಂತರಿಸಿತು ಎಂದು ಸಿದ್ಧಾಂತವು ಪ್ರತಿಪಾದಿಸಲಾಗಿತ್ತು.

ಕೆಲವು ಇತಿಹಾಸಕಾರರು ಆರ್ಯರ ವಲಸೆಯ ಸಿದ್ಧಾಂತವನ್ನು ಬೆಂಬಲಿಸುತ್ತಾರೆ ಮತ್ತು ಸಿಂಧೂ ಕಣಿವೆಯು ವೇದಪೂರ್ವವಾಗಿತ್ತು ಎಂದು ವಾದಿಸುತ್ತಾರೆ, ಇತರರು ಆರ್ಯರು ಭಾರತದಲ್ಲೇ ಹುಟ್ಟಿದರು ಎಂದು ವಾದಿಸುತ್ತಾರೆ.

ಭಾನುವಾರ, ಸಿಂಧೂ ಕಣಿವೆಯಲ್ಲಿ ಗೂಳಿಗಳಿವೆ ಎಂಬ ಬಗ್ಗೆ ಸ್ಟಾಲಿನ್ ಗಮನ ಸೆಳೆದರು. “ಗೂಳಿಗಳು ದ್ರಾವಿಡ ಚಿಹ್ನೆಗಳು” ಎಂದು ಅವರು ಹೇಳಿದರು. “ಎತ್ತುಗಳು ಸಿಂಧೂ ಕಣಿವೆಯಿಂದ ತಮಿಳುನಾಡಿನ ಅಲಂಗನಲ್ಲೂರ್‌ಗೆ [ಜಲ್ಲಿಕಟ್ಟು ನಡೆಯುವ ಮಧುರೈ ಬಳಿಯ ಗ್ರಾಮ] ವರೆಗೆ ಹರಡಿವೆ. ಪುರಾತನ ತಮಿಳು ಸಾಹಿತ್ಯವು ಗೂಳಿಗಳನ್ನು ಪಳಗಿಸುವ ಬಗ್ಗೆ ಮಾತನಾಡುತ್ತದೆ ಮತ್ತು ಅದನ್ನು ‘ಕೊಲ್ಲೆರು ತಳುವುತಲ್’ ಎಂದು ಕರೆಯಲಾಗುತ್ತದೆ. “ಸಿಂಧೂ ಕಣಿವೆಯ ಚಿಹ್ನೆಗಳಲ್ಲಿಯೂ ಸಹ ಅದನ್ನು ಪಳಗಿಸಲು ಪ್ರಯತ್ನಿಸಿದ ಯುವಕರನ್ನು ಎತ್ತುವ ಗೂಳಿಗಳ ಚಿತ್ರಗಳಿವೆ ಎಂದು ಅವರು ಹೇಳಿದರು.

ಚೊಚ್ಚಲ ಅಥವಾ ಗಂಡಾಂತರ ಗರ್ಭಿಣಿಯರ ನಿರಂತರ ತಪಾಸಣೆಯಾಗಬೇಕು: ಡಾ. ಯಲ್ಲಾ ರಮೇಶಬಾಬು
ಬಳ್ಳಾರಿ,ಡಿ.18: ಚೊಚ್ಚಲ ಅಥವಾ ಗಂಡಾಂತರ ಗರ್ಭಿಣಿಯರು ಹತ್ತಿರದ ಸರಕಾರಿ ಆಸ್ಪತ್ರೆಗಳಿಗೆ ಹೋಗಿ ನಿರಂತರ ತಪಾಸಣೆ ಮಾಡಿಸಬೇಕು ಮತ್ತು ತಪ್ಪದೇ ತಾಯಿ ಕಾರ್ಡ್ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ಹೇಳಿದರು.
ಬಳ್ಳಾರಿ ತಾಲ್ಲೂಕಿನ ವೈ.ಕಗ್ಗಲ್ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಮಂದಿರಕ್ಕೆ ಭೇಟಿ ನೀಡಿ ಗ್ರಾಮದಲ್ಲಿಯ ಗರ್ಭೀಣಿಯರ ಆರೋಗ್ಯ ವಿಚಾರಿಸಿ ಅವರ ಪಾಲಕರೊಂದಿಗೆ ಮಾತನಾಡಿದರು.
ಮನೆಯಲ್ಲಿ ಮಗಳಾಗಲಿ ಅಥವಾ ಸೊಸೆಯಾಗಲಿ ಗರ್ಭಿಣಿಯೆಂದು ತಿಳಿದ ದಿನದಿಂದಲೇ ನಿರಂತರವಾಗಿ ವೈದ್ಯರಿಂದ ಮಾಡಿಸಬೇಕಾದ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆ ನೀಡುವ ಅವಶ್ಯಕತೆ ಇದ್ದಲ್ಲಿ ಕುಟುಂಬದ ಸದಸ್ಯರು ವೈಯಕ್ತಿಕ ಕೆಲಸಗಳ ಕಾರಣದಿಂದ ತಡ ಮಾಡಬಾರದು. ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ವೈದ್ಯರ ಸೂಚನೆಯಂತೆ ಅವರ ನಿರಂತರ ನಿಗಾವಣೆ, ರಕ್ತದೊತ್ತಡ ಪರೀಕ್ಷೆ ಕೈಗೊಂಡ ನಂತರ ಕಂಡುಬರುವ ವ್ಯತ್ಯಾಸ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಶೀಲಿಸಿ ಅಗತ್ಯವೆನಿಸಿದಲ್ಲಿ ತಜ್ಞ ವೈದ್ಯರ ಬಳಿ ತಕ್ಷಣವೇ ತೆರಳಬೇಕು ಎಂದರು.
ರಕ್ತಹೀನತೆ ಕಂಡುಬಂದಲ್ಲಿ ಸ್ಥಳೀಯವಾಗಿ (ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ) ನೀಡುವ ಚಿಕಿತ್ಸೆಯಿಂದ ಸುಧಾರಣೆ ಹೊಂದಬಹುದು. ಅಗತ್ಯವಿದ್ದಲ್ಲಿ ಸ್ಕಾö್ಯನ್ ಮಾಡಿಸಬೇಕು. ಮೊದಲ ಹೆರಿಗೆ ಶಸ್ತçಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನೀರೊಧ್ ಕುರಿತು ಆರೋಗ್ಯ ಶಿಕ್ಷಣ ಹೊಂದಬೇಕು ಮರೆಯಬಾರದು.
ಅತಿ ಮುಖ್ಯವಾಗಿ ಗರ್ಭಿಣಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸ್ಸು ಮಾಡುವಾಗ 108 ಆರೋಗ್ಯ ಕವಚ ಬರುವ ಸಮಯ ತಡವಾಗುವ ಸಾಧ್ಯತೆ ಇದ್ದಲ್ಲಿ ತಕ್ಷಣ ವೈದ್ಯಾಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಬೇಕು. ಹೆರಿಗೆ ವಿಷಯವನ್ನು ಆದ್ಯತೆಯಾಗಿಟ್ಟುಕೊಂಡು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮನ್ವಯ ಸಭೆ ಕೈಗೊಂಡು ತಮ್ಮ ವ್ಯಾಪ್ತಿಯ ಗರ್ಭಿಣಿಯರ ಆರೈಕೆ ಕುರಿತು ನಿಗಾವಹಿಸಲು ಕ್ರಮವಹಿಸಿ ಎಂದು ತಿಳಿಸಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಹಬ್ಬ, ಜಾತ್ರೆ, ಊರ ದೇವರ ಪçಜೆ ಮುಂತಾದ ಆಚರಣೆಯ ಮಾಡುವಾಗ ಗರ್ಭಿಣಿಯ ಸಕಾಲದಲ್ಲಿ ಆಗಬೇಕಾದ ತಪಾಸಣೆಗೆ ಅಡಚಣೆಯಾಗದಂತೆ ಪಾಲಕರು ಮೊದಲು ಆದ್ಯತೆ ನೀಡಬೇಕು. ವೈದ್ಯಾಧಿಕಾರಿಗಳು ತಮ್ಮ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗಂಡಾಂತರ ಗರ್ಭಿಣಿಯರ ಮನೆ ಭೇಟಿ ಹಾಗೂ ಆರೋಗ್ಯದ ಸ್ಥಿತಿ ಕುರಿತು ಪ್ರತಿ ವಾರ ಚರ್ಚಿಸಬೇಕು ಎಂದು ಹೇಳಿದರು.
ಧಾರ್ಮಿಕ ಸ್ಥಳಗಳಿಗೆ ಗರ್ಭಿಣಿಯರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪದೇ-ಪದೇ ಭೇಟಿ ನೀಡುತ್ತಿದ್ದರೆ ಅಂತ ಧಾರ್ಮಿಕ ಕೇಂದ್ರಗಳ ಸ್ವಾಮೀಜಿಯರನ್ನು ಭೇಟಿ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸುವಂತೆ ವಿನಂತಿಸಬೇಕು. ಆಕಸ್ಮಿಕ ಘಟನೆಗಳಲ್ಲಿ ಗರ್ಭಿಣಿಯರ ಆರೈಕೆಗೆ ಯಾರು ಇಲ್ಲದಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ತಿಳಿಸಿ ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು ಎಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆರಿಗೆಗೆ ಗರ್ಭಿಣಿ ಬಂದಾಗ ಅಗತ್ಯ ಪರೀಕ್ಷೆ ಮೂಲಕ ಹೆರಿಗೆ ನಿರ್ವಹಿಲು ಸಾಧ್ಯತೆಯಾಗಬೇಕು. ಇಲ್ಲದಿದ್ದಲ್ಲಿ ಗಂಭೀರತೆ ಕಂಡುಬಂದರೆ ತಡ ಮಾಡದೇ ಸಿಬ್ಬಂದಿ ಸಹಿತ ಶಿಫಾರಸ್ಸಿಗೆ ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಕಾವ್ಯಶ್ರೀ, ಡಿಎನ್‌ಓ ಗಿರೀಶ್, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಚಂದ್ರಕಲಾ, ಸಮುದಾಯ ಆರೋಗ್ಯಾಧಿಕಾರಿ ಮೊನಿಕಾ, ಪ್ರಾಥಮಿಕ ಸುರಕ್ಷಾಧಿಕಾರಿ ನಾಗಮ್ಮ, ಆಶಾ ಕಾರ್ಯಕರ್ತೆಯರಾದ ಸಿದ್ದಮ್ಮ, ರೇಣುಕಾ, ಕಸ್ತೂರಿ ಸೇರಿದಂತೆ ತಾಯಂದಿರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.