Kantara – Peepal Media

ದೈವ ಆವಾಹನೆ ಎಂಬುದು ಮೂಢನಂಬಿಕೆ, ಕಾಂತಾರ ನಿಜಸ್ಥಿತಿಯನ್ನು ಬಿಂಬಿಸಿದೆ: ಲಲಿತಾ ನಾಯಕ್
ಬೆಂಗಳೂರು: ದೈವ ನರ್ತಕರು ದೇವರಲ್ಲ, ಅವರು ನೊಂದ ಜನರ ಆರ್ತನಾದವನ್ನು ಪ್ರತಿನಿಧಿಸುವವರು. ಜಮೀನ್ದಾರರು, ಸರ್ಕಾರ, ಪೊಲೀಸರಿಂದ ಆದ ಶೋಷಣೆಯಿಂದ ನರಳಿದ ಜನರ ಕೂಗನ್ನು ನರ್ತಕರು ತೋರಿಸುತ್ತಾರೆ. ನರ್ತಕರು ಹಿಂದೆ ತಮ್ಮ ಜನಗಳ ಮೇಲೆ ಆದ ಹಿಂಸೆಯನ್ನು ಕೂಗಿ ಹೇಳುತ್ತಾರೆ. ಅದನ್ನೇ ಅವರು ದೈವ ಎಂದು ಭಾವಿಸುತ್ತಾರೆ ಎಂದು ಮಾಜಿ ಸಚಿವೆ, ಚಿಂತಕಿ ಬಿ.ಟಿ.ಲಲಿತಾ ನಾಯಕ್‌ ಹೇಳಿದ್ದಾರೆ.

ʻಪೀಪಲ್‌ ಮೀಡಿಯಾʼ ಜೊತೆ ಮಾತನಾಡಿದ ಲಲಿತಾ ನಾಯಕ್‌, ದೈವ ನರ್ತಕರಿಗೆ ಮಾಶಾಸನ ಕೊಡಬಾರದು ನಾನು ಹೇಳಿಲ್ಲ. ಆದರೆ ಬೂತಾರಾಧನೆಯಲ್ಲಿ ದೈವಾಹನೆ ಆಗುವುದೆಲ್ಲ ಮೂಢ ನಂಬಿಕೆ. ಅದರಲ್ಲಿ ಅನುಮಾನವಿಲ್ಲ. ಎಲ್ಲರಿಂದ ದೌರ್ಜನ್ಯಕ್ಕೆ ಒಳಗಾದ ಜನರು ತಮ್ಮ ಧ್ವನಿಗೆ ಬೆಂಬಲವೇ ಇಲ್ಲದಾಗ ಹೀಗೆ ದೈವದ ಮೊರೆಹೋಗುತ್ತಾರೆ. ಅದೇ ಆಚರಣೆಯಾಗಿ ಬಳಕೆಯಲ್ಲಿದೆ ಎಂದು ಹೇಳಿದರು.

ಸರ್ಕಾರ, ಸಮಾಜ ತಮ್ಮನ್ನು ಕೈಬಿಟ್ಟಾಗ ಅಸಹಾಯಕ ಜನರು ಬಂಡುಕೋರರಾಗಿಬಿಡುವ ಸಾಧ್ಯತೆ ಇರುತ್ತದೆ. ಆದರೆ ಈ ಜನರು ದೈವಗಳು ತಮ್ಮನ್ನು ರಕ್ಷಿಸುತ್ತವೆ ಎಂದು ನಂಬಿ ಅವುಗಳ ಮೊರೆ ಹೋಗುತ್ತಾರೆ. ಇದರಲ್ಲಿ ವೈಜ್ಞಾನಿಕ ಸತ್ಯಾಂಶಗಳು ಇಲ್ಲ ಎಂದು ಅವರು ಹೇಳಿದರು.

ಕಾಂತಾರ ಚಿತ್ರದ ನಿರ್ದೇಶಕ ರಿಷಬ್‌ ಶೆಟ್ಟಿ ಅತ್ಯಂತ ಜಾಣತನದಿಂದ ಸಿನಿಮಾ ನಿರ್ದೇಶಿಸಿದ್ದಾರೆ. ಸತ್ಯವನ್ನು ಹೇಳಿದರೆ ಜನರು ಒಪ್ಪುವುದಿಲ್ಲ. ಸತ್ಯ ಹೇಳಿದವರನ್ನು ಕೊಲ್ಲಲೂ ಹೇಸದ ಜನರಿರುವ ಸಮಾಜ ನಮ್ಮದು. ಹೀಗಾಗಿ ಬೂತಾರಾಧನೆಯ ವಿಷಯವನ್ನು ಇಟ್ಟುಕೊಂಡು ಕಾಡಿನ ಜನರು, ದಲಿತರ ಮೇಲೆ ಆಗಿರುವ, ಆಗುತ್ತಿರುವ ದೌರ್ಜನ್ಯಗಳನ್ನು ಅವರು ಬುದ್ಧಿವಂತಿಕೆಯಿಂದ ಚಿತ್ರಿಸಿದ್ದಾರೆ ಎಂದು ಲಲಿತಾ ನಾಯಕ್‌ ಹೇಳಿದರು.

ದೈವ ನರ್ತಕರನ್ನು ಮೌಢ್ಯದಿಂದ ಹೊರಗೆ ತಂದು ಅವರಿಗೆ ಹೊಸ ಬದುಕನ್ನು ನೀಡುವ ಕೆಲಸವಾಗಬೇಕು. ದೈವ ನರ್ತಕರು ಎಂಬ ಕಾರಣಕ್ಕೆ ಮಾಶಾಸನ ಕೊಡುವುದು ಬೇಡ, ಅವರ ಬದುಕು ಕಟ್ಟಿಕೊಡಲು 2000 ಮಾತ್ರವಲ್ಲ 10,000 ರೂ ಕೊಡಲಿ, ನಾನು ಬೇಡ ಎನ್ನುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

‌ಮಾಜಿ ಸಚಿವೆ ಬಿ ಟಿ ಲಲಿತ ನಾಯಕ್ ಅವರು ಪೀಪಲ್‌ ಮೀಡಿಯಾಗಾಗಿ ಕಳುಹಿಸಿದ ಮಾತುಗಳ ಪೂರ್ಣಪಾಠದ ವಿಡಿಯೋ ಇಲ್ಲಿದೆ.

ದೈವಗಳ ವೈದಿಕೀಕರಣದ ಮಜಲುಗಳು
ಜುಮಾದಿ, ಲೆಕ್ಕೆಸಿರಿಯಂತಹ ಅನೇಕ ದೈವಗಳು ಸಂಸ್ಕೃತೀಕರಣಗೊಂಡು ಧೂಮಾವತಿ, ರಕ್ತೇಶ್ವರಿಗಳಾಗಿ ಬದಲಾಗಿವೆ. ತುಳುವರ ಪಂಜುರ್ಲಿಯೂ ಕೂಡ ಸಂಸ್ಕೃತದ ವರಾಹ ಮೂರ್ತಿಯಾಗಿದ್ದಾನೆ. ಲಾಭಕ್ಕೆ ತಕ್ಕಂತೆ ಅನ್ಯರ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳುವುದು ವೈದಿಕರಿಗೆ ಹೊಸತೇನಲ್ಲ ಎನ್ನುವ ಲೇಖಕ ಶಂಕರ್‌ ಸೂರ್ನಳ್ಳಿ ಅವರ ಈ ಲೇಖನವು  ವೈದಿಕ ಪ್ರಭಾವವು ದೈವಾರಾಧನೆಯ ಮೂಲ ನೆಲೆಗಟ್ಟನ್ನು ಅಲುಗಾಡಿಸಿದೆ ಎಂಬ ಸತ್ಯವನ್ನು ತೆರೆದಿಡುತ್ತದೆ.

ರಿಷಭ್ ಶೆಟ್ಟಿಯವರ ಸೂಪರ್ ಹಿಟ್ ’ಕಾಂತಾರ’ ಸಿನಿಮಾ ಭರ್ಜರಿ ಯಶಸ್ಸಿನ ಜೊತೆಗೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಅವುಗಳಲ್ಲೊಂದು ಕರಾವಳಿಯ ದೈವಗಳ ವೈದಿಕೀಕರಣದ ಕುರಿತಾದದ್ದು. ಕಾಂತಾರ ಸಿನಿಮಾ ಟೈಟಲ್ ನಲ್ಲಿ ಕಾಣಿಸುವ ಓಂ ಚಿಹ್ನೆ, ಸಿನಿಮಾದಲ್ಲಿ ಬರುವಂತಹ ವರಾಹ ಮೂರ್ತಿಯ ಸಂಸ್ಕೃತ ಹಾಡುಗಳಲ್ಲದೇ ಕನ್ನಡದ ನಟ ಚೇತನ್ ರವರು ಇದೇ ಹಿನ್ನೆಲೆಯಲ್ಲಿ ಕರಾವಳಿಯ ದೈವಗಳ ಕುರಿತಂತೆ ಹಿಂದೂ ಧರ್ಮವನ್ನುಲ್ಲೇಖಿಸಿ ಆಡಿದಂತಹ ಮಾತುಗಳು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.

ಹೌದು, ಕರಾವಳಿಯ ದೈವಗಳ ಕುರಿತಾಗಿ ಇದೇನು ಹೊಸದಾಗಿ ಹುಟ್ಟಿದಂತಹ ವಿಚಾರವೇನಲ್ಲ. ಹಿಂದಿನಿಂದಲೂ ದೈವಾರಾಧನೆಯ ಕುರಿತಂತೆ ಸಂಶೋಧನೆ ಕೈಗೊಂಡ ವಿದ್ವಾಂಸರುಗಳು ಈ ಕುರಿತಂತೆ ಸಾಕಷ್ಟು ಬರೆದಿದ್ದಾರೆ. ವೈದಿಕ ಸಂಪ್ರದಾಯಗಳಿಗೆ ಹೊರತಾದ ಕರಾವಳಿಯ ದೈವಾರಾಧನೆಯ ಪದ್ಧತಿಯ ವಿಭಿನ್ನತೆಯನ್ನು ಈಗಾಗಲೇ ದಾಖಲಿಸಲಾಗಿದೆ. ಹೀಗಿದ್ದೂ ಕೂಡ ತಳ ಸಮುದಾಯದವರ ಈ ದೈವಾರಾಧನೆ ಯಾವುದೋ ಒಂದು ಬಗೆಯಲ್ಲಿ ಮುಖ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ ವೈದಿಕ ಸಂಪ್ರದಾಯದೊಂದಿಗೆ ಕಳೆದು ಹೋಗುತ್ತಿರುವುದಕ್ಕೆ ಕಾರಣವಾದರೂ ಏನಿರಬಹುದು?

ದೈವ ಭೂತಗಳೆಲ್ಲ ಎಂದೋ ಪರಶಿವನ ಗಣ ಸೇರಿದುವು!

ಕಾಂತಾರ ಸಿನಿಮಾದಲ್ಲಿ ಪ್ರಮುಖವಾಗಿ ತೋರಿಸಲಾದ ದೈವಗಳೆಂದರೆ ತುಳುನಾಡಿನಲ್ಲಿ ಅದರದ್ದೇ ಆದ ಮಹತ್ವವನ್ನು ಹೊಂದಿರುವ ಗುಳಿಗ ಹಾಗು ಪಂಜುರ್ಲಿ ದೈವಗಳು. ತುಳುನಾಡಿನ ಪಂಜುರ್ಲಿ ದೈವದ ಕಥೆಯಲ್ಲಿ ಶಿವ ಪಾರ್ವತಿಯರು ಪ್ರಮುಖವಾಗಿ ಕಾಣಿಸಿಕೊಂಡರೆ ಗುಳಿಗನ ಕಥೆಯಲ್ಲೂ ಹಿಂದೂ ಪುರಾಣದ ತ್ರಿಮೂರ್ತಿಗಳು ಬರುತ್ತಾರೆ. ಇದೀಗ ಬಲು ಖ್ಯಾತನಾಗಿರುವ ಕೊರಗಜ್ಜನನ್ನು ಸ್ತುತಿಸುವ ಹಾಡುಗಳಲ್ಲೂ ಕೂಡ ಕೊರಗಜ್ಜನನ್ನು ಶಿವನ ಅಂಶ ಎಂದೇ ಸ್ತುತಿಸಲಾಗುತ್ತಿದೆ. ಕರಾವಳಿಯಲ್ಲಿ ಕಂಡುಬರುವ ದೈವ ಭೂತಗಳನ್ನೆಲ್ಲ ಸಾರಾಸಗಟಾಗಿ ಪರಶಿವನ ಗಣಗಳಿಗೆ ಸೇರಿಸಿ ಯಾವುದೋ ಕಾಲವಾಗಿದೆ. ಹಾಗೆಂದು ಹದಿನೆಂಟು ಪುರಾಣಗಳಲ್ಲಾಗಲೀ, ಮತ್ಯಾವುದೋ ಹಿಂದೂ ಗ್ರಂಥಗಳಲ್ಲಾಗಲೀ ಈ ಪಂಜುರ್ಲಿ, ಗುಳಿಗ, ಕೊರಗಜ್ಜನಂತವರ ಪಾತ್ರಗಳ ಯಾವ ಉಲ್ಲೇಖವೂ ಎಲ್ಲೂ ಕಾಣಸಿಗದು. ಅಂದರೆ ಇವುಗಳೆಲ್ಲ ಕಾಲಮಾನದ ಸ್ಥಳೀಯ ಮಾರ್ಪಾಟುಗಳೇ ವಿನಹ ವಿಶೇಷವಾದುದೇನೂ ಇಲ್ಲ.

ಕರಾವಳಿ ಕರ್ನಾಟಕದ ಪರಿಸರ ಪ್ರಾಚೀನ ಕಾಲದಿಂದಲೂ ವಿದೇಶದೊಂದಿಗೆ ಸಂಪರ್ಕವಿಟ್ಟುಕೊಂಡಂತಹ ಭಾಗವಾಗಿತ್ತೆನ್ನುವುದಕ್ಕೆ ಅನೇಕ ಐತಿಹಾಸಿಕ ಪುರಾವೆಗಳಿವೆ. ಹಾಗಾಗಿ ಈ ಪರಿಸರಕ್ಕೆ ಹಿಂದಿನಿಂದಲೂ ಅದರದ್ದೇ ಆದ ಸಂಸ್ಕೃತಿ ಪರಂಪರೆಗಳೂ ಇದ್ದಿದ್ದವೇ ಹೊರತು ಹೊರಗಿನಿಂದ ಬಂದಂತವರಿಂದಾಗಿ ಇಲ್ಲಿನ ನಾಗರೀಕತೆ ಹೊಸತಾಗಿ ರೂಪುಗೊಂಡದ್ದೇನಲ್ಲ. ಕೆಲ ರಾಜಕೀಯ ಹಾಗು ಸಾಮಾಜಿಕ ಪಲ್ಲಟಗಳಿಂದಾಗಿ ವೈದಿಕರ ಆಗಮನದ ಬಳಿಕ ಇಲ್ಲಿನ ಸಂಸ್ಕೃತಿಯಲ್ಲಿ ಅವರ ಪ್ರಭಾವ ಹೆಚ್ಚ ತೊಡಗಿತಾದರೂ ಇಲ್ಲಿನ ಕೆಲ ಮೂಲನಂಬಿಕೆಗಳನ್ನು ಮರೆಯಾಗಿಸಲು ಪ್ರಭುತ್ವದ ಬಲವಿದ್ದ ಅವರಿಂದಲೂ ಕೂಡ ಸಾಧ್ಯವಾಗದೇ ಹೋಯಿತು. ಅಂತಾದ್ದರಲ್ಲಿ ಇಲ್ಲಿನ ಮೂಲನಿವಾಸಿಗಳು ತಮ್ಮ ಗತಿಸಿದ ಪ್ರಮುಖ ಹಿರಿಯರನ್ನು ನೆನಪಿಸಿ ಆಹ್ವಾಹಿಸಿಕೊಂಡು ಆರಾಧಿಸುವ ದೈವಾರಾಧನೆಯ ಆಚರಣೆಯೂ ಒಂದು.

ದೈವಗಳ ಚರಿತ್ರೆಗಳಲ್ಲಿ ಹೋರಾಟದ ಉಲ್ಲೇಖಗಳು

ಕರಾವಳಿಯ ದೈವಾರಾಧನೆಗೆ ಸಂಬಂಧಿಸಿದಂತೆ ಇಲ್ಲಿ ಸರಿ ಸುಮಾರು ಸಾವಿರದಷ್ಟು ದೈವಗಳನ್ನು ಗುರುತಿಸಲಾಗಿದೆ. ಪಂಜುರ್ಲಿ, ಕಲ್ಲುರ್ಟಿ, ಸಿರಿ, ಕೊರಗಜ್ಜ, ಬಬ್ಬುಸ್ವಾಮಿ, ಕೋಟಿ ಚೆನ್ನಯರಂತಹ ತುಳುನಾಡಿನ ಅನೇಕ ಪ್ರಮುಖ ದೈವಗಳ ಚರಿತ್ರೆಗಳಲ್ಲಿ ಹೋರಾಟದ, ದಬ್ಬಾಳಿಕೆಯನ್ನು ಎದುರಿಸಿ ನಿಂತಂತಹ ಅಥವ ನಿಂತು ಮರಣಿಸಿ (ಮಾಯವಾ)ದಂತಹ ನೇರ ಅಥವಾ ಸೂಚ್ಯ ಉಲ್ಲೇಖಗಳನ್ನು ಗುರುತಿಸಬಹುದು. ಪಂಜುರ್ಲಿಯ ಕಥೆ ಪ್ರಾಣಿ ಸಂಬಂಧಿ ಚರಿತ್ರೆಯಂತೆ ತೋರಿದರೂ ಇಲ್ಲಿ ಬರುವ ಪ್ರವೇಶ ನಿರಾಕರಣೆ, ಕುಟುಂಬ, ಮಕ್ಕಳು ಮೊದಲಾದ ಸಾಮಾಜಿಕ ಅಂಶಗಳನ್ನು ನೋಡಿದರೆ ಹಂದಿ ಕೇವಲ ರೂಪಕದಂತಷ್ಟೆ ತೋರುತ್ತದೆ. ತುಳುವಿನ ಪಂಜಿ (ಹಂದಿ) ಮೂಲದ ಪಂಜುರ್ಲಿಯ ಮತ್ತೊಂದು ಹೆಸರು ಅಣ್ಣಪ್ಪನೆಂದು ಪಂಜುರ್ಲಿ ಕುರಿತ ಪಾಡ್ದನ ಕತೆಗಳಲ್ಲೇ ಬರುತ್ತದೆ. ಮೇಲ್ವರ್ಗದವರು, ಜಮೀನುದಾರರು ತಮ್ಮ ಪಾಳೇಗಾರಿಕೆಯ ದರ್ಪವನ್ನು ತೋರಲು ತಳಸಮುದಾಯದ ಮಕ್ಕಳನ್ನು ಹಂದಿ, ನಾಯಿ, ಹೆಣ್ಣು ನಾಯಿಯಂತಹ ತುಚ್ಛ ಭಾವದ ಹೆಸರಿಟ್ಟು ಕರೆಯುವುದು ಹೊಸತೇನಲ್ಲ. (ನಾನೇ 92 -93ರ ಆಸುಪಾಸಿನಲ್ಲಿ ಓಟರ್ಸ್ ಕಾರ್ಡಿನ ಕೆಲಸ ಮಾಡುತ್ತಿರುವಾಗ ಅವಿಭಜಿತ ದ.ಕ ಜಿಲ್ಲೆಯ ಓಟರ್ಸ್ ಲಿಸ್ಟ್ ನಲ್ಲಿ ಇಂತಹ ಬೊಗ್ಗಿ, ಬೊಗ್ರ, ಪಂಜಿ, ಪಿಜಿನ, ಮರ್ಲೆ ದಂತಹ ಕೀಳುಭಾವದ ದಲಿತ ಹೆಸರುಗಳನ್ನ ಸಾಕಷ್ಟು ನೋಡಿದ್ದೇನೆ) ಪಂಜುರ್ಲಿ ಕಥೆಯಲ್ಲಿ ಬರುವ ಹೆಗ್ಗಡೆ, ವಾದಿರಾಜ ಸ್ವಾಮಿಯ ಉಲ್ಲೇಖಗಳು, ತುಳುನಾಡಿನ ವಿವಿಧ ಊರುಗಳಲ್ಲಿನ ಪಂಜುರ್ಲಿಯ ಕಾರ್ಯಸಾಧನೆಯ ಪಾಡ್ದನ ದಾಖಲೆಯನ್ನು ನೋಡಿದರೆ ಇದು ಪ್ರಾಣಿಗಿಂತ ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಚರಿತ್ರೆಯಂತೆ ಕಂಡುಬರುತ್ತದೆ.

ದೈವಾರಾಧನೆಯು ಕೇವಲ ತುಳುನಾಡಿಗಷ್ಟೇ ಸೀಮಿತವೇ?

ವಿಶೇಷವಾಗಿ ಈ ದೈವಾರಾಧನೆ ಎನ್ನುವುದು ಕೇವಲ ತುಳುನಾಡಿಗಷ್ಟೇ ಸೀಮಿತವಾದುದೇನಲ್ಲ. ಜಪಾನ್, ಚೀನಾ, ಅಮೆರಿಕಾ, ಫಿನ್ಲೆಂಡ್ ಸೇರಿದಂತೆ ವಿಶ್ವದಾದ್ಯಂತ ಅನೇಕ ಮೂಲನಿವಾಸಿಗಳ ಆಚರಣೆಗಳಲ್ಲಿ ಮರಣಿಸಿದ ಹಿರಿಯರ ಅಥವ ನಂಬಿದ ಅಗೋಚರ ಶಕ್ತಿಗಳ ಹೆಸರಲ್ಲಿ ಆಯಾಯ ಸಂಸ್ಕೃತಿಗಳಿಗೆ ತಕ್ಕಂತಹ ದೈವಾರಾಧನೆಯ ಸಂಪ್ರದಾಯವನ್ನು ಅಲ್ಲಲ್ಲಿ ಕಾಣಬಹುದು. ಅದೇ ರೀತಿ ಈಗಿನ ಉತ್ತರ ಕೇರಳದಿಂದ ಹಿಡಿದು ಕುಂದಾಪುರದವರೆಗಿನ ಇಲ್ಲಿನ ಮೂಲನಿವಾಸಿಗಳು ಆಚರಿಸಿಕೊಂಡು ಬರುತ್ತಿದ್ದ ಈ ದೈವಾರಾಧನೆ ಮತ್ತು ನಾಗಾರಾಧನೆಯ ಆಚರಣೆಗಳು ಗಟ್ಟಿನೆಲೆಯಲ್ಲಿ ನಿಂತಿದ್ದ ಕಾರಣ (ಅಥವ ರೂಢಿ ಮಾತಿನಲ್ಲಿ ಹೇಳುವುದಾದರೆ ದೈವಗಳ ಕಾರಣಿಕದ ಕಾರಣಕ್ಕಾಗಿ) ಯಾವುದೇ ಹೊರಗಿನ ಸಾಂಸ್ಕೃತಿಕ ದಾಳಿಗಳಿಗೂ ಅದನ್ನು ಅಳಿಸಿ ಹಾಕಲು ಸಾಧ್ಯವಾಗಲಿಲ್ಲ. ಈ ಪ್ರದೇಶದಲ್ಲಿ ಇಂದಿಗೂ ಕೂಡ ದೇವರಿಗೂ ಭಯಪಡದ ಮಂದಿ ದೈವಗಳಿಗೆ ಹೆದರುತ್ತಾರೆ. “ದೈವಕ್ಕೆ ಹೇಳಿಕೊಳ್ಳುತ್ತೇನೆ…” ಅಂದ್ರೆ ಆಯಿತು. ಅಲ್ಲಿ ನ್ಯಾಯಾಲಯದಲ್ಲಿ ವಕೀಲರು ನಡೆಸುವಂತ ಜಾಣತನದ ತಂತ್ರ ಹಾಗು ಮಾತುಗಾರಿಕೆ ಅಂತವಕ್ಕೆಲ್ಲ ಇಲ್ಲಿ ಬೆಲೆಯೇ ಇಲ್ಲ. ತಪ್ಪಿತಸ್ಥ ದೈವದೆದುರು ಹೋಗೋ ಮೊದಲೇ ಅರ್ಧ ಸೋತು ಶರಣಾಗಿರುತ್ತಾನೆ. ದೈವಗಳಿಗೆ ತೊಂದರೆ ಮಾಡಿದವ, ನುಡಿ ತಪ್ಪಿದರೂ ಪರಿಣಾಮವನ್ನೆದುರಿಸಿದಂತ ಅನೇಕ ಉದಾಹರಣೆಗಳು ಇವೆ. ಕೆಲ ವರ್ಷಗಳ ಹಿಂದೆ ಗೊತ್ತಿಲ್ಲದೇ ದೈವ ಸನ್ನಿಧಿಗೆ ಸೇರಿದ ಜಾಗದಲ್ಲಿ ಮರಕಡಿಯಲು ಹೋದ ಮುಸಲ್ಮಾನನ ಮೇಲೆಯೇ ದೈವ ಆವೇಶಗೊಂಡು ಎಚ್ಚರಿಸಿದ ಸಂಗತಿ ಪ್ರತಿಕೆಗಳಲ್ಲಿ ವರದಿಯಾಗಿತ್ತು.

ದೈವಗಳು ಸ್ಥಳೀಯವಾಗಿ ಹೊಂದಿರುವ ಪ್ರಭಾವ…

ದಲಿತ ಸಮುದಾಯಕ್ಕೆ ಸೇರಿದ ಅನೇಕ ದೈವಸ್ಥಾನಗಳಲ್ಲಿ ನಡೆಯುವ ಕೋಲ ನೇಮಗಳಿಗೆ ಯಥೇಚ್ಛವಾಗಿ ಭಕ್ತಿಯಿಂದ ಧನಸಹಾಯ ಮಡುವವರು ಬಂಟ ಸಮುದಾಯದಂತಹ ಮೇಲ್ವರ್ಗದವರು. ಮುಂಬಯಿ ಮೊದಲಾದೆಡೆ ದುಡಿಯುವ ಇವರುಗಳು ಈ ದೈವಗಳನ್ನು ತಮ್ಮ ರಕ್ಷಕರೆಂದೇ ಭಾವಿಸಿ ನಂಬುತ್ತಾರೆ. ಕೋಲದ ಸಮಯದಲ್ಲಿ ಪರವ, ಪಂಬದ, ನಲಿಕೆಯವರಂತಹ ದಲಿತ ಸಮುದಾಯದ ಪಾತ್ರಿಗಳಿಂದ ನುಡಿ ಅಭಯ ಪಡೆದುಕೊಳ್ಳಲು ಈ ದಲಿತೇತರ ಮೇಲ್ಜಾತಿಗಳಿಗೆ ಯಾವ ಸಾಮಾಜಿಕ ಅಂತಸ್ತಿನ ಭಾವವೂ ಅಡ್ಡಿಬಾರದು. ಇದು ಆ ದೈವಗಳು ಸ್ಥಳೀಯವಾಗಿ ಹೊಂದಿರುವ ಪ್ರಭಾವವನ್ನು ತೋರುತ್ತದೆ. ಇಲ್ಲಿನ ದೈವಗಳ ಮಹತ್ವವನ್ನು ಮನಗಂಡೇ ತುಳುನಾಡನ್ನು ಆಳುತ್ತಿದ್ದ ಇಲ್ಲಿನ ಜೈನ ಅರಸರುಗಳೂ ಕೂಡ ಇದನ್ನು ಕಡೆಗಣಿಸಹೋಗದೇ ರಕ್ಷಕ ದೈವಗಳೆಂದು ಪರಿಗಣಿಸಿ ಪ್ರೋತ್ಸಾಹಿಸಿದ್ದರಲ್ಲದೇ ಇದೇ ಬಗೆಯಲ್ಲಿ ತಮ್ಮದೇ ಆದ ದೈವಗಳನ್ನು (ರಾಜನ್ ದೈವಗಳು) ಪ್ರತಿಷ್ಠಾಪಿಸಿ ನಂಬಿಕೆಯಿಂದ ನಡೆದು ಕೊಂಡಿದ್ದರು.

ವೈದಿಕ ದೇವತಾರಾಧನೆಯ ಬೆಳವಣಿಗೆ

ಕದಂಬರ ಲೋಕಾದಿತ್ಯ ಕರೆತಂದ ಉತ್ತರದ ಬ್ರಾಹ್ಮಣ ಕುಟುಂಬಗಳಿಗೆ ಪಶ್ಚಿಮ ಷೋಡಶ (16) (ಕಾರೆವೂರು, ವೊರ್ಕಾಡಿ, ಮರಣಿ, ಕೊಳನಾಡು, ಪಾಡಿ, ಕೂಡಲು, ಮೊಗೆಬೈಲು, ಮಿತ್ತನಾಡು, ನಿರ್ಮಾರ್ಗ, ಸಿಮಂತೂರು, ತೆನೆಕಳ, ಬ್ರಹ್ಮಾವರ, ನೀಲಾವರ, ಕೋಟ, ಕಂದಾವರ ಮತ್ತು ಶಿವಳ್ಳಿ) ಮತ್ತು ಪೂರ್ವ ಷೋಡಶ (16) (ಶ್ರಿಪಾಡಿ, ಓಡಿಲ, ನಾಳ, ಕಾರಂದೂರು, ಉಜಿರೆ, ಕುನ್ಯಮಾರ್ಗ, ಕೊಕ್ಕಡ, ರಾಮಿಂಜ, ಪುದೆ, ಬಳ್ಪ, ಐವರ್ನಾಡು, ಇಡ್ಕಿದು, ಕೆಮ್ಮಿಂಜ, ಪಾಡಿಂಜ, ಸಿರಿಯಾಡಿ ಮತ್ತು ಕೊಡಿಪಾಡಿ) ವೆಂಬ ದ್ವಾತ್ರಿಂಶತ್ (32) ಗ್ರಾಮಗಳನ್ನು ಉಂಬಳಿ ಕೊಟ್ಟು ಕರಾವಳಿ ಜಿಲ್ಲೆಗಳಲ್ಲಿ ನೆಲೆ ನಿಲ್ಲಿಸಿದ ಮೇಲೆ ಪ್ರಭುತ್ವದ ಪ್ರಭಾವಳಿಯಡಿಯಲ್ಲಿ ಇವರ ವೈದಿಕ ಸಾಂಸ್ಕೃತಿಕತೆಯ ವ್ಯಾಪಿಸುವಿಕೆ ಇಲ್ಲಿ ಹೆಚ್ಚತೊಡಗಿತು. ಹೊಸ ಹೊಸ ದೇಗುಲಗಳು ಇಲ್ಲಿ ಹುಟ್ಟಿಕೊಂಡವು. ಕೆಲ ಭೂತಸ್ಥಾನ, ಬಸದಿಗಳು ದೇವಾಲಯಗಳಾಗಿ ಮಾರ್ಪಟ್ಟವು. (ಉಡುಪಿಯ ಅನಂತೇಶ್ವರ ಚಂದ್ರಮೌಳೀಶ್ವರ ದೇಗುಲಗಳು ಇಂತವಕ್ಕೊಂದು ಉದಾಹರಣೆ. ಅದೇ ರೀತಿ ಅನೇಕ ಉಳ್ಳಾಲ್ತಿ ದೈವಸ್ಥಾನಗಳು ದುರ್ಗಾ ಪರಮೇಶ್ವರಿ ದೇವಾಲಯಗಳಾಗಿ ಬದಲಾಗುತ್ತಿರುವುದನ್ನು ಇಂದಿಗೂ ಕಾಣುತ್ತಿದ್ದೇವೆ). ದೈವಾರಾಧನೆಯನ್ನು ಅಳಿಸಿ ಹಾಕಲಾಗದಿದ್ದರೂ ವೈದಿಕ ದೇವತಾರಾಧನೆ ಪ್ರತ್ಯೇಕವಾಗಿ ಇಲ್ಲಿ ಬೆಳೆಯುತ್ತಾ ಹೋಯಿತು.

ಇನ್ನು, ಅವೈದಿಕತೆಯ ಪಂಜುರ್ಲಿ, ಗುಳಿಗ, ಕೊರಗಜ್ಜನಂತವರ ಕಥೆ ಪಾಡ್ದನಗಳಲ್ಲಿ ವೈದಿಕ ದೇವ ದೇವತೆಯ ಪಾತ್ರಗಳು ಬರುವುದಾದರೂ ಹೇಗೆ ಎನ್ನುವುದನ್ನು ಗಮನಿಸಿದರೆ, ಇದರಲ್ಲಿ ವಿಶೇಷವೇನೂ ಇಲ್ಲ. ಇದೊಂದು ಸಾಮಾಜಿಕ ಸಾಂಸ್ಕೃತಿಕ ಅನಿವಾರ್ಯತೆ ಅಷ್ಟೆ. ಪ್ರಸಕ್ತ ಕಾಲಮಾನಕ್ಕೆ ತಕ್ಕಂತೆ ಸರ್ವೈವಲ್ ಆಗಲು ಇರುವ ಅವಕಾಶ ಬಳಕೆಯ ಒಂದು ಸಹಜ ಪ್ರಕ್ರಿಯೆ ಇದೆನ್ನಬಹುದು. ಸಂಪೂರ್ಣವಾಗಿ ಕಳೆದು ಹೋಗುವ ಬದಲು ಕೆಲ ಹೊಂದಾಣಿಕೆಗಳ ಮೂಲಕ ಅಸ್ತಿತ್ವವನ್ನು ಉಳಿಸಿಕೊಳ್ಳುವ ವಿಧಾನ ಇದು. ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟು ಯಾವುದೇ ಸಾಮಾಜಿಕ ಪ್ರಭಾವವನ್ನಿಟ್ಟುಕೊಳ್ಳದ ವರ್ಗವೊಂದು ಆಗಿನ ಪ್ರಭಾವೀ ವರ್ಗವೊಂದರ ಜೊತೆಗೆ ಯಾವುದೋ ಒಂದು ಬಗೆಯಲ್ಲಿ ಗುರುತಿಸಿಕೊಳ್ಳುವುದರ ಮೂಲಕ ಸಾಂದರ್ಭಿಕವಾಗಿ ತನ್ನತನವನ್ನು ತಕ್ಕಮಟ್ಟಿಗೆ ಕಾಪಿಟ್ಟು ಕೊಂಡಂತಹ ಪ್ರಕ್ರಿಯೆ ಇದು.

ದೈವ ಪಾಡ್ದನಗಳು

ತಳ ಸಮುದಾಯದವರ ಈ ದೈವಾರಾಧನೆಯನ್ನು ಅಭ್ಯಸಿಸುವವರಿಗೆ ಈ ಕುರಿತ ಒಂದು ಪ್ರಮುಖವಾದ ಆಕರವೆಂದರೆ ಅದು ದೈವಕ್ಕೆ ಸಂಬಂಧಿಸಿದ ಪಾಡ್ದನಗಳು. ಈ ಪಾಡ್ದನದಲ್ಲಿ ನಿರ್ದಿಷ್ಟ ದೈವಗಳಿಗೆ ಸಂಬಂಧಿಸಿದ ಕಥೆಯ ವಿವರಣೆ ದೊರೆಯುತ್ತದೆ. ದೈವ ನರ್ತಕರ ಪರಂಪರೆಯಲ್ಲಿ ಸಾಗಿಬರುವ ಈ ಪಾಡ್ದನ ಕೇವಲ ಒಂದು ಮೌಖಿಕ ದಾಖಲಾತಿ. ಕೆಲ ದಶಕಗಳಿಂದ ಪ್ರೊ. ಲಾರಿ ಹೊಂಕೊ, ಮಾರ್ಥ ಅಶ್ಚನ್ ರಂತಹ ವಿದೇಶಿಗರಿಂದ ಹಿಡಿದು ಅಮೃತ ಸೋಮೇಶ್ವರ, ಡಾ. ವಿವೇಕ ರೈ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಚಿನ್ನಪ್ಪ ಗೌಡ, ರಘುನಾಥ ವರ್ಕಾಡಿ, ನಾವಡ ದಂಪತಿ, ಮೊದಲಾದ ಅನೇಕ ಮಹನೀಯರು ಈ ಬಗ್ಗೆ ಅನೇಕ ವಿಚಾರಗಳನ್ನು ಅಭ್ಯಸಿಸಿ ದಾಖಲಿಸಿದ್ದಾರೆ. ಈ ಹಿಂದೆ ಕೇವಲ ಮೌಖಿಕವಾಗಿಯಷ್ಟೆ ಚಾಲ್ತಿಯಲ್ಲಿದ್ದ ಈ ದೈವ ಪಾಡ್ದನಗಳಲ್ಲಿ ಶ್ರೇಷ್ಠತೆಯ ಹೆಸರಲ್ಲಿ ಗುರುತಿಸಿಕೊಂಡಿದ್ದ ವೈದಿಕ ದೇವರುಗಳ ಸೇರಿಸುವಿಕೆಗೆ ಯಾವ ವಿಶೇಷ ರಬ್ಬರು ಪೆನ್ನುಗಳ ಅವಶ್ಯಕತೆಯೇನೂ ಬೇಕಿದ್ದಿರಲಿಲ್ಲ. ಆದರೆ ಯಾವ ಕಾಲ ಘಟ್ಟದಲ್ಲಿ ಈ ಈಶ್ವರ ಪಾರ್ವತಿ ಬ್ರಹ್ಮ ವಿಷ್ಣು ತುಳುನಾಡಿನ ದೈವ ಸಾಹಿತ್ಯದೊಳಗೆ ಸೇರಿಕೊಂಡರೆನ್ನುವುದನ್ನ ನಿಖರವಾಗಿ ಹೆಳಲಾಗದಿದ್ದರೂ ವೈದಿಕತೆಯ ಉಚ್ಛ್ರಾಯ ಕಾಲದಲ್ಲಂತೂ ಹೌದು ಎಂದು ನಂಬಲಡ್ಡಿಯಿಲ್ಲ.

ತುಳುನಾಡಲ್ಲಿ ಎಲ್ಲವೂ ಬ್ರಹ್ಮಮಯಂ!

ತಮಿಳುನಾಡಿನಲ್ಲಿನ ಯಾವುದೋ ಒಂದು ಸೇತುವೆಗೆ ಬ್ರಿಟಿಷ್ ಅಧಿಕಾರಿಯ ನೆನಪಲ್ಲಿ ಹ್ಯಾಮಿಲ್ಟನ್ ಬ್ರಿಡ್ಜ್ ಎಂದು ಹೆಸರಿಡಲಾಗಿತ್ತಂತೆ. ಅಲ್ಲಿನ ತಮಿಳಿಗರು ನಾಲಗೆಗೆ ತ್ರಾಸ ಕೊಡುವ ಈ ಹ್ಯಾಮಿಲ್ಟನ್ ಹೆಸರನ್ನು ತಮ್ಮದೇ ತಮಿಳು ಶೈಲಿಯಲ್ಲಿ ’ಅಂಬಟನ್ ಬ್ರಿಜ್’ ಮಾಡಿಕೊಂಡಿದ್ದರು. ಜನ ಬಳಕೆಯಲ್ಲಿ ಈ ಹೆಸರೇ ರೂಢಿಗೆ ಬಂದು ಎಷ್ಟೊ ವರ್ಷದ ಬಳಿಕ ಈ ಹ್ಯಾಮಿಲ್ಟನ್ ನ ವಿಚಾರ ತಿಳಿಯದ ವ್ಯಕ್ತಿ ಈ ಬ್ರಿಡ್ಜನ್ನು ಇಂಗ್ಲಿಷ್ ನಲ್ಲಿ ಬಾರ್ಬರ್ ಬ್ರಿಡ್ಜ್ ಎಂದು ಪುನ: ಬದಲಿಸಿದನಂತೆ. ಅಂದರೆ, ತಮಿಳಿನಲ್ಲಿ ’ಅಂಬಟನ್’ ಎಂದರೆ ಕ್ಷೌರಿಕ ಎಂದರ್ಥ. ಇದು ಹ್ಯಾಮಿಲ್ಟನ್ ಬಾರ್ಬರ್ ಆದಂತಹ ಕತೆ. ತುಳುನಾಡಿನ ದೈವಗಳ ವಿಚಾರದಲ್ಲೂ ಕೆಲವೆಡೆ ಇಂತದ್ದೇ ನಡೆದಿದೆ. ಪೆರ್ಮೆರ್ ಎನ್ನುವುದು ’ಹಿರೀಕರು’ ಎನ್ನುವ ಅರ್ಥದ ಪದ. ಇದು ಕ್ರಮೇಣ ಬೆರ್ಮೆರ್ ಆಗಿ ಸಂಸ್ಕೃತೀಕರಣದ ಪ್ರಭಾವದಿಂದ ಇದೀಗ ಬ್ರಹ್ಮ ಎಂದಾಗಿ ಹೆಚ್ಚು ಬಳಕೆಯಲ್ಲಿದೆ. ಹಳೆಗನ್ನಡ ಮತ್ತು ತುಳುಗಳಲ್ಲಿ ಪ ಮತ್ತು ಬ ಪದಗಳು ಒಂದಕ್ಕೊಂದು ಪರ್ಯಾಯ ಶಬ್ದಗಳಾಗಿ ಬಳಕೆಯಾಗುವುದು ಸಾಮಾನ್ಯ. ತುಳುವರನ್ನು ಬೇರೆ ಕಡೆಯ ಕನ್ನಡಿಗರು ಅಪ್ಪನಿಗೆ ಅಮ್ಮ, ಅಮ್ಮನಿಗೆ ಅಪ್ಪ ಅನ್ನುವವರು.. ಅಂತ ತಮಾಷೆ ಮಾಡುವುದುಂಟು. ಆದರೆ ಹಳೆಗನ್ನಡದಲ್ಲಿ ಬಳಕೆಯಲ್ಲಿರುವ ಅಬ್ಬೆಯೇ ಇಲ್ಲಿ ಅಪ್ಪೆಯಾಗಿದೆಯಷ್ಟೆ. ಕುಂದಾಪುರ ಭಾಷೆಯಲ್ಲಿ ಕೆಲ ದಶಕಗಳ ಹಿಂದೆ ಅಮ್ಮನಿಗೆ ಅಬ್ಬಿ ಅಥವಾ ಅಬಾ ಎಂದು ಕರೆಯುವುದು ತುಂಬಾ ಸಾಮಾನ್ಯವಿತ್ತು. ಆದ್ರೆ ಈಗ ಅಲ್ಲಿ ಈ ’ಅಬ್ಬಿ’ ಬಹುತೇಕ ಮಾಯವಾಗಿದೆ. ಬ್ರಹ್ಮಸ್ಥಾನ, ಬ್ರಹ್ಮಲಿಂಗೇಶ್ವರ, ನಾಗಬ್ರಹ್ಮೆರ್, ಬ್ರಹ್ಮಬೈದೆರ್ ಮೊದಲಾದ ದೈವ ಸಂಬಂಧಿ ಹೆಸರುಗಳು. ಬ್ರಹ್ಮಾವರ, ಬ್ರಹ್ಮರ ಕೂಟ್ಲು, ಬ್ರಹ್ಮನಗರದಂತಹ ಊರ ಹೆಸರುಗಳನ್ನೂ ಕೂಡ ಕರಾವಳಿಯಲ್ಲಿ ಕಾಣಬಹುದು. ವೈದಿಕ ಪುರಾಣಗಳ ಪ್ರಕಾರ ಶಾಪಗ್ರಸ್ತ ಬ್ರಹ್ಮನಿಗೆ ಪೂಜೆಯಿಲ್ಲ ದೇಗುಲವೂ ಕೂಡ ಇಲ್ಲ. (ರಾಜಸ್ಥಾನದ ಪುಷ್ಕರ ಬಿಟ್ಟರೆ ಮತ್ತೆ ಕೆಲ ನಾಲ್ಕೈದಷ್ಟೇ ಬ್ರಹ್ಮ ದೇಗುಲ ದೇಶದಲ್ಲಿದೆಯಂತೆ) ಆದರೆ ತುಳುನಾಡಲ್ಲಿ ಮಾತ್ರ ಎಲ್ಲವೂ ಬ್ರಹ್ಮಮಯಂ. ಕಾರಣ ಮಾತ್ರ ಬೇರೆ. ಕರಾವಳಿಯ ದೈವಾರಾಧನೆ ಜಾತಿ ಧರ್ಮವನ್ನೂ ಮೀರಿದ್ದು. ಬಬ್ಬರ್ಯ, ಅಲಿಭೂತಗಳಂತಹ ಮುಸ್ಲಿಮ್ ದೈವಗಳಷ್ಟು ಪ್ರಸಿದ್ಧವಲ್ಲದಿದ್ದರೂ ಕಾಲಘಟ್ಟದಲ್ಲಿ ಸೇರ್ಪಡೆಗೊಂಡ ಕೆಲ ಬ್ರಾಹ್ಮಣ ದೈವಗಳೂ ಇವೆ. (ಅಷ್ಟೇ ಯಾಕೆ, ಇಂತಹ ಹೊಸ ಸೇರ್ಪಡೆಗೆ ಹೊಂದುವಂತೆ ಕಾಪು ಬಳಿ ಪೊಲೀಸ್ ಭೂತ ಎನ್ನುವ ದೈವವೂ ಇದೆಯಂತೆ) ಸಾರ್ವತ್ರಿಕವಲ್ಲದಿದ್ದರೂ ಎಲ್ಲೋ ಕೆಲವೆಡೆ ಶೂದ್ರ ಪರಂಪರೆಯ ಈ ದೈವಗಳನ್ನು ಬ್ರಾಹ್ಮಣರು ನಂಬಿ ಆರಾಧಿಸಿರುವುದೂ ಇದೆ. ಆದರೆ ಈ ವಿಚಾರದ ಆಧಾರದಲ್ಲಿ ತುಳುನಾಡಿನ ತಳ ಸಮುದಾಯದವರು ಆರಾಧಿಸಿಕೊಂಡು ಬರುತ್ತಿದ್ದ ದೈವಾರಾಧನೆಯನ್ನು ಸಾರಾಸಗಟಾಗಿ ವೈದಿಕತೆಯೊಂದಿಗೆ ತಳಕು ಹಾಕಲಾಗದು. ಮೂಲ್ಕಿ ಸಮೀಪದ ಕವತ್ತಾರು ಎಂಬಲ್ಲಿ ಕೇರಳ ಮೂಲದ ಮುಸಲ್ಮಾನರೊಬ್ಬರು ಎರಡು ದಶಕಗಳಿಂದ ಕೊರಗಜ್ಜ, ಕೊರತಿ, ಗುಳಿಗನ ದೈವಸ್ಥಾನ ಕಟ್ಟಿಕೊಂಡು ಕೋಲ ದೈವಾರಾಧನೆಯನ್ನು ನಡೆಸುತ್ತಿರುವ ಉದಾಹರಣೆಯೂ ತುಳುನಾಡಿನಲ್ಲಿದೆ. ಊರಿನವರೂ ಕೂಡ ಈ ಖಾಸಿಮ್ ಸಾಹೇಬರ ದೈವಸ್ಥಾನಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಅವರಿಗೇನೋ ದೈವದಿಂದ ಒಳಿತಾಗಿರಬಹುದು ಅಥವ ಪ್ರೇರಣೆಯಾಗಿದ್ದಿರಲೂ ಬಹುದು ಅಷ್ಟೆ.

ಶೂದ್ರ ದೈವಗಳೆಂದರೆ ವೈದಿಕರಿಗೆ ಒಲವಿಲ್ಲ!

ಆವತ್ತಿನ ಕಾಲದಲ್ಲಷ್ಟೆ ಅಲ್ಲ ಇವತ್ತಿಗೂ ಕೂಡ ಶೂದ್ರ ದೈವಗಳೆಂದರೆ ವೈದಿಕರಿಗೆ ಅಂಥಾ ಒಲವೇನಿಲ್ಲ. ಮನೆಯಲ್ಲಿರುವ ದನಗಳಿಗೋ ಮಕ್ಕಳಿಗೋ ಹುಷಾರಿಲ್ಲದಿದ್ದರೆ ಅಲ್ಲೆಲ್ಲೋ ಬಯಲಲ್ಲಿರುವ ಕಲ್ಲಿಗೆ ಕೈಮುಗಿದು ಬರುವ ಸಂಪ್ರದಾಯವಿತ್ತು. ಆ ಕಲ್ಲಿಗೆ ’ಕೀಳುಕಲ್ಲು’ ಎಂದು ಕರೆಯುವುದು ವಾಡಿಕೆ. ತಾವು ನಂಬುವ ನಮ್ಮನ್ನು ಕಾಯುವ ಯಾವುದೋ ಅತೀತ ಶಕ್ತಿಯನ್ನು ನಾವೇ ಕೀಳು (ಕನಿಷ್ಠ) ಎಂದು ಕರೆಯುವ ಸಂಪ್ರದಾಯವಿಲ್ಲ. ನಂಬಿಕೆಗೆ ಸಂಬಂಧಿಸಿ ಈ ’ಕೀಳು’ ಎನ್ನುವ ಪದವನ್ನು ಬಳಕೆಗೆ ತಂದವರು ಯಾರು? ಕೋಲ ನೇಮಗಳಲ್ಲಿ ಊರಿನ ಹಿರಿತನದ ಮರ್ಯಾದೆಗಿರುವ ಆಹ್ವಾನದಂತೆ ವೈದಿಕ ಮನೆತನದವರು ಬಂದರೂ ದೈವಕ್ಕೆ ವೈದಿಕೇತರರು ಕೊಡುವಂತಹ ಮರ್ಯಾದೆಯನ್ನು ಇವರು ಕೊಡುವುದು ತೀರಾ ಕಡಿಮೆ. ವಿದ್ಯೆ, ಉದ್ಯೋಗ ಇತ್ಯಾದಿಗಳ ಕಾರಣಕ್ಕೆ ತಳ ಸಮುದಾಯದವರಲ್ಲೂ ಇದೀಗ ಹಣಕಾಸಿಗೇನು ಕೊರತೆಯಿಲ್ಲ. ಕೋಲ, ನೇಮ ನಡೆಸುವ ಬ್ರಾಹ್ಮಣೇತರರ ಆಹ್ವಾನಕ್ಕೆ ದೈವದ ಮೇಲಿನ ನಂಬಿಕೆಗಿಂತ ಶೂದ್ರವರ್ಗದ ಬದಲಾದ ಆರ್ಥಿಕ ಅನುಕೂಲತೆಯ ಆಕರ್ಷಣೆಗೊಳಗಾಗಿ ಭೂಸುರ ಮಂದಿ ನಾಗ ಹಾಗು ಭೂತಾರಾಧನೆಯಲ್ಲಿ ಇದೀಗ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಇದರಲ್ಲಿ ಅವರದ್ದೇನೂ ದೋಷ ಖಂಡಿತಾ ಇಲ್ಲ. ರತ್ನಗಂಬಳಿ ಹಾಸಿ ನಾವೇ ದುಡ್ಡು ಕೊಟ್ಟು ಇನ್ನಿಲ್ಲದ ಮರ್ಯಾದೆಯಿಂದ ಕರೆಯುವಾಗ ಈ ಶೂದ್ರಾಚರಣೆಯಲ್ಲೂ ವೈದಿಕರ ಉಪಸ್ಥಿತಿ ಮತ್ತು ಹಿಡಿತವೆಲ್ಲ ಸ್ವಾಭಾವಿಕ ತಾನೇ (ಅವರ ಭೂತಾರಾಧನೆ ಪೂರ್ವ ಸ್ಥಳಶುದ್ಧಿ, ಕಲಶ ಪೂಜೆಯೇ ಮೊದಲಾದ ಪೂಜಾ ಸಮಯದಲ್ಲಿ ಕರೆಸಿದವರೂ ಕೂಡ ಸಮೀಪ ಹೋಗುವಂತಿಲ್ಲ; ಸಾಮಗ್ರಿಗಳನ್ನು ಮುಟ್ಟುವಂತಿಲ್ಲ; ಅವರ ಮಡಿಮೈಲಿಗೆಯ ಕಾರಣಕ್ಕೆ).

ವೈದಿಕ ಆಚರಣೆಗಳಿಗೆ ಇನ್ನಿಲ್ಲದ ಮಹತ್ತ್ವ..

ಈ ಬಗೆಯಲ್ಲಿ ಇಂದು ಶೂದ್ರ ವರ್ಗದ ಭೂತಸ್ಥಾನಗಳಲ್ಲಿ ವೈದಿಕತೆಯ ಆಚರಣೆಗಳಿಗೆ ಇನ್ನಿಲ್ಲದ ಮಹತ್ತ್ವ ನೀಡಲಾಗುತ್ತಿದ್ದು, ದೊಡ್ಡ ದೊಡ್ಡ ಕೋಲ ನೇಮಗಳಷ್ಟೆ ಅಲ್ಲದೇ ಮನೆಯಲ್ಲಿ ನಡೆಸುವಂತಹ ಕುಟುಂಬದ ದೈವ ಕಾರ್ಯಗಳಿಗೂ ಕೂಡ ಸಂಬಂಧವೇ ಇರದ ಹೇಳಲು ಬಾರದಂತಹ ರಾಕ್ಷೋಘ್ನ ಹೋಮ, ಸ್ಥಳ ಶುದ್ಧಿ, ಗಣಪತಿ ಹವನ ಇನ್ನೇನೋ ಎಂದು ಇಲ್ಲಸಲ್ಲದ ಸಂಪ್ರದಾಯಗಳೆಲ್ಲ ಜತೆಯಾಗುತ್ತಿವೆ. ಇನ್ನೂ ಮುಂದುವರೆದು ಪ್ರತಿ ಮನೆಯಲ್ಲೂ ತಂತ್ರಿಗಳನ್ನು ಕರೆಸಿ ಅಷ್ಟಮಂಗಲ ಪ್ರಶ್ನೆ ಮಾಡಿಸುವ ಹೊಸತರದ ’ಪ್ರತಿಷ್ಠೆ’ ಬೇರೆ ಶೂದ್ರವರ್ಗಗಳಲ್ಲಿ ಇದೀಗ ಸುರುವಾಗಿದೆ. ಇನ್ನು ಏನೇನೆಲ್ಲ ಈ ದೈವಾರಾಧನೆಯಲ್ಲಿ ನೋಡಬೇಕೋ.. ಮೂಲ ದೈವಗಳು ಮಾತ್ರ ಗೊತ್ತೇ ಇರದ ಈ ಹೋಮ ಹವನಗಳ ಹೊಗೆಯಿಂದ ಚಡಪಡಿಸಿ ಕಣ್ ಕಣ್ ಬಿಡುತ್ತಿರಬೇಕು ಅಷ್ಟೆ.

ದೈವಗಳು ಸಂಸ್ಕೃತೀಕರಣಗೊಂಡಿವೆ!

ಮಾಮೂಲಿ ದೇವರುಗಳಿಗಿಂತ ಅವೈದಿಕತೆಯ ಈ ಭೂತಾರಾಧನೆಯಂತವುಗಳಿಗೆ ಜನರು ಮುಗಿಬೀಳುತ್ತಿರುವುದು ಮತ್ತು ದುಡ್ಡು ಸುರಿದು ಮೆರೆಸುತ್ತಿರುವುದನ್ನ ನೋಡಿ ಒಳಗೊಳಗೇ ಸಾಕಷ್ಟು ಕುರುಬುತ್ತಿರುವ ಕೆಲ ಭೂಸುರ ಮಂದಿ (ಈ ಬಗ್ಗೆ ಸಾಕಷ್ಟು ನೋಡಿದ್ದೇನೆ) ಸ್ಥಳೀಯ ಜನರಿಂದ ಪ್ರತ್ಯೇಕಿಸಲಾಗದ ಈ ದೈವಾಚರಣೆಯನ್ನು ವೈದಿಕತೆಯ ವ್ಯಾಪ್ತಿಯೊಳಗೆ ತರುವಂತ ಹುಮ್ಮಸ್ಸಿನಲ್ಲಿ ಇದ್ದಾರೆ. (ಬಹುತೇಕ ಯಶಸ್ವಿಯೂ ಆಗಿದ್ದಾರೆ) ಈ ಕಾರಣಕ್ಕೇ ಜುಮಾದಿ, ಲೆಕ್ಕೆಸಿರಿಯಂತಹ ಅನೇಕ ದೈವಗಳು ಸಂಸ್ಕೃತೀಕರಣಗೊಂಡು ಧೂಮಾವತಿ, ರಕ್ತೇಶ್ವರಿಗಳಾಗಿ ಬದಲಾಗಿವೆ. ತುಳುವರ ಪಂಜುರ್ಲಿಯೂ ಕೂಡ ಸಂಸ್ಕೃತದ ವರಾಹ ಮೂರ್ತಿಯಾಗಿದ್ದಾನೆ. ಲಾಭಕ್ಕೆ ತಕ್ಕಂತೆ ಅನ್ಯರ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳುವುದು ವೈದಿಕರಿಗೆ ಹೊಸತೇನಲ್ಲ, ಬೌದ್ಧರ ಗೌತಮ ಬುದ್ಧ, ಜೈನರ ಯಕ್ಷಿಗಳನ್ನು ಮಾತ್ರವಲ್ಲದೇ ಅವರ ಪೌರಾಣಿಕ ಕತೆಗಳನ್ನೂ ಕೂಡ ತಮ್ಮ ಗ್ರಂಥಗಳಲ್ಲಿ ಸೇರಿಸಿ ಕೊಂಡಂತವರಿಗೆ ಈ ಭೂತಗಳೇನು ಮಹಾ..

ಶಂಕರ್ ಸೂರ್ನಳ್ಳಿ

ಲೇಖಕರು.

ಪಂಜುರ್ಲಿ ವೇಷಭೂಷಣ ; ರಿಷಬ್ ಶೆಟ್ಟಿಗೆ ಇಲ್ಲದ ನಿರ್ಬಂಧ ಈ ಯುವತಿಗೇಕೆ?
ತುಳುನಾಡಿನ ಪಂಜುರ್ಲಿ ದೈವ ಮತ್ತು ಸಮಾಜದಲ್ಲಿ ತಳ ಸಮುದಾಯವೆಂದು ಗುರುತಿಸಿಕೊಂಡಿರುವ ದಲಿತರ ಆಚರಣೆಗಳನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಿತವಾಗಿರುವ ‘ಕಾಂತಾರ’ ಸಿನಿಮಾ ಮಾಡಿದ ಅಬ್ಬರ ಎಲ್ಲರಿಗೂ ತಿಳಿದಿರುವಂತದ್ದು. ಈ ಸಿನೆಮಾದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ವೇಷ ಭೂಷಣಗಳೊಂದಿಗೆ ಮೇಳೈಸಿ ಮೆರೆದ ದೃಶ್ಯಗಳು ಸಧ್ಯಕ್ಕೆ ಯಾರೂ ಮರೆಯುವಂತದ್ದಲ್ಲ. ಹಣದ ಗಳಿಕೆಯಲ್ಲೂ ಸಹ ಕಾಂತಾರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಆದರೆ ಇದಕ್ಕೆ ಪರೋಕ್ಷವಾಗಿ ಸಂಬಂಧಿಸಿದಂತಾ ಒಂದು ಘಟನೆ ನಾಡಿನ ಜನ ಇದನ್ನು ದ್ವಂದ್ವದಿಂದ ನೋಡುವಂತಾಗಿದೆ. ಕಾಂತಾರದಲ್ಲಿ ರಿಷಬ್ ಶೆಟ್ಟಿ ಹಾಕಿದ ಪಂಜುರ್ಲಿ ದೈವದ ವೇಷಕ್ಕೆ ಇಲ್ಲದ ಟೀಕೆ, ಆಕ್ರೋಶ, ಅವಮಾನಕರ ಪ್ರತಿಕ್ರಿಯೆಗಳು ಈ ಯುವತಿಯೊಬ್ಬಳ ಮೇಲೆ ಯಾಕೆ ಎಂಬುದು ಪ್ರಶ್ನಾರ್ಹವಾಗಿದೆ. ಅಂದಹಾಗೆ ಏನೀ ಸ್ಟೋರಿ..? ಯಾರೀ ಯುವತಿ ಅಂತೀರಾ.. ಈ ಸ್ಟೋರಿ ಓದಿ.

ಮೇಕಪ್ ಆರ್ಟಿಸ್ಟ್ ಆಗಿರುವ ಶ್ವೇತಾ ರೆಡ್ಡಿ ಎಂಬುವವರು ತಮ್ಮ ಇನಸ್ಟಾಗ್ರಾಂ ಖಾತೆಯಲ್ಲಿ ಪಂಜುರ್ಲಿ ದೈವದ ಗಣಪಾತ್ರಿಗಳಿಗೆ ಮಾಡುವಂತೆ ವೇಷ ಧರಿಸಿ ರೀಲ್ಸ್ ಮಾಡಿ ಶೇರ್ ಮಾಡಿದ್ದರು. ‘ಕಾಂತಾರ’ ಸಿನೆಮಾದ ‘ವರಾಹ ರೂಪಂ’ ಹಾಡಿಗೆ ಸಿನೆಮಾದಲ್ಲಿ ರಿಷಬ್ ಶೆಟ್ಟಿ ಅಭಿನಯವನ್ನೇ ಅನುಕರಿಸಿ ಈ ವಿಡಿಯೋ ಮಾಡಲಾಗಿತ್ತು. ರೀಲ್ಸ್ ಆದರೂ ಸಹ ವಿಡಿಯೋ ಮಾಡಲು ಶ್ವೇತಾ ರೆಡ್ಡಿಯವರು ಸಾಕಷ್ಟು ಶ್ರಮ ವಹಿಸಿದ್ದು ಈ ವಿಡಿಯೋದಲ್ಲಿ ಎದ್ದು ಕಾಣುತ್ತಿತ್ತು. ಆದರೆ ಇದೇ ಈಗ ಇನಸ್ಟಾಗ್ರಾಂ ಜಾಲತಾಣಗಳಲ್ಲಿ ಹೆಚ್ಚು ಆಕ್ರೋಶಕ್ಕೆ ಕಾರಣವಾಗಿದೆ.

ಶ್ವೇತಾ ರೆಡ್ಡಿಯವರು ರೀಲ್ಸ್ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ರೀಲ್ಸ್ ಗೆ ವ್ಯಾಪಕ ಟೀಕೆ, ಆಕ್ರೋಶದ ಜೊತೆಗೆ ‘ಮುಂದಿನ ಪರಿಣಾಮ’ದಂತಹ ಬೆದರಿಕೆಯ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ. “ದೈವಾರಾಧನೆಯು ತುಳುನಾಡಿನ ಧಾರ್ಮಿಕ ನಂಬಿಕೆಯಾಗಿದೆ. ಈ ರೀಲ್ಸ್ ಮೂಲಕ ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ. ರೀಲ್ಸ್ ನ್ನು ತಕ್ಷಣ ಡಿಲೀಟ್ ಮಾಡುವಂತೆ” ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

“ತುಳುನಾಡಿನ ದೈವ, ದೇವರುಗಳೆಂದರೆ ನಿಮಗೆಲ್ಲಾ ಮನರಂಜನೆಯ ವಸ್ತು ಎಂದುಕೊಂಡ್ರಾ ಅವಿವೇಕಿಗಳೇ? ನಿಮ್ಮ ರೀಲ್ಸ್ ನ ಲೈಕ್ ಕಾಮೆಂಟಿಗೋಸ್ಕರ ನಮ್ಮ ನಂಬಿಕೆ, ಭಾವನೆಗಳ ಜೊತೆಗೆ ಆಟ ಆಡಬೇಡಿ, ಮರ್ಯಾದೆಯಿಂದ ಪೋಸ್ಟ್ ಡಿಲೀಟ್ ಮಾಡಿ. ನಿಮ್ಮ ತೀಟೆಗೆ ನಮ್ಮ ನಂಬಿಕೆ ಬಳಸ್ಕೋಬೇಡಿ” ಎಂದು ಒಬ್ಬರು ತಮ್ಮ ಆಕ್ರೋಶ ಹೊರಹಾಕಿದರೆ, “ನಮ್ಮ ದೈವ, ದೇವರನ್ನು ಅಣಕ ಮಾಡಿದರೆ, ಪರಿಣಾಮ ನೆಟ್ಟಗಿರೋದಿಲ್ಲ. ಮರ್ಯಾದೆಯಿಂದ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದರೆ ಸರಿ.. ಇಲ್ಲವಾದರೆ ಮುಂದಿನ ಪರಿಣಾಮಕ್ಕೆ ನೀವೇ ಹೊಣೆ” ಎಂದು ಮತ್ತೊಬ್ಬರು ಬೆದರಿಕೆ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸಧ್ಯ ಈ ರೀತಿಯ ಪ್ರತಿಕ್ರಿಯೆಗೆ ಹೆದರಿ ಶ್ವೇತಾ ರೆಡ್ಡಿಯವರು ತಮ್ಮ ಅಕೌಂಟ್ ನಿಂದ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಈಗ ಎದ್ದಿರುವ ಪ್ರಶ್ನೆ ಎಂದರೆ ಯುವತಿ ಶ್ವೇತಾ ರೆಡ್ಡಿಯವರು ಅದನ್ನೊಂದು ಕಲೆ ಎಂದು ಅಭಿನಯಿಸಿ ಮಾಡಿದ ರೀಲ್ಸ್ ನಿಂದ ನೆಟ್ಟಿಗರ, ಅದರಲ್ಲೂ ತುಳುನಾಡಿಗರ ಭಾವನೆಗೆ ನಿಜಕ್ಕೂ ಧಕ್ಕೆ ಆಗಿದೆಯೇ ಎಂಬುದು. ಅಕಸ್ಮಾತ್ ಆ ವಿಡಿಯೋದಿಂದ ತುಳುನಾಡಿಗರ ಭಾವನೆಗೆ ಧಕ್ಕೆ ಆಗಿರುವುದೇ ಆದರೆ ಆ ಯುವತಿಗೆ ಆದ ನಿರ್ಬಂಧ ರಿಷಬ್ ಶೆಟ್ಟಿಗೆ ಯಾಕೆ ಆಗಿಲ್ಲ ಎಂಬುದು ಇಲ್ಲಿ ಎದ್ದಿರುವ ಪ್ರಮುಖ ಪ್ರಶ್ನೆ.

ರಿಷಬ್ ಶೆಟ್ಟಿ ಕೂಡಾ ಪಂಜುರ್ಲಿ ದೈವದ ವೇಷದಲ್ಲಿ ಅಭಿನಯಿಸಿದವರೇ.. ಅದ್ಭುತವಾಗಿ ನಟಿಸಿದ್ದಾರೆ ಕೂಡಾ. ಇಡೀ ‘ಕಾಂತಾರ’ದ ಹೈಲೈಟ್ ಕೂಡಾ ಅದೇ ಆಗಿದೆ. ‘ಕಾಂತಾರ’ ತೆರೆ ಕಂಡಾಗ ಕಣ್ಮನ ತುಂಬಿಕೊಂಡವರು, ಈ ಯುವತಿಯ ವಿಡಿಯೋಗೆ ಯಾಕೆ ತಮ್ಮ ಆಕ್ರೋಶ ಹೊರಹಾಕಿದ್ದು ಎಂಬುದು ಇಲ್ಲಿ ಪ್ರಶ್ನಾರ್ಹ. ಈ ಬಗ್ಗೆ ಜಾಲತಾಣಗಳಲ್ಲಿ ಪ್ರಶ್ನೆ ಎದ್ದಿದ್ದು, ರಿಷಬ್ ಗೆ ಇಲ್ಲದ ನಿರ್ಬಂಧ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿಗೆ ಯಾಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಭಾವನೆಗಳ ಅಡಿಯಲ್ಲಿ ಬೆದರಿಕೆ ಹಾಕೋದರ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದ್ದು ಇಲ್ಲಿ ರಿಷಬ್ ಶೆಟ್ಟಿಗೆ ಒಂದು ನ್ಯಾಯ, ಆ ಯುವತಿಗೆ ಒಂದು ನ್ಯಾಯವೇ ಎಂದು ನೆಟ್ಟಿಗರು ಮರುಪ್ರಶ್ನೆ ಹಾಕಿದ್ದಾರೆ. ಇದರ ಜೊತೆಗೆ ‘ವರಾಹ ರೂಪಂ’ ಸಂಗೀತ ಸಂಯೋಜನೆ ಕೂಡಾ ಮಲಯಾಳಂ ನಿಂದ ಕದ್ದ ಸರಕು ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನೈಜವಾಗಿ ಚಿತ್ರತಂಡದಿಂದಲೇ ಪಂಜುರ್ಲಿ ದೈವಕ್ಕೆ ಅವಮಾನವಾಗಿದೆ ಎಂಬುದು ಮತ್ತೊಂದು ಆಯಾಮದಲ್ಲಿ ಟೀಕೆ ಶುರುವಾಗಿದೆ.

25 ದಿನಗಳ ಯಶಸ್ವಿ ಪ್ರದರ್ಶನ ಮುಂದುವರೆಸಿದ ಕಾಂತಾರ
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ 25ನೇ ದಿನಕ್ಕೆ ಕಾಲಿಟ್ಟಿದ್ದು, ತನ್ನ ಯಶಸ್ವಿ ಪ್ರದರ್ಶನವನ್ನು ಮುಂದುವರೆಸಿದೆ.

ಈ ಮೂಲಕ ಕಾಂತಾರ ಸಿನಿಮಾ ಕರ್ನಾಟಕವೊಂದರಲ್ಲೇ 77 ಲಕ್ಷ ವೀಕ್ಷಕರನ್ನು ಸೆಳೆದಿದೆ. ಇತ್ತೀಚೆಗಷ್ಟೇ ಕನ್ನಡದಲ್ಲಿ 100 ಕೋಟಿ ರೂ.ಗಳ ಗಡಿ ದಾಟಿದ ಈ ಚಿತ್ರ ಇದೀಗ ರಾಜ್ಯದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಹಿನ್ನಲೆಯಲ್ಲಿ, ಕಾಂತಾರ ರಾಷ್ಟ್ರ ಮಟ್ಟದಲ್ಲಿ ಯಶಸ್ಸನ್ನು ಸಾಧಿಸುವ ಮೂಲಕ ಮತ್ತೊಂದು ಯಶಸ್ಸಿನ ಗರಿಯಾಗಿ ಹೊರಹೊಮ್ಮಿದೆ.

ಪ್ರೊಡಕ್ಷನ್ ಹೌಸ್‌ನಿಂದ ಹಿಂದಿನ ಚಲನಚಿತ್ರಗಳ ಸಾಧನೆಗಳೆಂದರೆ, ಕರ್ನಾಟಕದಲ್ಲಿ ಪುನೀತ್ ರಾಜ್‌ಕುಮಾರ್ ಅವರ ರಾಜಕುಮಾರ, ಸಂತೋಷ್ ಆನಂದ್‌ರಾಮ್ ನಿರ್ದೇಶನದ 65 ಲಕ್ಷ ವೀಕ್ಷಕರನ್ನು ಒಳಗೊಂಡಿತ್ತು, ಅಂತೆಯೇ, ಯಶ್ ಅಭಿನಯದ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್: ಅಧ್ಯಾಯ 1 (2018), ಬಿಡುಗಡೆಯ ಸಮಯದಲ್ಲಿ ಕರ್ನಾಟಕದಲ್ಲಿ 75 ಲಕ್ಷ ವೀಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಿತು. ಇದರ ಮುಂದುವರಿದ ಭಾಗ, ಕೆಜಿಎಫ್ ಅಧ್ಯಾಯ 2 ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ 73 ಲಕ್ಷ ವೀಕ್ಷಕರನ್ನು ತನ್ನತ್ತ ಸೆಳೆದಿತ್ತು.

ಹೊಂಬಾಳೆ ಫಿಲಂಸ್‌ನಿಂದ ಹಿಂದಿನ ಎಲ್ಲಾ ಚಿತ್ರಗಳ ದಾಖಲೆಗಳನ್ನು ಕಾಂತಾರ ಛಿದ್ರಗೊಳಿಸಿದ್ದು, ಜಾನಪದ ಆಕ್ಷನ್ ಮುಂದಿನ ಕೆಲವೇ ವಾರಗಳಲ್ಲಿ ರಾಜ್ಯದಲ್ಲಿ ಒಂದು ಕೋಟಿ ವೀಕ್ಷಕರನ್ನು ತನ್ನತ್ತ ಸೆಳೆಯುವ ನಿರೀಕ್ಷೆಯಿದೆ.

ಕಾಂತಾರ ದಾಖಲೆ ನಿರ್ಮಿಸಿರುವ ಕುರಿತು ಪ್ರತಿಕ್ರಿಯಿಸಿರುವ ರಿಷಬ್, ಚಿತ್ರಮಂದಿರಗಳಲ್ಲಿ ಸಿನಿಮಾ ಆಚರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ʼಚಿತ್ರವು ಯಾವುದೇ ದಾಖಲೆಗಳನ್ನು ಸೃಷ್ಟಿಸುತ್ತಿರುವುದಕ್ಕೆ ಪ್ರೇಕ್ಷಕರು ಕಾರಣ, ಈ ಕಾರಣ ನಾನು ಕಾಂತಾರವನ್ನು ಕರ್ನಾಟಕದ ಜನರಿಗೆ ಅರ್ಪಿಸುತ್ತೇನೆʼ ಎಂದು ಹೇಳಿದ್ದಾರೆ. ಈ ಮೂಲಕ ಸಿನಿಮಾ 25 ದಿನಗಳ ಪ್ರದರ್ಶನದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂತಾರ ಮನುಷ್ಯ ಮತ್ತು ಕಾಡು ಸಂಘರ್ಷದ ಕುರಿತಾದ ಚಿತ್ರವಾಗಿದ್ದು, ರಿಷಬ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಮಾನಸಿ ಸುಧೀರ್ ಮತ್ತು ಮೈಮ್ ರಾಮದಾಸ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕಾಂತ್ ಮತ್ತು ಅರವಿಂದ್ ಕಶ್ಯಪ್ ಕ್ರಮವಾಗಿ ಸಂಗೀತ ಮತ್ತು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.

ಬಿಳಿಮಲೆ ಕಂಡ ಕಾಂತಾರ: ಎಂಚಿನಲಾ ಆವಡ್‌, ಸಿನೇಮಾ ಎಡ್ಡೆ ಉಂಡುಯೇ, ಒರೊ ತೂವೊಲಿ
ಕಾಂತಾರ ಚಿತ್ರದ ಕುರಿತ ವಿಮರ್ಶೆಗಳ ಸುರಿಮಳೆ ನಿಲ್ಲುತ್ತಿಲ್ಲ. ಕರಾವಳಿಯ ಬೂತಾರಾಧನೆಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲ, ಸಾಹಿತಿ-ಸಂಶೋಧಕ ಡಾ.ಪುರುಷೋತ್ತಮ ಬಿಳಿಮಲೆ ಕಾಂತಾರ ನೋಡಿದ ನಂತರ ಬರೆದಿರುವ ಬರೆಹ ಇಲ್ಲಿದೆ.

ಕೊನೆಗೂ ಕಾಂತಾರ ಸಿನೇಮಾವನ್ನು ಕನ್ನಡದಲ್ಲಿಯೇ ನೋಡಿದೆ. ನನಗೆ ಖುಷಿಯಾಯಿತು. ಕರಾವಳಿಯ ಬದುಕಿನ ಎರಡು ಕಣ್ಣುಗಳಂತಿರುವ ಭೂತಾರಾಧನೆ ಮತ್ತು ಯಕ್ಷಗಾನಗಳನ್ನು ಅತ್ಯಂತ ಸೃಜನಶೀಲವಾಗಿ ಮರು ಸೃಷ್ಟಿಸಿದವರು ಕಡಿಮೆ ಎಂದೇ ಹೇಳಬೇಕು. ಎಷ್ಟೋ ಬಾರಿ ಈ ಪ್ರಕಾರಗಳು ಎಷ್ಟು ಸಶಕ್ತವಾಗಿರುತ್ತವೆ ಎಂದರೆ ಸೃಜನಶೀಲತೆಯ ಅನೇಕ ಸಾಧ್ಯತೆಗಳನ್ನು ಅವುಗಳೇ ಸೂರೆಗೊಂಡಿರುತ್ತವೆ. ಈ ನಿಟ್ಟಿನಲ್ಲಿ ಕಾಂತಾರವು ಕರಾವಳಿಯ ಬದುಕಿನ ಕೆಲವು ಆಯಾಮಗಳನ್ನು ಮೊದಲಬಾರಿಗೆ ತೆರೆಯಮೇಲೆ ತಂದಿದೆ.

ಪಂಜುರ್ಲಿ ದೈವ, ಅದರ ಗಗ್ಗರದ ನಿಗೂಢ ದನಿ, ಸೂಟೆ ( ದೊಂದಿ), ಹಸಿರು ಕಾಡು, ಕಂಬಳ, ಹೊಡೆದಾಟ, ಬೀಡಿ, ಶರಾಬು, ಕೋಳಿಕಟ್ಟ, ಯಕ್ಷಗಾನ, ಮೀನು, ವಿಭಿನ್ನ ಕನ್ನಡ ಇತ್ಯಾದಿಗಳನ್ನು ನಿರ್ದೇಶಕ_ರಿಷಭ್ ಶೆಟ್ಟಿಯವರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಕರಾವಳಿಯ ಕಡಲಿನ ಅಬ್ಬರ, ದೈವ ನರ್ತಕರೇ ಸೃಷ್ಟಿಸುವ ಸಂಗೀತ, ಕಾಡೇ ಹುಟ್ಟಿಸುವ ನಿಗೂಢ ಧ್ವನಿ ಇತ್ಯಾದಿಗಳನ್ನು ಇಲ್ಲಿ ಹೆಚ್ಚಾಗಿ ಬಳಸಿಕೊಂಡಿಲ್ಲ. ಪಾಡ್ದನದ, ಕಬಿತಗಳ ಲಯಗಾರಿಕೆಯ ಮಾಧುರ್ಯವನ್ನು ಇಲ್ಲಿ ಕೇಳಲಾರೆವು. ಮೂಲತ: ಈ ಲಯಗಳು ದೈವವೊಂದರ ದುರಂತಕ್ಕೆ ಪರಿಣಾಮಕಾರಿಯಾದ ಹಿನ್ನೆಲೆಯನ್ನು ಒದಗಿಸಿಕೊಡುತ್ತವೆ. ಬಹುಶ: ಕಮರ್ಶಿಯಲ್‌ ಸಿನೇಮಾವೊಂದು ಇವನ್ನೆಲ್ಲ ಬಳಸಿಕೊಳ್ಳುವುದೂ ಕಷ್ಟ.

ಈ ಚಿತ್ರವು 1870, 1970 ಮತ್ತು 1990 ರ ಮೂರು ಅವಧಿಗಳಲ್ಲಿ ಕರಾವಳಿ ಕಂಡ ಸ್ತಿತ್ಯಂತರಗಳನ್ನು ಒಂದು ಚೌಕಟ್ಟಾಗಿ ಇರಿಸಿಕೊಂಡಿದೆ. ವಸಾಹತು ಕಾಲಘಟ್ಟದಲ್ಲಿ ಥಾಮಸ್‌ ಮುನ್ರೋ ಮೊದಲ ಬಾರಿಗೆ ಕಾಡಿನ ಮೇಲೆ ಪ್ರಭುತ್ವ ಸಾಧಿಸುವಂತ ಕಾನೂನುಗಳನ್ನು ತಂದ. ಈಸ್ಟ್‌ ಇಂಡಿಯಾ ಕಂಪೆನಿಯ ಹಡಗುಗಳು ಮರಗಳನ್ನು ಹೊತ್ತು ಸಾಗಿಸಲು ಸದಾ ಸಿದ್ಧವಾಗಿರುವಾಗ ಅದಕ್ಕೆ ಬೇಕಾದ ಕಾನೂನನ್ನು ಅವರೇ ತಂದುಕೊಂಡಿರುವುದು ಆಶ್ಚರ್ಯದ ವಿಷಯವೇನೂ ಅಲ್ಲ. ಕಾಡಿನ ಒತ್ತುವರಿ, ಕಾಡಿನ ಮಕ್ಕಳು ತಮ್ಮದೇ ಕಾಡಿನಲ್ಲಿ ಅನಾಥರಾಗುವುದು ಈ ಸಿನೇಮಾದಲ್ಲಿಯೂ ಬಂದಿದೆ.

೧೯೭೦ರ ದಶಕದಲ್ಲಿ ಭೂಮಸೂದೆ ಜ್ಯಾರಿಗೆ ಬಂದಾಗ ಭೂ ಸಂಬಂಧಗಳಲ್ಲಿ ಅಮೂಲಾಗ್ರ ಬದಲಾವಣೆಯಾಯಿತು. ದೈವ ನರ್ತಕರೂ ಅದರಿಂದ ಕೆಲವು ತೊಂದರೆಗಳಿಗೆ ಒಳಗಾದರು. ಸಿನೇಮಾದಲ್ಲಿ ಗುರುವನ ಕೊಲೆ ಅಂಥದ್ದರ ಒಂದು ಸಂಕೇತ. ಆ ಕಾಲದಲ್ಲಿ ಸ್ವಲ್ಪ ಬಿಕ್ಕಟ್ಟನ್ನೆದುರಿಸಿದ ಭೂತಾರಾಧನೆಯು, ೧೯೯೦ರ ಆನಂತರ ಮತ್ತೆ ವೈಭವದ ದಿನಗಳನ್ನು ಕಂಡಿತು. ತುಳುನಾಡಿನ ಹೊರಗಡೆಗೆ, ಮುಖ್ಯವಾಗಿ ಮುಂಬೈಗೆ ವಲಸೆ ಹೋದ ತುಳುವರು ಕಷ್ಟ ಪಟ್ಟು ದುಡಿದು ಶ್ರೀಮಂತರಾಗಿ ಮತ್ತೆ ಹುಟ್ಟಿದೂರಿನ ಭೂತಾರಾಧನೆ ಮತ್ತು ನಾಗಾರಾಧನೆಗೆ ಹಣದ ತೊಂದರೆಯಾಗದಂತೆ ನೋಡಿಕೊಂಡರು. ಇದರಿಂದ ಅವರಿಗೆಲ್ಲ ಊರಿನಲ್ಲೊಂದು ಗುರುತು ಕೂಡಾ ಪ್ರಾಪ್ತಿಸಿತು. ಈ ಹಿನ್ನಲೆಯಲ್ಲಿ ಕಾಂತಾರವು ಆಯ್ದುಕೊಂಡ ಕಾಲದ ಚೌಕಟ್ಟು ಅರ್ಥಪೂರ್ಣವಾಗಿದೆ.

ಸಿನೇಮಾವನ್ನು ಈಗಾಗಲೇ ಬಹುತೇಕ ಎಲ್ಲರೂ ನೋಡಿರುವುದರಿಂದ ಮತ್ತೆ ನಾನು ಕತೆ ಹೇಳುವುದಿಲ್ಲ.
ಚಿತ್ರದ ಕೊನೆಯಲ್ಲಿ ರಿಷಭ್ ಶೆಟ್ಟಿಯವರು ಮಾಡಿದ ಅಭಿನಯ ಅಮೋಘ. ದೈವಾರಾಧನೆಯಲ್ಲೂ ನಾಯಕರು ಅರ್ಧವಯಸ್ಸಿನಲ್ಲಿ ಸತ್ತು, ಆಮೇಲೆ ಮಾಯಕಗಳಾಗಿ ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಉದಾಹರಣಗೆ ಕಲ್ಕುಡ -ಕಲ್ಲುರ್ಟಿಯವರು, ʼಜೀವ ಇರುವಾಗ ನೋಡಲಿಕ್ಕೆ ಆಗಲಿಲ್ಲ, ಸತ್ತು ನೋಡಿಕೊಳ್ಳುತ್ತೇವೆ; ಎಂದು ಹೇಳಿ ಮಾಯಕದಲ್ಲಿ ಅರಸನ ಮನೆಗೆ ಬೆಂಕಿ ಇಡುತ್ತಾರೆ, ಅರಸಿಯರಿಗೆ ಹುಚ್ಚು ಹಿಡಿಸುತ್ತಾರೆ. ಪಾಡ್ದನಗಳಲ್ಲಿ ಈ ಭಾಗ ಉಗ್ರವೇ ಆಗಿರುತ್ತದೆ. ಈ ವಿಷಯದಲ್ಲಿ ಅದು ಹಿಂದೂ ದೇವರುಗಳಿಗಿಂತ ಭಿನ್ನವೇ ಹೌದು. ನನಗೆ ಗೊತ್ತಿರುವ ಯಾವ ಹಿಂದೂ ದೇವರು ಕೂಡಾ ಅರ್ಧ ವಯಸ್ಸಿನಲ್ಲಿ ಸತ್ತು ಆನಂತರ ಮಾಯಕದಲ್ಲಿ ಸೇಡು ತೀರಿಸಿಕೊಳ್ಳುವುದನ್ನು ನಾನು ಓದಿಲ್ಲ. ದೈವವೊಂದರ ಮಾಯಕದ ಸೇಡಿನ ಭಾಗ , ಅದನ್ನು ಶೆಟ್ಟಿ ಅಭಿನಯಿಸಿದ ರೀತಿ ಕಾಂತಾರದ ಉತ್ಕೃಷ್ಟ ಭಾಗ ಎಂದು ನನ್ನ ಭಾವನೆ.

ಸಿನೇಮಾ ನೋಡಿ ಬಂದ ಮೇಲೆ ಈ ಸಿನೇಮಾ ಯಾಕಿಷ್ಟು ಚರ್ಚೆಗೆ ಒಳಗಾಯಿತು ಎಂಬುದು ನನಗೆ ಸ್ಪಷ್ಟವಾಗಲಿಲ್ಲ. ಪಂಜುರ್ಲಿಯನ್ನು ಕೊನೆಗೆ ವರಾಹ ರೂಪಿ ಎಂದು ಸಂಸ್ಕೃತದಲ್ಲಿ ನುತಿಸಿದ್ದು ಮತ್ತು ಅದಕ್ಕೆ ಪೂರಕವಾಗಿ ಪಾಡ್ದನಗಳಲ್ಲಿ ಇಲ್ಲದೇ ಇರುವ ಶಾಸ್ತ್ರೀಯಕ್ಕೆ ಹತ್ತಿರವಿರುವ ಸಂಗೀತ ಬಳಸಿದ್ದು ವಾಸ್ತವವಾಗಿ ಸಿನೇಮಾದ ಅತ್ಯಂತ ದುರ್ಬಲ ಭಾಗ. ಅದು ಆ ಕತೆಯ ಅಲ್ಲಿವರೆಗಣ ಬೆಳವಣಿಗೆಗೆ ಹೊಂದುವುದೇ ಇಲ್ಲ‌. ಆದರೆ ಈ ನಿಟ್ಟಿನಲ್ಲಿ ಸೃಜನಶೀಲ ಕಲಾವಿದನಿಗೆ ಇರಬೇಕಾದ ಸ್ವಾತಂತ್ರ್ಯವನ್ನು ನಾನಂತೂ ಪ್ರಶ್ನಿಸಲಾರೆ.

ಹೊಡೆದಾಟ, ಬಡಿದಾಟ, ಕೊಲೆ ಇತ್ಯಾದಿಗಳೆಲ್ಲ ಕರಾವಳಿಯಲ್ಲಿ ಸ್ವಲ್ಪ ಹೆಚ್ಚೇ ಇರುವುದರಿಂದಾಗಿ ರಿಷಭ ಶೆಟ್ಟಿಯವರು ಅದನ್ನು ಸ್ವಲ್ಪ ಜಾಸ್ತೀಯೇ ತೋರಿಸಿದಂತಿದೆ.
ಎಂಚಿನಲಾ ಆವಡ್‌, ಸಿನೇಮಾ ಎಡ್ಡೆ ಉಂಡುಯೇ, ಒರೊ ತೂವೊಲಿ

ಜನಪದೀಯರ ಕೋಲದ ಭೂತಕ್ಕೆ ಧರ್ಮದ ಬಣ್ಣ ಬಳಿಯಬೇಡಿ: ನಟ ಕಿಶೋರ್ ಕುಮಾರ್ ಆಕ್ರೋಶ
ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯ, ನಿರ್ದೇಶನದ ಕಾಂತಾರ ಚಿತ್ರದಲ್ಲಿ‌ ಬಳಸಲಾಗಿರುವ ಭೂತದ‌ ಕೋಲ, ನೇಮದ ದೈವಕ್ಕೆ ಧರ್ಮದ ಬಣ್ಣ ಏಕೆ ಬಳಿಯುತ್ತಿದ್ದೀರಿ ಎಂದು ಕಾಂತಾರದಲ್ಲಿ ಅರಣ್ಯಾಧಿಕಾರಿ ಪಾತ್ರ ನಿರ್ವಹಿಸಿರುವ ಹೆಸರಾಂತ ನಟ ಕಿಶೋರ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂತಾರದ ದಲಿತ ಪಾತ್ರಗಳು ವೈದಿಕವೋ ಅವೈದಿಕವೋ, ಹಿಂದೂ ಧರ್ಮಕ್ಕೆ ಸೇರಿದ್ದೋ ಅಲ್ಲವೋ ಎಂಬ ಬಿರುಸಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ನಟ ಕಿಶೋರ್ ಕುಮಾರ್ ಅಸ್ಪೃಶ್ಯತೆಯ ಆಚರಣೆಯಲ್ಲಿ ನಿಮಗೆ ಅಧರ್ಮದ ಬಣ್ಣ ಯಾಕೆ ಕಾಣುತ್ತಿಲ್ಲ ಎಂದು ಸೂಕ್ಷ್ಮವಾಗಿ ಪ್ರಶ್ನಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಈ ಕುರಿತು ಕಿಶೋರ್ ಕುಮಾರ್ ಬರೆದಿರುವ ಅಭಿಪ್ರಾಯಗಳ ಪೂರ್ಣಪಾಠ ಹೀಗಿದೆ:

“ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಸಿ ಕಳಕಳಿಯ ಮನವಿ . ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ??

ಎಲ್ಲ ಒಳ್ಳೆಯ ಸಿನಿಮಾಗಳಂತೆ “ಕಾಂತಾರ” ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿಹೋದೀತು.

ಕೇವಲ ಓಟಿಗಾಗಿ ಪಟೇಲ್ ಗಾಂಧಿ ಬೋಸ್ ನೆಹ್ರೂ ಸಹಿತ ಕೋಟಿ ಕೋಟಿ ಸ್ವತಂತ್ರ್ಯ ಹೋರಾಟಗಾರರನ್ನೂ ಬಳಸುವ, ಬೈಯ್ಯುವ.. ರಾಷ್ಟ್ರ ಗೀತೆ, ಧ್ವಜ,ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನ ಒಂದು ಕ್ಷಣ ಯೋಚಿಸಿ.
ನಮ್ಮ ಸಿನಿಮಾಗಳು ನಮ್ಮ ಹೆಮ್ಮೆ. ಅವುಗಳನ್ನು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ.”

ನಟ ಅಹಿಂಸಾ ಚೇತನ್ ಅವರ ಕಾಂತಾರದಲ್ಲಿ ತೋರಿಸುವ ಆಚರಣೆಗಳು ಹಿಂದೂ ಧರ್ಮಕ್ಕೆ ಸೇರಿದ್ದಲ್ಲ, ಅವು ಆದಿವಾಸಿಗಳ ಮೂಲ ಪರಂಪರೆ ಎಂದು ಹೇಳಿದ್ದರಿಂದ ವಿವಾದ ಭುಗಿಲೆದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಭೂತಕ್ಕಿದೆಯೇ ಭವಿಷ್ಯ?
ದೈವಾರಾಧನೆಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎನ್ನುವುದಾದರೆ ಭೂತ ಕಟ್ಟುವವನ ಮಗನೂ ಭೂತ ಕಟ್ಟಿಕೊಂಡೇ ಇರಬೇಕೇ? ಆತನಿಗೂ ಸಾಮಾಜಿಕವಾಗಿ ಮೇಲ್ಮುಖ ಚಲನೆ ಬೇಡವೇ? ಎಂಬ ಬಹು ಮುಖ್ಯ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿದ್ದಾರೆ ಚಿಂತಕ ಶ್ರೀನಿವಾಸ ಕಾರ್ಕಳ.

“ಹ್ವಾಯ್, ಮುಂದಿನ್ ವಾರ ಕಲ್ಕುಟ್ಕ ಮಕ್ಕಿಯಲ್ ಕೋಲ ಅಂಬ್ರಲ್ಲೆ…”  ಎಂಬ ಮಾತು ಎಲ್ಲೋ  ಯಾರೋ ಆಡುತ್ತಿರುವುದು ಕಿವಿಗೆ ಬಿದ್ದರೂ ಸಾಕು, ಒಂದು ಕ್ಷಣ ನಮ್ಮ ಕಿವಿ ನೆಟ್ಟಗಾಗಿ ಬಿಡುತ್ತಿತ್ತು. ಇದಕ್ಕೆ ಕಾರಣಗಳು ಅನೇಕ. ಇಂದಿನಂತಹ ಮನರಂಜನಾ ಕಾರ್ಯಕ್ರಮಗಳು ವ್ಯಾಪಕವಾಗಿ ಇರದ ಅದು ಕಳೆದ ಶತಮಾನದ ಎಪ್ಪತ್ತರ ದಶಕ. ಊರಿನವರನ್ನೆಲ್ಲ ಆಕರ್ಷಿಸಿ ಒಂದೆಡೆ ಸೇರಿಸುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಗಳೆಂದರೆ, ಊರಿನ ದೇವಸ್ಥಾನದ ತೇರಿನ ಜಾತ್ರೆ, ಅಪರೂಪಕ್ಕೊಮ್ಮೆ ಬರುತ್ತಿದ್ದ ಟೆಂಟ್ ಮೇಳದ ಯಕ್ಷಗಾನ ಬಯಲಾಟ, ಶಾಲೆಯ ವಾರ್ಷಿಕೋತ್ಸವ, ಅದು ಬಿಟ್ಟರೆ ಊರ ದೈವಗುಡಿಯ ಕೋಲ.

ಶಂಕ್ರಾಣದ (ಊರ ಹೆಸರು ಶಂಕರನಾರಾಯಣವಾದರೂ ಅಷ್ಟುದ್ದದ ಹೆಸರು ಗ್ರಾಮೀಣ ಅನಕ್ಷರಸ್ಥರು ಮತ್ತು ಅರೆ ಅಕ್ಷರಸ್ಥರ ಬಾಯಿಯಲ್ಲಿ ಹೇಗೆ ಉಳಿದೀತು? ಅದನ್ನು ಅವರು ಸಂಕ್ಷಿಪ್ತವಾಗಿ ಕರೆಯುತ್ತಿದ್ದುದು ಶಂಕ್ರಾಣ ಎಂದೇ. ಈ ಶಂಕ್ರಾಣವು ಕುಂದಾಪುರದಿಂದ ಹಾಲಾಡಿ ಮಾರ್ಗವಾಗಿ ಸಿದ್ದಾಪುರ ಕಡೆಗೆ ಹೋಗುವಾಗ ಹಾಲಾಡಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಸಿಗುತ್ತದೆ) ವೀರ ಕಲ್ಲು ಕುಟಿಕ/ ಕಲ್ಕುಡ ದೈವದ ಕೋಲ ತುಂಬಾ ಪ್ರಸಿದ್ಧ. ಎರಡೋ ಮೂರೋ ದಿನ ನಡೆಯುತ್ತಿದ್ದ ಆ ಕೋಲಕ್ಕೆ ಆ ದೈವಸಾನಕ್ಕೆ ನಡೆದುಕೊಳ್ಳುವ ಸುತ್ತಲ ಹಳ್ಳಿಗರು ಮಾತ್ರವಲ್ಲ, ಘಟ್ಟದ ಮೇಲಿನವರೂ ಬರುತ್ತಿದ್ದರು.

ಕೋಲ ಸಂಜೆ ಶುರುವಾಗುವುದಿದ್ದರೆ, ನಾವು ಕುತೂಹಲದಿಂದ ಹಗಲಲ್ಲೇ ಆಗೊಮ್ಮೆ ಈಗೊಮ್ಮೆ ಅಲ್ಲಿ ಠಳಾಯಿಸುತ್ತಿದ್ದೆವು. ಭೂತ ಕಟ್ಟುವಾತ ತನ್ನ ಹೆಂಡತಿ ಮಕ್ಕಳೊಂದಿಗೆ ಅಲ್ಲಿ ಒಂದು ಮೂಲೆಯಲ್ಲಿ ಹಾಜರಿದ್ದು, ತೆಂಗಿನ ಎಳೆ ಗರಿಯಿಂದ ಭೂತದ ವೇಷದ ತಿರಿ ಮತ್ತು ಅಣಿಗೆ ಅಗತ್ಯವಾದ ಸಾಮಗ್ರಿಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿರುತ್ತಿದ್ದ. ತೆಂಗಿನ ಎಳೆಗರಿಯಿಂದ ಅವರು ತಯಾರಿಸುತ್ತಿದ್ದ ಅಲಂಕಾರಿಕ ಸಾಮಗ್ರಿಗಳು ತುಂಬಾ ಆಕರ್ಷಕವಾಗಿರುತ್ತಿದ್ದವು.

ರಾತ್ರಿ ಕೋಲಕ್ಕೆ ಸಭೆ ಪೂರ್ತಿ ಸೇರುವ ಮೊದಲೇ ನಾವು ಹುಡುಗರು ಮತ್ತೆ ಹಾಜರ್. ಭೂತ ವೇಷ ಕಟ್ಟುವುದನ್ನು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದೆವು. ನಾಗಸ್ವರ, ತಾಸೆ, ಡೋಲು, ಬೇಂಡು ವಾಲಗದ ಅಬ್ಬರದಲ್ಲಿ ದೈವಕ್ಕೆ ಆವೇಶ ಬರುವಾಗ ನಮಗೆಲ್ಲ ಒಂದು ರೀತಿ ಭಯ. ನಮಗೆ ಅದು ಏನಾದರೂ ಮಾಡಿದರೆ?! ಒಂದು ಬಾರಿ ಆವೇಶ ಇಳಿದ ಮೇಲೆ ಅಲ್ಲಿ ಸೇರಿದವರನ್ನು ರಂಜಿಸಲು ಅದು ಸಿನಿಮಾ ಸಂಗೀತಕ್ಕೆ ಹೆಜ್ಜೆ ಹಾಕುವುದೂ ಇತ್ತು. ನಡು ನಡುವೆ ಮತ್ತೆ ಆವೇಶ. ಮತ್ತದೇ ಪುನರಾವರ್ತನೆ. ಇದು ಬಹುತೇಕ ರಾತ್ರಿಯಿಡೀ ನಡೆಯುತ್ತಿತ್ತು.

ಫೋಟೋ ಕೃಪೆ: ಉಷಾ ಕಟ್ಟೆಮನೆ

ಎರಡೋ ಮೂರೋ ದಿನ ನಡೆಯುತ್ತಿದ್ದ ಕೋಲದಲ್ಲಿ ಕೊನೆಯ ದಿನದ ಚಿತ್ರಗಳು ತುಂಬಾ ನೆನಪಿನಲ್ಲಿವೆ. ಅದಕ್ಕೆ ಕಾರಣ ಅಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ. ಊರಿನ ಬಹುತೇಕ ಶೂದ್ರ ಸಮುದಾಯವರು ಅಲ್ಲಿಗೆ  ಕೋಳಿ ಕೊಡುತ್ತಿದ್ದರು. ಕೋಳಿಯ ಕಾಲಿಗೆ ಅದರ ಮಾಲೀಕನ  ಗುರುತಿನ ಚೀಟಿ ಕಟ್ಟಲಾಗುತ್ತಿತ್ತು. ಇಬ್ಬರು ಕೋಳಿಯನ್ನು ಹಿಡಿದುಕೊಳ್ಳುತ್ತಿದ್ದರು. ಒಬ್ಬರು ಅತ್ತಲಿಂದ ಇನ್ನೊಬ್ಬರು ಇತ್ತಲಿಂದ. ಕೋಳಿಯ ಕತ್ತನ್ನು ಕತ್ತರಿಸಿ ಗದ್ದೆಗೆ ಎಸೆಯುತ್ತಿದ್ದರು. ರುಂಡ ರಹಿತ ಕೋಳಿ ಸ್ವಲ್ಪ ಹೊತ್ತು ಜಿಗಿದಾಡಿ ಕೊನೆಗೆ ಸ್ತಬ್ಧವಾಗುತ್ತಿತ್ತು. ಮುಸ್ಸಂಜೆಯ ಹೊತ್ತು, ಅನೇಕರ ಕೋಳಿಗಳು ಗದ್ದೆಯ ತುಂಬಾ ಚದುರಿರುತ್ತಿದ್ದುದರಿಂದ ನಮ್ಮ ಕೋಳಿ ಹುಡುಕಲು ಬಹಳ ಸಮಯ ಹಿಡಿಯುತ್ತಿತ್ತು. ಕೋಳಿಯ ರುಂಡ ಅದನ್ನು ಕತ್ತರಿಸಿದವರಿಗೆ. ನಮಗೆ ಮುಂಡ ಮಾತ್ರ.

ಇನ್ನೂ ಹೆಚ್ಚು ಭಯ ಹುಟ್ಟಿಸುತ್ತಿದ್ದುದು ಆ ರಾತ್ರಿಯ ಪ್ರಾಣಿ ಬಲಿಯ ದೃಶ್ಯ. ‘ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು! ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು! ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು. ಕೊಂದವರುಳಿದರೆ ಕೂಡಲಸಂಗಮದೇವ ?’ ಎಂದು ಬಸವಣ್ಣ ಹೇಳಿದ್ದರಲ್ಲ, ಈ ವಚನಗಳ ಮೊದಲ ಸಾಲುಗಳನ್ನು ಅಲ್ಲಿ ಕಣ್ಣಾರೆ ನೋಡುತ್ತಿದ್ದೆವು. ಬಲಿ ಕೊಡಲಿರುವ ಆಡು, ಕುರಿಗಳ ಕೊರಳಿಗೆ ಹಾರ ಹಾಕಿ ಅವನ್ನು ದೈವಸಾನದ ಸುತ್ತ ಪ್ರದಕ್ಷಿಣೆ ಒಯ್ಯಲಾಗುತ್ತಿತ್ತು. ಮುಂದೇನಾಗಲಿದೆ ಎಂಬ ಅರಿವೇ ಇರದ ಅವು ಕೊರಳಿಗೆ ಹಾಕಿದ ಹೂವಿನ ಹಾರವನ್ನೇ ಕಿತ್ತು ತಿನ್ನುತ್ತಾ ಸುತ್ತುಬರುತ್ತಿದ್ದವು.

ಇನ್ನಷ್ಟು ರಾತ್ರಿಯಾಗಿ ಬಲಿಯ ಸಮಯ ಹತ್ತಿರವಾಗುತ್ತಿದ್ದಂತೆ ಪ್ರಾಣಿಯ ತಲೆ ಕಡಿಯುವ ವ್ಯಕ್ತಿಗೆ ಹರಿತವಾದ ಕತ್ತಿಯನ್ನು ಕೊಡುತ್ತಿದ್ದರು. ಕತ್ತಿ ತೆಗೆದುಕೊಳ್ಳುವ ವರೆಗೂ ಎಲ್ಲರಂತೆ ಶಾಂತವಾಗಿರುವ ವ್ಯಕ್ತಿ, ಕೈಗೆ ಕತ್ತಿ ಬರುತ್ತಲೇ ಮೈಮೇಲೆ ಆವೇಶ ಬಂದು ಮೈ ಅದುರಿಸುತ್ತಾ ಜಿಗಿಯುತ್ತಿದ್ದ. ನಮಗೋ ಭಯ. ಆ ಕತ್ತಿಯಿಂದ ನಮ್ಮ ತಲೆ ಕತ್ತರಿಸಿದರೆ?! ದೂರ ಓಡಿ ಹೋಗಿ ನಿಂತು ಮುಂದಿನ ಘಟನೆ ನೋಡುತ್ತಿದ್ದೆವು. ದೈವಸಾನದ ಅಂಗಳದಲ್ಲಿ ಒಬ್ಬರು ಬಲಿಪ್ರಾಣಿಯ ಹಿಂಗಾಲನ್ನು ಹಿಡಿದುಕೊಳ್ಳುತ್ತಿದ್ದರು. ಇನ್ನೊಬ್ಬರು ಅದರ ಕೊರಳಿಗೆ ಹಗ್ಗ ಹಾಕಿ ಅದನ್ನು ಎಳೆದು ಹಿಡಿಯುತ್ತಿದ್ದರು. ಮೈ ಮೇಲೆ ಆವೇಶ ಬಂದ ವ್ಯಕ್ತಿ ವಿಚಿತ್ರ ದನಿಯೊಂದಿಗೆ ಆರ್ಭಟಿಸುತ್ತಾ ಕತ್ತಿಯಿಂದ ಪ್ರಾಣಿಯ ಕತ್ತಿಗೆ ಬೀಸುತ್ತಿದ್ದ. ಬಹುತೇಕ ಒಂದೇ ಏಟಿಗೆ ರುಂಡ ಮತ್ತು ಮುಂಡ ಬೇರೆಯಾಗುತ್ತಿತ್ತು.

ಇದೇ ರೀತಿ ಉಳಿದ ಪ್ರಾಣಿಗಳನ್ನೂ ತಂದು ಬಲಿಕೊಡುತ್ತಿದ್ದರು. ಕತ್ತು ಕತ್ತರಿಸಿದ ಬಳಿಕ ಚಿಮ್ಮುತ್ತಿದ್ದ ರಕ್ತವನ್ನು ದೈವಕ್ಕೆಂದು ಇರಿಸಿದ ಅನ್ನದ ರಾಶಿಗೆ ಚಿಮುಕಿಸುತ್ತಿದ್ದರು. ಆನಂತರ ಆ ಪ್ರಾಣಿಗಳ ದೇಹವನ್ನು ಕತ್ತರಿಸಿ, ಮಾಂಸ ಮಾಡಿ ಪ್ರಸಾದ ರೂಪದಲ್ಲಿ ಎಲ್ಲರಿಗೂ ಹಂಚುತ್ತಿದ್ದರು. ನನ್ನಪ್ಪ ಸರಕಾರಿ ಉದ್ಯೋಗಿಯಾಗಿದ್ದುದರಿಂದ ನಮಗೂ ಮಟನ್ ನಲ್ಲಿ ಒಂದು ಪಾಲು ಬರುತ್ತಿತ್ತು. ಇದು ನಾನು ಸುಮಾರು ನಲವತ್ತೈದು ವರ್ಷದ ಹಿಂದೆ ನೋಡಿದ ಮತ್ತು ಇನ್ನೂ ಮನಸಿನಲ್ಲಿ ಹಸಿರಾಗಿಯೇ ಇರುವ ದೈವ ಕೋಲವೊಂದರ ಚಿತ್ರ.

ಫೋಟೋ ಕೃಪೆ: ಉಷಾ ಕಟ್ಟೆಮನೆ

ಯಕ್ಷಗಾನ, ಕೋಲ, ಕಂಬಳ, ಕೋಳಿ ಕಟ್ಟಗಳನ್ನು ಹೊರತುಪಡಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಲ್ಪಿಸಿಕೊಳ್ಳುವುದು ಬಹಳ ಕಷ್ಟ. ಇವು ಕರಾವಳಿಯ ಸಾಂಸ್ಕೃತಿಕ ಚಹರೆಯಲ್ಲಿ ವಹಿಸಿದ ಪಾತ್ರ ದೊಡ್ಡದು. ಮಳೆಗಾಲ ಕಳೆದ ನಂತರ ರಾತ್ರಿಯ ನೀರವ ಸಮಯ ಮಂಗಳೂರಿನಂತಹ ಮಹಾನಗರದೊಳಗೆ ಕೂಡಾ ನೀವು ಕಿವಿಗೊಟ್ಟು ಆಲಿಸಿದರೆ ಈಗಲೂ ಎಲ್ಲೋ ಯಕ್ಷಗಾನದ ಚೆಂಡೆ ಪೆಟ್ಟು,ಇನ್ನೆಲ್ಲೋ ಕೋಲದ ತಾಸೆ ಪೆಟ್ಟಿನ ಸದ್ದು, ದೈವದ ಆರ್ಭಟ ನಿಮಗೆ ಕೇಳಿಸದಿರದು.

ಪರಂಪರೆಯಿಂದ ಬಂದ ಈ ಜನಪದ ಕಲೆ, ಕ್ರೀಡೆ, ಸಂಪ್ರದಾಯಗಳೆಲ್ಲ ಹಿಂದಿನಂತೆಯೇ ಈಗಲೂ ಇವೆಯೇ? ಮುಂದೆಯೂ ಇರಬಹುದೇ? ಎಂದು ಕೇಳಿದರೆ ಉತ್ತರಿಸುವುದು ಬಹಳ ಕಷ್ಟವೇನಲ್ಲ. ಯಾಕೆಂದರೆ, ಇಲ್ಲಿ ಎಲ್ಲವೂ ಬದಲಾಗುತ್ತಿವೆ. ತೀವ್ರ ಗತಿಯಲ್ಲಿ ವಾಣಿಜ್ಯೀಕರಣಗೊಳ್ಳುತ್ತಿವೆ. ಯಕ್ಷಗಾನ ಇರಬಹುದು, ಕಂಬಳ, ದೈವಾರಾಧನೆ ಇರಬಹುದು ಇವೆಲ್ಲ ಮೂಲತಃ ಕೃಷಿ ಸಂಸ್ಕೃತಿಯೊಂದಿಗೆ ಸಂಬಂಧ ಇಟ್ಟುಕೊಂಡವು. ಕೃಷಿ ಕೆಲಸದ ಆನಂತರ ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ನಮ್ಮ ಜನಪದರು ಯಕ್ಷಗಾನವನ್ನು ಆರಂಭಿಸಿದರು ಎಂಬ ಒಂದು ವಾದವೂ ಇದೆ. ಟೆಂಟಿನ ಮೇಳಗಳು ಊರೂರು ತಿರುಗುವಾಗ ಹೆಚ್ಚಾಗಿ ಯಕ್ಷಗಾನ ಬಯಲಾಟ ನಡೆಸುತ್ತಿದ್ದುದು ಬೇಸಗೆಯ ಭತ್ತದ ಗದ್ದೆಗಳಲ್ಲಿ. ಕಂಬಳವಂತೂ  ನೇರವಾಗಿ ಭತ್ತದ ಗದ್ದೆಗಳೊಂದಿಗೆ ಸಂಬಂಧ ಇದ್ದಂತಹ ಒಂದು ಜನಪದ ಕ್ರೀಡೆ. ಬಿತ್ತನೆಗೆ ಸಿದ್ಧವಾದ ಗದ್ದೆಯಲ್ಲಿಯೇ ಕಂಬಳ ನಡೆಯುತ್ತಿದ್ದುದು. ದೈವಾರಾಧನೆಯೂ ಕೃಷಿ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಇರಿಸಿಕೊಂಡ ಒಂದು ಆರಾಧನಾ ಸಂಪ್ರದಾಯ. ಅಲ್ಲಿ ಬಳಕೆಯಾಗುವುದೆಲ್ಲ ಪ್ರಾಕೃತಿಕವಾಗಿ ಸಿಗುವ ಪರಿಕರಗಳು.

ಊಳಿಗಮಾನ್ಯ ವ್ಯವಸ್ಥೆಯ ಜತೆ ಜತೆಗೆ ಹೆಜ್ಜೆ ಹಾಕುತ್ತ ಬೆಳೆದುಬಂದ ಸಂಪ್ರದಾಯ ದೈವಾರಾಧನೆ. ಇಡೀ ಕರಾವಳಿಯು ಕೃಷಿಯಲ್ಲಿ ತೊಡಗಿಕೊಂಡಿದ್ದ ಕಾಲದಲ್ಲಿ ಗುತ್ತಿನ ಮನೆಗಳು ವ್ಯಾಪಕವಾಗಿದ್ದವು. ದೈವಗಳು ಗುತ್ತಿನ ಯಜಮಾನನನ್ನು ಉದ್ದೇಶಿಸಿ ‘ಗುತ್ತಿನಾರೇ’ (ಗುತ್ತಿನ ಯಜಮಾನರೇ) ಎಂದು ಸಂಬೋಧಿಸುತ್ತಿದ್ದವು. ಭೂಸುಧಾರಣೆಯಲ್ಲಿ ಅನೇಕ ಗುತ್ತಿನ ಯಜಮಾನರು ಜಮೀನು ಕಳೆದುಕೊಂಡು, ಭೂಮಿಯೆಲ್ಲ ವಿಭಾಗವಾಗಿ ಕೊನೆಗೆ ಹೆಸರಿಗಷ್ಟೇ ಗುತ್ತಿನ ಯಜಮಾನರಾಗಿ ಉಳಿದರು. ಈಗಲೂ ದೈವ ಅವರನ್ನು ಸಂಬೋಧಿಸುವುದು ‘ಗುತ್ತಿನಾರೇ’ ಎಂದೇ!

ಕ್ರಮೇಣ ತುಳುನಾಡಿನ ಕೃಷಿ ವಲಯದಲ್ಲಿ ತೀವ್ರ ಗತಿಯ ಸ್ಥಿತ್ಯಂತರ ಸಂಭವಿಸಿತು. ಭತ್ತ ಕೃಷಿ ಬಹುತೇಕ ಮಾಯವಾಗಿ ತೋಟಗಳು ಕಾಣಿಸಿಕೊಂಡವು. ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡು ಜನ ವಾಣಿಜ್ಯ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತರಾದರು. ಕೃಷಿಯನ್ನೇ ಅವಲಂಬಿಸಿದ್ದ ಅನೇಕರು ಹೆಚ್ಚು ಸಂಪಾದನೆಯ ಉದ್ಯೋಗ ಅರಸುತ್ತಾ ಬೊಂಬಾಯಿ, ಬೆಂಗಳೂರು, ಕೊಲ್ಲಿ ರಾಷ್ಟ್ರ ಎಂದೆಲ್ಲ ಹೊರನಡೆಯುತ್ತಿದ್ದಂತೆ ಅಪಾರ ಪ್ರಮಾಣದ ಭತ್ತದ ಗದ್ದೆಗಳು ಹಡಿಲು ಬಿದ್ದವು. ಕೃಷಿ ಭೂಮಿಯ ಮೇಲೆ ವಾಣಿಜ್ಯ ಕಟ್ಟಡಗಳು ತಲೆ ಎತ್ತಿದವು. ಹೀಗೆ ಕೃಷಿಯೇ ಇಲ್ಲವಾದ ಮೇಲೆ ಕೃಷಿ ಸಂಸ್ಕೃತಿಯನ್ನೇ ಅವಲಂಬಿಸಿದ ಜನಪದ ಕ್ರೀಡೆಗಳು, ಅರಾಧನಾ ಸಂಪ್ರದಾಯಗಳ ಪರಿಸ್ಥಿತಿ ಏನಾಗಬಹುದು?

ಪಂಜುರ್ಲಿ ಭೂತದ ಮೊಗ ( ಮುಖವಾಡ)

ಏನಾಗಬಹುದೋ ಅದೇ ಅಗುತ್ತಿದೆ. ಸಿನಿಮಾ ಒಂದರ ಕಾರಣವಾಗಿ ಇಲ್ಲಿನ ದೈವಾರಾಧನೆಯ ಚರ್ಚೆಗಳು ಮುನ್ನೆಲೆಗೆ ಬಂದಿರಬಹುದು. ಹೊರಗಿನವರಲ್ಲಿ ಅದರ ಬಗ್ಗೆ ಸುಂದರ ಕಲ್ಪನೆ, ಭವ್ಯ ಭ್ರಮೆ ಸೃಷ್ಟಿಯಾಗಿರಬಹುದು. ಆದರೆ ವಾಸ್ತವ ಅಷ್ಟು ಖುಷಿ ತರುವಂತಿಲ್ಲ. ವೈದಿಕ ಸಂಸ್ಕೃತಿಯೊಂದಿಗೆ ಯಾವ ಸಂಬಂಧವೂ ಇರದ ದೈವ, ದೈವಸಾನಗಳನ್ನು ವೈದಿಕ ಶಕ್ತಿಗಳು ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ. ದೈವಗಳನ್ನು ಪುರಾಣ ಕತೆಗಳಿಗೆ ಜೋಡಿಸಿ, ದೈವಗಳ ಹೆಸರುಗಳನ್ನು ಸಂಸ್ಕೃತೀಕರಿಸಿ ಸ್ಥಳೀಯ ಸಂಸ್ಕೃತಿಯ ಅಸ್ಮಿತೆಗಳನ್ನು ಇಲ್ಲವಾಗಿಸುವ ಕೆಲಸ ಭರದಿಂದ ನಡೆದಿದೆ.

ವಾಣಿಜ್ಯೀಕರಣ ಇತರೆಲ್ಲ ಕ್ಷೇತ್ರಗಳನ್ನು ಪ್ರಭಾವಿಸಿದಂತೆ ದೈವಾರಾಧನೆಯನ್ನೂ ಬಿಟ್ಟಿಲ್ಲ. ಪರಂಪರೆಯ ಕಾರಣಕ್ಕೆ ಅನಿವಾರ್ಯವಾಗಿ ನಡೆಯುತ್ತಿವೆ ಎನ್ನುವುದನ್ನು ಹೊರತು ಪಡಿಸಿದರೆ ಅದೂ ಆಂತರ್ಯದಲ್ಲಿ ದೇವರಿಲ್ಲದ ಗುಡಿಯಾಗುತ್ತಿದೆ. ದೈವದ ಕೋಲಗಳು ಈಗ ದುಬಾರಿ ಬಾಬತ್ತಾಗಿವೆ. ‘ಇವತ್ತು ಎರಡು ದೈವಗಳ ದರ್ಶನ ಇದೆ, ಒಟ್ಟು ಬಜೆಟ್ ನಲವತ್ತೆಂಟು ಸಾವಿರ ರುಪಾಯಿ’ ಎಂದು ಈಗಷ್ಟೇ ಒಬ್ಬರು ಹೇಳಿದರು. ಭೂತ ಕಟ್ಟುವವರು ಆಯಾ ದಿನವೇ, ಸ್ಥಳದಲ್ಲಿಯೇ ಕೋಲಕ್ಕೆ ಅಗತ್ಯವಾದ ತಿರಿ, ಅಣಿಗಳನ್ನೆಲ್ಲ ಸಿದ್ಧಪಡಿಸುತ್ತಿದ್ದರು. ಈಗ ರೆಡಿಮೇಡ್ ವೇಷ ಭೂಷಣಗಳ ಕಾಲ. ಒಂದು ಭೂತ ಕಟ್ಟಿದ್ದಕ್ಕೆ ಐದರಿಂದ ಹತ್ತು ಸಾವಿರ ಕೊಡಬೇಕಾಗುತ್ತದೆ. ಹೊಸಬರು ಭೂತ ಕಟ್ಟಲು ಸಿದ್ಧರಿಲ್ಲ. ಹಾಗಾಗಿ ಹಳೆಯ ತಲೆಮಾರು ಮಾತ್ರ ಇದರಲ್ಲಿ ಮುಂದುವರಿಯುತ್ತಿದೆ.

ಈ ಎಲ್ಲದರ ನಡುವೆಯೂ, ಸಂಸ್ಕೃತಿಯನ್ನು ಉಳಿಸಬೇಕು ಎಂಬ ಮಾತು ಆಗಾಗ ಕೇಳಿಬರುತ್ತಿರುತ್ತದೆ. ಆದರೆ ಯಾವ ಸಂಸ್ಕೃತಿಯನ್ನು ಉಳಿಸಬೇಕು? ಸಂಸ್ಕೃತಿಯ ಪ್ರತಿಗಾಮಿ ಅಂಶಗಳನ್ನೂ ಉಳಿಸಿಕೊಳ್ಳಬೇಕೇ? ಆಚರಣೆಗಳೆಲ್ಲವೂ ಮೌಢ್ಯವಲ್ಲವಾದರೂ, ಮೌಢ್ಯಗಳೆಲ್ಲವೂ ಆಚರಿಸಲ್ಪಡುವ ಮತ್ತು ಮೂಢನಂಬಿಕೆಗಳೆಲ್ಲವೂ ಸಂಭ್ರಮಿಸಲ್ಪಡುವ ಸಮಾಜದಲ್ಲಿ ಯಾವುದನ್ನು ಎಷ್ಟು ಉಳಿಸಿಕೊಳ್ಳಬೇಕು? ದೈವಾರಾಧನೆಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎನ್ನುವುದಾದರೆ ಭೂತ ಕಟ್ಟುವವನ ಮಗನೂ ಭೂತ ಕಟ್ಟಿಕೊಂಡೇ ಇರಬೇಕೇ? ಆತನಿಗೂ ಸಾಮಾಜಿಕವಾಗಿ ಮೇಲ್ಮುಖ ಚಲನೆ ಬೇಡವೇ? ಎಂಬ ಅನೇಕ ಪ್ರಶ್ನೆಗಳಿವೆ. ಉತ್ತರ, ಪರಿಹಾರ ಸುಲಭವಲ್ಲ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಕಾಂತಾರ: ಹಿಂದಿ, ತೆಲುಗು, ತಮಿಳಿನಲ್ಲೂ ಅಬ್ಬರದ ಪ್ರದರ್ಶನ
ಬೆಂಗಳೂರು: ಕರ್ನಾಟಕದ ಬಾಕ್ಸ್‌ ಆಫೀಸ್‌ ನಲ್ಲಿ ಧೂಳೆಬ್ಬಿಸಿದ ನಂತರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕಾಂತಾರ, ಉತ್ತಮ ಪ್ರದರ್ಶನ ಕಾಣುತ್ತಿದ್ದು, ನೆರೆ ಭಾಷೆಯ ಚಲನಚಿತ್ರಗಳಾದ ಪೊನ್ನಿಯಿನ್ ಸೆಲ್ವನ್, ರಾಕೆಟ್ರಿ, ಕಾರ್ತಿಕೇಯ-2 ಸಿನಿಮಾಗಳ ಹಿಂದಿ ಡಬ್ಬಿಂಗ್‌ ಅವತರಣಿಕೆಗಳ ಕಲೆಕ್ಷನ್‌ಗೆ ಸವಾಲು ಹಾಕಿದೆ.

ಕಾಂತಾರ ಸಿನಿಮಾ ಹಿಂದಿಯಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ. ಮೊದಲ ವಾರಂತ್ಯದಲ್ಲಿ ಸಿನಿಮಾ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದ್ದು, ಮಹಾರಾಷ್ಟ್ರದಲ್ಲಿ ಹೆಚ್ಚು ಕಲೆಕ್ಷನ್‌ ಗಿಟ್ಟಿಸಿಕೊಂಡಿದೆ.

ಪೊನ್ನಿಯಿನ್ ಸೆಲ್ವನ್ I, ರಾಕೆಟ್ರಿ, ದಿ ನಂಬಿ ಎಫೆಕ್ಟ್ ಮತ್ತು ಕಾರ್ತಿಕೇಯ-2 ನಂತಹ ಈ ವರ್ಷದ ಇತರ ಪ್ರಾದೇಶಿಕ ಹಿಟ್‌ ಸಿನಿಮಾಗಳ ಹಿಂದಿ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಕಾಂತಾರ ಸವಾಲು ಹಾಕಿದೆ.

ವಾರಾಂತ್ಯದಲ್ಲಿ ಕಾಂತಾರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಏರಿಕೆ

ಕಾಂತಾರ ಹಿಂದಿ ಅವತರಣಿಕೆ ಬಾಕ್ಸ್ ಆಫೀಸ್ ಕಲೆಕ್ಷನ್‌ ಸುಮಾರು 150 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದ್ದು, ಶನಿವಾರದಂದು ಚಿತ್ರವು ರೂ 1.27 ಕೋಟಿ ಸಂಗ್ರಹಿಸಿವುವ ಮೂಲಕ ಒಟ್ಟು 2.75 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಕಾಂತಾರ ಹಿಂದಿ ಸಿನಿಮಾ ಮೊದಲ ದಿನ ಅಷ್ಟೇನು ಸದ್ದು ಮಾಡಿರಲಿಲ್ಲ. ಆದರೆ 2 ದಿನದಲ್ಲಿ 4.02 ಕೋಟಿ ಗಳಿಸಿ, 3ನೇ ದಿನದಲ್ಲಿ 3.50 ಕೋಟಿ ಗಳಿಸಿ, ಮೊದಲ ವಾರಾಂತ್ಯದಲ್ಲಿ 7.52 ಕೋಟಿ ರೂ.ಗಳಿಸುವ ಭರ್ಜರಿ ಯಶಸ್ಸಿನತ್ತ ಸಾಗಿದೆ. ಸಿನಿಮಾ ನೋಡುಗರಿಂದ ಅಪಾರ ಪ್ರಶಂಸೆಯ ಸುರಿಮಳೆ ಕಂಡುಬರುತ್ತಿದೆ.

#Kantara *#Hindi version* trends very well, achieving a breakthrough on Day 2 and 3… Glowing word of mouth is converting into footfalls… Day 4 expected to be bigger than Day 1… Fri 1.27 cr, Sat 2.75 cr, Sun 3.50 cr. Total: ₹ 7.52 cr. #India biz. Nett BOC. pic.twitter.com/mZFXeCxm0I
— taran adarsh (@taran_adarsh) October 17, 2022

ಕಾಂತಾರ ಬಗ್ಗೆ ಟ್ವಿಟರ್ ಬಳಕೆದಾರರ ಪ್ರತಿಕ್ರಿಯೆ

ಕಾಂತಾರ ಸಿನಿಮಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಸಿನಿಮಾದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಸೇರಿದಂತೆ ಕ್ಲೈಮ್ಯಾಕ್ಸ್ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ʻʻಗುಳಿಗ ದೈವದ ಕೂಗು ನನ್ನ ಮನಸ್ಸಿನಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆʼʼ ಎಂದು ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

🎬 #Kantara (2022)

The Hype Is Real!

I am short of words as I walked out witnessing the jaw dropping last few minutes & the yelling of Lord Guliga Daiva still echoing in my mind, questioning my sanity if i have ever experienced anything like this before?

Hell NO!

Cont'd 1/5 pic.twitter.com/puKmH8IcJH
— The Cinéprism (@TheCineprism) October 16, 2022

ರವಿ ಗುಪ್ತ ಎಂಬುವರೂ ಕೂಡ ಟ್ವಿಟರ್‌ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಅಕ್ಟೋಬರ್ 14 ರ ಮೊದಲು ಕನ್ನಡದಲ್ಲಿ ಈ ಚಿತ್ರ ಜನರನ್ನು ಸಂತೃಪ್ತಿಗೊಳಿಸಿತ್ತು, ಈಗ ಹಿಂದಿಯಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ತೃಪ್ತರಾಗಿದ್ದಾರೆ. ಸಿನಿಮಾ ಮಗಿದರೂ ಏಳುವ ಮನಸ್ಸಾಗುತ್ತಿಲ್ಲ. ಮುಂಬೈನಲ್ಲಿ ಕಾಂತಾರ ಮೂರನೇ ಭಾನುವಾರ 100% ಆಕ್ಯುಪೆನ್ಸಿ ಮತ್ತು ದೈವಿಕ ಬ್ಲಾಕ್ಬಸ್ಟರ್ ಎಂದು ಬರೆದುಕೊಂಡಿದ್ದಾರೆ.

Before 14th Oct, this film was satisfying people in Kannada, now it is the same situation in Hindi also. People are feeling satisfied and are not even preparing to get up from the seat. Proof of #Kantara Third Sunday 100% occupancy in Mumbai. A Divine Blockbuster! pic.twitter.com/ZvK63sd7lv
— Ravi Gupta (@FilmiHindustani) October 16, 2022

ಕಾಂತಾರ ಸಿನಿಮಾವು ಇಂಟರ್ನೆಟ್ ಚಲನಚಿತ್ರ ಡೇಟಾಬೇಸ್ (IMDb) ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ.

ಚಲನಚಿತ್ರ ರೇಟಿಂಗ್ ವೆಬ್‌ಸೈಟ್ IMDb ನಲ್ಲಿ, ಕಾಂತಾರ 9.5/10 ರೇಟಿಂಗ್ ಅನ್ನು ಪಡೆದಿದ್ದು, ಕೆಜಿಎಫ್ 2, RRR ಸಿನಿಮಾಗಳ ರೇಟಿಂಗ್ ಅನ್ನು ಮೀರಿಸಿದೆ.

ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿಯ “ನೊ ಕಮೆಂಟ್ಸ್”‌ ಗೆ ರೊಚ್ಚಿಗೆದ್ದ ʼರಾಗಾʼ ಅಭಿಮಾನಿಗಳು
ಒಂದು ಕಡೆ ಕಾಂತಾರಾ ಸಿನಿಮಾ ರಾಜ್ಯದಾದ್ಯಂತ ಭಾರೀ ಯಶಸ್ಸು ಗಳಿಸುತ್ತಿರುವಾಗಲೇ ಅದರ ನಿರ್ದೇಶಕ ಮತ್ತು ನಾಯಕ ನಟ ರಿಷಬ್‌ ಶೆಟ್ಟಿಯವರ “ನೊ ಕಮೆಂಟ್”‌ ಒಂದು ರಾಹುಲ್‌ ಗಾಂಧಿಯವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ.

ಆದದ್ದಿಷ್ಟು. ಸುದ್ದಿವಾಹಿನಿಯೊಂದು ಕಾಂತಾರಾ ನಿರ್ದೇಶಕ ರಿಷಬ್‌ ಶೆಟ್ಟಿಯವರ ಸಂದರ್ಶನ ನಡೆಸುತ್ತಿದ್ದ ಸಂದರ್ಭ. ಸಂದರ್ಶಕಿ ಚುಟುಕು ಪ್ರಶ್ನೆ ಕೇಳುವ ಸಂದರ್ಭದಲ್ಲಿ ಮಾತುಕತೆ ಹೀಗೆ ನಡೆಯುತ್ತದೆ.

ಸಂದರ್ಶಕಿ- ಪ್ರಧಾನಿ ನರೇಂದ್ರ ಮೋದಿ?

ರಿಷಬ್‌ ಶೆಟ್ಟಿ- ಅದ್ಭುತ ನಾಯಕ.

ಸಂದರ್ಶಕಿ- ರಾಹುಲ್‌ ಗಾಂಧಿ?

ರಿಷಬ್‌ ಶೆಟ್ಟಿ – ನೊ ಕಮೆಂಟ್ಸ್‌

ರಿಷಬ್‌ ಶೆಟ್ಟಿ ನರೇಂದ್ರ ಮೋದಿಯವರನ್ನು ಹೊಗಳಿ ರಾಹುಲ್‌ ಗಾಂಧಿ ಕುರಿತು ʼನೊ ಕಮೆಂಟ್ಸ್‌ʼ ಎಂದು ಹೇಳಿದ ಈ ಸಂದರ್ಶನದ ಚುಟುಕು ವಿಡಿಯೋ ವೈರಲ್‌ ಆಗುತ್ತಿದ್ದಂತೆ… ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿರುವ ರಾಹುಲ್ ಗಾಂಧಿ ಅಭಿಮಾನಿಗಳು, ʼರಿಷಬ್ ಶೆಟ್ಟಿ ತಮ್ಮ ಬುದ್ಧಿ ತೋರಿಸಿಯೇ ಬಿಟ್ಟರುʼ ಎಂದು ಟೀಕಿಸಿದ್ದಾರೆ.

ರಿಷಬ್ ಶೆಟ್ಟಿ ಹೇಳಿಕೆ ಕುರಿತಾದ ಕೆಲವು ಅಭಿಪ್ರಾಯಗಳು ಹೀಗಿವೆ:

ರೋಶನ್‌ ಶೆಟ್ಟಿ ಆರ್‌ ಜಿ ಎಂಬುವವರು ಕಾಂತಾರಾ ಸಿನಿಮಾದ ಪೋಸ್ಟರ್‌ ಜೊತೆಗೆ ಹಾಕಿರುವ ಪೋಸ್ಟಿನಲ್ಲಿ,  “#ಕಾಂತಾರ ಗೆದ್ದಿದ್ದು ಉತ್ತಮ ನಟನೆ, ಧರ್ಮದ ಮೇಲಿನ ನಂಬಿಕೆ ಹಾಗೂ ಆರಾಧ್ಯ ದೈವ “ಪಂಜುರ್ಲಿ ” ಆಶೀರ್ವಾದದಿಂದ.

“ಬಕೆಟ್” ಹಿಡಿಯುವುದರಿಂದ ಸ್ವಾರ್ಥ ಸಾಧನೆ ಮಾಡಬಹುದೇ ವಿನಃ ಅಭಿಮಾನಿಗಳ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ದಯವಿಟ್ಟು ಕಲೆಯನ್ನು ರಾಜಕೀಯದೊಂದಿಗೆ ವಿಲೀನಗೊಳಿಸಬೇಡಿ ರಿಷಬ್ ಶೆಟ್ಟಿ, ನೀನು ಇನ್ನೊಂದು ಜನ್ಮ ಹೆತ್ತು ಬಂದ್ರು!

ರಾಹುಲ್ ಗಾಂಧಿ ನ ವ್ಯಕ್ತಿತ್ವಕ್ಕೆ ಮಸಿಬಡಿಯಲು ಸಾಧ್ಯವಿಲ್ಲ.” ಎಂದು ಟೀಕಿಸಿದ್ದಾರೆ.

ಈ ಪೋಸ್ಟಿಗೆ ಕಮೆಂಟ್‌ ಮಾಡಿರುವ, ಉದಯ್‌ ಶೆಟ್ಟಿ ಎಂಬುವವರು “ಯಶಸ್ಸನ್ನು balance ಮಾಡುವಲ್ಲಿ ರಿಷಭ್ ಎಡವುತ್ತಿದ್ದಾರೆ ಅನಿಸುತ್ತೆ. ರಾಹುಲ್ ಬಗೆಗಿನ ರಿಷಭ್ ಅಭಿಪ್ರಾಯ upto him. ಆದರೆ ರಿಷಭ್ ಮೋದಿ ಬಗೆಗೇನಾದರೂ no comments ಅಂದಿದ್ರೆ ಸ್ವತಃ ರಿಷಭ್ ‘ಕಾಂತಾರ’ ಸೇರಬೇಕಾಗುತ್ತಿತ್ತು. ರಿಷಭ್ ಜಾಣ. He is a good salesman.” ಎಂದು ಕಮೆಂಟಿಸಿದ್ದಾರೆ.

ರಮೇಶ್‌ ಶೆಟ್ಟಿ ಎಂಬುವವರು ರಿಷಬ್‌ ಶೆಟ್ಟಿಯವರನ್ನು ಟೀಕಿಸಿ, “ಇವನಿಗೆ ಹಿನ್ನೆಲೆಯಲ್ಲಿ ವಿದೇಶಿ ಸಂಗೀತ ಸಿಸ್ಟಮ್ ಬೇಕು, ಇವನ ಮಕ್ಕಳನ್ನು ಇವನು ಗುರುಕುಲ ಮಾಧ್ಯಮದಲ್ಲಿ ಬೆಳೆಸಲಿ, ಬೆಂಗಳೂರಿನ ಕಾನ್ವೆಂಟ್ ಗೆ ಸೇರಿಸಿದ್ದಾನೆ.

ಕರಾವಳಿಯಲ್ಲಿ ಕೋಮು ವಿಷದ ಜನರಿಂದ ಬೆಂಬಲ ಪಡೆಯುವ ತೆವಲು ಇವನಿಗೆ.

ಇವನು ಈ ಸಿನೆಮಾದಿಂದ ಜನರಿಗೆ ಯಾವ ಸಂದೇಶ ಕೊಟ್ಟಿದ್ದಾನೆ, ??

ಮೊದಲೇ ಮೂಢ ನಂಬಿಕೆಗಳಿಗೆ ದಾಸರಾಗಿ ತಮ್ಮ ದುಡಿಮೆಯನ್ನು ವ್ಯಯ ಮಾಡುತ್ತಿರುವ, ಅದಕ್ಕಾಗಿ ಬ್ಯಾಂಕ್, ಸ್ವಸಹಾಯ ಸಂಘಗಳಲ್ಲಿ ಮೈ ತುಂಬಾ ಸಾಲ ಮಾಡಿಕೊಂಡಿರುವ ಸಾಮಾನ್ಯ ಜನರನ್ನು ಪುನಃ ಮೂಢನಂಬಿಕೆಗಳಿಗೆ ತಳ್ಳುವ ಪ್ರಯತ್ನ ತನ್ನ ಹಣದಾಹಕ್ಕಾಗಿ ಮಾಡುತ್ತಿದ್ದಾನೆ…

ಸಾಮಾಜಿಕ ಕಳಕಳಿ ಇಲ್ಲದ , ಹಣದಾಹಿ ರಿಷಬ್..” ಎಂದು ಕಿಡಿಕಾರಿದ್ದಾರೆ.

ಬಾಲಕೃಷ್ಣ ಕೋಟ್ಯಾನ್‌ ಎಂಬುವವರು, “ರಿಷಬ್ ಶೆಟ್ರೆ…. ರಾಹುಲ್ ಗಾಂಧಿ‌ಯವರ ವ್ಯಕ್ತಿತ್ವದ ಸರ್ಟಿಫಿಕೇಟಿನ ಅವಶ್ಯಕತೆ ನಿಮ್ಮಿಂದ ಬೇಡ….. ನೀವು ಬಕೆಟ್ ಹಿಡಿದು ಇನ್ನೊಬ್ಬರನ್ನು ಸಂತೋಷ ಪಡಿಸಲು ರಾಹುಲ್ ಗಾಂಧಿಯವರನ್ನು ಬಳಸುವ ಅಗತ್ಯವೂ ಇಲ್ಲ…” ಎಂದಿದ್ದಾರೆ.

ಫೇಸ್ಬುಕ್‌ ಮಟ್ಟಿಗೆ ಸೆಲೆಬ್ರಿಟಿ ಬರಹಗಾರರಾದ ನಾಗೇಗೌಡ ಕೀಲಾರ ಅವರು “ಆ ಬ್ಯಾವರ್ಸಿ ನೊ ಕಮೆಂಟ್ಸ ಅಂದಿದ್ದು ನೋಡಿದಿರ ಫ್ರೆಂಡ್ಸ್”‌ ಎಂದು ವ್ಯಂಗ್ಯವಾಗಿ ಹಾಕಿರುವ ಪೋಸ್ಟಿಗೆ ಬಹಳ ಜನರು ಕಮೆಂಟು ಮಾಡಿ ರಿಷಬ್‌ ಅವರನ್ನು ಟೀಕಿಸಿದ್ದಾರೆ. ಅದರ ಕೆಲವು ಸ್ಯಾಂಪಲ್‌ ಇಲ್ಲಿವೆ.

ಕರಾವಳಿಯ ಎಡಪಂಥೀಯ ಹೋರಾಟಗಾರ ಮುನೀರ್‌ ಕಾಟಿಪಳ್ಳ ಅವರು ಈ ಕುರಿತು ವಿಡಂಬನಾತ್ಮಕವಾಗಿ ಬರೆದಿರುವ ಪ್ರತಿಕ್ರಿಯೆ ಹೀಗಿದೆ- “ಮೋದಿ “ಅತ್ಯದ್ಭುತ ನಾಯಕ” ಅಂತಾದರೆ ರಾಹಲ್ “ಪಪ್ಪು” ಆಗಲೇಬೇಕು.

ಅದ್ಯಾಕೆ ನೋ ಕಮೆಂಟ್ಸ್ ಅಂದದ್ದು !. ಕಾಂಗ್ರೆಸ್ ನವರ ಕುರಿತು ಅಷ್ಟು ಹೆದರಿಕೆಯಾ ? ರಾಹುಲ್ ಪ್ರಧಾನಿ ಆದರೆ ಈಡಿ, ಐಟಿ ಎಲ್ಲಾ ಚೂ ಬಿಡಬಹುದು ಎಂಬ ಭಯವಾ ? ಎಂತದು ರಿಷಭ್ ಶೆಟ್ರೆ ? ತುಳುವರ ಮರ್ಯಾದೆ ತೆಗೆಯುವುದಾ? ಇಷ್ಟು ಹೆದರಿದರೆ ಹೇಗೆ ?

ಕಾಂಗ್ರೆಸ್‌ ಪಕ್ಷದ ಐಟಿ ವಿಭಾಗದಲ್ಲಿರುವ ಜ್ಞಾನಿ ತಾವರೆಕೆರೆ, “ಆ ಸಿನಿಮಾದ ಬಗ್ಗೆ ನಾನು ಯಾವುದೇ ಪೋಸ್ಟ್ ಹಾಕಿರಲಿಲ್ಲ, ಆತ ಭಕ್ತ ಎಂದು ಮೊದಲೇ ಗೊತ್ತಿದ್ದ ವಿಚಾರ. ನಿಮಗೆ ಒಂದು ಘಟನೆ ನೆನಪಿನ ಬುತ್ತಿಯಿಂದ ಜಾರಿರಬಹುದು, ಮಂಡ್ಯದ ಸೈನಿಕರೊಬ್ಬರು ಹುತಾತ್ಮರಾದಾಗ ಈ ಆಸಾಮಿ ಏನು ಮಾತನಾಡಿದ್ದ ಅಂತ ಒಮ್ಮೆ ನೆನಪಿಸಿಕೊಳ್ಳಿ. ಆತ ಹಾರ್ಡ್ ಕೋರ್ ಭಕ್ತ, ಸಂಸ್ಕೃತಿ ಮಣ್ಣಾಂಗಟ್ಟಿ ಯಾವುದು ಇಲ್ಲ ಅವರಿಗೆ, ಸಿನಿಮಾದ ಬಗ್ಗೆ ಒಳ್ಳೆಯ ವ್ಯಾಪಾರಿ ಬುದ್ದಿಯಿದೆ ಅಷ್ಟೇ. ಮುಂದೊಂದು ದಿನ ಸಿನಿಮಾದಿಂದ ಮಾಡಿದ ಹಣದಲ್ಲಿ ಆ ಆಸಾಮಿ ಬಿಜೆಪಿಯಿಂದ ಚುನಾವಣೆಗೆ ನಿಂತರೂ ಆಶ್ಚರ್ಯ ಪಡಬೇಕಿಲ್ಲ” ಎಂದು ನಾಲ್ಕು ವರ್ಷಗಳ ಹಿಂದೆ ರಿಷಬ್‌ ಶೆಟ್ಟಿ ಬುದ್ದಿಜೀವಿಗಳ ಕುರಿತು ಮಾಡಿದ್ದ ಟೀಕೆಯನ್ನು ನೆನಪಿಸಿಕೊಂಡು ಹೀಗೆ ಬರೆದ್ದಾರೆ, “ಕೆಲವರಿಗೆ ನೆನಪಿನ ಶಕ್ತಿ ಕಡಿಮೆ, ಆದರೆ ಆಗಲೇ ಇದರ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ. ಇವರುಗಳ ಹುಚ್ಚುತನ ದಿನದಿಂದ ಹೆಚ್ಚಾಗುತ್ತಲೇ ಹೋಗುತ್ತದೆ ಹೊರತು ಕಡಿಮೆಯಂತೂ ಆಗಲ್ಲ. ನನ್ನ ಹಣ ನನ್ನಿಷ್ಟ, ನಾನು ಯಾರ ಸಿನಿಮಾ ಥಿಯೇಟರ್ ಹೋಗಿ ನೋಡಬೇಕೆಂಬುದು ಕೂಡ ನನ್ನದೇ ಇಷ್ಟ.

‘ನೋ ಕಾಮೆಂಟ್ಸ್’ ಎಂದಿದ್ದಾರೆ.

ಕಾಂಗ್ರೆಸ್‌ ಬೆಂಬಲಿಗರೂ ವಕೀಲರೂ ಆದ ಶೈಲಜಾ ಅಮರನಾಥ್‌ ಅವರು ಕೆಳಗಿನಂತೆ ಕಿಡಿ ಕಾರಿದ್ದಾರೆ.

ಲೇಖಕಿ ಸಿಹಾನಾ ಬಿ ಎಂ ಅವರು ರಾಹುಲ್‌ ಗಾಂಧಿಯವರ ಮೇಲಿನ ತಮ್ಮ ಅಭಿಮಾನ ವ್ಯಕ್ತಪಡಿಸಿ ಹೀಗೆ ಬರೆದುಕೊಂಡಿದ್ದಾರೆ.

ಹೀಗೆ ರಾಹುಲ್‌ ಗಾಂಧಿಯವರ ಅಭಿಮಾನಿಗಳು ಕಾಂತಾರಾ ನಾಯಕ ರಿಷಬ್‌ ಶೆಟ್ಟಿಯವರ ಮೇಲೆ ಸಿಡಿಮಿಡಿ ಎಂದು ರೊಚ್ಚಿಗೆದ್ದಿರುವುದಂತೂ ದಿಟ.

ಕಾಂತಾರ: ನಾವು ಬಂದದ್ದು ಎಲ್ಲಿಂದ ಎಂಬುದನ್ನು ಮರೆತುಬಿಡುವುದು ದೊಡ್ಡ ಸಮಸ್ಯೆ
“ನಾವು ಬಂದದ್ದು ಎಲ್ಲಿಂದ ಅಂತ ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ” ಹೆಚ್ಚುಕಮ್ಮಿ ಇದೇ ಅರ್ಥದ ಡೈಲಾಗ್ ಕಾಂತಾರ ಸಿನೇಮಾದಲ್ಲಿ ಬರುತ್ತದೆ. ಈ ದೊಡ್ಡ ಸಮಸ್ಯೆ ಕಾಂತಾರ ಸಿನೇಮಾ ತಂಡದ ಸಮಸ್ಯೆಯೂ ಹೌದು. ಹಾಗಾಗಿಯೇ ಶೂದ್ರ ಮತ್ತು ದಲಿತ ಸಂಸ್ಕೃತಿಯನ್ನು ಬಿಂಬಿಸಬೇಕಾಗಿದ್ದ ಸಿನೇಮಾದ ಹೆಸರಿನ ಮಧ್ಯೆ ವೈದಿಕರ ಓಂ ಅನ್ನು ಎಳೆದು ತರಲಾಗಿದೆ. ಸಾಲದ್ದಕ್ಕೆ “ದಂತಕತೆ” ಎಂಬ ಸಬ್ ಟೈಟಲ್ ಕೊಡಲಾಗಿದೆ. ದಂತಕತೆ ಎಂದಾಗ ನಮ್ಮ ಕುಟುಂಬದ ದೈವ ಕೋಲದ ದಂತಕತೆ ನೆನಪಾಯಿತು. ಈ ದಂತಕತೆ ಯಾರೋ ಹೇಳಿದ್ದಲ್ಲ. ನಾವೇ ನೋಡಿದ್ದು.

ನಮ್ಮ ಕುಟುಂಬದ ದೈವಗಳಿಗೆ ಬಹುಶಃ ಮೂರು ವರ್ಷದ ಹಿಂದೆ ಕೋಲ ನೀಡಲಾಯಿತು. ನಾನು, ಕಾವ್ಯ, ಗೆಳೆಯರಾದ ಬೈರಪ್ಪ ಹರೀಶ್ ಕುಮಾರ್, ನಿಕಿತಾ ಹರೀಶ್ ಕೋಲ ನೋಡಲು ಬೆಂಗಳೂರಿನಿಂದ ಮಂಗಳೂರಿನ ನನ್ನ ಕುಟುಂಬದ ಮನೆಗೆ ಹೋಗಿದ್ದೆವು. ರಾತ್ರಿ ಕೋಲ ಶುರುವಾಯಿತು. ಹೊಸದಾಗಿ ನಾವು ಕುಟುಂಬಿಕರು ಸೇರಿ ಕಟ್ಟಿಸಿರುವ ದೈವಸ್ಥಾನದೊಳಗೆ ದೈವ ಪ್ರವೇಶ ಮಾಡಬೇಕಿತ್ತು.

ದೈವ ಜೋರು ಕುಣಿದದ್ದೇ ಗುಡಿಯ ಮೇಲೊಮ್ಮೆ ದಿಟ್ಟಿಸಿತು. “ಗುಡಿಯ ಮೇಲಿನ ಕಳಶ ತೆಗೆಯಬೇಕು” ಎಂದು ಕುಟುಂಬದ ಹಿರಿಯರಿಗೆ ದೈವ ಆದೇಶ ನೀಡಿತು.

“ದೈವದ ಗುಡಿಯ ಕಳಶ ತೆಗೆದರೆ ಮತ್ತೆ ಶುದ್ದ ಮಾಡಿ ಬ್ರಹ್ಮಕಲಶ ಮಾಡಬೇಕಾಗುತ್ತದೆ. ಹಾಗಾಗಿ ಕಳಸ ತೆಗೆಯದೇ ಗುಡಿಯನ್ನು ಒಪ್ಪಿಸಿಕೊಳ್ಳಬೇಕು” ಎಂದು ಕುಟುಂಬದ ಹಿರಿಯರು ದೈವವನ್ನು ಪ್ರಾರ್ಥಿಸಿದರು.

ಮತ್ತೆ ಉಗ್ರರೂಪ ತಾಳಿ ಕುಣಿದ ದೈವ “ದೈವಕ್ಕೆಂತ ಕಳಶ? ತೆಗಿಯಿರಿ. ತೆಗೆದ ಬಳಿಕ ದೈವಸಾನ ಶುದ್ದ ಮಾಡೋಕೆ ಬ್ರಾಹ್ಮಣರು ಬರಬೇಕು ಎಂದು ಹೇಳಿದ್ಯಾರು? ನನ್ನ ದೈವದ ಸಾನದ ಒಳಗೆ ಬ್ರಾಹ್ಮಣ ಪ್ರವೇಶ ಮಾಡಿದರೆ ಅವನಿಗೆ ಹುಚ್ಚು ಹಿಡಿಸ್ತೇನೆ. ನನ್ನ ಕುಟುಂಬದ ಬಾವಿಯಿಂದ ನೀರು ತಂದು ಚಿಮುಕಿಸಿದರೆ ನನ್ನ ಸಾನ ಶುದ್ದವಾಗುತ್ತದೆ” ಎಂದು ದೈವ ಆದೇಶ ನೀಡಿತ್ತು.

ಇದು ನಿಜವಾದ ದೈವ ಪರಂಪರೆ. ದೈವಕ್ಕೂ ವೈದಿಕ ಆಚರಣೆ, ಸಂಕೇತಗಳಿಗೂ ಸಂಬಂಧವಿಲ್ಲ.

ಸಿನೇಮಾದ ನಿರ್ದೇಶನ ಮಾಡಿರುವ ವೃಷಬ್ ಶೆಟ್ಟಿಯವರು ಕಾಂತಾರ ಸಿನೇಮಾದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ “ಕರಾವಳಿ ಪರಶುರಾಮ ಸೃಷ್ಟಿ” ಎನ್ನುತ್ತಾರೆ! ಇದು ವೈದಿಕರ ಸುಳ್ಳು ಇತಿಹಾಸ. ಪರಶುರಾಮ ಯಾರೆಂಬುದೇ ಕರಾವಳಿಯ ಜನಪದ ಲೋಕಕ್ಕೆ ಗೊತ್ತಿಲ್ಲ. ಕರಾವಳಿಯ ದೈವಾರಾಧನೆ ಪರಂಪರೆಯಲ್ಲಿ ಪರಶುರಾಮ ಬರುವುದೇ ಇಲ್ಲ. ಹಾಗಾದರೆ ತುಳುನಾಡು ಹೇಗೆ ಸೃಷ್ಟಿಯಾಯಿತು ?

ಹೇಗಾಯಿತು ಎಂದರೆ,

ಆನಿದ ಕಾಲೊಡು…
ಉದಿಯ ಬೆಂದೆರ್ಗೆನಾ ಬೊಲ್ಪುಗು ಸೂರ್ಯ ದೇವೇರು
ಪಡ್ಡಾಯಿ ಬಾನೊಡು ಓಲಗ ಆತೆರು ಚಂದ್ರದೇವೆರು
ಉದಿಪುಗು ಸೂರ್ಯೆ, ಕಂತುಗು ಚಂದ್ರೆ
ತೆಂಕಾಯಿ ಸೆಲಿಯೇಂದ್ರೆ
ಬಡಕಾಯಿ ಬಾಲ್ಯನ ಕುಮಾರೆ
ನಾಲಂದ ಲೋಕೊಡು ನಾಲು ಗುಂಡದೇವೆರು
ಮೂಜಿಂದ ಲೋಕೊಡು ಮೂಜಿತಾನ ಭೂತೊಲು
ಕಲ್ಲುಡು ನಾಗೆ, ಪುಂಚೊಡು ಸರ್ಪೆ
ಸಾರ ಕಲ್ಲ ಅಸುರೆರು, ದೇವೆರೆ ಕಲ್ಲ ಬೆರ್ಮೆರು
ಉದಿಯ ಬೆಂದಿನ ಕಾಲೊಡು…
ಮಿತ್ತನಾವೊಡು ಪನ್ನಗ ಬಾನೊಡು ಜಂಬಿದಾರೆಗೆ ಉದಿತಿಜಿ
ತಿರ್ತಾನ್ನವೊಲಿ ಪನ್ನಗ ಭೂಮಿಡು ಪುಲ್ಲಕುಡಿ ಕೊಡಿತಿಜಿ
ಅಪಗ ಪನ್ಪೆರು ಸ್ವಾಮಿ,
ಬಾನ ಪತ್ತೊಡು, ಭೂಮಿ ತಿರ್ಗಾವೊಡು
ಭೂಮಿ ಪತ್ತೊಡು ಬಾನ ತಿರ್ಗಾವೊಡು
ಬಲಗೈ ತಟ್ಟಿಯೆರು ಸ್ವಾಮಿ ಬಾನ ತಿರ್ಗಾಯೆರು
ಎಡಗೈ ತಟ್ಟಿಯೆರು ಸ್ವಾಮಿ ಭೂಮಿ ತಿರ್ಗಾಯೆರು
ಬಾನ ಮುತ್ತರೆ, ಭೂಮಿ ಬಿತ್ತರೆ
ಬಾನೊಗು ಮುತ್ತರೆ ಭೂಮಿ ತಿರ್ಗುಂಡು
ಜಂಬಿದಾರೆಗೆ ಉದಿತುಂಡು
ಬಾನುಡು ಮೇಲು ಉದಿಯಬೆಂದುಂಡು ತಾಲವೆ ತಂಬವೆ ಪನ್ಪಿನ ತೆಡಿಲು
ಕುಂಕುಮ ಪನಿನೀರ ಬರ್ಸ ಬೂರುಂಡು
ಭೂಮಿಡಿ ಕೊಡಿತುಂಡು ಕದಿಕೆ ಕಡೀರ ದೈ
ಬುಲೆಟ್ಟು ಮೇಲ್ ಉದಿಯ ಬೆಂದುಂಡು ಅತಿಕಾರೆ ಪನ್ಪಿ ಸತ್ಯದ ಬೆಳೆ
ಬಾರೆಡು ಮೇಲ್ ಉದಿಯ ಬೆಂದುಂಡು
ಆದಾಳೆ ಭೋದಾಳೆ ಪನ್ಪಿ ದೈಬಾರೆ
ನಟ್ಟಿನಡಿಗೆಡು ಮೇಲ್ ಉದಿಯ ಬೆಂದುಂಡು
ರಾಜಗಿರಿ ಜಂಪದ್ಪೆ
ಗೋವುಡು ಮೇಲ್ ಉದಿಯ ಬೆಂದುಂಡು ಕಬಲ್ತಿಗೋವು
ಪಣವುಡು ಮೇಲ್ ಉದಿಯ ಬೆಂದುಂಡು
ಇಕ್ಕೇರಿ ಚಕ್ರ ಪಾದೇರಿ ಪಣವು
ಬಂಗಾರುಡು ಮೇಲ್ ಉದಿಯಬೆಂದುಂಡು
ಕುರಿಚಾತ್ ನಾಣ್ಯ ಬಂಗಾರು
ಈತ್ಮಾತ ಉದಿಯ ಬೆಂದಿನ ಕಾಲೊಡು
ದೈವೊಲು ಉದಿಯಬೆಂದಿನ ನಾಡು ಓಲುಂದು ಕೇನ್ನಗಾ..
ಮೂಡಾಯಿ ಘಟ್ಟದ ಮಿತ್ತು… ಕಂಡದ ಬುಲೆ ಬರಿಟ್ಟು…
ಈಚಾನಗರೊಡು, ಕರ್ಮಿನ ಸಾಲೆಡು, ಬೆತ್ತದ ಮಲೆಟ್ಟು..
ಅನಿಕಲ್ಲ ದಂಬೆಲ್ಡು, ಬೇಲೂರ ಪದವುಡು, ಸರೊಳಿದ ಸಂಪುಡು
ನೆಕ್ಕರೆ ಪುದೆಲುಡು, ನೀರಪರಿಪ್ಪುಡು ಉದಿಯ ಬೆಂದುಡುಯೇ…

ಕನ್ನಡದಲ್ಲಿ ಇದರ ಅರ್ಥ
ಅಂದಿನ ಕಾಲದಲ್ಲಿ…
ಬೆಳಕಿಗೆಂದು ಸೂರ್ಯ ದೇವರು ಉದಯವಾದರು
ಬೆಳಕಿಗೆ ಸೂರ್ಯ ದೇವರು
ಪಡುವಣ ಬಾನಲ್ಲಿ ಉದಯವಾಗುತ್ತಾರೆ ಚಂದ್ರ ದೇವರು
ಉದಯಕ್ಕೆ ಸೂರ್ಯ, ಕಂತಿಗೆ ಚಂದ್ರ
ದಕ್ಷಿಣಕ್ಕೆ ಸೆಲಿಯೇಂದ್ರ
ಉತ್ತರಕ್ಕೆ ಬಾಲ್ಯನ ಕುಮಾರ
ನಾಲ್ಕು ದಿಕ್ಕುಗಳಿಗೆ ನಾಲ್ಕು ಗುಂಡದೇವರು
ಮೂರು ಲೋಕದಲ್ಲಿ ಮೂರು ಭೂತ ಸಾನಗಳು
ಕಲ್ಲಿನಲ್ಲಿ ನಾಗ, ಹುತ್ತದಲ್ಲಿ ಸರ್ಪ
ಸಾವಿರ ಕಲ್ಲಿನ ಅಸುರರು
ದೇವರ ಕಲ್ಲಿನ ಬೆರ್ಮೆರು
ಉದ್ಭವವಾದ ಕಾಲದಲ್ಲಿ
ಮೇಲೆ ನೋಡೋಣಾ ಎಂದರೆ ಜಂಬಿ ತಾರೆ ಉದಯವಾಗಲಿಲ್ಲ
ಕೆಳಗೆ ನೋಡೋಣಾ ಎಂದರೆ ಭೂಮಿಯಲ್ಲಿ ಹುಲ್ಲು ಹುಟ್ಟಿಲ್ಲ
ಆಗ ಸ್ವಾಮಿ ಹೇಳಿದರು,
ಭೂಮಿ ಹಿಡಿದು ಆಕಾಶ ತಿರುಗಿಸಬೇಕು
ಆಕಾಶ ಹಿಡಿದು ಭೂಮಿ ತಿರುಗಿಸಬೇಕು
ಬಲಗೈ ತಟ್ಟಿದರು ಸ್ವಾಮಿ, ಆಕಾಶ ತಿರುಗಿಸಿದರು
ಎಡಗೈ ತಟ್ಟಿದರು ಸ್ವಾಮಿ ಭೂಮಿ ತಿರುಗಿಸಿದರು
ಆಕಾಶ ಭೂಮಿಗೆ ಮುತ್ತಲು, ಭೂಮಿ ಎಂಬುದು ಬೀಜ ಬಿತ್ತಲು
ಬಾನಿಗೆ ಮೂರು ಬಾರಿ ಭೂಮಿ ಸುತ್ತಿತು
ಜಂಬಿ ತಾರೆಗೆ ಉದಯವಾಯಿತು
ಬಾನಿನಲ್ಲಿ ಹುಟ್ಟಿಕೊಂಡಿತು ತಾಲವೆ ತಂಬವೆ ಎಂಬ ಸಿಡಿಲು
ಭೂಮಿಗೆ ಬಿತ್ತು ಕುಂಕುಮ ಹನಿಧಾರೆ ಮಳೆ
ಭೂಮಿಯಲ್ಲಿ ಮೊಳೆತು ಹುಟ್ಟಿಕೊಂಡಿತು ಕದಿಕೆ ಎಂಬ ಹುಲ್ಲು
ಬೆಳೆಯಲ್ಲಿ ಮೇಲಾಗಿ ಹುಟ್ಟಿಕೊಂಡಿತು
ಅತಿಕಾರೆ ಎಂಬ ಸತ್ಯದ ಬೆಳೆ
ಬಾಳೆಯಲ್ಲಿ ಚಿಗುರಿತು ಶ್ರೇಷ್ಠ ಬಾಳೆ
‘ಆದಾಳೆ ಬೋದಾಳ’ ಬಾಳೆ ಗಿಡ |
ನಟ್ಟಿಕಾಯಿಯಲಿ ಹುಟ್ಟಿಕೊಂಡಿತು ರಾಜಗಿರಿ ಕೆಂಪು ಹರಿವೆ ಸೊಪ್ಪು
ಗೋವಿನಲ್ಲಿ ಹುಟ್ಟಿಕೊಂಡಿತು ಕಬಲ್ತಿ ದನ
ನಾಣ್ಯದಲ್ಲಿ ಶ್ರೇಷ್ಟವಾಗಿ ಉದಯವಾಯಿತು
ಇಕ್ಕೇರಿ ಚಕ್ರ ಪಾದೇರಿ ನಾಣ್ಯ
ಬಂಗಾರದಲ್ಲಿ ಶ್ರೇಷ್ಟವಾಗಿ ಹುಟ್ಟಿಕೊಂಡಿತು
ಕುರಿಚಾತ್ ನಾಣ್ಯ ಬಂಗಾರ”

ಇಷ್ಟೆಲ್ಲಾ ಹುಟ್ಟಿಕೊಂಡ ನಾಡಿನಲ್ಲಿ ದೈವಗಳು ಉದಯವಾದ ಜಾಗ ಯಾವುದು ? ಅಂತ ಕೇಳಿದರೆ,
ತುಳುನಾಡಿನ ಪೂರ್ವಭಾಗದಲ್ಲಿರುವ ಘಟ್ಟದ ಪ್ರದೇಶದಲ್ಲಿ..
ಗದ್ದೆಯ ಬೆಳೆಗಳ ಬದಿಗಳಲ್ಲಿ
ಈಚಾನಗರದಲ್ಲಿ.. ಕರ್ಮಿನ ಸಾಲೆಯಲ್ಲಿ, ಬಿದಿರ ಮಲೆಗಳಲ್ಲಿ..
ಕಲ್ಲು ಮತ್ತು ಗದ್ದೆಗಳ ಬಿರುಕುಗಳಲ್ಲಿ, ಬೇಲೂರ ಪದವಿನಲ್ಲಿ
ನೆಕ್ಕರೆ ಗಿಡಗಳ ಪೊದೆಗಳಲ್ಲಿ, ನೀರಿನ ಹರಿವಿನಲ್ಲಿ
ನಮ್ಮ ದೈವಗಳು ಉದಯವಾದವು

ಇದರಲ್ಲಿ ಪರಶುರಾಮ ಎಲ್ಲಿದೆ? ಓಂ ಎಲ್ಲಿದೆ? ವೈದಿಕ ದೇವರುಗಳು ಎಲ್ಲಿದೆ? ಪವಾಡ, ಹಿಂಸೆ ಎಲ್ಲಿದೆ? ತುಳುನಾಡು ಪ್ರಕೃತಿ ವಿಜ್ಞಾನದ ಮೂಲಕ ಉದಯವಾಯಿತು ಎಂಬುದನ್ನು ನಮ್ಮ ಹಿರಿಯರು ಎಷ್ಟು ಸುಂದರವಾಗಿ ಹೇಳಿದ್ದಾರೆ.
‘ನಾವು ಬಂದಿದ್ದು ಎಲ್ಲಿಂದ ಎಂಬುದನ್ನು ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ’ ಎಂಬ ಡೈಲಾಗ್ ಸಿನೇಮಾದಲ್ಲಿ ಇದ್ದಿದ್ದರಿಂದ ಇಷ್ಟು ಹೇಳಬೇಕಾಯಿತು‌.

ಇನ್ನು ಸಿನೇಮಾ ವಿಷಯಕ್ಕೆ ಬರೋಣಾ. ದೈವಗಳು ನಮ್ಮನ್ನು ಕಾಯುತ್ತದೆ ಎಂಬುದು ಕರಾವಳಿಗರ ನಂಬಿಕೆ. ಹಾಗಂತ ದೈವಗಳು ಮೇಲ್ವರ್ಗದ ವಿರುದ್ದ ನಿಂತ ಉದಾಹರಣೆಗಳೇ ಇಲ್ಲ. ಮೇಲ್ವರ್ಗದ ಯಜಮಾನರ ಎದುರು ಕೆಲ ದೈವಗಳು ಮಾತನಾಡುವುದೇ ಇಲ್ಲ. ಉದಾಹರಣೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಎದುರು ಪಂಜುರ್ಲಿ ದೈವವು ಕೇವಲ “ಉದೋ ಪೆರ್ಗಡೇ ಉಧೋ” ಎಂದಷ್ಟೇ ಹೇಳುತ್ತದೆ. ಹಾಗಾಗಿ ಜನರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ದೈವದ ಮೊರೆ ಹೋಗಬೇಕು ಎಂಬುದನ್ನು ಜನರ ತಲೆಗೆ ತುಂಬುವುದೇ ಒಂದು ರಾಜಕೀಯ ಅಜೆಂಡಾ. ದೈವ ಭೂಮಿ ಬಿಟ್ಟು ಕೊಡಲು ಒಪ್ಪಿಲ್ಲ ಅಂದುಕೊಳ್ಳಿ. “ಮಾಯೆರ್ದು ಮದಿಪು ಮಲ್ಲೆ” (ದೈವಕ್ಕಿಂತ ಊರ ಮಾತು ದೊಡ್ಡದು) ಎಂದು ಮಧ್ಯಸ್ಥನೋ, ಊರ ಮುಖ್ಯಸ್ಥನೋ ಹೇಳಿದರೆ ದೈವ ಮರು ಮಾತಾಡುವಂತಿಲ್ಲ. ಊರ ಮುಖ್ಯಸ್ಥನ ಬಾಯಿಯಿಂದಲೋ, ಮುಖ್ಯಸ್ಥನಿಂದ ಸಂಬಳ ಪಡೆಯುವ ಮಧ್ಯಸ್ಥನ ಬಾಯಿಯಿಂದಲೋ ಬರುವ ಮದಿಪು ಯಾರ ಪರವಾಗಿರುತ್ತದೆ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ.

ಕರಾವಳಿಯ ದೈವವೆಂದರೆ ಕ್ರೌರ್ಯವಲ್ಲ. ಶೂದ್ರ-ದಲಿತರ ದೈವ ಸಂಸ್ಕೃತಿಯನ್ನು ಪರಿಚಯಿಸಲು ಅಷ್ಟೊಂದು ಕ್ರೌರ್ಯವನ್ನು ವಿಜೃಂಭಿಸಬೇಕಿರಲಿಲ್ಲ. ಕರಾವಳಿಯ ಕಾಡಂಚಿನಲ್ಲಿ ವಾಸ ಮಾಡುವ ದಲಿತ ಆದಿವಾಸಿ ಕುಟುಂಬಗಳು ಮರಗಳ್ಳತನ ಮಾಡಿದ ಉದಾಹರಣೆಯೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶೂದ್ರ ದಲಿತ ಸಂಸ್ಕೃತಿ, ಆಚರಣೆಗಳೆಂದರೆ ಕ್ರೌರ್ಯದ ಪರಮಾವಧಿ ಎಂದು ಬಿಂಬಿಸುವ ಮೂಲಕ ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ? ಕರಾವಳಿಯ ದೈವಾರಾಧನೆಯೆಂದರೆ ಯಾರಿಗೂ ಕೇಡನ್ನು ಬಯಸದ ನಂಬಿದವರನ್ನು “ತಾಯಿಯಂತೆಯೂ, ಮಾವನಂತೆಯೂ ಸಲಹುವ” ದೈವ. “ಪತ್ತಪ್ಪೆ ಜೋಕುಲೆನು ಒಂಜಿ ಪಟ್ಟೆಲ್ಡು ಪಾಡುದು ತಾಂಕುನ ಅಪ್ಪೆ ಲೆಕಂತಿನ ದೈವ ಯಾನ್” (ಹತ್ತು ತಾಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿಕೊಂಡು ಸಾಕುವ ತಾಯಿಯಂತಹ ದೈವ ನಾನು) ಎಂದು ದೈವ ಜನರಿಗೆ ಭರವಸೆ ನೀಡುತ್ತದೆ.

ವೃಷಬ್ ಶೆಟ್ಟಿಯವರು ದೈವ ಕುಣಿತಕ್ಕಾಗಿ ಭಾರೀ ಅಭ್ಯಾಸ ಮಾಡಿದ್ದಾರೆ. ಅದು ಸುಲಭ ಸಾಧ್ಯವಲ್ಲ.‌ ಆದರೆ ಅವರ ಕಠಿಣ ಪರಿಶ್ರಮ ಯಾರಿಗಾಗಿ ಬಳಕೆಯಾಗಿದೆ ಎಂಬುದೂ ಮುಖ್ಯವಾಗುತ್ತದೆ. ಹಾಗಾಗಿಯೇ ವೃಷಬ್ ಶೆಟ್ಟಿಯವರು ತಾನೇ ಬರೆದಿರುವ ಡೈಲಾಗ್ ನಂತೆ “ತಾನು ಎಲ್ಲಿಂದ ಬಂದೆ?” ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆತಂತಿದೆ.

ನವೀನ್ ಸೂರಿಂಜೆ
ಪತ್ರಕರ್ತರು