kanhaiya kumar – Peepal Media

ಸದಾ ರಾಮ ನಾಮ ಜಪಿಸುವ ಬಿಜೆಪಿ ಹರಡುತ್ತಿರುವುದು ನಾಥೂರಾಮ ಗೋಡ್ಸೆಯ ಅಜೆಂಡಾವನ್ನು: ಕನ್ಹಯ್ಯಾ ಕುಮಾರ್
ಬಿಜೆಪಿ ರಾಮನ ಹೆಸರಿನಲ್ಲಿ ಕೋಮುವಾದಿ ಅಜೆಂಡಾವನ್ನು ಹರಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್ ಆರೋಪಿಸಿದ್ದಾರೆ.

ಬಿಜೆಪಿ ರಾಮನ ಹೆಸರನ್ನು ಹೇಳಿಕೊಂಡು ನಾಥೂರಾಂ ಗೋಡ್ಸೆಯ ಕೋಮುವಾದಿ ಅಜೆಂಡಾವನ್ನು ಮುಂದಕ್ಕೆ ಸಾಗಿಸುತ್ತಿದೆ ಮತ್ತು ವಿಭಜನೆಯ ರಾಜಕೀಯ ತಂತ್ರವನ್ನು ಆಡುತ್ತಿದೆ. ಗಾಂಧಿ-ನೆಹರೂ ಕುಟುಂಬದ ಕೊಡುಗೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ಹಿಂದೂ ಧರ್ಮದ ಶ್ರೇಷ್ಠತೆಗೆ ಕಳಂಕ ತರುತ್ತಿದೆ

ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಕುಟುಂಬವಾದಕ್ಕಿಂತ ವ್ಯಕ್ತಿವಾದವು ಹೆಚ್ಚು ಅಪಾಯಕಾರಿ, ಇದರಲ್ಲಿ ಒಬ್ಬ ವ್ಯಕ್ತಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ ಎಂದು ಕನ್ಹಯ್ಯಾ ಕುಮಾರ್ ಹೇಳಿದ್ದಾರೆ. ಹಿಂದೂ ಧರ್ಮದ ಶ್ರೇಷ್ಠತೆಯನ್ನು ಕುಗ್ಗಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಬಿಜೆಪಿಗೆ ಲಾಭವಾಗುತ್ತಿದೆ ಎಂಬ ಪ್ರಶ್ನೆಗೆ, “ಕಾಂಗ್ರೆಸ್‌ಗೆ ಏಕೆ ಆ ಕುರಿತು ತಲೆ ಕೆಡಿಸಿಕೊಳ್ಳಬೇಕು? ದೇಶದಲ್ಲಿ ರಾಮನ ಅಲೆ ಇದ್ದರೆ ತಪ್ಪಿಲ್ಲ ಆದರೆ ನಾಥೂರಾಮನ ಅಲೆಯಿದ್ದರೆ ತಪ್ಪು” ಎಂದು ಹೇಳಿದರು.

ರಾಮನ ಹೆಸರು ಹೇಳಿಕೊಂಡು ನಾಥೂರಾಮ್‌ ಗೋಡ್ಸೆಯ ಕೆಲಸ ಮಾಡುತ್ತಾರೆ

ರಾಮನನ್ನು ನಂಬಿದ ಜನರನ್ನು ವಂಚಿಸುವಲ್ಲಿ ಬಿಜೆಪಿ ನಿರತವಾಗಿದೆ, ಅದಕ್ಕಾಗಿಯೇ ಅವರು ರಾಮನ ಹೆಸರನ್ನು ತೆಗೆದುಕೊಳ್ಳುತ್ತಾರೆ ಆದರೆ ನಾಥುರಾಮ್ ಗೋಡ್ಸೆಯ ಕೆಲಸವನ್ನು ಮಾಡುತ್ತಾರೆ, ಇದು ದೇಶದ ಇತಿಹಾಸ, ಸಂಸ್ಕೃತಿ ಮತ್ತು ಭವಿಷ್ಯದ ವಿರುದ್ಧವಾಗಿದೆ ಎಂದು ಕನ್ಹಯ್ಯಾ ಕುಮಾರ್ ಹೇಳಿದ್ದಾರೆ. ಕನ್ಹಯ್ಯಾ ಕುಮಾರ್, “ರಾಮನನ್ನು ಕೇವಲ ಒಂದು ಸ್ಥಳಕ್ಕೆ ಸೀಮಿತಗೊಳಿಸಲಾಗದು ರಾಮ ಎಲ್ಲೆಡೆಯೂ ಇದ್ದಾನೆ, ಇತರ ಧರ್ಮಗಳಲ್ಲಿ ನಿರ್ದಿಷ್ಟ ಸ್ಥಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ, ಆದರೆ ಹಿಂದೂ ಧರ್ಮದಲ್ಲಿ ಎಲ್ಲಾ ಸ್ಥಳಗಳು ಮತ್ತು ದೇವರುಗಳು ಮುಖ್ಯವಾದವು.” ಎಂದು ಅವರು ಹೇಳಿದರು

ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್, “ಪ್ರಸ್ತುತ ಕಾಲದಲ್ಲಿ, ರಾಜಕೀಯ ಲಾಭಕ್ಕಾಗಿ ಹಿಂದೂ ಧರ್ಮವನ್ನು ನಂಬುವ ಜನರಿಗೆ ಮೋಸ ಮಾಡಲಾಗುತ್ತಿದೆ, ರಾಮನ ಹೆಸರು ತ್ರೇತಾಯುಗದಿಂದಲೂ ಇದೆ. ಮುಂದೆ ಬಿಜೆಪಿ ಮುಗಿದು ಹೋದರೂ ರಾಮ ಇರುತ್ತಾನೆ” ಎಂದು ಅವರು ಹೇಳಿದರು.

ಕನ್ನಯ್ಯ ಕುಮಾರ್‌ NSUI ಉಸ್ತುವಾರಿಯಾಗಿ ನೇಮಕ
ಪಾಟ್ನಾ: ಕನ್ಹಯ್ಯಾ ಕುಮಾರ್ ಅವರಿಗೆ ಕಾಂಗ್ರೆಸ್ ದೊಡ್ಡ ಜವಾಬ್ದಾರಿ ನೀಡಿದೆ. ಕಾಂಗ್ರೆಸ್ ಕನ್ಹಯ್ಯಾ ಕುಮಾರ್ ಅವರನ್ನು ಪಕ್ಷದ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಉಸ್ತುವಾರಿಯನ್ನಾಗಿ ಮಾಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಕನ್ಹಯ್ಯಾ ಕುಮಾರ್ ಅವರನ್ನು ಎನ್‌ಎಸ್‌ಯುಐ ಉಸ್ತುವಾರಿ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಗುರುವಾರದಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತಕ್ಷಣವೇ ಜಾರಿಗೆ ಬರುವಂತೆ ಕನ್ಹಯ್ಯಾ ಕುಮಾರ್ ಅವರನ್ನು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಉಸ್ತುವಾರಿಯನ್ನಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ.

ಬಿಹಾರದ ಬೇಗುಸರಾಯ್ ಜಿಲ್ಲೆಯ ಕನ್ಹಯ್ಯಾ ಕುಮಾರ್ ಅವರಿಗೆ ದೆಹಲಿ ಅಥವಾ ಬಿಹಾರದ ರಾಜ್ಯ ಉಸ್ತುವಾರಿಯಂತಹ ಕೆಲವು ಪ್ರಮುಖ ಹುದ್ದೆಯ ಜವಾಬ್ದಾರಿಯನ್ನು ಪಕ್ಷವು ನೀಡಬಹುದು ಎಂಬ ಚರ್ಚೆಗಳು ನಡೆಯುತ್ತಿತ್ತು. ಆದರೆ, ಕನ್ಹಯ್ಯ ಕುಮಾರ್ ಅವರ ರಾಜಕೀಯ ಅನುಭವವನ್ನು ಪರಿಗಣಿಸಿ, ಪಕ್ಷದ ಉನ್ನತ ನಾಯಕರು ಇದಕ್ಕೆ ಒಲವು ತೋರಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಎನ್ ಎಸ್ ಯುಐ ಉಸ್ತುವಾರಿಯನ್ನಾಗಿ ಮಾಡಲಾಗಿದೆ.

ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಿದ ಅವರ ಅನುಭವವನ್ನು ಪರಿಗಣಿಸಿ ಪಕ್ಷ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಜೆಎನ್‌ಯುನಲ್ಲಿ ಓದುತ್ತಿರುವ ಸಮಯದಲ್ಲಿ ವಿದ್ಯಾರ್ಥಿ ರಾಜಕೀಯ ಕಣಕ್ಕೆ ಅವರು ಬಂದಿದ್ದರು. ಜೆಎನ್‌ಯುನಲ್ಲಿ ಕನ್ಹಯ್ಯಾ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಅಧ್ಯಕ್ಷರಾಗಿದ್ದರು.