Kannada textbook – Peepal Media

ಪಠ್ಯಪುಸ್ತಕ ಪರಿಷ್ಕರಣೆ ; ಸಾವರ್ಕರ್, ಹೆಡಗೇವಾರ್, ಸೂಲಿಬೆಲೆ ಪಾಠಗಳಿಗೆ ಗೇಟ್ ಪಾಸ್
ಹಲವಷ್ಟು ವಿವಾದಕ್ಕೆ ಕಾರಣವಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರ ಅಂತೂ ಇಂದು ಒಂದು ತಾತ್ವಿಕ ಹಂತಕ್ಕೆ ಬಂದು ನಿಂತಿದೆ. ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತನ್ನ ಸ್ಪಷ್ಟ ನಿಲುವನ್ನು ಹೊರಹಾಕಿದೆ. ಅದರಂತೆ ಇನ್ನು 15 ದಿನಗಳಲ್ಲಿ ಪಠ್ಯ ಪರಿಷ್ಕರಣೆಯ ತಜ್ಞರ ಸಮಿತಿ ರಚಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವಷ್ಟು ಮಹತ್ವದ ನಿರ್ಧಾರಕ್ಕೆ ಬಂದಿದೆ. ಅದರಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿದ್ದು ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ.

ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದನ್ನು ಈಗ ಸ್ವತಃ ಶಿಕ್ಷಣ ಸಚಿವರೇ ಕನ್ಫರ್ಮ್ ಮಾಡಿದ್ದಾರೆ. ಮಧು ಬಂಗಾರಪ್ಪ ಸ್ಪಷ್ಟಪಡಿಸಿದಂತೆ ಬಾರೀ ವಿವಾದಕ್ಕೆ ಕಾರಣವಾಗಿದ್ದ RSS ಸರಸಂಚಾಲಕ ಹೆಡ್ಗೇವಾರ್ ಅವರ ಕುರಿತಾದ ಪಠ್ರಕ್ಕೆ ತುರ್ತು ಬ್ರೇಕ್ ಹಾಕಿ, ಕಳೆದ ಬಾರಿಯ ಪರಿಷ್ಕರಣೆಯಲ್ಲಿ ತಗೆದು ಹಾಕಿದ್ದ ಅಂಬೇಡ್ಕರ್ ಅವರ ಪದ್ಯವನ್ನು ಪುಸ್ತಕಕ್ಕೆ ಸೇರಿಸುವ ನಿರ್ಧಾರಕ್ಕೆ ಬರಲಾಗಿದೆ. ಹಾಗೆಯೇ ಕಳೆದ ಬಾರಿ ಪಠ್ಯಪುಸ್ತಕದಿಂದ ತಗೆಯಲಾಗಿದ್ದ ಸಾವಿತ್ರಿಬಾಯಿ ಫುಲೆ ಕುರಿತಾದ ಪಠ್ಯ, ಅಂಬೇಡ್ಕರ್ ಮತ್ತು ನೆಹರೂ ಕುರಿತಾದ ಪಠ್ಯ ಕೂಡಾ ಮರು ಸೇರ್ಪಡೆ ಆಗಲಿದೆ.

ಅದೇ ರೀತಿ RSS ಮೂಲದ ಕೆ.ಬಿ. ಹೆಡ್ಗೆವಾರ್, ಗಾಂಧಿ ಹತ್ಯೆ ಪ್ರಕರಣದಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬಂದಿದ್ದ ವಿನಾಯಕ ದಾಮೋದರ ಸಾವರ್ಕರ್ ಮತ್ತು ವಿವಾದಿತ ಬಾಷಣಕಾರ ಚಕ್ರವರ್ತಿ ಸೂಲಿಬೆಲೆ ಪಠ್ಯಗಳು ಮಕ್ಕಳ ಪುಸ್ತಕದಿಂದ ಹೊರಬೀಳಲಿವೆ. ಇದರ ಜೊತೆಗೆ ಮುಂದಿನ ಕೆಲವೇ ದಿನಗಳಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಲು ಮಹತ್ವದ ನಿರ್ಧಾರ ತಗೆದುಕೊಳ್ಳಲಾಗುವುದು. ಆ ಮೂಲಕ ವಿವಾದಿತ ವ್ಯಕ್ತಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಯಾದ ಬಹುತೇಕ ಪಠ್ಯಕ್ಕೆ ಬ್ರೇಕ್ ಬೀಳುವ ಮುನ್ಸೂಚನೆ ಸಿಕ್ಕಿದೆ.

ಪ್ರಮುಖವಾಗಿ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯದಲ್ಲಿ 6 ರಿಂದ 10 ನೇ ತರಗತಿ ವರೆಗೆ, ಒಂದು ಸಪ್ಲಿಮೆಂಟರಿ ಪುಸ್ತಕ ಕಳಿಸುವ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ತಗುಲುವ ವೆಚ್ಚ ಅಂದಾಜು 10 ಲಕ್ಷ. ಅದನ್ನು ತುರ್ತಾಗಿ ಎಲ್ಲಾ ಶಾಲೆಗಳಿಗೂ ಕಳಿಸುವ ಕೆಲಸ ಪ್ರಗತಿಯ ಹಂತದಲ್ಲಿದೆ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯ ಅಧ್ಯಕ್ಷತೆ ವಹಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿಯ ಕಡೆಯಿಂದ ಅಂದಾಜು 250 ಕೋಟಿ ವೆಚ್ಚ ತಗುಲಿತ್ತು. ಇದೀಗ ರಾಜ್ಯ ಸರ್ಕಾರ ಪಠ್ಯಪುಸ್ತಕವನ್ನು ತಾತ್ಕಾಲಿಕ ಪರಿಷ್ಕರಣೆ ಮಾಡಿದೆ. ಆದರೆ ಇದಕ್ಕೆಲ್ಲಾ ಹಿಂದಿನ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂಬುದು ಕಾಂಗ್ರೆಸ್ ಸರ್ಕಾರದ ಆರೋಪ. ಮುಖ್ಯವಾಗಿ ರೋಹಿತ್‌ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಲು ಹಲವರು ಒತ್ತಾಯ ಮಾಡಿದ್ದಾರೆ. ಇದರ ಜೊತೆ ಹಲವು ಜನಪರ ಹೋರಾಟಗಾರರ ಒತ್ತಾಯದಂತೆ ರೋಹಿತ್‌ ಚಕ್ರತೀರ್ಥ ಮತ್ತು ಸಮಿತಿ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿವೆ. ಅದರಂತೆ ಅವರ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬಹುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಹೊರಬಿದ್ದಿಲ್ಲ.

ರಾಜ್ಯದ ಸಾಹಿತಿಗಳು ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನು?
ವಿವಿಧ ಬೇಡಿಕೆಗಳ ಅಡಿಯಲ್ಲಿ ಸೋಮವಾರದ ವಿಚಾರವಾದಿಗಳು, ಸಾಹಿತಿಗಳು ಹಾಗೂ ಪ್ರಮುಖ ಜನಪರ ಸಂಘಟನೆಗಳ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೇ ವಿಚಾರವಾದಿಗಳು ಸಾಕಷ್ಟು ನಿರೀಕ್ಷೆಗಳನ್ನು ಈ ಸರ್ಕಾರದ ಮೇಲೆ ಇಟ್ಟಿದ್ದು, ಅವರು ತುರ್ತುಗತಿಯಲ್ಲಿ ತೋರಿಸಲು ಮನವಿ ಮಾಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದಂತಹ ಪ್ರಮುಖ ಜನವಿರೋಧಿ ನಿಲುವುಗಳನ್ನು ತಗೆದು ಹಾಕಿ, ಜನಪರವಾದ, ವೈಚಾರಿಕ ಹಿನ್ನೆಲೆಯ ನಡೆಯಲ್ಲಿ ಸರ್ಕಾರ ಮುನ್ನಡೆಯಬೇಕು ಎಂಬುದಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ವಿಶೇಷವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತಂದಂತಹ ಅಪಾಯಕಾರಿ ಯೋಜನೆಗಳು, ಬದಲಾವಣೆಗಳನ್ನು ಈ ಶೈಕ್ಷಣಿಕ ವರ್ಷದಲ್ಲೇ ಬದಲಾವಣೆ ತರಬೇಕು. ಇದು ಬೆಳೆಯುವ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಆಗಿರುವ ದೊಡ್ಡ ಅನ್ಯಾಯ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿಯಾದ ಚಿಂತಕರು ವ್ಯಕ್ತಪಡಿಸಿದ ಅಭಿಪ್ರಾಯ ಈ ಕೆಳಗಿನಂತಿದೆ.
* ಹಿಂದಿನ ಸರ್ಕಾರ ಕೋಮುವಾದವನ್ನು ನಿರ್ಲಜ್ಜ ರೀತಿಯಲ್ಲಿ ಜಾರಿಗೆ ತರಲು ಮುಂದಾಗಿದ್ದು ನಿಜಕ್ಕೂ ಭಯ ಹುಟ್ಟಿಸುವಂತಿತ್ತು. ಆದರೆ ಇವರ ಪ್ರೊಪಗಾಂಡಾ ಅಜೆಂಡಾದಿಂದ ರೋಸಿ ಹೋದ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದರು.
* ಈ ನಿಟ್ಟಿನಲ್ಲಿ ಸಂವಿಧಾನ ವಿರೋಧಿ, ಕೋಮುವಾದಿ ಪಠ್ಯಪುಸ್ತಕಕ್ಕೆ ಕೂಡಲೇ ತಿದ್ದುಪಡಿ ಮಾಡಿ, ಮಕ್ಕಳ ಮನಸಿನ ಮೇಲೆ ಬೀರುವ ದುಷ್ಪರಿಣಾಮವನ್ನು ತಡೆಯಬೇಕು. ಮುಂದಿನ ವರ್ಷದ ವೇಳೆಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕು.
* ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು.
* ಪ್ರೌಢಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ ವಿತರಣೆಯನ್ನು ಮುಂದುವರೆಸಬೇಕು. ಬೈಸಿಕಲ್‌ ವಿತರಣೆ ಯೋಜನೆಯನ್ನು ಮುಂದುವರೆಸಬೇಕು.
* ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ DERA ವನ್ನು ಸಕ್ರಿಯಗೊಳಿಸಬೇಕು.
* ರದ್ದಾಗಿರುವ ವಿದ್ಯಾರ್ಥಿವೇತನ ಯೋಜನೆ ಮರುಜಾರಿಯಾಗಬೇಕು.
* UUCMS ವ್ಯವಸ್ಥೆಯ ಮರುಪರಿಶೀಲನೆ ಮಾಡಬೇಕು.
* ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು. ಸಮ ಸಮಾಜಕ್ಕಾಗಿ ಸಮಾನ ಶಿಕ್ಷಣ ಆಶಯವನ್ನು ಸಾಕಾರಗೊಳಿಸಬೇಕು.
* ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ NEET ವ್ಯವಸ್ಥೆಯಿಂದ ಹೊರ ಬರುವ ಅಗತ್ಯವಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ಅನುಷ್ಠಾನ ಸಮರ್ಪಕವಾಗಿ ಆಗಬೇಕು.
* ವಿವಿಧ ಸಾಂಸ್ಕೃತಿಕ ಪ್ರತಿಷ್ಠಾನಗಳಲ್ಲಿ ಹೊಸ ಪ್ರತಿಭಾವಂತರಿಗೆ ಅವಕಾಶ ನೀಡಬೇಕು.
* ಗ್ರಂಥಾಲಯ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಪುಸ್ತಕ ಖರೀದಿ ಆಗಿಲ್ಲ. ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಬೇಕು.
* ಹೆಣ್ಣುಮಕ್ಕಳ ದೌರ್ಜನ್ಯ ಅಧ್ಯಯನ ಸಮಿತಿಯ ವರದಿಯ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಬೇಕು.
* ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ರಕ್ಷಣೆ ಮಾಡಲು ಮಸೂದೆ ಮಂಡಿಸಬೇಕು.
* ಹಿಜಾಬ್‌ ವಿವಾದದಿಂದಾಗಿ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಕುರಿತ ಸರ್ಕಾರಿ ಆದೇಶವನ್ನು ಪರಿಷ್ಕರಿಸಬೇಕು.
* ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕುರಿತ ಸರ್ಕಾರಿ ಆದೇಶವನ್ನು ಹಿಂಪಡೆಯಬೇಕು.
* ಎಸ್‌.ಸಿ.ಎಸ್‌.ಪಿ/ ಟಿ.ಎಸ್.ಪಿ. ಮೇಲ್ವಿಚಾರಣಾ ಸಮಿತಿ ಪ್ರತಿ ತಿಂಗಳೂ ಈ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ಸಮರ್ಪಕ ಅನುಷ್ಠಾನ ಖಾತರಿಪಡಿಸಬೇಕು.

* ಹಲವಾರು ಸಾಹಿತಿ, ಚಿಂತಕರಿಗೆ ನಿರಂತರವಾಗಿ ಬೆದರಿಕೆ ಪತ್ರಗಳು ಬರುತ್ತಿದ್ದು, ಭಯದ ವಾತಾವರಣ ನಿರ್ಮಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

* ವಿಶ್ವವಿದ್ಯಾಲಯಗಳ  ಸಿಂಡಿಕೇಟ್‌ ಹಾಗೂ ಅಕಾಡೆಮಿಕ್‌ ಕೌನ್ಸಿಲ್‌ ಗಳಲ್ಲಿ ನಿರ್ದಿಷ್ಟ ಸಮುದಾಯದ ಜನರೇ ನೇಮಕಗೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು.

* ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳ ಪಠ್ಯಕ್ರಮಕ್ಕೆ ಪೂರಕವಾದ ಪುಸ್ತಕಗಳನ್ನಷ್ಟೇ ಖರೀದಿಸಲು ಕ್ರಮ ವಹಿಸಬೇಕು. ಕೆಲವೆಡೆ ಅಪ್ರಸ್ತುತ ಪುಸ್ತಕಗಳನ್ನು ಖರೀದಿಸಲಾಗುತ್ತಿದೆ.

* ಗ್ರಾಮೀಣ ಪ್ರದೇಶದ ಸಮುದಾಯ ಭವನಗಳಲ್ಲಿ ಸಂವಿಧಾನದ ಬಗ್ಗೆ, ಸಾಮರಸ್ಯದ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.

ಬೆಂಗಳೂರು ಉತ್ತರ ವಿವಿ ಕಾಲೇಜುಗಳಿಗೆ ಕನ್ನಡ ಪಠ್ಯಪುಸ್ತಕವೇ ತಲುಪಿಲ್ಲ: ಕಂಗಾಲಾದ ಸಾವಿರಾರು ವಿದ್ಯಾರ್ಥಿಗಳು
ಟಮಕ, ಕೋಲಾರ:  ಪದವಿ ಕಾಲೇಜುಗಳು ಆರಂಭಗೊಂಡಿವೆ, ಆದರೆ ಕನ್ನಡ ಪಠ್ಯಪುಸ್ತಕವೇ ಇಲ್ಲ. ಪಠ್ಯಪುಸ್ತಕವಿರಲಿ, ಕನಿಷ್ಠ ಸಿಲಬಸ್‌ ಕೂಡ ನೀಡುತ್ತಿಲ್ಲ. ಇದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ದುರ್ಗತಿ. ವಿಶ್ವವಿದ್ಯಾಲಯದ ನಿರ್ಲಕ್ಷ್ಯ, ಬೇಜವಾಬ್ದಾರಿತನಗಳಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಆದರೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಇತರೆಲ್ಲ ಭಾಷೆಗಳ ಪಠ್ಯಪುಸ್ತಕಗಳು ಸಿದ್ಧವಾಗಿ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ತಲುಪಿವೆ. ಆದರೆ ಕನ್ನಡ ಭಾಷೆಯ ಪಠ್ಯಪುಸ್ತಕ ಮಾಯವಾಗಿದೆ. ತೆಲುಗು, ಪರ್ಷಿಯನ್‌, ಅರೆಬಿಕ್‌, ಉರ್ದು, ಸಂಸ್ಕೃತ ಭಾಷೆಯ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿರುವ ವಿಶ್ವವಿದ್ಯಾಲಯ ಕನ್ನಡ ಪಠ್ಯಪುಸ್ತಕ ಮುದ್ರಿಸಲು ಮೀನಮೇಷ ಎಣಿಸುತ್ತಿದೆ. ಹೀಗಾಗಿ ಕಾಲೇಜುಗಳು ಆರಂಭವಾದರೂ ಪಠ್ಯಪುಸ್ತಕವಿಲ್ಲದೆ ವಿದ್ಯಾರ್ಥಿಗಳು ನರಳುವಂತಾಗಿದೆ.

ಬೇರೆ ಬೇರೆ ಭಾಷೆ ಪುಸ್ತಕಗಳ ಪ್ರತಿಗಳು

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಅಡಿಯಲ್ಲಿ ಇನ್ನೂರಕ್ಕೂ ಹೆಚ್ಚು ಪದವಿ ಕಾಲೇಜುಗಳು ಇದ್ದು, ಈ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಲೇಬೇಕಾದ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಈ ಸಂಬಂಧ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವಲ್ಲದೆ, ಬೆಂಗಳೂರು ಸೆಂಟ್ರಲ್‌ ಮತ್ತು ಜ್ಞಾನಭಾರತಿ ವಿಶ್ವವಿದ್ಯಾಲಯಗಳಲ್ಲೂ ಕನ್ನಡ ಭಾಷೆಯ ಪಠ್ಯಪುಸ್ತಕಗಳು ಇನ್ನೂ ಸಿದ್ಧವಾಗಿಲ್ಲ ಎಂದು ತಿಳಿದುಬಂದಿದ್ದು, ಪ್ರೊ.ಬಿ. ಗಂಗಾಧರ್‌ ಅವರ ನೇತೃತ್ವದ ಪಠ್ಯಪುಸ್ತಕ ಸಮಿತಿ ಇತರ ವಿಷಯಗಳ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದ್ದರೂ, ಕನ್ನಡ ಭಾಷೆಯ ಪಠ್ಯಪುಸ್ತಕವನ್ನು ತಡವಾಗಿ ಸಿದ್ಧಪಡಿಸುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.

ಪದವಿ ವಿದ್ಯಾರ್ಥಿಗಳಿಗೆ ಇದುವರೆಗೆ ಕನ್ನಡ ಪಠ್ಯಪುಸ್ತಕಗಳನ್ನು ಮತ್ತು ಸಿಲಬಸ್‌ ನೀಡದೇ ಇರುವುದರ ಕುರಿತು ʻಪೀಪಲ್‌ ಮೀಡಿಯಾʼ ವಿಶ್ವವಿದ್ಯಾಲಯದ ಕುಲಸಚಿವ ಡೊಮಿನಿಕ್‌ ಡಿ. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ʻʻಈ ಕುರಿತು ನಾನು ನಿಮಗೆ ಯಾವುದೇ ಮಾಹಿತಿಯನ್ನು ದೂರವಾಣಿ ಮೂಲಕ ನೀಡುವುದಿಲ್ಲ. ಮಾಹಿತಿ ಬೇಕಿದ್ದರೆ ಕಚೇರಿಗೆ ಬಂದು ಅರ್ಜಿ ಕೊಟ್ಟು ಪಡೆಯಿರಿʼʼ ಎಂದು ಹೇಳಿದರು. ಕನ್ನಡ ಪಠ್ಯಪುಸ್ತಕಗಳು ಯಾವಾಗ ಬರುತ್ತವೆ ಎಂದು ಪದೇಪದೇ ಕೇಳಿದಾಗ, ಪಠ್ಯಪುಸ್ತಕಗಳು ಮುದ್ರಣವಾಗಿದೆ, ವಿದ್ಯಾರ್ಥಿಗಳಿಗೆ ತಲುಪಲಿವೆ ಎಂದಷ್ಟೇ ಹೇಳಿ ಸಂಪರ್ಕ ಕಡಿತಗೊಳಿಸಿದರು.

ಈ ಸಂಬಂಧ ಮಾಹಿತಿ ಪಡೆಯಲು ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ವಾನಳ್ಳಿ ಅವರನ್ನು ಸಂಪರ್ಕಿಸಲು ʻಪೀಪಲ್‌ ಮೀಡಿಯಾʼ ಪ್ರಯತ್ನಿಸಿದಾದರೂ, ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿಳಂಬನೀತಿಯಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಪಠ್ಯಪುಸ್ತಕವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.