kanthara – Peepal Media

ಕಾಂತಾರ ಸಿನಿಮಾ ನೋಡಲು ಬಂದಿದ್ದ ಮುಸ್ಲಿಂ ಜೋಡಿಗಳ ವಿರುದ್ಧ ಹಲ್ಲೆ
ದಕ್ಷಿಣ ಕನ್ನಡ: ತುಳುನಾಡಿನ ದೈವಾರಾಧನೆಯ ಆಧಾರಿತವಾದ ಕಾಂತಾರ ಸಿನಿಮಾವನ್ನು ನೋಡುತ್ತಿದ್ದ ಮುಸ್ಲಿಂ ಯುವಕ-ಯುವತಿಗೆ ಯುವಕರ ಗುಂಪೊಂದು ಥಿಯೇಟರ್‌ನ ಆವರಣದಲ್ಲೇ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ನಡೆದಿದೆ.

ಕಾಂತಾರ ಸಿನಿಮಾ ದೇಶಾದ್ಯಂತ ಸುದ್ದಿಯಲ್ಲಿದೆ. ಕಾಂತಾರ ಬಿಡುಗಡೆಯಾದ ನಂತರ ತುಳುನಾಡಿನ ದೈವಾರಾಧನೆ, ದೈವನರ್ತನಗಳು ಆಚರಣೆಗಳು ಎಚ್ಚುತ್ತಲೇ ಇವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಮುಸ್ಲಿಂ ಜೋಡಿಗಳು ಕಾಂತಾರ ಸಿನಿಮಾ ನೋಡುತ್ತಿದ್ದ ಹಿನ್ನಲೆಯಲ್ಲಿ ಯುವಕರ ಗುಂಪೊಂದು ಅವರ ವಿರುದ್ಧ ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ.

ಯುವಕ ಮತ್ತು ಯುವತಿ ಸುಳ್ಯದ ಸಂತೋಷ್‌ ಚಿತ್ರಮಂದಿರದಲ್ಲಿ ಕಾಂತಾರ ಸಿನಿಮಾ ನೋಡಲೆಂದು ಬಂದಿದ್ದರು. ಈ ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಹಿಂದೂಗಳ ದೈವಾರಾಧನೆ ಆಧಾರಿತ ಸಿನಿಮಾ ನೋಡಲು ಬಂದಿದ್ದಾರೆ ಎನ್ನುವ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನುವುದು ಕೆಲವರು ಹೇಳುತ್ತಿದ್ದರೂ ಯಾವ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಕಾಲೇಜಿಗೆ ಹೋಗದೇ ಸಿನಿಮಾಗೆ ಬಂದಿದ್ದಕ್ಕೆ ಯುವಕರ ಗುಂಪು ಆಕ್ಷೇಪ ವ್ಯಕ್ತ ಪಡಿಸಿ ಅವರಿಗೆ ಎಚ್ಚರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಗುಂಪು ಜೋರು ಧ್ವನಿಯಲ್ಲಿ ಪ್ರಶ್ನೆ ಮಾಡುತ್ತಿರುವುದನ್ನು ತಿಳಿದ ಚಿತ್ರಮಂದಿರದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತುಳುನಾಡಿನ ದೈವಾರಾಧನೆಗೆ ಸಂಸದ ತೇಜಸ್ವಿ ಸೂರ್ಯ ಅವರಿಂದ ಅವಮಾನ
ಬೆಂಗಳೂರು: ಇತ್ತೀಚೆಗೆ ಎಲ್ಲೆಂದರಲ್ಲಿ ತುಳುನಾಡಿನ ದೈವಾರಾಧನೆ ಪ್ರದರ್ಶನಗಳು ಹೆಚ್ಚಾಗುತ್ತಿದ್ದು, ದೈವಗಳ ಹೆಸರಿನಲ್ಲಿ ದುಡ್ಡು ಮಾಡುತ್ತಿವೆ. ಈ ವಿರುದ್ಧ ದೈವಾರಾಧಕರು ಸಿಡಿದೇಳುತ್ತಿರುವ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರಿಂದಲೂ ದೈವಾರಾಧನೆಗೆ ಅವಮಾನವಾಗಿರುವ ಘಟನೆ ನಡೆದಿದೆ.

ಶುಕ್ರವಾರದಂದು ಬೆಂಗಳೂರಿನ ತಣಿಸಂದ್ರ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರೇರಿತ ರಾಷ್ಟ್ರೋತ್ಥನ ಪರಿಷತ್‌ನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಾರ್ಷಿಕೋತ್ಸವದ ವೇದಿಕೆಯಲ್ಲಿ ತುಳುನಾಡಿನ ದೈವಾರಾಧನೆ ಪ್ರದರ್ಶನ ನೀಡಿದ್ದು, ಸಂಸದ ತೇಜಸ್ವಿ ಸೂರ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ತೇಜಸ್ವಿ ಅವರು ತನ್ನ ಕಾಲಿಗೆ ಹಾಕಿದ್ದ ಶೂ ತೆಗೆಯದೇ ದೈವ ನರ್ತನದಲ್ಲಿ ಬಳಸುವ ಜೀಟಿಗೆಯನ್ನು ಕೈಯಲ್ಲಿ ಹಿಡಿದಿದ್ದು, ದೈವಾರಾಧನೆಗೆ, ದೈವ ನರ್ತಕರಿಗೆ  ಅವಮಾನವಾಗುವಂತೆ ವರ್ತಿಸಿದ್ದಾರೆ.

ತೇಜಸ್ವಿ ಸೂರ್ಯ ಅವರ ಈ ವರ್ತನೆಯ ವಿರುದ್ಧ ದೈವಾರಾಧಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇಷ್ಟೆಲ್ಲಾ ಬೆಳವಣಿಗೆಗಳು ಮುಂದುವರೆಯುತ್ತಿದ್ದರೂ, ತುಳುನಾಡಿನ ಶಾಸಕರುಗಳು ಸಂಸದರು ಮೌನವಾಗಿರುವುದರ ಬಗ್ಗೆಯೂ ಕಿಡಿಕಾರಿದ್ದಾರೆ.

ಸಂಸದ ತೇಜಸ್ವಿಯವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದ ಬಗ್ಗೆ ಹಂಚಿಕೊಂಡಿದ್ದು, ಕೈಯಲ್ಲಿ ಜೀಟಿಕೆ ಹಿಡಿದು ಕಾಲಲ್ಲಿ ಶೂ ಹಾಕಿಕೊಂಡೇ ದೈವದ ಪಕ್ಕ ಫೋಟೋ ತೆಗೆಸಿಕೊಂಡಿರುವುದನ್ನು ಅದನ್ನು ತಮ್ಮ ಪೇಜ್‌ ಅಲ್ಲಿ ಹಾಕಿಕೊಂಡಿದ್ದರು. ಆದರೆ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ರಾತ್ರೋರಾತ್ರಿ ಆ ಫೋಟೋವನ್ನು ಡಿಲೀಟ್‌ ಮಾಡಿದ್ದು, ಅನುಮಾನಕ್ಕೆ ಕಾರಣವಾಗಿದೆ. ಆದರೆ ಅದೇ ದಿನ ಅವರು ಶೂ ಹಾಕಿಕೊಂಡಿದ್ದ ಬೇರೆ ಫೋಟೋ ಅವರ ಫೇಸ್ಬುಕ್‌ ಪುಟದಲ್ಲಿ ಕಾಣಬಹುದು.

ತೇಜಸ್ವಿಯವರ ಈ ನಡೆಯ ವಿರುದ್ಧ ಅಖಿಲ ಭಾರತ ಹಿಂದೂ ಮಹಾ ಸಭಾ ಆಕ್ರೋಶ ವ್ಯಕ್ತ ಪಡಿಸಿದ್ದು,

ಜೈ ಹಿಂದೂ ರಾಷ್ಟ್ರ…

ಇದೇನಾ ಸಂಸ್ಕೃತಿ???

ಇದೇನಾ ಪದ್ಧತಿ ???

ಭಾರತೀಯ ಜನತಾ ಪಕ್ಷಕ್ಕೆ ಹಿಂದೂ ಸಂಸ್ಕೃತಿಯ ಬಗ್ಗೆ/  ದೈವರಾದನೆಯ ಬಗ್ಗೆ/ ಹಿಂದೂ ಸಮುದಾಯದ ಬಗ್ಗೆ, ಇರುವಂತಹ ಗೌರವವನ್ನು ನೋಡಿ….

ಆಡಳಿತದಲ್ಲಿರುವಂತಹ ಡಬಲ್ ಇಂಜಿನ್ ಸರಕಾರದ ಮಾನ್ಯ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ಚಪ್ಪಲಿಯನ್ನ ಧರಿಸಿ ನಿಂತಿರುವುದನ್ನ ಕಣ್ಣಾರೆ ನೋಡಿ…

ಇಂಥವರಿಂದ ಹಿಂದೂ ಸಮಾಜ ಏನನ್ನು ಅಪೇಕ್ಷಿಸಲು ಸಾಧ್ಯ???

ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದು ಕಿಡಿಕಾರಿದೆ.

ಜೈ ಹಿಂದೂ ರಾಷ್ಟ್ರ…

ಇದೇನಾ ಸಂಸ್ಕೃತಿ ???

ಇದೇನ ಪದ್ಧತಿ ???

ಭಾರತೀಯ ಜನತಾ ಪಕ್ಷಕ್ಕೆ ಹಿಂದೂ ಸಂಸ್ಕೃತಿಯ ಬಗ್ಗೆ /ದೈವರಾದನೆಯ ಬಗ್ಗೆ /ಹಿಂದೂ ಸಮುದಾಯದ ಬಗ್ಗೆ, ಇರುವಂತಹ ಗೌರವವನ್ನು ನೋಡಿ ….

ಆಡಳಿತದಲ್ಲಿರುವಂತಹ ಡಬಲ್ ಇಂಜಿನ್ ಸರಕಾರದ ಮಾನ್ಯ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ಚಪ್ಪಲಿಯನ್ನ ಧರಿಸಿ ನಿಂತಿರುವುದನ್ನ ಕಣ್ಣಾರೆ ನೋಡಿ…

ಇಂಥವರಿಂದ ಹಿಂದೂ ಸಮಾಜ ಏನನ್ನು ಅಪೇಕ್ಷಿಸಲು ಸಾಧ್ಯ???

ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದು ಕಿಡಿಕಾರಿದೆ.

ಮತ್ತೆ ಬಂತು ‘ಕಾಂತಾರ’ ಚಿತ್ರದ ‘ವರಾಹ ರೂಪಂ‌’ ಹಾಡು
ಬೆಂಗಳೂರು : ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಕುರಿತು ಕೇರಳದ ಕೋರ್ಟ್​ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಆ ಹಾಡು ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್, ಓಟಿಟಿ ಸೇರಿದಂತೆ ಎಲ್ಲೆಡೆ ಸಿಗಲಿದೆ.

ಇದಕ್ಕೂ ಮುನ್ನ, ‘ವರಾಹ ರೂಪಂ …’ ಹಾಡನ್ನು ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್​ಫಾರ್ಮ್​ಗಳಲ್ಲಿ ಒಪ್ಪಿಗೆ ಇಲ್ಲದೆ ಬಳಸಬಾರದು ಎಂದು ಕೇರಳದ ಕೋರ್ಟ್​ ಆದೇಶ ಹೊರಡಿಸಿತ್ತು. ಇದಕ್ಕೆ ತಲೆ ಬಾಗಿದ್ದ ಚಿತ್ರತಂಡವು, ‘ವರಾಹ ರೂಪಂ’ ಹಾಡನ್ನು ಚಿತ್ರಮಂದಿರ, ಯೂಟ್ಯೂಬ್​ನ ಹೊಂಬಾಳೆ ಫಿಲಂಸ್​ನ ಚಾನಲ್​, ಮ್ಯೂಸಿಕ್ ಆ್ಯಪ್​ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್​ ಮಾಡಿತ್ತು. ಓಟಿಟಿಯಲ್ಲಿ ‘ಕಾಂತಾರ’ ಚಿತ್ರ ಬಿಡುಗಡೆಯಾದಾಗಲೂ ಬೇರೆ ಟ್ಯೂನ್​ ಬಳಸಲಾಗಿತ್ತು.

ಆ ನಂತರ ತಡೆಯಾಜ್ಞೆ ತೆರವಾಗಿ, ಹಾಡನ್ನು ಪುನಃ ಬಳಸಿಕೊಳ್ಳುವುದಕ್ಕೆ ಅನುಮತಿ ಸಿಕ್ಕಿದೆ. ಅದರಂತೆ, ತತಕ್ಷಣಕ್ಕೆ ಬರುವಂತೆ ಶನಿವಾರದಿಂದ ಚಿತ್ರಮಂದಿರ, ಓಟಿಟಿ, ಸೋಷಿಯಲ್​ ಮೀಡಿಯಾ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಮೂಲ ‘ವರಾಹ ರೂಪಂ’ ಹಾಡು ಪುನಃ ಸಿಗಲಿದೆ.

‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್​ ಸಂಸ್ಥೆಯಡಿ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಿಷಭ್​ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ, ಅಜನೀಶ್​ ಲೋಕನಾಥ್​ ಸಂಗೀತ ಮತ್ತು ಅರವಿಂದ್​ ಅವರ ಛಾಯಾಗ್ರಹಣವಿದೆ. ‘ಕಾಂತಾರಾ’ ಚಿತ್ರವು 50 ದಿನಗಳನ್ನು ಪೂರೈಸಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ವರಾಹ ರೂಪಮ್‌ ಹಾಡು: ಇನ್ನೂ ಸಂಕಷ್ಟದಿಂದ ಪಾರಾಗಿಲ್ಲ ಕಾಂತಾರ ತಂಡ!
ತಿರುವನಂತಪುರಂ: ಥೈಕುಡಮ್‌ ಬ್ರಿಡ್ಜ್‌ ಬ್ಯಾಂಡ್‌ ಹಾಕಿದ್ದ ಹಾಡಿನ ಕಾಪಿರೈಟಿಗೆ ಸಂಬಂಧಿಸಿದಂತೆ ಕಾಂತಾರ ಸಿನೆಮಾ ತಂಡಕ್ಕೆ ಸಣ್ಣ ಬಿಡುಗಡೆ ದೊರೆತಿದೆಯಾದರೂ, ಅದು ಆ ಹಾಡನ್ನು ತನ್ನ ಸಿನೆಮಾದಲ್ಲಿ ಬಳಸಿಕೊಳ್ಳಲು ಇನ್ನೊಂದು ತಡೆಯನ್ನು ದಾಟಿ ಬರಬೇಕಿದೆ.

ಚಿತ್ರತಂಡದ ಭಾಗವಾಗಿರುವ ವರಾಹ ರೂಪಮ್‌ ಹಾಡಿನ ಬರಹಗಾರ ಶಶಿರಾಜ್‌ ಕಾವೂರ್‌ ಅವರು

ಕೇರಳದ ಗೌರವಾನ್ವಿತ ಉಚ್ಚ ನ್ಯಾಯಾಲಯವು ಕಾಂತಾರ ತಂಡಕ್ಕೆ ಕೆಳ ನ್ಯಾಯಾಲಯದಿಂದ (ಮೂಲ ನ್ಯಾಯವ್ಯಾಪ್ತಿ) ಪರಿಹಾರ ಪಡೆಯುವಂತೆ ನಿರ್ದೇಶಿಸಿದೆ.

ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ಅರ್ಜಿಯ ವಿಚಾರಣೆಯ ನಂತರ, ಥೈಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದೆ ಮತ್ತು ಅದರ ಪ್ರಕಾರ ವರಾಹ ರೂಪಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವು ಮಾಡಲಾಗಿದೆ. ನ್ಯಾಯ ಮೇಲುಗೈ ಸಾಧಿಸಿತು

ಜೈ ತುಳುನಾಡು.” ಎಂದು ಬರೆದುಕೊಂಡಿದ್ದಾರೆ. ಅದನ್ನೇ ಮಾಧ್ಯಮಗಳಲ್ಲಿ ಸುದ್ದಿ ಮಾಡಲಾಗಿದೆ.

ಆದರೆ ಮೂಲಗಳ ಪ್ರಕಾರ ಕಾಂತಾರ ತಂಡವು ಪ್ರಸ್ತುತ ಕೋಳಿಕೋಡ್‌ ನ್ಯಾಯಾಲಯದ ಕೇಸಿನಲ್ಲಿ ಜಯಗಳಿಸಿದ್ದರೂ, ಮನೋರಮಾ ಸಂಸ್ಥೆಯು ಪಾಲಾಕ್ಕಾಡ್‌ ಸ್ಥಳೀಯ ನ್ಯಾಯಾಲಯದಲ್ಲಿ ಹೂಡಲಾಗಿರುವ ದಾವೆಯನ್ನೂ ಗೆದ್ದ ನಂತರವಷ್ಟೇ ಮೂಲ ಹಾಡನ್ನು ಕಾಂತಾರ ಚಿತ್ರದಲ್ಲಿ ಬಳಸಿಕೊಳ್ಳಬಹುದಾಗಿದೆ. ಅಲ್ಲಿಯವರೆಗೆ ಚಿತ್ರದಲ್ಲಿ ಹಾಡನ್ನು ಬಳಸಿಕೊಳ್ಳಲು ಸಾಧ್ಯವಿಲ್ಲವೆನ್ನುವುದು ತಜ್ಞರ ಅಭಿಪ್ರಾಯ.

ಶಶಿರಾಜ್‌ ಕಾವೂರು ಅವರ ಪೋಸ್ಟನ್ನು ನೋಡಿದ ನಂತರ ಕಾಂತಾರ ಅಭಿಮಾನಿಗಳ ಹರ್ಷವು ಮುಗಿಲು ಮುಟ್ಟಿದ್ದು, ಇನ್ನೇನು ತುಳುವಿನಲ್ಲಿ ಬಿಡುಗಡೆಯಾಗಲಿರುವ ಆವೃತ್ತಿಯಲ್ಲಿ ಹಾಡಿನ ಮೂಲ ಆವೃತ್ತಿಯೇ ಇರಲಿದೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಈ ಸುದ್ದಿ ನಿರಾಶೆ ಮೂಡಿಸಿದೆ. ಅಲ್ಲದೆ ಹೊಂಬಾಳೆ ಸಂಸ್ಥೆಯಾಗಲೀ, ಚಿತ್ರದ ನಿರ್ದೇಶಕ, ನಿರ್ಮಾಪಕರಾಗಿ ಈ ಹಾಡಿನ ಕುರಿತು ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡದಿರುವುದು ಮೇಲಿನ ಅನುಮಾನಕ್ಕೆ ಹೆಚ್ಚು ಪುಷ್ಟಿ ನೀಡುತ್ತಿದೆ.

ಮತದಾರರ ಪಟ್ಟಿ ಪರಿಷ್ಕರಣೆಯು ಕಾಂತಾರದ ಗುಳಿಗ-ಪಂಜುರ್ಲಿಯ ದಂತಕತೆ ಅಲ್ಲ : ಸಿದ್ದರಾಮಯ್ಯ
ಬೆಂಗಳೂರು: ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿರುವ ಚಿಲುಮೆ ಸಂಸ್ಥೆಯ ಹಿನ್ನೆಲೆ ಏನು? ಅದರ ಮಾಲೀಕರು ಯಾರು? ಹಣಕಾಸು ಸಾಮರ್ಥ್ಯ ಏನು? ಉದ್ಯೋಗಿಗಳ ಸಂಖ್ಯೆ ಎಷ್ಟು? ಅದರ ಹಣಕಾಸಿನ ಮೂಲ ಯಾವುದು? ಈ ಬಗ್ಗೆ ತನಿಖೆಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಶುಕ್ರವಾರದಂದು ಸರಣಿ ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.

ಚಿಲುಮೆ ಸಂಸ್ಥೆಯು ಸುಮಾರು 7-8 ಸಾವಿರ ಸಿಬ್ಬಂದಿ ಮನೆ, ಮನೆಗೆ ಹೋಗಿ ಮತದಾರರ ಮಾಹಿತಿ ಕಲೆ ಹಾಕಿದ್ದು, ಕೆಲವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಪ್ರಕರಣದ ಕುರಿತು ದೂರು ದಾಖಲಾಗಿದ್ದು, ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಆದೇಶವನ್ನು ಗೌರವ್ ಗುಪ್ತಾ ಅವರು ಏಕಾಏಕಿ ಹಿಂಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಸಿದ್ಧರಾಮಯ್ಯ, ʼಆಪರೇಷನ್ ವೋಟರ್ ಹಗರಣವನ್ನು ಹಾಸ್ಯಾಸ್ಪದ ಎಂದು ತಳ್ಳಿಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಈ ಹಗರಣದ ರೂವಾರಿಗಳನ್ನು ರಕ್ಷಿಸಲು, ಸಂಸ್ಥೆಯ ಒಬ್ಬ ಏಜೆಂಟಿನ ವಿರುದ್ಧ ಪೊಲೀಸರಿಂದ ಎಫ್ಐಆರ್ ಹಾಕಿಸಿ ತಮ್ಮ ಸರ್ಕಾರದ ಕೆಲಸ ಎಷ್ಟು ಹಾಸ್ಯಾಸ್ಪದ ಎನ್ನುವುದನ್ನು ಸಾಬೀತುಪಡಿಸಿದ್ದಾರೆʼ ಎಂದು ಟೀಕಿಸಿದ್ಧಾರೆ.

ʼಮತದಾರರ ಪಟ್ಟಿ ಪರಿಷ್ಕರಣೆಯ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ವಿರುದ್ಧವೇ ನಾವು ದೂರು ನೀಡಿದ್ದೆವು. ಮುಖ್ಯಮಂತ್ರಿಗಳು 20,000 ರೂಪಾಯಿ ಸಂಬಳದ ಬಡಪಾಯಿ ಏಜೆಂಟ್‌ನನ್ನು ಬಲಿಪಶು ಮಾಡಿ ತಾವು ಪಾರಾಗುವ ಸಂಚು ನಡೆಸಿದ್ದಾರೆʼ ಎಂದು ಹೇಳಿದ್ದಾರೆ.

ʼಮುಖ್ಯಮಂತ್ರಿ ಬೊಮ್ಮಾಯಿಯವರು ತಮ್ಮನ್ನು ರಕ್ಷಿಸಿಕೊಳ್ಳಲು ಆಪರೇಷನ್ ವೋಟರ್ ಹಗರಣವನ್ನು ಜಾತಿಗಣತಿಗೆ ಹೋಲಿಸಿದ್ದಾರೆ. ಒಂದು ಸಂಸ್ಥೆಯ ಹಿನ್ನೆಲೆಯನ್ನೂ ಪರಿಶೀಲಿಸದೆ ಮತದಾರರ ಪಟ್ಟಿ ಪರಿಷ್ಕರಣೆಗೆ ನೀಡಿರುವ ಅನುಮತಿಗೂ, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನಡೆಸಿರುವ ಜಾತಿಗಣತಿಗೂ ಏನು ಸ್ವಾಮಿ ಸಂಬಂಧ? ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿರುವ ಚಿಲುಮೆ ಸಂಸ್ಥೆಯ ಹಿನ್ನೆಲೆ ಏನು? ಅದರ ಮಾಲೀಕರು ಯಾರು? ಹಣಕಾಸು ಸಾಮರ್ಥ್ಯ ಏನು? ಉದ್ಯೋಗಿಗಳ ಸಂಖ್ಯೆ ಎಷ್ಟು? ಅದರ ಹಣಕಾಸಿನ ಮೂಲ ಯಾವುದು? ಈ ಬಗ್ಗೆ ತನಿಖೆಯಾಗಲಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ʼದೂರು ಬಂದ ಕಾರಣಕ್ಕೆ ಚಿಲುಮೆಗೆ ನೀಡಿರುವ ಅನುಮತಿಯನ್ನು ಬಿಬಿಎಂಪಿ ರದ್ದುಪಡಿಸಿರುವುದನ್ನು ಸ್ವಾಗತಿಸುತ್ತೇನೆ. ಮಾಡಿರುವ ಅಪರಾಧಕ್ಕೆ ಅನುಮತಿ ರದ್ದತಿ ಶಿಕ್ಷೆ ಅಲ್ಲವಲ್ಲಾ? ಗುತ್ತಿಗೆಯನ್ನು ರದ್ದುಗೊಳಿಸುವ ಮೂಲಕ ಆಗಿರುವ ಅಪರಾಧವನ್ನು ಇಲಾಖೆಯೇ ಒಪ್ಪಿಕೊಂಡಂತಾಗಿಲ್ಲವೇ?ʼ ಎಂದು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್ ನ ಸೇಡಿನ ಕತೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ-ಪಂಜುರ್ಲಿಯ ದಂತಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕು. 8/8#OperationVoter
— Siddaramaiah (@siddaramaiah) November 18, 2022

ʼಸಮಾಜ ಸೇವೆಗೆ ಬೇಕಾದಷ್ಟು ಅವಕಾಶ ಇರುವಾಗ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಉಚಿತವಾಗಿ ಮಾಡುತ್ತೇವೆ ಎಂದು ಸಂಸ್ಥೆ ಅರ್ಜಿ ನೀಡಿದಾಗಲೇ ಅದರ ಹಿಂದಿನ ದುರುದ್ದೇಶದ ಅರಿವು ಬಿಬಿಎಂಪಿಗೆ ಆಗಬೇಕಿತ್ತು. ಆಗಿಲ್ಲ ಎಂದರೆ ಬಿಬಿಎಂಪಿ ಹಗರಣದದಲ್ಲಿ ಭಾಗಿಯಾಗಿದೆ ಎಂದು ಅರ್ಥ ಅಲ್ಲವೇ?ʼ ಎಂದು ಕಿಡಿ ಬಿಬಿಎಂಪಿ ವಿರುದ್ಧ ಕಿಡಿಕಾರಿದ್ದಾರೆ.

ʼಮತದಾರರ ಪಟ್ಟಿ ಪರಿಷ್ಕರಣೆಗಾಗಿ ಚಿಲುಮೆ ಸಂಸ್ಥೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿದ್ದೀರಿ ಸರಿ, ಆದರೆ ಆ ಸಂಸ್ಥೆ ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ಏನಾಯಿತು? ಆ ಸಂಸ್ಥೆ ಬಿಬಿಎಂಪಿಗೆ ಸಲ್ಲಿಸಿದೆಯಾ? ಇಲ್ಲವೇ ಯಾವುದಾದರೂ ರಾಜಕೀಯ ಪಕ್ಷಕ್ಕೆ ಮಾರಿದೆಯಾ?ʼ ಎಂದು ಕೇಳಿದ್ದಾರೆ.

ʼಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್ ನ ಸೇಡಿನ ಕತೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ-ಪಂಜುರ್ಲಿಯ ದಂತಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕುʼ ಎಂದು ಉದಾಹರಣೆಯ ಮುಖಾಂತರ ವ್ಯಂಗ್ಯ ಮಾಡಿದ್ದಾರೆ.

ಕಾಂತಾರಕ್ಕೊಂದು ಕಪ್ಪುಚುಕ್ಕಿ: ʼವರಹಾ ರೂಪಮ್ʼ ಹಾಡಿಗೆ ತಡೆ ನೀಡಿದ ಕೋರ್ಟ್‌
ಕಾಂತಾರ ಸಿನೆಮಾದ ವರಹಾ ರೂಪಮ್‌ ಹಾಡಿಗೆ ಕೋಳಿಕೋಡ್‌ ಜಿಲ್ಲಾ ನ್ಯಾಯಾಲಯವು ತಡೆ ನೀಡಿ ಆದೇಶ ನೀಡಿದೆ. ಈ ಕುರಿತು ಕಾಂತಾರ ತಂಡದ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.

ಇತ್ತೀಚೆಗೆ ಮಾಧ್ಯಮಗಳು ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ಹಲವು ಕಾರಣಗಳಿಗಾಗಿ ಸುದ್ದಿಯಾಗಿದ್ದ ಕಾಂತಾರ ಸಿನೆಮಾ ಈಗ ಮತ್ತೆ ಸದ್ದು ಮಾಡಿದೆ. ಆದರೆ ಈ ಬಾರಿ ಅದು ಸದ್ದು ಮಾಡಿರುವುದು ಅಷ್ಟೇನೂ ಒಳ್ಳೆಯ ಕಾರಣಕ್ಕಲ್ಲ.

ಕಾಂತಾರ ಚಿತ್ರ ನೋಡಿದವರಿಗೆ ‌ʼವರಹಾ ರೂಪಮ್ʼ ಎಂದು ಆರಂಭಗೊಳ್ಳುವ ಹಾಡು ಕೂಡಾ ಗೊತ್ತಿರುತ್ತದೆ, ಈ ಹಾಡು ಇಡೀ ಚಿತ್ರದ ಆತ್ಮದಂತೆ ಕಂಗೊಳಿಸುತ್ತಿತ್ತು. ಈ ಹಾಡು ಬಿಡುಗಡೆಯಾದ ದಿನದಿಂದಲೂ ಒಂದಷ್ಟು ಜನರು ಇದು ತೈಕ್ಕುಡಮ್‌ ಬ್ರಿಡ್ಜ್‌ ಎನ್ನುವ ಬ್ಯಾಂಡ್‌ ನಿರ್ಮಿಸಿದ ನವರಸ ಎನ್ನುವ ‍ಫ್ಯೂಷನ್‌ ಮ್ಯುಸಿಕ್ಕಿನ ಮಕ್ಕಿ ಕಾ ಮಕ್ಕಿ ಕಾಪಿ ಎಂದು ಹೇಳಿದ್ದರಾದರೂ, ಚಿತ್ರ ಮತ್ತು ಅದರ ಹಾಡುಗಳಿಗೆ ದೊರಕಿದ್ದ ದೊಡ್ಡ ಯಶಸ್ಸಿನಡಿ ಅಪ್ಪಚ್ಚಿಯಾಗಿತ್ತು.

ಆದರೆ ಈ ಕುರಿತು ಚಿತ್ರದ ಸಂಗೀತ ನಿರ್ದೇಶಕ ಅಜನೀಶ್‌ ಅವರನ್ನು ಕೇಳಿದಾಗ ಅವರು, “ನಾವು ಕಾಪಿ ಮಾಡಿಲ್ಲ, ಸ್ಫೂರ್ತಿ ಪಡೆದಿದ್ದೇವಷ್ಟೇ. ರಾಗಗಳು ಒಂದೇ ರೀತಿಯಿರುವ ಕಾರಣ ಹಾಗೆ ಕೇಳಿಸುತ್ತದೆ,” ಎನ್ನುವ ಅರ್ಥದ ಮಾತುಗಳನ್ನಾಡಿದ್ದರು.

ಚಿತ್ರ ಇತರ ಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಾಣುವ ಹೊತ್ತಿನಲ್ಲೇ ಥೈಕ್ಕುಡಮ್‌ ಬ್ರಿಡ್ಜ್‌ ಈ ಹಾಡಿನ ವಿಷಯದಲ್ಲಿ ತಾನು ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟಿಗೆ ಹೋಗಿದ್ದ ಥೈಕ್ಕುಡಮ್‌ ತಂಡಕ್ಕೆ ಒಂದು ಹಂತದ ಜಯ ದೊರೆತಂತಾಗಿದೆ. ಈ ಕೋರ್ಟು ತೈಕ್ಕುಡಮ್‌ ಬ್ರಿಡ್ಜ್‌ನ ಅನುಮತಿಯಿಲ್ಲದೆ ಈ ಹಾಡನ್ನು ಪ್ಲೇ ಮಾಡದಂತೆ ಕೋರ್ಟ್‌ ಆದೇಶಿಸಿದೆ ಎಂದು ತಂಡ ತನ್ನ ಫೇಸ್‌ಬುಕ್‌ ಪೇಜಿನಲ್ಲಿ ಪ್ರಕಟಿಸಿದೆ.

ಕೋಳಿಕ್ಕೋಡ್ ಜಿಲ್ಲಾ ಕೋರ್ಟ್ ನ್ಯಾಯಾಧೀಶರು ಹಾಡಿಗೆ ತಡೆಯಾಜ್ಞೆ ನೀಡಿ. ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕ ಜೊತೆಗೆ Amazon, YouTube, Spotify, Wynk, ಸಂಗೀತ, ಜಿಯೋ ಸಾವನ್ ಮತ್ತು ಇತರರು ತೈಕ್ಕುಡಂ ಬ್ರಿಡ್ಜ್ ಅನುಮತಿ ಪಡೆಯದೇ ಸದರಿ ಬಳಸುವಂತಿಲ್ಲ ಎಂದು ಆದೇಶ ನೀಡಿದ್ದಾರೆ.

ಕಾಂತಾರ ಕಳ್ಳತನ ಬಯಲು: ಕೇಸು ಹಾಕಲು ಮುಂದಾದ ಸಂಸ್ಥೆ!!!
ಇದುವರೆಗೆ ಜನರ ನಡುವೆ ನಡೆಯುತ್ತಿದ್ದ ಗುಸುಗುಸು ಇಂದು ನಿಜವಾಗಿದೆ. ಕಾಂತಾರ ಸಿನೆಮಾದ “ವರಹಾ ರೂಪಮ್‌” ಹಾಡಿನ ಟ್ಯೂನು ತನ್ನದೆಂದು ಮೂಲ ಹಾಡಿನ ಕಾಪಿರೈಟ್‌ ಹೊಂದಿರುವ ಸಂಸ್ಥೆ ಹೇಳಿದ್ದು, ಅದು ತಾನು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ಈ ಕುರಿತು ತನ್ನ ಫೇಸ್ಬುಕ್‌ ಪೇಜಿನಲ್ಲಿ ಪೋಸ್ಟ್‌ ಮಾಡಿರುವ ಸಂಸ್ಥೆಯು, “ತೈಕ್ಕುಡಂ ಬ್ರಿಡ್ಜ್ ಯಾವುದೇ ರೀತಿಯಲ್ಲಿ ಅಥವಾ “ಕಾಂತಾರ” ದೊಂದಿಗೆ ಸಂಯೋಜಿತವಾಗಿಲ್ಲ ಎನ್ನುವುದು ನಮ್ಮ ಕೇಳುಗರಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಆಡಿಯೋ ವಿಷಯದಲ್ಲಿ ನಮ್ಮ IP “ನವರಸಂ” ಮತ್ತು “ವರಾಹ ರೂಪಂ” ನಡುವಿನ ಅನಿವಾರ್ಯ ಹೋಲಿಕೆಗಳು ಇವೆಯಾದ್ದರಿಂದ, ಇದು ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಮ್ಮ ದೃಷ್ಟಿಕೋನದಿಂದ “ಸ್ಫೂರ್ತಿ” ಮತ್ತು “ಕೃತಿಚೌರ್ಯದ” ನಡುವಿನ ವ್ಯತ್ಯಾಸವು ಬಹಳವಿದೆ ಮತ್ತು ನಿರ್ವಿವಾದವಾಗಿದೆ ಹಾಗೂ ಈ ಹಿನ್ನೆಲೆಯಲ್ಲಿ ನಾವು ಇದಕ್ಕೆ ಕಾರಣವಾದ ಸೃಜನಶೀಲ ತಂಡದ ವಿರುದ್ಧ ಕಾನೂನು ಕ್ರಮವನ್ನು ಬಯಸುತ್ತೇವೆ. ವಿಷಯದ ಮೇಲೆ ನಮಗಿರುವ ಹಕ್ಕುಗಳಿಗೆ ಯಾವುದೇ ಕ್ರೆಡಿಟ್‌ ನೀಡಲಾಗಿಲ್ಲ ಮತ್ತು ಚಲನಚಿತ್ರದ ಸೃಜನಶೀಲ ತಂಡವು ಹಾಡನ್ನು ಮೂಲ ಕೃತಿಯಾಗಿ ಪ್ರಚಾರ ಮಾಡಿದೆ.” ಎಂದು ಹೇಳಿದೆ.

ಈ ಕುರಿತು ಮುಂದುವರೆದು ಸಂಸ್ಥೆಯು, ನಮ್ಮ ಕೇಳುಗರ ಬೆಂಬಲವನ್ನು ನಾವು ವಿನಂತಿಸುತ್ತೇವೆ ಮತ್ತು ಅದರ ಕುರಿತು ನೀವು ಪ್ರಚಾರ ಮಾಡಬೇಕೆಂದು ನಿಮ್ಮನ್ನು ವಿನಂತಿಸುತ್ತೇವೆ. ಸಂಗೀತದ ನಕಲಿನ ವಿರುದ್ಧ ಕಲಾವಿದರ ಹಕ್ಕುಗಳನ್ನು ರಕ್ಷಿಸುವ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂದು ನಾವು ನಮ್ಮ ಸಹ ಕಲಾವಿದರನ್ನು ವಿನಂತಿಸುತ್ತೇವೆ.” ಎಂದು ಹೇಳಿದೆ.

ಕಾಂತಾರ ಚಿತ್ರತಂಡದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಎರಡೂ ಹಾಡುಗಳ ಲಿಂಕ್‌ ಕೆಳಗೆ ನೀಡಲಾಗಿದೆ

ಕಾಂತಾರ ಚಿತ್ರದ ಹಾಡು

ಥೈಕ್ಕುಡಮ್‌ ತಂಡದ ಹಾಡು

ದೈವ ನರ್ತಕರಿಗೆ ಪ್ರತಿ ತಿಂಗಳು 2000ರೂ ಮಾಸಾಶನ : ರಾಜ್ಯ ಸರ್ಕಾರ
ಬೆಂಗಳೂರು : 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ತಿಂಗಳು 2000ರೂ. ಮಾಸಾಶನ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯ ಸರ್ಕಾರ ನಿರ್ಧರಿಸಿದೆ.

ದೈವನರ್ತನ ಮಾಡುವ ಕಲಾವಿದರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ತಿಂಗಳು  2000 ರೂ. ಮಾಸಾಶನ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೊಮ್ಮಾಯಿ ಸರ್ಕಾರ ನಿರ್ಧರಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ʼ60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು 2000 ರೂ. ಮಾಸಾಶನ ನೀಡಲು ಬೊಮ್ಮಾಯಿ ಸರ್ಕಾರ ನಿರ್ಧರಿಸಿದೆ. ಈ ಮೂಲಕ ನಮ್ಮ ಸಂಸ್ಕೃತಿ ಆಚರಣೆ ಹಾಗೂ ಧಾರ್ಮಿಕ ಹಿರಿಮೆಯನ್ನು ಸಾರುವ ದೈವ ನರ್ತಕರ ಬದುಕಿನಲ್ಲಿ ಭರವಸೆ ಮೂಡಿಸಿದೆʼ ಎಂದು ಹೇಳಿದೆ.

ತುಳು ನಾಡು ಸಂಸ್ಕೃತಿ, ಅಲ್ಲಿನ ಭೂತಾರಾದನೆ ಆಧಾರಿತ ʼಕಾಂತಾರʼಇತ್ತೀಚೆಗೆ ಬಿಡುಗಡೆಯಾಗಿ ಬಾರೀ ಸದ್ದು ಮಾಡುತ್ತಿದ್ದುಈ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಮಾಡಿರುವುದು ಕಾಂತಾರ ಸಿನೆಮಾದ ಪರಿಣಾಮ  ಸರ್ಕಾರ ಮೇಲೂ ಬಿದ್ದಿದೆಯಾ ಅನ್ನುವುದು ಅಭಿಮಾನಿಗಳ ಕುತೂಹಲಕಾರಿ ಪ್ರಶ್ನೆಯಾಗುತ್ತಿದೆ.

ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆ ದೂರು
ಬೆಂಗಳೂರು : ಕಾಂತಾರ ಸಿನಿಮಾ ಕುರಿತು ʼಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ಹೇಳಿದ ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆ ದೂರು ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಕಾಂತಾರ ಸಿನಿಮಾದ ವಿವಾದಾತ್ಮಕ ಪೋಸ್ಟ್‌ ವಿಚಾರದ ಬಗ್ಗೆ ಮಾತನಾಡಿದ ಚೇತನ್‌, ʼಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ಹೇಳಿದ್ದರು. ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕೊರಗ ಪಂಪದ ಎಂಬುದು ಬೇರೆ ಸಮುದಾಯವಿದೆ. ಕೊರಗ ಸಮುದಾಯದಲ್ಲಿ ಅವರದ್ದೇ ಆದ ಸಂಸ್ಕೃತಿ ಇದೆ. ಈ ಮೂಲ ನಿವಾಸಿಗಳು ಭ್ರಾಹ್ಮಣ್ಯಕ್ಕೆ ಒಳಪಡುವುದಿಲ್ಲ. ಭೂತಕೋಲ ಅನ್ನೋದು ತಪ್ಪು, ಹಿಂದೂ ಅನ್ನೋದನ್ನು ಹೇಗೆ ಬಳಸುತ್ತೇವೆ ಎನ್ನುವುದು ಮುಖ್ಯʼ ಎಂದು ಹೇಳಿದ್ದರು.

ಈ ಹಿನ್ನಲೆಯಲ್ಲಿ ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆಯು ಕಾರ್ಕಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.